20 November 2021 KANNADA Murli Today | Brahma Kumaris

Read and Listen today’s Gyan Murli in Kannada

November 19, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಎಲ್ಲರಿಗೆ ಒಬ್ಬ ತಂದೆಯ ಪರಿಚಯವನ್ನೇ ಕೊಡಿ, ಒಬ್ಬ ತಂದೆಯೊಂದಿಗೆ ಲೇವಾದೇವಿಯನ್ನು ಇಟ್ಟುಕೊಳ್ಳಿ, ತಂದೆಗೆ ತಮ್ಮ ಸತ್ಯವಾದ ಲೆಕ್ಕವನ್ನು ತಿಳಿಸಿ”

ಪ್ರಶ್ನೆ:: -

ಮಕ್ಕಳಿಂದ ಇಲ್ಲಿಯವರೆಗೂ ಸಹ ಅನೇಕ ಪ್ರಕಾರದ ತಪ್ಪುಗಳಾಗುತ್ತಾ ಇರುತ್ತವೆ – ಅದಕ್ಕೆ ಕಾರಣವೇನು?

ಉತ್ತರ:-

ಮುಖ್ಯ ಕಾರಣವೇನೆಂದರೆ- ಯೋಗದಲ್ಲಿ ಬಹಳ ಕಚ್ಚಾ ಇದ್ದಾರೆ. ತಂದೆಯ ನೆನಪಿನಲ್ಲಿದ್ದರೆ ಎಂದೂ ಯಾವುದೇ ಕೆಟ್ಟ ಕರ್ಮವಾಗಲು ಸಾಧ್ಯವಿಲ್ಲ. ನಾಮ-ರೂಪದಲ್ಲಿ ಸಿಲುಕಿದಾಗ ಯೋಗವು ಹಿಡಿಸಲು ಸಾಧ್ಯವಿಲ್ಲ. ನೀವೀಗ ಪತಿತರಿಂದ ಪಾವನರಾಗುವ ಗುಂಗಿನಲ್ಲಿರಿ, ನಿರಂತರ ಶಿವತಂದೆಯ ನೆನಪಿನಲ್ಲಿರಿ. ನಿಮ್ಮದು ಪರಸ್ಪರ ದೈಹಿಕ ಪ್ರೀತಿಯಿರಬಾರದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀನೇಕೆ ಸುಟ್ಟಿಲ್ಲ ಪತಂಗವೆ…..

ಓಂ ಶಾಂತಿ. ಈ ಗೀತೆಯನ್ನು ಭಕ್ತಿಮಾರ್ಗದಲ್ಲಿ ಹಾಡಿದ್ದಾರೆ. ಕೊನೆಗೆ ಇವೆಲ್ಲವೂ ನಿಂತು ಹೋಗುತ್ತದೆ, ಇದರ ಅವಶ್ಯಕತೆಯಿಲ್ಲ. ಒಂದು ಸೆಕೆಂಡಿನಲ್ಲಿ ತಂದೆಯಿಂದ ಆಸ್ತಿ ಸಿಗುತ್ತದೆ ಎಂದು ಗಾಯನವಿದೆ. ನಿಮಗೆ ತಿಳಿದಿದೆ – ಬೇಹದ್ದಿನ ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ. ಜೀವನ್ಮುಕ್ತಿ ಅರ್ಥಾತ್ ಈ ದುಃಖಧಾಮದಿಂದ ಮುಕ್ತ, ಭ್ರಷ್ಟಾಚಾರಿತನದಿಂದ ಮುಕ್ತರಾಗಿ ನಂತರ ಏನಾಗುತ್ತೀರಿ? ಅದಕ್ಕಾಗಿ ಗುರಿ-ಧ್ಯೇಯವನ್ನು ಬಹಳ ಚೆನ್ನಾಗಿ ತಿಳಿಸಬೇಕು. ತಂದೆಯು ರಾತ್ರಿಯೂ ಸಹ ತಿಳಿಸಿದರು – ಯಾರಾದರೂ ಬರುತ್ತಾರೆಂದರೆ ಮೊದಲು ಸರ್ವಶ್ರೇಷ್ಠ ಭಗವಂತನ ಪರಿಚಯ ಕೊಡಿ. ಇಲ್ಲಿನ ಉದ್ದೇಶವೇನು ಎಂದು ಕೇಳುತ್ತಾರೆ. ಆಗ ಮೊಟ್ಟ ಮೊದಲು ಬೇಹದ್ದಿನ ತಂದೆಯ ಪರಿಚಯ ಕೊಡಬೇಕಾಗಿದೆ. ಈಗ ಆ ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಅಂದಮೇಲೆ ತಂದೆಗೆ ಅವಶ್ಯವಾಗಿ ಯಾವುದೋ ಅಥಾರಿಟಿ ಇರಬೇಕಲ್ಲವೇ. ಯಾವುದೋ ಪಾತ್ರವು ಸಿಕ್ಕಿರಬೇಕಲ್ಲವೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯೆಂದು ಅವರಿಗೆ ಹೇಳುತ್ತಾರೆ. ಅವರು ಭಾರತದಲ್ಲಿಯೇ ಬರುತ್ತಾರೆ, ಬಂದು ಭಾರತವನ್ನೇ ಶ್ರೇಷ್ಠಾತಿ ಶ್ರೇಷ್ಠವನ್ನಾಗಿ ಮಾಡುತ್ತಾರೆ. ವೈಕುಂಠದ ಉಡುಗೊರೆಯನ್ನು ತರುತ್ತಾರೆ. ಮನುಷ್ಯ ಸೃಷ್ಟಿಯಲ್ಲಿ ಶ್ರೇಷ್ಠಾತಿ ಶ್ರೇಷ್ಠರು ದೇವಿ-ದೇವತೆಗಳು, ಸೂರ್ಯವಂಶಿ ಮನೆತನದವರಾಗಿದ್ದಾರೆ, ಅವರು