16 October 2021 KANNADA Murli Today | Brahma Kumaris

Read and Listen today’s Gyan Murli in Kannada

15 October 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಮ್ಮ ಬುದ್ಧಿಯನ್ನು ಜ್ಞಾನ ಮಂಥನದಲ್ಲಿ ಬ್ಯುಜಿಯಾಗಿಟ್ಟುಕೊಳ್ಳಿ ಆಗ ಎಲ್ಲಾ ಚಿಂತೆಗಳಿಂದ ಮುಕ್ತರಾಗುತ್ತೀರಿ, ಸದಾ ಖುಷಿಯಿರುವುದು”

ಪ್ರಶ್ನೆ:: -

ಯಾರು ತನ್ನನ್ನು ಶಿವ ತಂದೆಯ ಯಜ್ಞದ ಸೇವಕನೆಂದು ತಿಳಿಯುವರೋ ಅಂತಹವರ ಲಕ್ಷಣಗಳನ್ನು ತಿಳಿಸಿರಿ.

ಉತ್ತರ:-

ಶಿವ ತಂದೆಯು ಈ ಬ್ರಹ್ಮಾರವರ ಮುಖದಿಂದ ಏನೆಲ್ಲವನ್ನೂ ಹೇಳುವರೋ ಅದನ್ನು ನಾವು ಕೂಡಲೇ ಪಾಲಿಸುತ್ತೇವೆ, ಏನು ಹೇಳುವರೋ ಅದನ್ನು ಒಪ್ಪಿ ನಡೆಯುವುದಕ್ಕೆ ಶ್ರೀಮತವೆಂದು ಹೇಳಲಾಗುತ್ತದೆ. ಶ್ರೀ ಶ್ರೀ ಶಿವತಂದೆಯ ಮತದಂತೆ ನಡೆಯುವುದರಿಂದಲೇ ನೀವು ಶ್ರೇಷ್ಠರಾಗುತ್ತೀರಿ. ಶ್ರೇಷ್ಠರಾಗುವುದು ಎಂದರೆ ವಿಜಯಮಾಲೆಯಲ್ಲಿ ಬರುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ…

ಓಂ ಶಾಂತಿ. ಸಾಲಿಗ್ರಾಮಗಳ ಪ್ರತಿ ಶಿವ ಭಗವಾನುವಾಚ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ತಿಳಿಸುತ್ತಿದ್ದಾರೆ- ನಾವಿಲ್ಲಿ ಆತ್ಮನೆಂದು ತಿಳಿದು ಕುಳಿತುಕೊಳ್ಳಬೇಕೆಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚದಲ್ಲಿ ತನ್ನನ್ನು ಆತ್ಮನೆಂದು ತಿಳಿದುಕೊಳ್ಳುವಂತಹ ಮನುಷ್ಯರು ಯಾರೊಬ್ಬರೂ ಇರುವುದಿಲ್ಲ. ಆತ್ಮವೆಂದರೇನು ಎಂಬುದನ್ನೇ ತಿಳಿದುಕೊಂಡಿಲ್ಲವೆಂದಮೇಲೆ ಪರಮಾತ್ಮನನ್ನು ಹೇಗೆ ತಿಳಿದುಕೊಳ್ಳುವರು?! ತಂದೆಯ ಮೂಲಕವೇ ನಿಮಗೆ ಆತ್ಮದ ಸಂಪೂರ್ಣ ತಿಳುವಳಿಕೆ ಸಿಗುತ್ತದೆ. ಮನುಷ್ಯರಿಗೆ ಏನೂ ತಿಳಿಯದ ಕಾರಣ ಎಷ್ಟೊಂದು ದುಃಖಿಯಾಗಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈ ಡ್ರಾಮಾ ಅಥವಾ ಸೃಷ್ಟಿರೂಪಿ ಕಲ್ಪವೃಕ್ಷದ ಆಯಸ್ಸು 5000 ವರ್ಷಗಳಾಗಿದೆ. ಹೇಗೆ ಮಾವಿನ ಬೀಜವಿದೆ, ಒಂದುವೇಳೆ ಅದು ಚೈತನ್ಯವಾಗಿದ್ದರೆ ನಾನು ಬೀಜವಾಗಿದ್ದೇನೆ, ನನ್ನಿಂದ ಈ ವೃಕ್ಷವು ಈ ರೀತಿ ಬೆಳೆಯಿತು ಎಂದು ತಿಳಿಸುತ್ತಿತ್ತು ಆದರೆ ಅದು ಜಡವಾಗಿದೆ, ಚೈತನ್ಯ ವೃಕ್ಷ (ಮಾನವ ವಂಶವೃಕ್ಷ) ವು ಒಂದೇ ಆಗಿದೆ. ಆದಿಯಿಂದ ಹಿಡಿದು ಅಂತ್ಯದವರೆಗೆ ಇಡೀ ವೃಕ್ಷದ ಜ್ಞಾನವು ನಿಮಗೆ ಸಿಕ್ಕಿದೆ. ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ – ನಾನು ಈ ಮನುಷ್ಯ ವಂಶವೃಕ್ಷದ ಬೀಜರೂಪ ಸತ್ಚಿತ್ ಆನಂದ ಸ್ವರೂಪನಾಗಿದ್ದೇನೆ. ನನಗೆ ಜ್ಞಾನ ಸಾಗರನೆಂದು ಹೇಳುತ್ತಾರೆ. ಇದು ನಿರಾಕಾರನ ಮಹಿಮೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಈ ಮಹಿಮೆಯು ಎಲ್ಲರಿಗಿಂತ ಭಿನ್ನವಾಗಿದೆ. ಮನುಷ್ಯರಂತೂ ತಂದೆಯ ಮಹಿಮೆಯನ್ನೇ ಅರಿತುಕೊಂಡಿಲ್ಲ. ಭಲೆ ಈ ಲಕ್ಷ್ಮೀ-ನಾರಾಯಣ ಮೊದಲಾದ ದೇವತೆಗಳಿದ್ದಾರೆ ಅವರಿಗೂ ಸಹ ಈ ಜ್ಞಾನವಿರುವುದಿಲ್ಲ. ಇಡೀ ಸೃಷ್ಟಿನಾಟಕದ ಜ್ಞಾನವು ನಿಮಗೆ ಸಿಕ್ಕಿದೆ. ಈ ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ ನಂತರ ದೇವತೆಗಳಾದ ಮೇಲೆ ಈ ಜ್ಞಾನವಿರುವುದಿಲ್ಲ. ಆಶ್ಚರ್ಯಕರವಾಗಿದೆ ಅಲ್ಲವೆ. ನೀವು ಈ ಡ್ರಾಮಾದ ಪಾತ್ರಧಾರಿಗಳಾಗಿದ್ದೀರಿ, ನಿಮಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಶೂದ್ರವರ್ಣದವರಿಗಾಗಲಿ, ದೇವತಾ ವರ್ಣದವರಿಗಾಗಲಿ ಈ ಜ್ಞಾನವಿಲ್ಲ, ಈ ಜ್ಞಾನವು ಪರಂಪರೆಯಿಂದ ನಡೆದು ಬರುವುದಿಲ್ಲ. ಹೇಗೆ ಹಬ್ಬಗಳು ಪರಂಪರೆಯಿಂದ ನಡೆದುಬಂದಿದೆ ಎಂದು ಹೇಳುತ್ತಾರೆ, ಆ ರೀತಿ ಈ ಜ್ಞಾನವು ನಡೆದು ಬರುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಈ ಹಬ್ಬಗಳನ್ನು ಯಾರೂ ತಿಳಿದುಕೊಂಡಿರುವುದೇ ಇಲ್ಲ. ಅಲ್ಲಿ ಏನೂ ನೆನಪಿರುವುದಿಲ್ಲ. ಅಲ್ಲಂತೂ ಕೇವಲ ರಾಜ್ಯಭಾರ ಮಾಡುತ್ತಾರೆ. ನೀವು ಪ್ರತಿಯೊಬ್ಬರ ಬುದ್ಧಿಯ ಬೀಗವು ಈಗ ತೆರೆದಿದೆ. ಮುಖ್ಯ ನಿರ್ದೇಶಕ, ಮುಖ್ಯ ರಚಯಿತ, ಮುಖ್ಯ ಪಾತ್ರಧಾರಿಯನ್ನು ನೀವು ಅರಿತುಕೊಂಡಿದ್ದೀರಿ. ನಿಮಗೆ ಎಷ್ಟು ಒಳ್ಳೆಯ ಜ್ಞಾನವು ಸಿಗುತ್ತದೆ! ಈ ಜ್ಞಾನವನ್ನು ಯಾರು ತಿಳಿದುಕೊಂಡಿಲ್ಲವೋ ಅವರು ಬುದ್ಧಿ ಹೀನರಾಗಿದ್ದಾರೆ. ನೀವೂ ಸಹ ಬುದ್ಧಿ ಹೀನರಾಗಿದ್ದಿರಿ, ಈಗ ದೇವತೆಗಳಾಗುತ್ತಿದ್ದೀರಿ. ಈ ಜ್ಞಾನವು ಯಾರ ಬುದ್ಧಿಯಲ್ಲಿ ಹನಿಯುತ್ತಾ ಇರುವುದೋ ಅವರಿಗೆ ಅಪಾರ ಖುಷಿಯಿರುವುದು. ನಿಮ್ಮ ವಿನಃ ಮತ್ತ್ಯಾರಿಗೂ ಈ ಜ್ಞಾನವು ಅರ್ಥವಾಗುವುದಿಲ್ಲ. ಪರಮಾತ್ಮನಿಗೇ ಸರ್ವಶಕ್ತಿವಂತ, ಸರ್ವಜ್ಞ, ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ಯಾವುದರ ಜ್ಞಾನವಿದೆ? ಅವರಿಗೆ ಎಲ್ಲಾ ವೇದ-ಶಾಸ್ತ್ರಗಳು, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಶಾಸ್ತ್ರಗಳಲ್ಲಿಯೂ ರಚಯಿತ ಮತ್ತು ರಚನೆಯ ಜ್ಞಾನವಿಲ್ಲ ಆದ್ದರಿಂದ ಋಷಿ ಮುನಿ ಮೊದಲಾದವರೂ ಸಹ ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೆಂದು ಹೇಳುತ್ತಾ ಬಂದಿದ್ದಾರೆ. ತಿಳಿಸುವವರು ಒಬ್ಬರೇ ಆಗಿದ್ದಾರೆ ಅಂದಮೇಲೆ ಈ ಜ್ಞಾನವನ್ನು ಮತ್ತ್ಯಾರು ಹೇಗೆ ತಿಳಿದುಕೊಳ್ಳುವರು! ಈ ಜ್ಞಾನವನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನಿಮಗೆ ತಿಳಿಸುವವರು ತಂದೆಯಾಗಿದ್ದಾರೆ, ಅವರು ಎಷ್ಟು ದೊಡ್ಡ ಜ್ಞಾನಪೂರ್ಣನಾಗಿದ್ದಾರೆ. ಅವರಿಂದ ಎಷ್ಟು ಉತ್ತಮ ಪದವಿಯನ್ನು ಪಡೆಯುತ್ತೀರಿ! ಅಂದಮೇಲೆ ನಿಮಗೆ ಎಷ್ಟೊಂದು ಖುಷಿಯಿರಬೇಕು – ನಾವು ಬೇಹದ್ದಿನ ತಂದೆಯ ಸಂತಾನರಾಗಿದ್ದೇವೆ ಎಂದು. ಜ್ಞಾನದಿಂದ ಬುದ್ಧಿಯು ಸಂಪನ್ನವಾಗಿರಬೇಕು. ನೀವು ತಿಳಿಯದೇ ಇರುವಂತಹ ಮಾತು ಯಾವುದೂ ಇರುವುದಿಲ್ಲ. ನೀವೀಗ ಮಾ|| ಜ್ಞಾನ ಪೂರ್ಣರಾಗುತ್ತಿದ್ದೀರಿ. ಯಾವ ಆತ್ಮರು ತಮೋಪ್ರಧಾನರಾಗಿದ್ದಾರೆಯೋ ಅವರೇ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಸತೋಪ್ರಧಾನರಾಗಿ ಬಿಡುವರು. ನಂಬರ್ವಾರಂತೂ ಇರುತ್ತಾರಲ್ಲವೆ. ಕೆಲವರದು ತಮೋ ಬುದ್ಧಿಯಿಂದ ರಜೋ ಬುದ್ಧಿಯಾಗಿರಬಹುದು. ಕೆಲವರದು ರಜೋದಿಂದ ಸತೋ ಆಗಿರುವುದು. ಈಗಿನ್ನೂ ಯಾರದೂ ಸತೋಪ್ರಧಾನ ಬುದ್ಧಿಯಾಗಿಲ್ಲ. ಯಾವಾಗ ಸತೋಪ್ರಧಾನ ಆಗಿ ಬಿಡುವುದೋ ಆಗ ಕರ್ಮಾತೀತ ಸ್ಥಿತಿಯನ್ನು ತಲುಪುವರು. ಅನಂತರ ರಾಜ್ಯಭಾರ ಮಾಡುವುದಕ್ಕಾಗಿ ಅವರಿಗೆ ಹೊಸ ಪ್ರಪಂಚ ಬೇಕಾಗುವುದು. ಈ ಯಜ್ಞವು ಮುಕ್ತಾಯವಾದಾಗ ಇದರಲ್ಲಿ ಇಡೀ ಹಳೆಯ ಪ್ರಪಂಚದ ಆಹುತಿಯಾಗುತ್ತದೆ. ನಂಬರ್ವಾರ್ ಪುರುಷಾರ್ಥದನುಸಾರ ವಿದ್ಯಾಭ್ಯಾಸವೂ ಮುಕ್ತಾಯವಾಗುತ್ತದೆ. ಹೇಗೆ ಶಾಲೆಯಲ್ಲಿ ನಾವು ಇಂತಹ ಪರೀಕ್ಷೆಯನ್ನು ತೇರ್ಗಡೆ ಮಾಡಿ ಇಂತಹ ತರಗತಿಗೆ ವರ್ಗಾಯಿತರಾಗುತ್ತೇವೆ ಎಂದು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. ನಿಮ್ಮದೂ ಸಹ ಕರ್ಮಾತೀತ ಸ್ಥಿತಿಯಾದಾಗ ಈ ಮೃತ್ಯುಲೋಕದಿಂದ ವರ್ಗಾಯಿತರಾಗಿ ಅಮರಪುರಿಗೆ ಹೊರಟು ಹೋಗುತ್ತೀರಿ. ನೀವು ತಿಳಿದುಕೊಂಡಿದ್ದೀರಿ – ಈಗ ಇಲ್ಲಿಂದ ವರ್ಗಾಯಿತರಾಗಬೇಕಾಗಿದೆ, ಪವಿತ್ರರಾಗಿ ಅಮರಲೋಕಕ್ಕೆ ಹೋಗುತ್ತೇವೆ. ಮೂಲತಃ ನಾವು ಶಾಂತಿಧಾಮದ ನಿವಾಸಿಗಳಾಗಿದ್ದೆವು, ನಂತರ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಅಮರಲೋಕದಿಂದ ಮೃತ್ಯುಲೋಕಕ್ಕೆ ಬಂದು ತಲುಪಿದ್ದೇವೆ. ಈ ಇಡೀ ಜ್ಞಾನವು ಬುದ್ಧಿಯಲ್ಲಿದ್ದಾಗ ಖುಷಿಯಿರುವುದು. ಆಗ ಜ್ಞಾನದ ವಿನಃ ಮತ್ತೇನೂ ತೋಚುವುದೇ ಇಲ್ಲ. ನಾವೀಗ ಓದಿ ಹೊಸ ಪ್ರಪಂಚದ ಮಾಲೀಕರಾಗುತ್ತೇವೆ ಎಂಬುದನ್ನೂ ಸಹ ತಿಳಿಸಬೇಕಾಗಿದೆ. ಇಲ್ಲಿ ಪತಿತರೇ ಇದ್ದಾರೆ, ದೇವತೆಗಳು ಯಾರೂ ಇಲ್ಲ ಅಂದಮೇಲೆ ಮನುಷ್ಯರಿಂದ ದೇವತೆಗಳನ್ನಾಗಿ ಯಾರು ಮಾಡುವರು? ತಂದೆಯೇ ಮಾಡಬಲ್ಲರು. ನೀವೀಗ ತಿಳಿಸುತ್ತೀರಿ, ಅವಶ್ಯವಾಗಿ ಸ್ವರ್ಗವಿತ್ತು, ಅಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಅದರ ಸ್ಥಾಪನೆಯನ್ನು ಯಾರು ಮಾಡಿದರು? ಸ್ವರ್ಗದ ರಚಯಿತ ತಂದೆಯು ಸ್ವರ್ಗ ಸ್ಥಾಪನೆ ಮಾಡಿದರು. ಎಲ್ಲಿ ದೇವಿ-ದೇವತೆಗಳು ರಾಜ್ಯ ಮಾಡುವರೋ ಆಗ ಮತ್ತ್ಯಾವುದೇ ಧರ್ಮವಿರುವುದಿಲ್ಲ, ಇದು ದೊಡ್ಡ ಬೇಹದ್ದಿನ ನಾಟಕವಾಗಿದೆ, ನೀವು ಚೈತನ್ಯವಾಗಿದ್ದೀರಲ್ಲವೆ. ನಿಮಗೆ ತಿಳಿದಿದೆ – ಈ ವೃಕ್ಷದ ಬೀಜವು ಮೇಲಿದ್ದಾರೆ, ತಂದೆಯೂ ಸಹ ಅನಾದಿ-ಅವಿನಾಶಿಯಾಗಿದ್ದಾರೆ. ನೀವೂ ಸಹ ಅವಿನಾಶಿಯಾಗಿದ್ದೀರಿ. ಈಗ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ತಲುಪಿದೆ, ಈ ಸಮಯದಲ್ಲಿ ಎಲ್ಲಾ ಮನುಷ್ಯರು ಮುಳ್ಳುಗಳ ಸಮಾನ ಆಗಿಬಿಟ್ಟಿದ್ದಾರೆ. ಇದು ಮುಳ್ಳುಗಳ ಅರಣ್ಯವಾಗಿದೆಯಲ್ಲವೆ. ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುವರು. ತಂದೆಯೇ ಹೂದೋಟದ ಮಾಲೀಕನಾಗಿದ್ದಾರೆ. ಅವರಿಗೆ ಅಂಬಿಗನೆಂತಲೂ ಹೇಳುತ್ತಾರೆ. ನೀವೂ ಸಹ ದೋಣಿ ನಡೆಸುವುದನ್ನು ಕಲಿಯುತ್ತಿದ್ದೀರಿ. ಪ್ರತಿಯೊಬ್ಬರ ದೋಣಿಯು ಹೇಗೆ ಪಾರಾಗುವುದು ಎಂಬುದನ್ನು ತಂದೆಯು ನಿಮಗೆ ತಿಳಿಸುತ್ತಾರೆ. ದೋಣಿಯೆಂದರೆ ಈ ಶರೀರವಲ್ಲ, ದೋಣಿಯು ಆತ್ಮ ಮತ್ತು ಶರೀರ ಎರಡು ವಸ್ತುಗಳಿಂದ ಮಾಡಲ್ಪಟ್ಟಿದೆ. ಅಂಬಿಗನೇ ನನ್ನ ದೋಣಿಯನ್ನು ಪಾರು ಮಾಡು ಎಂದು ಹಾಡುತ್ತಾರೆ. ಈಗ ಆತ್ಮವೂ ಪತಿತವಾಗಿದೆ ಆದ್ದರಿಂದ ಶರೀರವೂ ಪತಿತವಾಗಿದೆ. ಈಗ ಈ ದೋಣಿಯು ಹೇಗೆ ಪಾರಾಗುವುದು ಮತ್ತು ಎಲ್ಲಿಗೆ ಹೋಗುವುದು? ನೀವೀಗ ಮೂಲವತನ, ಸೂಕ್ಷ್ಮವತನ…. ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೆ ಎಲ್ಲಾ ರಹಸ್ಯಗಳನ್ನು ಅರಿತುಕೊಂಡಿದ್ದೀರಿ ಆದರೂ ಸಹ ಇದು ಬುದ್ಧಿಯಲ್ಲಿ ಏಕೆ ಇರುವುದಿಲ್ಲ! ನೀವೇಕೆ ಮರೆತು ಹೋಗುತ್ತೀರಿ? ಸದಾ ಇದು ಬುದ್ಧಿಯಲ್ಲಿ ಹನಿಯುತ್ತಾ ಇದ್ದರೆ ನೀವು ಖುಷಿಯಲ್ಲಿರುತ್ತೀರಿ, ಚಿಂತೆಗಳಿಂದ ಮುಕ್ತರಾಗುತ್ತೀರಿ.

ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದನ್ನು ನಮಗೆ ಕೊಡುತ್ತಿದ್ದಾರೆ. ಇವು ಹೊಸ ಮಾತುಗಳಾಗಿವೆ. ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನಿರಾಕಾರ ತಂದೆಯು ಸಾಕಾರದ ಮೂಲಕ ತಿಳಿಸುತ್ತಾರೆ. ನೀವೂ ಸಹ ಈ ಶರೀರದ ಮೂಲಕ ಕೇಳಿಸಿಕೊಳ್ಳುತ್ತೀರಿ ಅಂದಾಗ ತಂದೆಯೇ ನೀವು ಮಕ್ಕಳನ್ನೂ ಸಹ ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಯಾವುದು ತಂದೆಯ ಮಹಿಮೆಯಿದೆಯೋ ಅದು ನಿಮ್ಮದೂ ಆಗಿರಬೇಕು. ಯಾವುದೇ ಅಂತರವಿಲ್ಲ. ಕೇವಲ ತಂದೆಯು ತಿಳಿಸುವುದೇನೆಂದರೆ ಜನನ-ಮರಣದಲ್ಲಿ ಬರುವುದಿಲ್ಲ. ನೀವು ಜನನ-ಮರಣದಲ್ಲಿ ಬರುತ್ತೀರಿ. ನೀವು ನನಗೆ ಜ್ಞಾನ ಸಾಗರ, ಸುಖದ ಸಾಗರ…. ಎಂದು ಹೇಳುತ್ತೀರಿ ಅಂದಮೇಲೆ ನಾನು ನಿಮಗೆ ಜ್ಞಾನವನ್ನು ಕೊಡುತ್ತೇನೆ. ಕಲ್ಪ-ಕಲ್ಪವೂ ಕೊಡುತ್ತೇನೆ. ಈಗ ನಿಮಗೆ ಅರ್ಥವಾಗಿದೆ, ನಾವು 84 ಜನ್ಮಗಳ ಚಕ್ರವನ್ನು ಸುತ್ತಿ ಈಗ ಅಂತಿಮದಲ್ಲಿದ್ದೇವೆ ಮತ್ತೆ ತಂದೆಯು ನಮ್ಮನ್ನು ಮೊದಲನೇ ನಂಬರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಇದು ಜ್ಞಾನವಲ್ಲವೆ. ಜ್ಞಾನವು