25 September 2021 KANNADA Murli Today | Brahma Kumaris

Read and Listen today’s Gyan Murli in Kannada

September 24, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

"ಮಧುರ ಮಕ್ಕಳೇ - ಈಗ ನಿಮ್ಮದು ಈಶ್ವರೀಯ ಬಿಸಿ ರಕ್ತವಾಗಿದೆ, ನೀವು ಬಹಳ ಮಸ್ತಿಯಲ್ಲಿ ಭಾಷಣ ಮಾಡಬೇಕು, ನಶೆಯಿರಲಿ – ಶಿವ ತಂದೆಯು ನಮಗೆ ಓದಿಸುತ್ತಿದ್ದಾರೆ"

ಪ್ರಶ್ನೆ:: -

ನಿಮಗೆ ತಮ್ಮ ಗುರಿ-ಉದ್ದೇಶದ ನಶೆಯು ಸದಾ ಇರಲಿ, ಅದಕ್ಕಾಗಿ ಯಾವ ಯುಕ್ತಿಯನ್ನು ಅಳವಡಿಸಿಕೊಳ್ಳುವಿರಿ?

ಉತ್ತರ:-

ತಮ್ಮ ರಾಜ್ಯಧಾನಿಯ ಪಾಸ್ಪೋರ್ಟ್ನ್ನು ತೆಗೆಸಿ ಇಟ್ಟುಕೊಳ್ಳಿ, ಕೆಳಗಡೆ ಸಾಧಾರಣ ಚಿತ್ರ, ಮೇಲೆ ರಾಜ್ಯ ಪದವಿಯ ಪೋಷಾಕಿನಿಂದ ಶೃಂಗರಿಸಲ್ಪಟ್ಟಿರುವ ಚಿತ್ರ ಮತ್ತು ಅದರ ಮೇಲೆ ಶಿವ ತಂದೆ ಇರಲಿ. ಇದರಿಂದ ಗುರಿ-ಧ್ಯೇಯವು ಸಹಜವಾಗಿ ಸ್ಮೃತಿಯಲ್ಲಿ ಇರುವುದು. ಪಾಕೇಟ್ನಲ್ಲಿ ಈ ಪಾಸ್ಪೋರ್ಟ್ ಸದಾ ಇರಲಿ, ಯಾವಾಗ ಮಾಯೆಯ ಬಿರುಗಾಳಿಗಳು ಬರುತ್ತವೆಯೋ ಆಗ ಸಂಕಲ್ಪ ನಡೆಯುವುದು – ಈಗ ನಮ್ಮ ಈ ಪಾಸ್ಪೋರ್ಟ್ ರದ್ದಾಗಿ ಬಿಡುವುದು, ನಾವು ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ….

ಓಂ ಶಾಂತಿ. ಮಕ್ಕಳು ಗೀತೆಯ ಅರ್ಥವನ್ನು ತಿಳಿದುಕೊಂಡಿರಿ. ಈಗ ಭಕ್ತಿಮಾರ್ಗದ ಘೋರ ಅಂಧಕಾರದ ರಾತ್ರಿಯು ಮುಕ್ತಾಯವಾಯಿತು, ಮಕ್ಕಳು ತಿಳಿದುಕೊಂಡಿದ್ದೀರಿ – ಈಗ ನಮ್ಮ ಬಳಿ ಮೃತ್ಯು ಬರಲು ಸಾಧ್ಯವಿಲ್ಲ. ಇಲ್ಲಿ ಕುಳಿತಿದ್ದೇವೆ, ಮನುಷ್ಯರಿಂದ ದೇವತೆಗಳಾಗುವುದು ನಮ್ಮ ಗುರಿ-ಧ್ಯೇಯವಾಗಿದೆ. ಹೇಗೆ ಸನ್ಯಾಸಿಗಳು ಹೇಳುತ್ತಾರೆ – ನೀವು ತಮ್ಮನ್ನು ನಾನು ಕೋಣ ಆಗಿದ್ದೇನೆ ಎಂದು ತಿಳಿದುಕೊಳ್ಳಿ, ಆಗ ಆ ರೂಪವಾಗಿ ಬಿಡುವಿರಿ ಎಂದು. ಅವೆಲ್ಲವೂ ಭಕ್ತಿಮಾರ್ಗದ ಉದಾಹರಣೆಗಳಾಗಿವೆ. ಹೇಗೆ ಮತ್ತೊಂದು ದೃಷ್ಟಾಂತವೂ ಇದೆಯಲ್ಲವೆ – ರಾಮನು ವಾನರ ಸೇನೆಯಿಂದ ಭಾರತವನ್ನು ರಾವಣನಿಂದ ಬಿಡಿಸಿದನು ಎಂದು. ನೀವಿಲ್ಲಿ ಕುಳಿತಿದ್ದೀರಿ, ತಿಳಿದುಕೊಂಡಿದ್ದೀರಿ – ನಾವೇ ದೇವಿ-ದೇವತೆ ಡಬಲ್ ಕಿರೀಟಧಾರಿಗಳು ಆಗುತ್ತೇವೆ. ಹೇಗೆ ಶಾಲೆಯಲ್ಲಿ ಓದುತ್ತಾರೆಂದರೆ ನಾನು ಇದನ್ನು ಓದಿ ಡಾಕ್ಟರ್ ಆಗುವೆನು, ಇಂಜಿನಿಯರ್ ಆಗುವೆನು ಎಂದು ಹೇಳುತ್ತಾರೆ. ನೀವೂ ತಿಳಿದುಕೊಂಡಿದ್ದೀರಿ, ನಾವು ಈ ವಿದ್ಯೆಯಿಂದ ದೇವತೆಗಳಾಗುತ್ತಿದ್ದೇವೆ. ಈ ಶರೀರವನ್ನು ಬಿಡುತ್ತೇವೆ ನಂತರದ ಜನ್ಮದಲ್ಲಿ ನಮ್ಮ ತಲೆಯ ಮೇಲೆ ಕಿರೀಟವಿರುವುದು. ಇದಂತೂ ಬಹಳ ಛೀ ಛೀ ಕೊಳಕು ಪ್ರಪಂಚವಾಗಿದೆ. ಹೊಸ ಪ್ರಪಂಚವು ಬಹಳ ಸುಂದರವಾದ ಪ್ರಪಂಚವಾಗಿದೆ. ಹಳೆಯ ಪ್ರಪಂಚವು ತರ್ಡ್ಕ್ಲಾಸ್ ಆಗಿದೆ. ಇದು ಸಮಾಪ್ತಿಯಾಗಲಿದೆ, ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುವವರು ಅವಶ್ಯವಾಗಿ ವಿಶ್ವದ ರಚಯಿತನೇ ಆಗಿರುವರು, ಮತ್ಯಾರೂ ಓದಿಸಲು ಸಾಧ್ಯವಿಲ್ಲ. ಶಿವ ತಂದೆಯೇ ನಮಗೆ ಓದಿಸಿ ರಾಜಯೋಗವನ್ನು ಕಲಿಸುತ್ತಾರೆ. ತಂದೆಯು ತಿಳಿಸಿದ್ದಾರೆ – ಆತ್ಮಾಭಿಮಾನಿಗಳಾಗಿರಿ, ಆತ್ಮಾಭಿಮಾನಿ ಆಗುವುದರಲ್ಲಿಯೇ ಪರಿಶ್ರಮವಿದೆ. ಪೂರ್ಣ ಆತ್ಮಾಭಿಮಾನಿಗಳಾಗಿ ಬಿಟ್ಟರೆ ಇನ್ನೇನು ಬೇಕು! ನೀವು ಬ್ರಾಹ್ಮಣರಂತೂ ಆಗಿಯೇ ಇದ್ದೀರಿ, ನಾವು ದೇವತೆಗಳಾಗುತ್ತಿದ್ದೇವೆ ಎಂದು ತಿಳಿದುಕೊಂಡಿದ್ದೀರಿ, ನಾನು ಈ ರೀತಿ ಆಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ಮೊದಲು ನಾವು ಕಲಿಯುಗ, ನರಕದಲ್ಲಿ ಪತಿತರಾಗಿದ್ದೆವು, ಅಸುರರು ಮತ್ತು ದೇವತೆಗಳಲ್ಲಿ ಎಷ್ಟೊಂದು ಅಂತರವಿದೆ! ದೇವತೆಗಳು ಎಷ್ಟೊಂದು ಪವಿತ್ರರಾಗಿದ್ದಾರೆ, ಇಲ್ಲಿ ಮನುಷ್ಯರು ಎಷ್ಟೊಂದು ಪತಿತರಾಗಿದ್ದಾರೆ! ಚಹರೆಯು ಭಲೆ ಮನುಷ್ಯನದಾಗಿದೆ ಆದರೆ ಗುಣಗಳು ನೋಡಿ ಹೇಗಿದೆ! ಯಾರು ದೇವತೆಗಳ ಪೂಜಾರಿಗಳಾಗಿದ್ದಾರೆಯೋ ಅವರೂ ಸಹ ದೇವತೆಗಳ ಮುಂದೆ ಮಹಿಮೆ ಮಾಡುತ್ತಾರೆ, ತಾವು ಸರ್ವಗುಣ ಸಂಪನ್ನರು…. ನಮ್ಮಲ್ಲಿ ಯಾವುದೇ ಗುಣವಿಲ್ಲ. ನೀವೀಗ ಪರಿವರ್ತನೆಯಾಗಿ ದೇವತೆಯಾಗುತ್ತೀರಿ. ಕೃಷ್ಣನ ಪೂಜೆ ಏತಕ್ಕಾಗಿ ಮಾಡುತ್ತಾರೆಂದರೆ ನಾವು ಕೃಷ್ಣ ಪುರಿಯಲ್ಲಿ ಹೋಗಬೇಕು ಎಂದು. ಆದರೆ ಯಾವಾಗ ಹೋಗುತ್ತೇವೆ ಎಂಬುದು ತಿಳಿದಿಲ್ಲ. ಭಗವಂತನು ಬಂದು ಫಲ ಕೊಡುವರೆಂದು ಭಕ್ತಿ ಮಾಡುತ್ತಾ ಇರುತ್ತಾರೆ. ಭಕ್ತಿಯ ಫಲವು ಸದ್ಗತಿಯಾಗಿದೆ ಅಂದಾಗ ಇದು ವಿದ್ಯೆಯಾಗಿದೆ. ಮೊದಲು ಈ ನಿಶ್ಚಯವಿರಲಿ – ನಮಗೆ ಯಾರು ಓದಿಸುತ್ತಾರೆ? ಇವರು ಶ್ರೀ ಶ್ರೀ ಆಗಿದ್ದಾರೆ, ಆ ತಂದೆಯೇ ನಮಗೆ ಶ್ರೀಮತವನ್ನು ಕೊಡುತ್ತಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಯಾರಿಗೆ ಇದು ತಿಳಿದಿಲ್ಲವೋ ಅವರು ಹೇಗೆ ಶ್ರೇಷ್ಠರಾಗುವರು! ಇತ್ತೀಚೆಗಂತೂ ಒಬ್ಬರು ಇನ್ನೊಬ್ಬರನ್ನು ಭ್ರಷ್ಟರನ್ನಾಗಿ ಮಾಡುವ ಮತವನ್ನೇ ಕೊಡುತ್ತಾರೆ. ಭ್ರಷ್ಟ ಮತವು ಆಸುರೀ ಮತವಾಗಿದೆ, ಇಷ್ಟೆಲ್ಲ್ಲಾ ಬ್ರಾಹ್ಮಣರು ಶ್ರೀ ಶ್ರೀ ಶಿವ ತಂದೆಯ ಮತದಂತೆ ನಡೆಯುತ್ತಿದ್ದೀರಿ. ಪರಮಾತ್ಮನ ಮತದಿಂದಲೇ ಶ್ರೇಷ್ಠರಾಗುತ್ತೀರಿ. ಯಾರ ಅದೃಷ್ಟದಲ್ಲಿ ಇರುವುದೋ ಅವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ ಇಲ್ಲದಿದ್ದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾವಾಗ ಅರ್ಥ ಮಾಡಿಕೊಳ್ಳುವರೋ ಆಗ ತಾವಾಗಿಯೇ ಸಹಯೋಗ ನೀಡಲು ತೊಡಗುವರು. ಕೆಲವರಿಗಂತೂ ಇವರು ಯಾರು ಎಂಬುದು ಗೊತ್ತೇ ಇಲ್ಲ, ಆದ್ದರಿಂದ ಈ ತಂದೆಯು ಕೆಲವರೊಂದಿಗೆ ಮಿಲನ ಮಾಡುವುದೇ ಇಲ್ಲ. ತಂದೆಯನ್ನು ಕುರಿತು ಏನೂ ತಿಳಿಯದಿರುವ ಕಾರಣ ಅವರ ಮುಂದೆ ಇನ್ನೂ ತಮ್ಮ ಆಸುರೀ ಮತವನ್ನೇ ತೆಗೆಯತೊಡಗುತ್ತಾರೆ. ಈಗ ಎಲ್ಲರೂ ಮಾನವ ಮತದ ಮೇಲೆ ನಡೆಯುತ್ತಿದ್ದಾರೆ. ಶ್ರೀಮತವನ್ನು ಅರಿತುಕೊಳ್ಳದ ಕಾರಣ ಬ್ರಹ್ಮಾ ತಂದೆಗೂ ತಮ್ಮ ಮತವನ್ನು ಕೊಡಲು ತೊಡಗುತ್ತಾರೆ. ಈಗ ತಂದೆಯು ನೀವು ಮಕ್ಕಳನ್ನು ಶ್ರೇಷ್ಠರನ್ನಾಗಿ ಮಾಡುವುದಕ್ಕಾಗಿಯೇ ಬಂದಿದ್ದಾರೆ. ಮಕ್ಕಳು ಹೇಳುತ್ತೀರಿ – ಬಾಬಾ, 5000 ವರ್ಷಗಳ ಹಿಂದಿನ ತರಹ ನಾವು ತಮ್ಮೊಂದಿಗೆ ಮಿಲನ ಮಾಡಿದ್ದೇವೆ. ಯಾರಿಗೆ ಇದು ತಿಳಿದೇ ಇಲ್ಲವೋ ಅವರು ಹೀಗೆ ಪ್ರತ್ಯುತ್ತರ ನೀಡಲು ಸಾಧ್ಯವಿಲ್ಲ. ಮಕ್ಕಳಿಗೆ ವಿದ್ಯೆಯ ಬಹಳ ನಶೆಯಿರಬೇಕು, ಇದು ಬಹಳ ಶ್ರೇಷ್ಠ ವಿದ್ಯೆಯಾಗಿದೆ ಆದರೆ ಮಾಯೆಯೂ ಸಹ ಬಹಳ ವಿರೋಧಿಯಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಾವು ಅಂತಹ ವಿದ್ಯೆಯನ್ನು ಓದುತ್ತೇವೆ ಯಾವುದರಿಂದ ನಮ್ಮ ತಲೆಯ ಮೇಲೆ ಡಬಲ್ ಕಿರೀಟ ಬರಬೇಕಾಗಿದೆ. ಭವಿಷ್ಯ ಜನ್ಮ-ಜನ್ಮಾಂತರ ಡಬಲ್ ಕಿರೀಟಧಾರಿಗಳಾಗುತ್ತೇವೆ ಅಂದಮೇಲೆ ಅದಕ್ಕಾಗಿ ಅಂತಹ ಪುರುಷಾರ್ಥ ಮಾಡಬೇಕಾಗಿದೆ. ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ಎಷ್ಟು ಅದ್ಭುತವಾಗಿದೆ! ತಂದೆಯು ಸದಾ ತಿಳಿಸುತ್ತಾರೆ – ಲಕ್ಷ್ಮೀ-ನಾರಾಯಣರ ಮಂದಿರದಲ್ಲಿಯೂ ಹೋಗಿರಿ, ಪೂಜಾರಿಗಳಿಗೆ ನೀವು ತಿಳಿಸಬಲ್ಲಿರಿ. ಅವರನ್ನು ಕೇಳಿರಿ – ಲಕ್ಷ್ಮೀ-ನಾರಾಯಣರಿಗೆ ಈ ಪದವಿಯು ಹೇಗೆ ಸಿಕ್ಕಿತು? ಇವರು ಹೇಗೆ ವಿಶ್ವದ ಮಾಲೀಕರಾದರು? ಹೀಗೆ ಯಾರಿಗಾದರೂ ತಿಳಿಸುತ್ತೀರೆಂದರೆ ಪೂಜಾರಿಗಳ ಕಲ್ಯಾಣವೂ ಆಗುವುದು. ನೀವು ಹೇಳಬಹುದು – ನಾವು ನಿಮಗೆ ತಿಳಿಸುತ್ತೇವೆ, ಈ ಲಕ್ಷ್ಮೀ-ನಾರಾಯಣರಿಗೆ ಹೇಗೆ ರಾಜ್ಯವು ಸಿಕ್ಕಿತು ಎಂದು. ಗೀತೆಯಲ್ಲಿಯೂ ಭಗವಾನುವಾಚ ಇದೆಯಲ್ಲವೆ – ನಾನು ನಿಮಗೆ ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಅಂದಮೇಲೆ ಮಕ್ಕಳಿಗೆ ಎಷ್ಟೊಂದು ನಶೆಯಿರಬೇಕು – ನಾವು ಈ ರೀತಿ ಆಗುತ್ತೇವೆ. ಭಲೆ ತಮ್ಮ ಚಿತ್ರ ಮತ್ತು ರಾಜ್ಯ ಪದವಿಯ ಚಿತ್ರವನ್ನೂ ಜೊತೆಯಲ್ಲಿ ತೆಗೆಸಿರಿ. ಕೆಳಗಡೆ ನಿಮ್ಮ ಚಿತ್ರ, ಮೇಲೆ ರಾಜ್ಯ ಪದವಿಯ ಚಿತ್ರವಿರಲಿ, ಇದರಲ್ಲಿ ಖರ್ಚೇನೂ ಆಗುವುದಿಲ್ಲ. ರಾಜನ ಸಿದ್ಧ ಉಡುಪುಗಳು ಸಿಗುತ್ತವೆ. ಈ ಚಿತ್ರವು ತಮ್ಮ ಬಳಿ ಇಟ್ಟುಕೊಂಡಾಗ ಪದೇ-ಪದೇ ನೆನಪು ಬರುತ್ತಿರುವುದು – ನಾವೇ ದೇವತೆಗಳಾಗುತ್ತಿದ್ದೇವೆ. ಮೇಲ್ಭಾಗದಲ್ಲಿ ಭಲೆ ಶಿವ ತಂದೆಯ ಚಿತ್ರವಿರಲಿ, ಇವೆಲ್ಲಾ ಚಿತ್ರಗಳನ್ನು ತೆಗೆಸಬೇಕಾಗುತ್ತದೆ. ನಾವು ಮನುಷ್ಯರಿಂದ ದೇವತೆಗಳಾಗುತ್ತೇವೆ, ಈ ಶರೀರವನ್ನು ಬಿಟ್ಟು ಹೋಗಿ ನಾವು ದೇವತೆಗಳಾಗುತ್ತೇವೆ ಏಕೆಂದರೆ ಈ ರಾಜಯೋಗವನ್ನು ಕಲಿಯುತ್ತಿದ್ದೇವೆ. ಆದ್ದರಿಂದ ಈ ನಿಮ್ಮ ಚಿತ್ರವು ಸಹಯೋಗಿಯಾಗುವುದು. ಮೇಲ್ಭಾಗದಲ್ಲಿ ಶಿವ ತಂದೆಯ ಚಿತ್ರ ಮತ್ತು ರಾಜ್ಯ ಪೋಷಾಕಿನ ಚಿತ್ರ, ಕೆಳಗಡೆ ನಿಮ್ಮ ಸಾಧಾರಣ ಚಿತ್ರವಿದೆ. ಶಿವ ತಂದೆಯಿಂದ ರಾಜಯೋಗವನ್ನು ಕಲಿತು ನಾವು ಡಬಲ್ ಕಿರೀಟಧಾರಿ ದೇವತೆಗಳಾಗುತ್ತಿದ್ದೇವೆ. ಚಿತ್ರವನ್ನು ಇಟ್ಟಿದ್ದರೆ ಯಾರಾದರೂ ಕೇಳಿದಾಗ ನೀವು ತಿಳಿಸಬಹುದು ನಮಗೆ ತಿಳಿಸುವವರು ಈ ಶಿವ ತಂದೆಯಾಗಿದ್ದಾರೆ, ಚಿತ್ರವನ್ನು ನೋಡಿ ಮಕ್ಕಳಿಗೆ ನಶೆಯೇರುವುದು. ಭಲೆ ಅಂಗಡಿಯಲ್ಲಿಯೂ ಈ ಚಿತ್ರವನ್ನಿಟ್ಟುಕೊಳ್ಳಿ. ಭಕ್ತಿಮಾರ್ಗದಲ್ಲಿ ಬ್ರಹ್ಮಾ ತಂದೆಯು ನಾರಾಯಣನ ಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು, ಜೇಬಿನಲ್ಲಿಯೂ ಇರುತ್ತಿತ್ತು. ನೀವೂ ಸಹ ತಮ್ಮ ಭಾವಚಿತ್ರವನ್ನಿಟ್ಟುಕೊಳ್ಳಿ, ಇದರಿಂದ ನಾವೇ ದೇವಿ-ದೇವತೆಗಳಾಗುತ್ತಿದ್ದೇವೆ ಎಂಬುದು ನೆನಪಿರುವುದು. ತಂದೆಯನ್ನು ನೆನಪು ಮಾಡುವ ಉಪಾಯವನ್ನು ಹುಡುಕಬೇಕು. ತಂದೆಯ ನೆನಪನ್ನು ಮರೆಯುವುದರಿಂದಲೇ ಕೆಳಗೆ ಬೀಳುತ್ತೀರಿ, ವಿಕಾರದಲ್ಲಿ ಬಿದ್ದರೆ ಸಂಕೋಚವಾಗುವುದು- ಈಗಂತೂ ನಾವು ಈ ದೇವತೆಗಳಾಗಲು ಸಾಧ್ಯವಿಲ್ಲವೆಂದು. ನಾವು ಹೇಗೆ ದೇವತೆಗಳಾಗುವೆವು ಎಂದು ಹೃದಯಾಘಾತ ಆಗಿ ಬಿಡುವುದು. ತಂದೆಯು ತಿಳಿಸುತ್ತಾರೆ – ವಿಕಾರದಲ್ಲಿ ಬೀಳುವವರ ಭಾವಚಿತ್ರವನ್ನು ತೆಗೆದು ಹಾಕಿರಿ, ತಿಳಿಸಿ – ನೀವು ಸ್ವರ್ಗದಲ್ಲಿ ಹೋಗಲು ಯೋಗ್ಯರಲ್ಲ. ನಿಮ್ಮ ಪಾಸ್ಪೋರ್ಟ್ ಸಮಾಪ್ತಿ. ನಾವಂತೂ ಬಿದ್ದು ಹೋದೆವು, ಈಗ ಸ್ವರ್ಗದಲ್ಲಿ ಹೇಗೆ ಹೋಗಲು ಸಾಧ್ಯ ಎಂಬುದನ್ನು ಅವರೂ ಆಲೋಚನೆ ಮಾಡುತ್ತಾರೆ. ಹೇಗೆ ತಂದೆಯು ನಾರದನ ಉದಾಹರಣೆಯನ್ನು ಕೊಡುತ್ತಾರೆ. ನಾರದನಿಗೆ ಹೇಳಿದರು – ತಮ್ಮ ಮುಖವನ್ನು ನೋಡಿಕೋ, ಲಕ್ಷ್ಮಿಯನ್ನು ವರಿಸಲು ಯೋಗ್ಯನಾಗಿದ್ದೀಯಾ? ಆಗ ಚಹರೆಯು ಕೋತಿಯಂತೆ ಕಂಡು ಬಂದಿತು. ಹಾಗೆಯೇ ಮನುಷ್ಯರಿಗೂ ಸಹ ಸಂಕೋಚವಾಗುವುದು – ನನ್ನಲ್ಲಿ ಈ ವಿಕಾರವಿದೆಯೆಂದರೆ ನಾನು ಲಕ್ಷ್ಮೀ-ನಾರಾಯಣರನ್ನು ಹೇಗೆ ವರಿಸಲು ಸಾಧ್ಯ ಎಂದು. ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ ಆದರೆ ವಿಶ್ವಾಸವನ್ನು ಇಡಬೇಕಲ್ಲವೆ. ವಿಕಾರದ ನಶೆಯು ಬಂದಿತೆಂದರೆ ತಿಳಿದುಕೊಳ್ಳುತ್ತಾರೆ – ಈ ಲೆಕ್ಕದಿಂದ ನಾವು ರಾಜಾಧಿ ರಾಜ, ಡಬಲ್ ಕಿರೀಟಧಾರಿಗಳು ಹೇಗೆ ಆಗುವೆವು! ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ತಂದೆಯು ತಿಳಿಸುತ್ತಾರೆ – ಇಂತಿಂತಹ ಸುಂದರ ಯುಕ್ತಿಗಳನ್ನು ರಚಿಸಿರಿ ಮತ್ತು ಎಲ್ಲರಿಗೆ ತಿಳಿಸುತ್ತಾ ಇರಿ, ಈ ರಾಜಯೋಗದಿಂದ ಸ್ಥಾಪನೆಯಾಗುತ್ತಿದೆ, ಈಗ ವಿನಾಶವು ಸನ್ಮುಖದಲ್ಲಿ ನಿಂತಿದೆ. ದಿನ-ಪ್ರತಿದಿನ ಬಿರುಗಾಳಿಗಳೂ ಹೆಚ್ಚಾಗುತ್ತಾ ಹೋಗುವುದು. ಬಾಂಬುಗಳೂ ತಯಾರಾಗುತ್ತಿವೆ.

