20 October 2021 KANNADA Murli Today | Brahma Kumaris

Read and Listen today’s Gyan Murli in Kannada

October 19, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಯೋಗ ಬಲದಿಂದ ರಾವಣ ಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ, ಮನುಷ್ಯರಿಂದ ದೇವತೆಗಳಾಗಲು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ”

ಪ್ರಶ್ನೆ:: -

ಎಲ್ಲಾ ಮಕ್ಕಳು ತಂದೆಯ ಶ್ರೀಮತದಂತೆ ಒಂದೇ ರೀತಿ ನಡೆಯುವುದಿಲ್ಲ – ಏಕೆ?

ಉತ್ತರ:-

1. ಏಕೆಂದರೆ ತಂದೆಯು ಯಾರಾಗಿದ್ದಾರೆಯೋ ಹಾಗೆಯೇ ಅವರನ್ನು ಎಲ್ಲರೂ ಒಂದೇ ರೀತಿ ಅರಿತುಕೊಂಡಿಲ್ಲ. ಯಾವಾಗ ಪೂರ್ಣ ಅರಿತುಕೊಳ್ಳುವರೋ ಆಗ ಶ್ರೀಮತದಂತೆ ನಡೆಯುವರು. 2. ಮಾಯಾ ಶತ್ರುವು ಶ್ರೀಮತದಂತೆ ನಡೆಯುವುದನ್ನು ತಡೆಯುತ್ತದೆ. ಆದ್ದರಿಂದ ಮಕ್ಕಳು ಮಧ್ಯ-ಮಧ್ಯದಲ್ಲಿ ತಮ್ಮ ಮತವನ್ನು ನಡೆಸುತ್ತಾರೆ ಮತ್ತೆ ಹೇಳುತ್ತಾರೆ – ಬಾಬಾ, ಮಾಯೆಯ ಬಿರುಗಾಳಿಗಳು ಬರುತ್ತವೆ. ತಮ್ಮ ನೆನಪು ಮರೆತು ಹೋಗುತ್ತದೆ ಎಂದು. ತಂದೆಯು ಹೇಳುತ್ತಾರೆ – ಮಕ್ಕಳೇ, ಮಾಯಾ ರಾವಣನಿಗೆ ಹೆದರಬೇಡಿ. ತೀವ್ರವಾಗಿ ಪುರುಷಾರ್ಥ ಮಾಡಿರಿ ಆಗ ಅದು ಸುಸ್ತಾಗಿ ಬಿಡುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅವರು ನಮ್ಮನ್ನು ಎಂದೂ ಅಗಲುವುದಿಲ್ಲ…….

ಓಂ ಶಾಂತಿ. ನೀವು ಒಂಟಿ ಆತ್ಮನಾಗಿದ್ದೀರಿ. ಪ್ರತಿಯೊಬ್ಬರೂ ಓಂ ಶಾಂತಿ ಎಂದು ಹೇಳುತ್ತೀರಿ, ಇವರು (ಬಾಪ್ದಾದಾ) ಇಬ್ಬರಿದ್ದಾರೆ, ಇವರು ಎರಡು ಬಾರಿ ಓಂ ಶಾಂತಿ, ಓಂ ಶಾಂತಿ ಎಂದು ಹೇಳಬೇಕಾಗುತ್ತದೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ನೀವಿಲ್ಲಿ ಯುದ್ಧದ ಮೈದಾನದಲ್ಲಿ ಕುಳಿತಿದ್ದೀರಿ, ಹೇಗೆ ಅವರು ಪರಸ್ಪರ ಹೊಡೆದಾಡುತ್ತಾರೆಯೋ ಆ ರೀತಿ ಅಲ್ಲ. ಆ ರೀತಿಯಂತೂ ಮನೆ ಮನೆಯಲ್ಲಿಯೂ ಜಗಳ-ಕಲಹವಾಡುತ್ತಾ ಇರುತ್ತಾರೆ. ಅನೇಕರ ಮಾತನ್ನು ಹೇಳಲಾಗುತ್ತದೆ. ನಂಬರ್ವನ್ ದೇಹಾಭಿಮಾನವಾಗಿದೆ, ಎರಡನೆಯದು ಕಾಮ ವಿಕಾರವಾಗಿದೆ. ನೀವೀಗ ನೆನಪಿನ ಬಲದಿಂದ ಐದು ವಿಕಾರಗಳೆಂಬ ರಾವಣನ ಮೇಲೆ ಜಯ ಗಳಿಸುತ್ತೀರಿ. ನೆನಪಿನ ಬಲವಿದ್ದಾಗ ನೀವು ಬೀಳುವುದಿಲ್ಲ. ನಿಮ್ಮದು ಒಬ್ಬ ರಾವಣನೊಂದಿಗೆ ಯುದ್ಧವಿದೆ. ಅಲ್ಲಂತೂ ಅನೇಕ ಪ್ರಕಾರದ ಮಾತುಗಳಿರುತ್ತವೆ, ಇಲ್ಲಿ ಒಂದೇ ಮಾತಾಗಿದೆ. ನಿಮ್ಮ ಯುದ್ಧವು ರಾವಣನ ಜೊತೆಯಿದೆ. ನಿಮಗೆ ಕಲಿಸಿ ಕೊಡುವವರು ಯಾರು? ಪತಿತ-ಪಾವನ ಭಗವಂತ. ಅವರು ಪತಿತರಿಂದ ಪಾವನರನ್ನಾಗಿ ಮಾಡುವವರಾಗಿದ್ದಾರೆ. ಪಾವನರು ಅರ್ಥಾತ್ ದೇವತೆಗಳು. ನೀವು ವಿಶ್ವದ ಮಾಲೀಕರಾಗುತ್ತೀರಿ. ರಾವಣನ ಮುಖಾಂತರವೇ ಪತಿತರಾಗಿದ್ದೇವೆ ಎಂಬುದನ್ನು ಯಾವ ಮನುಷ್ಯರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸಿದ್ದಾರೆ – ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ರಾವಣ ರಾಜ್ಯವಿದೆ, ಹಾಗೆಯೇ ಸತ್ಯ-ತ್ರೇತಾಯುಗದಲ್ಲಿ ರಾಮ ರಾಜ್ಯವಿರುತ್ತದೆ ಆದರೆ ಅಲ್ಲಿ ಇಷ್ಟೊಂದು ಜನಸಂಖ್ಯೆಯಿರುವುದಿಲ್ಲ. ನೀವು ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೀರಿ. ಇಲ್ಲಿ ಕುಳಿತುಕೊಂಡಾಗಲೇ ತಂದೆಯನ್ನು ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಬೇಕು ಎಂದಲ್ಲ. ಇದು ಪ್ರತೀ ಸಮಯ ಬುದ್ಧಿಯಲ್ಲಿರಲಿ. ನಾವು ಸ್ವರ್ಗದಲ್ಲಿ ಅರ್ಧಕಲ್ಪ ರಾಜ್ಯಭಾರ ಮಾಡಿದೆವು ನಂತರ ರಾವಣನ ಶ್ರಾಪ ಸಿಗುವುದರಿಂದ ಕೆಳಗಿಳಿಯುತ್ತೇವೆ. ಕನಿಷ್ಟರಾಗುವುದರಲ್ಲಿ ಸಮಯವಂತೂ ಹಿಡಿಸುತ್ತದೆ, 84 ಪೀಳಿಗೆಗಳು ಇಳಿಯಬೇಕಾಗುತ್ತದೆ. ಏರುವ ಕಲೆಯಲ್ಲಿ ಸಮಯವೇ ಹಿಡಿಸುವುದಿಲ್ಲ. ಒಂದುವೇಳೆ ಒಂದು ಪೀಳಿಗೆ ಹಿಡಿಸಿದರೂ ಸಹ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಹೇಗೆ ಹೇಳುವುದು? ನಿಮಗೆ 2500 ವರ್ಷಗಳು ಇಳಿಯುವುದರಲ್ಲಿ ಹಿಡಿಸುತ್ತದೆ ಮತ್ತು ನೀವು ಕೆಲವೇ ವರ್ಷಗಳಲ್ಲಿ ಏರುವ ಕಲೆಯಲ್ಲಿ ಬಂದು ಬಿಡುತ್ತೀರಿ. ನಿಮ್ಮದು ಯೋಗ ಬಲವಾಗಿದೆ, ಅವರದು ಬಾಹುಬಲವಾಗಿದೆ. ದ್ವಾಪರದಿಂದ ಹಿಡಿದು ಕೆಳಗಿಳಿಯುತ್ತಾರೆ ನಂತರ ಬಾಹುಬಲವು ಆರಂಭವಾಗುತ್ತದೆ. ಸತ್ಯಯುಗದಲ್ಲಿ ಹೊಡೆಯುವ ಮಾತೇ ಇರುವುದಿಲ್ಲ. ಕೃಷ್ಣನನ್ನು ಹಗ್ಗದಿಂದ ಕಟ್ಟಿದರು ಎಂದು ತೋರಿಸಿದ್ದಾರೆ ಆದರೆ ಈ ಮಾತು ಇರುವುದಿಲ್ಲ. ಅಲ್ಲಿ ಮಕ್ಕಳೆಂದೂ ಚಂಚಲತೆ ಮಾಡುವುದಿಲ್ಲ. ಕೃಷ್ಣನಂತೂ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣನಾಗಿರುತ್ತಾನೆ. ಕೃಷ್ಣನನ್ನು ಎಷ್ಟೊಂದು ನೆನಪು ಮಾಡುತ್ತಾ ಬಂದಿದ್ದಾರೆ. ಒಳ್ಳೆಯ ವಸ್ತುವಿನ ನೆನಪು ಬರುತ್ತದೆಯಲ್ಲವೆ. ಹೇಗೆ ಪ್ರಪಂಚದಲ್ಲಿ 7 ಅದ್ಭುತಗಳಿವೆ, ಆದ್ದರಿಂದ ಮನುಷ್ಯರು ಅವನ್ನು ನೆನಪು ಮಾಡಿಕೊಳ್ಳುತ್ತಾರೆ. ನೋಡಲು ಹೋಗುತ್ತಾರೆ. ಅಬುಪರ್ವತದಲ್ಲಿ ಒಳ್ಳೆಯದಕ್ಕಿಂತ ಒಳ್ಳೆಯ ವಸ್ತು ಏನಿದೆ, ಯಾವುದನ್ನು ಮನುಷ್ಯರು ನೋಡಲು ಬರುತ್ತಾರೆ? ಧಾರ್ಮಿಕ ವ್ಯಕ್ತಿಗಳಂತೂ ಬರುವುದೇ ಮಂದಿರವನ್ನು ನೋಡುವುದಕ್ಕಾಗಿ, ಭಕ್ತಿಮಾರ್ಗದಲ್ಲಿ ಅನೇಕ ಮಂದಿರಗಳಿರುತ್ತವೆ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಮಂದಿರವಿರುವುದಿಲ್ಲ. ಮಂದಿರಗಳು ಕೊನೆಯಲ್ಲಿ ನೆನಪಾರ್ಥಕ್ಕಾಗಿ ಕಟ್ಟಿಸಲ್ಪಡುತ್ತದೆ. ಸತ್ಯಯುಗದಲ್ಲಿ ಯಾವುದೇ ಹಬ್ಬಗಳು ಇರುವುದಿಲ್ಲ. ದೀಪಾವಳಿಯೂ ಸಹ ಇಲ್ಲಿನ ತರಹ ಅಲ್ಲಿ ಆಗುವುದಿಲ್ಲ. ಹಾ! ಯಾವಾಗ ಲಕ್ಷ್ಮೀ-ನಾರಾಯಣರು ಸಿಂಹಾಸನಾಧೀಶರಾಗುವರೋ ಆಗ ಪಟ್ಟಾಭಿಷೇಕದ ದಿನವನ್ನು ಆಚರಿಸುತ್ತಾರೆ. ಅಲ್ಲಂತೂ ಎಲ್ಲರ ಜ್ಯೋತಿಯು ಸದಾ ಬೆಳಗಿರುತ್ತದೆ.

