17 November 2021 KANNADA Murli Today | Brahma Kumaris

Read and Listen today’s Gyan Murli in Kannada

16 November 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಶಾಂತಿಯಲ್ಲಿದ್ದು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ, ಇದರಲ್ಲಿ ಗಂಟೆ ಇತ್ಯಾದಿಗಳನ್ನು ಹೊಡೆಯುವ ಅವಶ್ಯಕತೆಯಿಲ್ಲ”

ಪ್ರಶ್ನೆ:: -

ಯಾವ ಮಾತಿನಲ್ಲಿ ತಂದೆಯ ಸಮಾನರಾದರೆ ಮತ್ತೆಲ್ಲಾ ಕೆಲಸಗಳು ಸಿದ್ಧವಾಗಿ ಬಿಡುತ್ತವೆ?

ಉತ್ತರ:-

ಹೇಗೆ ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಹಾಗೆಯೇ ಬಹಳ-ಬಹಳ ಪ್ರಿಯರಾಗಿರಿ, ಕ್ರೋಧದಿಂದ ಕೆಲಸವು ಕೆಡುತ್ತದೆಯೇ ಹೊರತು ಕೆಲಸ ಆಗುವುದಿಲ್ಲ. ಆದ್ದರಿಂದ ರೋಷದಿಂದ ನೋಡುವುದು, ಜೋರಾಗಿ ಮಾತನಾಡುವುದು, ಆವೇಶದಲ್ಲಿ ಬರುವುದು – ಇದರ ಅವಶ್ಯಕತೆಯಿಲ್ಲ. ಶಾಂತವಾಗಿರುವುದು ಬಹಳ-ಬಹಳ ಒಳ್ಳೆಯದಾಗಿದೆ. ಪ್ರೀತಿಯಿಂದ ಬಹಳ ಕೆಲಸಗಳು ಈಡೇರುತ್ತವೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವೇ ಮಾತಾಪಿತ ಆಗಿದ್ದೀರಿ….

ಓಂ ಶಾಂತಿ. ಇದು ಒಬ್ಬ ತಂದೆಯ ಮಹಿಮೆಯಾಗಿದೆ ಆದರೆ ಭಕ್ತಿಮಾರ್ಗದಲ್ಲಿ ಕೇವಲ ಒಬ್ಬರ ಮಹಿಮೆಯನ್ನು ಹಾಡುವುದರಿಂದ ಭಕ್ತಿಯ ಶೋ ಇರುವುದಿಲ್ಲ. ಆದ್ದರಿಂದ ಭಕ್ತಿಯಲ್ಲಿ ಅನೇಕರ ಮಹಿಮೆಯನ್ನು ಹಾಡುತ್ತಾರೆ. ಅಲ್ಲಿ ಬಹಳ ಶಬ್ಧವೂ ಇರುತ್ತದೆ. ಗಂಟೆ, ಜಾಗಟೆ, ಗೀತೆ-ಭಜನೆ, ಅಳುವುದು-ಕರೆಯುವುದು, ಇದೆಲ್ಲವೂ ಭಕ್ತಿಮಾರ್ಗದಲ್ಲಿ ಎಷ್ಟೊಂದು ನಡೆಯುತ್ತದೆ! ಭಿನ್ನ-ಭಿನ್ನ ಪ್ರಕಾರದ ಶಬ್ಧ ಮಂತ್ರ-ತಂತ್ರ, ಸ್ತುತಿ ಇತ್ಯಾದಿಗಳಿರುತ್ತದೆ ಮತ್ತು ಜ್ಞಾನ ಮಾರ್ಗದಲ್ಲಿ ಶಾಂತಿಯಿದೆ. ಕೇವಲ ಸೂಚನೆ ನೀಡಲಾಗುತ್ತದೆ, ಶಬ್ಧವೇನೂ ಇಲ್ಲ. ಭಕ್ತಿಯಲ್ಲಿ ಎಷ್ಟೊಂದು ಆಡಂಬರವಿದೆ! ಎಲ್ಲದಕ್ಕಿಂತ ಹೆಚ್ಚಿನದಾಗಿ ಶಿವನ ಮಂದಿರದಲ್ಲಿಯೇ ಗಂಟೆಗಳು ಮೊಳಗುತ್ತವೆ. ಎಲ್ಲಿ ನೋಡಿದರೂ ಗಂಟೆಗಳೇ ಗಂಟೆಗಳಿರುತ್ತವೆ. ಯಾರನ್ನಾದರೂ ನಿದ್ರೆಯಿಂದ ಜಾಗೃತಗೊಳಿಸಲು ಯಾರೂ ಗಂಟೆಗಳನ್ನು ಹೊಡೆಯುವುದಿಲ್ಲ. ಶಿವ ತಂದೆಯು ಬಂದು ಮನುಷ್ಯರನ್ನು ಕುಂಭಕರ್ಣನ ಅಜ್ಞಾನ ನಿದ್ರೆಯಿಂದ ಏಳಿಸಿದ್ದಾರೆ ಆದರೆ ಗಂಟೆ ಹೊಡೆಯುವುದಿಲ್ಲ. ಸಂಪೂರ್ಣ ಶಾಂತಿಯಿಂದ ಎರಡು ಶಬ್ಧಗಳಲ್ಲಿಯೇ ತಿಳಿಸುತ್ತಾರೆ. ಯಾರು ಬುದ್ಧಿವಂತರಿರುವರೋ ಅವರು ಎರಡು