25 October 2021 KANNADA Murli Today | Brahma Kumaris

Read and Listen today’s Gyan Murli in Kannada

October 24, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈಗ ಈ ಹಳೆಯ ಪ್ರಪಂಚದ ಅಂತ್ಯವಾಗಿದೆ ಆದ್ದರಿಂದ ಸಂಗಮಯುಗದಲ್ಲಿ ನೀವು ಭವಿಷ್ಯ ರಾಜ್ಯ ಪದವಿಗೆ ಯೋಗ್ಯರಾಗಬೇಕಾಗಿದೆ”

ಪ್ರಶ್ನೆ:: -

ಮಕ್ಕಳಲ್ಲಿ ಯಾವ ಉಮ್ಮಂಗವಿದ್ದಾಗ ಸಿಂಹಾಸನಾಧೀಶರಾಗಬಹುದು?

ಉತ್ತರ:-

ಆಲ್ರೌಂಡ್ ಸರ್ವೀಸ್ ಮಾಡುವ ಉಮ್ಮಂಗವಿದ್ದಾಗ ಸಿಂಹಾಸನಾಧೀಶರಾಗಬಹುದು. ಯಾರು ಆಲ್ರೌಂಡ್ ಸೇವೆ ಮಾಡಿ ಅನೇಕರಿಗೆ ಸುಖ ಕೊಡುವರೋ ಅವರಿಗೆ ಅದರ ಪ್ರತಿಫಲವು ಸಿಗುತ್ತದೆ. ಮಕ್ಕಳು ಯಾವಾಗಲೂ ಪ್ರತೀ ಸಮಯದಲ್ಲಿ ಹಾಜರಿರಬೇಕಾಗಿದೆ. ಇಷ್ಟು ಬುದ್ಧಿವಂತರಾಗಿರಿ ಮಾತಾಪಿತರನ್ನು ಪ್ರತ್ಯಕ್ಷ ಮಾಡಿರಿ. ಮಮ್ಮಾ-ಬಾಬಾ ಎಂದು ಹೇಳುತ್ತೀರೆಂದರೆ ಅವರಂತೆ ಆಗಿ ತೋರಿಸಿರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಪಾಪದ ಪ್ರಪಂಚದಿಂದ ದೂರ ಕರೆದುಕೊಂಡು ಹೋಗು….

ಓಂ ಶಾಂತಿ. ಕೇವಲ ಮಧುರಾತಿ ಮಧುರ ಬ್ರಹ್ಮಾಕುಮಾರ-ಕುಮಾರಿಯರೇ ಇದನ್ನು ತಿಳಿದುಕೊಂಡಿದ್ದೀರಿ – ಪಾಪದ ಪ್ರಪಂಚ ಮತ್ತು ಪುಣ್ಯದ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ. ಭಲೆ ಮನುಷ್ಯರು ಹೇ ಪತಿತ-ಪಾವನ ತಂದೆಯೇ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡಲು ಬನ್ನಿ ಎಂದು ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಇದನ್ನೂ ಸಹ ಆತ್ಮವೇ ಹೇಳುತ್ತದೆ – ಹೇ ಪತಿತ-ಪಾವನ…. ಎಂದು. ಎಲ್ಲಾ ಮನುಷ್ಯ ಮಾತ್ರರು ಕರೆಯುತ್ತಾ ಇರುತ್ತಾರೆ ಆದರೆ ಇದು ಪಾವನ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ, ಅದು ಯಾವಾಗ ಮತ್ತು ಹೇಗೆ ಸ್ಥಾಪನೆಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ನೀವೀಗ ಜ್ಞಾನಪೂರ್ಣ ತಂದೆಯ ಮಕ್ಕಳಾಗಿದ್ದೀರಿ ಆದ್ದರಿಂದ ಜ್ಞಾನಪೂರ್ಣ, ಜ್ಞಾನಸಾಗರ ತಂದೆಯನ್ನು ಕೇವಲ ನೀವೇ ಅರಿತುಕೊಂಡಿದ್ದೀರಿ. ಪಾವನ ಪ್ರಪಂಚವು ಹೇಗೆ ಪತಿತವಾಗುತ್ತದೆ, ಪತಿತ ಪ್ರಪಂಚವು ಮತ್ತೆ ಹೇಗೆ ಪಾವನವಾಗುತ್ತದೆ ಎಂದು ಯಾರೂ ತಿಳಿದುಕೊಂಡಿಲ್ಲ. ಪತಿತ ಪ್ರಪಂಚದಲ್ಲಿ ಯಾರಿದ್ದಾರೆ ಮತ್ತು ಪಾವನ ಪ್ರಪಂಚದಲ್ಲಿ ಯಾರು ಇರುತ್ತಾರೆ, ಇವೆಲ್ಲಾ ಮಾತುಗಳನ್ನು ನೀವೇ ಈಗ ತಿಳಿದುಕೊಂಡಿದ್ದೀರಿ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಅವಶ್ಯವಾಗಿ ಪಾವನ ಪ್ರಪಂಚ ಭಾರತದಲ್ಲಿಯೇ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮದ ರಾಜ್ಯವಿತ್ತು ಆದ್ದರಿಂದ ಭಾರತವು ಎಲ್ಲದಕ್ಕಿಂತ ಪ್ರಾಚೀನ ದೇಶವೆಂದು