ನೀವು ಮಕ್ಕಳು ಈ ವಿದ್ಯೆಯನ್ನು ಓದುವುದೇ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ. ನೀವು ಒಂದೇ ಬಾರಿ ಪತಿತರಿಂದ ಪಾವನರಾಗುತ್ತೀರಿ. ನಾವು ನರಕವಾಸಿಗಳಾಗಿದ್ದೇವೆ ಎಂಬುದನ್ನು ಮನುಷ್ಯರು ತಿಳಿದುಕೊಳ್ಳುತ್ತಾರೆಯೇ? ಏಕೆಂದರೆ ಕಲ್ಲು ಬುದ್ಧಿಯವರಾಗಿದ್ದಾರೆ. ನೀವೀಗ ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರು ಆಗುತ್ತಿದ್ದೀರಿ, ಅದೃಷ್ಟದಲ್ಲಿದ್ದರೆ ಬೇಗನೆ ತಿಳಿದುಕೊಳ್ಳುವರು, ಇಲ್ಲದಿದ್ದರೆ ಎಷ್ಟಾದರೂ ತಲೆ ಕೆಡಿಸಿಕೊಳ್ಳಲಿ ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ತಂದೆಯನ್ನೇ ಅರಿತುಕೊಂಡಿಲ್ಲ ಅಂದಮೇಲೆ ನಾಸ್ತಿಕರಾಗಿದ್ದಾರೆ ಅರ್ಥಾತ್ ನಿರ್ಧನಿಕರಾಗಿದ್ದಾರೆ. ಶಿವ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಧನಿಕರಾಗಬೇಕಲ್ಲವೆ. ಇಲ್ಲಿ ಯಾರಿಗೆ ಜ್ಞಾನವಿದೆಯೋ ಅವರು ತಮ್ಮ ಮಕ್ಕಳನ್ನು ವಿಕಾರದಿಂದ ಬಿಡಿಸುತ್ತಾ ಇರುತ್ತಾರೆ. ಅಜ್ಞಾನಿಗಳಂತೂ ತಮ್ಮಂತೆಯೇ ಮಕ್ಕಳನ್ನು ವಿಕಾರದಲ್ಲಿ ಸಿಲುಕಿಸುತ್ತಾ ಇರುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಇಲ್ಲಿ ವಿಕಾರಗಳಿಂದ ಪಾರು ಮಾಡಲಾಗುತ್ತದೆ, ಕನ್ಯೆಯರನ್ನಂತೂ ಮೊದಲು ಇದರಿಂದ ಪಾರು ಮಾಡಬೇಕು. ತಂದೆ-ತಾಯಿಯಂತೂ ಹೇಗೆ ವಿಕಾರದಲ್ಲಿ ಪೆಟ್ಟು ಕೊಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಇದು ಭ್ರಷ್ಠಾಚಾರಿ ಪ್ರಪಂಚವಾಗಿದೆ, ಶ್ರೇಷ್ಠಾಚಾರಿ ಪ್ರಪಂಚವನ್ನಂತೂ ಎಲ್ಲರೂ ಬಯಸುತ್ತಾರೆ ಆದರೆ ಅದನ್ನು ಯಾರು ಮಾಡುತ್ತಾರೆ? ಭಗವಾನುವಾಚ – ನಾನು ಈ ಸಾಧು ಸಂತರ ಉದ್ಧಾರವನ್ನೂ ಮಾಡುತ್ತೇನೆ. ಗೀತೆಯಲ್ಲಿಯೂ ಬರೆಯಲ್ಪಟ್ಟಿದೆ – ಭಗವಂತನೇ ಬಂದು ಎಲ್ಲರ ಉದ್ಧಾರ ಮಾಡಬೇಕಾಗಿದೆ. ಒಬ್ಬರೇ ಭಗವಂತನಾಗಿದ್ದಾರೆ, ಅವರು ಬಂದು ಎಲ್ಲರ ಉದ್ಧಾರ ಮಾಡುತ್ತಾರೆ. ಈ ಸಮಯದಲ್ಲಿ ಅವಶ್ಯವಾಗಿ ಗೀತೆಯ ಭಗವಂತ ಶಿವನಾಗಿದ್ದಾರೆ ಎಂಬುದು ಒಂದುವೇಳೆ ಅರ್ಥವಾಗಿ ಬಿಟ್ಟರೆ ಏನಾಗಿ ಬಿಡುವುದೋ ಗೊತ್ತಿಲ್ಲ. ಆದರೆ ಇನ್ನೂ ಸ್ವಲ್ಪ ಸಮಯವಿದೆ, ಇಲ್ಲದಿದ್ದರೆ ಎಲ್ಲರ ಸ್ಥಾನಗಳೂ ಅಲುಗಾಡತೊಡಗುವವು. ಸಿಂಹಾಸನಗಳು ಅಲುಗಾಡುತ್ತದೆಯಲ್ಲವೆ. ಯುದ್ಧವು ಆರಂಭವಾದಾಗ ಅರ್ಥವಾಗುತ್ತದೆ – ಇವರ ಸಿಂಹಾಸನವು ಅಲುಗಾಡುತ್ತಿದೆ, ಈಗ ಇವರು ಬೀಳುವರು ಎಂದು. ಈಗ ಈ ಸಿಂಹಾಸನಗಳು ಅಲುಗಾಡಿದರೆ ಬಹಳ ಏರುಪೇರಾಗಿ ಬಿಡುವುದು, ಇದು ಮುಂದೆ ಆಗಲಿದೆ. ಆದ್ದರಿಂದ ಭಾಷಣದಲ್ಲಿಯೂ ನೀವು ತಿಳಿಸಬಹುದು. ಯಾರು ಸಂಸ್ಕೃತವನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆಯೋ ಅವರು ಶ್ಲೋಕಗಳನ್ನು ತಿಳಿಸಬಹುದಾಗಿದೆ. ಪತಿತ-ಪಾವನ, ಸರ್ವರ ಸದ್ಗತಿದಾತ ಸ್ವಯಂ ಹೇಳುತ್ತಾರೆ, ಅವಶ್ಯವಾಗಿ ಬ್ರಹ್ಮಾರವರ ತನುವಿನಿಂದ ಸ್ಥಾಪನೆ ಮಾಡುತ್ತಿದ್ದಾರೆ, ಸರ್ವರ ಸದ್ಗತಿ ಅರ್ಥಾತ್ ಉದ್ಧಾರ ಮಾಡುತ್ತಿದ್ದಾರೆ. ಭಾಷಣ ಮಾಡುವುದರಲ್ಲಿ ಬಹಳ ಮಸ್ತಿಯಿರಬೇಕು. ಕನ್ಯೆಯರದು ಬಿಸಿ ರಕ್ತವಾಗಿದೆ, ನೀವು ಜ್ಞಾನದ ಕಲ್ಲನ್ನು (ಬಾಣ) ಹೊಡೆಯಬಲ್ಲಿರಿ. ವಿದ್ಯಾರ್ಥಿಗಳದು ಹೊಸ ರಕ್ತವಿರುವ ಕಾರಣ ಎಷ್ಟೊಂದು ಹೊಡೆದಾಟಗಳನ್ನು ನಡೆಸುತ್ತಾರೆ. ಕಲ್ಲು ಹೊಡೆಯುತ್ತಾರೆ, ಅವರು ಇದರಲ್ಲಿ ತೀಕ್ಷ್ಣವಾಗಿರುತ್ತಾರೆ. ಈಗ ನಿಮ್ಮದೂ ಸಹ ಬಿಸಿ ರಕ್ತವಾಗಿದೆ, ನೀವು ತಿಳಿದುಕೊಂಡಿದ್ದೀರಿ – ಅವರು ಎಷ್ಟೊಂದು ನಷ್ಟವನ್ನುಂಟು ಮಾಡುತ್ತಿದ್ದಾರೆ ಆದರೆ ನಿಮ್ಮದು ಈಶ್ವರೀಯ ಬಿಸಿ ರಕ್ತವಾಗಿದೆ, ನೀವು ಹಳಬರಿಂದ ಹೊಸಬರಾಗುತ್ತಿದ್ದೀರಿ. ನೀವಾತ್ಮರು ಹಳೆಯ ಪತಿತರಾಗಿ ಬಿಟ್ಟಿದ್ದೀರಿ, ಈಗ ಹೊಸ, ಸತೋಪ್ರಧಾನರಾಗುತ್ತಿದ್ದೀರಿ ಅಂದಮೇಲೆ ಮಕ್ಕಳಿಗೆ ಬಹಳ ಉಮ್ಮಂಗವಿರಬೇಕು. ನಶೆಯೂ ಸ್ಥಿರವಾಗಿರಲಿ. ತಮ್ಮ ಸಹಪಾಠಿಗಳನ್ನೂ ಮೇಲೆತ್ತಬೇಕು. ತಾಯಿಗುರು ಎಂದು ಗಾಯನವಿದೆ. ತಾಯಿಯು ಯಾವಾಗ ಗುರುವಾಗುತ್ತಾಳೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಗುರುವಿನ ಪಾತ್ರವು ಈಗ ನಡೆಯುತ್ತದೆ, ಮಾತೆಯರ ಮೇಲೆ ತಂದೆಯು ಜ್ಞಾನಾಮೃತದ ಕಳಶವನ್ನು ಇಡುತ್ತಾರೆ. ಆರಂಭವೇ ಈ ರೀತಿಯಾಗುತ್ತದೆ. ಸೇವಾಕೇಂದ್ರಗಳಿಗಾಗಿ ನಮಗೆ ಬ್ರಾಹ್ಮಣಿ ಬೇಕು ಎಂದು ಹೇಳುತ್ತಾರೆ. ತಾವೇ ನಡೆಸಿರಿ ಎಂದು ತಂದೆಯು ಹೇಳುತ್ತಾರೆ ಆದರೆ ಧೈರ್ಯವಿಲ್ಲದ ಕಾರಣ ಬಾಬಾ, ಮಾತೆಯು ಬೇಕು ಎಂದು ಹೇಳುತ್ತಾರೆ. ಇದೂ ಸರಿಯೇ, ಮಾನ್ಯತೆ ಕೊಡುತ್ತಾರಲ್ಲವೆ. ಇತ್ತೀಚಿನ ಪ್ರಪಂಚದಲ್ಲಿ ಒಬ್ಬರು ಇನ್ನೊಬ್ಬರಿಗೆ ತೋರ್ಪಡಿಕೆಯ ಗೌರವ ಕೊಡುತ್ತಾರೆ. ಸತ್ಯವಾದ ಗೌರವ ಯಾರಿಗೂ ಸಿಗುವುದಿಲ್ಲ. ಈ ಸಮಯದಲ್ಲಿ ನೀವು ಮಕ್ಕಳಿಗೆ ಸ್ಥಿರವಾದ ರಾಜ್ಯಭಾಗ್ಯವು ಸಿಗುತ್ತಿದೆ, ತಂದೆಯು ನಿಮಗೆ ಎಷ್ಟೊಂದು ಪ್ರಕಾರದಿಂದ ತಿಳಿಸುತ್ತಾರೆ. ತಮ್ಮನ್ನು ಸದಾ ಹರ್ಷಿತವಾಗಿಟ್ಟುಕೊಳ್ಳಲು ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಶುಭ ಭಾವನೆಯನ್ನು ಇಟ್ಟುಕೊಳ್ಳಬೇಕು, ಓಹೋ ನಾವು ಈ ಲಕ್ಷ್ಮೀ-ನಾರಾಯಣರಂತೆ ಆಗುತ್ತೇವೆ. ಒಂದುವೇಳೆ ಅದೃಷ್ಟದಲ್ಲಿಲ್ಲ ಎಂದರೆ ಪುರುಷಾರ್ಥ ಏನು ಮಾಡುವರು! ತಂದೆಯಂತೂ ಪುರುಷಾರ್ಥವನ್ನು ತಿಳಿಸುತ್ತಾರೆ. ಪುರುಷಾರ್ಥವೆಂದೂ ವ್ಯರ್ಥವಾಗಿ ಹೋಗುವುದಿಲ್ಲ, ಇದು