ಶಬ್ಧಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಹೇ ಪತಿತ-ಪಾವನ ಬನ್ನಿ ಎಂದು ನೀವೇ ನನ್ನನ್ನು ಕರೆದಿರಿ. ನಾನೀಗ ಬಂದಿದ್ದೇನೆ, ನಿಮಗೆ ಮಾರ್ಗವನ್ನು ತಿಳಿಸುತ್ತೇನೆ. ನೀವು ಇನ್ನೂ ಪತಿತರಾಗಿ ಈ ಪ್ರಪಂಚದಲ್ಲಿಯೇ ಇರಬೇಕೇ! ನೀವಂತೂ ಪಾವನ ಪ್ರಪಂಚದಲ್ಲಿರಲು ಬಯಸುತ್ತೀರಲ್ಲವೆ! ಪಾವನ ಪ್ರಪಂಚವೆಂದು ಸ್ವರ್ಗಕ್ಕೆ ಹೇಳಲಾಗುತ್ತದೆ. ಪತಿತ-ಪಾವನ ಎಂದು ಹೇಳುತ್ತಾರೆ ಅಂದಮೇಲೆ ತಿಳಿದುಕೊಳ್ಳಬೇಕಾಗಿದೆ – ಪತಿತ-ಪಾವನನು ಬಂದು ಏನು ಮಾಡುವರು? ಅವಶ್ಯವಾಗಿ ನರಕದಿಂದ ಸ್ವರ್ಗದಲ್ಲಿ ಕರೆದುಕೊಂಡು ಹೋಗುವರು. ತಿಳಿದುಕೊಳ್ಳದೆ ಹಾಗೆಯೇ ಕರೆಯುತ್ತಿರುತ್ತಾರೆ. ಭಜನೆ ಮಾಡುತ್ತಿರುತ್ತಾರೆ ಆದರೆ ತಂದೆಯು ಬರುವರೆಂದರೆ ಏನು ಮಾಡುವರು ಎಂಬುದನ್ನು ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಇದು ಮನುಷ್ಯರಿಂದ ದೇವತೆಗಳಾಗುವ ವಿಶ್ವ ವಿದ್ಯಾಲಯವಾಗಿದೆ ಆದ್ದರಿಂದಲೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಹಾಡುತ್ತಾರೆ, ಇದರಲ್ಲಿ ಶಾಸ್ತ್ರ ಇತ್ಯಾದಿಗಳೇನನ್ನೂ ಓದುವಂತಿಲ್ಲ. ಭಕ್ತಿಮಾರ್ಗದಲ್ಲಿ ಬಹಳ ಶಾಸ್ತ್ರ ಇತ್ಯಾದಿಗಳನ್ನು ಓದುತ್ತಾರೆ, ಅನೇಕ ಪ್ರವಚನಗಳಿರುತ್ತವೆ. ಒಂದೊಂದು ತಿಂಗಳವರೆಗೆ ಮಂಟಪವನ್ನು ಮಾಡಿ ಭಜನೆ ಮಾಡುತ್ತಾರೆ. ಇಲ್ಲಿ ಎಷ್ಟೊಂದು ಶಾಂತಿಯಲ್ಲಿ ತಂದೆಯು ತಿಳಿಸುತ್ತಾರೆ. ನೋಡಿ, ತಂದೆಯು ಬಂದು ನಿಮ್ಮನ್ನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ. ವಿದ್ಯೆಯೂ ಸಹ ಎಷ್ಟು ಸಹಜವಾಗಿದೆ! ನೀವು ಮೊಟ್ಟ ಮೊದಲು ಪಾವನರಾಗಿದ್ದಿರಿ, ಸತ್ಯಯುಗದಲ್ಲಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕಲಿಯುಗದಲ್ಲಿ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ನೀವೀಗ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ, ಅದು ನಿರಂತರವಾಗಿರಲಿ. ಹೇಗೆ ಕನ್ಯೆಗೆ ನಿಶ್ಚಿತಾರ್ಥವಾಗುತ್ತದೆ ಎಂದರೆ ಜಪಿಸುತ್ತಾಳೆಯೇ? ನೆನಪಿನಲ್ಲಿರುತ್ತಾಳೆಯೇ? ನೀವೇಲ್ಲರೂ ಪತ್ನಿಯರಾಗಿದ್ದೀರಿ, ಶಿವ ತಂದೆಯು ಪತಿಯರಿಗೂ ಪತಿಯಾಗಿದ್ದಾರೆ. ಪರಮಾತ್ಮನ ಜೊತೆ ನಿಮ್ಮದು ನಿಶ್ಚಿತಾರ್ಥವಾಗಿದೆ. ನಿಶ್ಚಿತಾರ್ಥ ಆಗಿ ಬಿಟ್ಟಿತೆಂದರೆ ಬುದ್ಧಿಯಲ್ಲಿ ನೆನಪು ಕುಳಿತು ಬಿಟ್ಟಿತು. ನಮಗೆ ನಿಶ್ಚಿತಾರ್ಥವಾಯಿತೆಂದು ನಿಶ್ಚಯವಾಯಿತು ನಂತರ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾ ಇರುತ್ತಾರೆ. ನಿಮಗೂ ಸಹ ತಂದೆಯು ತಿಳಿಸುತ್ತಾರೆ – ನಾವು ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರರಾಗಿದ್ದೇವೆ ಎಂದು ನಿಶ್ಚಯಬುದ್ಧಿಯವರಾಗಿ ಬಿಟ್ಟಿರಿ. ಸಹೋದರರಿಗೆ ಒಬ್ಬ ತಂದೆಯಿಂದ ಆಸ್ತಿಯು ಸಿಗುತ್ತದೆ ಆದ್ದರಿಂದ ತಂದೆಯನ್ನು ಕರೆಯುತ್ತಾರೆ, ಭಲೆ ಮನುಷ್ಯರ ತನುವಿನಲ್ಲಿ ಬಂದು ಸಹೋದರ-ಸಹೋದರಿಯರಾಗುತ್ತೀರಿ ಆದರೆ ಕರೆಯುವುದು ಆತ್ಮವೇ ಅಲ್ಲವೆ! ಸಹೋದರ-ಸಹೋದರರು ಕರೆಯುತ್ತೀರಿ – ಹೇ ಪತಿತ-ಪಾವನ ತಂದೆಯೇ ಬನ್ನಿ ಎಂದು. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಪಾವನರಿಗೆ ಸತೋಪ್ರಧಾನರು, ಪತಿತರಿಗೆ ತಮೋಪ್ರಧಾನರೆಂದು ಹೇಳಲಾಗುತ್ತದೆ. ಈ ಮಾತುಗಳನ್ನು ತಂದೆಯು ಸಂಗಮಯುಗದಲ್ಲಿಯೇ ತಿಳಿಸುತ್ತಾರೆ. ಇದು ಗೀತಾ ಪಾಠಶಾಲೆಯಾಗಿದೆ, ಈ ಪಾಠಶಾಲೆಯಲ್ಲಿ ತಂದೆಯು ಬಂದು ರಾಜಯೋಗವನ್ನು ಕಲಿಸುತ್ತಾರೆ, ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಅಲ್ಲಾದರೆ ಶಿಕ್ಷಕರು ಸನ್ಮುಖದಲ್ಲಿ ಕುಳಿತು ಓದಿಸುತ್ತಾರೆ, ಕಣ್ಣಿಗೆ ಕಾಣಿಸುತ್ತಾರೆ ಆದರೆ ಇವರು ಗುಪ್ತವಾಗಿದ್ದಾರೆ ಅಂದಾಗ ಈ ಶಿಕ್ಷಕರನ್ನೂ ಸಹ ಬುದ್ಧಿಯಿಂದ ತಿಳಿದುಕೊಳ್ಳಬೇಕಾಗುತ್ತದೆ. ಇವರು ನಿರಾಕಾರ ಪತಿತ-ಪಾವನ ತಂದೆಯಾಗಿದ್ದಾರೆ. ಆ ತಂದೆಯೇ ಸ್ಮೃತಿ ತರಿಸುತ್ತಾರೆ – ಕಲ್ಪದ ಮೊದಲೂ ಸಹ ನಾನು ನಿಮಗೆ ರಾಜಯೋಗವನ್ನು ಕಲಿಸಿದ್ದೆನು, ಆದ್ದರಿಂದ ಮನ್ಮನಾಭವ, ಪವಿತ್ರರಾದರೆ ಈ ಲಕ್ಷ್ಮೀ-ನಾರಾಯಣರಂತೆ ಆಗಿ ಬಿಡುತ್ತೀರಿ ಎಂದು ಹೇಳಲಾಗುತ್ತದೆ. ಇದರಲ್ಲಿ ಗಂಟೆ, ಜಾಗಟೆ ಇತ್ಯಾದಿಗಳನ್ನು ಹೊಡೆಯುವ ಅವಶ್ಯಕತೆಯಿಲ್ಲ, ಸ್ವಯಂ ತಂದೆಯೇ ಬಂದು ಜಾಗೃತಗೊಳಿಸುತ್ತಾರೆ. ಮನ್ಮನಾಭವದ ಅರ್ಥವಾಗಿದೆ – ಶಾಂತಿ. ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿರಿ, ಸಾಕು. ನಾವೀಗ ಮನೆಗೆ ಹೋಗಬೇಕಾಗಿದೆ. ನಮ್ಮನ್ನು ದುಃಖದಿಂದ ಬಿಡಿಸಿ ಮುಕ್ತ ಮಾಡಿ ಎಂದು ಎಲ್ಲರೂ ತಂದೆಗೆ ಹೇಳುತ್ತಾರೆ. ಸನ್ಯಾಸಿಗಳು ಕೇವಲ ಬ್ರಹ್ಮನನ್ನು ನೆನಪು ಮಾಡುತ್ತಾರೆ, ಆದರೆ ಬ್ರಹ್ಮತತ್ವವಂತೂ ಮನೆಯಾಗಿದೆ. ಅವರು ಮನೆಯನ್ನು ನೆನಪು ಮಾಡುತ್ತಾರೆ, ಇಲ್ಲಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಕೇವಲ ಮನೆಯನ್ನು ನೆನಪು ಮಾಡುತ್ತೀರೆಂದರೆ ಹೇಗೆ ಸನ್ಯಾಸಿಗಳಾಗಿ ಬಿಡುತ್ತೀರಿ. ಬ್ರಹ್ಮತತ್ವವು ಭಗವಂತನಲ್ಲ.

ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ ಆಗ ನೀವು ನಿರ್ವಾಣಧಾಮದಲ್ಲಿ ಹೋಗುವಿರಿ ನಂತರ ಅಲ್ಲಿಂದ ಸ್ವರ್ಗದಲ್ಲಿ ಬರುತ್ತೀರಿ. ಇಲ್ಲಿಂದ ನಾನು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ನಿಮಗೆ ತಿಳಿದಿದೆ – ಹಕ್ಕಿಗಳ ಸಮೂಹವು ಎಷ್ಟು ದೊಡ್ಡದಾಗಿರುತ್ತದೆ, ಅವುಗಳಲ್ಲಿ ಪರಸ್ಪರ ಒಗ್ಗಟ್ಟು ಇರುತ್ತದೆ. ಮೊದಲು ಮುಂದಿನ ಹಕ್ಕಿಯು ಕುಳಿತು ಬಿಟ್ಟರೆ ಮತ್ತೆಲ್ಲವೂ ಕುಳಿತು ಬಿಡುತ್ತದೆ, ಜೇನು ನೊಣಗಳಲ್ಲಿಯೂ ಇದೇ ರೀತಿ ಆಗುತ್ತದೆ. ಅವುಗಳಲ್ಲಿ ರಾಣಿಯು ಮನೆಯನ್ನು ಬಿಟ್ಟಿತೆಂದರೆ ಎಲ್ಲವೂ ಅದರ ಹಿಂದೆ ಓಡುತ್ತದೆ. ಆ ರಾಣಿ ನೊಣವು ಹೇಗೆ ಆ ಎಲ್ಲಾ ನೊಣಗಳಿಗೂ ಪ್ರಿಯತಮನಿದ್ದಂತೆ. ಅವುಗಳಲ್ಲಿ ಮತ್ತೆ ಪ್ರಿಯತಮೆಯೂ ಸಹ ತನ್ನ ಜೊತೆಗಾರರ ಮೇಲೆ ರಾಜ್ಯ ಮಾಡುತ್ತದೆ. ಶಾಸ್ತ್ರಗಳಲ್ಲಿಯೂ ಇದೆ, ಆತ್ಮರೆಲ್ಲರೂ ಸೊಳ್ಳೆಗಳ ರೀತಿ ಹಾರಿ ಹೋಗುವರು ಎಂದು. ಅನೇಕ ಆತ್ಮರಿದ್ದಾರೆ, ಆ ನೊಣಗಳು ಪ್ರತೀ ಸೀಜನ್ನಿನಲ್ಲಿ ತಮ್ಮ ರಾಣಿಯ ಹಿಂದೆ ಓಡುತ್ತವೆ, ನೀವಂತೂ ಒಂದೇ ಬಾರಿ ಓಡಬೇಕಾಗಿದೆ. ಈಗ ಎಲ್ಲಾ ಆತ್ಮರು ಮೂಲವತನಕ್ಕೆ ಹೋಗಬೇಕಾಗಿದೆ. ನಿಮ್ಮದು ಶಬ್ಧವೇನೂ ಇಲ್ಲ ಆದ್ದರಿಂದ ತಂದೆಯು ಉದಾಹರಣೆ ಕೊಡುತ್ತಾರೆ. ಸಾಸಿವೆ ಕಾಳಿನ ತರಹ ಎಲ್ಲರ ಶರೀರಗಳು ಸಮಾಪ್ತಿಯಾಗುತ್ತವೆ. ತಂದೆಯು ಬಿಂದು, ಸಾಸಿವೆ ಕಾಳಿನ ಮಾದರಿಯಲ್ಲಿದ್ದಾರೆ. ಗಸಗಸೆಯ ಕಾಳೂ ಸಹ ಬಹಳ ಚಿಕ್ಕದಾಗಿರುತ್ತದೆ. ಪರಮಾತ್ಮನೂ ಬಿಂದುವಾಗಿದ್ದಾರೆ, ಅವರನ್ನು ದಿವ್ಯ ದೃಷ್ಟಿಯ ವಿನಃ ನೋಡಲು ಸಾಧ್ಯವಿಲ್ಲ. ಬಹಳ ಸೂಕ್ಷ್ಮ ನಕ್ಷತ್ರ ಮಾದರಿಯಾಗಿದ್ದಾರೆ. ಗೀತೆಯಲ್ಲಿ ತೋರಿಸಿದ್ದಾರೆ – ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾಯಿತು ಎಂದು. ಆದ್ದರಿಂದ ಇಲ್ಲಿಯೂ ಸಹ ಅಖಂಡ ಜ್ಯೋತಿಯ ಸಾಕ್ಷಾತ್ಕಾರವಾದಾಗಲೇ ಓಹೋ ಸಾಕ್ಷಾತ್ಕಾರವಾಯಿತೆಂದು ತಿಳಿದುಕೊಳ್ಳುತ್ತಾರೆ. ಒಂದುವೇಳೆ ಬಿಂದುವಿನ ಸಾಕ್ಷಾತ್ಕಾರವಾದರೆ ಇವರು ಪರಮಾತ್ಮನಲ್ಲ ಎಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಅರ್ಜುನನಿಗೆ ಬಹಳ ತೇಜೋಮಯ ರೂಪದಲ್ಲಿ ಸಾಕ್ಷಾತ್ಕಾರವಾಯಿತು ಎಂದು ಗೀತೆಯಲ್ಲಿ ಬರೆದಿದ್ದಾರೆ. ಆ ಭಕ್ತಿಯ ಮಾತುಗಳೇ ಬುದ್ಧಿಯಲ್ಲಿ ಕುಳಿತುಕೊಂಡಿವೆ. ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗದಲ್ಲಿ ರಾತ್ರಿ-ಹಗಲಿನ ಅಂತರವಿದೆ. ನೀವು ತಿಳಿದುಕೊಂಡಿದ್ದೀರಿ – ನಾವು 63 ಜನ್ಮಗಳು ಶರೀರದ ಮೂಲಕ ಎಷ್ಟೊಂದು ನರ್ತನ ಮಾಡುತ್ತೇವೆ. 