29 September 2021 KANNADA Murli Today | Brahma Kumaris

Read and Listen today’s Gyan Murli in Kannada

September 28, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಅಂತಿಮ ಜನ್ಮದಲ್ಲಿ ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಿ, ಒಬ್ಬ ತಂದೆಯನ್ನು ನೆನಪು ಮಾಡಿರಿ, ಇದೇ ಗುಪ್ತ ಪರಿಶ್ರಮವಾಗಿದೆ”

ಪ್ರಶ್ನೆ:: -

ಜ್ಞಾನದ ಮೂರನೇ ನೇತ್ರವು ಸಿಗುತ್ತಿದ್ದಂತೆಯೇ ಯಾವ ಅಂತರವು ಸ್ಪಷ್ಟವಾಗಿ ಅನುಭವವಾಗುತ್ತದೆ?

ಉತ್ತರ:-

1. ಭಕ್ತಿಯಲ್ಲಿ ಭಗವಂತನನ್ನು ಪಡೆಯುವುದಕ್ಕಾಗಿ ಎಷ್ಟೊಂದು ಅಲೆದಾಡುತ್ತಿದ್ದೆವು, ಎಷ್ಟೊಂದು ಪೆಟ್ಟು ತಿನ್ನುತ್ತಿದ್ದೆವು. ಈಗ ಅವರು ನಮಗೆ ಸಿಕ್ಕಿ ಬಿಟ್ಟರು. 2. ಜೊತೆ ಜೊತೆಗೆ ದಯೆ ಬರುತ್ತದೆ – ಪಾಪ, ಮನುಷ್ಯರು ಇಲ್ಲಿಯವರೆಗೂ ಅಲೆಯುತ್ತಿದ್ದಾರೆ. ಮಾರ್ಗವನ್ನು ಹುಡುಕುತ್ತಿದ್ದಾರೆ. ತಂದೆಯು ನಮ್ಮನ್ನು ಅಲೆಯುವುದರಿಂದ ಬಿಡಿಸಿದರು, ನಾವು ತಂದೆಯ ಜೊತೆ ಹೋಗುವ ತಯಾರಿ ಮಾಡಿಕೊಳ್ಳುತ್ತಿದ್ದೇವೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಅಂಧಕಾರದಲ್ಲಿದ್ದಾರೆ ಮಾನವರು…..

ಓಂ ಶಾಂತಿ. ಒಂದು ಕಡೆ ಭಕ್ತರು ನೆನಪು ಮಾಡುತ್ತಿದ್ದಾರೆ, ಇನ್ನೊಂದು ಕಡೆ ಆತ್ಮರಿಗೆ ಮೂರನೇ ನೇತ್ರವು ಸಿಕ್ಕಿದೆ ಅರ್ಥಾತ್ ಆತ್ಮರಿಗೆ ತಂದೆಯ ಪರಿಚಯ ಸಿಕ್ಕಿದೆ. ನಾವು ಅಲೆಯುತ್ತಿದ್ದೇವೆ ಎಂದು ಅವರು ಹೇಳುತ್ತಾರೆ. ಈಗ ನೀವಂತೂ ಅಲೆಯುವುದಿಲ್ಲ, ಎಷ್ಟೊಂದು ಅಂತರವಿದೆ! ತಂದೆಯು ನೀವು ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ತಯಾರು ಮಾಡುತ್ತಿದ್ದಾರೆ. ಮನುಷ್ಯರು ಗುರುಗಳ ಹಿಂದೆ, ತೀರ್ಥ ಯಾತ್ರೆ, ಜಾತ್ರೆ-ಮೇಳಗಳ ಹಿಂದೆ ಎಷ್ಟೊಂದು ಅಲೆಯುತ್ತಿದ್ದಾರೆ. ಈಗ ನಿಮ್ಮ ಅಲೆದಾಟವು ನಿಂತು ಹೋಗಿದೆ. ಮಕ್ಕಳಿಗೆ ತಿಳಿದಿದೆ – ಈ ಅಲೆದಾಟದಿಂದ ಬಿಡಿಸುವುದಕ್ಕಾಗಿ ತಂದೆಯು ಬಂದಿದ್ದಾರೆ. ಹೇಗೆ ಕಲ್ಪದ ಮೊದಲು ತಂದೆಯು ಬಂದು ಓದಿಸಿದ್ದರು ಹಾಗೂ ರಾಜಯೋಗವನ್ನು ಕಲಿಸಿದ್ದರೋ ಅದೇರೀತಿ ಓದಿಸುತ್ತಿದ್ದಾರೆ. ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತಿದ್ದೇವೆ ಮಾಯೆಯನ್ನು ಜಯಿಸುವವರೇ ಜಗಜ್ಜೀತರೆಂದು ಹೇಳಲಾಗುತ್ತದೆ. ಪಂಚ ವಿಕಾರರೂಪಿ ರಾವಣನಿಗೆ ಮಾಯೆಯೆಂದು ಹೇಳಲಾಗುತ್ತದೆ, ಮಾಯೆಯು ಶತ್ರುವಾಯಿತು, ಧನ-ಸಂಪತ್ತಿಗೆ ಮಾಯೆಯೆಂದು ಹೇಳುವುದಿಲ್ಲ. ಪಂಚ ವಿಕಾರರೂಪಿ ರಾವಣ ಅಥವಾ ಮಾಯೆ ಎಂದು ಬರೆಯಬೇಕಾಗಿದೆ. ಇದರಿಂದ ಮನುಷ್ಯರಿಗೆ ಏನಾದರೂ ಅರ್ಥವಾಗಲಿ ಇಲ್ಲದಿದ್ದರೆ ತಿಳಿದುಕೊಳ್ಳುವುದಿಲ್ಲ, ಮಾಯಾಜೀತರೇ ಜಗಜ್ಜೀತರು, ಇದರಲ್ಲಿ ಯಾದವರು-ಕೌರವರು ಮತ್ತು ಅಸುರರು-ದೇವತೆಗಳ ಮಾತಿಲ್ಲ. ಸ್ಥೂಲ ಯುದ್ಧ ಆಗುವುದಿಲ್ಲ, ಯೋಗಬಲದಿಂದ ಮಾಯಾ ರಾವಣನ ಮೇಲೆ ಜಯ ಗಳಿಸಿದರೆ ಜಗಜ್ಜೀತರಾಗುವರೆಂದು ಗಾಯನವಿದೆ. ಮಕ್ಕಳು ತಿಳಿದುಕೊಂಡಿದ್ದೀರಿ ವಿಶ್ವಕ್ಕೆ ಜಗತ್ತು ಎಂದು ಹೇಳಲಾಗುತ್ತದೆ. ವಿಶ್ವದ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸುವುದಕ್ಕಾಗಿ ವಿಶ್ವದ ಮಾಲೀಕನೇ ಬರುತ್ತಾರೆ. ಅವರೇ ಸರ್ವಶಕ್ತಿವಂತನಾಗಿದ್ದಾರೆ. ಇದಂತೂ ಮಕ್ಕಳಿಗೆ ತಿಳಿಸಲಾಗಿದೆ, ತಂದೆಯನ್ನು ನೆನಪು ಮಾಡುವುದರಿಂದಲೇ ಪಾಪಗಳು ಭಸ್ಮವಾಗುತ್ತವೆ. ಮುಖ್ಯ ಮಾತು ನೆನಪಿನದಾಗಿದೆ. ನೆನಪು ಮಾಡುವುದರಿಂದ ನಿಮ್ಮಿಂದ ಯಾವುದೇ ವಿಕರ್ಮವಾಗುವುದಿಲ್ಲ ಮತ್ತು ಖುಷಿಯಲ್ಲಿರುತ್ತೀರಿ. ಪತಿತ-ಪಾವನ ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ ಅಂದಮೇಲೆ ನಾವೇಕೆ ವಿಕರ್ಮ ಮಾಡುವುದು! ತಮ್ಮ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಮನುಷ್ಯರಿಗೆ ಬುದ್ಧಿಯಂತೂ ಇದೆಯಲ್ಲವೆ. ಇದರಲ್ಲಿ ಮತ್ತೇನೂ ಹೊಡೆದಾಡುವ ಇತ್ಯಾದಿಗಳ ಮಾತಿಲ್ಲ. ಕೇವಲ ಪಂಚ ವಿಕಾರಗಳನ್ನು ಜಯಿಸುವುದಕ್ಕಾಗಿ ತಂದೆಯನ್ನು ನೆನಪು ಮಾಡುವುದು ಬಹಳ ಸಹಜವಾಗಿದೆ. ಹಾ! ಇದರಲ್ಲಿ ಪರಿಶ್ರಮವಾಗುತ್ತದೆ, ಸಮಯ ಹಿಡಿಸುತ್ತದೆ. ಮಾಯೆಯು ದೀಪವನ್ನು ಆರಿಸುವುದಕ್ಕಾಗಿ ಪದೇ-ಪದೇ ಬಿರುಗಾಳಿಯನ್ನು ತರುತ್ತದೆ. ಬಾಕಿ ಇದರಲ್ಲಿ ಹೊಡೆದಾಡುವ ಯಾವುದೇ ಮಾತಿಲ್ಲ. ಅಲ್ಲಿ ದೇವತೆಗಳ ರಾಜ್ಯವಿರುತ್ತದೆ. ಯಾರೂ ಅಸುರರಿರುವುದಿಲ್ಲ. ನಾವು ಬ್ರಾಹ್ಮಣರು ಬ್ರಹ್ಮಾಮುಖವಂಶಾವಳಿ ಆಗಿದ್ದೇವೆ, ಯಾರು ಬ್ರಾಹ್ಮಣ ಕುಲದವರಾಗಿದ್ದಾರೆಯೋ ಅವರೇ ತಮ್ಮನ್ನು ಬ್ರಾಹ್ಮಣರೆಂದು ತಿಳಿಯುತ್ತಾರೆ. ಆತ್ಮಿಕ ತಂದೆಯು ನಾವಾತ್ಮರಿಗೆ ಜ್ಞಾನವನ್ನು ಕೊಡುತ್ತಾರೆ. ಜ್ಞಾನಸಾಗರ, ಪತಿತ-ಪಾವನ, ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಅವರೇ ಸ್ವರ್ಗವನ್ನು ಸ್ಥಾಪನೆ ಮಾಡುವವರಾಗಿದ್ದಾರೆ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು, ವಿದೇಶದವರಿಗೂ ಸಹ ಅರ್ಥವಾಗುವುದು – ಇವರು ಅದೇ ಸಿಂಧ್ನ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ ಯಾರು ಶ್ರೀಮತದಂತೆ ಸ್ವರ್ಗವನ್ನು ಸ್ಥಾಪನೆ ಮಾಡಿ ತೋರಿಸುತ್ತೇವೆಂದು ಹೇಳುತ್ತಾರೆ. ಆತ್ಮವೇ ಶರೀರದ ಮೂಲಕ ಹೇಳುತ್ತದೆಯಲ್ಲವೆ. ಆತ್ಮವೇ ಕೇಳುತ್ತದೆ ಮತ್ತು ಆದೇಶದಂತೆ ನಡೆಯುತ್ತದೆ, ಕಲ್ಪ-ಕಲ್ಪವೂ ತಂದೆಯೇ ಬಂದು ಯುಕ್ತಿಯನ್ನು ತಿಳಿಸುತ್ತಾರೆ. ತಂದೆಯು ಗುಪ್ತವಾಗಿದ್ದಾರೆ, ಯಾರಿಗೂ ಅರ್ಥವಾಗುವುದಿಲ್ಲ. ಅನೇಕ ಮನುಷ್ಯರಿಗೆ ತಿಳಿಸಿದರೂ ಸಹ ಇದನ್ನು ಕೋಟಿಯಲ್ಲಿ ಕೆಲವರೇ ತಿಳಿಯುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಮ್ಮದು ಆಲ್ರೌಂಡ್ ಪಾತ್ರವಿದೆ, ತಂದೆಯು ತಿಳಿಸಿದ್ದಾರೆ – ನೀವೇ ರಾಜ್ಯವನ್ನು ಪಡೆಯುತ್ತೀರಿ, ಮತ್ತ್ಯಾರೂ ಪಡೆಯಲು ಸಾಧ್ಯವಿಲ್ಲ. ನೀವು ಭಾರತವಾಸಿಗಳ ವಿನಃ ಅಂದರೆ ಯಾರು ಈಗ ತಮ್ಮನ್ನು ಹಿಂದೂ ಎಂದು ಕರೆಸಿಕೊಳ್ಳುತ್ತೀರೋ ಅವರ ವಿನಃ ಮತ್ತ್ಯಾರೂ ರಾಜ್ಯ ಪಡೆಯುವುದಿಲ್ಲ. ಜನಗಣತಿಯಲ್ಲಿಯೂ ಹಿಂದೂಗಳೆಂದು ಬರೆದು ಬಿಡುತ್ತಾರೆ. ಭಲೆ ನಾವು ಏನಾದರೂ ಹೆಸರು ಕೊಡಲಿ, ನಾವು ವಾಸ್ತವದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮದವರು ಆಗಿದ್ದೆವು, ಆ ದೈವೀ ಧರ್ಮ ಭ್ರಷ್ಟರು, ಕರ್ಮ ಭ್ರಷ್ಟರಾಗಿರುವ ಕಾರಣ ನಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತೇವೆ. ಹಿಂದೂ ಎಂಬ ಹೆಸರು ಏಕೆ ಬಂದಿತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ ಆದ್ದರಿಂದ ಕೇಳಬೇಕು – ತಿಳಿಸಿ, ನಿಮ್ಮ ಹಿಂದೂ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಇದಂತೂ ಹಿಂದೂ ಸ್ಥಾನದ ಹೆಸರಾಗಿದೆ, ಯಾರೂ ತಿಳಿಸಲು ಸಾಧ್ಯವಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈಗ ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದ ಸ್ಥಾಪನೆಯಾಗುತ್ತಿದೆ. ಬ್ರಾಹ್ಮಣ ದೇವಿ-ದೇವತಾಯ ನಮಃ ಎಂದು ಹೇಳುತ್ತಾರೆ. ಬ್ರಾಹ್ಮಣರು ಸರ್ವೋತ್ತಮ ನಂಬರ್ವನ್ ಆಗಿದ್ದೀರಿ, ವಾಸ್ತವದಲ್ಲಿ ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ರಾಮಚಂದ್ರನ ರಾಜ್ಯಕ್ಕೂ ಸ್ವರ್ಗವೆಂದು ಹೇಳಲಾಗುವುದಿಲ್ಲ. ಅರ್ಧಕಲ್ಪ ರಾಮ ರಾಜ್ಯ, ಅರ್ಧಕಲ್ಪ ಆಸುರೀ ರಾಜ್ಯವಿರುತ್ತದೆ. ಇದೆಲ್ಲವನ್ನೂ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವೀಗ ಸ್ವರ್ಗದಲ್ಲಿ ಹೋಗುವುದಕ್ಕಾಗಿ ಏನು ಮಾಡಬೇಕಾಗಿದೆ? ಅವಶ್ಯವಾಗಿ ಪವಿತ್ರ ಆಗಲೇಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿ ಪವಿತ್ರರಾಗಿರಬೇಕಾಗಿದೆ. ಆದ್ದರಿಂದ ಕಮಲಪುಷ್ಫದ ಗುರುತನ್ನೂ ತೋರಿಸಿದ್ದಾರೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ, ಈ ದೃಷ್ಟಾಂತವು ತವು ನಿಮಗಾಗಿಯೇ ಇದೆ. ಹಠಯೋಗಿಗಳು ಗೃಹಸ್ಥ ವ್ಯವಹಾರದಲ್ಲಿ ಕಮಲಪುಷ್ಫ ಸಮಾನರಾಗಿರಲು ಸಾಧ್ಯವಿಲ್ಲ, ಅವರು ತಮ್ಮ ನಿವೃತ್ತಿ ಮಾರ್ಗದ ಪಾತ್ರವನ್ನು ಅಭಿನಯಿಸುತ್ತಾರೆ. ಗೃಹಸ್ಥ ವ್ಯವಹಾರದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾರೆ. ನೀವು ಎರಡೂ ಸನ್ಯಾಸಗಳ ಹೋಲಿಕೆ ಮಾಡಬಹುದು, ಪ್ರವೃತ್ತಿ ಮಾರ್ಗದಲ್ಲಿರುವವರ ಗಾಯನವಿದೆ, ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ಇದೊಂದು ಅಂತಿಮ ಜನ್ಮದಲ್ಲಿ ಸಾಹಸವನ್ನು ಇಟ್ಟು ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಭಲೆ ತಮ್ಮ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ಆ ಸನ್ಯಾಸಿಗಳಾದರೋ ಮನೆ-ಮಠವನ್ನು ಬಿಟ್ಟು ಹೋಗುತ್ತಾರೆ. ಅನೇಕ ಸನ್ಯಾಸಿಗಳಿದ್ದಾರೆ ಅವರಿಗೆ ಭೋಜನವನ್ನು ಕೊಡಬೇಕಾಗಿದೆ. ಮೊದಲು ಅವರೂ ಸತೋಪ್ರಧಾನರಾಗಿರುತ್ತಾರೆ, ಈಗ ತಮೋಪ್ರಧಾನರಾಗಿದ್ದಾರೆ. ಡ್ರಾಮಾದಲ್ಲಿ ಅವರದು ಈ ಪಾತ್ರವಿದೆ, ಕಲ್ಪದ ನಂತರವೂ ಇದೇರೀತಿ ಆಗುವುದು. ಈ ಪತಿತ ಪ್ರಪಂಚದ ವಿನಾಶವಂತೂ ಆಗಲೇಬೇಕಾಗಿದೆ, ಚಿಕ್ಕ-ಚಿಕ್ಕ ಮಾತಿಗೂ ಸಹ ಒಬ್ಬರು ಇನ್ನೊಬ್ಬರನ್ನು ಹೆದರಿಸುತ್ತಿರುತ್ತಾರೆ. ಒಂದುವೇಳೆ ಈ ರೀತಿ ಆಗದಿದ್ದರೆ ದೊಡ್ಡ ಯುದ್ಧವಾಗಿ ಬಿಡುವುದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲೂ ಇದೇ ರೀತಿಯಾಗಿತ್ತು. ಹೊಟ್ಟೆಯಿಂದ ಒನಕೆ ಹುಟ್ಟಿತು ಅದರಿಂದ ತಮ್ಮದೇ ಕುಲದ ನಾಶ ಮಾಡಿಕೊಂಡರು ಎಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ವಾಸ್ತವದಲ್ಲಿ ಇವು ಅಣ್ವಸ್ತ್ರಗಳಾಗಿವೆ, ಯಾವುದರಿಂದ ವಿನಾಶ ಮಾಡುತ್ತಾರೆ. ಏನೆಲ್ಲವೂ ಕಳೆದು ಹೋಗಿದೆಯೋ ಅದು ಪುನಃ ಆಗುವುದು. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ರಹಸ್ಯವಿದೆ. ಕೇವಲ ಹೇಳುವ ಮಾತಲ್ಲ, ಯಾರಿಗೂ ದೋಷವನ್ನು ಹಾಕುವಂತಿಲ್ಲ, ಡ್ರಾಮಾದಲ್ಲಿ ಪಾತ್ರವಿದೆ, ನೀವು ಕೇವಲ ತಂದೆಯ ಸಂದೇಶವನ್ನು ತಿಳಿಸಬೇಕಾಗಿದೆ. ಈ ಡ್ರಾಮಾ ಅನಾದಿ-ಅವಿನಾಶಿಯಾಗಿದೆ. ಇದರ ಪೂರ್ವ ನಿಶ್ಚಿತವೇನು ಎಂಬುದು ನೀವು ತಿಳಿದುಕೊಂಡಿದ್ದೀರಿ. ಈ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮವು ಪ್ರಸಿದ್ಧವಾಗಿದೆ. ಇದಕ್ಕೇ ಪುರುಷೋತ್ತಮ ಯುಗವೆಂದು ಹೇಳಲಾಗುತ್ತದೆ. ಇತ್ತೀಚೆಗೆ ಮಕ್ಕಳು ಪುರುಷೋತ್ತಮ ಯುಗದ ಬಗ್ಗೆ ಬಹಳ ಚೆನ್ನಾಗಿ ತಿಳಿಸುತ್ತಿದ್ದಾರೆ. ಇದು ಉತ್ತಮ ಪುರುಷರಾಗುವ ಯುಗವಾಗಿದೆ, ಎಲ್ಲರೂ ಸತೋಪ್ರಧಾನ, ಉತ್ತಮರಾಗಿ ಬಿಡುತ್ತಾರೆ. ಈಗ ತಮೋಪ್ರಧಾನ ಕನಿಷ್ಟರಾಗಿದ್ದಾರೆ. ಈ ಪದಗಳನ್ನೂ ನೀವು ತಿಳಿದುಕೊಂಡಿದ್ದೀರಿ. ಕಲಿಯುಗವು ಪೂರ್ಣವಾಗಿ ಸತ್ಯಯುಗವು ಬರುವುದು ನಂತರ ಜಯ ಜಯಕಾರವು ಆಗಿ ಬಿಡುವುದು. ಕಥೆಯನ್ನು ತಿಳಿಸಲಾಗುತ್ತದೆಯಲ್ಲವೆ.. ಇದು ಸಹಜಕ್ಕಿಂತ ಸಹಜವಾಗಿದೆ. ಸುಳ್ಳು ಕಥೆಗಳಂತೂ ಅನೇಕ ಇವೆ. ಈಗ ತಂದೆಯು ತಿಳಿಸುತ್ತಾರೆ – ಭಕ್ತಿಮಾರ್ಗದಲ್ಲಿ ನೀವು ನನ್ನ ಮಹಿಮೆಯನ್ನು ಹಾಡುತ್ತಾ ಬಂದಿದ್ದೀರಿ, ಈಗ ಪ್ರತ್ಯಕ್ಷದಲ್ಲಿ ನಿಮಗೆ ಸುಖಧಾಮ ಮತ್ತು ಶಾಂತಿಧಾಮದ ಮಾರ್ಗವನ್ನು ತಿಳಿಸುತ್ತೇನೆ. ಸದ್ಗತಿಗೆ ಸುಖದ ಗತಿ, ದುರ್ಗತಿಗೆ ದುಃಖದ ಗತಿ ಎಂದು ಹೇಳುತ್ತಾರೆ. ಕಲಿಯುಗದಲ್ಲಿ ದುಃಖ, ಸತ್ಯಯುಗದಲ್ಲಿ ಸುಖವಿರುತ್ತದೆ. ತಿಳಿಸಿದಾಗ ಎಲ್ಲರೂ ತಿಳಿದುಕೊಳ್ಳುತ್ತಾರೆ. ಮುಂದೆ ಹೋದಂತೆ ತಿಳಿದುಕೊಳ್ಳುತ್ತಾ ಹೋಗುವರು. ಸಮಯವು ಬಹಳ ಕಡಿಮೆಯಿದೆ, ಗುರಿಯು ಉನ್ನತವಾಗಿದೆ. ಕಾಲೇಜಿನಲ್ಲಿ ನೀವು ಹೋಗಿ ತಿಳಿಸಿದರೆ ಈ ಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳುವರು. ಅವಶ್ಯವಾಗಿ ಈ ಡ್ರಾಮಾದ ಚಕ್ರವು ಸುತ್ತುತ್ತಾ ಇರುತ್ತದೆ, ಮತ್ತ್ಯಾವುದೇ ಪ್ರಪಂಚವಿಲ್ಲ. ಮೇಲೆ ಯಾವುದೋ ಪ್ರಪಂಚವಿದೆಯೆಂದು ಅವರು ತಿಳಿಯುತ್ತಾರೆ ಆದ್ದರಿಂದಲೇ ನಕ್ಷತ್ರಗಳು ಮೊದಲಾದ ಕಡೆ ಹುಡುಕಲು ಹೋಗುತ್ತಾರೆ. ವಾಸ್ತವದಲ್ಲಿ ಅಲ್ಲಿ ಏನೂ ಇಲ್ಲ. ಭಗವಂತನು ಒಬ್ಬರೇ, ರಚನೆಯೂ ಒಂದೇ ಆಗಿದೆ. ಮನುಷ್ಯ ಸೃಷ್ಟಿಯು ಇದೇ ಆಗಿದೆ, ಮನುಷ್ಯರು ಮನುಷ್ಯರೇ ಆಗಿದ್ದಾರೆ. ಕೇವಲ ದೇಹದ ಅನೇಕ ಧರ್ಮಗಳಿವೆ, ಎಷ್ಟೊಂದು ವಿಭಿನ್ನತೆಯಿದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತು, ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಕಲಿಯುಗವು ದುಃಖಧಾಮವಾಗಿದೆ, ಸುಖ ಮತ್ತು ದುಃಖದ ಆಟವಾಗಿದೆಯಲ್ಲವೆ. ತಂದೆಯು ಮಕ್ಕಳಿಗೆ ಎಂದಾದರೂ ದುಃಖ ಕೊಡುವರೇ? ತಂದೆಯಂತೂ ಬಂದು ದುಃಖದಿಂದ ಬಿಡಿಸುತ್ತಾರೆ, ಯಾರು ದುಃಖಹರ್ತನಾಗಿದ್ದಾರೆಯೋ ಅವರು ಮತ್ತೆ ಯಾರಿಗಾದರೂ ದುಃಖ ಕೊಡುವರೇ? ಈಗ ರಾವಣ ರಾಜ್ಯವಾಗಿದೆ, ಮನುಷ್ಯರಲ್ಲಿ 5 ವಿಕಾರಗಳು ಪ್ರವೇಶವಾಗಿವೆ, ಆದ್ದರಿಂದ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ವಿಶ್ವದ ಚರಿತ್ರೆ-ಭೂಗೋಳದ ರಹಸ್ಯವು ಈಗ ನೀವು ಮಕ್ಕಳ ಬುದ್ಧಿಯಲ್ಲಿ ಬಂದು ಬಿಟ್ಟಿದೆ. ಪ್ರತಿನಿತ್ಯವೂ ಕೇಳುತ್ತೀರಿ, ಇದು ಬಹಳ ದೊಡ್ಡ ವಿದ್ಯೆಯಾಗಿದೆ ಅಂದಾಗ ತಂದೆಯು ತಿಳಿಸುತ್ತಾರೆ – ಇನ್ನು ಸ್ವಲ್ಪವೇ ಸಮಯವಿದೆ, ಅದರಲ್ಲಿ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ. ನಿಧಾನ-ನಿಧಾನವಾಗಿ ಮನುಷ್ಯರೂ ಸಹ ತಿಳಿದುಕೊಳ್ಳುವರು, ಅವಶ್ಯವಾಗಿ ಈಶ್ವರನ ಮಾರ್ಗವನ್ನು ಇವರೇ ತಿಳಿಸುತ್ತಾರೆ. ಪ್ರಪಂಚದಲ್ಲಿ ಈಶ್ವರನನ್ನು ಪಡೆಯುವ ಮಾರ್ಗವನ್ನು ಮತ್ತ್ಯಾರೂ ತಿಳಿಸುವುದಿಲ್ಲ. ಈಶ್ವರನ ಮಾರ್ಗವನ್ನು ಈಶ್ವರನೇ ತಿಳಿಸುತ್ತಾರೆ. ನೀವು ಅವರ ಮಕ್ಕಳು ಸಂದೇಶವನ್ನು ಕೊಡುವವರಾಗಿದ್ದೀರಿ, ಕಲ್ಪದ ಮೊದಲೂ ಯಾರು ನಿಮಿತ್ತರಾಗಿದ್ದಿರೋ ಅವರೇ ಈಗಲೂ ಆಗುತ್ತಾರೆ ಮತ್ತು ಮಾಡುತ್ತಾ ಹೋಗುತ್ತಾರೆ. ಮಕ್ಕಳು ವಿಚಾರ ಸಾಗರ ಮಂಥನ ಮಾಡಬೇಕು, ಸಲಹೆ ಕೊಡಬೇಕು – ಬಾಬಾ, ಇಂತಹ ಚಿತ್ರಗಳನ್ನು ಮಾಡಿಸಬೇಕೆಂದು ನಾವು ತಿಳಿದುಕೊಳ್ಳುತ್ತೇವೆ. ಇದರಿಂದ ಮನುಷ್ಯರು ಚೆನ್ನಾಗಿ ತಿಳಿದುಕೊಳ್ಳುವರು. ತಂದೆಯು ಕಡಿಮೆ ಚಿತ್ರಗಳಿರಲಿ ಎಂದು ಏಕೆ ಹೇಳುತ್ತಾರೆಂದರೆ ಕೆಲವು ಸೇವಾಕೇಂದ್ರಗಳು ಬಹಳ ಚಿಕ್ಕ-ಚಿಕ್ಕದಾಗಿರುತ್ತವೆ. 5-7 ಚಿತ್ರಗಳನ್ನಿಡುವುದೂ ಸಹ ಕಷ್ಟವಾಗುತ್ತದೆ.

ತಂದೆಯು ತಿಳಿಸುತ್ತಾರೆ – ಮನೆ-ಮನೆಯಲ್ಲಿ ಗೀತಾ ಪಾಠಶಾಲೆ ಇರಲಿ. ಇಂತಹವರು ಅನೇಕರು ಇರುತ್ತಾರೆ ಒಂದು ಕೋಣೆಯಲ್ಲಿಯೇ ಎಲ್ಲವನ್ನೂ ನಡೆಸುತ್ತಾರೆ. ಮುಖ್ಯ ಚಿತ್ರಗಳನ್ನು ಇಟ್ಟಿದ್ದಾಗ ಮನುಷ್ಯರು ಬಂದು ತಿಳಿದುಕೊಳ್ಳುವರು. ಕೊನೆಗೂ ಭಗವಂತನೆಂದು ಯಾರಿಗೆ ಹೇಳುತ್ತಾರೆ, ಅವರಿಂದ ಏನು ಸಿಗುತ್ತದೆ? ಭಗವಂತನಿಗೆ ತಂದೆಯೆಂದು ಹೇಳಲಾಗುತ್ತದೆ. ಬಬುಲ್ನಾಥ ಬಾಬಾ ಎಂದು ಹೇಳುವುದಿಲ್ಲ, ರುದ್ರ ಬಾಬಾ ಎಂತಲೂ ಹೇಳುವುದಿಲ್ಲ, ಶಿವ ಬಾಬಾ ಪ್ರಸಿದ್ಧವಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದು ಅದೇ ಕಲ್ಪದ ಹಿಂದಿನ ಜ್ಞಾನ ಯಜ್ಞವಾಗಿದೆ. ಬೇಹದ್ದಿನ ತಂದೆ ಶಿವನು ಯಜ್ಞವನ್ನು ರಚಿಸಿದ್ದಾರೆ, ಬ್ರಹ್ಮಾರವರ ಮೂಲಕ ಬ್ರಾಹ್ಮಣರ ರಚನೆ ಮಾಡಿದ್ದಾರೆ. ಬ್ರಹ್ಮಾರವರಲ್ಲಿ ಪ್ರವೇಶ ಮಾಡಿ ಸ್ಥಾಪನೆ ಮಾಡಿದ್ದಾರೆ. ಇದು ಜ್ಞಾನ ಮತ್ತು ರಾಜಯೋಗವಾಗಿದೆ ಮತ್ತೆ ಯಜ್ಞವೂ ಆಗಿದೆ. ಇದರಲ್ಲಿ ಇಡೀ ಹಳೆಯ ಪ್ರಪಂಚದ ಆಹುತಿಯಾಗುತ್ತದೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ, ಜ್ಞಾನ ಸಾಗರನೂ ಆಗಿದ್ದಾರೆ. ಈ ರೀತಿ ಮತ್ತ್ಯಾರೂ ಇರುವುದಿಲ್ಲ, ಇತ್ತೀಚೆಗೆ ಯಜ್ಞವನ್ನು ರಚಿಸುತ್ತಾರೆಂದರೆ ನಾಲ್ಕೂ ಕಡೆ ಶಾಸ್ತ್ರಗಳನ್ನಿಡುತ್ತಾರೆ. ಒಂದು ಆಹುತಿಯ ಕುಂಡವನ್ನು