ನಿಮ್ಮ ಬಳಿ ಒಂದು ಗೀತೆಯೂ ಇದೆ – ನವಯುಗ ಬಂದಿತು…… ಇದು ಕೇವಲ ನಿಮಗೇ ತಿಳಿದಿದೆ, ನಾವು ನವಯುಗ ಅರ್ಥಾತ್ ಸತ್ಯಯುಗಕ್ಕಾಗಿ ದೇವಿ-ದೇವತೆಗಳಾಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ವಿದ್ಯೆಯನ್ನು ಸಂಪೂರ್ಣ ರೀತಿಯಿಂದ ಓದಬೇಕಾಗಿದೆ. ಜೀವಿಸಿರುವವರೆಗೂ ಜ್ಞಾನಾಮೃತವನ್ನು ಕುಡಿಯಬೇಕಾಗಿದೆ. ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಳ್ಳಬೇಕಾಗಿದೆ. ಇದರಲ್ಲಿ ಯಾವುದೇ ಜ್ಞಾನವನ್ನು ಕಲಿಸಿಕೊಡುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಬೇಕಾಗಿದೆ. ನೀವಿಲ್ಲಿ ಕುಳಿತಿದ್ದೀರಿ, ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ನಿಮ್ಮ ಬುದ್ಧಿಯಲ್ಲಿದೆ – ನಮ್ಮ 84 ಜನ್ಮಗಳ ಚಕ್ರವು ಪೂರ್ಣವಾಯಿತು, ಈಗ ಹಳೆಯ ಶರೀರ ಹಳೆಯ ಸಂಬಂಧವನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕಾಗಿದೆ. ವಿಷ್ಣು ಪುರಿಯ ಮಾಲೀಕರಾಗುವುದಕ್ಕಾಗಿ ತಂದೆಯು ನಮ್ಮಿಂದ ಪುರುಷಾರ್ಥ ಮಾಡಿಸುತ್ತಿದ್ದಾರೆ. ಪ್ರಪಂಚದಲ್ಲಿ ಮತ್ತೆಲ್ಲವೂ ಆಸುರೀ ಸಂಪ್ರದಾಯವಾಗಿದೆ. ಭಗವಾನುವಾಚ – ಇದು ಅದೇ ಗೀತಾ ಯುಗವು ನಡೆಯುತ್ತಿದೆ. ಇದು ಕಲ್ಪ-ಕಲ್ಪದ ಸಂಗಮಯುಗವಾಗಿದೆ. ತಂದೆಯು ತಿಳಿಸುತ್ತಾರೆ – ನಾನು ಈ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ನಾನು ಅದೇ ಗೀತೆಯ ಭಗವಂತನಾಗಿದ್ದೇನೆ. ಹೊಸ ಪ್ರಪಂಚ ಸ್ವರ್ಗವನ್ನು ರಚಿಸಲು ನಾನು ಇಲ್ಲಿ ಬರುತ್ತೇನೆ. ನಾನು ದ್ವಾಪರದಲ್ಲಿ ಹೇಗೆ ಬರಲಿ! ಇದೊಂದು ದೊಡ್ಡ ತಪ್ಪಾಗಿದೆ. ಕೆಲವು ಚಿಕ್ಕದು, ಕೆಲವು ದೊಡ್ಡ ತಪ್ಪುಗಳಾಗುತ್ತವೆ, ಇದು ಅತಿ ದೊಡ್ಡ ತಪ್ಪಾಗಿದೆ. ಶಿವ ಭಗವಂತ ಯಾರು ಪುನರ್ಜನ್ಮ ರಹಿತನಾಗಿದ್ದಾರೆಯೋ ಅವರ ಬದಲು 84 ಜನ್ಮಗಳನ್ನು ತೆಗೆದುಕೊಳ್ಳುವವರ ಹೆಸರನ್ನು ಬರೆದು ಬಿಟ್ಟಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ನನ್ನೊಬ್ಬನನ್ನೇ ನೆನಪು ಮಾಡಿ ಎಂಬ ಮಾತನ್ನು ಶ್ರೀಕೃಷ್ಣನು ಹೇಳಲು ಸಾಧ್ಯವಿಲ್ಲ. ಕೃಷ್ಣನನ್ನು ಎಲ್ಲಾ ಧರ್ಮದವರು ಒಪ್ಪುತ್ತಾರೆಯೇ! ಶಿವನು ನಿರಾಕಾರನಾಗಿದ್ದಾರೆ, ನೀವು ಶಿವಶಕ್ತಿ ಸೇನೆಯಾಗಿದ್ದೀರಿ. ಶಿವ ತಂದೆಯ ಜೊತೆ ಯೋಗವನ್ನಿಟ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತೀರಿ, ಇದರಲ್ಲಿ ಸ್ತ್ರೀ-ಪುರುಷರ ಮಾತಿಲ್ಲ. ನೀವಾತ್ಮರೆಲ್ಲರೂ ಸಹೋದರರಾಗಿದ್ದೀರಿ, ಎಲ್ಲರೂ ತಂದೆಯಿಂದ ಶಕ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ತಂದೆಯೇ ಆಸ್ತಿಯನ್ನು ಕೊಡುವರಲ್ಲವೆ. ಅವರೇ ಸರ್ವಶಕ್ತಿವಂತನಾಗಿದ್ದಾರೆ. ಈ ಲಕ್ಷ್ಮೀ-ನಾರಾಯಣರಿಗೂ ಸಹ ಸರ್ವಶಕ್ತಿವಂತನೆಂದು ಹೇಳುತ್ತಾರೆ. ಏಕೆಂದರೆ ಇಡೀ ವಿಶ್ವದ ಮಾಲೀಕನಾಗಿದ್ದಾರೆ ಅವರು ಈ ರಾಜ್ಯವನ್ನು ಹೇಗೆ ಪಡೆದರು? ಈಗ ಭಾರತವಷ್ಟೇ ಅಲ್ಲ. ಇಡೀ ಪ್ರಪಂಚದಲ್ಲಿ ರಾವಣ ರಾಜ್ಯವಿದೆ. ಯಾರಾದರೂ ರಾಜರಿದ್ದರೆ ಅವರಿಗಿಂತ ಹಿರಿಯರು ಈ ರಾಜ್ಯಭಾರ ಮಾಡಿದ್ದಾರೆ, ಅದು ನಡೆದು ಬರುತ್ತಿದೆ ಎಂದು ತಿಳಿದಿರುತ್ತದೆ. ಇದಂತೂ ಸತ್ಯಯುಗದ ಆದಿಯಿಂದಲೂ ನಡೆದಿದೆ ಅಂದಮೇಲೆ ಅವಶ್ಯವಾಗಿ ಅವರ ಹಿಂದಿನ ಜನ್ಮದಲ್ಲಿ ಇಂತಹ ಪುರುಷಾರ್ಥ ಮಾಡಿರಬೇಕು, ದಾನ, ಪುಣ್ಯ ಮಾಡುವುದರಿಂದ ಪತಿತ ರಾಜ್ಯಭಾಗ್ಯವು ಸಿಗುತ್ತದೆ, ಈ ಸಂಗಮಯುಗದಲ್ಲಿ ಜ್ಞಾನ ಮತ್ತು ಯೋಗಬಲದಿಂದ ನೀವು 21 ಜನ್ಮಗಳಿಗಾಗಿ ರಾಜ್ಯಭಾಗ್ಯ ಪಡೆಯುತ್ತೀರಿ. ನಿಮಗೆ ತಿಳಿದಿದೆ, ಈ ಹಳೆಯ ಪ್ರಪಂಚವೆಲ್ಲವೂ ವಿನಾಶವಾಗಲಿದೆ, ಈ ದೇಹವೂ ಉಳಿಯುವುದಿಲ್ಲ ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಬಾಬಾ, ಬಾಬಾ ಎನ್ನುವುದನ್ನು ಕಲಿಯಿರಿ. ಹೇಗೆ ಲೌಕಿಕ ಮಕ್ಕಳಿಗೆ ಕಲಿಸಲಾಗುತ್ತದೆ. ಅವರು ಅದೇ ತಂದೆಯನ್ನು ನೆನಪು ಮಾಡುತ್ತಾರೆ, ಈಗ ಆತ್ಮಿಕ ತಂದೆಯು ನೀವು ಮಕ್ಕಳಿಗೆ ಹೇಳುತ್ತಾರೆ – ಹೇ ಮಕ್ಕಳೇ ಎಂದು. ಇದು ಹೊಸ ಮಾತಾಗಿದೆ. ತಂದೆಯು ಹೇಳುತ್ತಾರೆ- ಆತ್ಮಿಕ ತಂದೆಯಾದ ನನ್ನನ್ನು ನೆನಪು ಮಾಡಿರಿ ಏಕೆಂದರೆ ಮರಳಿ ಮನೆಗೆ ಹೋಗಬೇಕಾಗಿದೆ. ಆತ್ಮ ಅವಿನಾಶಿ, ಶರೀರವು ವಿನಾಶಿಯಾಗಿದೆ ಅಂದಾಗ ಶಕ್ತಿಶಾಲಿ ಯಾರಾದರು? ಶರೀರವು ಆತ್ಮದ ಆಧಾರದ ಮೇಲೆ ನಡೆಯುತ್ತದೆ. ಆತ್ಮವು ಹೊರಟು ಹೋದರೆ ಶರೀರವನ್ನು ಬೆಂಕಿಯಲ್ಲಿ ಸುಡಬೇಕಾಗುತ್ತದೆ. ಆತ್ಮವು ಅವಿನಾಶಿಯಾಗಿದೆ, ಅದು ಬಿಂದುವೇ ಆಗಿದೆ. ಆ ಆತ್ಮವನ್ನು ಯಾರೂ ಅರಿತುಕೊಂಡಿಲ್ಲ. ಭಲೆ ಯಾರಿಗಾದರೂ ಸಾಕ್ಷಾತ್ಕಾರವಾಗಬಹುದು ಆದರೂ ಏನು! ಅವರಿಗೆ ಆತ್ಮವು ಬಿಂದುವಾಗಿದೆ, ಅದರಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ ಎಂಬುದು ತಿಳಿದಿರುವುದೇ ಇಲ್ಲ. ಈ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ. ರಾಜಯೋಗವನ್ನು ಕಲಿಸುವವರು ಆ ತಂದೆಯೇ ಆಗಿದ್ದಾರೆ ಬಾಕಿ ವಕೀಲರು, ವೈದ್ಯರು, ಇಂಜಿನಿಯರ್ ಮೊದಲಾದವರೆಲ್ಲರೂ ಹೊರಟು ಹೋಗುತ್ತಾರೆ. ಇಲ್ಲಿ ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಅವರೂ ಮನುಷ್ಯರೇ, ಆದರೆ ಅವರನ್ನು