ಗಾಯನವಿದೆ. ನೀವೀಗ ತಿಳಿದುಕೊಳ್ಳುತ್ತೀರಿ, ನಮ್ಮನ್ನು ಪುನಃ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಪತಿತ-ಪಾವನ ತಂದೆಯು ಯುಕ್ತಿಗಳನ್ನು ತಿಳಿಸುತ್ತಿದ್ದಾರೆ. ಒಂದು ಸೆಕೆಂಡಿನಲ್ಲಿ ಯುಕ್ತಿಯನ್ನು ತಿಳಿಸುತ್ತೇನೆಂದು ಹೇಳುತ್ತಾರೆ. ತಂದೆಯು ಬರುವುದೇ ಹೊಸ ಪ್ರಪಂಚದ ರಾಜ್ಯಭಾಗ್ಯವನ್ನು ಕೊಡಲು. ಇದು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯಾಗಿದೆ. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ತಂದೆಯು ಹೇಳುತ್ತಾರೆ – ನೀವೇ ಸತೋಪ್ರಧಾನರಾಗಿದ್ದಿರಿ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಹಿಂದೂ ಧರ್ಮವಲ್ಲ. ಭಾರತಕ್ಕೆ ಮೊಟ್ಟ ಮೊದಲು ದೇವಿ-ದೇವತಾ ಧರ್ಮವಿತ್ತು ನಂತರ ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಹೇಗೆ ಕ್ರಿಶ್ಚಿಯನ್ನರೂ ಸಹ ಪುನರ್ಜನ್ಮವನ್ನು ತೆಗೆದುಕೊಂಡು ವೃದ್ಧಿ ಹೊಂದುತ್ತಾರೆ, ಬೌದ್ಧರ ಧರ್ಮ ಸ್ಥಾಪನೆ ಮಾಡುವವರು ಬುದ್ಧನಾಗಿದ್ದಾರೆ. ಅವರು ಧರ್ಮ ಸ್ಥಾಪಕನಾದರು, ಒಬ್ಬ ಬುದ್ಧನಿಂದ ಎಷ್ಟೊಂದು ಮಂದಿ ಬೌದ್ಧಿಯರಾದರು. ಕ್ರೈಸ್ಟ್ ಒಬ್ಬರೇ ಇದ್ದರೆ ಈಗ ನೋಡಿ ಎಷ್ಟೊಂದು ಮಂದಿ ಕ್ರಿಶ್ಚಿಯನ್ನರಾಗಿ ಬಿಟ್ಟಿದ್ದಾರೆ. ಎಲ್ಲಾ ಧರ್ಮಗಳೂ ಸಹ ಇದೇ ರೀತಿ ನಡೆಯುತ್ತಾ ಬಂದಿದೆ. ಹಾಗೆಯೇ ಯಾವಾಗ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತೊ ಆಗ ಮತ್ತ್ಯಾವ ಧರ್ಮವಿರಲಿಲ್ಲ. ಕ್ರೈಸ್ಟ್ ಕ್ರಿಶ್ಚಿಯನ್ ಧರ್ಮವನ್ನು, ಇಬ್ರಾಹಿಂ ಇಸ್ಲಾಂ ಧರ್ಮವನ್ನು ಸ್ಥಾಪನೆ ಮಾಡಿದರೆಂದು ಅನ್ಯ ಧರ್ಮದವರ ಬಗ್ಗೆ ತಿಳಿದುಕೊಂಡಿರುತ್ತಾರೆ. ಒಳ್ಳೆಯದು – ಸತ್ಯಯುಗದಲ್ಲಿ ಯಾವ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಅದನ್ನು ಯಾರು ಸ್ಥಾಪನೆ ಮಾಡಿದರು? ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜಧಾನಿಯು ನಡೆಯಿತಲ್ಲವೆ ಅಂದಮೇಲೆ ಅವಶ್ಯವಾಗಿ ಯಾರೋ ರಾಜ್ಯ ಸ್ಥಾಪನೆ ಮಾಡಿದ್ದಾರೆ, ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮವಿತ್ತು, ಅದನ್ನು ಈಗ ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ. ಆದ್ದರಿಂದ ತಂದೆಯು ಸಂಗಮಯುಗದಲ್ಲಿಯೇ ಬರಬೇಕಾಗುತ್ತದೆ. ಈಗ ಎಲ್ಲಾ ಮನುಷ್ಯ ಮಾತ್ರವು ಪತಿತ ಪ್ರಪಂಚದಲ್ಲಿ ಕುಳಿತಿದ್ದಾರೆ, ಹಳೆಯ ಪ್ರಪಂಚದಲ್ಲಿ ಕೋಟ್ಯಾಂತರ ಜನಸಂಖ್ಯೆಯಿದೆ. ಹೊಸ ಪ್ರಪಂಚದಲ್ಲಿ ಇಷ್ಟೊಂದು ಮಂದಿ ಇರಲು ಸಾಧ್ಯವಿಲ್ಲ. ಅಲ್ಲಿ ಒಂದು ಧರ್ಮವಿತ್ತು, ಇಸ್ಲಾಮಿ, ಬೌದ್ಧಿ, ಕ್ರಿಶ್ಚಿಯನ್ ಮೊದಲಾದವರು ಯಾರೂ ಇರಲಿಲ್ಲ. ಆ ದೇವತಾ ಧರ್ಮವು ಈಗ ಪ್ರಾಯಲೋಪವಾಗಿದೆ. ಅದನ್ನು ಹೇಗೆ ಭಗವಂತನು ಸ್ಥಾಪನೆ ಮಾಡಿದ್ದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ದೇವತಾ ಧರ್ಮದ ಹೆಸರನ್ನೇ ಮರೆತು ಹೋಗಿದ್ದಾರೆ. ಹಿಂದೂ ಧರ್ಮವೆಂದು ಹೇಳಿಬಿಡುತ್ತಾರೆ. ಈಗ ತಂದೆಯು ತಿಳಿಸುತ್ತಿದ್ದಾರೆ, ಯಾವಾಗ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಬೇಕಾಗಿದೆಯೋ ಆಗಲೇ ನಾನು ಬರುತ್ತೇನೆ. ಈಗ ಈ ಹಳೆಯ ಪ್ರಪಂಚದ ಅಂತ್ಯವಾಗಿದೆ, ಇದನ್ನು ಕೇವಲ ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ಈ ಮಹಾಭಾರಿ ಯುದ್ಧದಿಂದಲೇ ಹಳೆಯ ಪ್ರಪಂಚದ ಅಂತ್ಯವಾಗಿತ್ತು, ಗೀತೆಯಲ್ಲಿ ತೋರಿಸುತ್ತಾರೆ – ಎಲ್ಲರೂ ಸಮಾಪ್ತಿಯಾಗಿ ಬಿಟ್ಟರು, ಯಾರೂ ಉಳಿಯಲಿಲ್ಲ. ಪಂಚ ಪಾಂಡವರು ಉಳಿದರು ಅವರೂ ಸಹ ಪರ್ವತಗಳ ಮೇಲೆ ಕರಗಿ ಹೋದರು ಎಂದು ತೋರಿಸಿದ್ದಾರೆ ಆದರೆ ಈ ರೀತಿ ಆಗುವುದಿಲ್ಲ. ಇದನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ಪ್ರಳಯ ಅಥವಾ ಜಲಮಯವಾಗುವುದಿಲ್ಲ. ಹೇ ಪತಿತ-ಪಾವನ ಬನ್ನಿ, ನಮ್ಮ ದುಃಖವನ್ನು ದೂರ ಮಾಡಿ ಸುಖ ನೀಡಿ ಎಂದು ತಂದೆಯನ್ನು ಕರೆಯುತ್ತಾರೆ ಏಕೆಂದರೆ ಈಗ ರಾವಣ ರಾಜ್ಯವಾಗಿದೆ. ರಾಮ ರಾಜ್ಯವನ್ನು ಬಯಸುತ್ತಾರೆ ಅಂದಮೇಲೆ ಅವಶ್ಯವಾಗಿ ರಾವಣ ರಾಜ್ಯವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ – ಈಗ ರಾಮರಾಜ್ಯದ ಸ್ಥಾಪನೆ, ರಾವಣ ರಾಜ್ಯದ ವಿನಾಶವಾಗುತ್ತದೆ. ನಾನು ಯಾವ ಯುಕ್ತಿಯನ್ನು ಕಲಿಸುತ್ತೇನೆ, ಯಾರು ಕಲಿಯುತ್ತಾರೆಯೋ ಅವರೇ ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತಾರೆ. ಈ ಜ್ಞಾನವು ಅಲ್ಲಿ ಸ್ವಲ್ಪವೂ ಇರುವುದಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ, ಯಾರ ಬುದ್ಧಿಯಲ್ಲಿ ಇದೆಯೋ ಅವರು ಅನ್ಯರಿಗೂ ತಿಳಿಸುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ಸೇವಾಧಾರಿ ಮಕ್ಕಳ ಬುದ್ಧಿಯಲ್ಲಿ ಜ್ಞಾನವೇ ಹನಿಯುತ್ತಾ ಇರುತ್ತದೆ. ಸತ್ಯಯುಗದಲ್ಲಿ ಮೊಟ್ಟ ಮೊದಲು ದೇವಿ-ದೇವತಾ ಧರ್ಮದವರಿದ್ದರು, ಇದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಮೊಟ್ಟ ಮೊದಲು ಪ್ರಜಾಪಿತ ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸುತ್ತಾರೆ. ಇದು ಜ್ಞಾನ ಯಜ್ಞವಲ್ಲವೆ ಅಂದಮೇಲೆ ಅವಶ್ಯವಾಗಿ ಬ್ರಾಹ್ಮಣ ಸಂಪ್ರದಾಯದವರೇ ಬೇಕಾಗಿದೆ. ಅವಶ್ಯವಾಗಿ ಸಂಗಮಯುಗದಲ್ಲಿಯೇ ಬ್ರಾಹ್ಮಣ ಸಂಪ್ರದಾಯದವರಿರುವರು. ಕಲಿಯುಗದಲ್ಲಿ ಆಸುರೀ ಸಂಪ್ರದಾಯದವರಿದ್ದಾರೆ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿರುವುದು. ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ದೈವೀ ಸಂಪ್ರದಾಯದ ಸ್ಥಾಪನೆಯಾಗುವುದು. ಬಾಜೋಲಿ ಆಟವನ್ನು ಆಡುವಾಗ ಕಾಲು ಮತ್ತು ತಲೆಯು ಒಂದು ಕಡೆ ಕೂಡುತ್ತದೆ. ನೀವು ಬ್ರಾಹ್ಮಣರಾಗಿದ್ದೀರಿ, ಮತ್ತೆ ನೆನಪು ಬರುತ್ತದೆ, ವಿರಾಟ ರೂಪದ ಚಿತ್ರವೂ ಸಹ ಅವಶ್ಯಕವಾಗಿದೆ, ಇದರ ತಿಳುವಳಿಕೆಯು ಬಹಳ ಚೆನ್ನಾಗಿದೆ. ಬಾಬಾ, ನಾವು ನಿಮ್ಮ ಆರು ತಿಂಗಳ ಮಕ್ಕಳಾಗಿದ್ದೇವೆ, ನಾಲ್ಕು ದಿನಗಳ ಮಗುವಾಗಿದ್ದೇವೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಾನು ಒಂದು ದಿನದ ಮಗುವಾಗಿದ್ದೇನೆ ಅರ್ಥಾತ್ ನಾನು ಇಂದೇ ಬಾಬನ ಮಗುವಾಗಿದ್ದೇನೆ, ಮುಖ ವಂಶಾವಳಿ ಆಗಿದ್ದೇನೆಂದು ಹೇಳುತ್ತಾರೆ. ಯಾರು ಜೀವಿಸಿದ್ದಂತೆಯೇ ತಂದೆಯ ಮಗುವಾಗುವರೋ ಅವರು ಬಾಬಾ, ನಾವು ನಿಮ್ಮವರಾಗಿದ್ದೇವೆ ಎಂದು ಹೇಳುತ್ತಾರೆ. ಚಿಕ್ಕ ಮಗುವಂತೂ ಈ ರೀತಿ ಹೇಳಲು ಸಾಧ್ಯವಿಲ್ಲ. ಈ ಜ್ಞಾನವು ದೊಡ್ಡವರಿಗಾಗಿ ಇದೆ. ಬಾಬಾ, ನಾನು ನಿಮ್ಮ ಚಿಕ್ಕ ಮಗುವಾಗಿದ್ದೇನೆಂದು ಹೇಳುತ್ತಾರೆ. ಚಿಕ್ಕ ಮಕ್ಕಳಿಗೆ ಚಿತ್ರವನ್ನು ತೋರಿಸಿ ತಿಳಿಸುವುದು ಸಹಜವಾಗುತ್ತದೆ. ದಿನ-ಪ್ರತಿದಿನ ಜ್ಞಾನವು ವಿಸ್ತಾರವಾಗುತ್ತಾ ಹೋಗುತ್ತದೆ. ಈ ಚಿತ್ರಗಳ ಯುಕ್ತಿಯು ಡ್ರಾಮಾ ಪ್ಲಾನನುಸಾರ 5000 ವರ್ಷಗಳ ಮೊದಲು ಹೊರ ಬಂದಿದೆ. ಇದರಲ್ಲಿ ಆರಂಭದಲ್ಲಿಯೇ ಇದೆಲ್ಲವೂ ಏಕೆ ತಿಳಿಯಲಿಲ್ಲ, ಈಗಲೇ ಏಕೆ ತಿಳಿಸುತ್ತಿದ್ದಾರೆಂದು ಪ್ರಶ್ನೆ ಬರುವಂತಿಲ್ಲ. ಡ್ರಾಮಾನುಸಾರ ಯಾವ ಯುಕ್ತಿಯು ಯಾವಾಗ ಹೊಳೆಯಬೇಕಾಗಿರುವುದೊ ಆಗಲೇ ಹೊಳೆಯುವುದು. ಶಾಲೆಯಲ್ಲಿ ವಿದ್ಯೆಯ ನಂಬರ್ವಾರ್ ದರ್ಜೆಗಳಿರುತ್ತವೆ. ಮೊದಲೇ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡಿ ಬಿಡುವುದಿಲ್ಲ. ಮೊದಲು ಕೇವಲ ಒಂದು-ಎರಡು ಹೇಳಿಕೊಡಲಾಗುತ್ತದೆ, ಇಲ್ಲಂತೂ ತಂದೆಯ ಮಕ್ಕಳಾಗುತ್ತಿದ್ದಂತೆಯೇ ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ತಂದೆಯನ್ನು ತಂದೆಯೆಂದು ಹೇಳಿದ ಮೇಲೆ ನಿಶ್ಚಯವು ತುಂಡಾಗುವುದಿಲ್ಲ. ಇಲ್ಲಂತೂ ಬಾಬಾ, ಬಾಬಾ ಎಂದು ಹೇಳುತ್ತಿದ್ದರೂ ಸಹ ಕೆಲವೊಮ್ಮೆ ನಿಶ್ಚಯವು ಮುರಿಯುತ್ತದೆ. ನೀವು ತಿಳಿದುಕೊಂಡಿದ್ದೀರಿ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ನೀವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ. ತಂದೆಯು ತಿಳಿಸುತ್ತಿದ್ದಾರೆ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ನನ್ನನ್ನು ನೆನಪು ಮಾಡಿರಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ. ನಡೆಯುತ್ತಾ-ತಿರುಗಾಡುತ್ತಾ ಇದನ್ನು ನೆನಪು ಮಾಡಿದಾಗ ಖುಷಿಯಿರುವುದು ಆದರೆ ಈ ನೆನಪು ಏಕೆ ನಿಲ್ಲುವುದಿಲ್ಲ. ನಿಮ್ಮದು ಗ್ಯಾರಂಟಿಯಿದೆ – ಬಾಬಾ, ನಾವು ನಿಮ್ಮವರಾಗಿದ್ದೇವೆ ಅಂದಮೇಲೆ ನಮಗೆ ಮತ್ತ್ಯಾರೊಂದಿಗೆ ಮಮತೆಯಿರುವುದಿಲ್ಲ. ನಾವು ನಿಮ್ಮ ಮತದನುಸಾರವೇ ನಡೆಯುತ್ತೇವೆ. ತಂದೆಯೂ ಸಹ ಹೇಳುತ್ತಾರೆ- ಶ್ರೀಮತದಂತೆ ನಡೆಯದಿದ್ದರೆ ತಪ್ಪುಗಳಾಗುತ್ತಾ ಇರುತ್ತವೆ. ಶ್ರೀಮತದಂತೆ ನಡೆಯುವುದರಿಂದ ಖುಷಿಯ ನಶೆಯೇರುವುದು. ಆತ್ಮಕ್ಕೆ ಅತೀಂದ್ರಿಯ ಸುಖ ಸಿಗುತ್ತದೆಯೆಂದರೆ ಎಷ್ಟೊಂದು ಖುಷಿಯಾಗುತ್ತದೆ. ಆತ್ಮಕ್ಕೆ ತಿಳಿದಿದೆ – ಪರಮಪಿತ ಪರಮಾತ್ಮನು ನಮಗೆ ರಾಜ್ಯಭಾಗ್ಯವನ್ನು ಕೊಟ್ಟಿದ್ದರು ಅದನ್ನು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕಳೆದುಕೊಂಡಿದ್ದೇವೆ, ಅದನ್ನು ಪುನಃ ತಂದೆಯು ಕೊಡುತ್ತಿದ್ದಾರೆ ಅಂದಮೇಲೆ ಅಪಾರ ಖುಷಿಯಿರಬೇಕಲ್ಲವೆ. ಆಂತರಿಕ ಖುಷಿಯೂ ಸಹ ಕಾಣುತ್ತದೆಯಲ್ಲವೆ. ಈ ಲಕ್ಷ್ಮೀ-ನಾರಾಯಣರ ಚಹರೆಯಲ್ಲಿ ಕಂಡು ಬರುತ್ತದೆಯಲ್ಲವೆ. ಭಲೆ ಅಜ್ಞಾನ ಕಾಲದಲ್ಲಿ ಕೆಲಕೆಲವರು ಬಹಳ ಚೆನ್ನಾಗಿ ಖುಷಿಯಲ್ಲಿ ಇರುತ್ತಾರೆ, ಮಾತನಾಡುವುದರಲ್ಲಿಯೂ ಚೆನ್ನಾಗಿರುತ್ತಾರೆ.

ಮನುಷ್ಯ ಸೃಷ್ಟಿಯಲ್ಲಿ ಎಲ್ಲರಿಗಿಂತ ಶ್ರೇಷ್ಠ ಪದವಿ ಯಾರದಾಗಿದೆ? ವಾಸ್ತವದಲ್ಲಿ ಎಲ್ಲರಿಗಿಂತ ಶ್ರೇಷ್ಠರು ಶಿವ ಪರಮಾತ್ಮನಾಗಿದ್ದಾರೆ ಯಾರನ್ನು ಎಲ್ಲರೂ ತಂದೆ ಎಂದು ಕರೆಯುತ್ತಾರೆ ಆದರೆ ಅವರ ಪರಿಚಯವನ್ನು ತಿಳಿದುಕೊಂಡಿಲ್ಲ. ಯಾವಾಗ ತಂದೆಯೇ ಬರುವರೋ ಆಗ ತಮ್ಮ ಪರಿಚಯ ಕೊಡುವರು. ನಮಗೆ ತಂದೆಯಿಂದ ವೈಕುಂಠದ ರಾಜ್ಯಭಾಗ್ಯವು ಸಿಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಖುಷಿಯಿರಬೇಕಲ್ಲವೆ. ನಾವು ನರನಿಂದ ನಾರಾಯಣನಾಗುತ್ತೇವೆಂದು ಕೆಲವರು ಭಲೆ ಕೈಯತ್ತುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರಿಗೆ ನಿಶ್ಚಯವಿರುತ್ತದೆಯೋ ಅವರಿಗೆ ಈ ಖುಷಿಯಿರುತ್ತದೆ – ನಾವೀಗ 84 ಜನ್ಮಗಳನ್ನು ಪೂರ್ಣ ಮಾಡಿದೆವು. ನಾವೀಗ ತಂದೆಯ ಮತದಂತೆ ನಡೆದು ವಿಶ್ವದ ಮಾಲೀಕರಾಗುತ್ತೇವೆ. ಈ ವಿದ್ಯೆಯ ನಶೆ ಎಷ್ಟೊಂದಿರಬೇಕು! ರಾಜ್ಯಪಾಲ, ರಾಷ್ಟ್ರಪತಿ ಮೊದಲಾದವರಿಗೆ ನಶೆಯಿರುತ್ತದೆಯಲ್ಲವೆ. ಅವರೊಂದಿಗೆ ಮಿಲನ ಮಾಡಲು ದೊಡ್ಡ-ದೊಡ್ಡ ವ್ಯಕ್ತಿಗಳು ಬರುತ್ತಾರೆ. ಪದವಿಯನ್ನು ಅರಿತುಕೊಳ್ಳದೆ ಎಂದೂ ಯಾರೊಂದಿಗೂ ಮಿಲನ ಮಾಡುವುದಿಲ್ಲ. ತಂದೆಯೂ ಸಹ ಎಂದೂ ಮಿಲನ ಮಾಡುವುದಿಲ್ಲ. ತಂದೆಯ ಪದವಿಯನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಅದರಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಭಲೆ ಬ್ರಹ್ಮಾಕುಮಾರರೆಂದು ಕೆಲವರು ಕರೆಸಿಕೊಳ್ಳುತ್ತಾರೆ ಆದರೆ ಬುದ್ಧಿಯಲ್ಲಿ ನಾವು ಶಿವ ತಂದೆಯ ಸಂತಾನರಾಗಿದ್ದೇವೆ, ಅವರಿಂದ ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದು ಬುದ್ಧಿಯಲ್ಲಿರುವುದಿಲ್ಲ. ತಂದೆಯನ್ನಾಗಲಿ, ಆಸ್ತಿಯನ್ನಾಗಲಿ ನೆನಪು ಮಾಡುವುದಿಲ್ಲ. ನೆನಪಿದ್ದಾಗಲೇ ಆಂತರಿಕ ಖುಷಿಯೂ ಇರುವುದಲ್ಲವೆ.