ಸತ್ಯಯುಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಸತ್ಯಯುಗವನ್ನು ಸ್ಥಾಪನೆ ಮಾಡುವವರು ಸರ್ವಶ್ರೇಷ್ಠ ಭಗವಂತನೇ ಆಗಿದ್ದಾರೆ. ಅವರಿಗೇ ಸ್ವರ್ಗದ ರಚಯಿತನೆಂದು ಹೇಳುತ್ತಾರೆ. ಅವರು ತಂದೆಯಾಗಿದ್ದಾರೆ ಅಂದಮೇಲೆ ಅವರಿಗೆ ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಸರ್ವವ್ಯಾಪಿ ಎಂದು ಹೇಳುವುದರಿಂದ ತಂದೆಯ ಆಸ್ತಿಯೇ ಮಾಯವಾಗುತ್ತದೆ. ಎಷ್ಟು ಮಧುರ ಮಾತುಗಳಾಗಿವೆ – ತಂದೆ ಎಂದರೆ ಆಸ್ತಿ. ಅವಶ್ಯವಾಗಿ ತಮ್ಮ ಮಕ್ಕಳಿಗೇ ಆಸ್ತಿಯನ್ನು ಕೊಡುತ್ತಾರೆ. ಎಲ್ಲಾ ಮಕ್ಕಳ ತಂದೆಯು ಒಬ್ಬರೇ ಆಗಿದ್ದಾರೆ. ಅವರು ಬಂದು ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ, ರಾಜಯೋಗವನ್ನು ಕಲಿಸುತ್ತಾರೆ. ಉಳಿದೆಲ್ಲಾ ಆತ್ಮರು ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೋಗುವರು. ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ, ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯಾಗುವುದು. ಬುದ್ಧಿಯೂ ಸಹ ಹೇಳುತ್ತದೆ, ಅವಶ್ಯವಾಗಿ ಕಲಿಯುಗದ ನಂತರ ಸತ್ಯಯುಗವೇ ಬರಬೇಕಾಗಿದೆ. ದೇವಿ-ದೇವತೆಗಳ ಚರಿತ್ರೆಯು ಪುನರಾವರ್ತನೆಯಾಗುವುದು. ಗಾಯನವೂ ಇದೆ- ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ.

ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದೊಂದು ಅಂತಿಮ ಜನ್ಮದಲ್ಲಿ ಪವಿತ್ರರಾಗಿರಿ. ಈಗ ಮೃತ್ಯುಲೋಕವು ಸಮಾಪ್ತಿಯಾಗಿ ಅಮರಲೋಕದ ಸ್ಥಾಪನೆಯಾಗಲಿದೆ. ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಅಮರಕಥೆಯನ್ನು ಕೇಳುತ್ತಿದ್ದೀರಿ. ಸ್ತ್ರೀಯರು ಮತ್ತು ಪುರುಷರು ಇಬ್ಬರೂ ಅಮರರಾಗುತ್ತೀರಲ್ಲವೇ. ಇದಕ್ಕೆ ಅಮರಕಥೆಯೆಂದಾದರೂ ಹೇಳಿ, ಮೂರನೇ ನೇತ್ರದ ಕಥೆಯೆಂದಾದರೂ ಹೇಳಿ. ಬಹಳ ಮಟ್ಟಿಗೆ ಮಾತೆಯರೇ ಕಥೆಯನ್ನು ಕೇಳುತ್ತಾರೆ ಅಂದಮೇಲೆ ಅಮರಪುರಿಯಲ್ಲಿ ಪುರುಷರು ಇರುವುದಿಲ್ಲವೇ? ಇಬ್ಬರೂ ಇರುತ್ತಾರೆ. ಶಾಸ್ತ್ರವು ಏನು ಹೇಳುತ್ತದೆ ಮತ್ತು ತಂದೆಯು ಏನು ಹೇಳುತ್ತಾರೆ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಇದನ್ನೂ ಹೇಳುತ್ತಾರೆ – ಭಕ್ತಿಯ ಫಲವನ್ನು ಕೊಡಲು ಭಗವಂತನು ಬರುತ್ತಾರೆ ಎಂದು. ಅವಶ್ಯವಾಗಿ ಸತ್ಯಯುಗದಲ್ಲಿ ಈ ದೇವಿ-ದೇವತೆಗಳದೇ ವಿಶ್ವದ ಮೇಲೆ ರಾಜ್ಯಭಾರವಿತ್ತು, ಇವರಿಗೆ ಇಂತಹ ಫಲವನ್ನು ಯಾರು ಕೊಟ್ಟರು? ಯಾವುದೇ ಸಾಧು ಸನ್ಯಾಸಿ ಮೊದಲಾದವರಂತೂ ಕೊಡಲು ಸಾಧ್ಯವಿಲ್ಲ. ಇದನ್ನೂ ತಿಳಿದುಕೊಂಡಿದ್ದೀರಿ – ಎಲ್ಲರೂ ಒಂದೇ ರೀತಿ ಭಕ್ತಿ ಮಾಡುವುದಿಲ್ಲ. ಯಾರು ಬಹಳ ಭಕ್ತಿ ಮಾಡುವರೋ ಅವರಿಗೆ ಫಲವೂ ಸಹ ಅದೇ ರೀತಿ ಸಿಗುವುದು. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಗಳಾದರು, ಪುನಃ ಪೂಜ್ಯರಾಗುವರು. ಭಕ್ತಿಯ ಫಲವಂತೂ ಸಿಗುತ್ತದೆಯಲ್ಲವೆ. ಈ ಮಾತುಗಳೆಲ್ಲವನ್ನೂ ತಿಳಿಸಬೇಕಾಗಿದೆ. ಮೊಟ್ಟ ಮೊದಲು ತ್ರಿಮೂರ್ತಿಯ ಬಗ್ಗೆ ತಿಳಿಸಬೇಕು. ಮೊದಲು ಏಣಿಯ ಚಿತ್ರದೆಡೆಗೆ ಕರೆದುಕೊಂಡು ಹೋಗುವುದಲ್ಲ, ಇವು ವಿವರವಾದ ಮಾತುಗಳಾಗಿವೆ. ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ, ಅವರು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ ನಂತರ ಬ್ರಹ್ಮಾ-ವಿಷ್ಣು-ಶಂಕರ, ಅನಂತರ ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ತೋರಿಸಬೇಕಾಗಿದೆ. ಬಾಕಿ ಭಕ್ತಿಮಾರ್ಗದ ಚಿತ್ರಗಳಂತೂ ಬಹಳಷ್ಟಿವೆ. ಮೊಟ್ಟ ಮೊದಲು ಇದನ್ನು ತಿಳಿಸಿರಿ – ಬೇಹದ್ದಿನ ತಂದೆಯಾಗಿದ್ದಾರೆ, ಅವರಿಂದ ನಾವು ಬೇಹದ್ದಿನ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು ಕೊಡುತ್ತಾರೆ. ಭಾರತದಲ್ಲಿ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಅಂದಮೇಲೆ ಸ್ವರ್ಗದ ರಚಯಿತ ತಂದೆಯೇ ಬಂದು ಸ್ವರ್ಗ ಸ್ಥಾಪನೆ ಮಾಡಿರಬೇಕು. ತಂದೆಯೇ ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ ಮತ್ತೆ 5000 ವರ್ಷಗಳ ನಂತರ ನರಕವಾಗಿ ಬಿಡುತ್ತದೆ. ರಾಮನೂ ಬರಬೇಕಾಗುತ್ತದೆ ಮತ್ತು ಸಮಯದಲ್ಲಿ ರಾವಣನೂ ಬರಬೇಕಾಗುತ್ತದೆ. ರಾಮನು ಆಸ್ತಿಯನ್ನು ಕೊಡುತ್ತಾನೆ, ರಾವಣನು ಶಾಪವನ್ನು ಕೊಡುತ್ತಾನೆ. ಜ್ಞಾನ ಅರ್ಥಾತ್ ದಿನವು ಮುಕ್ತಾಯವಾಗಿ ದಿನವಾಗುತ್ತದೆ. ದಿನದಲ್ಲಿ ಕೇವಲ ಸೂರ್ಯವಂಶಿ-ಚಂದ್ರವಂಶಿಯರು. ಈ ಮಾತುಗಳನ್ನು ಸಾರದಲ್ಲಿ ತಿಳಿಸುವುದು ಬಹಳ ಸಹಜವಾಗುತ್ತದೆ. ಮೊಟ್ಟ ಮೊದಲು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿಚಯ ನೀಡಿ ಪಕ್ಕಾ ಮಾಡಿಸಬೇಕು. ಮೂಲ ಮಾತೇ ಇದಾಗಿದೆ. ಸತ್ಯಯುಗದಲ್ಲಿ ದೇವಿ-ದೇವತಾ ಮನೆತನವಿತ್ತು, ಸತೋಪ್ರಧಾನರಾಗಿದ್ದರು ನಂತರ ಸತೋ, ರಜೋ, ತಮೋದಲ್ಲಿ ಬಂದರು. ಇದು ಚಕ್ರವಾಗಿದೆ. ಒಂದೇ ವಸ್ತು ಶಾಶ್ವತವಾಗಿರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇದೇ ನೆನಪಿರಲಿ – ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ನೆನಪಿನಲ್ಲಿಯೇ ಮಕ್ಕಳು ಬಹಳ ಕಚ್ಚಾ ಇದ್ದಾರೆ. ತಂದೆಯೂ ಸಹ (ಬ್ರಹ್ಮಾ) ತಮ್ಮ ಅನುಭವವನ್ನು ತಿಳಿಸುತ್ತಾರೆ – ನೆನಪು ಪದೇ-ಪದೇ ಮರೆತುಹೋಗುತ್ತದೆ ಏಕೆಂದರೆ ಇವರಿಗೆ ಬಹಳ ವಿಚಾರಗಳಿರುತ್ತವೆ ಆದ್ದರಿಂದಲೇ ಯಾರಿಗೆ ಬಹಳ ಜವಾಬ್ದಾರಿಯಿರುವುದೋ ಅವರು ನೆನಪಿನಲ್ಲಿರಲು ಹೇಗೆ ಸಾಧ್ಯ! ತಂದೆಗೆ ಇಡೀ ದಿನ ವಿಚಾರಗಳು ನಡೆಯುತ್ತಿರುತ್ತವೆ. ಇವರ ಮುಂದೆ ಎಷ್ಟೊಂದು ಮಾತುಗಳು ಬರುತ್ತವೆ ಆದ್ದರಿಂದ ತಂದೆಗೆ ಮುಂಜಾನೆ ಎದ್ದು ಕುಳಿತುಕೊಳ್ಳಲು ಹೆಚ್ಚು ಮಜಾ ಬರುತ್ತದೆ. ನಶೆಯೂ ಇರುತ್ತದೆ – ಈ ಸ್ಥಾಪನೆಯಾದ ನಂತರ ನಾನು ಪುನಃ ವಿಶ್ವದ ಮಹಾರಾಜನಾಗುವೆನು ಎಂದು. ಹೇಗೆ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ – ಮೊಟ್ಟ ಮೊದಲ ಮುಖ್ಯ ಮಾತಾಗಿದೆ – ತಂದೆಯ ಪರಿಚಯ ಕೊಡುವುದು. ಅನ್ಯ ಯಾವುದೆಲ್ಲಾ ಮಾತುಗಳನ್ನು ಯಾರಾದರೂ ಹೇಳಲಿ, ತಿಳಿಸಿ- ಇದರಿಂದ ಯಾವುದೇ ಲಾಭವಿಲ್ಲ. ನಾವು ನಿಮಗೆ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿಚಯ ನೀಡುತ್ತೇವೆ. ಅವರೇ ವಿಶ್ವದ ಮಾಲೀಕರಾಗುವ ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು ಕೊಡುತ್ತಾರೆ. ಆರ್ಯ ಸಮಾಜಿಗಳು ದೇವತೆಗಳ ಚಿತ್ರಗಳನ್ನು ಒಪ್ಪುವುದಿಲ್ಲ, ನಿಮ್ಮ ಬಳಿ ಬಂದು ಚಿತ್ರಗಳನ್ನು ನೋಡಿದಾಗಲೇ ಮುಖ ತಿರುಗಿಸುತ್ತಾರೆ. ಯಾರು ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆಯೋ ಅವರು ಶಾಂತಿಯಿಂದ ಬಂದು ಕೇಳುತ್ತಾ ಇರುತ್ತಾರೆ. ಮುಖ್ಯ ಮಾತೇ ಒಂದಾಗಿದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಪರಿಚಯ. ಬ್ರಹ್ಮಾ-ವಿಷ್ಣು-ಶಂಕರನಿಗೂ ಸಹ ಶ್ರೇಷ್ಠಾತಿ ಶ್ರೇಷ್ಠನೆಂದು ಹೇಳುವುದಿಲ್ಲ. ಶ್ರೇಷ್ಠಾತಿ ಶ್ರೇಷ್ಠ ತಂದೆಯಿಂದಲೇ ಆಸ್ತಿಯು ಸಿಗುತ್ತದೆ, ಅವರೇ ಪತಿತ-ಪಾವನನಾಗಿದ್ದಾರೆ, ಈ ಮಾತನ್ನು ಪಕ್ಕಾ ಮಾಡಿದ್ದೀರಿ – ಭಗವಂತನೊಬ್ಬನೇ ಆಗಿದ್ದಾರೆ. ತಂದೆ ಎಂದರೆ ಆಸ್ತಿ. ಭಾರತದಲ್ಲಿಯೇ ಬಂದು ಆಸ್ತಿಯನ್ನು ಕೊಡುತ್ತಾರೆ. ಬ್ರಹ್ಮಾರವರ ಮುಖಾಂತರ ಹೊಸ ಪ್ರಪಂಚದ ಸ್ಥಾಪನೆ, ಶಂಕರನ ಮೂಲಕ ವಿನಾಶ. ಈ ಮಹಾಭಾರತ ಯುದ್ಧದಿಂದಲೇ ಸ್ವರ್ಗದ ಬಾಗಿಲು ತೆರೆಯುತ್ತದೆ, ಪತಿತರಿಂದ ಪಾವನರಾಗುತ್ತೀರಿ. ಬೇಹದ್ದಿನ ತಂದೆಯಿಂದಲೇ ಭಾರತಕ್ಕೆ ಆಸ್ತಿಯು ಸಿಗುತ್ತಿದೆ. ಇಲ್ಲಿ ಒಂದೇ ಮಾತಾಗಿದೆ ಮತ್ತ್ಯಾವುದೇ ಮಾತಿಲ್ಲ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನಿಮ್ಮ ತುಕ್ಕು ಬಿಟ್ಟು ಹೋಗುವುದು. ಈ ಒಂದು ಮಾತನ್ನು ಚೆನ್ನಾಗಿ ತಿಳಿದುಕೊಂಡಾಗ ಅನ್ಯ ಮಾತುಗಳನ್ನು ತಿಳಿಸಿರಿ. ನಾವು ಹೇಳುತ್ತೇವೆ, ಜ್ಞಾನಾಮೃತವನ್ನು ಕುಡಿದು ಪವಿತ್ರರಾಗಿ ಎಂದು. ಅದಕ್ಕೆ ಅವರು ವಿಷವೇ ಬೇಕೆಂದು ಹೇಳುತ್ತಾರೆ. ಇದನ್ನು ಕುರಿತು ಒಂದು ಚಿತ್ರವೂ ಇದೆ ಆದ್ದರಿಂದಲೇ ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುವಿರಿ? ಎಂದು ಹೇಳುತ್ತಾರೆ. ಈ ಆತ್ಮಿಕ ಜ್ಞಾನವನ್ನು ಆತ್ಮಿಕ ತಂದೆಯೇ ಕೊಡುತ್ತಾರೆ ಅಂದಮೇಲೆ ಅವರು ಸರ್ವವ್ಯಾಪಿ ಹೇಗಾಗುವರು? ನೀವು ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತೀರಿ, ಭಲೆ ನೀವು ಹಾಗೆಯೇ ತಿಳಿದುಕೊಳ್ಳಿ ಆದರೆ ನಾವೀಗ ಒಪ್ಪುವುದಿಲ್ಲ. ಮೊದಲು ನಾವು ಒಪ್ಪುತ್ತಿದ್ದೆವು ಆದರೆ ಈಗ ತಂದೆಯು ತಿಳಿಸಿದ್ದಾರೆ- ಸರ್ವವ್ಯಾಪಿ ಎಂದು ಹೇಳುವುದು ತಪ್ಪಾಗಿದೆ. ತಂದೆಯಿಂದ ಆಸ್ತಿಯು ಸಿಗುತ್ತದೆ. ಭಾರತವು ಈಗ ನರಕವಾಗಿದೆ. ಅದನ್ನು ಪುನಃ ನಾವು ಸ್ವರ್ಗ ಅರ್ಥಾತ್ ಪವಿತ್ರ ಗೃಹಸ್ಥ ಆಶ್ರಮವನ್ನಾಗಿ ಮಾಡುತ್ತೇವೆ. ಆದಿ ಸನಾತನ ದೇವಿ-ದೇವತೆಗಳದು ಪವಿತ್ರ ಗೃಹಸ್ಥಾಶ್ರಮವಾಗಿತ್ತು, ಈಗ ಅಪವಿತ್ರ ವಿಕಾರಿ ಪ್ರಪಂಚವಾಗಿದೆ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿರಿ, ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯು ರಚಯಿತನಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಈಗ ಕಲಿಯುಗದಲ್ಲಿ ಅನೇಕ ಮನುಷ್ಯರಿದ್ದಾರೆ. ಸತ್ಯಯುಗದಲ್ಲಿ ಕೆಲವರೇ ಇರುವರು ಅಂದಮೇಲೆ ಆ ಸಮಯದಲ್ಲಿ ಉಳಿದೆಲ್ಲರೂ ಶಾಂತಿಧಾಮದಲ್ಲಿ ಇರುತ್ತಾರೆ ಆದ್ದರಿಂದ ಈಗ ಅವಶ್ಯವಾಗಿ ಯುದ್ಧವಾಗುವುದು, ಇದರಿಂದಲೇ ಎಲ್ಲರೂ ಮುಕ್ತಿಯಲ್ಲಿ ಹೋಗುವರು. ಇವೆಲ್ಲಾ ಮಾತುಗಳು ಮಕ್ಕಳ ಬುದ್ಧಿಯಲ್ಲಿ ಇರಬೇಕಾಗಿದೆ. ಮಕ್ಕಳು ಅವಶ್ಯವಾಗಿ ಸರ್ವೀಸ್ ಮಾಡಬೇಕಾಗಿದೆ. ಸರ್ವೀಸಿನಿಂದಲೇ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಪರಸ್ಪರ ಆಗದಿದ್ದರೆ ಶಿವ ತಂದೆಯನ್ನು ಮರೆತು ಬಿಡುವುದು ಅಥವಾ ಶಿವ ತಂದೆಯ ಸೇವೆ ಮಾಡುವುದನ್ನೇ ಬಿಟ್ಟು ಬಿಡುವುದಲ್ಲ. ಹಾಗೆ ಮಾಡಿದರೆ ಪದವಿ ಭ್ರಷ್ಟವಾಗುವುದು ನಂತರ ಸರ್ವೀಸ್ ಮಾಡುವ ಬದಲು ಡಿಸ್ಸರ್ವೀಸ್ ಮಾಡಿ ಬಿಡುತ್ತೀರಿ. ಪರಸ್ಪರ ಉಪ್ಪು ನೀರಾಗಿ ಸೇವೆಯನ್ನು ಬಿಟ್ಟು ಬಿಡುವುದು, ಇದರಂತಹ ಕೆಟ್ಟ ಕೆಲಸವು ಯಾವುದೂ ಇಲ್ಲ. ತಂದೆಯನ್ನು ನೆನಪು ಮಾಡಿರಿ, ಇದರಿಂದ ಸಂಪಾದನೆಯೂ ಆಗುವುದು. ಈಗ ಜ್ಞಾನವು ಸಿಕ್ಕಿದೆ – ಪವಿತ್ರರಾಗಿ ಮತ್ತು ತಂದೆಯನ್ನು ನೆನಪು ಮಾಡಿರಿ. ಜ್ಞಾನದ ಹೊಳಪಿಗೆ ದುರಿಯಾ ಎಂದು ಹೇಳಲಾಗುತ್ತದೆ. ಜ್ಞಾನ ಮತ್ತು ವಿಜ್ಞಾನವೆಂದು ಹೇಳುತ್ತಾರೆ. ವಿಜ್ಞಾನವು ಯೋಗವಾಗಿದೆ, ಜ್ಞಾನವು ಸೃಷ್ಟಿಚಕ್ರದ್ದಾಗಿದೆ. ಹೋಲಿ-ದುರಿಯಾ ಎಂದರೇನು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯನ್ನು ನೆನಪು ಮಾಡಬೇಕು ಮತ್ತು ಎಲ್ಲರಿಗೆ ಜ್ಞಾನವನ್ನು ತಿಳಿಸಬೇಕಾಗಿದೆ. ತಂದೆಯು