28 October 2021 KANNADA Murli Today | Brahma Kumaris

Read and Listen today’s Gyan Murli in Kannada

October 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಡವಾಗಿ ಬಂದರೂ ತೀವ್ರ ಪುರುಷಾರ್ಥ ಮಾಡಿರಿ ಆಗ ಬಹಳ ಮುಂದೆ ಹೋಗುತ್ತೀರಿ, ಅನ್ಯರ ಚಿಂತೆಯನ್ನು ಬಿಟ್ಟು ತಮ್ಮ ಪುರುಷಾರ್ಥದಲ್ಲಿ ತೊಡಗಿರಿ”

ಪ್ರಶ್ನೆ:: -

ಯಾವ ಕರ್ತವ್ಯವು ಒಬ್ಬ ತಂದೆಯದಾಗಿದೆ, ಅದು ಯಾವುದೇ ಮನುಷ್ಯರಿಂದ ಸಾಧ್ಯವಿಲ್ಲ?

ಉತ್ತರ:-

ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವುದು, ಅವರನ್ನು ಶಾಂತಿಧಾಮ-ಸುಖಧಾಮದ ಮಾಲೀಕರನ್ನಾಗಿ ಮಾಡುವ ಕರ್ತವ್ಯವು ಒಬ್ಬ ತಂದೆಯದೇ ಆಗಿದೆ. ಇದನ್ನು ಯಾವುದೇ ಮನುಷ್ಯರು ಮಾಡಲು ಸಾಧ್ಯವಿಲ್ಲ. ನಿಮಗೆ ನಿಶ್ಚಯವಿದೆ, ಸಂಗಮದಲ್ಲಿಯೇ ನಾವು ಭಗವಾನುವಾಚವನ್ನು ಕೇಳುತ್ತೇವೆ. ಈಗ ಸ್ವಯಂ ಭಗವಂತನೇ ಕಲ್ಪದ ಹಿಂದಿನ ತರಹ ರಾಜಯೋಗವನ್ನು ಕಲಿಸುತ್ತಿದ್ದಾರೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ಬೇಹದ್ದಿನ ತಂದೆಯು ಬೇಹದ್ದಿನ ಆತ್ಮಿಕ ಮಕ್ಕಳ ಪ್ರತಿ ತಿಳಿಸುತ್ತಾರೆ. ಈ ಒಂದೊಂದು ಶಬ್ಧವು ಅಥವಾ ಜ್ಞಾನರತ್ನವು ಲಕ್ಷಾಂತರ ರೂಪಾಯಿಗಳ ಮೌಲ್ಯವುಳ್ಳದ್ದಾಗಿದೆ. ತಂದೆಯು ತಿಳಿಸಿದ್ದಾರೆ, ಪರಮಾತ್ಮನಿಗೆ ರೂಪಭಸಂತನೆಂದೂ ಹೇಳುತ್ತಾರೆ. ಅವರಿಗೆ ರೂಪವೂ ಇದೆ, ಶಿವ ತಂದೆಯೆಂಬ ಹೆಸರೂ ಇದೆ, ಅವರು ಜ್ಞಾನಸಾಗರನಾಗಿದ್ದಾರೆ. ಜ್ಞಾನ ಧನವೂ ಆಗಿದೆ, ಜ್ಞಾನ ವಿದ್ಯೆಯೂ ಆಗಿದೆ. ಈ ಜ್ಞಾನವನ್ನು ಆತ್ಮಿಕ ತಂದೆಯೇ ಕೊಡುತ್ತಾರೆ. ಆತ್ಮಕ್ಕೆ ಚೈತನ್ಯ ಶಕ್ತಿ ಎಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ತಂದೆಯೊಂದಿಗೆ ಮಿಲನ ಮಾಡುವುದಕ್ಕಾಗಿ ಆತ್ಮಗಳು ಎಷ್ಟೊಂದು ಅಲೆದಾಡುತ್ತಾರೆ, ಅವರನ್ನು ಹುಡುಕುತ್ತಾರೆ. ಭಗವಂತನು ಒಬ್ಬ ಶಿವನಾಗಿದ್ದಾರೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೂ ಹುಡುಕಾಡುತ್ತಿರುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ- ಆತ್ಮಿಕ ಮಕ್ಕಳೇ, ನೀವಂತೂ ಅವಿನಾಶಿಯಾಗಿದ್ದೀರಿ. ಪರಮಧಾಮ ನಿವಾಸಿಗಳಾಗಿದ್ದೀರಿ, ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬರುತ್ತೀರಿ. ನೀವು ದೂರ ದೇಶದ ನಿವಾಸಿಗಳಾಗಿದ್ದೀರಿ. ಇದು ನಾಟಕವಾಗಿದೆ, ಇದರ ಹೆಸರು ಸೋಲು-ಗೆಲುವಿನ ಆಟವೆಂದಾಗಿದೆ. ಸುಖ-ದುಃಖದ ಆಟವಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಮತ್ತು ನೀವೆಲ್ಲರೂ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅದಕ್ಕೆ ನಿರ್ವಾಣ ಧಾಮವೆಂತಲೂ ಹೇಳುತ್ತಾರೆ. ಮೊದಲು ಇದನ್ನು ನಿಶ್ಚಯ ಮಾಡಿಕೊಳ್ಳಿ- ನಾವು ಇಲ್ಲಿನ ನಿವಾಸಿಗಳಾಗಿದ್ದೇವೆ! ನಾವಾತ್ಮರ ಸ್ವಧರ್ಮವೇ ಶಾಂತಿಯಾಗಿದೆ, ಬಿಂದು ಆತ್ಮದಲ್ಲಿ ಇಡೀ ಅವಿನಾಶಿ ಪಾತ್ರವು ಅಡಕವಾಗಿದೆ. ತಂದೆಯು ನಿಮಗೆ ಓದಿಸುತ್ತಾರೆ, ನೀವು ಪ್ರಪಂಚದ ಮನುಷ್ಯರ ಚಿಂತೆ ಮಾಡುತ್ತೀರಿ. ಭಗವಾನುವಾಚವು ಸಂಗಮ ಯುಗದಲ್ಲಿಯೇ ಆಗುತ್ತದೆ, ಮತ್ತೆಂದೂ ಸಿಗುವುದಿಲ್ಲ ಎಂಬುದು ನಿಮಗೆ ನಿಶ್ಚಯವಿದೆಯಲ್ಲವೆ. ಮನುಷ್ಯರು ಯಾವುದೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಶಾಂತಿಧಾಮ-ಸುಖಧಾಮದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆಯು ಕಲ್ಪದ ಮೊದಲೂ ಸಹ ಮಾಡಿದ್ದರು, ಈಗ ಯಾರು ರಾಷ್ಟ್ರಪತಿಯಾಗಿದ್ದಾರೆಯೋ 5000 ವರ್ಷಗಳ ನಂತರವೂ ಅವರೇ ಆಗುವರು. ಇಡೀ ಪ್ರಪಂಚದ ಯಾವ ದೃಶ್ಯಗಳಿವೆಯೋ ಇವು 5000 ವರ್ಷಗಳ ನಂತರವೂ ಪುನರಾವರ್ತನೆಯಾಗುವವು. ವೃದ್ಧರಿಗೆ ಇಷ್ಟೆಲ್ಲವನ್ನೂ ಧಾರಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅವರಿಗೆ ಹೇಳಲಾಗುತ್ತದೆ – ಕೇವಲ ಮೂರು ಮಾತುಗಳನ್ನು ನೆನಪಿಟ್ಟುಕೊಳ್ಳಿ – ನಾವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೇವೆ ನಂತರ ಸುಖಧಾಮದಲ್ಲಿ ಬರುತ್ತೇವೆ ಮತ್ತೆ ಅರ್ಧಕಲ್ಪದ ನಂತರ ರಾವಣ ರಾಜ್ಯವು ಆರಂಭವಾದಾಗ ವಿಕಾರಿಗಳಾಗಿ ಬಿಡುತ್ತೇವೆ. ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಯಾವಾಗ ದುಃಖಧಾಮವು ಮುಗಿಯುವುದೋ ಆಗ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ನಾನು ನಿಮ್ಮನ್ನು ಶಾಂತಿಧಾಮ-ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬರಬೇಕಾಗುತ್ತದೆ. ಈಗ ಯಾರು ಬಂದು ತಂದೆಯ ಮಕ್ಕಳಾಗಿದ್ದಾರೆಯೋ ಅವರೇ ಆಸ್ತಿಯನ್ನು ಪಡೆಯುತ್ತಾರೆ. ಈ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಕೋಟ್ಯಾಂತರ ಮಂದಿ ಮನುಷ್ಯರು ಬಂದು