18 September 2021 KANNADA Murli Today | Brahma Kumaris

Read and Listen today’s Gyan Murli in Kannada

September 17, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಚಾರಿಟಿ ಬಿಗಿನ್ಸ್ ಅಟ್ ಹೋಮ್ (ಮನೆಯೆ ಮೊದಲ ಪಾಠಶಾಲೆ), ಮೊದಲು ತಮ್ಮ ಪರಿವಾರದವರಿಗೆ ಜ್ಞಾನವನ್ನು ತಿಳಿಸಿ, ತಮ್ಮ ಜೊತೆಗಾರರ ಕಲ್ಯಾಣ ಮಾಡಿ”

ಪ್ರಶ್ನೆ:: -

ಯಾವ ಶ್ರೀಮತದ ಪಾಲನೆ ಮಾಡುವ ಮಕ್ಕಳು ತಮ್ಮ ಸ್ಥಿತಿಯನ್ನು ಏಕರಸವಾಗಿಟ್ಟುಕೊಳ್ಳು ಸಾಧ್ಯ?

ಉತ್ತರ:-

ಸ್ಥಿತಿಯನ್ನು ಏಕರಸ ಮಾಡಿಕೊಳ್ಳುವುದಕ್ಕಾಗಿ ತಂದೆಯ ಶ್ರೀಮತವಾಗಿದೆ – ಮಕ್ಕಳೇ, ನಿತ್ಯವೂ ಬೆಳಗ್ಗೆ-ಬೆಳಗ್ಗೆ ಎದ್ದು ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಕೇಳಿರಿ. ಒಂದುವೇಳೆ ನೆನಪು ಮಾಡುವುದಿಲ್ಲವೆಂದರೆ ಅನರ್ಥ ಚಿಂತನೆ ನಡೆಯುತ್ತದೆ, ವ್ಯರ್ಥ ಸಂಕಲ್ಪ ಬರುತ್ತವೆ ಆದ್ದರಿಂದ ತಂದೆಯು ಸಲಹೆ ಕೊಡುತ್ತಾರೆ – ಮಕ್ಕಳೇ, ನಿತ್ಯವೂ ಬೆಳಗ್ಗೆ-ಬೆಳಗ್ಗೆ ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡಿಕೊಳ್ಳಿ- ನಡೆಯುತ್ತಾ-ತಿರುಗಾಡುತ್ತಾ, ತಿನ್ನುತ್ತಾ….. ಭೋಜನವನ್ನು ತಯಾರಿಸುತ್ತಾ ಒಬ್ಬ ತಂದೆಯನ್ನೇ ನೆನಪು ಮಾಡುತ್ತೀರಿ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ – ಆತ್ಮಿಕ ತಂದೆ ಯಾರು ಎಲ್ಲಾ ಆತ್ಮರ ತಂದೆ ಸರ್ವಶ್ರೇಷ್ಠನಾಗಿದ್ದಾರೆಯೋ ಅವರಿಗೇ ಶಿವಾಯ ನಮಃ ಎಂದು ಹೇಳುತ್ತಾರೆ. ತಂದೆಯೆಂತಲೂ ಹೇಳುತ್ತಾರೆ. ಆ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಅವರಿಗೇ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ – ಅವರ ಸನ್ಮುಖದಲ್ಲಿ ನಾವು ಕುಳಿತಿದ್ದೇವೆ ಎಂದು. ಇದನ್ನು ನೀವು ಮಕ್ಕಳು ತಿಳಿಸಬೇಕಾಗಿದೆ. ಹೇಗೆ ಒಂದು ಕಡೆ ಗೀತಾ ಪಾಠಶಾಲೆಯಲ್ಲಿ ಕೃಷ್ಣನ ಆರು ಅಡಿಯುದ್ದದ ಚಿತ್ರವಿತ್ತು, ಕೃಷ್ಣನನ್ನು ವಾಸ್ತವದಲ್ಲಿ ಚಿಕ್ಕದಾಗಿಯೇ ತೋರಿಸುತ್ತಾರೆ ಮತ್ತೆ ಗೀತೆಯ ಭಗವಂತನಾಗಿದ್ದನು ಎಂದು ಹೇಳುತ್ತಾರೆ ಅಂದಮೇಲೆ ಗೀತೆಯನ್ನು ಯಾವಾಗ ತಿಳಿಸಿದನು? ಬಾಲ್ಯದಲ್ಲಿಯೋ ಅಥವಾ ಯಾವಾಗ ಆರು ಅಡಿಯಷ್ಟು ಬೆಳೆದಾಗ ತಿಳಿಸಿದನೇ? ರಾಧೆ-ಕೃಷ್ಣನ ಜೋಡಿಯಿತ್ತು, ಅವರಿಬ್ಬರ ಪರಸ್ಪರ ಸಂಬಂಧ ಏನಿತ್ತು? ರಾಧೆಗೆ ಭಗವತಿ ಮತ್ತು ಕೃಷ್ಣನಿಗೆ ಭಗವಂತನೆಂದು ಹೇಳುತ್ತಾರೆ. ಇವರಿಬ್ಬರ ಸಂಬಂಧವೇನೆಂಬುದು ಯಾರಿಗೂ ತಿಳಿದಿಲ್ಲ. ಕೃಷ್ಣನು ಗೀತೋಪದೇಶ ಮಾಡಿದನು ಆದರೆ ಯಾವಾಗ? ಹೀಗೆ ನೀವು ಪ್ರಶ್ನೆಗಳನ್ನು ಕೇಳುತ್ತೀರೆಂದರೆ ಆಗ ಮನುಷ್ಯರಿಗೆ ಅರ್ಥವಾಗುತ್ತದೆ – ಬ್ರಹ್ಮಾಕುಮಾರ-ಕುಮಾರಿಯರ ವಿನಃ ಮತ್ತ್ಯಾರೂ ಈ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ. ಯಾರೇ ದೊಡ್ಡ-ದೊಡ್ಡ ರಾಜರು ಮೊದಲಾದ ಯಾರೆಲ್ಲರೂ ಇದ್ದಾರೆಯೋ ಅವರು ಸನ್ಯಾಸಿಗಳನ್ನು ನೋಡುತ್ತಿದ್ದಂತೆಯೇ ಅವರ ಕಾಲಿಗೆ ಬೀಳುತ್ತಾರೆ. ಯಾರಿಗೂ ಕೇಳುವ ಧೈರ್ಯವೇ ಇರುವುದಿಲ್ಲ. ನೀವಂತೂ ಸಾಹಸವನ್ನು ಇಡುತ್ತೀರಿ ಆದ್ದರಿಂದ ಹೇಳುತ್ತಾರೆ- ಬ್ರಹ್ಮಾಕುಮಾರಿಯರಲ್ಲಿ ಇಷ್ಟೊಂದು ಜ್ಞಾನವಿದೆ ಅವರು ಕುಳಿತು ರಚಯಿತ ಮತ್ತು ರಚನೆಯ ಜ್ಞಾನವನ್ನು ಕೊಡುತ್ತಾರೆ. ಇಡೀ ಚರಿತ್ರೆಯನ್ನೇ ತಿಳಿಸುತ್ತಾರೆ. ನೀವು ಇದನ್ನು ಕೇಳಬಹುದು – ಶಿವ ಜಯಂತಿಯನ್ನು ಆಚರಿಸುತ್ತೀರಿ, ಪೂಜೆ ಇತ್ಯಾದಿಗಳನ್ನೂ ಮಾಡುತ್ತೀರಿ ಅಂದಮೇಲೆ ಅವರು ಎಂದಾದರೂ ಅವಶ್ಯವಾಗಿ ಬಂದಿರಬೇಕು ಆದ್ದರಿಂದಲೇ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ. ಅವರು ಯಾವಾಗ ಬಂದರು? ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶರೀರದಲ್ಲಿ ಬಂದಿರಬಹುದೇ? ನಿರಾಕಾರನ ಜಯಂತಿಯಾಗಲು ಹೇಗೆ ಸಾಧ್ಯ? ಆತ್ಮವು ಅಮರನಾಗಿದೆ, ಯಾವಾಗ ಸತ್ತ ನಂತರ ಜನ್ಮ ಪಡೆಯುವರೋ ಆಗ ಜಯಂತಿಯನ್ನು ಆಚರಿಸಲಾಗುತ್ತದೆ, ಆತ್ಮದ ಜಯಂತಿಯಾಗುವುದಿಲ್ಲ. ಆತ್ಮವಂತೂ ಅವಿನಾಶಿಯಾಗಿದೆ, ಆತ್ಮದ ಜಯಂತಿಯೆಂದು ಹೇಳಲಾಗುವುದಿಲ್ಲ. ಶಿವನು ನಿರಾಕಾರನಾಗಿದ್ದಾರೆ. ಅವರ ಚಿತ್ರವನ್ನು ಲಿಂಗ ರೂಪದಲ್ಲಿ ಇಡಲಾಗುತ್ತದೆ. ನೀವು ಮಕ್ಕಳಿಗೆ ಈ ಚಿಂತನೆಯಿರಬೇಕು. ಇಲ್ಲಿಂದ ತಮ್ಮ ಮನೆ, ಉದ್ಯೋಗ-ವ್ಯವಹಾರಗಳಲ್ಲಿ ಹೋಗುತ್ತಿದ್ದಂತೆ ಈ ಮಾತುಗಳೇ ಬುದ್ಧಿಯಿಂದ ಹೊರಟು ಹೋಗುತ್ತದೆ, ಚಿಂತನೆ ನಡೆಯುವುದಿಲ್ಲ. ಗುರುಗಳು ಮೊದಲಾದವರ ಜಂಜಾಟದಲ್ಲಿ ಬಹಳ ಸಿಕ್ಕಿ ಹಾಕಿಕೊಂಡಿದ್ದಾರೆ. ಮಾತೇ ಕೇಳಬೇಡಿ. ಅಬಲೆಯರು ಬಹಳ ಮುಗ್ಧರಾಗಿರುತ್ತಾರಲ್ಲವೆ. ನೀವು ಅವರೊಂದಿಗೆ ಕೇಳಬಲ್ಲಿರಿ – ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಅಂದಮೇಲೆ ಅವರು ಯಾರು? ಅವರು ಬಂದು ಏನು ಮಾಡಿದರು ಮತ್ತು ಯಾವಾಗ ಬಂದರು? ಜಯಂತಿಯೆಂದರೆ ಜನ್ಮವೆಂದರ್ಥ, ನಿರಾಕಾರ ಶಿವನ ಜನ್ಮದಿನವನ್ನು ಆಚರಿಸಿದರು, ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ಅವರ ಜನ್ಮ ದಿನವನ್ನು ಹೇಗೆ ಆಚರಿಸಲಾಗುತ್ತದೆ? ಯಾರಲ್ಲಿ ಬಂದರು? ಆತ್ಮವು ಶರೀರದಲ್ಲಿ ಹೋದಾಗ ಜನ್ಮವಾಯಿತು ಎಂದು ಹೇಳಲಾಗುತ್ತದೆ. ಆತ್ಮವಂತೂ ಆತ್ಮವೇ ಆಗಿದೆ, ಶರೀರದಲ್ಲಿ ಪ್ರವೇಶ ಮಾಡಿದಾಗ ಆತ್ಮವು ಪಾತ್ರವನ್ನು ಅಭಿನಯಿಸುವುದಕ್ಕಾಗಿ ಶರೀರವನ್ನು ತೆಗೆದುಕೊಂಡಿದೆ ಎಂದು ಹೇಳುತ್ತಾರೆ. ತಂದೆಯಂತೂ ನಿರಾಕಾರನಾಗಿದ್ದಾರೆ, ಅವರು ಹೇಗೆ ಜನ್ಮ ತೆಗೆದುಕೊಂಡರು? ಯಾರಲ್ಲಿ ಬಂದರು? ಅವರಿಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಇದು ಯಾರಿಗೂ ತಿಳಿದಿಲ್ಲ. ಭಲೆ ಬಹಳ ಶಾಸ್ತ್ರಗಳನ್ನು ಓದಿದ್ದಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ನೀವೀಗ ಜ್ಞಾನದಿಂದ ಸಂಪನ್ನರಾಗಿದ್ದೀರಿ, ನೀವೀಗ ಜ್ಞಾನವನ್ನೇ ತಿಳಿಸಬೇಕಾಗಿದೆ. ಕೆಲಕೆಲವರು 2-3 ವರ್ಷಗಳ ಕಾಲ ಬರುತ್ತಾರೆ ಮತ್ತೆ ಅಜ್ಞಾನದ ಪ್ರವೇಶತೆಯಾಗಿ ಬಿಡುತ್ತದೆ. ತಂದೆಯು ಪುನಃ ಅಜ್ಞಾನವನ್ನು ತೆಗೆದು ಜ್ಞಾನದ ಧಾರಣೆ ಮಾಡಿಸುತ್ತಾರೆ. ಈಗ ನೀವು ಮಕ್ಕಳಿಗೆ ಜ್ಞಾನ ಕೊಡಲಾಗುತ್ತದೆ ಆದರೆ ಪುರುಷ ಜ್ಞಾನದಲ್ಲಿದ್ದು ಸ್ತ್ರೀಯು ಅಜ್ಞಾನದಲ್ಲಿದ್ದರೆ ಹಂಸ-ಕೊಕ್ಕರೆಗಳಂತೆ ಆಗಿ ಬಿಡುವುದು. ಆದ್ದರಿಂದ ಮೊದಲು ಸ್ತ್ರೀಗೆ ಜ್ಞಾನ ಕೊಡಬೇಕಾಗಿದೆ. ಸ್ತ್ರೀಯು ತನ್ನ ಪತಿಯನ್ನು ಗುರು ಈಶ್ವರನೆಂದು ನಂಬುತ್ತಾಳೆ ಅಂದಮೇಲೆ ಸ್ತ್ರೀಯು ಗುರುವಿನ ಆಜ್ಞೆಯನ್ನು ಪಾಲಿಸಬೇಕಲ್ಲವೆ. ಇದು ಇಲ್ಲಿನ ಮಾತಾಗಿದೆ. ಸತ್ಯಯುಗದಲ್ಲಂತೂ ಆಜ್ಞೆಯನ್ನು ಒಪ್ಪುವ, ಒಪ್ಪದೇ ಇರುವ ಪ್ರಶ್ನೆಯೇ ಇರುವುದಿಲ್ಲ, ಎಲ್ಲರೂ ಪ್ರೀತಿಯಿಂದ ನಡೆಯುತ್ತಾರೆ. ಅಲ್ಲಿ ಇಂತಹ ಯಾವುದೇ ಮಾತಿರುವುದಿಲ್ಲ ಆದ್ದರಿಂದ ಮನೆಯೇ ಮೊದಲ ಪಾಠಶಾಲೆ. ಸ್ತ್ರೀ ಜ್ಞಾನದಲ್ಲಿ ಬರುತ್ತಾರೆ, ಪತಿಯು ಬರುವುದಿಲ್ಲವೆಂದರೆ ಏನು ಮಾಡಲು ಸಾಧ್ಯ? ಜ್ಞಾನದ ಭೂ ಭೂ ಮಾಡಬೇಕಾಗಿದೆ, ಮಕ್ಕಳಿಗೂ ಸಹ ಭೂ ಭೂ ಮಾಡಬೇಕಾಗಿದೆ. ತಮ್ಮ ಜೊತೆಗಾರರ ಕಲ್ಯಾಣ ಮಾಡಿರಿ, ಅವರಿಗೂ ತಿಳಿಸಿರಿ – ತಂದೆಯನ್ನು ನೆನಪು ಮಾಡಿ, ಈಗ ಯುದ್ಧವು ಸನ್ಮುಖದಲ್ಲಿ ನಿಂತಿದೆ, ತಂದೆಯು ಬಂದಿದ್ದಾರೆ – ಹೇ ಪತಿತ-ಪಾವನ ಬನ್ನಿ ಎಂದು ಮನುಷ್ಯರು ಕರೆಯುತ್ತಾರೆ. ಈಗ ಪತಿತ ಪ್ರಪಂಚದ ವಿನಾಶವಾಗಲಿದೆ ಅಂದಮೇಲೆ ಮತ್ತೆ ನೀವೇಕೆ ಪತಿತರಾಗುತ್ತೀರಿ! ಮಾತೆಯು ಜ್ಞಾನದಲ್ಲಿದ್ದರೆ ತಮ್ಮ ಜೊತೆಗಾರರ ಕಲ್ಯಾಣ ಮಾಡುವುದು ಅವರ ಕರ್ತವ್ಯವಾಗಿದೆ. ನೀವೀಗ ತಂದೆಯಿಂದ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ನೀವು ನಿಮ್ಮ ರಾಜ್ಯಕ್ಕೆ ಯಾರೂ ಕೈಹಾಕಲು ಸಾಧ್ಯವಿಲ್ಲ, ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ, ಅಂತರ ನೋಡಿ ಎಷ್ಟಿದೆ! ಇಂತಹ ಆಸ್ತಿಯನ್ನು ಕೊಡುವ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು! ಇಲ್ಲಂತೂ ಬಹಳ ಮಕ್ಕಳು ಇಡೀ ದಿನದಲ್ಲಿ ತಂದೆಯನ್ನು ನೆನಪೇ ಮಾಡುವುದಿಲ್ಲ. ಇಡೀ ದಿನ ಉದ್ಯೋಗ-ವ್ಯವಹಾರಗಳ ಜಂಜಾಟದಲ್ಲಿಯೇ ಇರುತ್ತಾರೆ. ಇಲ್ಲವಾದರೆ ಮುಂಜಾನೆ ಎದ್ದು ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಲ್ಲವೆ. ಬಾಬಾ, ನಾವು ತಮ್ಮೊಂದಿಗೆ ಪ್ರತಿಜ್ಞೆ ಮಾಡುತ್ತೇವೆ, ತಮ್ಮಿಂದ ಆಸ್ತಿಯನ್ನು ಖಂಡಿತ ತೆಗೆದುಕೊಳ್ಳುತ್ತೇವೆ. ಬಾಬಾ, ತಾವು ಎಷ್ಟು ಮಧುರರಾಗಿದ್ದೀರಿ, ತಮ್ಮ ನೆನಪಿನಿಂದ ನಮ್ಮ ವಿಕರ್ಮಗಳು ವಿನಾಶವಾಗುತ್ತವೆ. ತಮ್ಮೊಂದಿಗೆ ಮಾತನಾಡಿಕೊಳ್ಳುವುದಕ್ಕೆ ವಿಚಾರ ಸಾಗರ ಮಂಥನ ಮಾಡುವುದು ಎಂದು ಹೇಳಲಾಗುತ್ತದೆ. ಬಾಬಾ, ನಾವು ತಮ್ಮಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಂಡೇ ತೀರುತ್ತೇವೆ. ನಾವೀಗ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಆಗಲೇ ಸತ್ಯಯುಗೀ ರಾಜ್ಯವನ್ನು ಪಡೆಯುವೆವು. ಬಾಬಾ, ತಮ್ಮನ್ನು ನಾವು ನಿರಂತರ ನೆನಪು ಮಾಡುತ್ತೇವೆ. 63 ಜನ್ಮಗಳಲ್ಲಿ ನಾವು ಎಷ್ಟೊಂದು ಪಾಪ ಮಾಡಿದ್ದೇವೆ, ತಲೆಯ ಮೇಲೆ ಎಷ್ಟೊಂದು ಹೊರೆಯಿದೆ ಆದ್ದರಿಂದ ನಾವು ತಮ್ಮನ್ನು ಬಹಳ ನೆನಪು ಮಾಡುತ್ತೇವೆ. ಬಾಬಾ, ಅಡುಗೆ ಮಾಡುವಾಗ ತಿರುಗಾಡುವಾಗಲೂ ಸಹ ನಿಮ್ಮ ನೆನಪಿನಲ್ಲಿರುತ್ತೇವೆ. ಹೀಗೆ ಮಾತನಾಡಿಕೊಳ್ಳುತ್ತಾ ಪ್ರತಿಜ್ಞೆ ಮಾಡುತ್ತೀರೆಂದರೆ ವಿಕರ್ಮಗಳು ವಿನಾಶವಾಗುತ್ತಾ ಹೋಗುತ್ತದೆ. ಬಾಬಾ, ನಾವು ಭೋಜನವನ್ನು ನಿಮ್ಮ ನೆನಪಿನಲ್ಲಿಯೇ ತಯಾರಿಸುತ್ತೇವೆ. ನಾವು ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ನಾಳೆ ನಾವು ಶರೀರ ಬಿಟ್ಟರೆ ಸತೋಪ್ರಧಾನರಾಗುವುದೇ ಇಲ್ಲ. ಮೃತ್ಯುವಿನ ಭಯವಿದೆಯಲ್ಲವೆ. ಬಾಬಾ, ನಾವು ಜೀವಿಸಿದ್ದಂತೆಯೇ ತಮ್ಮಿಂದ ಆಸ್ತಿಯನ್ನು ಅವಶ್ಯವಾಗಿ ಪಡೆಯುತ್ತೇವೆ ಮತ್ತೆ ನೋಡಿಕೊಳ್ಳಬೇಕು – ಈ ದಿನ ನಾನು ಎಷ್ಟು ನೆನಪು ಮಾಡಿದೆನು? ಯಾವುದೇ ಪರಿಸ್ಥಿತಿಯಲ್ಲಿ ಅವಶ್ಯವಾಗಿ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಯುಕ್ತಿಯಿಂದ ನಡೆಯಬೇಕಾಗಿದೆ. ಹೀಗೆ ತೀವ್ರ ವೇಗದಿಂದ ಪುರುಷಾರ್ಥದಲ್ಲಿ ತೊಡಗಿದರೆ ನೆನಪೂ ಇರುವುದು ಮತ್ತು ಆಯಸ್ಸೂ ಹೆಚ್ಚುವುದು. ಭವಿಷ್ಯದಲ್ಲಿ ನಿಮ್ಮದು ಧೀರ್ಘಾಯಸ್ಸು ಆಗುವುದು, ನೆನಪು ಮಾಡದಿದ್ದರೆ ಪದವಿಯು ಕಡಿಮೆಯಾಗುವುದು. ಪುರುಷಾರ್ಥ ಮಾಡಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಲ್ಲವೆ ಮತ್ತು ಸ್ವದರ್ಶನ ಚಕ್ರಧಾರಿಗಳು ಆಗಬೇಕಾಗಿದೆ, ಹೇಗೆ ಹಿಂದೂಗಳನ್ನು ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಳ್ಳಲು ನನ್ಸ್ ಬಹಳ ತಿರುಗಾಡುತ್ತಿರುತ್ತಾರೆ. ಮನೆಗಳಿಗೆ, ಅಂಗಡಿಗಳಿಗೆ ಹೋಗುತ್ತಾರೆ. ಬೈಬಲ್ ತೆಗೆದುಕೊಳ್ಳಿ, ಇದನ್ನು ತೆಗೆದುಕೊಳ್ಳಿ, ನಮ್ಮ ಕ್ರಿಶ್ಚಿಯನ್ ಧರ್ಮದಲ್ಲಿ ಬಹಳ ಸುಖವಿದೆ ಎಂದು ಎಲ್ಲರಿಗೆ ಹೇಳುತ್ತಾರೆ. ಅವರದು ಸಂಘವಾಗಿದೆ. ಬೌದ್ಧಿಯರದೂ ಸಂಘವಾಗಿದೆ. ಇವರೇನು ಮಾಡುತ್ತಾರೆ, ನಮ್ಮ ಹಿಂದೂ ಧರ್ಮದವರನ್ನು ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಳ್ಳುತ್ತಾ ಇರುತ್ತಾರೆ ಎಂಬುದನ್ನು ಹಿಂದೂಗಳು ತಿಳಿದುಕೊಳ್ಳುವುದಿಲ್ಲ. ನೀವು ಪ್ರದರ್ಶನಿಯಲ್ಲಿ ಎಷ್ಟೊಂದು ತಿಳಿಸುತ್ತೀರಿ, ಭಲೆ ಅಭಿಪ್ರಾಯವನ್ನು ಬರೆದು ಕೊಡುತ್ತಾರೆ, ಮನೆಗೆ ಹೋದ ಮೇಲೆ ಸಮಾಪ್ತಿ. ಇದಕ್ಕಾಗಿ ಗಾಯನವಿದೆ – ಕೋತಿಗಳ ಮುಂದೆ ರತ್ನಗಳನ್ನು ಇಟ್ಟರೆ ಅವನ್ನು ಕಲ್ಲುಗಳೆಂದು ತಿಳಿದು ಎಸೆಯುತ್ತವೆ, ಇಲ್ಲಿಯೂ ಸಹ ಅವಿನಾಶಿ ಜ್ಞಾನರತ್ನಗಳನ್ನು ಕಲ್ಲುಗಳೆಂದು ತಿಳಿದು ಎಸೆಯುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರು ಈ ಧರ್ಮದವರಾಗಿರುವರೋ ಅವರಿಗೆ ಅರ್ಥವಾಗುವುದು. ಬಹಳ ಸಹಜ ಮಾತಾಗಿದೆ, ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ತಂದೆಯು ಭಾರತದಲ್ಲಿ ಒಂದೇ ಬಾರಿ ಬರುತ್ತಾರೆ.

ತಂದೆಯು ತಿಳಿಸುತ್ತಾರೆ – ನಾನು ಪತಿತ-ಪಾವನ ತಂದೆಯನ್ನು ನೀವು ಕರೆಯುತ್ತಾ ಬಂದಿದ್ದೀರಿ. ನಾನೀಗ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನಾವು ಈ ಭ್ರಷ್ಠಾಚಾರಿ ಪ್ರಪಂಚವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡಿಯೇ ತೀರುತ್ತೇವೆಂದು ನೀವು ಹೇಳುತ್ತೀರಿ. ಈಗಂತೂ ಎಲ್ಲರೂ ನರಕವಾಸಿಗಳಾಗಿದ್ದಾರೆ, ನೀವೀಗ ಶಿವ ತಂದೆಯ ಶ್ರೀಮತದ ಮೇಲೆ ಇದ್ದೀರಿ. ಶಿವಭಗವಾನುವಾಚ – ನಾನು ನಿಮ್ಮನ್ನು ಸ್ವರ್ಗದ ಮಾಲೀಕರು, ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಗೀತೆಯಲ್ಲಿ ಬಹಳ ಚೆನ್ನಾಗಿ ಬರೆಯಲ್ಪಟ್ಟಿದೆ, ತಿಳಿಸುತ್ತಾರೆ – ನಾನು ಈ ಸಾಧುಗಳ ಉದ್ಧಾರವನ್ನೂ ಮಾಡಲು ಬರುತ್ತೇನೆ. ಅಂದಮೇಲೆ ಇದನ್ನು ಅವರಿಗೂ ತಿಳಿಸಬೇಕಲ್ಲವೆ. ಪತಿತ-ಪಾವನ ಸೀತಾರಾಮ ಎಂದು ಕರೆಯುತ್ತಾರೆ. ಇದರ ಅರ್ಥವನ್ನೂ ತಿಳಿದುಕೊಂಡಿಲ್ಲ, ಎಲ್ಲರೂ ಭಕ್ತಿನಿಯರು ಅಥವಾ ಸೀತೆಯರಾಗಿದ್ದಾರೆ. ಹೇ ರಾಮ ಬಂದು ನಾವು ಸೀತೆಯರ ಉದ್ಧಾರವನ್ನು ಮಾಡಿ ಎಂದು ಕರೆಯುತ್ತಾರೆ ಮತ್ತೆ ರಘುಪತಿ ರಾಘವ ರಾಜಾ ರಾಮ…. ಎಂದು ಹಾಡುತ್ತಾರೆ. ವಾಸ್ತವದಲ್ಲಿ ರಾಜಾರಾಮನ ಮಾತಿಲ್ಲ, ಮುಖ್ಯ ತಪ್ಪು ಇದಾಗಿದೆ. ಶಿವನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಕೇಳಬೇಕು – ರಾಮ ಹಾಗೂ ಕೃಷ್ಣನನ್ನು ಕಪ್ಪಾಗಿ ಏಕೆ ತೋರಿಸಿದ್ದಾರೆ? ಸತ್ಯ-ತ್ರೇತಾಯುಗದಲ್ಲಿ ಸುಂದರರಾಗಿರುತ್ತಾರೆ ನಂತರ ಶ್ಯಾಮ ಅರ್ಥಾತ್ ಪತಿತರಾಗುತ್ತಾರೆ. ಮೊದಲು ಸತ್ಯಯುಗ ನಂತರ ತ್ರೇತಾ, ದ್ವಾಪರ, ಕಲಿಯುಗ. ಈ ಸಮಯದಲ್ಲಿ ಕಲಿಯುಗವಿದೆ, ಸತ್ಯಯುಗವಿದ್ದಾಗ ಎಷ್ಟೊಂದು ಮಾನ್ಯತೆಯಿತ್ತು ಆದ್ದರಿಂದ ಯುಕ್ತಿಯಿಂದ ಹೋಗಿ ತಿಳಿಸಬೇಕು – ಅವರು ಅಷ್ಟು ಬೇಗನೆ ತಮ್ಮ ಹಠವನ್ನು ಬಿಡುವುದಿಲ್ಲ. ವೃಕ್ಷದ ಆಯಸ್ಸು ಮುಗಿಯುತ್ತದೆ ಎಂದರೆ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ತಲುಪುತ್ತದೆ. ಈ ಪ್ರಪಂಚಕ್ಕೂ ಆಯಸ್ಸು ಇದೆಯಲ್ಲವೆ. ಹೊಸ ಪ್ರಪಂಚ, ಹಳೆಯ ಪ್ರಪಂಚ. ಹಳೆಯದು ಎಂದರೆ ಕಲಿಯುಗ, ತಮೋಪ್ರಧಾನ ಪ್ರಪಂಚ, ಇದರಲ್ಲಿ ಯಾರೊಬ್ಬರೂ ಸತೋಪ್ರಧಾನರಿರಲು ಸಾಧ್ಯವಿಲ್ಲ. ಈಗ ತಮೋಪ್ರಧಾನರು ಸಮಾಪ್ತಿಯಾಗಬೇಕಾಗಿದೆ. ಹೊಸ ಪ್ರಪಂಚವನ್ನು ಯಾರು ಸ್ಥಾಪನೆ ಮಾಡುತ್ತಾರೆ? ಅದೇ ತಂದೆ. ಪ್ರಳಯವಾಗುತ್ತದೆ ಎಂದಲ್ಲ, ಯಾವಾಗ ಪತಿತರಾಗುವರೋ ಆಗ ತಂದೆಯನ್ನು ಕರೆಯುತ್ತಾರೆ, ಬಂದು ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಹಳೆಯ ಪ್ರಪಂಚದಲ್ಲಿಯೇ ಬರುವರಲ್ಲವೆ. ಪತಿತ-ಪಾವನನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಅಂತ್ಯದಲ್ಲಿಯೇ ಬರುತ್ತಾರೆ. ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಪಾವನ ಪ್ರಪಂಚವನ್ನಾಗಿ ಮಾಡಲು ಬರುತ್ತೇನೆಂದು ಹೇಳುತ್ತಾರೆ. ಈಗ ಸಂಗಮವಾಗಿದೆ, ತಂದೆಯು ಎಲ್ಲರನ್ನೂ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇಂತಹ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ತಮ್ಮ ಸ್ಥಿತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಬೇಕು, ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ಇವು ಶರೀರದ ಕರ್ಮೇಂದ್ರಿಯಗಳಾಗಿವೆ. ತಂದೆಯು ತಿಳಿಸುತ್ತಾರೆ – ಹೇ ಮಕ್ಕಳೇ, ನಾನು ನಿಮಗೆ ಏನನ್ನು ತಿಳಿಸುತ್ತೇನೆಯೋ ಅದನ್ನೇ ಕೇಳಿರಿ. ಮುಕ್ತಿ-ಜೀವನ್ಮುಕ್ತಿಗಾಗಿ ಮತ್ತ್ಯಾರದೇ ಮಾತನ್ನು ಕೇಳಬೇಡಿ, ಪಾವನರನ್ನಾಗಿ ಮಾಡಲು ತಂದೆಯು ಪರಮಧಾಮದಿಂದ ಬಂದಿದ್ದಾರೆ ಅಂದಮೇಲೆ ನೀವು ಹಳೆಯ ಶಾಸ್ತ್ರಗಳನ್ನು ಏಕೆ ನೆನಪು ಮಾಡುತ್ತೀರಿ! ಭಗವಂತ ಸಿಗುವರೆಂದೇ ಭಕ್ತಿ ಮಾಡುತ್ತಾರೆ, ಅವರಂತೂ ಸದ್ಗತಿದಾತ ತಂದೆಯಾಗಿದ್ದಾರೆ. ತಂದೆಯ ವಿನಃ ಈ ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ, ಈ ಲಕ್ಷ್ಮೀ-ನಾರಾಯಣರಿಗೂ ಸಹ ಈ ರಾಜ್ಯವು ಹೇಗೆ ಸಿಕ್ಕಿತು? ಆತ್ಮದ ಬಗ್ಗೆ ಹೇಳುತ್ತಾರೆ – ಆತ್ಮವು ಬಿಂದುವಾಗಿದೆ, ಭೃಕುಟಿಯ ಮಧ್ಯದಲ್ಲಿ ನಕ್ಷತ್ರದಂತೆ ಹೊಳೆಯುತ್ತದೆ, ತಂದೆಯು ತಿಳಿಸುತ್ತಾರೆ – ನೀವು ನನಗೆ ಪರಮ ಆತ್ಮ ಎಂದು ಹೇಳುತ್ತೀರಿ. ಲೌಕಿಕ ತಂದೆಗೆ ಎಂದಾದರೂ ಪರಮಾತ್ಮನೆಂದು ಹೇಳುವರೇ? ಯಾರು ಪರಮಧಾಮದಲ್ಲಿ ಇರುತ್ತಾರೆಯೋ ಅವರಿಗೆ ಪರಮ ಆತ್ಮನೆಂದು ಹೇಳುತ್ತಾರೆ. ಅವರು ನಿಮ್ಮ ತಂದೆಯಾಗಿದ್ದಾರೆ, ಬಂದು ಈ ಶರೀರದಲ್ಲಿ ಪ್ರವೇಶ ಮಾಡುತ್ತಾರೆ. ಗುರುವು ಶಿಷ್ಯನ ಪಕ್ಕದಲ್ಲಿಯೇ ಕುಳಿತುಕೊಳ್ಳುವರಲ್ಲವೆ. ಈ ಮಾತು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ, ನೀವೀಗ ತಿಳಿದುಕೊಂಡಿದ್ದೀರಿ – ಅವರು ನಮ್ಮ ತಂದೆಯಾಗಿದ್ದಾರೆ. 5000 ವರ್ಷಗಳ ಮೊದಲೂ ಸಹ ತಂದೆಯು ಯೋಗವನ್ನು ಕಲಿಸಿದ್ದರು, ನನ್ನನ್ನು ನೆನಪು ಮಾಡಿರಿ ಮತ್ತು ವಿಷ್ಣುಪುರಿಯನ್ನು ನೆನಪು ಮಾಡಿರಿ ಎಂದು. ಅವಶ್ಯವಾಗಿ ಸಂಗಮದಲ್ಲಿಯೇ ಹೇಳುವರಲ್ಲವೆ! ಸತ್ಯಯುಗದಲ್ಲಿ ಒಂದು ಧರ್ಮವಿತ್ತು ಅಂದಮೇಲೆ ಅವಶ್ಯವಾಗಿ ಪುನಃ ಒಂದು ಧರ್ಮವಾಗುವುದಲ್ಲವೆ. ಇಷ್ಟೆಲ್ಲಾ ಧರ್ಮಗಳು ವಿನಾಶವಾಗುತ್ತವೆ, ಇದು ಅದೇ ಸಮಯವಾಗಿದೆ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನಾನು ನಿಮಗೆ ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ, ತಂದೆಯ ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ತಂದೆಯು ತಿಳಿಸುತ್ತಾರೆ – ಯಾವ ಮಕ್ಕಳು ಚೆನ್ನಾಗಿ ಸೇವೆ ಮಾಡುವರೋ ಅವರನ್ನೂ ನಾನು