63 ಜನ್ಮಗಳಲ್ಲಿ ಭಕ್ತಿಮಾರ್ಗದ ಕಥೆಯನ್ನು ನೋಡುತ್ತೇವೆ, ಅದರಲ್ಲಿಯೂ ಮೊದಲು ಸತೋಪ್ರಧಾನ ಭಕ್ತಿಯಿದ್ದಾಗ ಒಬ್ಬ ಶಿವ ತಂದೆಯ ಭಕ್ತಿ ಮಾಡುತ್ತಿದ್ದರು. ಈ ಗಂಗಾ ಸ್ನಾನ ಇತ್ಯಾದಿಗಳೆಲ್ಲವೂ ನಂತರದಲ್ಲಿ ಆರಂಭವಾಗುತ್ತದೆ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವೃದ್ಧಿಯಾಗುತ್ತದೆ. ಇಲ್ಲಂತೂ ಸಂಪೂರ್ಣ ಶಾಂತಿಯ ವಾತಾವರಣವೇ ನೆಲೆಸಿದೆ. ಕವಡೆಯಿಲ್ಲದಿದ್ದರೂ ನೀವು ವಿಶ್ವದ ಮಾಲೀಕರಾಗುತ್ತೀರಿ. ಮಮ್ಮಾರವರು ಕವಡೆಯೂ ಇಲ್ಲದೆ ಬಂದರು ಮತ್ತು ವಿಶ್ವ ಮಹಾರಾಣಿ ಆಗಿ ಬಿಟ್ಟರು ಇವರು ಸಾಧಾರಣವಾಗಿದ್ದರು, ಬಹಳ ಬಡವರ ಮನೆಯವರು ಕವಡೆಯೂ ಖರ್ಚಿಲ್ಲದೆ ನೋಡಿ, ಹೇಗಾಗುತ್ತಾರೆ! ಮಮ್ಮಾರವರು ಬಹಳ ಸರ್ವೀಸ್ ಮಾಡುತ್ತಿದ್ದರು, ಹೋಗಿ ಅನ್ಯರಿಗೂ ತಿಳಿಸುತ್ತಿದ್ದರು – ತಂದೆಯು ಹೇಳುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸತೋಪ್ರಧಾನರಾಗಿಬಿಡುತ್ತೀರಿ. ಇದರಲ್ಲಿ ಯಾವುದೇ ಖರ್ಚಿನ ಮಾತಿಲ್ಲ. ಒಂದುವೇಳೆ ಯಾರಾದರೂ ಖರ್ಚು ಮಾಡಿದರೂ ಸಹ ತನಗಾಗಿ ಮಾಡುತ್ತಾರೆ. ಹೇಗೆ ಭೂಮಿಯಲ್ಲಿ ಎರಡು ಹಿಡಿ ಕಾಳನ್ನು ಬಿತ್ತಿದರೆ ಅದರಿಂದ ಎಷ್ಟೊಂದು ಫಲ ಬರುತ್ತದೆ! ಎಷ್ಟು ದೊಡ್ಡ ತೋಟವಾಗುತ್ತದೆ. ಇಲ್ಲಿಯೂ ಸಹ 21 ಜನ್ಮಗಳಿಗಾಗಿ ನಿಮ್ಮದು ಎಷ್ಟೊಂದು ಸಂಪಾದನೆಯಾಗುತ್ತದೆ. ಮನುಷ್ಯರಿಂದ ದೇವತೆಗಳಾಗುವುದು ಎಷ್ಟು ಸಹಜವಾಗಿದೆ! ಒಂದು ಸೆಕೆಂಡಿನ ಮಾತಾಗಿದೆ ಆದರೆ ಎಷ್ಟು ಸಾಧಾರಣವಾಗಿ ಕುಳಿತಿದ್ದೀರಿ. ಒಂದುವೇಳೆ ಯಾರಾದರೂ ಕುಳಿತುಕೊಳ್ಳಲು ಆಗದಿದ್ದರೆ ಅಂತಹವರಿಗೆ ತಂದೆಯು ತಿಳಿಸುತ್ತಾರೆ- ಭಲೆ ಮಲಗಿಕೊಂಡೇ ಮುರುಳಿಯನ್ನು ಕೇಳಿರಿ, ಇದು ಧಾರಣೆಯ ಮಾತಾಗಿದೆ. ಆಂತರ್ಯದಲ್ಲಿ ತಂದೆ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಿ. ನೆನಪು ಮಾಡುತ್ತಾ-ಮಾಡುತ್ತಲೇ ಶರೀರವನ್ನು ಬಿಡಬೇಕಾಗಿದೆ. ಬಾಕಿ ಬಾಯಲ್ಲಿ ಗಂಗಾಜಲವನ್ನು ಹಾಕುವ ಮಾತಿಲ್ಲ. ಗುರು ಗೋಸಾಯಿಗಳು ಬಹಳ ಹೆದರಿಸುತ್ತಾರೆ – ನೀವು ಈ ನಿಯಮಗಳನ್ನು ಬಿಡುತ್ತೀರಿ, ಭಕ್ತಿ ಮಾಡುವುದಿಲ್ಲವೆಂದರೆ ಈ ರೀತಿಯಾಗುವುದು ಎಂದು. ಉದಾಹರಣೆಗೆ ಯಾರಿಗಾದರೂ ಕಾಲು ಕತ್ತರಿಸಿ ಹೋಗುತ್ತದೆ ಅಥವಾ ನಷ್ಟವಾಯಿತೆಂದರೆ ನೀವು ಭಕ್ತಿಯನ್ನು ಬಿಟ್ಟಿರಿ ಆದ್ದರಿಂದಲೇ ಇಂತಹ ಗತಿಯಾಯಿತು ಎಂದು ಹೇಳಿದ ಕೂಡಲೇ ಹೆದರುತ್ತಾರೆ. ಇಲ್ಲಂತೂ ಏನನ್ನೂ ಮಾಡಬೇಕಾಗಿಲ್ಲ, ತಂದೆಯ ನೆನಪು ತರಿಸಬೇಕಾಗಿದೆ, ಚಕ್ರದ ರಹಸ್ಯವನ್ನು ತಿಳಿಸಬೇಕಾಗಿದೆ. ಈಗ ಕಲಿಯುಗದ ನಂತರ ಸತ್ಯಯುಗವು ಬರಲಿದೆ, ಅವಶ್ಯವಾಗಿ ವಿನಾಶವಾಗಲಿದೆ ಆದ್ದರಿಂದಲೇ ಈ ಮಹಾಭಾರಿ ಯುದ್ಧವು ನಿಂತಿದೆ. ಭಗವಂತನು ಬಂದು ರಾಜಯೋಗವನ್ನು ಕಲಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಇದು ರಾಜಯೋಗವಾಗಿದೆ, ಪ್ರಜಾಯೋಗವಲ್ಲ. ಶುಭವನ್ನೇ ನುಡಿಯಬೇಕು, ಮಕ್ಕಳು ಬಹಳ ಮಧುರರಾಗಬೇಕಾಗಿದೆ. ತಂದೆಯು ಮಧುರವಾಗಿದ್ದಾರಲ್ಲವೆ! ಕ್ರೋಧ ಇತ್ಯಾದಿಗಳೆಲ್ಲವನ್ನೂ ದಾನದಲ್ಲಿ ತೆಗೆದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಪ್ರೀತಿಯ ಸಾಗರನಾಗಿದ್ದೇನೆ. ನೀವೂ ಸಹ ಆಗಿರಿ, ಬಹಳ ಪ್ರೀತಿಯಿಂದ ತಿಳಿಸುತ್ತಾರೆ. ಇಲ್ಲದಿದ್ದರೆ ಮಕ್ಕಳು ಬಹಳ ಏರುಪೇರು ಮಾಡುತ್ತಾರೆ ಏಕೆಂದರೆ ಮಾಯೆಯು ತಲೆ ಕೆಡಿಸಿ ಬಿಡುತ್ತದೆ. ಆದ್ದರಿಂದ ವಿಚಾರವು ಬರುತ್ತದೆ – ಎಂದೂ ಯಾರಿಗೂ ಏನನ್ನೂ ಹೇಳಬಾರದು, ಪ್ರೀತಿಯಿಂದ ತಿಳಿಸಬೇಕು. ರೋಷದಿಂದ ನೋಡುವುದು, ಬಿಸಿಯಾಗುವುದು, ಜೋರಾಗಿ ಮಾತನಾಡುವುದು – ಇದರ ಅವಶ್ಯಕತೆಯಿಲ್ಲ. ಇದರಿಂದ ಕೆಲಸವು ಕೆಡುತ್ತದೆ. ಶಾಂತವಾಗಿರುವುದು ಒಳ್ಳೆಯದಾಗಿದೆ. ವಿಕಾರಗಳ ದಾನವನ್ನು ಕೊಟ್ಟು ಮತ್ತೆ ಪಡೆಯುತ್ತೀರೆಂದರೆ ತಮ್ಮ ಪದವಿಯನ್ನು ಕಳೆದುಕೊಳ್ಳುತ್ತೀರಿ. ತಂದೆಯ ಮಕ್ಕಳಾದಿರಿ ಎಂದರೆ ಪಂಚ ವಿಕಾರಗಳ ದಾನ ಮಾಡಿದಿರಿ. ದಾನ ಕೊಟ್ಟರೆ ಗ್ರಹಣ ಬಿಡುವುದು ಎಂದು ಹೇಳುತ್ತಾರೆ. ತಂದೆಯು ಮಾರ್ಗದರ್ಶಕನಲ್ಲವೆ. ಬ್ರಾಹ್ಮಣರು ಮಾರ್ಗದರ್ಶಕರಾಗಿರುತ್ತಾರೆ, ಶಿವ ತಂದೆಯೂ ಸಹ ಆತ್ಮಿಕ ಮಾರ್ಗದರ್ಶಕನಾಗಿದ್ದಾರೆ. ನೀವೂ ಸಹ ಆಗಿದ್ದೀರಿ. ತಂದೆಯು ಬ್ರಹ್ಮನ ತನುವಿನಲ್ಲಿ ಬರುತ್ತಾರೆ ಅಂದಮೇಲೆ ಇವರೂ ಬ್ರಾಹ್ಮಣರಾದರು. ತಂದೆಯು ಇವರಲ್ಲಿ ಕುಳಿತಿದ್ದಾರೆ, ಅವರ ಮಹಿಮೆಯನ್ನು ಹಾಡುತ್ತಾರೆ – ನೀವು ಮಾತಾಪಿತಾ….. ಮತ್ತ್ಯಾರಿಗೂ ಈ ಮಹಿಮೆಯಿಲ್ಲ. ಅವರ ಕರ್ತವ್ಯವೂ ಅದೇರೀತಿ ಇದೆ. ಇದು ಪಾಠಶಾಲೆಯಾಗಿದೆ, ತಂದೆಯು ಓದಿಸುತ್ತಾರೆ – ಇದು ಮಕ್ಕಳಿಗೆ ನೆನಪಿರಲಿ. ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವುದೇ ಗುರಿ-ಧ್ಯೇಯವಾಗಿದೆ. ಅಂದಮೇಲೆ ಈ ರೀತಿ ಓದಿಸುವವರನ್ನು ಬಹಳ ಚೆನ್ನಾಗಿ ನೆನಪು ಮಾಡಬೇಕು. ಶಾಲೆಯಿಂದ ವಿದ್ಯಾರ್ಥಿಯು ಒಳ್ಳೆಯ ಅಂಕಗಳಲ್ಲಿ ತೇರ್ಗಡೆಯಾದರು, ಪ್ರತೀ ವರ್ಷವು ಶಿಕ್ಷಕರಿಗೆ ಉಡುಗೊರೆಯನ್ನು ಕಳುಹಿಸುತ್ತಾರೆ, ಈ ಹಬ್ಬ ಇತ್ಯಾದಿಗಳೆಲ್ಲವೂ ಈ ಸಮಯದ್ದಾಗಿದೆ ಆದರೆ ಇದರ ಮಹತ್ವವನ್ನು ಯಾರೂ ತಿಳಿದುಕೊಂಡಿಲ್ಲ.

ತಂದೆಯು ಜ್ಞಾನಪೂರ್ಣನಾಗಿದ್ದಾರೆ, ಅವರು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುವುದಕ್ಕಾಗಿಯೇ ಬರುತ್ತಾರೆ. ಕಲ್ಲು-ಮುಳ್ಳಿನಲ್ಲಿ ಹೇಗೆ ಬರುತ್ತಾರೆ. ಒಬ್ಬ ವೈದ್ಯರು ಪ್ರತಿಯೊಂದು ವಸ್ತುವಿನಲ್ಲಿ ಆತ್ಮವಿದೆ ಎಂದು ಸಿದ್ಧ ಮಾಡಿದ್ದರು, ಪರಮಾತ್ಮನಿದ್ದಾರೆಂದು ಹೇಳಲಿಲ್ಲ ಆದರೆ ಇಲ್ಲಂತೂ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಆ ವೈದ್ಯರು ಕೇವಲ ಎಲ್ಲರಲ್ಲಿ ಆತ್ಮನಿದೆ ಎಂದು ಹೇಳಿದರು ಆದರೆ ಸನ್ಯಾಸಿಗಳು ಎಲ್ಲರಲ್ಲಿ ಪರಮಾತ್ಮನೇ ಇದ್ದಾರೆಂದು ಹೇಳಿಬಿಟ್ಟರು. ಎಷ್ಟು ರಾತ್ರಿ-ಹಗಲಿನ ಅಂತರವಿದೆ! ಅವರು ಬೇಹದ್ದಿನ ತಂದೆಯಾಗಿದ್ದಾರೆ, ಎಲ್ಲರಿಂದ ಬುದ್ಧಿಯೋಗವನ್ನು ತೆಗೆಸಿ ತಮ್ಮ ಜೊತೆ ಜೋಡಣೆ ಮಾಡಿಸುತ್ತಾರೆ. ಆತ್ಮವು ಸಾಗರದಿಂದ ಹೊರಬಂದ ನೀರಿನ ಗುಳ್ಳೆಯಾಗಿದೆ ಅದು ಮತ್ತೆ ಸಾಗರದಲ್ಲಿಯೇ ಲೀನವಾಗುವುದು ಎಂದು ಅವರು ತಿಳಿದುಕೊಳ್ಳುತ್ತಾರೆ. ಚಿಕ್ಕ ಜ್ಯೋತಿಯು ದೊಡ್ಡ ಜ್ಯೋತಿಯಲ್ಲಿ ಲೀನವಾಗಿ ಬಿಡುವುದು ನಂತರ ಹೊಸ-ಹೊಸದಾಗಿ ಉತ್ಪತ್ತಿಯಾಗುವುದು ಎಂದು ಬ್ರಹ್ಮ ಜ್ಞಾನಿಗಳು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ – ಈ ಭಕ್ತಿಯದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ನಾನೂ ಸಹ ಡ್ರಾಮಾನುಸಾರ ನೀವು ಮಕ್ಕಳಿಗೇ ಬಂದು ತಿಳಿಸುತ್ತೇನೆ. 84 ಜನ್ಮಗಳ ಚಕ್ರವನ್ನು ಸುತ್ತುವುದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಏನೆಲ್ಲವೂ ನಡೆಯುತ್ತದೆಯೋ ಎಲ್ಲವೂ ನಿಗಧಿತವಾಗಿದೆ. ಕೆಲವರು ಗಾಯನವನ್ನೂ ಮಾಡುತ್ತಾರೆ, ಕೆಲವರು ವಿಘ್ನವನ್ನೂ ಹಾಕುತ್ತಾರೆ.

