13 November 2021 KANNADA Murli Today | Brahma Kumaris

Read and Listen today’s Gyan Murli in Kannada

November 12, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಾನು ನೀವು ಮಕ್ಕಳಿಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆ, ನೀವು ನನ್ನನ್ನು ನೆನಪು ಮಾಡಿತ್ತೀರೆಂದರೆ ಸ್ವರ್ಗದ ರಾಜ್ಯಭಾಗ್ಯವು ಪ್ರಾಪ್ತಿಯಾಗುವುದು”

ಪ್ರಶ್ನೆ:: -

ಎಂತಹ ಮಕ್ಕಳಿಗೆ ನಿರಂತರ ಬೇಹದ್ದಿನ ಖುಷಿಯಿರುತ್ತದೆ?

ಉತ್ತರ:-

1. ಯಾರು ಬೇಹದ್ದಿನ ಸನ್ಯಾಸ ಮಾಡಿದ್ದಾರೆ, ಅನ್ಯ ಎಲ್ಲಾ ಸಮಯವನ್ನು ಬಿಟ್ಟು ಒಬ್ಬ ತಂದೆಯ ಸಂಗ ಮಾಡಿದ್ದಾರೆಯೋ ಅವರೇ ನಿರಂತರ ಖುಷಿಯಲ್ಲಿ ಇರುತ್ತಾರೆ. 2. ಯಾರು ಫಾಲೋ ಫಾದರ್ ಮಾಡುತ್ತಾರೆಯೋ, ಯಾರಿಗೆ ಸರ್ವೀಸಿನ ಉಮ್ಮಂಗವಿದೆಯೋ ಅವರ ಖುಷಿಯು ಎಂದೂ ಮಾಯವಾಗುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಆಕಾಶ ಸಿಂಹಾಸನವನ್ನು ಬಿಟ್ಟು ಬಾ….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಇದನ್ನು ಯಾರು ಹೇಳಿದರು? ತಂದೆಯು ಮಕ್ಕಳಿಗೆ ಹೇಳಿದರು – ಮಕ್ಕಳೇ, ಗೀತೆಯನ್ನು ಕೇಳಿದಿರಾ? ಯಾವಾಗ ಅತೀ ದುಃಖವಾಗುತ್ತದೆಯೋ ಆಗ ಕರೆಯುತ್ತಾರೆ. ಮಕ್ಕಳಿಗೆ ತಿಳಿದಿದೆ – ತಂದೆಯೇ ಸುಖಧಾಮ ಅಥವಾ ಪಾವನ ಪ್ರಪಂಚವನ್ನು ರಚಿಸುತ್ತಾರೆ. ಭಗವಾನ್-ಭಗವತಿಯ ರಾಜ್ಯವನ್ನು ಸ್ಥಾಪನೆ ಮಾಡಿಸುತ್ತಾರೆ. ಭಗವಾನ್-ಭಗವತಿಯು ಸ್ವರ್ಗದ ಮಾಲೀಕರಾದರು. ನೀವು ನೋಡುತ್ತೀರಿ – ಲಕ್ಷ್ಮೀ-ನಾರಾಯಣರು ಎಷ್ಟು ಧನವಂತರಾಗಿದ್ದರು, ಎಷ್ಟು ದೊಡ್ಡ ರಾಜಧಾನಿಯಿತ್ತು! ಅವರ ರಾಜಧಾನಿಯಲ್ಲಿ ಎಂದೂ ಯಾವುದೇ ಉಪದ್ರವಗಳಾಗುವುದಿಲ್ಲ. ತಂದೆಯು ಮಕ್ಕಳಿಗೆ ಇಂತಹ ಆಸ್ತಿಯನ್ನು ಕೊಡುತ್ತಾರೆ ಅಂದಮೇಲೆ ಎಷ್ಟೊಂದು ಖುಷಿಯಲ್ಲಿರಬೇಕು ಆದರೆ ನಂಬರ್ವಾರ್ ಪುರುಷಾರ್ಥದ ಅನುಸಾರವಂತೂ ಇದ್ದೇ ಇರುತ್ತಾರೆ. ಕೆಲಕೆಲವರು ಜ್ಞಾನವನ್ನು ಪೂರ್ಣ ತೆಗೆದುಕೊಳ್ಳದೆ ಇರುವ ಕಾರಣ ಅಲ್ಲಿನ (ಕಲಿಯುಗ) ಖುಷಿಯಲ್ಲಿಯೂ ಇರುವುದಿಲ್ಲ ಮತ್ತು ಇಲ್ಲಿನ (ಸಂಗಮಯುಗದ) ಖುಷಿಯಲ್ಲಿಯೂ ಇರುವುದಿಲ್ಲ. ಅವರನ್ನು ಎರಡೂ ಲೋಕಗಳಿಂದ ಹೋದರು ಎಂದು ಹೇಳುತ್ತಾರೆ ಏಕೆಂದರೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೆ ಬೀಳುತ್ತಾರೆ. ಭಗವಂತನು ಬಂದು ಸ್ವರ್ಗ ಸ್ಥಾಪನೆ ಮಾಡುತ್ತಿದ್ದಾರೆ ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಏಕೆಂದರೆ ಅವರು ಗುಪ್ತ ರೂಪದಲ್ಲಿ ಬರುತ್ತಾರೆ. ಅವಶ್ಯವಾಗಿ ಭಗವಂತನು ಈ ಸಮಯದಲ್ಲಿ ಇರಬೇಕು ಎಂದು ಹೇಳುತ್ತಾರೆ. ಏಕೆಂದರೆ ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ರಾತ್ರಿ 12 ಗಂಟೆಯಾದರೆ ಅದಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ರಾತ್ರಿಯಲ್ಲಿ ಘೋರ ಅಂಧಕಾರ, ದಿನದಲ್ಲಿ ಘೋರ ಪ್ರಕಾಶವಿರುತ್ತದೆ. ಮಕ್ಕಳಿಗೆ ತಿಳಿದಿದೆ – ಈಗ ಭಕ್ತಿಮಾರ್ಗದ ರಾತ್ರಿಯು ಮುಕ್ತಾಯವಾಗುತ್ತದೆ, ಇದರಲ್ಲಿ ದುಃಖವೇ ದುಃಖವಿದೆ, ಭಕ್ತಿಯ ನಂತರ ಭಗವಂತ ಸಿಗುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ತಂದೆಯೇ ಬಂದು ನಮ್ಮೆಲ್ಲರ ಸದ್ಗತಿ ಮಾಡುತ್ತಾರೆ, ನೀವು ಮಕ್ಕಳಲ್ಲಿಯೂ ನಂಬರ್ವಾರ್ ಇದ್ದಾರೆ, ಕೆಲವರಿಗೆ ಖುಷಿಯ ನಶೆಯೇರಿರುತ್ತದೆ. ಖುಷಿಯಿಂದ ಪರಿಶ್ರಮ ಪಡುತ್ತಾರೆ. ಯಾರಿಗಾದರೂ ಹೋಗಿ ತಿಳಿಸಬೇಕು ಎಂದು ಸರ್ವೀಸಿನ ಉಮ್ಮಂಗವಿರುತ್ತದೆ. ಆದ್ದರಿಂದ ತಂದೆಯು ಪ್ರದರ್ಶನಿ, ಮೇಳಗಳ ಪ್ರಬಂಧ ರಚಿಸುತ್ತಾ ಇರುತ್ತಾರೆ, ಅನ್ಯರಿಗೆ ತಿಳಿಸುವುದರಿಂದ ಖುಷಿಯ ನಶೆಯೇರಲಿ ಎಂದು. ಯಾರ ಬಳಿ ಹಣವಿದೆಯೋ ಅವರು ನಾವು ಸ್ವರ್ಗದಲ್ಲಿ ಕುಳಿತಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ಅವರು ಜ್ಞಾನವನ್ನು ತೆಗೆದುಕೊಳ್ಳುವುದೇ ಕಷ್ಟವಾಗುತ್ತದೆ, ಆದ್ದರಿಂದಲೇ ಗಾಯನವಿದೆ – ಕೋಟಿಯಲ್ಲಿ ಕೆಲವರೇ ಬುದ್ಧಿವಂತರಾಗಿ ತಂದೆಯ ಆಸ್ತಿಗೆ ಅಧಿಕಾರಿಗಳಾಗುತ್ತಾರೆ. ಫಾಲೋ ಫಾದರ್ ಎಂದು ಗಾಯನವಿದೆ, ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಯಾರು ಚೆನ್ನಾಗಿ ಶ್ರೀಮತದಂತೆ ನಡೆಯುವರೋ ಅವರನ್ನು ಫಾಲೋ ಮಾಡಬೇಕು. ಹೇಗೆ ಈ ಬ್ರಹ್ಮಾರವರು ಚೆನ್ನಾಗಿ ನಡೆಯುತ್ತಿದ್ದಾರೆ. ಲೌಕಿಕ ಮಕ್ಕಳು ತನ್ನ ಸಲಹೆಯಂತೆ ನಡೆಯಲಿಲ್ಲ ಆದ್ದರಿಂದ ನೀವು ತಮ್ಮ ಮಾರ್ಗವನ್ನು ನೋಡಿಕೊಳ್ಳಿ ಎಂದು ಹೇಳಿ ಬಿಟ್ಟರು. ರಾವಣನ ಮತದಂತೆ ನಡೆಯುವವರು ಮತ್ತು ರಾಮನ ಮತದಂತೆ ನಡೆಯುವವರು ಒಟ್ಟಿಗೆ ಇರಲು ಸಾಧ್ಯವಿಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಭಾರತದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಅವರು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಇನ್ನು ಕೆಲವೇ ದಿನಗಳಿದೆ, ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಇದು ಗುಪ್ತವಾಗಿದೆ. ಇದರಲ್ಲಿ ಯುದ್ಧದ ಮಾತಿಲ್ಲ. ಯುದ್ಧ ಮಾಡಿ ರಾಜ್ಯವನ್ನು ತೆಗೆದುಕೊಳ್ಳುತ್ತಾರೆ ಎಂದಲ್ಲ. ಇಲ್ಲಂತೂ ತಂದೆಯು ಬಂದು ರಾಜರಿಗೂ ರಾಜರನ್ನಾಗಿ ಮಾಡುತ್ತಾರೆ. ಯಾವ ತಂದೆಯನ್ನು ದುಃಖಹರ್ತ-ಸುಖಕರ್ತ ಬನ್ನಿ ಎಂದು ನೆನಪು ಮಾಡುತ್ತಾರೆ. ಸನ್ಯಾಸಿ ಗುರುಗಳು ದುಃಖಹರ್ತರಾಗಲು ಸಾಧ್ಯವೇ? ಅವರದ್ದು ಹದ್ದಿನ ಸನ್ಯಾಸವಾಗಿದೆ, ನಿಮ್ಮದು ಬೇಹದ್ದಿನ ಸನ್ಯಾಸವಾಗಿದೆ, ಇದರಲ್ಲಿ ಬೇಹದ್ದಿನ ಖುಷಿಯಿರುತ್ತದೆ. ಈ ಲಕ್ಷ್ಮೀ-ನಾರಾಯಣ ಭಗವಾನ್-ಭಗವತಿಗೂ ಸಹ ಬೇಹದ್ದಿನ ಖುಷಿಯಿದೆಯಲ್ಲವೆ. ಪತಿತ ಮನುಷ್ಯರಿಗೆ ಏನು ಬಂದರೆ ಅದನ್ನು ಹೇಳುತ್ತಾರೆ, ನೀವಂತೂ ಒಂದೊಂದು ಶಬ್ಧವನ್ನೂ ಅರ್ಥ ಸಹಿತವಾಗಿ ಹೇಳುತ್ತೀರಿ. ಹೊಸ ಪ್ರಪಂಚದಲ್ಲಿ ಒಂದೇ ಧರ್ಮವಿರುತ್ತದೆ, ಅದನ್ನು ಯಾವುದರೊಂದಿಗೂ ಹೋಲಿಕೆ ಮಾಡಲು ಆಗುವುದಿಲ್ಲ. ಹಳೆಯ ಪ್ರಪಂಚದಲ್ಲಿ ಹೋಲಿಕೆ ಮಾಡಲಾಗುತ್ತದೆ. ಹೊಸ ಪ್ರಪಂಚದಲ್ಲಿದ್ದಾಗ ಹಳೆಯ ಪ್ರಪಂಚದಲ್ಲಿ ಏನಿರುತ್ತದೆ ಎಂಬುದು ತಿಳಿದಿರುವುದೇ ಇಲ್ಲ. ಅಲ್ಲಿ ಎಲ್ಲವೂ ಮರೆತು ಹೋಗುತ್ತದೆ. ಇಲ್ಲಿ ನಿಮಗೆ ಹೊಸ ಪ್ರಪಂಚವು ಯಾವಾಗ ಸ್ಥಾಪನೆಯಾಗುವುದು, ಹಳೆಯ ಪ್ರಪಂಚವು ಯಾವಾಗ ವಿನಾಶವಾಗುವುದು ಎಂಬುದೆಲ್ಲವನ್ನೂ ತಿಳಿಸಲಾಗುತ್ತದೆ. ನಿಮಗೆ ಎಲ್ಲಾ ಜ್ಞಾನವಿದೆ. ಈಗ ನಿಮಗೆ ಸ್ವರ್ಗ ಸ್ಥಾಪನೆ ಮಾಡುವಂತಹ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಅವರಿಂದ ಚೆನ್ನಾಗಿ ಆಸ್ತಿಯನ್ನು ತೆಗೆದುಕೊಳ್ಳಬೇಕು. ಯಾರು ಕಲ್ಪದ ಮೊದಲು ಚೆನ್ನಾಗಿ ಪುರುಷಾರ್ಥ ಮಾಡಿದ್ದರೋ ಅವರಿಗೆ ಆಸ್ತಿಯು ಸಿಗುವುದು. ಅವರಲ್ಲಿಯೂ ನಂಬರ್ವಾರ್ ಇದ್ದಾರೆ. ಇದು ಮುಳ್ಳುಗಳ ಪ್ರಪಂಚವಾಗಿದೆ. ಮೊದಲನೇ ನಂಬರಿನ ಮುಳ್ಳಂತೂ ಎಲ್ಲರಲ್ಲಿಯೂ ಇದೆ, ಹಳೆಯ ಪ್ರಪಂಚವು ಛೀ ಛೀ ಆಗಿದೆ, ಹೊಸ ಪ್ರಪಂಚವು ಚೆನ್ನಾಗಿರುತ್ತದೆ. ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಇಂತಹವರು ಸ್ವರ್ಗವಾಸಿಯಾದರು ಎಂದು ಹೇಳಿ ಬಿಡುತ್ತಾರೆ. ಸ್ವರ್ಗವಾಸಿಯಾಗಲು ಈಗ ಸ್ವರ್ಗವಾದರೂ ಎಲ್ಲಿದೆ!

