19 November 2021 KANNADA Murli Today | Brahma Kumaris

Read and Listen today’s Gyan Murli in Kannada

November 18, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸರ್ವೀಸಿನ ಜೊತೆ ಜೊತೆಗೆ ನೆನಪಿನ ಯಾತ್ರೆಯನ್ನು ಖಾಯಂ ಆಗಿಟ್ಟುಕೊಳ್ಳಬೇಕು, ಈ ಆತ್ಮಿಕ ಯಾತ್ರೆಯಲ್ಲಿ ಎಂದೂ ತಣ್ಣಗಾಗಬಾರದು”

ಪ್ರಶ್ನೆ:: -

ಮಕ್ಕಳಿಗೆ ಒಂದುವೇಳೆ ಆತ್ಮಿಕ ಸೇವೆಯಲ್ಲಿ ತೊಡಗಲು ಮನಸ್ಸಾಗದಿದ್ದರೆ ಅದಕ್ಕೆ ಕಾರಣವೇನು?

ಉತ್ತರ:-

ಒಂದುವೇಳೆ ಆತ್ಮಿಕ ಸೇವೆಯಲ್ಲಿ ಮನಸ್ಸಿಲ್ಲವೆಂದರೆ ಅವಶ್ಯವಾಗಿ ದೇಹಾಭಿಮಾನದ ಗ್ರಹಚಾರ ಇದೆಯೆಂದರ್ಥ. ನಡೆಯುತ್ತಾ-ನಡೆಯುತ್ತಾ ದೇಹಾಭಿಮಾನದ ಕಾರಣ ಪರಸ್ಪರ ಮುನಿಸಿಕೊಳ್ಳುತ್ತಾರೆಂದರೆ ಸೇವೆಯನ್ನೇ ಬಿಟ್ಟು ಬಿಡುತ್ತಾರೆ. ಒಬ್ಬರು ಇನ್ನೊಬ್ಬರ ಚಹರೆಯನ್ನು ನೋಡುತ್ತಿದ್ದಂತೆಯೇ ಸರ್ವೀಸಿನ ವಿಚಾರವೇ ಹಾರಿ ಹೋಗುತ್ತದೆ, ಆದ್ದರಿಂದ ಈ ಗ್ರಹಚಾರದಿಂದ ಸಂಭಾಲನೆ ಮಾಡಿಕೊಳ್ಳಿ ಎಂದು ತಂದೆಯು ಹೇಳುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ..

ಓಂ ಶಾಂತಿ. ಈ ಗೀತೆಯ ಸಾಲು ಮಕ್ಕಳನ್ನು ಜಾಗೃತ ಮಾಡಿ ಬಿಟ್ಟಿತು. ಏನು ಹೇಳಿತು? ಬುದ್ಧಿಯಲ್ಲಿ ಇದನ್ನು ನೆನಪಿಟ್ಟುಕೊಳ್ಳಬೇಕಾಗಿದೆ – ನಾವು ತೀರ್ಥ ಯಾತ್ರೆಯಲ್ಲಿ ಇದ್ದೇವೆ ಮತ್ತು ನಮ್ಮ ಈ ಯಾತ್ರೆಯು ಎಲ್ಲದಕ್ಕಿಂತ ಭಿನ್ನವಾಗಿದೆ. ಈ ಯಾತ್ರೆಯನ್ನು ಮರೆಯಬೇಡಿ. ಎಲ್ಲವೂ ಯಾತ್ರೆಯ ಮೇಲೆ ಆಧಾರಿತವಾಗಿದೆ. ಮತ್ತೆಲ್ಲರೂ ತೀರ್ಥ ಯಾತ್ರೆಗಳನ್ನು ಮಾಡಿ ಮತ್ತೆ ಹಿಂತಿರುಗಿ ಬರುತ್ತಾರೆ ಮತ್ತು ಜನ್ಮ-ಜನ್ಮಾಂತರ ಯಾತ್ರೆ ಮಾಡುತ್ತಲೇ ಬರುತ್ತಾರೆ. ನಮ್ಮ ತೀರ್ಥವು ಅದಲ್ಲ, ಅಮರನಾಥದಲ್ಲಿ ಹೋಗಿ ಮತ್ತೆ ಮೃತ್ಯುಲೋಕದಲ್ಲಿ ಬರುವುದಲ್ಲ. ಮತ್ತೆಲ್ಲರದೂ ಆ ಯಾತ್ರೆಗಳಾಗಿದೆ. ತೀರ್ಥ ಯಾತ್ರೆಗೆ ಹೋಗಿ ಸುತ್ತಾಡಿಕೊಂಡು ಮತ್ತೆ ಬಂದು ಪತಿತರಾಗುತ್ತಾರೆ, ಭಿನ್ನ-ಭಿನ್ನ ಪ್ರಕಾರದ ಯಾತ್ರೆಗಳಿದೆಯಲ್ಲವೆ. ದೇವಿಯ ಮಂದಿರಗಳೂ ಬಹಳಷ್ಟಿದೆ, ವಿಕಾರಿಗಳ ಜೊತೆ ಎಷ್ಟೊಂದು ಯಾತ್ರೆಗಳನ್ನು