03 November 2021 KANNADA Murli Today | Brahma Kumaris

Read and Listen today’s Gyan Murli in Kannada

November 2, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಒಳಗೂ-ಹೊರಗೂ ಸ್ವಚ್ಛವಾಗಿರಿ, ಈಗ ನಿಮ್ಮಲ್ಲಿ ಯಾವುದೇ ಕೆಟ್ಟ ಹವ್ಯಾಸವು ಇರಬಾರದು”

ಪ್ರಶ್ನೆ:: -

ಬ್ರಾಹ್ಮಣ ಮಕ್ಕಳು ತಂದೆಯಿಂದ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಲು ಯಾವ-ಯಾವ ಧಾರಣೆಗಳ ಮೇಲೆ ಗಮನ ಕೊಡಬೇಕಾಗಿದೆ?

ಉತ್ತರ:-

1. ಈ ಜನ್ಮದಲ್ಲಿ ತಂದೆಯ ಮಕ್ಕಳಾದ ಮೇಲೆ ಇಂತಹ ಯಾವುದೇ ಕರ್ಮ ಮಾಡಬಾರದು, ಯಾವುದರಿಂದ ನೂರುಪಟ್ಟು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. 2. ಯಾವ ತಂದೆಯು ಅತಿ ಮಧುರನಾಗಿದ್ದಾರೆಯೋ, ಅವರು ನಮ್ಮನ್ನು ತಮ್ಮ ಸಮಾನ ಮಧುರರನ್ನಾಗಿ ಮಾಡುತ್ತಾರೆ. ಆದ್ದರಿಂದ ಬಾಯಿಂದ ಅನ್ಯರಿಗೆ ದುಃಖವಾಗುವಂತಹ ಕಠಿಣ ಮಾತುಗಳು ಬರಬಾರದು. 3. ದುಃಖಹರ್ತ-ಸುಖಕರ್ತನ ಮಕ್ಕಳಾಗಿ ಎಲ್ಲರ ದುಃಖವನ್ನು ದೂರ ಮಾಡಬೇಕಾಗಿದೆ. ಮನಸ್ಸಾ-ವಾಚಾ-ಕರ್ಮಣಾ ಸುಖ ಕೊಡಬೇಕಾಗಿದೆ. 4. ಸ್ತುತಿ-ನಿಂದೆಯಲ್ಲಿ ಸಮಾನರಾಗಿರಬೇಕಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಸದ್ಗುರುವಾರವನ್ನು ವೃಕ್ಷಪತಿ ದಿನವೆಂದೂ ಸಹ ಹೇಳಲಾಗುತ್ತದೆ. ವೃಕ್ಷಪತಿ ದಿನ ಅರ್ಥಾತ್ ತಂದೆಯ ದಿನ. ಅಮಾವಾಸ್ಯೆಯ ದಿನದಂದು ಅಂಧಕಾರ ರಾತ್ರಿಯು ಮುಕ್ತಾಯವಾಗುತ್ತದೆ. ನಂತರ ದಿನವು ಆರಂಭವಾಗುತ್ತದೆ, ಚಂದ್ರಮನ ಉದಯವಾಗಲು ಪ್ರಾರಂಭವಾಗುತ್ತದೆ ಮತ್ತು ಇತ್ತೀಚೆಗೆ ಯಾರದೇ ಶ್ರಾದ್ಧ ಇರುತ್ತದೆಯೋ ಅವರಿಗೆ ತಿನ್ನಿಸಿ-ಕುಡಿಸಿ ಪೂರ್ಣ ಮಾಡುತ್ತಾರೆ ನಂತರ ಅವರು ಏನನ್ನೂ ಬಯಸುವುದಿಲ್ಲ, ಎಲ್ಲರನ್ನೂ ತೃಪ್ತಿ ಪಡಿಸಲಾಗುತ್ತದೆ. ದಿನದಲ್ಲಿ ಹೊರಟು ಹೋದರೆಂದರೆ ಮತ್ತೆ ರಾತ್ರಿಯ ಕಡೆ ಹಿಂತಿರುಗಿ ಬರುವ ಅವಶ್ಯಕತೆಯಾದರೂ ಏನಿದೆ? ಮೂಲಕಾಯಿದೆ ಏನೆಂದರೆ – 12 ತಿಂಗಳಿನ ಸಮಯವು ಯಾವಾಗ ಮುಗಿಯುತ್ತದೆಯೋ ಆಗ ಅವರಿಗೆ ತಿನ್ನಿಸಿ, ಎಲ್ಲವನ್ನೂ ಸಮಾಪ್ತಿ ಮಾಡಲಾಗುತ್ತದೆ ಅಂದಮೇಲೆ ಮತ್ತೆ ಅಂಧಕಾರ ರಾತ್ರಿಯಲ್ಲಿ ಕರೆಯುವುದೇಕೆ? ಆದರೆ ಬ್ರಾಹ್ಮಣರು ಈ ಪದ್ಧತಿಯನ್ನು ರೂಢಿಸಿ ಬಿಟ್ಟಿದ್ದಾರೆ, ಈಗಲೂ ಅದೇ ನಡೆದು ಬರುತ್ತಿದೆ. ಅವರಿಗೆ ದಕ್ಷಿಣೆ ಇತ್ಯಾದಿ ಸಿಗುತ್ತಾ ಇರುತ್ತದೆ, ಅದು ಹದ್ದಿನ ಅಮಾವಾಸ್ಯೆಯಾಗಿದೆ. ಈಗ ತಂದೆಯು ಬೇಹದ್ದಿನ ಅಮಾವಾಸ್ಯೆಯಲ್ಲಿ ಬಂದಿದ್ದಾರೆ. ತಂದೆಯು ಬರುತ್ತಾರೆಂದರೆ ಅರ್ಧಕಲ್ಪದ ಅಂಧಕಾರವು ಮುಕ್ತಾಯವಾಗುತ್ತದೆ. ನಂತರ ಸತ್ಯಯುಗದಲ್ಲಿ ಪ್ರಕಾಶವೇ ಪ್ರಕಾಶವಿರುತ್ತದೆ. ಅಲ್ಲಿ ಎಂದೂ ಪಿತೃಪಕ್ಷ ಇತ್ಯಾದಿಗಳನ್ನು ಮಾಡುವುದಿಲ್ಲ. ಇದು ಬೇಹದ್ದಿನ ಅಮಾವಾಸ್ಯೆಯಾಗಿದೆ. ಬ್ರಹ್ಮನ ರಾತ್ರಿ ಸೋ ಬ್ರಾಹ್ಮಣರ ರಾತ್ರಿಯು ಪೂರ್ಣವಾಗಿ ದಿನವು ಬಂದು ಬಿಡುತ್ತದೆ ನಂತರ ಯಾರೂ ಪಿತೃಗಳಿಗೆ ತಿನ್ನಿಸುವುದಿಲ್ಲ. ಅಲ್ಲಿ ಬ್ರಾಹ್ಮಣರೇ ಇರುವುದಿಲ್ಲ ಅಂದರೆ ಅಲ್ಲಿ ಯಾರೂ ಸಾಯುವುದಿಲ್ಲ ಎಂದಲ್ಲ. ಆದರೆ ಈ ಪದ್ಧತಿಯಿರುವುದಿಲ್ಲ. ಇಲ್ಲಂತೂ ಅನೇಕ ಪ್ರಕಾರದ ಬ್ರಾಹ್ಮಣರೂ ಇದ್ದಾರೆ, ಈಗ ಒಂದು ರಾಜ್ಯ, ಒಂದು ರಾಷ್ಟ್ರ್ರವಾಗಲಿ ಎಂದು ಬಯಸುತ್ತಾರೆ ಆದರೆ ಇಷ್ಟೆಲ್ಲಾ ಮನುಷ್ಯರದು ಒಂದು ರಾಷ್ಟ್ರ್ರವಾಗಲು ಸಾಧ್ಯವಿಲ್ಲ. ಹಾ! ಸತ್ಯಯುಗದಲ್ಲಿ ಒಂದು ರಾಜ್ಯ, ಒಂದೇ ರೀತಿ-ನೀತಿಯಿತ್ತು ಅದನ್ನು ತಂದೆಯೇ ಬಂದು ಸ್ಥಾಪನೆ ಮಾಡುತ್ತಾರೆ. ಅಲ್ಲಿ ಎಲ್ಲರೂ ಬಹಳ ಮಧುರರಾಗಿರುತ್ತಾರೆ, ದುಃಖದ ಮಾತು ಇರುವುದಿಲ್ಲ. ಎಂದೂ ಕಠಿಣವಾಗಿ ಮಾತನಾಡುವುದಿಲ್ಲ, ಪಾಪ ಮಾಡುವುದಿಲ್ಲ. ಈಗ ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ನಂಬರ್ವಾರ್ ಪದವಿಯನ್ನು ಪಡೆಯುತ್ತಾರೆ. ಅಲ್ಲಿ ಯಾರೂ ಕಳ್ಳತನ ಇತ್ಯಾದಿಗಳನ್ನು ಮಾಡುವುದಿಲ್ಲ, ಒಳಗೂ-ಹೊರಗೂ ಸ್ವಚ್ಛತೆಯಿರುತ್ತದೆ. ಇಲ್ಲಿ ಒಳಗೊಂದು -ಹೊರಗೊಂದು ಇರುತ್ತಾರೆ, ಒಬ್ಬರು ಇನ್ನೊಬ್ಬರಿಗೆ ಎಷ್ಟೊಂದು ನಷ್ಟವನ್ನುಂಟು ಮಾಡುತ್ತಾರೆ. ಇದೆಲ್ಲವೂ ರಾವಣ ರಾಜ್ಯದ ಕೆಟ್ಟ ಚಂಚಲತೆಯಾಗಿದೆ. ತಂದೆಯು ಈಗ ಅದನ್ನು ಒಮ್ಮೆಲೆ ಸಮಾಪ್ತಿ ಮಾಡಿಸಿ ಬಿಡುತ್ತಾರೆ. ಯಾರದೂ ಕೆಟ್ಟ ಹವ್ಯಾಸಗಳು ಒಂದೇ ಸಲ ಸಮಾಪ್ತಿ ಆಗುವುದಿಲ್ಲ, ಸಮಯ ಹಿಡಿಸುತ್ತದೆ. ಎಷ್ಟೆಷ್ಟು ಯೋಗದಲ್ಲಿ ಇರುತ್ತೀರೋ ಅಷ್ಟು ಕಳೆಯುತ್ತದೆ. ಹೆಜ್ಜೆ-ಹೆಜ್ಜೆಯಲ್ಲಿ ನೋಡಿಕೊಳ್ಳುತ್ತಾ ಇರಿ – ನಾನು ಯೋಗದಲ್ಲಿ ಇರುತ್ತೇನೆಯೇ? ಯಾವುದೇ ಪಾಪಕರ್ಮ ಮಾಡುತ್ತಿಲ್ಲವೆ? ನಾನು ಮಧುರನಾಗಿ ಅನ್ಯರನ್ನೂ ಮಧುರರನ್ನಾಗಿ ಮಾಡುತ್ತೇನೆಯೇ? ಸ್ವಯಂ ಕಹಿಯಾಗಿದ್ದರೆ ಅನ್ಯರನ್ನು ಮಧುರರನ್ನಾಗಿ ಹೇಗೆ ಮಾಡುವರು? ಅಂತಹವರು ಇಲ್ಲಿ ಬಹು ಬೇಗನೆ ಪ್ರತ್ಯಕ್ಷವಾಗಿ ಬಿಡುತ್ತಾರೆ. ಮುಚ್ಚಿಡಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ – ನನ್ನ ಮಕ್ಕಳಾಗಿ ಯಾವುದೇ ಉಲ್ಟಾ ಸುಲ್ಟಾ ಕೆಲಸ ಮಾಡುತ್ತೀರೆಂದರೆ ಬಹಳ ಕಠಿಣ ಶಿಕ್ಷೆಯನ್ನು ಅನುಭವಿಸುತ್ತೀರಿ. ಪದವಿಯೂ ಭ್ರಷ್ಟವಾಗುವುದು. ಸ್ವಯಂ ಭಗವಂತನೇ ದೇವತೆಗಳನ್ನಾಗಿ ಮಾಡಲು ಓದಿಸುತ್ತಾರೆ. ಸರ್ವಗುಣ ಸಂಪನ್ನರು, ಅಹಿಂಸಾ ಪರಮೋ ಧರ್ಮಿಗಳೆಂದು ದೇವತೆಗಳ ಮಹಿಮೆಯನ್ನು ಹಾಡುತ್ತಾರೆ. ಹಿಂಸೆಯು ಎರಡು ಪ್ರಕಾರವಾಗಿರುತ್ತದೆ. ಒಂದು ಕಾಮ ಕಟಾರಿಯ ಹಿಂಸೆಯಿಂದ ಮನುಷ್ಯರು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆಯುತ್ತಾರೆ. ಎರಡನೆಯದು – ಮತ್ತೆ ಕ್ರೋಧದಲ್ಲಿ ಬಂದು ಒಬ್ಬರು ಇನ್ನೊಬ್ಬರನ್ನು ಹೊಡೆಯುತ್ತಾರೆ. ದುಃಖವನ್ನು ಕೊಡುತ್ತಾರೆ, ದುಃಖಿಯಾಗುತ್ತಾರೆ. ಇಲ್ಲಂತೂ ಮಕ್ಕಳಿಗೇ ತಿಳಿಸುತ್ತಾರೆ – ಮಕ್ಕಳೇ, ಮನಸ್ಸಾ-ವಾಚಾ-ಕರ್ಮಣಾ ಇಂತಹ ಯಾವುದೇ ಕರ್ಮ ಮಾಡಬಾರದು, ಯಾರಿಗೂ ದುಃಖವನ್ನು ಕೊಡಬಾರದು. ನೀವು ದುಃಖಹರ್ತ-ಸುಖಕರ್ತನ ಮಕ್ಕಳಾಗಿದ್ದೀರಿ ಅಂದಮೇಲೆ ಹೇಗೆ ದುಃಖವನ್ನು ದೂರ ಮಾಡಿ ಸುಖ ಕೊಡುವುದು ಎಂದು ಎಲ್ಲರಿಗೆ ಇದೇ ಯುಕ್ತಿಯನ್ನು ತಿಳಿಸಬೇಕಾಗಿದೆ. ಮಾಡಿರುವ ಕರ್ಮಗಳ ಲೆಕ್ಕಾಚಾರವು ಮುಗಿಯುತ್ತದೆ. ಇಲ್ಲಿ ತಂದೆಯು ತಿಳಿಸುತ್ತಾರೆ, ಈ ಜನ್ಮದಲ್ಲಿ ಏನೆಲ್ಲಾ ಪಾಪಕರ್ಮಗಳನ್ನು ಮಾಡಿದ್ದೀರೋ ಅದನ್ನು ತಿಳಿಸುವುದರಿಂದ ಅರ್ಧ ಪಾಪವು ಕಳೆಯುತ್ತದೆ ಆದರೆ ಅನೇಕ ಜನ್ಮಗಳಿಂದ ಮಾಡಿರುವ ಪಾಪ ಕರ್ಮವು ತಲೆಯ ಮೇಲೆ ಬಹಳಷ್ಟಿದೆಯಲ್ಲವೆ. ಈ ಜನ್ಮದಲ್ಲಿಯೂ ಪಾಪವಾಗುವಂತಹ ಯಾವುದೇ ಕರ್ಮ ಮಾಡಬಾರದು ಮತ್ತು ಯೋಗಬಲದಿಂದ ಅನೇಕ ಜನ್ಮಗಳ ಪಾಪ ಕರ್ಮವನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. ಈ ಜನ್ಮದಲ್ಲಿ ತಂದೆಯ ಮಕ್ಕಳಾಗಿ ಯಾವುದೇ ಪಾಪ ಕರ್ಮ ಮಾಡಬಾರದು. ಬ್ರಾಹ್ಮಣರಾಗದೇ ಆಸ್ತಿಯು ಸಿಗಲು ಸಾಧ್ಯವಿಲ್ಲ. ಇವರು ಬಾಪ್ದಾದಾ ಆಗಿದ್ದಾರಲ್ಲವೆ. ಆಸ್ತಿಯು ನಿಮಗೆ ಶಿವ ತಂದೆಯಿಂದ ಸಿಗುತ್ತದೆ, ಇವರಿಂದಲ್ಲ. ಇವರು ತಮ್ಮನ್ನು ಏನೂ ಕರೆಸಿಕೊಳ್ಳುವುದಿಲ್ಲ. ಇವರು ಕೇವಲ ರಥವಾಗಿದ್ದಾರೆ, ಇವರಿಂದ ನಿಮಗೆ ಏನೂ ಸಿಗುವುದಿಲ್ಲ ಆದರೆ ರಥಕ್ಕೂ ಗಾಯನವಾಗುತ್ತದೆ. ಹುಸೇನನ ರಥವನ್ನು ತೋರಿಸುತ್ತಾರಲ್ಲವೆ. ಕುದುರೆಯನ್ನು ಎಷ್ಟೊಂದು ಶೃಂಗರಿಸುತ್ತಾರೆ, ಇದಂತೂ ಪತಿತ ತನುವಾಗಿದೆಯಲ್ಲವೆ. ಇದೂ ಸಹ ಈಗ ಶೃಂಗರಿತವಾಗುತ್ತಿದೆ. ತನ್ನ ಪುರುಷಾರ್ಥದಿಂದಲೇ ಶೃಂಗರಿತರಾಗುತ್ತಾರೆ. ತಂದೆಯೇನು ಇವರಿಗೆ ದಯೆ ತೋರಿಸುವುದಿಲ್ಲ, ಕೆಲವೊಮ್ಮೆ ತಂದೆಯು ಹಾಸ್ಯ ಮಾಡುತ್ತಾರೆ- ಬಾಡಿಗೆಯಂತೂ ಸಿಗುತ್ತದೆಯಲ್ಲವೆ ಎಂದು. ಆದರೆ ನೀವು ಹೇಗೆ ಪುರುಷಾರ್ಥ ಮಾಡಬೇಕಾಗಿದೆಯೋ ಹಾಗೆಯೇ ಇವರೂ ಮಾಡಬೇಕಾಗುತ್ತದೆ. ನನಗೆ ತಂದೆಯು ಬಾಡಿಗೆ ಕೊಡುತ್ತಾರಲ್ಲವೆ ಎಂಬ ಲಾಲಸೆ ಇರುವುದಿಲ್ಲ. ಇದನ್ನು ಕೇವಲ ತಂದೆಯು ಹಾಸ್ಯ ಮಾಡುತ್ತಾರಷ್ಟೆ. ಆತ್ಮವು ಯೋಗಬಲದಿಂದಲೇ ಸತೋಪ್ರಧಾನವಾಗಬೇಕಾಗಿದೆ, ಎಷ್ಟು ಯೋಗವಿರುವುದೋ ಅಷ್ಟು ಪಾವನರಾಗುತ್ತೀರಿ ಮತ್ತೆ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳಬೇಕಾಗಿದೆ. ನೀವು ಮಕ್ಕಳಿಗೆ ತಿಳಿದಿದೆ – ಯಾರು ಒಳ್ಳೊಳ್ಳೆಯ ಸರ್ವೀಸ್ ಮಾಡುವವರಿದ್ದಾರೆಯೋ ಅವರು ಪ್ರಸಿದ್ಧರಾಗಿದ್ದಾರೆ, ತಂದೆಯು ಸೇವೆಗಾಗಿ ಕಳುಹಿಸುತ್ತಾರೆ ಅಂದಮೇಲೆ ಬಹಳ ಮಧುರವಾಗಿ ಮಾತನಾಡಬೇಕಾಗುತ್ತದೆ, ಯಾರೊಂದಿಗೂ ಜಗಳ-ಕಲಹ ಮಾಡಬಾರದು. ಒಂದುವೇಳೆ ಬ್ರಾಹ್ಮಣರು ಕಟುವಾಗಿ ಮಾತನಾಡುತ್ತಾರೆಂದರೆ ಅನ್ಯರು ಇವರಲ್ಲಿ ಕ್ರೋಧದ ಭೂತವಿದೆ ಎಂದು ಹೇಳುತ್ತಾರೆ. ಸ್ತುತಿ-ನಿಂದೆಯಲ್ಲಿ ಸಮಾನವಾಗಿರಬೇಕು, ಅನೇಕರಲ್ಲಿ ಕ್ರೋಧದ ಭೂತವಿದೆ ಅದರಿಂದ ಅನೇಕರು ಬೇಸರವಾಗುತ್ತಾರೆ. ಎಲ್ಲರ ಕ್ರೋಧವು ಹೊರಟು ಹೋಗಿದೆ ಎಂದಲ್ಲ, ಸಂಪೂರ್ಣರಾಗುವ ಸಮಯವು ಬರುವವರೆಗೂ ನಿಧಾನ-ನಿಧಾನವಾಗಿ ತುಕ್ಕು ಕಳೆಯುತ್ತಾ ಹೋಗುವುದು. ನನ್ನಲ್ಲಿ ಕ್ರೋಧವಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ, ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆಯಿರುತ್ತದೆ. ಕೆಲಕೆಲವರ ಮಾತೇ ಜಗಳವಾಡಿದಂತೆ ಇರುತ್ತದೆ. ಮಕ್ಕಳು ಬಹಳ-ಬಹಳ ಮಧುರರಾಗಬೇಕು, ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕು, ವಿಕಾರವಂತೂ ಅನೇಕ ಪ್ರಕಾರದ್ದಿದೆಯಲ್ಲವೆ. ಕ್ರೋಧ ಮಾಡುವುದು, ಸುಳ್ಳು ಹೇಳುವುದು – ಇದೆಲ್ಲವೂ ವಿಕಾರವಾಗಿದೆ.

ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈಗ ಯಾವುದೇ ವಿಕರ್ಮ ಮಾಡುತ್ತೀರೆಂದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು ಅಲ್ಲಂತೂ ನನ್ನ ಜೊತೆ ಶಿಕ್ಷೆಯನ್ನು ಕೊಡುವ ಧರ್ಮರಾಜನಿರುತ್ತಾನೆ. ಇಲ್ಲಿ ಪ್ರತ್ಯಕ್ಷವಾಗಿ ಶಿಕ್ಷೆ ಸಿಗುತ್ತದೆ, ಆದರೆ ಧರ್ಮರಾಜನ ಶಿಕ್ಷೆಯು ಗುಪ್ತವಾಗಿ ಸಿಗುತ್ತದೆ. ಗರ್ಭ ಜೈಲಿನಲ್ಲಿಯೂ ಶಿಕ್ಷೆಗಳನ್ನು ಅನುಭವಿಸುತ್ತಾರೆ. ಯಾರಿಗಾದರೂ ಕಾಯಿಲೆ ಇತ್ಯಾದಿಗಳಿದ್ದರೆ ಅದೂ ಸಹ ಕರ್ಮಭೋಗವಾಗಿದೆ. ಧರ್ಮರಾಜನ ಮೂಲಕ ಶಿಕ್ಷೆ ಸಿಗುತ್ತದೆ. ಮುಂದಿನದೂ ಸಹ ಈಗಲೇ ಸಿಗುತ್ತದೆ. ಈಗಿನದು ಈಗಲೂ ಸಿಗಬಹುದು ಮತ್ತೆ ಗರ್ಭ ಜೈಲಿನಲ್ಲಿಯೂ ಸಿಗುತ್ತದೆ. ಅದು ಗುಪ್ತವಾಗಿದೆ. ಧರ್ಮರಾಜನು ಅಲ್ಲಂತೂ ಶಿಕ್ಷೆ ಕೊಡುವುದಿಲ್ಲ ಅಲ್ಲವೇ. ಇಲ್ಲಿ ಶರೀರದಿಂದ ನೋವನ್ನು ಅನುಭವಿಸಬೇಕಾಗುತ್ತದೆ. ಈಗ ತಂದೆಯು ನಮ್ಮನ್ನು ಇದರಿಂದ ಬಿಡಿಸುತ್ತಾರೆ, ಪರಮಪಿತ ಪರಮಾತ್ಮ ಮತ್ತು ಧರ್ಮರಾಜ ಇಬ್ಬರೂ ಹಾಜರಿದ್ದಾರೆ. ಈಗ ಎಲ್ಲರ ಅಂತಿಮ ಸಮಯವಾಗಿದೆ, ಪ್ರತಿಯೊಬ್ಬರದೂ ತೀರ್ಮಾನವಾಗುತ್ತದೆ. ಇದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಈಗ ಸಂಪೂರ್ಣರಾಗಬೇಕೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಯಾವುದೇ ಪಾಪಕರ್ಮ ಮಾಡಬೇಡಿ. ತಮ್ಮ ಕಲ್ಯಾಣಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕು, ಸಾಧ್ಯವಾದಷ್ಟೂ ಮಾಡಬೇಕಾಗಿದೆ. ಇದು ಕಲ್ಪ-ಕಲ್ಪಾಂತರದ ಮಾತಾಗಿದೆ. ಲೌಕಿಕ ವಿದ್ಯೆಯಾದರೆ ಒಂದು ಜನ್ಮಕ್ಕಾಗಿ ಇರುತ್ತದೆ, ಇನ್ನೊಂದು ಜನ್ಮದಲ್ಲಿ ಮತ್ತೆ ಇನ್ನೊಂದು ವಿದ್ಯೆಯನ್ನು ಓದಬೇಕಾಗುತ್ತದೆ ಆದರೆ ಇದು 21 ಜನ್ಮಗಳ ವಿದ್ಯೆಯಾಗಿದೆ. ಅವಿನಾಶಿ ತಂದೆಯು ಅವಿನಾಶಿ ವಿದ್ಯೆಯನ್ನು ಓದಿಸುತ್ತಾರೆ. ಯಾವುದರಿಂದ 21 ಜನ್ಮಗಳಿಗಾಗಿ ಅವಿನಾಶಿ ಪದವಿಯು ಸಿಗುತ್ತದೆ. ತಂದೆಯಿಂದ 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ನೀವು ಮಕ್ಕಳಿಗೆ ತಿಳಿದಿದೆ – ಇದು ಹಳೆಯ ಪ್ರಪಂಚವಾಗಿದೆ, ಹೊಸ ಪ್ರಪಂಚದಲ್ಲಿ ಭಾರತವೊಂದೇ ಇತ್ತು, ಈಗ ಮತ್ತೆ ಈ ಚಕ್ರವು ಸುತ್ತುವುದು. ಹೊಸ ಸೃಷ್ಟಿಯು ಸ್ಥಾಪನೆಯಾಗಿ ಹಳೆಯದರ ವಿನಾಶವಾಗುವುದು. ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ, ಬ್ರಾಹ್ಮಣರಂತೂ ಅವಶ್ಯವಾಗಿ ಬೇಕು ಅಂದಮೇಲೆ ಅವಶ್ಯವಾಗಿ ಪವಿತ್ರರಾಗುತ್ತಾರೆ, ರಾಜಯೋಗವನ್ನೂ ಕಲಿಯುತ್ತಾರೆ. ನಾವು ಬ್ರಹ್ಮಾಕುಮಾರ -ಕುಮಾರಿಯರು ಪವಿತ್ರರಾಗುತ್ತಿದ್ದೆವು, ತಂದೆಯು ಮನೆ-ಮಠವನ್ನು ಬಿಡಿ ಎಂದು ಹೇಳುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನ ಇರಿ. ಈ ಬಾಪ್ದಾದಾ ಎಂಬ ಹೆಸರು ಬಹಳ ಚೆನ್ನಾಗಿದೆ, ತಾತನಿಂದ ಆಸ್ತಿಯು ಸಿಗುತ್ತದೆ, ಅವರು ಸರ್ವಶ್ರೇಷ್ಠನಾಗಿದ್ದಾರೆ. ಬ್ರಹ್ಮನಂತೂ ಪತಿತನಾಗಿದ್ದರಲ್ಲವೇ. ಇವರು ಮೊಟ್ಟ ಮೊದಲು ಶ್ರೇಷ್ಠಾಚಾರಿ ಪೂಜ್ಯ ಮಹಾರಾಜ ಆಗಿದ್ದರು, ಈಗ ಅಂತ್ಯದಲ್ಲಿ ಬಂದು ಪತಿತನಾಗಿ ಬಿಟ್ಟರು. ಇದು ಇವರ ಅಂತಿಮ ಜನ್ಮವಾಗಿದೆ, ಈ ಪತಿತ ಪ್ರಪಂಚದಲ್ಲಿ ಪಾವನರಾದರೂ ಎಲ್ಲಿದ್ದಾರೆ! ಪಾವನ ಪ್ರಪಂಚದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಪರಮಾತ್ಮನಿಂದ ಆತ್ಮರು ಬಹುಕಾಲ ಅಗಲಿ ಹೋಗಿದ್ದರೆಂದು ಗಾಯನವಿದೆ, ಇದರ ಲೆಕ್ಕವನ್ನೂ ಸಹ ನೀವು ತಿಳಿದುಕೊಂಡಿರಿ, ಯಾರು ಸೂರ್ಯವಂಶಿಯರಿದ್ದಾರೆಯೋ ಅವರೇ ಮೊಟ್ಟ ಮೊದಲು ತಮ್ಮ ಆಸ್ತಿಯನ್ನು ತೆಗೆದುಕೊಳ್ಳಲು ಬರುತ್ತಾರೆ. ಈಗಂತೂ ಆತ್ಮವು ಶರೀರವನ್ನು ಬಿಟ್ಟು ಹೋಯಿತೆಂದರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಅಂದಮೇಲೆ ಅವರನ್ನು ಮತ್ತೆ ನರಕದಲ್ಲಿ ಕರೆಸುವ ಅವಶ್ಯಕತೆಯಾದರೂ ಏನಿದೆ!! ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಸಾಧು-ಸಂತ ಮೊದಲಾದವರು ಮರಣ ಹೊಂದುತ್ತಾರೆಂದರೆ ಅವರದೂ ಸಹ ತಿಥಿಯನ್ನು ಆಚರಿಸುತ್ತಾರೆ, ಭೋಗವನ್ನು ಇಡುತ್ತಾರೆ, ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಯಿತು ಎಂದು ಹೇಳುತ್ತಾರೆಂದರೆ ಮತ್ತೇಕೆ ಭೋಗವನ್ನು ಇಡುತ್ತಾರೆ. ತಿಥಿಯನ್ನು ಏಕೆ ಆಚರಿಸುತ್ತಾರೆ? ಶರೀರವಂತೂ ಸಮಾಪ್ತಿಯಾಯಿತು, ಆತ್ಮವು ಹೊರಟು ಹೋಯಿತು ಅಂದಮೇಲೆ ಮತ್ತೆ ಆತ್ಮವನ್ನು ಕರೆಸುವ ಅವಶ್ಯಕತೆಯೇನಿದೆ? ಜ್ಯೋತಿಯಲ್ಲಿ ಲೀನವಾಗಿ ಬಿಟ್ಟಿತು ಅಂದಮೇಲೆ ಮತ್ತೆ ಹೇಗೆ ಬರಲು ಸಾಧ್ಯ? ಅನೇಕಾನೇಕ ಮತಗಳಿವೆ. ಕೆಲವರು ಈ ರೀತಿಯೂ ಹೇಳುತ್ತಾರೆ – ಮನುಷ್ಯರು ಮೋಕ್ಷವನ್ನು ಪಡೆಯುತ್ತಾರೆ ಮತ್ತೆ ಬರುವುದಿಲ್ಲ ಎಂದು. ಮೋಕ್ಷವನ್ನು ಪಡೆದರು ಎನ್ನುವುದಾದರೆ ಇನ್ನೂ ಖುಷಿಯನ್ನು ಆಚರಿಸಬೇಕು ಏಕೆಂದರೆ ಪಾತ್ರ ಮಾಡುವುದರಿಂದ ಮುಕ್ತರಾದರು ಅಂದಮೇಲೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳಬಾರದು. ಇದನ್ನೂ ನೀವು ತಿಳಿದುಕೊಂಡಿದ್ದೀರಿ – ಎಲ್ಲಾ ಮನುಷ್ಯ ಮಾತ್ರರು ಒಬ್ಬ ತಂದೆಯನ್ನು ನೆನಪು ಮಾಡುತ್ತಾರೆ. ಎಲ್ಲರೂ ಸಹೋದರ-ಸಹೋದರರಾಗಿದ್ದಾರೆ ಎಂಬುದನ್ನು ಒಪ್ಪುತ್ತಾರೆ ಅಂದಮೇಲೆ ಸಹೋದರರಿಗೆ ತಂದೆಯಿಂದ ಆಸ್ತಿಯು ಅವಶ್ಯವಾಗಿ ಸಿಗಬೇಕು. ಸರ್ವಆತ್ಮರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಎಲ್ಲಾ ಆತ್ಮರು ಹಿಂತಿರುಗಿ ಹೋಗಬೇಕಾಗಿದೆ. ಮನುಷ್ಯರು ಮನುಷ್ಯರಿಗೆ ಸದ್ಗತಿ ಕೊಡಲು ಹೇಗೆ ಸಾಧ್ಯ? ಆದ್ದರಿಂದಲೇ ಒಬ್ಬರೇ ಸರ್ವರ ಸದ್ಗತಿದಾತನ ಹೆಸರು ಪ್ರಸಿದ್ಧವಾಗಿದೆ, ಅವರೇ ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ, ಆ ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ, ಎಲ್ಲರನ್ನೂ ರಾವಣ ರಾಜ್ಯದಿಂದ ಬಿಡಿಸುತ್ತಾರೆ. ಇದಕ್ಕೆ ಬೇಹದ್ದಿನ ಅಮಾವಾಸ್ಯೆ ಎಂದು ಹೇಳುತ್ತಾರೆ, ಅರ್ಧಕಲ್ಪ ಬೇಹದ್ದಿನ ರಾತ್ರಿ, ಅರ್ಧಕಲ್ಪ ಬೇಹದ್ದಿನ ದಿನವಾಗಿದೆ, ಇದು ಆಟವಾಗಿದೆ. ಯಾವಾಗ ಧಾರ್ಮಿಕ ಸಮ್ಮೇಳನದಲ್ಲಿ ನಿಮಂತ್ರಣ ಕೊಡುತ್ತಾರೆ, ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂದು ಕೇಳಿದಾಗ ಅಲ್ಲಿ ತಿಳಿಸಬೇಕು – ಒಂದು ಧರ್ಮ, ಒಂದು ಮತವು ಸತ್ಯಯುಗದಲ್ಲಿಯೇ ಇರುತ್ತದೆ, ಅದಕ್ಕೆ 5000 ವರ್ಷಗಳಾಯಿತು, ಅಲ್ಲಿ ಸುಖ-ಶಾಂತಿ ಎಲ್ಲವೂ ಇತ್ತು. ಉಳಿದೆಲ್ಲಾ ಆತ್ಮರು ಶಾಂತಿಧಾಮದಲ್ಲಿದ್ದರು. ಹೊಸ ಪ್ರಪಂಚದಲ್ಲಿ ಒಂದೇ ಧರ್ಮವಿತ್ತು, ಹಳೆಯ ಪ್ರಪಂಚದಲ್ಲಿ ವೃಕ್ಷವು ದೊಡ್ಡದಾಗುತ್ತಾ ಹೋಗುತ್ತದೆ. ಅನೇಕ ಧರ್ಮಗಳಿವೆ, ಈಗ ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ನಾನು ಕಲ್ಪ-ಕಲ್ಪವೂ ಬಂದು ನನ್ನ ಈ ಕರ್ತವ್ಯವನ್ನು ಮಾಡುತ್ತೇನೆಂದು ಶಿವ ತಂದೆಯು ತಿಳಿಸುತ್ತಾರೆ. ಸತ್ಯಯುಗೀ ರಾಜಧಾನಿಗಾಗಿ ರಾಜಯೋಗವನ್ನು ಅವಶ್ಯವಾಗಿ ಸಂಗಮದಲ್ಲಿಯೇ ಕಲಿಸುತ್ತಾರೆ. ಎಲ್ಲಾ ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ, ತಿಳಿಸುತ್ತಾರೆ- ನಾನು ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ, ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರ ರಥದಲ್ಲಿಯೇ ಬಂದು ತಿಳಿಸುತ್ತೇನೆ. ಈಗ ಹೊಸ ಪ್ರಪಂಚವಂತೂ ಇಲ್ಲ. ಹಳೆಯ ಪ್ರಪಂಚದಲ್ಲಿಯೇ ಬಂದು ಹೊಸ ಪ್ರಪಂಚವನ್ನಾಗಿ ಮಾಡುತ್ತೇನೆ. ನನ್ನ ಹೆಸರೇ ಆಗಿದೆ- ದುಃಖಹರ್ತ ಸುಖಕರ್ತ. ಸುಖದಲ್ಲಿ ನನ್ನನ್ನು ಯಾರೂ ನೆನಪು ಮಾಡುವುದಿಲ್ಲ, ದುಃಖದಲ್ಲಿ ನೆನಪು ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಸುಖ ಸಿಕ್ಕಿತ್ತಲ್ಲವೆ. ನಾನು ಓದಿಸಲು ಬಂದಿದ್ದೇನೆ, ಈಗ ಓದುವುದು ನಿಮ್ಮ ಕರ್ತವ್ಯವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ, ನೀವು ಏನನ್ನೂ ತಿಳಿದುಕೊಂಡಿರಲಿಲ್ಲ. ಈ ಸಮಯದಲ್ಲಿ ಇಡೀ ಪ್ರಪಂಚದ ದೋಣಿಯು ಮುಳುಗಿದೆ, ಎಷ್ಟೊಂದು ದುಃಖಿಯಾಗಿದ್ದಾರೆ! ನೀವು ಎಲ್ಲರ ದೋಣಿಯನ್ನು ಪಾರು ಮಾಡುತ್ತೀರಿ. ಎಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುವರು. ಈ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ ಅದು ನಂಬರ್ವಾರ್. ಯಾರು ಲೈಟ್ಹೌಸ್ ಆಗಿರುವರೋ ಅವರು ಅನ್ಯರಿಗೂ ಮಾರ್ಗವನ್ನು ತಿಳಿಸುತ್ತಾ ಇರುತ್ತಾರೆ. ಮಾರ್ಗವನ್ನು ತಿಳಿಸುವುದೇ ಅವರ ಕರ್ತವ್ಯವಾಗಿದೆ. ಮಕ್ಕಳಿಗೆ ತಂದೆಯು ಹೇಗೆ ಓದಿಸುತ್ತಾರೆ, ಇದಂತೂ ಸ್ಥಿರವಾದ ಖುಷಿಯಿರಬೇಕು. ಇಲ್ಲಿಗೆ ಬಂದು ಬಹಳ ರಿಫ್ರೆಷ್ ಆಗುತ್ತೀರಿ, ಹೊರಗೆ ಹೋಗುತ್ತಿದ್ದಂತೆಯೇ ನಶೆಯೇ ಮಾಯವಾಗಿ ಬಿಡುತ್ತದೆ. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಇಚ್ಛೆಯನ್ನು ಇಟ್ಟುಕೊಳ್ಳಬೇಕು. ಹೆಜ್ಜೆ ಹೆಜ್ಜೆಯಲ್ಲಿ ತಂದೆಯಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ. ಹಿಂದಿನ ಕಾಲದಲ್ಲಿ ತೀರ್ಥ ಸ್ಥಾನಗಳಿಗೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರು, ಬಹಳ ಶ್ರದ್ಧೆಯಿಂದ ಹೋಗುತ್ತಿದ್ದರು. ಈ ಸಮಯದಲ್ಲಿ ಬಸ್ಸು, ರೈಲಿನಲ್ಲಿ ಹೋಗುತ್ತಾರೆ. ಈ ಸಮಯದಲ್ಲಿ ಮಾಯೆಯ ಬಹಳ ಆಡಂಬರವಿದೆ. ಸತ್ಯಯುಗದಲ್ಲಿ ಆಡಂಬರವಿತ್ತು ನಂತರ ದ್ವಾಪರದಿಂದ ಇಳಿಯುತ್ತಾ ಹೋಯಿತು ಈಗ ಮತ್ತೆ ಅಂತಿಮದಲ್ಲಿ ಆರಂಭವಾಗಿದೆ, ಇದಕ್ಕೆ ಮಾಯೆಯ ಆಡಂಬರವೆಂದು ಹೇಳಲಾಗುತ್ತದೆ. ಸ್ವರ್ಗದಲ್ಲಿ ನಡೆಯಿರಿ ಎಂದು ಯಾರಿಗಾದರೂ ಹೇಳಿದರೆ ನಮಗೆ ಇಲ್ಲಿಯೇ ಎಲ್ಲಾ ಸುಖವಿದೆ, ಮೋಟಾರು ವಿಮಾನ ಎಲ್ಲವೂ ಇದೆ. ನಮಗಾಗಿ ಸ್ವರ್ಗವು ಇಲ್ಲಿಯೇ ಇದೆ. ಹಣ, ಅಂತಸ್ತು ಆಭರಣ ಎಲ್ಲವೂ ಇದೆ. ಲಕ್ಷ್ಮೀ-ನಾರಾಯಣರಿಗೂ ಆಭರಣಗಳಿದೆಯಲ್ಲವೆ. ನಾವು ಧರಿಸ ಬಲ್ಲೆವು ಎಂದು ಹೇಳುತ್ತಾರೆ. ಎಷ್ಟಾದರೂ ತಿಳಿಸಿ ಆದರೆ ವಿಷವೇ ನೆನಪಿರುತ್ತದೆ, ವಿಷವಿಲ್ಲದೆ (ವಿಕಾರ) ಇರಲು ಸಾಧ್ಯವಾಗುವುದಿಲ್ಲ. ತಂದೆಯು ತಿಳಿಸುತ್ತಾರೆ – ನೀವು ನನ್ನ ಮಾತನ್ನು ಪಾಲಿಸುವುದಿಲ್ಲ. ಪಾವನರಾಗುವುದಿಲ್ಲವೆಂದರೆ ಪತಿತ-ಪಾವನ ಬನ್ನಿ ಎಂದು ನನ್ನನು ಕರೆಯುವುದಾದರೂ ಏಕೆ? ನೆನಪಿಡಿ, ಈಗ ನನ್ನ ಮಾತನ್ನು ಪಾಲಿಸದಿದ್ದರೆ ಧರ್ಮರಾಜನ ಮೂಲಕ ಶಿಕ್ಷೆ ಕೊಡಿಸುವೆನು. ಹೀಗೆ ಹೆದರಿಸಿದರೂ ಸಹ ಅನೇಕ ಮಕ್ಕಳು ವಿಕಾರದಲ್ಲಿ ಹೋಗುತ್ತಲೇ ಇರುತ್ತಾರೆ, ಭಯವೇ ಇಲ್ಲ. ಅವರು ಎಷ್ಟೊಂದು ಪಶ್ಚಾತ್ತಾಪ ಪಡುವರು. ಅದರ ಮಾತೇ ಕೇಳಬೇಡಿ. ಪದವಿಯು ಭ್ರಷ್ಟವಾಗುವುದು, ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಲ್ಲವೆ. ಸಂಗ ದೋಷದಲ್ಲಿ ಬಂದು ಈ ರೀತಿ ಬೀಳುತ್ತಾರೆ ಒಮ್ಮೆಲೆ ತಮ್ಮ ಪದವಿಯನ್ನೇ ಕಳೆದುಕೊಳ್ಳುತ್ತಾರೆ. ನಿಮಗೆ ತಿಳಿದಿದೆ – ಈಗ ವಜ್ರ ರತ್ನಗಳ ಗಣಿಗಳು ಖಾಲಿಯಾಗುತ್ತಾ ಹೋಗುತ್ತಿವೆ. ಇವು ಮತ್ತೆ ಸಂಪನ್ನವಾಗುವವು. ಚಿನ್ನ, ವಜ್ರಗಳ ಪರ್ವತಗಳಿರುತ್ತವೆ. ಯಾವಾಗ ಅಗೆದು ವಜ್ರವನ್ನು ಶೋಧನೆ ಮಾಡಿ ತೆಗೆಯುತ್ತಾರೆಯೋ ಆಗ ಮೊದಲು ಕಲ್ಲುಗಳಾಗಿರುತ್ತವೆ ಮತ್ತೆ ಅದನ್ನು ಸ್ವಚ್ಛ ಮಾಡಿ ವಜ್ರವನ್ನಾಗಿ ಮಾಡುತ್ತಾರೆ, ನಿಮ್ಮನ್ನೂ ಸಹ ಜ್ಞಾನದ ಸಾಣೆಯ ಮೇಲೆ ಏರಿಸುತ್ತಾರೆ ನಂತರ ನೀವು ಎಷ್ಟು ಚೆನ್ನಾಗಿ ಆಗಿ ಬಿಡುತ್ತೀರಿ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈಗ ಅಂತಿಮ ಸಮಯವಾಗಿದೆ ಆದ್ದರಿಂದ ಯಾವುದೇ ಪಾಪಕರ್ಮ ಮಾಡಬಾರದು. ತಮ್ಮ ಕಲ್ಯಾಣದ ಪುರುಷಾರ್ಥವನ್ನು ಮಾಡಬೇಕು, ಬಹಳ ಮಧುರರಾಗಬೇಕು, ಕ್ರೋಧವನ್ನು ಬಿಟ್ಟು ಬಿಡಬೇಕಾಗಿದೆ.

2. ತಂದೆಯಿಂದ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಇಚ್ಛೆಯನ್ನು ಇಟ್ಟುಕೊಳ್ಳಬೇಕಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಸಲಹೆಯನ್ನು ತೆಗೆದುಕೊಳ್ಳಬೇಕು. ತಂದೆಯ ಸಮಾನ ದುಃಖಹರ್ತ-ಸುಖಕರ್ತರಾಗಬೇಕಾಗಿದೆ.

ವರದಾನ:-

ಪಾಸ್-ವಿತ್-ಆನರ್ ಅಂದರೆ ಮನಸ್ಸಿನಲ್ಲಿಯೂ ಸಂಕಲ್ಪಗಳಿಂದ ಶಿಕ್ಷೆಯನ್ನು ಅನುಭವಿಸಬಾರದು. ಧರ್ಮರಾಜನ ಶಿಕ್ಷೆಗಳ ಮಾತಂತು ಅಂತ್ಯದಲ್ಲಿರುತ್ತದೆ. ಆದರೆ ತಮ್ಮ ಸಂಕಲ್ಪಗಳ ಗೊಂದಲ ಅಥವ ಶಿಕ್ಷೆಗಳಿಂದಲೂ ದೂರವಾಗಿರುವುದೇ ಪಾಸ್-ವಿತ್-ಆನರ್ ಆಗುವವರ ಲಕ್ಷಣವಾಗಿದೆ. ವಾಣಿ-ಕರ್ಮ-ಸಂಬಂಧ-ಸಂಕರ್ಪದ ಮಾತಂತು ಚಿಕ್ಕದಾಗಿದೆ ಆದರೆ ಸಂಕಲ್ಪಗಳಲ್ಲಿಯೂ ಗೊಂದಲ ಉಂಟಾಗಬಾರದು, ಇಂತಹ ಪ್ರತಿಜ್ಞೆ ಮಾಡಿದಾಗಲೇ ಪಾಸ್-ವಿತ್-ಆನರ್ ಆಗುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top