ತಂದೆಯಿಂದ ಒಂದಲ್ಲ ಒಂದು ಮಾತನ್ನು ಕೇಳುತ್ತಾರೆ, ತಿಳಿದುಕೊಳ್ಳುತ್ತಾರೆ. ವೃದ್ಧಿಯಾಗುತ್ತಾ ಹೋಗುತ್ತದೆ. ನೀವು ಎಲ್ಲಾ ಕಡೆಯೂ ಹೋಗಿ ತಿಳಿಸಬೇಕಾಗುವುದು. ಪತ್ರಿಕೆಗಳ ಮೂಲಕವೂ ಅನೇಕರು ಕೇಳುತ್ತಾರೆ. ಪಾಕೀಸ್ತಾನದಲ್ಲಿಯೂ ಪತ್ರಿಕೆಯ ಮುಖಾಂತರ ಓದುತ್ತಾರೆ. ಅಲ್ಲಿ ಕುಳಿತಿದ್ದಲ್ಲಿಯೇ ಈ ಜ್ಞಾನವನ್ನು ಕೇಳುತ್ತಾರೆ. ಇಡೀ ಪ್ರಪಂಚದಲ್ಲಿ ಗೀತೆಯ ಪ್ರಚಾರ ಬಹಳಷ್ಟಿದೆ. ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿರಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ. ಈ ಮಾತನ್ನು ಪತ್ರಿಕೆಗಳಲ್ಲಿ ಓದಿದರೆ ಇದರಿಂದಲೂ ಅನೇಕರು ಬ್ರಾಹ್ಮಣರಾಗುವರು. ಯಾರು ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆಯೋ ಅವರು ಅವಶ್ಯವಾಗಿ ಬಂದು ತೆಗೆದುಕೊಳ್ಳುತ್ತಾರೆ. ಇನ್ನೂ ಸ್ವಲ್ಪ ಸಮಯವಿದೆ ವೃದ್ಧಿಯಾಗುತ್ತಾ ಇರುತ್ತದೆ. ತಡವಾಗಿ ಬರುವವರು ತೀವ್ರ ಪುರುಷಾರ್ಥ ಮಾಡಬೇಕಾಗುವುದು. ಕಲ್ಪದ ಹಿಂದೆ ಎಷ್ಟು ಮಂದಿ ಸ್ವರ್ಗವಾಸಿಯಾಗಿದ್ದರೋ ಅಷ್ಟೇ ಈಗಲೂ ಅವಶ್ಯವಾಗಿ ಆಗುತ್ತಾರೆ. ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಶಾಂತಿಧಾಮದವರು ಶಾಂತಿಧಾಮಕ್ಕೆ ಹೋಗುತ್ತಾರೆ, ನಂತರ ತಮ್ಮ-ತಮ್ಮ ಸಮಯದಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಈಗ ತಂದೆಯು ಹೇಳುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನೀವು ಮನೆಯನ್ನು ತಲುಪುವಿರಿ. ಸನ್ಯಾಸಿಗಳು ಮುಕ್ತಿಗಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಆದ್ದರಿಂದ ಎಲ್ಲರಿಗೆ ಮುಕ್ತಿಯೇ ಸರಿಯೆಂದು ಹೇಳುತ್ತಾರೆ. ಸುಖವು ಕಾಗವಿಷ್ಟ ಸಮಾನವೆಂದು ಹೇಳುತ್ತಾರೆ. ಶಾಸ್ತ್ರಗಳಲ್ಲಿ ಸತ್ಯಯುಗದಲ್ಲಿಯೂ ದುಃಖವಿತ್ತು ಎಂದು ಬರೆದುಬಿಟ್ಟಿದ್ದಾರೆ, ಏನನ್ನೂ ತಿಳಿದುಕೊಂಡಿಲ್ಲ. ಪರಮಾತ್ಮನು ಬರಬೇಕಾಗಿದೆ, ಪತಿತ-ಪಾವನ ಪರಮಾತ್ಮ ಬನ್ನಿ ಬಂದು ನಮಗೆ ಮಾರ್ಗವನ್ನು ತಿಳಿಸಿ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಗಂಗೆಯು ಪತಿತ-ಪಾವನಿ ಎಂದು ಹೇಳುತ್ತಾರೆ. ಗಂಗಾಸ್ನಾನ, ಯಜ್ಞ, ತಪ, ಯಾತ್ರೆಗಳೆಲ್ಲವನ್ನೂ ಮಾಡುವುದು ಭಗವಂತನೊಂದಿಗೆ ಮಿಲನ ಮಾಡುವ ಯಾತ್ರೆಗಳಾಗಿವೆ ಎಂದು ತಿಳಿಯುತ್ತಾರೆ. ಪರಮಾತ್ಮನನ್ನು