08 October 2021 KANNADA Murli Today | Brahma Kumaris

Read and Listen today’s Gyan Murli in Kannada

October 7, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈಗ ವಿದೇಹಿ ಆಗುವ ಅಭ್ಯಾಸ ಮಾಡಿರಿ, ತಮ್ಮ ಈ ವಿನಾಶಿ ದೇಹದೊಂದಿಗಿನ ಪ್ರೀತಿಯನ್ನು ತೆಗೆದು ಒಬ್ಬ ಶಿವ ತಂದೆಯನ್ನು ಪ್ರೀತಿ ಮಾಡಿರಿ”

ಪ್ರಶ್ನೆ:: -

ಈ ಬೇಹದ್ದಿನ ಹಳೆಯ ಪ್ರಪಂಚದಿಂದ ಯಾರಿಗೆ ವೈರಾಗ್ಯ ಬಂದು ಬಿಟ್ಟಿದೆಯೋ ಅವರ ಚಿಹ್ನೆಗಳೇನು?

ಉತ್ತರ:-

ಅವರು ಈ ಕಣ್ಣುಗಳಿಂದ ಏನೆಲ್ಲವನ್ನು ನೋಡುವರೋ ಅದನ್ನು ನೋಡಿಯೂ ನೋಡದಂತಿರುತ್ತಾರೆ. ಅವರ ಬುದ್ಧಿಯಲ್ಲಿರುತ್ತದೆ – ಇದೆಲ್ಲವೂ ಸಮಾಪ್ತಿಯಾಗುವುದಿದೆ, ಇವರೆಲ್ಲರೂ ಸತ್ತು ಹೋಗಿದ್ದಾರೆ. ನಾವಂತೂ ಸುಖಧಾಮ, ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಅವರ ಮಮತೆಯು ಕಳೆಯುತ್ತಾ ಹೋಗುವುದು. ಯೋಗದಲ್ಲಿದ್ದು ಯಾರೊಂದಿಗೇ ಮಾತನಾಡುತ್ತಾರೆಂದರೆ ಅವರಿಗೂ ಆಕರ್ಷಣೆಯಾಗುವುದು, ಜ್ಞಾನದ ನಶೆಯೇರಿರುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ…….

ಓಂ ಶಾಂತಿ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ನೀವು ಶಿವ ತಂದೆಯನ್ನು ಅರಿತಿದ್ದೀರಿ ಅಂದಮೇಲೆ ಮತ್ತೆ ಈ ಗೀತೆಯನ್ನು ಹಾಡುವುದು ಹೇಗೆ ಭಕ್ತಿಮಾರ್ಗವಾಗಿ ಬಿಡುತ್ತದೆ. ಭಕ್ತಿಮಾರ್ಗದವರು ಶಿವಾಯ ನಮಃ ಎಂತಲೂ ಹೇಳುತ್ತಾರೆ, ಮಾತಾಪಿತಾ ಎಂತಲೂ ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಶಿವ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗಬೇಕು, ನೀವು ಮಕ್ಕಳಿಗಂತೂ ತಂದೆಯು ಸಿಕ್ಕಿದ್ದಾರೆ. ಅವರಿಂದ ಆಸ್ತಿಯು ಸಿಗುತ್ತಿದೆ, ಆದ್ದರಿಂದ ತಂದೆಯನ್ನು ನೆನಪು ಮಾಡುತ್ತೀರಿ. ನಿಮಗೆ ಶಿವ ತಂದೆಯು ಸಿಕ್ಕಿದ್ದಾರೆ, ಪ್ರಪಂಚದವರಿಗೆ ಸಿಕ್ಕಿಲ್ಲ. ಯಾರಿಗೆ ಸಿಕ್ಕಿದ್ದಾರೆಯೋ ಅವರೂ ಸಹ ಒಳ್ಳೆಯ ರೀತಿಯಲ್ಲಿ ನಡೆಯುವುದಿಲ್ಲ. ತಂದೆಯ ಆದೇಶವು ಬಹಳ ಮಧುರವಾಗಿದೆ – ಆತ್ಮಾಭಿಮಾನಿ ಭವ, ಆತ್ಮಗಳೊಂದಿಗೆ ಮಾತನಾಡುತ್ತಾರೆ. ಆತ್ಮಾಭಿಮಾನಿ ತಂದೆಯು ಆತ್ಮಾಭಿಮಾನಿ ಮಕ್ಕಳೊಂದಿಗೆ ಮಾತನಾಡುತ್ತಾರೆ, ತಂದೆಯು ಒಬ್ಬರೇ ಆಗಿದ್ದಾರೆ, ಅವರು ಮಧುಬನದಲ್ಲಿ ನೀವು ಮಕ್ಕಳ ಜೊತೆ ಕುಳಿತಿದ್ದಾರೆ. ನೀವು ತಿಳಿದುಕೊಂಡಿದ್ದೀರಿ – ಅವಶ್ಯವಾಗಿ ತಂದೆಯು ಓದಿಸುವುದಕ್ಕಾಗಿಯೇ ಬಂದಿದ್ದಾರೆ, ಈ ವಿದ್ಯೆಯನ್ನು ಶಿವ ತಂದೆಯ ವಿನಃ ಯಾರೂ ಓದಿಸಲು ಸಾಧ್ಯವಿಲ್ಲ. ಬ್ರಹ್ಮನಾಗಲಿ, ವಿಷ್ಣುವಾಗಲಿ ಓದಿಸುವುದಿಲ್ಲ. ತಂದೆಯೇ ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ, ಅಮರ ಕಥೆಯನ್ನು ತಿಳಿಸುತ್ತಾರೆ. ಅದನ್ನು ಇಲ್ಲಿಯೇ ತಿಳಿಸುವರಲ್ಲವೆ. ಅಮರನಾಥದಲ್ಲಿ ತಿಳಿಸುವುದಿಲ್ಲ, ಈ ಅಮರಕಥೆಯೇ ಸತ್ಯ ನಾರಾಯಣನ ಕಥೆಯಾಗಿದೆ. ನಾನು ನಿಮಗೆ ಇಲ್ಲಿಯೇ ತಿಳಿಸುತ್ತೇನೆ ಬಾಕಿ ಇವೆಲ್ಲವೂ ಭಕ್ತಿಮಾರ್ಗದ ಪೆಟ್ಟುಗಳಾಗಿವೆ. ಸರ್ವರ ಸದ್ಗತಿದಾತ ರಾಮನು ಒಬ್ಬ ನಿರಾಕಾರನೇ ಆಗಿದ್ದಾರೆ, ಅವರೇ ಪತಿತ-ಪಾವನ ಜ್ಞಾನ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಯಾವಾಗ ವಿನಾಶದ ಸಮಯವಾಗುವುದು ಆಗಲೇ ಅವರು ಬರುತ್ತಾರೆ. ಇಡೀ ಜಗತ್ತಿನ ಗುರು ಒಬ್ಬ ಪರಮಪಿತ ಪರಮಾತ್ಮನೇ ಆಗಲು ಸಾಧ್ಯ, ಅವರು ನಿರಾಕಾರನಾಗಿದ್ದಾರಲ್ಲವೆ. ದೇವತೆಗಳಿಗೂ ಮನುಷ್ಯರೆಂದು ಹೇಳಲಾಗುತ್ತದೆ ಆದರೆ ಅವರು ದೈವೀ ಗುಣವಂತ ಮನುಷ್ಯರಾಗಿದ್ದಾರೆ ಆದ್ದರಿಂದ ಅವರಿಗೆ ದೇವತೆಗಳೆಂದು ಹೇಳಲಾಗುತ್ತದೆ. ನಿಮಗೆ ಈಗ ಜ್ಞಾನವು ಸಿಕ್ಕಿದೆ, ಜ್ಞಾನ ಮಾರ್ಗದಲ್ಲಿ ಸ್ಥಿತಿಯನ್ನು ಬಹಳ ಶಕ್ತಿಶಾಲಿಯಾಗಿ ಇಟ್ಟುಕೊಳ್ಳಬೇಕಾಗಿದೆ. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡಬೇಕಾಗಿದೆ, ವಿದೇಹಿಗಳಾಗಬೇಕಾಗಿದೆ ಮತ್ತೆ ದೇಹದೊಂದಿಗೆ ಪ್ರೀತಿಯನ್ನೇಕೆ ಮಾಡುವುದು! ತಂದೆಯು ನಿಮಗೆ ತಿಳಿಸುತ್ತಾರೆ – ಶಿವ ತಂದೆಯನ್ನು ನೆನಪು ಮಾಡಿರಿ, ನಂತರ ಇವರ ಬಳಿ ಬನ್ನಿರಿ. ಇವರು ದಾದಾರವರೊಂದಿಗೆ ಮಿಲನ ಮಾಡಲು ಹೋಗುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯನ್ನು ನೆನಪು ಮಾಡಿ, ನಾವು ಅವರೊಂದಿಗೆ ಮಿಲನ ಮಾಡುತ್ತೇವೆ. ಪರಮಧಾಮದಲ್ಲಂತೂ ಇರುವುದೇ ನಿರಾಕಾರಿ ಆತ್ಮರು, ಬಿಂದುಗಳು. ಬಿಂದುವಿನೊಂದಿಗೆ ಮಿಲನ ಮಾಡಲು ಸಾಧ್ಯವಿಲ್ಲ ಅಂದಮೇಲೆ ಶಿವ ತಂದೆಯೊಂದಿಗೆ ಹೇಗೆ ಮಿಲನ ಮಾಡುತ್ತೀರಿ! ಆದ್ದರಿಂದ ಇಲ್ಲಿ ತಿಳಿಸಲಾಗುತ್ತದೆ – ಹೇ ಆತ್ಮರೇ, ತಮ್ಮನ್ನು ಆತ್ಮನೆಂದು ತಿಳಿದು ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಿ, ನಾವು ಶಿವ ತಂದೆಯೊಂದಿಗೆ ಮಿಲನ ಮಾಡುತ್ತೇವೆ. ಇದು ಬಹಳ ಗುಹ್ಯ ರಹಸ್ಯವಲ್ಲವೆ. ಕೆಲವರಿಗೆ ಶಿವ ತಂದೆಯ ನೆನಪು ಇರುವುದಿಲ್ಲ. ತಂದೆಯು ತಿಳಿಸುತ್ತಾರೆ – ಸದಾ ಶಿವ ತಂದೆಯನ್ನೇ ನೆನಪು ಮಾಡಿರಿ. ಶಿವ ತಂದೆಯು ತಮ್ಮೊಂದಿಗೆ ಮಿಲನ ಮಾಡಲು ಬರುತ್ತಾರೆ. ಬಾಬಾ, ನಾವು ನಿಮ್ಮವರಾಗಿದ್ದೇವೆ. ತಂದೆಯು ಇವರಲ್ಲಿ ಬಂದು ಜ್ಞಾನವನ್ನು ತಿಳಿಸುತ್ತಾರೆ, ಅವರೂ ಸಹ ನಿರಾಕಾರ ಆತ್ಮನಾಗಿದ್ದಾರೆ, ನೀವೂ ಆತ್ಮರಾಗಿದ್ದೀರಿ. ಒಬ್ಬ ತಂದೆಯೇ ಮಕ್ಕಳಿಗೆ ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಅಂದಮೇಲೆ ಬುದ್ಧಿಯಿಂದ ನೆನಪು ಮಾಡಬೇಕಾಗಿದೆ – ನಾವು ತಂದೆಯ ಬಳಿ ಬಂದಿದ್ದೇವೆ. ತಂದೆಯು ಈ ಪತಿತ ಶರೀರದಲ್ಲಿ ಬಂದಿದ್ದಾರೆ, ನಾವು ಸನ್ಮುಖದಲ್ಲಿ ಬರುತ್ತಿದ್ದಂತೆಯೇ ನಿಶ್ಚಯ ಮಾಡಿಕೊಳ್ಳುತ್ತೇವೆ, ಬಾಬಾ ನಾವು ನಿಮ್ಮವರಾಗಿದ್ದೇವೆ ಎಂದು. ಮುರುಳಿಗಳಲ್ಲಿಯೂ ಇದನ್ನೇ ಕೇಳುತ್ತೀರಿ – ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು.

