19 October 2021 KANNADA Murli Today | Brahma Kumaris
Read and Listen today’s Gyan Murli in Kannada
18 October 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಬೇಹದ್ದಿನ ತಂದೆಯು ನೀವು ಮಕ್ಕಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆ ಆದ್ದರಿಂದ ಈಗ ತಂದೆಯ ಮಕ್ಕಳಾಗಿ ಅವರ ಶ್ರೀಮತದಂತೆ ನಡೆಯಿರಿ”
ಪ್ರಶ್ನೆ:: -
ತಂದೆಯು ತನ್ನ ಮಕ್ಕಳ ಅದೃಷ್ಟವನ್ನು ಶ್ರೇಷ್ಠ ಮಾಡಲು ಯಾವ ಶ್ರೇಷ್ಠ ಮತವನ್ನು ಕೊಡುತ್ತಾರೆ?
ಉತ್ತರ:-
ಮಧುರ ಮಕ್ಕಳೇ, ಮೃತ್ಯುವಿಗೆ ಮೊದಲೇ ಎಷ್ಟು ಸಾಧ್ಯವೋ ನೆನಪಿನಲ್ಲಿರುವ ಪುರುಷಾರ್ಥ ಮಾಡಿರಿ. ಇದರಲ್ಲಿಯೇ ನಿಮ್ಮ ಸಂಪಾದನೆಯಿದೆ. ನನ್ನ ಮಕ್ಕಳಾಗಿ ಎಂದೂ ಮರೆತೂ ಕೂಡ ಯಾವುದೇ ಪಾಪ ಕರ್ಮ ಮಾಡಬಾರದು. ಭಲೆ ಮಾಯೆಯ ಬಿರುಗಾಳಿಗಳು ಎಷ್ಟಾದರೂ ಬರಲಿ ಆದರೆ ಎಂದೂ ಪತಿತರಾಗಬಾರದು.
♫ ಕೇಳು ಇಂದಿನ ಮುರ್ಲಿ (audio)➤
ಓಂ ಶಾಂತಿ. ಶಿವ ಭಗವಾನುವಾಚ. ಶಿವ ತಂದೆಯು ನಮಗೆ ತಿಳಿಸುತ್ತಾರೆಂದು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ಶಿವ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಆ ಕಲಿಯುಗೀ ಮನುಷ್ಯರು ಶಿವ ತಂದೆಯ ಜಡ ಮಂದಿರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಅಂತರವನ್ನು ತಿಳಿದುಕೊಂಡಿದ್ದೀರಲ್ಲವೆ. ಬುದ್ಧಿಯ ಬೀಗವನ್ನು ಸ್ವಲ್ಪ ತೆರೆಯಿರಿ. ನೀವು ತಿಳಿದುಕೊಳ್ಳುತ್ತೀರಿ, ನಾವು ಚೈತನ್ಯ ಶಿವ ತಂದೆಯ ಬಳಿ ಕುಳಿತಿದ್ದೇವೆ. ತಂದೆಯು ನಮ್ಮೊಂದಿಗೆ ಸನ್ಮುಖದಲ್ಲಿ ವಾರ್ತಾಲಾಪ ಮಾಡುತ್ತಿದ್ದಾರೆ. ಈ ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಿದ್ದಾರೆ ಮತ್ತು ಇನ್ನೊಂದು ಕಡೆ ನೋಡಿ, ಮನುಷ್ಯರು ಶಿವ ತಂದೆಯ ಪೂಜೆ ಮಾಡುತ್ತಿದ್ದಾರೆ. ಅಮರನಾಥಕ್ಕೆ, ಕಾಶಿಗೆ ಹುಡುಕಲು ಹೋಗುತ್ತಿದ್ದಾರೆ. ಮತ್ತೆ ನಾವು ಶಿವ ತಂದೆಯ ಬಳಿ ಕುಳಿತಿದ್ದೇವೆ ಎಂಬುದನ್ನು ನೀವು ಪದೇ-ಪದೇ ಏಕೆ ಮರೆತು ಹೋಗುತ್ತೀರಿ? ಶಿವ ತಂದೆಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ, ಅವರಿಗೆ ಎಷ್ಟೊಂದು ಮಹಿಮೆಯಿದೆ! ಅವರಿಗೆ ನೀವು ಬಾಬಾ, ಬಾಬಾ ಎಂದು ಹೇಳುತ್ತೀರಿ. ನಿಮಗೆ ತಿಳಿದಿದೆ, ಶಿವ ತಂದೆಯ ಮತದಂತೆ ನಡೆದು ವಿಶ್ವದ ಮಾಲೀಕರಾಗುವ ಆಸ್ತಿಯನ್ನು ಪಡೆಯುತ್ತಿದ್ದೀರಿ. ಮನುಷ್ಯರು ಇನ್ನೂ ಮಂದಿರಗಳು, ತೀರ್ಥ ಸ್ಥಾನಗಳಲ್ಲಿ ಸುತ್ತುತ್ತಿದ್ದಾರೆ ಮತ್ತು ನೀವು ಆಸ್ತಿಯನ್ನು ಪಡೆಯುತ್ತಿದ್ದೀರಿ. ಎಷ್ಟೊಂದು