ಕರೆಯುತ್ತೀರಿ ಅಂದಮೇಲೆ ಹುಡುಕಾಡುತ್ತೀರಿ!! ಇದೆಲ್ಲವೂ ಭಕ್ತಿಮಾರ್ಗದ ನೊಂದಾವಣೆಯಾಗಿದೆ. ಮನುಷ್ಯರಿಗೆ ಏನು ಬಂದರೆ ಅದನ್ನು ಹೇಳುತ್ತಿರುತ್ತಾರೆ. ಪರಮಾತ್ಮನೊಂದಿಗೆ ಮಿಲನ ಮಾಡಲು ಎಷ್ಟೊಂದು ಪರಿಶ್ರಮ ಪಡುತ್ತಾರೆ, ಈಗ ಭಗವಂತನೊಂದಿಗೆ ಮಿಲನ ಮಾಡಲು ಭಕ್ತರು ಹೋಗುವರು, ಭಗವಂತನು ಇಲ್ಲಿಗೆ ಬರಬೇಕಾಗುವುದೋ? ಪತಿತ ಆತ್ಮರಂತೂ ಹೋಗಲು ಸಾಧ್ಯವಿಲ್ಲ, ತಂದೆಯೇ ಕರೆದುಕೊಂಡು ಹೋಗುವುದಕ್ಕಾಗಿ ಬರುತ್ತಾರೆ. ಎಲ್ಲಾ ಆತ್ಮರ ಮಾರ್ಗದರ್ಶಕನು ಒಬ್ಬರೇ ಆಗಿದ್ದಾರೆ. ನೀವೂ ಸಹ ಪವಿತ್ರರಾಗಿ ಅವರ ಹಿಂದೆ ಹೊರಟು ಹೋಗುತ್ತೀರಿ. ಪ್ರಿಯತಮನು ನಿಮ್ಮನ್ನು ಮಹಾರಾಜ-ಮಹಾರಾಣಿಯರನ್ನಾಗಿ ಮಾಡಲು ಜ್ಞಾನರತ್ನಗಳಿಂದ ಶೃಂಗಾರ ಮಾಡುತ್ತಾರೆ. ಕೃಷ್ಣನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳಲು ಗೋಪಿಕೆಯರನ್ನು ಓಡಿಸಿಕೊಂಡು ಹೋದನೆಂದು ಕೃಷ್ಣನಿಗಾಗಿ ಏನನ್ನು ತೋರಿಸುತ್ತಾರೆಯೋ ಇವೆಲ್ಲವೂ ವಾಸ್ತವಿಕವಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ಸ್ವರ್ಗದ ಮಹಾರಾಣಿಯರಾಗುತ್ತೇವೆ ಎಂದು. ನೀವೇ ಸ್ವರ್ಗವಾಸಿಗಳಾಗಿದ್ದಿರಿ, ಈಗ ತಂದೆಯು ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು ಬರುತ್ತಾರೆ, ಇದು 84 ಜನ್ಮಗಳ ಮಾತಾಗಿದೆ. 84 ಲಕ್ಷ ಜನ್ಮಗಳನ್ನು ಯಾರು ನೆನಪು ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ, ತ್ರೇತಾಯುಗಕ್ಕೆ ಕಡಿಮೆ ಬರೆದಿದ್ದಾರೆ. ಈ ಲೆಕ್ಕವು ಸರಿ ಹೊಂದುವುದಿಲ್ಲ. ತಂದೆಯು ಎಷ್ಟು ಸಹಜ ಮಾಡಿ ತಿಳಿಸುತ್ತಾರೆ – ಮಕ್ಕಳೇ, ಕೇವಲ ಎರಡು ಮಾತುಗಳನ್ನು ನೆನಪು ಮಾಡಿಕೊಳ್ಳಿ, ತಂದೆ ಮತ್ತು ಆಸ್ತಿ. ಆಗ ನೀವು ಪವಿತ್ರರೂ ಆಗುತ್ತೀರಿ, ಹಾರುತ್ತೀರಿ ಮತ್ತು ಶ್ರೇಷ್ಠ ಪದವಿಯನ್ನೂ ಪಡೆಯುತ್ತೀರಿ ಆದ್ದರಿಂದ ಹೇಗಾದರೂ ಮಾಡಿ ತಂದೆಯನ್ನು ನೆನಪು ಮಾಡಬೇಕೆಂಬ ಚಿಂತೆಯನ್ನು ಇಟ್ಟುಕೊಳ್ಳಬೇಕು. ಮಾಯೆಯ ಬಿರುಗಾಳಿಗಳು ಬರುತ್ತವೆ ಆದರೆ ಸೋಲನ್ನು ಅನುಭವಿಸಬಾರದು. ಭಲೆ ಯಾರಾದರೂ ಕ್ರೋಧ ಮಾಡಿದರೂ ಸಹ ನೀವು ಮಾತನಾಡಬೇಡಿ. ಸನ್ಯಾಸಿಗಳೂ ಸಹ ಹೇಳುತ್ತಾರೆ – ಬಾಯಲ್ಲಿ ತಾಯತವನ್ನು ಹಾಕಿಕೊಳ್ಳಿ ಆಗ ಅವರೇ ಮಾತನಾಡಿ ಸುಮ್ಮನಾಗಿ ಬಿಡುವರು ಹಾಗೆಯೇ ತಂದೆಯೂ ಹೇಳುತ್ತಾರೆ, ಯಾರಾದರೂ ಕ್ರೋಧದಿಂದ ಮಾತನಾಡಿದರೆ ನೀವು ಶಾಂತವಾಗಿದ್ದು ನೋಡುತ್ತಾ ಇರಿ. ಯಾವುದೆ ಪರಿಸ್ಥಿತಿಯಲ್ಲಿ ನೀವು ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯ ನೆನಪಿನಿಂದಲೇ ಆಸ್ತಿಯು ನೆನಪಿಗೆ ಬರುವುದು. ನಾವು 21 ಜನ್ಮಗಳಿಗಾಗಿ ಸ್ವರ್ಗದ ದೇವತೆಗಳಾಗುತ್ತೇವೆಂದು ನಿಮ್ಮದೇ ಅತೀಂದ್ರಿಯ ಸುಖದ ಗಾಯನವಿದೆ. ಅಲ್ಲಿ ದುಃಖದ ಹೆಸರೂ ಇರುವುದಿಲ್ಲ. ನೀವು 50-60 ಜನ್ಮಗಳು ಸುಖವನ್ನು ಅನುಭವಿಸುತ್ತೀರಿ, ಸುಖದ ಪಾಲು ಹೆಚ್ಚಾಗಿದೆ. ಸುಖ-ದುಃಖ ಸಮಭಾಗವಾಗಿದ್ದರೆ ಲಾಭವಾದರೂ ಏನು? ನಿಮ್ಮ ಬಳಿ ಬಹಳ ಹಣವಿರುತ್ತದೆ, ಇಲ್ಲಿಗೆ ಕೆಲವು ವರ್ಷಗಳ ಮೊದಲು ಇಲ್ಲಿಯೂ ಸಹ ಆಹಾರ-ಧಾನ್ಯಗಳು ಬಹಳ ಅಗ್ಗವಾಗಿತ್ತು. ರಾಜರುಗಳ ರಾಜಧಾನಿಯಿತ್ತು, ತಂದೆಯು (ಬ್ರಹ್ಮಾ) ಹತ್ತಾಣಿಗೆ ಒಂದು ಮೊಣ ಸಜ್ಜೆಯನ್ನು ಮಾರಾಟ ಮಾಡುತ್ತಿದ್ದರು ಅಂದಮೇಲೆ ಅದಕ್ಕಿಂತಲೂ ಮೊದಲು ಎಷ್ಟು ಸಸ್ತಾ ಇರಬಹುದು! ಮನುಷ್ಯರು ಕಡಿಮೆಯಿರುತ್ತಾರೆ, ಆಹಾರದ ಚಿಂತೆಯಿರುವುದಿಲ್ಲ. ಈಗ ಇದನ್ನಂತೂ ನೆನಪಿಟ್ಟುಕೊಳ್ಳಬೇಕು – ಮೊದಲು ನಾವು ಮನೆಗೆ ಹೋಗಿ ನಂತರ ಹೊಸ ಪ್ರಪಂಚದಲ್ಲಿ ಬಂದು ಹೊಸ ಪಾತ್ರವನ್ನು ಅಭಿನಯಿಸುತ್ತೇವೆ, ಅಲ್ಲಿ ನಮ್ಮ ಶರೀರವೂ ಸಹ ಸತೋಪ್ರಧಾನ ತತ್ವಗಳಿಂದ ಆಗುವುದು. ಈಗ ಪಂಚತತ್ವಗಳು ಸಂಪೂರ್ಣ ತಮೋಪ್ರಧಾನ, ಪತಿತ ಆಗಿ ಬಿಟ್ಟಿದೆ. ಆತ್ಮ ಮತ್ತು ಶರೀರ ಎರಡೂ ಪತಿತವಾಗಿದೆ. ಅಲ್ಲಿ ಶರೀರವು ರೋಗಿಯಾಗುವುದಿಲ್ಲ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಮಕ್ಕಳಿಗೆ ಇಲ್ಲಿ ಬಹಳ ಚೆನ್ನಾಗಿ ತಿಳಿಸುತ್ತೇನೆ, ಮತ್ತೆ ಮನೆಗೆ ಹೋಗಿ ಮರೆತು ಹೋಗುತ್ತಾರೆ. ಇಲ್ಲಿ ಮೋಡಗಳು ತುಂಬಿಕೊಂಡು ಎಷ್ಟೊಂದು ಖುಷಿಯಾಗುತ್ತಾರೆ, ಹೊರಗಡೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ಮೊದಲು ಸಾಕ್ಷಾತ್ಕಾರದಲ್ಲಿ ರಾಸವಿಲಾಸಗಳು ಬಹಳ ನಡೆಯುತ್ತಿತ್ತು ನಂತರ ಇದೆಲ್ಲವನ್ನೂ ನಿಲ್ಲಿಸಲಾಯಿತು ಏಕೆಂದರೆ ಮನುಷ್ಯರು ಇದು ಜಾದು ಎಂದು ತಿಳಿಯುತ್ತಿದ್ದರು. ಭಕ್ತಿಯಲ್ಲಿಯೂ ನೌಧಾಭಕ್ತಿ ಮಾಡುತ್ತಾರೆಂದರೆ ಬಹಳ ಅಪರೂಪವಾಗಿ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಭಕ್ತಿಯ ಮಾತೇ ಇಲ್ಲ, ಕುಳಿತು-ಕುಳಿತಿದ್ದಂತೆಯೇ ಸಾಕ್ಷಾತ್ಕಾರದಲ್ಲಿ ಹೊರಟು ಹೋಗುತ್ತಿದ್ದರು ಆದ್ದರಿಂದ ಮನುಷ್ಯರು ಜಾದು ಎಂದು ತಿಳಿಯುತ್ತಿದ್ದರು.

