17 October 2021 KANNADA Murli Today | Brahma Kumaris

Read and Listen today’s Gyan Murli in Kannada

October 16, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಮೂರು ಸಂಬಂಧಗಳ ಸಹಜ ಮತ್ತು ಶ್ರೇಷ್ಠ ಪಾಲನೆ

♫ ಕೇಳು ಇಂದಿನ ಮುರ್ಲಿ (audio)➤

ಇಂದು ವಿಶ್ವ ಸ್ನೇಹಿ ಬಾಪ್ದಾದಾ ನಾಲ್ಕಾರು ಕಡೆಯ ವಿಶೇಷ ತಂದೆಯ ಸ್ನೇಹಿ ಮಕ್ಕಳನ್ನು ನೋಡುತ್ತಿದ್ದಾರೆ. ತಂದೆಯ ಸ್ನೇಹ ಮತ್ತು ಮಕ್ಕಳ ಸ್ನೇಹ ಎರಡೂ ಒಂದು ಇನ್ನೊಂದಕ್ಕಿಂತಲೂ ಹೆಚ್ಚಾಗಿದೆ. ಸ್ನೇಹವು ಮನಸ್ಸಿಗೆ ಹಾಗೂ ತನುವಿಗೆ ಅಲೌಕಿಕ ರೆಕ್ಕೆಗಳನ್ನು ನೀಡಿ ಸಮೀಪ ಕರೆ ತರುತ್ತದೆ. ಸ್ನೇಹವು ಇಂತಹ ಆತ್ಮಿಕ ಆಕರ್ಷಣೆಯಾಗಿದೆ ಯಾವುದು ಮಕ್ಕಳನ್ನು ತಂದೆಯ ಕಡೆ ಆಕರ್ಷಣೆ ಮಾಡಿ ಮಿಲನ ಮಾಡಲು ನಿಮಿತ್ತನಾಗಿ ಬಿಡುತ್ತದೆ. ಮಿಲನದ ಮೇಳವು ಹೃದಯದಿಂದ ಇರಬಹುದು, ಸಾಕಾರ ಶರೀರದಿಂದ ಇರಬಹುದು, ಎರಡೂ ಅನುಭವಗಳು ಸ್ನೇಹದ ಆಕರ್ಷಣೆಯಿಂದಲೇ ಆಗುತ್ತದೆ. ಆತ್ಮಿಕ ಪರಮಾತ್ಮನ ಸ್ನೇಹವೇ ತಾವು ಬ್ರಾಹ್ಮಣರಿಗೆ ದಿವ್ಯ ಜನ್ಮ ನೀಡಿತು. ಇಂದು ಈಗೀಗ ಆತ್ಮಿಕ ಸ್ನೇಹದ ಸರ್ಚ್ ಲೈಟ್ನ ಮೂಲಕ ನಾಲ್ಕಾರು ಕಡೆಯ ಬ್ರಾಹ್ಮಣ ಮಕ್ಕಳ ಸ್ನೇಹಮಯಿ ಚಹರೆಗಳನ್ನು ನೋಡುತ್ತಿದ್ದರು. ನಾಲ್ಕಾರು ಕಡೆಯ ಅನೇಕ ಮಕ್ಕಳ ಹೃದಯದ ಸ್ನೇಹದ ಗೀತೆಯನ್ನು ಹೃದಯದ ಮಿತ್ರನಾದ ಬಾಪ್ದಾದಾ ಕೇಳಿಸಿಕೊಳ್ಳುತ್ತಿದ್ದೇವೆ. ಬಾಪ್ದಾದಾ ಸರ್ವ ಸ್ನೇಹಿ ಮಕ್ಕಳಿಗೆ ಹತ್ತಿರವಿರಲಿ ಅಥವಾ ದೂರದಲ್ಲಿದ್ದರೂ ಹೃದಯಕ್ಕೆ ಸಮೀಪವಿರಬಹುದು, ಎಲ್ಲರಿಗೂ ಸ್ನೇಹಕ್ಕೆ ರಿಟರ್ನ್ ಆಗಿ ವರದಾನವನ್ನು ಕೊಡುತ್ತಿದ್ದೇವೆ –

“ಸದಾ ಅದೃಷ್ಟವಂತ ಭವ!, ಸದಾ ಪ್ರಸನ್ನಚಿತ್ತಭವ!, ಸದಾ ಖುಷಿಯ ಔಷಧಿಯ ಮೂಲಕ ಆರೋಗ್ಯವಂತ ಭವ!, ಸದಾ ಖುಷಿಯ ಖಜಾನೆಯಿಂದ ಸಂಪನ್ನ ಭವ’!”

ಆತ್ಮಿಕ ಸ್ನೇಹವು ದಿವ್ಯ ಜನ್ಮ ನೀಡಿತು, ಈಗ ವರದಾತ ಬಾಪ್ದಾದಾರವರ ವರದಾನಗಳಿಂದ ದಿವ್ಯ ಪಾಲನೆಯಾಗುತ್ತಿದೆ. ಪಾಲನೆಯು ಎಲ್ಲರಿಗೆ ಒಬ್ಬರ ಮೂಲಕ ಒಂದೇ ಸಮಯದಲ್ಲಿ ಒಂದೇ ಸಮನಾಗಿ ಸಿಗುತ್ತಿದೆ ಆದರೆ ಸಿಕ್ಕಿರುವ ಪಾಲನೆಯ ಧಾರಣೆಯು ನಂಬರ್ವಾರನ್ನಾಗಿ ಮಾಡಿ ಬಿಡುತ್ತದೆ. ಹಾಗೆ ನೋಡಿದರೆ ವಿಶೇಷವಾಗಿ ಮೂರು ಸಂಬಂಧಗಳ ಪಾಲನೆಯ ಅತಿ ಶ್ರೇಷ್ಠವೂ ಆಗಿದೆ ಮತ್ತು ಸಹಜವೂ ಆಗಿದೆ. ಬಾಪ್ದಾದಾರವರ ಮೂಲಕ ಆಸ್ತಿಯು ಸಿಗುತ್ತದೆ, ಆಸ್ತಿಯ ಸ್ಮೃತಿಯ ಮೂಲಕ ಪಾಲನೆಯಾಗುತ್ತದೆ – ಇದರಲ್ಲಿ ಯಾವುದೇ ಕಷ್ಟವಿಲ್ಲ. ಶಿಕ್ಷಕನ ಮೂಲಕ ಎರಡು ಶಬ್ಧಗಳ ವಿದ್ಯೆಯ ಪಾಲನೆಯಲ್ಲಿಯೂ ಯಾವುದೇ ಪರಿಶ್ರಮವಿಲ್ಲ. ಸದ್ಗುರುವಿನ ಮೂಲಕ ವರದಾನಗಳ ಅನುಭೂತಿಯ ಪಾಲನೆಯಲ್ಲಿಯೂ ಯಾವುದೇ ಪರಿಶ್ರಮವಿಲ್ಲ. ಆದರೆ ಕೆಲವು ಮಕ್ಕಳ ಧಾರಣೆಯ ನಿರ್ಬಲತೆಯ ಕಾರಣ ಸಮಯ-ಪ್ರತಿ ಸಮಯ ಸಹಜವನ್ನೂ ಕಷ್ಟವನ್ನಾಗಿ ಮಾಡಿಕೊಳ್ಳುವ ಹವ್ಯಾಸವಾಗಿ ಬಿಟ್ಟಿದೆ. ಪರಿಶ್ರಮ ಪಡುವ ಸಂಸ್ಕಾರವು ಸಹಜ ಅನುಭವ ಮಾಡುವುದರಿಂದ ಕಷ್ಟವನ್ನಾಗಿ ಮಾಡಿ ಬಿಡುತ್ತದೆ ಮತ್ತೆ ಕಷ್ಟವಾಗುವ ಕಾರಣ, ಧಾರಣೆಯ ನಿರ್ಬಲತೆಯ ಕಾರಣ ಪರವಶರಾಗಿ ಬಿಡುತ್ತಾರೆ. ಇಂತಹ ಪರವಶ ಮಕ್ಕಳ ಜೀವನ ಲೀಲೆಯನ್ನು ನೋಡಿ ಬಾಪ್ದಾದಾರವರಿಗೆ ಇಂತಹ ಮಕ್ಕಳ ಮೇಲೆ ದಯೆ ಬರುತ್ತದೆ. ಏಕೆಂದರೆ ತಂದೆಯ ಆತ್ಮಿಕ ಸ್ನೇಹದ ಗುರುತು ಇದೇ ಆಗಿದೆ – ತಂದೆಯು ಯಾವುದೇ ಮಗುವಿನ ಕಡಿಮೆಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ತನ್ನ ಪರಿವಾರದ ಕೊರತೆಯು ತನ್ನ ಕೊರತೆಯೆನಿಸುತ್ತದೆ. ಆದ್ದರಿಂದ ತಂದೆಗೆ ತಿರಸ್ಕಾರವಲ್ಲ, ಆದರೆ ದಯೆ ಬರುತ್ತದೆ. ಬಾಪ್ದಾದಾ ಕೆಲಕೆಲವೊಮ್ಮೆ ಮಕ್ಕಳ ಆದಿಯಿಂದ ಈಗಿನವರೆಗಿನ ಜನ್ಮ ಪತ್ರಿಕೆಯನ್ನೂ ನೋಡುತ್ತೇವೆ. ಕೆಲವು ಮಕ್ಕಳ ಜನ್ಮ ಪತ್ರಿಕೆಯಲ್ಲಿ ದಯೆಯೇ ದಯೆ ಇರುತ್ತದೆ ಮತ್ತು ಇನ್ನೂ ಕೆಲವರ ಜನ್ಮ ಪತ್ರಿಕೆಯು ಮಾರ್ಗದರ್ಶನ ನೀಡುವಂತದ್ದಾಗಿರುತ್ತದೆ. ತಮ್ಮ ಆದಿಯಿಂದ ಇಲ್ಲಿಯವರೆಗಿನ ಜನ್ಮ ಪತ್ರಿಕೆಯನ್ನು ಪರಿಶೀಲನೆ ಮಾಡಿಕೊಳ್ಳಿ. ತಮ್ಮನ್ನು ತಾವು ನೋಡಿಕೊಂಡು ಮೂರು ಸಂಬಂಧಗಳ ಪಾಲನೆಯ ಧಾರಣೆಯು ಸಹಜ ಮತ್ತು ಶ್ರೇಷ್ಠವಾಗಿದೆಯೇ ಎಂದು ಅರಿತುಕೊಳ್ಳಬಹುದು. ಏಕೆಂದರೆ ಸಹಜವಾಗಿ ನಡೆಯುವಿಕೆಯು ಎರಡು ಪ್ರಕಾರದ್ದಾಗಿದೆ – ಒಂದು ವರದಾನಗಳಿಂದ ಸಹಜ ಜೀವನ ಮತ್ತು ಇನ್ನೊಂದು ಅಲಕ್ಷ್ಯ ಜೀವನ. ಇದರಿಂದಲೂ ಸಹಜವಾಗಿ ನಡೆಯುತ್ತಾರೆ. ವರದಾನಗಳಿಂದ ಹಾಗೂ ಆತ್ಮಿಕ ಪಾಲನೆಯಿಂದ ಸಹಜವಾಗಿ ನಡೆಯುವಂತಹ ಆತ್ಮಗಳು ಎಚ್ಚರಿಕೆಯಿಂದಿರುತ್ತಾರೆ, ಉದಾಸೀನರಾಗಿರುವುದಿಲ್ಲ. ಆದರೆ ಅಟೆನ್ಶನ್ನ ಟೆನ್ಶನ್ ಇರುವುದಿಲ್ಲ. ಇಂತಹ ಸದಾ ಜಾಗೃತರಾಗುವ ಆತ್ಮಗಳಿಗೆ ಸಮಯ, ಸಾಧನ ಮತ್ತು ಪರಿಸ್ಥಿತಿಗಳ ಪ್ರಮಾಣ ಬ್ರಾಹ್ಮಣ ಪರಿವಾರದ ಜೊತೆ ತಂದೆಯ ವಿಶೇಷ ಸಹಾಯ ಸಹಯೋಗ ನೀಡುತ್ತದೆ. ಆದ್ದರಿಂದ ಎಲ್ಲವೂ ಸಹಜ ಅನುಭವವಾಗುತ್ತದೆ. ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿ – ಇವೆಲ್ಲಾ ಮಾತುಗಳು ನನ್ನ ಸಹಯೋಗಿಗಳಾಗಿದೆಯೇ? ಇವೆಲ್ಲಾ ಮಾತುಗಳ ಸಹಯೋಗವೇ ಸಹಜಯೋಗಿಗಳನ್ನಾಗಿ ಮಾಡಿ ಬಿಡುತ್ತದೆ, ಇಲ್ಲದಿದ್ದರೆ ಕೆಲವೊಮ್ಮೆ ಚಿಕ್ಕ ಪರಿಸ್ಥಿತಿ, ಸಾಧನ, ಸಮಯ, ಜೊತೆಗಾರರು ಭಲೆ ಇರುವೆಯ ಸಮಾನ ಇರುತ್ತದೆ. ಆದರೆ ಚಿಕ್ಕ ಇರುವೆಯೂ ಮಹಾರಥಿಯನ್ನೂ ಸಹ ಮೂರ್ಛಿತನನ್ನಾಗಿ ಮಾಡಿ ಬಿಡುತ್ತದೆ. ಮೂರ್ಛಿತ ಅರ್ಥಾತ್ ವರದಾನಗಳ ಸಹಜ ಪಾಲನೆಯ ಶ್ರೇಷ್ಠ ಸ್ಥಿತಿಯಿಂದ ಕೆಳಗೆ ಬೀಳಿಸಿ ಬಿಡುತ್ತದೆ. ಬಲವಂತ ಮತ್ತು ಪರಿಶ್ರಮ – ಇವೆರಡೂ ಮೂರ್ಛಿತರ ಚಿಹ್ನೆಯಾಗಿದೆ. ಅಂದಾಗ ಈ ವಿಧಿಯಿಂದ ತಮ್ಮ ಜನ್ಮ ಪತ್ರಿಕೆಯನ್ನು ಪರಿಶೀಲನೆ ಮಾಡಿಕೊಳ್ಳಿ, ಏನು ಮಾಡಬೇಕೆಂದು ತಿಳಿಯಿತೇ? ಒಳ್ಳೆಯದು.

