19 September 2021 KANNADA Murli Today | Brahma Kumaris

Read and Listen today’s Gyan Murli in Kannada

September 18, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಹೃದಯರಾಮ ತಂದೆಯ ಹೃದಯ ಸಿಂಹಾಸನಾಜೀತ ದಿಲ್ರುಬಾ (ಹೃದಯದ) ಮಕ್ಕಳ ಲಕ್ಷಣಗಳು

♫ ಕೇಳು ಇಂದಿನ ಮುರ್ಲಿ (audio)➤

ಇಂದು ಹೃದಯರಾಮ ತಂದೆಯು ತನ್ನ ದಿಲ್ರುಭಾ ಮಕ್ಕಳನ್ನು ಮಿಲನ ಮಾಡಲು ಬಂದಿದ್ದಾರೆ. ಹೃದಯರಾಮ ತಂದೆಯು ತನ್ನ ಒಂದೊಂದು ದಿಲ್ರುಬಾ ಅರ್ಥಾತ್ ಯಾರ ಹೃದಯದಲ್ಲಿ ಹೃದಯರಾಮನ ನೆನಪಿನ ಮಧುರ ಗೀತೆಯು ಸ್ವತಹ ಮೊಳಗುತ್ತಿರುತ್ತದೆಯೋ ಅಂತಹ ದಿಲ್ರುಬಾ ಹೃದಯರಾಮ ತಂದೆಯ ಹೃದಯವನ್ನು ತಮ್ಮ ಸ್ನೇಹದ ವಾದ್ಯದಿಂದ ಗೆದ್ದಿರುವವರಾಗಿದ್ದಾರೆ. ಹೃದಯರಾಮ ತಂದೆಯೂ ಸಹ ಇಂತಹ ಗುಣವನ್ನು ಹಾಡುತ್ತಾರೆ. ತಂದೆಯ ಹೃದಯವನ್ನು ಗೆದ್ದಿರುವವರು ಮಾಯಾಜೀತ್, ಜಗತ್ಜೀತ್ ಆಗಿರುತ್ತಾರೆ. ಹೇಗೆ ಯರಾದರೂ ರಾಜ್ಯ ಸಿಂಹಾಸನವನ್ನು ಗೆಲ್ಲುವುದು ಎಂದರೆ ಸಿಂಹಾಸನವನ್ನು ಪಡೆಯುವುದು. ತಂದೆಯ ಹೃದಯ ಸಿಂಹಾಸವನ್ನು ಗೆಲ್ಲುತ್ತಾರೆಂದರೆ ಅವರು ಸ್ವತಹ ಸದಾ ಸಿಂಹಾಸನಾಧಿಕಾರಿಗಳಾಗುತ್ತಾರೆ. ಅಂತಹವರ ಹೃದಯದಲ್ಲಿ ಸದಾ ತಂದೆಯಿರುತ್ತಾರೆ ಮತ್ತು ತಂದೆಯ ಹೃದಯದಲ್ಲಿ ಅಂತಹ ವಿಜಯೀ ಮಕ್ಕಳಿರುತ್ತಾರೆ. ಈ ರೀತಿ ಹೃದಯವನ್ನು ಗೆಲ್ಲುವ ಮಕ್ಕಳು ಉಸಿರು-ಉಸಿರಿನಲ್ಲಿ ಪ್ರತೀ ಸೆಕೆಂಡ್ ತಂದೆ ಮತ್ತು ಸೇವೆಯನ್ನು ಬಿಟ್ಟರೆ ಬೇರೆ ಯಾವುದೇ ಹಾಡನ್ನು ಹಾಡುವುದಿಲ್ಲ. ಸದಾ ಇದೇ ಹಾಡನ್ನು ಹಾಡುತ್ತಾರೆ – ಬಾಬಾ ನನ್ನವರು ಮತ್ತು ನಾನು ತಂದೆಯವನು. ಇದಕ್ಕೆ ಹೃದಯರಾಮ ತಂದೆಯ ಹೃದಯ ಸಿಂಹಾಸನವನ್ನು ಗೆದ್ದಿರುವ ದಿಲ್ರುಬಾ ಎಂದು ಹೇಳಲಾಗುತ್ತದೆ.

ಬಾಪ್ದಾದಾರವರು ಪ್ರತಿಯೊಂದು ದಿಲ್ರುಬಾ ಮಕ್ಕಳ ಮಧುರವಾದ ಗೀತೆಯನ್ನು ಕೇಳುತ್ತಿರುತ್ತಾರೆ – ಬೇರೆ-ಬೇರೆ ಹಾಡು ಬರುತ್ತದೆಯೇ ಅಥವಾ ಒಂದೇ ಹಾಡು ಬರುತ್ತದೆಯೇ? ಕೆಲವೊಮ್ಮೆ ತಮ್ಮ ಬಲಹೀನತೆಗಳ ಹಾಡನ್ನು ಹಾಡುತ್ತಾರೆ, ಕೆಲವೊಮ್ಮೆ ತಂದೆಯ ಬದಲು ತಮ್ಮದೇ ಗೀತೆಯನ್ನು ಹಾಡಿಕೊಳ್ಳುತ್ತಾರೆ. ತಂದೆಯ ಮಹಿಮೆಯ ಜೊತೆಗೆ ತಮ್ಮ ಮಹಿಮೆಯನ್ನೂ ತಾವೇ ಮಾಡಿಕೊಳ್ಳುತ್ತಾರೆ. ತಂದೆಯ ಮಹಿಮೆಯಲ್ಲಿ ನಿಮ್ಮ ಮಹಿಮೆಯಿದೆ, ತಂದೆಯ ಮಹಿಮೆಯೆಂದರೆ ನಿಮ್ಮ ಮಹಿಮೆಯಾಗಿದೆ. ಯಥಾರ್ಥವಾದ ಸಂಗೀತವು ತಂದೆಯ ಗೀತೆಯನ್ನು ಹಾಡುವುದೇ ಶ್ರೇಷ್ಠ ಸಂಗೀತವಾಗಿದೆ. ಯಾರು ಹೃದಯ ಸಿಂಹಾಸನವನ್ನು ಗೆದ್ದಿರುತ್ತಾರೆಯೋ ಅವರ ಒಂದೊಂದು ಹೆಜ್ಜೆ, ದೃಷ್ಟಿ, ಮಾತು, ಸಂಬಂಧ-ಸಂಪರ್ಕದಲ್ಲಿ ಪ್ರತಿಯೊಬ್ಬರಿಗೂ ತಂದೆಯು ಕಾಣಿಸುತ್ತಾರೆ. ಭಲೆ ಮುಖವು ಅವರದ್ದೇ ಆಗಿರಬಹುದು ಆದರೆ ಶಕ್ತಿಶಾಲಿ ಸ್ನೇಹ ತುಂಬಿದ ಮಾತುಗಳು ಸ್ವತಹ ತಂದೆಯನ್ನು ಪ್ರತ್ಯಕ್ಷ ಮಾಡುವುದು, ಇದು ಈ ಆತ್ಮದ್ದಲ್ಲ ಆದರೆ ಇದು ಶ್ರೇಷ್ಠ ಸರ್ವಶಕ್ತಿವಂತನ ಮಾತಾಗಿದೆ ಎಂದು ತಿಳಿಯುತ್ತಾರೆ. ಅವರ ಆತ್ಮೀಯ ದೃಷ್ಟಿ ಆತ್ಮಗಳಿಗೆ ತಂದೆಯ ಅನುಭೂತಿ ಮಾಡಿಸುವಂತದ್ದಾಗಿದೆ. ಇವರ ಹೆಜ್ಜೆಯು ಪರಮಾತ್ಮ ಶ್ರೇಷ್ಠ ಮತದ ಹೆಜ್ಜೆಯಾಗಿದೆ. ಇವರು ಸಾಧಾರಣ ವ್ಯಕ್ತಿಯಲ್ಲ, ಆದರೆ ಅವ್ಯಕ್ತ ಫರಿಶ್ತಾ ಆಗಿದ್ದಾರೆ, ಇಂತಹ ಅನುಭೂತಿಯನ್ನು ಮಾಡಿಸುವವರನ್ನು ಹೃದಯವನ್ನು ಗೆದ್ದವರು ಅರ್ಥಾತ್ ಜಗತ್ತನ್ನು ಗೆದ್ದವರೆಂದು ಹೇಳಲಾಗುತ್ತದೆ.

ವಾಣಿಯಿಂದ ಅನುಭವ ಮಾಡಿಸುವುದು ಸಾಧಾರಣ ವಿಧಿಯಾಗಿದೆ. ವಾಣಿಯಿಂದ ಪ್ರಭಾವಿತರಾಗುವವರೂ ಅನೇಕರಿದ್ದಾರೆ ಆದರೆ ನಿಮ್ಮ ವಾಣಿಯ ವಿಶೇಷತೆಯು ಇದಾಗಿದೆ, ತಮ್ಮ ಮಾತಿನಿಂದ ತಂದೆಯ ನೆನಪನ್ನು ತರಿಸುವವರು. ತಂದೆಯನ್ನು ಪ್ರತ್ಯಕ್ಷತೆ ಮಾಡುವ ಸಿದ್ಧಿಯು ಆತ್ಮಗಳಿಗೆ ಸದ್ಗತಿ ಕೊಡುವ ದಾರಿ ತೋರಿಸುವಂತದ್ದಾಗಲಿ, ಇದು ಭಿನ್ನವಾಗಿದೆ. ಒಂದುವೇಳೆ ಇವರು ತುಂಬಾ ಚೆನ್ನಾಗಿ ಹೇಳುತ್ತಾರೆ, ಅಧಿಕಾರದಿಂದ ಹೇಳುತ್ತಾರೆಂದು ನಿಮ್ಮ ಮಹಿಮೆಯನ್ನು ಮಾಡಿದರೆಂದರೆ ಇದಂತೂ ಅನ್ಯ ಆತ್ಮಗಳಿಗೂ ಆಗುತ್ತದೆ. ಆದರೆ ನಿಮ್ಮ ಮಾತು ತಂದೆಯ ಅನುಭವವನ್ನು ಮಾಡಿಸಬೇಕು, ಇದು ಪ್ರತ್ಯಕ್ಷತೆಯ ಪರದೆಯನ್ನು ತೆರೆಯುವ ಸಾಧನವಾಗಿದೆ. ಯಾರ ಹೃದಯದಲ್ಲಿ ಸದಾ ಹೃದಯರಾಮನು ಇರುತ್ತಾನೆಯೋ ಅವರ ಮುಖದಿಂದಲೂ ಹೃದಯದಿಂದಲೂ ಹೃದಯರಾಮನ ಶಬ್ಧಗಳು ಸ್ವತಹ ಹೃದಯರಾಮನನ್ನು ಪ್ರತ್ಯಕ್ಷ ಮಾಡಿಸುವುದು. ಅಂದಮೇಲೆ ಇದನ್ನು ಪರಿಶೀಲನೆ ಮಾಡಿ – ನನ್ನ ಹೆಜ್ಜೆಯಲ್ಲಿ, ಮಾತಿನಲ್ಲಿ ನನ್ನ ಮೂಲಕ ಪ್ರತ್ಯಕ್ಷವಾಗುತ್ತಿದೆಯೇ? ನನ್ನ ಮಾತು ತಂದೆಯ ಜೊತೆ ಸಂಬಂಧ ಜೋಡಿಸುವಂತದ್ದಾಗಿದೆಯೇ? ಏಕೆಂದರೆ ಈಗ ಅಂತಿಮ ಸೇವೆಯ ಪಾತ್ರವು ಪ್ರತ್ಯಕ್ಷತೆಯ ಬಾವುಟವನ್ನು ಹಾರಿಸುವುದಾಗಿದೆ. ನನ್ನ ಪ್ರತಿಯೊಂದು ಕರ್ಮವು ಶ್ರೇಷ್ಠ ಕರ್ಮದ ಗತಿಯನ್ನು ಹೇಳುವ ತಂದೆಯನ್ನು ಪ್ರತ್ಯಕ್ಷ ಮಾಡುವಂತದ್ದಾಗಿದೆಯೇ? ಯಾರ ಹೃದಯದಲ್ಲಿ ತಂದೆಯಿದ್ದಾರೆಯೋ ಅವರು ಸ್ವತಹ ತಂದೆಯನ್ನು ಪ್ರತ್ಯಕ್ಷ ಮಾಡುವ ಮಗನಾಗಿರುತ್ತಾರೆ ಅರ್ಥಾತ್ ಸಮಾನವಾಗಿರುವ ಮಗುವಾಗಿರುತ್ತದೆ.

ನಾಲ್ಕೂ ಕಡೆಯಲ್ಲಿ ಈ ಶಬ್ಧವೇ ಮೊಳಗುತ್ತಿರಲಿ – ನಮ್ಮ ಬಾಬಾ, ಬ್ರಹ್ಮಕುಮಾರಿಯರ ಬಾಬಾ ಅಲ್ಲ, ನಮ್ಮ ಬಾಬಾ ಎಂದು. ಯಾವಾಗ ಈ ಶಬ್ಧವು ಮೊಳಗುತ್ತದೆಯೋ ಆಗ ಮಧುರಧಾಮದ ಗೇಟ್ ತೆರೆಯಲ್ಪಡುತ್ತದೆ ಏಕೆಂದರೆ ಯಾವಾಗ ನಮ್ಮ ಬಾಬಾ ಎಂದಾಗ ಮುಕ್ತಿಯ ಆಸ್ತಿಯು ಸಿಗುತ್ತದೆ ಮತ್ತು ತಮ್ಮ ಅಥವಾ ತಂದೆಯ ಜೊತೆ ಜೊತೆ ದಿಬ್ಬಣಿಗರಾಗಿಯಾದರೂ ಹೋಗಲಿ ಆದರೆ ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಕರೆದುಕೊಂಡೇ ಹೋಗುತ್ತೇನೆ. ನಮ್ಮ ಬಾಬಾ ಬಂದರು, ಕೊನೆಪಕ್ಷ ಈ ಶಬ್ಧವನ್ನಾದರೂ ಕಿವಿಯಿಂದ ಕೇಳುವ, ಬುದ್ಧಿಯಿಂದ ತಿಳಿದುಕೊಳ್ಳುವ ಅಧಿಕಾರಿಗಳಾದರೂ ಆಗಲಿ, ಯಾರೂ ಸಹ ಇದರಿಂದ ವಂಚಿತರಾಗಿ ಉಳಿಯಬಾರದು. ವಿಶ್ವದ ತಂದೆಯಾಗಿದ್ದಾರೆ ಅಂದಮೇಲೆ ವಿಶ್ವದ ಆತ್ಮಗಳಿಗೆ ಸ್ವಲ್ಪವಾದರೂ ಅಂಚಲಿಯನ್ನು ಕೊಡಬೇಕಲ್ಲವೆ. ತಾವು ಸಾಗರದ ನೀರನ್ನೆಲ್ಲಾ ಕುಡಿದು ಬಿಟ್ಟಿರಿ. ಆದರೆ ಅವರು ಒಂದು ಹನಿಗಾಗಿ ಬಾಯಾರಿದ್ದಾರೆ. ಅವರಿಗೆ ಒಂದು ಹನಿಯನ್ನಾದರೂ ಪ್ರಾಪ್ತಿ ಮಾಡಿಸಬೇಕಲ್ಲವೆ. ಇದಕ್ಕಾಗಿ ಏನು ಮಾಡಬೇಕು? ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ಮಾತು ತಂದೆಯನ್ನು ಪ್ರತ್ಯಕ್ಷ ಮಾಡುವಂತದ್ದಾಗಿರಬೇಕು ಆಗ ಈ ಶಬ್ಧವು ಮೊಳಗುವುದು ಅಂದಮೇಲೆ ಅಂತಹ ತಂದೆಯನ್ನು ಪ್ರತ್ಯಕ್ಷ ಮಾಡುವ ಮಕ್ಕಳಿಗೆ ಹೃದಯರಾಮನ ದಿಲ್ರುಬಾ ಎಂದು ಹೇಳುತ್ತಾರೆ – ಯಾರ ಹೃದಯದಲ್ಲಿ ಒಬ್ಬ ತಂದೆಯ ಸಂಗೀತ ಮಾತ್ರವೇ ಮೊಳಗುತ್ತದೆ. ಅಂದಾಗ ಅಂತಹ ದಿಲ್ರುಬಾ ಆಗಿದ್ದೀರಲ್ಲವೆ?

ಒಂದು ಗೀತೆಯನ್ನು ಹಾಡುತ್ತೀರೆಂದರೆ ಇನ್ನೊಂದು ಗೀತೆಯು ಸ್ವತಹ ಸಮಾಪ್ತಿಯಾಗಿ ಬಿಡುತ್ತದೆ. ಕೇವಲ ಎರಡು ಶಬ್ಧಗಳಲ್ಲಿ ಖುಷಿಯ ಸಮಾಚಾರವನ್ನು ತಿಳಿಸಿ – ಓ.ಕೆ. ವಾರ್ತಾಲಾಪ ಮಾಡಿ, ಅನ್ಯ ಗೀತೆಗಳನ್ನು ತಿಳಿಸುವುದಕ್ಕಾಗಿ ಸಮಯ ಕೊಡಲೂಬೇಡಿ, ತೆಗೆದುಕೊಳ್ಳಲೂಬೇಡಿ. ಖುಷಿಯ ಸಮಾಚಾರವನ್ನು ತಿಳಿಸುವುದರಲ್ಲಿ ಸಮಯ ಹಿಡಿಸುವುದಿಲ್ಲ ಆದರೆ ರಾಮ ಕಥೆಯನ್ನು ತಿಳಿಸುವುದರಲ್ಲಿ ಸಮಯ ಹಿಡಿಸುತ್ತದೆ. ಬಾಪ್ದಾದಾ ಅಂತಹ ಕಥೆಯನ್ನು ರಾಮ ಕಥೆಯೆಂದು ಹೇಳುತ್ತಾರೆ, ಕೃಷ್ಣ ಕಥೆಯೆಂದು ಹೇಳುವುದಿಲ್ಲ. ಇದು 14 ಕಲೆಗಳನ್ನು ಹೊಂದಿರುವವರ ಕಥೆಯಾಗಿದೆ, 16 ಕಲೆಯವರದಲ್ಲ. ರಾಮ ಕಥೆಯನ್ನು ಹೇಳುವವರಂತೂ ಅಲ್ಲ ತಾನೆ?

