18 October 2021 KANNADA Murli Today | Brahma Kumaris

Read and Listen today’s Gyan Murli in Kannada

17 October 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ಎಷ್ಟು ದೂರದಿಂದ ನಿಮಗೆ ಓದಿಸಲು ಬರುತ್ತಾರೆ, ವಿದ್ಯೆಯ ಶುಲ್ಕವನ್ನೂ ತೆಗೆದುಕೊಳ್ಳುವುದಿಲ್ಲ ಅಂದಮೇಲೆ ಎಷ್ಟು ಪ್ರೀತಿಯಿಂದ ಓದಬೇಕಾಗಿದೆ”

ಪ್ರಶ್ನೆ:: -

ಆತ್ಮಿಕ ಸರ್ಕಾರವು ಇಡೀ ಪ್ರಪಂಚಕ್ಕಾಗಿ ಈ ಉಚಿತ ಶಾಲೆಯನ್ನು ತೆರೆದಿದೆ – ಏಕೆ?

ಉತ್ತರ:-

ಏಕೆಂದರೆ ಎಲ್ಲರೂ ಅನಾಥರು, ನಿರ್ಗಧಿಕರಾಗಿ ಬಿಟ್ಟಿದ್ದಾರೆ, ಇಂತಹ ಬಡ ಮಕ್ಕಳಿಂದ ತಂದೆಯು ಶುಲ್ಕವನ್ನು ಹೇಗೆ ತೆಗೆದುಕೊಳ್ಳುವರು! ಈ ಅಂತಿಮ ಜನ್ಮದಲ್ಲಿ ತಂದೆಯು ಇಂತಹ ವಿದ್ಯೆಯನ್ನು ಓದಿಸುತ್ತಾರೆ ಯಾವುದರಿಂದ ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಹೊಸ-ಹೊಸ ಮಕ್ಕಳು ಯಾರು ಓದುವುದಕ್ಕಾಗಿ ಬರುತ್ತಾರೆಯೋ ಅವರಿಗೂ ಸಹ ಇಲ್ಲಿ ಯಾವುದೇ ನಷ್ಟವಾಗುವುದಿಲ್ಲ. ಭಲೆ ಕೊನೆಯಲ್ಲಿ ಬಂದಿರಬಹುದು ಆದರೆ ಸ್ವಲ್ಪ ಪರಿಶ್ರಮ ಪಟ್ಟರೆ ಹಳಬರಿಗಿಂತಲೂ ಮುಂದೆ ಹೋಗಬಹುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ…..

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ತಂದೆಯು ಹೇಳಿದರು, ಇಲ್ಲಿ ನೀವು ಮಕ್ಕಳು ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಬೇಕಾಗಿದೆ. ಪರಮಪಿತ ಪರಮಾತ್ಮ ಮತ್ತು ಮಕ್ಕಳು ಈಗ ಬಂದು ಮಿಲನ ಮಾಡಿದ್ದೀರಿ. ಇದಕ್ಕೆ ಈ ಸೃಷ್ಟಿಯಲ್ಲಿ ಆತ್ಮರು ಮತ್ತು ಪರಮಪಿತ ಪರಮಾತ್ಮನ ಮೇಳವೆಂದು ಹೇಳಲಾಗುತ್ತದೆ. ಈ ಮೇಳವು ಒಂದೇ ಬಾರಿ ಆಗುತ್ತದೆ, ಅರ್ಧಕಲ್ಪ ಸತ್ಯ-ತ್ರೇತಾಯುಗದಲ್ಲಿ ಯಾರೂ ಕರೆಯುವುದೇ ಇಲ್ಲ. ನೀವು ಮಕ್ಕಳು ಸುಖಿಯಾಗಿರುತ್ತೀರಿ. ಆ ಸುಖವನ್ನು ನೀವೀಗ ಪಡೆಯುತ್ತಿದ್ದೀರಿ. ಮೊದಲು ನೀವು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನ ಪತಿತರಾಗಿ ಬಿಟ್ಟಿದ್ದೀರಿ. ಮತ್ತೆ ತಂದೆಯು ಪಾವನರನ್ನಾಗಿ ಮಾಡುತ್ತಾರೆ. ನೀವು ಪೂಜಾರಿಗಳಾಗುತ್ತೀರಿ ಆದ್ದರಿಂದ ದುಃಖಿಯಾಗುತ್ತೀರಿ. ಪಂಚ ವಿಕಾರಗಳ ಕಾರಣದಿಂದಲೇ ದುಃಖವಾಗುತ್ತದೆ. ಎಷ್ಟೆಷ್ಟು ಏಣಿಯನ್ನು ಇಳಿಯುತ್ತಾ ಹೋಗುತ್ತೀರೋ ಅಷ್ಟು ದುಃಖಿಯಾಗುತ್ತಾ ಹೋಗುತ್ತೀರಿ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ದುಃಖದ ಬೆಟ್ಟಗಳೇ ಬೀಳಲಿವೆ, ಈಗ ಈ ಹಳೆಯ ಪ್ರಪಂಚದ ವಿನಾಶವಾಗಲಿದೆ. ತಂದೆಯು ನಿರಾಕಾರನಾಗಿದ್ದಾರೆ, ಅವರು ಶಿಕ್ಷಕನಾಗಿ ನಾವು ಸಾಲಿಗ್ರಾಮಗಳಿಗೆ ಓದಿಸುತ್ತಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಆ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನಾನು ಪುನಃ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. 