ಹೇಗೆ ಕನ್ಯೆಗೆ ವಿವಾಹ ಮಾಡುತ್ತಾರೆಂದರೆ ಅವರಿಗೆ ಗುಪ್ತ ದಾನವನ್ನು ಕೊಡಲಾಗುತ್ತದೆ. ಪೆಟ್ಟಿಗೆಯಲ್ಲಿ ತುಂಬಿಸಿ ಬೀಗ ಹಾಕಿ ಬೀಗದ ಕೈಯನ್ನು ಕೈಯಲ್ಲಿ ಕೊಡುತ್ತಾರೆ. ತಂದೆಯೂ ಸಹ ನಿಮಗೆ ವಿಶ್ವದ ರಾಜ್ಯಭಾಗ್ಯದ ಬೀಗದಕೈಯನ್ನು ಕೈಯಲ್ಲಿ ಕೊಡುತ್ತಾರೆ. ನೀವು ಹೊಸ ಸತ್ಯಯುಗೀ ವಿಶ್ವದ ಉದ್ಘಾಟನೆ ಮಾಡುತ್ತೀರಿ. ನೀವು ಸ್ವರ್ಗದಲ್ಲಿಯೂ ಹೋಗುತ್ತೀರಿ. ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಾರೆ. ಭಕ್ತರು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗುವುದಿಲ್ಲ. ಅವರು ತಂದೆಯ ಜ್ಞಾನವನ್ನು ಪಡೆದು ಪವಿತ್ರರಾದಾಗ ಯೋಗ್ಯರಾಗುವರು ಆದ್ದರಿಂದಲೇ ನಾರದನ ಉದಾಹರಣೆಯಿದೆ. ಭಲೆ ಒಳ್ಳೊಳ್ಳೆಯ ಭಕ್ತರಿದ್ದಾರೆ ಆದರೆ ಆತ್ಮವಂತೂ ಪತಿತವಾಗಿದೆಯಲ್ಲವೆ. ಜನ್ಮ-ಜನ್ಮಾಂತರದಿಂದ ಅವರು ಪತಿತರಾಗುತ್ತಾ ಬಂದಿದ್ದಾರೆ. ಎಲ್ಲಿಯವರೆಗೆ ತಂದೆಯು ಸಿಗುವುದಿಲ್ಲವೋ ಅಲ್ಲಿಯವರೆಗೆ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ನಿಮ್ಮನ್ನು ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ನೀವೇ ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೀರಿ, ಮತ್ತ್ಯಾರೂ ಹೊಸ ರಾಜಧಾನಿಯನ್ನು ಸ್ಥಾಪನೆ ಮಾಡುವುದಿಲ್ಲ ಮತ್ತು ಯಾರಿಗೂ ತಿಳಿದಿಲ್ಲ. ತಂದೆಯೇ ಸಂಗಮಯುಗದಲ್ಲಿ ಬಂದು ಭವಿಷ್ಯ 21 ಜನ್ಮಗಳ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ಈ ತಂದೆಯನ್ನು ಯಾರೂ ಅರಿತುಕೊಂಡಿಲ್ಲ, ನೀವೀಗ ತಿಳಿದುಕೊಂಡಿದ್ದೀರಿ – 5000 ವರ್ಷಗಳ ಮೊದಲು ಅವಶ್ಯವಾಗಿ ತಂದೆಯು ಬಂದಿದ್ದರು, ಗೀತಾ ಜ್ಞಾನವನ್ನು ತಿಳಿಸಿದ್ದರು, ಇದರಿಂದ ಮನುಷ್ಯರಿಂದ ದೇವತೆಗಳಾಗಿದ್ದರು. ಗೀತೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ. ತಂದೆಯು ಹೇಳುತ್ತಾರೆ – ನಾನು ಸಂಗಮಯುಗದಲ್ಲಿಯೇ ಬರುತ್ತೇನೆ, ಪುನಃ ಬಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತೇನೆ, ಅವರೇ ದೇವಿ-ದೇವತೆಗಳಾಗುತ್ತಾರೆ. ನಂತರ ಅವರೇ 84 ಜನ್ಮಗಳನ್ನು ಸುತ್ತಿ ಅಂತ್ಯದಲ್ಲಿ ಬಂದಾಗ ನಾನು ಬಂದು ಅವರಿಗೆ ಪುನಃ ತಿಳಿಸುತ್ತೇನೆ. ಮಧ್ಯದಲ್ಲಿ ಎಂದೂ ನಾನು ಬರುವುದಿಲ್ಲ. ಕ್ರಿಸ್ತನು ಮಧ್ಯದಲ್ಲಿ ಬಂದು ಬಿಡುವುದಿಲ್ಲ. ಯಾರೆಲ್ಲರೂ ಧರ್ಮ ಸ್ಥಾಪನೆ ಮಾಡುವರೋ ಅದು ಈ ಪ್ರಪಂಚಕ್ಕಾಗಿ. ನಾನು ಸಂಗಮದಲ್ಲಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ಬರುತ್ತೇನೆ. ಕ್ರೈಸ್ಟ್ನ ಆತ್ಮವು ಬಂದು ಪ್ರವೇಶ ಮಾಡಿ ತಮ್ಮ ಧರ್ಮವನ್ನು ಸ್ಥಾಪನೆ ಮಾಡುತ್ತದೆ. ಇಲ್ಲಂತೂ ತಂದೆಯು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯನ್ನು ಯಾರು, ಯಾವಾಗ ಸ್ಥಾಪನೆ ಮಾಡಿದರು ಎಂಬುದು ಯಾರಿಗೂ ಗೊತ್ತಿಲ್ಲ. ಲಕ್ಷ್ಮೀ-ನಾರಾಯಣರ ಮಂದಿರ ಕಟ್ಟಿಸುವವರನ್ನು ಕೇಳಬೇಕು, ನೀವು ಸಭೆಯಲ್ಲಿಯೂ ಕೇಳಬಹುದು. ಈ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಬ್ರಹ್ಮಾರವರ ಮೂಲಕ ಕಲ್ಪ-ಕಲ್ಪವೂ ಸ್ಥಾಪನೆ ಮಾಡುತ್ತಾರೆ, ಮತ್ತ್ಯಾರೂ ಇದನ್ನು ಅರಿತುಕೊಳ್ಳಲು ಆಗುವುದಿಲ್ಲ. ಈ ಶಬ್ಧವೂ ಇದೆ ಆದರೆ ಯಥಾರ್ಥ ರೀತಿಯಲ್ಲಿ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಕೆಲಕೆಲವು ಮಕ್ಕಳ ಮೇಲೆ ಗ್ರಹಚಾರವು ಕುಳಿತುಕೊಳ್ಳುತ್ತದೆ. ದೇಹಾಭಿಮಾನವು ಮೊಟ್ಟ ಮೊದಲ ಗ್ರಹಚಾರವಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಅತ್ಮಾಭಿಮಾನಿಗಳಾಗಿ. ಈ ಲಕ್ಷ್ಮೀ-ನಾರಾಯಣರ ಚಿತ್ರ ಮತ್ತು ಏಣಿಯ ಚಿತ್ರವು ಅನ್ಯರಿಗೆ ತಿಳಿಸಲು ಬಹಳ ಚೆನ್ನಾಗಿದೆ, ಇದರಿಂದ ಅನೇಕರ ಕಲ್ಯಾಣವಾಗುತ್ತದೆ ಆದರೆ ಡ್ರಾಮಾದಲ್ಲಿ ಬಹುಷಃ ಇನ್ನೂ ಸಮಯವಿದೆ ಆದ್ದರಿಂದ ರಾಜಧಾನಿಯು ಸ್ಥಾಪನೆಯಾಗುವುದರಲ್ಲಿ ವಿಘ್ನಗಳು ಬೀಳುತ್ತವೆ. ತಂದೆಯು ಹೇಳುತ್ತಾರೆ – ಬಹಳ ವಿಘ್ನಗಳು ಬರುತ್ತವೆ, ಮಾಯೆಯು ಬಹಳ ಸಮರ್ಥನಾಗಿದೆ. ನನ್ನ ಮಕ್ಕಳನ್ನು ಕೂಡಲೇ ಮೂಗಿನಿಂದ, ಕಿವಿಯಿಂದ ಹಿಡಿದುಕೊಳ್ಳುತ್ತದೆ, ಇದಕ್ಕೆ ರಾಹುವಿನ ಗ್ರಹಚಾರವೆಂದು ಹೇಳಲಾಗುತ್ತದೆ. ಭಾರತದಲ್ಲಿ ವಿಶೇಷವಾಗಿ ಈ ಸಮಯದಲ್ಲಿ ವಿಕಾರಗಳೆಂಬ ರಾಹುವಿನ ಪೂರ್ಣ ಗ್ರಹಚಾರವು ಕುಳಿತಿದೆ, ನೀವು ಸೆಕೆಂಡಿನಲ್ಲಿ ಸಿದ್ಧ ಮಾಡುತ್ತೀರಿ – ಇದೇ ಭಾರತವು ಪಾವನ, ವಜ್ರ ಸಮಾನವಾಗಿತ್ತು, ಈಗ ವಿಕಾರಿ ಕವಡೆಯಂತಗಿ ಬಿಟ್ಟಿದೆ. ಪುನಃ ವಜ್ರ ಸಮಾನ ಆಗಬೇಕಾಗಿದೆ. ಕಥೆಯೆಲ್ಲವೂ ಭಾರತದ್ದಾಗಿದೆ. ತಂದೆಯು ಬಂದು ವಜ್ರ ಸಮಾನರನ್ನಾಗಿ ಮಾಡುತ್ತಾರೆ ಆದರೂ ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ. ದೇಹಾಭಿಮಾನದ ಬಹಳ ದೊಡ್ಡ ವಿಘ್ನ ಬೀಳುತ್ತದೆ. ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿಯೂ ಅನ್ಯರಿಗೆ ತಿಳಿಸಲು ಬಹಳ ಸಹಜವಾಗುತ್ತದೆ. ಮಕ್ಕಳಿಗೆ ಸರ್ವೀಸಿನ ಬಹಳ ಉಮ್ಮಂಗವಿರಬೇಕು. ಸೇವೆಯು ಅನೇಕ ಪ್ರಕಾರದ್ದಿದೆಯಲ್ಲವೆ. ಅನೇಕರಿಗೆ ಸುಖ ಕೊಡುತ್ತೀರೆಂದರೆ ಅದರ ಪ್ರತಿಫಲವೂ ಬಹಳ ಸಿಗುತ್ತದೆ. ಕೆಲವರು ಆಲ್ರೌಂಡ್ ಅವಿಶ್ರಾಂತ ಸೇವೆ ಮಾಡುತ್ತಾರೆ ಅಂದಾಗ ನಾವು ಆಲ್ರೌಂಡರ್ ಆಗಬೇಕೆಂಬ ಖುಷಿಯಿರಬೇಕು. ಬಾಬಾ, ನಾವು ಸರ್ವೀಸಿನಲ್ಲಿ ಹಾಜರಿದ್ದೇವೆ. ಒಳ್ಳೊಳ್ಳೆಯ ಮಕ್ಕಳು ಆತ್ಮಿಕ ಸೇವೆ ಮಾಡುವವರು ತಮ್ಮ ಕೈಯಿಂದ ಊಟವನ್ನು ತಯಾರಿಸುತ್ತಾರೆ. ನಿಮಗೆ ತಿಳಿದಿದೆ – ಮಕ್ಕಳೂ ಸಹ ಇಷ್ಟು ಬುದ್ಧಿವಂತರು ಆಗಿ ಬಿಡುತ್ತಾರೆ ಗದ್ದುಗೆಯನ್ನು ಪಡೆಯುತ್ತಾರೆ. ಇಲ್ಲಂತೂ ಮನೆಯನ್ನು ಸಂಭಾಲನೆ ಮಾಡುವ ಮಾತೆಯರಿದ್ದಾರೆ. ಈಗ ಮಾತೆಯರು, ಕುಮಾರಿಯರು ಈ ಸರ್ವೀಸಿನಲ್ಲಿ ಎದ್ದು ನಿಲ್ಲಬೇಕು. ಮಮ್ಮಾರವರಂತೂ ಸರ್ವೀಸ್ ಮಾಡಿ ತೋರಿಸಬೇಕು, ಪ್ರತ್ಯಕ್ಷತೆ ಮಾಡಬೇಕಾಗಿದೆ. ಕೇವಲ ಮಮ್ಮಾ-ಮಮ್ಮಾ ಎಂದು ಹೇಳುವುದರಿಂದೇನು ಲಾಭ! ಅವರಂತೆ ಆಗಿ ತೋರಿಸಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ದೇಹಾಭಿಮಾನದ ಗ್ರಹಚಾರವೇ ಯಜ್ಞದಲ್ಲಿ ವಿಘ್ನ ರೂಪವಾಗುತ್ತದೆ ಆದುದರಿಂದ ಎಷ್ಟು ಸಾಧ್ಯವೋ ದೇಹೀ-ಅಭಿಮಾನಿಗಳಾಗುವ ಪುರುಷಾರ್ಥ ಮಾಡಬೇಕಾಗಿದೆ.

2. ತಮ್ಮ ವಿದ್ಯೆ ಮತ್ತು ಸತ್ಯಯುಗೀ ಪದವಿಯ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ. ಶ್ರೀಮತದಂತೆ ನಡೆಯಬೇಕಾಗಿದೆ. ಯಾವುದೇ ತಪ್ಪು ಮಾಡಬಾರದು.

ವರದಾನ:-

ಅತ್ಯಂತ ಶ್ರೇಷ್ಠವಾದ ಸಿಂಹಾಸನವೆಂದರೆ ಬಾಪ್ದಾದಾರವರ ಹೃದಯ ಸಿಂಹಾಸನಾಧಾರಿ ಆಗುವುದಾಗಿದೆ. ಆದರೆ ಈ ಸಿಂಹಾಸನದಲ್ಲಿ ಕುಳಿತುಕೊಳ್ಳುವುದಕ್ಕಾಗಿ ಅಚಲ, ಅಡೋಲ, ಏಕರಸ ಸ್ಥಿತಿಯ ಸಿಂಹಾಸನವಿರಬೇಕು. ಒಂದುವೇಳೆ ಈ ಸ್ಥಿತಿಯ ಸಿಂಹಾಸನದಲ್ಲಿ ಸ್ಥಿತರಾಗದಿದ್ದರೆ ಬಾಪ್ದಾದಾರವರ ಹೃದಯವೆಂಬ ಸಿಂಹಾಸನದಲ್ಲಿಯೂ ಸ್ಥಿತರಾಗಲು ಸಾಧ್ಯವಿಲ್ಲ. ಇದಕ್ಕಾಗಿ ತಮ್ಮ ಭೃಕುಟಿಯ ಸಿಂಹಾಸನದಲ್ಲಿ ಅಕಾಲಮೂರ್ತಿಯಾಗಿ ಸ್ಥಿತರಾಗಿ ಬಿಡಿ. ಈ ಸಿಂಹಾಸನದಿಂದ ಮತ್ತೆ-ಮತ್ತೆ ಏರುಪೇರಾಗಬಾರದು, ಇದರಿಂದ ಬಾಪ್ದಾದಾರವರ ಹೃದಯ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top