ವ್ಯತ್ಯಾಸವಿದೆ ನೋಡಿ! ನಿಮ್ಮ ಹೋಲಿಕೆಯಲ್ಲಿ ಅವರು ಎಷ್ಟು ಅಮಾಯಕರಾಗಿದ್ದಾರೆ! ಶಿವ ತಂದೆಯು ತಿಳಿಸುತ್ತಾರೆ, ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ. ನಾನು ನಿಮಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ. ಮನುಷ್ಯರು ಪರಮಪಿತನನ್ನು ಕರೆಯುತ್ತಾ ಇರುತ್ತಾರೆ. ಇಲ್ಲಂತೂ ನೀವು ಅವರ ಸನ್ಮುಖದಲ್ಲಿಯೇ ಕುಳಿತಿದ್ದೀರಿ. ಇಲ್ಲಿರುವಾಗ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ, ಮತ್ತೆ ಮನೆಗೆ ಹೋಗುತ್ತಿದ್ದಂತೆಯೇ ಹೇಗೆ ಮರೆತು ಹೋಗುತ್ತೀರಿ? ಇಲ್ಲಿ ನಿಮಗಾಗಿ ದಿನವಾಗಿದೆ, ಅಲ್ಲಿ ಅವರಿಗೆ ರಾತ್ರಿಯಾಗಿದೆ. ಅವರು ಚೀರಾಡುತ್ತಿರುತ್ತಾರೆ, ನೀವು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮಿಂದಲೇ ಕೇಳುವೆನು…. ಎಂದು ಹೇಳುತ್ತೀರಿ ಆದರೆ ಮನೆಗೆ ಹೋಗಿ ಮರೆತು ಹೋಗುತ್ತೀರಿ. ಮಾಯೆಯು ಎಷ್ಟು ಪ್ರಬಲವಾಗಿದೆ! ಶಿವ ತಂದೆಯ ಮಕ್ಕಳಾಗಿ ಪೂಜಾರಿಗಳಿಂದ ಪೂಜ್ಯರಾಗುವ ಪುರುಷಾರ್ಥವನ್ನೂ ಮಾಡುತ್ತಾರೆ ಮತ್ತೆ ಹೊರಗೆ ಹೋಗಿ ಪೂಜಾರಿಗಳಾಗಿ ಬಿಡುತ್ತಾರೆ. ಶಿವ ತಂದೆಯ ಜಡ ಮಂದಿರಗಳಿಗೆ ಹೋಗುತ್ತಿರುತ್ತಾರೆ.
ಇಲ್ಲಂತೂ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಶ್ರೀಮತದಂತೆ ನಡೆಯುವುದರಿಂದಲೇ ನೀವು ಶ್ರೇಷ್ಠರಾಗುತ್ತೀರಿ, ಮುಖ್ಯವಾದುದು ಪವಿತ್ರತೆಯಾಗಿದೆ. ಅಲ್ಲಿ ಜಡ ಚಿತ್ರಗಳ ಮುಂದೆ ಹೋಗಿ ಬಲಿಯಾಗುತ್ತಾರೆ. ಇಲ್ಲಂತೂ ಚೈತನ್ಯದಲ್ಲಿ ಕುಳಿತಿದ್ದೇನೆ. ಇಲ್ಲಿ ನನಗೆ ಬಲಿಯಾಗುವ ಮಾತಿಲ್ಲ, ಇದು ಜೀವಿಸಿದ್ದಂತೆಯೇ ಸಾಯುವುದಾಗಿದೆ. ಶ್ರೀಮತದಂತೆ ನಡೆಯಿರಿ ಎಂದು ತಂದೆಯು ಹೇಳುತ್ತಾರೆ, ಇಲ್ಲಿಂದ ಹೊರಗೆ ಹೋಗುತ್ತಿದ್ದಂತೆಯೇ ತಂದೆಯನ್ನೇ ಮರೆತು ಹೋಗುತ್ತಾರೆ, ಎಂದೂ ಪತ್ರವನ್ನೂ ಬರೆಯುವುದಿಲ್ಲ. ಕೆಲವರು ಈ ರೀತಿಯೂ ಇದ್ದಾರೆ ಎಂದೂ ನೋಡಿಯೂ ಇಲ್ಲ, ಮಿಲನವನ್ನೂ ಮಾಡಿಲ್ಲ. ಅವರು ತವಕಿಸುತ್ತಾ ಪತ್ರಗಳನ್ನು ಬರೆಯುತ್ತಿರುತ್ತಾರೆ ಮತ್ತು ಯಾರು ಸನ್ಮುಖದಲ್ಲಿ ಮಿಲನ ಮಾಡಿ ಹೋಗುತ್ತಾರೆಯೋ ಅವರು ಒಮ್ಮೆಲೆ ಮರೆತು ಹೋಗುತ್ತಾರೆ. ನೀವಂತು ಶಿವ ತಂದೆಯ ಮೇಲೆ ಬಲಿಹಾರಿ ಆಗಬೇಕಲ್ಲವೆ. ಭಕ್ತಿಮಾರ್ಗದಲ್ಲಿ ಶಿವ ತಂದೆಯೊಂದಿಗೆ ಮಿಲನ ಮಾಡುವುದಕ್ಕಾಗಿ ತನ್ನನ್ನು ಬಲಿ ಕೊಟ್ಟುಕೊಳ್ಳುತ್ತಿದ್ದಿರಿ. ಆದರೆ ಅಲ್ಲಿ ಭಗವಂತನು ಸಿಗುತ್ತಿರಲಿಲ್ಲ, ಈಗ ತಂದೆಯು ಚೈತನ್ಯದಲ್ಲಿ ಬಂದು ಹೇಳುತ್ತಾರೆ – ಮಕ್ಕಳೇ, ನನ್ನವರಾಗಿರಿ. ನಾನು ಕರೆದುಕೊಂಡು ಹೋಗಲು ಬಂದಿದ್ದೇನೆ, ಪವಿತ್ರರಾಗದೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪವಿತ್ರರನ್ನಾಗಿ ಮಾಡಲು ನಾನೇ ಬರಬೇಕಾಗುತ್ತದೆ. ಸರ್ವರ ಸದ್ಗತಿದಾತ ತಂದೆಯು ನಿಮ್ಮ ಬಳಿ ಕುಳಿತಿದ್ದಾರೆ. ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಯಾವುದನ್ನು ಭಗವಂತನು ಕಲಿಸಿದ್ದರು. ಅಲ್ಲಿ ಅವರು ಕೃಷ್ಣನನ್ನು ಭಗವಂತನೆಂದು ತಿಳಿಸಿದ್ದರು. ನಿಮಗೆ ತಿಳಿದಿದೆ, ಗೀತೆಯ ಭಗವಂತನು ಶಿವ ತಂದೆಯಾಗಿದ್ದಾರೆ. ನೀವು ಪತ್ರದಲ್ಲಿಯೂ ಶಿವಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತೀರಿ. ನಿಮಗೆ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ ಆದರೂ ನಶೆಯೇರುವುದಿಲ್ಲ. ಓಹೋ ಶಿವ ತಂದೆಯು ನಮ್ಮನ್ನು ಮಡಿಲಿಗೆ ತೆಗೆದುಕೊಂಡಿದ್ದಾರೆ, ದತ್ತು ಮಗುವನ್ನಾಗಿ ಮಾಡಿಕೊಂಡಿದ್ದಾರೆ! ಆದರೆ ಎಲ್ಲರನ್ನೂ ಇಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ ಅಲ್ಲವೆ. ಸಾವಿರಾರು ಮಂದಿ ಮಕ್ಕಳಿದ್ದಾರೆ, ಎಲ್ಲರನ್ನೂ ಇಲ್ಲಿಯೇ ಹೇಗೆ ಇಟ್ಟುಕೊಳ್ಳುವುದು, ಅಷ್ಟು ಸ್ಥಳವಾದರೂ ಎಲ್ಲಿದೆ! ಆದ್ದರಿಂದ ತಂದೆಯು ತಿಳಿಸುತ್ತಾರೆ – ನೀವು ತಮ್ಮ ಮನೆಯಲ್ಲಿಯೇ ಇರಿ, ಕೇವಲ ನನ್ನನ್ನು ನೆನಪು ಮಾಡಬೇಕಾಗಿದೆ. ಎಲ್ಲರಿಗಿಂತ ಮಧುರ ಬೇಹದ್ದಿನ ತಂದೆಯಾಗಿದ್ದಾರೆ, ನೀವು ಅವರ ಮಕ್ಕಳಾಗಿದ್ದೀರಿ.
ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ಕಾಮ ಚಿತೆಯನ್ನು ಏರಿ ಸುಟ್ಟು ಹೋಗಿದ್ದೀರಿ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತು ದೇವತೆಗಳಾಗಿರಿ, ದೇವತೆಗಳ ಪೂಜೆಯನ್ನೂ ಮಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಇದೂ ಸಹ ಡ್ರಾಮಾದ ಲೀಲೆಯೆಂದೇ ಹೇಳಲಾಗುತ್ತದೆ. ನೀವೀಗ ಚೈತನ್ಯ ಶಿವ ತಂದೆಯ ಬಳಿ ಕುಳಿತಿದ್ದೀರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಯಾವುದೇ ಪಾಪ ಕರ್ಮ ಮಾಡಬೇಡಿ, ದೇಹಾಭಿಮಾನದಲ್ಲಿ ಬರಬೇಡಿ. ನೀವೀಗ ನಡೆಯುತ್ತಾ -ತಿರುಗಾಡುತ್ತಾ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ ಯಾರನ್ನು ನೀವು ಅರ್ಧ ಕಲ್ಪದಿಂದ ನೆನಪು ಮಾಡುತ್ತಿದ್ದಿರಿ ಅವರು ಈಗ ನಿಮ್ಮ ಸೇವೆಯಲ್ಲಿ ಉಪಸ್ಥಿತರಿದ್ದಾರೆ. ಆತ್ಮೀಯ ಸಮಾಜ ಸೇವಕನಾಗಿದ್ದಾರೆ. ನಿಮಗೆ ಆತ್ಮಿಕ ಸೇವೆಯನ್ನು ಕಲಿಸುತ್ತಾರೆ, ಸಮಾಜ ಸೇವೆಯ ಮುಖ್ಯಸ್ಥರೂ ಇರುತ್ತಾರಲ್ಲವೆ. ಇದು ಆತ್ಮಿಕ ಸೇವೆಯಾಗಿದೆ. ಅವರು ಮನುಷ್ಯರ ಸಂಘದ ದೈಹಿಕ ಸೇವೆ ಮಾಡುವವರಾಗಿರುತ್ತಾರೆ. ಈಗ ನೋಡಿ, ಗೋ-ಹತ್ಯೆ ಮಾಡುವುದನ್ನು ನಿಲ್ಲಿಸಬೇಕೆಂದು ಅವರು ಹೇಳುತ್ತಾರೆ. ನೀವು ಇದನ್ನು ಬರೆಯಬಹುದು – ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಹತ್ಯೆಯಾಗಿದೆ. ಮೊದಲು ಇದನ್ನು ನಿಲ್ಲಿಸಿರಿ. ಇದಕ್ಕಾಗಿಯೇ ಭಗವಂತನು ಹೇಳಿದ್ದಾರೆ, ಕಾಮ ಮಹಾಶತ್ರು, ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತದ್ದಾಗಿದೆ. ನೀವು ಗೀತೆಯ ಭಗವಂತನನ್ನು ಮರೆತು ಹೋಗಿದ್ದೀರಿ. ತಂದೆಗೆ ಆಶ್ಚರ್ಯವೆನಿಸುತ್ತದೆ. ಒಂದು ಕಡೆ ಅಮರನಾಥದಲ್ಲಿ, ಪರ್ವತಗಳಲ್ಲಿ ಹುಡುಕುತ್ತಿರುತ್ತಾರೆ. ಪಾರ್ವತಿಗೆ ಅಲ್ಲಿ ಅಮರ ಕಥೆಯನ್ನು ತಿಳಿಸಿದರೆಂದು ತಿಳಿಯುತ್ತಾರೆ. ಒಬ್ಬ ಪಾರ್ವತಿಗೆ ತಿಳಿಸುವುದರಿಂದ ಏನಾಗುವುದು! ತಂದೆಯು ತಿಳಿಸುತ್ತಾರೆ – ಇವರೆಲ್ಲರೂ ಪಾರ್ವತಿಯರಾಗಿದ್ದಾರೆ, ಎಲ್ಲರಿಗೆ ಅಮರ ಕಥೆಯನ್ನು ತಿಳಿಸುತ್ತಿದ್ದೇನೆ – ಮಕ್ಕಳೇ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಮೃತ್ಯುಲೋಕದಲ್ಲಿ ಬಂದು ತಲುಪಿದ್ದೀರಿ. ಒಳ್ಳೆಯದು – ಲಕ್ಷ್ಮೀ-ನಾರಾಯಣರು ಎಲ್ಲಿ ಹೋದರು? ಹಿಂತಿರುಗಿ ಹೋದರೇ ಅಥವಾ ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತೆ? ಸೂರ್ಯವಂಶಿ ರಾಜ-ರಾಣಿ, ಪ್ರಜೆ ಅವರೆಲ್ಲರೂ ಎಲ್ಲಿ ಹೋದರು? ಅವಶ್ಯವಾಗಿ ಸತೋಪ್ರಧಾನರಿಂದ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗಿ ಬಿಟ್ಟಿರಬಹುದು. ತಿಳಿದುಕೊಂಡಿದ್ದೀರಲ್ಲವೆ! ಇದನ್ನು ಬ್ರಹ್ಮಾರವರ ಮೂಲಕ ಶಿವ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನಾನೀಗ ನಿಮ್ಮ ಅದೃಷ್ಟವನ್ನು ಬೆಳಗಿಸಲು ಬಂದಿದ್ದೇನೆ ಮತ್ತೆ ನೀವು ಅದೃಷ್ಟಕ್ಕೆ ಅಡ್ಡ ಗೆರೆಯನ್ನೇಕೆ ಎಳೆದುಕೊಳ್ಳುತ್ತೀರಿ! ಸ್ವಲ್ಪ ಅರ್ಥ ಮಾಡಿಕೊಳ್ಳಿ, ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನೀವು ನನ್ನ ಮತದಂತೆ ನಡೆಯುವುದಿಲ್ಲವೆ!!! ಮನೆಗೆ ಹೋಗುತ್ತಿದ್ದಂತೆಯೇ ಏಕೆ ಮರೆತು ಹೋಗುತ್ತೀರಿ!! ತಂದೆಯು ಪದೇ-ಪದೇ ತಿಳಿಸುತ್ತಾರೆ – ನೀವೀಗ ಸಂಗಮಯುಗಿಗಳಾಗಿದ್ದೀರಿ. ಅವರು ಕಲಿಯುಗಿಗಳಾಗಿದ್ದಾರೆ. ನೀವು ಪೂಜ್ಯರು, ಅವರು ಪೂಜಾರಿಗಳಾಗಿದ್ದಾರೆ. ನಿಮ್ಮ ಅಲೆದಾಟವು ಈಗ ನಿಂತು ಹೋಯಿತು. ಭಲೆ ಅವರು ನಿಮ್ಮನ್ನು ನಾಸ್ತಿಕರೆಂದು ತಿಳಿಯುತ್ತಾರೆ, ನೀವು ಅವರಿಗೆ ನಾಸ್ತಿಕರೆಂದು ಹೇಳುತ್ತೀರಿ. ನೀವು ಭಕ್ತಿ ಮಾಡುವುದಿಲ್ಲ ಆದ್ದರಿಂದ ನೀವು ನಾಸ್ತಿಕರೆಂದು ಅವರು ಹೇಳುತ್ತಾರೆ. ನೀವು ತಂದೆಯನ್ನೇ ಅರಿತುಕೊಂಡಿಲ್ಲ ಆದ್ದರಿಂದ ನೀವು ನಾಸ್ತಿಕರಾಗಿದ್ದೀರಿ, ನಾವು ಆಸ್ತಿಕರಾಗಿದ್ದೇವೆ. ತಂದೆಯನ್ನು ಅರಿತು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ನೀವು ತಿಳಿದುಕೊಂಡಿಲ್ಲ ಆದ್ದರಿಂದ ಇನ್ನೂ ಹುಡುಕುತ್ತಾ ಇದ್ದೀರಿ ಎಂದು ನೀವು ಹೇಳುತ್ತೀರಿ. ಕುಂಭಮೇಳದಲ್ಲಿ ಎಷ್ಟೊಂದು ಮಂದಿ ಹೋಗುತ್ತಾರೆ ಮತ್ತು ದಾನ-ಪುಣ್ಯ ಮಾಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ – ಇವೆಲ್ಲಾ ಮಾತುಗಳನ್ನು ಬಿಡಿ, ನಿಮಗೆ ಜ್ಞಾನ ಸಾಗರನು ಸಿಕ್ಕಿದ್ದಾರೆ ಅಂದಮೇಲೆ ಮತ್ತೆಲ್ಲಿಗೆ ಹೋಗುತ್ತೀರಿ! ಇವರು ಜ್ಞಾನ ನದಿಗಳಾಗಿದ್ದಾರೆ, ಜ್ಞಾನ ಸಾಗರನ ಬಳಿ ಜ್ಞಾನ ಸ್ನಾನ ಮಾಡಿಸಲು ನಿಮ್ಮನ್ನು ಕರೆ ತರುತ್ತಾರೆ. ಎಷ್ಟು ಒಳ್ಳೊಳ್ಳೆಯ ಮಕ್ಕಳು ತಂದೆಯ ಬಳಿ ಬಂದು ಹೋಗಿ ಮತ್ತೆ ಕೊಳಕು ಕರ್ಮಗಳನ್ನು ಮಾಡುತ್ತಾರೆ. ಕೆಲವರಂತೂ ತಂದೆಯ ಮತದನುಸಾರವೆ ನಡೆಯುತ್ತಾರೆ. ಬಾಬಾ, ವಿನಾಶಿ ಧನವನ್ನು ಹೇಗೆ ಸಫಲ ಮಾಡುವುದು ಎಂದು ತಂದೆಯೊಂದಿಗೆ ಕೇಳುತ್ತಾರೆ ಮತ್ತೆ ಅವರಿಗೆ ತಿಳಿಸಲಾಗುತ್ತದೆ – ಮುಳುಗುವ ದೋಣಿಯಿಂದ ಎಷ್ಟು ಹೊರ ಬಂದರೂ ಒಳ್ಳೆಯದೆ. ಭಾರತದ ಸೇವೆಯಲ್ಲಿ ತೊಡಗಿಸಿ ಅದನ್ನು ಸಫಲ ಮಾಡಿಕೊಳ್ಳಿ. ಯಾವುದಾದರೂ ಸೇವಾಕೇಂದ್ರವನ್ನು ತೆರೆಯಿರಿ. ಈ ಚಿತ್ರಗಳೂ ಸಹ ಎಷ್ಟೊಂದು ತಯಾರಾಗುತ್ತಿರುತ್ತವೆ. ತಂದೆಯ ಬಳಿ ಇಂತಿಂತಹ ಮಕ್ಕಳಿದ್ದಾರೆ, ಹೇಳುತ್ತಾರೆ – ಬಾಬಾ, ಅವಶ್ಯಕತೆ ಬಂದಾಗ ನಮ್ಮನ್ನು ನೆನಪು ಮಾಡಿಕೊಳ್ಳಿರಿ, ನಾವು ಸಹಯೋಗ ನೀಡುವುದಕ್ಕಾಗಿ ಹಾಜರಾಗುತ್ತೇವೆ. ಯಜ್ಞದ ಒಳ್ಳೊಳ್ಳೆಯ ಕೆಲಸಕ್ಕಾಗಿ ಅವಶ್ಯಕತೆಯಿದ್ದಾಗ ನಮ್ಮನ್ನು ನೆನಪು ಮಾಡಿಕೊಳ್ಳಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಯಾರನ್ನೂ ನೆನಪು ಮಾಡಿಕೊಳ್ಳುವುದಿಲ್ಲ. ಏನು ಮಾಡಬೇಕೋ ಅದನ್ನು ಮಾಡಿರಿ, ನಾನಂತೂ ದಾತನಾಗಿದ್ದೇನೆ. ನಾನು ಬಂದಿರುವುದೇ ಭಾರತವನ್ನು ಸ್ವರ್ಗವನ್ನಾಗಿ ಮಾಡಲು, ನೀವು ಸ್ವರ್ಗದಲ್ಲಿ ಹೋಗುತ್ತೀರಿ. ಎಷ್ಟು ಮಾಡುತ್ತೀರೋ ಅಷ್ಟು ಪಡೆಯುತ್ತೀರಿ ಆದರೆ ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ತಲೆಯ ಮೇಲಿದೆ, ಅದನ್ನು ಇಳಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಅದಕ್ಕೆ ಬಹಳ ಶಿಕ್ಷೆಯಾಗುವುದು. ಸ್ವರ್ಗದಲ್ಲಿ ಬರುತ್ತಾರೆ ಆದರೆ ಶಿಕ್ಷೆಗಳು ಉಳಿದುಕೊಂಡರೆ ಪದವಿ ಪಡೆಯಲು ಸಾಧ್ಯವಿಲ್ಲ. ಶಿವ ತಂದೆಯ ಭಂಡಾರ ಕಾಲ ಕಂಟಕ ದೂರ ಎಂದು ಗಾಯನವಿದೆ. ಇವರಿಗೆ ಯಾವುದೇ ಚಿಂತೆಯಿಲ್ಲ. ತಂದೆಯು ಹೇಳುತ್ತಾರೆ – ಹುಂಡಿಯು ತಾನಾಗಿಯೇ ತುಂಬುವುದು.