ನೀವು ತಿಳಿದುಕೊಂಡಿದ್ದೀರಿ, ಇವರು ಅದೇ ಪತಿತ-ಪಾವನ ತಂದೆಯಾಗಿದ್ದಾರೆ. ಸತ್ಯ-ಸತ್ಯವಾದ ಸದ್ಗುರು ಅವರಾಗಿದ್ದಾರೆ. ನೀವು ಪಾಂಡವರದು ಈಗ ಪರಮಪಿತ ಪರಮಾತ್ಮನೊಂದಿಗೆ ಪ್ರೀತಿಬುದ್ಧಿಯಿದೆ. ಉಳಿದೆಲ್ಲರದೂ ಯಾರಾದರೊಬ್ಬರ ಜೊತೆ ವಿಪರೀತ ಬುದ್ಧಿಯಿದೆ. ಯಾರು ಶಿವ ತಂದೆಯ ಮಕ್ಕಳಾಗುವರೋ ಅವರಿಗಂತೂ ಖುಷಿಯ ನಶೆಯು ಬಹಳ ಜೋರಾಗಿ ಏರಿರಬೇಕು. ಎಷ್ಟು ಸಮಯವು ಸಮೀಪ ಬರುತ್ತದೆಯೋ ಅಷ್ಟು ಖುಷಿಯಾಗುತ್ತದೆ. ಈಗ ನಮ್ಮ 84 ಜನ್ಮಗಳು ಮುಕ್ತಾಯವಾಯಿತು. ಈಗ ಇದು ಅಂತಿಮ ಜನ್ಮವಾಗಿದೆ, ನಾವು ನಮ್ಮ ಮನೆಗೆ ಹೋಗುತ್ತೇವೆ. ಈ ಏಣಿಯ ಚಿತ್ರವು ಬಹಳ ಚೆನ್ನಾಗಿದೆ, ಇದರಲ್ಲಿ ಸ್ಪಷ್ಟವಾಗಿದೆ ಅಂದಾಗ ಮಕ್ಕಳು ಇಡೀ ದಿನ ಬುದ್ಧಿಯನ್ನು ಓಡಿಸಬೇಕು. ಚಿತ್ರಗಳನ್ನು ಮಾಡಿಸುವವರಂತೂ ಬಹಳ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಯಾರು ಮುಖ್ಯಸ್ಥರಿದ್ದಾರೆಯೋ ಅವರಿಗೇ ಇದರ ಬಗ್ಗೆ ವಿಚಾರ ನಡೆಯಬೇಕು. ನೀವಂತೂ ಛಾಲೆಂಜ್ ಮಾಡುತ್ತೀರಿ – ಸತ್ಯಯುಗೀ ಶ್ರೇಷ್ಠಾಚಾರಿ ದೈವೀ ರಾಜ್ಯದಲ್ಲಿ 9 ಲಕ್ಷ ಮಂದಿ ಇರುತ್ತಾರೆ. ಇದಕ್ಕೆ ಸಾಕ್ಷಿಯೇನು ಎಂದು ಯಾರಾದರೂ ಕೇಳುತ್ತಾರೆ ಆಗ ಹೇಳಿರಿ, ಇದಂತೂ ತಿಳುವಳಿಕೆಯ ಮಾತಲ್ಲವೆ. ಸತ್ಯಯುಗದಲ್ಲಿ ಚಿಕ್ಕ ವೃಕ್ಷವೇ ಇರುವುದು. ಒಂದೇ ಧರ್ಮ ಇರುವುದು ಅಂದಮೇಲೆ ಜನಸಂಖ್ಯೆಯು ಕಡಿಮೆಯಿರುತ್ತದೆ. ಏಣಿಯ ಚಿತ್ರದಲ್ಲಿ ಇದರ ಸಂಪೂರ್ಣ ಜ್ಞಾನವು ಬಂದು ಬಿಡುತ್ತದೆ. ಹೇಗೆ ಕುಂಭಕರ್ಣನ ಚಿತ್ರವಿರುತ್ತದೆ, ಇದನ್ನು ಈ ರೀತಿ ಮಾಡಿಸಬೇಕು – ಬಿ.ಕೆ.ಗಳು ಜ್ಞಾನಾಮೃತವನ್ನು ಕುಡಿಸುತ್ತಾರೆ. ಅವರು ವಿಷ (ವಿಕಾರ) ವನ್ನೇ ಬಯಸುತ್ತಾರೆ. ತಂದೆಯು ಮುರುಳಿಯಲ್ಲಿ ಎಲ್ಲಾ ಸೂಚನೆಗಳನ್ನೂ ನೀಡುತ್ತಿರುತ್ತಾರೆ. ಪ್ರತಿಯೊಂದು ಚಿತ್ರದ ತಿಳುವಳಿಕೆಯು ಬಹಳ ಚೆನ್ನಾಗಿದೆ, ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಹೇಳಿರಿ – ಈ ಭಾರತವು ಸ್ವರ್ಗವಾಗಿತ್ತು, ಒಂದು ಧರ್ಮವಿತ್ತು ಅಂದಮೇಲೆ ಎಷ್ಟು ಜನ ಸಂಖ್ಯೆಯಿರಬಹುದು, ಈಗ ಎಷ್ಟು ದೊಡ್ಡ ವೃಕ್ಷವಾಗಿ ಬಿಟ್ಟಿದೆ, ಇದರ ವಿನಾಶವಾಗಲಿದೆ. ಹಳೆಯ ಸೃಷ್ಟಿಯನ್ನು ಪರಿವರ್ತನೆ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ನಾಲ್ಕೈದು ಚಿತ್ರಗಳು ಮುಖ್ಯವಾಗಿದೆ, ಇವುಗಳಿಂದ ಮನುಷ್ಯರಿಗೆ ಬಹುಬೇಗನೆ ಬಾಣವು ನಾಟಿ ಬಿಡುವುದು. ಡ್ರಾಮಾನುಸಾರ ದಿನ-ಪ್ರತಿದಿನ ಜ್ಞಾನದ ಮಾತುಗಳು ಗುಹ್ಯವಾಗುತ್ತಾ ಹೋಗುತ್ತವೆ ಆದ್ದರಿಂದ ಚಿತ್ರಗಳಲ್ಲಿಯೂ ಬದಲಾವಣೆಯಾಗುವುದು. ಮಕ್ಕಳ ಬುದ್ಧಿಯಲ್ಲಿಯೂ ಬದಲಾವಣೆಯಾಗುತ್ತದೆ. ಮೊದಲು ಶಿವ ತಂದೆಯು ಬಿಂದುವಾಗಿದ್ದಾರೆ ಎಂಬುದು ತಿಳಿದುಕೊಂಡಿದ್ದೀರಿ! ಮೊದಲೇ ಏಕೆ ತಿಳಿಸಲಿಲ್ಲ ಎಂದು ಹೇಳುವಂತಿಲ್ಲ. ತಂದೆಯು ತಿಳಿಸುತ್ತಾರೆ – ಇವೆಲ್ಲಾ ಮಾತುಗಳನ್ನೂ ಮೊದಲೇ ತಿಳಿಸಲಾಗುವುದಿಲ್ಲ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಜ್ಞಾನವನ್ನು ಕೊಡುತ್ತಲೇ ಇರುತ್ತಾರೆ, ಅದರಲ್ಲಿ ತಿದ್ದು ಪಡಿ ಆಗುತ್ತಾ ಇರುತ್ತದೆ. ಮೊದಲೇ ತಿಳಿಸುವರೇನು! ಮೊದಲೇ ತಿಳಿಸಿಬಿಟ್ಟರೆ ಅದು ಕೃತಕವಾಗಿ ಬಿಡುವುದು. ಆಕಸ್ಮಿಕವಾಗಿ ಯಾವುದೇ ಸನ್ನಿವೇಶಗಳು ನಡೆಯುತ್ತಾ ಇರುತ್ತವೆ, ನಂತರ ಡ್ರಾಮಾ ಎಂದು ಹೇಳುತ್ತೀರಿ. ಈ ರೀತಿಯಾಗಬಾರದಿತ್ತು, ಮಮ್ಮಾರವರು ಕೊನೆಯವರಿಗೂ ಇರಬೇಕಾಗಿತ್ತು ಅಂದಮೇಲೆ ಮಮ್ಮಾ ಏಕೆ ಹೊರಟು ಹೋದರು ಎಂದು ಹೇಳುವಂತಿಲ್ಲ. ಡ್ರಾಮಾದಲ್ಲಿ ಏನಾಯಿತೋ ಅದು ಸರಿಯಾಗಿದೆ. ತಂದೆಯೂ ಸಹ ಏನು ಹೇಳಿದರೋ ಅದನ್ನು ಡ್ರಾಮಾ ಅನುಸಾರ ಹೇಳಿದರು, ಡ್ರಾಮಾದಲ್ಲಿ ನನ್ನ ಪಾತ್ರವೇ ಹೀಗಿದೆ ಎಂದು ತಂದೆಯೂ ಸಹ ಡ್ರಾಮಾದ ಮೇಲೆ ಇಟ್ಟು ಬಿಡುತ್ತಾರೆ. ಮನುಷ್ಯರು ಈಶ್ವರನ ಇಚ್ಛೆ ಅಥವಾ ಈಶ್ವರನ ಲೀಲೆಯೆಂದು ಹೇಳಿ ಬಿಡುತ್ತಾರೆ ಆದರೆ ಡ್ರಾಮಾದ ಲೀಲೆಯೆಂದು ಈಶ್ವರನು ಹೇಳುತ್ತಾರೆ. ಈಶ್ವರನು ಹೇಳಿದರೋ ಅಥವಾ ಇವರು ಹೇಳಿದರೋ ಅದು ಡ್ರಾಮಾದಲ್ಲಿತ್ತು. ಯಾವುದೇ ಉಲ್ಟಾ ಕರ್ಮವಾಯಿತೆಂದರೆ ಅದು ಡ್ರಾಮಾದಲ್ಲಿತ್ತು ಮತ್ತೆ ಸುಲ್ಟಾ ಅಗಿ ಬಿಡುವುದು. ಅವಶ್ಯವಾಗಿ ಏರುವ ಕಲೆಯಾಗುವುದು, ಹೇಗೆ ಎತ್ತರದ ಪ್ರದೇಶಕ್ಕೆ ಹೋಗುತ್ತಾರೆಂದರೆ ಕೆಲವೊಮ್ಮೆ ನಡುಗಿ ಬಿಡುತ್ತಾರೆ. ಇವೆಲ್ಲವೂ ಮಾಯೆಯ ಬಿರುಗಾಳಿಗಳಾಗಿವೆ. ಎಲ್ಲಿಯವರೆಗೆ ಮಾಯೆಯಿರುವುದೋ ಅಲ್ಲಿಯವರೆಗೆ ವಿಕಲ್ಪಗಳು ಅವಶ್ಯವಾಗಿ ಬರುತ್ತವೆ. ಸತ್ಯಯುಗದಲ್ಲಿ ಮಾಯೆಯೇ ಇರುವುದಿಲ್ಲ ಅಂದಮೇಲೆ ವಿಕಲ್ಪದ ಮಾತೇ ಇರುವುದಿಲ್ಲ. ಸತ್ಯಯುಗದಲ್ಲಿ ಎಂದೂ ಕರ್ಮವು ವಿಕರ್ಮವಾಗುವುದಿಲ್ಲ. ಇನ್ನು ಕೆಲವೇ ದಿನಗಳಿವೆ, ಖುಷಿಯಿರುತ್ತದೆ, ಇದು ನಮ್ಮ ಅಂತಿಮ ಜನ್ಮವಾಗಿದೆ. ಈಗ ಅಮರಲೋಕದಲ್ಲಿ ಹೋಗುವುದಕ್ಕಾಗಿ ಶಿವ ತಂದೆಯಿಂದ ಅಮರ ಕಥೆಯನ್ನು ಕೇಳುತ್ತೇವೆ. ಈ ಮಾತುಗಳನ್ನು ನೀವೇ ತಿಳಿದುಕೊಳ್ಳುತ್ತೀರಿ. ಅವರಂತೂ ಎಲ್ಲೆಲ್ಲಿಯೋ ಅಮರನಾಥಕ್ಕೆ ಹೋಗಿ ಪೆಟ್ಟು ತಿನ್ನುತ್ತಾ ಇರುತ್ತಾರೆ. ಪಾರ್ವತಿಗೆ ಯಾರು ಕಥೆಯನ್ನು ತಿಳಿಸಿದರು ಎಂಬುದನ್ನು ತಿಳಿದುಕೊಂಡಿಲ್ಲ. ಅಲ್ಲಂತೂ ಶಿವನ ಚಿತ್ರವನ್ನು ತೋರಿಸುತ್ತಾರೆ. ಶಿವನು ಯಾರಲ್ಲಿ ಕುಳಿತುಕೊಂಡರು? ಶಿವ ಮತ್ತು ಶಂಕರನನ್ನು ತೋರಿಸುತ್ತಾರೆ ಅಂದಮೇಲೆ ಶಿವನೇ ಶಂಕರನಲ್ಲಿ ಕುಳಿತು ಕಥೆಯನ್ನು ತಿಳಿಸಿದರೇ? ಏನನ್ನೂ ತಿಳಿದುಕೊಂಡಿಲ್ಲ. ಭಕ್ತಿ ಮಾರ್ಗದವರು ಇಲ್ಲಿಯವರೆಗೂ ತೀರ್ಥ ಯಾತ್ರೆಗಳನ್ನು ಮಾಡಲು ಹೋಗುತ್ತಾರೆ. ವಾಸ್ತವದಲ್ಲಿ ಕಥೆಯೂ ದೊಡ್ಡದಿಲ್ಲ, ಮೂಲವಾಗಿದೆ – ಮನ್ಮನಾಭವ. ಕೇವಲ ಬೀಜವನ್ನು ನೆನಪು ಮಾಡಿರಿ, ಡ್ರಾಮಾದ ಚಕ್ರವನ್ನು ನೆನಪು ಮಾಡಿರಿ. ಯಾವ ಜ್ಞಾನವು ತಂದೆಯ ಬಳಿಯಿದೆಯೋ ಆ ಜ್ಞಾನವು ನಾವಾತ್ಮರಲ್ಲಿಯೂ ಇದೆ. ಅವರೂ ಸಹ ಜ್ಞಾನ ಸಾಗರ, ನಾವಾತ್ಮರೂ ಸಹ ಮಾ|| ಜ್ಞಾನ ಸಾಗರರಾಗುತ್ತೇವೆ, ನಶೆಯೇರಬೇಕಲ್ಲವೆ. ಅವರು ನಾವು ಸಹೋದರರಿಗೆ ತಿಳಿಸುತ್ತಾರೆ, ಶರೀರದ ಮುಖಾಂತರವೇ ತಿಳಿಸುತ್ತಾರೆ. ಇದರಲ್ಲಿ ಸಂಶಯ ತರಬಾರದು. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಇಡೀ ಜ್ಞಾನವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ, ಮಮತೆಯು ಕಳೆಯುತ್ತಾ ಹೋಗುತ್ತದೆ. ಕೆಲವರಿಗೆ ನಾಮ ಮಾತ್ರ ಪ್ರೀತಿಯಿರುತ್ತದೆ, ನಮ್ಮದೂ ಹಾಗೆಯೇ. ಈಗಂತೂ ನಾವು ಸುಖಧಾಮಕ್ಕೆ ಹೋಗುತ್ತೇವೆ, ಇವರೆಲ್ಲರೂ ಹೇಗೆ ಸತ್ತು ಹೋಗಿದ್ದಾರೆ. ಇವರೊಂದಿಗೆ ಮನಸ್ಸನ್ನು ಇಡುವುದೇನು! ಶಾಂತಿಧಾಮದಲ್ಲಿ ಹೋಗಿ ನಂತರ ಸುಖಧಾಮದಲ್ಲಿ ಬಂದು ರಾಜ್ಯಭಾರ ಮಾಡುತ್ತೇವೆ, ಇದಕ್ಕೆ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ಸಮಾಪ್ತಿಯಾಗಲಿದೆ. ವಿನಾಶದ ನಂತರ ಸ್ವರ್ಗವನ್ನು ನೋಡುತ್ತೀರಿ, ಈಗ ನೀವು ಮಕ್ಕಳು ಬಹಳ ಮಧುರರಾಗಬೇಕು. ಯೋಗದಲ್ಲಿದ್ದು ಯಾವುದೇ ಮಾತನಾಡುತ್ತೀರೆಂದರೆ ಅವರಿಗೆ ಬಹಳ ಆಕರ್ಷಣೆಯಾಗುವುದು. ಈ ಜ್ಞಾನವು ಹೀಗಿದೆ, ಇದರಿಂದ ಮತ್ತೆಲ್ಲವೂ ಮರೆತು ಹೋಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನ ಮಾರ್ಗದಲ್ಲಿ ತಮ್ಮ ಸ್ಥಿತಿಯನ್ನು ಬಹಳ ಶಕ್ತಿಶಾಲಿ ಮಾಡಿಕೊಳ್ಳಬೇಕಾಗಿದೆ. ವಿದೇಹಿಯಾಗಬೇಕಾಗಿದೆ. ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನು ಇಡಬೇಕಾಗಿದೆ.

