11 November 2021 KANNADA Murli Today | Brahma Kumaris

Read and Listen today’s Gyan Murli in Kannada

November 10, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ವಿದ್ಯೆಯೇ ನಿಮ್ಮನ್ನು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯನ್ನಾಗಿ ಮಾಡುತ್ತದೆ, ಆದ್ದರಿಂದ ವಿದ್ಯೆಯ ಮೇಲೆ ಬಹಳ-ಬಹಳ ಗಮನ ಕೊಡಬೇಕಾಗಿದೆ”

ಪ್ರಶ್ನೆ:: -

ತಂದೆಯ ಮೂಲಕ ಮಕ್ಕಳಿಗೆ ಯಾವ ಆಸ್ತಿಯು ಸಿಗುತ್ತದೆ, ಅದು ಯಾವುದೇ ತೀರ್ಥ ಸ್ಥಾನ ಅಥವಾ ಕಾಡಿಗೆ ಹೋಗುವುದರಿಂದಲೂ ಸಿಗಲು ಸಾಧ್ಯವಿಲ್ಲ?

ಉತ್ತರ:-

ತಂದೆಯ ಮೂಲಕ ಮಕ್ಕಳಿಗೆ ಸುಖ-ಶಾಂತಿ-ಸಂಪತ್ತಿನ ಆಸ್ತಿಯು ಸಿಗುತ್ತದೆ. ಅದು ಮತ್ತೆಲ್ಲಿಯೂ ಸಿಗಲು ಸಾಧ್ಯವಿಲ್ಲ. ಮನುಷ್ಯರು ಶಾಂತಿಗಾಗಿ ಕಾಡಿಗೆ ಹೋಗುತ್ತಾರೆ, ಆದರೆ ನೀವು ತಿಳಿದುಕೊಂಡಿದ್ದೀರಿ – ಶಾಂತಿಯು ನಾವಾತ್ಮರ ಸ್ವಧರ್ಮವಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು….

ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ನೀವೀಗ ಧನಿಕರು ಅರ್ಥಾತ್ ಸನಾಥರಾಗಿದ್ದೀರಿ, ಉಳಿದೆಲ್ಲಾ ಮನುಷ್ಯ ಮಾತ್ರರು ಅನಾಥರಾಗಿದ್ದಾರೆ. ಮಾಲೀಕ ಅಥವಾ ದಣಿ ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಮನೆಯಲ್ಲಿ ಯಾರಾದರೂ ಜಗಳವಾಡುತ್ತಾರೆಂದರೆ ನಿಮಗೆ ಯಾರೂ ದಣಿ-ದೋಣಿ ಇಲ್ಲವೆ? ಎಂದು ಕೇಳುತ್ತಾರೆ. ಈಗ ಇಡೀ ಪ್ರಪಂಚದ ಮನುಷ್ಯ ಮಾತ್ರರು ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಒಬ್ಬರು ಇನ್ನೊಬ್ಬರನ್ನು ಕೊಲೆಯೂ ಮಾಡಿ ಬಿಡುತ್ತಾರೆ. ತಂದೆಯೇ ಬಂದು ತಿಳಿಸುತ್ತಾರೆ – ಕಾಮ ಮಹಾಶತ್ರುವಾಗಿದೆ, ಇದರಿಂದಲೇ ಎಲ್ಲರೂ ಆದಿ-ಮಧ್ಯ-ಅಂತ್ಯ ದುಃಖ ಪಡೆಯುತ್ತಾರೆ. ನಾವೀಗ ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ನೀವು ಮಕ್ಕಳಿಗೆ ತಿಳಿದಿದೆ. ನಮಗೆ ಶಾಂತಿ ಬೇಕೆಂದು ಮನುಷ್ಯರು ಭಲೆ ಹೇಳುತ್ತಾರೆ ಆದರೆ ಶಾಂತಿ ಎಂದರೇನು? ಎಲ್ಲಿಂದ ಸಿಗುತ್ತದೆ? ಕಾಡಿಗೆ ಹೋದರೆ ಶಾಂತಿ ಸಿಗುತ್ತದೆಯೇ? ಸುಖ-ಶಾಂತಿಯನ್ನು ಯಾವಾಗ ಮತ್ತು ಯಾರು ಕೊಡುತ್ತಾರೆ? ತೀರ್ಥ ಯಾತ್ರೆಗಳನ್ನು ಏಕೆ ಮಾಡುತ್ತಾರೆ? ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಭಕ್ತಿ ಮಾಡಿದರೆ ಭಗವಂತ ಸಿಗುವರು ಎಂದು ಕೇಳಿರುತ್ತಾರೆ ಆದರೆ ಭಗವಂತನನ್ನು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ – ನಾನು ಬಂದು ನೀವು ಮಕ್ಕಳಿಗೆ ಸುಖ-ಶಾಂತಿಯನ್ನು ಕೊಡುತ್ತೇನೆ. ಈಗ ಸುಖ-ಶಾಂತಿ-ಸಂಪತ್ತು ಯಾರ ಬಳಿಯೂ ಇಲ್ಲ. ಅದನ್ನು ಕೊಡುವವರನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ತಿಳಿಸುತ್ತಾರೆ – ದುಃಖಹರ್ತ-ಸುಖಕರ್ತನೆಂದು ನೀವು ಹಾಡುತ್ತೀರಿ. ಗಾಂಧೀಜಿಯೂ ಸಹ ಹೇ ಪತಿತ-ಪಾವನ ಬಂದು ಪಾವನ ಮಾಡಿ ಎಂದು ಕರೆಯುತ್ತಿದ್ದರು. ಪತಿತ-ಪಾವನ ಸೀತಾರಾಂ ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಭಕ್ತಿಯನ್ನೇಕೆ ಮಾಡುತ್ತಾರೆ? ಅದರಿಂದ ಏನು ಸಿಗುವುದು? ಏನೂ ಗೊತ್ತಿಲ್ಲ. ಭಕ್ತಿ ಮಾಡುವುದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ದ್ವಾಪರದಿಂದ ರಾವಣ ರಾಜ್ಯವು ಆರಂಭವಾಗುತ್ತದೆ. ಆದರೆ ರಾವಣನೆಂದರೆ ಯಾರು, ರಾವಣನನ್ನು ಎಲ್ಲಿಯವರೆಗೆ ಸುಡುತ್ತಾ ಇರುತ್ತಾರೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ರಾವಣನ ಜನ್ಮವು ಯಾವಾಗ ಆಯಿತು ಎಂಬುದೂ ತಿಳಿದಿಲ್ಲ. ರಾವಣನ ಪ್ರತಿಮೆ ಮಾಡಿ ಸುಡುತ್ತಾರೆ. ಆತ್ಮವು ಎಂದೂ ಸುಡುವುದಿಲ್ಲ, ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು. ಈ ಲಕ್ಷ್ಮೀ-ನಾರಾಯಣರಿಗೇ ಭಗವಾನ್-ಭಗವತಿ ಎಂದು ಹೇಳುತ್ತಾರೆ ನಂತರ ತ್ರೇತಾಯುಗದಲ್ಲಿ ರಾಮನ ರಾಜ್ಯವಿತ್ತು, ಅವರಿಗೆ ಈ ರಾಜ್ಯವು ಹೇಗೆ ಸಿಕ್ಕಿತು? ನಂತರ ಆ ರಾಜ್ಯವು ಎಲ್ಲಿ ಹೋಯಿತು ಎಂಬುದು ಯಾರಿಗೂ ಗೊತ್ತಿಲ್ಲ ಅರ್ಥಾತ್ ರಚನೆಯ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಈ ಜ್ಞಾನದಿಂದ ಸ್ವರ್ಗದ ಮಾಲೀಕರಾಗುತ್ತೀರಿ. ಶಾಲೆಯಲ್ಲಿ ವಿದ್ಯೆಯಿಂದ ಯಾರಾದರೂ ವಕೀಲರು, ನ್ಯಾಯಾಧೀಶರಾಗಬಹುದೇ ಹೊರತು ಲಕ್ಷ್ಮೀ-ನಾರಾಯಣರಾಗುವುದಿಲ್ಲ ಅಂದಮೇಲೆ ಈ ದೇವಿ-ದೇವತೆಗಳು ಯಾವ ವಿದ್ಯೆಯಿಂದ ಇಂತಹ ಪದವಿ ಪಡೆದರು! ಎಂಬುದು ಯಾರಿಗೂ ತಿಳಿದಿಲ್ಲ. ಭಗವಾನುವಾಚ – ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ನಾನು ನಿಮ್ಮನ್ನು ಈ ರೀತಿ ಮಾಡುತ್ತೇನೆಂದು ಹೇಳುವವರು ಮತ್ತ್ಯಾರೂ ಇಲ್ಲ. ನೀವು ಮಕ್ಕಳಿಗೆ ತಿಳಿದಿದೆ – ಈ ಲಕ್ಷ್ಮೀ- ನಾರಾಯಣರ ರಾಜಧಾನಿಯು ಈ ವಿದ್ಯೆಯಿಂದಲೇ ಸ್ಥಾಪನೆಯಾಗಿದೆ. ಪ್ರಪಂಚದವರಿಗೆ ಈ ಮಾತುಗಳು ಗೊತ್ತಿಲ್ಲ. ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಅಂದಮೇಲೆ ಲಕ್ಷ್ಮೀ-ನಾರಾಯಣರು ಎಲ್ಲಿ ಹೋದರು ಎಂಬುದು ಅವರಿಗೇನು ಗೊತ್ತಿದೆ? ಭಾರತದಲ್ಲಿಯೇ ಲಕ್ಷ್ಮೀ-ನಾರಾಯಣರ ಬಹಳ ಚಿತ್ರಗಳಿವೆ, ಅನೇಕ ಮಂದಿರಗಳಾಗಿವೆ, ಇದನ್ನೂ ನೋಡುತ್ತಿದ್ದಾರೆ. ಇವರಿಂದ ನಮಗೆ ಧನ ಸಿಗುವುದು ಎಂದು ತಿಳಿದುಕೊಳ್ಳುತ್ತಾರೆ. ಮಹಾಲಕ್ಷ್ಮಿಯನ್ನು ಪ್ರತೀ ದೀಪಾವಳಿಯಂದು ಧನ ಕೇಳುತ್ತಾರೆ ಆದರೆ ಜೊತೆಯಲ್ಲಿ ಅವಶ್ಯವಾಗಿ ನಾರಾಯಣನೂ ಇರುವರು. ದೀಪಾವಳಿಯಂದು ಪೂಜೆ ಮಾಡುತ್ತಾರೆ, ನಂತರ ಅವರ ಅಲ್ಪಕಾಲದ ಸುಖದ ಭಾವನೆಯು ಈಡೇರುತ್ತದೆಯೆಂದರೆ ಲಕ್ಷ್ಮಿಯಿಂದ ಧನ ಸಿಗುತ್ತದೆ ಎಂದು ತಿಳಿಯುತ್ತಾರೆ. ವಾಸ್ತವದಲ್ಲಿ ಲಕ್ಷ್ಮೀ-ನಾರಾಯಣ ಇಬ್ಬರೂ ಇದ್ದಾರೆ. ಲಕ್ಷ್ಮಿ, ಮಹಾಲಕ್ಷ್ಮಿ ಬೇರೆ-ಬೇರೆಯಲ್ಲ. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯೇ ತಿಳಿಸುತ್ತಾರೆ. ಈಗಿನ ಮನುಷ್ಯರಂತೂ ಈಶ್ವರನು ಕಲ್ಲು-ಮುಳ್ಳು ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯು ಹೇಳುತ್ತಾರೆ – ಎಲ್ಲರೂ ಕಲ್ಲು ಬುದ್ಧಿಯವರಾಗಿದ್ದಾರೆ, ಪಾರಸ ಬುದ್ಧಿಯವರು ಸತ್ಯಯುಗದಲ್ಲಿರುತ್ತಾರೆ. ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ವಜ್ರ ವೈಡೂರ್ಯಗಳ ಮಹಲುಗಳಿತ್ತು, ಇದು 5000 ವರ್ಷಗಳ ಮಾತಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ತಂದೆಯು ಹೇಳುತ್ತಾರೆ – ಈ ಭಕ್ತಿಮಾರ್ಗದಿಂದ ಏಣಿಯನ್ನು ಕೆಳಗಿಳಿಯಬೇಕಾಗುತ್ತದೆ. ಡ್ರಾಮಾನುಸಾರ ಯಾವಾಗ ದುರ್ಗತಿಯನ್ನು ಹೊಂದುವರೋ ಆಗ ನಾನು ಬಂದು ಪುನಃ ಹೊಸ ಪ್ರಪಂಚವನ್ನಾಗಿ ಮಾಡುವೆನು. ಈಗ ನೀವು ಮಕ್ಕಳು ಹೊಸ ಪ್ರಪಂಚದ ಮಾಲೀಕರಾಗಲು ರಾಜಯೋಗವನ್ನು ಕಲಿಯುತ್ತಿದ್ದೀರಿ. ನಿಮಗೆ ತಿಳಿದಿದೆ, ಈ ಮಹಾಭಾರತ ಯುದ್ಧದಿಂದ ಹಳೆಯ ಪ್ರಪಂಚದ ವಿನಾಶವಾಗುವುದು. ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಅದಕ್ಕೆ 5000 ವರ್ಷಗಳಾಯಿತು. 