ನೀವು ಮಕ್ಕಳು ಶ್ರೀಮತದಂತೆ ನಡೆಯಬೇಕಾಗಿದೆ. ಇದರಲ್ಲಿಯೇ ಕಲ್ಯಾಣವಿದೆ. ಎಂದೂ ಅಕಲ್ಯಾಣವೆಂದು ತಿಳಿಯಬೇಡಿ. ಉದಾಹರಣೆಗೆ, ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಕಾಲು ಕತ್ತರಿಸಿ ಹೋಗುತ್ತದೆಯೆಂದರೆ ಇದರಲ್ಲಿಯೂ ಕಲ್ಯಾಣವಿದೆಯೆಂದು ತಿಳಿಯಿರಿ. ಆತ್ಮವಂತೂ ತುಂಡಾಗಲಿಲ್ಲ ಅಲ್ಲವೆ. ಕಾಲು ತುಂಡಾಯಿತು ಪರವಾಗಿಲ್ಲ, ನಾನು ನಿಮ್ಮ ಆತ್ಮದೊಂದಿಗೆ ಮಾತನಾಡುತ್ತೇನೆ. ತಂದೆಯು ತಿಳಿಸುತ್ತಾರೆ – ಇದು ರಾವಣ ರಾಜ್ಯವಾಗಿದೆ ಆದ್ದರಿಂದಲೇ ರಾವಣನನ್ನು ಸುಡುತ್ತಾರೆ. ನಾವು ಹೇಗಿದ್ದೆವು, ತಂದೆಯು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡಿ ಬಿಡುತ್ತಾರೆ. ಪ್ರಪಂಚದ ಸ್ಥಿತಿಗತಿಗಳು ನೋಡಿ, ಹೇಗಿದೆ! ಈಗ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಮತದಂತೆ ನಡೆಯಬೇಕಾಗಿದೆ. ಯಾವುದೇ ಪಾಪ ಕರ್ಮವನ್ನು ಮಾಡಬಾರದು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಿ. ಇದೇ ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾ ಇರಿ. ಇದು ಎಷ್ಟು ದೊಡ್ಡದಾಗಿದೆ! ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿ ಬರೆದರೂ ಸಹ ಇದು ಮುಗಿಯುವುದಿಲ್ಲ. ಅಂದಮೇಲೆ ತಂದೆಯ ಮತದಂತೆ ನಡೆಯಬೇಕಲ್ಲವೆ. ನಾವು ಭಗವಂತನ ಶ್ರೀಮತದಂತೆ ರಾಜ್ಯವನ್ನು ಪಡೆಯುತ್ತೇವೆ. ಮನುಷ್ಯರು ದೇವತೆಯಾಗುತ್ತೇವೆಂದು ನಿಮಗೆ ತಿಳಿದಿದೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ. ಆಕಸ್ಮಿಕವಾಗಿ ಹೃದಯಾಘಾತಗಳಾಗುತ್ತಾ ಇರುತ್ತವೆ. ಅಪಘಾತಗಳಲ್ಲಿ ಶರೀರ ಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ – ಮೃತ್ಯುವಿಗೆ ಮೊದಲೇ ಹೆಚ್ಚಿನ ಪುರುಷಾರ್ಥ ಮಾಡಿರಿ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಮ್ಮ ಸಂಪಾದನೆ ಮಾಡಿಕೊಳ್ಳಿ, ಬೇಹದ್ದಿನ ತಂದೆಯ ಮಕ್ಕಳಾಗಿ ಮತ್ತೆ ಪಾಪ ಮಾಡಿದರೆ ಒಂದಕ್ಕೆ ನೂರು ಪಟ್ಟು ಆಗಿ ಬಿಡುವುದು. ನಂತರ ಮನುಷ್ಯರು ಏನು ಹೇಳುವರೋ ಎಂದು ಸಂಕೋಚವೂ ಆಗುವುದು. ಶಿವ ತಂದೆಯು ಹೇಳುತ್ತಾರೆ – ನಾನು ಧರ್ಮರಾಜನಿಂದ ಬಹಳ ಶಿಕ್ಷೆಗಳನ್ನು ಕೊಡಿಸುತ್ತೇನೆ ಆ ಸಮಯದಲ್ಲಿ ಇವರು ನನ್ನ ಮಗುವಾಗಿದ್ದಾರೆಂದು ಹೇಳುವುದಿಲ್ಲ. ಇದರಲ್ಲಿ ಬಹಳ ದೊಡ್ಡ ಕಾಯಿದೆಗಳಿವೆ. ನ್ಯಾಯಾಧೀಶರ ಮಕ್ಕಳು ಪಾಪ ಮಾಡಿದರೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ, ಏನು ಮಾಡಲೂ ಸಾಧ್ಯವಿಲ್ಲ. ಹಾಗೆಯೇ ತಂದೆಯು ನಿತ್ಯವೂ ತಿಳಿಸುತ್ತಾರೆ – ಮಕ್ಕಳೇ, ಪಾಪಕರ್ಮ ಮಾಡಬೇಡಿ. ಎಲ್ಲದಕ್ಕಿಂತ ದೊಡ್ಡದು ವಿಕಾರದ ಪಾಪವಾಗಿದೆ. ಭಲೆ ಅನೇಕ ಬಿರುಗಾಳಿಗಳು ಬರುತ್ತವೆ, ಹೊರಗಡೆ ಬಹಳ ಕೊಳಕಿದೆ. ಮಾತೇ ಕೇಳಬೇಡಿ. ಇದು ವೇಶ್ಯಾಲಯವಾಗಿದೆ. ಯಾರಾದರೂ ದೊಡ್ಡ ವ್ಯಕ್ತಿಗಳಿಗೆ ನೀವು ತಿಳಿಸುತ್ತೀರಿ, ಅವರು ಈಶ್ವರೀಯ ವಿದ್ಯಾರ್ಥಿಯಾಗಿ ಬಿಡುತ್ತಾರೆಂದರೆ ಇವರಿಗೆ ಬ್ರಹ್ಮಾಕುಮಾರಿಯರ ಜಾದು ಹಿಡಿದಿದೆ ಎಂದು ಹೇಳುತ್ತಾರೆ. ದೊಡ್ಡ-ದೊಡ್ಡವರು ಬಂದು ನಿಜವಾಗಿಯೂ ತಾವು ಸತ್ಯವನ್ನು ಹೇಳುತ್ತೀರಿ. ಗೀತೆಯ ಭಗವಂತನು ಶಿವನಾಗಿದ್ದಾರೆ, ಶ್ರೀಕೃಷ್ಣನಲ್ಲ ಎಂಬುದನ್ನೂ ಬರೆಯುತ್ತಾರೆ ಮತ್ತೆ ಮನೆಗೆ ಹೋದ ಮೇಲೆ ಸಮಾಪ್ತಿ. ಬಹಳ ಪರಿಶ್ರಮ ಪಡಬೇಕಾಗುತ್ತದೆ.