5000 ವರ್ಷಗಳ ಮೊದಲೂ ಸಹ ನೀವು ಸ್ವರ್ಗದ ಮಾಲೀಕರಾಗಿದ್ದಿರಿ. ನೆನಪಿದೆಯಲ್ಲವೆ. ಸಂಗಮದಲ್ಲಿಯೇ ನಿಮ್ಮನ್ನು ಆ ರೀತಿ ಮಾಡಿದ್ದೆನು, ಈಗ ಪುನಃ ನಿಮ್ಮನ್ನು ಮನುಷ್ಯರಿಂದ ದೇವತೆ, ವೈಕುಂಠ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನಿಮಗೆ ಈ ಆಸ್ತಿಯನ್ನು ಕೊಟ್ಟಿದ್ದೆನು, ನಂತರ ನೀವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು. ಈಗ ನಿಮ್ಮ 84 ಜನ್ಮಗಳು ಮುಗಿಯಿತು. ನಾನೀಗ ಬಂದಿದ್ದೇನೆ, ನೀವು ಪುನಃ ಮೊದಲನೇ ಜನ್ಮದಿಂದ ಪ್ರಾರಂಭ ಮಾಡಬೇಕಾಗಿದೆ. ನಾನು ನಿಮ್ಮ ತಂದೆ ನಿಮಗೆ ಓದಿಸುತ್ತೇನೆ ಅಂದಾಗ ತಂದೆಯು ಓದಿಸುವ ಶುಲ್ಕವನ್ನೂ ಮಕ್ಕಳಿಂದ ತೆಗೆದುಕೊಳ್ಳುವರೇ? ಮಕ್ಕಳಿಂದ ಶುಲ್ಕವನ್ನು ಹೇಗೆ ತೆಗೆದುಕೊಳ್ಳುವರು!! ಒಂದು ಪೈಸೆ ಶುಲ್ಕವನ್ನೂ ತೆಗೆದುಕೊಳ್ಳುವುದಿಲ್ಲ. ಎಷ್ಟು ದೂರ ಪರಮಧಾಮದಿಂದ ನಿಮಗೆ ಓದಿಸಲು ಬರುತ್ತೇನೆ. ಈ ನೌಕರಿ ಮಾಡಲು ನಿತ್ಯವೂ ಬರುತ್ತೇನೆ, ಯಾರಿಗಾದರೂ ನೌಕರಿಯು ಎಲ್ಲಿಯಾದರೂ ದೂರದಲ್ಲಿ ಇರುತ್ತದೆಯೆಂದರೆ ನಿತ್ಯವೂ ಹೋಗಿ ಬರುತ್ತಾರಲ್ಲವೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಜ್ಞಾನಸಾಗರನಾಗಿದ್ದಾರೆ, ಅವರು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಭಗವಾನುವಾಚ – ನಾನು ನಿರಾಕಾರ ಪರಮಾತ್ಮನಾಗಿದ್ದೇನೆ, ಶ್ರೀಕೃಷ್ಣನಲ್ಲ. ನೀವು ಯಾವ ಕೃಷ್ಣನನ್ನು ಭಗವಂತನೆಂದು ತಿಳಿದುಕೊಳ್ಳುತ್ತೀರೋ ಅವರು ಭಗವಂತನಾಗಲು ಸಾಧ್ಯವಿಲ್ಲ. ಕೃಷ್ಣನೂ ಸಹ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಭಗವಂತನಿಗೆ ತನ್ನದೇ ಆದ ಶರೀರವಿಲ್ಲ. ಹೇಗೆ ನೀವು ಆತ್ಮನಾಗಿದ್ದೀರೋ ಹಾಗೆಯೇ ಅವರೂ ಆತ್ಮನಾಗಿದ್ದಾರೆ ಆದರೆ ಕೇವಲ ಆತ್ಮನೆಂದು ಹೇಳಿದರೆ ಎಲ್ಲರ ಜೊತೆ ಸೇರಿ ಹೋಗುತ್ತಾರೆ ಆದ್ದರಿಂದ ನನ್ನನ್ನು ಪರಮ ಆತ್ಮನೆಂದು ಹೇಳುತ್ತಾರೆ. ಡ್ರಾಮಾನುಸಾರ ನಾನಾತ್ಮನ ಹೆಸರಾಗಿದೆ – ಶಿವ. ನಾನು ನಿರಾಕಾರನಾಗಿದ್ದೇನೆ, ನನ್ನನ್ನು ಶಿವ ತಂದೆ ಎಂತಲೇ ಕರೆಯುತ್ತಾರೆ. ನನ್ನ ಮೂಲ ಹೆಸರು ಒಂದೇ ಆಗಿದೆ ಆದರೆ ಭಿನ್ನ-ಭಿನ್ನ ಹೆಸರುಗಳನ್ನು ಇಟ್ಟಿದ್ದಾರೆ. ನನ್ನ ಹೆಸರು ರುದ್ರ ಎಂದಲ್ಲ. ಕೃಷ್ಣನು ಯಾವುದೇ ಯಜ್ಞವನ್ನು