06 November 2021 KANNADA Murli Today | Brahma Kumaris

Read and Listen today’s Gyan Murli in Kannada

November 5, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸಂಗಮಯುದಲ್ಲಿ ನಿಮಗೆ ತಂದೆಯ ಮೂಲಕ ಒಳ್ಳೆಯ ಬುದ್ಧಿ ಮತ್ತು ಶ್ರೇಷ್ಠ ಮತವು ಸಿಗುತ್ತದೆ, ಇದರಿಂದ ನೀವು ಬ್ರಾಹ್ಮಣರಿಂದ ದೇವತೆಗಳಾಗುತ್ತೀರಿ”

ಪ್ರಶ್ನೆ:: -

ನೀವು ಮಕ್ಕಳು ಯಾವ ಮಸ್ತಿಯಲ್ಲಿದ್ದಾಗ ಚಲನೆಯು ಬಹಳ ರಾಯಲ್ ಆಗಿರುವುದು?

ಉತ್ತರ:-

ನಿಮಗೆ ಜ್ಞಾನದ ನಶೆಯೇರಿರಬೇಕು. ಓಹೋ! ನಾವು ಭಗವಂತನ ಸನ್ಮುಖದಲ್ಲಿ ಕುಳಿತಿದ್ದೇವೆ, ನಾವು ಇಲ್ಲಿಂದ ಹೋಗಿ ವಿಶ್ವದ ಮಾಲೀಕರು, ಕಿರೀಟಧಾರಿಗಳಾಗುತ್ತೇವೆ. ಈ ನಶೆಯಲ್ಲಿದ್ದಾಗ ಚಲನೆಯು ಸ್ವತಹ ರಾಯಲ್ ಆಗಿ ಬಿಡುವುದು. ಬಾಯಿಂದ ಮಧುರ ಮಾತುಗಳೇ ಹೊರ ಬರುವವು. ಪರಸ್ಪರ ಬಹಳ ಪ್ರೀತಿಯಿರುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸಭೆಯಲ್ಲಿ ಜ್ಯೋತಿ ಬೆಳಗಿತು….

ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು, ಆತ್ಮಿಕ ಮಕ್ಕಳು ಬಂದು ಬ್ರಾಹ್ಮಣರಾಗಿ ಆತ್ಮಿಕ ತಂದೆಯಿಂದ ಇದನ್ನು ಅವಶ್ಯವಾಗಿ ತಿಳಿದುಕೊಂಡಿದ್ದೀರಿ – ನಾವು ಸಂಗಮಯುಗೀ ಬ್ರಾಹ್ಮಣರಾಗಿದ್ದೇವೆ, ತಂದೆಯು ನಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ. ಈಗ ನಾವು ತಿಳಿದುಕೊಂಡಿದ್ದೇವೆ – ಇದು ಸಂಗಮಯುಗವಾಗಿದೆ, ಮನುಷ್ಯರು ಯಾರೆಲ್ಲಾ ಪತಿತ ಭ್ರಷ್ಟಾಚಾರಿ ಆಗಿದ್ದಾರೆಯೋ ಅವರು ಮತ್ತೆ ಪಾವನರಾಗಿ ಭವಿಷ್ಯದಲ್ಲಿ ಪಾವನ ಶ್ರೇಷ್ಠಾಚಾರಿ ಪುರುಷೋತ್ತಮರೆಂದು ಕರೆಸಿಕೊಳ್ಳುತ್ತಾರೆ. ಈ ಲಕ್ಷ್ಮೀ-ನಾರಾಯಣರು ಎಂದೋ ಪುರುಷಾರ್ಥ ಮಾಡಿ ಪುರುಷೋತ್ತಮರಾಗಿದ್ದಾರಲ್ಲವೇ. ಇವರ ಚರಿತ್ರೆಯೂ ಅವಶ್ಯವಾಗಿ ಬೇಕು. ಈ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಸ್ಥಾಪನೆಯಾಯಿತು? ಕಲಿಯುಗದಲ್ಲಾಗಲಿ, ಸತ್ಯಯುಗದಲ್ಲಾಗಲಿ ಆಗಲಿಲ್ಲ. ಸ್ವರ್ಗ ಸ್ಥಾಪನೆಯಾಗುವುದೇ ಸಂಗಮಯುಗದಲ್ಲಿ. ಇಷ್ಟು ವಿಸ್ತಾರದಲ್ಲಿ ಯಾರೂ ಹೋಗುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ – ಇದು ಸಂಗಮಯುಗವಾಗಿದೆ. ಕಲಿಯುಗದ ನಂತರ ಸತ್ಯಯುಗ ಹೊಸ ಪ್ರಪಂಚವು ಬರುತ್ತದೆ ಅಂದಮೇಲೆ ಅವಶ್ಯವಾಗಿ ಸಂಗಮಯುಗವು ಇರುವುದು. ನಂತರ ಹೊಸ ಪ್ರಪಂಚದಲ್ಲಿ ಹೊಸ ರಾಜ್ಯವಿರುತ್ತದೆ. ಬುದ್ಧಿ ಓಡಿಸಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ, ತಂದೆಯ ಮೂಲಕ ನಮಗೆ ಒಳ್ಳೆಯ ಬುದ್ಧಿ ಮತ್ತು ಶ್ರೀಮತ ಸಿಗುತ್ತಿದೆ. ಹೇ ಈಶ್ವರ, ಇವರಿಗೆ ಸದಾ ಸುಮತ ಅಥವಾ ಶ್ರೇಷ್ಠ ಮತವನ್ನು ಕೊಡಿ ಎಂದು ಹೇಳುತ್ತಾರೆ. ಅವರು ಇಡೀ ಜಗತ್ತಿನ ತಂದೆಯಾಗಿದ್ದಾರೆ. ಎಲ್ಲರಿಗೆ ಒಳ್ಳೆಯ ಮತವನ್ನು ಕೊಡುವವರಾಗಿದ್ದಾರೆ. ಸಂಗಮಯುಗದಲ್ಲಿ ಬಂದು ತಮ್ಮ ಮಕ್ಕಳಿಗೆ ಒಳ್ಳೆಯ ಮತವನ್ನು ಕೊಡುತ್ತಾರೆ. ಯಾರನ್ನು ಪಾಂಡವ ಸಂಪ್ರದಾಯ ಮತ್ತು ದೈವೀ ಸಂಪ್ರದಾಯದವರೆಂದು ಬರೆದಿದ್ದಾರೆ. ಬ್ರಾಹ್ಮಣ ಸಂಪ್ರದಾಯ ಮತ್ತು ದೈವೀ ಸಂಪ್ರದಾಯವನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮನ ಮುಖಾಂತರವೇ ಬ್ರಾಹ್ಮಣ ಸಂಪ್ರದಾಯದವರಾಗುತ್ತಾರೆ. ಪರಮಪಿತ ಪರಮಾತ್ಮನೇ ಬ್ರಹ್ಮನ ಮೂಲಕ ಈ ರಚನೆಯನ್ನು ರಚಿಸುತ್ತಾರೆ. ಪ್ರಜಾಪಿತನು ಇರುವುದರಿಂದಲೇ ಇಷ್ಟೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ. ಎಲ್ಲಿಯವರೆಗೆ ಯಾರಾದರೂ ಬಂದು ನೀವು ಬ್ರಾಹ್ಮಣರ ಮೂಲಕ ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸದ್ಗತಿಯಾಗಲು ಹೇಗೆ ಸಾಧ್ಯ! ನಿಮ್ಮ ಬಳಿ ಅನೇಕರು ಬರುತ್ತಾರೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಸನ್ಯಾಸಿಗಳೂ ಬರುತ್ತಾರೆ, ಅನ್ಯ ಧರ್ಮದವರೂ ಬರುತ್ತಾರೆ. ಸ್ವರ್ಗದಲ್ಲಿ ಅವರ ಪಾತ್ರವಿಲ್ಲ ಆದರೆ ತಂದೆಯು ಬಂದಿದ್ದಾರೆಂದು ಸಂದೇಶವನ್ನಂತೂ ಎಲ್ಲರಿಗೂ ಕೊಡಬೇಕಾಗಿದೆ. ಈ ಸಮಯದಲ್ಲಿ ಹಿಂದೂಗಳೆಂದು ಕರೆಸಿಕೊಳ್ಳುವವರು ಯಾರೂ ಸಹ ದೇವಿ-ದೇವತಾ ಧರ್ಮವನ್ನೇ ತಿಳಿದುಕೊಂಡಿಲ್ಲ. ಅವರು ಯಾರು ಮೊದಲು ಸತೋಪ್ರಧಾನರಾಗಿದ್ದರೋ ಅವರೇ ತಮೋದಲ್ಲಿ ಬರುವ ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ರಾವಣ ರಾಜ್ಯವು ಇಲ್ಲಿಯೇ ಆಗುತ್ತದೆ ಮತ್ತು ಪರಮಪಿತ ಪರಮಾತ್ಮ ಯಾರಿಗೆ ರಾಮನೆಂದೂ ಹೇಳುತ್ತಾರೆ ಅವರ ಜನ್ಮವೂ ಇಲ್ಲಿಯೇ ಆಗುತ್ತದೆ. ಪತಿತ-ಪಾವನ ಸೀತಾರಾಮ ಎಂದು ಹಾಡುತ್ತಾರೆ ಆದರೆ ಪತಿತರನ್ನಾಗಿ ಯಾರು ಮಾಡಿದರು, ರಾವಣ ಯಾರು? ಪತಿತ-ಪಾವನ ತಂದೆಯೆಂದು ಏಕೆ ಕರೆಯುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮಲ್ಲಿರುವ ಪಂಚವಿಕಾರಗಳೇ ರಾವಣನೆಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಯಾರಲ್ಲಿ ಪಂಚ ವಿಕಾರಗಳಿಲ್ಲವೋ ಅವರು ರಾಮ ಸಂಪ್ರದಾಯದವರಾಗಿದ್ದಾರೆ. ಈಗ ರಾಮ ರಾಜ್ಯವಿಲ್ಲ ಆದ್ದರಿಂದ ಹೊಸ ಪ್ರಪಂಚ, ಹೊಸ ಪವಿತ್ರ ರಾಜ್ಯವು ಬೇಕೆಂದು ಎಲ್ಲರೂ ಬಯಸುತ್ತಾರೆ. ಶಿವ ತಂದೆಗೆ ರಾಮನೆಂದು ಹೇಳಲಾಗುತ್ತದೆ ಆದರೆ ಅವರು ತ್ರೇತಾಯುಗದ ರಾಮನನ್ನೇ ಪರಮಾತ್ಮನೆಂದು ತಿಳಿದುಕೊಂಡಿದ್ದಾರೆ ಆದ್ದರಿಂದ ಶಿವ ತಂದೆಯನ್ನು ಮರೆತು ಬಿಟ್ಟಿದ್ದಾರೆ. ನೀವು ತಿಳಿಸಬಹುದು – ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಸೀತೆಯ ಅಪಹರಣವಾಯಿತೆಂದು ಬರೆದಿದ್ದಾರೆ ಆದರೆ ರಾಮನ ರಾಣಿಯಾದ ಸೀತೆಯನ್ನು ಯಾರಾದರೂ ಅಪಹರಿಸಿ ತೆಗೆದುಕೊಂಡು ಹೋಗಲು ಸಾಧ್ಯವೇ! ಅನೇಕ ಶಾಸ್ತ್ರಗಳಿವೆ, ಮುಖ್ಯವಾದ ಶಾಸ್ತ್ರವು ಗೀತೆಯಾಗಿದೆ. ಬ್ರಹ್ಮನ ಮೂಲಕ ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದ ಸ್ಥಾಪನೆ ಮಾಡುತ್ತಾರೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ ಅಂದಮೇಲೆ ಪ್ರಜಾಪಿತನು ಇಲ್ಲಿಯೇ ಬೇಕಲ್ಲವೆ. ಬ್ರಹ್ಮನಿಗೆ ಇಷ್ಟೊಂದು ಮಂದಿ ಮಕ್ಕಳಿದ್ದಾರೆ ಅಂದಮೇಲೆ ಇವರು ಮುಖವಂಶಾವಳಿಯಾಗಿದ್ದಾರೆ. ಇಷ್ಟು ಜನ ಕುಖವಂಶಾವಳಿ ಆಗಿರಲು ಸಾಧ್ಯವಿಲ್ಲ. ಸರಸ್ವತಿಯೂ ಸಹ ಮುಖವಂಶಾವಳಿಯಾಗಿದ್ದಾರೆ. ಆದ್ದರಿಂದ ಬ್ರಹ್ಮನ ಸ್ತ್ರೀಯಾಗಲು ಸಾಧ್ಯವಿಲ್ಲ. ಈಗ ತಂದೆಯು ಹೇಳುತ್ತಾರೆ – ಬ್ರಹ್ಮನ ಮುಖದ ಮೂಲಕ ನೀವು ಬ್ರಾಹ್ಮಣರಾಗುತ್ತೀರಿ, ನನ್ನ ಮಕ್ಕಳಾಗುತ್ತೀರಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಶಿವ ತಂದೆಗೆ ಎಷ್ಟೊಂದು ಮಹಿಮೆಯಿದೆ! ತಂದೆಯು ಪತಿತ-ಪಾವನ, ಮುಕ್ತಿದಾತನೂ ಆಗಿದ್ದಾರೆ, ಇದನ್ನು ಎಲ್ಲರೂ ಹಾಡುತ್ತಾರೆ ಆದರೆ ತಿಳಿದುಕೊಂಡಿಲ್ಲ ಆದ್ದರಿಂದ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ – ಅವರು ಪತಿತ-ಪಾವನನಾಗಿದ್ದಾರೆ, ಗೀತೆಯ ಭಗವಂತನೂ ಆಗಿದ್ದಾರೆ. ನಿರಾಕಾರ ಶಿವ ತಂದೆಯು ಅವಶ್ಯವಾಗಿ ಬಂದು ಜ್ಞಾನವನ್ನು ತಿಳಿಸಿರಬೇಕು. ಈಗ ಯಾವ ಶರೀರದ ಮೂಲಕ ಜ್ಞಾನವನ್ನು ತಿಳಿಸುತ್ತಾರೆಯೋ ಅವರಿಗೆ ಬ್ರಹ್ಮನೆಂದು ಹೆಸರನ್ನು ಇಟ್ಟಿದ್ದಾರೆ, ಇಲ್ಲದಿದ್ದರೆ ಬ್ರಹ್ಮನೆಲ್ಲಿಂದ ಬಂದರು! ಬ್ರಹ್ಮನ ತಂದೆ ಯಾರು? ಬ್ರಹ್ಮಾ, ವಿಷ್ಣು, ಶಂಕರನ ರಚಯಿತ ಯಾರು? ಇದು ಗುಹ್ಯಪ್ರಶ್ನೆಯಾಗಿದೆ. ತ್ರಿಮೂರ್ತಿ ದೇವತೆಗಳೆಂದು ಹೇಳುತ್ತಾರೆ ಆದರೆ ಇವರು ಎಲ್ಲಿಂದ ಬಂದರು! ಈಗ ತಂದೆಯು ತಿಳಿಸುತ್ತಾರೆ, ಇವರಿಗೂ ರಚಯಿತ ಶ್ರೇಷ್ಠ್ಠಾತಿ ಶ್ರೇಷ್ಠ ಭಗವಂತನೇ ಆಗಿದ್ದಾರೆ. ಅವರಿಗೆ ಶಿವನೆಂದು ಹೇಳುತ್ತಾರೆ. ಈ ಮೂವರು ದೇವತೆಗಳು ಸೂಕ್ಷ್ಮ ಶರೀರಧಾರಿಗಳಾಗಿದ್ದಾರೆ, ಇವರಲ್ಲಿ ಮೂಳೆ ಮಾಂಸಗಳಿಲ್ಲ ಆದರೆ ಇದನ್ನು ಮಂದ ಬುದ್ಧಿಯವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದರಬಗ್ಗೆ ತಿಳಿಸಬೇಕಾಗಿದೆ – ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ, ಅವರು ಬ್ರಹ್ಮನ ಮೂಲಕ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರೆಂದು ಹಾಡುತ್ತಾರೆ ನಂತರ ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ತೋರಿಸುತ್ತಾರೆ. ಎಂದಾದರೂ ನಾಭಿಯಿಂದ ಮಗುವಾಗುತ್ತದೆಯೇ? ಈಗ ತಂದೆಯು ಕುಳಿತು ಎಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ ಆದರೆ ಇದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬೇಕಲ್ಲವೆ.