ತಂದೆಯು ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ, ಮರೆಯಬೇಡಿ. ಮಾಯೆಯು ಬಹಳ ಪ್ರಬಲವಾಗಿದೆ. ತಂದೆಯ ನೆನಪು ಪಾದರಸದಂತೆ, ಬಹು ಬೇಗನೆ ಮರೆತು ಹೋಗುತ್ತದೆ. ತಂದೆಯು ಹೇಳುತ್ತಾರೆ – ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ. ಕೇವಲ ಪವಿತ್ರರಾಗಿರಿ. ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ತಂದೆಯು ಒಂದೊಂದು ಮಗುವಿಗೂ ಬಹಳ ಪ್ರೀತಿಯಿಂದ ಹೇಳುತ್ತಾರೆ. ಈಗ ನನ್ನ ಮಕ್ಕಳಾಗಿ ಮತ್ತೆ ಯಾವುದೇ ಪಾಪ ಕರ್ಮವನ್ನು ಮಾಡಬಾರದು. ತಂದೆಯನ್ನು ಅರಿತುಕೊಂಡಿದ್ದೀರಲ್ಲವೆ. ಸೃಷ್ಟಿ ಚಕ್ರದ ರಹಸ್ಯವೂ ಬುದ್ಧಿಯಲ್ಲಿದೆ. ವಿದ್ವಾಂಸ, ಪಂಡಿತ ಆಚಾರ್ಯರಂತೂ ತಮ್ಮನ್ನೇ ಶಿವೋಹಂ ಎಂದು ಹೇಳಿಕೊಂಡು ಪೂಜೆ ಮಾಡಿಸಿಕೊಳ್ಳುತ್ತಾರೆ. ಬಹುತೇಕವಾಗಿ ಸನ್ಯಾಸಿಗಳು ಹರಿದ್ವಾರದಲ್ಲಿ ಹೋಗಿ ಇರುತ್ತಾರೆ. ಇಡೀ ದಿನ ಶಿವಕಾಶಿ ವಿಶ್ವನಾಥ ಗಂಗಾ ಎಂದು ಹೇಳುತ್ತಿರುತ್ತಾರೆ. ತಂದೆಯು ಎಷ್ಟು ಚೆನ್ನಾಗಿ ಕುಳಿತು ತಿಳಿಸುತ್ತಾರೆ. ತಂದೆಗೆ ಅಕಾಲ ಮೂರ್ತಿಯೆಂದು ಹೇಳುತ್ತಾರೆ. ಅಕಾಲ ಸಿಂಹಾಸನವೆಂದರೆ ಯಾವುದೇ ಗದ್ದುಗೆಯಲ್ಲ, ಅಕಾಲಮೂರ್ತಿ ತಂದೆಗೆ ಈ ರಥ (ಬ್ರಹ್ಮಾ)ವು ಸಿಂಹಾಸನವಾಗಿದೆ. ಹೇಗೆ ನಿಮಗೂ ಈ ರಥ (ಶರೀರ) ಇದೆ. ತಂದೆಯೂ ಸಹ ಹೇಳುತ್ತಾರೆ – ನಾನು ಈ ರಥವನ್ನು ಆಧಾರವಾಗಿ ತೆಗೆದುಕೊಂಡಿದ್ದೇನೆ. ಭೃಕುಟಿಯಲ್ಲಿ ಒಂದು ಕಡೆ ಶಿಷ್ಯ ಮತ್ತೊಂದು ಕಡೆ ಗುರುವು ಕುಳಿತಿದ್ದಾರೆ. ಅವಶ್ಯವಾಗಿ ಇವರ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತೇನೆ ಅಲ್ಲವೆ. ನಾನೂ ಬಿಂದುವಾಗಿದ್ದೇನೆ, ನಾನು ಬಹಳ ದೊಡ್ಡ ಗಾತ್ರದಲ್ಲಿಲ್ಲ.