ಮತ್ತೆ ಮತ್ತೆ ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ಸರ್ವವ್ಯಾಪಿ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳುವುದಾದರೆ ಮತ್ತೆ ಯಾರನ್ನು ನೆನಪು ಮಾಡುತ್ತೀರಿ? ತಂದೆಯು ನನ್ನನ್ನು ನಿರಂತರ ನೆನಪು ಮಾಡಿರಿ ಎಂದು ತಿಳಿಸುತ್ತಾರೆ. ಆದರೆ ರಚಯಿತನನ್ನೇ ತಿಳಿದುಕೊಂಡಿಲ್ಲವೆಂದರೆ ಸಿಗುವುದಾದರೂ ಏನು! ತಿಳಿದುಕೊಳ್ಳದ ಕಾರಣ ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಆದ್ದರಿಂದ ಶ್ರೇಷ್ಠಾತಿ ಶ್ರೇಷ್ಠ ಎಂಬ ಮಾತನ್ನು ಸಿದ್ಧ ಮಾಡಿ ತಿಳಿಸಿರಿ ಆಗ ಸರ್ವವ್ಯಾಪಿ ಎಂಬ ಮಾತುಗಳು ಬುದ್ಧಿಯಿಂದ ಹೊರಟು ಹೋಗುತ್ತದೆ. ನಾವೆಲ್ಲರೂ ಸಹೋದರರಾಗಿದ್ದೇವೆ, ತಂದೆಯು ಪ್ರತೀ 5000 ವರ್ಷಗಳ ನಂತರ ಬಂದು ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ದೇವಿ-ದೇವತೆಗಳಿರುತ್ತಾರೆ, ಉಳಿದೆಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ. ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡುತ್ತಾ ಇರಿ. ಕ್ರಿಸ್ತನನ್ನು ಪ್ರಾರ್ಥನೆ ಮಾಡುತ್ತಾರೆ, ಅವರಿಗೆ ತಿಳಿಸಿ – ಕ್ರಿಸ್ತನು ಎಲ್ಲರ ತಂದೆಯಂತೂ ಅಲ್ಲ, ಎಲ್ಲರ ತಂದೆಯು ನಿರಾಕಾರನಾಗಿದ್ದಾರೆ. ಅವರನ್ನೇ ಓ ಗಾಡ್ ಫಾದರ್ ಎಂದು ಆತ್ಮವು ಕರೆಯುತ್ತದೆ. ಕ್ರಿಸ್ತನೂ ಸಹ ಆ ಭಗವಂತನ ಪುತ್ರನೆಂದು ಗಾಯನವಿದೆ. ಅಂದಮೇಲೆ ಮಗನಿಂದ ಆಸ್ತಿಯು ಹೇಗೆ ಸಿಗುವುದು? ಕ್ರಿಸ್ತನು ರಚನೆಯಾಗಿದ್ದಾನೆ. ಕ್ರಿಸ್ತನನ್ನು ನೆನಪು ಮಾಡುವುದರಿಂದ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗುವುದು ಎಂದು ಯಾವುದೇ ಶಾಸ್ತ್ರಗಳಲ್ಲಿ ಬರೆದಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಗೀತೆಯಲ್ಲಿ ಮಾತ್ರವೇ ಇದೆ. ಭಗವಂತನ ಶಾಸ್ತ್ರವೇ ಗೀತೆಯಾಗಿದೆ. ಕೇವಲ ತಂದೆಯ ಹೆಸರನ್ನು ಬದಲಾಯಿಸಿ ಕೃಷ್ಣನ ಹೆಸರನ್ನು ಬರೆದು ಬಿಟ್ಟಿದ್ದಾರೆ- ಈ ತಪ್ಪು ಮಾಡಿಬಿಟ್ಟಿದ್ದಾರೆ ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ. ಅವರೇ ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ. ಶಿವನ ಚಿತ್ರವನ್ನು ಎಲ್ಲರೂ ತಮ್ಮ ಬಳಿ ಇಟ್ಟುಕೊಳ್ಳಬೇಕಾಗಿದೆ. ಶಿವ ತಂದೆಯು ಈ ಆಸ್ತಿಯನ್ನು ಕೊಡುತ್ತಾರೆ, ನಂತರ 84 ಜನ್ಮಗಳಲ್ಲಿ ಕಳೆದುಕೊಳ್ಳುತ್ತೀರಿ. ಏಣಿಯ ಚಿತ್ರದಲ್ಲಿ ತಿಳಿಸಬೇಕಾಗಿದೆ – ಪತಿತ-ಪಾವನ ತಂದೆಯೇ ಬಂದು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಕೃಷ್ಣ ಭಗವಾನುವಾಚ ಎಂದು ಮನುಷ್ಯರು