2. ಡ್ರಾಮಾದ ವಿಷಯದಲ್ಲಿ ಅಡೋಲರಾಗಿರಬೇಕಾಗಿದೆ. ಡ್ರಾಮಾದಲ್ಲಿ ಏನಾಯಿತೋ ಅದು ಸರಿಯಾಗಿದೆ, ಎಂದೂ ಡೋಲಾಯಮಾನ ಆಗಬಾರದು. ಯಾವುದೇ ಮಾತಿನಲ್ಲಿ ಸಂಶಯ ತರಬಾರದು.

ವರದಾನ:-

ತಾವು ದಾತನ ಮಕ್ಕಳು ತೆಗೆದುಕೊಳ್ಳುವವರಲ್ಲ ಆದರೆ ಕೊಡುವವರಾಗಿದ್ದೀರಿ. ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪದಲ್ಲಿ ಕೊಡಬೇಕಾಗಿದೆ. ಯಾವಾಗ ಈ ರೀತಿ ದಾತರಾಗುತ್ತೀರಿ ಆಗಲೇ ಉದಾರಚಿತ್ತ, ಮಹಾದಾನಿ ಆಗಿ ಬಿಡುವಿರಿ. ಇಂತಹ ಮಹಾದಾನಿ ಆಗುವುದರಿಂದ ಮಹಾನ್ ಶಕ್ತಿಯು ಸ್ವತಹವಾಗಿ ಪ್ರಾಪ್ತಿಯಾಗುತ್ತದೆ. ಆದರೆ ಕೊಡುವುದಕ್ಕಾಗಿ ಸ್ವಯಂನ ಭಂಡಾರವು ಸಂಪನ್ನವಾಗಿರಬೇಕು. ಏನನ್ನು ತೆಗೆದುಕೊಳ್ಳಬೇಕಾಗಿತ್ತು ಅದೆಲ್ಲವನ್ನೂ ತೆಗೆದುಕೊಂಡಿರಿ, ಕೊಡುವುದಷ್ಟೇ ಉಳಿದುಕೊಂಡಿದೆ. ಅಂದಮೇಲೆ ಕೊಡುತ್ತಾ ಸಾಗಿರಿ, ಕೊಡುವುದರಿಂದ ಭಂಡಾರವರು ಮತ್ತಷ್ಟು ತುಂಬುತ್ತಿರುತ್ತದೆ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ:

1. “ನಿರಾಕಾರ ಪರಮಾತ್ಮನ ನಿಗದಿಯಾಗಿರುವ ತನು ಬ್ರಹ್ಮಾರವರ ತನುವಾಗಿದೆ”

ತಮಗೆ ಇದಂತು ಸಂಪೂರ್ಣ ನಿಶ್ಚಯವಿದೆ – ಪರಮಾತ್ಮನು ನಮ್ಮ ಸಾಕಾರ ಬ್ರಹ್ಮಾರವರ ತನುವಿನ ಮೂಲಕ ಬಂದು ಓದಿಸುತ್ತಿದ್ದಾರೆ, ಈ ಅಂಶದಲ್ಲಿ ಬಹಳ ಜಿಜ್ಞಾಸುಗಳು ಪ್ರಶ್ನಿಸುತ್ತಾರೆ – ಅಮೃತವೇಳೆಯ ಸಮಯದಲ್ಲಿ ನಿರಾಕಾರ ಪರಮಾತ್ಮನು, ಯಾವಾಗ ಸಾಕಾರ ತನುವಿನಲ್ಲಿ ಪ್ರವೇಶಿಸುತ್ತಾರೆಯೋ ಆಗ ಅದೇ ಸಮಯದಲ್ಲಿ ಶರೀರದಲ್ಲಿ ಎಂತಹ ಪರಿವರ್ತನೆ ಆಗುತ್ತದೆ? ಪರಮಾತ್ಮನು ಹೇಗೆ ಬರುತ್ತಾರೆ ಎಂದು ನೀವು ಆ ಸಮಯದಲ್ಲಿ ಕುಳಿತುಕೊಂಡು ಅವರನ್ನು ನೋಡುತ್ತೀರಾ? ಎಂದು ಅವರು ಕೇಳುತ್ತಾರೆ. ಈಗ ಇದರ ಬಗ್ಗೆ ತಿಳಿಸಲಾಗುತ್ತದೆ – ಪರಮಾತ್ಮನ ಪ್ರವೇಶತೆಯಾಗುವ ಸಮಯದಲ್ಲಿ, ಆ ಶರೀರದ ಚಲನೆ-ವಲನೆಯು ಬದಲಾಗಿ ಬಿಡುತ್ತದೆ ಎಂದಲ್ಲ. ಆದರೆ ನಾವು ಯಾವಾಗ ಧ್ಯಾನದಲ್ಲಿ ಹೋಗುತ್ತೇವೆ ಆಗ ನಯನ, ಚಲನೆ-ವಲನೆಯು ಬದಲಾಗಿ ಬಿಡುತ್ತದೆ ಆದರೆ ಈ ಸಾಕಾರ ಬ್ರಹ್ಮಾರವರ ಪಾತ್ರವೇ ಗುಪ್ತವಾದುದು. ಯಾವಾಗ ಪರಮಾತ್ಮನು ಇವರ ತನುವಿನಲ್ಲಿ ಬರುತ್ತಾರೆಯೋ ಆಗ ಯಾರಿಗೂ ಗೊತ್ತಾಗುವುದಿಲ್ಲ, ಅವರ ಈ ತನುವು ನಿಗಧಿಯಾಗಿರುವುದಾಗಿದೆ ಆದ್ದರಿಂದ ಸೆಕೆಂಡಿನಲ್ಲಿ ಬರುತ್ತಾರೆ, ಸೆಕೆಂಡಿನಲ್ಲಿ ಹೊರಟು ಹೋಗುತ್ತಾರೆ, ಈಗ ಈ ರಹಸ್ಯವನ್ನು ತಿಳಿದುಕೊಳ್ಳಿರಿ. ಯಾವುದೇ ಅಂಶದ ಬಗ್ಗೆ ಅರ್ಥವಾಗದಿದ್ದರೆ ಈ ವಿದ್ಯಾಭ್ಯಾಸದ ಕೋರ್ಸನ್ನೇ ಬಿಟ್ಟು ಬಿಡಬೇಕು ಎನ್ನುವಂತಲ್ಲ. ವಿದ್ಯಾಭ್ಯಾಸವಂತು ದಿನ ಕಳೆದಂತೆ ಗುಹ್ಯ ಹಾಗೂ ಸ್ಪಷ್ಟವಾಗುತ್ತಿರುತ್ತದೆ. ಒಂದೇ ಸಾರಿಗೆ ಇಡೀ ಕೋರ್ಸನ್ನೇ ಓದುವುದಕ್ಕೆ ಸಾಧ್ಯವಿಲ್ಲ ಅಲ್ಲವೆ, ತಮಗೆ ಇಲ್ಲಿ ತಿಳಿಸಲಾಗುತ್ತದೆ. ಮತ್ತೆ ಯಾರೆಲ್ಲಾ ಧರ್ಮಪಿತರು ಬರುತ್ತಾರೆಯೋ ಅವರಲ್ಲಿಯೂ ಸಹ ತನ್ನ-ತನ್ನ ಪವಿತ್ರ ಆತ್ಮನು ಬಂದು, ತನ್ನ ಪಾತ್ರವನ್ನು ಅಭಿನಯ ಮಾಡುತ್ತದೆ. ನಂತರ ಆ ಆತ್ಮರೂ ಸುಖ-ದುಃಖದ ಆಟದಲ್ಲಿ ಬರಬೇಕಾಗುವುದು, ಹಿಂತಿರುಗಿ ಹೋಗುವುದಿಲ್ಲ ಆದರೆ ಯಾವಾಗ ನಿರಾಕಾರ ಪರಮ ಆತ್ಮನು ಬರುತ್ತಾರೆಂದರೆ, ಅವರು ಸುಖ-ದುಃಖದಿಂದ ಭಿನ್ನವಾಗಿದ್ದಾರೆ. ಅಂದಾಗ ಅವರು ತನ್ನ ಪಾತ್ರವನ್ನಷ್ಟೆ ಅಭಿನಯಿಸುತ್ತಾ ಹೊರಟು ಬಿಡುತ್ತಾರೆ. ಅಂದಾಗ ನಾವು ಇದೇ ಅಂಶವನ್ನು ಬುದ್ಧಿಯಿಂದ ಅರಿಯಬೇಕಾಗಿದೆ.

