26 October 2021 KANNADA Murli Today | Brahma Kumaris

Read and Listen today’s Gyan Murli in Kannada

October 25, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಇಂದಿನವರೆಗೆ ಯಾರ ಮಹಿಮೆಯನ್ನು ಹಾಡುತ್ತಿದ್ದಿರಿ, ಅವರೇ ಈಗ ನಿಮ್ಮ ಮುಂದೆ ಹಾಜರಾಗಿದ್ದಾರೆ. ಆದ್ದರಿಂದ ಸದಾ ಖುಷಿಯಲ್ಲಿ ನರ್ತಿಸುತ್ತಾ ಇರಿ, ಯಾವುದೇ ಮಾತಿನ ಚಿಂತೆಯಿರಬಾರದು”

ಪ್ರಶ್ನೆ:: -

ಪುರುಷಾರ್ಥಿ ಮಕ್ಕಳು ತಮ್ಮ ಹೃದಯದಲ್ಲಿ ಯಾವ ಪರಿಶೀಲನೆಯನ್ನು ಅವಶ್ಯವಾಗಿ ಮಾಡಿಕೊಳ್ಳುತ್ತಾರೆ?

ಉತ್ತರ:-

ಇಲ್ಲಿಯವರೆಗೂ ನಾನಾತ್ಮನಲ್ಲಿ ಯಾವುದೇ ಚಿಕ್ಕ ಪುಟ್ಟ ಮುಳ್ಳು ಉಳಿದುಕೊಂಡಿಲ್ಲವೆ? ಕಾಮದ ಮುಳ್ಳು ಎಲ್ಲದಕ್ಕಿಂತ ತೀಕ್ಷ್ಣವಾಗಿದೆ, ಕ್ರೋಧದ ಮುಳ್ಳೂ ಸಹ ಬಹಳ ಕೆಟ್ಟದ್ದಾಗಿದೆ, ದೇವತೆಗಳು ಎಂದೂ ಕ್ರೋಧಿಯಾಗುವುದಿಲ್ಲ. ಆದ್ದರಿಂದ ಮಧುರ ಮಕ್ಕಳೇ, ಯಾವುದೇ ಮುಳ್ಳಿದ್ದರೆ ಅದನ್ನು ತೆಗೆದು ಹಾಕಿರಿ. ತಮ್ಮನ್ನು ತಾವು ಮೋಸದಲ್ಲಿ ಸಿಲುಕಿಸಿಕೊಳ್ಳಬೇಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವೇ ಮಾತಾಪಿತಾ…

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ತಂದೆಯ ಮಹಿಮೆಯನ್ನು ಕೇಳಿದಿರಿ. ಅವರು ಹಾಡುತ್ತಿರುತ್ತಾರೆ, ಇಲ್ಲಿ ನೀವು ಪ್ರತ್ಯಕ್ಷದಲ್ಲಿ ಆ ತಂದೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ, ತಂದೆಯು ನಮ್ಮ ಮೂಲಕ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಯಾರ ಮೂಲಕ ಮಾಡುತ್ತಿದ್ದಾರೆಯೋ ಅವಶ್ಯವಾಗಿ ಅವರೇ ಸುಖಧಾಮದ ಮಾಲೀಕರಾಗುತ್ತಾರೆ. ಮಕ್ಕಳಿಗೆ ಬಹಳ ಖುಷಿಯಿರಬೇಕು. ತಂದೆಯ ಮಹಿಮೆಯು ಅಪರಮಪಾರವಾಗಿದೆ, ಅವರಿಂದ ನಾವು ಆಸ್ತಿಯನ್ನು ಪಡೆಯುತ್ತಿದ್ದೇವೆ. ಈಗ ನೀವು ಮಕ್ಕಳ ಮೇಲಷ್ಟೇ ಅಲ್ಲ, ಇಡೀ ಪ್ರಪಂಚದ ಮೇಲೆ ಬೃಹಸ್ಪತಿ ದೆಶೆಯಿದೆ, ಇದನ್ನು ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚ, ಎಲ್ಲರ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ ಏಕೆಂದರೆ ಈಗ 16 ಕಲಾ ಸಂಪೂರ್ಣರಾಗುತ್ತೀರಿ. ಈ ಸಮಯದಲ್ಲಿ ಯಾವುದೇ ಕಲೆಯಿಲ್ಲ, ಮಕ್ಕಳಿಗೆ ಬಹಳ ಖುಶಿಯಿರಬೇಕಾಗಿದೆ. ಇಲ್ಲಿ ಖುಷಿಯಾಗಿದ್ದು ಹೊರಗಡೆ ಹೋಗುತ್ತಿದ್ದಂತೆಯೇ ಖುಷಿಯು ಮಾಯವಾಗಬಾರದು. ಯಾರ ಮಹಿಮೆಯನ್ನು ಹಾಡುತ್ತಾ ಬಂದಿದ್ದೀರೋ ಅವರೇ ನಿಮ್ಮ ಬಳಿ ಹಾಜರಿದ್ದಾರೆ. ತಂದೆಯು ತಿಳಿಸುತ್ತಾರೆ – 5000 