ದೇವತೆಗಳೆಂದು ಹೇಳಲಾಗುತ್ತದೆ. ದೇವತೆಗಳು ಅರ್ಥಾತ್ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುವವರು. ನೀವು ಪುರುಷಾರ್ಥ ಮಾಡಿ ಇಂತಹ ದೈವೀ ಗುಣವಂತರು ಆಗಬೇಕಾಗಿದೆ, ಇದು ನಿಮ್ಮ ಗುರಿ-ಧ್ಯೇಯವಾಗಿದೆ. ಈ ದೇವತೆಗಳಲ್ಲಿ ಯಾವ ಗುಣಗಳಿವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಾವೂ ಅವರಂತೆಯೇ ಆಗಬೇಕಾಗಿದೆ, ಅನೇಕರು ಪ್ರಜಾ ಪದವಿಯನ್ನು ಪಡೆಯುತ್ತಾರೆ ಆದರೆ ರಾಜ-ರಾಣಿಯಾಗುವುದರಲ್ಲಿ ಪರಿಶ್ರಮವಾಗುತ್ತದೆ. ಯಾರು ಹೆಚ್ಚು ಪರಿಶ್ರಮ ಪಡುವರೋ ಅವರು ರಾಜ-ರಾಣಿಯಾಗುತ್ತಾರೆ. ಯಾರು ಅನೇಕರಿಗೆ ಜ್ಞಾನವನ್ನು ಕೊಡುವರೋ ಅವರು ಪ್ರತಿಯೊಬ್ಬರೂ ತಮ್ಮ ಹೃದಯದಿಂದ ತಿಳಿದುಕೊಳ್ಳಬಹುದಾಗಿದೆ. ಆತ್ಮವು ಹೇಳುತ್ತದೆ – ನಾನು ಬೇಹದ್ದಿನ ತಂದೆಗೆ ಅವಶ್ಯವಾಗಿ ಮಗುವಾಗುತ್ತೇನೆ, ಅವರಿಗೆ ಬಲಿಹಾರಿಯಾಗುತ್ತೇನೆ, ನನ್ನ ಬಳಿ ಏನೆಲ್ಲವೂ ಇದೆಯೋ ಎಲ್ಲವನ್ನೂ ಅರ್ಪಣೆ ಮಾಡುತ್ತೇನೆ. ಈಶ್ವರನಿಗೆ ಕೊಡುತ್ತಾರಲ್ಲವೆ. ನೀವು ಒಲಿದು ಬಂದರೆ ನಾವು ನಿಮಗೆ ಬಲಿಹಾರಿಯಾಗುತ್ತೇವೆ. ಅದರ ಬದಲು ತಮ್ಮಿಂದ ಹೊಸ ತನು-ಮನ-ಧನವನ್ನು ಪಡೆಯುತ್ತೇವೆ. ಹೊಸ ಮನಸ್ಸನ್ನು ಹೇಗೆ ಪಡೆಯುತ್ತೀರಿ? – ತಂದೆಯು ಆತ್ಮವನ್ನು ಹೊಸದ (ಪವಿತ್ರ) ನ್ನಾಗಿ ಮಾಡುತ್ತಾರೆ ನಂತರ ಹೊಸ ಶರೀರವನ್ನೇ ಪಡೆಯುತ್ತೀರಿ. ರಾಜ್ಯಭಾಗ್ಯವನ್ನೂ ಪಡೆಯುತ್ತೀರಿ. ನೀವೀಗ ಪಡೆಯುತ್ತಿದ್ದೀರಲ್ಲವೆ. ಹೇ ತಂದೆಯೇ ಈ ಶರೀರ ಸಹಿತವಾಗಿ ನಾನು ನಿಮ್ಮವನಾಗಿದ್ದೇನೆ, ನಾನು ನಿಮ್ಮ ಮಡಿಲಿಗೆ ಬರುತ್ತೇನೆ ಎಂದು ಆತ್ಮವು ಹೇಳುತ್ತದೆ. ರಾವಣ ರಾಜ್ಯದಲ್ಲಿ ಎಲ್ಲರೂ ಬಹಳ ದುಃಖಿಯಾಗಿದ್ದಾರೆ ಆದ್ದರಿಂದ ಬಾಬಾ, ಈಗ ಇದರಿಂದ ಬಿಡಿಸಿ ನಮ್ಮ ರಾಜಧಾನಿಯಲ್ಲಿ ಕರೆದುಕೊಂಡು ಹೋಗಿರಿ ಎಂದು ಹೇಳುತ್ತಾರೆ. ಶಿವ ತಂದೆಯು ಸಿಕ್ಕಿ ಬಿಟ್ಟರು ಅಂದಮೇಲೆ ಇನ್ನೇನು ಬೇಕು? ಶಿವ ತಂದೆಯ ಶ್ರೀಮತದಿಂದ ಸ್ವರ್ಗವಾಗುತ್ತದೆ, ಆಸುರೀ ರಾವಣನ ಮತದಿಂದ ನರಕವಾಗುತ್ತದೆ, ಈಗ ಪುನಃ ಶ್ರೀಮತದಿಂದ ಸ್ವರ್ಗವಾಗಲಿದೆ. ಅವಶ್ಯವಾಗಿ ಕಲ್ಪದ ಹಿಂದೆ ಯಾರು ಬಂದಿದ್ದರೋ ಅವರೇ ಬರುತ್ತಾರೆ, ಶ್ರೀಮತದಿಂದ ಶ್ರೇಷ್ಠರಾಗುತ್ತಾರೆ. ರಾವಣನ ಮತದಂತೆ ನಡೆಯುವುದರಿಂದ ಕೆಳಗೆ ಬೀಳುತ್ತಾರೆ, ಈಗ ನಿಮ್ಮದು ಏರುವ ಕಲೆಯಾಗುತ್ತದೆ. ಉಳಿದೆಲ್ಲರದೂ ಇಳಿಯುವ ಕಲೆಯಾಗಿದೆ. ಎಷ್ಟು ವಿಭಿನ್ನ ಧರ್ಮಗಳಿವೆ, ಸತ್ಯಯುಗದಲ್ಲಿ ಒಂದೇ ದೇವಿ-ದೇವತಾ ಧರ್ಮವಿತ್ತು, ಈಗ ಅದು ಪ್ರಾಯಲೋಪವಾಗಿ ಬಿಟ್ಟಿದೆ (ಆಲದ ಮರದ ಉದಾಹರಣೆಯಂತೆ).