ಆದಾಯದ ಮೂಲವಾಗಿದೆ. ಯಾರು ಎಷ್ಟೆಷ್ಟು ಓದುವರೋ ಅದೇರೀತಿ ಅವರ ಆದಾಯವಿರುತ್ತದೆ. ಇದು ಜ್ಞಾನವೂ ಆಗಿದೆ, ವ್ಯಾಪಾರವೂ ಆಗಿದೆ. ನೀವು ತಂದೆಗೆ ಉಪಯೋಗಕ್ಕೆ ಬಾರದ ಕಸವನ್ನು ಕೊಡುತ್ತೀರಿ, ಯಾರಾದರೂ ಮರಣ ಹೊಂದಿದರೆ ಅವರ ವಸ್ತುಗಳನ್ನು ಕ್ರಿಯಾಕ ರ್ಮ ಮಾಡುವವರೆಗೆ ಕೊಡುತ್ತಾರಲ್ಲವೆ. ನೀವಿಲ್ಲಿ ಜೀವಿಸಿದ್ದಂತೆಯೇ ಕೊಡಬೇಕಾಗಿದೆ. ವಾಸ್ತವದಲ್ಲಿ ಮಾತು ಈಗಿನದಾಗಿದೆ. ತಂದೆಯು ಹೇಳುತ್ತಾರೆ – ನಿಮ್ಮ ಬಳಿ ಏನೆಲ್ಲವೂ ಇದೆಯೋ ಅದನ್ನು ಶರೀರ ಬಿಡುವುದಕ್ಕೆ ಮೊದಲೇ ನನಗೆ ಕೊಟ್ಟು ಬಿಡಿ, ನೀವು ಟ್ರಸ್ಟಿಗಳಾಗಿಬಿಡಿ ಇಲ್ಲದಿದ್ದರೆ ನಿಮ್ಮ ಬಳಿ ಏನು ಇರುವುದೋ ಅದು ಅಂತ್ಯದಲ್ಲಿ ನೆನಪಿಗೆ ಬರುವುದು. ಹೇಗೆ ಯಾರಾದರೂ ಸಾಹುಕಾರ ವ್ಯಕ್ತಿಗಳಾಗಿದ್ದರೆ ಅವರು ಜ್ಞಾನವನ್ನು ತೆಗೆದುಕೊಳ್ಳಲು ಆಗುವುದಿಲ್ಲ ಆದರೆ ಅವರ ಶ್ರೀಮಂತಿಕೆಯೂ ಸಹ ಒಂದು ಜನ್ಮಕ್ಕಾಗಿಯೇ ಅಲ್ಲವೆ! ಶರೀರವನ್ನಂತೂ ಬಿಟ್ಟು ಬಿಡುತ್ತಾರೆ ನಂತರ ಕರ್ಮಗಳನುಸಾರ ಎಲ್ಲಿ ಹೋಗಿ ಜನ್ಮತೆ ಗೆದುಕೊಳ್ಳುವರೋ ಗೊತ್ತಿಲ್ಲ. ನಾವೀಗ ಎಷ್ಟು ಪುರುಷಾರ್ಥ ಮಾಡುತ್ತೇವೆಯೋ ಅಷ್ಟು ಪ್ರಾಲಬ್ಧವನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ಈ ಸಮಯದಲ್ಲಿ ಎಲ್ಲರೂ ದೈಹಿಕ ಸೇವೆ ಮಾಡುವವರಾಗಿದ್ದಾರೆ. ಆತ್ಮಿಕ ಸೇವೆಯನ್ನು ಯಾರೂ ತಿಳಿದುಕೊಂಡಿಲ್ಲ. ಪರಮಾತ್ಮನೇ ಬಂದು ನಿಮಗೆ ಜ್ಞಾನವನ್ನು ತಿಳಿಸುತ್ತಾರೆ. ಅವರು ಸುಖದ ಸಾಗರ, ದುಃಖಹರ್ತ-ಸುಖಕರ್ತನಾಗಿದ್ದಾರೆ. ಅವರ ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಬುದ್ಧಿಯಲ್ಲಿ ಬರುವುದಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವಿದೆ – ತಂದೆಯು ನಮಗೆ ಮತ್ತೆ 5000 ವರ್ಷಗಳ ನಂತರ ಬಂದು ತಿಳಿಸುತ್ತಾರೆ. ಸತ್ಯಯುಗದಲ್ಲಿ ಈ ಜ್ಞಾನವಿರುವುದಿಲ್ಲ ಅಂದಮೇಲೆ ಕಲಿಯುಗದಲ್ಲಿ ಎಲ್ಲಿಂದ ಬರುವುದು?! ಲಕ್ಷ್ಮೀ-ನಾರಾಯಣರ ಮಂದಿರವನ್ನು ಏಕೆ ಕಟ್ಟಿಸುತ್ತೇವೆ, ಇವರು ಯಾರಾಗಿದ್ದರು? ಇವರಿಗೆ ಈ ರಾಜ್ಯವನ್ನು ಯಾರು ಕೊಟ್ಟರು? ಎಂಬುದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಇದು ಕರ್ಮಗಳ ಫಲವಾಗಿದೆಯಲ್ಲವೆ. ತಂದೆಯು ಕುಳಿತು ಈಗ ನಿಮಗೆ ಕರ್ಮ-ಅಕರ್ಮ-ವಿಕರ್ಮದ ರಹಸ್ಯವನ್ನು ತಿಳಿಸುತ್ತಾರೆ. ಭಗವಾನುವಾಚವಲ್ಲವೆ. ಗೀತೆಯಿಂದಲೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಅಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ ಅಂದಮೇಲೆ ಅವಶ್ಯವಾಗಿ ಉಳಿದೆಲ್ಲರೂ ಮುಕ್ತಿಯನ್ನು ಕೊಡುತ್ತಾರೆ. ಮಹಾಭಾರತ ಯುದ್ಧವೆಂದು ಬರೆಯಲ್ಪಟ್ಟಿದೆ, ಬಹಳ ಆಪತ್ತುಗಳು