ಹೇಳುತ್ತಾರೆ, ಶಿವ ಭಗವಾನುವಾಚ ಎಂದು ನೀವು ಹೇಳುತ್ತೀರಿ. ಫಸ್ಟ್ ಫ್ಲೋರ್ ನಲ್ಲಿ ಶ್ರೇಷ್ಠ ತಂದೆಯಿರುತ್ತಾರೆ, ನಂತರ ಸೆಕೆಂಡ್ ಫ್ಲೋರ್ ಸೂಕ್ಷ್ಮವತನ, ಇದು ಥರ್ಡ್ ಫ್ಲೋರ್ ಆಗಿದೆ. ಸೃಷ್ಟಿಯು ಇಲ್ಲಿದೆ, ಅಂತಿಮದಲ್ಲಿ ಸೂಕ್ಷ್ಮವತನಕ್ಕೆ ಹೋಗುತ್ತೀರಿ. ಅಲ್ಲಿ ಟ್ರಿಬ್ಯುನಲ್ (ಧರ್ಮರಾಜ ಪುರಿ) ಕುಳಿತುಕೊಳ್ಳುತ್ತದೆ, ಶಿಕ್ಷೆ ಸಿಗುತ್ತದೆ. ಶಿಕ್ಷೆಗಳನ್ನು ಅನುಭವಿಸಿ ಪವಿತ್ರರಾಗಿ ಮೇಲೆ ಹೊರಟು ಹೋಗುತ್ತೀರಿ. ತಂದೆಯು ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಈಗ ಸಂಗಮವಾಗಿದೆ, ಇದಕ್ಕೇ ನೂರು ವರ್ಷಗಳು ಕೊಡಬೇಕು. ಬಾಬಾ, ಸ್ವರ್ಗದಲ್ಲಿ ಏನೇನಿರುವುದು ಎಂದು ಮಕ್ಕಳು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಅದನ್ನು ಮುಂದೆ ಹೋದಂತೆ ನೋಡುವಿರಿ. ಮೊದಲು ನೀವು ತಂದೆಯನ್ನು ತಿಳಿದುಕೊಳ್ಳಿ, ಪತಿತರಿಂದ ಪಾವನರಾಗುವ ಗುಂಗಿನಲ್ಲಿರಿ. ಸ್ವರ್ಗದಲ್ಲಿ ಏನಾಗಬೇಕಾಗಿದೆಯೋ ಅದು ಆಗುತ್ತಾ ಇರುವುದು. ನೀವು ಈ ರೀತಿ ಪಾವನರಾಗಿರಿ ತಂದೆಯಿಂದ ಹೊಸ ಪ್ರಪಂಚದ ಪೂರ್ಣ ಆಸ್ತಿಯು ಪ್ರಾಪ್ತಿಯಾಗಿದೆ. ಬಾಕಿ ಮಧ್ಯದಲ್ಲಿ ಏನಾಗುತ್ತದೆ ಎಂಬುದನ್ನು ಮುಂದೆ ಹೋಗಿ ನೋಡುವಿರಿ. ಅಂದಾಗ ಈ ಮಾತುಗಳೆಲ್ಲವನ್ನೂ ನೆನಪಿಟ್ಟುಕೊಳ್ಳಿ, ನೆನಪಿಲ್ಲದೇ ಇರುವ ಕಾರಣ ಸಮಯದಲ್ಲಿ ತಿಳಿಸುವುದಿಲ್ಲ, ಮರೆತು ಹೋಗುತ್ತೀರಿ. ನೀವು ಮಕ್ಕಳು ಒಳ್ಳೆಯ ಕರ್ಮವನ್ನೇ ಮಾಡಬೇಕಾಗಿದೆ. ತಂದೆಯ ನೆನಪಿನಲ್ಲಿದ್ದರೆ ಕೆಟ್ಟ ಕರ್ಮವಾಗುವುದೇ ಇಲ್ಲ. ಅನೇಕರು ಕೆಟ್ಟ ಕರ್ಮವನ್ನೂ ಮಾಡುತ್ತಾರೆ. ಈ ಬ್ರಾಹ್ಮಿಣಿಯಿದ್ದರೆ ನಮಗೆ ಚೆನ್ನಾಗಿರುತ್ತದೆ, ಅವರು ಹೋದರೆ ತಾನೂ ವಿದ್ಯೆಯನ್ನು ಓದುವುದನ್ನು ನಿಲ್ಲಿಸಿಬಿಡುತ್ತಾರೆ. ಬ್ರಾಹ್ಮಿಣಿಯ ಕಾರಣ ಜ್ಞಾನದಿಂದ ಸತ್ತು ಹೋಗುತ್ತಾರೆ ಅಂದರೆ ತಂದೆಯ ಆಸ್ತಿ ಪಡೆಯುವುದರಿಂದ ಸತ್ತು ಹೋದರು ಎಂದರ್ಥ. ಇದನ್ನೂ ದೌರ್ಭಾಗ್ಯವೆಂದೇ ಹೇಳಲಾಗುತ್ತದೆ.

ಕೆಲವು ಮಕ್ಕಳು ಒಬ್ಬರಿನ್ನೊಬ್ಬರ ನಾಮ-ರೂಪದಲ್ಲಿ ಸಿಲುಕಿ ಸತ್ತು ಹೋಗುತ್ತಾರೆ. ಇಲ್ಲಿ ನಿಮ್ಮದು ದೈಹಿಕ ಪ್ರೀತಿಯಿರಬಾರದು, ನಿರಂತರ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾರೊಂದಿಗೂ ಲೇವಾದೇವಿ ಇರಬಾರದು. ತಾವು ತಿಳಿಸಿ, ನಮಗೆ ಏಕೆ ಕೊಡುತ್ತೀರಿ? ನಿಮ್ಮ ಯೋಗವು ಶಿವ ತಂದೆಯೊಂದಿಗೆ ಇದೆಯಲ್ಲವೇ. ಅಂದಮೇಲೆ ಯಾರು ಡೈರೆಕ್ಟ್ ಕೊಡುವುದಿಲ್ಲವೋ ಅವರದು ಶಿವ ತಂದೆಯ ಬಳಿ ಜಮಾ ಆಗುವುದಿಲ್ಲ. ಬ್ರಹ್ಮಾರವರ ಮೂಲಕ ಸ್ಥಾಪನೆಯಾಗುತ್ತದೆ ಅಂದಮೇಲೆ ಎಲ್ಲವನ್ನೂ ಅವರ ಮೂಲಕವೇ ಮಾಡಬೇಕಾಗಿದೆ. ಮಧ್ಯದಲ್ಲಿ ಯಾರಾದರೂ ತಿಂದು ಬಿಟ್ಟರೆ ಶಿವ ತಂದೆಯ ಬಳಿಯಂತೂ ಜಮಾ ಆಗಲಿಲ್ಲ. ಬ್ರಹ್ಮಾರವರ ಮುಖಾಂತರ ಶಿವ ತಂದೆಗೇ ಕೊಡಬೇಕಾಗಿದೆ. ಸೇವಾಕೇಂದ್ರವನ್ನೂ ಸಹ ಬ್ರಹ್ಮಾರವರ ಮುಖಾಂತರವೇ ತೆರೆಯಿರಿ, ತಾವೇ ಸೇವಾಕೇಂದ್ರವನ್ನು ತೆರೆಯುತ್ತೀರೆಂದರೆ ಅದು ಸೇವಾಕೇಂದ್ರವಾಯಿತೇ? ಬಾಪ್ದಾದಾ ಇಬ್ಬರು ಒಟ್ಟಿಗೆ ಇದ್ದಾರೆ. ಇವರ ಕೈಗೆ ಬಂದಿತೆಂದರೆ ಶಿವ ತಂದೆಯ ಕೈಯಲ್ಲಿ ಬಂದಿತೆಂದರ್ಥ. ಎಷ್ಟೊಂದು ಸೇವಾಕೇಂದ್ರಗಳಿವೆ, ಕೆಲವರದು ಯಾವುದೇ ಸಮಾಚಾರವೇ ಬರುವುದಿಲ್ಲ. ಬಾಬಾ, ಇದು ನಿಮ್ಮ ಸೆಂಟರಿನ ಲೆಕ್ಕ ಪತ್ರವೆಂದು ಬರೆದು ಕಳುಹಿಸಬೇಕು. ಸೇಟ್ನ ಬಳಿ ಲೆಕ್ಕ ಪತ್ರವು ಬರಬೇಕಲ್ಲವೇ. ಶಿವ ತಂದೆಯ ಬಳಿ ಅನೇಕರದು ಜಮಾ ಆಗುವುದೇ ಇಲ್ಲ. ಇಷ್ಟೂ ಬುದ್ಧಿಯಿಲ್ಲ. ಭಲೆ ಜ್ಞಾನವು ಬಹಳಷ್ಟಿದೆ ಆದರೆ ಯುಕ್ತಿ ಬರುವುದಿಲ್ಲ. ನಾವು ಸೇವಾಕೇಂದ್ರವನ್ನು ತೆರೆದೆವು ಎಂದು ಹೇಳುತ್ತಾರೆ. ನೀವು ಯಾರಿಗೆ ಕೊಟ್ಟಿರೋ ಅವರು ಸೇವಾಕೇಂದ್ರವನ್ನು ತೆರೆದರು, ಶಿವ ತಂದೆಯು ತೆರೆದಂತಾಯಿತೇ? ಅಂತಹ ಸೇವಾಕೇಂದ್ರವು ವೃದ್ಧಿಯೂ ಆಗುವುದಿಲ್ಲ. ಸೇವಾಕೇಂದ್ರವನ್ನು ತೆರೆಯುವುದಾದರೆ ಶಿವ ತಂದೆಯ ಮೂಲಕ ತೆರೆಯಿರಿ. ಬಾಬಾ, ನಾವು ಇದನ್ನು ಕೊಡುತ್ತೇವೆ, ಈ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ತಿಳಿಸಬೇಕು. ಮಕ್ಕಳು ಬಹಳಷ್ಟು ತಪ್ಪುಗಳನ್ನು ಮಾಡುತ್ತಾರೆ, ಯೋಗದಲ್ಲಿ ಬಹಳ ಕಚ್ಚಾ ಇದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನದ ಜೊತೆ ಜೊತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಯುಕ್ತಿಯನ್ನು ಕಲಿಯಬೇಕಾಗಿದೆ. ಒಬ್ಬ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾವುದೇ ದೇಹಧಾರಿಯ ಹಿಂದೆ ದುರಾದೃಷ್ಟವಂತರಾಗಬಾರದು.

2. ಪರಸ್ಪರ ಯಾವುದೇ ಮಾತಿನ ಕಾರಣ ತಂದೆಯ ಸೇವೆಯನ್ನು ಬಿಡಬಾರದು. ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ.

ವರದಾನ:-

ಅತ್ಯಂತ ಶಕ್ತಿಶಾಲಿ ಸ್ಥಿತಿಯೆಂದರೆ ತಮ್ಮ ಅನುಭವವಾಗಿದೆ. ಅನುಭವಿ ಆತ್ಮನು ತನ್ನ ಅನುಭವದ ಆತ್ಮ ವಿಶ್ವಾಸದಿಂದ ಮಾಯೆಯ ಯಾವುದೇ ಶಕ್ತಿಯ, ಎಲ್ಲಾ ಮಾತುಗಳ, ಸರ್ವ ಸಮಸ್ಯೆಗಳನ್ನೂ ಸಹಜವಾಗಿಯೇ ಎದುರಿಸಬಹುದು ಹಾಗೂ ಎಲ್ಲಾ ಆತ್ಮರನ್ನೂ ಸಂತುಷ್ಟಗೊಳಿಸಬಹುದು. ಎದುರಿಸುವ ಶಕ್ತಿಯಿಂದ ಸರ್ವರನ್ನು ಸಂತುಷ್ಟಗೊಳಿಸುವ ಶಕ್ತಿಯ ಅನುಭವದ ವಿಲ್ ಪವರ್ನಿಂದ ಸಹಜವಾಗಿ ಪ್ರಾಪ್ತಿಯಾಗುವುದು. ಆದ್ದರಿಂದ ಪ್ರತಿಯೊಂದು ಖಜಾನೆಯನ್ನು ಅನುಭವದಲ್ಲಿ ತಂದುಕೊಳ್ಳುತ್ತಾ ಅನುಭವಿ ಮೂರ್ತಿಯಾಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top