ಈಗಿನ ಪ್ರಪಂಚದಲ್ಲಿ ಎಷ್ಟೊಂದು ಭಗವಂತರಾಗಿ ಬಿಟ್ಟಿದ್ದಾರೆ. ಸೀತಾರಾಮ, ರಾಧಾಕೃಷ್ಣ ಎಂದು ಹೆಸರನ್ನು ಇಟ್ಟುಕೊಳ್ಳುತ್ತಾರೆ. ಆ ಸ್ವರ್ಗದ ಮಾಲೀಕರೆಲ್ಲಿ, ಈ ನರಕವಸಿಗಳೆಲ್ಲಿ! ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಏಣಿಯ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ – ಏಣಿಯ ಚಿತ್ರವನ್ನು ಮಕ್ಕಳು ತಮ್ಮ ವಿಚಾರ ಸಾಗರ ಮಂಥನದಿಂದ ಮಾಡಿಸಿದ್ದಾರೆ. ಇದನ್ನು ತಂದೆಯು ನೋಡಿ ಖುಷಿ ಪಟ್ಟರು. ಏಣಿಯ ಚಿತ್ರದಲ್ಲಿ ಎಲ್ಲಾ ಮಾತುಗಳು ಬಂದು ಬಿಡುತ್ತವೆ. ದ್ವಾಪರದಿಂದ ವಿಕಾರಿ ರಾಜರು ಹೇಗೆ ಭಕ್ತಿ ಮಾಡುತ್ತಾ-ಮಾಡುತ್ತಾ ಕೆಳಗಿಳಿದು ಬಂದಿದ್ದಾರೆ. ಈಗ ಯಾವುದೇ ಕಿರೀಟವಿಲ್ಲ, ಇದನ್ನು ಚಿತ್ರಗಳಲ್ಲಿ ತಿಳಿಸಲು ಸಹಜವಾಗುತ್ತದೆ. 84 ಜನ್ಮಗಳಲ್ಲಿ ಹೇಗೆ ಇಳಿಯುವ ಕಲೆಯಾಗುತ್ತದೆ ನಂತರ ಹೇಗೆ ಏರುವ ಕಲೆಯಾಗುತ್ತದೆ ಎಂದು. ನಿಮ್ಮ ಏರುವ ಕಲೆಯಿಂದ ಸರ್ವರ ಉದ್ಧಾರವಾಗುವುದು ಎಂದು ಗಾಯನವಿದೆ. ತಂದೆಯು ಬಂದು ಎಲ್ಲರಿಗೆ ಸುಖ ನೀಡುತ್ತಾರೆ. ಹೇ ತಂದೆಯೇ ನಮ್ಮ ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು ಎಲ್ಲರೂ ಕರೆಯುತ್ತಾರೆ ಆದರೆ ಹೇಗೆ ದುಃಖವನ್ನು ದೂರ ಮಾಡುತ್ತಾರೆ, ಸುಖ ಹೇಗೆ ಸಿಗುತ್ತದೆಯೆಂದು ಯಾರಿಗೂ ತಿಳಿದಿಲ್ಲ.

ಇತ್ತೀಚೆಗೆ ಮನುಷ್ಯರು ಗೀತೆಯನ್ನು ಕಂಠಪಾಠ ಮಾಡಿ ತಿಳಿಸುತ್ತಾರೆ. ಸಾರ ರೂಪದಲ್ಲಿ ಅರ್ಥವನ್ನೂ ತಿಳಿಸುತ್ತಾರೆ. ಸಂಸ್ಕೃತದಲ್ಲಿ ಶ್ಲೋಕಗಳನ್ನು ಕಂಠಪಾಠ ಮಾಡಿ ತಿಳಿಸುತ್ತಾರೆಂದರೆ ಈ ಮಹಾತ್ಮರು ಒಳ್ಳೆಯವರೆಂದು ಹೇಳಿ ಬಿಡುತ್ತಾರೆ. ಲಕ್ಷಾಂತರ ಮಂದಿ ಹೋಗಿ ಅವರ ಕಾಲಿಗೆ ಬೀಳುತ್ತಾರೆ. ಆ ವಿದ್ಯೆಯಲ್ಲಾದರೆ (ಲೌಕಿಕ ವಿದ್ಯೆ) 15-20 ವರ್ಷಗಳು ಹಿಡಿಸುತ್ತವೆ. ಇದರಲ್ಲಿ ಯಾರಾದರೂ ಬುದ್ಧಿವಂತರಾಗಿದ್ದರೆ ಕೂಡಲೇ ಕಂಠಪಾಠ ಮಾಡಿ ತಿಳಿಸುತ್ತಾರೆ, ಆಗ ಬಹಳಷ್ಟು ಹಣವನ್ನು ಸಂಪಾದಿಸುವರು. ಇವೆಲ್ಲವೂ ಸಂಪಾದನೆಯ ಮಾರ್ಗಗಳಾಗಿವೆ. ಯಾರಾದರೂ ದಿವಾಳಿಯಾದಾಗಲೂ ಹೋಗಿ ಸನ್ಯಾಸ ಧಾರಣೆ ಮಾಡಿಕೊಳ್ಳುತ್ತಾರೆ ಆಗ ಎಲ್ಲಾ ಚಿಂತೆಗಳು ದೂರವಾಗಿ ಬಿಡುತ್ತವೆ. ನಂತರ ಒಂದಲ್ಲ ಒಂದು ಮಂತ್ರ ತಂತ್ರಗಳನ್ನು ನೆನಪು ಮಾಡಿಕೊಳ್ಳುತ್ತಾರೆ, ತಿರುಗಾಡುತ್ತಾ ಇರುತ್ತಾರೆ. ರೈಲಿನಲ್ಲಿಯೂ ಸುತ್ತಾಡುತ್ತಾ ಇರುತ್ತಾರೆ. ಇಲ್ಲಂತೂ ತಂದೆಯು ಹೇಳುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ತಂದೆ ಮತ್ತು ಆತ್ಮರೆಲ್ಲರೂ ನಿರಾಕಾರಿ ಪ್ರಪಂಚದಲ್ಲಿ ಇರುತ್ತಾರೆ. ಅಲ್ಲಿಂದ ಸಾಕಾರ ಪ್ರಪಂಚಕ್ಕೆ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಈಗ ನಾಟಕವು ಮುಕ್ತಾಯವಾಗಲಿದೆ. ನೀವು ತಮೋಪ್ರಧಾನರಾಗಿರುವ ಕಾರಣ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ತಂದೆಯು