ನೆನಪು ಮಾಡುತ್ತೇನೆ ಏಕೆಂದರೆ ನನ್ನ ಸಹಯೋಗಿಗಳಾಗಿದ್ದಾರೆ, ಅನೇಕರ ಕಲ್ಯಾಣ ಮಾಡುತ್ತಾರೆ ಆದ್ದರಿಂದ ಅವರು ನನಗೆ ಪ್ರಿಯರೆನಿಸುತ್ತಾರೆ. ನಿಮಗಂತೂ ಒಬ್ಬ ತಂದೆಯೇ ಪ್ರಿಯವೆನಿಸುತ್ತಾರೆ, ಅವರಿಂದಲೇ ಆಸ್ತಿಯು ಸಿಗುತ್ತದೆ. ಆದ್ದರಿಂದ ನೀವು ಮಕ್ಕಳು ಚೆನ್ನಾಗಿ ಪುರುಷಾರ್ಥ ಮಾಡಬೇಕು, ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಬಹಳ ವ್ಯರ್ಥ ಸಂಕಲ್ಪಗಳು ಬರುತ್ತವೆ, ಭಕ್ತಿಮಾರ್ಗದಲ್ಲಿ ತಮ್ಮನ್ನು ಹೊಡೆದುಕೊಳ್ಳುತ್ತಾರೆ. ನಮಗೆ ಶಿವನ ದರ್ಶನವಾಗಬೇಕು ಎಂದು ದರ್ಶನಕ್ಕಾಗಿ ಬಹಳ ಪರಿಶ್ರಮ ಪಡುತ್ತಾರೆ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ, ತಂದೆಯ ನೆನಪಿನಿಂದ ಪಾಪಗಳು ಕಳೆಯುತ್ತವೆ ಮತ್ತು 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ದರ್ಶನವಾದರೆ ಯಾವುದೇ ಪಾಪವು ಕಳೆಯುವುದಿಲ್ಲ. ಯಾವ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ನಾವು ಏನಾಗುತ್ತಿದ್ದೇವೆ, ಇನ್ನೊಂದು ಜನ್ಮದಲ್ಲಿ ಹೋಗಿ ಏನಾಗುತ್ತೇವೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಇದು ಸತ್ಯಯುಗದ ರಾಜಕುಮಾರ-ಕುಮಾರಿಯರಾಗುವ ಕಾಲೇಜು ಆಗಿದೆ. ತಂದೆಯು ಬಂದು ಧರ್ಮದ ಜೊತೆಗೆ ದೈವೀ ರಾಜ್ಯವನ್ನೂ ಸ್ಥಾಪನೆ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯು ಮುಕ್ತಿ-ಜೀವನ್ಮುಕ್ತಿಗಾಗಿ ಏನೆಲ್ಲಾ ಜ್ಞಾನದ ಮಾತುಗಳನ್ನು ತಿಳಿಸಿದ್ದಾರೆಯೋ ಅದನ್ನೇ ಕೇಳಬೇಕು ಹಾಗೂ ಧಾರಣೆ ಮಾಡಿಕೊಳ್ಳಬೇಕಾಗಿದೆ. ಉಳಿದೆಲ್ಲವನ್ನೂ ಮರೆಯಬೇಕಾಗಿದೆ. ತನ್ನ ಮತ್ತು ತನ್ನ ಲೌಕಿಕ ಪರಿವಾರದವರ ಕಲ್ಯಾಣ ಮಾಡಬೇಕಾಗಿದೆ.

2. ವ್ಯರ್ಥ ಚಿಂತನೆಯನ್ನು ಸಮಾಪ್ತಿ ಮಾಡಲು ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ ತೊಡಗಿರಬೇಕಾಗಿದೆ.

ವರದಾನ:-

ಲೌಕಿಕ ರೀತಿಯಲ್ಲಿಯೂ ಯಾರು ಬುದ್ಧಿವಂತರಾಗಿರುತ್ತಾರೆಯೋ ಅವರು ಹಿಂದೆ-ಮುಂದೆ ಯೋಚಿಸಿ – ತಿಳಿದುಕೊಂಡು ಹೆಜ್ಜೆಯನ್ನು ಇಡುತ್ತಾರೆ. ಹಾಗೆಯೇ ಇಲ್ಲಿಯೂ ಸಹ ತಾವು ಮಕ್ಕಳು ಯಾವಾಗ ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ, ಮೊದಲು ಮೂರು ಕಾಲಗಳನ್ನು ಮುಂದಿಟ್ಟುಕೊಂಡು ನಂತರ ಕಾರ್ಯವನ್ನು ಮಾಡಿರಿ. ಆ ಸಮಯದಲ್ಲಿ ಕೇವಲ ವರ್ತಮಾನವನ್ನೇ ನೋಡಬಾರದು, ಬೇಹದ್ದಿನ ತಿಳುವಳಿಕೆಯನ್ನು ಧಾರಣೆ ಮಾಡಿರಿ ಹಾಗೂ ಪ್ರತಿಯೊಂದು ಕರ್ಮವನ್ನು ವಿಜಯಿಯಾಗುವ ನಿಶ್ಚಯದ ಆಧಾರದ ಮೇಲೆ ಅಥವಾ ತ್ರಿಕಾಲದರ್ಶಿ ಸ್ಥಿತಿಯ ಆಧಾರದ ಮೇಲೆ ಮಾಡಿರಿ ಅಥವಾ ಮಾತನಾಡಿರಿ. ಹೀಗಿದ್ದಾಗ ಅಲೌಕಿಕ ಅಥವಾ ಅಸಾಧಾರಣರೆಂದು ಹೇಳುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top