ನೀವು ತಿಳಿದುಕೊಂಡಿದ್ದೀರಿ – ದೇವಿ-ದೇವತಾ ಧರ್ಮದ ನಿದರ್ಶನಗಳಿವೆ. ಅವಶ್ಯವಾಗಿ ದೇವಿ-ದೇವತೆಗಳ ರಾಜ್ಯವಿತ್ತು, ಇದು 5000 ವರ್ಷಗಳ ಮಾತಾಗಿದೆ. ನೀವು ಸಿದ್ಧ ಮಾಡಿ ತಿಳಿಸುತ್ತೀರಿ – ಇದು 5000 ವರ್ಷಗಳ ಚಕ್ರವಾಗಿದೆ, ಇದರಲ್ಲಿ 4 ಯುಗಗಳಿವೆ. ಪ್ರತಿಯೊಂದು ಯುಗದ ಆಯಸ್ಸು 1250 ವರ್ಷಗಳಾಗಿದೆ. ಮನುಷ್ಯರಂತೂ ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ, ಬಹಳ ಅಂತರವಿರುವ ಕಾರಣ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಹೇಗೆ ಅನ್ಯ ಸಂಸ್ಥೆಗಳಿವೆಯೋ ಹಾಗೆಯೇ ಇದೂ ಸಹ ಬ್ರಹ್ಮಾಕುಮಾರಿಯರ ಸಂಸ್ಥೆಯಾಗಿದೆ, ಇವರು ಗೀತೆಯನ್ನು ಹೇಳುತ್ತಾರೆ ಎಂದು ತಿಳಿಯುತ್ತಾರೆ. ಗೀತೆಯನ್ನು ಕೃಷ್ಣ ಭಗವಂತನು ತಿಳಿಸಿದನು ಆದರೆ ಇವರು ದಾದಾ ವಜ್ರ ವ್ಯಾಪಾರಿಯನ್ನು ತೋರಿಸಿದ್ದಾರೆಂದು ಮನುಷ್ಯರು ತಬ್ಬಿಬ್ಬಾಗುತ್ತಾರಲ್ಲವೆ. ತಂದೆಯು ಹೇಳುತ್ತಾರೆ – ನಾನು ಹೇಗಿದ್ದೇನೆ, ಯಾರಾಗಿದ್ದೇನೆ ಹಾಗೆಯೇ ನನ್ನನ್ನು ಇಲ್ಲಿಯವರೆಗೂ ನನ್ನನ್ನು ಯಾರೂ ಅರಿತುಕೊಂಡಿಲ್ಲ. ಕೊನೆಯಲ್ಲಿ ನೀವು ಪೂರ್ಣ ರೀತಿಯಿಂದ ಅರಿತುಕೊಳ್ಳುತ್ತೀರಿ. ಇಲ್ಲಿಯವರೆಗೂ ನಂಬರ್ವಾರ್ ಅರಿತುಕೊಂಡಿದ್ದೀರಿ ಆದ್ದರಿಂದ ಶ್ರೀಮತದಂತೆ ನಡೆಯುವುದು ಬಹಳ ಕಷ್ಟವೆಂದು ತಿಳಿಯುತ್ತೀರಿ. ಒಳ್ಳೊಳ್ಳೆಯ ಮಕ್ಕಳೂ ಸಹ ಶ್ರೀಮತದಂತೆ ನಡೆಯುವುದಿಲ್ಲ. ನಡೆಯಲು ರಾವಣನು ಬಿಡುವುದಿಲ್ಲ, ತಮ್ಮ ಮತವನ್ನು ನಡೆಸುತ್ತಾರೆ. ಕೆಲವರೇ ಶ್ರೀಮತದಂತೆ ಪೂರ್ಣ ರೀತಿಯಿಂದ ನಡೆಯುವವರಿದ್ದಾರೆ. ಮುಂದೆ ಹೋದಂತೆ ಸಂಪೂರ್ಣ ಅರಿತುಕೊಂಡಾಗ ಶ್ರೀಮತದಂತೆ ನಡೆಯುತ್ತಾರೆ. ನಾನು ಹೇಗಿದ್ದೇನೋ, ಯಾರಾಗಿದ್ದೇನೋ ಅದು ಮುಂದೆ ಹೋದಂತೆ ಅರ್ಥವಾಗುವುದು. ಈಗಿನ್ನೂ ತಿಳಿದುಕೊಳ್ಳುತ್ತಾ ಹೋಗುತ್ತೀರಿ. ಪೂರ್ಣ ತಿಳಿದು ಬಿಟ್ಟರೆ ಇನ್ನೇನು ಬೇಕು! ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕಾಗಿದೆ ಆದರೆ ಮಾಯಾಶತ್ರು ಶ್ರೀಮತದಂತೆ ನಡೆಯುವುದನ್ನು ತಡೆಯುತ್ತದೆ. ಬಾಬಾ, ಮಾಯೆಯ ಬಿರುಗಾಳಿಯು ಬಹಳ ಬರುತ್ತದೆ, ಮಾಯೆಯು ತಮ್ಮ ನೆನಪನ್ನು ಮರೆಸಿ ಬಿಡುತ್ತದೆ ಎಂದು ಹೇಳುತ್ತಾರೆ. ಹಾ! ನೀವು ಪುರುಷಾರ್ಥವನ್ನು ತೀವ್ರವಾಗಿ ಮಾಡುತ್ತಾ-ಮಾಡುತ್ತಾ ಇದ್ದರೆ ಕೊನೆಗೆ ಮಾಯೆಯು ಸುಸ್ತಾಗಿ ಬಿಡುವುದು. 8ರ ಮಾಲೆಯಿದೆ, ಮುಖ್ಯವಾಗಿ 8 ರತ್ನಗಳಿದೆ. 8 ರತ್ನಗಳು ಜೋಡಿಯಾಗಿದೆ. 