2500 ವರ್ಷಗಳ ಕಾಲ ಸೂರ್ಯವಂಶಿ, ಚಂದ್ರವಂಶಿಯರ ರಾಜಧಾನಿಯು ನಡೆಯಿತು ನಂತರ ದ್ವಾಪರದಿಂದ ರಾವಣ ರಾಜ್ಯವು ಆರಂಭವಾಯಿತು. ಮನುಷ್ಯರು ಪತಿತರಾಗುತ್ತಲೇ ಹೋಗುತ್ತಾರೆ ಆದರೆ ನಮ್ಮನ್ನು ಪತಿತರನ್ನಾಗಿ ಯಾರು ಮಾಡಿದರು? ನಾವು ಪಾವನರಾಗಿದ್ದೆವು, ನಂತರ ಹೇಗೆ ಪತಿತರಾದೆವು ಎಂಬುದು ಮನುಷ್ಯರಿಗೆ ತಿಳಿದಿಲ್ಲ, ತಂದೆಯೇ ಬಂದು ತಿಳಿಸುತ್ತಾರೆ. ರಾವಣ ರಾಜ್ಯವು ಆರಂಭವಾದಾಗಿನಿಂದ ನೀವು ಪತಿತರಾಗತೊಡಗುತ್ತೀರಿ. ರಾವಣನ ಜನ್ಮವಾಗಿ 2500 ವರ್ಷಗಳಾಯಿತು, ಶಿವ ತಂದೆಯ ಜನ್ಮವಾಗಿ 5000 ವರ್ಷಗಳಾಯಿತು. ತಂದೆಗೆ ರಾಮನೆಂತಲೂ, ಅದಕ್ಕೆ ರಾಮ ರಾಜ್ಯವೆಂತಲೂ, ದ್ವಾಪರ-ಕಲಿಯುಗಕ್ಕೆ ರಾವಣ ರಾಜ್ಯವೆಂತಲೂ ಹೇಳಲಾಗುತ್ತದೆ. ವಾಸ್ತವದಲ್ಲಿ ರಾಮನೆಂದು ಹೇಳಬಾರದು ಏಕೆಂದರೆ ಇತ್ತೀಚಿನ ಮನುಷ್ಯರು ರಾಮ ಚಂದ್ರ, ಕೃಷ್ಣ ಚಂದ್ರ ಎಂದು ಹೆಸರಿಟ್ಟುಕೊಳ್ಳುತ್ತಾರೆ. 5000 ವರ್ಷಗಳ ಮೊದಲು ಭಾರತವು ಚಿನ್ನದ ಪಕ್ಷಿಯಾಗಿತ್ತು, ಅದಕ್ಕೆ ಸ್ವರ್ಣಿಮ ಯುಗವೆಂದು ಹೇಳಲಾಗುತ್ತದೆ. ವೈಕುಂಠವಿತ್ತು ಆದರೆ ಎಲ್ಲಿತ್ತು ಎಂಬುದು ಗೊತ್ತಿಲ್ಲ. ಆತ್ಮವೆಂದರೇನು, ಪರಮಾತ್ಮ ಯಾರು, ಸೃಷ್ಟಿಚಕ್ರವೆಂದರೇನು ಎಂಬುದನ್ನು ತಿಳಿದುಕೊಂಡಿಲ್ಲ. ಆದ್ದರಿಂದಲೇ ಅವರಿಗೆ ತುಚ್ಛ ಬುದ್ಧಿಯವರೆಂದು ಹೇಳಲಾಗುತ್ತದೆ. ಋಷಿ-ಮುನಿಗಳೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಆದ್ದರಿಂದಲೇ ನಮಗೂ ಗೊತ್ತಿಲ್ಲ, ತಂದೆ ಮತ್ತು ಆಸ್ತಿಯನ್ನು ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ತಂದೆಯ ಮೂಲಕ ವಿಶ್ವದ ರಾಜ್ಯ ಪದವಿಯ ಯಾವ ಆಸ್ತಿಯು ಸಿಗುತ್ತದೆಯೋ ಅದನ್ನೂ ತಿಳಿದುಕೊಂಡಿಲ್ಲ. ನೀವೀಗ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ ಅಂದಮೇಲೆ ನೀವು ಡಬಲ್ ಆಸ್ತಿಕರಾದಿರಿ. ಶಾಂತಿಯು ಯಾರಿಂದ ಮತ್ತು ಎಲ್ಲಿ ಸಿಗುವುದು ಎಂಬುದೂ ಸಹ ಮನುಷ್ಯರಿಗೆ ಗೊತ್ತಿಲ್ಲ. ಸನ್ಯಾಸಿಗಳ ಬಳಿ ಹೋಗಿ ನಮಗೆ ಶಾಂತಿ ಬೇಕು ಎಂದು ಹೇಳುತ್ತಾರೆ. ನಮಗೆ ಇಲ್ಲಿ ಶಾಂತಿಯು ಎಲ್ಲಿಂದ ಬರಲು ಸಾಧ್ಯ? ಕರ್ಮವನ್ನಂತೂ ಮಾಡಲೇಬೇಕಲ್ಲವೆ. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು, ಒಂದುವೇಳೆ ಮನೆಯಲ್ಲಿ ಒಬ್ಬರು ಅಶಾಂತರಾದರೂ ಸಹ ಇಡೀ ಮನೆಯನ್ನೇ ಅಶಾಂತಗೊಳಿಸುವರು. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿಯೇ ಸಿಗುವುದು. ಅಲ್ಲಿಂದ ತಂದೆಯು ನಾವಾತ್ಮರನ್ನು ಪಾತ್ರವನ್ನುಅಭಿನಯಿಸಲು ಹೊಸ ಪ್ರಪಂಚಕ್ಕೆ ಕಳುಹಿಸುತ್ತಾರೆ. ತಂದೆಯು ನರಕದಲ್ಲಿ ಕಳುಹಿಸುವರೇ! ಶಾಂತಿಧಾಮದಿಂದ ಸುಖಧಾಮದಲ್ಲಿ ಕಳುಹಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಇದು ಭಗವಂತನ ಪಾಠಶಾಲೆಯಾಗಿದೆ, ಇದು ಯಾವುದೇ ಸತ್ಸಂಗವಲ್ಲ. ಇಲ್ಲಿ ಭಗವಾನುವಾಚವು ಮಕ್ಕಳಪ್ರತಿ ಆಗಿದೆ. ನಿರಾಕಾರ ಶಿವ ತಂದೆಯು ಶರೀರದಲ್ಲಿ ಪ್ರವೇಶ ಮಾಡಿ ನೀವು ಮಕ್ಕಳೊಂದಿಗೆ ಮಾತನಾಡುತ್ತಾರೆ. ಆತ್ಮವು ಶರೀರದಲ್ಲಿ ಇದೆಯಲ್ಲವೆ! ಆತ್ಮಕ್ಕೆ ಕರ್ಮೇಂದ್ರಿಯಗಳು ಸಿಕ್ಕಿದಾಗಲೇ ಮಾತನಾಡುತ್ತದೆ, ಕೇಳಿಸಿಕೊಳ್ಳುತ್ತದೆ, ಆತ್ಮರಿಗೆ ತಂದೆಯೇ ಕುಳಿತು ಓದಿಸುತ್ತಾರೆ. ಹೇ ಪತಿತ-ಪಾವನ, ಹೇ ಸದ್ಗತಿದಾತ, ಮುಕ್ತಿದಾತ, ಮಾರ್ಗದರ್ಶಕನೆಂದು ಪರಮಾತ್ಮನನ್ನು ಕರೆಯುತ್ತಾರೆ ಆದರೆ ಅವರು ಹೇಗೆ ಬಿಡುಗಡೆ ಮಾಡಿ ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆಂದು ತಿಳಿದುಕೊಂಡಿಲ್ಲ. ಕೇವಲ ಕೂಗುತ್ತಾ ಇರುತ್ತಾರೆ. ಈಗ ಆ ತಂದೆಯು ಬಂದಿದ್ದಾರೆ, ನೀವು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ತಂದೆಯು ನಿಮ್ಮನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ ನಂತರ ನೀವು ಸುಖಧಾಮದಲ್ಲಿ ಬಂದು ಬಿಡುತ್ತೀರಿ. ತಂದೆಯು ಒಂದೇ ಬಾರಿ ಬಂದು ಎಲ್ಲರಿಗೆ ಮಾರ್ಗದರ್ಶಕ ಆಗುತ್ತಾರೆ ನಂತರ ಹೊಸ ಪ್ರಪಂಚದಲ್ಲಿ ತಂದೆಯು ಮಾರ್ಗದರ್ಶನ ನೀಡುವುದಿಲ್ಲ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಪತಿತರಾಗಿರುವ ಕಾರಣ ನಾವು ಮನೆಗೆ ಹೇಗೆ ಹಿಂತಿರುಗಿ ಹೋಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ಹಾರಲು ಸಾಧ್ಯವಾಗುತ್ತಿಲ್ಲ. ಅಲ್ಲಿಗೆ ಹೋಗುವುದಕ್ಕಾಗಿ ಬಹಳ ಭಕ್ತಿ ಮಾಡುತ್ತಾರೆ ಆದರೆ ನಾವು ಪತಿತರಾಗಿದ್ದೇವೆ ಆದ್ದರಿಂದಲೇ ಹೋಗಲು ಆಗುತ್ತಿಲ್ಲ, ಪತಿತ-ಪಾವನ ತಂದೆಯು ಬಂದು ಪಾವನರನ್ನಾಗಿ ಮಾಡಿದಾಗಲೇ ನಾವು ಹೋಗಲು ಸಾಧ್ಯ ಎಂಬುದನ್ನು ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಎಲ್ಲರೂ ಪತಿತರು ಮತ್ತು ಪಾವನರಾಗಲೇಬೇಕಾಗಿದೆ. ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಈಗ ಎಷ್ಟೊಂದು ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ದೇವತೆಗಳ ರಾಜ್ಯವಿದ್ದಾಗ ಹೊಸ ವೃಕ್ಷದಲ್ಲಿ ಕೇವಲ 9 ಲಕ್ಷ ಮಂದಿ ಇರುತ್ತಾರೆ. ಮೊದಲಿಗೆ ಕೆಲವೇ ಎಲೆಗಳು ಇರುತ್ತವೆಯಲ್ಲವೇ. ನಂತರ ವೃಕ್ಷವು ದೊಡ್ಡದಾಗುತ್ತಾ ಹೋಗುತ್ತದೆ. ಮೊದಲು ಒಂದೇ ಧರ್ಮದವರಿರುತ್ತಾರೆ. ನೀವೀಗ ತಮ್ಮನ್ನು ನರಕವಾಸಿಗಳೆಂದು ತಿಳಿದುಕೊಳ್ಳುವುದಿಲ್ಲ, ಉಳಿದೆಲ್ಲರೂ ನರಕವಾಸಿಗಳಾಗಿದ್ದಾರೆ ಆದರೆ ತಮ್ಮನ್ನು ತಿಳಿದುಕೊಳ್ಳುವುದಿಲ್ಲ. ಈ ಸಮಯದಲ್ಲಿ ಎಲ್ಲರ ಚಹರೆಯಂತೂ ಮನುಷ್ಯರದಾಗಿದೆ ಆದರೆ ಗುಣಗಳು ಮಂಗನದಾಗಿದೆ. ದೊಡ್ಡ-ದೊಡ್ಡ ರಾಜರೂ ಸಹ ಲಕ್ಷ್ಮೀ-ನಾರಾಯಣರ ಚರಣಗಳಿಗೆ ಬಾಗುತ್ತಾರೆ. ಆದರೆ ಲಕ್ಷ್ಮೀ-ನಾರಾಯಣರು ಪತಿತರನ್ನು ಪಾವನ ಮಾಡುವವರಲ್ಲ ಅಥವಾ ಯಾರಾದರೂ ದುಃಖಿಯಾದಾಗ ಅವರ ಮೇಲೆ ದಯೆ ತೋರಿಸಲು ಅವರೇನೂ ದಯಾಹೃದಯಿಗಳಲ್ಲ. ದಯಾಹೃದಯಿ ತಂದೆಯು ಒಬ್ಬರೇ ಆಗಿದ್ದಾರೆ, ತಂದೆಯೇ ಬಂದು ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವೀಗ ದೇವತೆಗಳಾಗುತ್ತಿದ್ದೀರಿ. ಇದು ನರನಿಂದ ನಾರಾಯಣನಾಗುವ ಪಾಠಶಾಲೆಯಾಗಿದೆ, ರಾಜಯೋಗವಾಗಿದೆ. ಗೀತೆಯ ರಾಜಯೋಗವನ್ನು ಯಾರು ಕಲಿಸಿದರು ಎಂಬುದು ಋಷಿ ಮುನಿಗಳಿಗೂ ಗೊತ್ತಿಲ್ಲ. ಗೀತೆಯನ್ನು ಖಂಡನೆ ಮಾಡಿ ಬಿಟ್ಟಿದ್ದಾರೆ. ಕೃಷ್ಣನು ರಾಜಯೋಗವನ್ನು ಕಲಿಸಿದ್ದನೆಂದು ತಿಳಿಯುತ್ತಾರೆ. ಕೃಷ್ಣ ಭಗವಾನುವಾಚ – ಮನ್ಮನಾಭವ ಎಂದು ಹೇಳುತ್ತಾರೆ ಆದರೆ ಕೃಷ್ಣನಂತೂ ಪರಮಾತ್ಮನಲ್ಲ, ಸತ್ಯಯುಗದ ರಾಜಕುಮಾರನಾಗಿದ್ದಾನೆ. ಕೃಷ್ಣನೂ ಸಹ ಸಂಗಮಯುಗದಲ್ಲಿ ರಾಜಯೋಗವನ್ನು ಕಲಿತು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ ಆದರೆ ಅವನನ್ನೇ ಭಗವಂತನನ್ನಾಗಿ ಮಾಡಿ ಬಿಟ್ಟಿದ್ದಾರೆ. ಅನೇಕರು ಗೀತೆಯನ್ನು ಕೇಳುತ್ತಾರೆ ಆದರೆ ಗೀತೆಯ ಭಗವಂತ ಶಿವನಾಗಿದ್ದಾರೆ, ಕೃಷ್ಣನಲ್ಲ ಎಂಬುದು ಯಾರೊಬ್ಬರಿಗೂ ತಿಳಿದಿಲ್ಲ. ಎಲ್ಲರೂ ಒಂದೇ ಎಂದು ಹೇಳಿ ಬಿಡುತ್ತಾರೆ. ಈ ರೀತಿಯ ಮನುಷ್ಯರೊಂದಿಗೂ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಕೃಷ್ಣನು ಭಗವಂತನಾಗಿದ್ದಾನೆ, ದ್ವಾಪರದಿಂದ ಶಾಸ್ತ್ರಗಳು ರಚನೆಯಾಗಿದೆ ಎಂದು 63 ಜನ್ಮಗಳಿಂದಲೂ ತಿಳಿದುಕೊಳ್ಳುತ್ತಾ ಬಂದಿದ್ದಾರೆ ಅಂದಮೇಲೆ ಅವಶ್ಯವಾಗಿ ಮೊಟ್ಟ ಮೊದಲು ಗೀತೆಯೇ ರಚನೆಯಾಗಿರಬೇಕು. ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಜ್ಞಾನಮಾರ್ಗದ ಶಾಸ್ತ್ರವು ಒಂದೂ ಇಲ್ಲ, ಗೀತೆಯು ನಂಬರ್ವನ್ ಆಗಿದೆ ನಂತರದಲ್ಲಿ ಈ ವೇದ-ಉಪನಿಷತ್ತುಗಳು ಆಗಿವೆ. ಅವೂ ಸಹ ಗೀತೆಯ ಮರಿ ಮಕ್ಕಳಾಗಿವೆ. ಮನುಷ್ಯರು ಇವನ್ನು ಓದುತ್ತಾ-ಓದುತ್ತಾ ಕೆಳಗಿಳಿದು ಬಂದಿದ್ದಾರೆ. ಈಗ 84 ಜನ್ಮಗಳು ಮುಗಿಯಿತು, ಮತ್ತೆ ಮೊದಲ ನಂಬರಿಗೆ ಹೋಗಬೇಕಾಗಿದೆ. ನೀವೀಗ ಪುನಃ ಸತ್ಯಯುಗೀ ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿ ಓದಲು ಇಲ್ಲಿಗೆ ಬಂದಿದ್ದೀರಿ, ಎಲ್ಲರೂ ಲಕ್ಷ್ಮೀ-ನಾರಾಯಣ ಆಗುವುದಿಲ್ಲ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಆದರೆ ಯಾರು ರಾಜಧಾನಿಯನ್ನು ಸ್ಥಾಪನೆ ಮಾಡಿದರು ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಕಲಿಯುಗದಲ್ಲಿ ಇಷ್ಟೊಂದು ಮನುಷ್ಯರಿದ್ದಾರೆ, ಈಗ ತಿನ್ನುವುದಕ್ಕಾಗಿ ಆಹಾರವೂ ಸಿಗುವುದಿಲ್ಲ ನಂತರ ಸತ್ಯಯುಗದಲ್ಲಿ ಕೇವಲ ಲಕ್ಷ್ಮೀ-ನಾರಾಯಣರ ರಾಜಧಾನಿಯಿರುವುದು. ಇಲ್ಲಿ ನೋಡಿ ಎಷ್ಟೊಂದು ಧರ್ಮಗಳಿವೆ! ಸನ್ಮುಖದಲ್ಲಿ ಮಹಾಭಾರಿ ಮಹಾಭಾರತ ಯುದ್ಧವೂ ನಿಂತಿದೆ. ಆದರೂ ಮನುಷ್ಯರ ಕಣ್ಣುಗಳು ತೆರೆಯುತ್ತಿಲ್ಲ. ಈ ಮಹಾಭಾರಿ ಯುದ್ಧವು ಕಲ್ಪದ ಮೊದಲೂ ಆಗಿತ್ತು, ಅದರ ನಂತರ ಏನಾಯಿತು ಎಂಬುದನ್ನು ತಿಳಿದುಕೊಂಡಿಲ್ಲ. ಇವೆಲ್ಲಾ ಮಾತುಗಳನ್ನು ನೀವು ಬ್ರಾಹ್ಮಣ-ಬ್ರಾಹ್ಮಣಿಯರೇ ತಿಳಿದುಕೊಂಡಿದ್ದೀರಿ. ನಿಮ್ಮನ್ನು ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ಭಗವಂತನು ನಿಮಗೇ ಓದಿಸಿ ಈ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ ಅಂದಮೇಲೆ ಚೆನ್ನಾಗಿ ಓದಬೇಕಾಗಿದೆ. ಕೇವಲ ತಂದೆ ಮತ್ತು ಹೊಸ ಪ್ರಪಂಚವನ್ನು ನೆನಪು ಮಾಡಿರಿ ಆಗ ನೀವು ಹೊಸ ಪ್ರಪಂಚದಲ್ಲಿ ಹೊರಟು ಹೋಗುವಿರಿ. ಒಂದುವೇಳೆ ಚೆನ್ನಾಗಿ ಓದಿ-ಓದಿಸಿದ್ದೇ ಆದರೆ ರಾಜ-ರಾಣಿಯರಾಗಬಹುದು. ಯಾರೆಷ್ಟು ಆತ್ಮಿಕ ಸೇವೆ ಮಾಡುವರೋ ಅಷ್ಟು ಪಡೆಯುವರು. ನೀವು ಆತ್ಮಿಕ ಸಮಾಜ ಸೇವಕರಾಗಿದ್ದೀರಿ, ಇಡೀ ಪ್ರಪಂಚದವರು ದೈಹಿಕ ಸಮಾಜ ಸೇವಕರಾಗಿದ್ದಾರೆ. ನೀವಾತ್ಮರಿಗೇ ತಂದೆಯು ಪ್ರತಿನಿತ್ಯವೂ ಜ್ಞಾನವನ್ನು ತಿಳಿಸುತ್ತಾರೆ, ಆತ್ಮರ ಸೇವೆ ಮಾಡುತ್ತಾರಲ್ಲವೆ. ಇದಕ್ಕೆ ಆತ್ಮರ ಸೇವೆ ಎಂದು ಹೇಳಲಾಗುತ್ತದೆ, ಇದನ್ನು