ನಿಮ್ಮನ್ನು ಸತೋಪ್ರಧಾನರನ್ನಾಗಿ ಮಾಡಲು ಬಂದಿದ್ದಾರೆ. ಎಲ್ಲರೂ ತಮ್ಮ ಮನೆಗೆ ಹೋಗುವರು, ಸ್ವರ್ಗದಲ್ಲಿ ಕೇವಲ ದೇವಿ-ದೇವತೆಗಳ ರಾಜ್ಯವೇ ಇರುವುದು. ಶಾಂತಿಧಾಮ, ಸುಖಧಾಮ, ದುಃಖಧಾಮವು ಯಾವಾಗ-ಯಾವಾಗ ಇತ್ತು ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಏಕೆಂದರೆ ಘೋರ ಅಂಧಕಾರದಲ್ಲಿದ್ದಾರೆ. ಕಲಿಯುಗವು ಸಾವಿರಾರು ವರ್ಷಗಳ ನಂತರ ಅಂತ್ಯವಾಗುತ್ತದೆಯೆಂದು ತಿಳಿದುಕೊಳ್ಳುತ್ತಾರೆ. ಯಾವುದೇ ಲೆಕ್ಕವೇ ಇಲ್ಲ, ಜನಸಂಖ್ಯೆಯು ಹೆಚ್ಚುತ್ತಾ ಹೋಗುತ್ತದೆ. ಆಹಾರವು ಸಿಗುವುದೇ ಇಲ್ಲ. ಇನ್ನೂ 40 ಸಾವಿರ ವರ್ಷಗಳಿರುವುದೇ ಆದರೆ ಏನಾಗಿ ಬಿಡುವುದೋ ಗೊತ್ತಿಲ್ಲ. ಏನು ಹೇಳುವರೋ ಅದು ಸಂಪೂರ್ಣ ಅಸತ್ಯವಾಗಿದೆ. ಸತ್ಯದ ಅಂಶವೂ ಇಲ್ಲ. ಈಗ ರಾವಣನ ಮೇಲೆ ಹೇಗೆ ವಿಜಯ ಪಡೆಯಬೇಕೆಂದು ತಂದೆಯು ಕಲಿಸುತ್ತಾರೆ. ರಾವಣನ ಮೇಲೆ ನೀವೇ ವಿಜಯ ಗಳಿಸುತ್ತೀರಿ. ಇಡೀ ಪ್ರಪಂಚವನ್ನು ತಂದೆಯು ರಾವಣನಿಂದ ಬಿಡುಗಡೆ ಮಾಡುತ್ತಾರೆ. ನಿಮ್ಮದು ಶಕ್ತಿಸೇನೆಯಾಗಿದೆ. ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ಎಷ್ಟು ಒಳ್ಳೊಳ್ಳೆಯ ಮಾತುಗಳನ್ನು ತಂದೆಯು ತಿಳಿಸುತ್ತಾರೆ ಅಂದಮೇಲೆ ನಿಮಗೆ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಷ್ಟೊಂದು ಖುಷಿಯಿರಬೇಕು. ಜ್ಞಾನಮಾರ್ಗದಲ್ಲಿ ಬಹಳ ಖುಷಿಯಿರುತ್ತದೆ, ಈಗ ತಂದೆಯು ಬಂದಿದ್ದಾರೆ. ನಾವೀಗ ಈ ಹಳೆಯ ಪ್ರಪಂಚದಿಂದ ಹೋದೆವು ಎಂದರೆ ಹೋದೆವು. ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗುತ್ತೇವೆ. ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು ನಂತರ ಒಂದುವೇಳೆ ರೊಟ್ಟಿ ತುಂಡು ಸಿಕ್ಕಿದರೂ ಸಹ ಏನು ಲಾಭ? ಈಗ ಎಷ್ಟು ಸಾಧ್ಯವೋ ತಮ್ಮ ಪುರುಷಾರ್ಥ ಮಾಡಬೇಕು, ಶ್ರೀಮತದಂತೆ ನಡೆಯಬೇಕಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯಿಂದ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ. ಬಾಬಾ, ವ್ಯಾಪಾರದಲ್ಲಿ ಸುಳ್ಳು ಹೇಳಬೇಕಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ವ್ಯಾಪಾರದಲ್ಲಿ ಸುಳ್ಳಂತೂ ಇದ್ದೇ ಇರುತ್ತದೆ, ನೀವು ತಂದೆಯನ್ನು ನೆನಪು ಮಾಡುತ್ತಾ ಇರಿ. ವಿಕಾರದಲ್ಲಿ ಹೋಗಿ ಮತ್ತೆ ಬಾಬಾ, ನಾನು ನೆನಪಿನಲ್ಲಿದ್ದೆನು ಎಂದು ಹೇಳುವುದಲ್ಲ. ವಿಕಾರದಲ್ಲಿ ಹೋದರೆ ಮತ್ತೆ ಅವರು ಇಲ್ಲಿಂದ ಸತ್ತರೆಂದರ್ಥ. ತಂದೆಯ ಜೊತೆ ಪ್ರತಿಜ್ಞೆ ಮಾಡಿದ್ದೀರಲ್ಲವೆ. ಪವಿತ್ರತೆಗಾಗಿಯೇ ಶ್ರೀರಕ್ಷೆಯನ್ನು ಕಟ್ಟಿಸಿಕೊಳ್ಳಲಾಗುತ್ತದೆ, ಕ್ರೋಧಕ್ಕಾಗಿ ಎಂದೂ ರಾಖಿಯನ್ನು ಕಟ್ಟುವುದಿಲ್ಲ. ರಾಖಿಯ ಅರ್ಥವೇ ಆಗಿದೆ- ವಿಕಾರದಲ್ಲಿ ಹೋಗಬಾರದು. ಪತಿತ-ಪಾವನ ಬನ್ನಿ ಎಂದು ಮನುಷ್ಯರು ಕೂಗುತ್ತಾರೆ.