9ನೇ ರತ್ನವಾಗಿ ಮಧ್ಯದಲ್ಲಿ ಶಿವ ತಂದೆಯನ್ನು ಇಡುತ್ತಾರೆ. ಕೆಲವರು ಕೆಂಪು ಬಣ್ಣದ, ಇನ್ನೂ ಕೆಲವರು ಬಿಳಿಯ ಬಣ್ಣದ ರತ್ನವನ್ನು ಇಡುತ್ತಾರೆ. ಶಿವ ತಂದೆಯಂತೂ ಬಿಂದುವಾಗಿದ್ದಾರೆ, ಬಿಂದುವು ಕೆಂಪು ಬಣ್ಣದಲ್ಲಿ ಇರುವುದಿಲ್ಲ, ಬಿಳಿಯ ಬಣ್ಣದಲ್ಲಿರುತ್ತದೆ. ಅವರು ಬಹಳ ಸೂಕ್ಷ್ಮವಾಗಿದ್ದಾರೆ. ದಿವ್ಯ ದೃಷ್ಟಿಯ ವಿನಃ ಅವರನ್ನು ಯಾರೂ ನೋಡಲು ಸಾಧ್ಯವಿಲ್ಲ. ವೈದ್ಯರು ಮೊದಲಾದವರು ಬಿಂದುವನ್ನು ನೋಡಲು ಎಷ್ಟೊಂದು ಪ್ರಯತ್ನ ಪಡುತ್ತಾರೆ. ಆದರೆ ನೋಡಲು ಸಾಧ್ಯವಿಲ್ಲ ಏಕೆಂದರೆ ಅವ್ಯಕ ವಸ್ತುವಲ್ಲವೆ! ಆದ್ದರಿಂದ ಕೇಳಲಾಗುತ್ತದೆ – ನಾವಾತ್ಮರಾಗಿದ್ದೇವೆ ಎಂದು ನೀವು ಹೇಳುತ್ತೀರಿ ಅಂದಮೇಲೆ ಆತ್ಮವನ್ನು ಎಂದಾದರೂ ನೋಡಿದ್ದೀರಾ? ತಮ್ಮನ್ನೇ ನೋಡಲು ಸಾಧ್ಯವಿಲ್ಲ ಅಂದಮೇಲೆ ತಂದೆಯನ್ನು ನೋಡಲು ಹೇಗೆ ಸಾಧ್ಯ! ಆತ್ಮದಲ್ಲಿ ಹೇಗೆ ಪಾತ್ರವು ಅಡಕವಾಗಿದೆ ಎಂದು ಮೊದಲು ಆತ್ಮವನ್ನು ತಿಳಿದುಕೊಳ್ಳಬೇಕಾಗಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. 84 ಜನ್ಮಗಳ ಬದಲು 84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ. ತಂದೆಯು ಬಂದು ಮಕ್ಕಳಿಗೂ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ – ಇಂದಿನ ಭಾರತವು ಏನಾಗಿದೆ? ನಾಳೆಯ ಭಾರತವು ಹೇಗಿರುವುದು! ಎಂದು. ಮಹಾಭಾರತ ಯುದ್ಧವೂ ಇದೆ, ಗೀತಾ ಜ್ಞಾನವನ್ನು ತಿಳಿಸಿದ್ದಾರೆ. ಈ ರುದ್ರ ಯಜ್ಞವೂ ಇದೆ, ಈಗ ಎಲ್ಲಾ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯಾಗುತ್ತಿದೆ.

ಇದು ಶಿವ ತಂದೆಯ ಭಂಡಾರವಾಗಿದೆ, ಇದರಿಂದ ನಿಮಗೆ ಪವಿತ್ರ ಭೋಜನವು ಸಿಗುತ್ತದೆ. ಬ್ರಾಹ್ಮಣ-ಬ್ರಾಹ್ಮಿಣಿಯರು ತಯಾರಿಸುತ್ತಾರೆ ಆದ್ದರಿಂದ ಈ ಭೋಜನಕ್ಕೆ ಅಪರಮಪಾರ ಮಹಿಮೆಯಿದೆ, ಇದರಿಂದ ನೀವು ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ ಆದ್ದರಿಂದ ಪವಿತ್ರ ಭೋಜನವು ಒಳ್ಳೆಯದಾಗಿದೆ. ನೀವು ಎಷ್ಟು ಶ್ರೇಷ್ಠರಾಗುತ್ತಾ ಹೋಗುತ್ತೀರೋ ಅಷ್ಟು ಶುದ್ಧ ಭೋಜನವು ನಿಮಗೆ ಸಿಗುತ್ತದೆ. ಯಾರಾದರೂ ಯೋಗಯುಕ್ತರಾಗಿ ಭೋಜನವನ್ನು ತಯಾರಿಸಿದರೆ ಅದರಿಂದ ಬಹಳ ಶಕ್ತಿಯು ಸಿಗುವುದು. ಅದೂ ಸಹ ಮುಂದೆ ಹೋದಂತೆ ಸಿಗುತ್ತದೆ. ಸೇವಾಧಾರಿ ಮಕ್ಕಳು ಯಾರು ಸೇವಾಕೇಂದ್ರದಲ್ಲಿ ಇರುತ್ತಾರೆಯೋ ಅವರು ತಮ್ಮದೇ ಕೈಗಳಿಂದ ಭೋಜನವನ್ನು ತಯಾರಿಸಿ ಸೇವಿಸಿದರೆ ಅದರಲ್ಲಿ ಬಹಳಷ್ಟು ಶಕ್ತಿ ದೊರೆಯುತ್ತದೆ. ಹೇಗೆ ಪತಿವ್ರತಾ ಸ್ತ್ರೀಯು ತನ್ನ ಪತಿಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಹಾಗೆಯೇ ನೀವು ಮಕ್ಕಳೂ ಸಹ ನೆನಪಿನಲ್ಲಿದ್ದು ಭೋಜನವನ್ನು ತಯಾರಿಸಿ ಸೇವಿಸಿದರೆ ಬಹಳ ಶಕ್ತಿ ಸಿಗುವುದು. ತಂದೆಯ ನೆನಪಿನಲ್ಲಿ ಇರುವುದರಿಂದ ನೀವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ತಂದೆಯು ಸಲಹೆಯನ್ನಂತೂ ಕೊಡುತ್ತಾರೆ ಆದರೆ ಯಾರ ಬುದ್ಧಿಯಲ್ಲಿಯೂ ಇದು ಬರುತ್ತಿಲ್ಲ. ಮುಂದೆ ಹೋದಂತೆ ನಾವು ನಮ್ಮ ಕೈಗಳಿಂದ ಯೋಗಯುಕ್ತರಾಗಿ ಭೋಜನವನ್ನು ತಯಾರಿಸುತ್ತೇವೆ ಎಂದು ತಾವೇ ಹೇಳುತ್ತಾರೆ, ಇದರಿಂದ ಎಲ್ಲರ ಕಲ್ಯಾಣವಾಗುವುದು.