ಸೇವೆಯು ಇನ್ನೂ ಬಹಳಷ್ಟು ಉಳಿದುಕೊಂಡಿದೆ. ಈಗಿನ್ನೂ ಮಾಡಿರುವುದಾದರೂ ಹೇಳಿ, ಆಲೋಚಿಸಿ. 600 ಕೋಟಿ ಆತ್ಮಗಳಿದ್ದಾರೆ, ಕೊನೆಪಕ್ಷ ಒಂದು ಹನಿಯನ್ನಾದರೂ ನೀಡಿ ಆದರೆ ಕೊಡಲೇಬೇಕಾಗಿದೆ. ತಮ್ಮ ಭಕ್ತರಾಗಲಿ ಅಥವಾ ಪ್ರಜೆಗಳಾದರೂ ಆಗಲಿ. ದೇವತೆಗಳಾಗುತ್ತೀರೆಂದರೂ ಸಹ ಕೊಡಲೇಬೇಕಾಗುತ್ತದೆ. ಭಕ್ತಿಯಲ್ಲಿ ದೇವತೆಯಾಗಿ ಪೂಜಿಸಲ್ಪಡುತ್ತೀರಲ್ಲವೆ ಅಂದಮೇಲೆ ಈಗ ಕೊಟ್ಟಾಗಲೇ ದೇವತೆಗಳೆಂದು ತಿಳಿದು ಪೂಜಿಸುತ್ತಾರೆ. ಏನಾದರೂ ಪ್ರಾಪ್ತಿಯಾದಾಗಲೇ ಪ್ರಜೆಗಳೂ ಸಹ ಒಪ್ಪುತ್ತಾರಲ್ಲವೆ. ತಾವು ಮಾತಾಪಿತರೆಂದು ಕೇವಲ ಹಾಗೆಯೇ ಹೇಗೆ ಒಪ್ಪುತ್ತಾರೆ? ರಾಜರು ಮಾತಾಪಿತರೇ ಆಗಿದ್ದಾರೆ, ಎರಡೂ ರೀತಿಗಳಿಂದ ‘ದಾತ’ನ ಮಕ್ಕಳು ದಾತನಾಗಿ ನೀಡಬೇಕಾಗಿದೆ. ಆದರೆ ನೀಡುತ್ತಾ ದಾತನ ನೆನಪು ತರಿಸಬೇಕಾಗುತ್ತದೆ, ಏನು ಮಾಡಬೇಕೆಂದು ತಿಳಿಯಿತೆ? ವಿದೇಶದಲ್ಲಿ ಅಥವಾ ದೇಶದಲ್ಲಿ ಎಷ್ಟು ಸೇವಾಕೇಂದ್ರಗಳು ತೆರೆಯಿತು, ಬಹಳಷ್ಟಾಯಿತೆಂದು ತಿಳಿಯಬೇಡಿ. ದಯಾಹೃದಯಿ ತಂದೆಯ ಮಕ್ಕಳಾಗಿದ್ದೀರಲ್ಲವೆ. ತಮ್ಮ ಬಾಯಾರಿರುವ, ಅಲೆದಾಡುತ್ತಿರುವ ಎಲ್ಲಾ ಸಹೋದರ-ಸಹೋದರಿಯರ ಮೇಲೆ ದಯೆ ತೋರಿಸಬೇಕಾಗಿದೆ, ಯಾರದೇ ದೂರು ಉಳಿಯಬಾರದು. ಒಳ್ಳೆಯದು.

ವಿದೇಶದಿಂದಲೂ ಬಹಳ ಪ್ರಿಯತಮೆಯರು ಬಹಳ ಮಂದಿ ಬಂದು ಬಿಟ್ಟಿದ್ದೀರಿ. ಬಹಳ ಮಂದಿ ಬಂದಾಗ ಹಂಚಬೇಕಾಗುತ್ತದೆಯಲ್ಲವೆ. ಸಮಯವನ್ನೂ ಹಂಚಬೇಕಾಗುತ್ತದೆ, ರಾತ್ರಿಯನ್ನು ದಿನವನ್ನಂತೂ ಮಾಡುತ್ತೀರಿ ಮತ್ತೇನು ಮಾಡುವಿರಿ! ಇದರಲ್ಲಿಯೂ ಮಹಾದಾನಿಗಳಾಗಿ. ತಂದೆಯ ಸ್ನೇಹವು ನಂಬರ್ವಾರ್ ಇದ್ದರೂ ಸಹ ಎಲ್ಲರಿಗಿಂತ ನಂಬರ್ವನ್ ಆಗಿದೆ. ನನ್ನೊಂದಿಗೆ ತಂದೆಯ ಪ್ರೀತಿಯು ಕಡಿಮೆಯಿದೆ, ಅನ್ಯರೊಂದಿಗೆ ಹೆಚ್ಚಿನದಾಗಿದೆ ಎಂದು ತಿಳಿಯಬೇಡಿ. ಎಲ್ಲರ ಜೊತೆ ಹೆಚ್ಚಿನ ಪ್ರೀತಿಯಿದೆ. ಭಲೆ ಸ್ಥೂಲವಾಗಿ ಕೆಲವೊಮ್ಮೆ ಯಾರೊಂದಿಗಾದರೂ ಹೆಚ್ಚು ಸಮಯ ಮಾತನಾಡಬಹುದು, ಕೆಲವೊಮ್ಮೆ ಕಡಿಮೆಯೂ ಆಗುತ್ತದೆ ಆದರೆ ಹೃದಯದ ಪ್ರೀತಿಯನ್ನು ಮಾತಿನಲ್ಲಿ ಹಂಚಲು ಸಾಧ್ಯವಿಲ್ಲ. ತಂದೆಯ ದೃಷ್ಟಿಯಲ್ಲಿ ಪ್ರತಿಯೊಂದುಮಗು ನಂಬರ್ವನ್ ಆಗಿದೆ. ಈಗಿನ್ನೂ ನಂಬರ್ ಔಟ್ ಆಗಿಲ್ಲ, ಎಲ್ಲಿಯವರೆಗೆ ಫಲಿತಾಂಶ ಹೊರ ಬರುವುದಿಲ್ಲವೋ ಅಲ್ಲಿಯವರೆಗೆ ಪ್ರತಿಯೊಬ್ಬರೂ ನಂಬರ್ವನ್ ಆಗಿದ್ದಾರೆ. ಯಾರು ಬೇಕಾದರೂ ಹೋಗಬಹುದು. ತಿಳಿಸಿದೆವಲ್ಲವೆ – ನಂಬರ್ವನ್ ಬ್ರಹ್ಮಾ ತಂದೆಯಾಗಿದ್ದಾರೆ ಆದರೆ ತಂದೆಯ ಜೊತೆ ಫಸ್ಟ್ ನಂಬರಿನಲ್ಲಿ ಬರುವುದು ಎಂದರೆ ಫಸ್ಟ್ ಡಿವಿಜನ್ನಲ್ಲಿ ಬರುವುದು. ಫಸ್ಟ್ ಡಿವಿಜನ್ನಲ್ಲಿ ಬರುವುದೂ ಸಹ ನಂಬರ್ವನ್ ಎಂದೇ ಹೇಳಲಾಗುತ್ತದೆ ಆದ್ದರಿಂದ ಎಲ್ಲಿಯವರೆಗೆ ಫೈನಲ್ ಫಲಿತಾಂಶವು ಹೊರ ಬರುವುದಿಲ್ಲವೋ ಅಲ್ಲಿಯವರೆಗೆ ಬಾಪ್ದಾದಾ ತಿಳಿದುಕೊಂಡಿದ್ದಾರೆ. ವರ್ತಮಾನ ಸಮಯದ ಪ್ರಮಾಣ ಎಲ್ಲರಿಗಿಂತ ಕೊನೆಯಲ್ಲಿ ಇರಬಹುದು ಆದರೂ ಸಹ ತಂದೆಯು ಯಾರನ್ನೂ ಹಿಂದಿರುವವರೆಂದು ತಿಳಿಯುವುದಿಲ್ಲ. ಯಾವಾಗ ಬೇಕಾದರೂ ಲಾಸ್ಟ್ ಸೋ ಫಾಸ್ಟ್ ಆಗಬಹುದು, ಇನ್ನೂ ಸಮಯವಿದೆ. ಕೆಲವೊಮ್ಮೆ ಬಹಳ ವೇಗವಾಗಿ ನಡೆಯುವವರು ಗುರಿಯನ್ನು ಮುಟ್ಟುವಷ್ಟರಲ್ಲಿ ಸುಸ್ತಾಗಿ ಬಿಡುತ್ತಾರೆ, ಆಗ ನಿಂತು ಬಿಡುತ್ತಾರೆ ಮತ್ತು ಯಾರು ನಿಧಾನವಾಗಿ ನಡೆಯುವರೋ ಅವರು ಎಂದೂ ನಿಲ್ಲುವುದಿಲ್ಲ. ಒಂದೇ ಸಮನಾಗಿ ನಡೆಯುತ್ತಾರೆ. ಆದ್ದರಿಂದ ಅವರು ಗುರಿ ತಲುಪುತ್ತಾರೆ ಅಂದಾಗ ಈಗ ತಂದೆಯ ದೃಷ್ಟಿಯಲ್ಲಿ ಎಲ್ಲರೂ ನಂಬರ್ವನ್ ಆಗಿದ್ದಾರೆ. ಯಾವಾಗ ಫಲಿತಾಂಶವು ಹೊರಬರುವುದೋ ಆಗ ಇವರು ಮೊದಲಿಗನವರಾಗಿದ್ದಾರೆ, ಇವರು ಕೊನೆಯವರು ಆಗಿದ್ದಾರೆಂದು ಹೇಳಲಾಗುತ್ತದೆ, ಈಗಲೇ ಹೇಳಲು ಸಾಧ್ಯವಿಲ್ಲ, ಆದ್ದರಿಂದ ತಮ್ಮಲ್ಲಿ ನಿಶ್ಚಯವನ್ನು ಇಟ್ಟು ಹಾರುತ್ತಾ ಹೋಗಿರಿ.

ಬಾಪ್ದಾದಾರವರಿಗೆ ಎಲ್ಲರನ್ನೂ ಮುಂದೆ ಹಾರಿಸುವ ಹೃದಯದ ಪ್ರೀತಿಯು ಎಲ್ಲರೊಂದಿಗೂ ಇದೆ. ಕೆಲವೊಮ್ಮೆ ಯಾರೊಂದಿಗಾದರೂ ಕೇವಲ ಎರಡು ಶಬ್ಧಗಳಿಂದ ಮಾತನಾಡಿದರೆ ಅದು ಕಡಿಮೆ ಪ್ರೀತಿಯೆಂದು ತಿಳಿಯಬೇಡಿ. ಹೃದಯದಲ್ಲಿಯೂ ತಂದೆಯ ಪ್ರೀತಿಯ ಶ್ರೇಷ್ಠ ಶುಭ ಕಾಮನೆಗಳು ಸದಾ ತುಂಬಿರುತ್ತವೆ. “ಹಾರುತ್ತಾ ಇರಿ” – ಇವೆರಡು ಮಾತುಗಳನ್ನು ಮಾತನಾಡಿದರೂ ಸಹ ಇದರಲ್ಲಿಯೇ ಪ್ರೀತಿಯ ಸಾಗರವು ಸಮಾವೇಶವಾಗಿದೆ. ತಂದೆಯು ನನ್ನನ್ನು ಹೆಚ್ಚು ಪ್ರೀತಿ ಮಾಡುತ್ತಾರೆಂದು ಯಾರೂ ಹೇಳಲು ಸಾಧ್ಯವಿಲ್ಲ. ಒಂದುವೇಳೆ ಯಾರಾದರೂ ಹೇಳಿದರೂ ಸಹ ನಿಮಗಿಂತಲೂ ನನ್ನನ್ನು ಹೆಚ್ಚು ಪ್ರೀತಿ ಮಾಡುತ್ತಾರೆಂದು ಹೇಳಿರಿ. ಕೇವಲ ಹೃದಯವನ್ನು ಖುಷಿ ಪಡಿಸುವುದಕ್ಕಾಗಿ ಹೇಳುತ್ತಿಲ್ಲ, ತಂದೆಗೆ ಗೊತ್ತಿದೆ – ಎಷ್ಟು ಅಲೆದಾಡಿ, ಸುಸ್ತಾಗಿ, ಗೊಂದಲಕ್ಕೊಳಗಾಗಿ ಪುನಃ 5000 ವರ್ಷಗಳ ನಂತರ ಬಂದು ಮಿಲನ ಮಾಡುತ್ತೀರಿ. ತಂದೆಯು ಹುಡುಕಿ-ಹುಡುಕಿ ಆರಿಸಿಕೊಂಡಿದ್ದಾರೆ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ – ಎಲ್ಲಾ ಕಡೆಯಿಂದಲೂ ಆರಿಸಿಕೊಂಡಿದ್ದಾರೆ ಅಂದಮೇಲೆ ಯಾರನ್ನು ಹುಡುಕಿ ಆರಿಸಿಕೊಳ್ಳುವರೋ ಅವರೊಂದಿಗೆ ಎಷ್ಟೊಂದು ಪ್ರೀತಿಯಿರಬಹುದು! ಇಲ್ಲದಿದ್ದರೆ ಹುಡುಕುತ್ತಲೇ ಇರಲಿಲ್ಲ ಮತ್ತು ಸಾಗರದ ಬಳಿ ಪ್ರೀತಿಯ ಕೊರತೆಯಿದೆಯೇ? ಪ್ರತಿಯೊಬ್ಬರಿಗೆ ಎಷ್ಟು ಹೃದಯದ ಪ್ರೀತಿಯಿದೆ ಎಂಬುದು ಹೃದಯರಾಮನಿಗೇ ಗೊತ್ತಿದೆ. ಏನೇ ಇರಲಿ, ಪ್ರೀತಿಯಲ್ಲಿ ಎಲ್ಲರೂ ಪಾಸಾಗಿದ್ದೀರಿ. ತಂದೆಯೊಂದಿಗೆ ಪ್ರೀತಿಯ ಸರ್ಟಿಫಿಕೇಟನ್ನು ತಂದೆಯು ಮೊದಲೇ ಕೊಟ್ಟು ಬಿಟ್ಟಿದ್ದೆವು. ಒಳ್ಳೆಯದು.

