05 October 2021 KANNADA Murli Today | Brahma Kumaris

Read and Listen today’s Gyan Murli in Kannada

October 4, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಆತ್ಮ ಮತ್ತು ಶರೀರ ಯಾವುದು ಪತಿತ ಮತ್ತು ಕಪ್ಪಾಗಿ ಬಿಟ್ಟಿದೆಯೋ ಅದನ್ನು ತಂದೆಯ ನೆನಪಿನಿಂದ ಪಾವನ ಮಾಡಿಕೊಳ್ಳಿ, ಏಕೆಂದರೆ ಈಗ ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ”

ಪ್ರಶ್ನೆ:: -

ಭಗವಂತನು ಯಾವ ಮಕ್ಕಳಿಗೆ ಸಿಗುತ್ತಾರೆ, ತಂದೆಯು ಯಾವ ಲೆಕ್ಕವನ್ನು ತಿಳಿಸಿದ್ದಾರೆ?

ಉತ್ತರ:-

ಯಾರು ಆರಂಭದಿಂದಲೂ ಭಕ್ತಿ ಮಾಡಿದ್ದಾರೆಯೋ ಅವರಿಗೇ ಭಗವಂತನು ಸಿಗುತ್ತಾರೆ. ತಂದೆಯು ಈ ಲೆಕ್ಕವನ್ನು ತಿಳಿಸಿದ್ದಾರೆ – ಎಲ್ಲರಿಗಿಂತ ಮೊದಲು ನೀವು ಭಕ್ತಿ ಮಾಡುತ್ತೀರಿ, ಆದ್ದರಿಂದ ನಿಮಗೆ ಮೊಟ್ಟ ಮೊದಲು ಭಗವಂತನ ಮೂಲಕ ಜ್ಞಾನವು ಸಿಗುತ್ತದೆ. ಇದರಿಂದ ನೀವು ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೀರಿ. ತಂದೆಯು ಹೇಳುತ್ತಾರೆ – ಮಕ್ಕಳೇ, ಅರ್ಧಕಲ್ಪ ನೀವು ನನ್ನನ್ನು ನೆನಪು ಮಾಡಿದ್ದೀರಿ. ಈಗ ನಿಮಗೆ ಭಕ್ತಿಯ ಫಲವನ್ನು ಕೊಡಲು ಬಂದಿದ್ದೇನೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸತ್ತರೂ ನಿಮ್ಮ ಮಡಿಲಿನಲ್ಲಿಯೇ, ಬದುಕಿದರೂ ನಿಮ್ಮ ಮಡಿಲಿನಲ್ಲಿಯೇ…..

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಯಾರಾದರೂ ಶರೀರ ಬಿಡುತ್ತಾರೆಂದರೆ ಇನ್ನೊಬ್ಬ ತಂದೆಯ ಬಳಿ ಜನ್ಮ ಪಡೆಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ನಾವಾತ್ಮರಾಗಿದ್ದೇವೆ. ಅದಂತೂ ಶರೀರದ ಮಾತಾಯಿತು. ಒಂದು ಶರೀರವನ್ನು ಬಿಟ್ಟು ಮತ್ತೆ ಇನ್ನೊಬ್ಬ ತಂದೆಯ ಬಳಿ ಹೋಗುತ್ತಾರೆ. ನೀವು ಎಷ್ಟೊಂದು ಸಾಕಾರಿ ತಂದೆಯರನ್ನು ಪಡೆದಿದ್ದೀರಿ. ಮೂಲತಃ ನಿರಾಕಾರಿ ತಂದೆಯ ಮಕ್ಕಳಾಗಿದ್ದೀರಿ. ನೀವಾತ್ಮರು ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೀರಿ. ಅಲ್ಲಿನ ನಿವಾಸಿಗಳಾಗಿದ್ದೀರಿ ಯಾವುದನ್ನು ನಿರ್ವಾಣಧಾಮ, ಶಾಂತಿಧಾಮವೆಂದು ಕರೆಯಲಾಗುತ್ತದೆ. ತಂದೆಯೂ ಅಲ್ಲಿರುತ್ತಾರೆ, ಇಲ್ಲಿ ನೀವು ಬಂದು ಲೌಕಿಕ ತಂದೆಯ ಮಕ್ಕಳಾಗುತ್ತೀರಿ ನಂತರ ಆ ತಂದೆಯನ್ನೇ ಮರೆತು ಹೋಗುತ್ತೀರಿ. ಸತ್ಯಯುಗದಲ್ಲಿ ನೀವು ಸುಖಿಯಾಗಿ ಬಿಡುತ್ತೀರಿ ಆದ್ದರಿಂದ ಆ ಪಾರಲೌಕಿಕ ತಂದೆಯನ್ನು ಮರೆತು ಹೋಗುತ್ತೀರಿ. ಸುಖದಲ್ಲಿ ಆ ತಂದೆಯ ಸ್ಮರಣೆ ಮಾಡುವುದಿಲ್ಲ, ದುಃಖದಲ್ಲಿ ನೆನಪು ಮಾಡುತ್ತೀರಿ ಮತ್ತು ಆತ್ಮವೇ ನೆನಪು ಮಾಡುತ್ತದೆ. ಲೌಕಿಕ ತಂದೆಯನ್ನು ನೆನಪು ಮಾಡಿದಾಗ ಬುದ್ಧಿಯು ಶರೀರದ ಕಡೆ ಹೋಗುತ್ತದೆ. ಆ ತಂದೆಯನ್ನು ನೆನಪು ಮಾಡಿದಾಗ ಓ ತಂದೆಯೇ ಎಂದು ಹೇಳುತ್ತಾರೆ. ಇಬ್ಬರೂ ತಂದೆಯರಾಗಿದ್ದಾರೆ. ಸರಿಯಾದ ಶಬ್ಧವು ತಂದೆಯೆಂಬುದೇ ಆಗಿದೆ, ಅವರೂ ತಂದೆಯಾಗಿದ್ದಾರೆ, ಇವರೂ ತಂದೆಯಾಗಿದ್ದಾರೆ. ಆತ್ಮವು ಆತ್ಮಿಕ ತಂದೆಯನ್ನು ನೆನಪು ಮಾಡುತ್ತದೆ ಆಗ ಬುದ್ಧಿಯೋಗವು ಮೇಲೆ ಹೋಗುತ್ತದೆ, ಇದನ್ನು ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ, ತಂದೆಯೂ ಬಂದಿದ್ದಾರೆ. ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲು ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದೆನು, ನೀವು ಬಹಳ ಸಾಹುಕಾರರಾಗಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಂಡು ಡ್ರಾಮಾನುಸಾರ ನೀವೀಗ ದುಃಖಿಯಾಗಿ ಬಿಟ್ಟಿದ್ದೀರಿ. ಡ್ರಾಮಾನುಸಾರ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ನಿಮ್ಮ ಆತ್ಮ ಮತ್ತು ಈ ಶರೀರ ರೂಪಿ ವಸ್ತ್ರವು ಸತೋಪ್ರಧಾನವಾಗಿತ್ತು ನಂತರ ಸತ್ಯಯುಗದಿಂದ ಆತ್ಮವು ತ್ರೇತಾಯುಗದಲ್ಲಿ ಬಂದಾಗ ಶರೀರವು ಬೆಳ್ಳಿಯ ಸಮಾನವಾಯಿತು ನಂತರ ದ್ವಾಪರಯುಗದಲ್ಲಿ ಬಂದಿರಿ, ಈಗ ನೀವಾತ್ಮರು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ. ಆದ್ದರಿಂದ ಶರೀರವೂ ಪತಿತವಾಗಿದೆ. ಹೇಗೆ 14 ಕ್ಯಾರೇಟ್ನ ಚಿನ್ನವನ್ನು ಯಾರೂ ಬಯಸುವುದಿಲ್ಲ, ಕಪ್ಪಾಗಿ ಬಿಡುತ್ತದೆ. ನೀವೂ ಸಹ ಈಗ ಕಪ್ಪು, ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಆತ್ಮ ಮತ್ತು ಶರೀರ ಯಾವುದು ಇಷ್ಟು ಕಪ್ಪಾಗಿ ಬಿಟ್ಟಿದೆಯೋ ಅದು ಪುನಃ ಪವಿತ್ರವಾಗುವುದು ಹೇಗೆ? ಆತ್ಮವು ಪವಿತ್ರವಾದರೆ ಪವಿತ್ರ ಶರೀರವೇ ಸಿಗುವುದು. ಅದು ಹೇಗಾಗುವುದು? ಗಂಗಾ ಸ್ನಾನ ಮಾಡುವುದರಿಂದ ಆಗುವುದೇ? ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಈ ರೀತಿ ಹೇಳಿದಾಗ ಆತ್ಮದ ಬುದ್ದಿಯು ಪಾರಲೌಕಿಕ ತಂದೆಯ ಕಡೆ ಹೋಗುತ್ತದೆ. ಹೇ ತಂದೆಯೇ, ತಂದೆ ಎಂಬ ಶಬ್ಧವೇ ಎಷ್ಟು ಮಧುರವಾಗಿದೆ. ಭಾರತದಲ್ಲಿಯೇ ತಂದೆ, ತಂದೆ ಎಂದು ಹೇಳುತ್ತಾರೆ. ನೀವೀಗ ಆತ್ಮಾಭಿಮಾನಿಗಳಾಗಿ ತಂದೆಯ ಮಕ್ಕಳಾಗಿದ್ದೀರಿ. ತಂದೆಯು ತಿಳಿಸುತ್ತಾರೆ – ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು, ಹೊಸ ಶರೀರವನ್ನು ಧಾರಣೆ ಮಾಡಿದ್ದಿರಿ. ಈಗ ನೀವು ಏನಾಗಿ ಬಿಟ್ಟಿದ್ದೀರಿ! ಈ ಮಾತುಗಳು ಸದಾ ಆಂತರ್ಯದಲ್ಲಿರಬೇಕು. ತಂದೆಯನ್ನೇ ನೆನಪು ಮಾಡಬೇಕು. ಎಲ್ಲರೂ ನೆನಪು ಮಾಡುತ್ತಾರಲ್ಲವೆ – ಹೇ ಬಾಬಾ, ನಾವಾತ್ಮರು ಪತಿತರಾಗಿ ಬಿಟ್ಟಿದ್ದೇವೆ. ಈಗ ಬಂದು ನಮ್ಮನ್ನು ಪಾವನ ಮಾಡಿರಿ. ಡ್ರಾಮಾದಲ್ಲಿ ಇದೂ ಪಾತ್ರವಿದೆ, ಆದ್ದರಿಂದಲೇ ಕರೆಯುತ್ತಾರೆ. ಯಾವಾಗ ಹಳೆಯ ಪ್ರಪಂಚದಿಂದ ಹೊಸದಾಗಬೇಕಾಗಿದೆಯೋ ಆಗಲೇ ತಂದೆಯು ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ. ನೀವು ಮಕ್ಕಳಿಗೆ ನಿಶ್ಚಯವಿದೆ – ಅತಿ ಪ್ರಿಯ ತಂದೆಯಾಗಿದ್ದಾರೆ. ಸ್ವೀಟ್-ಸ್ವೀಟೆಸ್ಟ್… ಎಂದು ಹೇಳುತ್ತಾರೆ ಅಂದಮೇಲೆ ಈಗ ಸ್ವೀಟ್ ಯಾರು? ಲೌಕಿಕ ಸಂಬಂಧದಲ್ಲಿ ಮೊದಲು ತಂದೆಯಾಗಿದ್ದಾರೆ, ಅವರು ಜನ್ಮ ಕೊಡುತ್ತಾರೆ. ನಂತರ ಶಿಕ್ಷಕರು ಶಿಕ್ಷಕರಿಂದ ಓದಿ ನೀವು ಪದವಿಯನ್ನು ಪಡೆಯುತ್ತೀರಿ. ವಿದ್ಯೆಯು ಸಂಪಾದನೆಯ ಮೂಲವೆಂದು ಹೇಳಲಾಗುತ್ತದೆ. ಜ್ಞಾನವು ವಿದ್ಯೆಯಾಗಿದೆ, ಯೋಗವು ನೆನಪಾಗಿದೆ ಅಂದಾಗ ಬೇಹದ್ದಿನ ತಂದೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಚಿತ್ರಗಳಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ, ಬ್ರಹ್ಮಾರವರ ಮೂಲಕ ಶಿವ ತಂದೆಯು ಸ್ಥಾಪನೆ ಮಾಡಿಸುತ್ತಾರೆ. ಕೃಷ್ಣನು ರಾಜಯೋಗವನ್ನು ಹೇಗೆ ಕಲಿಸುವರು? ರಾಜಯೋಗವನ್ನು ಸತ್ಯಯುಗಕ್ಕಾಗಿಯೇ ಕಲಿಸುತ್ತಾರೆ ಅಂದಮೇಲೆ ಅವಶ್ಯವಾಗಿ ತಂದೆಯು ಸಂಗಮಯುಗದಲ್ಲಿಯೇ ಕಲಿಸಿರುವರು. ಸತ್ಯಯುಗದ ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಬ್ರಹ್ಮಾರವರ ಮೂಲಕ ಮಾಡಿಸುತ್ತಾರೆ. ಮಾಡಿ-ಮಾಡಿಸುವವರಲ್ಲವೆ. ಅವರಂತೂ ತ್ರಿಮೂರ್ತಿ ಬ್ರಹ್ಮಾ ಎಂದು ಹೇಳಿ ಬಿಡುತ್ತಾರೆ ಆದರೆ ಶ್ರೇಷ್ಠಾತಿ ಶ್ರೇಷ್ಠರು ಶಿವನಲ್ಲವೆ! ಬ್ರಹ್ಮನು ಸಾಕಾರಿ, ಶಿವ ನಿರಾಕಾರಿಯಾಗಿದ್ದಾರೆ. ಸೃಷ್ಟಿಯು ಇದೇ ಆಗಿದೆ, ಈ ಸೃಷ್ಟಿಯೇ ಚಕ್ರದಂತೆ ಸುತ್ತುತ್ತಾ ಇರುತ್ತದೆ, ಪುನರಾವರ್ತನೆಯಾಗುತ್ತಾ ಇರುತ್ತದೆ. ಸೂಕ್ಷ್ಮವತನದ ಸೃಷ್ಟಿಯ ಚಕ್ರವೆಂದು ಹೇಳುವುದಿಲ್ಲ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ, ಸತ್ಯ-ತ್ರೇತಾ, ದ್ವಾಪರ-ಕಲಿಯುಗವೆಂದು ಹಾಡುತ್ತಾರೆ. ಮಧ್ಯದಲ್ಲಿ ಅವಶ್ಯವಾಗಿ ಸಂಗಮಯುಗವು ಬೇಕಾಗಿದೆ, ಇಲ್ಲದಿದ್ದರೆ ಕಲಿಯುಗವನ್ನು ಸತ್ಯಯುಗವನ್ನಾಗಿ ಯಾರು ಮಾಡುತ್ತಾರೆ? ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಎಷ್ಟು ಹಳೆಯ ಪ್ರಪಂಚವೋ ಅಷ್ಟು ದುಃಖವು ಹೆಚ್ಚಾಗಿರುವುದು. ಆತ್ಮವು ಎಷ್ಟು ತಮೋಪ್ರಧಾನವಾಗುತ್ತಾ ಹೋಗುವುದೋ ಅಷ್ಟು ದುಃಖಿಯಾಗುತ್ತದೆ. ದೇವತೆಗಳು ಸತೋಪ್ರಧಾನರಾಗಿದ್ದಾರೆ, ಇದಂತೂ ಹೈಯಸ್ಟ್ ಅಥಾರಿಟಿ, ಈಶ್ವರೀಯ ಸರ್ಕಾರವಾಗಿದೆ. ಜೊತೆಯಲ್ಲಿ ಧರ್ಮರಾಜನೂ ಇದ್ದಾರೆ. ತಂದೆಯು ತಿಳಿಸುತ್ತಾರೆ, ನೀವು ಶಿವಾಲಯದ ನಿವಾಸಿಗಳಾಗಿದ್ದಿರಿ, ಈಗ ವೇಶ್ಯಾಲಯವಾಗಿದೆ. ನೀವು ಪಾವನರಾಗಿದ್ದಿರಿ, ಈಗ ಪತಿತರಾಗಿದ್ದೀರಿ ಆದ್ದರಿಂದ ನಾವಂತೂ ಪಾಪಿಗಳಾಗಿದ್ದೇವೆ ಎಂದು ಹೇಳುತ್ತೀರಿ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಆತ್ಮವು ಹೇಳುತ್ತದೆ. ಯಾವುದೇ ದೇವತೆಯ ಮಂದಿರದಲ್ಲಿ ಹೋದರೆ ಅವರ ಮುಂದೆ ಈ ರೀತಿ ಹೇಳುತ್ತಾರೆ. ವಾಸ್ತವದಲ್ಲಿ ತಂದೆಯ ಮುಂದೆ ಹೇಳಬೇಕಾಗಿದೆ. ತಂದೆಯನ್ನು ಬಿಟ್ಟು ತಮ್ಮ ಸಹೋದರರ ಮುಂದೆ ಹೇಳುತ್ತಾರೆ ಅಂದರೆ ಈ ದೇವತೆಗಳು ನಿಮಗೆ ಸಹೋದರರಾದರಲ್ಲವೆ. ಸಹೋದರರಿಂದ ಏನೂ ಸಿಗುವುದಿಲ್ಲ, ಸಹೋದರರ ಪೂಜೆ ಮಾಡುತ್ತಾ-ಮಾಡುತ್ತಾ ಕೆಳಗಿಳಿಯುತ್ತಾ ಬಂದಿದ್ದೀರಿ. ಈಗ ನಿಮಗೆ ತಿಳಿದಿದೆ – ತಂದೆಯು ಬಂದಿದ್ದಾರೆ, ಅವರಿಂದ ನಮಗೆ ಆಸ್ತಿಯು ಸಿಗುತ್ತದೆ. ಬಾಕಿ ಮನುಷ್ಯರಂತೂ ತಂದೆಯನ್ನೇ ಅರಿತುಕೊಂಡಿಲ್ಲ, ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಇನ್ನೂ ಕೆಲವರು ಅಖಂಡ ಜ್ಯೋತಿ ತತ್ವವೆಂದು ಹೇಳುತ್ತಾರೆ. ಇನ್ನೂ ಹಲವರು ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ. ಅರೆ! ಅಖಂಡ ಜ್ಯೋತಿ ಸ್ವರೂಪವೆಂದು ಹೇಳುತ್ತಾರೆ ಅಂದಮೇಲೆ ಮತ್ತೆ ನಾಮ-ರೂಪದಿಂದ ಭಿನ್ನವೆಂದು ಹೇಗೆ ಹೇಳುತ್ತಾರೆ! ತಂದೆಯನ್ನು ಅರಿತುಕೊಳ್ಳದ ಕಾರಣ ಪತಿತರಾಗಿ ಬಿಟ್ಟಿದ್ದಾರೆ. ತಮೋಪ್ರಧಾನರೂ ಆಗಲೇಬೇಕಾಗಿದೆ. ನಂತರ ಯಾವಾಗ ತಂದೆಯು ಬರುವರೋ ಆಗ ಎಲ್ಲರನ್ನೂ ಪಾವನರನ್ನಾಗಿ ಮಾಡುವರು. ಆತ್ಮರು ನಿರಾಕಾರಿ ಪ್ರಪಂಚದಲ್ಲಿ ತಂದೆಯ ಜೊತೆ ಇರುತ್ತಾರೆ. ನಂತರ ಇಲ್ಲಿಗೆ ಬಂದು ಸತೋ-ರಜೋ-ತಮೋ ಪಾತ್ರವನ್ನು ಅಭಿನಯಿಸುತ್ತಾರೆ. ಆತ್ಮವೇ ತಂದೆಯನ್ನು ನೆನಪು ಮಾಡುತ್ತದೆ. ತಂದೆಯು ಬರುತ್ತಾರೆ, ನಾನು ಬ್ರಹ್ಮನ ಆಧಾರವನ್ನು ತೆಗೆದುಕೊಳ್ಳುತ್ತೇನೆಂದು ಹೇಳುತ್ತಾರೆ. ಇದು ಭಾಗ್ಯಶಾಲಿ ರಥವಾಗಿದೆ, ಆತ್ಮವಿಲ್ಲದೆ ರಥವಿರುತ್ತದೆಯೇ! ಭಗೀರಥನು ಗಂಗೆಯನ್ನು ತಂದನೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ನಾವು ಏನು ಹೇಳುತ್ತೇವೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ.

ಈಗ ನೀವು ಮಕ್ಕಳಿಗೆ ತಿಳಿಸಲಾಗಿದೆ – ಇದು ಜ್ಞಾನದ ಮಳೆಯಾಗಿದೆ, ಇದರಿಂದೇನಾಗುತ್ತದೆ? ಪತಿತರಿಂದ ಪಾವನರಾಗುತ್ತೀರಿ. ಗಂಗಾ, ಯಮುನಾ ನದಿಗಳು ಸತ್ಯಯುಗದಲ್ಲಿಯೂ ಇರುತ್ತವೆ. ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಟವಾಡುತ್ತಾನೆಂದು ಹೇಳುತ್ತಾರೆ. ವಾಸ್ತವದಲ್ಲಿ ಈ ಮಾತಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ ಅಂದಮೇಲೆ ಕೃಷ್ಣನಿಗೆ ಬಹಳ ಸಂಭಾಲನೆಯಿಂದ ಪಾಲನೆಯಾಗುತ್ತದೆ ಏಕೆಂದರೆ ಮೊದಲ ಹೂವಲ್ಲವೆ. ಹೂ ಎಷ್ಟು ಸುಂದರವಾಗಿರುತ್ತದೆ, ಹೂವಿನಿಂದ ಎಲ್ಲರೂ ಬಂದು ಸುಗಂಧವನ್ನು ತೆಗೆದುಕೊಳ್ಳುತ್ತಾರೆ. ಮುಳ್ಳುಗಳಿಂದ ಸುಗಂಧವನ್ನು ತೆಗೆದುಕೊಳ್ಳುವರೇ? ಈಗಂತೂ ಮುಳ್ಳುಗಳ ಪ್ರಪಂಚವಾಗಿದೆ, ತಂದೆಯು ಬಂದು ಅರಣ್ಯವನ್ನು ಉದ್ಯಾನವನವನ್ನಾಗಿ ಮಾಡುತ್ತಾರೆ, ಆದ್ದರಿಂದ ತಂದೆಗೆ ಬಬುಲ್ನಾಥನೆಂದು ಹೆಸರನ್ನಿಟ್ಟಿದ್ದಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ, ಆದ್ದರಿಂದ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ತಂದೆಯೆಂದು ಮಹಿಮೆ ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ತಂದೆಯ ಜೊತೆ ಎಷ್ಟೊಂದು ಪ್ರೀತಿಯಿರಬೇಕು! ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ, ಈಗ ನಿಮ್ಮ ಸಂಬಂಧವು ಅವರೊಂದಿಗೂ ಇದೆ ಮತ್ತು ಲೌಕಿಕದೊಂದಿಗೂ ಇದೆ. ಪಾರಲೌಕಿಕ ತಂದೆಯನ್ನು ನೆನಪು ಮಾಡುವುದರಿಂದ ನೀವು ಪಾವನರಾಗುತ್ತೀರಿ, ಅವರು ನಮ್ಮ ಲೌಕಿಕ ತಂದೆ, ಇವರು ಪಾರಲೌಕಿಕ ತಂದೆಯೆಂದು ಆತ್ಮಕ್ಕೆ ತಿಳಿದಿದೆ. ಭಕ್ತಿ ಮಾರ್ಗದಲ್ಲಿಯೂ ಆತ್ಮಕ್ಕೆ ಇದು ತಿಳಿದಿರುತ್ತದೆ, ಅವಿನಾಶಿ ತಂದೆಯನ್ನು ನೆನಪು ಮಾಡುತ್ತಾರೆ, ಆ ತಂದೆಯು ಯಾವಾಗ ಬಂದು ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿ ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಮನುಷ್ಯರನ್ನು ಘೋರ ಅಂಧಕಾರದಲ್ಲಿ ಹಾಕಿ ಬಿಟ್ಟಿದ್ದಾರೆ. ಯಾರು ಬಹಳ ಭಕ್ತಿ ಮಾಡುವರೋ ಅವರಿಗೆ ಭಗವಂತ ಸಿಗುವರೆಂದು ಹೇಳುತ್ತಾರೆ ಅಂದಮೇಲೆ ಎಲ್ಲರಿಗಿಂತ ಹೆಚ್ಚು ಭಕ್ತಿ ಮಾಡುವವರಿಗೆ ಅವಶ್ಯವಾಗಿ ಮೊದಲು ಸಿಗಬೇಕಾಗಿದೆ. ತಂದೆಯು ಲೆಕ್ಕವನ್ನೂ ತಿಳಿಸಿದ್ದಾರೆ. ಎಲ್ಲರಿಗಿಂತ ಮೊದಲು ನೀವು ಭಕ್ತಿ ಮಾಡುತ್ತೀರಿ. ಅಂದಮೇಲೆ ನಿಮಗೇ ಮೊಟ್ಟ ಮೊದಲು ಭಗವಂತನ ಮೂಲಕ ಜ್ಞಾನ ಸಿಗಬೇಕು ಮತ್ತೆ ನೀವೇ ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುವಿರಿ. ಬೇಹದ್ದಿನ ತಂದೆಯು ನೀವು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಿದ್ದಾರೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ತಂದೆಯು ತಿಳಿಸುತ್ತಾರೆ – ನೀವು ಅರ್ಧಕಲ್ಪ ನೆನಪು ಮಾಡಿದ್ದೀರಿ, ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಅಂತ್ಯದಲ್ಲಿ ಯಾವಾಗ ದುಃಖಿಯಾಗುವಿರೋ ಆಗ ನಾನು ಬಂದು ಸುಖಿಯನ್ನಾಗಿ ಮಾಡುತ್ತೇನೆ. ಈಗ ನೀವು ಬಹಳ ದೊಡ್ಡ ವ್ಯಕ್ತಿಗಳಾಗುತ್ತೀರಿ. ಮುಖ್ಯಮಂತ್ರಿ, ಪ್ರಧಾನಮಂತ್ರಿ ಮೊದಲಾದವರ ಬಂಗಲೆಗಳು ಎಷ್ಟು ಸುಂದರವಾಗಿರುತ್ತವೆ. ಪೀಠೋಪಕರಣಗಳೂ ಅದೇ ರೀತಿ ಇರುತ್ತವೆ. ನೀವಂತೂ ಅವರಿಗಿಂತಲೂ ಎಷ್ಟು ದೊಡ್ಡ ವ್ಯಕ್ತಿ (ದೇವತೆ) ಗಳಾಗುತ್ತೀರಿ. ದೈವೀ ಗುಣವಂತ ದೇವತೆಗಳು, ಸ್ವರ್ಗದ ಮಾಲೀಕರಾಗುತ್ತೀರಿ. ಅಲ್ಲಿ ನಿಮಗಾಗಿ ವಜ್ರ ರತ್ನಗಳ ಮಹಲುಗಳಿರುತ್ತವೆ. ಅಲ್ಲಿ ನಿಮ್ಮ ಪೀಠೋಪಕರಣಗಳು ರತ್ನಜಡಿತವಾಗಿರುತ್ತವೆ.

ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವನಿಗೆ ರುದ್ರನೆಂತಲೂ ಹೇಳುತ್ತಾರೆ. ಯಾವಾಗ ಭಕ್ತಿಯು ಮುಕ್ತಾಯವಾಗುವುದೋ ಆಗ ಭಗವಂತನು ರುದ್ರ ಯಜ್ಞವನ್ನು ರಚಿಸುತ್ತಾರೆ. ಸತ್ಯಯುಗದಲ್ಲಿ ಯಜ್ಞ ಅಥವಾ ಭಕ್ತಿಯ ಮಾತೇ ಇರುವುದಿಲ್ಲ. ಈ ಸಮಯದಲ್ಲಿ ತಂದೆಯು ಈ ಅವಿನಾಶಿ ರುದ್ರ ಜ್ಞಾನ ಯಜ್ಞವನ್ನು ರಚಿಸುತ್ತಾರೆ ನಂತರ ಇದರ ಗಾಯನವು ನಡೆಯುತ್ತದೆ. ಭಕ್ತಿಯಂತೂ ಸದಾ ನಡೆಯುತ್ತಾ ಇರುವುದಿಲ್ಲ. ಭಕ್ತಿ ಮತ್ತು ಜ್ಞಾನ. ಭಕ್ತಿಯು ರಾತ್ರಿಯಾಗಿದೆ ಜ್ಞಾನವು ದಿನವಾಗಿದೆ. ತಂದೆಯು ಬಂದು ದಿನವನ್ನಾಗಿ ಮಾಡುತ್ತಾರೆ ಅಂದಮೇಲೆ ತಂದೆಯ ಜೊತೆ ಮಕ್ಕಳಿಗೆ ಎಷ್ಟೊಂದು ಪ್ರೀತಿಯಿರಬೇಕು! ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಪ್ರಿಯಾತಿ ಪ್ರಿಯ ತಂದೆಯಲ್ಲವೆ. ಅವರಿಗಿಂತ ಹೆಚ್ಚು ಪ್ರಿಯವಾದ ವಸ್ತು ಯಾವುದೂ ಇರಲು ಸಾಧ್ಯವಿಲ್ಲ. ಅರ್ಧಕಲ್ಪದಿಂದ ನೆನಪು ಮಾಡುತ್ತಾ ಬಂದಿದ್ದೀರಿ, ತಂದೆಯೇ ಬಂದು ನಮ್ಮ ದುಃಖ ದೂರ ಮಾಡಿ ಎಂದು. ಈಗ ತಂದೆಯು ಬಂದು ತಿಳಿಸುತ್ತಾರೆ – ಮಕ್ಕಳೇ, ನೀವು ತಮ್ಮ ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಇಲ್ಲಿ ತಂದೆಯ ಬಳಿ ಎಷ್ಟು ಜನರೆಂದು ಕುಳಿತುಕೊಳ್ಳುತ್ತೀರಿ! ಜೊತೆಯಲ್ಲಿ ಪರಮಧಾಮದಲ್ಲಿಯೇ ಇರಲು ಸಾಧ್ಯ, ಇಲ್ಲಂತೂ ಇರಲು ಸಾಧ್ಯವಿಲ್ಲ. ಇಲ್ಲಿ ವಿದ್ಯೆಯನ್ನು ಓದಬೇಕಾಗಿದೆ, ವಿದ್ಯೆಯನ್ನು ಓದುವವರು ಕೆಲವರೇ ಇರುತ್ತಾರೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿ ಬಹಳ ಮಂದಿಗೆ ವಿದ್ಯೆಯನ್ನು ಓದಿಸಲಾಗುವುದಿಲ್ಲ, ಹಾಗಿದ್ದರೆ ಶಿಕ್ಷಕರು ಪ್ರಶ್ನೆಯನ್ನು ಕೇಳುವುದು ಹೇಗೆ? ಪ್ರತ್ಯುತ್ತರ ಹೇಗೆ ಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಕಡಿಮೆ ವಿದ್ಯಾರ್ಥಿಗಳಿಗೆ ಓದಿಸುತ್ತಾರೆ. ಕಾಲೇಜುಗಳು ಬಹಳಷ್ಟಿರುತ್ತವೆ ಮತ್ತೆ ಎಲ್ಲರಿಗೆ ಪರೀಕ್ಷೆಗಳಿರುತ್ತವೆ. ಫಲಿತಾಂಶವೂ ಹೊರ ಬರುತ್ತದೆ, ಇಲ್ಲಂತೂ ಒಬ್ಬ ತಂದೆಯೇ ಓದಿಸುತ್ತಾರೆ. ಇದನ್ನೂ ತಿಳಿಸಬೇಕಾಗಿದೆ – ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು ಪಾರಲೌಕಿಕ. ದುಃಖದಲ್ಲಿ ಆ ಪಾರಲೌಕಿಕ ತಂದೆಯನ್ನೇ ಸ್ಮರಣೆ ಮಾಡುತ್ತಾರೆ, ಆ ತಂದೆಯು ಈಗ ಬಂದುಬಿಟ್ಟಿದ್ದಾರೆ. ಮಹಾಭಾರತ ಯುದ್ಧವೂ ಸನ್ಮುಖದಲ್ಲಿದೆ, ಮಹಾಭಾರತ ಯುದ್ಧದಲ್ಲಿ ಕೃಷ್ಣನು ಬಂದನೆಂದು ಅವರು ತಿಳಿಯುತ್ತಾರೆ ಆದರೆ ಕೃಷ್ಣನು ಬರಲು ಸಾಧ್ಯವಿಲ್ಲ. ಪಾಪ! ಗೊಂದಲದಲ್ಲಿದ್ದಾರೆ ಆದರೂ ಸಹ ಕೃಷ್ಣ, ಕೃಷ್ಣ ಎಂತಲೂ ಹೇಳುತ್ತಿರುತ್ತಾರೆ. ಶಿವನು ಪ್ರಿಯಾತಿ ಪ್ರಿಯನಾಗಿದ್ದಾರೆ ಮತ್ತು ಕೃಷ್ಣನೂ ಆಗಿದ್ದಾರೆ ಆದರೆ ಒಬ್ಬರು ನಿರಾಕಾರ ಮತ್ತು ಇನ್ನೊಬ್ಬರು ಸಾಕಾರಿಯಾಗಿದ್ದಾರೆ. ನಿರಾಕಾರ ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಇಬ್ಬರೂ ಪ್ರಿಯಾತಿ ಪ್ರಿಯರಾಗಿದ್ದಾರೆ, ಕೃಷ್ಣನೂ ಸಹ ವಿಶ್ವದ ಮಾಲೀಕನಲ್ಲವೆ. ಈಗ ನೀವೇ ನಿರ್ಣಯಿಸಿ- ಹೆಚ್ಚು ಪ್ರಿಯರು ಯಾರು? ಶಿವ ತಂದೆಯೇ ಇಷ್ಟು ಯೋಗ್ಯರನ್ನಾಗಿ ಮಾಡುತ್ತಾರಲ್ಲವೆ. ಕೃಷ್ಣನೇನು ಮಾಡುತ್ತಾನೆ? ತಂದೆಯೇ ಅವರನ್ನು ಈ ರೀತಿ ಮಾಡುತ್ತಾರಲ್ಲವೆ ಆದ್ದರಿಂದ ಹೆಚ್ಚು ಗಾಯನ ತಂದೆಗೆ ಇರಬೇಕಲ್ಲವೆ. ತಂದೆಯು ತಿಳಿಸಿದ್ದಾರೆ – ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಈ ಶಿವ ಅಮರನಾಥನು ನಿಮಗೆ ಕಥೆಯನ್ನು ತಿಳಿಸುತ್ತಿದ್ದಾರೆ. ನೀವೇ ಅರ್ಜುನರಾಗಿದ್ದೀರಿ, ನೀವೆಲ್ಲರೂ ದ್ರೌಪದಿಯರಾಗಿದ್ದೀರಿ. ಈ ವಿಕಾರಿ ಪ್ರಪಂಚಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ, ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿದೆ. ವಿಕಾರದ ಮಾತಿರುವುದಿಲ್ಲ. ನಿರಾಕಾರ ತಂದೆಯು ವಿಕಾರಿ ಪ್ರಪಂಚವನ್ನು ರಚಿಸುವರೇ? ವಿಕಾರದಲ್ಲಿಯೇ ದುಃಖವಿದೆ. ಸನ್ಯಾಸಿಗಳದು ಹಠಯೋಗ, ನಿವೃತ್ತಿ ಮಾರ್ಗವಾಗಿದೆ. ಕರ್ಮ ಸನ್ಯಾಸವಂತೂ ಎಂದೂ ಆಗುವುದಿಲ್ಲ. ಆತ್ಮವು ಶರೀರವನ್ನು ಬಿಟ್ಟು ಹೋದಾಗಲೇ ಕರ್ಮ ಸನ್ಯಾಸವಾಗುವುದು. ಗರ್ಭ ಜೈಲಿನಲ್ಲಿ ಮತ್ತೆ ಕರ್ಮಗಳ ಲೆಕ್ಕಾಚಾರವು ಆರಂಭವಾಗಿ ಬಿಡುತ್ತದೆ. ಬಾಕಿ ಕರ್ಮ ಸನ್ಯಾಸವೆಂದು ಹೇಳುವುದು ತಪ್ಪಾಗಿದೆ. ಬಹಳ ಹಠಯೋಗಗಳನ್ನು ಕಲಿಯುತ್ತಾರೆ, ಗುಹೆಗಳಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಬೆಂಕಿಯಲ್ಲಿ ನಡೆಯುತ್ತಾರೆ, ರಿದ್ಧಿಸಿದ್ಧಿಯು ಬಹಳಷ್ಟಿದೆ. ಜಾದುವಿನಿಂದ ಬಹಳ ವಸ್ತುಗಳನ್ನು ಹೊರ ತೆಗೆಯುತ್ತಾರೆ, ಭಗವಂತನಿಗೂ ಜಾದುಗಾರ, ರತ್ನಾಗರ, ವ್ಯಾಪಾರಿಯೆಂದು ಹೇಳುತ್ತಾರೆ ಆದರೆ ಆ ಮನುಷ್ಯರಿಂದ ಯಾರಿಗೂ ಗತಿ-ಸದ್ಗತಿ ಸಿಗಲು ಸಾಧ್ಯವಿಲ್ಲ. ಅದನ್ನು ಒಬ್ಬ ಸದ್ಗುರುವೇ ಬಂದು ಎಲ್ಲರ ಗತಿ ಸದ್ಗತಿ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಮುಳ್ಳುಗಳಿಂದ ಹೂಗಳನ್ನಾಗಿ ಮಾಡುವವರು ಒಬ್ಬರೇ ಪ್ರಿಯಾತಿ ಪ್ರಿಯ ತಂದೆಯಾಗಿದ್ದಾರೆ. ಅವರನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಸುಗಂಧ ಭರಿತ ಪಾವನ ಹೂಗಳಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ.

2. ಈ ಜ್ಞಾನವು (ವಿದ್ಯೆ) ಆದಾಯದ ಮೂಲವಾಗಿದೆ. ಇದರಿಂದ 21 ಜನ್ಮಗಳಿಗಾಗಿ ನೀವು ಬಹಳ ದೊಡ್ಡ ವ್ಯಕ್ತಿಗಳಾಗುತ್ತೀರಿ, ಆದ್ದರಿಂದ ಇದನ್ನು ಚೆನ್ನಾಗಿ ಓದಬೇಕು ಹಾಗೂ ಓದಿಸಬೇಕು, ಆತ್ಮಾಭಿಮಾನಿಗಳಾಗಬೇಕಾಗಿದೆ.

ವರದಾನ:-

ಯಾವುದೇ ಕಾರ್ಯವನ್ನು ಮಾಡುತ್ತಾ ಬಾಪ್ದಾದಾರವರನ್ನು ತಮ್ಮ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತೀರೆಂದರೆ, ಡಬಲ್ ಫೋರ್ಸ್ನಿಂದ ಕಾರ್ಯವಾಗುವುದು ಹಾಗೂ ಸ್ಮೃತಿಯೂ ಸಹ ಬಹಳ ಸಹಜವಾಗಿಯೇ ಇರುತ್ತದೆ ಏಕೆಂದರೆ ಯಾರು ಸದಾ ಜೊತೆ ಅಥವಾ ಸಂಗದಲ್ಲಿ ಇರುತ್ತಾರೆಯೋ ಅವರ ನೆನಪುಗಳು ಸ್ವತಹವಾಗಿಯೇ ತಯಾರಾಗಿ ಇರುತ್ತದೆ. ಅಂದಮೇಲೆ ಇಂತಹ ಸಂಗಾತಿಯು ಇರುವುದರಿಂದ ಅಥವಾ ಬುದ್ಧಿಯ ಮೂಲಕ ನಿರಂತರ ಸತ್ಸಂಗ ಮಾಡುವುದರಿಂದ ಸಹಜಯೋಗಿ ಆಗಿ ಬಿಡುತ್ತೀರಿ ಹಾಗೂ ಶಕ್ತಿಶಾಲಿ ಸಂಗವಿರುವ ಕಾರಣದಿಂದ, ತಮ್ಮಲ್ಲಿ ಪ್ರತಿಯೊಂದು ಕರ್ತವ್ಯದಲ್ಲಿ ಡಬಲ್ ಫೋರ್ಸ್ ಇರುವುದು. ಅದರಿಂದ ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯ ಅನುಭೂತಿಯಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top