ನೀವು ಮಕ್ಕಳಲ್ಲಿ ಬಹಳ ಖುಷಿಯಿರಬೇಕು, ತಂದೆಯು ನಮಗೆ ಓದಿಸುತ್ತಿದ್ದಾರೆ ಮತ್ತು ತಂದೆಯು ಜೊತೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಸ್ವರ್ಗದಲ್ಲಿ ಬರುತ್ತೇವೆ. ಎಷ್ಟು ಸಾಧ್ಯವೋ ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪು ಮಾಡುವುದು ಎಂದರೆ ಸಂಪಾದನೆ ಮಾಡಿಕೊಳ್ಳುವುದು. ಇದರಲ್ಲಿ ಆಶೀರ್ವಾದ ಮಾಡುವುದಿಲ್ಲ. ನಾವು ನೆನಪು ಮಾಡುವಂತೆ ನೀವು ಆಶೀರ್ವಾದ ಮಾಡಿ ಎಂದು ಹೇಳಲು ಸಾಧ್ಯವೇ? ಎಲ್ಲರ ಮೇಲೆ ಆಶೀರ್ವಾದ ಮಾಡುವುದಾದರೆ ಎಲ್ಲರೂ ಸ್ವರ್ಗದಲ್ಲಿ ಬಂದು ಬಿಡುವರು ಆದರೆ ಇಲ್ಲಿ ಪರಿಶ್ರಮ ಪಡಬೇಕಾಗಿದೆ. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆ ಎಂದರೆ ಆಸ್ತಿ. ಎಷ್ಟು ನೆನಪು ಮಾಡುತ್ತೀರೊ ಅಷ್ಟು ರಾಜ್ಯಭಾಗ್ಯವು ಸಿಗುವುದು, ನೆನಪಿನಿಂದ ಬಹಳ ಲಾಭವಿದೆ. ಸಸ್ತಾ ವ್ಯಾಪಾರವಾಗಿದೆ. ಇಂತಹ ಸಸ್ತಾ ವ್ಯಾಪಾರವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಇದನ್ನೂ ಸಹ ಕೆಲವರೇ ವಿರಳ ತೆಗೆದುಕೊಳ್ಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವಾಗ ಯಾರಾದರೂ ಕ್ರೋಧ ಮಾಡಿದರೆ ಬಹಳ-ಬಹಳ ಶಾಂತವಾಗಿರಬೇಕಾಗಿದೆ. ಕ್ರೋಧಿಗಳ ಜೊತೆ ಕ್ರೋಧಿಯಾಗಬಾರದು. ಮಾಯೆಯ ಯಾವುದೇ ಬಿರುಗಾಳಿಗೆ ಸೋಲಬಾರದು.

2. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಬೇಕು, ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಪವಿತ್ರತೆಯ ಪಕ್ಕಾ ಶ್ರೀರಕ್ಷೆಯನ್ನು ಕಟ್ಟಿಕೊಳ್ಳಬೇಕಾಗಿದೆ.

ವರದಾನ:-

ನಿರಂತರ ಯೋಗಯುಕ್ತರಾಗಿ ಇರುವುದಕ್ಕಾಗಿ, ಸದಾ ಕಮಲ ಪುಷ್ಫದ ಆಸನದಲ್ಲಿ ಕುಳಿತುಕೊಂಡಿರಿ ಆದರೆ ಯಾರು ಹಗುರವಾಗಿರುತ್ತಾರೆಯೋ ಅವರೇ ಈ ಕಮಲ ಆಸನದಲ್ಲಿ ಸ್ಥಿತರಾಗಲು ಸಾಧ್ಯವಾಗುವುದು. ಯಾವುದೇ ಪ್ರಕಾರದ ಹೊರೆ ಅಂದರೆ ಬಂಧನವಿರಬಾರದು. ಮನಸ್ಸಿನ ಸಂಕಲ್ಪಗಳ ಹೊರೆ, ಸಂಸ್ಕಾರಗಳ-ಪ್ರಪಂಚದ ವಿನಾಶಿ ವಸ್ತುಗಳ ಆಕರ್ಷಣೆಯ ಹೊರೆ, ಲೌಕಿಕ ಸಂಬಂಧಗಳೊಂದಿಗಿನ ಮಮತ್ವದ ಹೊರೆ, ಯಾವಾಗ ಇವೆಲ್ಲಾ ಹೊರೆಗಳು ಸಮಾಪ್ತಿಯಾಗುವುದೋ ಆಗಲೇ ಕಮಲ ಆಸನದಲ್ಲಿ ಕುಳಿತುಕೊಂಡು ನಿರಂತರ ಯೋಗಿಯಾಗಲು ಸಾಧ್ಯವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top