ನಾಲ್ಕಾರು ಕಡೆಯ ಸ್ನೇಹ ಸಂಪನ್ನ, ಹೃದಯದ ಸಂಗೀತವನ್ನು ಕೇಳಿಸುವಂತಹ ಹೃದಯರಾಮನ ಹೃದಯದ ವಾದ್ಯಗಳಿಗೆ ಸದಾ ಪ್ರತೀ ಕರ್ಮದಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡುವವರು, ಸದಾ ಪ್ರತೀ ಮಾತಿನ ಮೂಲಕ ತಂದೆಯೊಂದಿಗೆ ಸಂಬಂಧ ಜೋಡಿಸುವ, ಸದಾ ತನ್ನ ಆತ್ಮಿಕ ದೃಷ್ಟಿಯಿಂದ ಆತ್ಮರಿಗೆ ತಂದೆಯ ಅನುಭವ ಮಾಡಿಸುವಂತಹ, ತಂದೆಯನ್ನು ಪ್ರತ್ಯಕ್ಷ ಮಾಡುವಂತಹ ತಂದೆಯ ಹೃದಯ ಸಿಂಹಾಸನಜೀತ, ಮಾಯಾಜೀತ, ಜಗತ್ಜೀತ ಮಕ್ಕಳಿಗೆ ಹೃದಯರಾಮ ತಂದೆಯ ನೆನಪು-ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ವಾರ್ತಾಲಾಪ:

1. ಪ್ರತಿಯೊಂದು ಕಾರ್ಯದಲ್ಲಿ ನೆನಪಿನ ಶಕ್ತಿಯು ಸದಾ ಮುಂದುವರೆಸುವಂತದ್ದಾಗಿದೆ ಹಾಗೂ ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಈ ಶಕ್ತಿಯ ಅನುಭೂತಿಯು ಸರ್ವ ಶ್ರೇಷ್ಠ ಅನುಭೂತಿಯಾಗಿದೆ ಹಾಗೂ ಇದೇ ಶಕ್ತಿಯನ್ನು ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯ ಅನುಭವ ಮಾಡಿಸುತ್ತದೆ. ಇದೇ ಶಕ್ತಿಯ ಅನುಭವದಿಂದ ಮುಂದುವರೆಯುವ ಆತ್ಮನಾಗಿದ್ದೇನೆ ಎಂಬ ಸ್ಮೃತಿಯಲ್ಲಿದ್ದು, ಎಷ್ಟು ಮುಂದುವರೆಯಬೇಕು ಎಂದು ಬಯಸುವಿರಿ ಅಷ್ಟೂ ಮುಂದುವರೆಯಬಹುದು. ಇದೇ ಶಕ್ತಿಯಿಂದ ವಿಶೇಷವಾದ ಸಹಯೋಗದ ಪ್ರಾಪ್ತಿಯಾಗುತ್ತಾ ಇರುತ್ತದೆ.

2. ಪ್ರತಿಯೊಂದು ಕಾರ್ಯವನ್ನು ಮಾಡುತ್ತಾ, ಸದಾ ಸಾಕ್ಷಿ ಸ್ಥಿತಿಯಲ್ಲಿ ಸ್ಥಿತವಾಗುತ್ತಾ ಕಾರ್ಯವನ್ನು ಮಾಡುವಂತಹ ಭಿನ್ನವಾದ ಆತ್ಮನಾಗಿದ್ದೇನೆ – ಇಂತಹ ಅನುಭವ ಮಾಡುತ್ತೀರಾ? ಪ್ರತಿಯೊಂದು ಕಾರ್ಯದಲ್ಲಿ ಸಾಕ್ಷಿತನದ ಸ್ಥಿತಿಯು ಸದಾ ಸಹಜವಾಗಿ ಸಫಲ ಮಾಡುತ್ತದೆ. ಸಾಕ್ಶಿತನದ ಸ್ಥಿತಿಯು ಎಷ್ಟೊಂದು ಭಿನ್ನವೆನಿಸುತ್ತದೆ! ಸಾಕ್ಷಿಯಾಗಿರುತ್ತಾ ಕಾರ್ಯವನ್ನು ಮಾಡುವಂತಹ ಆತ್ಮನು ಸದಾ ಭಿನ್ನವಾಗಿ ಮತ್ತು ತಂದೆಯ ಪ್ರಿಯನಾಗಿರುವನು. ಅಂದಮೇಲೆ ಇದೇ ಅಭ್ಯಾಸದಿಂದ ಕರ್ಮ ಮಾಡುವಂತಹ ಅಲೌಕಿಕ ಆತ್ಮನಾಗಿದ್ದೇನೆ, ಅಲೌಕಿಕ ಅನುಭೂತಿ ಮಾಡುವ, ಅಲೌಕಿಕ ಜೀವನ ಮತ್ತು ಶ್ರೇಷ್ಠ ಜೀವನವುಳ್ಳ ಆತ್ಮನಾಗಿದ್ದೇನೆಂಬ ನಶೆಯು ಇರುತ್ತದೆಯಲ್ಲವೆ? ಕರ್ಮವನ್ನು ಮಾಡುತ್ತಾ ಇದೇ ಅಭ್ಯಾಸವನ್ನು ಹೆಚ್ಚಿಸಿಕೊಳ್ಳುತ್ತಿರಿ. ಈ ಅಭ್ಯಾಸವು ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಸುತ್ತದೆ ಹಾಗೂ ಸದಾ ಮುಂದುವರೆಸುತ್ತದೆ, ಕರ್ಮವನ್ನು ಮಾಡುತ್ತಾ ಭಿನ್ನ ಹಾಗೂ ತಂದೆಗೆ ಪ್ರಿಯರಾಗಿರುವುದಕ್ಕೆ ಶ್ರೇಷ್ಠ ಆತ್ಮನೆಂದು ಹೇಳಲಾಗುತ್ತದೆ.

