23 September 2021 KANNADA Murli Today | Brahma Kumaris

Read and Listen today’s Gyan Murli in Kannada

September 22, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಮನ್ಮಾನಭವದ ಮಂತ್ರವನ್ನು ಪಕ್ಕಾ ಮಾಡಿಕೊಳ್ಳಿ, ಒಬ್ಬ ತಂದೆಯನ್ನು ಸದಾ ಫಾಲೋ ಮಾಡಿರಿ - ಇದೇ ತಂದೆಗೆ ಸಹಯೋಗಿಗಳಾಗುವುದಾಗಿದೆ”

ಪ್ರಶ್ನೆ:: -

ಪುರುಷೋತ್ತಮರಾಗುವ ಸಹಜ ಮತ್ತು ಶ್ರೇಷ್ಠ ಪುರುಷಾರ್ಥ ಏನಾಗಿದೆ?

ಉತ್ತರ:-

ಹೇ ಪುರುಷೋತ್ತಮರಾಗುವಂತಹ ಮಕ್ಕಳೇ – ನೀವು ಸದಾ ಶ್ರೀಮತದಂತೆ ನಡೆಯುತ್ತಾ ಇರಿ. ಒಬ್ಬ ತಂದೆಯನ್ನು ನೆನಪು ಮಾಡಿರಿ, ಮತ್ತ್ಯಾವುದೇ ಮಾತುಗಳಲ್ಲಿ ಮಧ್ಯ ಪ್ರವೇಶ ಮಾಡಬೇಡಿ. ತಿನ್ನಿರಿ, ಕುಡಿಯಿರಿ, ಎಲ್ಲವನ್ನೂ ಮಾಡಿರಿ ಆದರೆ ಎಲ್ಲವನ್ನೂ ನೆನಪು ಮಾಡುತ್ತಾ ಇರಿ ಆಗ ಪುರುಷೋತ್ತಮರಾಗಿ ಬಿಡುವಿರಿ. ಯಾರ ಮೇಲೆ ಬೃಹಸ್ಪತಿ ದೆಶೆಯಿದೆಯೋ ಅವರೇ ಪುರುಷೋತ್ತಮ ಆಗುತ್ತಾರೆ. ಅವರೆಂದೂ ಶ್ರೀಮತದ ಉಲ್ಲಂಘನೆ ಮಾಡುವುದಿಲ್ಲ. ಅವರಿಂದ ಯಾವುದೇ ಉಲ್ಟಾ ಕರ್ಮವಾಗುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ……

ಓಂ ಶಾಂತಿ. ಈ ಮಹಿಮೆಯು ಯಾರದಾಗಿದೆ? ಒಬ್ಬ ಪರಮಪಿತ ಪರಮಾತ್ಮನದು, ಯಾರು ಒಳ್ಳೆಯ ಕಾರ್ಯವನ್ನು ಮಾಡುತ್ತಾರೆಯೋ ಅವರಿಗೆ ಅವಶ್ಯವಾಗಿ ಮಹಿಮೆಯಾಗುತ್ತದೆ. ಯಾರು ಕೆಟ್ಟ ಕರ್ತವ್ಯವನ್ನು ಮಾಡುವರೋ ಅವರ ನಿಂದನೆಯಾಗುತ್ತದೆ. ಹೇಗೆ ಅಕ್ಬರ್ ಇದ್ದನು ಅವನಿಗೆ ಮಹಿಮೆಯಿತ್ತು, ಔರಂಗಜೇಬನಿಗೆ ನಿಂದನೆಯಿತ್ತು. ರಾಮನಿಗೆ ಮಹಿಮೆ ಮಾಡುತ್ತಾರೆ, ರಾವಣನ ನಿಂದನೆ ಮಾಡುತ್ತಾರೆ. ಭಾರತದಲ್ಲಿಯೇ ರಾಮ ರಾಜ್ಯ, ರಾವಣ ರಾಜ್ಯವು ಪ್ರಸಿದ್ಧವಾಗಿದೆ. ರಾಮ ರಾಜ್ಯಕ್ಕೆ ಪುರುಷೋತ್ತಮ ರಾಜ್ಯವೆಂತಲೂ, ರಾವಣ ರಾಜ್ಯಕ್ಕೆ ಆಸುರೀ ರಾಜ್ಯವೆಂತಲೂ ಹೇಳುತ್ತಾರೆ. ಮಕ್ಕಳಿಗೆ ಈಗ ಸಂಗಮಯುಗದ ಬಗ್ಗೆ ಅರ್ಥವಾಗಿದೆ. ಇದೇ ಪುರುಷೋತ್ತಮ ಯುಗವಾಗಿದೆ, ಈ ಭಾರತವನ್ನು ಪುರುಷೋತ್ತಮವನ್ನಾಗಿ ಮಾಡಿಯೇ ತೀರಬೇಕಾಗಿದೆ. ಭಾರತದಲ್ಲಿ ಇರುವವರನ್ನೂ ಪುರುಷೋತ್ತಮರನ್ನಾಗಿ ಮಾಡಬೇಕಾಗಿದೆ ಮತ್ತು ಇರುವಂತಹ ಸ್ಥಾನವನ್ನೂ ಪುರುಷೋತ್ತಮವನ್ನಾಗಿ ಮಾಡಬೇಕಾಗಿದೆ. ಭಾರತಕ್ಕೇ ಸ್ವರ್ಗವೆಂದು ಹೇಳುತ್ತಾರೆ. ಅಲ್ಲಿರುವವರಿಗೆ ದೇವಿ-ದೇವತೆ, ಸ್ವರ್ಗವಾಸಿಗಳೆಂದು ಹೇಳುತ್ತಾರೆ ಅಂದಾಗ ಇಬ್ಬರೂ ಉತ್ತಮರಾಗುತ್ತಾರೆ. ಎಲ್ಲರಿಗೆ ತಿಳಿದಿದೆ – ಹೊಸ ಪ್ರಪಂಚವು ಉತ್ತಮವಾಗಿರುತ್ತದೆ ಮತ್ತು ಹಳೆಯ ಪ್ರಪಂಚವು ಕನಿಷ್ಟವಾಗಿರುತ್ತದೆ. ಎಂತಹ ಪ್ರಪಂಚವೋ ಅಂತೆಯೇ ಇರುತ್ತಾರೆ, ಗಾಯನವಿದೆ – ನವ ಭಾರತ, ಹಳೆಯ ಭಾರತ, ಮತ್ತ್ಯಾವುದೇ ಖಂಡಕ್ಕೆ ಹೊಸ ಖಂಡವೆಂದು ಹೇಳುವುದಿಲ್ಲ. ಹೊಸ ಪ್ರಪಂಚದಲ್ಲಿ ಹೊಸ ಅಮೇರಿಕಾ, ಹೊಸ ಚೈನಾ ಇರುತ್ತದೆಯೆಂದಲ್ಲ. ಹೊಸ ಪ್ರಪಂಚದಲ್ಲಿ ಹೊಸ ಭಾರತವೆಂದೇ ಗಾಯನವಿದೆ. ಆದ್ದರಿಂದ ನ್ಯೂ ಇಂಡಿಯಾ ಎಂದು ಹೇಳಲಾಗುತ್ತದೆ. ಹೊಸ ಭಾರತವೆಂದೇ ಹೆಸರನ್ನು ಇಡುತ್ತಾರೆ ಆದರೆ ಎಲ್ಲವೂ ಅರ್ಥವಿಲ್ಲದೆ ಇಡುತ್ತಾರೆ. ಈ ಸಮಯದಲ್ಲಿ ಹೊಸ ಭಾರತವು ಎಲ್ಲಿಂದ ಬಂದಿತು? ಹೊಸ ಭಾರತದಲ್ಲಿ ದೆಹಲಿಯು ಪರಿಸ್ತಾನವಾಗಿರುತ್ತದೆ, ಈಗ ಪರಿಸ್ತಾನವೆಲ್ಲಿದೆ? ನೀವು ಮಕ್ಕಳು ಇಲ್ಲಿ ಪುರುಷೋತ್ತಮರಾಗಲು ಬರುತ್ತೀರಿ. ಶ್ರೇಷ್ಠವಾದುದು ಬೃಹಸ್ಪತಿ ದೆಶೆಯಾಗಿದೆ, ಪುರುಷೋತ್ತಮರು ಆಗುವುದರಿಂದ ಬೃಹಸ್ಪತಿ ದೆಶೆಯು ಕುಳಿತುಕೊಳ್ಳುತ್ತದೆ. ನೀವು ತಿಳಿದುಕೊಂಡಿದ್ದೀರಿ, ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವಂತಹ ತಂದೆಯ ಮೂಲಕ ನಾವು ಬೇಹದ್ದಿನ ಸುಖವನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡುತ್ತಿದ್ದೇವೆ. ಸತ್ಯಯುಗದಲ್ಲಿ ಪುರುಷೋತ್ತಮರು ಇರುತ್ತಾರೆ ನಂತರ ಕೆಳಗಡೆ ಬಂದಾಗ ಮಧ್ಯಮ ಮತ್ತೆ ಕನಿಷ್ಠರಾಗುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈಗ ತಂದೆಯು ನಮ್ಮನ್ನು ಸತೋಪ್ರಧಾನ ಸತ್ಯಯುಗೀ ಸ್ವರ್ಗವಾಸಿ, ಪುರುಷೋತ್ತಮರನ್ನಾಗಿ ಮಾಡುತ್ತಿದ್ದಾರೆ. ಇದು ಬಹಳ-ಬಹಳ ಸಹಜವಾಗಿದೆ. ಇದು ತಿನ್ನುವಂತಹ ಔಷಧಿಯೂ ಅಲ್ಲ, ಮಾಡುವಂತಹ ಕಾರ್ಯವೂ ಅಲ್ಲ, ಕೇವಲ ನೆನಪು ಮಾಡಬೇಕಾಗಿದೆ ಆದ್ದರಿಂದ ಸಹಜ ನೆನಪು ಎಂದು ಹೇಳಲಾಗುತ್ತದೆ. ನೆನಪಿನಿಂದಲೇ ಪಾಪಾತ್ಮರಿಂದ ಪುಣ್ಯಾತ್ಮರಾಗಬೇಕಾಗಿದೆ. ಎಲ್ಲರಿಗೆ ಮುಕ್ತಿ ಸಿಗಬೇಕಾಗಿದೆ, ಇದು ಅವಶ್ಯವಾಗಿದೆ. ತಂದೆಯು ತಿಳಿಸುತ್ತಾರೆ – ನಾನು ಸರ್ವರ ಸದ್ಗತಿದಾತನಾಗಿದ್ದೇನೆ, ಅಂದಮೇಲೆ ಮನುಷ್ಯರ ಶರೀರಗಳು ಸಮಾಪ್ತಿಯಾಗುತ್ತವೆ. ಬಾಕಿ ಆತ್ಮರನ್ನು ಪವಿತ್ರರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತೇನೆ, ಹಿಂತಿರುಗಿ ಹೋಗುವುದಕ್ಕಾಗಿ ತಯಾರು ಮಾಡಿಕೊಳ್ಳಬೇಕಾಗಿದೆ. ತಂದೆಯು ತಯಾರಿ ಮಾಡಿಸುತ್ತಿದ್ದಾರೆ ಏಕೆಂದರೆ ಆತ್ಮದ ರೆಕ್ಕೆಗಳು ತುಂಡಾಗಿ ಬಿಟ್ಟಿವೆ ಅರ್ಥಾತ್ ಆತ್ಮರು ತಮೋಪ್ರಧಾನರಾಗಿದ್ದಾರೆ.