ವರ್ಷಗಳ ಮೊದಲೂ ಸಹ ರಾಜ್ಯಭಾಗ್ಯವನ್ನು ಕೊಟ್ಟು ಹೋಗಿದ್ದೆನು, ನೀವು ನೋಡುತ್ತೀರಿ – ಇನ್ನೂ ಕಳೆಯುತ್ತಾ ಹೋದಂತೆ ಎಲ್ಲರೂ ಕೂಗುತ್ತಾ ಇರುತ್ತಾರೆ. ನಿಮ್ಮ ಘೋಷಣಾ ವಾಕ್ಯಗಳೂ ಸಹ ಹೆಸರುವಾಸಿಯಾಗುತ್ತವೆ. ಹೇಗೆ ಯಾರಾದರೂ ಒಂದು ಧರ್ಮವಿರಲಿ, ಒಂದು ರಾಜ್ಯವಿರಲಿ, ಒಂದು ಭಾಷೆಯಿರಲಿ ಎಂದು ಹೇಳುತ್ತಾರೆ. ಅದನ್ನು ಆತ್ಮರೇ ಹೇಳುತ್ತಾರಲ್ಲವೆ. ಆತ್ಮಕ್ಕೆ ತಿಳಿದಿದೆ, ಅವಶ್ಯವಾಗಿ ಭಾರತದಲ್ಲಿ ಒಂದು ದೇವಿ-ದೇವತೆಗಳ ರಾಜಧಾನಿಯಿತ್ತು. ಈ ಪರಿಮಳವು ಹರಡುತ್ತಾ ಹೋಗುವುದು. ನೀವು ಈ ಸುಗಂಧವನ್ನು ಬೀರುತ್ತಾ ಹೋಗುತ್ತೀರಿ. ಡ್ರಾಮಾನುಸಾರ ಯುದ್ಧದ ಚಿಹ್ನೆಗಳೂ ಕಂಡು ಬರುತ್ತಿವೆ, ಇವೇನೂ ಹೊಸ ಮಾತಲ್ಲ. ಭಾರತವು ಅವಶ್ಯವಾಗಿ 16 ಕಲಾ ಸಂಪೂರ್ಣನಾಗಬೇಕಾಗಿದೆ. ನಾವು ಈ ಯೋಗಬಲದಿಂದ 16 ಕಲಾ ಸಂಪೂರ್ಣ ಆಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ದಾನ ಕೊಟ್ಟರೆ ಗ್ರಹಣ ಬಿಡುವುದೆಂದು ಹೇಳುತ್ತಾರಲ್ಲವೆ. ತಂದೆಯೂ ಸಹ ವಿಕಾರಗಳ, ಅವಗುಣಗಳ ದಾನವನ್ನು ಕೊಡಿ ಎಂದು ಹೇಳುತ್ತಾರೆ. ಇದು ರಾವಣ ರಾಜ್ಯವಾಗಿದೆ ಅಲ್ಲವೆ. ತಂದೆಯು ಬಂದು ಇದರಿಂದ ಬಿಡಿಸುತ್ತಾರೆ, ಅದರಲ್ಲಿಯೂ ಕಾಮ ವಿಕಾರವು ಅತಿ ದೊಡ್ಡ ವಿಕಾರವಾಗಿದೆ. ನೀವು ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ, ಈಗ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಶರೀರದ ಭಾನವನ್ನೂ ಬಿಟ್ಟು ಬಿಡಿ. ಈ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ, ಪ್ರಪಂಚದವರಿಗೆ ಗೊತ್ತಿಲ್ಲ. ಭಾರತವು 16 ಕಲಾ ಸಂಪೂರ್ಣನಾಗಿತ್ತು, ಸಂಪೂರ್ಣ ದೇವತೆಗಳ ರಾಜ್ಯವಿತ್ತು, ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಿತ್ತು, ಭಾರತವೇ ಸ್ವರ್ಗವಾಗಿತ್ತು. ಈಗ 5 ವಿಕಾರಗಳ ಗ್ರಹಣ ಹಿಡಿದಿದೆ ಆದ್ದರಿಂದ ತಂದೆಯು ಹೇಳುತ್ತಾರೆ – ದಾನ ಕೊಟ್ಟರೆ ಗ್ರಹಣವು ಬಿಡುವುದು. ಈ ಕಾಮ ವಿಕಾರವೇ ಬೀಳಿಸುವಂತದ್ದಾಗಿದೆ, ಆದ್ದರಿಂದ ಈ ದಾನವನ್ನು ಕೊಟ್ಟು ಬಿಡಿ. ಆಗ 16 ಕಲಾ ಸಂಪೂರ್ಣ ಆಗಿ ಬಿಡುತ್ತೀರೆಂದು ತಂದೆಯು ಹೇಳುತ್ತಾರೆ. ಒಂದುವೇಳೆ ಕೊಡದಿದ್ದರೆ ಆಗುವುದಿಲ್ಲ. ಆತ್ಮರಿಗೆ ತಮ್ಮ ತಮ್ಮದೇ ಆದ ಪಾತ್ರವು ಸಿಕ್ಕಿದೆಯಲ್ಲವೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ, ನೀವಾತ್ಮರಲ್ಲಿ ಎಷ್ಟೊಂದು ಪಾತ್ರವಿದೆ! ನೀವು ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ, ಇದು