ನೀವು ತಿಳಿದುಕೊಂಡಿದ್ದೀರಿ – ಸ್ವರ್ಗವೂ ಈ ಭಾರತದಲ್ಲಿಯೇ ಇತ್ತು, ನರಕವೂ ಭಾರತದಲ್ಲಿಯೇ ಇದೆ. ಆದ್ದರಿಂದ ಈ ಅಕ್ಷರವನ್ನು ಅವರು ಹಿಡಿದುಕೊಂಡು ಸ್ವರ್ಗ-ನರಕ ಇಲ್ಲಿಯೇ ಇದೆ, ಯಾರಿಗೆ ಬಹಳ ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆಂದು ಹೇಳಿ ಬಿಡುತ್ತಾರೆ ಆದರೆ ಈ ರೀತಿ ಇಲ್ಲ. ಭಾರತವು ಹೊಸದಾಗಿದ್ದಾಗ ಸತ್ಯಯುಗವಾಗಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಪತಿತ ಪ್ರಪಂಚ ನರಕವಾಗಿದೆ. ಪ್ರಪಂಚವಂತೂ ಒಂದೇ ಆಗಿದೆ, ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಹಳೆಯ ಪ್ರಪಂಚದಲ್ಲಿ ರಾವಣ ರಾಜ್ಯವಿದೆ. ಭಗವಾನುವಾಚ – ನಾನು ನಿಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತೇನೆ, ಈ ರಾಜಯೋಗದಿಂದ ನಿಮ್ಮನ್ನು ರಾಜಾಧಿರಾಜರು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಅಂದಮೇಲೆ ನರಕದ ವಿನಾಶವು ಅವಶ್ಯವಾಗಿ ಆಗಬೇಕಾಗಿದೆ, ಶಾಸ್ತ್ರಗಳಲ್ಲಿ ಕೃಷ್ಣನ ಹೆಸರನ್ನು ಹಾಕಿ ಯುದ್ಧವನ್ನು ತೋರಿಸಿ ಬಿಟ್ಟಿದ್ದಾರೆ. ಪಾಂಡವರದು ಯಾವುದೇ ಸೇನೆಯಿಲ್ಲ, ಇತ್ತೀಚೆಗೆ ಕನ್ಯೆಯರು ಮಾತೆಯರನ್ನು ಪರಿವರ್ತನೆ ಮಾಡಿ ಅವರಿಗೆ ಬಂದೂಕು ಇತ್ಯಾದಿ ನಡೆಸುವುದನ್ನು ಕಲಿಸುತ್ತಾರೆ. ಇಲ್ಲಿ ನಿಮ್ಮ ಕೈಯಲ್ಲಿ ಬಂದೂಕು ಇತ್ಯಾದಿಗಳೇನೂ ಇಲ್ಲ. ಶಿವಶಕ್ತಿ ಸೇನೆ ಯಾವುದಾಗಿದೆ ಎಂಬುದು ಅವರಿಗೇನು ಗೊತ್ತಿದೆ? ಶಿವ ತಂದೆಯು ಎಂದೂ ಹಿಂಸೆ ಮಾಡಿಸುವುದಿಲ್ಲ, ಯುದ್ಧದ ಮಾತೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯದು ಆತ್ಮಿಕ ಸೈನ್ಯವಾಗಿದೆ. ಶಿವ ತಂದೆಯು ನಮ್ಮನ್ನು ಡಬಲ್ ಅಹಿಂಸಕರನ್ನಾಗಿ ಮಾಡುತ್ತಾರೆ, ಅವರಿಗೆ 100% ಅಹಿಂಸಕರೆಂದು ಹೇಳಲಾಗುತ್ತದೆ. ಇವರು 100% ಹಿಂಸಕರಾಗಿದ್ದಾರೆ. ಒಂದೇ ಬಾಂಬಿನಿಂದ ಎಷ್ಟೊಂದು ಜನರ ವಿನಾಶ ಮಾಡುತ್ತಾರೆ. ಬೇಹದ್ದಿನ ಅಹಿಂಸೆ ಮತ್ತು ಹಿಂಸೆಯಲ್ಲಿ ಎಷ್ಟೊಂದು ಅಂತರವಿದೆ. ನೀವೀಗ ಈ ಸಮಯದಲ್ಲಿ ಬೇಹದ್ದಿನ ಶಾಂತಿಯಲ್ಲಿದ್ದೀರಿ, ಒಂದುಕಡೆ ಎಷ್ಟೊಂದು ಯುದ್ಧದ ತಯಾರಿ ಆಗುತ್ತಾ ಹೋಗುತ್ತಿದೆಯೋ ಅಷ್ಟೇ ಗಲಾಟೆಯು ಹೆಚ್ಚುತ್ತಾ ಹೋಗುತ್ತದೆ. ವಿನಾಶದಲ್ಲಿ ಎಷ್ಟೊಂದು ಹೊಡೆದಾಟವಾಗುತ್ತದೆ. ಸ್ಥಾಪನೆಯಲ್ಲಿ ನೀವು ಎಷ್ಟೊಂದು ಶಾಂತಿಯಲ್ಲಿ ಕುಳಿತಿದ್ದೀರಿ, ಯಾವುದೇ ಹಿಂಸೆಯ ಮಾತಿಲ್ಲ. ನಿಮ್ಮದು ಈಗ ಪ್ರತ್ಯಕ್ಷ ಜೀವನವಾಗಿದೆ. ತಂದೆಯಿಂದ ಯೋಗಬಲದ ಮೂಲಕ ಆಸ್ತಿಯನ್ನು