18 November 2021 KANNADA Murli Today | Brahma Kumaris

Read and Listen today’s Gyan Murli in Kannada

17 November 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಗುರಿಯು ಬಹಳ ಉನ್ನತವಾಗಿದೆ, ಆದ್ದರಿಂದ ತಮ್ಮ ಸಮಯವನ್ನು ವ್ಯರ್ಥ ಮಾಡದೆ ಸತೋಪ್ರಧಾನರಾಗುವ ಪುರುಷಾರ್ಥ ಮಾಡಿರಿ”

ಪ್ರಶ್ನೆ:: -

ಮಕ್ಕಳ ಏರುವ ಕಲೆಯು ಆಗದಿರಲು ಮುಖ್ಯ ಕಾರಣವೇನು?

ಉತ್ತರ:-

ನಡೆಯುತ್ತಾ-ನಡೆಯುತ್ತಾ ಸ್ವಲ್ಪ ಅಹಂಕಾರ ಬಂದು ಬಿಡುತ್ತದೆ, ತನ್ನನ್ನು ಬುದ್ಧಿವಂತನೆಂದು ತಿಳಿದುಕೊಳ್ಳುತ್ತಾರೆ, ಮುರುಳಿಯನ್ನು ತಪ್ಪಿಸುತ್ತಾರೆ, ಬ್ರಹ್ಮಾ ತಂದೆಯ ಉಲ್ಲಂಘನೆ ಮಾಡಿದರೆಂದರೆ ಎಂದೂ ಸಹ ಏರುವ ಕಲೆಯಾಗಲು ಸಾಧ್ಯವಿಲ್ಲ. ಸಾಕಾರ ತಂದೆಯ ಹೃದಯದಿಂದ ಇಳಿದರೆಂದರೆ ನಿರಾಕಾರ ತಂದೆಯ ಹೃದಯದಿಂದಲೂ ಇಳಿಯುವರು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಲಕ್ಷವನ್ನು ಸಂಪಾದಿಸುವವರು……

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ – ಯಾರಾದರೂ ನಮ್ಮನ್ನು ಸಂಶಯ ಬುದ್ಧಿಯವರನ್ನಾಗಿ ಮಾಡಲು ಏನಾದರೂ ಮಾಡಲಿ ಆದರೆ ನಾವು ಸಂಶಯ ಬುದ್ಧಿಯವರಾಗುವುದಿಲ್ಲ, ಭಲೆ ಎಷ್ಟೇ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸಿದರೂ ಸಹ ಸಂಶಯ ಬುದ್ಧಿಯವರಾಗುವುದಿಲ್ಲ, ಶ್ರೀಮತದಂತೆ ನಡೆಯುತ್ತಾ ಇರುತ್ತೇವೆ. ತಂದೆಯು ಪ್ರತಿನಿತ್ಯವೂ ಭಿನ್ನ-ಭಿನ್ನ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ಸತ್ಯಯುಗದಲ್ಲಿ 9 ಲಕ್ಷ ಜನಸಂಖ್ಯೆಯಿತ್ತು ಅಂದಮೇಲೆ ಉಳಿದ ಇಷ್ಟೆಲ್ಲಾ ಮನುಷ್ಯರು ವಿನಾಶವಾಗುತ್ತಾರೆ. ಯಾರು ಬುದ್ಧಿವಂತರಾಗಿರುವರೋ ಅವರು ಸನ್ನೆಯಿಂದಲೇ ತಿಳಿದುಕೊಳ್ಳುವರು. ಅವಶ್ಯವಾಗಿ ಈ ಯುದ್ಧದಿಂದಲೇ ಅನೇಕ ಧರ್ಮಗಳು ವಿನಾಶವಾಗಿ ಒಂದು ದೇವಿ-ದೇವತಾ ಧರ್ಮದ ಸ್ಥಾಪನೆಯಾಗುವುದು. ಯಾರು ಯೋಗ್ಯರಾಗುವರೋ ಅವರೇ ಮನುಷ್ಯರಿಂದ ದೇವತೆಯಾಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಮನುಷ್ಯರಿಂದ ದೇವತೆಯನ್ನಾಗಿ ಮಾಡಲು ಸಾಧ್ಯವಿಲ್ಲ ಅಂದಮೇಲೆ ಮಕ್ಕಳಿಗೆ ನಾವೀಗ ಮನೆಗೆ ಹೋಗಬೇಕೆಂದು ನೆನಪಿರಬೇಕು ಆದರೆ ಮಾಯೆಯು ಪದೇ ಪದೇ ಮರೆಸುತ್ತದೆ. ಇಲ್ಲಿಯೇ ತಂದೆಯನ್ನು ನೆನಪು ಮಾಡಿ ಸತೋಪ್ರಧಾನರಾಗಬೇಕಾಗಿದೆ, ಯಾವ ಸಮಯದಲ್ಲಾದರೂ ಯುದ್ಧವು ಹೆಚ್ಚಾಗಬಹುದು. ಇದಕ್ಕೆ ನಿಯಮವಿದೆಯೇ? ಬಹುಷಃ ದೊಡ್ಡ ಯುದ್ಧವು ನಿಲ್ಲದೇ ಇರುವಷ್ಟು ಹೆಚ್ಚಾಗಬಹುದು ಎಂಬುದನ್ನೂ ಹೇಳುತ್ತಾರೆ. ಎಲ್ಲರೂ ಪರಸ್ಪರ ಹೊಡೆದಾಡತೊಡಗುತ್ತಾರೆ ಅಂದಮೇಲೆ ನಾವು ವಿನಾಶಕ್ಕೆ ಮೊದಲೇ ತಂದೆಯ ನೆನಪಿನಲ್ಲಿದ್ದು ತಮೋಪ್ರಧಾನರಿಂದ ಸತೋಪ್ರಧಾನರಾಗುವ ಪುರುಷಾರ್ಥವನ್ನೇಕೆ ಮಾಡಬಾರದು! ನೆನಪಿನ ಯಾತ್ರೆಯಲ್ಲಿಯೇ ಮಾಯೆಯು ವಿಘ್ನ ಹಾಕುತ್ತದೆ. ಆದ್ದರಿಂದ ತಂದೆಯು ಪ್ರತೀ ದಿನ ಚಾರ್ಟ್ ಬರೆಯಿರಿ ಎಂದು ಹೇಳುತ್ತಾರೆ, ಆದರೆ ಕೇವಲ 2-4 ಮಂದಿಯಷ್ಟೇ ಬರೆಯುತ್ತಾರೆ. ಉಳಿದವರಂತೂ ತಮ್ಮ ಉದ್ಯೋಗ-ವ್ಯವಹಾರಗಳಲ್ಲಿಯೇ ಇಡೀ ದಿನ ಮುಳುಗಿರುತ್ತಾರೆ. ಅನೇಕ ಪ್ರಕಾರದ ವಿಘ್ನಗಳಲ್ಲಿ ಸಿಲುಕಿರುತ್ತಾರೆ. ಮಕ್ಕಳಿಗೆ ಇದಂತೂ ತಿಳಿದಿದೆ – ನಾವು ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ ಅಂದಮೇಲೆ ಎಲ್ಲಿಯೇ ಇದ್ದರೂ ಪುರುಷಾರ್ಥ ಮಾಡಬೇಕಾಗಿದೆ. ಮನುಷ್ಯರಿಗೆ ತಿಳಿಸುವುದಕ್ಕಾಗಿ ಚಿತ್ರಗಳನ್ನು ಮಾಡಿಸುತ್ತಾ ಇರುತ್ತೇವೆ ಏಕೆಂದರೆ ಈ ಸಮಯದಲ್ಲಿ ಮನುಷ್ಯರು 100% ತಮೋಪ್ರಧಾನರಾಗಿದ್ದಾರೆ. ಮೊದಲು ಮುಕ್ತಿಧಾಮದಿಂದ ಬಂದಾಗ ಸತೋಪ್ರಧಾನರಾಗಿರುತ್ತಾರೆ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾ-ಬರುತ್ತಾ ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈಗ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನದಿಂದ ಸತೋಪ್ರಧಾನರಾಗುವಿರಿ ಎಂದು ಎಲ್ಲರಿಗೆ ತಂದೆಯ ಸಂದೇಶ ಕೊಡಬೇಕಾಗಿದೆ. ವಿನಾಶವೂ ಸನ್ಮುಖದಲ್ಲಿದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಆಗ ಉಳಿದೆಲ್ಲರೂ ನಿರ್ವಾಣ ಧಾಮದಲ್ಲಿದ್ದರು. ಮಕ್ಕಳು ಚಿತ್ರಗಳ ಮೇಲೆ ಗಮನ ಕೊಡಬೇಕಾಗಿದೆ. ಚಿತ್ರಗಳು ದೊಡ್ಡ ಗಾತ್ರದಲ್ಲಿದ್ದಾಗ ಸಹಜವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲರಿಗೆ ತಂದೆಯ ಸಂದೇಶ ಕೊಡಬೇಕಾಗಿದೆ. ಮನ್ಮನಾಭವದ ಅಕ್ಷರವು ಮುಖ್ಯವಾಗಿದೆ ಅಥವಾ ತಂದೆ ಮತ್ತು ಆಸ್ತಿ. ಇದನ್ನು