ರಚಿಸಲಿಲ್ಲ, ಇದೆಲ್ಲವೂ ಅಸತ್ಯವಾಗಿದೆ. ನಾನೇ ಬಂದು ನಿಮಗೆ ಸತ್ಯವನ್ನು ತಿಳಿಸುತ್ತೇನೆ, ನಿಮ್ಮನ್ನು ಸತ್ಯ-ಸತ್ಯ ನರನಿಂದ ನಾರಾಯಣನನ್ನಾಗಿ ಮಾಡಲು ಬಂದಿದ್ದೇನೆ, ನನ್ನ ಮನೆಯು ಬಹಳ ದೂರವಿದೆ. ಇಲ್ಲಿ ಬಂದು ಈ ಶರೀರದ ಮೂಲಕ ನಿಮಗೆ ಓದಿಸುತ್ತೇನೆ. ಇವರಲ್ಲಿ (ಬ್ರಹ್ಮಾ) ನಾನು ಇಡೀ ದಿನ ಕುಳಿತುಕೊಳ್ಳುವುದಿಲ್ಲ, ಸುತ್ತಾಡುತ್ತಾ ಇರುತ್ತೇನೆ. ನನ್ನ ನಿಂದನೆ ಮಾಡುವ ಕಾರಣ ನೀವು ಬಹಳ ದುಃಖಿ, ಮಹಾನ್ ಪತಿತರಾಗಿ ಬಿಟ್ಟಿದ್ದೀರಿ. ಬ್ರಹ್ಮನಿಗೂ ಸಹ ಕೆಲವರು ಆದಿದೇವ, ಕೆಲವರು ಆಡಂ, ಇನ್ನೂ ಕೆಲವರು ಮಹಾವೀರ ಎಂದು ಹೇಳುತ್ತಾರೆ, ನೀವು ಅವರಿಗೆ ಪ್ರಜಾಪಿತ ಎಂದು ಹೇಳುತ್ತೀರಿ. ನೀವು ನನ್ನನ್ನು ಅರ್ಧ ಕಲ್ಪದಿಂದ ನೆನಪು ಮಾಡಿದ್ದೀರಿ, ಆದ್ದರಿಂದ ನಾನು ಈ ಪರದೇಶದಲ್ಲಿ ಬರಬೇಕಾಯಿತು. ಎಲ್ಲರೂ ಪತಿತ, ದುಃಖಿಯಾಗಿದ್ದಾರೆ, ಅನಾಥರಾಗಿದ್ದಾರೆ, ದಣಿ-ದೋಣಿ ಯಾರೂ ಇಲ್ಲ. ಅನಾಥರಿಗೆ ಓದಿಸಲು ಸರ್ಕಾರವು ಶುಲ್ಕ ತೆಗೆದುಕೊಳ್ಳುವುದಿಲ್ಲ. ಇಲ್ಲಂತೂ ಇದು ಬಹಳ ದೊಡ್ಡ ಆತ್ಮಿಕ ಸರ್ಕಾರವಾಗಿದೆ. ಬೇಹದ್ದಿನ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ಎಷ್ಟೊಂದು ಜಪ-ತಪ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾರೆ. ಇದನ್ನು ಏಕೆ ಮಾಡುತ್ತೀರಿ ಎಂದು ಕೇಳಿದರೆ ಇದರಿಂದ ಭಗವಂತನ ಬಳಿ ತಲುಪುತ್ತೇವೆ ಎಂದು ಹೇಳುತ್ತಾರೆ. ಕೆಲವರು ಜಪ-ತಪ ಮಾಡುವುದರಿಂದ, ಇನ್ನೂ ಕೆಲವರು ಶಾಸ್ತ್ರಗಳನ್ನು ಓದುವುದರಿಂದ ತಲುಪುತ್ತೇವೆಂದು ತಿಳಿಯುತ್ತಾರೆ ಆದರೆ ತಂದೆಯು ಹೇಳುತ್ತಾರೆ, ಇದು ಸಾಧ್ಯವಿಲ್ಲ. ಭಕ್ತಿ ಮಾಡುತ್ತಾ-ಮಾಡುತ್ತಾ ನೀವು ಇನ್ನೂ ಪತಿತರಾಗಿ ಬಿಟ್ಟಿದ್ದೀರಿ. ರೆಕ್ಕೆಗಳು ಕತ್ತರಿಸಿ ಹೋಗಿವೆ, ನೀವು ಹಾರಲು ಸಾಧ್ಯವಿಲ್ಲ. ಈಗ ನಿಮ್ಮಲ್ಲಿ ಜ್ಞಾನದ ಎಣ್ಣೆಯನ್ನು ಹಾಕಬೇಕಾಗಿದೆ. ಎಣ್ಣೆ ಅಥವಾ ಪೆಟ್ರೋಲ್ ಮುಗಿದು ಹೋಗಿರುವ ಕಾರಣದಿಂದಲೇ ಆತ್ಮ ಜ್ಯೋತಿಯು ನಂದಿ ಹೋಗಿದೆ, ಪುನಃ ನಾನು ಬಂದು ತುಂಬಿಸುತ್ತೇನೆ.

ನೀವು ತಿಳಿದುಕೊಂಡಿದ್ದೀರಿ, ತಂದೆಯು ಬಂದಿದ್ದಾರೆ. ಇಲ್ಲಿ ನೀವು ಖುಷಿಯಲ್ಲಿರುತ್ತೀರಿ, ಮನೆಗೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತೀರಿ. ನಿಮ್ಮಿಂದ ಈ ವಿದ್ಯೆಗಾಗಿ ನಾನು ಶುಲ್ಕವನ್ನೂ ಪಡೆಯುವುದಿಲ್ಲ. ಈ ಹಿಡಿ ಅವಲಕ್ಕಿಯನ್ನು ಕೊಡುತ್ತೇವೆಂದು ನೀವು ಹೇಳುತ್ತೀರಿ. ಹಿಡಿ ಅವಲಕ್ಕಿಯನ್ನಂತೂ ನೀವು ಭಕ್ತಿಮಾರ್ಗದಲ್ಲಿಯೂ ಕೊಡುತ್ತಾ ಬಂದಿದ್ದೀರಿ, ಅದಕ್ಕೆ ಪ್ರತಿಫಲವು ನಿಮಗೆ ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಈಗಂತೂ ನೀವು ತಿಳಿದುಕೊಂಡಿದ್ದೀರಿ, ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ, ಉಚಿತವಾಗಿ ಓದಿಸುತ್ತಾರೆ ಏಕೆಂದರೆ ಇವರ ಬಳಿ ಏನೂ ಇಲ್ಲವೆಂದು ಇವರಿಗೆ ಗೊತ್ತಿದೆ. ಅಂದಮೇಲೆ ತಂದೆಯು ನಿಮ್ಮಿಂದ ಏನನ್ನಾದರೂ ತೆಗೆದುಕೊಳ್ಳುವರೇ! ಆ ವಿದ್ಯೆಯಲ್ಲಂತೂ ಎಷ್ಟೊಂದು ಖರ್ಚು ಮಾಡಬೇಕಾಗುತ್ತದೆ, ಎಷ್ಟೊಂದು ಪರೀಕ್ಷೆಗಳನ್ನು ತೇರ್ಗಡೆ ಮಾಡಬೇಕಾಗುತ್ತದೆ, ನಾನಂತೂ ಒಂದೇ ವಿದ್ಯೆಯನ್ನು ಓದಿಸುತ್ತೇನೆ. ಶಾಲೆಯಲ್ಲಿ ಯಾರು ಬರತೊಡಗುವರೋ ಅವರನ್ನು ಸೇರಿಸಿಕೊಳ್ಳುತ್ತಾ ಹೋಗುತ್ತೇನೆ. ಯಾರು ತಡವಾಗಿ ಬರುವರೋ ಅವರು ಸ್ವಲ್ಪ ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಅದಕ್ಕೆ ಬದಲಾಗಿ ತಡವಾಗಿ ಬರುವವರಿಗೆ ಇನ್ನೂ ಒಳ್ಳೆಯ ಅಂಶಗಳು ಸಿಗುತ್ತವೆ. ಯಾರು ಬೇಗ ಬೇಗ ಓದುವರೋ ಅವರಿಗೆ ಏನೂ ನಷ್ಟವಿಲ್ಲ. ಹೊಸ-ಹೊಸ ಒಳ್ಳೆಯ ಮಾತುಗಳು ಸಿಗುವುದರಿಂದ ಹಳಬರಿಗಿಂತಲೂ ಮುಂದೆ ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ – ಯಾರು ಆರಂಭದಲ್ಲಿ ಬಂದರೋ ಅವರು ಅನೇಕರು ಬಿಟ್ಟು ಹೋದರು. ನೀವು ತಡವಾಗಿ ಬಂದಿದ್ದೇ ಒಳ್ಳೆಯದಾಯಿತು. ನಿಮಗೆ ಅತಿ ಗುಹ್ಯ ಮಾತುಗಳು ಸಿಗುತ್ತಿವೆ. ತಂದೆಯು ಹೇಳುತ್ತಾರೆ – ಲೌಕಿಕ ವಿದ್ಯೆಯನ್ನೂ ಓದಿರಿ, ಶರೀರ ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರಗಳನ್ನೂ ಮಾಡಿರಿ. ಕೇವಲ ನನ್ನನ್ನು ನೆನಪು ಮಾಡಿ ಮತ್ತು ಚಕ್ರವನ್ನು ನೆನಪು ಮಾಡಿ. ಇದನ್ನು ಮರೆಯಬಾರದು. ಇದನ್ನಂತೂ ತಿಳಿದುಕೊಂಡಿದ್ದೀರಲ್ಲವೆ – ನಮ್ಮದು ಈಗ 84 ಜನ್ಮಗಳ ಅಂತ್ಯವಾಗಿದೆ.

ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೆನಪಂತೂ ನೀವು ತಂದೆಯನ್ನೂ ಮಾಡುತ್ತೀರಿ, ಪತಿಯನ್ನೂ ನೀವು ನೆನಪು ಮಾಡುತ್ತೀರಿ. ನಾನೀಗ ನಿಮಗೆ ಪತಿಯರಿಗೂ ಪತಿ, ತಂದೆಯರಿಗೂ ತಂದೆಯಾಗಿದ್ದೇನೆ. ಶಿಕ್ಷಕನೂ ಆಗಿದ್ದೇನೆ, ನಾನು ನಿಮ್ಮ ಸರ್ವಸ್ವವೂ ಆಗಿದ್ದೇನೆ, ಸುಖ ಕೊಡುವವನೂ ಆಗಿದ್ದೇನೆ. ಆ ಪತಿತ ಸಂಬಂಧಿಕರು ಮೊದಲಾದವರು ನಿಮಗೆ ದುಃಖವನ್ನೇ ಕೊಡುತ್ತಾರೆ. ಸತ್ಯಯುಗದಲ್ಲಿ ಯಾರು ಯಾರಿಗೂ ದುಃಖ ಕೊಡುವುದಿಲ್ಲ. ನಾನೀಗ ಸತ್ಯಯುಗದ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದೇನೆ. ಈ ಸಂಗಮದಲ್ಲಿಯೇ ತಂದೆಯಿಂದ ನಾವು ಆಸ್ತಿಯನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ನೀವೀಗ ಎಷ್ಟು ಓದುತ್ತೀರೋ ಅಷ್ಟು ಪಡೆಯುತ್ತೀರಿ. ವಿದ್ಯೆಯೂ ಅತಿ ಸಹಜವಾಗಿದೆ, ಇದು ಸಹಜ ಜ್ಞಾನ ಸಹಜ ನೆನಪಾಗಿದೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ, ನಾನು ನಿಮ್ಮೆಲ್ಲರನ್ನೂ ಕರೆದುಕೊಂಡು ಹೋಗಲು ಬಂದಿದ್ದೇನೆ, ಆದ್ದರಿಂದ ನನಗೆ ಕಾಲರ ಕಾಲ ಮಹಾಕಾಲನೆಂದು ಹೇಳುತ್ತಾರೆ. ಇವರನ್ನು ಕಾಲವು ಕಬಳಿಸಿತು ಎಂಬ ಮಾತನ್ನೂ ಹೇಳುತ್ತಾರೆ. ಕಾಲವು ಶರೀರವನ್ನು ಕಬಳಿಸುತ್ತದೆ, ಆತ್ಮವನ್ನಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ಪಾತ್ರವನ್ನು ಅಭಿನಯಿಸುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಒಂದೇ ಪೆಟ್ಟಿನಿಂದ ಎಲ್ಲರೂ ಸಮಾಪ್ತಿ ಆಗಿ ಬಿಡುವರು. ಇಂತಹ ಮೃತ್ಯುವಾಗುವುದು ಯಾರು ಯಾರಿಗಾಗಿಯೂ ಅಳುವುದಿಲ್ಲ. ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಯಾವಾಗ ಪುನರ್ಜನ್ಮವನ್ನು ಮತ್ತೆ-ಮತ್ತೆ ದುಃಖದ ಪ್ರಪಂಚದಲ್ಲಿಯೇ ತೆಗೆದುಕೊಳ್ಳುವರೋ ಆಗಲೇ ಅಳುತ್ತಾರೆ. ನೀವು ಏತಕ್ಕಾಗಿ ತಂದೆಯನ್ನು ಕರೆಯುತ್ತೀರೆಂದರೆ ಬಾಬಾ, ನಮ್ಮನ್ನು ನಿಮ್ಮ ಜೊತೆ ಕರೆದುಕೊಂಡು ಹೋಗಿರಿ ಎಂದು. ಆದ್ದರಿಂದ ಈಗ ತಂದೆಯು ಬಂದಿದ್ದಾರೆ, ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ವಿನಾಶವಾದಾಗ ಎಲ್ಲರೂ ಮರಣ ಹೊಂದುವರು. ಯಾರೂ ಉಳಿಯುವುದಿಲ್ಲ. ಸರ್ಕಾರವು ತನ್ನ ಯೋಜನೆಯನ್ನು ಮಾಡುತ್ತಿವೆ. ಮನುಷ್ಯ ಸೃಷ್ಟಿಯಂತೆ ಹೆಚ್ಚುತ್ತಲೇ ಹೋಗುತ್ತಿದೆ. ಚಿಕ್ಕ-ಚಿಕ್ಕ ರೆಂಬೆಗಳಲ್ಲಿಯೂ ಇಷ್ಟೊಂದು ಎಲೆಗಳು ಬರುತ್ತಾ ಇರುತ್ತವೆ. ವೃಕ್ಷವು ಬೆಳೆಯಲೇಬೇಕಾಗಿದೆ ಆದರೆ ಅದಕ್ಕೆ ಆಯಸ್ಸು ಇದೆ. ಕಲ್ಪವೃಕ್ಷದ ಆಯಸ್ಸು ಲಕ್ಷಾಂತರ ವರ್ಷಗಳಿರಲು ಸಾಧ್ಯವಿಲ್ಲ. ಈಗ ತಂದೆಯು ನಿಮ್ಮನ್ನು ಪೂಜ್ಯ ದೇವಿ-ದೇವತೆಗಳನ್ನಾಗಿ ಮಾಡಲು ಓದಿಸುತ್ತಿದ್ದಾರೆ. ಮೊಟ್ಟ ಮೊದಲು ತಂದೆಯು ನಿಮಗೇ ಸಿಗುತ್ತಾರೆ, ಅನ್ಯ ಧರ್ಮದವರಂತೂ ಕೊನೆಯಲ್ಲಿ ಬರುತ್ತಾರೆ. ನೀವು ಸತ್ಯಯುಗದಲ್ಲಿ ಬರುತ್ತೀರಿ, ನಿಮಗೇ ಓದಿಸುತ್ತೇನೆ. ಮಕ್ಕಳೇ, ಪಾವನ ಪ್ರಪಂಚದಲ್ಲಿ ಹೋಗಬೇಕೆಂದರೆ ವಿಕಾರದಲ್ಲಿ ಹೋಗಬೇಡಿ ಎಂದು ಹೇಳುತ್ತೇನೆ. ಆದರೂ ಸಹ ನೀವೇಕೆ ಪಾಲಿಸುವುದಿಲ್ಲ. ವಿಕಾರವಿಲ್ಲದೆ ನೀವು ಇರಲು ಸಾಧ್ಯವಿಲ್ಲವೆ? ನನ್ನ ಮತದಂತೆ ನಡೆಯದಿದ್ದರೆ ಶ್ರೇಷ್ಠ ಮತವನ್ನು ಪಡೆಯುವುದಿಲ್ಲ. ಕೃಷ್ಣ ಪುರಿಯಲ್ಲಿ ಹೋಗುವುದೇ ನಿಮ್ಮ ಆಸೆಯಾಗಿತ್ತು ಅಂದಮೇಲೆ ಕೃಷ್ಣನ ರಾಜಧಾನಿಯಲ್ಲಿ ಬರುವಿರೋ ಅಥವಾ ಪ್ರಜೆಗಳಲ್ಲಿಯೋ? ಕೃಷ್ಣನ ಜೊತೆ ರಾಜಕುಮಾರ-ಕುಮಾರಿಯರೇ ಆಟವಾಡುತ್ತಾರೆ, ಪ್ರಜೆಗಳು ಆಟವಾಡುವರೇ? ಈ ಮಮ್ಮಾ-ಬಾಬಾರವರೂ ಓದುತ್ತಿದ್ದಾರೆ. ನಿಮಗೆ ತಿಳಿದಿದೆ, ಈ ರಾಧೆ-ಕೃಷ್ಣ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ರಾಜಧಾನಿಯಲ್ಲಿ ಬರುವವರದೇ ಮಾಲೆಯಾಗುತ್ತದೆಯಲ್ಲವೆ. 8 ಮಣಿಗಳ ಮಾಲೆಯಲ್ಲಾದರೂ ಬನ್ನಿ. 8ರಲ್ಲಿ ಇಲ್ಲದಿದ್ದರೆ 108ರಲ್ಲಿ ಬನ್ನಿ, ಕೊನೆಪಕ್ಷ 16,108ರ ಮಾಲೆಯಲ್ಲಾದರೂ ಬನ್ನಿರಿ. ಇದು ರಾಜಯೋಗವಾಗಿದೆ, ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಮನೆಯ ಸದಸ್ಯರಿಗೂ ತಿಳಿಸಿರಿ. ತಂದೆಯು ಅನ್ಯರಿಗೆ ತಿಳಿಸುವುದಕ್ಕಾಗಿ ನಿಮಗೆ ತಿಳಿಸಿಕೊಡುತ್ತಾರೆ. ಹಳೆಯ ಪ್ರಪಂಚದ ವಿನಾಶವಾಗಲೇಬೇಕಾಗಿದೆ. ಮಹಾಭಾರತ ಯುದ್ಧವು ಪ್ರಸಿದ್ಧವಾಗಿದೆ, ಆ ಸಮಯದಲ್ಲಿ ಭಗವಂತನು ಬಂದಿದ್ದರು, ಭಗವಂತನೇ ಬಂದು ರಾಜಯೋಗವನ್ನು ಕಲಿಸಿದ್ದರು, ಸ್ವರ್ಗದ ಸ್ಥಾಪನೆ ಮತ್ತು ನರಕದ ವಿನಾಶವಾಯಿತು. ಇದು ಆ ಸಮಯವೇ ಆಗಿದೆ. ಪುನಃ ರಾಜಧಾನಿಯು ಸ್ಥಾಪನೆಯಾಗುವುದು. ಸತ್ಯಯುಗದಲ್ಲಿ ಮತ್ತ್ಯಾವ ಧರ್ಮವೂ ಇರುವುದಿಲ್ಲ. ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಕ್ರಿಶ್ಚಿಯನ್ನರು ಇಲ್ಲಿಂದಲೇ ಸಾಹುಕಾರರಾಗಿದ್ದಾರೆ. ಸೋಮನಾಥ ಮಂದಿರದಿಂದಲೂ ಎಷ್ಟೊಂದು ಸಂಪತ್ತನ್ನು ಒಂಟೆಗಳ ಮೇಲೆ ತುಂಬಿಸಿಕೊಂಡು ಹೋದರು. ಇದಂತೂ ಒಂದು ಮಂದಿರದ ಮಾತಾಗಿದೆ. ಭಾರತದಲ್ಲಿ ಅನೇಕ ಮಂದಿರಗಳಿತ್ತು, ತಂದೆಯು ಇಡೀ ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ. ನಾನು ಬೀಜ ಮೇಲಿದ್ದೇನೆ, ಇದು ತಲೆ ಕೆಳಕಾದ ವೃಕ್ಷವಾಗಿದೆ. ನಾನು ಜ್ಞಾನಪೂರ್ಣನಾಗಿದ್ದೇನೆ. ಪತಿತ-ಪಾವನ ಬನ್ನಿ ಎಂದು ನೀವು ನನ್ನನ್ನು ಕರೆಯುತ್ತೀರಿ ಮತ್ತೆ ನಾಮ-ರೂಪದಿಂದ ಭಿನ್ನ ಎಂದು ಹೇಳಿ ಬಿಡುತ್ತೀರಿ. ರಾವಣನು ಎಲ್ಲರನ್ನೂ ಬುದ್ಧಿಹೀನರನ್ನಾಗಿ ಮಾಡಿ ಬಿಟ್ಟಿದ್ದಾನೆ. ನಮ್ಮ ತಂದೆ ಯಾರು? ಈ ಚಕ್ರವು ಹೇಗೆ ಸುತ್ತುತ್ತದೆ? ಎಂದು ಈಗ ನಿಮಗೆ ಸ್ಮೃತಿ ಬಂದಿದೆ. ಎಲ್ಲರ ತಿಳುವಳಿಕೆಯು ಒಂದೇ ರೀತಿ ಇರುವುದಿಲ್ಲ. ಒಬ್ಬರದು ಇನ್ನೊಬ್ಬರಿಗೆ ಹೋಲುವುದಿಲ್ಲ. ಒಬ್ಬರ ಲಕ್ಷಣಗಳು ಇನ್ನೊಬ್ಬರಿಗೆ ಹೋಲುವುದಿಲ್ಲ. ಈಗ ನೀವು ಮಕ್ಕಳು ತಂದೆಗೆ ಬಲಿಹಾರಿಯಾಗಬೇಕಲ್ಲವೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ನಿಮಗೆ ತಿಳಿದಿದೆ, ಇವರು ಶುಲ್ಕವೇನನ್ನೂ ಪಡೆಯುವುದಿಲ್ಲ, ಕವಡೆಯೂ ಖರ್ಚಿಲ್ಲದೆ ನಿಮಗೆ 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಪ್ರಾಪ್ತಿಯಾಗುತ್ತದೆ. ನೀವು ಭಕ್ತಿಮಾರ್ಗದಲ್ಲಿ ಈಶ್ವರಾರ್ಥವಾಗಿ ದಾನ ಮಾಡುತ್ತಿದ್ದಿರಿ, ಇದಕ್ಕಾಗಿ ಇನ್ನೊಂದು