ನೀವು ಯೋಗಬಲದಿಂದ ಪವಿತ್ರರಾಗುವ ಪರಿಶ್ರಮ ಪಡುತ್ತೀರಿ. ಯಾರು ಮಾಡುವುದಿಲ್ಲವೋ ಅವರು ಲೆಕ್ಕವನ್ನೂ ಕೊಡಬೇಕಾಗುತ್ತದೆ. ಇದರಲ್ಲಿ ಯಾವುದೇ ವಿಚಾರ ಮಾಡುವ ಮಾತಿಲ್ಲ. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವುದು ಮಕ್ಕಳ ಕೆಲಸವಾಗಿದೆ. ತಂದೆಗೆ ಸಹಯೋಗಿಗಳಾಗಿ ಸಹಯೋಗ ನೀಡಬೇಕಾಗುತ್ತದೆ. ತಂದೆಯದೂ ಸಹಯೋಗ ಮತ್ತು ಮಕ್ಕಳದೂ ಸಹಯೋಗ ಬೇಕಾಗಿದೆ. ಹೇಗೆ ಸಹಯೋಗ ಕೊಡುವುದು ಎಂಬುದಕ್ಕೆ ತಂದೆಯನ್ನು ನೋಡಿ ಫಾಲೋ ಮಾಡಬೇಕಾಗಿದೆ. ಎಲ್ಲರಿಗೆ ಪುರುಷೋತ್ತಮರಾಗಲು ನನ್ನ ಮಂತ್ರವನ್ನು ಕೊಡುತ್ತಾ ಹೋಗಿರಿ. ತಂದೆಯು ಕಲ್ಪ-ಕಲ್ಪವೂ ಬಂದು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡದೇ ಪತಿತರಿಂದ ಪಾವನರಾಗುವುದಿಲ್ಲ. ನಾನು ಯಾವುದೇ ಗಂಗಾ ಸ್ನಾನ ಮಾಡಿಸುತ್ತೇನೆಯೇ? ಕೇವಲ ಮಹಾಮಂತ್ರವನ್ನು ನೆನಪು ಮಾಡಬೇಕಾಗಿದೆ – “ಮನ್ಮನಾಭವ” ಇದರ ಅರ್ಥವಾಗಿದೆ, ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗಿ ಪುರುಷೋತ್ತಮರಾಗಿ ಸ್ವರ್ಗದ ಮಾಲೀಕರಾಗುವಿರಿ. ಸ್ತ್ರೀ-ಪುರುಷರಿಬ್ಬರೂ ಪವಿತ್ರ ಪ್ರವೃತ್ತಿಯ ಮಾಲೀಕರಾಗುತ್ತೀರಿ. ತಂದೆಯು ಇವೆಲ್ಲಾ ಮಾತುಗಳನ್ನು ವಿವರವಾಗಿ ತಿಳಿಸುತ್ತಾರೆ. ನೀವು ಪ್ರಾಕ್ಟಿಕಲ್ನಲ್ಲಿ ಆಗುತ್ತೀರಿ. ನಿಮಗೆ ತಿಳಿದಿದೆ – ಭಗವಂತನು ಬಂದು ಮಕ್ಕಳನ್ನು ಪುರುಷೋತ್ತಮರನ್ನಾಗಿ ಮಾಡಿದ್ದಾರೆ ಆದ್ದರಿಂದಲೇ ಪತಿತರನ್ನು ಪಾವನರನ್ನಾಗಿ ಮಾಡುವ ಪತಿತ-ಪಾವನನೇ ಬನ್ನಿ ಎಂದು ಕರೆಯುತ್ತಾರೆ. ಪುರುಷೋತ್ತಮ ಮಾಸಕ್ಕೆ ಬಹಳ ಮಹಿಮೆಯನ್ನು ಹೇಳುತ್ತಾರಲ್ಲವೆ. ಅಂದಾಗ ಈ ಪುರುಷೋತ್ತಮ ಯುಗಕ್ಕೆ ಬಹಳ ಮಹಿಮೆಯಿದೆ, ಕಲಿಯುಗ ಅರ್ಥಾತ್ ರಾತ್ರಿಯ ನಂತರ ಅವಶ್ಯವಾಗಿ ದಿನವು ಬರಬೇಕಾಗಿದೆ. ದುಃಖದ ನಂತರ ಸುಖವು ಬರುತ್ತದೆ, ಈ ಶಬ್ಧವೂ ಸ್ಪಷ್ಟವಾಗಿದೆ. ಸ್ತ್ರೀ-ಪುರುಷರಿಬ್ಬರೂ ಉತ್ತಮರಿಗಿಂತಲೂ ಉತ್ತಮರು ಶ್ರೇಷ್ಠಾತಿ ಶ್ರೇಷ್ಠ ಆಗುತ್ತಾರೆ ಏಕೆಂದರೆ ಪ್ರವೃತ್ತಿ ಮಾರ್ಗವಾಗಿದೆ. ಸತ್ಯಯುಗವಂತೂ ಪ್ರಸಿದ್ಧವಾಗಿದೆ, ಅದಕ್ಕೇ ಸುಖಧಾಮವೆಂದು ಹೇಳಲಾಗುತ್ತದೆ. ಸನ್ಯಾಸಿಗಳಂತೂ ದ್ವಾಪರದಲ್ಲಿ ಬರುತ್ತಾರೆ, ಸನ್ಯಾಸವನ್ನು ಧಾರಣೆ ಮಾಡಿ ಉತ್ತಮರಾಗುತ್ತಾರೆ ಆದ್ದರಿಂದ ಪತಿತ ಮನುಷ್ಯರು ಹೋಗಿ ಅವರಿಗೆ ತಲೆ ಬಾಗುತ್ತಾರೆ. ಪವಿತ್ರರ ಮುಂದೆ ಅಪವಿತ್ರರು ತಲೆ ಬಾಗಿಸುತ್ತಾರೆ. ಇದು ಸಾಮಾನ್ಯ ಮಾತಾಗಿದೆ. ಪತಿತ-ಪಾವನ ತಂದೆಯನ್ನು ಅರಿತುಕೊಳ್ಳದೇ ಇರುವ ಕಾರಣ ಗಂಗೆಯನ್ನು ಪತಿತ-ಪಾವನಿ ಎಂದು ತಿಳಿದು ತಲೆ ಬಾಗುತ್ತಾರೆ. ನದಿ ಮತ್ತು ಸಾಗರದ ಮೇಳವೂ ಆಗುತ್ತದೆ. ನೀವು ಮಕ್ಕಳಿಗೆ ತಂದೆಯು ಬಹಳ ಸ್ಪಷ್ಟ ಮಾಡಿ ತಿಳಿಸುತ್ತಾರೆ ಮತ್ತೆ ಹೇಳುತ್ತಾರೆ – ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರೇ ತಿಳಿದುಕೊಳ್ಳುವರು. ಅದರಲ್ಲಿಯೂ ಆಶ್ಚರ್ಯವೆನಿಸುವಂತೆ ಹೇಳಿ-ಕೇಳಿ, ನಡೆದು ಮತ್ತೆ ವಿಚ್ಛೇದನವನ್ನು ಕೊಟ್ಟು ಹೊರಟು ಹೋಗುತ್ತಾರೆ, ಡಿಸ್ಸರ್ವೀಸ್ ಮಾಡುತ್ತಾರೆ. ಸರ್ವೀಸ್ ಮತ್ತು ಡಿಸ್ಸರ್ವೀಸ್ ಎರಡೂ ಆಗುತ್ತದೆ. ಅನೇಕರು ಬಿಟ್ಟು ಹೋಗುತ್ತಾರೆ, ಯಾರು ತಂದೆಯನ್ನು ಅರಿತುಕೊಳ್ಳುವುದಿಲ್ಲ. ನೀವು ಪಾಪಾತ್ಮರಿಂದ ಪುಣ್ಯಾತ್ಮರಾಗುತ್ತೀರಿ, ಮತ್ತೆ ಮಕ್ಕಳೇ ಕುಳಿತು ವಿಘ್ನಗಳನ್ನು ಹಾಕುತ್ತಾರೆ, ಡಿಸ್ಸರ್ವೀಸ್ ಮಾಡುತ್ತಾರೆಂದರೆ ಎಷ್ಟು ಮಹಾನ್ ಪಾಪವಾಗುತ್ತದೆ. ರಾವಣನು ಎಲ್ಲರನ್ನೂ ಮಹಾಪಾಪಿಗಳನ್ನಾಗಿ ಮಾಡುತ್ತಾನೆ, ಆದರೆ ಯಾರು ಮಕ್ಕಳಾಗಿಯೂ ಡಿಸ್ಸರ್ವೀಸ್ ಮಾಡುವರೋ ಅವರಿಗಾಗಿ ಧರ್ಮರಾಜ ಪುರಿಯಲ್ಲಿ ತೀರ್ಮಾನವು ನಡೆಯುತ್ತದೆ, ಭಕ್ತಿ ಮಾರ್ಗದಲ್ಲಿ ಇಷ್ಟು ಕಠಿಣ ಶಿಕ್ಷೆಯು ಸಿಗುವುದಿಲ್ಲ ಆದರೆ ಇಲ್ಲಿ ತಂದೆಯ ಮಕ್ಕಳಾಗಿಯೂ ಮತ್ತೆ ಡಿಸ್ಸರ್ವೀಸ್ ಮಾಡುತ್ತಾರೆಂದರೆ ತಂದೆಗೆ ಬಲಭುಜ ಧರ್ಮರಾಜನಾಗಿದ್ದಾರೆ. ಆದ್ದರಿಂದ ತಂದೆಯು ಹೇಳುತ್ತಾರೆ – ಮಕ್ಕಳೇ, ನನ್ನ ಸೇವೆಯಲ್ಲಿ ಸಹಯೋಗಿಗಳಾಗಿ ಮತ್ತೆ ಉಲ್ಟಾ ಕರ್ಮ ಮಾಡಬಾರದು. ಡಿಸ್ಸರ್ವೀಸ್ ಮಾಡುತ್ತೀರೆಂದರೆ ಮತ್ತೆ ಅಬಲೆಯರ ಮೇಲೆ ವಿಘ್ನ ಹಾಕುವುದು. ಮಾತೆಯರ ಮೇಲೆ ತಂದೆಗೆ ದಯೆ ಬರುತ್ತದೆ. ಭಗವಂತನು ದ್ರೌಪದಿಯ ಕಾಲನ್ನು ಒತ್ತಿದರಲ್ಲವೆ! ನಮ್ಮನ್ನು ಅಪವಿತ್ರರನ್ನಾಗಿ ಮಾಡುತ್ತಾರೆ, ರಕ್ಷಿಸು ಎಂದು ಕರೆದಳಲ್ಲವೆ. ತಂದೆಯು ಮಾತೆಯರ ತಲೆಯ ಮೇಲೆ ಕಳಸವನ್ನು ಇಡುತ್ತಾರೆ. ಮೊದಲು ಮಾತೆ ನಂತರ ಪುರುಷರು ಆದರೆ ಈಗಿನ ಕಾಲದಲ್ಲಿ ಪುರುಷರಲ್ಲಿ ಬಹಳ ಅಭಿಮಾನವಿದೆ, ನಾನು ಸ್ತ್ರೀಯ ಗುರುವಾಗಿದ್ದಾನೆ, ಪತಿ ಈಶ್ವರನಾಗಿದ್ದೇನೆ, ಸ್ತ್ರೀಯು ನನ್ನ ದಾಸಿಯಾಗಿದ್ದಾಳೆ. ಆದರೆ ಇಲ್ಲಿ ತಂದೆಯು ನಿರಹಂಕಾರಿಯಾಗಿ ಮಾತೆಯರ ಕಾಲನ್ನು ಒತ್ತುತ್ತಾರೆ. ಹೇಳುತ್ತಾರೆ – ನೀವು ಸುಸ್ತಾಗಿ ಬಿಟ್ಟಿದ್ದೀರಿ, ನಾನು ನಿಮ್ಮ ದಣಿವನ್ನು ದೂರ ಮಾಡುವುದಕ್ಕಾಗಿ ಬಂದಿದ್ದೇನೆ, ನೀವು ಮಾತೆಯರನ್ನು ಎಲ್ಲರೂ ತಿರಸ್ಕಾರ ಮಾಡಿದರು, ಸನ್ಯಾಸಿಗಳು ಸ್ತ್ರೀಯನ್ನು ಬಿಟ್ಟು ಹೊರಟು ಹೋಗುತ್ತಾರೆ. ಯಾರಿಗಾದರೂ 5-7 ಮಂದಿ ಮಕ್ಕಳಿದ್ದರೆ ಸಂಭಾಲನೆ ಮಾಡಲು ಸಾಧ್ಯವಾಗದಿದ್ದರೆ ಬೇಸತ್ತು ಬಿಟ್ಟು ಹೊರಟು ಹೋಗುತ್ತಾರೆ. ರಚನೆ ಮಾಡಿ ಮತ್ತೆ ಅವರನ್ನು ಅಲೆಯುವಂತೆ ಮಾಡಿ ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಯಾರನ್ನೂ ಅಲೆಸುವುದಿಲ್ಲ. ನಾನು ಎಲ್ಲರ ದುಃಖಹರ್ತ-ಸುಖಕರ್ತನಾಗಿದ್ದೇನೆ, ಮಾಯೆಯು ಬಂದು ದುಃಖಿಯನ್ನಾಗಿ ಮಾಡುತ್ತದೆ. ಇದೂ ಸಹ ಆಟವಾಗಿದೆ. ಅಜ್ಞಾನ ಕಾಲದಲ್ಲಿ ಭಗವಂತನೇ ಸುಖ-ದುಃಖ ಕೊಡುತ್ತಾರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ ಆದರೆ ಈಶ್ವರ ತಂದೆಯು ಈ ವ್ಯವಹಾರ ಮಾಡುವುದಿಲ್ಲ, ಇದಂತೂ ನಿಮ್ಮದೇ ಕರ್ಮಗಳನುಸಾರ ಮಾಡಲ್ಪಟ್ಟಿರುವ ನಾಟಕವಾಗಿದೆ. ಯಾರು ಎಂತಹ ಕರ್ಮ ಮಾಡುವರೋ ಅಂತಹ ಫಲವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಶ್ರೇಷ್ಠ ಕರ್ಮವನ್ನು ಮಾಡುವ ಮಾತಾಗಿದೆ. ಕರ್ಮವನ್ನು ಕುಟುಕುವ ಮಾತಿಲ್ಲ. ಯಾರಾದರೂ ರೋಗಿಯಾಗುತ್ತಾರೆ, ದಿವಾಳಿ ಆಗುತ್ತಾರೆಂದರೆ ಅಯ್ಯೊ ನನ್ನ ಕರ್ಮವೇ ಎಂದು ಕರ್ಮವನ್ನು ಕುಟುಕುತ್ತಾರೆ. ನೀವು ಮಕ್ಕಳು ಎಷ್ಟು ಸೌಭಾಗ್ಯಶಾಲಿ ಆಗಿದ್ದೀರಿ! ನೀವು 21 ಜನ್ಮಗಳವರೆಗೆ ಎಂದೂ ಕರ್ಮವನ್ನು ಕುಟುಕುವುದಿಲ್ಲ. ಎಷ್ಟು ದೊಡ್ಡ ಫಲವಾಗಿದೆ ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ತಂದೆಯು ಮತ್ತ್ಯಾವುದೇ ಮಾತಿನಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ತಿನ್ನಿರಿ, ಕುಡಿಯಿರಿ, ಏನಾದರೂ ಮಾಡಿರಿ ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿರಿ. ನಾವು ಪತಿತರಾಗಿದ್ದೇವೆಂದು ಹೇಳುತ್ತೀರಿ ಅಂದಮೇಲೆ ತಂದೆಯು ಪಾವನರಾಗುವ ಯಾವ ಯುಕ್ತಿಯನ್ನು ತಿಳಿಸುತ್ತಾರೆಯೋ ಅದರಂತೆ ನಡೆಯಿರಿ, ಇಲ್ಲಿ ಕೇವಲ ನೆನಪು ಮಾಡುವ ಪರಿಶ್ರಮವಿದೆ. ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು, ಗುಪ್ತ ಪರಿಶ್ರಮವಿದೆ. ಜ್ಞಾನವೂ ಗುಪ್ತವಾಗಿದೆ. ಮುರುಳಿಯನ್ನು ನುಡಿಸುವುದಂತೂ ಪ್ರತ್ಯಕ್ಷವಾಗಿದೆ ಆದರೆ ಈ ವಾಣಿಯಿಂದ ನೀವು ಪಾವನರಾಗುವುದಿಲ್ಲ. ನೆನಪಿನಿಂದಲೇ ಪಾವನರಾಗುತ್ತೀರಿ. ಆದ್ದರಿಂದ ಬೇಹದ್ದಿನ ತಂದೆಯನ್ನು ನೆನಪು ಮಾಡಿರಿ ಮತ್ತು ಸಹಯೋಗಿಗಳೂ ಆಗಬೇಕು. ಆತ್ಮಿಕ ಆಸ್ಪತ್ರೆ ಮತ್ತು ಯುನಿವರ್ಸಿಟಿಯನ್ನು ತೆರೆಯುವ ಪುರುಷಾರ್ಥ ಮಾಡಿರಿ. ಯಾವುದೇ ಒಳ್ಳೆಯ ಜಾಗವಿದ್ದರೆ ಹೋಗಿ ಭಾಷಣ ಮಾಡಿರಿ. ನೀವು ಕೈಯಲ್ಲಿ ಪುಸ್ತಕವನ್ನು ಹಿಡಿದುಕೊಳ್ಳುವಂತಿಲ್ಲ, ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಬಾಕಿ ತಿಳಿಸುವುದಕ್ಕಾಗಿ ವೃಕ್ಷ, ತ್ರಿಮೂರ್ತಿ, ಸೃಷ್ಟಿಚಕ್ರದ ರಹಸ್ಯವನ್ನು ಎಲ್ಲರಿಗೆ ತಿಳಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ – ನಾನು ಬ್ರಹ್ಮಾರವರ ಮೂಲಕ ಬ್ರಾಹ್ಮಣರನ್ನು ರಚಿಸುತ್ತೇನೆ. ಈ ವಿಷ್ಣು ಬ್ರಾಹ್ಮಣರ ಗುರಿ-ಧ್ಯೇಯವಾಗಿದೆ, ಅವರಂತೆ ಮಾಡುವಂತಹ ಶಿಕ್ಷಕನು ನಿರಾಕಾರನಾಗಿದ್ದಾರೆ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ ಎಂದು ಗಾಯನವಿದೆ. ಕಲ್ಪದ ಮೊದಲೂ ಸಹ ಇದೇರೀತಿ ಚಿತ್ರಗಳನ್ನು ಮಾಡಿಸಿದ್ದೆವು. ನೋಡಿ, ವೈಜ್ಞಾನಿಕ ಶಕ್ತಿಯಿಂದ ಎಷ್ಟೊಂದು ಅಣ್ವಸ್ತ್ರಗಳನ್ನು ತಯಾರಿಸುತ್ತಾರೆ. ನೀವು ಮಕ್ಕಳು ಪುರುಷೋತ್ತಮರು ಆಗುವುದರಲ್ಲಿಯೂ ಪರಿಶ್ರಮವಾಗುತ್ತದೆ ಏಕೆಂದರೆ ಜನ್ಮ-ಜನ್ಮಾಂತರದ ಹೊರೆಯು ನಿಮ್ಮ ತಲೆಯ ಮೇಲಿದೆ. ಸೆಕೆಂಡಿನಲ್ಲಿ ನಿಶ್ಚಯವಾಯಿತೆಂದರೆ ತಂದೆಯನ್ನು ನೆನಪು ಮಾಡಬೇಕಾಗಿದೆ, ಅದರಿಂದಲೇ ತಮೋಪ್ರಧಾನರಿಂದ ಸತೋಪ್ರಧಾನ ಆಗುವಿರಿ.

ತಂದೆಯು ತಿಳಿಸುತ್ತಾರೆ – ಮನ್ಮನಾಭವ. ನೀವು ಕರ್ಮಯೋಗಿಗಳಾಗಿದ್ದೀರಿ. ನೆನಪಿನ ಚಾರ್ಟ್ ಇಟ್ಟುಕೊಳ್ಳಬೇಕಾಗಿದೆ. ನಿಮ್ಮ ಯುದ್ಧವು ಮಾಯೆಯ ಜೊತೆಯಿದೆ, ಬಹಳ ಕಠಿಣ ಯುದ್ಧವಾಗಿದೆ. ನೀವು ನೆನಪಿನಲ್ಲಿರುವ ಪರಿಶ್ರಮ ಪಡುತ್ತೀರಿ, ಮಾಯೆಯು ಹಾರಿಸಿ ಬಿಡುತ್ತದೆ. ಜ್ಞಾನದಲ್ಲಿ ಯಾವುದೇ ಅಡಚಣೆಯಿಲ್ಲ, ಆತ್ಮದಲ್ಲಿ 84 ಜನ್ಮಗಳ ಸಂಸ್ಕಾರವು ತುಂಬಲ್ಪಟ್ಟಿದೆ, ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಈ ಚಕ್ರವು ಸುತ್ತುತ್ತಲೇ ಇರುತ್ತದೆ, ನಿಂತು ಹೋಗುವುದಿಲ್ಲ. ಸೃಷ್ಟಿಯನ್ನು ರಚಿಸಿದ್ದಾದರೂ ಏಕೆ? ಎಂಬ ಪ್ರಶ್ನೆಯೇ ಬರುವುದಿಲ್ಲ. ಆತ್ಮವು ಹೇಗೆ ಪರಿವರ್ತನೆಯಾಗುತ್ತದೆ! ಹೊಸ ಆತ್ಮವು ಎಲ್ಲಿಂದಲೂ ಬರುವುದಿಲ್ಲ, ಯಾವ ಆತ್ಮರಿದ್ದಾರೆಯೋ ಅವರೇ ಇರುತ್ತಾರೆ, ಹೆಚ್ಚು-ಕಡಿಮೆಯಾಗಲು ಸಾಧ್ಯವಿಲ್ಲ. ಅದೇ ಪಾತ್ರಧಾರಿಗಳಾಗಿದ್ದಾರೆ. ನೀವು ಬೇಹದ್ದಿನ ಪಾತ್ರಧಾರಿಗಳಾಗಿದ್ದೀರಿ. ನೀವು ಯಾರೆಲ್ಲರನ್ನೂ ನೋಡುತ್ತೀರೋ ಅಷ್ಟು ಪಾತ್ರಧಾರಿಗಳು ನಾಟಕದಲ್ಲಿದ್ದಾರೆ, ಇವರು ಕಲ್ಪದ ನಂತರವೂ ಇರುತ್ತಾರೆ. ಯಾರೂ ಮೋಕ್ಷವನ್ನು ಹೊಂದುವುದಿಲ್ಲ, ಮನುಷ್ಯರು ಆವಾಗಮನದ ಚಕ್ರದಿಂದ ಬಿಡುಗಡೆಯಾಗಲು ಇಚ್ಛಿಸುತ್ತಾರೆ ಆದರೆ ಸಾಧ್ಯವಿಲ್ಲ, ಯಾರು ಪಾತ್ರವನ್ನಭಿನಯಿಸಲು ಬರುತ್ತಾರೆಯೋ ಅವರು ಪುನಃ ಬರಲೇಬೇಕಾಗಿದೆ. ತಂದೆಯು ತಿಳಿಸುತ್ತಾರೆ – ನಾನೂ ಸಹ ಈ ಪತಿತ ಪ್ರಪಂಚದಲ್ಲಿ ಬಂದು ಹೋಗಬೇಕಾಗುತ್ತದೆ. ಕಲ್ಪ-ಕಲ್ಪವೂ ಒಂದು ಬಾರಿ ನಾನು ಬರುತ್ತೇನೆ. ಯಾವಾಗ ನಾನೇ ಬರಬೇಕಾಗುತ್ತದೆ ಅಂದಮೇಲೆ ಮಕ್ಕಳ ಪಾತ್ರವು ನಿಂತು ಹೋಗಲು ಹೇಗೆ ಸಾಧ್ಯ! ನೀವು 84 ಬಾರಿ ಶರೀರದಲ್ಲಿ ಬರುತ್ತೀರಿ, ನಾನು ಒಂದೇ ಬಾರಿ ಬರುತ್ತೇನೆ. ನಾನು ಬರುವುದೂ-ಹೋಗುವುದು ಬಹಳ ಅದ್ಭುತವಾಗಿದೆ ಆದ್ದರಿಂದ ನಿಮ್ಮ ಗತಿಮತವು ನಿಮಗೇ ಗೊತ್ತು, ಸದ್ಗತಿ ಮಾಡುವುದಕ್ಕಾಗಿ ಯಾವ ಮತವಿದೆಯೋ ಅದು ನಿಮಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ ಎಂದು ಹೇಳುತ್ತಾರೆ. ಅವರು ಕೇವಲ ಹಾಡುತ್ತಾರೆ, ನೀವು ಪ್ರತ್ಯಕ್ಷದಲ್ಲಿ ಇದ್ದೀರಿ, ಮೂಲ ಮಾತು ನೆನಪಿನದಾಗಿದೆ ಮತ್ತೆ ಅಂಧರಿಗೆ ಊರುಗೋಲಾಗಬೇಕಾಗಿದೆ, ಇದು ಪುರುಷೋತ್ತಮ ಯುಗವಾಗಿದೆ. ಇದು 5000 ವರ್ಷಗಳ ನಂತರ ಬರುತ್ತದೆ. ಪುರುಷೋತ್ತಮ ಮಾಸವು 3 ವರ್ಷಗಳ ನಂತರ ಬರುತ್ತದೆ. ಅದೆಲ್ಲವೂ ಭಕ್ತಿಮಾರ್ಗವಾಗಿದೆ, ಅವರ ಮಂತ್ರ ತಂತ್ರದ ಪುಸ್ತಕಗಳು ಬಹಳಷ್ಟಿದೆ, ಇಲ್ಲಂತೂ ಆ ಮಾತಿಲ್ಲ. ಭಕ್ತಿಮಾಡದೇ ಇರುವವರಿಗೆ ಅಧರ್ಮಿಗಳೆಂದು ಹೇಳುತ್ತಾರೆ. ಆದ್ದರಿಂದ ಅವರನ್ನೂ ರಾಜಿ ಮಾಡಿಕೊಳ್ಳಲು ಏನಾದರೂ ಮಾಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಎಂದೂ ಡಿಸ್ಸರ್ವೀಸ್ ಮಾಡುವ ಪುರುಷಾರ್ಥ ಮಾಡಬೇಡಿ, ಯಾರಾದರೂ ವಿರೋಧಿಗಳಾಗಿ ಬಿಟ್ಟರೆ ಅವರಿಗೆ ಅಜಾಮೀಳರೆಂದು ಹೇಳಲಾಗುತ್ತದೆ. ಅಜಾಮೀಳ, ಸೂರದಾಸ, ಮೊದಲಾದವರ ಎಷ್ಟೊಂದು ಕಥೆಗಳಿವೆ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಯಾರು ಇಲ್ಲಿ ಬಂದು ನನ್ನವರಾಗಿ ನನಗೆ ವಿಚ್ಛೇದನವನ್ನು ಕೊಡುವರೋ ಅವರೇ ಹೆಚ್ಚು ಪಾಪಾತ್ಮರಾಗಿದ್ದಾರೆ, ಯಾರು ನನ್ನ ನಿಂದನೆ ಮಾಡಿಸುವರೋ ಅವರಿಗಾಗಿ ಟ್ರಿಬ್ಯುನಲ್ ಇರುತ್ತದೆ. ಪ್ರತಿಜ್ಞೆ ಮಾಡಿ ಮತ್ತೆ ಡಿಸ್ಸರ್ವೀಸ್ ಮಾಡಿದರೆ ಕಠಿಣ ಶಿಕ್ಷೆ ಸಿಗುವುದು. ಪದವಿಯು ಶ್ರೇಷ್ಠವಾಗಿದೆ ಅಂದಮೇಲೆ ಮತ್ತೆ ತಪ್ಪು ಮಾಡಿದರೆ ಕಠಿಣ ಶಿಕ್ಷೆಯು ಸಿಗುವುದು ಆದ್ದರಿಂದ ಯಾವುದೇ ಉಲ್ಲಂಘನೆ ಮಾಡಬಾರದು. ಸದ್ಗುರುವಿನ ನಿಂದಕರಿಗೆ ನೆಲೆಯಿಲ್ಲ ಅರ್ಥಾತ್ ನರನಿಂದ ನಾರಾಯಣನಾಗುವ ಗುರಿ-ಧ್ಯೇಯವನ್ನು ಪಡೆಯಲು ಸಾಧ್ಯವಿಲ್ಲ. ಗುರುಗಳೊಂದಿಗೆ ನೀವು ಕೇಳಬಲ್ಲಿರಿ – ಗುರುವಿನ ನಿಂದಕರಿಗೆ ನೆಲೆಯಿಲ್ಲವೆಂದು ನೀವು ಹೇಳುತ್ತೀರಿ, ಅದು ಯಾವ ನೆಲೆ? ಅದಕ್ಕೆ ಅವರು ತಿಳಿಸಲು ಸಾಧ್ಯವಿಲ್ಲ. ತಂದೆಯ ಕಿರೀಟವನ್ನು ಅವರು ತಮ್ಮ ಮೇಲೆ ಇಟ್ಟುಕೊಂಡಿದ್ದಾರೆ. ಶಿಕ್ಷಕರು ಹೇಳುತ್ತಾರೆ – ಒಂದುವೇಳೆ ಪೂರ್ಣ ಓದದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಪಾವನರಾಗಿ ದೇವಿ-ದೇವತೆಗಳಾಗಬೇಕಾಗಿದೆ, ಇಲ್ಲಿ ಯಾರೂ ಪಾವನರಿಲ್ಲ. ಈಗ ಎಲ್ಲರೂ ಪಾವನರಾಗಬೇಕಾಗಿದೆ, 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಸಿಗುತ್ತದೆ ಆದ್ದರಿಂದ ಕೇವಲ ಇದೊಂದು ಅಂತಿಮ ಜನ್ಮದಲ್ಲಿ ಪಾವನರಾಗಬೇಕಾಗಿದೆ. ಎಷ್ಟು ದೊಡ್ಡ ಪ್ರಾಪ್ತಿಯಿದೆ! ಪ್ರಾಪ್ತಿಯಾಗದೇ ಇದ್ದರೆ ಅಂತಹ ಪುರುಷಾರ್ಥ ಮಾಡುವರೇ? ಆದರೆ ಮಾಯೆಯು ಶಕ್ತಿಶಾಲಿಯಾಗಿದೆ, ಅದು ಶ್ರೇಷ್ಠ ಪ್ರಾಪ್ತಿಯಲ್ಲಿಯೂ ವಿಘ್ನಗಳನ್ನು ಹಾಕುತ್ತದೆ ಮತ್ತು ಬೀಳಿಸುತ್ತದೆ. ಓಹೋ ಮಾಯೆ…… ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವುದೇ ಡಿಸ್ಸರ್ವೀಸ್ನ ಕಾರ್ಯ ಮಾಡಬಾರದು ಮತ್ತು ತಂದೆಯ ನಿಂದನೆಯಾಗುವಂತಹ ಕರ್ಮವೂ ಆಗಬಾರದು. ಉಲ್ಲಂಘನೆಗಳಿಂದ ದೂರವಾಗಬೇಕು. ಪುರುಷೋತ್ತಮರಾಗಬೇಕಾಗಿದೆ.

2. ಮಾಯೆಯ ಬಿರುಗಾಳಿಗಳಿಗೆ ಹೆದರದೆ ಪಾವನರಾಗುವುದಕ್ಕಾಗಿ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ತಂದೆಯ ಸಮಾನ ಲೈಟ್, ಮೈಟ್ ಹೌಸ್ ಆಗುವುದಕ್ಕಾಗಿ ಯಾವುದೇ ಮಾತನ್ನು ನೋಡುತ್ತಾ ಅಥವಾ ಕೇಳುತ್ತೀರೆಂದರೆ, ಅದರ ಸಾರವನ್ನು ತಿಳಿದುಕೊಂಡು ಒಂದು ಸೆಕೆಂಡಿನಲ್ಲಿ ಸಮಾವೇಶ ಮಾಡಿಕೊಳ್ಳುವ ಅಥವಾ ಪರಿವರ್ತನೆ ಮಾಡುವ ಅಭ್ಯಾಸ ಮಾಡಿರಿ. ಏಕೆ, ಏನು ಎಂಬ ವಿಸ್ತಾರದಲ್ಲಿ ಹೋಗಬಾರದು ಏಕೆಂದರೆ ಯಾವುದೇ ಮಾತಿನ ವಿಸ್ತಾರದಲ್ಲಿ ಹೋಗುವುದರಿಂದ ಸಮಯ ಮತ್ತು ಶಕ್ತಿಗಳು ವ್ಯರ್ಥವಾಗುತ್ತವೆ. ಅಂದಾಗ ವಿಸ್ತಾರವನ್ನು ಸಮಾವೇಶ ಮಾಡಿಕೊಂಡು ಸಾರದಲ್ಲಿ ಸ್ಥಿತರಾಗುವ ಅಭ್ಯಾಸ ಮಾಡಿರಿ. ಇದರಿಂದ ಅನ್ಯ ಆತ್ಮರನ್ನೂ ಒಂದು ಸೆಕೆಂಡಿನಲ್ಲಿ ಸಂಪೂರ್ಣ ಜ್ಞಾನದ ಸಾರದ ಅನುಭವ ಮಾಡಿಸಬಹುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top