ಬೇಹದ್ದಿನ ನಾಟಕವಾಗಿದೆ, ಅನೇಕ ಪಾತ್ರಧಾರಿಗಳಿದ್ದಾರೆ. ಇದರಲ್ಲಿ ಬಹಳ ಒಳ್ಳೆಯ ಪಾತ್ರಧಾರಿಗಳು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಇವರದು ನಂಬರ್ವನ್ ಪಾತ್ರವಾಗಿದೆ. ವಿಷ್ಣುವಿನಿಂದ ಬ್ರಹ್ಮಾ-ಸರಸ್ವತಿ ಮತ್ತೆ ಬ್ರಹ್ಮಾ ಸರಸ್ವತಿಯೇ ವಿಷ್ಣುವಾಗುತ್ತಾರೆ. ಇವರು ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತುತ್ತಾರೆ ಎಂಬುದೆಲ್ಲವೂ ಬುದ್ಧಿಯಲ್ಲಿ ಬಂದು ಬಿಡುತ್ತದೆ. ವ್ಯಾಪಾರಿಗಳು ತಮ್ಮ ಲೆಕ್ಕ ಪುಸ್ತಕದಲ್ಲಿ ಸ್ವಸ್ತಿಕವನ್ನು ಬಿಡಿಸುತ್ತಾರೆ. ಗಣೇಶನ ಪೂಜೆ ಮಾಡುತ್ತಾರೆ. ಇದು ಬೇಹದ್ದಿನ ಲೆಕ್ಕ ಪುಸ್ತಕವಾಗಿದೆ. ಸ್ವಸ್ತಿಕದಲ್ಲಿ ನಾಲ್ಕು ಭಾಗಗಳಿರುತ್ತವೆ, ಹೇಗೆ ಜಗನ್ನಾಥ ಪುರಿಯಲ್ಲಿ ಅನ್ನವನ್ನು ತಯಾರಿಸುತ್ತಾರೆ. ಅದು ತಯಾರಾದ ನಂತರ ಅದರಲ್ಲಿ ನಾಲ್ಕು ಭಾಗಗಳಾಗುತ್ತವೆ, ಅಲ್ಲಿ ಅನ್ನದ ನೈವೇದ್ಯವನ್ನೇ ಇಡಲಾಗುತ್ತದೆ. ಈಗ ನೀವು ಮಕ್ಕಳಿಗೆ ಯಾರು ಓದಿಸುತ್ತಿದ್ದಾರೆ? ಪ್ರಿಯಾತಿ ಪ್ರಿಯ ತಂದೆಯು ಬಂದು ನಿಮ್ಮ ಸೇವಕನಾಗಿದ್ದಾರೆ, ನಿಮ್ಮ ಸೇವೆ ಮಾಡುತ್ತಾರೆ. ಮನುಷ್ಯರಂತೂ ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ, ನೀವೀಗ ತಿಳಿದುಕೊಂಡಿದ್ದೀರಿ – ಆತ್ಮದಲ್ಲಿ 84 ಜನ್ಮಗಳ ಪಾತ್ರವು ಇದ್ದೇ ಇದೆ ಅಂದಮೇಲೆ ಅದನ್ನು ಮತ್ತೆ ನಿರ್ಲೇಪವೆಂದು ಹೇಳುವುದು ಎಷ್ಟು ರಾತ್ರಿ-ಹಗಲಿನ ಅಂತರವಾಗಿ ಬಿಡುತ್ತದೆ. ಈ ಜ್ಞಾನವನ್ನು ಯಾರಾದರೂ ಒಂದು ಒಂದುವರೆ ತಿಂಗಳು ಕುಳಿತು ತಿಳಿದುಕೊಂಡಾಗಲೇ ಇದು ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ದಿನ-ಪ್ರತಿದಿನ ಬಹಳಷ್ಟು ಜ್ಞಾನದ ಅಂಶಗಳು ತಿಳಿದುಬರುತ್ತವೆ. ಇದು ಕಸ್ತೂರಿಯಾಗಿದೆ. ಶಾಸ್ತ್ರಗಳಲ್ಲಿ ಏನೂ ಸಾರವಿಲ್ಲ. ತಂದೆಯು ಹೇಳುತ್ತಾರೆ – ಈಗ ಅದೆಲ್ಲವನ್ನೂ ಬುದ್ಧಿಯಿಂದ ತೆಗೆಯಿರಿ, ಜ್ಞಾನಸಾಗರನು ನಾನೊಬ್ಬನೇ ಆಗಿದ್ದೇನೆ. ಯಾವಾಗ ಪೂರ್ಣ ನಿಶ್ಚಯವು ಕುಳಿತುಕೊಳ್ಳುವುದೋ ಆಗ ಅವಶ್ಯವಾಗಿ ಇವೆಲ್ಲವೂ ಇರುವುದು ಭಕ್ತಿ ಮಾರ್ಗಕ್ಕಾಗಿ. ಪರಮಪಿತ ಪರಮಾತ್ಮನೇ ಬಂದು ದುರ್ಗತಿಯಿಂದ ಸದ್ಗತಿ ಮಾಡುತ್ತಾರೆ ಎಂದು ಅರ್ಥವಾಗುತ್ತದೆ. ಏಣಿಯ ಚಿತ್ರದಲ್ಲಿಯೂ ಸ್ಪಷ್ಟವಾಗಿ ತೋರಿಸಬೇಕಾಗಿದೆ. ಭಕ್ತಿಮಾರ್ಗವು ಆರಂಭವಾದಾಗ ರಾವಣರಾಜ್ಯವೂ ಆರಂಭವಾಗುತ್ತದೆ, ಈಗ ಗೀತಾಭಾಗವು ಪುನರಾವರ್ತನೆ ಆಗುತ್ತಿದೆ. ತಂದೆಯು ಹೇಳುತ್ತಾರೆ – ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಮನುಷ್ಯರು ನನಗೆ ಮೀನು, ಮೊಸಳೆ ಅವತಾರವೆಂದು ಹೇಳಿ ಬಿಟ್ಟಿದ್ದಾರೆ. 