2. “ಆತ್ಮ ಮತ್ತು ಪರಮಾತ್ಮನಲ್ಲಿ ಗುಣಗಳ ಹಾಗೂ ಶಕ್ತಿಯ ಅಂತರ”

ಆತ್ಮ ಮತ್ತು ಪರಮಾತ್ಮನ ಅಂತರದ ಬಗ್ಗೆ ತಿಳಿಸಲಾಗುತ್ತದೆ – ಆತ್ಮ ಮತ್ತು ಪರಮಾತ್ಮನ ರೂಪವು ಒಂದೇ ರೀತಿ ಜ್ಯೋತಿ ಸ್ವರೂಪವಾಗಿದೆ. ಆತ್ಮ ಹಾಗೂ ಪರಮಾತ್ಮನ ಆತ್ಮದ ಗಾತ್ರವೂ ಒಂದೇ ರೀತಿಯಲ್ಲಿ ಇದೆ, ಬಾಕಿ ಆತ್ಮ ಮತ್ತು ಪರಮಾತ್ಮನಲ್ಲಿ ಕೇವಲ ಗುಣಗಳ ಶಕ್ತಿಯ ಅಂತರವಂತು ಅವಶ್ಯವಾಗಿ ಇದೆ. ಈಗ ಇಷ್ಟೆಲ್ಲಾ ಗುಣಗಳೇನಿವೆ ಅವೆಲ್ಲಾ ಮಹಿಮೆಯು ಪರಮಾತ್ಮನದಾಗಿದೆ. ಪರಮಾತ್ಮನು ದುಃಖ-ಸುಖದಿಂದ ಭಿನ್ನವಾಗಿದ್ದಾರೆ, ಸರ್ವಶಕ್ತಿವಂತನು ಆಗಿದ್ದಾರೆ, ಸರ್ವಗುಣ ಸಂಪನ್ನನಾಗಿದ್ದಾರೆ, 16 ಕಲಾ ಸಂಪೂರ್ಣನಾಗಿದ್ದಾರೆ, ಅವರದೆಲ್ಲಾ ಶಕ್ತಿಗಳು ಕೆಲಸ ಮಾಡುತ್ತಿದೆ. ಮತ್ತ್ಯಾವುದೇ ಮನುಷ್ಯಾತ್ಮನ ಯಾವುದೇ ಶಕ್ತಿಯೂ ನಡೆಯಲು ಸಾಧ್ಯವಿಲ್ಲ. ಪರಮಾತ್ಮನದೇ ಎಲ್ಲಾ ಪಾತ್ರಗಳು ನಡೆಯುತ್ತದೆ, ಭಲೆ ಪರಮಾತ್ಮನು ಪಾತ್ರದಲ್ಲಿಯೂ ಬರುತ್ತಾರೆ, ಆದರೂ ಸ್ವಯಂ ಭಿನ್ನವಾಗಿ ಇರುತ್ತಾರೆ. ಆದರೆ ಆತ್ಮನು ಪಾತ್ರದಲ್ಲಿ ಬರುತ್ತಿದ್ದರೂ ಪಾತ್ರಧಾರಿಯ ರೂಪದಲ್ಲಿ ಬಂದು ಬಿಡುತ್ತಾನೆ. ಪರಮಾತ್ಮನು ಪಾತ್ರದಲ್ಲಿ ಬರುತ್ತಿದ್ದರೂ ಕರ್ಮ ಬಂಧನದಿಂದ ಭಿನ್ನವಾಗಿದ್ದಾರೆ. ಆತ್ಮವು ಪಾತ್ರದಲ್ಲಿ ಬರುತ್ತಿದ್ದರೂ ಕರ್ಮ ಬಂಧನಕ್ಕೆ ವಶವಾಗಿ ಬಿಡುತ್ತಾರೆ. ಇದು ಆತ್ಮ ಹಾಗೂ ಪರಮಾತ್ಮನಲ್ಲಿನ ಅಂತರವಾಗಿದೆ. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top