ನೀವು ತಿಳಿದುಕೊಂಡಿದ್ದೀರಿ – ಆತ್ಮವನ್ನೇ ಪಾಪಾತ್ಮ, ಪುಣ್ಯಾತ್ಮ ಎಂದು ಹೇಳಲಾಗುತ್ತದೆ. ಪವಿತ್ರ ಆತ್ಮವೇ ಸೋ ಪರಮಾತ್ಮನೆಂದಲ್ಲ. ಪರಮಾತ್ಮ ತಂದೆಯು ಸದಾ ಪಾವನನಾಗಿದ್ದಾರೆ. ತಮೋಪ್ರಧಾನರಿಗೆ ಪತಿತರೆಂದು ಹೇಳಲಾಗುತ್ತದೆ, ಸತ್ಯಯುಗದಲ್ಲಿ ಸುಖವಿದ್ದಾಗ ದುಃಖದ ಹೆಸರೂ ಇರಲಿಲ್ಲ, ಮನುಷ್ಯರು ಈಗಲೇ ಸ್ವರ್ಗವಿದೆ ಎಂದು ಹೇಳುತ್ತಾರೆ, ಏನನ್ನೂ ತಿಳಿದುಕೊಂಡಿಲ್ಲ ಆದರೆ ಅಂತಿಮದಲ್ಲಿ ಬಂದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ – ನಾವು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ಮತ್ತ್ಯಾರೂ ವಿಶ್ವದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಇಡೀ ವಿಶ್ವದ ಮೇಲೆ ರಾಜ್ಯಭಾರವಿರುತ್ತದೆ, ಕಲಿಯುಗದಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ಇದೂ ಸಹ ಯಾರಿಗೂ ತಿಳಿದಿಲ್ಲ. ಗೀತೆಯಲ್ಲಿಯೂ ಇದೆ – ಮಹಾಭಾರಿ ಯುದ್ಧವಾಗಿತ್ತು, ಆಗಲೇ ಎಲ್ಲಾ ಧರ್ಮದವರು ವಿನಾಶವಾಗುತ್ತಾರೆ ಎಂದು. ಹೇಗೆ ಒಂದು ವಟವೃಕ್ಷ (ಬಿದಿರು) ವಿರುತ್ತದೆ, ಅದು ಯಾವಾಗ ಒಣಗಿ ಹೋಗುತ್ತದೆಯೋ ಆಗ ಪರಸ್ಪರ ಉಜ್ಜಿದಾಗ ಅಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಮತ್ತು ಇಡೀ ಅರಣ್ಯವೇ ಸುಟ್ಟು ಹೋಗುತ್ತದೆ. ಈಗ ಈ ಮನುಷ್ಯ ಸೃಷ್ಟಿ ವೃಕ್ಷವೂ ಸಹ ಜಡಜಡೀಭೂತವಾಗಿ ಬಿಟ್ಟಿದೆ. ಇದಕ್ಕೂ ಈಗ ಬೆಂಕಿಬೀಳಲಿದೆ. ಎಲ್ಲರೂ ಪರಸ್ಪರ ಹೊಡೆದಾಡಿ ಸಮಾಪ್ತಿಯಾಗುತ್ತಾರೆ. ಬೆಂಕಿಯ ಸಾಮಾನುಗಳನ್ನು ತಯಾರಿಸುತ್ತಲೇ ಇರುತ್ತಾರೆ, ಈಗ ಈ ಅಣು ಬಾಂಬುಗಳ ಮೂಲಕ ಬೆಂಕಿ ಬೀಳಲಿದೆ. ಈ ರಹಸ್ಯವು ಅವರಿಗೆ ಗೊತ್ತಿಲ್ಲ. ಈಗ ಕಲಿಯುಗ ನರಕವು ಬದಲಾಗಿ ಸ್ವರ್ಗವಾಗುವುದಿದೆ. ಈ ಜ್ಞಾನದಲ್ಲಿ ಬಹಳ ನಶೆಯಿರಬೇಕು. ತನ್ನನ್ನು ನೋಡಿಕೊಳ್ಳಿ – ನಾವು ಆ ಖುಷಿ ಮತ್ತು ನಶೆಯಲ್ಲಿ ಇರುತ್ತೇವೆಯೇ? ನಾವು ಪರಮಾತ್ಮನ ಸಂತಾನರಾಗಿದ್ದೇವೆ, ಅವರಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೇವೆ, ಪರಸ್ಪರ ಮಾತನಾಡುವುದೂ ಸಹ ಘನತೆಯಿಂದ ಇರಬೇಕು, ಇಲ್ಲಿಂದಲೇ ಎಲ್ಲವನ್ನೂ ಕಲಿಯಬೇಕಾಗಿದೆ ನಂತರ ಅದೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ. ಅತಿ ಮಧುರರಾಗಬೇಕಾಗಿದೆ. ಬಹಳ ನಶೆಯಿರಬೇಕು. ನಾವು ಶಿವ ತಂದೆಗೆ ಮಕ್ಕಳಾಗಿದ್ದೇವೆ, ದೇವತಾ ಪದವಿಯನ್ನು ಪಡೆಯುವವರಾಗಿದ್ದೇವೆ ಅಂದಮೇಲೆ ಪರಸ್ಪರ ಎಷ್ಟು ಪ್ರೀತಿಯಿಂದ ಮಾತನಾಡಬೇಕು ಆದರೆ ಮಕ್ಕಳ ಬಾಯಿಂದ ಹೂವಿನಂತಹ ಮಾತುಗಳು ಹೊರ ಬರುವುದಿಲ್ಲ. ನೀವು ಎಷ್ಟು ಶ್ರೇಷ್ಠರಾಗಿದ್ದಿರಿ, ಇದು ನಿಮಗೆ ನೆನಪಿರಲಿ – ನಾವು ಶಿವ ತಂದೆಯ ಸಂತಾನರಾಗಿದ್ದೇವೆ ನಂತರ ಸತ್ಯಯುಗದಲ್ಲಿ ಮಹಾರಾಜನಾಗುತ್ತೇವೆ ಅಂದರೆ ನಾವು ವಿಶ್ವದ ರಾಜಕುಮಾರರಾಗುತ್ತೇವೆ.

ನೀವು ಮಕ್ಕಳಿಗೆ ಆಂತರಿಕ ಖುಷಿಯಿರಬೇಕು – ನಾವು ಪರಮಾತ್ಮನ ಸನ್ಮುಖದಲ್ಲಿ ಕುಳಿತಿದ್ದೇವೆ, ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಅವರ ಶ್ರೀಮತದಂತೆ ನಡೆಯಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ – ತಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ರಾಜಧಾನಿಯಲ್ಲಿ ಎಲ್ಲರೂ ಬೇಕಾಗಿದೆ ಆದರೆ ನೀವು ಮಕ್ಕಳ ಬಾಯಿಂದ ಸದಾ ರತ್ನಗಳೇ ಹೊರ ಬರಬೇಕು. ತಂದೆಯು ರೂಪನೂ ಆಗಿದ್ದಾರೆ, ಭಸಂತನೂ ಆಗಿದ್ದಾರೆ. ಕಥೆಗಳೆಲ್ಲವೂ ಈಗಿನದಾಗಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರು ಜ್ಞಾನದ ಮಳೆಯನ್ನು ಸುರಿಸುತ್ತಾರೆ. ಬಾಕಿ ಆ ಇಂದ್ರ ದೇವತೆಯು ಮಳೆ ಸುರಿಸುತ್ತಾನೆ ಎಂಬ ಮಾತಿಲ್ಲ. ಈ ಮೋಡಗಳು ಸ್ವಾಭಾವಿಕವಾಗಿ ಮಳೆಯನ್ನು ಸುರಿಸುತ್ತದೆ. ಸತ್ಯಯುಗದಲ್ಲಿ ಈ ಪಂಚತತ್ವಗಳೂ ಸಹ ನಿಮ್ಮ ಗುಲಾಮನಾಗಿ ಬಿಡುತ್ತವೆ ಮತ್ತು ಇಲ್ಲಿ ಮನುಷ್ಯರಿಗೆ ಎಲ್ಲರಿಗೆ ಗುಲಾಮರಾಗಿಬಿಟ್ಟಿದ್ದಾರೆ. ಇಲ್ಲಿ ಪ್ರತೀ ಮಾತಿನಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಅಲ್ಲಿ ಎಲ್ಲಾ ಮಾತುಗಳು ಸ್ವತಹವಾಗಿ ಬಿಡುತ್ತವೆ ಅಂದಾಗ ಮಕ್ಕಳು ಸದಾ ತಂದೆಯ ನೆನಪಿನಲ್ಲಿರಬೇಕು. ಇದರಿಂದಲೇ ಸದಾ ಖುಷಿಯ ನಶೆಯೇರಿರುವುದು. ಹೇಗೆ ವಿಜ್ಞಾನಿಗಳೂ ಸಹ ಮಂಥನ ಮಾಡುತ್ತಾರೆ, ನೀವು ಮಕ್ಕಳು ವಾಣಿಯ ಮಂಥನ ಮಾಡಬೇಕಾಗಿದೆ. ವಾಣಿಯ ಪ್ರವಾಹವು ಕೆಲಕೆಲವೊಮ್ಮೆ ಬಹಳ ಚೆನ್ನಾಗಿರುತ್ತದೆ. ಕೆಲವೊಮ್ಮೆ ಕಡಿಮೆ. ಇದಕ್ಕೆ ಮಂಥನ ಮಾಡುವುದು ಎಂದು ಹೇಳಲಾಗುತ್ತದೆ. ಮಕ್ಕಳು ತಂದೆಯ ಸ್ಥಿತಿಯನ್ನು ನೋಡುತ್ತಿದ್ದೀರಿ ಮತ್ತು ತಂದೆಯೂ ಸಹ ತಮ್ಮ ಅನುಭವವನ್ನು ತಿಳಿಸುತ್ತಾರೆ ಅಂದಾಗ ಕೆಲವೊಮ್ಮೆ ವಾಣಿಯ ಉಮ್ಮಂಗವು ಬಹಳ ಚೆನ್ನಾಗಿರುತ್ತದೆ, ಕೆಲವೊಮ್ಮೆ ಕಡಿಮೆ. ಕೆಲವೊಮ್ಮೆ ಬಹಳಷ್ಟು ಅಂಶಗಳು ಹೊರ ಬರುತ್ತವೆ, ತಂದೆಯೂ ಸಹ ಸಹಯೋಗಿ ಆಗಿ ಬಿಡುತ್ತಾರೆ. ಇದನ್ನು ನೀವೂ ಸಹ ಅನುಭವ ಮಾಡುತ್ತೀರಿ, ತಂದೆಯು ಎಂದೂ ಕೈಯಲ್ಲಿ ಮುರುಳಿಯನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳು ಮಾಸ ಪತ್ರಿಕೆಯನ್ನು ಬರೆಯುತ್ತೀರಿ, ತಂದೆಯು ಕೆಲಕೆಲವೊಮ್ಮೆ ನೋಡುತ್ತಾರೆ – ಮಕ್ಕಳು ಎಂದೂ ತಪ್ಪು ಮಾಡುವುದಿಲ್ಲವೆ? ಮ್ಯಾಗಜಿನ್ ನಲ್ಲಿಯೂ ಒಳ್ಳೊಳ್ಳೆಯ ಅಂಶಗಳು ಬರುತ್ತವೆ ಮತ್ತು ಎಲ್ಲಾ ಕಡೆಯೂ ಹರಡುತ್ತದೆ. ಯಾರಿಗಾದರೂ ಮುರುಳಿಯು ಸಿಗುವುದಿಲ್ಲವೆಂದರೆ ತಂದೆಯು ಹೇಳುತ್ತಾರೆ – ರಚಯಿತ ಮತ್ತು ರಚನೆಯ ಜ್ಞಾನವನ್ನು 7 ದಿನಗಳಲ್ಲಿ ತಿಳಿದುಕೊಂಡಿದ್ದೀರಲ್ಲವೆ, ಇನ್ನೇನು ಬೇಕು? ಬಾಕಿ 5 ವಿಕಾರಗಳನ್ನು ಭಸ್ಮ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ, ಮತ್ತ್ಯಾವುದೇ ಕಷ್ಟವಿಲ್ಲ.

ನೀವು ಮಕ್ಕಳು ಯಾವುದೇ ಸತ್ಸಂಗದಲ್ಲಿ ಹೋಗಬಲ್ಲಿರಿ. ಸೇವೆ ಮಾಡುವ ಉಮ್ಮಂಗ ಬರಬೇಕು. ಯಾವಾಗ ಸರ್ವ ಧರ್ಮದವರು ಒಟ್ಟಿಗೆ ಸೇರುತ್ತಾರೆಯೋ ಆಗ ತಿಳಿಸಿರಿ – ಪ್ರತಿಯೊಬ್ಬರ ಧರ್ಮವೂ ಬೇರೆ-ಬೇರೆಯಾಗಿದೆ. ನಾವು ಸಹೋದರ-ಸಹೋದರರೆಂದು ಹೇಳುತ್ತಾರೆ ಆದರೆ ಸೇರಿ ಒಂದಾಗುವುದಿಲ್ಲ. ಇದು ಕೇವಲ ಹೇಳಿಕೆಗೆ ಮಾತ್ರವಿದೆ. ತಂದೆಯು ತಿಳಿಸುತ್ತಾರೆ – ನಾನು ಬಂದು ಬ್ರಾಹ್ಮಣರನ್ನಾಗಿ ಮಾಡಿ ನಂತರ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಅಲ್ಲಿ ಮತ್ತ್ಯಾವುದೇ ಧರ್ಮವಿರುವುದಿಲ್ಲ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಗೀತೆಯಲ್ಲಿಯೂ ಇದರ ವರ್ಣನೆ ಮಾಡಿದ್ದಾರೆ, ಇದೊಂದೇ ವಿದ್ಯೆಯಾಗಿದೆ ಓದಿಸುವವರು ಒಬ್ಬರೇ ಆಗಿದ್ದಾರೆ. ಯಾವಾಗ ಜ್ಞಾನವು ಪೂರ್ತಿಯಾಗುವುದು ಆಗ ನಾನು ಹೊರಟು ಹೋಗುವೆನು. ನಾನು ಕಲಿಯುಗದ ಅಂತಿಮದಲ್ಲಿಯೇ ಜ್ಞಾನವನ್ನು ತಿಳಿಸಬೇಕಾಗಿದೆ, ನಾನು ಕಲ್ಪ-ಕಲ್ಪವೂ ಬರಬೇಕಾಗಿದೆ, ಇದರಲ್ಲಿ ಒಂದು ಕ್ಷಣವೂ ಹೆಚ್ಚು ಕಡಿಮೆಯಾಗುವುದಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಯಾವಾಗ ಜ್ಞಾನವು ಪೂರ್ಣವಾಗುವುದೋ ಆಗ ಕರ್ಮಾತೀತ ಸ್ಥಿತಿಯಲ್ಲಿ ಹೊರಟು ಹೋಗುವರು ನಂತರ ವಿನಾಶವಾಗುವುದು. ದಿನ-ಪ್ರತಿದಿನ ನಿಮ್ಮ ಸೇವೆಯು ಹೆಚ್ಚುತ್ತಾ ಹೋಗುವುದು. ಇಲ್ಲಂತೂ ಯಾರಲ್ಲಿಯೂ ಪವಿತ್ರತೆಯೂ ಇಲ್ಲ, ದೈವೀ ಗುಣಗಳ ಧಾರಣೆಯೂ ಇಲ್ಲ. ಅಲ್ಲಿ ಪವಿತ್ರತೆಯ ಅಂತರ ನೋಡಿ, ಎಷ್ಟ್ಟೊಂದಿದೆ! ನೀವೀಗ ಸಂಗಮದಲ್ಲಿ ಕುಳಿತಿದ್ದೀರಿ, ಇದೇ ಪುರುಷೋತ್ತಮ ಯುಗವಾಗಿದೆ, ನೀವೀಗ ಪುರುಷೋತ್ತಮರಾಗುತ್ತಿದ್ದೀರಿ ಆದರೆ ಆ ಶೌರ್ಯ, ಆ ಚಲನೆಯೂ ಬೇಕಲ್ಲವೆ. ಎಂದೂ ಮುಖದಿಂದ ಕಲ್ಲುಗಳು ಬರಬಾರದು. ರತ್ನಗಳೇ ಹೊರ ಬರಬೇಕು. ನೀವೀಗ ದೇವತೆಗಳಂತೆ ಹೂಗಳಾಗುತ್ತಿದ್ದೀರಿ. ಭಗವಂತನು ಬಂದು ಭಗವಾನ್-ಭಗವತಿಯರನ್ನಾಗಿ ಮಾಡುತ್ತಾರೆ. ದೇವತೆಗಳಿಗೇ ಭಗವಾನ್-ಭಗವತಿಯೆಂದು ಹೇಳುತ್ತಾರೆ ಆದರೆ ಈ ರೀತಿ ಯಾರು ಮಾಡುತ್ತಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿ ರಚಯಿತ ಮತ್ತು ರಚನೆಯ ಸಂಪೂರ್ಣ ಜ್ಞಾನವಿದೆ ಅಂದಮೇಲೆ ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಅನೇಕರು ಬರುತ್ತಾ ಇರುತ್ತಾರೆ. ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಮಾಯೆಯ ಬಿರುಗಾಳಿಗಳು ಮಕ್ಕಳಿಗೇ ಬರುತ್ತವೆ. ಕೆಲವೊಮ್ಮೆ ಬಿರುಗಾಳಿಗಳು ಬಂದಾಗ ಕೆಳಗೆ ಬಿದ್ದು ಮೂಳೆಗಳು ಪುಡಿ ಪುಡಿಯಾಗುತ್ತವೆ ಅಂದರೆ ನಡೆಯುತ್ತಾ-ನಡೆಯುತ್ತಾ ಕೆಲವರು ಡಿಸ್ಸರ್ವೀಸ್ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಯಾವುದೇ ಛೀ ಛೀ ಕೆಲಸ ಮಾಡಬೇಡಿ, ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ, ಅವರು ಕುಖವಂಶಾವಳಿಯಾಗಿದ್ದಾರೆ. ಎಷ್ಟೊಂದು ಅಂತರವಿದೆ! ಅವರು ತೀರ್ಥ ಯಾತ್ರೆಗಳಿಗೆ ಕರೆದುಕೊಂಡು ಹೋಗುತ್ತಾರೆ, ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ನೀವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಇದೂ ಸಹ ಕೆಲವರಲ್ಲಿ ಅರ್ಥ ಮಾಡಿಕೊಳ್ಳುವ ಬುದ್ಧಿಯಿಲ್ಲ- ನಾವೂ ಬ್ರಾಹ್ಮಣರು, ಅವರೂ ಬ್ರಾಹ್ಮಣರಾಗಿದ್ದಾರೆ ಆದರೆ ಸತ್ಯ ಬ್ರಾಹ್ಮಣರು ಯಾರು? ಆ ಬ್ರಾಹ್ಮಣರು ತಮ್ಮನ್ನು ಬ್ರಹ್ಮಾಕುಮಾರರೆಂದು ಕರೆಸಿಕೊಳ್ಳುವುದಿಲ್ಲ, ನೀವು ತಮ್ಮನ್ನು ಬ್ರಹ್ಮಾಕುಮಾರರೆಂದು ಕರೆಸಿಕೊಳ್ಳುತ್ತೀರಿ ಅಂದಮೇಲೆ ಅವಶ್ಯವಾಗಿ ಬ್ರಹ್ಮನೂ ಇರುವರು ಆದರೆ ಅವರ ಬುದ್ಧಿಯಲ್ಲಿ ಈ ಮಾತುಗಳು ಕೇಳಲು ಬರುವುದೇ ಇಲ್ಲ. ತಂದೆಯು ಕಲ್ಪ-ಕಲ್ಪವೂ ಬಂದು ನೀವು ಮಕ್ಕಳಿಗೆ ಈ ಮಾತುಗಳನ್ನು ತಿಳಿಸುತ್ತಾರೆ – ನೀವು ಬ್ರಹ್ಮನ ಸಂತಾನರು ಬ್ರಾಹ್ಮಣರು ಎಲ್ಲರೂ ಸಹೋದರ-ಸಹೋದರರಾಗಿದ್ದೀರಿ ಅಂದಮೇಲೆ ವಿಕಾರದಲ್ಲಿ ಹೋಗಲು ಹೇಗೆ ಸಾಧ್ಯ! ಒಂದುವೇಳೆ ಯಾರಾದರೂ ಹೋಗುತ್ತಾರೆಂದರೆ ಬ್ರಾಹ್ಮಣ ಕುಲವನ್ನೇ ಕಳಂಕಿತ ಮಾಡುತ್ತಾರೆ, ತಮ್ಮನ್ನು ಬ್ರಹ್ಮಾಕುಮಾರ-ಕುಮಾರಿಯೆಂದು ಕರೆಸಿಕೊಂಡು ಮತ್ತೆ ಪತಿತರಾಗಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ವಾಣಿಯಲ್ಲಿ ಏನು ಕೇಳುತ್ತೀರೋ ಅದನ್ನು ಮಂಥನ ಮಾಡಬೇಕಾಗಿದೆ. ಪುರುಷೋತ್ತಮರಾಗುತ್ತಿದ್ದೀರಿ ಆದ್ದರಿಂದ ಚಲನೆಯು ಬಹಳ ರಾಯಲ್ ಮಾಡಿಕೊಳ್ಳಬೇಕಾಗಿದೆ. ಬಾಯಿಂದ ಎಂದೂ ಕಲ್ಲುಗಳು ಹೊರ ಬರಬಾರದು.

2. ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯೆಂದು ತಿಳಿದು ಸೇವೆಯಲ್ಲಿ ತತ್ಪರರಾಗಿರಬೇಕಾಗಿದೆ. ಯಾವುದೇ ಛೀ ಛೀ ಕೆಟ್ಟ ಕರ್ಮಗಳನ್ನು ಮಾಡಿ ಡಿಸ್ಸರ್ವೀಸ್ ಮಾಡಬಾರದು.

ವರದಾನ:-

ಯಾವಾಗ ಇಂದ್ರಿಯಗಳ ಆಕರ್ಷಣೆ ಮತ್ತು ಸಂಬಂಧಗಳ ಆಕರ್ಷಣೆಯಿಂದ ಮುಕ್ತರಾಗುವಿರಿ, ಆಗಲೇ ಅತೀಂದ್ರಿಯ ಸುಖದ ಅನುಭೂತಿ ಮಾಡಲು ಸಾಧ್ಯವಾಗುವುದು. ಯಾವುದೇ ಕರ್ಮೇಂದ್ರಿಯಗಳಿಗೆ ವಶರಾಗುವುದರಿಂದ ಭಿನ್ನ-ಭಿನ್ನ ಆಕರ್ಷಣೆಗಳೇನಿವೆಯೋ, ಅದು ಅತೀಂದ್ರಿಯ ಸುಖ ಅಥವಾ ಹರ್ಷವನ್ನು ಕೊಡುವುದರಲ್ಲಿ ಬಂಧನವನ್ನು ಹಾಕುವುದು. ಆದರೆ ಯಾವಾಗ ಬುದ್ಧಿಯು ಸರ್ವ ಆಕರ್ಷಣೆಗಳಿಂದ ಮುಕ್ತವಾಗಿದ್ದು, ಒಂದು ಲಕ್ಷ್ಯದಲ್ಲಿ ಸ್ಥಿತವಾಗಿರುತ್ತದೆಯೋ ಆಗ ಏರುಪೇರುಗಳು ಸಮಾಪ್ತಿಯಾಗುತ್ತದೆ. ಏಕರಸ ಸ್ಥಿತಿಯಾಗುವುದರಿಂದ ಅತೀಂದ್ರಿಯ ಸುಖದ ಅನುಭೂತಿಯಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top