02 November 2021 KANNADA Murli Today | Brahma Kumaris

Read and Listen today’s Gyan Murli in Kannada

November 1, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಮನಸ್ಸಾ-ವಾಚಾ-ಕರ್ಮಣಾ ಅಕ್ಯೂರೇಟ್ ಆಗಿರಬೇಕಾಗಿದೆ ಏಕೆಂದರೆ ನೀವು ದೇವತೆಗಳಿಗಿಂತಲೂ ಶ್ರೇಷ್ಠ್ಠ ಬ್ರಾಹ್ಮಣರು, ಶಿಖೆಗೆ ಸಮಾನರಾಗಿದ್ದೀರಿ”

ಪ್ರಶ್ನೆ:: -

ಎಲ್ಲದಕ್ಕಿಂತ ಗುಪ್ತ ಹಾಗೂ ಸೂಕ್ಷ್ಮವಾದ ಮಾತು ಯಾವುದಾಗಿದೆ, ಯಾವುದನ್ನು ಮಕ್ಕಳೂ ಸಹ ಅರ್ಥ ಮಾಡಿಕೊಳ್ಳುವುದು ವಿರಳ?

ಉತ್ತರ:-

ಶಿವ ತಂದೆ ಮತ್ತು ಬ್ರಹ್ಮಾ ತಂದೆಯ ರಹಸ್ಯವನ್ನು ತಿಳಿದುಕೊಳ್ಳುವುದು ಎಲ್ಲದಕ್ಕಿಂತ ಗುಪ್ತ ಮತ್ತು ಸೂಕ್ಷ್ಮವಾದ ಮಾತಾಗಿದೆ. ಇದರಲ್ಲಿ ಕೆಲವು ಮಕ್ಕಳು ತಬ್ಬಿಬ್ಬಾಗುತ್ತಾರೆ. ಈ ರಹಸ್ಯವನ್ನು ಸ್ವಯಂ ತಂದೆಯೇ ತಿಳಿಸುತ್ತಾರೆ – ನಾನು ಬೆಳಗ್ಗೆ-ಬೆಳಗ್ಗೆ ಇವರ ತನುವಿನ ಮೂಲಕ ನೀವು ಮಕ್ಕಳಿಗೆ ಓದಿಸುತ್ತೇನೆ ಬಾಕಿ ನಾನು ಇಡೀ ದಿನ ಇವರಲ್ಲಿ ಸವಾರಿ ಮಾಡುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ – ಯಾವ ಮಕ್ಕಳು? ಬ್ರಾಹ್ಮಣರು. ನಾವು ಬ್ರಾಹ್ಮಣರಾಗಿದ್ದೇವೆ, ದೇವತೆಗಳಾಗುವವರಿದ್ದೇವೆ ಎಂಬುದನ್ನು ಎಂದೂ ಮರೆಯಬೇಡಿ. ವರ್ಣಗಳನ್ನೂ ಸಹ ನೆನಪು ಮಾಡಿಕೊಳ್ಳಬೇಕಾಗಿದೆ, ಇಲ್ಲಿ ನೀವು ಪರಸ್ಪರ ಬ್ರಾಹ್ಮಣರೇ ಇದ್ದೀರಿ. ಬ್ರಾಹ್ಮಣರಿಗೆ ಬೇಹದ್ದಿನ ತಂದೆಯು ಓದಿಸುತ್ತಾರೆ, ಈ ಬ್ರಹ್ಮಾ ತಂದೆಯು ಓದಿಸುವುದಿಲ್ಲ ಶಿವ ತಂದೆಯು ಓದಿಸುತ್ತಾರೆ. ಬ್ರಹ್ಮಾರವರ ಮೂಲಕ ಬ್ರಾಹ್ಮಣರಿಗೇ ಓದಿಸುತ್ತಾರೆ. ಶೂದ್ರರಿಂದ ಬ್ರಾಹ್ಮಣರಾಗದ ವಿನಃ ದೇವತೆಗಳಾಗಲು ಸಾಧ್ಯವಿಲ್ಲ. ಆಸ್ತಿಯಂತೂ ಶಿವ ತಂದೆಯಿಂದಲೂ ಸಿಗುತ್ತದೆ, ಶಿವ ತಂದೆಯು ಎಲ್ಲರ ತಂದೆಯಾಗಿದ್ದಾರೆ. ಈ ಬ್ರಹ್ಮಾರವರಿಗೆ ಗ್ರಾಂಡ್ಫಾದರ್ ಎಂದು ಹೇಳಲಾಗುತ್ತದೆ. ಲೌಕಿಕ ತಂದೆಯಂತೂ ಎಲ್ಲರಿಗೂ ಇದ್ದೇ ಇರುತ್ತಾರೆ, ಪಾರಲೌಕಿಕ ತಂದೆಯನ್ನು ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಇವರು ಅಲೌಕಿಕ ತಂದೆಯಾಗಿದ್ದಾರೆ, ಇವರನ್ನು ಯಾರೂ ತಿಳಿದುಕೊಂಡಿಲ್ಲ. ಭಲೆ ಬ್ರಹ್ಮನ ಮಂದಿರವೂ ಇದೆ, ಇಲ್ಲಿಯೂ ಸಹ ಪ್ರಜಾಪಿತ ಆದಿ ದೇವನ ಮಂದಿರವಿದೆ, ಅವರಿಗೆ ಮಹಾವೀರನೆಂತಲೂ ಹೇಳುತ್ತಾರೆ, ಕೆಲವರು ದಿಲ್ವಾಲಾ (ಹೃದಯವನ್ನು ಗೆಲ್ಲುವವರು) ಎಂತಲೂ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಹೃದಯವನ್ನು ಗೆಲ್ಲುವವರು ಶಿವ ತಂದೆಯಾಗಿದ್ದಾರೆ ಬ್ರಹ್ಮನಲ್ಲ. ಎಲ್ಲಾ ಆತ್ಮರನ್ನು ಸುಖಿಯನ್ನಾಗಿ ಮಾಡುವವರು, ಖುಷಿಯನ್ನು ನೀಡುವವರು ಒಬ್ಬ ತಂದೆಯೇ ಆಗಿದ್ದಾರೆ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ನೀವು ಬ್ರಾಹ್ಮಣರೇ ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ, ನೀವೂ ಸಹ ಪದೇ-ಪದೇ ಮರೆತು ಹೋಗುತ್ತೀರಿ. ನೆನಪು ಬಹಳ ಸಹಜವಾಗಿದೆ, ಯೋಗ ಶಬ್ಧವನ್ನು ಸನ್ಯಾಸಿಗಳು ಇಟ್ಟಿದ್ದಾರೆ. ನೀವಂತೂ ತಂದೆಯನ್ನು ನೆನಪು ಮಾಡುತ್ತೀರಿ, ಯೋಗ ಎಂಬುದು ಸಾಮಾನ್ಯ ಪದವಾಗಿದೆ. ಇದಕ್ಕೆ ಯೋಗಾಶ್ರಮವೆಂತಲೂ ಹೇಳುವುದಿಲ್ಲ ಏಕೆಂದರೆ ಇಲ್ಲಿ ತಂದೆ ಮತ್ತು ಮಕ್ಕಳು ಕುಳಿತಿದ್ದೀರಿ. ಮಕ್ಕಳ ಕರ್ತವ್ಯವಾಗಿದೆ – ಬೇಹದ್ದಿನ ತಂದೆಯನ್ನು ನೆನಪು ಮಾಡುವುದು. ನಾವು ಬ್ರಾಹ್ಮಣರಾಗಿದ್ದೇವೆ, ಬ್ರಹ್ಮಾರವರ ಮೂಲಕ ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಆದ್ದರಿಂದ ಶಿವ ತಂದೆಯು ತಿಳಿಸುತ್ತಾರೆ – ಎಷ್ಟು ಸಾಧ್ಯವೋ ನೆನಪು ಮಾಡುತ್ತಾ ಇರಿ. ಚಿತ್ರವನ್ನೂ ಭಲೆ ನೆನಪಿಟ್ಟುಕೊಳ್ಳಿ ಆಗ ನಾವು ಬ್ರಾಹ್ಮಣರಾಗಿದ್ದೇವೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆಂದು ನೆನಪಂತೂ ಇರುವುದು. ಬ್ರಾಹ್ಮಣರು ಎಂದಾದರೂ ತಮ್ಮ ಜಾತಿಯನ್ನು ಮರೆಯುತ್ತಾರೆಯೇ? ನೀವು ಶೂದ್ರರ ಸಂಗದಲ್ಲಿ ಬರುತ್ತಿದ್ದಂತೆಯೇ ಬ್ರಾಹ್ಮಣತನವನ್ನೇ ಮರೆತು ಹೋಗುತ್ತೀರಿ. ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ ಏಕೆಂದರೆ ನೀವು ಬ್ರಾಹ್ಮಣರು ಜ್ಞಾನಪೂರ್ಣರಾಗಿದ್ದೀರಿ, ಭಗವಂತನಿಗೆ ಎಲ್ಲರ ಹೃದಯವನ್ನು ಅರಿತವರು ಎಂದು ಹೇಳುತ್ತಾರಲ್ಲವೆ. ಅಂದರೆ ಇದರ ಅರ್ಥವು ಅವರು ಎಲ್ಲರ ಹೃದಯದಲ್ಲಿ ಏನಿದೆ ಎಂಬುದನ್ನು ಕುಳಿತು ನೋಡುತ್ತಾರೆಂದಲ್ಲ. ಅವರಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ಅವರು ಬೀಜರೂಪನಾಗಿದ್ದಾರೆ. ಬೀಜಕ್ಕೆ ವೃಕ್ಷದ ಆದಿ-ಮಧ್ಯ-ಅಂತ್ಯವು ತಿಳಿದಿರುತ್ತದೆ ಅಂದಮೇಲೆ ಇಂತಹ ತಂದೆಯನ್ನು ಬಹಳ-ಬಹಳ ನೆನಪು ಮಾಡಬೇಕಾಗಿದೆ. ಇವರ (ಬ್ರಹ್ಮಾ) ಆತ್ಮವೂ ಸಹ ಆ ತಂದೆಯನ್ನೇ ನೆನಪು ಮಾಡುತ್ತದೆ. ತಂದೆಯು ತಿಳಿಸುತ್ತಾರೆ – ಇವರೂ ಸಹ (ಬ್ರಹ್ಮಾ) ನನ್ನನ್ನೇ ನೆನಪು ಮಾಡುತ್ತಾರೆ ಆದ್ದರಿಂದಲೇ ಈ ಪದವಿಯನ್ನು ಪಡೆಯುತ್ತಾರೆ, ನೀವೂ ಸಹ ನೆನಪು ಮಾಡಿದರೆ ಪದವಿಯನ್ನು ಪಡೆಯುವಿರಿ. ಮೊಟ್ಟ ಮೊದಲು ನೀವು ಅಶರೀರಿಯಾಗಿ ಬಂದಿದ್ದಿರಿ ಈಗ ಪುನಃ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ. ಮತ್ತೆಲ್ಲಾ ದೇಹದ ಸಂಬಂಧಿಗಳು ನಿಮಗೆ ದುಃಖ ಕೊಡುವವರಾಗಿದ್ದಾರೆ, ಅವರನ್ನು ಏಕೆ ನೆನಪು ಮಾಡುತ್ತೀರಿ! ನಾನು ನಿಮಗೆ ಸಿಕ್ಕಿದ್ದೇನೆ, ನಾನು ನಿಮ್ಮನ್ನು ಹೊಸ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ, ಅಲ್ಲಿ ಯಾವುದೇ ದುಃಖವಿಲ್ಲ, ಅದು ದೈವೀ ಸಂಬಂಧವಾಗಿದೆ. ಇಲ್ಲಿ ಮೊದಲು ಸ್ತ್ರೀ ಮತ್ತು ಪುರುಷನ ಸಂಬಂಧದಲ್ಲಿಯೇ ದುಃಖವು ಬರುತ್ತದೆ ಏಕೆಂದರೆ ವಿಕಾರಿಗಳಾಗುತ್ತಾರೆ. ನಾನೀಗ ನಿಮ್ಮನ್ನು ಎಲ್ಲಿ ವಿಕಾರದ ಮಾತೇ ಇರುವುದಿಲ್ಲವೋ ಅಂತಹ ಪ್ರಪಂಚಕ್ಕೆ ಯೋಗ್ಯರನ್ನಾಗಿ ಮಾಡುತ್ತೇನೆ, ಈ ಕಾಮವು ಮಹಾಶತ್ರುವೆಂದು ಗಾಯನವಿದೆ, ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಕ್ರೋಧವು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ ಎಂದು ಹೇಳುವುದಿಲ್ಲ, ಕಾಮ ವಿಕಾರವನ್ನು ಜಯಿಸಬೇಕಾಗಿದೆ, ಅದೇ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ ಪತಿತರನ್ನಾಗಿ ಮಾಡುತ್ತದೆ. ವಿಕಾರಕ್ಕೆ ಪತಿತ ಎಂಬ ಅಕ್ಷರವು ಬರುತ್ತದೆ, ಈ ಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ. ನಾವು ಸತ್ಯಯುಗದ ದೇವಿ-ದೇವತೆಗಳಾಗುತ್ತಿದ್ದೇವೆ ಎಂಬುದು ನಿಮಗೆ ತಿಳಿದಿದೆ, ಎಲ್ಲಿಯವರೆಗೆ ಈ ನಿಶ್ಚಯವಿರುವುದಿಲ್ಲವೋ ಅಲ್ಲಿಯವರೆಗೆ ಏನನ್ನೂ ಪಡೆಯಲು ಸಾಧ್ಯವಿಲ್ಲ.

ತಂದೆಯು ತಿಳಿಸುತ್ತಾರೆ – ಮಕ್ಕಳು ಮನಸ್ಸಾ-ವಾಚಾ-ಕರ್ಮಣಾ ಅಕ್ಯುರೇಟ್ ಆಗಬೇಕಾಗಿದೆ, ಪರಿಶ್ರಮವಿದೆ. ಪ್ರಪಂಚದಲ್ಲಿ ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ ಎಂಬುದು ಯಾರಿಗೂ ತಿಳಿದಿಲ್ಲ. ಮುಂದೆ ಹೋದಂತೆ ತಿಳಿದುಕೊಳ್ಳುವರು. ಒಂದು ದೇಶ, ಒಂದು ರಾಜ್ಯ, ಒಂದು ಧರ್ಮ, ಒಂದು ಭಾಷೆ ಇರಲಿ ಎಂದು ಬಯಸುತ್ತಾರೆ. ನೀವು ತಿಳಿಸಬಹುದು – ಇಂದಿಗೆ 5000 ವರ್ಷಗಳ ಮೊದಲೂ ಒಂದು ರಾಜ್ಯ, ಒಂದು ಧರ್ಮವಿತ್ತು ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ರಾಮ ರಾಜ್ಯ, ರಾವಣ ರಾಜ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನೀವೂ ಸಹ ತಿಳಿದುಕೊಂಡಿರಲಿಲ್ಲ, ನೀವೀಗ ನಂಬರ್ವಾರ್ ಪುರುಷಾರ್ಥದನುಸಾರ ಸ್ವಚ್ಛ ಬುದ್ಧಿಯವರಾಗಿದ್ದೀರಿ. ತಂದೆಯು ಕುಳಿತು ನಿಮಗೆ ತಿಳಿಸುತ್ತಾರೆ ಅಂದಮೇಲೆ ಅವಶ್ಯವಾಗಿ ತಂದೆಯ ಮತದಂತೆ ನಡೆಯಿರಿ. ತಂದೆಯು ತಿಳಿಸುತ್ತಾರೆ – ಹಳೆಯ ಪ್ರಪಂಚದಲ್ಲಿದ್ದರೂ ಕಮಲಪುಷ್ಪ ಸಮಾನ ಪವಿತ್ರವಾಗಿರಿ, ನನ್ನನ್ನು ನೆನಪು ಮಾಡುತ್ತಾ ಇರಿ. ತಂದೆಯು ಆತ್ಮರಿಗೇ ತಿಳಿಸುತ್ತಾರೆ, ಆತ್ಮರಿಗೇ ಈ ಕರ್ಮೇಂದ್ರಿಯಗಳ ಮೂಲಕ ಓದಿಸಲು ಬಂದಿದ್ದೇನೆ. ಇದಂತೂ ಹಳೆಯ ಛೀ ಛೀ ಪ್ರಪಂಚ, ಛೀ ಛೀ ಶರೀರವಾಗಿದೆ. ನೀವು ಬ್ರಾಹ್ಮಣರು ಈಗ ಪೂಜೆಗೆ ಯೋಗ್ಯರಲ್ಲ, ಗಾಯನ ಯೋಗ್ಯರಾಗಿದ್ದೀರಿ. ಪೂಜೆಗೆ ಯೋಗ್ಯರು ದೇವತೆಗಳಾಗಿದ್ದಾರೆ, ನೀವು ಶ್ರೀಮತದಂತೆ ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ ಆದ್ದರಿಂದ ನಿಮ್ಮದು ಗಾಯನವಿದೆ, ಪೂಜೆಯಾಗಲು ಸಾಧ್ಯವಿಲ್ಲ. ಗಾಯನವು ನೀವು ಬ್ರಾಹ್ಮಣರದಾಗಿದೆಯೇ ಹೊರತು ದೇವತೆಗಳದಲ್ಲ. ತಂದೆಯು ನಿಮ್ಮನ್ನೇ ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ದೇವತೆಗಳ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುತ್ತದೆ. ಈಗ ನಿಮ್ಮ ಆತ್ಮವು ಪವಿತ್ರವಾಗುತ್ತಾ ಹೋಗುತ್ತಿದೆ, ಶರೀರವೂ ಪವಿತ್ರವಿಲ್ಲ, ನೀವೀಗ ಈಶ್ವರನ ಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ನೀವೂ ಸಹ ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ ಅಂದಮೇಲೆ ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ಕೇವಲ ನೀವು ಬ್ರಾಹ್ಮಣರಿಗೇ ಕುಳಿತು ತಂದೆಯು ಓದಿಸುತ್ತಾರೆ. ಬ್ರಾಹ್ಮಣರ ವೃಕ್ಷವು ವೃದ್ಧಿಯಾಗುತ್ತಾ ಇರುವುದು, ಬ್ರಾಹ್ಮಣರು ಯಾರು ಪಕ್ಕಾ ಆಗಿ ಬಿಡುವರೋ ಅವರೇ ಹೋಗಿ ದೇವತೆಗಳಾಗುತ್ತಾರೆ. ಇದು ಹೊಸ ವೃಕ್ಷವಾಗಿದೆ, ಮಾಯೆಯ ಬಿರುಗಾಳಿಗಳು ತಗಲುತ್ತವೆ. ಸತ್ಯಯುಗದ ಯಾವುದೇ ಬಿರುಗಾಳಿ ಬರುವುದಿಲ್ಲ, ಇಲ್ಲಿ ಮಾಯೆಯು ತಂದೆಯ ನೆನಪಿನಲ್ಲಿರಲು ಬಿಡುವುದಿಲ್ಲ. ನನಗೆ ಗೊತ್ತಿದೆ, ತಂದೆಯ ನೆನಪಿನಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗಿದ್ದಾರೆ, ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಭಾರತದ ಪ್ರಾಚೀನ ರಾಜಯೋಗವು ಪ್ರಸಿದ್ಧವಾಗಿದೆ, ಪ್ರಾಚೀನ ಯೋಗವನ್ನು ಯಾರಾದರೂ ಕಲಿಸಲಿ ಎಂದು ವಿದೇಶದವರು ಇಚ್ಛಿಸುತ್ತಾರೆ.

ಈಗ ಯೋಗವು ಎರಡು ಪ್ರಕಾರವಾಗಿದೆ – ಒಬ್ಬರು ಹಠಯೋಗಿಗಳಾಗಿದ್ದಾರೆ, ಇನ್ನೊಬ್ಬರು ರಾಜಯೋಗಿಗಳಾಗಿದ್ದಾರೆ. ನೀವು ರಾಜಯೋಗಿಗಳಾಗಿದ್ದೀರಿ, ಹಠಯೋಗವು ಬಹಳ ದಿನಗಳಿಂದ ನಡೆಯುತ್ತಾ ಬಂದಿದೆ, ರಾಜಯೋಗದ ಬಗ್ಗೆ ಈಗ ನಿಮಗೆ ಅರ್ಥವಾಗಿದೆ. ರಾಜಯೋಗವು ಆ ಸನ್ಯಾಸಿಗಳಿಗೇನು ಗೊತ್ತು! ತಂದೆಯು ಬಂದು ತಿಳಿಸಿದ್ದಾರೆ, ರಾಜಯೋಗವನ್ನು ನಾನೇ ಬಂದು ಕಲಿಸುತ್ತೇನೆ. ಕೃಷ್ಣನಂತೂ ಕಲಿಸಲು ಸಾಧ್ಯವಿಲ್ಲ. ಇದು ಭಾರತದ್ದೇ ಪ್ರಾಚೀನ ರಾಜಯೋಗವಾಗಿದೆ, ಕೇವಲ ಗೀತೆಯಲ್ಲಿ ನನ್ನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಆದ್ದರಿಂದ ಎಷ್ಟೊಂದು ಅಂತರವಾಗಿ ಬಿಟ್ಟಿದೆ! ಶಿವ ಜಯಂತಿಯಾಗುತ್ತದೆ ಅಂದರೆ ನಿಮ್ಮ ವೈಕುಂಠದ ಜಯಂತಿಯೂ ಆಗುತ್ತದೆ ಯಾವುದರಲ್ಲಿ ಕೃಷ್ಣನ ರಾಜ್ಯವಿರುತ್ತದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯ ಜಯಂತಿಯಾಗುತ್ತದೆ ಎಂದರೆ ಗೀತಾ ಜಯಂತಿಯೂ ಆಗುತ್ತದೆ, ವೈಕುಂಠದ ಜಯಂತಿಯೂ ಆಗುತ್ತಿದೆ. ನೀವು ಪವಿತ್ರರಾಗಿ ಬಿಡುತ್ತೀರಿ, ಕಲ್ಪದ ಹಿಂದಿನ ತರಹ ಸ್ಥಾಪನೆಯಾಗುತ್ತಿದೆ ಅಂದಮೇಲೆ ಶಿವ ತಂದೆಯ ಜಯಂತಿ ಸೋ ಸ್ವರ್ಗದ ಜಯಂತಿ ಅಂದರೆ ತಂದೆಯೇ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ನನ್ನನ್ನು ನೆನಪು ಮಾಡಿರಿ ಎಂದು ಈಗ ತಂದೆಯು ತಿಳಿಸುತ್ತಾರೆ. ನೆನಪು ಮಾಡದಿದ್ದರೆ ಮಾಯೆಯು ಒಂದಲ್ಲ ಒಂದು ವಿಕರ್ಮ ಮಾಡಿಸಿ ಬಿಡುತ್ತದೆ. ನೆನಪು ಮಾಡದಿದ್ದರೆ ಪೆಟ್ಟು ಬಿದ್ದಿತು ಎಂದರ್ಥ. ನೆನಪಿನಲ್ಲಿದ್ದಾಗ ಪೆಟ್ಟು ತಿನ್ನುವುದಿಲ್ಲ, ಇದು ಮಲ್ಲ ಯುದ್ಧವಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ – ನಮ್ಮ ಶತ್ರುವು ಯಾವುದೇ ಮನುಷ್ಯನಲ್ಲ, ರಾವಣ ಶತ್ರುವಾಗಿದ್ದಾನೆ. ವಿವಾಹವಾದ ನಂತರ ಕುಮಾರ-ಕುಮಾರಿಯೂ ಸಹ ಪತಿತರಾಗುವ ಕಾರಣ ಒಬ್ಬರು ಇನ್ನೊಬ್ಬರಿಗೆ ಶತ್ರುವಾಗಿ ಬಿಡುತ್ತಾರೆ. ವಿವಾಹದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ವಿವಾಹವನ್ನು ವ್ಯರ್ಥವೆಂದು ತಂದೆಯು ಹೇಳುತ್ತಾರೆ. ಈಗ ಪಾರಲೌಕಿಕ ತಂದೆಯು ಆದೇಶ ಹೊರಡಿಸಿದ್ದಾರೆ – ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿರಿ ಮತ್ತು ಪವಿತ್ರತೆಯ ಪ್ರತಿಜ್ಞೆ ಮಾಡಿರಿ. ಯಾರೂ ಸಹ ಪತಿತರಾಗಬೇಡಿ. ಈ ವಿಕಾರದ ಕಾರಣ ನೀವು ಜನ್ಮ-ಜನ್ಮಾಂತರದಿಂದ ನೀವು ಪತಿತರಾಗಿದ್ದೀರಿ, ಆದ್ದರಿಂದ ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ – ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಈಗ ಹಿಂತಿರುಗಿ ಹೋಗಬೇಕಾಗಿದೆ. ನಿಮಗೆ ಬಹಳ ಶುದ್ಧ ಅಹಂಕಾರವಿರಬೇಕು – ನಾವಾತ್ಮರು ತಂದೆಯ ಮತದಂತೆ ನಡೆದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ, ನಾವೇ ಮತ್ತೆ ಸ್ವರ್ಗದಲ್ಲಿ ರಾಜ್ಯ ಮಾಡುತ್ತೇವೆ. ಎಷ್ಟು ಪರಿಶ್ರಮ ಪಡುತ್ತೀರೋ ಅಷ್ಟು ಪದವಿಯನ್ನು ಪಡೆಯುತ್ತೀರಿ. ರಾಜ-ರಾಣಿಯಾದರೂ ಆಗಿರಿ ಪ್ರಜೆಯಾದರೂ ಆಗಿರಿ. ರಾಜ-ರಾಣಿಯು ಹೇಗಾಗುತ್ತಾರೆ ಎಂಬುದನ್ನೂ ನೋಡುತ್ತಿದ್ದೀರಿ. ಫಾಲೋ ಫಾದರ್ ಎಂದು ಗಾಯನವಿದೆ, ಅದು ಈಗಿನ ಮಾತಾಗಿದೆ. ಇದನ್ನು ಲೌಕಿಕ ಸಂಬಂಧಕ್ಕಾಗಿ ಹೇಳುವುದಿಲ್ಲ, ಈ ತಂದೆಯು ಮತ ಕೊಡುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ನೀವು ತಿಳಿದುಕೊಂಡಿದ್ದೀರಿ – ನಾವು ಒಳ್ಳೆಯ ಮತದಂತೆ ನಡೆಯುತ್ತೇವೆ, ಅನೇಕರ ಸೇವೆ ಮಾಡುತ್ತೇವೆ. ಮಕ್ಕಳು ತಂದೆಯ ಬಳಿ ಬರುತ್ತೀರೆಂದರೆ ಶಿವ ತಂದೆಯೂ ರಿಫ್ರೆಷ್ ಮಾಡುತ್ತಾರೆ, ಇವರೂ ರಿಫ್ರೆಷ್ ಮಾಡುತ್ತಾರೆ. ಇವರೂ ಸಹ ಕಲಿಯುತ್ತಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ – ನಾನು ಬೆಳಗ್ಗೆ-ಬೆಳಗ್ಗೆ ಬರುತ್ತೇನೆ. ಒಳ್ಳೆಯದು – ನಂತರ ಯಾರಾದರೂ ಮಿಲನ ಮಾಡಲು ಬರುತ್ತಾರೆಂದರೆ ಈ ಬ್ರಹ್ಮಾರವರು ತಿಳಿಸಲು ಸಾಧ್ಯವಿಲ್ಲವೆ! ಬಾಬಾ ತಾವು ಬಂದು ತಿಳಿಸಿ ನಾನು ತಿಳಿಸುವುದಿಲ್ಲ ಎಂದು ಹೇಳುತ್ತಾರೆಯೇ! ಇವು ಬಹಳ ಗುಹ್ಯ ಮಾತುಗಳಾಗಿದೆ ಅಲ್ಲವೆ. ನಾನೂ ಸಹ ಎಲ್ಲರಿಗಿಂತ ಚೆನ್ನಾಗಿ ತಿಳಿಸುತ್ತೇನೆ, ಅಂದಮೇಲೆ ಶಿವ ತಂದೆಯೇ ತಿಳಿಸುತ್ತಾರೆ, ಇವರು ತಿಳಿಸುವುದಕ್ಕೆ ಆಗುವುದಿಲ್ಲವೆಂದು ನೀವು ಏಕೆ ತಿಳಿದುಕೊಳ್ಳುತ್ತೀರಿ! ಇದೂ ಸಹ ನಿಮಗೆ ತಿಳಿದಿದೆ – ಕಲ್ಪದ ಮೊದಲು ಇವರು ತಿಳಿಸಿದ್ದಾರೆ ಆದ್ದರಿಂದಲೇ ಈ ಪದವಿಯನ್ನು ಪಡೆದಿದ್ದಾರೆ ಮಮ್ಮಾರವರೂ ಸಹ ತಿಳಿಸುತ್ತಿದ್ದರಲ್ಲವೆ. ಅವರೂ ಸಹ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯನ್ನು ಸೂಕ್ಷ್ಮವತನದಲ್ಲಿ ನೋಡುತ್ತೀರಿ ಅಂದಮೇಲೆ ಮಕ್ಕಳು ಫಾಲೋ ಮಾಡಬೇಕಾಗಿದೆ, ಸಮರ್ಪಣೆಯಾಗುವುದೂ ಸಹ ಬಡವರೇ ಆಗುತ್ತಾರೆ, ಸಾಹುಕಾರರಂತೂ ಸಮರ್ಪಣೆಯಾಗುವುದಿಲ್ಲ. ಬಾಬಾ ಇದೆಲ್ಲವೂ ತಮ್ಮದಾಗಿದೆ ಎಂದು ಬಡವರೇ ಹೇಳುತ್ತಾರೆ, ಶಿವ ತಂದೆಯಂತೂ ದಾತನಾಗಿದ್ದಾರೆ, ಅವರೆಂದೂ ಪಡೆಯುವುದಿಲ್ಲ. ಮಕ್ಕಳಿಗೆ ಹೇಳುತ್ತಾರೆ – ಇದೆಲ್ಲವೂ ನಿಮ್ಮದಾಗಿದೆ, ನಾನು ನನಗಾಗಿ ಮಹಲುಗಳನ್ನು ಇಲ್ಲಿಯಾಗಲಿ, ಅಲ್ಲಾಗಲಿ ಕಟ್ಟಿಸುವುದಿಲ್ಲ, ನಿಮ್ಮನ್ನೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ಈಗ ಈ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಮಂದಿರಗಳಲ್ಲಿ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ ಆದರೆ ಯಾವ ಪ್ರಕಾರದ ಜೋಳಿಗೆ? ಅಥವಾ ಯಾವ ವಸ್ತುವಿನಿಂದ ಜೋಳಿಗೆಯನ್ನು ತುಂಬಿಸಬೇಕು? ಈಗ ಜೋಳಿಗೆಯನ್ನು ತುಂಬುವವರು ಲಕ್ಷ್ಮಿಯಾಗಿದ್ದಾರೆ, ಜೋಳಿಗೆಯನ್ನು ತುಂಬುತ್ತಾರೆ, ಹಣ ಕೊಡುತ್ತಾರೆ. ಶಿವನ ಬಳಿಯಂತೂ ಹೋಗುವುದಿಲ್ಲ, ಕೃಷ್ಣನನ್ನು ಗೀತೆಯನ್ನು ತಿಳಿಸಿದನೆಂದು ಹೇಳುತ್ತಾರೆ ಆದರೆ ಕೃಷ್ಣನ ಬಳಿ ಜೋಳಿಗೆಯನ್ನು ತುಂಬಿಸು ಎಂದು ಹೇಳುವುದಿಲ್ಲ, ಶಂಕರನ ಬಳಿ ಹೋಗಿ ಹೇಳುತ್ತಾರೆ – ಶಿವ-ಶಂಕರ ಒಂದೇ ಎಂದು ತಿಳಿದುಕೊಳ್ಳುತ್ತಾರೆ. ಶಂಕರನು ಜೋಳಿಗೆಯನ್ನು ಖಾಲಿ ಮಾಡುವವರಾಗಿದ್ದಾರೆ, ನಮ್ಮ ಜೋಳಿಗೆಯನ್ನು ಯಾರೂ ಖಾಲಿ ಮಾಡಲು ಸಾಧ್ಯವಿಲ್ಲ. ವಿನಾಶವಂತೂ ಆಗಲೇಬೇಕಾಗಿದೆ. ರುದ್ರ ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆ ಪ್ರಜ್ವಲಿತವಾಯಿತೆಂದು ಹೇಳುತ್ತಾರೆ ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ.

ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಉದ್ಯೋಗ-ವ್ಯವಹಾರವನ್ನೂ ಮಾಡಬೇಕಾಗಿದೆ. ತಂದೆಯು ಪ್ರತಿಯೊಬ್ಬರ ನಾಡಿಯನ್ನು ನೋಡಿ ಸಲಹೆಯನ್ನು ಕೊಡುತ್ತಾರೆ ಏಕೆಂದರೆ ತಂದೆಯು ತಿಳಿಸುತ್ತಾರೆ – ನಾನು ಹೇಳಿ ಮತ್ತೆ ಮಾಡಲು ಸಾಧ್ಯವಾಗದಿದ್ದರೆ ಇಂತಹ ಸಲಹೆಯನ್ನು ನಾನೇಕೆ ಕೊಡಲಿ! ನಾಡಿಯನ್ನು ನೋಡಿಯೇ ಸಲಹೆ ಕೊಡುತ್ತಾರೆ, ಇವರ ಬಳಿಯಂತೂ ಬರಲೇಬೇಕಾಗುತ್ತದೆ, ಅವರು ಪೂರ್ಣ ಸಲಹೆಯನ್ನು ಕೊಡುತ್ತಾರೆ. ಎಲ್ಲರೂ ಕೇಳಬೇಕಾಗಿದೆ – ಬಾಬಾ, ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು? ಈಗ ಏನು ಮಾಡುವುದು? ತಂದೆಯು ಸ್ವರ್ಗದಲ್ಲಂತೂ ಕರೆದುಕೊಂಡು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಾವಂತೂ ಸ್ವರ್ಗವಾಸಿಗಳಾಗುವವರಾಗಿದ್ದೇವೆ, ಈಗ ನಾವು ನರಕವಾಸಿಗಳಾಗಿದ್ದೇವೆ. ಈಗ ನೀವು ನರಕದಲ್ಲಿಯೂ ಇಲ್ಲ, ಸ್ವರ್ಗದಲ್ಲಿಯೂ ಇಲ್ಲ. ಯಾರು-ಯಾರು ಬ್ರಾಹ್ಮಣರಾಗುತ್ತಾರೆ ಅವರ ಬುದ್ಧಿರೂಪಿ ಹಗ್ಗವು ಈ ಛೀ ಛೀ ಪ್ರಪಂಚದ ತೀರದಿಂದ ಬಿಚ್ಚಲ್ಪಟ್ಟಿದೆ. ನೀವು ಕಲಿಯುಗೀ ಪ್ರಪಂಚದ ತೀರವನ್ನು ಬಿಟ್ಟಿದ್ದೀರಿ. ಕೆಲವು ಬ್ರಾಹ್ಮಣರು ತೀವ್ರವಾಗಿ ಮುಂದೆ ಹೋಗುತ್ತಿದ್ದಾರೆ, ಕೆಲವರು ನೆನಪಿನ ಯಾತ್ರೆಯಲ್ಲಿ ಕಡಿಮೆಯಿದ್ದಾರೆ. ಕೆಲವರು ಕೈಯನ್ನೇ ಬಿಟ್ಟು ಬಿಡುತ್ತಾರೆಂದರೆ ಗುಟುಕರಿಸುತ್ತಾ ಅದರಲ್ಲಿಯೇ ಮುಳುಗಿ ಸಾಯುತ್ತಾರೆ ಅರ್ಥಾತ್ ಮತ್ತೆ ಕಲಿಯುಗದಲ್ಲಿಯೇ ಹೊರಟು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಅಂಬಿಗನು ಈಗ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆ ಯಾತ್ರೆಯಂತು ಅನೇಕ ಪ್ರಕಾರದ್ದಿದೆ, ನಿಮ್ಮ ಯಾತ್ರೆಯು ಒಂದೇ ಆಗಿದೆ, ಇದು ಸಂಪೂರ್ಣ ಭಿನ್ನವಾದ ಯಾತ್ರೆಯಾಗಿದೆ. ಹಾ! ಬಿರುಗಾಳಿಗಳು ನೆನಪನ್ನು ತುಂಡರಿಸುತ್ತವೆ. ಈ ನೆನಪಿನ ಯಾತ್ರೆಯನ್ನು ಚೆನ್ನಾಗಿ ಪಕ್ಕಾ ಮಾಡಿಕೊಳ್ಳಿ, ಪರಿಶ್ರಮ ಪಡಬೇಕು. ನೀವು ಕರ್ಮಯೋಗಿಯಾಗಿದ್ದೀರಿ. ಎಷ್ಟು ಸಾಧ್ಯವೋ ಅಷ್ಟು ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ಮಾಡುತ್ತಿರಲಿ. ಅರ್ಧಕಲ್ಪದಿಂದ ನೀವು ಪ್ರಿಯತಮೆಯರಾಗಿ ಪ್ರಿಯತಮನನ್ನು ನೆನಪು ಮಾಡುತ್ತಾ ಬಂದಿದ್ದೀರಿ – ಬಾಬಾ ನಮಗೆ ಇಲ್ಲಿ ಬಹಳ ದುಃಖವಿದೆ, ಈಗ ನಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡಿ. ನೆನಪಿನ ಯಾತ್ರೆಯಲ್ಲಿ ಇರುತ್ತೀರೆಂದರೆ ನಿಮ್ಮ ಪಾಪವು ಸಮಾಪ್ತಿಯಾಗಿ ಬಿಡುತ್ತದೆ. ನೀವೇ ಸ್ವರ್ಗದ ಆಸ್ತಿಯನ್ನು ಪಡೆದಿದ್ದೀರಿ, ಈಗ ಕಳೆದುಕೊಂಡಿದ್ದೀರಿ. ಭಾರತವು ಸ್ವರ್ಗವಾಗಿತ್ತು ಆದ್ದರಿಂದ ಪ್ರಾಚೀನ ಭಾರತವೆಂದು ಹೇಳಲಾಗುತ್ತದೆ, ಭಾರತಕ್ಕೆ ಬಹಳ ಮಾನ್ಯತೆ ನೀಡುತ್ತಾರೆ. ಎಲ್ಲದಕ್ಕಿಂತ ದೊಡ್ಡದೂ ಆಗಿದೆ, ಎಲ್ಲದಕ್ಕಿಂತ ಹಳೆಯದೂ ಆಗಿದೆ. ಇದನ್ನಂತೂ ತಿಳಿದುಕೊಂಡಿದ್ದೀರಿ – ವಿನಾಶವು ಸನ್ಮುಖದಲ್ಲಿ ನಿಂತಿದೆ. ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರಲ್ಲಿ ಬಹಳ ಖುಷಿಯಿರುತ್ತದೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ.

