21 September 2021 KANNADA Murli Today | Brahma Kumaris

Read and Listen today’s Gyan Murli in Kannada

September 20, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ, ಆತ್ಮ ಹಾಗೂ ಪರಮಾತ್ಮನನ್ನು ನಾಮ-ರೂಪದಿಂದ ಭಿನ್ನವೆಂದು ಹೇಳುವುದಿಲ್ಲ, ಅವರಲ್ಲಿಯೂ ಅವಿನಾಶಿ ಪಾತ್ರವು ನಿಗಧಿಯಾಗಿದೆ”

ಪ್ರಶ್ನೆ:: -

ಶಿವ ತಂದೆಯನ್ನು ಭೋಲಾನಾಥನೆಂದು ಹೇಳಿ ನೆನಪು ಮಾಡುತ್ತಾರೆ, ಅವರಿಗೆ ಭೋಲಾ ಎಂದು ಏಕೆ ಹೇಳಿದ್ದಾರೆ?

ಉತ್ತರ:-

ಏಕೆಂದರೆ ತಂದೆಯೇ ಅಹಲ್ಯೆಯರು, ಗಣಿಕೆಯರು, ಕುಬ್ಜೆಯರ ಉದ್ಧಾರ ಮಾಡುತ್ತಾರೆ, ಅವರಿಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಮನುಷ್ಯರಂತೂ ತಂದೆಗೆ ಹೇಳುತ್ತಾರೆ – ಭಗವಂತನೇ ದುಃಖವನ್ನು ಕೊಡುತ್ತಾರೆ, ಸುಖವನ್ನೂ ಅವರೇ ಕೊಡುತ್ತಾರೆ ಎಂದು. ಆದರೆ ತಂದೆಯು ತಿಳಿಸುತ್ತಾರೆ – ನಾನಂತೂ ನೀವು ಮಕ್ಕಳಿಗಾಗಿ ಸುಖದ ರಾಜ್ಯವನ್ನು ಸ್ಥಾಪನೆ ಮಾಡುತ್ತೇನೆ. ನನ್ನನ್ನು ದುಃಖಹರ್ತ-ಸುಖಕರ್ತನೆಂದು ಹೇಳಿದ್ದಾರೆ. ವಿಚಾರ ಮಾಡಿ – ತಂದೆಯಾದ ನಾನು ನನ್ನ ಮಕ್ಕಳಿಗೆ ದುಃಖವನ್ನು ಕೊಡಲು ಸಾಧ್ಯವೇ!

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ದೂರ ದೇಶದಲ್ಲಿರುವವರು…..

ಓಂ ಶಾಂತಿ. ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ ಅರ್ಥಾತ್ ಆತ್ಮರು ಈ ಶರೀರದ ಕಿವಿ ರೂಪಿ ಕರ್ಮೇಂದ್ರಿಯದ ಮೂಲಕ ಗೀತೆಯನ್ನು ಕೇಳಿದಿರಿ – ದೂರ ದೇಶದಿಂದ ಯಾತ್ರಿಕನು ಬಂದಿದ್ದಾರೆ. ನೀವೆಲ್ಲರೂ ಯಾತ್ರಿಕರಲ್ಲವೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರೂ ಯಾತ್ರಿಕರಾಗಿದ್ದಾರೆ. ಯಾವುದೇ ಆತ್ಮರಿಗೆ ಮನೆಯಿಲ್ಲ, ಆತ್ಮವು ನಿರಾಕಾರಿಯಾಗಿದೆ. ನಿರಾಕಾರಿ ಪ್ರಪಂಚದಲ್ಲಿ ನಿರಾಕಾರಿ ಆತ್ಮರಿರುತ್ತಾರೆ. ಅದಕ್ಕೆ ನಿರಾಕಾರಿ ಆತ್ಮರ ಮನೆ, ದೇಶ ಅಥವಾ ಲೋಕವೆಂದು ಹೇಳಲಾಗುತ್ತದೆ. ಈ ಸಾಕಾರ ಪ್ರಪಂಚಕ್ಕೆ ಜೀವಾತ್ಮರ ದೇಶವೆಂದು ಹೇಳಲಾಗುತ್ತದೆ. ಅದು ಆತ್ಮರ ದೇಶವಾಗಿದೆ, ನಂತರ ಆತ್ಮರು ಇಲ್ಲಿ ಬಂದು ಶರೀರದಲ್ಲಿ ಪ್ರವೇಶ ಮಾಡಿದಾಗ ನಿರಾಕಾರಿಯಿಂದ ಸಾಕಾರಿಯಾಗುತ್ತಾರೆ. ಆತ್ಮಕ್ಕೆ ಯಾವುದೇ ರೂಪವಿಲ್ಲವೆಂದಲ್ಲ, ರೂಪವೂ ಇದೆ, ನಾಮವೂ ಇದೆ. ಇಷ್ಟು ಚಿಕ್ಕ ಆತ್ಮವು ಈ ಶರೀರದ ಮೂಲಕ ಎಷ್ಟೊಂದು ಪಾತ್ರವನ್ನು ಅಭಿನಯಿಸುತ್ತದೆ. ಪ್ರತಿಯೊಂದು ಆತ್ಮದಲ್ಲಿ ಪಾತ್ರವನ್ನು ಅಭಿನಯಿಸಲು