ಸದಾ ಮೂರು ಸಂಬಂಧಗಳ ಪಾಲನೆಯಲ್ಲಿ ಬೆಳೆಯುವವರು, ಸದಾ ಸಂತುಷ್ಟ ಮಣಿಗಳಾಗಿ ಸಂತುಷ್ಟರಾಗಿರುವ ಮತ್ತು ಸಂತುಷ್ಟತೆಯ ಹೊಳಪನ್ನು ಹರಡುವವರು, ಸದಾ ತೀವ್ರ ಪುರುಷಾರ್ಥಿಗಳಾಗಿ ಸ್ವಯಂಗೆ ಮೊದಲ ಜನ್ಮದಲ್ಲಿ ಮೊದಲ ಅಧಿಕಾರವನ್ನು ಪ್ರಾಪ್ತಿ ಮಾಡಿಕೊಳ್ಳುವವವರು, ಇಂತಹ ಅದೃಷ್ಟವಂತ ಮಕ್ಕಳಿಗೆ ವರದಾತ ತಂದೆಯ ನೆನಪು-ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ವಾರ್ತಾಲಾಪ:

ಎಲ್ಲರೂ ದೂರ-ದೂರದಿಂದ ಬಂದಿದ್ದಾರೆ. ಬಹಳ ದೂರದಿಂದ ಅಂದರೆ ಬಾಪ್ದಾದಾರವರೇ ಬರುತ್ತಾರೆ. ತಾವು ಹೇಳುವಿರಾ – ನಮಗಂತು ಕಷ್ಟವಾಗುತ್ತದೆ. ಬಾಪ್ದಾದಾರವರೂ ಸಹ ಅಂದರೆ ಬೇಹದ್ದಿನಲ್ಲಿ ಇರುವವರು ಹದ್ದಿನಲ್ಲಿ ಪ್ರವೇಶವಾಗುವುದು – ಇದೂ ಸಹ ಭಿನ್ನ/ವಿಶೇಷವಾದ ಮಾತಾಗಿ ಬಿಡುತ್ತದೆ. ಆದರೂ ಲೋನ್ ತೆಗೆದುಕೊಳ್ಳಬೇಕಾಗುತ್ತದೆ. ತಾವುಗಳು ಟಿಕೆಟ್ ಪಡೆಯುತ್ತೀರಿ, ತಂದೆಯವರು ಲೋನ್ ತೆಗೆದುಕೊಳ್ಳುವರು. ಎಲ್ಲರಿಗೂ ವರದಾನವು ಸಿಕ್ಕಿರುವುದೆ? ಭಲೆ 7-8 ಕಡೆಗಳಿಂದ ಬಂದಿದ್ದೀರಿ ಆದರೆ ಪ್ರತಿಯೊಂದು ಜೋನನಿನವರಂತು ಇದ್ದೇ ಇರುತ್ತಾರೆ. ಆದ್ದರಿಂದ ಎಲ್ಲಾ ಜೋನನಿನವರೂ ಇಲ್ಲಿ ಹಾಜರಾಗಿದ್ದಾರೆ. ಇದರಲ್ಲಿ ವಿದೇಶದವರೂ ಇದ್ದಾರೆ ಮತ್ತು ದೇಶವಾಸಿಗಳೂ ಇದ್ದಾರೆ. ಅಂತರಾಷ್ಟ್ರೀಯ ಗ್ರೂಪ್ ಆಯಿತಲ್ಲವೆ. ಒಳ್ಳೆಯದು.

ತಮಿಳುನಾಡು ಗ್ರೂಪ್:

ಅತಿ ಶ್ರೇಷ್ಠವಾದ ಗ್ರೂಪ್ ತಮಿಳುನಾಡು ಆಗಿದೆ. ಇದರ ವಿಶೇಷತೆ ಏನಾಗಿದೆ? ಸ್ನೇಹದ ಪ್ರಕಂಪನಗಳನ್ನು ಕ್ಯಾಚ್ ಮಾಡುತ್ತಾರೆ. ತಂದೆಯೊಂದಿಗಿನ ಸ್ನೇಹವು ಅವಿನಾಶಿ ಲಿಫ್ಟ್ ಆಗಿ ಬಿಡುತ್ತದೆ. ಏಣಿ ಪ್ರಿಯವೇ ಅಥವಾ ಲಿಫ್ಟ್ ಪ್ರಿಯವೇ? ಏಣಿಯು ಪರಿಶ್ರಮ ಪಡುವುದಾಗಿದೆ, ಲಿಫ್ಟ್ನಿಂದ ಸಹಜವಾಗಿ ಬರಬಹುದು. ಅಂದಮೇಲೆ ಸ್ನೇಹದಲ್ಲಿ ಎಂದಿಗೂ ಹುಡುಗಾಟಿಕೆ ಮಾಡಬಾರದು, ಇಲ್ಲದಿದ್ದರೆ ಲಿಫ್ಟ್ ಸಿಕ್ಕಿಕೊಂಡು ಬಿಡುತ್ತದೆ. ಏಕೆಂದರೆ ಒಂದುವೇಳೆ ವಿದ್ಯುತ್ ಸ್ಥಗಿತಗೊಳ್ಳುತ್ತದೆ ಎಂದರೆ ಲಿಫ್ಟ್ನ ಗತಿಯೇನಾಗುವುದು? ವಿದ್ಯುತ್ ಸ್ಥಗಿತವಾಗುವುದರಿಂದ, ಸಂಪರ್ಕವು ಕಡಿತಗೊಳ್ಳುವುದರಿಂದ, ಸುಖದ ಅನುಭೂತಿಯೇನು ಆಗಬೇಕಾಗಿದೆಯೋ ಅದಾಗುವುದಿಲ್ಲ. ಅಂದರೆ ಸ್ನೇಹದಲ್ಲಿ ಹುಡುಗಾಟಿಕೆ ಇದ್ದರೆ ತಂದೆಯಿಂದ ಶಕ್ತಿ ಸಿಗುವುದಿಲ್ಲ, ನಂತರದಲ್ಲಿ ಲಿಫ್ಟ್ ಕೆಲಸ ಮಾಡುವುದಿಲ್ಲ. ಭಲೆ ಸ್ನೇಹ ಬಹಳ ಚೆನ್ನಾಗಿದೆ, ಇನ್ನೂ ಬಹಳ ಚೆನ್ನಾಗಿ ಮಾಡುತ್ತಿರಿ. ಇದಕ್ಕಾಗಿ ಈ ಲಿಫ್ಟ್ ನ ಗಿಫ್ಟ್ ಅನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು.

ಮೈಸೂರ್ ಗ್ರೂಪ್:

ಮೈಸೂರಿನ ವಿಶೇಷತೆ ಏನಾಗಿದೆ? ಬಾಪ್ದಾದಾರವರು ಮೈಸೂರ್ ನಿವಾಸಿ ಮಕ್ಕಳಿಗೆ “ಸಂಗಮಯುಗದ ಸೌಭಾಗ್ಯಶಾಲಿ ಋತುವಿನ ಫಲ”ದ ಗಿಫ್ಟ್ ಕೊಡುತ್ತಿದ್ದಾರೆ. ಸಂಗಮಯುಗದ ಫಲವೇನಾಗಿದೆ? ಋತುವಿನಲ್ಲಿ ಯಾವ ಫಲವು ಬರುತ್ತದೆ ಅದು ಮಧುರವಾಗಿ(ಸಿಹಿ)ರುತ್ತದೆ. ಋತುವಲ್ಲದಿರುವ ಸಮಯದ ಫಲವೆಷ್ಟಾದರೂ ಚೆನ್ನಾಗಿರಲಿ ಆದರೆ ರುಚಿಯಿರುವುದಿಲ್ಲ. ಅಂದಾಗ ಮೈಸೂರ್ ನಿವಾಸಿ ಮಕ್ಕಳು ಈಗೀಗ ಶ್ರೇಷ್ಠ ಕರ್ಮ ಮಾಡಿದರು ಮತ್ತು ಈಗೀಗ ಕರ್ಮದ ಪ್ರತ್ಯಕ್ಷಫಲವು ಸಿಕ್ಕಿತು, ಸಂಗಮಯುಗದ ಋತುವಿನ ಫಲ “ಪ್ರತ್ಯಕ್ಷ ಫಲ”ವಾಗಿದೆ. ಆದ್ದರಿಂದ ಸದಾ ತಮ್ಮನ್ನು ಇದೇ ನಶೆಯ ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ – ನಾವು ಸಂಗಮಯುಗದ ಋತುವಿನ ಪ್ರತ್ಯಕ್ಶಫಲವನ್ನು ಸೇವಿಸುವವರು, ಪ್ರಾಪ್ತಿ ಮಾಡಿಕೊಳ್ಳುವವರು ಆಗಿದ್ದೇವೆ. ಹಾಗೆ ನೋಡಿದರೆ ವೃದ್ಧಿಯೂ ಸಹ ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿಯೂ ಬಹಳ ಚೆನ್ನಾಗಿಯೇ ವೃದ್ಧಿಯಾಗುತ್ತಿದೆ.

ಈಸ್ಟರ್ನ್ ಜೋನ್ ಗ್ರೂಪ್:

ಈಸ್ಟ್ ನಿಂದ ಯಾವುದರ ಉದಯವಾಗುತ್ತದೆ? ಸೂರ್ಯನ ಉದಯವಾಗುತ್ತದೆ ಅಲ್ಲವೆ. ಆದ್ದರಿಂದ ಬಾಪ್ದಾದಾರವರು ಈಸ್ಟರ್ನ್ ಜೋನಿನವರಿಗೆ ಒಂದು ವಿಶೇಷವಾದ ಪುಷ್ಪವನ್ನು ಕೊಡುತ್ತಿದ್ದಾರೆ. ಅದು ವಿಶೇಷತೆಯ ಆಧಾರದ ಮೇಲಿದೆ. “ಸೂರ್ಯ ಕಾಂತಿ”ಯು ಸದಾ ಸೂರ್ಯನ ಸಕಾಶದಲ್ಲಿ ಅರಳುತ್ತಿರುತ್ತದೆ. ಮುಖವು ಸೂರ್ಯನ ಕಡೆಗೆ ತಿರುಗುತ್ತದೆ ಆದ್ದರಿಂದ ಸೂರ್ಯ ಮುಖ (ಸೂರ್ಯಕಾಂತಿ) ಎಂದು ಹೇಳಲಾಗುತ್ತದೆ ಹಾಗೂ ಅದರ ಚಹರೆಯನ್ನು ನೋಡಿದಾಗಲೂ ಸೂರ್ಯನ ಕಿರಣಗಳಂತೆ ಇರುತ್ತದೆ, ನಾಲ್ಕೂ ಕಡೆಗಳಲ್ಲಿಯೂ ಅದರ ರೆಕ್ಕೆಗಳು ಕಿರಣಗಳಂತೆ ಚಕ್ರದಂತೆ ಇರುತ್ತದೆ. ಅದೇರೀತಿ ತಾವು ಸದಾ ಜ್ಞಾನ ಸೂರ್ಯ ಬಾಪ್ದಾದಾರವರ ಸನ್ಮುಖದಲ್ಲಿರುವವರು, ಎಂದಿಗೂ ದೂರವಾಗುವವರಲ್ಲ. ಸದಾ ಸಮೀಪ ಮತ್ತು ಸದಾ ಸನ್ಮುಖದಲ್ಲಿ ಇರುವವರಿಗೆ ಹೇಳಲಾಗುತ್ತದೆ – ಸೂರ್ಯಕಾಂತಿ ಹೂವು. ಅಂದಮೇಲೆ ಸೂರ್ಯಕಾಂತಿ ಹೂವಿನಂತೆ ಸದಾ ಜ್ಞಾನ ಸೂರ್ಯನ ಪ್ರಕಾಶತೆಯಿಂದ ಸ್ವಯಂನ್ನು ಪ್ರಕಾಶಿತಗೊಳಿಸುವವರು ಹಾಗೂ ಅನ್ಯರನ್ನೂ ಪ್ರಕಾಶತೆಯಲ್ಲಿ ತರುವವರು – ಈ ವಿಶೇಷತೆ ಈಸ್ಟರ್ನ್ ಜೋನಿನವರದಾಗಿದೆ. ಜ್ಞಾನ ಸೂರ್ಯನು ಈಸ್ಟರ್ನ್ ಜೋನಿನಿಂದ ಪ್ರಗಟವಾಗಿದೆ, ಪ್ರವೇಶತೆಯಂತು ಆಯಿತಲ್ಲವೆ! ಅಂದಾಗ ಈಸ್ಟರ್ನ್ ಜೋನಿನವರು ಎಲ್ಲರಿಗೂ ತಮ್ಮ ರಾಜ್ಯದಲ್ಲಿ, ಹಗಲಿನಲ್ಲಿ ಕರೆ ತರುವವರು, ಪ್ರಕಾಶತೆಯಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ.

ಬನಾರಸ್ ಗ್ರೂಪ್:

ಬನಾರಸ್ನ ವಿಶೇಷತೆ ಏನಾಗಿದೆ? ಪ್ರತಿಯೊಬ್ಬರಲ್ಲಿ ಆತ್ಮಿಕ ಪ್ರಾಪ್ತಿಯನ್ನು ತುಂಬುವವರು, ಸರ್ವರಿಗೂ ಪರಮಾತ್ಮನ ಸ್ನೇಹದ, ಪ್ರೀತಿಯ ಪ್ರಾಪ್ತಿಯನ್ನು ಅನುಭವ ಮಾಡಿಸುವವರು ಏಕೆಂದರೆ ಯಾವಾಗ ತಂದೆಯ ಪ್ರೇಮದ ಪ್ರಾಪ್ತಿಯಲ್ಲಿ ಸಂಪನ್ನರಾಗಿ ಬಿಡುತ್ತಾರೆಯೋ, ಆಗ ಅನ್ಯ ಎಲ್ಲಾ ಪ್ರಾಪ್ತಿಗಳು ಸಪ್ಪೆ ಎನಿಸುತ್ತದೆ. ಆತ್ಮರುಗಳಲ್ಲಿ ಪರಮಾತ್ಮ-ಪ್ರೇಮದ ಪ್ರಾಪ್ತಿಯನ್ನು (ರುಚಿಯನ್ನು) ತುಂಬುವವರು, ಏಕೆಂದರೆ ಅಲ್ಲಿ ಭಕ್ತಿಯ ರುಚಿಯೂ ಸಹ ಬಹಳಷ್ಟಿದೆ. ಭಕ್ತಿಯ ರುಚಿಯಿರುವವರಿಗೆ ಪರಮಾತ್ಮ-ಪ್ರೇಮದ ರುಚಿಯ ಅನುಭವ ಮಾಡಿಸುವವರು ಆಗಿದ್ದೀರಿ. ಹೆಚ್ಚು ರುಚಿ ಸದಾ ಯಾವುದರಲ್ಲಿ ಇರುತ್ತದೆ? ಬನಾರಸ್ನವರು ತಿಳಿಸಿರಿ. ರಸಗುಲ್ಲಾ..ದಲ್ಲಿ. ನೋಡಿ- ಹೆಸರಿನಲ್ಲಿಯೇ ಮೊದಲು ರಸದಿಂದ ಆರಂಭವಾಗುತ್ತದೆ ಅಂದಮೇಲೆ ಸದಾ ಜ್ಞಾನದ ರಸಗುಲ್ಲಾ ಸೇವಿಸುವವರು ಮತ್ತು ಅನ್ಯರಿಗೂ ಸೇವನೆ ಮಾಡಿಸುವವರು. ಅಂದಾಗ ಸದಾ ಅಮೃತವೇಳೆಯಲ್ಲಿ ಮೊದಲು ಮನಸ್ಸಿಗೆ, ಬಾಯಿಗೆ ರಸಗುಲ್ಲಾದಿಂದ ಸಿಹಿ ಮಾಡುವ ಮತ್ತು ಅನ್ಯರಿಗೂ ಮನಸ್ಸಿನಿಂದ ಹಾಗೂ ಮುಖದಿಂದಲೂ ಮಧುರಗೊಳಿಸುವವರು. ಆದ್ದರಿಂದ ಬನಾರಸ್ನವರಿಗೆ “ರಸಗುಲ್ಲಾ” ಸಿಹಿಯನ್ನು ಕೊಡುತ್ತಿದ್ದೇವೆ.

ಬಾಂಬೆ ಗ್ರೂಪ್:

ಬಾಂಬೆಯವರಿಗೆ ಆರಂಭದಿಂದಲೂ ವರದಾನವು ಸಿಕ್ಕಿದೆ – ಕುಬೇರ ಅರ್ಥಾತ್ ಎಲ್ಲರನ್ನೂ ಸಾಹುಕಾರರನ್ನಾಗಿ ಮಾಡುವವರು. ಕುಬೇರನೆಂದರೆ ಯಾರು ಸದಾ ಧನದಿಂದ ಸಂಪನ್ನವಾಗಿರುತ್ತಾರೆ. ಬಾಂಬೆಯವರ ವಿಶೇಷತೆ ಆಗಿದೆ – “ಬಡವರನ್ನು ಸಾಹುಕಾರರನ್ನಾಗಿ ಮಾಡುವವರು” ಸದಾ ತಂದೆಯ ಟೈಟಲ್ ಇದೆ – ‘ಬಡವರ ಬಂಧು’. ಅಂದಮೇಲೆ ಬಾಪ್ದಾದಾರವರು ಬಾಂಬೆಯವರಿಗೂ ಇದೇ ಟೈಟಲ್ ಕೊಡುತ್ತಿದ್ದಾರೆ – “ಬಡವರ ಬಂಧು ತಂದೆಯ ಮಕ್ಕಳು, ಬಡವರನ್ನು ಸಾಹುಕಾರರನ್ನಾಗಿ ಮಾಡುವವರು” ಆದ್ದರಿಂದ ಸದಾ ತಮ್ಮನ್ನೂ ಸಹ ಖಜಾನೆಗಳಿಂದ ಸಂಪನ್ನ ಹಾಗೂ ಅನ್ಯರನ್ನೂ ಸಂಪನ್ನಗೊಳಿಸುವವರು. ಈ ವಿಶೇಷತೆಯು ಏಕಿದೆಯೆಂದರೆ, ಬಡವರ ಬಂಧು ತಂದೆಯ ಸಹಯೋಗಿ ಸಂಗಾತಿಯಾಗಿದ್ದೀರಿ. ಆದ್ದರಿಂದ ಬಾಂಬೆಯವರಿಗೆ ಈ ಟೈಟಲ್ ಕೊಡುತ್ತಿದ್ದೇವೆ. ಸಿಹಿಯನ್ನಲ್ಲ, ಟೈಟಲ್ ಕೊಡುತ್ತಿದ್ದೇವೆ.