24 ಅವತಾರಗಳೆಂದು ಹೇಳುತ್ತಾರೆ, ಆದರೆ ಇದು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ, ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು, ರಾವಣನು ರಾಹುವಿನ ದೆಶೆಯನ್ನು ಕೂರಿಸಿದ್ದಾನೆ. ಈಗ ಪುನಃ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ ಆದ್ದರಿಂದ ತಮ್ಮನ್ನು ಮೋಸದಲ್ಲಿ ಸಿಲುಕಿಸಿಕೊಳ್ಳಬಾರದು. ವ್ಯಾಪಾರಿಗಳು ತಮ್ಮ ಖಾತೆಯನ್ನು ಯಾವಾಗಲೂ ಸರಿಯಾಗಿಟ್ಟುಕೊಳ್ಳುತ್ತಾರೆ. ತಮಗೆ ನಷ್ಟವನ್ನು ಉಂಟು ಮಾಡಿಕೊಳ್ಳುವವರಿಗೆ ಅನಾಡಿಗಳೆಂದು ಹೇಳಲಾಗುತ್ತದೆ. ತಂದೆಯು ಎಲ್ಲರಿಗಿಂತ ದೊಡ್ಡ ವ್ಯಾಪಾರಿಯಾಗಿದ್ದಾರೆ. ಇವರೊಂದಿಗೆ ವ್ಯಾಪಾರ ಮಾಡುವವರು ಕೆಲವರೇ ವಿರಳ. ಇದೇ ಅವಿನಾಶಿ ವ್ಯಾಪಾರವಾಗಿದೆ, ಮತ್ತೆಲ್ಲಾ ವ್ಯಾಪಾರಗಳು ಮಣ್ಣು ಪಾಲಾಗುವವು. ಈಗ ನಿಮ್ಮದು ಸತ್ಯ ವ್ಯಾಪಾರವಾಗುತ್ತಿದೆ. ತಂದೆಯು ಬೇಹದ್ದಿನ ರತ್ನಾಗಾರ, ವ್ಯಾಪಾರಿಯಾಗಿದ್ದಾರೆ ಮತ್ತು ಅವರಿಗೆ ಜ್ಞಾನಸಾಗರನೆಂದೂ ಹೇಳಲಾಗುತ್ತದೆ. ಪ್ರದರ್ಶನಿಯಿಟ್ಟಾಗ ನೋಡಿ, ಎಷ್ಟೊಂದು ಮಂದಿ ಬರುತ್ತಾರೆ. ಸೇವಾಕೇಂದ್ರಕ್ಕೆ ಕೆಲವರೇ ಬರುತ್ತಾರೆ. ಭಾರತವಂತೂ ಬಹಳ ಉದ್ದಗಲವಾಗಿದೆಯಲ್ಲವೆ. ನೀವು ಎಲ್ಲಾ ಕಡೆ ಹೋಗಿ ಸರ್ವೀಸ್ ಮಾಡಬೇಕಾಗಿದೆ, ನೀರಿನ ಗಂಗೆಯಂತೂ ಇಡೀ ಭಾರತದಲ್ಲಿ ಇಲ್ಲ. ಇದನ್ನೂ ಸಹ ನೀವು ತಿಳಿಸಬೇಕಾಗಿದೆ – ನೀರಿನ ಗಂಗೆಯು ಪತಿತ-ಪಾವನಿಯಲ್ಲ. ನೀವು ಜ್ಞಾನ ಗಂಗೆಯರೇ ಹೋಗಬೇಕಾಗಿದೆ. ನಾಲ್ಕಾರು ಕಡೆ ಪ್ರದರ್ಶನಿ ಮೇಳಗಳನ್ನು ಮಾಡುತ್ತಾ ಇರಿ, ದಿನ-ಪ್ರತಿದಿನ ಒಳ್ಳೊಳ್ಳೆಯ ಆಧುನಿಕ ಚಿತ್ರಗಳೂ ತಯಾರಾಗುತ್ತಿರುತ್ತವೆ. ಶೋಭನೀಕ ಚಿತ್ರಗಳು ಈ ರೀತಿಯಿರಲಿ, ಅವನ್ನು ನೋಡುತ್ತಿದ್ದಂತೆಯೇ ಖುಷಿಯಾಗಿ ಬಿಡಲಿ – ಇವರು ಸತ್ಯವನ್ನು ತಿಳಿಸುತ್ತಾರೆ, ಈಗ ಲಕ್ಷ್ಮೀ-ನಾರಾಯಣರ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುತ್ತಿದೆ. ಈ ಬ್ರಾಹ್ಮಣರೇ ದೇವಿ-ದೇವತೆಗಳಾಗುತ್ತಾರೆ. ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ ಅಂದಮೇಲೆ ಹೃದಯದಲ್ಲಿ ತಮ್ಮೊಂದಿಗೆ ಕೇಳಿಕೊಳ್ಳುತ್ತಾ ಇರಿ – ನನ್ನಲ್ಲಿ ಯಾವುದೇ ಚಿಕ್ಕ ಪುಟ್ಟ ಮುಳ್ಳಂತೂ ಇಲ್ಲವೆ! ಕಾಮದ ಮುಳ್ಳು ಇಲ್ಲವೆ! ಕ್ರೋಧದ ಚಿಕ್ಕ ಮುಳ್ಳೂ ಸಹ ಬಹಳ ಕೆಟ್ಟದ್ದಾಗಿದೆ. ದೇವತೆಗಳು ಕ್ರೋಧಿಯಾಗಿರುವುದಿಲ್ಲ. ಶಂಕರನು ಕಣ್ಣು ತೆರೆದ ಕೂಡಲೇ ವಿನಾಶವಾಗಿ ಬಿಡುತ್ತದೆ ಎಂದು ತೋರಿಸುತ್ತಾರೆ. ಆದರೆ ಇದೂ ಸಹ ಶಂಕರನ ಮೇಲೆ ಕಳಂಕ ಹೊರಿಸಿದಂತೆ. ವಿನಾಶವಂತೂ ಆಗಲೇಬೇಕಾಗಿದೆ. ಸೂಕ್ಷ್ಮ ವತನದಲ್ಲಿ ಶಂಕರನಿಗೆ ಯಾವುದೇ ಸರ್ಪ ಇತ್ಯಾದಿಗಳಿರುವುದಿಲ್ಲ. ಸರ್ಪ ಇತ್ಯಾದಿ ಬರಲು ಅಲ್ಲಿ ಧರಣಿಯಾದರೂ ಎಲ್ಲಿದೆ? ಆಕಾಶದಲ್ಲಿ ಸರ್ಪಗಳು ಓಡಾಡುತ್ತವೆಯೇ? ಸೂಕ್ಷ್ಮವತನ ಮತ್ತು ಮೂಲವತನದಲ್ಲಿ ತೋಟ, ಉದ್ಯಾನವನ, ಸರ್ಪ ಇತ್ಯಾದಿಗಳೇನೂ ಇರುವುದಿಲ್ಲ. ಇವೆಲ್ಲವೂ ಇಲ್ಲಿಯೇ ಇರುತ್ತದೆ, ಸ್ವರ್ಗವೂ ಇಲ್ಲಿಯೇ ಆಗುತ್ತದೆ. ಈ ಸಮಯದಲ್ಲಿ ಮನುಷ್ಯರು ಮುಳ್ಳಿನ ಸಮಾನ ಆಗಿ ಬಿಟ್ಟಿದ್ದಾರೆ ಆದ್ದರಿಂದ ಇದಕ್ಕೆ ಮುಳ್ಳುಗಳ ಕಾಡು ಎಂದು ಹೇಳಲಾಗುತ್ತದೆ. ಸತ್ಯಯುಗವು ಹೂದೋಟವಾಗಿದೆ, ತಂದೆಯು ಹೇಗೆ ಹೂದೋಟವನ್ನಾಗಿ ಮಾಡುತ್ತಾರೆ, ಅತಿ ಸುಂದರ ಹೂಗಳನ್ನಾಗಿ ಮಾಡುತ್ತಾರೆ. ಎಲ್ಲರನ್ನೂ ಸುಂದರರನ್ನಾಗಿ ಮಾಡುತ್ತಾರೆಂದು ನೀವು ನೋಡುತ್ತೀರಿ. ತಂದೆಯಂತೂ ಸದಾ ಸುಂದರನಾಗಿದ್ದಾರೆ, ಎಲ್ಲಾ ಪ್ರಿಯತಮೆಯರನ್ನು ಅರ್ಥಾತ್ ಮಕ್ಕಳನ್ನು ಸುಂದರರನ್ನಾಗಿ ಮಾಡುತ್ತಾರೆ. ರಾವಣನು ಸಂಪೂರ್ಣ ಕಪ್ಪು ಮಾಡಿ ಬಿಟ್ಟಿದ್ದಾನೆ. ಈಗ ನೀವು ಮಕ್ಕಳಿಗೆ ನಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆಯೆಂಬ ಖುಷಿಯಿರಬೇಕಾಗಿದೆ. ಒಂದುವೇಳೆ ಅರ್ಧ ಸಮಯ ದುಃಖ, ಅರ್ಧ ಸಮಯ ಸುಖವಿರುವುದಾದರೆ ಇದರಿಂದ ಲಾಭವಾದರೂ ಏನು? ಈ ರೀತಿಯಿರಲು ಸಾಧ್ಯವಿಲ್ಲ, ಮುಕ್ಕಲು ಭಾಗ ಸುಖವಿರುತ್ತದೆ. ಇದು ನಾಟಕದಲ್ಲಿ ಮಾಡಲ್ಪಟ್ಟಿದೆ. ಈ ನಾಟಕವನ್ನು ಹೀಗೇಕೆ ರಚಿಸಿದ್ದಾರೆ ಎಂದು ಅನೇಕರು ಕೇಳುತ್ತಾರೆ. ಇದು ಅನಾದಿ ನಾಟಕವಲ್ಲವೆ. ಏಕಾಯಿತು ಎಂಬ ಪ್ರಶ್ನೆಯೇ ಬರುವಂತಿಲ್ಲ. ಇದು ಅನಾದಿ-ಅವಿನಾಶಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಆಗಬೇಕಾಗಿರುವುದೇ ನಡೆಯುತ್ತಿದೆ, ಯಾರಿಗೂ ಮೋಕ್ಷ ಸಿಗಲು ಸಾಧ್ಯವಿಲ್ಲ. ಈ ಅನಾದಿ ಸೃಷ್ಟಿಯು ನಡೆದು ಬರುತ್ತಿದೆ, ನಡೆಯುತ್ತಾ ಇರುವುದು. ಎಂದೂ ಪ್ರಳಯವಾಗುವುದಿಲ್ಲ. ತಂದೆಯು ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ. ಯಾವಾಗ ಮನುಷ್ಯರು ಪತಿತ, ದುಃಖಿಯಾಗುವರೋ ಆಗಲೇ ಕರೆಯುತ್ತಾರೆ. ತಂದೆಯು ಬಂದು ಎಲ್ಲರ ಕಾಯವನ್ನು ಕಲ್ಪವೃಕ್ಷ ಸಮಾನ ಮಾಡುತ್ತಾರೆ. ನೀವಾತ್ಮರು ಪವಿತ್ರರಾಗಿ ಬಿಟ್ಟರೆ ಶರೀರವೂ ಪವಿತ್ರವಾದುದೇ ಸಿಗುವುದು ಅಂದಾಗ ತಂದೆಯು ನಿಮ್ಮ ಕಾಯವನ್ನು ಕಲ್ಪತರುವನ್ನಾಗಿ ಮಾಡುತ್ತಾರೆ. ಅರ್ಧಕಲ್ಪ ಎಂದೂ ನಿಮ್ಮದು ಅಕಾಲ ಮೃತ್ಯುವಾಗುವುದಿಲ್ಲ. ನೀವು ಕಾಲದ ಮೇಲೆ ಜಯ ಗಳಿಸುತ್ತೀರಿ. ನೀವು ಮಕ್ಕಳು ಬಹಳ ಪುರುಷಾರ್ಥ ಮಾಡಬೇಕಾಗಿದೆ. ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರೋ ಅಷ್ಟು ಒಳ್ಳೆಯದೇ ಆಗಿದೆ. ಪ್ರತಿಯೊಬ್ಬರೂ ಹೆಚ್ಚು ಸಂಪಾದನೆಗಾಗಿಯೇ ಪುರುಷಾರ್ಥ ಮಾಡುತ್ತಾರೆ. ಸೌದೆ ಮಾರುವವರೂ ಸಹ ನಾವು ಹೆಚ್ಚು ಸೌದೆಯನ್ನು ತೆಗೆದುಕೊಂಡು ಹೋದರೆ ಹೆಚ್ಚು ಸಂಪಾದನೆಯಾಗುವುದು ಎಂದು ಹೇಳುತ್ತಾರೆ. ಕೆಲವರಂತೂ ಮೋಸದಿಂದಲೂ ಸಂಪಾದನೆ ಮಾಡುತ್ತಾರೆ. ಸತ್ಯಯುಗದಲ್ಲಿ ಇಂತಹ ಯಾವುದೇ ದುಃಖದ ಮಾತುಗಳಿರುವುದಿಲ್ಲ. ನೀವೀಗ ತಂದೆಯಿಂದ ಎಷ್ಟೊಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಆದ್ದರಿಂದ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ನಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಿದ್ದೇವೆಯೇ? (ನಾರದನ ಉದಾಹರಣೆಯಂತೆ) ಶಾಸ್ತ್ರಗಳಲ್ಲಿ ಅನೇಕ ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಈ ತೀರ್ಥ ಯಾತ್ರೆ ಇತ್ಯಾದಿಗಳೆಲ್ಲವನ್ನೂ ಬಿಟ್ಟು ಬಿಡಿ. ನಾಲ್ಕಾರು ಕಡೆ ಸುತ್ತಿದೆವು ಆದರೂ ನಿಮ್ಮಿಂದ ದೂರ ಉಳಿದೆವು ಎಂದು ಗೀತೆಯಿದೆಯಲ್ಲವೆ. ಈಗ ತಂದೆಯು ನಿಮಗೆ ಎಷ್ಟು ಒಳ್ಳೆಯ ಯಾತ್ರೆಯನ್ನು ಕಲಿಸುತ್ತಾರೆ, ಇದರಲ್ಲಿ ಯಾವುದೇ ಕಷ್ಟವಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ಆಗ ವಿಕರ್ಮಗಳು ವಿನಾಶವಾಗುತ್ತವೆ. ಬಹಳ ಒಳ್ಳೆಯ ಯುಕ್ತಿಯನ್ನು ನಿಮಗೆ ತಿಳಿಸುತ್ತೇನೆ. ಮಕ್ಕಳೇ, ಕೇಳಿಸಿಕೊಳ್ಳುತ್ತಿದ್ದೀರಾ! ಇದನ್ನು ನಾನು ಲೋನ್ ಆಗಿ ತೆಗೆದುಕೊಂಡಿರುವ ರಥವಾಗಿದೆ. ಈ ತಂದೆಗೆ (ಬ್ರಹ್ಮಾ) ಎಷ್ಟೊಂದು ಖುಷಿಯಾಗುತ್ತದೆ – ನಾನು ತಂದೆಗೆ ಶರೀರವನ್ನು ಲೋನ್ ಆಗಿ ಕೊಟ್ಟಿದ್ದೇನೆ, ತಂದೆಯು ನನ್ನನ್ನು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆ ಎಂದು. ಭಗೀರಥ ಎಂದು ಹೆಸರೂ ಇದೆ, ನಿಮಗೆ ತಿಳಿದಿದೆ – ಬಾಂಬುಗಳೆಲ್ಲವೂ ತಯಾರಾಗುತ್ತಿದೆ, ಇದಕ್ಕೆ ಬೆಂಕಿ ಬೀಳಲಿದೆ. ರಾವಣನ ಗೊಂಬೆಯನ್ನೂ ಸಹ ತಯಾರು ಮಾಡುತ್ತಾರೆ, ಸಾಯಿಸುವುದಕ್ಕಾಗಿ. ಇಲ್ಲಿ ಸಾಯಿಸುವ ಮಾತೆಲ್ಲಿ! ಈ ರಾವಣ ರಾಜ್ಯವು ಸಮಾಪ್ತಿಯೇ ಆಗುತ್ತಿದೆ. ನೀವು ಮಕ್ಕಳು ರಾಮ ಪುರಿಯಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ ಅಂದಮೇಲೆ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ, ಮುಳ್ಳಾಗಬಾರದು.