ಮಾಡುತ್ತಾರೆ, ನೀವು ಮಕ್ಕಳಂತೂ ನಿರ್ವಿಕಾರಿಯಾಗಿರುವ ಪಣ ತೊಟ್ಟಿದ್ದೀರಿ. ಇದು ನೀವು ನಿರ್ವಿಕಾರಿಗಳ ಯಾತ್ರೆಯಾಗಿದೆ. ನಿರ್ವಿಕಾರಿ ತಂದೆಯು ಯಾರು ಸದಾ ಪಾವನನಾಗಿದ್ದಾರೆಯೋ ಅವರನ್ನು ನೆನಪು ಮಾಡಬೇಕಾಗಿದೆ. ನೀರಿನ ಸಾಗರಕ್ಕೆ ವಿಕಾರಿ ಅಥವಾ ನಿರ್ವಿಕಾರಿ ಎಂದು ಹೇಳುವುದಿಲ್ಲ ಮತ್ತು ಅದರಿಂದ ಹೊರಟಿರುವ ನದಿಗಳೂ ಸಹ ನಿರ್ವಿಕಾರಿಯನ್ನಾಗಿ ಮಾಡುವುದಿಲ್ಲ. ಮನುಷ್ಯ ಮಾತ್ರರು ಇಷ್ಟು ಪತಿತರಾಗಿ ಬಿಟ್ಟಿದ್ದಾರೆ, ಏನನ್ನೂ ತಿಳಿದುಕೊಂಡಿಲ್ಲ. ಆ ತೀರ್ಥ ಯಾತ್ರೆಗಳು ಅಲ್ಪಕಾಲದ ಕ್ಷಣ ಭಂಗುರ ಯಾತ್ರೆಗಳಾಗಿವೆ, ಇದು ದೊಡ್ಡ ಯಾತ್ರೆಯಾಗಿದೆ. ನೀವು ಮಕ್ಕಳು ಏಳುತ್ತಾ-ಕುಳಿತುಕೊಳ್ಳುತ್ತಾ ಯಾತ್ರೆಯ ವಿಚಾರ ಮಾಡಬೇಕಾಗಿದೆ. ಯಾತ್ರೆಗೆ ಹೋಗುತ್ತಾರೆಂದರೆ ಗೃಹಸ್ಥ ವ್ಯವಹಾರ, ಉದ್ಯೋಗ-ವ್ಯಾಪಾರ ಎಲ್ಲವನ್ನೂ ಮರೆಯಲಾಗಿದೆ. ಕೇವಲ ಅಮರನಾಥನಿಗೆ ಜೈ ಎಂದು ಹೇಳುತ್ತಾ ಹೋಗುತ್ತಾರೆ. ಒಂದೆರಡು ತಿಂಗಳ ಕಾಲ ತೀರ್ಥ ಯಾತ್ರೆ ಮಾಡಿಕೊಂಡು ಬಂದ ನಂತರ ಕೆಸರಿನಲ್ಲಿ ಬೀಳುತ್ತಾರೆ. ಮತ್ತೆ ಗಂಗಾ ಸ್ನಾನ ಮಾಡಲು ಹೋಗುತ್ತಾರೆ. ನಾವು ನಿತ್ಯವೂ ಪತಿತರಾಗುತ್ತೇವೆ ಎಂಬುದು ಅವರಿಗೆ ತಿಳಿದೇ ಇಲ್ಲ. ಗಂಗಾ, ಜಮುನಾ ತೀರದಲ್ಲಿರುವವರೂ ಸಹ ನಿತ್ಯವೂ ಪತಿತರಾಗುತ್ತಾರೆ. ಪ್ರತಿನಿತ್ಯವೂ ಗಂಗೆಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ. ಒಂದು ನಿಯಮವಿರುತ್ತದೆ, ಎರಡನೆಯದಾಗಿ ವಿಶೇಷ ದಿನಗಳಲ್ಲಿ ಹೋಗುತ್ತಾರೆ ಮತ್ತು ಗಂಗೆಯು ಪತಿತ-ಪಾವನಿ ಎಂದು ತಿಳಿಯುತ್ತಾರೆ ಅಂದಮೇಲೆ ವಿಶೇಷವಾಗಿ ಆ ಒಂದು ದಿನದಂದು ಗಂಗೆಯು ಪಾವನರನ್ನಾಗಿ ಮಾಡುವಂತದ್ದಾಗುತ್ತದೆ, ನಂತರ ಇರುವುದಿಲ್ಲ ಎಂದಲ್ಲ. ಯಾವ ದಿನದಂದು ಮೇಳವಾಗುತ್ತದೆಯೋ, ಆ ದಿನ ಪತಿತ-ಪಾವನಿಯಾಗಿ ಬಿಡುತ್ತದೆ ಎಂದಲ್ಲ, ಅದಂತೂ ಯಾವಾಗಲೂ ಇರುತ್ತದೆ. ನಿತ್ಯವೂ ಸ್ನಾನ ಮಾಡಲು ಹೋಗುತ್ತಾರೆ. ಮೇಳದಲ್ಲಿಯೂ ವಿಶೇಷ ದಿನಗಳಂದು ಹೋಗುತ್ತಾರೆ, ಇದರಲ್ಲಿ ಅರ್ಥವೇ ಇಲ್ಲ, ಗಂಗಾ-ಜಮುನಾ ನದಿಗಳಂತೂ ಅವೇ ಆಗಿದೆ. ಅದರಲ್ಲಿ ಶವಗಳನ್ನೂ ಸಹ ಹಾಕುತ್ತಾರೆ.