ಬರುತ್ತವೆ, ಪ್ರಾಕೃತಿಕ ವಿಕೋಪಗಳಾಗುತ್ತವೆ. ಹಳೆಯ ಪ್ರಪಂಚವು ಸಮಾಪ್ತಿಯಾಗುವುದು. ಇವು ಕಲ್ಪದ ಹಿಂದಿನ ಹಾಗೆ ಬಾಂಬುಗಳು, ಅಣ್ವಸ್ತ್ರಗಳಾಗಿವೆ, ಇದು ಅದೇ ವಿನಾಶದ ಸಮಯವಾಗಿದೆ ಯಾವಾಗ ಭಗವಂತನು ಬಂದು ರುದ್ರಜ್ಞಾನಯಜ್ಞವನ್ನು ರಚಿಸಿದ್ದರು, ಇದರಿಂದ ವಿನಾಶಜ್ವಾಲೆ ಹೊರಟಿತು. ಭಗವಂತನು ಸುಖ-ಶಾಂತಿಗಾಗಿಯೇ ಯಜ್ಞವನ್ನು ರಚಿಸುತ್ತಾರೆ ಅಂದಮೇಲೆ ಅವಶ್ಯವಾಗಿ ದುಃಖ-ಅಶಾಂತಿಯ ವಿನಾಶವಾಗಬೇಕು. ಈ ಈಶ್ವರೀಯ ಜ್ಞಾನ ಯಜ್ಞದಲ್ಲಿ ಇಡೀ ಸೃಷ್ಟಿಯೇ ಸ್ವಾಹಾ ಆಗಿ ಬಿಡುವುದು. ಈ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ.

ನಾವು ಬ್ರಾಹ್ಮಣರಾಗಿದ್ದೇವೆ, ಈ ಶಿವ ತಂದೆಯ ಯಜ್ಞದಲ್ಲಿ ನಾವು ಬ್ರಾಹ್ಮಣರು ಸೇವಕರಾಗಿದ್ದೇವೆ. ನಾವು ಸತ್ಯ-ಸತ್ಯ ಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ. ನೀವು ಮಕ್ಕಳು ತಂದೆಯು ಏನು ಹೇಳಿದರೂ ಸಹ ಅದನ್ನು ಒಪ್ಪಬೇಕಾಗಿದೆ. ನಾವು ಶ್ರೀಮತದನುಸಾರವೇ ನಡೆಯಬೇಕೆಂಬ ಸಂಕಲ್ಪವಿರಲಿ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಶ್ರೀ ಶ್ರೀ ಶಿವ ತಂದೆಯ ಮತದಂತೆ ನಾವು ಶ್ರೇಷ್ಠರಾಗಿ ಮಾಲೆಯ ಮಣಿಯಾಗುತ್ತೇವೆ. ಮಾಲೆಯ ಮಣಿಯೆಂದು ವಂಶಾವಳಿಗೆ ಹೇಳಲಾಗುತ್ತದೆ. ವಂಶಾವಳಿಯು ಹೆಚ್ಚುತ್ತಾ ಹೋಗುತ್ತದೆ. ತಂದೆಯು ಸ್ವಯಂ ವಂಶಾವಳಿಯನ್ನು ರಚಿಸುತ್ತಿದ್ದಾರೆ. ಮೇಲೆ ನಿರಾಕಾರಿ ಶಿವ ತಂದೆಯಿದ್ದಾರೆ ನಂತರ ಆತ್ಮರಿದ್ದಾರೆ. ನಿರಾಕಾರಿ ವಂಶಾವಳಿಯೇ ನಂತರ ಸಾಕಾರಿಯಾಗುತ್ತದೆ. ಮೊಟ್ಟ ಮೊದಲನೆಯದಾಗಿ ಪ್ರಜಾಪಿತನಿದ್ದಾರೆ. ಶಿವ ತಂದೆಯು ಆತ್ಮಿಕ ತಂದೆ, ಬ್ರಹ್ಮನು ಅಲೌಕಿಕ ತಂದೆಯಾಗಿದ್ದಾರೆ. ಆತ್ಮಿಕ ತಂದೆಯು ಬಂದು ಪ್ರಜಾಪಿತ ಬ್ರಹ್ಮನ ಮೂಲಕ ರಚಿಸುತ್ತಾರೆ. ಪತಿತ ಪ್ರಪಂಚವನ್ನು ಬಂದು ಪಾವನವನ್ನಾಗಿ ಮಾಡಿ ಎಂದು ಮನುಷ್ಯರು ಕರೆಯುತ್ತಾರೆ. ಪ್ರಳಯವಂತೂ ಎಂದೂ ಆಗುವುದಿಲ್ಲ, ವಿಶ್ವದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತದೆ. ಹಳೆಯ ಪ್ರಪಂಚವೇ ಮತ್ತೆ ಹೊಸದಾಗುತ್ತದೆ, ನೀವೀಗ ಹೊಸ ಪ್ರಪಂಚಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ಈ ಬೇಹದ್ದಿನ ಜ್ಞಾನವನ್ನು ಬೇಹದ್ದಿನ ತಂದೆಯೇ ಕೊಡುತ್ತಾರೆ. ಹದ್ದಿನ ಆಸ್ತಿಯಿದ್ದರೂ ಸಹ ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತಾರೆ. ಹೇ ಭಗವಂತ ಎಂದು ಹೇಳುತ್ತಾರಲ್ಲವೆ. ಯಾರಾದರೂ ಮರಣ ಹೊಂದುವ ಸಮಯದಲ್ಲಿ ಅವರಿಗೆ ಪರಮಪಿತನನ್ನು ನೆನಪು ಮಾಡಿರಿ ಎಂದು ಹೇಳುತ್ತಾರೆ ಅಂದಮೇಲೆ ಇಬ್ಬರು ತಂದೆಯರೆಂದು ಸಿದ್ಧವಾಗುತ್ತದೆಯಲ್ಲವೆ. ಎಲ್ಲಾ ಆತ್ಮರು ಸಹೋದರರಾಗಿದ್ದೀರಿ, ಹೇ ದುಃಖಹರ್ತ-ಸುಖಕರ್ತ, ಮುಕ್ತಿದಾತ ಬಂದು ನಮಗೆ ಮನೆಗೆ ಹೋಗುವುದಕ್ಕಾಗಿ ಮಾರ್ಗದರ್ಶನ ನೀಡಿ ಎಂದು ಆತ್ಮವೇ ಕರೆಯುತ್ತದೆ. ನಮಗೆ ಮನೆಯ ನೆನಪಿದೆ ಆದರೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಏಕೆಂದರೆ ಮಾಯೆಯು ರೆಕ್ಕೆಗಳನ್ನು ಕತ್ತರಿಸಿ ಬಿಟ್ಟಿದೆ. ಯಾರೂ ಸಹ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ನೀವೀಗ ತಮ್ಮ ಜ್ಯೋತಿಯನ್ನು ತಾವೇ ಬೆಳಗಿಸಿಕೊಳ್ಳಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ಆತ್ಮ ಜ್ಯೋತಿಯಲ್ಲಿ ಎಣ್ಣೆಯು ಬೀಳುತ್ತಾ ಹೋಗುವುದು. ಜ್ಯೋತಿಯು ಒಮ್ಮೆಲೆ ನಂದಿ ಹೋಗುವುದಿಲ್ಲ, ಯಾರಾದರೂ ಶರೀರ ಬಿಟ್ಟರೆ ದೀಪವನ್ನು ಬೆಳಗಿಸುತ್ತಾರೆ. ವಿಶೇಷವಾಗಿ ಅದಕ್ಕಾಗಿಯೇ ಅಲ್ಲಿ ಒಬ್ಬರನ್ನು ನೇಮಿಸುತ್ತಾರೆ – ಇದರಲ್ಲಿ ಎಣ್ಣೆಯನ್ನು ಹಾಕುತ್ತಾ ಇರಿ ಇಲ್ಲದಿದ್ದರೆ ಅಂಧಕಾರವಾಗಿ ಬಿಡುವುದು ಎಂದು. ಈಗ ನೀವು ಯೋಗಬಲದಿಂದ ಎಣ್ಣೆಯನ್ನು ಹಾಕಬೇಕಾಗಿದೆ ಆಗ ಘೋರ ಅಂಧಕಾರದಿಂದ ಘೋರ ಪ್ರಕಾಶ, ದೀಪಾವಳಿ ಆಗಿ ಬಿಡುವುದು. ದೀಪಾವಳಿಯು ಸತ್ಯಯುಗದಲ್ಲಿ ಆಗುವುದು, ಇಲ್ಲಿ ಅಲ್ಲ. ಯಾವುದೆಲ್ಲಾ ಉತ್ಸವಗಳನ್ನು ಆಚರಿಸಲಾಗುತ್ತದೆಯೋ ಅದರ ರಹಸ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಿಗೇನೂ ತಿಳಿದಿಲ್ಲ. ಆದರೂ ಸಹ ತಿಳಿಸಲಾಗುತ್ತದೆ. ಈ ರಕ್ಷಾಬಂಧನ ಇತ್ಯಾದಿಗಳು ಇರುವುದೇ ಪವಿತ್ರತೆಯಲ್ಲಿರುವುದಕ್ಕಾಗಿ. ಮನುಷ್ಯರಿಗೆ ಈ ರೀತಿ ಯುಕ್ತಿಯಿಂದ ಜ್ಞಾನದ ಇಂಜೆಕ್ಷನ್ ಹಾಕಬೇಕು ಯಾವುದರಿಂದ ನಿಜವಾಗಿಯೂ ನಾವು ಭ್ರಷ್ಟಾಚಾರಿಗಳಾಗಿದ್ದೇವೆ, ತಂದೆಯೇ ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆಂಬುದು ಅವರು ಅನುಭವ ಮಾಡಲಿ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಮನ್ಮನಾಭವ ಆಗಿರಿ ಆಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಯುಕ್ತಿಯಿಂದ ಬಾಣವನ್ನು ಹೊಡೆಯಬೇಕು, ಮಾತನಾಡುವ ಶಕ್ತಿಯಿರಬೇಕು. ನೀವೀಗ ಸರ್ವಶಕ್ತಿವಂತ ತಂದೆಯಿಂದ ಶಕ್ತಿಯನ್ನು ಪಡೆದು ಮಾಯೆಯ ಮೇಲೆ ಜಯ ಗಳಿಸುತ್ತೀರಿ. ಪುನಃ ನಿಮಗೇ ರಾಜ್ಯಭಾಗ್ಯವು ಸಿಗುತ್ತದೆ, ತಂದೆಯ ವಿನಃ ಮತ್ತ್ಯಾರೂ ಜಯವನ್ನು ಪ್ರಾಪ್ತಿ ಮಾಡಿಸಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ – ನೋಡಿ, ಮಕ್ಕಳೇ ನಿಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡುತ್ತೇನೆ! ಈಗ ಇಂತಹ ತಂದೆಯನ್ನು ನಿರಂತರ ನೆನಪು ಮಾಡಬೇಕಾಗಿದೆ, ಆಗಲೇ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿರಿ, ಇದರಿಂದ ಅಂತ್ಯಮತಿ ಸೋ ಗತಿಯಾಗುವುದು. ಎಂತಹ ಚಿಂತನೆ ಮಾಡುವರೋ ಅದೇರೀತಿ ಆಗಿ ಬಿಡುತ್ತಾರೆ ಆದ್ದರಿಂದ ತಂದೆಯು ಹೇಳುತ್ತಾರೆ – ನನ್ನನ್ನು ನೆನಪು ಮಾಡುತ್ತಾ-ಮಾಡುತ್ತಾ ನೀವೂ ಸಹ ಶ್ರೇಷ್ಠರಾಗಿ ಬಿಡುವಿರಿ. ನೆನಪಿನಿಂದ ವಿಕರ್ಮಗಳೂ ವಿನಾಶವಾಗಿ ಬಿಡುತ್ತವೆ ಮತ್ತು ತಮ್ಮ ಮನೆಗೆ ಹಿಂತಿರುಗಿ ಹೋಗುತ್ತೀರಿ. ಈ ಜ್ಞಾನವು ಆದಾಯದ ಮೂಲವಾಗಿದೆ. ಆರೋಗ್ಯ, ಐಶ್ವರ್ಯವೂ ಇರುತ್ತದೆ, ಸಂತೋಷವೂ ಇರುತ್ತದೆ. ಅಲ್ಲಿ ಎಷ್ಟೊಂದು ಧೀರ್ಘಾಯಸ್ಸು ಇರುತ್ತದೆ. ವಾಸ್ತವದಲ್ಲಿ ಯೋಗೇಶ್ವರನೆಂದು ಕೃಷ್ಣನಿಗೆ ಹೇಳುವುದಿಲ್ಲ. ಯೋಗೇಶ್ವರರು ತಾವಾಗಿದ್ದೀರಿ. ಈಶ್ವರನು ನಿಮಗೆ ಯೋಗವನ್ನು ಕಲಿಸುತ್ತಿದ್ದಾರೆ, ಇದು ರಾಜಯೋಗವಾಗಿದೆ. ಯೋಗ ಮಾಡಿ ನೀವು ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಈಶ್ವರನು ನಿಮಗೆ ಯೋಗವನ್ನು ಕಲಿಸಿ ರಾಜ್ಯ ಪದವಿಯ ಆಸ್ತಿಯನ್ನು ಕೊಡುತ್ತಾರೆ. ನಿಮಗೆ ರಾಜ್ಯವನ್ನು ಯಾರು ಕೊಟ್ಟರು? ತಂದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ತಂದೆಯಾದ ನನ್ನನ್ನು ನೆನಪು ಮಾಡಿರಿ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಿಂದ ಪಾಪಗಳು ಕಳೆಯುತ್ತಾ ಹೋಗುತ್ತವೆ. ಇದಂತೂ ಬಹಳ ಸಹಜವಾಗಿದೆ. ನಿಮ್ಮ ಬುದ್ಧಿಯಲ್ಲಿ ಎಷ್ಟೊಂದು ಜ್ಞಾನವಿದೆ, ಭಗವಂತನ ಮಕ್ಕಳು ಮಾ|| ಭಗವಂತನಾದಿರಿ, ಕೇವಲ ತಂದೆಯ ಬಳಿ ಕುಳಿತು ಬಿಡುವುದಲ್ಲ, ನಾವು ಪಾತ್ರವನ್ನು ಅಭಿನಯಿಸಬೇಕಾಗಿದೆ, ಇದರಲ್ಲಿ ಆತ್ಮಾಭಿಮಾನಿಗಳಾಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯು ಯಾವ ಜ್ಞಾನ ಕೊಡುತ್ತಾರೆಯೋ ಅದನ್ನೇ ಸದಾ ಮಂಥನ ಮಾಡಬೇಕಾಗಿದೆ. ಯುಕ್ತಿಯಿಂದ ಮಾತನಾಡಬೇಕಾಗಿದೆ. ಬಹಳ ಪ್ರೀತಿಯಿಂದ ತಿಳಿಸಿಕೊಡಬೇಕಾಗಿದೆ.

2. ತಮ್ಮ ಬಳಿ ಏನೆಲ್ಲವೂ ಇದೆಯೊ ಅದನ್ನು ಜೀವಿಸಿದ್ದಂತೆಯೇ ತಂದೆಗೆ ಕೊಟ್ಟು ಟ್ರಸ್ಟಿಯಾಗಿ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ.

ವರದಾನ:-

ನಾವು ಸರ್ವಶಕ್ತಿವಂತನ ಮಕ್ಕಳಾಗಿದ್ದೇವೆ – ಇದು ಸರ್ವಶ್ರೇಷ್ಠ ಸ್ಥಾನವಾಗಿದೆ, ಈ ಸ್ಥಾನದ ನಶೆಯಲ್ಲಿ ಇರುತ್ತೀರೆಂದರೆ ಮಾಯೆಯ ಅಧೀನತೆಯು ಸಮಾಪ್ತಿಯಾಗುವುದು. ಇದೇ ಅಧಿಕಾರ ಸ್ವರೂಪರಾಗುವುದರಿಂದ ಯಾವುದೇ ಆತ್ಮನ ಕಲ್ಯಾಣವನ್ನಾದರೂ ಮಾಡಬಹುದು. ಯಾರು ಸದಾ ಈ ನಶೆಯಲ್ಲಿರುತ್ತಾರೆಯೋ ಅವರು ಸದಾಕಾಲದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವರು. ಇದೇ ಅಧಿಕಾರವನ್ನು ಸದಾ ಸ್ಥಿರವಾಗಿ ಇಟ್ಟುಕೊಳ್ಳುತ್ತೀರೆಂದರೆ, ವಿಶ್ವವು ತಮ್ಮ ಮುಂದೆ ಬಾಗುವುದು, ತಾವು ಯಾರಮುಂದೆಯೂ ಬಾಗಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top