29 October 2021 KANNADA Murli Today | Brahma Kumaris
Read and Listen today’s Gyan Murli in Kannada
28 October 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ನೀವೀಗ ಶಬ್ಧದಿಂದ ದೂರ ಹೋಗಬೇಕಾಗಿದೆ, ಆದ್ದರಿಂದ ಬಾಯಿಂದ ಶಿವ-ಶಿವ ಎಂದೂ ಹೇಳುವ ಅವಶ್ಯಕತೆಯಿಲ್ಲ”
ಪ್ರಶ್ನೆ:: -
ಒಬ್ಬ ತಂದೆಗೇ ಸರ್ವಶಕ್ತಿವಂತ, ಜ್ಞಾನಸಾಗರನೆಂದು ಹೇಳಲಾಗುತ್ತದೆ, ಅನ್ಯರಿಗಲ್ಲ-ಏಕೆ?
ಉತ್ತರ:-
ಏಕೆಂದರೆ ಒಬ್ಬ ತಂದೆಯನ್ನೇ ನೆನಪು ಮಾಡುವುದರಿಂದ ಆತ್ಮವು ಪತಿತದಿಂದ ಪಾವನವಾಗುತ್ತದೆ. ತಂದೆಯೇ ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಅನ್ಯ ಯಾವುದೇ ದೇಹಧಾರಿ ಮನುಷ್ಯರು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆಯು ನಿಮ್ಮನ್ನು ರಾವಣ ರಾಜ್ಯದಿಂದ ಮುಕ್ತಗೊಳಿಸುತ್ತಾರೆ, ನೀವು ಶಿವ ತಂದೆಯಿಂದ ಶಕ್ತಿಯನ್ನು ಪಡೆಯುತ್ತೀರಿ. ಎಷ್ಟು ಹೆಚ್ಚು ನೆನಪು ಮಾಡುವಿರೋ ಅಷ್ಟು ಶಕ್ತಿ ಸಿಗುವುದು ಮತ್ತು ತುಕ್ಕು ಬಿಡುತ್ತಾ ಹೋಗುವುದು.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಓಂ ನಮಃ ಶಿವಾಯ…..
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಭಕ್ತಿಯ ಮಹಿಮೆಯನ್ನು ಕೇಳಿದಿರಿ. ನೀವೂ ಸಹ ಮಹಿಮೆಯನ್ನು ಹಾಡುತ್ತಿದ್ದಿರಿ. ಈಗ ಮಹಿಮೆ ಹಾಡುವುದಿಲ್ಲ ಮತ್ತು ನಿಮಗೆ ಮಹಿಮೆಯ ಅವಶ್ಯಕತೆಯೂ ಇಲ್ಲ. ಯಾವುದನ್ನು ಭಕ್ತರು ಮಾಡುವರೋ ಅದನ್ನು ನೀವು ಮಕ್ಕಳು ಮಾಡುವಂತಿಲ್ಲ. ಮೊದಲು ನೀವು ಭಕ್ತರಾಗಿದ್ದಿರಿ, ಈಗ ನಿಮಗೆ ಭಗವಂತ ಸಿಕ್ಕಿದ್ದಾರೆ. ಎಲ್ಲರಿಗೆ ಒಟ್ಟಿಗೆ ಸಿಗಲು ಸಾಧ್ಯವಿಲ್ಲ. ತಂದೆಯು ಎಲ್ಲರಿಗೆ ಒಟ್ಟಿಗೆ ಹೇಗೆ ಓದಿಸುವರು? ಇದು ಸಾಧ್ಯವಿಲ್ಲ. ಎಲ್ಲಾ ಭಕ್ತರು ಒಟ್ಟಿಗೆ ಇರಲು ಸಾಧ್ಯವಿಲ್ಲ. ಹಾ! ತಂದೆಯು ಅವಶ್ಯವಾಗಿ ಓದಿಸಬೇಕಾಗಿದೆ ಏಕೆಂದರೆ ಇದು ರಾಜಯೋಗವಾಗಿದೆ. ಸೂರ್ಯವಂಶಿ, ಚಂದ್ರವಂಶಿ ರಾಜ್ಯವು ಸ್ಥಾಪನೆಯಾಗಲಿದೆ, ಮಕ್ಕಳು ಪ್ರದರ್ಶನಿಯಲ್ಲಿ ತಿಳಿಸಬೇಕಾಗಿದೆ. ಹಬ್ಬಗಳಿದ್ದಾಗಲೇ ಸರ್ವೀಸ್ ಮಾಡಬಹುದಲ್ಲವೆ. ನೀವು ತಮಗಾಗಿ ರಾಜ್ಯ ಸ್ಥಾಪನೆ ಮಾಡಬೇಕಾಗಿದೆ. ನೀವು ಶಿವಶಕ್ತಿ, ಮಹಾರಥಿ ಸೇನೆಯಾಗಿದ್ದೀರಿ ಮತ್ತ್ಯಾವುದೇ ವ್ಯಾಯಾಮ ಇತ್ಯಾದಿಗಳನ್ನು ಕಲಿಯುವುದಿಲ್ಲ. ನೀವು ಆತ್ಮಿಕ ವ್ಯಾಯಾಮವನ್ನು ಕಲಿಯುತ್ತೀರಿ. ಭಾರತದ ಈ ವ್ಯಾಯಾಮವು ಪ್ರಸಿದ್ಧವಾಗಿದೆ. ಇದು ಯೋಗದ ವ್ಯಾಯಾಮವಾಗಿದೆ, ಆತ್ಮವು ಪರಮಪಿತ ಪರಮಾತ್ಮನೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಇದರಲ್ಲಿ ಯಾವುದೇ ಯುದ್ಧದ ಮಾತಿಲ್ಲ. ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಇದರಲ್ಲಿ ಯುದ್ಧದ ಸಂಬಂಧವಿಲ್ಲ. ನೀವು ಬೇಹದ್ದಿನ ತಂದೆಯ ವಾರಸುಧಾರರಾಗಿದ್ದೀರಿ ಅಂದಮೇಲೆ ತಂದೆಯ ಮಕ್ಕಳಾಗಿ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಯುದ್ಧ ಮೊದಲಾದುವುಗಳ ಮತವನ್ನು ತಂದೆಯು ಕೊಡುವುದಿಲ್ಲ. ಕೇವಲ ಇದನ್ನೇ ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ ನೀವು ಸತೋಪ್ರಧಾನರಾಗಿದ್ದಿರಿ, ರಾಜ್ಯಭಾರ ಮಾಡುತ್ತಿದ್ದಿರಿ, ಈಗ ನಿಮಗೆ ಸ್ಮೃತಿ ಬಂದಿದೆ. ನೀವು ತಮ್ಮ ಜನ್ಮಗಳನ್ನೇ ಅರಿತುಕೊಂಡಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನೂ ಹೇಳುತ್ತಾರೆ. 84 ಲಕ್ಷ ಜನ್ಮಗಳೆಂಬುದು ಅಸತ್ಯವಾಗಿದೆ. ಭಕ್ತಿಮಾರ್ಗದಲ್ಲಿ ಯಾರಿಗೇನು ಬಂದರೆ ಅದನ್ನು ಓದುತ್ತಿರುತ್ತಾರೆ. ಡ್ರಾಮಾನುಸಾರ ಇದು ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ. ಭಕ್ತಿಯೇ ಬೇರೆ, ಜ್ಞಾನವೇ ಬೇರೆಯಾಗಿದೆ. ನೀವು ಮಕ್ಕಳ ವಿನಃ ಅನ್ಯ ಯಾವುದೇ ಋಷಿ ಮುನಿ ಮೊದಲಾದವರ ಬುದ್ಧಿಯಲ್ಲಿ ಈ ಜ್ಞಾನವಿಲ್ಲ. ಸುಖವೇ ಬೇರೆ, ದುಃಖವೇ ಬೇರೆ. ಸುಖವನ್ನು ತಂದೆಯು ಕೊಡುತ್ತಾರೆ, ದುಃಖವನ್ನು ರಾವಣನನ್ನು ಕೊಡುತ್ತಾನೆ ಎಂಬುದೂ ಸಹ ಅವರಿಗೆ ಗೊತ್ತಿಲ್ಲ. ಯಾರು ಸೂರ್ಯವಂಶಿ, ಚಂದ್ರವಂಶಿಯರಾಗಿದ್ದರು ಅವರೇ 84 ಜನ್ಮಗಳ ಚಕ್ರವನ್ನು ಸುತ್ತಿ ಶೂದ್ರವಂಶಿಯರಾದರು. ನೀವು ವಿಶ್ವದ ಮಾಲೀಕರಾಗಿದ್ದಿರಿ, 84 ಜನ್ಮಗಳನ್ನು ತೆಗೆದುಕೊಂಡು ಕೆಳಗಿಳಿಯುತ್ತಾ ತುಚ್ಛ ಬುದ್ಧಿಯವರು, ತಮೋಪ್ರಧಾನರಾಗಿ ಬಿಟ್ಟಿದ್ದೀರಿ ಎಂದು ತಂದೆಯು ಸ್ಮೃತಿ ತರಿಸುತ್ತಾರೆ. ಸತೋಪ್ರಧಾನರಿಗೆ ಸ್ವಚ್ಛ, ಶ್ರೇಷ್ಠ ಬುದ್ಧಿಯವರೆಂದು ಹೇಳಲಾಗುತ್ತದೆ. ತಮೋಪ್ರಧಾನರಿಗೆ ನೀಚ ಬುದ್ಧಿಯವರೆಂದು ಹೇಳಲಾಗುತ್ತದೆ. ನೀಚ ಬುದ್ಧಿಯವರು ಶ್ರೇಷ್ಠ ಬುದ್ಧಿಯವರಿಗೆ ನಮಸ್ಕಾರ ಮಾಡುತ್ತಾರೆ. ಇದು ನಿಮಗೂ ಸಹ ತಿಳಿದಿರಲಿಲ್ಲ – ನಾವೇ ಶ್ರೇಷ್ಠರಾಗಿದ್ದೆವು, ಈಗ ನಾವೇ ಕನಿಷ್ಟರಾಗಿದ್ದೇವೆ ಎಂದು. ತಂದೆಯು ತಿಳಿಸುತ್ತಾರೆ, ಯಾರು ಮೊದಲ ನಂಬರಿನಲ್ಲಿ ಜನ್ಮ ತೆಗೆದುಕೊಂಡಿದ್ದರೋ ಅವರೇ ಸತೋಪ್ರಧಾನರಾಗುವರು. ಆ ಸೂರ್ಯವಂಶಿಯರೇ 84 ಜನ್ಮಗಳನ್ನು ತೆಗೆದುಕೊಳ್ಳುವರು. ನೀವೀಗ ತಿಳಿದುಕೊಂಡಿದ್ದೀರಿ, ನಾವು ವಿಶ್ವದ ಮಾಲೀಕರಾಗಿದ್ದಾಗ ಪಾವನ, ಸತೋಪ್ರಧಾನರಾಗಿದ್ದೆವು. ಪತಿತರು ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಪಾವನರ ಮಹಿಮೆ ನೋಡಿ, ಎಷ್ಟು ಶ್ರೇಷ್ಠವಾಗಿದೆ! ಸರ್ವಗುಣ ಸಂಪನ್ನರು…. ತ್ರೇತಾಯುಗದಲ್ಲಿ 14 ಕಲಾ ಸಂಪೂರ್ಣರೆಂದು ಹೇಳಲಾಗುವುದಿಲ್ಲ. ಸೂರ್ಯವಂಶಿಯರಿಗೆ 16 ಕಲಾ ಸಂಪೂರ್ಣರೆಂದು ಹೇಳಲಾಗುತ್ತದೆ. 14 ಕಲೆಗಳ ಹಿಂದೆ ಸಂಪೂರ್ಣ ಶಬ್ಧವು ಬರುವುದಿಲ್ಲ. 16 ಕಲೆಯುಳ್ಳವರಿಗೆ ಸಂಪೂರ್ಣ ಎಂದು ಬರೆಯಬೇಕಾಗಿದೆ. ಈಗ ನೀವು ಮಕ್ಕಳು 16 ಕಲಾ ಸಂಪೂರ್ಣರಾಗುತ್ತೀರಿ.
ಇದನ್ನೂ ನೀವು ಮಕ್ಕಳಿಗೆ ತಿಳಿಸಿದ್ದಾರೆ – ಈ ಜ್ಞಾನವು ಅತಿ ಸಹಜವಾಗಿದೆ, ಇದಕ್ಕಿಂತಲೂ ಸಹಜ ಮಾತು ಯಾವುದೂ ಇರುವುದಿಲ್ಲ. ತಂದೆಯು ದಯಾಹೃದಯಿಯಾಗಿದ್ದಾರಲ್ಲವೆ. ಮಕ್ಕಳು ಭಕ್ತಿಯಲ್ಲಿ ಹುಡುಕಾಡಿ-ಹುಡುಕಾಡಿ ಸುಸ್ತಾಗಿ ಬಿಟ್ಟಿದ್ದಾರೆಂದು ತಂದೆಗೆ ಗೊತ್ತಿದೆ. ಆದ್ದರಿಂದ ದ್ರೌಪದಿಯ ಕಾಲು ಒತ್ತಿದರೆಂದು ತೋರಿಸಿದ್ದಾರೆ. ತಂದೆಯ ಬಳಿ ವೃದ್ಧ ಮಾತೆಯರು ಬರುತ್ತಾರೆ. ಅವರಿಗೆ ತಂದೆಯು ಹೇಳುತ್ತಾರೆ – ನೀವು ಭಕ್ತಿಯ ಆಘಾತವನ್ನನುಭವಿಸಿ ಸುಸ್ತಾಗಿ ಬಿಟ್ಟಿದ್ದೀರಿ. ಆದ್ದರಿಂದ ತಂದೆಯು ಈಗ ನಿಮ್ಮ ದಣಿವೆಲ್ಲವನ್ನೂ ದೂರ ಮಾಡುತ್ತಾರೆ. ಭಕ್ತಿಯಲ್ಲಿ ರಾಮ, ರಾಮ ಎಂದು ಜಪಿಸುತ್ತಾರೆ. ಮಾಲೆಯನ್ನು ಜಪಿಸುತ್ತಾ ಇರುತ್ತಾರೆ. ಬ್ರಹ್ಮಾ ತಂದೆಗೆ ಪಾದ್ರಿಗಳೊಂದಿಗೆ ಸಂಪರ್ಕವಿತ್ತು, ಪಾದ್ರಿಗಳೂ ಸಹ ಬೈಬಲನ್ನು ಹಿಡಿದುಕೊಂಡು ತಿಳಿಸುತ್ತಾ ಇರುತ್ತಾರೆ. ಅನೇಕರು ಕ್ರಿಶ್ಚಿಯನ್ನರಾಗಿ ಬಿಡುತ್ತಾರೆ. ಇಲ್ಲಿ ಮಾಲೆ ಇತ್ಯಾದಿಗಳನ್ನು ಜಪಿಸುವ ಮಾತಿಲ್ಲ. ತಂದೆಯು ತಿಳಿಸುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ. ಬಾಯಿಂದ ಶಿವ, ಶಿವ ಎಂದು ಹೇಳುವ ಅವಶ್ಯಕತೆಯೂ ಇಲ್ಲ. ನಾವಂತೂ ಶಬ್ಧದಿಂದ ದೂರ ಹೋಗಬೇಕಾಗಿದೆ. ತಂದೆಯು ಬಹಳ ಸಹಜ ಯುಕ್ತಿಯನ್ನು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು ಮತ್ತು ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕಾಗಿದೆ. ಕಮಲ ಪುಷ್ಫವು ಬಹಳ ಪ್ರಸಿದ್ಧವಾಗಿದೆ. ಅದರ ಬಹಳ ದೊಡ್ಡ ಪಂಚಾಯಿತಿ ಇರುತ್ತದೆ ಆದರೂ ಸಹ ಭಿನ್ನ ಮತ್ತು ಪ್ರಿಯವಾಗಿರುತ್ತದೆ. ನೀವೂ ಸಹ ವಿಷಯ ಸಾಗರದಲ್ಲಿರುತ್ತಾ ಭಿನ್ನ ಮತ್ತು ಪ್ರಿಯರಾಗಿರಿ, ಇದು ವಿಷಯ ಸಾಗರವಾಗಿದೆ. ಇದಕ್ಕೆ ನದಿಯೆಂದು ಹೇಳುವುದಿಲ್ಲ.