ಮಾಡಿಸುತ್ತಾರೆ. ವಾಸ್ತವದಲ್ಲಿ ಇದು ಜ್ಞಾನ ಯಜ್ಞವಾಗಿದೆ, ಇದನ್ನು ಅವರು ಕಾಪಿ ಮಾಡಿದ್ದಾರೆ. ಇಲ್ಲಿ ಯಾವುದೇ ಸ್ಥೂಲ ವಸ್ತುಗಳಿಲ್ಲ, ಈಗ ನೀವು ಮಕ್ಕಳಿಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಬೇಹದ್ದಿನ ಜ್ಞಾನವು ಸಿಕ್ಕಿದೆ, ಮತ್ತ್ಯಾರೂ ಇದನ್ನು ತಿಳಿದುಕೊಂಡಿಲ್ಲ. ಬೇಹದ್ದಿನ ಆಹುತಿಯಾಗುವುದು, ಇದನ್ನು ನೀವೇ ತಿಳಿದುಕೊಂಡಿದ್ದೀರಿ, ಹಳೆಯ ಪ್ರಪಂಚವು ಸಮಾಪ್ತಿಯಾಗುವುದು, ರಾಮ ರಾಜ್ಯವು ಸ್ಥಾಪನೆಯಾಗಲಿ ಎಂದು ಖುಷಿಯಾಗುತ್ತಿರುತ್ತದೆ. ಇದು ಬಹಳ ಒಳ್ಳೆಯದಾಗಿದೆ ಆದರೆ ಅದನ್ನು ಯಾರು ಸ್ಥಾಪನೆ ಮಾಡುವರೋ ಅವರು ತಮಗಾಗಿಯೇ ಮಾಡುವರಲ್ಲವೆ. ಎಲ್ಲರೂ ತಮಗಾಗಿ ಪರಿಶ್ರಮ ಪಡುತ್ತಾರೆ, ನೀವು ತಿಳಿದುಕೊಂಡಿದ್ದೀರಿ – ಈ ಯಜ್ಞದಿಂದ ಮಹಾಭಾರತ ಯುದ್ಧವು ಪ್ರಜ್ವಲಿತವಾಗಿದೆ. ಆ ಹದ್ದಿನ ಮಾತುಗಳೆಲ್ಲಿ ಬೇಹದ್ದಿನ ಮಾತುಗಳೆಲ್ಲಿ! ನೀವು ತಮಗಾಗಿ ಪುರುಷಾರ್ಥ ಮಾಡುತ್ತೀರಿ, ಎಲ್ಲಿಯವರೆಗೆ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯೇ ಬಂದು ಆತ್ಮರಿಗೆ ಶಿಕ್ಷಣ ನೀಡುತ್ತಾರೆ. ನಿಮ್ಮದೆಲ್ಲವೂ ಗುಪ್ತವಾಗಿದೆ, ಯಾವ ಆತ್ಮವು ಹಿಂಸಕನಾಗಿದೆಯೋ ಅದೇ ಈಗ ಅಹಿಂಸಕನಾಗಿದೆ. ಯಾರ ಮೇಲೂ ಕ್ರೋಧ ಮಾಡಬಾರದು. ಯಾವಾಗ ಐದು ವಿಕಾರಗಳ ದಾನವನ್ನು ಕೊಡುವಿರೋ ಆಗಲೇ ಗ್ರಹಣವು ಬಿಟ್ಟು ಹೋಗುವುದು. ವಿಕಾರಗಳಿಂದಲೇ ಕಪ್ಪಾಗಿ ಬಿಟ್ಟಿದ್ದೀರಿ, ಈಗ ಪುನಃ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರು ಹೇಗಾಗಬೇಕೆಂಬುದನ್ನು ತಂದೆಯು ತಿಳಿಸುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ಈ ರೀತಿ ಯಾರು ಮಾಡಿದರು? ಯಾರಾದರೂ ಗುರು ಸಿಕ್ಕಿದರೇ? ಇವರಂತೂ ವಿಶ್ವದ ಮಾಲೀಕರಾಗಿದ್ದರು, ಅವಶ್ಯವಾಗಿ ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮ ಮಾಡಿರುವುದರಿಂದಲೇ ಒಳ್ಳೆಯ ಜನ್ಮ ಸಿಕ್ಕಿತು, ಒಳ್ಳೆಯ ಕರ್ಮಗಳಿಂದ ಒಳ್ಳೆಯ ಜನ್ಮ ಸಿಗುತ್ತದೆ. ಬ್ರಹ್ಮ ಮತ್ತು ವಿಷ್ಣುವಿಗೆ ಅವಶ್ಯವಾಗಿ ಸಂಬಂಧವಿದೆ, ಒಂದು ಸೆಕೆಂಡಿನಲ್ಲಿ ಬ್ರಹ್ಮನಿಂದ ವಿಷ್ಣುವಾಗುತ್ತಾರೆ, ಮನುಷ್ಯರಿಂದ ದೇವತೆಯಾಗುತ್ತಾರೆ. ಇದಕ್ಕೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಹೇಳಲಾಗುತ್ತದೆ. ತಂದೆಯ ಮಕ್ಕಳಾದಿರಿ ಮತ್ತು ಜೀವನ್ಮುಕ್ತಿಯ ಆಸ್ತಿಯನ್ನು ಪಡೆದುಕೊಂಡಿರಿ, ರಾಜ, ಪ್ರಜೆ ಎಲ್ಲರೂ ಜೀವನ್ಮುಕ್ತರಾಗಿರುತ್ತಾರೆ. ಯಾರೆಲ್ಲರೂ ಬರುವರೋ ಅವರು ಜೀವನ್ಮುಕ್ತರಾಗಬೇಕಾಗಿದೆ. ತಂದೆಯು ಎಲ್ಲರಿಗೆ ತಿಳಿಸುತ್ತಾರೆ – ಶ್ರೇಷ್ಠ ಪದವಿಗಾಗಿ ಮತ್ತೆ ಪುರುಷಾರ್ಥ ಮಾಡಬೇಕಾಗಿದೆ. ಎಲ್ಲವೂ ಪುರುಷಾರ್ಥದ ಮೇಲೆ ಅಧಾರಿತವಾಗಿದೆ ಅಂದಮೇಲೆ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ನಾವೇಕೆ ಶ್ರೇಷ್ಠ ಪದವಿಯನ್ನು ಪಡೆಯಬಾರದು! ತಂದೆಯನ್ನು ಬಹಳ ನೆನಪು ಮಾಡುವುದರಿಂದ ತಂದೆಯ ಹೃದಯದ ಮೇಲೆ ಅರ್ಥಾತ್ ಸಿಂಹಾಸನವನ್ನು ಏರುತ್ತೀರಿ. ತಂದೆಯು ಯಾವುದೇ ಕಷ್ಟ ಕೊಡುವುದಿಲ್ಲ. ಅಬಲೆಯರಿಂದ ಮತ್ತೇನು ಪರಿಶ್ರಮ ಮಾಡಿಸುವರು! ತಂದೆಯ ನೆನಪೇ ಗುಪ್ತವಾಗಿದೆ, ಜ್ಞಾನವಂತೂ ಪ್ರತ್ಯಕ್ಷವಾಗಿ ಬಿಡುತ್ತದೆ. ಇವರ ಭಾಷಣವು ಬಹಳ ಚೆನ್ನಾಗಿದೆ ಎಂದು ಹೇಳಲಾಗುತ್ತದೆ ಆದರೆ ಯೋಗವು ಎಷ್ಟಿದೆ? ತಂದೆಯನ್ನು ನೆನಪು ಮಾಡುತ್ತೇವೆಯೇ? ಎಷ್ಟು ಸಮಯ ನೆನಪು ಮಾಡುತ್ತೇವೆ? ನೆನಪಿನಿಂದಲೇ ಜನ್ಮ-ಜನ್ಮಾಂತರದ ವಿಕರ್ಮಗಳು ವಿನಾಶವಾಗುತ್ತವೆ. ಈ ಆತ್ಮಿಕ ಜ್ಞಾನವನ್ನು ಕಲ್ಪ-ಕಲ್ಪವೂ ಆತ್ಮಿಕ ತಂದೆ ಶಿವನೇ ಬಂದು ಕೊಡುತ್ತಾರೆ. ಮತ್ತ್ಯಾರೂ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಅವಿನಾಶಿ ಡ್ರಾಮಾದ ರಹಸ್ಯವನ್ನು ಬುದ್ಧಿಯಲ್ಲಿ ಇಟ್ಟುಕೊಂಡು ಯಾರನ್ನೂ ದೋಷಿಗಳನ್ನಾಗಿ ಮಾಡಬಾರದು. ಪುರುಷೋತ್ತಮರಾಗುವ ಪುರುಷಾರ್ಥ ಮಾಡಬೇಕಾಗಿದೆ. ಈ ಸ್ವಲ್ಪ ಸಮಯದಲ್ಲಿ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆದುಕೊಳ್ಳಬೇಕಾಗಿದೆ.

2. ಡಬಲ್ ಅಹಿಂಸಕರಾಗಲು ಎಂದೂ ಯಾರ ಮೇಲೂ ಕ್ರೋಧ ಮಾಡಬಾರದು. ವಿಕಾರಗಳ ದಾನವನ್ನು ಕೊಟ್ಟು ಸರ್ವಗುಣ ಸಂಪನ್ನರಾಗುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ಹೇಗೆ ಯಾವುದೇ ಸ್ಥೂಲ ವಸ್ತುವನ್ನು ತಯಾರು ಮಾಡುತ್ತೀರೆಂದರೆ, ಅದರಲ್ಲಿ ಎಲ್ಲಾ ವಸ್ತುಗಳನ್ನು ಹಾಕುತ್ತಾರೆ. ಸಾಧಾರಣವಾದ ಸಕ್ಕರೆ ಅಥವಾ ಉಪ್ಪು ಕಡಿಮೆಯಾದರೂ ಶ್ರೇಷ್ಠವಾದ ವಸ್ತುವೂ ಸಹ ತಿನ್ನಲು ಯೋಗ್ಯವಾಗುವುದಿಲ್ಲ. ಅದೇರೀತಿ ವಿಶ್ವ ಪರಿವರ್ತನೆಯ ಈ ಶ್ರೇಷ್ಠ ಕಾರ್ಯಕ್ಕಾಗಿ, ಪ್ರತಿಯೊಂದು ರತ್ನಗಳ ಅವಶ್ಯಕತೆಯಿದೆ. ಎಲ್ಲರ ಸಹಯೋಗವೂ ಬೇಕಾಗಿದೆ. ಎಲ್ಲರೂ ತಮ್ಮ-ತಮ್ಮ ರೀತಿಯಿಂದ ಬಹಳ-ಬಹಳ ಅವಶ್ಯಕ, ಶ್ರೇಷ್ಠ ಮಹಾರಥಿಗಳಾಗಿದ್ದಾರೆ. ಆದ್ದರಿಂದ ತಮ್ಮ ಕಾರ್ಯದ ಶ್ರೇಷ್ಠತೆಯ ಮೌಲ್ಯವನ್ನು ಅರಿತುಕೊಳ್ಳಿರಿ, ಎಲ್ಲರೂ ಮಹಾನ್ ಆತ್ಮರಾಗಿದ್ದೀರಿ ಆದರೆ ಎಷ್ಟು ಮಹಾನ್ ಆಗಿದ್ದೀರಿ ಅಷ್ಟು ನಿರ್ಮಾಣರೂ ಆಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top