ತಿಳಿಸುವುದರಲ್ಲಿ ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಿಳಿಸುವವರಲ್ಲಿಯೂ ಎಷ್ಟು ನಂಬರ್ವಾರ್ ಇದ್ದಾರೆ, ಬೇಹದ್ದಿನ ತಂದೆಯ ಜೊತೆ ಪ್ರೀತಿಯಿರಬೇಕಾಗಿದೆ. ಬುದ್ಧಿಯಲ್ಲಿ ಇದೇ ಇರಬೇಕು – ನಾವು ತಂದೆಯ ಸೇವೆ ಮಾಡುತ್ತಿದ್ದೇವೆ, ಈಶ್ವರೀಯ ಸೇವಾಧಾರಿಗಳಾಗಬೇಕಾಗಿದೆ. ಅವರು ಭಲೆ ಈಶ್ವರೀಯ ಸೇವಾಧಾರಿ ಎಂಬ ಪದವನ್ನು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ಮಕ್ಕಳ ಸೇವೆ ಮಾಡಲು ಬಂದಿದ್ದಾರೆ, ಎಷ್ಟು ಉತ್ತಮ ದೇವಿ-ದೇವತೆಗಳನ್ನಾಗಿ ಮಾಡಲು ಬಂದಿದ್ದಾರೆ! ಇಂದು ನಾವು ಎಷ್ಟು ಕಂಗಾಲಾಗಿದ್ದೇವೆ. ಸತ್ಯಯುಗದಲ್ಲಿ ಎಷ್ಟೊಂದು ಸರ್ವಗುಣ ಸಂಪನ್ನರಾಗಿ ಬಿಡುತ್ತೇವೆ, ಇಲ್ಲಾದರೆ ಪರಸ್ಪರ ಜಗಳವಾಡುತ್ತಾ ಕಲಹ ಮಾಡುತ್ತಾ ಇರುತ್ತಾರೆ. ವಿನಾಶವಾಗಲಿದೆ ಎಂಬುದು ಯಾರಿಗೂ ತಿಳಿದಿಲ್ಲ. ಶಾಂತವಾಗಿ ಬಿಡುವುದು ಎಂದು ತಿಳಿದುಕೊಳ್ಳುತ್ತಾರೆ. ಸಂಪೂರ್ಣ ಘೋರ ಅಂಧಕಾರದಲ್ಲಿ ಮುಳುಗಿದ್ದಾರೆ, ಈಗ ಅವರಿಗೆ ತಿಳಿಸುವವರು ಬೇಕಾಗಿದೆ. ವಿದೇಶದಲ್ಲಿಯೂ ಈ ಜ್ಞಾನವನ್ನು ತಿಳಿಸಬಹುದು. ಒಂದೇ ಮಾತನ್ನು ಸಭೆಯಲ್ಲಿ ಕುಳಿತು ತಿಳಿಸಿರಿ, ಈಗ ಕಲಿಯುಗದಲ್ಲಿ 600 ಕೋಟಿಗಿಂತಲೂ ಅಧಿಕ ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಕೇವಲ 9 ಲಕ್ಷವಿರುತ್ತದೆ. ಇದರಿಂದಲೇ ಸಿದ್ಧವಾಗುತ್ತದೆ – ವಿನಾಶವು ಅವಶ್ಯವಾಗಿ ಆಗುವುದು. ಮಹಾಭಾರಿ ಯುದ್ಧವು ಪ್ರಸಿದ್ಧವಾಗಿದೆ, ಪರಮಾತ್ಮನೂ ಇಲ್ಲಿದ್ದಾರೆ, ಅವರೇ ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡಿಸುತ್ತಿದ್ದಾರೆ, ಶಂಕರನ ಮೂಲಕ ಕಲಿಯುಗದ ವಿನಾಶವೂ ಆಗಬೇಕಾಗಿದೆ ಏಕೆಂದರೆ ಈಗ ಸಂಗಮವಾಗಿದೆ. ಪ್ರಾಕೃತಿಕ ವಿಕೋಪಗಳಾಗುವವು, ಮೂರನೇ ಮಹಾಯುದ್ಧವು ಅಂತಿಮ ಯುದ್ಧವೆಂದು ಹೇಳುತ್ತಾರೆ. ಅಂತಿಮ ವಿನಾಶವು ಖಂಡಿತ ಆಗಬೇಕಾಗಿದೆ, ಈಗ ಇದನ್ನು ಎಲ್ಲರಿಗೂ ಹೇಳಬೇಕಾಗಿದೆ – ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ಮುಕ್ತಿಧಾಮದಲ್ಲಿ ಹೊರಟು ಹೋಗುವಿರಿ. ಭಲೆ ತಮ್ಮ ಧರ್ಮದಲ್ಲಿಯೇ ಇರಿ, ಆದರೂ ತಂದೆಯನ್ನು ನೆನಪು ಮಾಡಿದರೆ ತಮ್ಮ ಧರ್ಮದಲ್ಲಿ ಒಳ್ಳೆಯ ಪದವಿಯನ್ನು ಪಡೆಯಬಹುದು.