ಪಡೆಯುತ್ತೀರಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಿಂದ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆ, ಎಷ್ಟು ಸಹಜವಾಗಿದೆ! ತಂದೆಯು ಎಷ್ಟು ಪ್ರಿಯಾತಿ ಪ್ರಿಯರಾಗಿದ್ದಾರೆ. ಎಷ್ಟು ದೂರ ದೇಶದಿಂದ ಬರುತ್ತಾರೆ, ಹೇಗೆ ವಿದೇಶದಿಂದ ಯಾರ ತಂದೆಯಾದರೂ ಬರುತ್ತಾರೆಂದರೆ ಮಕ್ಕಳು ಬಹಳ ಖುಷಿಯಾಗುತ್ತಾರೆ – ನಮ್ಮ ತಂದೆಯು ನಮಗಾಗಿ ಒಳ್ಳೊಳ್ಳೆಯ ಉಡುಗೊರೆ ತರುತ್ತಾರೆ ಎಂದು. ಈ ಬೇಹದ್ದಿನ ತಂದೆಯಂತೂ ಒಂದೇ ಬಾರಿ ಬರುತ್ತಾರೆ, ಯಾವ ಉಡುಗೊರೆಯನ್ನು ತರುತ್ತಾರೆ? ನಾನು ನಿಮಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆ ಎಂದು ಹೇಳುತ್ತಾರೆ. ಹೇಗೆ ಹನುಮಂತನು ಸಂಜೀವಿನಿ ಮೂಲಿಕೆಯ ಪರ್ವತವನ್ನೇ ತಂದೆನೆಂದು ಹೇಳುತ್ತಾರೆ, ಈಗ ಪರ್ವತವನ್ನಂತೂ ಎತ್ತಲು ಯಾರಿಂದಲೂ ಸಾಧ್ಯವಿಲ್ಲ ಹಾಗೆಯೇ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆಂದು ಹೇಳುತ್ತಾರೆ. ಆದರೆ ಸ್ವರ್ಗವನ್ನು ಅಂಗೈಯಲ್ಲಿ ಎತ್ತಲು ಸಾಧ್ಯವಿಲ್ಲ. ಇದು ಕೇವಲ ತಿಳಿದುಕೊಳ್ಳುವ ಮಾತುಗಳಾಗಿವೆ, ತಂದೆಯು ನಮಗಾಗಿ ನಂಬರ್ವನ್ ಉಡುಗೊರೆಯನ್ನು ತಂದಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ ಅಂದಮೇಲೆ ನೀವು ಪಾವನರಾಗಬೇಕಾಗುತ್ತದೆ, ಇದು ರಾಜಯೋಗವಲ್ಲವೆ. ಭಾರತದ ಪ್ರಾಚೀನ ರಾಜಯೋಗವನ್ನು ಗೀತೆಯ ಭಗವಂತನೇ ಕಲಿಸಿದ್ದರು ಮತ್ತು ರಾಜ್ಯಭಾಗ್ಯವನ್ನೂ ನೀಡಿದ್ದರು, ಈಗ ಪುನಃ ರಾಜಯೋಗವನ್ನು ಕಲಿಸುತ್ತಿದ್ದಾರೆ. ನಾವು ಸ್ವರ್ಗದ ಸ್ಥಾಪನೆ ಮಾಡುವಂತಹ ತಂದೆಯ ಮಕ್ಕಳಾಗಿದ್ದೇವೆ ಎಂದು ನೀವು ಹೇಳುತ್ತೀರಿ. ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆಂದರೆ ಅವಶ್ಯವಾಗಿ ಯಾರಿಗೋ ರಾಜ್ಯಭಾಗ್ಯವು ಸಿಕ್ಕಿರಬೇಕಲ್ಲವೆ. ಕೇವಲ ಸ್ವರ್ಗದಲ್ಲಿ ಇರುವವರಿಗೇ ತಂದೆಯು ಕೊಟ್ಟಿರುವರು ಎಂದಲ್ಲ, ಮತ್ತೆಲ್ಲರಿಗೂ ತಂದೆಯು ಕೊಡುತ್ತಾರಲ್ಲವೆ. ಉಳಿದೆಲ್ಲರಿಗೆ ಡ್ರಾಮಾನುಸಾರ ಮುಕ್ತಿಯ ಪಾತ್ರವು ಸಿಕ್ಕಿದೆ, ಎಲ್ಲರೂ ಮುಕ್ತರಾಗಿ ಬಿಡುತ್ತಾರೆ. ಒಬ್ಬ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ ಮತ್ತ್ಯಾರೂ ಅಲ್ಲ. ನಿಮ್ಮ ಬಳಿ ಪ್ರದರ್ಶನಿಯಲ್ಲಿ ಯಾರು ಪ್ರಸಿದ್ಧ ವ್ಯಕ್ತಿಗಳು ಬರುತ್ತಾರೆಯೋ ಅವಶ್ಯವಾಗಿ ಗೀತೆಯ ಭಗವಂತನು ಶ್ರೀಕೃಷ್ಣನಲ್ಲ, ಶಿವನಾಗಿದ್ದಾರೆ ಎಂಬುದನ್ನು ಒಪ್ಪುತ್ತಾರೆಯೋ ಅವರಿಂದ ಅಭಿಪ್ರಾಯವನ್ನು ಬರೆಸಿಕೊಳ್ಳಬೇಕಾಗಿದೆ. ದೊಡ್ಡ ವ್ಯಕ್ತಿಗಳ ಮಾತನ್ನೇ ಕೇಳುತ್ತಾರೆ, ಬಡವರ ಮಾತನ್ನು ಯಾರೂ ಕೇಳುವುದಿಲ್ಲ ಆದ್ದರಿಂದ ಪ್ರದರ್ಶನಿಯಲ್ಲಿ ಪ್ರಯತ್ನ ಮಾಡಿ. ಇದನ್ನು ಬರೆಸಿಕೊಳ್ಳಿ – ಗೀತೆಯ ಭಗವಂತ ಒಬ್ಬರೇ ಆಗಿದ್ದಾರೆ, ಅವರು ಎಲ್ಲರ ತಂದೆಯಾಗಿದ್ದಾರೆ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗಂತೂ ಇಡೀ ವಿಶ್ವದಲ್ಲಿ ರಾವಣನ ರಾಜ್ಯವಿದೆ, ರಾವಣನೇ ಎಲ್ಲರ ಶತ್ರುವಾಗಿದ್ದಾನೆ ಯಾರನ್ನು ವರ್ಷ-ವರ್ಷವೂ ಸುಡುತ್ತಾರೆ ಆದರೂ ಸಾಯುವುದಿಲ್ಲ. ಈಗ ಭಾರತದ ದೊಡ್ಡ ಶತ್ರು ಈ ರಾವಣನಾಗಿದ್ದಾನೆ. ಈ ಮಾತನ್ನು ಕೇವಲ ನೀವು ತಿಳಿದುಕೊಂಡಿದ್ದೀರಿ. ಈಗ ರಾಮನಾದ ಪರಮಪಿತ ಪರಮಾತ್ಮನು ರಾವಣನ ಮೇಲೆ ಜಯ ಪ್ರಾಪ್ತಿ ಮಾಡಿಸುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪವು ನಾಶವಾಗುತ್ತದೆ ಎಂದು ಹೇಳುತ್ತಾರೆ, ನೀವು ಯೋಗ್ಯರಾಗುತ್ತೀರೆಂದರೆ ಮತ್ತೆ ನಿಮಗಾಗಿ ಹೊಸ ಪ್ರಪಂಚ ಬೇಕು, ಅವಶ್ಯವಾಗಿ ಹಳೆಯ ಪ್ರಪಂಚದ ವಿನಾಶವೂ ಆಗಿತ್ತು ಅದು ಪುನಃ ಆಗುವುದು. ಯಾವಾಗ ರಾವಣ ರಾಜ್ಯವು ವಿನಾಶವಾಗಿ ರಾಮ ರಾಜ್ಯವು ಸ್ಥಾಪನೆಯಾಗುತ್ತದೆಯೋ ಆಗಲೇ ಮಹಾಭಾರತ ಯುದ್ಧವಾಗುತ್ತದೆ. ರಾವಣ ರಾಜ್ಯದಲ್ಲಿಯೇ ಆಹಾಕಾರವು ಆರಂಭವಾಗುತ್ತದೆ. ಆಹಾಕಾರದ ನಂತರ ಜಯ ಜಯಕಾರವಾಗುತ್ತದೆ. ಪ್ರಪಂಚವು ಪರಿವರ್ತನೆಯಾಗುತ್ತದೆ. ಹೇಗೆ ಹಳೆಯ ಮನೆಯನ್ನು ಬಿಟ್ಟು ಹೊಸ ಮನೆಯನ್ನು ಕಟ್ಟಿಸಲಾಗುತ್ತದೆ ನಂತರ ಅದನ್ನು ಬೀಳಿಸಲಾಗುತ್ತದೆ ಹಾಗೆಯೇ ಇದು ಸ್ಥಾಪನೆಯಾಗುತ್ತಿದೆ. ಬಾಂಬುಗಳನ್ನು ಮಾಡುತ್ತಲೇ ಇರುತ್ತಾರೆ, ತಯಾರಿಗಳು ನಡೆಯುತ್ತಿದೆ. ಈಗ ದಶಹರಾ ಆಯಿತು, ರಾವಣನ ಪ್ರತಿಮೆಯನ್ನು ಮಾಡಿಸಿದ್ದರು, ನಿಮ್ಮದು ಬೇಹದ್ದಿನ ಮಾತಾಗಿದೆ. ಇವರೇನು ಮಾಡುತ್ತಾರೆ ಎಂದು ಈಗ ನಿಮ್ಮ ಬುದ್ಧಿಯಲ್ಲಿ ಬರುತ್ತದೆ. ನೀವು ಯಾವಾಗ ತಿಳಿಸುತ್ತೀರೋ ಆಗಲೇ ನಾವು ಏನು ಮಾಡುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ. ನಗು ಬರುತ್ತದೆ. ಯಾರಿಗಾದರೂ ತಿಳಿಸಬಲ್ಲಿರಿ – ಇಷ್ಟು ದೊಡ್ಡ ರಾವಣನಂತೂ ಇರುವುದೇ ಇಲ್ಲ, ಈಗ ತಂದೆಯು ಹೇಳುತ್ತಾರೆ – ನೀವು ರಾಮ ರಾಜ್ಯವನ್ನು ತೆಗೆದುಕೊಳ್ಳಿ, ಐದು ವಿಕಾರಗಳ ದಾನವನ್ನು ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು. ತಂದೆಯು ಬಂದು ತಿಳಿಸುತ್ತಾರೆ – ಇಡೀ ಪ್ರಪಂಚಕ್ಕೆ ಈ ಐದು ವಿಕಾರಗಳ ಗ್ರಹಣ ಹಿಡಿದಿದೆ. ಸಂಪೂರ್ಣ ಕಪ್ಪಾಗಿ ಬಿಡುತ್ತಾರೆ, ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕು – ಇನ್ನು ಕೆಲವೇ ದಿನಗಳಿವೆ.