ಕುಲ್ಲು-ಮನಾಲಿ ಗ್ರೂಪ್:

ಕುಲ್ಲು-ಮನಾಲಿಯ ವಿಶೇಷತೆ ಏನಾಗಿದೆ? ಕುಲ್ಲು-ಮನಾಲಿನಲ್ಲಿ ದೇವತೆಗಳ ಮೇಳವಾಗುತ್ತದೆ, ಆ ರೀತಿ ಮತ್ತೆಲ್ಲಿಯೂ ಆಗುವುದಿಲ್ಲ. ಹಾಗಾದರೆ ಕುಲ್ಲು ಮತ್ತು ಮನಾಲಿಯವರಿಗೆ ದೇವತೆಗಳ ಮಿಲನದ ಸ್ಥಾನವೆಂದು ಹೇಳಲಾಗುತ್ತದೆ. ಹಾಗಾದರೆ ದೇವತೆಗಳ ಅರ್ಥವಾಯಿತು – “ದಿವ್ಯ ಗುಣವುಳ್ಳವರು”. ದಿವ್ಯ ಗುಣಗಳ ಧಾರಣೆಯ ನೆನಪಾರ್ಥವು ದೇವತಾ ರೂಪವಾಗಿದೆ. ದೇವತೆಗಳ ಪ್ರೀತಿಯ, ಮಿಲನದ ಸಂಕೇತವು ಈ ಧರಣಿಯದಾಗಿದೆ ಆದ್ದರಿಂದ ಬಾಪ್ದಾದಾರವರು ಇಂತಹ ಧರಣಿಯ ನಿವಾಸಿ ಮಕ್ಕಳಿಗೆ, ವಿಶೇಷವಾಗಿ ದಿವ್ಯ ಗುಣಗಳ ಹೂ ಗುಚ್ಛವನ್ನು ಉಡುಗೊರೆಯಲ್ಲಿ ಕೊಡುತ್ತಿದ್ದಾರೆ. ಈ ದಿವ್ಯ ಗುಣಗಳ ಹೂ ಗುಚ್ಛದ ಮೂಲಕ ನಾಲ್ಕೂ ಕಡೆಗಳಲ್ಲಿ ಆತ್ಮ ಮತ್ತು ಪರಮಾತ್ಮನ ಮೇಳವನ್ನು ಮಾಡುತ್ತಿರುತ್ತಾರೆ. ಅವರು (ಪ್ರಪಂಚದವರು) ದೇವತೆಗಳ ಮೇಳವನ್ನು ಆಚರಿಸುತ್ತಾರೆ, ತಾವು ದಿವ್ಯ ಗುಣಗಳ ಹೂ ಗುಚ್ಛದ ಮೂಲಕ ಆತ್ಮ-ಪರಮಾತ್ಮನ ಮೇಳವನ್ನೂ ಆಚರಿಸುತ್ತಿದ್ದೀರಿ. ಆದರೆ ಬಹಳ ವಿಜೃಂಭಣೆಯಿಂದ ಮೇಳವನ್ನಾಚರಿಸಿ, ಅದನ್ನು ಎಲ್ಲರೂ ನೋಡಲಿ. ದೇವತೆಗಳ ಮೇಳವಂತು ದೇವತೆಗಳದಾಯಿತು ಆದರೆ ಈ ಮೇಳವಂತು ಸರ್ವ ಶ್ರೇಷ್ಠವಾದ ಮೇಳವಾಗಿದೆ ಆದ್ದರಿಂದ ಸದಾ ತಮ್ಮ ಜೊತೆ ಈ ದಿವ್ಯ ಗುಣಗಳ ಸುಗಂಧ ಭರಿತವಾದ ಹೂ ಗುಚ್ಛದ ಉಡುಗೊರೆಯನ್ನು ಇಟ್ಟುಕೊಳ್ಳಿರಿ.

ಮೀಟಿಂಗ್ನವರ ಪ್ರತಿ:

ಮೀಟಿಂಗ್ನವರು ಏತಕ್ಕಾಗಿ ಬಂದಿದ್ದಾರೆ? ಸೆಟಿಂಗ್ ಮಾಡುವುದಕ್ಕಾಗಿ. ಕಾರ್ಯಕ್ರಮದ ಸೆಟಿಂಗ್, ಸ್ಪೀಕರ್ಸ್ನ ಸೆಟಿಂಗ್ ಮಾಡುವುದಕ್ಕಾಗಿ ಬಂದಿದ್ದೀರಿ. ಹೇಗೆ ಭಾಷಣಕ್ಕಾಗಿ ತಯಾರು ಮಾಡಲಾಯಿತು ಅದೇರೀತಿ ಸ್ಪೀಕರ್ಸ್ ಅಥವಾ ಯಾರೆಲ್ಲಾ ಬರುವವರಿದ್ದಾರೆ, ಅವರಿಗೆ ಈಗಿನಿಂದಲೇ ಅಂತಹ ಶ್ರೇಷ್ಠವಾದ ಪ್ರಕಂಪನಗಳನ್ನು ಕೊಡಿ, ಅದರಿಂದ ಅವರು ಕೇವಲ ವೇದಿಕೆಯಲ್ಲಿ ಸ್ವಲ್ಪ ಸಮಯಕ್ಕಾಗಿ ಭಾಷಣವನ್ನು ತಯಾರು ಮಾಡಿಕೊಳ್ಳಬಾರದು ಆದರೆ ಸದಾ ತನ್ನ ಶ್ರೇಷ್ಠ ಸ್ಥಿತಿಯೇ ತಯಾರಾಗಿ ಬಿಡಲಿ. ಬಾಪ್ದಾದಾರವರು ಇದಕ್ಕಾಗಿಯೇ ಮೀಟಿಂಗ್ ಮಾಡುವವರಿಗೆ ಅವಿನಾಶಿ ಸೆಟಿಂಗ್ನ ಯಂತ್ರವನ್ನು ಉಡುಗೊರೆಯಲ್ಲಿ ಕೊಡುತ್ತಾರೆ. ಇದರಿಂದ ಸೆಟ್ ಮಾಡುತ್ತಾ ಇರಬೇಕು. ವರ್ತಮಾನವಂತು ಯಂತ್ರಗಳ ಯುಗವಾಗಿದೆ ಅಲ್ಲವೆ. ಮನುಷ್ಯರ ಮೂಲಕ ಯಾವುದೇ ಕಾರ್ಯವನ್ನು ಬಹಳ ಸಮಯ ತೆಗೆದುಕೊಳ್ಳಲಾಗುತ್ತದೆ, ಅದನ್ನು ಯಂತ್ರಗಳ ಮೂಲಕ ಸಹಜ ಹಾಗೂ ಬಹಳ ಬೇಗನೆ ಆಗಿ ಬಿಡುತ್ತದೆ. ಅಂದಾಗ ಈಗ ತಮ್ಮ ಸೆಟಿಂಗ್ನ ಯಂತ್ರವನ್ನು ಈ ರೀತಿಯಲ್ಲಿ ಪ್ರಯೋಗದಲ್ಲಿ ತರಬೇಕು, ಅದರಿಂದ ಬಹಳ ಬೇಗ-ಬೇಗನೆ ಸೆಟಿಂಗ್ ಆಗುತ್ತಾ ಹೋಗಲಿ. ಏಕೆಂದರೆ ತಮ್ಮ ಸ್ವರ್ಣೀಮ ಪ್ರಪಂಚ ಅಥವಾ ಸುಖಮಯ ಪ್ರಪಂಚದ ಯೋಜನೆಯನುಸಾರ ಎಲ್ಲರ ಸೀಟುಗಳನ್ನು ಸೆಟ್ ಮಾಡಬೇಕಲ್ಲವೆ. ಪ್ರಜೆಗಳನ್ನೂ ಸೆಟ್ ಮಾಡಬೇಕಾಗಿದೆ, ಪ್ರಜೆಗಳಿಗೂ ಪ್ರಜೆಗಳನ್ನೂ ಸೆಟ್ ಮಾಡಬೇಕಾಗಿದೆ. ರಾಜ-ರಾಣಿಯಂತು ಸೆಟ್(ತಯಾರು) ಆಗುತ್ತಿದ್ದಾರೆ ಆದರೆ ರಾಜಾ ಮನೆತನವಿದೆ, ಸಾಹುಕಾರ ಮನೆತನಗಳಿವೆ, ನಂತರ ಪ್ರಜೆಗಳು, ದಾಸ-ದಾಸಿಯರಿದ್ದಾರೆ, ಎಷ್ಟೆಲ್ಲಾ ತಯಾರು ಮಾಡಬೇಕಾಗಿದೆ! ಅಂದಾಗ ಈಗ ಮೀಟಿಂಗ್ನವರು ತಯಾರಿ ಮಾಡುವ ಯಂತ್ರವನ್ನು ವಿಶೇಷವಾಗಿ ತೀವ್ರಗೊಳಿಸಿರಿ. ತೀವ್ರಗೊಳಿಸುವುದು ಎಂದರೆ ಸ್ವಯಂನ್ನು ತೀವ್ರ ಪುರುಷಾರ್ಥಿಯನ್ನಾಗಿ ಮಾಡುವುದು – ಇದು ಆ ಯಂತ್ರದ ಸ್ವಿಚ್ ಆಗಿದೆ. ಯಂತ್ರದ ಸ್ವಿಚ್ ಇರುತ್ತದೆಯಲ್ಲವೆ ಅಂದಮೇಲೆ ತೀವ್ರಗತಿಯುಳ್ಳ ಯಂತ್ರದ ಸ್ವಿಚ್ ಆಗಿದೆ – ತೀವ್ರ ಪುರುಷಾರ್ಥಿ ಆಗುವುದು ಅಂದರೆ ತೀವ್ರಗತಿಯಲ್ಲಿ ತಯಾರಿ ಮಾಡುವ ಯಂತ್ರವನ್ನು ಆನ್ ಮಾಡುವುದು. ಇದು ಬಹಳ ದೊಡ್ಡ ಜವಾಬ್ದಾರಿ ಆಗಿದೆ ಆದ್ದರಿಂದ ಈಗ ತಮ್ಮ ರಾಜಧಾನಿಯ ತಯಾರಿಯ ಯಂತ್ರವನ್ನು ತೀವ್ರ ಗತಿಯಲ್ಲಿ ತಯಾರಿ ಮಾಡಿರಿ.