ಜನ್ಮದಲ್ಲಿ ಪ್ರತಿಫಲ ಸಿಗುತ್ತಿತ್ತು. ನಾನೀಗ ಡೈರೆಕ್ಟ್ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ, ಇದರಲ್ಲಿ ಏನೂ ಖರ್ಚಾಗುವುದಿಲ್ಲ. ಇಲ್ಲಿ ಮಕ್ಕಳದೇ ಖರ್ಚಾಗುತ್ತದೆ, ಖರ್ಚು ಮಾಡಬೇಕೆಂದು ಮಕ್ಕಳಿಗೇ ಹೇಳುತ್ತೇನೆ. ಖರ್ಚು ಮಾಡಿಸುವುದಕ್ಕಾಗಿ ಈ ಒಬ್ಬ ಬ್ರಹ್ಮನನ್ನೇ ಹಿಡಿದುಕೊಂಡೆನು. ಇವರಲ್ಲಿ ಪ್ರವೇಶ ಮಾಡಿ ಇವರಿಂದ ಎಲ್ಲವನ್ನೂ ಮಾಡಿಸಿದೆನು, ಇವರಂತೂ ಕೂಡಲೇ ಸಮರ್ಪಣೆಯಾಗಿ ಬಿಟ್ಟರು, ಇವರ ಬಳಿ ಏನಿತ್ತೋ ಎಲ್ಲವನ್ನೂ ಕೊಟ್ಟು ಬಿಟ್ಟರು. ತಂದೆಯು ಹೇಳಿದರು – ಈಗ ಎಲ್ಲವನ್ನೂ ಕೊಟ್ಟು ಬಿಡು ಎಂದಾಗ ನಂತರ ನಾನು ಇಂತಹ ರಾಜಕುಮಾರನಾಗುತ್ತೇನೆ, ಎಂಬುದನ್ನೂ ಸಾಕ್ಷಾತ್ಕಾರ ಮಾಡಿಸಿದರು. ನಾನೇ ಈಗ ಈ ರೀತಿಯಾಗುತ್ತೇನೆಂದು ವಿಚಾರ ಬಂದಿತು. ಇದೆಲ್ಲವೂ ವಿನಾಶವಾಗಲಿದೆ. ಕೋತಿಯ ತರಹ ಮುಷ್ಟಿಯನ್ನು ಹಿಡಿದಿಟ್ಟುಕೊಳ್ಳಬೇಡ, ಅದನ್ನು ಸ್ವಲ್ಪ ತೆರೆ ಎಂದು ತಂದೆಯು ಹೇಳಿದರು. ಕೂಡಲೇ ಎಲ್ಲವನ್ನೂ ತೆರೆದು ಸ್ವಾಹಾ ಮಾಡಿ ಬಿಟ್ಟರು, ಇಲ್ಲದಿದ್ದರೆ ಇಷ್ಟೊಂದು ಮಕ್ಕಳ ಪಾಲನೆ ಹೇಗೆ ನಡೆಯುತ್ತಿತ್ತು! ಹಣಕ್ಕಾಗಿ ಇವರೊಬ್ಬರನ್ನೇ ಹಿಡಿದುಕೊಂಡೆನು, ನೀವು ಮಕ್ಕಳ ಭಟ್ಟಿಯು ಆಗಬೇಕಿತ್ತು, ಶಾಲೆಯೂ ಆಗಿತ್ತು. ನೀವೀಗ ಬುದ್ಧಿವಂತರಾಗಿ ಮತ್ತೆ ಅನ್ಯರಿಗೂ ಓದಿಸುತ್ತೀರಿ. ನೀವು ಅನೇಕರ ಕಲ್ಯಾಣ ಮಾಡುತ್ತೀರಿ. ತಂದೆಯು ಕಲ್ಯಾಣಕಾರಿ ಆಗಿದ್ದಾರೆ, ಎಲ್ಲರನ್ನೂ ನರಕದಿಂದ ತೆಗೆದು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಈಗ ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಪ್ರಜೆಗಳಿಗಾಗಿಯೂ ಪ್ರದರ್ಶನಿ ಮೊದಲಾದುವುಗಳ ಯುಕ್ತಿಯನ್ನು ರಚಿಸುತ್ತಾ ಇರುತ್ತೀರಿ. ಅನೇಕ ಪ್ರಜೆಗಳು ತಯಾರಾಗುತ್ತಾ ಹೋಗುವರು. ರಾಜ-ರಾಣಿಯು ಕೆಲವರೇ ಇರುತ್ತಾರೆ, ಪ್ರಜೆಗಳು ಕೋಟ್ಯಾಂತರ ಅಂದಾಜಿನಲ್ಲಿ ಇರುತ್ತಾರಲ್ಲವೆ. ಅಲ್ಲಿ ಯಾವುದೇ ಜಗಳ-ಕಲಹದ ಮಾತಿಲ್ಲ. ಮಕ್ಕಳಿಗೆ ಗೊತ್ತಿದೆ, ಈಗ ಮೃತ್ಯು ಸನ್ಮುಖದಲ್ಲಿ ನಿಂತಿದೆ. ಎಷ್ಟು ಯೋಗದಲ್ಲಿ ಇರುತ್ತೀರೋ ಅಷ್ಟು ಪಾಪಾತ್ಮರಿಂದ ಪುಣ್ಯಾತ್ಮರಾಗುತ್ತೀರಿ, ಮತ್ತ್ಯಾವುದೇ ಉಪಾಯವಿಲ್ಲ. ಸುಪುತ್ರರು ತಂದೆ-ತಾಯಿಯನ್ನು ಫಾಲೋ ಮಾಡುತ್ತಾರೆ, ತಂದೆಯು ಪಾವನರಾಗಿ ಮಕ್ಕಳು ಆಗದೇ ಇದ್ದರೆ ಅವರು ಕುಪುತ್ರರಾದರಲ್ಲವೆ. ಇದರಲ್ಲಿ ನೀವು ನಷ್ಟಮೋಹಿಗಳು ಆಗಬೇಕಗುತ್ತದೆ. ನನ್ನವರು ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಆಸ್ತಿಯೂ ಅವರಿಂದಲೇ ಸಿಗುವುದು. ಈಗ ತಂದೆಯಿಂದ ಹೊಸ ಪ್ರಪಂಚದ ಆಸ್ತಿಯನ್ನು ಪಡೆಯಬೇಕಾಗಿದೆ, ಅಂದಮೇಲೆ ಪತಿತರಾಗಬೇಡಿ. ಪಾವನರಾಗದೇ ಹೊಸ ಪ್ರಪಂಚದಲ್ಲಿ ಹೋಗಲು ಸಾಧ್ಯವಿಲ್ಲ. ಜನ್ಮ-ಜನ್ಮಾಂತರದಿಂದ ಪಾಪ ಮಾಡಿದ್ದೀರಿ, ಅದರ ಶಿಕ್ಷೆಯನ್ನೂ ಅನುಭವಿಸಬೇಕಾಗಿದೆ. ಹೇಗೆ 63 ಜನ್ಮಗಳ ಪಾಪದ ಶಿಕ್ಷೆಯು ಸಿಗುತ್ತದೆ. ಗರ್ಭ ಜೈಲಿನಲ್ಲಿಯೂ ಶಿಕ್ಷೆಗಳನ್ನು ಅನುಭವಿಸುತ್ತಾರೆ. ಸತ್ಯಯುಗದಲ್ಲಿ ಯಾವುದೇ ಜೈಲು ಇತ್ಯಾದಿಗಳು ಇರುವುದಿಲ್ಲ. ಅದು ಸ್ವರ್ಗವಾಗಿದೆ. ಈಗ ತಂದೆಯು ಸಾಧಾರಣ ತನುವಿನಲ್ಲಿ ಬಂದಿದ್ದಾರೆ ಆದ್ದರಿಂದ ತಂದೆಯನ್ನು ಗುರುತಿಸುವುದಿಲ್ಲ. ತಂದೆಯ ಜೊತೆ ಯೋಗವನ್ನು ಇಡುವುದರಿಂದಲೇ ಆತ್ಮ ಪಾವನವಾಗುವುದು. ತಂದೆಯು ಹೇಳುತ್ತಾರೆ – ನಾನು ಪತಿತ ಪ್ರಪಂಚದಲ್ಲಿ, ಪತಿತ ಶರೀರದಲ್ಲಿ ಬಂದಿದ್ದೇನೆ ನಂತರ ಇವರನ್ನು ನಂಬರ್ವನ್ ಪಾವನರನ್ನಾಗಿ ಮಾಡುತ್ತೇನೆ. ತತ್ತ್ವಂ. ನೀವೂ ಪಾವನರಾಗುತ್ತೀರಿ. ನೀವು ತಂದೆಯ ಮಕ್ಕಳಾಗಿದ್ದೀರಿ, ಪ್ರಜಾಪಿತ ಬ್ರಹ್ಮನಿಗೂ ಮಕ್ಕಳಾಗಿದ್ದೀರಿ ಆದ್ದರಿಂದ ಬಾಪ್ದಾದಾ ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ಈಗ ಸಮಯವು ಬಹಳ ಕಡಿಮೆಯಿದೆ, ಶರೀರದ ಮೇಲೆ ಭರವಸೆಯಿಲ್ಲ. ತಂದೆಯನ್ನು ನೆನಪು ಮಾಡುತ್ತಾ ಇರಿ, ಸ್ವದರ್ಶನ ಚಕ್ರಧಾರಿಗಳಾಗಿ. ಇಡೀ ದಿನ ಇದೇ ಮಾತು ವಿಚಾರ ನಡೆಯುತ್ತಿರಲಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸಂಪೂರ್ಣ ನಷ್ಟಮೋಹಿಗಳಾಗಬೇಕಾಗಿದೆ. ಒಬ್ಬ ಶಿವ ತಂದೆಯ ಹೊರತು ಬೇರೆ ಯಾರೂ ಇಲ್ಲ, ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ಸುಪುತ್ರರಾಗಿ ಮಾತಾಪಿತರನ್ನು ಫಾಲೋ ಮಾಡಬೇಕಾಗಿದೆ.

2. ಕವಡೆಯೂ ಖರ್ಚಿಲ್ಲದೆ 21 ಜನ್ಮಗಳ ರಾಜ್ಯಭಾಗ್ಯವು ಸಿಗುತ್ತಿದೆ ಅಂದಮೇಲೆ ಬಹಳ ಲಗನ್ನಿನಿಂದ ವಿದ್ಯೆಯನ್ನು ಓದಬೇಕು. ಸ್ವದರ್ಶನ ಚಕ್ರಧಾರಿಗಳಾಗಬೇಕಾಗಿದೆ.

ವರದಾನ:-

ಯಾವ ಮಕ್ಕಳು ಸರ್ವ ಖಜಾನೆಗಳಿಂದ ಸದಾ ಸಂಪನ್ನವಾಗಿ ಇರುತ್ತಾರೆಯೋ ಅವರ ನಯನಗಳು ಅಥವಾ ಮಸ್ತಕದ ಮುಖಾಂತರ ಈಶ್ವರೀಯ ನಶೆಯು ಕಂಡು ಬರುವುದು. ಅವರ ಚಹರೆಯೇ ಸೇವೆಯನ್ನು ಮಾಡುತ್ತದೆ. ಯಾರ ಬಳಿ ಹೆಚ್ಚು ಅಥವಾ ಕಡಿಮೆ ಜಮಾ ಆಗಿರುತ್ತದೆಯೋ ಅದೂ ಸಹ ಅವರ ಚಹರೆಯಿಂದ ಕಾಣಿಸುವುದು. ಹೇಗೆ ಯಾರಾದರೂ ಶ್ರೇಷ್ಠ ಕುಲದವರಾಗಿದ್ದರೆ, ಅವರ ಚಹರೆಯಿಂದ ಆ ಹೊಳಪು ಮತ್ತು ನಶೆಯು ಕಾಣಿಸುತ್ತದೆಯೋ ಹಾಗೆಯೇ ತಮ್ಮ ಚಹರೆಯು ಪ್ರತೀ ಸಂಕಲ್ಪ, ಪ್ರತೀ ಕರ್ಮವನ್ನು ಸ್ಪಷ್ಟ ಮಾಡುತ್ತದೆ, ಹೀಗಾದಾಗ ಸತ್ಯ ಸೇವಾಧಾರಿ ಎಂದು ಹೇಳಲಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *