30 September 2021 KANNADA Murli Today | Brahma Kumaris

Read and Listen today’s Gyan Murli in Kannada

September 29, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈಗ ಈ ರಾವಣ ರಾಜ್ಯ, ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸ ಪ್ರಪಂಚವು ಬರುತ್ತಿದೆ ಆದ್ದರಿಂದ ಶ್ರೀಮತದಂತೆ ನಡೆದು ಪವಿತ್ರರಾಗಿರಿ ಆಗ ಶ್ರೇಷ್ಠ ದೇವಿ-ದೇವತೆಗಳಾಗುತ್ತೀರಿ”

ಪ್ರಶ್ನೆ:: -

ತಂದೆಯು ತಮ್ಮ ಮಕ್ಕಳಿಗೆ ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಾರೆ, ಆ ಕಥೆಯ ರಹಸ್ಯವೇನಾಗಿದೆ?

ಉತ್ತರ:-

ಅದರ ರಹಸ್ಯವಾಗಿದೆ – ರಾಜ್ಯವನ್ನು ಪಡೆಯುವುದು ಮತ್ತು ಕಳೆದುಕೊಳ್ಳುವುದು. ಅಲೀಫನಿಗೆ ಅಲ್ಲಾ ಸಿಕ್ಕಿದರು ಮತ್ತು ಎಲ್ಲವನ್ನೂ ಬಿಟ್ಟು ಬಿಟ್ಟರು. ಯಾರು ವಿಶ್ವದ ಮಾಲೀಕನಾಗಿದ್ದರೋ ಅವರೇ 84 ಜನ್ಮಗಳನ್ನು ತೆಗೆದುಕೊಂಡು ರಾಜ್ಯವನ್ನು ಕಳೆದುಕೊಳ್ಳುತ್ತಾರೆ, ಪುನಃ ಅವರಿಗೆ ತಂದೆಯು ರಾಜ್ಯವನ್ನು ಕೊಡುತ್ತಾರೆ. ಪತಿತರಿಂದ ಪಾವನರಾಗುವುದು ಗುಲಾಮಿತನವನ್ನು ಬಿಟ್ಟು ರಾಜ್ಯವನ್ನು ಪಡೆಯುವುದು, ಇದೇ ಸತ್ಯವಾದ ಸತ್ಯ ನಾರಾಯಣನ ಕಥೆಯನ್ನು ತಂದೆಯು ತಿಳಿಸುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಇಂದು ಬಂದಿತು….

ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಿಳಿಸಲಾಗಿದೆ. ಓಂ ಎಂದರೆ ನಾನು ಆತ್ಮನಾಗಿದ್ದೇನೆ, ಶರೀರವು ನನ್ನದಾಗಿದೆ, ಆತ್ಮವಂತೂ ಕಾಣುವುದಿಲ್ಲ, ಇದು ಅರ್ಥವಾಗುತ್ತದೆ – ನಾನಾತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ ಎಂದು. ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆ, ಶರೀರದಲ್ಲಿ ಬುದ್ಧಿಯಿಲ್ಲ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಿರುತ್ತದೆ. ಮುಖ್ಯವಾದುದು ಆತ್ಮವಾಗಿದೆ. ಆ ಆತ್ಮನನ್ನು ಯಾರೂ ಸ್ಥೂಲ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ಶರೀರವನ್ನು ಆತ್ಮವೇ ನೋಡುತ್ತದೆ, ಆತ್ಮವನ್ನು ಶರೀರವು ನೋಡಲು ಸಾಧ್ಯವಿಲ್ಲ. ಇದನ್ನು ತಿಳಿದುಕೊಳ್ಳಬಹುದು, ಆತ್ಮವು ಬಿಟ್ಟು ಹೋದಾಗ ಶರೀರವು ಜಡವಾಗಿ ಬಿಡುತ್ತದೆ. ಆತ್ಮವನ್ನು ನೋಡಲು ಸಾಧ್ಯವಿಲ್ಲ. ಶರೀರವನ್ನು ನೋಡಲಾಗುತ್ತದೆ ಹಾಗೆಯೇ ಆತ್ಮಕ್ಕೆ ಯಾವ ತಂದೆಯಿದ್ದಾರೆಯೋ ಯಾರನ್ನು ಪರಮಾತ್ಮನೆಂದು ಹೇಳುತ್ತಾರೆಯೋ ಅವರೂ ಸಹ ಕಣ್ಣಿಗೆ ಕಾಣುವುದಿಲ್ಲ. ಅವರನ್ನು ತಿಳಿದುಕೊಳ್ಳಲಾಗುತ್ತದೆ, ಅನುಭವ ಮಾಡಲಾಗುತ್ತದೆ, ಆತ್ಮರೆಲ್ಲರೂ ಸಹೋದರರಾಗಿದ್ದಾರೆ. ಶರೀರದಲ್ಲಿ ಬಂದಾಗ ಇವರು ಸಹೋದರ-ಸಹೋದರಿಯರು ಅಥವಾ ಸಹೋದರ-ಸಹೋದರರೆಂದೇ ಹೇಳುತ್ತಾರೆ. ಆತ್ಮರ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ದೈಹಿಕ ಸಹೋದರ-ಸಹೋದರಿಯರು ಒಬ್ಬರು ಇನ್ನೊಬ್ಬರನ್ನು ನೋಡಬಲ್ಲರು. ಆತ್ಮರ ತಂದೆಯು ಎಲ್ಲರಿಗೂ ಒಬ್ಬರೇ ಆಗಿದ್ದಾರೆ, ಅವರನ್ನೂ ಸ್ಥೂಲ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ ಅಂದಾಗ ತಂದೆಯು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬಂದಿದ್ದಾರೆ. ಹೊಸ ಪ್ರಪಂಚವು ಸತ್ಯಯುಗವಾಗಿತ್ತು, ಈ ಹಳೆಯ ಪ್ರಪಂಚವು ಕಲಿಯುಗವಾಗಿದೆ, ಇದು ಈಗ ಪರಿವರ್ತನೆಯಾಗಲಿದೆ. ಹೇಗೆ ಹಳೆಯ ಮನೆಯು ಸಮಾಪ್ತಿಯಾಗಿ ಹೊಸ ಮನೆಯಾಗುತ್ತದೆ ಹಾಗೆಯೇ ಈ ಹಳೆಯ ಪ್ರಪಂಚವೂ ಸಮಾಪ್ತಿಯಾಗಲಿದೆ. ಸತ್ಯಯುಗದ ನಂತರ ತ್ರೇತಾ, ದ್ವಾಪರ, ಕಲಿಯುಗ ಪುನಃ ಸತ್ಯಯುಗವು ಅವಶ್ಯವಾಗಿ ಬರಬೇಕಾಗಿದೆ. ವಿಶ್ವದ ಚರಿತ್ರೆ, ಭೂಗೋಳವು ಪುನರಾವರ್ತನೆಯಾಗುವುದು. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿರುತ್ತದೆ. ಅರ್ಧಕಲ್ಪ ಸೂರ್ಯವಂಶಿ ಮತ್ತು ಚಂದ್ರವಂಶಿಯರ ರಾಜ್ಯವು ನಡೆಯುತ್ತದೆ. ಸತ್ಯಯುಗಕ್ಕೆ ಲಕ್ಷ್ಮೀ-ನಾರಾಯಣರ ರಾಜ್ಯ, ತ್ರೇತಾಯುಗಕ್ಕೆ ರಾಮ-ಸೀತೆಯರ ರಾಜ್ಯವೆಂದು ಹೇಳಲಾಗುತ್ತದೆ ಅಂದಾಗ ಇದು ಸಹಜವಾಗಿದೆಯಲ್ಲವೆ. ನಂತರ ದ್ವಾಪರ-ಕಲಿಯುಗದಲ್ಲಿ ಅನ್ಯ ಧರ್ಮಗಳು ಬರುತ್ತವೆ ಆಗ ಯಾರು ದೇವಿ-ದೇವತೆಗಳು ಪವಿತ್ರರಾಗಿದ್ದರೋ ಅವರು ಅಪವಿತ್ರರಾಗಿ ಬಿಡುತ್ತಾರೆ. ಇದಕ್ಕೇ ರಾವಣ ರಾಜ್ಯವೆಂದು ಹೇಳಲಾಗುತ್ತದೆ, ರಾವಣನನ್ನು ಪ್ರತೀ ವರ್ಷವೂ ಸುಡುತ್ತಾರೆ ಆದರೆ ಸುಟ್ಟು ಹೋಗುವುದೇ ಇಲ್ಲ. ರಾವಣನು ಎಲ್ಲರ ದೊಡ್ಡ ಶತ್ರುವಾಗಿದ್ದಾನೆ ಆದ್ದರಿಂದ ಅವನನ್ನು ಸುಡುವ ಪದ್ಧತಿಯಾಗಿ ಬಿಟ್ಟಿದೆ. ಭಾರತದ ನಂಬರ್ವನ್ ಶತ್ರು ರಾವಣನಾಗಿದ್ದಾನೆ ಮತ್ತು ನಂಬರ್ವನ್ ಮಿತ್ರನು ಸದಾ ಸುಖ ಕೊಡುವಂತಹ ಭಗವಂತನಾಗಿದ್ದಾರೆ. ಖುದಾನಿಗೆ ದೋಸ್ತ್ ಎಂದು ಹೇಳುತ್ತಾರಲ್ಲವೆ. ಇದರ ಮೇಲೆ ಒಂದು ಕಥೆಯೂ ಇದೆ ಅಂದಮೇಲೆ ಖುದನು ದೋಸ್ತ್ ಅರ್ಥಾತ್ ಗೆಳೆಯನಾಗಿದ್ದಾರೆ, ರಾವಣನು ಶತ್ರುವಾಗಿದ್ದಾನೆ. ಖುದಾ-ದೋಸ್ತ್ನನ್ನು ಎಂದೂ ಸುಡುವುದಿಲ್ಲ, ರಾವಣನು ಶತ್ರುವಾಗಿದ್ದಾನೆ ಆದ್ದರಿಂದ ಹತ್ತು ತಲೆಯ ರಾವಣನನ್ನು ಮಾಡಿ ವರ್ಷ-ವರ್ಷವೂ ಸುಡುತ್ತಾರೆ. ನಮಗೆ ರಾಮ ರಾಜ್ಯವು ಬೇಕೆಂದು ಗಾಂಧೀಜಿಯೂ ಹೇಳುತ್ತಿದ್ದರು, ರಾಮ ರಾಜ್ಯದಲ್ಲಿ ಸುಖ, ರಾವಣ ರಾಜ್ಯದಲ್ಲಿ ದುಃಖವಿದೆ. ಈಗ ಇದನ್ನು ಯಾರು ತಿಳಿಸುತ್ತಾರೆ? ಪತಿತ-ಪಾವನ ಶಿವ ಬಾಬಾ ತಂದೆಯಾಗಿದ್ದಾರೆ, ಬ್ರಹ್ಮಾರವರು ದಾದಾ ಆಗಿದ್ದಾರೆ. ಇವರು ಯಾವಾಗಲೂ ಬಾಪ್ದಾದಾ ಎಂದು ಸಹಿ ಮಾಡುತ್ತಾರೆ. ಪ್ರಜಾಪಿತ ಬ್ರಹ್ಮನೂ ಸಹ ಎಲ್ಲರವರಾಗಿರುವರು, ಅವರಿಗೇ ಆಡಂ ಎಂದು ಹೇಳಲಾಗುವುದು ಮತ್ತು ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ (ಮನುಕುಲದ ಮುತ್ತಜ್ಜ) ಎಂದು ಹೇಳಲಾಗುತ್ತದೆ. ಮನುಷ್ಯ ಸೃಷ್ಟಿಯಲ್ಲಿ ಪ್ರಜಾಪಿತನಾದರು. ಪ್ರಜಾಪಿತ ಬ್ರಹ್ಮನ ಮೂಲಕ ಬ್ರಾಹ್ಮಣರು ನಂತರ ಬ್ರಾಹ್ಮಣರಿಂದ ದೇವಿ-ದೇವತೆಗಳಾಗುತ್ತೀರಿ. ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗಿ ಬಿಡುತ್ತಾರೆ, ಇವರಿಗೆ ಪ್ರಜಾಪಿತ ಮನುಕುಲಕ್ಕೆ ಹಿರಿಯರೆಂದು ಹೇಳಲಾಗುತ್ತದೆ. ಪ್ರಜಾಪಿತ ಬ್ರಹ್ಮನಿಗೆ ಅನೇಕ ಮಕ್ಕಳಿದ್ದಾರೆ, ಬಾಬಾ ಬಾಬಾ ಎನ್ನುತ್ತಿರುತ್ತಾರೆ. ಇವರು ಸಾಕಾರ ತಂದೆಯಾಗಿದ್ದಾರೆ, ಶಿವ ತಂದೆಯು ನಿರಾಕಾರ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮನ ಮೂಲಕ ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದು ಗಾಯನವಿದೆ, ಇದು ಪತಿತ ಪ್ರಪಂಚ, ರಾವಣ ರಾಜ್ಯವಾಗಿದೆ. ಈಗ ರಾವಣನ ಆಸುರೀ ಪ್ರಪಂಚವು ಸಮಾಪ್ತಿಯಾಗುವುದು. ಅದಕ್ಕಾಗಿ ಈ ಮಹಾಭಾರತ ಯುದ್ಧವಿದೆ, ನಂತರ ಸತ್ಯಯುಗದಲ್ಲಿ ಈ ರಾವಣ ಶತ್ರುವನ್ನು ಯಾರೂ ಸುಡುವುದಿಲ್ಲ. ರಾವಣನಿರುವುದೇ ಇಲ್ಲ. ರಾವಣನೇ ಈ ದುಃಖದ ಪ್ರಪಂಚವನ್ನು ರಚಿಸಿದ್ದಾನೆ. ಯಾರಲ್ಲಿ ಬಹಳಷ್ಟು ಹಣವಿದೆಯೋ, ದೊಡ್ಡ-ದೊಡ್ಡ ಮಹಲುಗಳಿವೆಯೋ ಅವರು ಸ್ವರ್ಗದಲ್ಲಿ ಇದ್ದಾರೆಂದಲ್ಲ, ತಂದೆಯು ತಿಳಿಸುತ್ತಾರೆ – ಭಲೆ ಯಾರ ಬಳಿಯಾದರೂ ಕೋಟಿಗಳಿರಬಹುದು ಆದರೆ ಶಾಂತಿಯಿರುವುದಿಲ್ಲ. ಹಣವೆಲ್ಲವೂ ಮಣ್ಣು ಪಾಲಾಗಲಿದೆ. ಹೊಸ ಪ್ರಪಂಚದಲ್ಲಿ ಮತ್ತೆ ಹೊಸ ಗಣಿಗಳಾಗುತ್ತವೆ. ಇದರಿಂದ ಹೊಸ ಪ್ರಪಂಚದ ಮಹಲು ಇತ್ಯಾದಿಗಳನ್ನು ಕಟ್ಟಿಸಲಾಗುತ್ತದೆ. ಈ ಹಳೆಯ ಪ್ರಪಂಚವೇ ಈಗ ಸಮಾಪ್ತಿಯಾಗಲಿದೆ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ, ಅಲ್ಲಿನ ಮಕ್ಕಳು ಯೋಗಬಲದಿಂದ ಜನಿಸುತ್ತಾರೆ. ಅಲ್ಲಿ ವಿಕಾರ ಇರುವುದೇ ಇಲ್ಲ, ದೇಹಾಭಿಮಾನವಾಗಲಿ, ಕ್ರೋಧವಾಗಲಿ ಪಂಚ ವಿಕಾರಗಳೇ ಇರುವುದಿಲ್ಲ ಆದ್ದರಿಂದ ಅಲ್ಲಿ ಎಂದೂ ರಾವಣನನ್ನು ಸುಡುವುದಿಲ್ಲ. ಇಲ್ಲಂತೂ ರಾವಣ ರಾಜ್ಯವಿದೆ ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಅವರು ಮುಕ್ತಿದಾತನೂ ಆಗಿದ್ದಾರೆ, ಎಲ್ಲರ ದುಃಖಹರ್ತನಾಗಿದ್ದಾರೆ. ಈಗ ಎಲ್ಲರೂ ರಾವಣ ರಾಜ್ಯದಲ್ಲಿದ್ದಾರೆ, ತಂದೆಯು ಬಂದು ಬಿಡಿಸಬೇಕಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ, ನೀವು ಪವಿತ್ರರಾಗಿರಿ, ಈ ಪತಿತ ಪ್ರಪಂಚವು ಸಮಾಪ್ತಿಯಾಗಲಿದೆ. ಯಾರು ಶ್ರೀಮತದಂತೆ ನಡೆಯುವರೋ ಅವರು ಶ್ರೇಷ್ಠ ದೇವಿ-ದೇವತೆಗಳಾಗುತ್ತಾರೆ, ವಿನಾಶವಂತೂ ಆಗುತ್ತದೆ ಎಲ್ಲರೂ ಸಮಾಪ್ತಿ ಆಗಿ ಬಿಡುತ್ತಾರೆ ಅಂದಮೇಲೆ ಯಾರು ಉಳಿಯುವರು? ಯಾರು ಶ್ರೀಮತದಂತೆ ಪವಿತ್ರರಾಗಿರುವರೋ ಅವರೇ ತಂದೆಯ ಮತದಂತೆ ನಡೆದು ವಿಶ್ವದ ರಾಜಧಾನಿಯ ಆಸ್ತಿಯನ್ನು ಪಡೆಯುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಈಗಂತೂ ರಾವಣ ರಾಜ್ಯವಿದೆ, ಇದು ಸಮಾಪ್ತಿ ಆಗಬೇಕಾಗಿದೆ. ಸತ್ಯಯುಗೀ ರಾಮ ರಾಜ್ಯವು ಸ್ಥಾಪನೆ ಆಗಲಿದೆ, ರಾಮನೆಂದರೆ ಆ ಸೀತಾರಾಮನಲ್ಲ, ಶಾಸ್ತ್ರಗಳಲ್ಲಿ ಅನೇಕ ವ್ಯರ್ಥ ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಇಡೀ ಪ್ರಪಂಚವೇ ಲಂಕೆಯಾಗಿದೆ, ಇದರಲ್ಲಿ ರಾವಣ ರಾಜ್ಯವಿದೆ. ಸತ್ಯಯುಗದಲ್ಲಿ ಭಾರತವು ಚಿನ್ನದ ಪಕ್ಷಿಯಾಗಿತ್ತು, ಮತ್ತ್ಯಾವುದೇ ರಾಜ್ಯವಿರಲಿಲ್ಲ. ತಂದೆಯು ಭಾರತದಲ್ಲಿ ಬಂದು ಪುನಃ ಚಿನ್ನದ ಪಕ್ಷಿ ಸ್ವರ್ಗವನ್ನಾಗಿ ಮಾಡುತ್ತಾರೆ. ಬಾಕಿ ಇಷ್ಟೆಲ್ಲಾ ಧರ್ಮಗಳು ಸಮಾಪ್ತಿ ಆಗುವವು. ಸಮುದ್ರವು ಉಕ್ಕುತ್ತದೆ, ಬಾಂಬೆಯು ಹೇಗಿತ್ತು, ಒಂದು ಚಿಕ್ಕ ಹಳ್ಳಿಯಂತೆ ಇತ್ತು. ಈಗ ಸತ್ಯಯುಗದ ಸ್ಥಾಪನೆಯಾಗುತ್ತದೆ ನಂತರ ಬಾಂಬೆ ಇತ್ಯಾದಿಗಳು ಯಾವುದೂ ಇರುವುದಿಲ್ಲ. ಸತ್ಯಯುಗದಲ್ಲಿ ಕೆಲವರೇ ಮನುಷ್ಯ ಇರುತ್ತಾರೆ. ದೆಹಲಿಯು ರಾಜಧಾನಿಯಾಗಿರುತ್ತದೆ. ಅಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ದೆಹಲಿಯು ಸತ್ಯಯುಗದಲ್ಲಿ ಪರಿಸ್ತಾನವಾಗಿತ್ತು, ದೆಹಲಿಯೇ ರಾಜಧಾನಿಯಾಗಿತ್ತು. ರಾಮ ರಾಜ್ಯದಲ್ಲಿಯೂ ದೆಹಲಿಯೇ ರಾಜಧಾನಿಯಾಗಿರುತ್ತದೆ ಆದರೆ ರಾಮ ರಾಜ್ಯದಲ್ಲಿ ವಜ್ರ ವೈಡೂರ್ಯಗಳ ಮಹಲಿತ್ತು, ಅಪಾರ ಸುಖವಿತ್ತು. ತಂದೆಯು ತಿಳಿಸುತ್ತಾರೆ – ನೀವು ವಿಶ್ವದ ರಾಜ್ಯವನ್ನು ಕಳೆದುಕೊಂಡಿದ್ದೀರಿ, ನಾನು ಪುನಃ ಕೊಡುತ್ತೇನೆ. ನೀವು ನನ್ನ ಮತದಂತೆ ನಡೆಯಿರಿ, ಶ್ರೇಷ್ಠರಾಗಬೇಕೆಂದರೆ ಕೇವಲ ನನ್ನನ್ನೇ ನೆನಪು ಮಾಡಿರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ ಆಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ, ನೀವು ನನ್ನ ಬಳಿ ಬಂದು ಬಿಡುತ್ತೀರಿ. ನನ್ನ ಕೊರಳಿನ ಮಾಲೆಯಾಗಿ ಮತ್ತೆ ವಿಷ್ಣುವಿನ ಕೊರೈನ ಮಾಲೆಯಾಗುತ್ತೀರಿ, ನಾನು ಮಾಲೆಯಲ್ಲಿ ಮೇಲ್ಭಾಗದಲ್ಲಿ ಇದ್ದೇನೆ ನಂತರ ಜೋಡಿಮಣಿಗಳು ಬ್ರಹ್ಮಾ-ಸರಸ್ವತಿ ಆಗಿದ್ದಾರೆ. ಅವರೇ ಸತ್ಯಯುಗದ ಮಹಾರಾಜ-ಮಹಾರಾಣಿಯಾಗುತ್ತಾರೆ. ಯಾರು ನಂಬರ್ವಾರ್ ಆಗಿ ಸಿಂಹಾಸನವನ್ನು ಏರುವರೋ ಅವರದೇ ಇಡೀ ಮಾಲೆಯಾಗಿದೆ. ನಾನು ಭಾರತವನ್ನು ಈ ಬ್ರಹ್ಮಾ-ಸರಸ್ವತಿ ಮತ್ತು ಬ್ರಾಹ್ಮಣರ ಮೂಲಕ ಸ್ವರ್ಗವನ್ನಾಗಿ ಮಾಡುತ್ತೇನೆ, ಯಾರು ಪರಿಶ್ರಮ ಪಡುವರೋ ಅವರದೇ ನಂತರ ನೆನಪಾರ್ಥವಾಗುತ್ತದೆ. ಆತ್ಮಗಳಿರುವ ಸ್ಥಾನವು ಪರಮಧಾಮವಾಗಿದೆ ಯಾವುದನ್ನು ಬ್ರಹ್ಮಾಂಡವೆಂದೂ ಹೇಳುತ್ತಾರೆ. ನಾವೆಲ್ಲಾ ಆತ್ಮರು ತಂದೆಯ ಜೊತೆ ಮಧುರ ಮನೆಯಲ್ಲಿ ಇರುವವರಾಗಿದ್ದೇವೆ. ಅದು ಶಾಂತಿಧಾಮವಾಗಿದೆ. ನಾವು ಮುಕ್ತಿಧಾಮದಲ್ಲಿ ಹೋಗಬೇಕೆಂದು ಮನುಷ್ಯರು ಬಯಸುತ್ತಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರೂ ಪಾತ್ರದಲ್ಲಿ ಬರಲೇಬೇಕಾಗಿದೆ ಅಲ್ಲಿಯವರೆಗೆ ತಂದೆಯು ನಿಮ್ಮನ್ನು ತಯಾರು ಮಾಡುತ್ತಾ ಇರುತ್ತಾರೆ. ನೀವು ತಯಾರಾಗಿ ಬಿಟ್ಟರೆ ಅಲ್ಲಿ ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರೂ ಬಂದು ಬಿಡುವರು ನಂತರ ಸಮಾಪ್ತಿ ಆಗುವುದು. ನೀವು ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೀರಿ ನಂತರ ನಂಬರ್ವಾರ್ ಚಕ್ರವು ನಡೆಯುವುದು. ಕೊನೆಗೂ ಆ ದಿನ ಇಂದು ಬಂದಿತು ಎಂದು ಗೀತೆಯಲ್ಲಿ ಕೇಳಿದಿರಲ್ಲವೆ. ಭಕ್ತಿಮಾರ್ಗದಲ್ಲಿ ಅಲೆದಾಡುತ್ತಿದ್ದಿರಿ, ತಂದೆಯು ಜ್ಞಾನ ಸೂರ್ಯನಾಗಿದ್ದಾರೆ. ಜ್ಞಾನ ಸೂರ್ಯ ಪ್ರಕಟ, ಅಜ್ಞಾನ ಅಂಧಕಾರ ವಿನಾಶ…. ಈಗ ನಿಮ್ಮ ಬುದ್ಧಿಯಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ನೀವು ತಿಳಿದುಕೊಂಡಿದ್ದೀರಿ, ಯಾವ ಭಾರತವಾಸಿಗಳು ನರಕವಾಸಿಗಳಾಗಿದ್ದಾರೆಯೋ ಅವರೇ ಪುನಃ ಸ್ವರ್ಗವಾಸಿಗಳಾಗುತ್ತಾರೆ. ಬಾಕಿ ಇಷ್ಟೆಲ್ಲಾ ಆತ್ಮರು ಶಾಂತಿಧಾಮಕ್ಕೆ ಹೊರಟು ಹೋಗುವರು. ಬಹಳ ಸ್ವಲ್ಪವೇ ತಿಳಿಸಬೇಕಾಗಿದೆ- ತಂದೆ ಮತ್ತು ಆಸ್ತಿ. ತಂದೆಯ ಮೂಲಕ ಆಸ್ತಿಯು ಸಿಗುತ್ತದೆ ಆಗ ಗುಲಾಮಿತನವು ಸಮಾಪ್ತಿಯಾಗುತ್ತದೆ. ಅದರ ಕಥೆಯನ್ನು ತಂದೆಯು ತಿಳಿಸುತ್ತಾರೆ – ಇದು ಸತ್ಯವಾದ ಸತ್ಯ ನಾರಾಯಣನ ಕಥೆಯಾಗಿದೆ, ಉಳಿದೆಲ್ಲವೂ ದಂತ ಕಥೆಗಳಾಗಿವೆ. ತಂದೆಯೇ ನರನಿಂದ ನಾರಾಯಣನಾಗುವುದಕ್ಕಾಗಿ ಈ ಜ್ಞಾನವನ್ನು ತಿಳಿಸುತ್ತಾರೆ. ಚರಿತ್ರೆ-ಭೂಗೋಳವಲ್ಲವೆ. ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಆರಂಭವಾಯಿತು, ಎಲ್ಲಿಯವರೆಗೆ ನಡೆಯಿತು, ಇದು ಕಥೆಯೂ ಆಯಿತಲ್ಲವೆ! ಯಾರು ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದರೋ ಅವರು 84 ಜನ್ಮಗಳನ್ನು ತೆಗೆದುಕೊಂಡು ಸಂಪೂರ್ಣ ತಮೋಪ್ರಧಾನರಾಗಿ ಬಿಟ್ಟಿದ್ದಾರೆ.

ಈಗ ತಂದೆಯು ತಿಳಿಸುತ್ತಾರೆ – ನಾನು ಅದೇ ರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತೇನೆ, ನೀವು ಹೇಗೆ ಪತಿತರಿಂದ ಪಾವನರು, ಪಾವನರಿಂದ ಪತಿತರಾಗುತ್ತೀರಿ ಎಂಬ ಇಡೀ ಚರಿತ್ರೆ-ಭೂಗೋಳವನ್ನು ತಿಳಿಸುತ್ತೇನೆ. ಮೊಟ್ಟ ಮೊದಲು ಸೂರ್ಯವಂಶಿಯರ ರಾಜ್ಯ ನಂತರ ಚಂದ್ರವಂಶಿಯರ ರಾಜ್ಯ….. ಮಧ್ಯದಲ್ಲಿ ಬೌದ್ಧಿಯರು, ಇಸ್ಲಾಮಿಗಳು, ಕ್ರಿಶ್ಚಿಯನ್ನರು ಬಂದರು. ಆಗ ಯಾವ ದೇವಿ-ದೇವತಾ ಧರ್ಮವಿತ್ತೋ ಅದು ಮರೆಯಾಯಿತು. ಪುನಃ ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ಶಾಸ್ತ್ರಗಳಲ್ಲಿ ಬ್ರಹ್ಮನ ಆಯಸ್ಸನ್ನು 100 ವರ್ಷಗಳು ತೋರಿಸಿದ್ದಾರೆ. ಈ ಬ್ರಹ್ಮನಲ್ಲಿಯೇ ತಂದೆಯು ಕುಳಿತು ಆಸ್ತಿಯನ್ನು ಕೊಡುತ್ತಾರೆ. ಇವರ ಶರೀರವೂ ಬಿಟ್ಟು ಹೋಗುವುದು. ತಂದೆಯು ಕುಳಿತು ಆತ್ಮರಿಗೆ ತಿಳಿಸುತ್ತಾರೆ – ಅವರೇ ಪತಿತ-ಪಾವನನಾಗಿದ್ದಾರೆ. ಮನುಷ್ಯರು ಮನುಷ್ಯರನ್ನು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾರು ತಾವೇ ಮುಕ್ತರಾಗಲು ಸಾಧ್ಯವಿಲ್ಲವೋ ಅವರು ಅನ್ಯರನ್ನು ಹೇಗೆ ಮಾಡುವರು? ಭಕ್ತಿಯನ್ನು ಕಲಿಸಿಕೊಡುವ ಗುರುಗಳು ಅನೇಕರಿದ್ದಾರೆ, ಇಂತಹವರ ಭಕ್ತಿ ಮಾಡಿ ಎಂದು ಕೆಲವರು ಹೇಳುತ್ತಾರೆ. ಶಾಸ್ತ್ರಗಳನ್ನು ಕೇಳಿರಿ ಎಂದು ಕೆಲವರು ಹೇಳುತ್ತಾರೆ. ಅನೇಕಾನೇಕ ಮತ-ಮತಾಂತರಗಳಿವೆ ಆದ್ದರಿಂದ ಎಲ್ಲರೂ ಇನ್ನೂ ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ಈಗ ತಂದೆಯು ಬಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ಬುದ್ಧಿವಂತರು, ವಿಶ್ವದ ಮಾಲೀಕರಾಗಿದ್ದರಲ್ಲವೆ. ಈಗ ಎಷ್ಟೊಂದು ಕಂಗಾಲರಾಗಿ ಬಿಟ್ಟಿದ್ದಾರೆ. ಪುನಃ ಶಿವ ತಂದೆಯು ಬಂದು ನರಕವಾಸಿಗಳಿಂದ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಇಲ್ಲಿ ಅದೃಷ್ಟವು ಬೆಳಗಲಿ ಎಂದು ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಎಲ್ಲಾ ಮನುಷ್ಯ ಮಾತ್ರರ ಅದೃಷ್ಟವನ್ನು ಬೆಳಗಿಸುವುದಕ್ಕಾಗಿಯೇ ತಂದೆಯು ಬರುತ್ತಾರೆ. ಎಲ್ಲರೂ ಪತಿತ, ದುಃಖಿಯಾಗಿದ್ದಾರಲ್ಲವೆ. ಎಲ್ಲರೂ ತ್ರಾಹಿ ತ್ರಾಹಿ ಎನ್ನುತ್ತಾ ವಿನಾಶವಾಗುತ್ತಾರೆ. ಆದ್ದರಿಂದ ತಂದೆಯು ತಿಳಿಸುವುದೇನೆಂದರೆ ತ್ರಾಹಿ ತ್ರಾಹಿ ಎನ್ನುವುದಕ್ಕೆ ಮೊದಲೇ ಬೇಹದ್ದಿನ ತಂದೆಯಿಂದ ಏನಾದರೂ ಆಸ್ತಿಯನ್ನು ತೆಗೆದುಕೊಳ್ಳಿ. ಈ ಪ್ರಪಂಚದಲ್ಲಿ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ಸಮಾಪ್ತಿಯಾಗಲಿದೆ. ಭಾರತದ ಉತ್ಥಾನ ಮತ್ತು ಪಥನ, ಭಾರತದ ಮೇಲೇ ಆಟವು ಮಾಡಲ್ಪಟ್ಟಿದೆ. ಸತ್ಯಯುಗದಲ್ಲಿ ಭಾರತದ ಉನ್ನತಿಯಾಗುವುದು, ಈಗ ಕಲಿಯುಗದಲ್ಲಿ ಅವನತಿಯಾಗುವುದು. ಇದೆಲ್ಲವೂ ರಾವಣ ರಾಜ್ಯದ ಆಡಂಬರವಾಗಿದೆ, ಈಗ ವಿನಾಶವಾಗಲಿದೆ. ವಿಶ್ವದ ಉತ್ಥಾನ ಹಾಗೂ ಪಥನ. ಸತ್ಯಯುಗದಲ್ಲಿ ಯಾರು-ಯಾರು ರಾಜ್ಯ ಮಾಡುತ್ತಾರೆ ಎಂಬುದನ್ನು ತಿಳಿಸುತ್ತಾರೆ. ಭಾರತದ ಉತ್ಥಾನವಿದ್ದಾಗ ದೇವತೆಗಳ ರಾಜ್ಯವಿರುತ್ತದೆ. ಭಾರತದ ಅವನತಿಯಾದಾಗ ರಾವಣ ರಾಜ್ಯವಾಗುತ್ತದೆ. ಈಗ ಹೊಸ ಪ್ರಪಂಚವಾಗುತ್ತಿದೆ, ಹಳೆಯ ಪ್ರಪಂಚವು ಸಮಾಪ್ತಿಯಾಗುವುದು. ಇದಕ್ಕೆ ಮೊದಲೇ ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿ ಓದುತ್ತಿದ್ದೀರಿ. ಎಷ್ಟು ಸಹಜವಾಗಿದೆ. ಇದು ಮನುಷ್ಯರಿಂದ ದೇವತೆಗಳ ವಿದ್ಯೆಯಾಗಿದೆ. ಸನ್ಯಾಸಿಗಳದು ನಿವೃತ್ತಿ ಮಾರ್ಗವಾಗಿದೆ. ಆ ಧರ್ಮವೇ ಬೇರೆಯಾಗಿದೆ, ಅವರಂತೂ ಗೃಹಸ್ಥ ವ್ಯವಹಾರವನ್ನು ಬಿಟ್ಟು ಹೊರಟು ಹೋಗುತ್ತಾರೆ. ಅವರದು ಹದ್ದಿನ ಸನ್ಯಾಸವಾಗಿದೆ, ನೀವು ಹಳೆಯ ಪ್ರಪಂಚದ ಸನ್ಯಾಸ ಮಾಡಿ, ಪುನಃ ಇಲ್ಲಿಯೇ ಬರುವುದಿಲ್ಲ. ಯಾವ-ಯಾವ ಧರ್ಮಗಳು ಯಾವಾಗ ಬರುತ್ತವೆ ಎಂಬುದನ್ನೂ ಸಹ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ದ್ವಾಪರದ ನಂತರವೇ ಅನ್ಯ ಧರ್ಮಗಳು ಬರುತ್ತವೆ. ಮೊದಲು ಸುಖವನ್ನು ಅನುಭವಿಸುತ್ತಾರೆ ನಂತರ ದುಃಖ, ಈ ಇಡೀ ಚಕ್ರವನ್ನು ಬುದ್ಧಿಯಲ್ಲಿ ಕೂರಿಸಲಾಗುತ್ತದೆ. ನೀವು ಚಕ್ರದಲ್ಲಿ ಯಾವಾಗ ಬರುತ್ತೀರೋ ಆಗ ಮಹಾರಾಜ-ಮಹಾರಾಣಿಯಾಗುತ್ತೀರಿ. ಕೇವಲ ತಂದೆ ಮತ್ತು ಆಸ್ತಿಯ ಬಗ್ಗೆ ತಿಳಿಸಬೇಕಾಗಿದೆ.

ತಂದೆಯು ಯಾರಿಗೂ ವಿದೇಶಕ್ಕೆ ಹೋಗುವುದನ್ನು ನಿರಾಕರಿಸುವುದಿಲ್ಲ. ವಾಸ್ತವದಲ್ಲಿ ಎಲ್ಲರೂ ತಮ್ಮ ದೇಶದಲ್ಲಿಯೇ ಮೃತ್ಯುವಾಗಬೇಕೆಂದು ಬಯಸುತ್ತಾರೆ. ಈಗ ವಿನಾಶವಂತೂ ಆಗಲೇಬೇಕಾಗಿದೆ. ಇಷ್ಟೊಂದು ಹೊಡೆದಾಟಗಳಾಗುವುದು ವಿದೇಶದಿಂದ ಬರುವುದಕ್ಕೂ ಸಾಧ್ಯವಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಭಾರತ ಭೂಮಿಯೇ ಎಲ್ಲದಕ್ಕಿಂತ ಉತ್ತಮವಾಗಿದೆ, ಇಲ್ಲಿ ತಂದೆಯು ಬಂದು ಅವತರಿಸುತ್ತಾರೆ, ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ, ಕೇವಲ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಇಡೀ ಮಹಿಮೆಯೇ ಸಮಾಪ್ತಿಯಾಗಿದೆ. ಸರ್ವ ಮನುಷ್ಯ ಮಾತ್ರರ ಮುಕ್ತಿದಾತನು ಇಲ್ಲಿಯೇ ಬಂದು ಅವತರಿಸುತ್ತಾರೆ. ಪರಮಾತ್ಮನೇ ಬಂದು ಮುಕ್ತಗೊಳಿಸುತ್ತಾರೆ ಅಂದಮೇಲೆ ಇಂತಹ ತಂದೆಗೆ ನಮನ ಮಾಡಬೇಕು, ಅವರ ಜಯಂತಿಯನ್ನು ಆಚರಿಸಬೇಕು ಆದರೆ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಬೆಲೆಯೆಲ್ಲವೂ ಮರೆಯಾಗಿ ಬಿಟ್ಟಿದೆ, ಇಲ್ಲವಾದರೆ ಭಾರತವು ಎಲ್ಲದಕ್ಕಿಂತ ಶ್ರೇಷ್ಠ ತೀರ್ಥ ಸ್ಥಾನವಾಗಿದೆ. ಆ ತಂದೆಯು ಇಲ್ಲಿಯೇ ಬಂದು ಎಲ್ಲರನ್ನೂ ಪಾವನ ಮಾಡುತ್ತಾರೆ, ಅಂದಮೇಲೆ ಇದು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಯಿತು. ಎಲ್ಲರನ್ನೂ ದುರ್ಗತಿಯಿಂದ ಬಿಡಿಸಿ ಸದ್ಗತಿ ನೀಡುತ್ತಾರೆ. ಈ ನಾಟಕವು ಮಾಡಲ್ಪಟ್ಟಿದೆ, ಈಗ ನೀವಾತ್ಮರು ತಿಳಿದುಕೊಂಡಿದ್ದೀರಿ – ನಮ್ಮ ತಂದೆಯು ಈ ಶರೀರದ ಮೂಲಕ ರಹಸ್ಯವನ್ನು ತಿಳಿಸುತ್ತಿದ್ದಾರೆ. ನಾವಾತ್ಮರು ಈ ಶರೀರದ ಮೂಲಕ ಕೇಳಿಸಿಕೊಳ್ಳುತ್ತೇವೆ, ಆತ್ಮಾಭಿಮಾನಿ ಆಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಕಳೆಯುತ್ತಾ ಹೋಗುವುದು ಮತ್ತು ಪವಿತ್ರರಾಗಿ, ನೀವು ತಂದೆಯ ಬಳಿ ಬಂದು ಬಿಡುವಿರಿ. ಎಷ್ಟು ನೆನಪು ಮಾಡುವಿರೋ ಅಷ್ಟು ಪವಿತ್ರರಾಗುತ್ತೀರಿ. ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಅನೇಕರ ಆಶೀರ್ವಾದಗಳು ಸಿಗುವುದು. ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಆದ್ದರಿಂದ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಕೊರಳಿನ ಮಾಲೆಯಾಗಿ ವಿಷ್ಣುವಿನ ಕೊರಳಿನಲ್ಲಿ ಪೋಣಿಸಲ್ಪಡಲು ಸಂಪೂರ್ಣ ಸತೋಪ್ರಧಾನ ಆಗಬೇಕಾಗಿದೆ. ಒಬ್ಬ ತಂದೆಯ ಮತದಂತೆ ನಡೆಯಬೇಕಾಗಿದೆ.

2. ಅನೇಕ ಆತ್ಮರ ಆಶೀರ್ವಾದ ಸಿಗುವಂತಹ ಸೇವೆ ಮಾಡಬೇಕಾಗಿದೆ. ತ್ರಾಹಿ ತ್ರಾಹಿ ಎನ್ನುವುದಕ್ಕೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ.

ವರದಾನ:-

ಯಾವಾಗ ಯಾರೇ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆಂದರೆ, ಅವರ ಚಿಹ್ನೆಯಾಗಿ ತಿಲಕ ಹಾಗೂ ಕಿರೀಟವಿರುತ್ತದೆ. ಹಾಗೆಯೇ ಯಾರು ಹೃದಯ ಸಿಂಹಾಸನಾಧಿಕಾರಿ ಆಗಿದ್ದಾರೆಯೋ ಅವರ ಮಸ್ತಕದಲ್ಲಿ ಸದಾ ಅವಿನಾಶಿ ಆತ್ಮನ ಸ್ಥಿತಿಯ ತಿಲಕವು ದೂರದಿಂದಲೇ ಹೊಳೆಯುತ್ತಿರುವಂತೆ ಕಂಡು ಬರುತ್ತದೆ. ಸರ್ವ ಆತ್ಮರ ಕಲ್ಯಾಣದ ಶುಭ ಭಾವನೆಯು, ಅವರ ಕಣ್ಣುಗಳಿಂದ ಅಥವಾ ಮುಖದಿಂದ ಕಾಣಿಸುತ್ತದೆ. ಅವರ ಪ್ರತೀ ಸಂಕಲ್ಪ, ವಚನ ಹಾಗೂ ಕರ್ಮವು ತಂದೆಯ ಸಮಾನವಾಗಿ ಇರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top