ಎಷ್ಟೊಂದು ರೆಕಾರ್ಡ್ ತುಂಬಲ್ಪಟ್ಟಿದೆ. ರೆಕಾರ್ಡ್ ಒಂದು ಬಾರಿ ತುಂಬಲಾಗುತ್ತದೆ, ನಂತರ ಎಷ್ಟಾದರೂ ಪುನರಾವರ್ತಿಸಿ ಅದೇ ನಡೆಯುವುದು. ಹೇಗೆ ಆತ್ಮವು ಈ ಶರೀರದಲ್ಲಿ ರೆಕಾರ್ಡ್ ಆಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ತುಂಬಲ್ಪಟ್ಟಿದೆ. ಹೇಗೆ ಆತ್ಮವು ನಿರಾಕಾರಿಯಾಗಿದೆಯೋ ಹಾಗೆಯೇ ಪರಮಾತ್ಮನೂ ನಿರಾಕಾರನಾಗಿದ್ದಾರೆ, ಕೆಲವು ಶಾಸ್ತ್ರಗಳಲ್ಲಿ ಪರಮಾತ್ಮನು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಬರೆದಿದ್ದಾರೆ ಆದರೆ ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಹೇಗೆ ಆಕಾಶವಿದೆ, ಅದಕ್ಕೂ ನಾಮ-ರೂಪವಂತೂ ಇದೆಯಲ್ಲವೆ. ಹೆಸರಿಲ್ಲದೆ ಯಾವುದೇ ವಸ್ತು ಇರುವುದಿಲ್ಲ. ಪರಮಪಿತನು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ. ಒಂದುವೇಳೆ ನಾಮವಿಲ್ಲದೇ ಹೋಗಿದ್ದರೆ ರೂಪವೂ ಇಲ್ಲ, ದೇಶವೂ ಇರುತ್ತಿರಲಿಲ್ಲ ಅಂದಮೇಲೆ ಏನೂ ಆಗಲು ಸಾಧ್ಯವಿಲ್ಲ. ದೂರ ದೇಶದಲ್ಲಿರುವ ಪರಮಪಿತ ಪರಮಾತ್ಮನೇ ಎಂದು ಕರೆಯುತ್ತಾರೆ. ದೂರ ದೇಶದಲ್ಲಿ ಆತ್ಮರಿರುತ್ತಾರೆ, ಇದು ಸಾಕಾರ ದೇಶವಾಗಿದೆ. ಇದರಲ್ಲಿ ಇಬ್ಬರ ರಾಜ್ಯವು ನಡೆಯುತ್ತದೆ – ರಾಮ ರಾಜ್ಯ ಮತ್ತು ರಾವಣ ರಾಜ್ಯ. ಅರ್ಧ ಕಲ್ಪ ರಾಮ ರಾಜ್ಯ, ಅರ್ಧ ಕಲ್ಪ ರಾವಣ ರಾಜ್ಯ. ಇದನ್ನು ಮಕ್ಕಳಿಗೆ ತಿಳಿಸಲಾಗಿದೆ – ಸತ್ಯಯುಗದಿಂದ ಈಶ್ವರೀಯ ರಾಜ್ಯವು ಆರಂಭವಾಗುತ್ತದೆ. ರಾಮ ರಾಜ್ಯವನ್ನು ಸ್ಥಾಪನೆ ಮಾಡುವವರು ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಎಂದೂ ರಾವಣ ರಾಜ್ಯವನ್ನು ಸ್ಥಾಪನೆ ಮಾಡಲು ಸಾಧ್ಯವಿಲ್ಲ. ತಂದೆಯು ಮಕ್ಕಳಿಗಾಗಿ ಎಂದಾದರೂ ದುಃಖದ ರಾಜ್ಯವನ್ನು ಸ್ಥಾಪನೆ ಮಾಡುವರೇ? ಈಶ್ವರನೇ ದುಃಖ-ಸುಖ ಎಲ್ಲವನ್ನೂ ಕೊಡುತ್ತಾರೆಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ – ನಾನು ಮಕ್ಕಳಿಗೆ ದುಃಖವನ್ನು ಹೇಗೆ ಕೊಡುವೆನು? ನನ್ನ ಹೆಸರೇ ಆಗಿದೆ – ದುಃಖಹರ್ತ-ಸುಖಕರ್ತ, ದುಃಖ-ಸುಖ ಎರಡನ್ನೂ ಕೊಡುತ್ತಾರೆ ಎಂಬುದು ಮನುಷ್ಯರ ತಪ್ಪಾಗಿದೆ. ಈಶ್ವರನು ಎಂದೂ ದುಃಖವನ್ನು ಕೊಡುವುದಿಲ್ಲ. ಈ ಸಮಯದಲ್ಲಿ ದುಃಖಧಾಮವಾಗಿದೆ, ಅರ್ಧ ಕಲ್ಪ ರಾವಣ ರಾಜ್ಯದಲ್ಲಿ ದುಃಖವೇ ಸಿಗುತ್ತದೆ. ಸುಖದ ಅಂಶವೂ ಇರುವುದಿಲ್ಲ. ಸುಖಧಾಮದಲ್ಲಿ ಎಂದೂ ದುಃಖವಿರುವುದಿಲ್ಲ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ನೀವೀಗ ಸಂಗಮದಲ್ಲಿದ್ದೀರಿ. ಇದಕ್ಕೆ ಹೊಸ ಪ್ರಪಂಚವೆಂದು ಯಾರೂ ಹೇಳುವುದಿಲ್ಲ. ಹೊಸ ಪ್ರಪಂಚದ ಹೆಸರೇ ಆಗಿದೆ – ಸ್ವರ್ಗ, ಅದೇ ನಂತರ ಹಳೆಯ ಪ್ರಪಂಚವಾಗುತ್ತದೆ. ಹೊಸ ವಸ್ತು ಯಾವಾಗ ಹಳೆಯದು ಮತ್ತು ಕೆಟ್ಟದಾಗಿ ಕಾಣುವುದೋ ಆಗ ಹಳೆಯ ವಸ್ತುವನ್ನು ಸಮಾಪ್ತಿ ಮಾಡಲಾಗುತ್ತದೆ. ಮನುಷ್ಯರಂತೂ ವಿಕಾರಗಳನ್ನೇ ಸುಖವೆಂದು ತಿಳಿಯುತ್ತಾರೆ. ಅಮೃತವನ್ನು ಬಿಟ್ಟು ವಿಷವನ್ನೇಕೆ ಕುಡಿಯುವಿರಿ ಎಂದು ಗಾಯನವಿದೆ. ಗ್ರಂಥದಲ್ಲಿ ಗುರುನಾನಕರ ಮಾತುಗಳಿದೆ. ತಂದೆಯ ಮಹಿಮೆಯನ್ನು ಹಾಡುತ್ತಾರೆ, ತಾವು ಬಂದು ಏನು ಮಾಡುವಿರೋ ಅದರಿಂದ ಉದ್ಧಾರವೇ ಆಗುವುದು ಇಲ್ಲವಾದರೆ ರಾವಣ ರಾಜ್ಯದಲ್ಲಿ ಮನುಷ್ಯರು ಕೆಟ್ಟ ಕರ್ಮಗಳನ್ನೇ ಮಾಡುತ್ತಾರೆ. ತಂದೆಯೇ ಬಂದು ಕೊಳಕಾದ ಬಟ್ಟೆಗಳನ್ನು ಒಗೆಯುತ್ತಾರೆ. ಗ್ರಂಥದಲ್ಲಿ ಬಹಳಷ್ಟು ಬರೆಯಲ್ಪಟ್ಟಿದೆ. ಸಿಂಧಿಗಳು ಗ್ರಂಥಗಳನ್ನು ಇಟ್ಟುಕೊಳ್ಳುತ್ತಾರೆ, ಇವರೇನೂ ಸಿಖ್ಖ್ ಧರ್ಮದವರಲ್ಲ, ಇವರು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಾರೆ. ಗುರು ನಾನಕರು ಸಿಖ್ಖ್ ಧರ್ಮದವರಾಗಿದ್ದಾರೆ, ಅವರಿಗೆ ಕೂದಲು, ದಾಡಿ ಇತ್ತು ಅಂದಮೇಲೆ ಎಲ್ಲಾ ಸಿಖ್ಖರಿಗೆ ದಾಡಿ, ಕೂದಲು ಇರಬೇಕು. ಇತ್ತೀಚೆಗಂತೂ ಸಿಖ್ಖರು ದಾಡಿಯನ್ನು ಬಿಡುವುದಿಲ್ಲ, ಬಹಳ ಫ್ಯಾಷನೇಬಲ್ ಆಗಿ ಬಿಟ್ಟಿದ್ದಾರೆ. ಇಲ್ಲವಾಗಿದ್ದರೆ ಫಾಲೋ ಮಾಡಬೇಕಲ್ಲವೆ. ನಾವು ಗುರು ನಾನಕರ ಅನುಯಾಯಿಗಳೆಂದು ಹೇಳುತ್ತಾರೆ ಅಂದಮೇಲೆ ಗುರು ನಾನಕರನ್ನು ಫಾಲೋ ಮಾಡಬೇಕಲ್ಲವೆ. ಇದಂತೂ ಮಕ್ಕಳಿಗೆ ಅರ್ಥವಾಗಿದೆ – ಗುರು ನಾನಕರು ಬಂದು 500 ವರ್ಷಗಳಾಯಿತು, ಪುನಃ ಯಾವಾಗ ಬರುತ್ತಾರೆ? ಇದಕ್ಕೆ ನೀವು ಕೂಡಲೇ ತಿಳಿಸುತ್ತೀರಿ. ಯಾರೊಂದಿಗಾದರೂ ಹೇಳಿರಿ – ಗುರುನಾನಕರು ಯಾವಾಗ ಬರುತ್ತಾರೆ? ಆತ್ಮ ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಯಿತು ಮತ್ತೆ ಹೇಗೆ ಬರುವರು ಎನ್ನುತ್ತಾರೆ. ಇಂದಿಗೆ 4500 ವರ್ಷಗಳ ನಂತರ ಪುನಃ ಬರುತ್ತಾರೆಂದು ನೀವು ಹೇಳುತ್ತೀರಿ. ನಿಮ್ಮ ಬುದ್ಧಿಯಲ್ಲಿ ಇಡೀ ವಿಶ್ವದ ಚರಿತ್ರೆ-ಭೂಗೋಳದ ಚಕ್ರವು ಸುತ್ತುತ್ತಾ ಇರುತ್ತದೆ. ಬುದ್ಧ, ಕ್ರೈಸ್ಟ್ ಮೊದಲಾದವರಿಗೆಲ್ಲರಿಗಾಗಿ ಹೇಳುತ್ತಾರೆ – ಈ ಸಮಯವು ತಮೋಪ್ರಧಾನವಾಗಿದೆ, ಸ್ಮಶಾನವಾಸಿ ಆಗಿದ್ದಾರೆ, ಇದಕ್ಕೆ ಅಂತಿಮ ಸಮಯ ಎಂದು ಹೇಳಲಾಗುತ್ತದೆ. ಎಲ್ಲಾ ಮನುಷ್ಯ ಮಾತ್ರರೂ ಸತ್ತಂತೆ ಇದ್ದಾರೆ. ಎಲ್ಲರ ಜ್ಯೋತಿಯು ನಂದಿ ಹೋಗುವಂತೆ ಇದೆ, ತಂದೆಯು ಎಲ್ಲರನ್ನು ಮತ್ತೆ ಜಾಗೃತರನ್ನಾಗಿ ಮಾಡಲು ಬರುತ್ತಾರೆ. ಯಾವ ಮಕ್ಕಳು ಕಾಮ ಚಿತೆಯ ಮೇಲೆ ಕುಳಿತು ಭಸ್ಮವಾಗಿ ಬಿಟ್ಟಿದ್ದಾರೆಯೋ ಅವರನ್ನು ಅಮೃತ ವರ್ಷದಿಂದ ಜಾಗೃತಗೊಳಿಸಿ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಮಾಯೆಯು ಕಾಮ ಚಿತೆಯ ಮೇಲೆ ಕೂರಿಸಿ ಸ್ಮಶಾನವಾಸಿಗಳನ್ನಾಗಿ ಮಾಡಿದೆ. ಎಲ್ಲರೂ ಮಲಗಿ ಬಿಟ್ಟಿದ್ದಾರೆ. ಈಗ ತಂದೆಯು ಅಮೃತವನ್ನು ಸಿಂಪಡಿಸುತ್ತಾರೆ. ಅಮೃತಸರ್ ಎಂಬ ಹೆಸರನ್ನು ಇದಕ್ಕಾಗಿಯೇ ಇಡಲಾಗಿದೆ. ತಂದೆಯು ಬಂದು ಅಮೃತವನ್ನು ಸಿಂಪಡಿಸುತ್ತಾರೆ. ಜ್ಞಾನಾಮೃತವೆಲ್ಲಿ, ನೀರಿನ ಮಾತೆಲ್ಲಿ! ಸಿಖ್ಖರಿಗೆ ವಿಶೇಷ ದಿನವಿರುತ್ತದೆ. ಅಂದು ಬಹಳ ವಿಜೃಂಭಣೆಯಿಂದ ಆ ಸರೋವರವನ್ನು ಸ್ವಚ್ಛ ಮಾಡುತ್ತಾರೆ. ಮಣ್ಣನ್ನು ತೆಗೆಸುತ್ತಾರೆ ಆದ್ದರಿಂದ ಅಮೃತಸರ ಅರ್ಥಾತ್ ಅಮೃತದ ಸರೋವರವೆಂದು ಹೆಸರನ್ನಿಟ್ಟಿದ್ದಾರೆ. ಗುರುನಾನಕ ಸಾಹೇಬರಂತೂ ಜ್ಞಾನ ಸಾಗರನಲ್ಲ, ಅವರೂ ಸಹ ತಂದೆಯ ಮಹಿಮೆ ಮಾಡಿದ್ದಾರೆ. ಏಕ್ ಓಂಕಾರ್ ಸತ್ನಾಮ್, ಅವರು ಸದಾ ಸತ್ಯವನ್ನು ಹೇಳುವವರು ಎಂದು ಹೇಳಿದ್ದಾರೆ. ಸತ್ಯ ನಾರಾಯಣನ ಕಥೆಯಿದೆಯಲ್ಲವೆ. ಸಿಂಧುವರ್ತಿಗಳು ಹೊರಗಡೆ ಹೋಗುತ್ತಾರೆಂದರೆ ಸತ್ಯ ನಾರಾಯಣನ ಕಥೆಯನ್ನು ಓದಿಸುತ್ತಾರೆ. ಸತ್ಯ ನಾರಾಯಣನ ಕಥೆಯಿಂದ ಸುರಕ್ಷಿತವಾಗಿ ಪಾರಾಗುತ್ತೇವೆಂದು ತಿಳಿಯುತ್ತಾರೆ. ಅಮರ ಕಥೆ, ಮೂರನೇ ನೇತ್ರದ ಕಥೆ, ಭಕ್ತಿಮಾರ್ಗದಲ್ಲಿ ಎಷ್ಟೊಂದು ಕಥೆಗಳನ್ನು ಕೇಳುತ್ತಾ ಬಂದಿದ್ದೀರಿ. ಶಂಕರನು ಪಾರ್ವತಿಗೆ ಕಥೆಯನ್ನು ತಿಳಿಸಿದನೆಂದು ಹೇಳುತ್ತಾರೆ. ಆ ಸೂಕ್ಷ್ಮವತನದಲ್ಲಿರುವ ಶಂಕರನು ಅಲ್ಲಿ ಯಾವ ಕಥೆಯನ್ನು ತಿಳಿಸಿದರು? ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ – ವಾಸ್ತವದಲ್ಲಿ ನಿಮಗೆ ಅಮರ ಕಥೆಯನ್ನು ತಿಳಿಸಿ, ಅಮರಲೋಕಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇನೆ. ಮೃತ್ಯುಲೋಕದಿಂದ ಅಮರಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ. ಬಾಕಿ ಸೂಕ್ಷ್ಮವತನದಲ್ಲಿ ಪಾರ್ವತಿಯು ಯಾವ ದೋಷ ಮಾಡಿದ್ದರಿಂದ ಬಂದು ಅವರಿಗೆ ಕಥೆಯನ್ನು ತಿಳಿಸುತ್ತಾರೆ! ನೀವೀಗ ತಿಳಿದುಕೊಂಡಿದ್ದೀರಿ, ನಾವು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುತ್ತೇವೆ. ಇದು ಅಮರಲೋಕದಲ್ಲಿ ಹೋಗುವುದಕ್ಕಾಗಿ ಸತ್ಯವಾದ ಸತ್ಯ ನಾರಾಯಣನ ಕಥೆ, ಮೂರನೇ ನೇತ್ರದ ಕಥೆಯಾಗಿದೆ. ನೀವಾತ್ಮರಿಗೆ ಈಗ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ.