ನೀವು ಮಕ್ಕಳು ಈಗ ಎಷ್ಟೊಂದು ಬುದ್ಧಿವಂತರಾಗುತ್ತೀರಿ. ಇದೇ ಬುದ್ಧಿವಂತಿಕೆಯಿಂದ ನೀವು ಮಹಾರಾಜಕುಮಾರ ಆಗಿ ಬಿಡುತ್ತೀರಿ. ನಿಮಗೆ ಬಹಳ ಖುಷಿಯಿರಬೇಕು, ಪುರುಷಾರ್ಥ ಮಾಡಬೇಕು. ಕುಮಾರ ಅಥವಾ ಕುಮಾರಿ ಇಬ್ಬರೂ ಪುರುಷಾರ್ಥ ಮಾಡಬೇಕಾಗಿದೆ. ಲೌಕಿಕ ಸಂಬಂಧದಲ್ಲಿ ತಂದೆಯ ಆಸ್ತಿಯು ಕೇವಲ ಮಗನಿಗೆ ಸಿಗುತ್ತದೆ, ಮಗಳಿಗಿಲ್ಲ. ಇಲ್ಲಿ ಎಲ್ಲಾ ಆತ್ಮರಿಗೆ ಆಸ್ತಿಯು ಸಿಗುತ್ತದೆ. ನೆನಪಿನ ಯಾತ್ರೆಯಿಂದಲೇ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರೆಂದು ತಂದೆಯು ತಿಳಿಸುತ್ತಾರೆ. ಪ್ರದರ್ಶನಿಯಲ್ಲಿ ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ ಅದರ ನಂತರ ತಂದೆಯ ಆಸ್ತಿ. ಮೊದಲು ಈ ನಿಶ್ಚಯವನ್ನು ತರಿಸಿ – ಇವರು ನಿಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಭಗವಂತನು ಒಬ್ಬರೇ ಆಗಿದ್ದಾರೆ, ಬ್ರಹ್ಮಾ-ವಿಷ್ಣು-ಶಂಕರನು ಭಗವಂತರಲ್ಲ, ದೇವತೆಗಳಾಗಿದ್ದಾರೆ. ಭಗವಂತನು ಪತಿತ-ಪಾವನ, ನಿರಾಕಾರ ತಂದೆಯಾಗಿದ್ದಾರೆ. ಅವರ ಮಹಿಮೆಯೇ ಭಿನ್ನವಾಗಿದೆ ಎಂಬುದನ್ನು ಅವರಿಗೆ ತಿಳಿಸಬೇಕಾಗಿದೆ. ಇತ್ತೀಚೆಗೆ ಪ್ರದರ್ಶನಿಯಲ್ಲಿ ತ್ರಿಮೂರ್ತಿಯ ಚಿತ್ರದಲ್ಲಿ ತಿಳಿಸಲಾಗುತ್ತದೆ. ಅವರು ತಂದೆ, ಇವರು ದಾದಾ ಆಗಿದ್ದಾರೆ. ಆಸ್ತಿಯು ತಂದೆಯಿಂದಲೇ ಸಿಗುತ್ತದೆ. ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ಆಸ್ತಿಯು ಹೇಗೆ ಸಿಗುವುದು? ಅವರು ಎಲ್ಲರ ರಚಯಿತನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನೂ ಸಹ ರಚನೆಯಾಗಿದ್ದಾರೆ. ರಚನೆಗೆ ರಚಯಿತನಿಂದಲೇ ಆಸ್ತಿಯು ಸಿಗಲು ಸಾಧ್ಯ. ಆ ನಿರಾಕಾರ ತಂದೆಯು ಇವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ಎಲ್ಲರ ರಚಯಿತನು ಒಬ್ಬರೇ ಆಗಿದ್ದಾರೆ ಆದ್ದರಿಂದ ಸರ್ವರ ಸದ್ಗತಿದಾತ ಒಬ್ಬರೇ ಎಂದು ಗಾಯನವಿದೆ. ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಬಾಕಿ ಅವರೆಲ್ಲರೂ ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಇವರು ಜ್ಞಾನಸಾಗರ ಸ್ವಯಂ ಅಥಾರಿಟಿಯಾಗಿದ್ದಾರೆ. ವಿಶ್ವದ ಆಲ್ಮೈಟಿ ಅಥಾರಿಟಿಯೇ ಹೇಳುತ್ತಾರೆ – ನಾನು ವೇದಶಾಸ್ತ್ರಗಳನ್ನು ತಿಳಿದುಕೊಂಡಿದ್ದೇನೆ ಮತ್ತು ನಿಮಗೆ ಅದರ ಸಾರವನ್ನು ತಿಳಿಸುತ್ತೇನೆ, ಇವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ, ಯಾವುದು ಸತ್ಯ-ತ್ರೇತಾಯುಗದಲ್ಲಿ ಇರುವುದೇ ಇಲ್ಲ. ಭಕ್ತಿಯಲ್ಲಿಯೇ ಏಣಿಯನ್ನು ಕೆಳಗಿಳಿಯಲಾಗುತ್ತದೆ. ಒಬ್ಬ ತಂದೆಗೇ ಸರ್ವಶಕ್ತಿವಂತನೆಂದು ಗಾಯನವಿದೆ, ಅವರ ಜೊತೆ ಯೋಗವನ್ನು ಇಡುವುದರಿಂದಲೇ ನಾವು ಪವಿತ್ರರಾಗಿ ಬಿಡುತ್ತೇವೆ ಅಂದಮೇಲೆ ಸರ್ವಶಕ್ತಿವಂತನಾದರಲ್ಲವೆ. ನಾವು ಎಲ್ಲರನ್ನೂ ಪತಿತರನ್ನು ಪಾವನರನ್ನಾಗಿ ಮಾಡಿ ಬಿಡುತ್ತೇನೆ, ರಾವಣ ರಾಜ್ಯದಿಂದ ಮುಕ್ತಗೊಳಿಸುತ್ತೇವೆ. ನೀವೀಗ ಶಿವ ತಂದೆಯಿಂದ ಶಕ್ತಿಯನ್ನು ಪಡೆಯುತ್ತಿದ್ದೀರಿ, ಎಷ್ಟು ಹೆಚ್ಚು ನೆನಪು ಮಾಡುತ್ತೀರೋ ಅಷ್ಟು ಶಕ್ತಿಯು ಸಿಗುವುದು ಮತ್ತು ತುಕ್ಕು ಬಿಟ್ಟು ಹೋಗುವುದು. ನಿಮಗೆ ಹಗಲು-ರಾತ್ರಿ ಇದೇ ಚಿಂತೆಯಿರಲಿ – ಪತಿತರಿಂದ ಪಾವನರು, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ಮಾಯೆಯ ಬಿರುಗಾಳಿಗಳು ಬರುತ್ತವೆ. ತಂದೆಯು ತಿಳಿಸುತ್ತಾರೆ – ಎಚ್ಚರಿಕೆಯಿಂದ ಇರಬೇಕು, ನಿಮ್ಮ ಯುದ್ಧವು ಮಾಯೆಯ ಜೊತೆಯಿದೆ. ವ್ಯರ್ಥ ವಿಕಲ್ಪಗಳು ಬಹಳಷ್ಟು ಬರುತ್ತವೆ. ಯಾವ ಸಂಕಲ್ಪಗಳು ಅಜ್ಞಾನ ಕಾಲದಲ್ಲಿಯೂ ಬಂದಿರುವುದಿಲ್ಲವೋ ಅವು ಬರುತ್ತವೆ. ನೀವು ಯುದ್ಧದ ಮೈದಾನದಲ್ಲಿದ್ದೀರಿ, ಪರಿಶ್ರಮವೆಲ್ಲವೂ ನೆನಪಿನ ಯಾತ್ರೆಯಲ್ಲಿದೆ. ಭಾರತದ ಯೋಗವು ಪ್ರಸಿದ್ಧವಾಗಿದೆ. ಯೋಗಕ್ಕಾಗಿಯೇ ತಂದೆಯು ತಿಳಿಸುತ್ತಾರೆ – ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಹೀಗೆ ಮತ್ತ್ಯಾವ ಮನುಷ್ಯರು ತಿಳಿಸಲು ಸಾಧ್ಯವಿಲ್ಲ. ಎಲ್ಲರೂ ಭಗವಂತನ ರೂಪವಾಗಿದ್ದಾರೆ, ಎಲ್ಲಿ ನೋಡಿದರೂ ಪರಮಾತ್ಮನೇ ಪರಮಾತ್ಮನಿದ್ದಾರೆಂದು ಅವರು ಹೇಳಿ ಬಿಡುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ – ನೀವು ಆತ್ಮರಾಗಿದ್ದೀರಿ, 84 ಜನ್ಮಗಳನ್ನೂ ತೆಗೆದುಕೊಳ್ಳುತ್ತೀರಿ. ಒಂದುವೇಳೆ ಎಲ್ಲರೂ ಪರಮಾತ್ಮನಾಗಿದ್ದರೆ ಪರಮಾತ್ಮನ ಜನನ-ಮರಣ ಚಕ್ರದಲ್ಲಿ ಬರುತ್ತಾರೆಯೇ? ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮದಲ್ಲಿ ಒಳ್ಳೆಯ, ಕೆಟ್ಟ ಸಂಸ್ಕಾರವಿರುತ್ತದೆ, ಒಳ್ಳೆಯ ಸಂಸ್ಕಾರ ಇರುವವರ ಮಹಿಮೆಯನ್ನು ಹಾಡುತ್ತಾರೆ. ಕೆಟ್ಟ ಸಂಸ್ಕಾರ ಇರುವವರನ್ನು ನೀಚರು, ಪಾಪಿಗಳೆಂದು ಹೇಳುತ್ತಾರೆ. ತಂದೆಯು ಪವಿತ್ರರಾಗುವ ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖ ಕೊಡಬಾರದು, ತನಗೂ ದುಃಖವನ್ನು ಕೊಟ್ಟುಕೊಳ್ಳಬಾರದು. ಯಾವುದೇ ವಿಕರ್ಮ, ಕಳ್ಳತನ ಇತ್ಯಾದಿಗಳನ್ನು ಮಾಡಬಾರದು. ಒಂದುವೇಳೆ ಎಲ್ಲಿಯಾದರೂ ಸುಳ್ಳು ಹೇಳಬೇಕಾಗುತ್ತದೆ ಎಂದರೆ ತಂದೆಯೊಂದಿಗೆ ಸಲಹೆಯನ್ನು ಕೇಳಿರಿ. ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಪಾಪವಾಗಿದೆ, ಅದನ್ನು ಮಾಡಬೇಡಿ.