3. ಸದಾ ಶ್ರೇಷ್ಠ ಖಜಾನೆಗಳಿಂದ ಸಂಪನ್ನವಾಗಿರುವ ಆತ್ಮನಾಗಿದ್ದೇನೆ ಎಂಬ ಅನುಭವ ಮಾಡುತ್ತೀರಾ? ಯಾರು ಅಕೂಟ ಖಜಾನೆಗಳಿಂದ ಸಂಪನ್ನವಾಗಿರುವರು, ಅವರಲ್ಲಿ ಎಷ್ಟೊಂದು ಆತ್ಮಿಕ ನಶೆಯಿರುತ್ತದೆ! ಸದಾ ಸರ್ವ ಖಜಾನೆಗಳಿಂದ ಸಂಪನ್ನನಾಗಿದ್ದೇನೆ – ಈ ಆತ್ಮಿಕ ಖುಷಿಯಿಂದ ಮುಂದುವರೆಯುತ್ತಾ ಸಾಗಿರಿ. ಸರ್ವ ಖಜಾನೆಗಳು ಆತ್ಮರನ್ನು ಜಾಗೃತಗೊಳಿಸುತ್ತಾ ಜೊತೆಗಾರರನ್ನಾಗಿ ಮಾಡಿಬಿಡುತ್ತದೆ. ಅಂದಮೇಲೆ ಸಂಪನ್ನ ಹಾಗೂ ಶಕ್ತಿಶಾಲಿ ಆತ್ಮರಾಗಿ ಮುಂದುವರೆಯುತ್ತಾ ಸಾಗಿರಿ.

4. ಸದಾ ಬುದ್ಧಿಯಲ್ಲಿ ಈ ಸ್ಮೃತಿಯು ಇರುತ್ತದೆಯಲ್ಲವೆ – ಮಾಡಿಸುವಂತಹ ತಂದೆಯು ಮಾಡಿಸುತ್ತಿದ್ದಾರೆ, ನಾವು ನಿಮಿತ್ತರಾಗಿದ್ದೇವೆ. ನಿಮಿತ್ತನಾಗಿದ್ದು ಮಾಡುವವರು ಸದಾ ಹಗುರವಾಗಿರುತ್ತಾರೆ ಏಕೆಂದರೆ ಮಾಡಿಸುವಂತಹ ತಂದೆಯು ಜವಾಬ್ದಾರನಾಗಿದ್ದಾರೆ. ಯಾವಾಗ ‘ನಾನು ಮಾಡುತ್ತೇನೆ’ ಎಂಬ ಸ್ಮೃತಿಯಿರುತ್ತದೆಯೋ, ಆಗ ಹೊರೆಯಾಗಿ ಬಿಡುತ್ತದೆ ಮತ್ತು ತಂದೆಯು ಮಾಡಿಸುತ್ತಿದ್ದಾರೆ ಎಂಬ ಸ್ಮೃತಿಯಿದ್ದರೆ ಹಗುರವಾಗಿರುತ್ತೀರಿ. ನಾನು ನಿಮಿತ್ತನು, ಮಾಡಿಸುವವರು ಮಾಡಿಸುತ್ತಿದ್ದಾರೆ, ನಡೆಸುವವರು ನಡೆಸುತ್ತಿದ್ದಾರೆ – ಈ ರೀತಿ ಇರುವವರಿಗೆ ನಿಶ್ಚಿಂತ ಚಕ್ರವರ್ತಿ ಎಂದು ಹೇಳುತ್ತಾರೆ. ಅಂದಮೇಲೆ ಮಾಡಿಸುವವರು ಮಾಡಿಸುತ್ತಿದ್ದಾರೆ – ಇದೇ ವಿಧಿಯಿಂದ ಸದಾ ಮುಂದುವರೆಯುತ್ತಾ ಸಾಗಿರಿ.

5. ತಂದೆಯ ಛತ್ರಛಾಯೆಯಲ್ಲಿ ಇರುವಂತಹ ಶ್ರೇಷ್ಠ ಆತ್ಮನಾಗಿದ್ದೇನೆ – ಇದೇ ಅನುಭೂತಿ ಆಗುತ್ತದೆಯೇ! ಯಾರೀಗ ಛತ್ರಛಾಯೆಯಲ್ಲಿ ಇರುತ್ತಾರೆಯೋ ಅವರೇ ಛತ್ರಧಾರಿಗಳು (ಚಕ್ರವರ್ತಿ) ಆಗುವರು. ಅಂದಮೇಲೆ ಛತ್ರಛಾಯೆಯಲ್ಲಿ ಇರುವಂತಹ ಭಾಗ್ಯಶಾಲಿ ಆತ್ಮನಾಗಿದ್ದೇನೆ ಎಂಬ ಖುಷಿಯು ಇರುತ್ತದೆಯಲ್ಲವೆ! ಛತ್ರಛಾಯೆಯು ಸುರಕ್ಷಿತ ಸಾಧನವಾಗಿದೆ, ಇದರೊಳಗೆ ಯಾರೂ ಸಹ ಬರಲು ಸಾಧ್ಯವಿಲ್ಲ. ತಂದೆಯ ಛತ್ರಛಾಯೆಯ ಒಳಗಿದ್ದೇನೆ ಎಂಬ ಈ ಚಿತ್ರವನ್ನು ಸದಾ ತಮ್ಮ ಮುಂದೆ ಇಟ್ಟುಕೊಳ್ಳಿರಿ.