ಡಬಲ್ ವಿದೇಶಿ ಗ್ರೂಪ್ಬಲ್ ವಿದೇಶಿ ಗ್ರೂಪ್:

ಡಬಲ್ ವಿದೇಶಿ ಮಕ್ಕಳು ವರ್ತಮಾನದಲ್ಲಿ ಸ್ಯಾಟಿಲೈಟ್ನ ಯೋಜನೆಯನ್ನು ಮಾಡುತ್ತಿದ್ದಾರೆ. ತಂದೆಯ ಪ್ರತ್ಯಕ್ಷಗೊಳಿಸುವ ನಿಟ್ಟಿನಲ್ಲಿ ಬಹಳ ಚೆನ್ನಾಗಿ ಮುಂದುವರೆಯುತ್ತಿದ್ದಾರೆ. ಆದ್ದರಿಂದ ಬಾಪ್ದಾದಾರವರು ‘ಸದಾ ಡಬಲ್ ಲೈಟ್ ಆಗಿರುವ ಸೆಟ್’ನ ಉಡುಗೊರೆಯನ್ನು ಕೊಡುತ್ತಿದ್ದಾರೆ. ಅವರು ಸ್ಯಾಟ್ಲೈಟ್ನ ಕಾರ್ಯವನ್ನು ಮಾಡಲು ಯೋಚಿಸುತ್ತಿದ್ದಾರೆ ಮತ್ತು ಬಾಪ್ದಾದಾರವರು ಸದಾ ಡಬಲ್ಲೈಟ್ ಆಗಿರುವ ಸೆಟ್ನ ಗಿಫ್ಟ್ನ್ನು ಕೊಡುತ್ತಿದ್ದಾರೆ. ಸದಾ ಬಾಪ್ದಾದಾ ಹೃದಯರಾಮನು ಡಬಲ್ ಲೈಟ್ ಸ್ಥಿತಿಯಲ್ಲಿ ಸ್ಥಿತರಾಗಿರುವ ಡಬಲ್ ವಿದೇಶಿ ಮಕ್ಕಳಿಗೆ ಹೃದಯದ ಸ್ನೇಹದ ಉಡುಗೊರೆಯಲ್ಲಿ ಕೊಡುತ್ತಿದ್ದಾರೆ.