ನೀವೀಗ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಗಳು, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ನಿಮ್ಮದು ಸ್ವಚ್ಛ ಬುದ್ಧಿಯಾಗಿದೆ. ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಸ್ವರ್ಗದಲ್ಲಿ ಕಳುಹಿಸುತ್ತಾರೆ. ಜ್ಞಾನವು ಆದಾಯದ ಮೂಲವೆಂದು ಹೇಳಲಾಗುತ್ತದೆ, ಇದು ಆತ್ಮಿಕ ಜ್ಞಾನವಾಗಿದೆ, ಇದನ್ನು ತಂದೆಯೇ ತಿಳಿಸುತ್ತಾರೆ. ಮನುಷ್ಯರು ಮನುಷ್ಯರಿಗೆ ತಿಳಿಸಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಎಲ್ಲರೂ ಮನುಷ್ಯರು ಮನುಷ್ಯರಿಗೆ ಜ್ಞಾನವನ್ನು ತಿಳಿಸುತ್ತಾರೆ. ಇಲ್ಲಿ ನಿಮಗೆ ಪರಮಾತ್ಮನೇ ಬಂದು ಜ್ಞಾನವನ್ನು ತಿಳಿಸುತ್ತಾರೆ ಉಳಿದೆಲ್ಲರೂ ಭಕ್ತಿಮಾರ್ಗದ ದಂತ ಕಥೆಗಳನ್ನು ತಿಳಿಸುವವರಾಗಿದ್ದಾರೆ. ಸತ್ಯ ನಾರಾಯಣನ ಕಥೆ, ರಾಮಾಯಣದ ಕಥೆ…. ಯಾವುದು ಕಳೆದು ಹೋಗಿದೆಯೋ ಅವನ್ನು ಒಂದಲ್ಲ ಒಂದು ರಚಿಸುತ್ತಾ ಇರುತ್ತಾರೆ. ಇದು ವಿದ್ಯೆಯಾಗಿದೆ, ವಿದ್ಯೆಯಲ್ಲಿ ಚರಿತ್ರೆ-ಭೂಗೋಳವನ್ನು ತಿಳಿಸಲಾಗುತ್ತದೆ, ಇದು ವಿಶ್ವದ ಚರಿತ್ರೆ-ಭೂಗೋಳವಾಗಿದೆ. ನೀವು ತಿಳಿಸುತ್ತೀರಿ – ತಂದೆಯು 5000 ವರ್ಷಗಳ ಮೊದಲೂ ಸಹ ತಿಳಿಸಿದ್ದರು, ಆ ಗೀತೆಯನ್ನು ಓದುವವರು ಏನನ್ನೂ ತಿಳಿದುಕೊಂಡಿಲ್ಲ. ಕೌರವರು, ಪಾಂಡವರು ಯಾದವರು ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಯುರೋಪಿಯನ್ ಯಾದವರು ಅಣ್ವಸ್ತ್ರಗಳನ್ನು ಕಂಡುಹಿಡಿದರು ವಿನಾಶವಾಯಿತು, ವಿನಾಶದ ನಂತರ ಏನಾಯಿತು ಅದೇನನ್ನೂ ತೋರಿಸಿಲ್ಲ. ಪ್ರಳಯವಾಯಿತೆಂದು ತಿಳಿದುಕೊಳ್ಳುತ್ತಾರೆ. ನೀವು ಶಾಸ್ತ್ರಗಳನ್ನು ಒಪ್ಪುವುದಿಲ್ಲವೆಂದು ಅವರು ಹೇಳುತ್ತಾರೆ ಆಗ ಹೇಳಿರಿ, ಹೌದು ನಾವು ಶಾಸ್ತ್ರಗಳನ್ನು ತಿಳಿದುಕೊಂಡಿದ್ದೇವೆ ನಂಬುತ್ತೇವೆ – ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಜ್ಞಾನವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಅವರು ಜ್ಞಾನಸಾಗರನಾಗಿದ್ದಾರೆ. ಈಗ ಭಕ್ತಿಯು ಸಮಾಪ್ತಿಯಾಗಿ ಜ್ಞಾನದ ವಿಜಯವಾಗುತ್ತಿದೆ. ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ, ನತಿಂಗ್ನ್ಯೂ. ನಮ್ಮ ಪ್ರೀತಿಯು ತಂದೆಯೊಂದಿಗೆ ಇದೆ, ನಾವು ಅನ್ಯ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರುತ್ತೇವೆ. ತಂದೆಯು ತಿಳಿಸುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ನನ್ನ ಜೊತೆ ಬುದ್ಧಿಯೋಗವನ್ನು