ತಂದೆಯು ತಿಳಿಸುತ್ತಾರೆ – ನೀವೇ ಪಾವನ, ಪೂಜ್ಯರಾಗಿದ್ದಿರಿ ಮತ್ತೆ 84 ಜನ್ಮಗಳ ನಂತರ ನೀವೇ ಪೂಜಾರಿಗಳಾಗಿದ್ದೀರಿ ಆದ್ದರಿಂದ ತಾವೇ ಪೂಜ್ಯ, ತಾವೇ ಪೂಜಾರಿಯೆಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ – ನಾನಂತೂ ಸದಾ ಪೂಜ್ಯನಾಗಿದ್ದೇನೆ, ನಾನು ಬಂದು ನಿಮ್ಮನ್ನು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತೇನೆ. ಹೇ ರಾಮನೇ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಹೇಳುತ್ತಾರೆ, ಎಲ್ಲಾ ಭಕ್ತರು ಕರೆಯುತ್ತಾರೆ. ಹೇ ಪತಿತ-ಪಾವನ ಎಂದು ಆತ್ಮವು ಕರೆಯುತ್ತದೆಯಲ್ಲವೆ. ನೀವೀಗ ತಿಳಿದುಕೊಂಡಿದ್ದೀರಿ, ಗೀತೆಯನ್ನು ಕೃಷ್ಣನು ತಿಳಿಸಲಿಲ್ಲ, ಪಾವನರನ್ನಾಗಿ ಮಾಡುವವರು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ, ಒಬ್ಬರೇ ರಾಮನಾಗಿದ್ದಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಈಶ್ವರನು ಸರ್ವವ್ಯಾಪಿಯಲ್ಲ ಎಂದು ಅಭಿಪ್ರಾಯವನ್ನು ಬರೆಸಿಕೊಳ್ಳುತ್ತಾ ಇರಿ. ಗೀತೆಯ ಭಗವಂತನು ಶಿವನಾಗಿದ್ದಾರೆ, ಕೃಷ್ಣನಲ್ಲ. ಮೊದಲು ಕೇಳಿರಿ – ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ – ನಿರಾಕಾರನಿಗೋ ಅಥವಾ ಸಾಕಾರಕ್ಕೋ? ಕೃಷ್ಣನು ಸಾಕಾರಿಯಾಗಿದ್ದಾನೆ, ಶಿವನು ನಿರಾಕಾರನಾಗಿದ್ದಾರೆ. ಅವರು ಕೇವಲ ಈ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತಾರೆ ಬಾಕಿ ತಾಯಿಯ ಗರ್ಭದಿಂದ ಜನ್ಮ ಪಡೆಯುವುದಿಲ್ಲ. ಮೊಟ್ಟ ಮೊದಲನೆಯದಾಗಿ ವಿಷ್ಣುವಿನ ಆತ್ಮವು ಗರ್ಭದಲ್ಲಿ ಬರುತ್ತದೆ. ಬ್ರಹ್ಮಾ-ವಿಷ್ಣು-ಶಂಕರನು ಸೂಕ್ಷ್ಮ ಶರೀರಧಾರಿಗಳಾಗಿದ್ದಾರೆ. ಶಿವನಿಗೆ ಶರೀರವಿಲ್ಲ, ಇಲ್ಲಿ ಈ ಲೋಕದಲ್ಲಿ ಸ್ಥೂಲ ಶರೀರಗಳಿವೆ, ತಂದೆಯ ಮಹಿಮೆಯಾಗಿದೆ, ಪತಿತ-ಪಾವನ ಸರ್ವರ ಸದ್ಗತಿದಾತ, ಸರ್ವರ ಮುಕ್ತಿದಾತ, ದುಃಖಹರ್ತ-ಸುಖಕರ್ತ. ಸುಖವು ಎಲ್ಲಿರುತ್ತದೆ? ಸುಖ ಸಿಗುವುದೇ ಇನ್ನೊಂದು ಜನ್ಮದಲ್ಲಿ, ಯಾವಾಗ ರಾವಣ ರಾಜ್ಯವು ಸಮಾಪ್ತಿಯಾಗಿ ಸ್ವರ್ಗದ ಸ್ಥಾಪನೆಯಾಗುವುದೋ ಆಗಲೇ ಸಿಗುವುದು. ಒಳ್ಳೆಯದು – ಯಾವುದರಿಂದ ಮುಕ್ತಗೊಳಿಸುತ್ತಾರೆ? ರಾವಣನ ದುಃಖದಿಂದ, ಇದಂತೂ ದುಃಖಧಾಮವಲ್ಲವೆ. ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ. ಈ ಶರೀರಗಳು ಇಲ್ಲಿಯೇ ಸಮಾಪ್ತಿಯಾಗುತ್ತವೆ, ಬಾಕಿ ಆತ್ಮರನ್ನು ಕರೆದುಕೊಂಡು ಹೋಗುತ್ತಾರೆ. ಎಲ್ಲರನ್ನೂ ದುಃಖದಿಂದ ಬಿಡಿಸಿ ಪವಿತ್ರರನ್ನಾಗಿ ಮಾಡಿ ಮನೆಗೆ ಕರೆದುಕೊಂಡು ಹೋಗುತ್ತಾರೆ. ಮನುಷ್ಯರು ಯಾವಾಗ ವಿವಾಹವಾಗಿ ಬರುತ್ತಾರೆಯೋ ಆಗ ಮೊದಲು ಪತಿಯಿರುತ್ತಾನೆ, ನಂತರ ಪತ್ನಿಯಿರುತ್ತಾಳೆ ನಂತರ ದಿಬ್ಬಣವಿರುತ್ತದೆ. ನಿಮ್ಮ ಮಾಲೆಯು ಅದೇರೀತಿ ಇದೆ. ಮೇಲೆ ಶಿವ ತಂದೆ ಹೂ ಇದ್ದಾರೆ, ಮೊದಲು ಹೂವಿಗೆ ನಮಸ್ಕಾರ ಮಾಡುತ್ತಾರೆ ನಂತರ ಜೋಡಿ ಮಣಿಗಳು ಬ್ರಹ್ಮಾ-ಸರಸ್ವತಿ ನಂತರ ನೀವು ಇದ್ದೀರಿ. ತಂದೆಗೆ ಸಹಯೋಗಿ ಮಕ್ಕಳಾಗಿದ್ದೀರಿ. ಹೂವಾದ ಶಿವ ತಂದೆಯ ನೆನಪಿನಿಂದಲೇ ಸೂರ್ಯವಂಶಿ, ವಿಷ್ಣುವಿನ ಮಾಲೆಯಾಗಿದೆ. ಬ್ರಹ್ಮಾ-ಸರಸ್ವತಿ ಸೋ ಲಕ್ಷ್ಮೀ-ನಾರಾಯಣರಾಗುತ್ತಾರೆ. ದೇವತಾ, ಕ್ಷತ್ರಿಯ….. ಮತ್ತೆ ಶೂದ್ರರಿಂದ ಬ್ರಾಹ್ಮಣರಾಗಿ ಈ ಜ್ಞಾನವನ್ನು ಪಡೆದು ಲಕ್ಷ್ಮೀ-ನಾರಾಯಣ ಆಗುತ್ತೀರಿ. ಈ ಮಾಲೆಯು ಅವರದೇ ಮಾಡಲ್ಪಟ್ಟಿದೆ. ಈ ಬ್ರಹ್ಮಾ-ಸರಸ್ವತಿಯೇ ರಾಜ-ರಾಣಿಯಾಗುತ್ತಾರೆ. ಅವರು ಪರಿಶ್ರಮ ಪಟ್ಟಿದ್ದಾರೆ ಆದ್ದರಿಂದ ಪೂಜಿಸಲ್ಪಡುತ್ತಾರೆ. ಮಾಲೆಯು ಏನಾಗಿದೆ, ಯಾವುದರ ಸಂಕೇತವಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಹಾಗೆಯೇ ಮಾಲೆಯನ್ನು ಜಪಿಸುತ್ತಾ ಇರುತ್ತಾರೆ. 16,108ರ ಮಾಲೆಯೂ ಇರುತ್ತದೆ. ದೊಡ್ಡ-ದೊಡ್ಡ ಮಂದಿರಗಳಲ್ಲಿ ಇಟ್ಟಿರುತ್ತಾರೆ. ಒಬ್ಬೊಬ್ಬರು ಒಂದೊಂದು ಕಡೆಯಿಂದ ಜಪಿಸಲು ಎಳೆಯುತ್ತಾರೆ. ಬ್ರಹ್ಮಾ ತಂದೆಯು ಬಾಂಬೆಯಲ್ಲಿ ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ಹೋಗುತ್ತಿದ್ದರು. ಹೋಗಿ ಮಾಲೆಯನ್ನು ಜಪಿಸುತ್ತಿದ್ದರು, ರಾಮ-ರಾಮ ಎನ್ನುತ್ತಿದ್ದರು. ಹೂ ಶಿವ ತಂದೆಯಲ್ಲವೆ. ಹೂವಿಗೆ ರಾಮ-ರಾಮ ಎಂದು ಹೇಳುತ್ತಾರೆ ನಂತರ ಇಡೀ ಮಾಲೆಗೆ ತಲೆ ಬಾಗುತ್ತಾರೆ. ಜ್ಞಾನವಂತೂ ಏನೂ ಇಲ್ಲ. ಪಾದ್ರಿಗಳೂ ಸಹ ಕೈಯಲ್ಲಿ ಮಾಲೆಯನ್ನು ತಿರುಗಿಸುತ್ತಾ ಇರುತ್ತಾರೆ. ಯಾರ ಮಾಲೆಯನ್ನು ಜಪಿಸುತ್ತಾ ಇರುತ್ತೀರಿ ಎಂದು ಕೇಳಿರಿ. ಕ್ರೈಸ್ಟ್ ನ ನೆನಪಿನಲ್ಲಿ ಮಾಲೆಯನ್ನು ಜಪಿಸುತ್ತೇವೆಂದು ಹೇಳುತ್ತಾರೆ. ಅವರಿಗೆ ದೊಡ್ಡವರು, ಪೋಪ್ ಪಾದ್ರಿಗಳಿರುತ್ತಾರೆ. ಅವರದು ಪೋಪರ ಮಾಲೆಯಾಗುವುದು. ಅವರೆಲ್ಲರ ಚಿತ್ರಗಳಿವೆ, ಪೋಪರಿಗೆ ಎಷ್ಟೊಂದು ಮಾನ್ಯತೆಯಿದೆ, ಕ್ರೈಸ್ಟ್ ನ ಆತ್ಮವೆಲ್ಲಿದೆ ಎಂಬುದು ಅವರಿಗೆ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ – ಕ್ರಿಸ್ತನ ಆತ್ಮವೂ ಸಹ ಈಗ ಭಿಕಾರಿ ರೂಪದಲ್ಲಿದೆ. ನೀವೂ ಸಹ ಈಗ ಭಿಕಾರಿಗಳಿಂದ ರಾಜಕುಮಾರರಾಗುತ್ತಿದ್ದೀರಿ. ಭಾರತವೇ ರಾಜಕುಮಾರನಾಗಿತ್ತು, ಈಗ ಭಿಕಾರಿಯಾಗಿದೆ. ಪುನಃ ರಾಜಕುಮಾರನಾಗುತ್ತದೆ. ಮಾಡುವವರು ಒಬ್ಬ ಆತ್ಮಿಕ ತಂದೆಯಾಗಿದ್ದಾರೆ. ಭಿಕಾರಿಗಳಿಂದ ರಾಜಕುಮಾರರಾಗುತ್ತೀರಿ, ಒಂದು ರಾಜಕುಮಾರ-ಕುಮಾರಿಯರ ಕಾಲೇಜು ಇದೆ, ಅಲ್ಲಿ ಹೋಗಿ ಓದುತ್ತಾರೆ. ನೀವಿಲ್ಲಿ ಓದಿ 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ರಾಜಕುಮಾರ-ಕುಮಾರಿಯರಾಗುತ್ತೀರಿ. ಜ್ಞಾನದಿಂದ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ.