ಸದಾ ಸಫಲವಾಗುತ್ತದೆ. ರಾಜಧಾನಿಯು ಸ್ಥಾಪನೆಯಾಗುವುದು. ಈ ಮಹಾಭಾರಿ ಮಹಾಭಾರತ ಯುದ್ಧದ ಮೂಲಕ ವಿನಾಶವಾಗುವುದು. ಮುಂದೆ ಹೋದಂತೆ ನೀವು ಪ್ರಭಾವ ಬೀರಿದಾಗ ಇವರೆಲ್ಲರೂ ಬರುವರು. ಈಗಲೇ ತಿಳಿದುಕೊಳ್ಳುವುದಿಲ್ಲ ಇಲ್ಲವಾದರೆ ಇವರ ರಾಜ್ಯವು ಸಮಾಪ್ತಿಯಾಗುವುದು. ನಿಮ್ಮ ಬಳಿ ಬಹಳ ಒಳ್ಳೆಯ ಚಿತ್ರಗಳಿವೆ, ಇದು ಸದ್ಗತಿ ಅರ್ಥಾತ್ ಸುಖಧಾಮವಾಗಿದೆ. ಇದು ಮುಕ್ತಿಧಾಮವಾಗಿದೆ ಎಂದು ತಿಳಿಸಿರಿ. ಬುದ್ಧಿಯು ಹೇಳುತ್ತದೆ – ನಾವೆಲ್ಲಾ ಆತ್ಮರು ನಿರ್ವಾಣಧಾಮದಲ್ಲಿರುತ್ತೇವೆ, ಅಲ್ಲಿಂದ ಸಾಕಾರಿ ಪ್ರಪಂಚಕ್ಕೆ ಬರುತ್ತೇವೆ. ನಾವಾತ್ಮರು ಅಲ್ಲಿನ ನಿವಾಸಿಗಳಾಗಿದ್ದೇವೆ. ಈ ಆಟವೇ ಭಾರತದ ಮೇಲೆ ಮಾಡಲ್ಪಟ್ಟಿದೆ, ಇಲ್ಲಿಯೇ ಶಿವ ಜಯಂತಿಯನ್ನು ಆಚರಿಸುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಬಂದಿದ್ದೇನೆ, ಕಲ್ಪದ ನಂತರ ಪುನಃ ಬರುತ್ತೇನೆ. ಭಾರತವೇ ಸ್ವರ್ಗವಾಗಿದೆ, ಕ್ರಿಸ್ತನಿಗೆ ಇಷ್ಟು ವರ್ಷಗಳ ಮೊದಲು ಸ್ವರ್ಗವಿತ್ತೆಂದು ಹೇಳುತ್ತಾರೆ, ಈಗ ಇಲ್ಲ. ಪುನಃ ಆಗುವುದು. ಅಂದಮೇಲೆ ಅವಶ್ಯವಾಗಿ ನರಕವಾಸಿಗಳ ವಿನಾಶ, ಸ್ವರ್ಗವಾಸಿಗಳ ಸ್ಥಾಪನೆಯಾಗಬೇಕು. ಆದ್ದರಿಂದ ನೀವು ಸ್ವರ್ಗವಾಸಿಗಳಾಗುತ್ತಿದ್ದೀರಿ, ನರಕದ ವಿನಾಶವಾಗಿ ಬಿಡುವುದು. ಇದೂ ಸಹ ತಿಳುವಳಿಕೆ ಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪ್ರತಿಯೊಬ್ಬರ ಪ್ರತಿ ಶುಭ ಭಾವನೆಯನ್ನು ಇಟ್ಟುಕೊಳ್ಳಬೇಕಾಗಿದೆ. ಎಲ್ಲರಿಗೆ ಸತ್ಯವಾದ ಗೌರವ ಕೊಡಬೇಕಾಗಿದೆ. ಸತ್ಯಯುಗೀ ರಾಜಧಾನಿಯಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ.

2. ಆತ್ಮಾಭಿಮಾನಿ ಆಗುವ ಪರಿಶ್ರಮ ಪಡಬೇಕಾಗಿದೆ. ಮಾನವ ಮತವನ್ನು ಬಿಟ್ಟು ಒಬ್ಬರ ಶ್ರೀಮತದಂತೆ ನಡೆಯಬೇಕಾಗಿದೆ. ವಿದ್ಯೆಯ ನಶೆಯಲ್ಲಿರಬೇಕಾಗಿದೆ.

ವರದಾನ:-

ವರ್ತಮಾನ ಸಮಯದಲ್ಲಿ ನಾಲ್ಕೂ ಕಡೆಗಳಲ್ಲಿ ಗೌರವ ಕೊಡುವ ರೆಕಾರ್ಡ್ನ್ನು ಸರಿಪಡಿಸಿಕೊಳ್ಳುವ ಅವಶ್ಯಕತೆಯಿದೆ. ನಂತರದಲ್ಲಿ ಇದೇ ಹಾಡು ನಾಲ್ಕೂ ಕಡೆಗಳಲ್ಲಿ ಮೊಳಗುವುದು. ರಿಗಾರ್ಡ್ (ಗೌರವ) ಕೊಡುವುದು ಮತ್ತು ತೆಗೆದುಕೊಳ್ಳುವುದು, ಕಿರಿಯರಿಗೂ ಗೌರವ ಕೊಡಿ, ಹಿರಿಯರಿಗೂ ಗೌರವ ಕೊಡಿ. ಈಗ ಈ ರಿಗಾರ್ಡ್ನ ರೆಕಾರ್ಡ್ ಹೊರಬರಬೇಕಾಗಿದೆ. ಹೀಗಾದಾಗ ಖುಷಿಯ ದಾನ ಮಾಡುವಂತಹ ಮಹಾದಾನಿ ಪುಣ್ಯಾತ್ಮರು ಆಗಿ ಬಿಡುತ್ತೀರಿ. ಯಾರಿಗೇ ಆಗಲಿ ಗೌರವ ಕೊಟ್ಟು ಖುಷಿ ಪಡಿಸುವುದು – ಇದು ಅತಿ ಶ್ರೇಷ್ಠವಾದ ಪುಣ್ಯದ ಕಾರ್ಯವಾಗಿದೆ, ಸೇವೆಯಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top