ಜೋಡಿಸಿ, ಇದಕ್ಕೆ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ ಅದನ್ನು ತಂದೆಯೇ ಕಲಿಸುತ್ತಾರೆ. ಕೃಷ್ಣನ ಆತ್ಮವೂ ಸಹ ಈ ಸಮಯದಲ್ಲಿ ಅಂತಿಮ ಜನ್ಮದಲ್ಲಿದ್ದಾರೆ. ಇವರಿಗೂ ಹೇಳುತ್ತಾರೆ – ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಇದು ನಿಮ್ಮ ಬಹಳ ಜನ್ಮಗಳ ಅಂತಿಮವಾಗಿದೆ ಆದ್ದರಿಂದ ನಾನು ಪ್ರವೇಶ ಮಾಡಿದ್ದೇನೆ. ಇವರಲ್ಲಿ ಕುಳಿತು ನೀವು ಮಕ್ಕಳನ್ನು ಬ್ರಹ್ಮಾಮುಖವಂಶಾವಳಿಯನ್ನಾಗಿ ಮಾಡಿ ರಾಜ್ಯಭಾಗ್ಯವನ್ನು ಕೊಡುತ್ತೇನೆ. ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ, ಇದನ್ನು ಸ್ವಯಂ ತಂದೆಯೇ ಈ ಮುಖದ ಮೂಲಕ ತಿಳಿಸುತ್ತಿದ್ದಾರೆ. ಈ ತಂದೆಯೂ ಸಹ ಮೊದಲು ಏನನ್ನೂ ತಿಳಿದುಕೊಂಡಿರಲಿಲ್ಲ, ನೀವೂ ತಿಳಿದುಕೊಂಡಿರಲಿಲ್ಲ. ಭಾರತವಾಸಿಗಳಿಗೇ ತಿಳಿಸಬೇಕಾಗಿದೆ. 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ, ಇದು ಅದೇ ಕಲ್ಪದ ಹಿಂದಿನ ಯುದ್ಧವು ನಿಂತಿದೆ ಯಾವುದರಿಂದ ಸ್ವರ್ಗದ ಬಾಗಿಲು ತೆರೆದಿತ್ತು. ತಂದೆಯು ಬಂದು ರಾಜಯೋಗವನ್ನು ಕಲಿಸಿ ಮನುಷ್ಯರನ್ನು ದೇವತೆಯನ್ನಾಗಿ ಮಾಡಿದ್ದರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾರು ಚೆನ್ನಾಗಿ ಶ್ರೀಮತದಂತೆ ನಡೆಯುತ್ತಾರೆಯೋ ಅವರನ್ನೇ ಫಾಲೋ ಮಾಡಬೇಕಾಗಿದೆ. ಬೇಹದ್ದಿನ ಖುಷಿಯಲ್ಲಿರಲು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ.

2. ಪ್ರೀತಿ ಬುದ್ಧಿಯವರಾಗಿ ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗ ಮಾಡಬೇಕಾಗಿದೆ. ಡಬಲ್ ಅಹಿಂಸಕರಾಗಿ ಶಾಂತಿಯಲ್ಲಿ ಕುಳಿತು ತಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡಬೇಕಾಗಿದೆ.

ವರದಾನ:-

ಲೌಕಿಕ ಕರ್ಮ ಬಂಧನದ ಸಂಬಂಧವನ್ನು ಈಗ ಮರುಜೀವಾ ಜನ್ಮದ ಕಾರಣ, ಶ್ರೀಮತದ ಆಧಾರದಿಂದ ಸೇವೆಯ ಸಂಬಂಧವು ಆಧಾರಿತವಾಗಿದೆ. ಇದು ಕರ್ಮ ಬಂಧನವಲ್ಲ ಸೇವೆಯ ಸಂಬಂಧವಾಗಿದೆ. ಸೇವೆಯ ಸಂಬಂಧದಲ್ಲಿ ವಿಭಿನ್ನ ಪ್ರಕಾರದ ಆತ್ಮರಗಳ ಬಗ್ಗೆ ತಿಳಿದುಕೊಂಡು, ಧಾರಣೆ ಮಾಡುತ್ತಾ ನಡೆಯುತ್ತೀರೆಂದರೆ ಬಂಧನದಲ್ಲಿ ಬೇಸರವಾಗುವುದಿಲ್ಲ. ಆದರೆ ಅತಿ ಪಾಪಾತ್ಮ, ಅಪಕಾರಿ ಆತ್ಮರೊಂದಿಗೂ ತಿರಸ್ಕಾರಕ್ಕೆ ಬದಲು ದಯಾಹೃದಯಿಯಾಗಿ ದಯೆಯ ಭಾವನೆಯನ್ನಿಟ್ಟು, ಸೇವೆಯ ಸಂಬಂಧವೆಂದು ತಿಳಿದುಕೊಂಡು ಸೇವೆ ಮಾಡುತ್ತೀರೆಂದರೆ ಪ್ರಸಿದ್ಧ ವಿಶ್ವ ಕಲ್ಯಾಣಿ ಅಥವಾ ಪರೋಪಕಾರಿ ಎಂದು ಗಾಯನವಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top