ಈಗ ನಿಮಗೆ ತಿಳಿದಿದೆ – ಯಾವ ಶ್ರೀಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದನೋ ಅವರೇ 84 ಜನ್ಮಗಳ ನಂತರ ಭಿಕಾರಿಯಾಗಿದ್ದಾರೆ. 5000 ವರ್ಷಗಳ ಮೊದಲು ದೇವಿ-ದೇವತೆಗಳು ಎಷ್ಟೊಂದು ಸಾಹುಕಾರರಾಗಿದ್ದರು, ಈಗ ಅವರೇ ಕಂಗಾಲ, ಭಿಕಾರಿಗಳಾಗಿದ್ದಾರೆ. ಈ ಮಾತುಗಳನ್ನು ಕೇವಲ ನೀವೇ ಕೇಳುತ್ತೀರಿ, ಭಗವಾನುವಾಚ – ಅವರು ಎಲ್ಲರ ತಂದೆಯಾಗಿದ್ದಾರೆ. ನೀವು ಪರಮಾತ್ಮನಿಂದ ಕೇಳುತ್ತೀರಿ, ಗೀತೆಯಲ್ಲಿ ಕೇವಲ ಈ ತಪ್ಪು ಮಾಡಿದ್ದಾರೆ, ಶಿವ ಭಗವಾನುವಾಚದ ಬದಲು ಕೃಷ್ಣ ಭಗವಾನುವಾಚ ಬರೆದಿದ್ದಾರೆ ಆದ್ದರಿಂದ ಸುಳ್ಳು ಪ್ರಪಂಚವೆಂದು ಗಾಯನವಿದೆ. ಈ ಸಮಯದಲ್ಲಿ ಇಡೀ ಪ್ರಪಂಚವೇ ಮುಳ್ಳುಗಳ ಅರಣ್ಯವಾಗಿ ಬಿಟ್ಟಿದೆ. ಬಾಂಬೆಯಲ್ಲಿ ಬಬುಲ್ನಾಥನ ಮಂದಿರವಿದೆ. ತಂದೆಯು ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಮುಳ್ಳು ಚುಚ್ಚುತ್ತಾರೆ ಅರ್ಥಾತ್ ಕಾಮ ಕಟಾರಿಯನ್ನು ನಡೆಸುತ್ತಾರೆ. ಆದ್ದರಿಂದ ಇದಕ್ಕೆ ಮುಳ್ಳುಗಳ ಕಾಡೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ಅಲ್ಲಾನ ಹೂದೋಟವೆಂದು ಹೇಳಲಾಗುತ್ತದೆ. ಅದೇ ಹೂಗಳು ಮುಳ್ಳುಗಳಾಗುತ್ತೀರಿ, ನಂತರ ಮುಳ್ಳುಗಳಿಂದ ಹೂಗಳಾಗುತ್ತೀರಿ. ಸತ್ಯಯುಗದಲ್ಲಿ ಎಂದೂ ರಾವಣನನ್ನು ಸುಡುವುದಿಲ್ಲ. ರಾವಣನು ಭಾರತದ ಹಳೆಯ ಶತ್ರುವಾಗಿದ್ದಾನೆ, ನಿಮ್ಮ ಯುದ್ಧವು ರಾವಣನೊಂದಿಗೆ ಇದೆ. ಯಾರು ಅರ್ಧ ಕಲ್ಪ ದುಃಖ ಕೊಟ್ಟಿದ್ದಾರೆ, ಕೊನೆಗೆ ದೊಡ್ಡ ಯುದ್ಧವೂ ಆಗುವುದು. ಸತ್ಯ-ಸತ್ಯವಾದ ದಶಹರಾ ಆಗುವುದು, ರಾವಣ ರಾಜ್ಯವೇ ಸಮಾಪ್ತಿಯಾಗುವುದು. ನಿಮಗೆ ಪುನಃ ಚಿನ್ನದ ಮಹಲುಗಳು ಸಿಗುತ್ತವೆ. ನೀವೀಗ ರಾವಣನ ಮೇಲೆ ಜಯ ಗಳಿಸಿ ಸ್ವರ್ಗದ ಮಾಲೀಕರಾಗುತ್ತೀರಿ. ತಂದೆಯು ಇಡೀ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಆದ್ದರಿಂದ ಅವರಿಗೆ ಶಿವ ಭೋಲಾ ಭಂಡಾರಿ ಎಂದು ಹೇಳುತ್ತಾರೆ. ಗಣಿಕೆಯರು, ಅಹಲ್ಯೆಯರು, ಕುಬ್ಜೆಯರು ಎಲ್ಲರನ್ನೂ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಎಷ್ಟು ಮುಗ್ಧನಾಗಿದ್ದಾರೆ! ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ. ಯಾರು ಸ್ವರ್ಗಕ್ಕೆ ಯೋಗ್ಯರಲ್ಲವೋ ಅವರು ವಿಕಾರಗಳನ್ನು ಬಿಡುವುದಿಲ್ಲ, ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈಗ ಈ ಅಂತಿಮ ಜನ್ಮದಲ್ಲಿ ನೀವು ಪಾವನರಾಗಿರಿ. ಈ ವಿಕಾರವು ವಿಷವಾಗಿದೆ, ಇದು ನಿಮ್ಮನ್ನು ಆದಿ-ಮಧ್ಯ-ಅಂತ್ಯ ದುಃಖಿಯನ್ನಾಗಿ ಮಾಡುತ್ತದೆ. ನೀವು ಇದೊಂದು ಅಂತಿಮ ಜನ್ಮದಲ್ಲಿ ಇದನ್ನು ಬಿಡಲು ಸಾಧ್ಯವಿಲ್ಲವೆ? ನಾನು ನಿಮಗೆ ಅಮೃತವನ್ನು ಕುಡಿಸಿ ಅಮರರನ್ನಾಗಿ ಮಾಡುತ್ತೇನೆ. ಆದರೂ ನೀವೇಕೆ ಪವಿತ್ರರಾಗುವುದಿಲ್ಲ? ವಿಕಾರಗಳಿಲ್ಲದೆ ಸಿಗರೇಟು ಇಲ್ಲದೆ, ಸಾರಾಯಿ ಇಲ್ಲದೆ ಇರಲು ಸಾಧ್ಯವಾಗುವುದಿಲ್ಲವೆ! ನಾನು ಬೇಹದ್ದಿನ ತಂದೆಯು ತಿಳಿಸುತ್ತೇನೆ – ನೀವು ಇದೊಂದು ಜನ್ಮ ಪವಿತ್ರರಾಗಿರಿ, ನಾನು ನಿಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುವೆನು.

ನೀವು ತಿಳಿದುಕೊಂಡಿದ್ದೀರಿ – ತಂದೆಯು ಬಂದಿರುವುದೇ ಇಡೀ ಪ್ರಪಂಚವನ್ನು ದುಃಖದಿಂದ ಬಿಡಿಸಿ ಸುಖಧಾಮ, ಶಾಂತಿಧಾಮದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ. ಈಗ ಎಲ್ಲಾ ಧರ್ಮಗಳ ವಿನಾಶವಾಗುವುದು. ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಗ್ರಂಥದಲ್ಲಿಯೂ ಪರಮಪಿತ ಪರಮಾತ್ಮನಿಗೆ ಅಕಾಲ ಮೂರ್ತಿಯೆಂದು ಹೇಳುತ್ತಾರೆ. ತಂದೆಯು ಮಹಾಕಾಲನಾಗಿದ್ದಾರೆ. ಆ ಕಾಲವಂತೂ (ಮೃತ್ಯು) ಒಬ್ಬರು ಇಬ್ಬರನ್ನು ತೆಗೆದುಕೊಂಡು ಹೋಗುತ್ತದೆ. ನಾನು ಎಲ್ಲಾ ಆತ್ಮರನ್ನು ತೆಗೆದುಕೊಂಡು ಹೋಗುವೆನು ಆದ್ದರಿಂದ ಮಹಾಕಾಲನೆಂದು ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಅಂತಿಮ ಜನ್ಮದಲ್ಲಿ ಜ್ಞಾನಾಮೃತವನ್ನು ಕುಡಿದು ಅಮರರಾಗಬೇಕಾಗಿದೆ. ಸ್ವಯಂನ್ನು ಸ್ವರ್ಗದಲ್ಲಿ ಹೋಗಲು ಯೋಗ್ಯವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಕೆಟ್ಟ ಹವ್ಯಾಸಗಳನ್ನು ಬಿಡಬೇಕಾಗಿದೆ.

2. ಈಗ ವಿದ್ಯೆಯನ್ನು ಓದಿ 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ರಾಜಕುಮಾರ -ಕುಮಾರಿಯರಾಗಬೇಕಾಗಿದೆ. ಸತ್ಯ-ಸತ್ಯವಾದ ಸತ್ಯ ನಾರಾಯಣನ ಕಥೆಯನ್ನು ಕೇಳಿ ನರನಿಂದ ನಾರಾಯಣನಾಗುವ ಪುರುಷಾರ್ಥ ಮಾಡಬೇಕಾಗಿದೆ.

ವರದಾನ:-

ಹೇಗೆ ಜಾದುಗಾರನು ಸ್ವಲ್ಪ ಸಮಯದಲ್ಲಿಯೇ ಬಹಳ ವಿಚಿತ್ರ ಆಟವನ್ನು ತೋರಿಸುತ್ತಾನೆ, ಹಾಗೆಯೇ ಇಡೀ ವಿಶ್ವವನ್ನು ತಾವು ಆತ್ಮಿಕ ಜಾದುಗಾರರು ಆತ್ಮಿಕ ಶಕ್ತಿಯಿಂದ ಪರಿವರ್ತನೆಯಲ್ಲಿ ತರುವವರಾಗಿದ್ದೀರಿ, ಕಂಗಾಲರನ್ನು ಡಬಲ್ ಕಿರೀಟಧಾರಿಯನ್ನಾಗಿ ಮಾಡುವವರಾಗಿದ್ದೀರಿ. ಸ್ವಯಂನ್ನು ಪರಿವರ್ತನೆ ಮಾಡುವುದಕ್ಕಾಗಿ ಕೇವಲ ಒಂದು ಸೆಕೆಂಡಿನ ಧೃಡ ಸಂಕಲ್ಪವನ್ನು ಧಾರಣೆ ಮಾಡುತ್ತೀರಿ – ನಾನು ಆತ್ಮನಾಗಿದ್ದೇನೆ ಮತ್ತು ವಿಶ್ವವನ್ನು ಬದಲಾಯಿಸುವುದಕ್ಕಾಗಿ ಸ್ವಯಂನ್ನು ವಿಶ್ವದ ಆಧಾರ ಮೂರ್ತಿ, ಉದ್ಧಾರ ಮೂರ್ತಿ ಎಂದು ತಿಳಿದುಕೊಂಡು, ಸದಾ ವಿಶ್ವ ಪರಿವರ್ತನೆಯ ಕಾರ್ಯದಲ್ಲಿ ತತ್ಪರರಾಗಿ ಇರುತ್ತೀರಿ ಆದ್ದರಿಂದ ಅತಿ ಶ್ರೇಷ್ಠ ಆತ್ಮಿಕ ಜಾದುಗಾರರು ತಾವಾಗಿದ್ದೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top