ತಂದೆಯು ಮಕ್ಕಳಿಗೆ ಪ್ರತಿಯೊಂದು ಪ್ರಕಾರದಿಂದ ಮತವನ್ನು ಕೊಡುತ್ತಾರಲ್ಲವೆ. ತ್ರಿಮೂರ್ತಿ ಚಿತ್ರವು ಸನ್ಮುಖದಲ್ಲಿರಲಿ. ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಒಂದಲ್ಲ ಒಂದು ಯುಕ್ತಿಯನ್ನು ಮಾಡುತ್ತಾ ಇರಿ. ತಂದೆಯು ತಮ್ಮ ಉದಾಹರಣೆಯನ್ನು ತಿಳಿಸುತ್ತಾರೆ – ಭಕ್ತಿಮಾರ್ಗದಲ್ಲಿ ನಾನು ನಾರಾಯಣನ ಚಿತ್ರವನ್ನು ಬಹಳ ಪ್ರೀತಿ ಮಾಡುತ್ತಿದ್ದೆನು. ನಾರಾಯಣನನ್ನು ನೆನಪು ಮಾಡುತ್ತಾ ಕಣ್ಣುಗಳಲ್ಲಿ ಪ್ರೀತಿ ಬಂದು ಬಿಡುತ್ತಿತ್ತು, ಏಕೆಂದರೆ ಆ ಸಮಯದಲ್ಲಿ ವೈರಾಗ್ಯವಿತ್ತು. ಬಾಲ್ಯದಲ್ಲಿಯೇ ವೈರಾಗ್ಯ ವೃತ್ತಿಯಿತ್ತು. ಇಲ್ಲಂತೂ ಇವು ಬೇಹದ್ದಿನ ಮಾತುಗಳಾಗಿವೆ. ಪುನಃ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಮನ್ಮನಾಭವ. ಯೋಗದಲ್ಲಿ ಇರುವುದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೆನಪಿನಲ್ಲಿರುವ ಚಿಂತೆಯನ್ನು ಇಟ್ಟುಕೊಳ್ಳಬೇಕಾಗಿದೆ. ಶ್ರೀಮತ ಸಿಗುತ್ತಿದೆ, ತಂದೆಯು ಹೇಳುತ್ತಾರೆ ನನ್ನನ್ನು ನೆನಪು ಮಾಡಿರಿ, ನಾನು ಸೃಷ್ಟಿಯ ರಚಯಿತನಾಗಿದ್ದೇನೆ ಅಂದಮೇಲೆ ನೀವೂ ಹೊಸ ಪ್ರಪಂಚದ ಮಾಲೀಕರಾಗುತ್ತೀರಲ್ಲವೆ. ಪಾವನರಾಗದಿದ್ದರೆ ಶಿಕ್ಷೆಗಳನ್ನೂ ಅನುಭವಿಸುವಿರಿ ಮತ್ತು ಪದವಿಯೂ ಭ್ರಷ್ಟವಾಗುವುದು. ನೀವು ಶರೀರ ಬಿಡುವುದಕ್ಕೆ ಮೊದಲೇ ಇದೇ ಚಿಂತೆಯನ್ನು ಇಟ್ಟುಕೊಳ್ಳಬೇಕು – ನಾವು ಹೇಗೆ ಸತೋಪ್ರಧಾನರಾಗುವುದು! ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ, ಇದು ಅತಿ ದೊಡ್ಡ ಚಿಂತೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯೋಗ ಯುಕ್ತರಾಗಿ ತಮ್ಮ ಕೈಗಳಿಂದ ಭೋಜನ ತಯಾರಿಸಬೇಕು ಹಾಗೂ ಸೇವಿಸಬೇಕಾಗಿದೆ. ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಪವಿತ್ರ ಭೋಜನವನ್ನು ಸ್ವೀಕರಿಸಬೇಕಾಗಿದೆ, ಅದರಲ್ಲಿಯೇ ಬಲವಿದೆ.

2. ಹೊಸ ತನು-ಮನ-ಧನವನ್ನು ಪ್ರಾಪ್ತಿ ಮಾಡಿಕೊಳ್ಳಲು ಹಳೆಯದೆಲ್ಲವನ್ನೂ ತಂದೆಗೆ ಅರ್ಪಣೆ ಮಾಡಬೇಕಾಗಿದೆ, ಈ ಶರೀರ ಸಹಿತವಾಗಿ ತಂದೆಗೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ.

ವರದಾನ:-

ಯಾರು ಮಹಾನ್ ಆತ್ಮರಾಗಿದ್ದಾರೆಯೋ ಅವರ ಪ್ರತಿಯೊಂದು ವ್ಯವಹಾರದಿಂದ ಸರ್ವ ಆತ್ಮರುಗಳಿಗೂ ಸುಖದ ದಾನವು ಸಿಗುವುದು. ಅಂತಹವರು ಸುಖ ಕೊಡುತ್ತಾರೆ ಮತ್ತು ಪಡೆಯುತ್ತಾರೆ. ಹಾಗಾದರೆ ಪರಿಶೀಲನೆ ಮಾಡಿಕೊಳ್ಳಿರಿ – ಮಹಾನ್ ಆತ್ಮನ ಲೆಕ್ಕದಿಂದ ಇಡೀ ದಿನದಲ್ಲಿ ಎಲ್ಲರಿಗೂ ಸುಖ ಕೊಟ್ಟಿದ್ದೇನೆಯೇ, ಪುಣ್ಯದ ಕಾರ್ಯವನ್ನು ಮಾಡಿದ್ದೇನೆಯೇ! ಪುಣ್ಯ ಎಂದರೆ ಯಾರಿಗೇ ಆದರೂ ಅಂತಹ ವಸ್ತುವನ್ನು ಕೊಡಿ, ಯಾವುದರಿಂದ ಆ ಆತ್ಮನಿಂದ ಆಶೀರ್ವಾದವು ಬರಲಿ. ಹಾಗಾದರೆ ಪ್ರತಿಯೊಂದು ಆತ್ಮನಿಂದ ಆಶೀರ್ವಾದವು ಸಿಗುತ್ತಿದೆಯೇ ಮತ್ತು ಯಾರಿಗೂ ದುಃಖವನ್ನು ಕೊಡುತ್ತಿಲ್ಲ ಅಥವಾ ತೆಗೆದುಕೊಳ್ಳುತ್ತಿಲ್ಲ ಅಲ್ಲವೆ ಎನ್ನುವುದನ್ನು ಪರಿಶೀಲನೆ ಮಾಡಿರಿ. ಹೀಗಾದಾಗ ಮಹಾನ್ ಆತ್ಮನೆಂದು ಹೇಳಲಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top