ನೀವು ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಿ. ಎಲ್ಲರ ಆಧಾರವು ಮುರುಳಿಯ ಮೇಲಿದೆ. ನಿಮಗೆ ಮುರುಳಿ ಸಿಗಲಿಲ್ಲವೆಂದರೆ ಏನು ಮಾಡುತ್ತೀರಿ? ಕೇವಲ ಒಬ್ಬ ಬ್ರಾಹ್ಮಿಣಿಯೇ ಓದಿ ತಿಳಿಸಬೇಕೆಂದಿಲ್ಲ. ಯಾರು ಬೇಕಾದರೂ ಮುರುಳಿಯನ್ನು ಹೇಳಬಹುದಾಗಿದೆ. ಇಂದು ನೀವೂ ಮುರುಳಿಯನ್ನು ಓದಿರಿ ಎಂದು ಹೇಳಬೇಕು. ಈಗಂತೂ ತಿಳಿಸುವುದಕ್ಕಾಗಿ ಒಳ್ಳೊಳ್ಳೆಯ ಚಿತ್ರಗಳೂ ಇವೆ. ಈ ಮುಖ್ಯ ಚಿತ್ರಗಳನ್ನು ತಮ್ಮ ಅಂಗಡಿಗಳಲ್ಲಿ ಇಟ್ಟುಕೊಂಡು ಅನೇಕರ ಕಲ್ಯಾಣ ಮಾಡಿರಿ. ಆ ವ್ಯಾಪಾರದ ಜೊತೆ ಜೊತೆಗೆ ಈ ವ್ಯಾಪಾರವನ್ನೂ ಮಾಡಿರಿ. ಇದು ತಂದೆಯ ಅವಿನಾಶಿ ಜ್ಞಾನರತ್ನಗಳ ಅಂಗಡಿಯಾಗಿದೆ. ಮನೆ ಇತ್ಯಾದಿಗಳನ್ನು ಕಟ್ಟಿಸಬೇಡಿ ಎಂದು ತಂದೆಯು ಹೇಳುವುದಿಲ್ಲ. ಭಲೆ ಕಟ್ಟಿಸಿರಿ. ಹಣವಿದ್ದರೂ ಸಹ ಮಣ್ಣು ಪಾಲಾಗುವುದು. ಇದಕ್ಕಿಂತಲೂ ಮನೆ ಕಟ್ಟಿಸಿ ಆರಾಮದಿಂದ ಇರಿ. ಹಣವನ್ನು ಕಾರ್ಯದಲ್ಲಿ ತೊಡಗಿಸಿರಿ. ಮನೆಯನ್ನೂ ಕಟ್ಟಿಸಿ, ತಿನ್ನುವುದಕ್ಕಾಗಿಯೂ ಇಟ್ಟುಕೊಳ್ಳಿ, ದಾನ ಪುಣ್ಯಗಳನ್ನೂ ಮಾಡಿರಿ. ಕಾಶ್ಮೀರದ ರಾಜನು ಮರಣ ಹೊಂದಿದಾಗ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಆರ್ಯ ಸಮಾಜದವರಿಗೆ ದಾನವಾಗಿ ಕೊಟ್ಟು ಬಿಟ್ಟರು. ತಮ್ಮ ಧರ್ಮಕ್ಕಾಗಿ ದಾನ ಮಾಡುತ್ತಾರಲ್ಲವೆ. ಇಲ್ಲಂತೂ ಆ ಮಾತಿಲ್ಲ. ಎಲ್ಲರೂ ಮಕ್ಕಳಾಗಿದ್ದೀರಿ, ದಾನದ ಮಾತಿಲ್ಲ. ಅದು ಹದ್ದಿನ ದಾನವಾಗಿದೆ, ನಾನಂತೂ ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಡ್ರಾಮಾನುಸಾರ ಭಾರತವಾಸಿಗಳೇ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವಿರಿ. ಭಕ್ತಿಮಾರ್ಗದಲ್ಲಿ ವ್ಯಾಪಾರಿಗಳು ಒಂದಲ್ಲ ಒಂದು ದಾನ-ಧರ್ಮವನ್ನು ಮಾಡುತ್ತಾ ಇರುತ್ತಾರೆ, ಅದಕ್ಕಾಗಿ ಇನ್ನೊಂದು ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ಈಗಂತೂ ನಾನು ಡೈರೆಕ್ಟ್ ಬಂದಿದ್ದೇನೆ ಅಂದಮೇಲೆ ನೀವು ಈ ಕಾರ್ಯದಲ್ಲಿ ತೊಡಗಿಸಿರಿ. ನನಗೇನೂ ಬೇಕಿಲ್ಲ, ಶಿವ ತಂದೆಯು ತನಗಾಗಿ ಮನೆಯನ್ನು ಕಟ್ಟಿಸಿಕೊಳ್ಳಬೇಕಾಗಿದೆಯೇ!!! ಇದೆಲ್ಲವೂ ಬ್ರಾಹ್ಮಣರಿಗಾಗಿ ಇದೆ. ಬಡವರು-ಸಾಹುಕಾರರು ಎಲ್ಲರೂ ಒಟ್ಟಿಗೆ ಇರುತ್ತೀರಿ ಅಂದಮೇಲೆ ಇದೆಲ್ಲವೂ ಮಕ್ಕಳದೇ ಆಗಿದೆ. ಮನೆಯಲ್ಲಿ ಅವರು ಆರಾಮದಿಂದ ಇರುವವರಾದರೆ ಅವರಿಗಾಗಿ ಅಂತಹ ಪ್ರಬಂಧವನ್ನೂ ಮಾಡಬೇಕಾಗುತ್ತದೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಎಲ್ಲರಿಗೆ ಚೆನ್ನಾಗಿ ಉಪಚಾರ ಮಾಡಿ, ಯಾವುದೇ ವಸ್ತುವಿಲ್ಲದಿದ್ದರೆ ಭಂಡಾರದಲ್ಲಿ ಸಿಗುತ್ತದೆ. ತಂದೆಗೆ ಮಕ್ಕಳ ಮೇಲೆ ಪ್ರೀತಿಯಿರುತ್ತದೆ. ಇಷ್ಟು ಪ್ರೀತಿ ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಮಕ್ಕಳಿಗೆ ಎಷ್ಟೊಂದು ತಿಳಿಸುತ್ತಾರೆ – ಪುರುಷಾರ್ಥ ಮಾಡಿರಿ, ಅನ್ಯರಿಗಾಗಿ ಯುಕ್ತಿಯನ್ನು ರಚಿಸಿ. ಇದರಲ್ಲಿ ಕೇವಲ ಮೂರು ಹೆಜ್ಜೆಗಳಷ್ಟು ಸ್ಥಳವಿದ್ದರೆ ಸಾಕು, ಅಲ್ಲಿ ಬಂದು ಕನ್ಯೆಯರು ಜ್ಞಾನವನ್ನು ತಿಳಿಸುತ್ತಾ ಇರಲಿ. ಯಾರಾದರೂ ದೊಡ್ಡ ವ್ಯಕ್ತಿಯ ಹಾಲ್ ಇತ್ಯಾದಿಗಳಿದ್ದರೆ ತಿಳಿಸಿ, ನಾವು ಈ ಅತ್ಯವಶ್ಯಕವಾದ ಚಿತ್ರಗಳನ್ನು ಇಟ್ಟು ಸರ್ವೀಸ್ ಮಾಡುತ್ತೇವೆ. ಬೆಳಗ್ಗೆ-ಸಂಜೆ ಒಂದೆರಡು ಗಂಟೆಗಳ ಕಾಲ ತರಗತಿಯನ್ನು ನಡೆಸಿ ಹೊರಟು ಹೋಗುತ್ತೇವೆ. ಖರ್ಚು ನಮ್ಮದು, ಕೀರ್ತಿ ನಿಮ್ಮದಾಗುತ್ತದೆ. ಅನೇಕರು ಬಂದು ಕವಡೆಯಿಂದ ವಜ್ರ ಸಮಾನರಾಗುವರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಅವಿನಾಶಿ ತಂದೆಯೊಂದಿಗೆ ಸತ್ಯ-ಸತ್ಯವಾದ ಅವಿನಾಶಿ ವ್ಯಾಪಾರ ಮಾಡಬೇಕಾಗಿದೆ. ಆ ವ್ಯಾಪಾರದ ಜೊತೆಗೆ ಈ ವ್ಯಾಪಾರದಲ್ಲಿಯೂ ಸಮಯ ಕೊಡಬೇಕಾಗಿದೆ. ಜ್ಞಾನ ಗಂಗೆಯರಾಗಿ ಎಲ್ಲರನ್ನೂ ಪಾವನ ಮಾಡಬೇಕಾಗಿದೆ.

2. ಬ್ರಾಹ್ಮಣ ಜೀವನದ ಆಧಾರವು ಮುರುಳಿಯಾಗಿದೆ, ಇದನ್ನು ಪ್ರೀತಿಯಿಂದ ಕೇಳಬೇಕು ಹಾಗೂ ಹೇಳಬೇಕಾಗಿದೆ. ಒಳಗೆ ಯಾವುದೇ ಮುಳ್ಳು ಇದ್ದರೆ ಅದನ್ನು ತೆಗೆದು ಹಾಕಬೇಕಾಗಿದೆ. ಅವಗುಣಗಳ ದಾನ ಮಾಡಬೇಕಾಗಿದೆ.

ವರದಾನ:-

ಯಾರಲ್ಲಿ ಸಹನಶೀಲತೆಯ ಗುಣವಿರುತ್ತದೆಯೋ ಅವರ ಚಹರೆಯಿಂದ ಸದಾ ಸಂತುಷ್ಟತೆಯು ಕಂಡು ಬರುತ್ತದೆ, ಯಾರು ಸ್ವಯಂನಿಂದ ಸಂತುಷ್ಟ ಮೂರ್ತಿಯಾಗಿ ಇರುತ್ತಾರೆಯೋ ಅವರು ಅನ್ಯರನ್ನೂ ಸಂತುಷ್ಟ ಪಡಿಸುತ್ತಾರೆ. ಸಂತುಷ್ಟರಾಗುವುದು ಎಂದರೆ ಸಫಲತೆಯನ್ನು ಪಡೆಯುವುದಾಗಿದೆ. ಯಾರು ಸಹನಶೀಲರಾಗಿ ಇರುತ್ತಾರೆಯೋ ಅವರು ಕಠೋರ ಸಂಸ್ಕಾರ ಅಥವಾ ಕಠಿಣ ಕಾರ್ಯವನ್ನೂ ಶೀತಲ ಮತ್ತು ಸಹಜ ಮಾಡಿ ಬಿಡುತ್ತಾರೆ. ಅವರ ಚಹರೆಯೇ ಗುಣಮೂರ್ತಿಯಾಗಿ ಕಾಣಿಸುತ್ತದೆ – ಇಂತಹವರೇ ಡ್ರಾಮಾದ ಪಟ್ಟೆಯ ಮೇಲೆ ಸ್ಥಿರವಾಗಲು ಸಾಧ್ಯವಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top