ಈಗ ನೀವು ಮಕ್ಕಳು ಆತ್ಮಿಕ ಯಾತ್ರೆಯಲ್ಲಿರಬೇಕಾಗಿದೆ, ನಾವೀಗ ಮನೆಗೆ ಹೋಗುತ್ತೇವೆ. ಇದಕ್ಕಾಗಿ ಇಲ್ಲಿ ಗಂಗಾ ಸ್ನಾನ ಮಾಡುವ ಅಥವಾ ಶಾಸ್ತ್ರಗಳನ್ನು ಓದುವ ಮಾತಿಲ್ಲ. ತಂದೆಯು ಒಂದೇ ಬಾರಿ ಬರುತ್ತಾರೆ. ಇಡೀ ಪ್ರಪಂಚವೂ ಸಹ ಒಂದೇ ಬಾರಿ ಪಾವನವಾಗುತ್ತದೆ. ಇದನ್ನೂ ತಿಳಿದುಕೊಂಡಿದ್ದೀರಿ – ಸತ್ಯಯುಗವು ಹೊಸ ಪ್ರಪಂಚ, ಕಲಿಯುಗವು ಹಳೆಯ ಪ್ರಪಂಚವಾಗಿದೆ. ತಂದೆಯು ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಮಾಡಲು ಅವಶ್ಯವಾಗಿ ಬರಬೇಕಾಗುತ್ತದೆ. ಇದು ಅವರದೇ ಕರ್ತವ್ಯವಾಗಿದೆ ಆದರೆ ಮಾಯೆಯು ಇಷ್ಟು ತಮೋಪ್ರಧಾನ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದೆ, ಅವರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಪ್ರದರ್ಶನಿಯಲ್ಲಿ ಎಷ್ಟು ಮಂದಿ ಬರುತ್ತಾರೆ, ಸನ್ಯಾಸಿಗಳೂ ಸಹ ಬರುತ್ತಾರೆ ಆದರೂ ಕೋಟಿಯಲ್ಲಿ ಕೆಲವರೇ ತಿಳಿದುಕೊಳ್ಳುತ್ತಾರೆ. ನೀವು ಲಕ್ಷಾಂತರ, ಕೋಟ್ಯಾಂತರ ಜನರಿಗೆ ತಿಳಿಸುತ್ತೀರಿ ಆದರೂ ಕೆಲವರೇ ವಿರಳ ಬರುತ್ತಾರೆ. ಅನೇಕರಿಗೆ ತಿಳಿಸಬೇಕಾಗುವುದು. ಕೊನೆಗೆ ನಿಮ್ಮ ಈ ಜ್ಞಾನ ಮತ್ತು ಚಿತ್ರಗಳೆಲ್ಲವೂ ಪತ್ರಿಕೆಗಳಲ್ಲಿ ಬರುತ್ತವೆ, ಏಣಿಯ ಚಿತ್ರವೂ ಬರುತ್ತದೆ. ಇದಂತೂ ಭಾರತಕ್ಕಾಗಿ ಇದೆ, ಅನ್ಯ ಧರ್ಮದವರು ಎಲ್ಲಿ ಹೋಗುತ್ತಾರೆ ಎಂದು ಕೇಳುತ್ತಾರೆ, ಅಂತಿಮ ಸಮಯವೆಂದೂ ಗಾಯನವಿದೆ. ಅಂತಿಮ ಅರ್ಥಾತ್ ಹಿಂತಿರುಗಿ ಹೋಗುವ ಸಮಯವಾಗಿದೆ. ಹಳೆಯ ಪ್ರಪಂಚದ ವಿನಾಶ, ಹೊಸ ಪ್ರಪಂಚದ ಸ್ಥಾಪನೆಯಾಗುವುದು. ಅಂದಮೇಲೆ ಅವಶ್ಯವಾಗಿ ಎಲ್ಲರೂ ಹಿಂತಿರುಗಿ ಹೋಗುತ್ತಾರಲ್ಲವೆ, ಎಲ್ಲರ ವಿನಾಶವಾಗಲಿದೆ. ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ಈ ಮಾತುಗಳನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ – ನರಕವಾಸಿಗಳ ವಿನಾಶ, ಸ್ವರ್ಗವಾಸಿಗಳ ಸ್ಥಾಪನೆಯಾಗುತ್ತಿದೆ, ಕಲ್ಪ-ಕಲ್ಪವೂ ಇದೇ ರೀತಿ ಆಗುತ್ತದೆ. ಈಗ ಇರುವ ಸ್ವಲ್ಪವೇ ಸಮಯದಲ್ಲಿಯೂ ಅನೇಕರಿಗೆ ಈ ಜ್ಞಾನವು ಸಿಗುತ್ತಾ ಹೋಗುವುದು. ಮೇಳಗಳೂ ಆಗುತ್ತಾ ಇರುತ್ತವೆ. ಎಲ್ಲಾ ಕಡೆಯಿಂದ ನಾವು ಮೇಳ ಮಾಡಿದೆವು, ಪ್ರದರ್ಶನಿ ಇಟ್ಟಿದ್ದೆವು ಎಂದು ಪತ್ರ ಬರೆಯುತ್ತಾ ಇರುತ್ತಾರೆ ಆದರೆ ಅದರ ಜೊತೆ ಜೊತೆಗೆ ತಮ್ಮ ನೆನಪಿನ ಯಾತ್ರೆಯನ್ನೂ ಮರೆಯಬಾರದು. ಮಕ್ಕಳು ಬಹಳ ತಣ್ಣಗೆ ನಡೆಯುತ್ತಿದ್ದಾರೆ, ನೆನಪಿನ ಯಾತ್ರೆ ಈ ರೀತಿ ಮಾಡುತ್ತಾರೆ ಹೇಗೆ ವೃದ್ಧರು ಮಾಡಿದಂತೆ. ಶಕ್ತಿಯೇ ಇಲ್ಲವೇನೋ, ಏನೂ ತಿಂದಿಲ್ಲವೆನ್ನುವಂತೆ ಯಾತ್ರೆ ಮಾಡುತ್ತಾರೆ. ತಂದೆಗೆ ಎಷ್ಟೊಂದು ವಿಚಾರವು ನಡೆಯುತ್ತಿರುತ್ತದೆ. ವಿಚಾರ ಮಾಡುತ್ತಾ-ಮಾಡುತ್ತಾ ನಿದ್ರೆಯೇ ಹೊರಟು ಹೋಗುತ್ತದೆ. ವಿಚಾರ ಸಾಗರ ಮಂಥನವನ್ನು ಎಲ್ಲರೂ ಮಾಡಬೇಕಲ್ಲವೇ. ನಮಗೆ ಬೇಹದ್ದಿನ ತಂದೆಯು ಓದಿಸುತ್ತಾರೆಂದು ಮಕ್ಕಳಿಗೇ ತಿಳಿದಿದೆ ಅಂದಮೇಲೆ ಎಷ್ಟು ಅಪಾರ ಖುಷಿಯಿರಬೇಕು – ಈ ವಿದ್ಯೆಯಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ. ಕೆಲಕೆಲವರ ಚಲನೆಯು ಈ ರೀತಿಯಿದೆ ಹೇಗೆ ಏಡಿಯಿದ್ದಂತೆ. ಏಡಿಗಳನ್ನು ತಂದೆಯು ದೇವತೆಗಳನ್ನಾಗಿ ಮಾಡುತ್ತಾರೆ ಆದರೂ ಸಹ ಕೆಲವರ ನಡವಳಿಕೆಯು ಸುಧಾರಣೆಯಾಗುವುದೇ ಇಲ್ಲ. ಈ ಏಣಿಯ ಚಿತ್ರದಲ್ಲಿ ಬಹಳ ಒಳ್ಳೆಯ ಜ್ಞಾನವಿದೆ, ಆದರೆ ಮಕ್ಕಳು ಇಷ್ಟು ಕೆಲಸವನ್ನೂ ಮಾಡುವುದಿಲ್ಲ. ಯಾತ್ರೆಯನ್ನೇ ಮಾಡುವುದಿಲ್ಲ, ತಂದೆಯನ್ನು ನೆನಪು ಮಾಡಿದರೆ ಬುದ್ಧಿಯ ಬೀಗವು ತೆರೆಯುವುದು. ಸತೋಪ್ರಧಾನ ಬುದ್ಧಿಯಾಗುತ್ತಾ ಹೋಗುವುದು. ನೀವು ಮಕ್ಕಳದು ಪಾರಸ ಬುದ್ಧಿಯಾಗಬೇಕು, ಅನೇಕರ ಕಲ್ಯಾಣ ಮಾಡಬೇಕು, ನೀವು ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ. ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ಅವನಿಗೆ ಶ್ಯಾಮಸುಂದರನೆಂದು ಹೇಳುತ್ತಾರೆ. ತಂದೆಯು ಶ್ಯಾಮನಾದ ಆತ್ಮನಿಗೆ ಕುಳಿತು ತಿಳಿಸುತ್ತಾರೆ. ನನ್ನನ್ನು ತಂದೆಯು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆಂದು ಈ ಆತ್ಮಕ್ಕೆ ಗೊತ್ತಿದೆ, ಅಂದಮೇಲೆ ಬುದ್ಧಿಯು ಎಷ್ಟೊಂದು ಖುಷಿಯಲ್ಲಿ ತುಂಬಿರಬೇಕು. ಇದರಲ್ಲಿ ಯಾವುದೇ ಅಹಂಕಾರದ ಮಾತಿಲ್ಲ. ತಂದೆಯು ಎಷ್ಟು ನಿರಹಂಕಾರಿಯಾಗಿದೆ. ಬುದ್ಧಿಯಲ್ಲಿ ಎಷ್ಟೊಂದು ಖುಷಿಯಿರುತ್ತದೆ, ನಾಳೆ ನಾವು ವಜ್ರ ವೈಡೂರ್ಯಗಳ ಮಹಲುಗಳನ್ನು ಕಟ್ಟಿಸುತ್ತೇವೆ. ಹೊಸ ಪ್ರಪಂಚದಲ್ಲಿ ರಾಜ್ಯಭಾರವನ್ನು ನಡೆಸುತ್ತೇವೆ. ಇದಂತೂ ಸಂಪೂರ್ಣ ಪತಿತ ಪ್ರಪಂಚವಾಗಿದೆ. ಈ ಪ್ರಪಂಚದ ಮನುಷ್ಯರು ಏನೂ ಪ್ರಯೋಜನಕ್ಕಿಲ್ಲ. ಏನನ್ನೂ ತಿಳಿದುಕೊಂಡಿಲ್ಲ. ಇದನ್ನೂ ತೋರಿಸಬೇಕು – ವಜ್ರ ಸಮಾನ ಜೀವನವಿತ್ತು, ಅವರೇ ನಂತರ 84 ಜನ್ಮಗಳನ್ನು ತೆಗೆದುಕೊಂಡು ಕವಡೆಯಂತೆ ಆಗಿಬಿಡುತ್ತಾರೆ. ಈ ಏಣಿಯ ಚಿತ್ರವು ನಂಬರ್ವನ್ ಆಗಿದೆ ನಂತರ ಎರಡನೆಯದಾಗಿ ತ್ರಿಮೂರ್ತಿ ಚಿತ್ರವಿದೆ.

