12 November 2021 KANNADA Murli Today | Brahma Kumaris

Read and Listen today’s Gyan Murli in Kannada

November 11, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಪ್ರತಿಯೊಬ್ಬ ಪಾತ್ರಧಾರಿ ಆತ್ಮನು ಅರ್ಧ ಸಮಯ ಸುಖ, ಅರ್ಧ ಸಮಯ ದುಃಖದ ಪಾತ್ರವನ್ನು ಅಭಿನಯಿಸುತ್ತದೆ - ಇದೂ ಸಹ ಈಶ್ವರೀಯ ಕಾಯಿದೆ ಆಗಿದೆ”

ಪ್ರಶ್ನೆ:: -

ತಂದೆಯು ಏನನ್ನು ತಿಳಿಸುತ್ತಾರೆಯೋ ಈ ತಿಳುವಳಿಕೆಯು ಮಕ್ಕಳ ಬುದ್ಧಿಯಲ್ಲಿ ಯಾವಾಗ ಯಥಾರ್ಥ ರೀತಿಯಿಂದ ಕುಳಿತುಕೊಳ್ಳುತ್ತದೆ?

ಉತ್ತರ:-

ಬುದ್ಧಿಯು ಶುದ್ಧವಾದಾಗ. ಯಾರು ಎಷ್ಟೆಷ್ಟು ಪುರುಷಾರ್ಥ ಮಾಡಿ ತುಕ್ಕನ್ನು ತೆಗೆಯುತ್ತಾ ಹೋಗುವರೋ, ಅಷ್ಟು ತಂದೆಯ ತಿಳುವಳಿಕೆಯು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತಾ ಹೋಗುವುದು. ಇಲ್ಲಿಯವರೆಗೆ ಮಕ್ಕಳು ಸತೋದವರೆಗೂ ವಿರಳ ತಲುಪಿದ್ದಾರೆ. ಪ್ರತಿಯೊಬ್ಬರ ಪುರುಷಾರ್ಥವು ಬೇರೆ-ಬೇರೆಯಾಗಿದೆ, ಕೆಲವರು ಸತೋ ಆಗಿದ್ದಾರೆ, ಕೆಲವರು ತಮೋ ಆಗಿದ್ದಾರೆ ಆದರೆ ಸತೋಪ್ರಧಾನರೇ ಆಗಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ದೂರ ದೇಶದಲ್ಲಿರುವವರು ಪರದೇಶದಲ್ಲಿ ಬಂದರು..

ಓಂ ಶಾಂತಿ. ಮೇಳ ಹಾಗೂ ಪ್ರದರ್ಶನಿಗಳಲ್ಲಿ ಮಕ್ಕಳು ತಿಳಿಸುತ್ತೀರೆಂದರೆ ಯಾವ ಮಾತುಗಳು ತಿಳಿಸಲು ಯೋಗ್ಯವಾಗಿದೆಯೋ ಅವನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಈ ಮಾತನ್ನಂತೂ ಅವಶ್ಯವಾಗಿ ತಿಳಿಸಬೇಕಾಗಿದೆ – ಎಲ್ಲಾ ಆತ್ಮರ ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಭಾರತದ ಆದಿ ಸನಾತನ ಧರ್ಮ ಯಾವುದಾಗಿದೆ? ಎಂಬುದನ್ನೂ ಸಹ ಕೇಳಬೇಕಾಗಿದೆ. ಮನುಷ್ಯರಂತೂ ಆದಿ ಸನಾತನ ಧರ್ಮವನ್ನು ಹಿಂದೂ ಧರ್ಮವೆಂದೇ ತಿಳಿದುಕೊಳ್ಳುತ್ತಾರೆ. ಇಸ್ಲಾಮಿ, ಬೌದ್ಧ, ಕ್ರಿಶ್ಚಿಯನ್ ಮೊದಲಾದವರಿಗೆ ನಮ್ಮ ಧರ್ಮವನ್ನು ಯಾರು ಮತ್ತು ಯಾವಾಗ ಸ್ಥಾಪನೆ ಮಾಡಿದರೆಂಬುದು ತಿಳಿದಿದೆ ಆದರೆ ಭಾರತವಾಸಿಗಳದು ಹಿಂದೂ ಧರ್ಮವೇ ಅಥವಾ ದೇವಿ-ದೇವತಾ ಧರ್ಮವೇ? ಇದನ್ನು ಯಾರು ಮತ್ತು ಯಾವಾಗ ಸ್ಥಾಪನೆ ಮಾಡಿದರು? ಇದನ್ನು ಭಾರತವಾಸಿಗಳು ಸ್ವಲ್ಪವೂ ತಿಳಿದುಕೊಂಡಿಲ್ಲ. ಇದು ಖಂಡಿತವಾಗಿಯೂ ತಿಳಿಸುವ ಮಾತಾಗಿದೆ. ಇದು ಯಾರ ಗಮನದಲ್ಲಿಯೂ ಬರುವುದಿಲ್ಲ. ಭಾರತ ದೇಶವನ್ನು ಪ್ರಾಚೀನ ಎಂದು ಹೇಳಲಾಗುತ್ತದೆ ಆದರೆ ನಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಹಿಂದೂ ಎಂಬುದು ಯಾವುದೇ ಧರ್ಮವಲ್ಲ ಎಂದು ಅವರಿಗೆ ತಿಳಿದೇ ಇಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, 5000 ವರ್ಷಗಳ ಮೊದಲು ದೇವಿ-ದೇವತಾ ಧರ್ಮವಿತ್ತು, ಆ ಸಮಯದಲ್ಲಿ ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡುತ್ತಿದ್ದರು, ಅವರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಿರಲಿಲ್ಲ. ಒಳ್ಳೆಯದು. ಹಿಂದೂ ಧರ್ಮಕ್ಕೂ ಯಾವುದಾದರೂ ಸಂವತ್ಸರ ಇರಬೇಕಲ್ಲವೇ. ವಿಕ್ರಮ ಸಂವತ್ಸರವೆಂದು ಯಾವುದನ್ನು ಹೇಳುತ್ತಾರೆ, ಯಾವಾಗಿನಿಂದ ದೇವತೆಗಳು ವಾಮ ಮಾರ್ಗದಲ್ಲಿ ಹೋದರೋ ಆಗಿನಿಂದ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳಲು ಆರಂಭಿಸುತ್ತಾರೆ. ಭಲೆ ಆಗಿನಿಂದ ವಿಕ್ರಮ ಸಂವತ್ಸರವೆಂದು ಹೇಳಬಹುದಾಗಿದೆ ಅಂದಮೇಲೆ ಅರ್ಧ-ಅರ್ಧ ಭಾಗ ಆಯಿತಲ್ಲವೆ. ಆ ಸಮಯದಲ್ಲಿ ಅವರನ್ನು ಆದಿ ಸನಾತನ ದೇವಿ-ದೇವತೆಗಳೆಂದು ಹೇಳುವುದಿಲ್ಲ. ಧರ್ಮ ಸ್ಥಾಪನೆಯಾದಾಗ ಸಂವತ್ಸರವೆಂದು ಹೇಳಲಾಗುತ್ತದೆ, ಅದನ್ನು ಯಾರು ಸ್ಥಾಪನೆ ಮಾಡಿದರು? ವಿಕರ್ಮ ಸಂವತ್ಸರವನ್ನು ರಾವಣನು ಸ್ಥಾಪನೆ ಮಾಡಿದನು. ಆ ಸಮಯದಲ್ಲಿ ಎಲ್ಲರ ಕರ್ಮಗಳು ವಿಕರ್ಮಗಳಾಗುತ್ತಾ ಹೋಯಿತು. ಕರ್ಮ-ಅಕರ್ಮ-ವಿಕರ್ಮ ಎಂಬ ಹೆಸರುಗಳಂತೂ ಇವೆಯಲ್ಲವೆ ಅಂದಾಗ ವಿಕ್ರಮ ರಾಜನ ಸಂವತ್ಸರವೂ ನಡೆಯುತ್ತದೆ. ಅದಂತೂ ಅರ್ಧ ಸಮಯ ಆಗಿ ಹೋಯಿತು. ಈ ವಿಕ್ರಮ ಸಂವತ್ಸರವು ಹಿಂದೂಗಳ ಸಂವತ್ಸರವಂತೂ ಅಲ್ಲ, ಅಂದಮೇಲೆ ಇದನ್ನು ಕೇಳಬೇಕು – ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವಾಗ ಸ್ಥಾಪನೆಯಾಯಿತು? ಅರ್ಥವಾಗಬೇಕಲ್ಲವೆ. ಇವು ಬಹಳ ನಾಜೂಕು ಮಾತುಗಳಾಗಿವೆ. ಯಾವಾಗ ಇದು ಅರ್ಥವಾಗುವುದೋ ಆಗ ಲೆಕ್ಕ ಮಾಡಬಹುದು – ಹೊಸ ಪ್ರಪಂಚವು ಇತ್ತು ಮತ್ತೆ ದಿನದಿಂದ ಅವಶ್ಯವಾಗಿ ರಾತ್ರಿಯಾಗುತ್ತದೆ. ಅವಶ್ಯವಾಗಿ ಅರ್ಧ-ಅರ್ಧ ಭಾಗವಿರುತ್ತದೆ. ಇದೊಂದು ಈಶ್ವರೀಯ ಕಾಯಿದೆಯಾಗಿದೆ. ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಇಂತಹ ಸಮಾಚಾರವನ್ನು ಎಂದೂ ಯಾರೂ ಕಳುಹಿಸಿಲ್ಲ. ಕ್ರಿಶ್ಚಿಯನ್ನರದೂ ಸಹ ಅರ್ಧ ಸುಖ, ಅರ್ಧ ದುಃಖದ ಪಾತ್ರವು ನಡೆಯುವುದು. ನಾವು ತಿಳಿಸುವುದರಲ್ಲಿ ಇಡೀ ಚರಿತ್ರೆ-ಭೂಗೋಳವೇ ಬಂದು ಬಿಡುತ್ತದೆ. ಮನುಷ್ಯರು ಯಾರೆಲ್ಲರೂ ಬರುತ್ತಾರೆಯೋ ಅವರಿಗೆ ದುಃಖ-ಸುಖದ ಪಾತ್ರವು ಸಿಕ್ಕಿದೆ. ಒಂದೆರಡು ಜನ್ಮಗಳಿಗಾಗಿ ಬಂದರೂ ಸಹ ಅದರಲ್ಲಿಯೇ ಅರ್ಧ ಸುಖ-ಅರ್ಧ ದುಃಖವಿರುವುದು. ಇದು ಒಂದು ಈಶ್ವರೀಯ ಕಾಯಿದೆಯಾಗಿದೆ. ಪ್ರದರ್ಶನಿಯಲ್ಲಿ ಕೇಳುವಾಗ ಚೆನ್ನಾಗಿದೆ, ಚೆನ್ನಾಗಿದೆ ಎಂದು ಹೇಳುತ್ತಾರೆ. ಹೊರಗಡೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ಕೆಲವರೇ ವಿರಳ ಗಮನ ಕೊಡುತ್ತಾರೆ, ಕೆಲವರು ಒಂದು ತಿಂಗಳವರೆಗೆ ಬಂದು ಮಾಯವಾಗಿ ಬಿಡುತ್ತಾರೆ. ಕೆಲವರು ಹತ್ತು ನಿಮಿಷ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಒಂದು ಘಂಟೆ, ಇನ್ನೂ ಕೆಲವರು ಸ್ವಲ್ಪ ಸಮಯ ಬಂದು ನಡೆಯುತ್ತಾ-ನಡೆಯುತ್ತಾ ಈ ಮಾರ್ಗದಲ್ಲಿ ಸುಸ್ತಾಗಿ ಬಿಡುತ್ತಾರೆ. ಸೇವಾಕೇಂದ್ರಗಳಲ್ಲಿ ಇದು ನಡೆಯುತ್ತಾ ಇರುತ್ತದೆ. ಹೇಗೆ ದೈವೀ ಸಂಪ್ರದಾಯವು ಸ್ಥಾಪನೆಯಾಗುತ್ತಿದೆ! ಇದೂ ಸಹ ಅದ್ಭುತವಾಗಿದೆ – ಹೊಸ ಪ್ರಪಂಚದ ಧರ್ಮವು ಹಳೆಯ ಪ್ರಪಂಚದಲ್ಲಿ ಸ್ಥಾಪನೆಯಾಗುತ್ತಿದೆ, ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿಯೇ ಬರುತ್ತದೆ. ತಂದೆಯ ಮೂಲಕ ನೀವು ತಮ್ಮ 84 ಜನ್ಮಗಳನ್ನು ಅರಿತುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ – ನಾನು 84 ಜನ್ಮಗಳ ಕಥೆಯನ್ನು ತಿಳಿಸಲು ಬರುತ್ತೇನೆ ಅಂದಮೇಲೆ ಅಂತಿಮದಲ್ಲಿಯೇ ಬಂದು ತಿಳಿಸುತ್ತಾರಲ್ಲವೆ. ದ್ವಾಪರದ ಮಧ್ಯದಲ್ಲಂತೂ ತಿಳಿಸಲು ಸಾಧ್ಯವಿಲ್ಲ, ಇನ್ನೂ ಕೊನೆಯವರು ಜನ್ಮವೇ ಪಡೆದಿಲ್ಲವೆಂದರೆ ಹೇಗೆ ತಿಳಿಸುವರು! ರಾಜಯೋಗದ ಜ್ಞಾನವು ದ್ವಾಪರದಲ್ಲಿ ಸಿಗಲು ಸಾಧ್ಯವಿಲ್ಲ. ಮಹಾಭಾರತ ಯುದ್ಧವೂ ಸಹ ದ್ವಾಪರದಲ್ಲಿ ಆಗಲು ಸಾಧ್ಯವಿಲ್ಲ. ಮಹಾಭಾರತ ಯುದ್ಧದ ನಂತರವೇ ಸತ್ಯಯುಗವು ಸ್ಥಾಪನೆಯಾಗುತ್ತದೆ ಅರ್ಥಾತ್ ದೇವಿ-ದೇವತಾ ಧರ್ಮವು ಸ್ಥಾಪನೆಯಾಗುತ್ತದೆ, ಅದಕ್ಕೆ ಮೊದಲು ಬ್ರಾಹ್ಮಣ ಧರ್ಮವು ಸ್ಥಾಪನೆಯಾಗುತ್ತದೆ ಅಂದಮೇಲೆ ಅವಶ್ಯವಾಗಿ ಬ್ರಹ್ಮನ ಮುಖಾಂತರ ಸ್ಥಾಪನೆ ಮಾಡುತ್ತಾರೆ. ಆದ್ದರಿಂದ ಬ್ರಾಹ್ಮಣರು ಜನ್ಮ ಪಡೆಯುತ್ತಾರಲ್ಲವೆ. ವಿರಾಟ ರೂಪದಲ್ಲಿ ಶಿವನನ್ನು ತೋರಿಸಿಲ್ಲ ಮತ್ತು ಶಿಖೆಗೆ ಸಮಾನರಾದ ಬ್ರಾಹ್ಮಣರನ್ನೂ ತೋರಿಸಿಲ್ಲ. ಪ್ರದರ್ಶನಿಯಲ್ಲಿಯೂ ವಿರಾಟ ರೂಪದ ಚಿತ್ರವನ್ನು ಅವಶ್ಯವಾಗಿ ಇಡಬೇಕಾಗಿದೆ. ಬ್ರಹ್ಮನ ಮೂಲಕ ಮೊದಲು ಬ್ರಾಹ್ಮಣರನ್ನು ರಚಿಸುತ್ತಾರೆ. ಮತ್ತೆ ಆ ಬ್ರಾಹ್ಮಣರನ್ನು ಯಾವಾಗ ಮತ್ತು ಎಲ್ಲಿ ರಚಿಸುತ್ತಾರೆ? ಬ್ರಾಹ್ಮಣರದು ಸಂಗಮವಾಗಿದೆ, ಶೂದ್ರರದು ಕಲಿಯುಗವಾಗಿದೆ. ನೀವೀಗ ತಮ್ಮನ್ನು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ಪ್ರಜೆಗಳೆಂದರೆ ಮನುಷ್ಯ ಸೃಷ್ಟಿಯಾಗಿದೆ. ಅಂದಮೇಲೆ ಅವಶ್ಯವಾಗಿ ಬ್ರಾಹ್ಮಣರೇ ಇರುತ್ತಾರೆ. ಕ್ರೈಸ್ಟನ್ನು ಕ್ರೈಸ್ತ ಧರ್ಮದ ಪಿತನೆಂದು ಹೇಳುತ್ತಾರೆ. ಇಲ್ಲಿ ಇವರು ಪ್ರಜಾಪಿತನಾಗಿದ್ದಾರೆ. ಭಗವಂತನು ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ, ಕ್ರೈಸ್ಟ್ನ ಮೂಲಕ, ಬೌದ್ಧಿಯರ ಮೂಲಕ ರಚಿಸುತ್ತಾರೆ ಎಂದಲ್ಲ. ಮನುಷ್ಯ ಸೃಷ್ಟಿಯು ಬ್ರಹ್ಮನಿಂದಲೇ ಪ್ರಾರಂಭವಾಗುತ್ತದೆ ಅಂದಮೇಲೆ ಅವಶ್ಯವಾಗಿ ಮೊಟ್ಟ ಮೊದಲು ಬ್ರಾಹ್ಮಣರೇ ರಚಿಸಲ್ಪಡುತ್ತಾರೆ. ಬ್ರಾಹ್ಮಣರನ್ನೇ ನಂತರ ದೇವತೆಗಳನ್ನಾಗಿ ಮಾಡುತ್ತಾರೆ. ವಿರಾಟ ರೂಪವನ್ನು ಭಾರತದಲ್ಲಿಯೇ ತೋರಿಸುತ್ತಾರೆ. ಅನ್ಯ ಧರ್ಮದವರು ವಿರಾಟ ರೂಪವನ್ನು ತೋರಿಸಲು ಸಾಧ್ಯವಿಲ್ಲ. ಈ ಹೊಸ, ಹೊಸ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ. ಹೊಸ ಮಾತುಗಳು ಬರುತ್ತಾ ಇರುತ್ತವೆ ಮತ್ತು ಹಳೆಯ ಮಾತುಗಳೂ ಬರುತ್ತಿರುತ್ತವೆ ಏಕೆಂದರೆ ಹೊಸ-ಹೊಸ ಮಕ್ಕಳಿಗೂ ಸಹ ತಿಳಿದುಕೊಳ್ಳಲು ಕೆಲವು ಹೊಸ ಮಾತುಗಳು, ಕೆಲವು ಹಳೆಯ ಮಾತುಗಳು ಸಿಗಬೇಕಲ್ಲವೆ. ತಂದೆ ಮತ್ತು ಆಸ್ತಿಯ ಬಗ್ಗೆ ಬುದ್ಧಿಯಲ್ಲಿ ಇಲ್ಲವೆಂದರೆ ಇನ್ನೇನು ತಿಳಿದುಕೊಳ್ಳುವರು? ನಿಮಗೆ ತಿಳಿದಿದೆ, ತಂದೆ ಮತ್ತು ಆಸ್ತಿಯ ಬಗ್ಗೆ ತಿಳಿಸಿ ಕೊಡುವುದು ಬಹಳ ಸಹಜವಾಗುತ್ತದೆ. ಎಲ್ಲರಿಗೂ ಒಬ್ಬರೇ ತಂದೆಯಾಗಿದ್ದಾರೆ, ಅವರು ಅವಶ್ಯವಾಗಿ ಬರುತ್ತಾರೆ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ ಆದರೆ ಶಿವ ಜಯಂತಿ ಎಂದರೇನು ಎಂಬುದು ಭಾರತವಾಸಿಗಳಿಗೆ ತಿಳಿದಿಲ್ಲ. ಬ್ರಹ್ಮಾ-ವಿಷ್ಣು-ಶಂಕರನನ್ನು ಕುರಿತಾಗಲಿ, ಶ್ರೀಕೃಷ್ಣನ ಬಗ್ಗೆಯಾಗಲೀ ಗೊತ್ತಿಲ್ಲ. ಶ್ರೀ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತೆಂಬುದೂ ತಿಳಿದಿಲ್ಲ. ಕ್ರೈಸ್ಟ್ ಬಂದು ಹೋದರು, ಅವರ ಪೋಪರದು ದೊಡ್ಡ ಪಟ್ಟಿಯೇ ಇದೆ ಆದರೆ ಭಾರತವಾಸಿಗಳಿಗೆ ಈ ಲಕ್ಷ್ಮೀ-ನಾರಾಯಣರೂ ಸಹ ಭಾರತದಲ್ಲಿ ರಾಜ್ಯಭಾರ ಮಾಡಿ ಹೋಗಿದ್ದಾರೆಂಬುದೇ ಗೊತ್ತಿಲ್ಲ. ಯಾವುದೆಲ್ಲಾ ಚಿತ್ರಗಳನ್ನು ಮಾಡಿಸುತ್ತಾರೆ, ಪೂಜೆ ಮಾಡುತ್ತಾರೆಯೋ ಅವರ ಪರಿಚಯವನ್ನೇ ತಿಳಿದುಕೊಂಡಿಲ್ಲ. ದೇವತೆಗಳಿಂದ ನಂತರ ಕ್ಷತ್ರಿಯರು ರಾಜ್ಯವನ್ನು ಹೇಗೆ ಪಡೆದುಕೊಂಡರು? ಯುದ್ಧ ಮಾಡಿದರೇ? ರಾಜ್ಯಾಡಳಿತವು ಬದಲಾಗುತ್ತದೆ ಎಂದರೆ ಅವಶ್ಯವಾಗಿ ಯಾರಾದರೂ ವಿಜಯವನ್ನು ಪಡೆದರು ಎಂದರ್ಥ. ಆದರೆ ಅಲ್ಲಿ ಈ ಮಾತೇ ಇರುವುದಿಲ್ಲ. ಅಲ್ಲಂತೂ ಒಬ್ಬರು ಇನ್ನೊಬ್ಬರಿಗೆ ಬಹಳ ಒಳ್ಳೆಯ ರೂಪದಲ್ಲಿ ರಾಜ್ಯವನ್ನು ಕೊಟ್ಟು ಹೋಗುತ್ತಾರೆ. ಮನುಷ್ಯರು ಈಗ ಎಷ್ಟೊಂದು ಅಂಧಕಾರದಲ್ಲಿದ್ದಾರೆ. ನಿಮಗೆ ಎಷ್ಟೊಂದು ಪ್ರಕಾಶತೆಯು ಸಿಗುತ್ತಿದೆ. ಎಲ್ಲಾ ಮಾತುಗಳು ಎಲ್ಲರಿಗೂ ನೆನಪಿರುತ್ತದೆ ಎಂದಲ್ಲ. ಇಲ್ಲದಿದ್ದರೆ ತಂದೆಯು ಏನೆಲ್ಲಾ ಮಾತುಗಳನ್ನು ತಿಳಿಸಿದ್ದಾರೆಯೋ ಅದೆಲ್ಲವನ್ನೂ ಪ್ರದರ್ಶನಿಯಲ್ಲಿ ತಿಳಿಸಬೇಕಿತ್ತು. ಪ್ರದರ್ಶನಿಯಲ್ಲಿ ಒಂದು ದಿನ ಬರುತ್ತಾರೆ, ಇನ್ನೊಂದು ದಿನ ಬರುವುದೇ ಇಲ್ಲ. ತಿಳಿದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದೇ ಅರ್ಥವಾಗುವುದಿಲ್ಲ. ನಮಗೆ ದೇವಿ-ದೇವತಾ ಧರ್ಮವು ಎಲ್ಲಿ ಹೋಯಿತು ಎಂಬುದೇ ಮೊದಲು ತಿಳಿದಿರಲಿಲ್ಲ, ಈಗ ಅರ್ಥವಾಯಿತು ಎಂಬ ಮಾತನ್ನು ಅಭಿಪ್ರಾಯದಲ್ಲಿ ಬರೆಸಿಕೊಳ್ಳಬೇಕು. ಅವರಿಗೆ ಸಂವತ್ಸರವನ್ನೂ ತಿಳಿಸಿರಿ. ಹಿಂದೂ ಧರ್ಮವು ಯಾವಾಗಿನಿಂದ ಆರಂಭವಾಯಿತು? ಪ್ರತಿಯೊಬ್ಬರೂ ಹೇಗೇಗೆ ತಿಳಿಸುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ಅಭಿಪ್ರಾಯವನ್ನು ಬರೆಸಿಕೊಳ್ಳುವವರು ಬೇಕು. ನೀವು ಸಿದ್ಧ ಮಾಡಿ ತಿಳಿಸುತ್ತೀರಿ – ಇದು 5000 ವರ್ಷಗಳ ಚಕ್ರವಾಗಿದೆ ಎಂಬುದನ್ನು ಬರೆಯಿರಿ. ಸಂವತ್ಸರ ಇತ್ಯಾದಿಗಳ ಬಗ್ಗೆ ಯಾರಿಗೂ ಗೊತ್ತಿಲ್ಲ. ಈ ಮಾತುಗಳನ್ನು ಯಾವುದಾದರೂ ಶಾಸ್ತ್ರಗಳಲ್ಲಿ ಕೇಳಿದ್ದೀರಾ? ಮತ್ತೆ ನಾವು ಎಲ್ಲಿಂದ ಕಲಿತೆವು? ಅಂದಮೇಲೆ ನಮಗೆ ಕಲಿಸುವವರು ಅವಶ್ಯವಾಗಿ ಭಗವಂತನಾಗಿದ್ದಾರೆ. ಭಗವಂತನಲ್ಲದೆ ಈ ಮಾತುಗಳನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಅವರೂ ಸಹ ಅವಶ್ಯವಾಗಿ ಯಾರದೋ ತನುವಿನಲ್ಲಿ ಬರುತ್ತಾರೆ. ಪರಮಾತ್ಮನು ಜ್ಞಾನಸಾಗರನಾಗಿದ್ದಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಅವರ ಹೆಸರಾಗಿದೆ – ಶಿವ. ಭಕ್ತಿಮಾರ್ಗದಲ್ಲಿ ಅವರಿಗೆ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಕನಿಷ್ಠ ಒಂದುವರೆ ಲಕ್ಷ ಹೆಸರುಗಳನ್ನು ತಮ್ಮ-ತಮ್ಮ ಭಾಷೆಗಳಲ್ಲಿ ಇಡುತ್ತಾರೆ. ಮಕ್ಕಳಿಗೆ ಪ್ರತಿನಿತ್ಯವೂ ಎಷ್ಟೊಂದು ತಿಳಿಸುತ್ತೇನೆ ಆದರೆ ಬಹುಷಃ ಇನ್ನೂ ಶುದ್ಧ ಬುದ್ಧಿ ಆಗಿಲ್ಲ. ಪುರುಷಾರ್ಥ ಮಾಡುತ್ತಾ ಇದ್ದಾಗ ತುಕ್ಕು ಬಿಟ್ಟು ಹೋಗುವುದು. ಇಲ್ಲಿಯವರೆಗೆ ಮಕ್ಕಳು ಸತೋದವರೆಗೂ ವಿರಳ ತಲುಪಿದ್ದಾರೆ. ಅದರಲ್ಲಿಯೂ ಕೆಲವರು ತಮೋ, ಕೆಲವರು ಸತೋಪ್ರಧಾನ, ಸತೋ, ರಜೋ, ತಮೋ ಇದರಲ್ಲಿಯೂ ನಂಬರ್ವಾರ್ ಇದ್ದಾರೆ. ಪ್ರತಿಯೊಬ್ಬರ ಪುರುಷಾರ್ಥವು ಬೇರೆ-ಬೇರೆಯಾಗಿದೆ. ಈ ಸಮಯದಲ್ಲಿ ಮನುಷ್ಯರದು ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ. ಕೇವಲ ಪಾಂಡವರದು ಪ್ರೀತಿ ಬುದ್ಧಿಯಾಗಿತ್ತು, ಅವರದು ವಿಜಯವಾಯಿತು. ಅಸುರರು ಮತ್ತು ದೇವತೆಗಳು, ಇಬ್ಬರೂ ಮನುಷ್ಯರೇ ಆಗಿದ್ದಾರೆ. ಅಸುರರದು ಭಯಾನಕ ರೂಪವಿರುತ್ತದೆ ಎಂದಲ್ಲ, ಮನುಷ್ಯರಂತೂ ಯುದ್ಧದಲ್ಲಿ ಬಾಂಬುಗಳು, ಮದ್ದು-ಗುಂಡುಗಳಿಂದ ಬಚಾವ್ ಆಗಲು ಅಂತಹ ಉಡುಪುಗಳನ್ನು ಧರಿಸುತ್ತಾರೆ. ಅವರು ಆಸುರೀ ಸಂಪ್ರದಾಯದವರು, ನೀವು ರಾಮನ ಸಂಪ್ರದಾಯದವರಾಗಿದ್ದೀರಿ ಏಕೆಂದರೆ ನೀವು ಐದು ವಿಕಾರಗಳನ್ನು ಬಿಟ್ಟಿದ್ದೀರಿ. ಪವಿತ್ರರಾಗಿ ನೀವು ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡುತ್ತೀರಿ. ನಿಮ್ಮದು ಯಾರ ಜೊತೆಯೂ ಯುದ್ಧವಿಲ್ಲ. ತಂದೆಯು ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ. ಕೆಲವರು ಒಂದೆರಡು ತಿಂಗಳವರೆಗೆ ಬಂದು ಬಿಟ್ಟು ಬಿಡುತ್ತಾರೆ. ಅವರ ಅದೃಷ್ಟದಲ್ಲಿಲ್ಲವೆಂದು ತಿಳಿಯಲಾಗುತ್ತದೆ, ಅಂತಹವರು ಸಾಧಾರಣ ಪ್ರಜೆಗಳಲ್ಲಿ ಬರುತ್ತಾರೆ. ಪ್ರಜೆಗಳಂತೂ ಅನೇಕರು ತಯಾರಾಗುವರು, ಈಗಲೂ ನೋಡಿ ಎಷ್ಟೊಂದು ಪ್ರಜೆಗಳಿದ್ದಾರೆ. ಕೆಲವೊಂದು ಕಡೆ ಆಹಾರದ ಕೊರತೆಯಾಗುವ ಕಾರಣ ಮನುಷ್ಯರು ಹಸಿವಿನಿಂದ ಸಾಯುತ್ತಾರೆ, ಮತ್ತೊಂದು ಕಡೆ ಮಳೆಯಾಗದೇ ಇರುವ ಕಾರಣ ಬರಗಾಲವಾಗುತ್ತದೆ. ಇದರಲ್ಲಿ ಸರ್ಕಾರವೇನು ಮಾಡುತ್ತದೆ! ಇವಂತೂ ಪ್ರಾಕೃತಿಕ ವಿಕೋಪಗಳಾಗಿವೆ. ಇನ್ನು ಮುಂದೆ ಬೆಂಕಿ ಮಳೆ ಸುರಿಯುವುದು, ವಿನಾಶವಾಗಲೇಬೇಕಾಗಿದೆ. ನೀವು ಯಾವುದನ್ನು ಸಾಕ್ಷಾತ್ಕಾರದಲ್ಲಿ ನೋಡಿದ್ದೀರೋ ಅದೆಲ್ಲವೂ ಪ್ರತ್ಯಕ್ಷದಲ್ಲಿ ಆಗುವುದು. ಸಾಕ್ಷಾತ್ಕಾರದಲ್ಲಿ ಕೇವಲ ಒಬ್ಬ ಕೃಷ್ಣನ ಮಹಲನ್ನು ನೋಡುತ್ತೀರಿ, ಎಲ್ಲವನ್ನೂ ನೋಡಲು ಸಾಧ್ಯವಿಲ್ಲ. ವಿನಾಶವಾಯಿತು ಎಂಬುದನ್ನು ನೋಡುತ್ತೀರಿ ನಂತರ ಶರೀರ ಬಿಟ್ಟರೆ ಎಲ್ಲವೂ ಮರೆತು ಹೋಗುತ್ತದೆ. ಇಡೀ ಪ್ರಪಂಚವೇ ಸಮಾಪ್ತಿಯಾಗಲಿದೆ ನಂತರ ಪ್ರಪಂಚವೇ ಬದಲಾಗುವುದು, ನಿಮಗೆ ಎಲ್ಲವೂ ಮರೆತು ಹೋಗುವುದು. ಈಗ ನಿಮ್ಮಲ್ಲಿ ಆರಂಭದಿಂದ ಅಂತ್ಯದವರೆಗೆ ಎಲ್ಲಾ ಜ್ಞಾನವಿದೆ, ಮೂಲವತನ, ಸೂಕ್ಷ್ಮವತನದ ಚಕ್ರವು ಹೇಗೆ ಸುತ್ತುತ್ತದೆ ಎಂಬುದೆಲ್ಲಾ ಜ್ಞಾನವನ್ನು ತಂದೆಯು ತಿಳಿಸಿದ್ದಾರೆ. ಯಾರಲ್ಲಿ ಎಷ್ಟು ಹೆಚ್ಚು ಜ್ಞಾನವಿರುವುದೋ ಅಷ್ಟು ಹೆಚ್ಚು ನಶೆಯಿರುತ್ತದೆ. ನಾವೀಗ ಮಾ|| ಜ್ಞಾನಪೂರ್ಣರಾಗಿ ಬಿಟ್ಟೆವು ನಂತರ ವಿನಾಶವಾದಾಗ ನಮ್ಮ ಶರೀರವು ಸಮಾಪ್ತಿ ಆಗುವುದು. ಈ ಜನ್ಮದವರೆಗೇ ಜ್ಞಾನವಿರುತ್ತದೆ, ಅಂದಮೇಲೆ ಬುದ್ಧಿಯಲ್ಲಿ ಇಷ್ಟೊಂದು ನಶೆಯಿರಲಿ – ನಾವು ಈ ಶರೀರವನ್ನು ಬಿಟ್ಟು ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ. ಮನುಷ್ಯರಾದರೆ ಓದಿ ತಮ್ಮ-ತಮ್ಮ ಸಂಪಾದನೆ ಮಾಡಿಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ- ನಾನಂತೂ ಯಾವುದೇ ಸಂಪಾದನೆ ಮಾಡುವುದಿಲ್ಲ, ನಾನು ನಿಮಗೆ ಕಲಿಸಿ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ. ನೀವು ಸಂಪಾದನೆ ಮಾಡುತ್ತೀರಿ ಮತ್ತು ಕಳೆದುಕೊಳ್ಳುತ್ತೀರಿ, ನಿಮಗೆ ಇಡೀ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ತಂದೆಗೂ ಜ್ಞಾನವಿದೆ. ಪಾತ್ರದನುಸಾರ ಅದನ್ನು ಕುಳಿತು ತಿಳಿಸುತ್ತಾರೆ ಮತ್ತೆ ತಂದೆಯೂ ಸಹ ನಿರ್ವಾಣ ಧಾಮಕ್ಕೆ ಹೊರಟು ಹೋಗುತ್ತಾರೆ. ಎಲ್ಲಾ ಆತ್ಮರೂ ಹೊರಟು ಹೋಗುತ್ತೇವೆ. ನಂತರ ಅಲ್ಲಿ ಯಾರ ಪಾತ್ರವಿರುವುದೋ ಅವರು ರಾಜಧಾನಿಯಲ್ಲಿ ಬರತೊಡಗುತ್ತಾರೆ. ಉಳಿದ ಸಮಯ ಶಾಂತಿಧಾಮದಲ್ಲಿ ಇರುತ್ತಾರೆ. ಮಕ್ಕಳಿಗೆ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಎಷ್ಟೊಂದು ಜ್ಞಾನವು ಸಿಗುತ್ತಿದೆ, ಹೊಸಬರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಕೇವಲ ಜ್ಞಾನವು ಬಹಳ ಚೆನ್ನಾಗಿದೆ ಎಂದಷ್ಟೇ ಹೇಳುತ್ತಾರೆ ನಂತರ ತಮ್ಮ-ತಮ್ಮ ಉದ್ಯೋಗ-ವ್ಯಾಪಾರಗಳಲ್ಲಿ ಹೊರಟು ಹೋಗುತ್ತಾರೆ. ಹೊರಗಡೆ ಹೋಗುತ್ತಿದ್ದಂತೆಯೇ ಮಾಯೆಯು ಮರೆಸಿ ಬಿಡುತ್ತದೆ, ಬುದ್ಧಿಗೆ ಬೀಗ ಹಾಕುತ್ತದೆ. ಕೆಲವು ಮಕ್ಕಳದು ಇಂತಹ ಸ್ಥಿತಿಯೂ ಆಗುತ್ತದೆ, ಪೂರ್ಣ ಧಾರಣೆಯೂ ಆಗುವುದಿಲ್ಲ. ಮೊದಲು ಒಳಗ ಯಾರೇ ಬಂದರೂ ಸಹ ತಿಳಿಸಿರಿ, ಇವರೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ. ಈಗ ಕಲಿಯುಗದ ಅಂತ್ಯವಾಗಿದೆ, ನಂತರ ಸತ್ಯಯುಗವು ಬರುವುದು ಅಂದಾಗ ಬ್ರಹ್ಮನ ಮಕ್ಕಳು ಎಲ್ಲರೂ ಬ್ರಹ್ಮಾಕುಮಾರರಾಗಿದ್ದಾರೆ. ಅವರೇ ನಂತರ ದೇವತೆಗಳಾಗುವರು. ಇಂತಹ ಸೇವಾ ಸಮಾಚಾರವನ್ನು ತಂದೆಗೆ ತಿಳಿಸುತ್ತಾ ಇದ್ದಾಗ ತಂದೆಯೂ ಸಹ ಸಲಹೆ ನೀಡುವರು. ಆದರೆ ಯಾರು ತಂದೆಗೆ ಪೂರ್ಣ ಸಮಾಚಾರ ತಿಳಿಸುವುದಿಲ್ಲ, ಅನೇಕರ ಮೇಲೆ ಗ್ರಹಚಾರವು ಕುಳಿತುಕೊಳ್ಳುತ್ತದೆ. ಈಗೀಗ ನೋಡಿದರೆ ಬಹಳ ಚೆನ್ನಾಗಿ ನಡೆಯುತ್ತಾರೆ, ನಾಳೆ ನೋಡಿದರೆ ಬಹಳ ಕನಿಷ್ಠರಾಗಿ ಬಿಡುತ್ತಾರೆ. ಗ್ರಹಚಾರವು ಇಲ್ಲದಿದ್ದರೆ ಆಶ್ಚರ್ಯವೆನಿಸುವಂತೆ ಏಕೆ ಹೊರಟು ಹೋಗುತ್ತಾರೆ? ಯಾವ ಮಕ್ಕಳು ಪ್ರದರ್ಶನಿಯಲ್ಲಿ ಹೋಗಿ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ, ಅವರು ತಮ್ಮ ಸಮಯವನ್ನು ಸಫಲ ಮಾಡಿಕೊಳ್ಳುತ್ತಾರೆ. ಬಾಪ್ದಾದಾರವರನ್ನು ಎಂದೂ ಬಿಡಬಾರದು. ತಂದೆಯೂ ಮಕ್ಕಳಿಗೆ ಏನಾದರೂ ಶಿಕ್ಷಣ ಕೊಟ್ಟರೂ ಸಹ ಮತ್ತೆ ಕೂಡಲೇ ಪ್ರೀತಿ ಮಾಡುವರು. ತಂದೆಯ ಹೃದಯದಲ್ಲಿ ಮಕ್ಕಳ ಪ್ರತಿ ಏನೂ ಇರುವುದಿಲ್ಲ. ಕೇವಲ ಶಿಕ್ಷಣ ಕೊಡುವುದಕ್ಕಾಗಿ ಕಲಿಸುತ್ತಾರೆ.

ಇಲ್ಲಿ ಮಕ್ಕಳಿಗೆ ಟೋಲಿ ತಿನ್ನಿಸಲಾಗುತ್ತದೆ ಏಕೆಂದರೆ ಇವರು ಬೇಹದ್ದಿನ ತಂದೆಯಲ್ಲವೆ. ಲೌಕಿಕ ತಂದೆಯು ಪೇಟೆಯಿಂದ ಬರುತ್ತಾರೆಂದರೆ ಮಕ್ಕಳು ಅವಶ್ಯವಾಗಿ ನೆನಪಿಗೆ ಬರುತ್ತಾರೆ. ಮಕ್ಕಳಿಗಾಗಿ ಏನಾದರೂ ಟೋಲಿಯನ್ನು ತೆಗೆದುಕೊಂಡು ಬರುತ್ತಾರೆ. ಹೊರಗಿನ ಸೇವಾಕೇಂದ್ರದಲ್ಲಿ ಟೋಲಿಯು ಸಿಗುವುದಿಲ್ಲ. ಇಲ್ಲಿ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ, ಆದ್ದರಿಂದ ಟೋಲಿಯನ್ನು ತಿನ್ನಿಸುತ್ತಾರೆ. ತಂದೆಯು ಎಲ್ಲವನ್ನೂ ಮಕ್ಕಳಿಗೆ ತಿಳಿಸುತ್ತಾರೆ. ದ್ವಾಪರದಿಂದ ಋಷಿ ಮುನಿಗಳು ಯಾರು ಸತೋಪ್ರಧಾನರಾಗಿದ್ದರೋ, ಯಾರ ಬುದ್ಧಿಗೆ ಬೀಗ ಹಾಕಿರಲಿಲ್ಲವೋ ಅವರೂ ಸಹ ಇದನ್ನು ಸತ್ಯವಾಗಿ ಹೇಳುತ್ತಿದ್ದರು – ರಚಯಿತ ಮತ್ತು ರಚನೆಯನ್ನು ನಾವು ತಿಳಿದುಕೊಂಡಿಲ್ಲ ಎಂದು. ಇಂದು ಕಲಿಯುಗದಲ್ಲಿ ಎಲ್ಲರ ಬುದ್ಧಿಗೆ ಬೀಗ ಹಾಕಲ್ಪಟ್ಟಿದೆ ಅಂದಮೇಲೆ ಇವರು ಹೇಗೆ ಅರಿತುಕೊಳ್ಳುವರು! ಶಾಸ್ತ್ರಗಳನ್ನು ಆ ಋಷಿ ಮುನಿಗಳೂ ಓದುತ್ತಿದ್ದರು, ನಿಮಗೆ ತಿಳಿಸುವುದಕ್ಕಾಗಿ ಬಹಳಷ್ಟು ಅಂಶಗಳು ಸಿಗುತ್ತವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಭಗವಂತನು ನಮಗೆ ಓದಿಸಿ ಭಗವಾನ್-ಭಗವತಿಯನ್ನಾಗಿ ಮಾಡುತ್ತಾರೆ – ಇದೇ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ. ರಚಯಿತ ಮತ್ತು ರಚನೆಯ ಜ್ಞಾನವನ್ನು ಬುದ್ಧಿಯಲ್ಲಿ ಇಟ್ಟುಕೊಂಡು ಅನ್ಯರಿಗೆ ತಿಳಿಸಬೇಕಾಗಿದೆ.

2. ಹೇಗೆ ತಂದೆಯು ಯಾವುದೇ ಮಗುವಿನ ಮಾತನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದಿಲ್ಲ ಅದೇರೀತಿ ಯಾರದೇ ಮಾತನ್ನು ಚಿತ್ತದಲ್ಲಿ ಇಟ್ಟುಕೊಳ್ಳಬಾರದು.

ವರದಾನ:-

ಯಾವುದೇ ಕರ್ಮವು ಕರ್ಮಯೋಗಿಯ ಸ್ಥಿತಿಯಲ್ಲಿ ಪರಿವರ್ತನೆ ಮಾಡಿರಿ, ಕೇವಲ ಕರ್ಮ ಮಾಡುವವರಲ್ಲ ಆದರೆ ಕರ್ಮಯೋಗಿ ಆಗಿದ್ದೀರಿ. ಕರ್ಮ ಅರ್ಥಾತ್ ವ್ಯವಹಾರ ಮತ್ತು ಯೋಗ ಅರ್ಥಾತ್ ಪರಮಾರ್ಥ ಎರಡರ ಸಮತೋಲನವಿರಲಿ. ಶರೀರ ನಿರ್ವಹಣೆಯ ಹಿಂದೆ ಆತ್ಮ ನಿರ್ವಹಣೆಯನ್ನು ಮರೆಯಬಾರದು. ಏನೆಲ್ಲಾ ಕರ್ಮವನ್ನು ಮಾಡುತ್ತೀರಿ ಅದು ಈಶ್ವರನ ಸೇವಾರ್ಥವಾಗಿ ಇರಲಿ. ಇದಕ್ಕಾಗಿ ಸೇವೆಗಳಲ್ಲಿ ನಿಮಿತ್ತನೆಂಬ ಮಂತ್ರ ಅಥವಾ ಮಾಡಿಸುವವರ ಸ್ಮೃತಿಯ ಸಂಕಲ್ಪವು ಸದಾ ನೆನಪಿರಲಿ. ಮಾಡಿಸುವವರನ್ನು ಮರೆಯದಿದ್ದರೆ ಸೇವೆಯಲ್ಲಿ ನಿರಹಂಕಾರಿ ಗುಣವೇ ನಿರ್ಮಾಣ ಮಾಡುತ್ತಿರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top