6. ಸದಾ ತಮ್ಮ ಆತ್ಮಿಕ ಫರಿಶ್ತಾ ಸ್ವರೂಪವು ಸ್ಮೃತಿಯಲ್ಲಿ ಇರುತ್ತದೆಯೇ? ಬ್ರಾಹ್ಮಣನಿಂದ ಫರಿಶ್ತಾ, ಫರಿಶ್ತೆಯಿಂದ ದೇವತಾ – ಮೊದಲ ಈ ಒಗಟನ್ನು ಬಿಡಿಸಿದ್ದೀರಲ್ಲವೆ! ಒಗಟು ಬಿಡಿಸುವುದಕ್ಕೆ ಬರುತ್ತದೆಯೇ! ಸೆಕೆಂಡಿನಲ್ಲಿ ಬ್ರಾಹ್ಮಣನಿಂದ ದೇವತಾ, ದೇವತೆ ರೂಪದಿಂದ ಪರಿಕ್ರಮಣ ಹಾಕುತ್ತಾ ಬ್ರಾಹ್ಮಣ, ನಂತರ ದೇವತಾ – ಇದರಿಂದ ‘ನಾನೇ ಅದು, ಅದೇ ನಾನು’ (ಹಮ್ ಸೊ ಸೊ ಹಮ್) ಈ ಒಗಟು ಸದಾ ಬುದ್ಧಿಯಲ್ಲಿ ಇರುತ್ತದೆಯೇ? ಯಾರು ಒಗಟನ್ನು ಬಿಡಿಸುತ್ತಾರೆಯೋ ಅವರಿಗೇ ಬಹುಮಾನವು ಸಿಗುತ್ತದೆ ಅಂದಮೇಲೆ ಬಹುಮಾನವು ಸಿಕ್ಕಿದೆಯಲ್ಲವೆ! ಈಗೇನು ಸಿಕ್ಕಿದೆಯೋ ಅದು ಭವಿಷ್ಯದಲ್ಲಿಯೂ ಸಿಗುವುದಿಲ್ಲ! ಬಹುಮಾನವೇನು ಸಿಕ್ಕಿದೆ? ಸ್ವಯಂ ತಂದೆಯೇ ಸಿಕ್ಕಿದರು, ತಂದೆಯ ಮಗುವಾಗಿ ಬಿಟ್ಟಿರಿ. ಈ ಪ್ರಾಪ್ತಿಯು ಭವಿಷ್ಯದ ರಾಜ್ಯಭಾಗ್ಯದ ಮುಂದೆ ಎಷ್ಟು ಶ್ರೇಷ್ಠವಾಗಿದೆ! ಅಂದಮೇಲೆ ಸದಾ ಬಹುಮಾನ ತೆಗೆದುಕೊಳ್ಳುವ ಶ್ರೇಷ್ಠಾತ್ಮನಾಗಿದ್ದೇನೆ – ಇದೇ ನಶೆ ಮತ್ತು ಖುಷಿಯಿಂದ ಸದಾ ಮುಂದುವರೆಯುತ್ತಾ ಇರಿ. ಒಗಟು ಮತ್ತು ಬಹುಮಾನ – ಸದಾ ಇವೆರಡರ ಸ್ಮೃತಿಯಲ್ಲಿ ಇರುತ್ತೀರೆಂದರೆ ಸ್ವತಹವಾಗಿಯೇ ಮುಂದುವರೆಯುತ್ತೀರಿ.

7. ಸದಾ ‘ಧೃಡತೆಯು ಸಫಲತೆಯ ಬೀಗದ ಕೈ’ – ಈ ವಿಧಿಯಿಂದ ವೃತ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಶ್ರೇಷ್ಠಾತ್ಮನು ಆಗಿದ್ದೇನೆ ಎಂಬ ಅನುಭವವು ಆಗುತ್ತದೆಯಲ್ಲವೆ! ಧೃಡ ಸಂಕಲ್ಪ ವಿಶೇಷತೆಯು ಕಾರ್ಯದಲ್ಲಿ ಸಹಜವಾಗಿ ಸಫಲರನ್ನಾಗಿ ಮಾಡಿಸಿ, ವಿಶೇಷ ಆತ್ಮರನ್ನಾಗಿ ಮಾಡಿ ಬಿಡುತ್ತದೆ. ಹಾಗೂ ಯಾವಾಗ ಯಾವುದೇ ಕಾರ್ಯದಲ್ಲಿ ವಿಶೇಷ ಆತ್ಮರಾಗುವರೆಂದರೆ, ಎಲ್ಲರ ಆಶೀರ್ವಾದಗಳೂ ಸಹ ಸ್ವತಹವಾಗಿಯೇ ಸಿಗುತ್ತದೆ. ಸ್ಥೂಲದಲ್ಲಿ ಆಶೀರ್ವಾದಗಳನ್ನು ಯಾರೂ ಕೊಡುವುದಿಲ್ಲ ಆದರೆ ಇದು ಸೂಕ್ಷ್ಮವಾದ ಆಶೀರ್ವಾದಗಳಾಗಿವೆ, ಇದರಿಂದ ಆತ್ಮನಲ್ಲಿ ಶಕ್ತಿ ತುಂಬುತ್ತದೆ ಮತ್ತು ಸ್ವ-ಉನ್ನತಿಯಲ್ಲಿ ಸಹಜ ಸಫಲತೆಯ ಪ್ರಾಪ್ತಿಯಾಗುವುದು. ಅಂದಮೇಲೆ ಸದಾ ಧೃಡತೆಯ ಮಹಾನತೆಯಿಂದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ಹಾಗೂ ಸರ್ವರ ಆಶೀರ್ವಾದಗಳನ್ನು ತೆಗೆದುಕೊಳ್ಳುವ ಶ್ರೇಷ್ಠಾತ್ಮನು ಆಗಿದ್ದೇನೆಂಬ ಸ್ಮೃತಿಯಿಂದ ಮುಂದುವರೆಯುತ್ತಾ ಸಾಗಿರಿ.

ವರದಾನ:-

ಸ್ವಯಂನಲ್ಲಿ ಆತ್ಮೀಯತೆಯ ಸರ್ವಶಕ್ತಿಗಳನ್ನು ಧಾರಣೆ ಮಾಡಿಕೊಳ್ಳುತ್ತೀರೆಂದರೆ, ಸಹಜವಾಗಿಯೇ ಆತ್ಮೀಯತೆಯ ಸುಗಂಧದಿಂದ ಅನೇಕ ಆತ್ಮರನ್ನು ತನ್ನ ಕಡೆಗೆ ಆಕರ್ಷಣೆ ಮಾಡುವುದು. ಹೇಗೆ ಮನಸಾ ಶಕ್ತಿಯಿಂದ ಪ್ರಕೃತಿಯನ್ನೂ ತಮೋಪ್ರಧಾನದಿಂದ ಸತೋಪ್ರಧಾನವನ್ನಾಗಿ ಮಾಡುತ್ತೀರಿ ಹಾಗೆಯೇ ವಿಶ್ವದಲ್ಲಿರುವ ಅನ್ಯ ಆತ್ಮರು, ಯಾರು ತಮ್ಮ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಅವರಿಗೆ ತಾವು ದೂರವಿದ್ದರೂ ತಾವು ಆತ್ಮೀಯತೆಯ ಶಕ್ತಿಯಿಂದ ತಂದೆಯ ಪರಿಚಯ ಅಥವಾ ಮುಖ್ಯ ಸಂದೇಶವನ್ನು ಕೊಡಬಹುದು. ಯಾವಾಗ ಈ ಸೂಕ್ಷ್ಮವಾದ ಯಂತ್ರವನ್ನು ತೀವ್ರಗೊಳಿಸುತ್ತೀರಿ ಆಗಲೇ ಚಡಪಡಿಸುತ್ತಿರುವ ಅನೇಕ ಆತ್ಮರುಗಳಿಗೆ ಹನಿಯಾದರೂ ಸಿಗುವುದು ಹಾಗೂ ತಾವು ವಿಶ್ವ ಕಲ್ಯಾಣಕಾರಿ ಎಂದು ಕರೆಸಿಕೊಳ್ಳುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top