ಅಹಮದಾಬಾದ್ನಲ್ಲಿ ನೋಡಿರಿ, ಎಷ್ಟೊಂದು ಸಾಧು-ಸಂತ ಮೊದಲಾದ ಪ್ರತಿಯೊಂದು ಪ್ರಕಾರದವರೂ ಬಂದಿದ್ದರು. ನೀವಂತೂ ಸತ್ಯವನ್ನೂ ಹೇಳುತ್ತೀರಿ ಎಂದು ಹೇಳುತ್ತಾರೆ ಆದರೆ ನಾವೂ ಸಹ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂಬುದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಇಲ್ಲಿಂದ ಹೊರಗೆ ಹೋಗುತ್ತಿದ್ದಂತೆಯೇ ಸಮಾಪ್ತಿ. ಈಗ ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಗರ್ಭ ಜೈಲಾಗಲಿ, ಸ್ಥೂಲವಾದ ಜೈಲಾಗಲಿ ಇರುವುದಿಲ್ಲ, ಮತ್ತೆಂದೂ ಜೈಲಿನ ಮುಖವು ನೋಡುವುದಕ್ಕೂ ಸಿಗುವುದಿಲ್ಲ. ಎರಡೂ ಜೈಲುಗಳಿರುವುದಿಲ್ಲ. ಇಲ್ಲಿ ಇದೆಲ್ಲವೂ ಮಾಯೆಯ ಶೋ ಆಗಿದೆ. ಇತ್ತೀಚೆಗೆ ಪ್ರತಿಯೊಂದು ಮಾತು ಆಕಸ್ಮಿಕವಾಗಿ ಆಗುತ್ತದೆ, ಮೃತ್ಯುವೂ ಸಹ ಆಕಸ್ಮಿಕವಾಗಿ ಆಗುತ್ತದೆ. ಸತ್ಯಯುಗದಲ್ಲಿ ಇಂತಹ ಯಾವುದೇ ಉಪದ್ರವಗಳಾಗುವುದಿಲ್ಲ, ಇಲ್ಲಿ ಮೃತ್ಯುವೂ ಬೇಗನೆ ಆಗುತ್ತದೆ ಆದ್ದರಿಂದ ಬಹಳ ದುಃಖವೂ ಆಗುತ್ತದೆ ಎಲ್ಲರೂ ಸಮಾಪ್ತಿಯಾಗುತ್ತಾರೆ. ಇಡೀ ಧರಣಿಯೇ ಹೊಸದಾಗಿ ಬಿಡುತ್ತದೆ. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜಧಾನಿಯಿರುತ್ತದೆ, ಅದು ಅವಶ್ಯವಾಗಿ ಪುನಃ ಬರುವುದು. ಮುಂದೆ ಹೋದಂತೆ ನೋಡುವಿರಿ ಏನಾಗುವುದು ಎಂದು. ಬಹಳ ಭಯಂಕರ ದೃಶ್ಯವಿರುವುದು. ನೀವು ಮಕ್ಕಳು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ ಆದ್ದರಿಂದ ಮಕ್ಕಳಿಗಾಗಿ ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಇದು ಏರುವ ಕಲೆಯ ಯಾತ್ರೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸದಾ ಇದೇ ಸ್ಮೃತಿಯಲ್ಲಿರಿ – ನಾವು ಬ್ರಾಹ್ಮಣರಾಗಿದ್ದೇವೆ, ನಾವು ಬ್ರಾಹ್ಮಣರಿಗೇ ಭಗವಂತನು ಓದಿಸುತ್ತಾರೆ. ನಾವೀಗ ಬ್ರಾಹ್ಮಣರಿಂದ ದೇವತೆಗಳಾಗುತ್ತಿದ್ದೇವೆ.

2. ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಈ ಕಲಿಯುಗೀ ಪತಿತ ಪ್ರಪಂಚದ ತೀರವನ್ನು ಬಿಡಬೇಕಾಗಿದೆ. ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು.

ವರದಾನ:-

ಯಾವಾಗ ಮಾಸ್ಟರ್ ರಚೈತ, ಮಾಸ್ಟರ್ ಜ್ಞಾನಪೂರ್ಣನ ಶಕ್ತಿಶಾಲಿ ಸ್ಥಿತಿ ಅಥವ ನಶೆಯಲ್ಲಿ ಸ್ಥಿತರಾಗಿರುತ್ತೀರಿ, ಆಗಲೇ ರಚನೆಯ ಸರ್ವ ಆಕರ್ಷಣೆಗಳಿಂದ ದೂರವಿರಲು ಸಾಧ್ಯ. ಏಕೆಂದರೆ ಈಗ ರಚನೆಯು ಇನ್ನಷ್ಟು ಭಿನ್ನ-ಭಿನ್ನ ರಂಗು-ರಂಗಿನ ರೂಪವನ್ನು ರಚಿಸುವುದು ಆದ್ದರಿಂದ ಈಗ ಬಾಲ್ಯತನವನ್ನು ಮರೆಯಿರಿ, ಹುಡುಗಾಟಿಕೆಯ ತಪ್ಪುಗಳು, ಆಲಸ್ಯದ ತಪ್ಪುಗಳು, ನಿರ್ಲಕ್ಷ್ಯ ಮಾಡುವ ತಪ್ಪುಗಳೇನಿವೆಯೋ ಅದನ್ನು ಮರೆತು ತಮ್ಮ ಶಕ್ತಿಶಾಲಿ, ಶಕ್ತಿ-ಸ್ವರೂಪ, ಶಸ್ತ್ರಧಾರಿ ಸ್ವರೂಪ, ಸದಾ ಜಾಗೃತ ಜ್ಯೋತಿ ಸ್ವರೂಪವನ್ನು ಪ್ರತ್ಯಕ್ಷಗೊಳಿಸಿದಾಗ ಹೇಳಲಾಗುವುದು – ಮಾಸ್ಟರ್ ರಚೈತ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top