ನಿಕಟ ಭವಿಷ್ಯದಲ್ಲಿ ಶ್ರೇಷ್ಠಾಚಾರಿ ಭಾರತವಾಗಿ ಬಿಡುವುದು, ಶ್ರೇಷ್ಠಾಚಾರಿ ಪ್ರಪಂಚದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಎಂದು ನೀವು ಹೇಳುತ್ತೀರಿ. ಈಗ ಎಷ್ಟೊಂದು ಜನಸಂಖ್ಯೆಯಿದೆ! ಮಹಾಭಾರತ ಯುದ್ಧವೂ ಸನ್ಮುಖದಲ್ಲಿದೆ. ಎಲ್ಲಾ ಆತ್ಮರು ಸೊಳ್ಳೆಗಳ ರೀತಿಯಲ್ಲಿ ಹೋಗುವರು. ಬೆಂಕಿಯು ಹತ್ತಿಕೊಳ್ಳುತ್ತಿದೆ. ಎಷ್ಟು ಸುಧಾರಣೆ ಮಾಡಲು ಪ್ರಯತ್ನ ಪಡುವರೋ ಅಷ್ಟೇ ಶತ್ರುಗಳಾಗುತ್ತಾ ಹೋಗುತ್ತಾರೆ. ತಂದೆಯು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಮಕ್ಕಳಿಗೆ ಎಷ್ಟೊಂದು ನಶೆ ತರಿಸುತ್ತಾರೆ. ಕೆಲಕೆಲವರಂತೂ ಇಲ್ಲಿಂದ ಹೋಗುತ್ತಿದ್ದಂತೆಯೇ ಇಡೀ ಜ್ಞಾನವು ಹಾರಿ ಹೋಗುತ್ತದೆ. ಸ್ಮೃತಿಯೇನೂ ಇರುವುದಿಲ್ಲ, ಇಲ್ಲದಿದ್ದರೆ ನಾವು ಹೋಗಿ ಸರ್ವೀಸ್ ಮಾಡಬೇಕೆಂಬ ಎಷ್ಟೊಂದು ಉಮ್ಮಂಗವಿರಬೇಕು! ತಂದೆಯೂ ಸಹ ಗುಣವನ್ನು ನೋಡಿ ಸರ್ವೀಸಿಗೆ ಕಳುಹಿಸುತ್ತಾರಲ್ಲವೇ. ಇದರಲ್ಲಿ ಬಹಳ ಹರ್ಷಿತರಾಗಿರುತ್ತಾರೆ, ಸರ್ವೀಸಿನಲ್ಲಿ ಖುಷಿಯಿರುತ್ತದೆ. ಒಳ್ಳೊಳ್ಳೆಯ ಹಳೆಯ ಮಕ್ಕಳು ಪರಸ್ಪರ ಚಿಕ್ಕ ಚಿಕ್ಕ ಮಾತಿಗೆ ಮುನಿಸಿಕೊಳ್ಳುತ್ತಾರೆ, ಈ ಮಾತುಗಳ ಕಾರಣ ನೀವು ಸರ್ವೀಸನ್ನು ಬಿಡುವುದೇ? ಸರ್ವೀಸನ್ನು ಖುಷಿಯಿಂದ ಮಾಡಬೇಕಾಗಿದೆ. ಯಾರ ಜೊತೆ ಆಗುವುದಿಲ್ಲವೋ ಅವರ ಮುಖವನ್ನು ನೋಡುತ್ತಿದ್ದಂತೆಯೇ ಸರ್ವೀಸಿನ ವಿಚಾರವೇ ಹಾರಿ ಹೋಗುತ್ತದೆ. ಸರ್ವೀಸಿನಲ್ಲಿ ಮನಸ್ಸಾಗದಿದ್ದರೆ ದೂರ ಸರಿಯುತ್ತಾರೆ. ಅಂದಮೇಲೆ ಅಂತಹ ಜ್ಞಾನಿಗಳು ಮತ್ತು ಅಜ್ಞಾನಿಗಳಲ್ಲಿ ಯಾವುದೇ ಅಂತರವಿಲ್ಲ. ದೇಹಾಭಿಮಾನದ ಗ್ರಹಚಾರವು ಬಂದು ಕುಳಿತುಕೊಳ್ಳುತ್ತದೆ. ಇದು ಮೊದಲನೇ ನಂಬರಿನ ಕಾಯಿಲೆಯಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ಆತ್ಮವೇ ಎಲ್ಲವನ್ನೂ ಮಾಡುತ್ತದೆಯಲ್ಲವೇ. ಆತ್ಮವೇ ವಿಕಾರಿ ಮತ್ತು ನಿರ್ವಿಕಾರಿಯಾಗುತ್ತದೆ. ಸ್ವರ್ಗದಲ್ಲಿ ನಿರ್ವಿಕಾರಿಯಾಗಿತ್ತು, ರಾವಣ ರಾಜ್ಯದಲ್ಲಿ ಆತ್ಮವೇ ವಿಕಾರಿಯಾಗಿದೆ. ಇದೂ ಸಹ ಡ್ರಾಮಾದಲ್ಲಿ ಹೀಗೆ ಮಾಡಲ್ಪಟ್ಟಿದೆ, ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಯಾರು ನಿರ್ವಿಕಾರಿಯಾಗಿದ್ದರೋ ಅವರೇ ಪತಿತ, ವಿಕಾರಿಯಾಗಿದ್ದಾರೆ. ನಾವೇ ನಿರ್ವಿಕಾರಿಯಾಗಿದ್ದೆವು, ಈಗ ವಿಕಾರಿಯಾಗಿದ್ದೇವೆ. ನಾವಾತ್ಮರು ಮೂಲವತನದ ನಿವಾಸಿಗಳಾಗಿದ್ದೇವೆ, ಅಲ್ಲಿ ನಾವು ನಿರ್ವಿಕಾರಿಯಾಗಿರುತ್ತೇವೆ. ಇಲ್ಲಿ ಶರೀರದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ವಿಕಾರಿಯಾಗಿದ್ದೇವೆ ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ, ಇದನ್ನು ತಂದೆಯೇ ತಿಳಿಸುತ್ತಾರೆ. ಆತ್ಮವು ಶಾಂತಿಧಾಮದಿಂದ ಬಂದಾಗ ಅವಶ್ಯವಾಗಿ ಪವಿತ್ರವಾಗಿರುತ್ತದೆ ನಂತರ ಅಪವಿತ್ರವಾಗಿದೆ. ಪವಿತ್ರ ಪ್ರಪಂಚದಲ್ಲಿ 9 ಲಕ್ಷ ಜನಸಂಖ್ಯೆಯಿರುತ್ತದೆ ಅಂದಮೇಲೆ ಇಷ್ಟೊಂದು ಆತ್ಮರು ಎಲ್ಲಿಂದ ಬಂದರು? ಅವಶ್ಯವಾಗಿ ಶಾಂತಿಧಾಮದಿಂದಲೇ ಬಂದಿರುವರು. ಅದು ನಿರಾಕಾರಿ ಪ್ರಪಂಚವಾಗಿದೆ, ಅಲ್ಲಿ ಎಲ್ಲಾ ಆತ್ಮರು ಪವಿತ್ರವಾಗಿರುತ್ತಾರೆ ನಂತರ ಪಾತ್ರವನ್ನಭಿನಯಿಸುತ್ತಾ ಅಭಿನಯಿಸುತ್ತಾ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಪಾವನರಿಂದ ಪತಿತರಾಗುವರು. ಮತ್ತೆ ತಂದೆಯು ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ, ಈ ನಾಟಕವು ನಡೆಯುತ್ತಲೇ ಇರುತ್ತದೆ. ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಆ ತಂದೆಯನ್ನು ಯಾರೂ ಅರಿತುಕೊಂಡಿಲ್ಲ. ಋಷಿ-ಮುನಿಗಳೂ ಸಹ ನಮಗೂ ಗೊತ್ತಿಲ್ಲವೆಂದು ಹೇಳಿ ಹೋದರು. ನಾವು ಭಗವಂತನನ್ನು ಮತ್ತು ಅವರ ರಚನೆಯನ್ನು ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ಮತ್ತೆ ಪರಮಾತ್ಮನು ಜ್ಞಾನಪೂರ್ಣ ಎಂಬುದನ್ನೂ ಹೇಳುತ್ತಾರೆ, ಅವರು ಸರ್ವ ಆತ್ಮರ ತಂದೆ ಬೀಜ ರೂಪನಾಗಿದ್ದಾರೆ, ಅವರು ಆತ್ಮರ ಬೀಜ ರೂಪನಾಗಿದ್ದಾರೆ ಮತ್ತು ಪ್ರಜಾಪಿತನು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಆ ನಿರಾಕಾರ ತಂದೆಯು ಇವರಲ್ಲಿ ಪ್ರವೇಶ ಮಾಡಿ ಮನುಷ್ಯರಿಗೆ ತಿಳಿಸುತ್ತಾರೆ, ಅವರಿಗೆ ಮನುಷ್ಯ ಸೃಷ್ಟಿಯ ಬೀಜರೂಪನೆಂದು ಹೇಳುವುದಿಲ್ಲ, ಅವರು ಆತ್ಮರ ಪಿತನಾಗಿದ್ದಾರೆ ಮತ್ತು ಈ ಬ್ರಹ್ಮಾರವರು ಮನುಷ್ಯ ಸೃಷ್ಟಿಯ ಪ್ರಜಾಪಿತನಾಗಿದ್ದಾರೆ. ಅವರ ಮೂಲಕ ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ. ಶರೀರವೇ ಬೇರೆ, ಆತ್ಮವೇ ಬೇರೆಯಾಗಿದೆಯಲ್ಲವೇ. ಮನ-ಬುದ್ಧಿಯು ಆತ್ಮದಲ್ಲಿಯೇ ಇದೆ, ಆತ್ಮವೇ ಬಂದು ಪಾತ್ರವನ್ನು ಅಭಿನಯಿಸಲು ಶರೀರದಲ್ಲಿ ಪ್ರವೇಶ ಮಾಡುತ್ತದೆ.

ನೀವು ತಿಳಿದುಕೊಂಡಿದ್ದೀರಿ – ಯಾರಾದರೂ ಶರೀರ ಬಿಡುತ್ತಾರೆಂದರೆ ಹೋಗಿ ಇನ್ನೊಂದು ಪಾತ್ರವನ್ನು ಅಭಿನಯಿಸುತ್ತಾರೆ. ಇದರಲ್ಲಿ ಅಳುವುದರಿಂದ ಏನಾಗುವುದು! ಅವರು ಹೊರಟು ಹೋದರು ಅಂದಮೇಲೆ ಅವರು ಬಂದು ನಮ್ಮ ಚಿಕ್ಕಪ್ಪ, ದೊಡ್ಡಪ್ಪ, ಮಾವನಾಗುವರೇ? ಅಳುವುದರಿಂದ ಏನು ಲಾಭ! ಮಮ್ಮಾರವರೂ ಹೋದರು, ಡ್ರಾಮಾನುಸಾರ ಪಾತ್ರವನ್ನಭಿನಯಿಸುತ್ತಿದ್ದಾರೆ. ಹೀಗೆ ಅನೇಕರು ಹೋಗುತ್ತಾರೆ. ಎಲ್ಲಿಗೆ ಹೋಗಿ ಜನ್ಮ ತೆಗೆದುಕೊಳ್ಳುತ್ತಾರೆ. ಇದರಿಂದ ಅರ್ಥವಾಗುತ್ತದೆ – ಎಂತೆಂತಹ ಆಜ್ಞಾಕಾರಿ ಮಗುವಾಗಿರುವರೋ ಅಷ್ಟು ಒಳ್ಳೆಯ ಮನೆಯಲ್ಲಿ ಹೋಗಿ ಜನ್ಮ ಪಡೆಯುವರು. ಇಲ್ಲಿನವರು ಒಳ್ಳೆಯ ಮನೆಯಲ್ಲಿಯೇ ಹೋಗಿ ಜನ್ಮ ಪಡೆಯುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ಯಾರು ಯಾವ ಕರ್ಮವನ್ನು ಮಾಡುತ್ತಾರೆಯೋ ಅಂತಹ ಮನೆಯಲ್ಲಿ ಹೋಗುತ್ತಾರೆ. ಕೊನೆಯಲ್ಲಿ ನೀವು ಹೋಗಿ ರಾಜಧಾನಿಯಲ್ಲಿ ಜನ್ಮ ತೆಗೆದುಕೊಳ್ಳುತ್ತೀರಿ. ಯಾರು ರಾಜರ ಬಳಿ ಹೋಗುತ್ತಾರೆ ಎಂಬುದನ್ನು ಸ್ವಯಂ ತಿಳಿದುಕೊಳ್ಳಬಹುದು. ದೈವೀ ಸಂಸ್ಕಾರವನ್ನಂತೂ ತೆಗೆದುಕೊಂಡು ಹೋಗುತ್ತಾರಲ್ಲವೆ. ಇದರಲ್ಲಿ ಬಹಳ ವಿಶಾಲ ಬುದ್ಧಿಯಿಂದ ವಿಚಾರ ಸಾಗರ ಮಂಥನ ಮಾಡಲಾಗುತ್ತದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ಜ್ಞಾನ ಸಾಗರ ಆಗಬೇಕಾಗಿದೆ. ನಂಬರ್ವಾರಂತೂ ಇರುತ್ತಾರೆ. ಮುಂದೆ ಹೋದಂತೆ ಉನ್ನತಿಯಾಗುತ್ತಾ ಹೋಗುತ್ತಾರೆ ಎಂದು ತಿಳಿದುಕೊಳ್ಳಲಾಗುತ್ತದೆ. ಯಾರು ಇಂದು ಕೆಲಸ ಮಾಡುವುದಿಲ್ಲವೋ ಅವರೇ ನಾಳೆ ಎಲ್ಲರಿಗಿಂತಲೂ ತೀಕ್ಷ್ಣವಾಗಿ ಹೋಗಬಹುದು, ಅವರ ಗ್ರಹಚಾರವು ಕಳೆಯಬಹುದು. ಯಾರ ಮೇಲಾದರೂ ರಾಹುವಿನ ಗ್ರಹಚಾರ ಕುಳಿತುಕೊಳ್ಳುತ್ತದೆಯೆಂದರೆ ಅಂತಹವರು ಗುಣಿಗೆ ಬೀಳುತ್ತಾರೆ, ಮೂಳೆಗಳು ಪುಡಿ ಪುಡಿಯಾಗುತ್ತವೆ. ಬೇಹದ್ದಿನ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ನಂತರ ಬೀಳುತ್ತಾರೆಂದರೆ, ಧರ್ಮರಾಜನಿಂದ ಬಹಳ ಶಿಕ್ಷೆಗಳು ಬೀಳುತ್ತವೆ. ಇವರು ಬೇಹದ್ದಿನ ತಂದೆ, ಬೇಹದ್ದಿನ ಧರ್ಮರಾಜನಾಗಿದ್ದಾರೆ ಅಂದಮೇಲೆ ಬೇಹದ್ದಿನ ಶಿಕ್ಷೆ ಸಿಗುತ್ತದೆ. ಯಾವುದೇ ಮಾತಿನಲ್ಲಿ ನೆಪ ಹೇಳಿದರೆ ಅಥವಾ ಉಲ್ಟಾ ಕೆಲಸ ಮಾಡಿದರೆ ಅವಶ್ಯವಾಗಿ ಶಿಕ್ಷೆಯನ್ನು ಅನುಭವಿಸುತ್ತಾರೆ. ಇಷ್ಟೆಲ್ಲಾ ಮಾತುಗಳನ್ನು ತಂದೆಯು ತಿಳಿಸಿದರೂ ಸಹ ನಾವು ತಂದೆಯ ಉಲ್ಲಂಘನೆ ಮಾಡುತ್ತೇವೆ ಎಂಬುದನ್ನೇ ಅರ್ಥ ಮಾಡಿಕೊಳ್ಳುವುದಿಲ್ಲ. ಶ್ರೀಮತದಂತೆ ನಡೆಯಿರಿ, ಸೇವೆಯಲ್ಲಿ ಸಹಯೋಗಿಗಳಾಗಿರಿ, ನೆನಪಿನ ಯಾತ್ರೆಯಲ್ಲಿರಿ, ಚಿತ್ರಗಳಲ್ಲಿ ತಿಳಿಸುವ ಅಭ್ಯಾಸ ಮಾಡುತ್ತೀರೆಂದರೆ ಅದೇ ಹವ್ಯಾಸವಾಗಿ ಬಿಡುವುದು ಇಲ್ಲವೆಂದರೆ ಶ್ರೇಷ್ಠ ಪದವಿ ಹೇಗೆ ಸಿಗುವುದು? ಲೌಕಿಕದಲ್ಲಿ ಕೆಲ ಮಕ್ಕಳು ಸುಪುತ್ರರಾಗಿರುತ್ತಾರೆ, ಇನ್ನೂ ಕೆಲವರು ಕುಪುತ್ರರಾಗಿರುತ್ತಾರೆ. ಇಲ್ಲಿಯೂ ಸಹ ಕೆಲವರು ಕೂಡಲೇ ತಂದೆಯ ಸೇವೆಯನ್ನು ಮಾಡಿ ತೋರಿಸುತ್ತಾರೆ. ಆದ್ದರಿಂದ ಮಕ್ಕಳು ಬೇಹದ್ದಿನ ಸರ್ವೀಸ್ ಮಾಡಬೇಕಾಗಿದೆ, ಬೇಹದ್ದಿನ ಆತ್ಮರ ಕಲ್ಯಾಣ ಮಾಡಬೇಕಾಗಿದೆ. ಮನ್ಮನಾಭವದ ಸಂದೇಶ ಕೊಡಬೇಕಾಗಿದೆ – ತಂದೆಯನ್ನು ನೆನಪು ಮಾಡಿದರೆ ನಿಮ್ಮ ಬುದ್ಧಿಯು ತಮೋಪ್ರಧಾನದಿಂದ ಸತೋಪ್ರಧಾನವಾಗಿ ಬಿಡುತ್ತದೆ. ಈಗ ಕಲಿಯುಗೀ ತಮೋಪ್ರಧಾನ ಪ್ರಪಂಚದ ಅಂತ್ಯವಾಗಿದೆ, ಈಗ ಸತೋಪ್ರಧಾನರಾಗಬೇಕಾಗಿದೆ. ಆತ್ಮರದು ಅಲ್ಲಿ ನಂಬರ್ವಾರ್ ಪ್ರಪಂಚವಲ್ಲವೇ. ಅವರು ನಂಬರ್ವಾರ್ ಆಗಿ ಬಂದು ಪಾತ್ರವನ್ನು ಅಭಿನಯಿಸುತ್ತಾರೆ. ಬರುವುದೂ ಸಹ ನಂಬರ್ವಾರ್ ಡ್ರಾಮಾನುಸಾರ. ಈಗ ಎಲ್ಲಾ ಆತ್ಮರು ರಾವಣ ರಾಜ್ಯದಲ್ಲಿ ದುಃಖಿಯಾಗಿದ್ದಾರೆ ಆದರೂ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ನೀವು ಪತಿತರಾಗಿದ್ದೀರಿ ಎಂದು ಯಾರಿಗಾದರೂ ಹೇಳಿದರೆ ಕೋಪಿಸಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ – ಇದು ವಿಕಾರಿ ಪ್ರಪಂಚವಾಗಿದೆ, ನೀವು ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವಿರಿ. ಉಳಿದೆಲ್ಲರೂ ವಿನಾಶವಾಗಿ ಹಿಂತಿರುಗಿ ಹೊರಟು ಹೋಗುವರು. ಮಹಾಭಾರತ ಯುದ್ಧವಾಗುವುದು. ಇದರಿಂದ ಎಲ್ಲಾ ಆತ್ಮಗಳೂ ಸಮಾಪ್ತಿಯಾಗಿ ಒಂದು ಧರ್ಮ ಉಳಿಯುವುದೆಂದು ಗಾಯನವಿದೆ, ಈ ಯುದ್ಧದ ನಂತರವೇ ಸ್ವರ್ಗದ ಬಾಗಿಲು ತೆರೆಯುತ್ತದೆ. ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ, ಮುಂದೆ ಹೋದಂತೆ ನಿಮ್ಮ ಮಾತುಗಳನ್ನು ಅನೇಕರು ಕೇಳುತ್ತಾ ಇರುತ್ತಾರೆ, ಬರತೊಡಗುತ್ತಾರೆ. ಸೂರ್ಯವಂಶಿ ಚಂದ್ರವಂಶಿಯರು ಯಾರು ಪತಿತರಾಗಿ ಬಿಟ್ಟಿದ್ದಾರೆಯೋ ಅವರೇ ಬಂದು ನಂಬರ್ವಾರ್ ತಮ್ಮ ಆಸ್ತಿಯನ್ನು ತೆಗೆದುಕೊಳ್ಳುವರು. ಪ್ರಜೆಗಳಂತೂ ಬಹಳ ಮಂದಿ ಆಗುವರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಂದೂ ಸಹ ಭಗವಂತನ ಆಜ್ಞೆಗಳ ಉಲ್ಲಂಘನೆ ಮಾಡಬಾರದು. ಬೇಹದ್ದಿನ ಸೇವೆಯಲ್ಲಿ ಸುಪುತ್ರ ಮಕ್ಕಳಾಗಿ ಸಹಯೋಗಿಗಳಾಗಬೇಕಾಗಿದೆ.

2. ಜ್ಞಾನ ಧನದ ಗುಪ್ತ ಖುಷಿಯಿಂದ ಬುದ್ಧಿಯನ್ನು ಸಂಪನ್ನವಾಗಿ ಇಟ್ಟುಕೊಳ್ಳಬೇಕಾಗಿದೆ, ಪರಸ್ಪರ ಎಂದೂ ಮುನಿಸಿಕೊಳ್ಳಬಾರದು.

ವರದಾನ:-

ಯಾವ ಮಕ್ಕಳು ಸರ್ವ ಶಕ್ತಿಗಳ ಸಂಪತ್ತಿವಂತರಾಗಿದ್ದಾರೆಯೋ ಅವರೇ ಸಂಪನ್ನ ಹಾಗೂ ಸಂಪೂರ್ಣ ಸ್ಥಿತಿಯ ಸಮೀಪತೆಯ ಅನುಭವ ಮಾಡುತ್ತಾರೆ. ಅದರಲ್ಲಿ ಭಕ್ತಿಯ ಅಥವ ಭಿಕಾರಿಯಾಗಿರುವ ಯಾವುದೇ ಸಂಸ್ಕಾರವು ಇಮರ್ಜ್ ಆಗುವುದಿಲ್ಲ, ತಂದೆಯ ಸಹಯೋಗ ಬೇಕು, ಆಶೀರ್ವಾದ ಬೇಕು, ಸಹಯೋಗ ಬೇಕು, ಶಕ್ತಿ ಬೇಕು – ಈ ಬೇಕೆಂಬ ಶಬ್ಧವು ದಾತಾ, ವಿದಾತಾ, ವರದಾತಾ ಮಕ್ಕಳ ಮುಂದೆ ಶೋಭಿಸುವುದೇ ಇಲ್ಲ. ಅವರಂತು ವಿಶ್ವದ ಪ್ರತಿಯೊಂದು ಆತ್ಮನಿಗೆ ಏನಾದರೊಂದು ದಾನ ಅಥವಾ ವರದಾನ ಕೊಡುವವರಾಗಿರುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top