ಆತ್ಮಿಕತಂದೆಯೇ ಕಲಿಸುತ್ತಾರೆ. ಇದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಪಾಠಶಾಲೆಯಾಗಿದೆ. ಅವಶ್ಯವಾಗಿ ದೇವತೆಗಳಾಗುವಿರಿ, ಯಾವಾಗ ನೀವು ಓದಿ ತಯಾರಾಗಿ ಬಿಡುವಿರೋ ಆಗ ವಿನಾಶವು ಆರಂಭವಾಗುವುದು ನಂತರ ನೀವೂ ಸಹ ಹೊರಟು ಹೋಗುತ್ತೀರಿ. ರಾಮನೂ ಹೋದ, ರಾವಣನೂ ಹೋದ…. ಎಂದು ಹೇಳುತ್ತಾರಲ್ಲವೆ. ಕೇವಲ ಕೆಲವರೇ ಉಳಿದುಕೊಳ್ಳುತ್ತಾರೆ. ಅವರೂ ಸಹ ನಂತರ ಅದಲು-ಬದಲಾಗುತ್ತಾ ಇರುತ್ತಾರೆ. ಅನಂತರ ನೀವು ಸ್ವರ್ಗದಲ್ಲಿ ಬರುತ್ತೀರಿ, ನಿಮಗಾಗಿ ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ. ನೀವು ಸ್ವರ್ಗವಾಸಿಗಳಾಗಲು ಓದುತ್ತಿದ್ದೀರಿ. ಇದು ನರಕವಾಗಿದೆ, ನೀವೀಗ ಸಂಗಮದಲ್ಲಿದ್ದೀರಿ. ನೀವೀಗ ಬ್ರಾಹ್ಮಣ-ಬ್ರಾಹ್ಮಣಿಯರಾಗದಿದ್ದರೆ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆಸ್ತಿಯು ಬ್ರಾಹ್ಮಣರಿಗೇ ಸಿಗುತ್ತದೆ, ಯಾರು ಒಬ್ಬ ತಂದೆಯ ವಿನಃ ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡುವುದಿಲ್ಲ. ಉಳಿದವರು ಯಾರು ಅಲ್ಪಸ್ವಲ್ಪ ಕೇಳಿರುವರೋ ಅವರು ಪ್ರಜೆಗಳಲ್ಲಿ ಬರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಆತ್ಮೀಯ ಸಮಾಜ ಸೇವಕರಾಗಿ ಓದಬೇಕು ಮತ್ತು ಓದಿಸಬೇಕಾಗಿದೆ. ತಂದೆಯ ಜೊತೆ ಜೊತೆಗೆ ಬರಲಿರುವ ಹೊಸ ಪ್ರಪಂಚವನ್ನೂ ನೆನಪು ಮಾಡಬೇಕಾಗಿದೆ.

2. ತಂದೆಯ ಸಮಾನ ದಯಾಹೃದಯಿಗಳಾಗಿ ಎಲ್ಲರನ್ನೂ ಪಾರಸ ಬುದ್ಧಿಯವರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.

ವರದಾನ:-

ಹಳೆಯ ಪ್ರಪಂಚದ ಆಕರ್ಷಣಮಯ ದೃಶ್ಯ, ಅಲ್ಪಕಾಲದ ಸುಖದ ಸಾಧನಗಳನ್ನು ಉಪಯೋಗಿಸುತ್ತಾ ಅಥವಾ ನೋಡುತ್ತಾ ಇರುತ್ತೀರೆಂದರೆ, ಆ ಸಾಧನಗಳಲ್ಲಿ ವಿವಶರಾಗಿ ಬಿಡುತ್ತೀರಿ. ಸಾಧನಗಳ ಆಧಾರದ ಮೇಲೆ ಸಾಧನೆ ಈ ರೀತಿಯದು – ಹೇಗೆಂದರೆ ಮರಳುಗಾಡಿನ ತಳಪಾಯದಲ್ಲಿ ಕಟ್ಟಡ ಕಟ್ಟುವಂತೆ. ಆದ್ದರಿಂದ ಯಾವುದೇ ವಿನಾಶಿ ಸಾಧನಗಳ ಆಧಾರದ ಮೇಲೆ ಅವಿನಾಶಿ ಸಾಧನೆಯಿರಬಾರದು. ಸಾಧನವು ನಿಮಿತ್ತವಷ್ಟೇ ಮತ್ತು ಸಾಧನವು ನಿರ್ಮಾಣದ ಆಧಾರವಾಗಿದೆ. ಆದ್ದರಿಂದ ಸಾಧನೆಗೆ ಮಹತ್ವ ಕೊಡುತ್ತೀರೆಂದರೆ ಸಾಧನೆಯು ಸಿದ್ಧಿಯನ್ನು ಪ್ರಾಪ್ತಿ ಮಾಡಿಸುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top