ಅಮೇರಿಕಾ ನಿವಾಸಿ ಮಕ್ಕಳು ವಿಶೇಷವಾಗಿ ನೆನಪು ಮಾಡುತ್ತಿದ್ದಾರೆ. ಬಹಳ ಒಳ್ಳೆಯ ಉಮ್ಮಂಗ-ಉತ್ಸಾಹದಿಂದ ವಿಶ್ವದಲ್ಲಿ ಸೇವೆ ಮಾಡುವ ಸಾಧನವನ್ನು ಚೆನ್ನಾಗಿ ಮಾಡಿದ್ದಾರೆ. ಯು.ಎನ್., ಸಹ ಸೇವೆಯ ಜೊತೆಗಾರರಾಗಿದ್ದಾರೆ. ಭಾರತವು ಸೇವೆಯ ತಳಪಾಯವಾಗಿದೆ ಆದ್ದರಿಂದ ಭಾರತದ ವಿಶೇಷ ಸೇವಾಧಾರಿ ಜೊತೆಗಾರನೂ (ಜಗದೀಶ್ಜಿ) ಹೋಗಿದ್ದಾರೆ. ತಳಪಾಯ ಭಾರತವಾಗಿದೆ ಮತ್ತು ಪ್ರತ್ಯಕ್ಷತೆಗೆ ನಿಮಿತ್ತ ವಿದೇಶವಾಗಿದೆ. ಪ್ರತ್ಯಕ್ಷತೆಯ ಧ್ವನಿಯು ದೂರದಿಂದ ಭಾರತದಲ್ಲಿ ನಗಾರಿಯಾಗಿ ಬರುತ್ತದೆ. ಮಕ್ಕಳ ಆ ಪ್ರಕಂಪನಗಳು ಬರುತ್ತಿದೆ, ಹಾಗೆ ನೋಡಿದರೆ ಲಂಡನ್ ನಿವಾಸಿಗಳೂ ಜೊತೆಗಾರರಿದ್ದಾರೆ, ಆಸ್ಟ್ರೇಲಿಯಾದವರೂ ಸಹ ವಿದೇಶದ ಸೇವೆಯ ಜೊತೆಗಾರರಾಗಿದ್ದಾರೆ, ಆಫ್ರಿಕಾವೇನೂ ಕಡಿಮೆಯಿಲ್ಲ. ಎಲ್ಲಾ ದೇಶಗಳ ಸಹಯೋಗವು ಬಹಳ ಚೆನ್ನಾಗಿ ಇದೆ. ಬಾಪ್ದಾದಾರವರು ದೇಶ-ವಿದೇಶದಿಂದ ನಿಮಿತ್ತರಾಗಿರುವ ಪ್ರತಿಯೊಬ್ಬ ಸೇವಾಧಾರಿ ಮಕ್ಕಳಿಗೂ ತನ್ನ-ತನ್ನ ವಿಶೇಷತೆಯನುಸಾರ ವಿಶೇಷ ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಪ್ರತಿಯೊಬ್ಬರ ಮಹಿಮೆಯೂ ತನ್ನ-ತನ್ನದಾಗಿದೆ, ಒಬ್ಬೊಬ್ಬರ ಮಹಿಮೆಯನ್ನು ವರ್ಣಿಸಿದರೆ ಎಷ್ಟಾಗುತ್ತದೆ!! ಆದರೆ ಬಾಪ್ದಾದಾರವರ ಹೃದಯದಲ್ಲಿ ಪ್ರತಿಯೊಂದು ಮಗುವಿನ ವಿಶೇಷತೆಯ ಮಹಿಮೆಯು ಸಮಾವೇಶವಾಗಿದೆ.

ಮಧುಬನ ನಿವಾಸಿ ಸೇವಾಧಾರಿಗಳೂ ಸಹ ಸೇವೆಯ ಸಾಹಸದಲ್ಲಿ ಸಹಯೋಗಿ ಆಗಿದ್ದಾರೆ. ಆದ್ದರಿಂದ ತಂದೆಗಾಗಿ ಗಾಯನವೇನಿದೆ – “ಸಾಹಸ ಮಕ್ಕಳದು, ಸಹಯೋಗ ತಂದೆಯದು”, ಇದೇ ರೀತಿ ಏನೆಲ್ಲಾ ಸೇವೆಗಳು ಸೀಜನ್ನಲ್ಲಿ ನಡೆಯುತ್ತದೆ ಅಂದಮೇಲೆ ಮಧುಬನ ನಿವಾಸಿಗಳೂ ಸಹ ಸಾಹಸದ ಸ್ಥಂಭವಾಗುವರು ಮತ್ತು ಮಧುಬನದವರ ಸಾಹಸದಿಂದ ತಾವೆಲ್ಲರೂ ಇರುವ, ಊಟೋಪಾಚಾರ, ವಿಶ್ರಾಂತಿಗಾಗಿ, ಸ್ನಾನ., ಇತ್ಯಾದಿ ಪ್ರಬಂಧಗಳ ಸಹಯೋಗ ಸಿಗುತ್ತದೆ. ಆದ್ದರಿಂದ ಬಾಪ್ದಾದಾರವರು ಮಧುಬನ ನಿವಾಸಿ ಮಕ್ಕಳೆಲ್ಲರ ಸಾಹಸಕ್ಕಾಗಿ ಶುಭಾಷಯಗಳನ್ನು ಕೊಡುತ್ತಿದ್ದಾರೆ.

ವರದಾನ:-

ದೃಷ್ಟಿಯಿಂದ ಸೃಷ್ಟಿಯು ಬದಲಾಗುತ್ತದೆ ಎಂಬ ನಾಣ್ಣುಡಿಯಿದೆ. ಅಂದಮೇಲೆ ತಮ್ಮ ದೃಷ್ಟಿಯನ್ನು ಸತೋಗುಣಿಯಾಗುತ್ತದೆ ಎಂದರೆ, ಯಾರೆಷ್ಟಾದರೂ ತಮೋಗುಣಿ ಅಥವಾ ರಜೋಗುಣಿ ಆತ್ಮನ ದೃಷ್ಟಿ, ವೃತ್ತಿ ಹಾಗೂ ಅವರ ಸ್ಥಿತಿಯೂ ಬದಲಾಗಿ ಬಿಡುವುದು. ತಮ್ಮ ಮುಂದೆ ಯಾರೇ ಬರುತ್ತಾರೆಂದರೆ ಅವರಿಗೆ ದೃಷ್ಟಿಯ ಮೂಲಕ ಮೂರು ಲೋಕಗಳ, ತನ್ನ ಇಡೀ ಜೀವನದ ಕಥೆಯೇ ತಿಳಿದು ಬಿಡುವುದು – ಇದೇ ದೃಷ್ಟಿಯಿಂದ ಪರಿವರ್ತನೆ ಮಾಡುವುದಾಗಿದೆ. ಅಂತ್ಯದಲ್ಲಿ ಯಾವಾಗ ಜ್ಞಾನದ ಸೇವೆಯಾಗುವುದಿಲ್ಲವೋ ಆಗ ಈ ಸೇವೆಯಾಗುವುದು.

ಸ್ಲೋಗನ್:-

ಸೂಚನೆ:

ಇಂದು ತಿಂಗಳಿನ ಮೂರನೇ ರವಿವಾರ ಅಂತರಾಷ್ಟ್ರೀಯ ಯೋಗ ದಿನವಾಗಿದೆ, ಬಾಬಾರವರ ಎಲ್ಲಾ ಮಕ್ಕಳು ಸಂಜೆ 6.30 ರಿಂದ 7.30 ಗಂಟೆಯವರೆಗೆ ವಿಶೇಷವಾಗಿ ಭೃಕುಟಿಯ ಆಸನದಲ್ಲಿ ಕುಳಿತುಕೊಂಡು, ಹೊಳೆಯುತ್ತಿರುವ ತಮ್ಮ ನಕ್ಷತ್ರವನ್ನು ದಿವ್ಯ ನೇತ್ರದಿಂದ ನೋಡುತ್ತಾ, ಲೈಟ್-ಮೈಟ್ ಹೌಸ್ ಆಗಿದ್ದು ಪ್ರಕೃತಿಯ ಸಮೇತವಾಗಿ ಇಡೀ ವಿಶ್ವಕ್ಕೆ ಸರ್ಚ್ಲೈಟ್ ಕೊಡುವ ಸೇವೆ ಮಾಡಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top