ತಂದೆಯು ತಿಳಿಸುತ್ತಾರೆ – ಮಕ್ಕಳೇ, ಕೈಗಳಿಂದ ಕೆಲಸ ಮಾಡುತ್ತಾ ಬುದ್ಧಿಯೋಗವನ್ನು ನನ್ನಲ್ಲಿಡಿ (ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನೆನಪು ಮಾಡಲಿ) ತಂದೆಯು ಸರ್ಜನ್ ಆಗಿದ್ದಾರೆ, ಎಲ್ಲರ ಕಾಯಿಲೆಯು ಒಂದೇರೀತಿ ಇರಲು ಸಾಧ್ಯವಿಲ್ಲ. ಎಲ್ಲರ ಕರ್ಮವೂ ಒಂದೇ ರೀತಿ ಇರುವುದಿಲ್ಲ, ಗುರಿಯು ಬಹಳ ಉನ್ನತವಾಗಿದೆ. ಆದ್ದರಿಂದ ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ಕೇಳಬೇಕಾಗಿದೆ. ಅಮರನಾಥ ಯಾತ್ರೆಗೆ ಹೋಗುತ್ತಾರೆಂದರೆ ಅಮರನಾಥನಿಗೆ ಜಯವಾಗಲಿ, ಬದರೀನಾಥನಿಗೆ ಜಯವಾಗಲಿ. ಹೇ ಬದರೀನಾಥ ನಮ್ಮ ರಕ್ಷಣೆ ಮಾಡು ಎಂದು ಹೇಳುತ್ತಾರೆ. ನೀವೀಗ ತೀರ್ಥ ಯಾತ್ರೆ ಇತ್ಯಾದಿಗಳೇನನ್ನೂ ಮಾಡಬೇಕಾಗಿಲ್ಲ. ಈ ಜ್ಞಾನದ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ, ಅವರದೇ ಪಾತ್ರವಿದೆ. ನೀವೂ ಸಹ ತಂದೆಯ ಜೊತೆ ಜೊತೆಗೆ ಪಾತ್ರಧಾರಿಗಳಾಗಿದ್ದೀರಿ. ಯಾರೆಷ್ಟು ಓದುವರೋ ಅಷ್ಟು ಶ್ರೇಷ್ಠ ಪದವಿ ಸಿಗುವುದು. ಇದರಲ್ಲಿ ಯಾರದೂ ಹೆಗ್ಗಳಿಕೆಯಿಲ್ಲ, ಹೆಗ್ಗಳಿಕೆಯೆಲ್ಲವೂ ಒಬ್ಬ ತಂದೆಯದೇ ಆಗಿದೆ ಯಾರು ಸರ್ವ ಮನುಷ್ಯರಿಗೆ ಸದ್ಗತಿ ನೀಡುತ್ತಾರೆ. ಸರ್ವ ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಡ್ರಾಮಾದಲ್ಲಿ ನನಗೂ ಪಾತ್ರವು ಸಿಕ್ಕಿದೆ. ಪಂಚತತ್ವಗಳಿಗೂ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ ಅದನ್ನು ಅಭಿನಯಿಸಬೇಕಾಗಿದೆ. ಧರಣಿಯು ಅಲುಗಾಡುವುದು, ವಿನಾಶವಾಗುವುದು. ನಿಮ್ಮದೂ ಸಹ ಡ್ರಾಮಾದಲ್ಲಿ ಪಾತ್ರವಿದೆ, ಇದರಲ್ಲಿ ಹೆಗ್ಗಳಿಕೆಯೇನಿದೆ! ರಾಜ್ಯಭಾರ ಮಾಡುತ್ತಾ-ಮಾಡುತ್ತಾ ಪತಿತರಾಗಿ ಬಿಟ್ಟಿರಿ. ನೀವೂ ಸಹ ಮೊದಲು ಏನಾಗಿದ್ದಿರಿ? ಕನಿಷ್ಟರು, ನೀವೀಗ ವಿಶ್ವದ ಮಾಲೀಕರಾಗುತ್ತೀರಿ. ಇದು ನಿಮ್ಮ ಪಾತ್ರವಾಗಿದೆ, ಪುನಃ ಕಲ್ಪದ ನಂತರವೂ ಇದೇರೀತಿ ಆಗಬೇಕಾಗಿದೆ. ಇದರಲ್ಲಿ ಹೆಗ್ಗಳಿಕೆ ಅಥವಾ ಮಹಿಮೆಯ ಮಾತೇನೂ ಇಲ್ಲ. ಈ ನಾಟಕವು ಮಾಡಲ್ಪಟ್ಟಿದೆ, ತಂದೆಯೂ ಸಹ ಬಂದು ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಭಕ್ತರು ಮಹಿಮೆ ಹಾಡುತ್ತಾ ಹೊಗಳುತ್ತಾರೆ. ಆ ಕೆಲಸವನ್ನು ನಾವು ಮಾಡುವುದಿಲ್ಲ. ಇಲ್ಲಂತೂ ತಂದೆಯನ್ನು ನೆನಪು ಮಾಡಬೇಕಾಗಿದೆ – ಬಾಬಾ, ಈ ಡ್ರಾಮಾದ ರಹಸ್ಯವು ಬಹಳ ಅದ್ಭುತವಾಗಿದೆ, ಇದು ಯಾರಿಗೂ ತಿಳಿದಿಲ್ಲ. ಬಾಬಾ, ನಾವು ಸತ್ಯಯುಗದಲ್ಲಿ ಇದನ್ನೂ ಮರೆತು ಹೋಗುತ್ತೇವೆಯೇ! ಬಹಳ ವಿಚಿತ್ರ ನಾಟಕವಾಗಿದೆ, ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳಿ. ಪಾತ್ರಧಾರಿಗಳು ಯಾರಾದರೂ ಚೆನ್ನಾಗಿ ಪಾತ್ರವನ್ನು ಅಭಿನಯಿಸಿದರೆ ಚಪ್ಪಾಳೆ ತಟ್ಟುತ್ತಾರೆ. ನಾವೂ ಸಹ ಹೇಳುತ್ತೇವೆ. ಮಧುರ ತಂದೆಯದು, ಶಿವ ತಂದೆಯದು ಬಹಳ ಒಳ್ಳೆಯ ಪಾತ್ರವಾಗಿದೆ, ನಾವೂ ಸಹ ತಂದೆಯ ಸಂಗದಲ್ಲಿ ಒಳ್ಳೆಯ ಪಾತ್ರವನ್ನು ಅಭಿನಯಿಸುತ್ತೇವೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಆದರೂ ಸಹ ಯಾರಿಗಾದರೂ ಅರ್ಥವಾಗಲಿಲ್ಲವೆಂದರೆ ನಮ್ಮ ರಾಜಧಾನಿಯಲ್ಲಿ ಇವರು ಬರುವುದಿಲ್ಲವೆಂದು ತಿಳಿದುಕೊಳ್ಳಲಾಗುತ್ತದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ, ಯಾರು ಬ್ರಾಹ್ಮಣರಾಗಿದ್ದರೋ ಅವರೇ ನಂತರ ದೇವತೆಗಳಾಗುತ್ತಾರೆ. ದೇವತೆಗಳಲ್ಲಿಯೂ ಪ್ರಜೆ, ಮೊದಲಾದ ಎಲ್ಲಾ ಪದವಿಯವರು ಆಗುತ್ತಾರೆ. ಎಲ್ಲರಿಗೆ ಅನಾದಿ ಪಾತ್ರವು ಸಿಕ್ಕಿದೆ, ಸೃಷ್ಟಿಯು ಒಂದೇ ಆಗಿದೆ ಅದು ನಡೆಯುತ್ತಿರುತ್ತದೆ. ಭಗವಂತ ಒಬ್ಬನೇ, ರಚನೆಯೂ ಒಂದೇ. ಅದೇ ಚಕ್ರವು ಸುತ್ತುತ್ತಿರುತ್ತದೆ. ಮನುಷ್ಯರು ಚಂದ್ರ ಗ್ರಹದಲ್ಲಿ ಏನಿದೆಯೋ ನೋಡೋಣ, ಅದಕ್ಕಿಂತಲೂ ಮೇಲೇನಿದೆ ಎಂದು ಸಂಶೋಧನೆ ಮಾಡುತ್ತಾರೆ. ಅದರ ಮೇಲೆ ಸೂಕ್ಷ್ಮವತನವಿದೆ, ಅಲ್ಲೇನು ನೋಡುವರು? ಪ್ರಕಾಶವೇ ಪ್ರಕಾಶವಿದೆ, ಮೇಲೆ ಹೋಗಬೇಕೆಂದು ಬಹಳ ಪ್ರಯತ್ನ ಪಡುತ್ತಾರೆ ಆದರೆ ವಿಜ್ಞಾನಕ್ಕೂ ಒಂದು ಮಿತಿಯಿದೆಯಲ್ಲವೆ. ಮಾಯೆಯ ಬಹಳ ಆಡಂಬರವಿದೆ, ವಿಜ್ಞಾನವು ಸುಖಕ್ಕಾಗಿಯೂ ಇದೆ, ದುಃಖಕ್ಕಾಗಿಯೂ ಇದೆ, ಸತ್ಯಯುಗದಲ್ಲಿ ವಿಮಾನಗಳೆಂದೂ ಬೀಳುವುದಿಲ್ಲ, ದುಃಖದ ಮಾತಿರುವುದಿಲ್ಲ. ಇಲ್ಲಂತೂ ದುಃಖವೇ ದುಃಖವಿದೆ. ಕಳ್ಳರು ಲೂಟಿ ಮಾಡುತ್ತಾರೆ, ಬೆಂಕಿಯು ಸುಟ್ಟು ಹಾಕುತ್ತದೆ. ಅಲ್ಲಿ ಮನೆಗಳು ಬಹಳ ದೊಡ್ಡದಾಗಿರುತ್ತದೆ. ಒಬ್ಬೊಬ್ಬ ರಾಜನ ಜಮೀನು ಇಡೀ ಅಬುವಿನಷ್ಟಿರುತ್ತದೆ. ನೀವು ಸ್ವರ್ಗವಾಸಿಗಳಾಗಲು ಬಂದಿದ್ದೀರಿ, ತಂದೆಯನ್ನು ನೆನಪು ಮಾಡುವುದರಿಂದಲೇ ತುಕ್ಕು ಕಳೆಯುವುದು. ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಈಗ ನಿಮಗೆ ಪ್ರಿಯತಮನು ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿದರೆ ಅಮರಪುರಿಯ ಮಾಲೀಕರಾಗುತ್ತೀರಿ. ಅಲ್ಲಿ ಅಕಾಲಮೃತ್ಯು ಆಗುವುದಿಲ್ಲ. ಸತ್ಯಯುಗದಲ್ಲಿ ಶ್ರೇಷ್ಠಾಚಾರಿ ಪ್ರಪಂಚವಿರುತ್ತದೆ, ಇಲ್ಲಿ ಭ್ರಷ್ಟಾಚಾರಿ ಪ್ರಪಂಚವಾಗಿದೆ. ಎಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ, ನೀವೂ ಸಹ ಆಸ್ತಿಯನ್ನು ತೆಗೆದುಕೊಳ್ಳಿ. ಒಂದುವೇಳೆ ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಪ್ರತೀ 5000 ವರ್ಷಗಳ ನಂತರ ತಂದೆಯು ಸ್ವರ್ಗವನ್ನಾಗಿ ಮಾಡಲು ಬರುತ್ತಾರೆ. ಕಲಿಯುಗದಲ್ಲಿ ಬಹಳ ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಕೆಲವರೇ ಇರುವರು ಅಂದಮೇಲೆ ಅವಶ್ಯವಾಗಿ ವಿನಾಶವಾಗುವುದು, ಆದ್ದರಿಂದ ಮಹಾಭಾರತ ಯುದ್ಧವು ಸನ್ಮುಖದಲ್ಲಿ ನಿಂತಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದು. ಕೆಟ್ಟ ಸಂಸ್ಕಾರಗಳನ್ನು ತೆಗೆದು ಒಳ್ಳೆಯ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ವಿಕರ್ಮವಾಗದಂತೆ ಗಮನವನ್ನು ಇಡಬೇಕಾಗಿದೆ.
2. ಈ ವಿಚಿತ್ರ ಡ್ರಾಮಾದಲ್ಲಿ ತಮ್ಮ ಶ್ರೇಷ್ಠಭಾಗ್ಯವನ್ನು ನೋಡಿಕೊಳ್ಳುತ್ತಾ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ – ನಾವು ಭಗವಂತನ ಜೊತೆ ಪಾತ್ರಧಾರಿಗಳಾಗಿದ್ದೇವೆ, ನಮ್ಮದು ಎಷ್ಟು ಒಳ್ಳೆಯ ಪಾತ್ರವಾಗಿದೆ!
ವರದಾನ:-
ತಂದೆಯ ಮೂಲಕ ಯಾವುದೆಲ್ಲಾ ಖಜಾನೆಗಳು ಸಿಗುತ್ತವೆಯೋ ಅದನ್ನು ಮನನ ಮಾಡುತ್ತೀರೆಂದರೆ, ಆಂತರ್ಯದಲ್ಲಿ ಸಮಾವೇಶವಾಗುತ್ತದೆ. ಆಸ್ತಿಯಂತು ಸರ್ವರಿಗೂ ಒಂದೇ ರೀತಿ ಸಿಕ್ಕಿರುತ್ತದೆ ಆದರೆ ಅದರ ಬಗ್ಗೆ ಯಾರು ಮನನ ಮಾಡಿ ತನ್ನದನ್ನಾಗಿ ಮಾಡಿಕೊಳ್ಳುತ್ತಾರೆಯೋ ಅವರಿಗೆ ಅದರ ನಶೆ ಮತ್ತು ಖುಷಿಯಿರುತ್ತದೆ. ಆದ್ದರಿಂದ ಹೇಳಲಾಗುತ್ತದೆ – ಮನನ ಚಿಂತನೆಯಿಂದ ನಶೆಯೇರುವುದು. ಯಾರು ಸದಾ ಮನನದ ಮಸ್ತಿಯಲ್ಲಿ ಇರುತ್ತಾರೆಯೋ ಅವರಿಗೆ ಪ್ರಪಂಚದ ಯಾವುದೇ ವಸ್ತು, ಗೊಂದಲಗಳೂ ಸಹ ಆಕರ್ಷಿಸಲು ಸಾಧ್ಯವಿಲ್ಲ. ಅವರಿಗೆ ಸ್ವತಹವಾಗಿಯೇ ದಿವ್ಯ ಬುದ್ಧಿಯ ವರದಾನವು ಪ್ರಾಪ್ತಿಯಾಗಿ ಬಿಡುತ್ತದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!