ಮಧುರಾತಿ ಮಧುರ ಮಕ್ಕಳೇ, ಇದು ನಿಮ್ಮ ಸತ್ಯ-ಸತ್ಯವಾದ ನೆನಪಿನ ಚೈತನ್ಯ ಯಾತ್ರೆಯಾಗಿದೆ. ಬಾಪ್ದಾದಾ ಇಬ್ಬರೂ ಸಿಕ್ಕಿದ್ದಾರೆ. ಬಾಪ್-ದಾದಾ ಎಂಬುದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಪತ್ರದಲ್ಲಿ ಬಾಪ್ದಾದಾ ಎಂದು ಸಹಿ ಮಾಡುತ್ತಾರೆ. ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಶಿವ ತಂದೆಯು ನಿಮಗೆ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ದಾದಾ ಆಗಿದ್ದಾರೆ ಅಂದಮೇಲೆ ಬಾಪ್ದಾದಾ ಆದರಲ್ಲವೆ. ನಾನೀಗ ಇವರ ಮೂಲಕ ನಿಮಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆಂದು ತಂದೆಯು ಹೇಳುತ್ತಾರೆ. ಶಿವ ತಂದೆಯು ನಿಮ್ಮವರಾಗಿದ್ದಾರೆ, ಪ್ರಜಾಪಿತ ಬ್ರಹ್ಮನೂ ಸಹ ಎಲ್ಲವರನಾದರು. ಆಸ್ತಿಯು ಶಿವ ತಂದೆಯಿಂದಲೇ ಸಿಗುತ್ತದೆ ಅಂದಮೇಲೆ ಇದೇ ರೀತಿ ಸಹಿ ಮಾಡುತ್ತಾರಲ್ಲವೆ. ಬಾಪ್ದಾದಾ ಎಂದು ಹೇಳಲಾಗುತ್ತದೆ. ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಶಿವ ತಂದೆಯು ಹೇಳಿದರೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಪ್ರದರ್ಶನಿಯಲ್ಲಿ ಸಾವಿರಾರು ಮಂದಿ ಬರುತ್ತಾರೆ. ಅವರಲ್ಲಿ 8-10 ಮಂದಿ ಮಾತ್ರ ತಿಳಿದುಕೊಳ್ಳಲು ಬರುತ್ತಾರೆ ಮತ್ತೆ ಕಳೆಯುತ್ತಾ ಹೋದಂತೆ ಅವರಲ್ಲಿಯೂ ಒಬ್ಬರು ಅಥವಾ ಇಬ್ಬರೇ ಉಳಿದುಕೊಳ್ಳುತ್ತಾರೆ. ಆದ್ದರಿಂದಲೇ ಕೋಟಿಯಲ್ಲಿ ಕೆಲವರು ಎಂದು ಗಾಯನವಿದೆ. ಅಂದಮೇಲೆ ಕೋಟಿಯಲ್ಲಿ ಕೆಲವರು ಬರಬೇಕಾದರೆ ಎಷ್ಟೊಂದು ಪ್ರದರ್ಶನಿಗಳನ್ನು ಇಡಬೇಕಾಗಿದೆ. ಕೆಲವರಂತೂ ನಾಲ್ಕೈದು ವರ್ಷಗಳ ಕಾಲ ಬಂದು ನಂತರ ಮಾಯವಾಗಿ ಬಿಡುತ್ತಾರೆ, ತಂದೆಗೆ ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಶಿವ ತಂದೆಯು ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ ಅರ್ಥಾತ್ ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ಶ್ರೀಮತದಂತೆ ನಡೆಯಬೇಕಾಗಿದೆ.
2. ಶಿವ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಯಾವುದೇ ಪಾಪಕರ್ಮ ಮಾಡಬಾರದು. ಪವಿತ್ರರಾಗಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ.
ವರದಾನ:-
ಒಂದುವೇಳೆ ಯಾವುದೇ ಆತ್ಮನು ಇಚ್ಛುಕನಾಗಿರುತ್ತಾನೆ ಆದರೆ ಸಾಹಸವಿಲ್ಲದೇ ಇರುವುದರಿಂದ ಬಯಸುತ್ತಿದ್ದರೂ ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದಾಗ ಇಂತಹ ಆತ್ಮರಿಗಾಗಿ ವಿದಾತಾ ಅರ್ಥಾತ್ ಜ್ಞಾನ ದಾತರಾಗುವುದರ ಜೊತೆ-ಜೊತೆ ದಯಾಹೃದಯಿಗಳಾಗಿದ್ದು ವರದಾತಾ ಆಗಿರಿ. ಅವರಿಗೆ ತಮ್ಮ ಶುಭ ಭಾವನೆಯ ವಿಶೇಷ ಬಲವನ್ನು ಕೊಡಿ ಆದರೆ ಯಾವಾಗ ತಮ್ಮ ಪ್ರತೀ ಸಂಕಲ್ಪವು ತಂದೆಗಾಗಿ ಅರ್ಪಣೆಯಾಗಿರುವುದೋ ಆಗಲೇ ಇಂತಹ ವರದಾನಿ ಮೂರ್ತಿಯಾಗಲು ಸಾಧ್ಯವಾಗುವುದು. ಪ್ರತೀ ಸಮಯ, ಪ್ರತೀ ಕರ್ಮದಲ್ಲಿಯೂ ಅರ್ಪಣೆಯಾಗಿರುತ್ತೇನೆ ಎಂಬ ವಚನವನ್ನು ತೆಗೆದುಕೊಳ್ಳಲಾಗಿದೆ, ಅದನ್ನು ಪಾಲನೆ ಮಾಡಿರಿ.
ಸ್ಲೋಗನ್:-
➤ Email me Murli: Receive Daily Murli on your email. Subscribe!