ನೀವು ತಿಳಿದುಕೊಂಡಿದ್ದೀರಿ – ಬೇಹದ್ದಿನ ತಂದೆಯು ನಮಗೆ ಪ್ರಜಾಪಿತ ಬ್ರಹ್ಮಾರವರ ತನುವಿನ ಮೂಲಕ ಜ್ಞಾನವನ್ನು ತಿಳಿಸುತ್ತಿದ್ದಾರೆ, ನಾವು ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ. ಮನೆಯೇ ಮೊದಲ ಪಾಠಶಾಲೆ, ನೆರೆಹೊರೆಯವರೆಲ್ಲರಿಗೂ ಸಂದೇಶ ಕೊಡಬೇಕಾಗಿದೆ, ಅನ್ಯ ಧರ್ಮದವರಿಗೂ ಸಹ ತಂದೆಯ ಪರಿಚಯ ಕೊಡಬೇಕಾಗಿದೆ. ವಿದೇಶದವರಿಗೆ, ರಾಜರಿಗೂ ಸಹ ಜ್ಞಾನವನ್ನು ಕೊಡಬೇಕಾಗಿದೆ ಅದಕ್ಕಾಗಿ ತಯಾರಿ ಮಾಡಬೇಕು. ತಂದೆಯು ತಿಳಿಸುತ್ತಾರೆ – ತ್ರಿಮೂರ್ತಿ, ಗೋಲ, ಕಲ್ಪವೃಕ್ಷ ಯಾವ ಮುಖ್ಯ ಚಿತ್ರಗಳಿವೆಯೋ ಅದನ್ನು ಬಟ್ಟೆಯ ಮೇಲೆ ಮುದ್ರಿಸಿ ನೀವು ವಿದೇಶಕ್ಕೂ ತೆಗೆದುಕೊಂಡು ಹೋಗಬಹುದು. ಭಲೆ ದೊಡ್ಡ ಗಾತ್ರದಲ್ಲಿ ಸಾಧ್ಯವಾಗದಿದ್ದರೆ ಚಿಕ್ಕ ಗಾತ್ರದ ಎರಡು ಬಟ್ಟೆಗಳ ಮೇಲೆ ಮಾಡಿಸಿ. ಈ ಇಡೀ ಜ್ಞಾನವು ತ್ರಿಮೂರ್ತಿ, ಕಲ್ಪವೃಕ್ಷ, ಗೋಲದ ಚಿತ್ರದಲ್ಲಿದೆ. ಏಣಿಯ ಜ್ಞಾನವೂ ಸಹ ಗೋಲದಲ್ಲಿ ಬಂದು ಬಿಡುತ್ತದೆ. ಏಣಿಯ ಚಿತ್ರದಲ್ಲಿ ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ವಿವರವಾಗಿ ಮಾಡಿಸಲಾಗಿದೆ. ಚಕ್ರದಲ್ಲಿ ಎಲ್ಲಾ ಧರ್ಮದವರದೂ ಬಂದು ಬಿಡುತ್ತದೆ. ಏಣಿಯ ಚಿತ್ರದಲ್ಲಿ ಹೇಗೆ ಸತೋಪ್ರಧಾನರೇ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ, ಕೆಳಗಿಳಿಯುತ್ತಾರೆ ಎಂಬುದನ್ನು ತೋರಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿ, ತಂದೆಗೆ ಇಡೀದಿನ ವಿಚಾರವು ನಡೆಯುತ್ತಿರುತ್ತದೆ ಆದ್ದರಿಂದ ಯಾರಾದರೂ ದೊಡ್ಡದಾದ ಹೊಸ ಮನೆಯನ್ನು ಕಟ್ಟಿಸಿದರೆ ಅದರಲ್ಲಿ ಗೋಡೆಯು ಇಷ್ಟು ದೊಡ್ಡದಾಗಿರಲಿ ಅದರಮೇಲೆ 6 ಅಡಿ ಗಾತ್ರದ ಚಿತ್ರವನ್ನು ಮಾಡಿಸುವಂತಿರಬೇಕು. 12 ಅಡಿಯ ಗೋಡೆಯಿರಲಿ. ಈ ಸಮಯದಲ್ಲಿ ಭಾಷೆಗಳೂ ಬಹಳಷ್ಟಿವೆ, ಎಲ್ಲಾ ಧರ್ಮದವರಿಗೆ ತಿಳಿಸಬೇಕೆಂದರೆ ಎಷ್ಟೊಂದು ಭಾಷೆಗಳಲ್ಲಿ ತಿಳಿಸಬೇಕಾಗುತ್ತದೆ. ಇಷ್ಟು ವಿಶಾಲ ಭಾವನೆಯಿಂದ ಯುಕ್ತಿಯನ್ನು ರಚಿಸಬೇಕು. ಸರ್ವೀಸಿನ ಉಮ್ಮಂಗವಿರಲಿ. ಖರ್ಚಂತೂ ಮಾಡಲೇಬೇಕಾಗಿದೆ ಬಾಕಿ ನೀವು ಯಾರಿಂದಲೂ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ. ಭಂಡಾರವು ತಾನಾಗಿಯೇ ತುಂಬುವುದು, ಡ್ರಾಮಾದಲ್ಲಿ ನಿಗಧಿತವಾಗಿದೆ. ಮಕ್ಕಳು ಕೇವಲ ಬುದ್ಧಿಯನ್ನು ಓಡಿಸಬೇಕು ಆದರೆ ಸ್ವಲ್ಪ ಸೇವೆಯನ್ನು ಮಾಡುತ್ತಾರೆಂದರೆ ನಾವು ಬಹಳ ಬುದ್ಧಿವಂತರಾಗಿದ್ದೇವೆಂದು ಮಕ್ಕಳಿಗೆ ನಶೆಯೇರುತ್ತದೆ. ತಂದೆಯು ಹೇಳುತ್ತಾರೆ – ರೂಪಾಯಿಯಲ್ಲಿನ ನಾಲ್ಕಾಣೆಯಷ್ಟೂ ಕಲಿತಿಲ್ಲ, ಕೆಲವರು ಎರಡಾಣೆ, ಕೆಲವರು ಒಂದಾಣೆ, ಇನ್ನೂ ಕೆಲವರು ಒಂದು ಪೈಸೆಯಷ್ಟೂ ಕಲಿತಿರುವುದು ವಿರಳ, ಏನನ್ನೂ ತಿಳಿದುಕೊಂಡಿಲ್ಲ. ಮುರುಳಿಯನ್ನು ಓದುವ ಉಮ್ಮಂಗವೂ ಇಲ್ಲ. ಸಾಹುಕಾರ ಪ್ರಜೆ, ಬಡ ಪ್ರಜೆ ಎಲ್ಲರೂ ಇಲ್ಲಿಯೇ ಆಗಬೇಕಾಗಿದೆ. ಕೆಲವರಂತೂ ತಂದೆಯೊಂದಿಗೆ ಪ್ರತಿಜ್ಞೆ ಮಾಡಿದ ನಂತರ ಮುಖವನ್ನು ಕಪ್ಪು ಮಾಡಿಕೊಳ್ಳುತ್ತಾರೆ. ತಂದೆಗೆ ಹೇಳುತ್ತಾರೆ – ಬಾಬಾ, ನಾವು ಸೋಲನ್ನು ಅನುಭವಿಸಿದೆವು. ತಂದೆಯು ಹೇಳುತ್ತಾರೆ – ನೀವಂತೂ ಕಾಲಾಳುಗಳಿಗೂ ಕಾಲಾಳುಗಳಾಗಿದ್ದೀರಿ, ಬಹಳ ಕನಿಷ್ಟರು. ಇಂತಹವರು ಯಾವ ಪದವಿಯನ್ನು ಪಡೆಯುವರು! ಈಗ ಸೂರ್ಯವಂಶಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಯಾರಿಗೆ ತಂದೆಯ ನೆನಪಿರುತ್ತದೆಯೋ ಅವರೇ ಖುಷಿಯಲ್ಲಿ ಇರುತ್ತಾರೆ. ಕೇವಲ ತಂದೆಯ ಮೂಲಕ ಯಾವ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂಬುದು ನೆನಪಿದ್ದರೂ ಸಹ ಬಹಳ ಲಾಭವಿದೆ. ಧಾರಣೆ ಮಾಡಿ ಮತ್ತೆ ಅನ್ಯರನ್ನೂ ತಮ್ಮ ಸಮಾನ ಮಾಡಬೇಕಾಗಿದೆ ಆದರೆ ಮಕ್ಕಳು ಸೇವೆಯನ್ನೇ ಮಾಡುವುದಿಲ್ಲ, ಸ್ವಲ್ಪ ಸೇವೆ ಮಾಡಿದರೆ ನಾವು ಉತ್ತೀರ್ಣರಾಗಿ ಬಿಟ್ಟೆವು ಎಂದು ತಿಳಿದುಕೊಳ್ಳುತ್ತಾರೆ. ದೇಹಾಭಿಮಾನದಲ್ಲಿ ಬಂದು ಬೀಳುತ್ತಾರೆ. ಒಂದುವೇಳೆ ಬ್ರಹ್ಮಾ ತಂದೆಗೆ ಅಗೌರವ ಮಾಡಿದರೆ ನನಗೆ ಅಗೌರವ ಮಾಡಿದಂತೆ ಎಂದು ಶಿವ ತಂದೆಯು ಹೇಳುತ್ತಾರೆ. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರಲ್ಲವೆ. ನಮಗಂತೂ ಶಿವ ತಂದೆಯೊಂದಿಗೆ ಸಂಬಂಧವಿದೆ ಎಂದಲ್ಲ, ಆಸ್ತಿಯಂತೂ ಇವರ ಮೂಲಕವೇ ಸಿಗುವುದಲ್ಲವೆ. ಇವರಿಗೆ ಹೃದಯದ ಸಮಾಚಾರವನ್ನು ತಿಳಿಸಬೇಕಾಗಿದೆ, ಸಲಹೆ ತೆಗೆದುಕೊಳ್ಳಬೇಕಾಗಿದೆ. ನಾನು ಸಾಕಾರ ತಂದೆಯ ಮೂಲಕ ಸಲಹೆ ಕೊಡುತ್ತೇನೆ ಎಂದು ಶಿವ ತಂದೆಯು ಹೇಳುತ್ತಾರೆ. ಬ್ರಹ್ಮನಿಲ್ಲದೆ ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ಇವರಿಲ್ಲದೆ ಏನೂ ನಡೆಯುವುದಿಲ್ಲ ಆದ್ದರಿಂದ ಮಕ್ಕಳು ಬಹಳ-ಬಹಳ ಎಚ್ಚರಿಕೆಯಿಂದಿರಬೇಕಾಗಿದೆ. ಉಲ್ಟಾ ಅಹಂಕಾರದಲ್ಲಿ ಬಂದು ತಮಗೆ ನಷ್ಟ ಮಾಡಿಕೊಳ್ಳುತ್ತಾರೆ. ಸಾಕಾರ ತಂದೆಯ ಹೃದಯದಿಂದ ಇಳಿದರೆ ನಿರಾಕಾರ ತಂದೆಯ ಹೃದಯದಿಂದಲೂ ಇಳಿಯುತ್ತಾರೆ. ಇಂತಹವರೂ ಅನೇಕರಿದ್ದಾರೆ – ಎಂದೂ ಮುರುಳಿಯನ್ನು ಕೇಳುವುದಿಲ್ಲ, ಪತ್ರವನ್ನೂ ಬರೆಯುವುದಿಲ್ಲ ಅಂದಮೇಲೆ ತಂದೆಯು ಏನು ತಿಳಿದುಕೊಳ್ಳುವರು? ಗುರಿಯು ಬಹಳ ಉನ್ನತವಾಗಿದೆ ಆದ್ದರಿಂದ ಮಕ್ಕಳು ಸಮಯವನ್ನು ವ್ಯರ್ಥ ಮಾಡಬಾರದು. ಯಾರು ತಮ್ಮನ್ನು ಮಹಾರಥಿ ಎಂದು ತಿಳಿದುಕೊಳ್ಳುವರೋ ಅವರು ಶ್ರೇಷ್ಠ ಕಾರ್ಯದಲ್ಲಿ ಸಹಯೋಗ ನೀಡಬೇಕು ಆಗ ತಂದೆಯು ಖುಷಿಯಾಗಿ ಅವಕಾಶ ನೀಡಲಿ, ಇವರಿಂದ ಅನೇಕರ ಕಲ್ಯಾಣವಾಗುವುದು ಎಂದು. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ. ಪ್ರಜೆಗಳಂತೂ ಆಗುತ್ತಾರೆ. ತಂದೆಗೆ ಸೇವಾಧಾರಿ ಮಕ್ಕಳ ಕಡೆ ದೃಷ್ಟಿಯಿರುತ್ತದೆ. ಈ ಇಂದ್ರಸಭೆಯಲ್ಲಿ ಸೂರ್ಯವಂಶಿ ರಾಜ-ರಾಣಿಯಾಗುವವರು ಬರಬೇಕು ಯಾರು ಸೇವೆ ಮಾಡುವುದಿಲ್ಲವೋ ಅವರು ಯೋಗ್ಯರಲ್ಲ. ಮುಂದೆ ಹೋದಂತೆ ಯಾರು-ಯಾರು ಏನಾಗುವರು ಎಂಬುದೆಲ್ಲವೂ ಅರ್ಥವಾಗುವುದು. ಮಕ್ಕಳಿಗೆ ಬಹಳ-ಬಹಳ ನಶೆಯಿರಬೇಕು – ನಾವು ನಾಳೆ ಸ್ವರ್ಗದಲ್ಲಿ ರಾಜಕುಮಾರರಾಗುತ್ತೇವೆ. ಇಲ್ಲಿ ನೀವು ರಾಜಯೋಗವನ್ನು ಕಲಿಯಲು ಬಂದಿದ್ದೀರಿ, ಚೆನ್ನಾಗಿ ಓದದಿದ್ದರೆ ಕಡಿಮೆ ಪದವಿಯನ್ನು ಪಡೆಯುತ್ತೀರಿ. ತಂದೆಯ ಬಳಿ ಸರ್ವೀಸಿನ ಸಮಾಚಾರವು ಬರಬೇಕಾಗಿದೆ – ಬಾಬಾ, ಇಂದು ನಾನು ಈ ಸೇವೆ ಮಾಡಿದೆನು ಎಂದು. ಪತ್ರವನ್ನೇ ಬರೆಯದಿದ್ದರೆ ತಂದೆಯು ಏನು ತಿಳಿದುಕೊಳ್ಳುವರು? ಸತ್ತು ಹೋದರು ಅರ್ಥಾತ್ ಜ್ಞಾನವನ್ನು ಬಿಟ್ಟು ಹೋದರು ಎಂದು ತಿಳಿದುಕೊಳ್ಳುವರು. ಯಾರು ಸೇವೆಯಲ್ಲಿ ಇರುತ್ತಾರೆ, ತಂದೆಯ ಪರಿಚಯವನ್ನು ನೀಡುತ್ತಾ ಇರುತ್ತಾರೆಯೋ ಅಂತಹ ಮಕ್ಕಳೇ ತಂದೆಗೂ ನೆನಪಿರುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಹ್ಮಾಕುಮಾರ-ಕುಮಾರಿಯರಿಗೆ ಆಸ್ತಿಯನ್ನು ಕೊಡುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣರ ರಚನೆಯನ್ನು ರಚಿಸುತ್ತಾರೆ, ಈಗ ಮತ್ತೆಲ್ಲಾ ಧರ್ಮಗಳಿವೆ ಬಾಕಿ ದೇವಿ-ದೇವತಾ ಧರ್ಮ ಯಾವುದು ತಳಹದಿಯಾಗಿದೆಯೋ ಅದೇ ಮರೆಯಾಗಿದೆ. ಇದೆಲ್ಲಾ ಆಟವು ಮಾಡಲ್ಪಟ್ಟಿದೆ, ಏಣಿಯ ಚಿತ್ರದಲ್ಲಿ ಎಲ್ಲಾ ಧರ್ಮಗಳಿಲ್ಲ, ಗೋಲದಲ್ಲಿ ಸ್ಪಷ್ಟವಾಗಿದೆ ಆದ್ದರಿಂದ ಗೋಲದ ಚಿತ್ರದಲ್ಲಿ ತಿಳಿಸಬೇಕಾಗಿದೆ. ಇದನ್ನೂ ತಿಳಿಸಬೇಕು- ಸತ್ಯಯುಗದಲ್ಲಿ ದೇವಿ-ದೇವತೆಗಳು ಡಬಲ್ ಕಿರೀಟಧಾರಿಗಳಾಗಿದ್ದರು, ಈ ಸಮಯದಲ್ಲಿ ಪವಿತ್ರತೆಯ ಕಿರೀಟವು ಯಾರಿಗೂ ಇಲ್ಲ. ಪ್ರಕಾಶತೆಯ ಕಿರೀಟವನ್ನು ಕೊಡೋಣವೆಂದರೆ ಅದಕ್ಕೆ ಯಾರೊಬ್ಬರೂ ಯೋಗ್ಯರಿಲ್ಲ. ತನಗೂ (ಬ್ರಹ್ಮಾ) ಕೊಟ್ಟುಕೊಳ್ಳುವಂತಿಲ್ಲ. ನಾನೂ ಸಹ ಅದಕ್ಕಾಗಿಯೇ ಪುರುಷಾರ್ಥ ಮಾಡುತ್ತಿದ್ದೇನೆ, ಶರೀರವಂತೂ ಇಲ್ಲಿ ಪವಿತ್ರವಾಗಿಲ್ಲ. ಆತ್ಮವು ಯೋಗಬಲದಿಂದ ಪವಿತ್ರವಾಗುತ್ತಾ-ಆಗುತ್ತಾ ಅಂತಿಮದಲ್ಲಿ ಪವಿತ್ರವಾಗಿ ಬಿಡುವುದು. ಕಿರೀಟವಂತೂ ಸತ್ಯಯುಗದಲ್ಲಿ ಸಿಗುವುದು, ಸತ್ಯಯುಗದಲ್ಲಿ ಡಬಲ್ ಕಿರೀಟ, ಭಕ್ತಿಮಾರ್ಗದಲ್ಲಿ ಸಿಂಗಲ್ ಕಿರೀಟ, ಇಲ್ಲಂತೂ ಯಾವ ಕಿರೀಟವೂ ಇಲ್ಲ. ಈಗ ನಿಮಗೆ ಕೇವಲ ಪವಿತ್ರತೆಯ ಕಿರೀಟವನ್ನು ಎಲ್ಲಿ ತೋರಿಸುವುದು? ಲೈಟ್ನ್ನು ಎಲ್ಲಿಡುವುದು? ಜ್ಞಾನಿಗಳಂತೂ ಆಗಿದ್ದೀರಿ, ಯಾವಾಗ ಸಂಪೂರ್ಣ ಪವಿತ್ರರಾಗುತ್ತೀರೋ ಆಗ ಪವಿತ್ರತೆಯ ಪ್ರಕಾಶತೆಯಿರಬೇಕು ಅಂದಮೇಲೆ ಸೂಕ್ಷ್ಮವತನದಲ್ಲಿ ಅದನ್ನು ತೋರಿಸುವುದೇ? ಹೇಗೆ ಮಮ್ಮಾರವರು ಸೂಕ್ಷ್ಮವತನದಲ್ಲಿ ಪವಿತ್ರ ಫರಿಶ್ತೆಯಾಗಿದ್ದಾರಲ್ಲವೆ, ಅಲ್ಲಿ ಸಿಂಗಲ್ ಕಿರೀಟವಿದೆ ಆದರೆ ಈಗ ಲೈಟ್ನ ಕಿರೀಟವನ್ನು ಎಲ್ಲಿ ತೋರಿಸುವುದು? ಪವಿತ್ರರಾಗುವುದೇ ಕೊನೆಯಲ್ಲಿ. ಯೋಗ ಮುದ್ರೆಯಲ್ಲಿ ಇದ್ದಾಗ ಪ್ರಕಾಶತೆಯನ್ನು ತೋರಿಸುವುದೇ? ಇಂದು ಪವಿತ್ರತೆಯ ಕಿರೀಟವನ್ನು ಕೊಟ್ಟು ನಾಳೆ ಮತ್ತೆ ಪತಿತರಾಗಿ ಬಿಟ್ಟರೆ ಕಿರೀಟವೇ ಮಾಯವಾಗಿ ಬಿಡುತ್ತದೆ ಆದ್ದರಿಂದ ಅಂತ್ಯದಲ್ಲಿ ಕರ್ಮಾತೀತ ಸ್ಥಿತಿಯನ್ನು ಹೊಂದಿದಾಗಲೇ ಆ ಕಿರೀಟವಿರುತ್ತದೆ ಆದರೆ ನೀವು ಸಂಪೂರ್ಣರಾಗುತ್ತಿದ್ದಂತೆಯೇ ಸೂಕ್ಷ್ಮವತನಕ್ಕೆ ಹೊರಟು ಹೋಗುತ್ತೀರಿ. ಹೇಗೆ ಬುದ್ಧನನ್ನು, ಕ್ರೈಸ್ಟ್ ನ್ನು ತೋರಿಸುತ್ತಾರೆ ಮೊಟ್ಟ ಮೊದಲು ಪವಿತ್ರ ಆತ್ಮವು ಧರ್ಮ ಸ್ಥಾಪನೆ ಮಾಡಲು ಬರುತ್ತದೆ, ಅವರಿಗೆ ಪ್ರಕಾಶತೆಯನ್ನು ತೋರಿಸಬಹುದೇ ಹೊರತು ಕಿರೀಟವಲ್ಲ. ನೀವೂ ಸಹ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಪವಿತ್ರರಾಗಿ ಬಿಡುತ್ತೀರಿ. ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ-ತಿರುಗಿಸುತ್ತಾ ನೀವು ರಾಜ್ಯ ಪದವಿಯನ್ನು ಪಡೆಯುತ್ತೀರಿ. ಅಲ್ಲಿ ಮಂತ್ರಿಗಳಿರುವುದಿಲ್ಲ, ಇಲ್ಲಾದರೆ ಅನೇಕರಿಂದ ಸಲಹೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲಿ ಎಲ್ಲರೂ ಸತೋಪ್ರಧಾನರಾಗಿರುತ್ತಾರೆ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಬಾಪ್ದಾದಾರವರಿಂದ ಆಫ್ರೀನ್ ತೆಗೆದುಕೊಳ್ಳಲು ತಂದೆಯ ಶ್ರೇಷ್ಠ ಕಾರ್ಯದಲ್ಲಿ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ. ತಂದೆಗೆ ತಮ್ಮ ಸೇವಾ ಸಮಾಚಾರವನ್ನು ತಿಳಿಸಬೇಕಾಗಿದೆ.

2. ದೇಹಾಭಿಮಾನದಲ್ಲಿ ಬಂದು ಎಂದೂ ಅಗೌರವ ಮಾಡಬಾರದು. ಉಲ್ಟಾ ನಶೆಯಲ್ಲಿ ಬರಬಾರದು. ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಸರ್ವೀಸಿನ ಯುಕ್ತಿಗಳನ್ನು ರಚಿಸಬೇಕು, ಸೇವಾಧಾರಿಗಳಾಗಬೇಕಾಗಿದೆ.

ವರದಾನ:-

ಹೇಗೆ ಆರಂಭದಲ್ಲಿ ಜ್ಞಾನದ ಶಕ್ತಿಯು ಕಡಿಮೆಯಿತ್ತು ಆದರೆ ತ್ಯಾಗ ಹಾಗೂ ಸ್ನೇಹದ ಆಧಾರದಿಂದ ಸಫಲತೆಯು ಸಿಕ್ಕಿತು. ಬುದ್ಧಿಯಲ್ಲಿ ಹಗಲು-ರಾತ್ರಿ ಬಾಬಾ ಮತ್ತು ಯಜ್ಞದ ಕಡೆ ಲಗನ್ ಇತ್ತು. ಬಹಳ ಪ್ರೀತಿಯಿಂದ ಬಾಬಾ ಮತ್ತು ಯಜ್ಞ ಎಂಬ ಶಬ್ಧವು ಹೊರ ಬರುತ್ತಿತ್ತು. ಇದೇ ಸ್ನೇಹವು ಎಲ್ಲರನ್ನೂ ಸಹಯೋಗದಲ್ಲಿ ಕರೆ ತಂದಿತು. ಇದೇ ಶಕ್ತಿಯಿಂದ ಕೇಂದ್ರವಾಯಿತು. ಸಾಕಾರನ ಸ್ನೇಹದಿಂದಲೇ ಮನ್ಮನಾಭವ ಆದೆವು, ಸಾಕಾರನ ಸ್ನೇಹವೇ ಸಹಯೋಗಿಯನ್ನಾಗಿ ಮಾಡಿತು. ಈಗಲೂ ತ್ಯಾಗ ಹಾಗೂ ಸ್ನೇಹದ ಶಕ್ತಿಯಿಂದ ಮುತ್ತಿಗೆ ಹಾಕುತ್ತೀರೆಂದರೆ ಸಫಲತೆಯು ಸಿಕ್ಕಿ ಬಿಡುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top