ನೀವು ಮಕ್ಕಳು ಶಿವ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಅವರು ಬರುವುದೇ ಎಲ್ಲಾ ಆತ್ಮರನ್ನೂ ಕರೆದುಕೊಂಡು ಹೋಗಲು, ಶರೀರದ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಶರೀರ ಸಹಿತವಾಗಿ ಯಾರನ್ನಾದರೂ ಕರೆದುಕೊಂಡು ಹೋಗಲು ಬಂದಿದ್ದೇನೆಯೇ? ನನ್ನನ್ನೇ ಕರೆಯುತ್ತಾರೆ – ಹೇ ಮುಕ್ತಿದಾತ ಬನ್ನಿ, ನಮ್ಮನ್ನು ದುಃಖದಿಂದ ಬಿಡಿಸಿ. ಎಲ್ಲಿಯಾದರೂ ಇಂತಹ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಲ್ಲಿ ಸುಖ-ಶಾಂತಿ-ನೆಮ್ಮದಿಯನ್ನು ಪಡೆಯುವೆವು. ಅಂದಮೇಲೆ ಎಲ್ಲರ ಶರೀರಗಳನ್ನು ಇಲ್ಲಿಯೇ ಬಿಡಿಸಿ ಆತ್ಮರನ್ನು ಕರೆದುಕೊಂಡು ಹೋಗುತ್ತೇನೆ ಅಂದಮೇಲೆ ಕಾಲರ ಕಾಲ ಮಹಾಕಾಲ ಆದರಲ್ಲವೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆ. ಎಷ್ಟು ಅದ್ಭುತ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಯಾವುದೇ ಮಾತು ಅರ್ಥವಾಗದಿದ್ದರೆ ತಿಳಿಸಿರಿ – ಈ ಮಾತನ್ನು ತಂದೆಯು ನಮಗೆ ಇನ್ನೂ ತಿಳಿಸಿಲ್ಲ. ಯಾವಾಗ ತಿಳಿಸುವರೋ ಆಗ ನಿಮಗೆ ತಿಳಿಸುತ್ತೇನೆ, ಹೀಗೆ ತಮ್ಮನ್ನು ಬಿಡಿಸಿಕೊಳ್ಳಬೇಕು. ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯು ಜ್ಞಾನ ಸಾಗರನಾಗಿದ್ದಾರೆ, ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸುವವರು ರಚಯಿತ ತಂದೆಯಾಗಿದ್ದಾರೆ. ಅವರೇ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ನೀವು ಲೈಟ್ಹೌಸ್ ಆಗಿದ್ದೀರಿ, ಸ್ವದರ್ಶನ ಚಕ್ರಧಾರಿಗಳೂ ಆಗಿದ್ದೀರಿ ಆದರೆ ಮಾಯೆಯು ಮರೆಸಿ ಬಿಡುತ್ತದೆ ಆಗ ಗುಟುಕರಿಸುತ್ತಾರೆ. ಯಾವುದಾದರೊಂದು ಅಲೆಯು ಬಂದು ಬಿಡುತ್ತದೆ. ಕರ್ಮಗಳ ಲೆಕ್ಕಾಚಾರವಿದೆಯಲ್ಲವೆ. ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿ ಆಗುವುದಿಲ್ಲವೋ ಅಲ್ಲಿಯವರೆಗೆ ಒಂದಲ್ಲ ಒಂದು ಆಗುತ್ತಲೇ ಇರುತ್ತದೆ. ಲೆಕ್ಕಾಚಾರವು ಸಮಾಪ್ತಿಯಾಯಿತೆಂದರೆ ಶರೀರವನ್ನು ಬಿಟ್ಟು ಬಿಡುತ್ತೀರಿ ಮತ್ತು ಯುದ್ಧವೂ ಆರಂಭವಾಗುವುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ವಿಕಾರಗಳ ದಾನವನ್ನು ಕೊಟ್ಟು ಹಿಂತೆಗೆದುಕೊಳ್ಳಬಾರದು. ಬಾಯಿಂದ ಶುಭವನ್ನು ನುಡಿಯಬೇಕು. ಬಹಳ ಮಧುರರಾಗಬೇಕಾಗಿದೆ. ತಂದೆಯ ಸಮಾನ ಪ್ರೀತಿಯ ಸಾಗರರಾಗಿ ಇರಬೇಕಾಗಿದೆ.

2. ಶಾಂತಿಯಲ್ಲಿದ್ದು ಕವಡೆಯೂ ಖರ್ಚಿಲ್ಲದೆ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಬೇಕಾಗಿದೆ. ಎರಡು ಹಿಡಿ ಬೀಜವನ್ನು ಬಿತ್ತಿ 21 ಜನ್ಮಗಳ ಸಂಪಾದನೆ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಸೂಕ್ಷ್ಮ ದೇವತಾ ಜೀವನದಲ್ಲಿ ಪ್ರಕಾಶತೆ ಹಾಗೂ ಶಕ್ತಿಯೆರಡೂ ಕಾಣಿಸುತ್ತದೆ. ಆದರೆ ಪ್ರಕಾಶತೆ ಹಾಗೂ ಶಕ್ತಿ ರೂಪವಾಗುವುದಕ್ಕಾಗಿ ಮನನ ಮಾಡುವ ಹಾಗೂ ಸಹನೆ ಮಾಡುವ ಶಕ್ತಿಯಿರಬೇಕು. ಮನಸ್ಸಿಗಾಗಿ ಮನನ ಶಕ್ತಿ ಹಾಗೂ ವಾಚಾ, ಕರ್ಮಕ್ಕಾಗಿ ಸಹನ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಿರಿ. ನಂತರದಲ್ಲಿ ಯಾವುದೇ ಶಬ್ಧವನ್ನು ಮಾತನಾಡುವಿರಿ, ಕರ್ಮ ಮಾಡುವಿರೆಂದರೆ ಅದರನುಸಾರವಾಗಿಯೇ ಇರುತ್ತದೆ. ಒಂದುವೇಳೆ ಇವೆರಡೂ ಶಕ್ತಿಗಳಿವೆಯೆಂದರೆ ಪ್ರತಿಯೊಬ್ಬರಿಗಾಗಿ ಪುರುಷಾರ್ಥದ ಮಾರ್ಗವು ಸಹಜ ಹಾಗೂ ಸ್ಪಷ್ಟವಾಗಿ ಬಿಡುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top