17 September 2021 KANNADA Murli Today | Brahma Kumaris

Read and Listen today’s Gyan Murli in Kannada

September 16, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ದೇಹಭಾನದಿಂದ ಸತ್ತು ಹೋಗಿರಿ ಅರ್ಥಾತ್ ಈ ಹಳೆಯ ಪತಿತ ದೇಹದೊಂದಿಗಿನ ಪ್ರೀತಿಯನ್ನು ತೆಗೆದು ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯನ್ನು ಇಡಿ”

ಪ್ರಶ್ನೆ:: -

ಸಂಗಮದಲ್ಲಿ ನೀವು ಮಕ್ಕಳ ಸ್ವಾಭಾವಿಕ ಸೌಂದರ್ಯ ಯಾವುದಾಗಿದೆ?

ಉತ್ತರ:-

ಜ್ಞಾನದ ರತ್ನಗಳಿಂದ ಅರ್ಥಾತ್ ಆಭರಣಗಳಿಂದ ಸದಾ ಶೃಂಗರಿತರಾಗಿರುವುದೇ ನಿಮ್ಮ ಸ್ವಾಭಾವಿಕ ಸೌಂದರ್ಯವಾಗಿದೆ. ಯಾರು ಜ್ಞಾನದ ಆಭರಣಗಳಿಂದ ಶೃಂಗರಿತರಾಗಿರುವರೋ ಅವರ ಚಹರೆಯು ಖುಷಿಯಲ್ಲಿ ಹೂವಿನ ತರಹ ಅರಳಿರುತ್ತದೆ, ಒಂದುವೇಳೆ ಖುಷಿಯಿರುವುದಿಲ್ಲ ಎಂದರೆ ಅವಶ್ಯವಾಗಿ ಯಾವುದೋ ದೇಹಾಭಿಮಾನದ ಹವ್ಯಾಸವಿದೆ. ಅದರಿಂದಲೇ ಎಲ್ಲಾ ವಿಕಾರಗಳು ಉತ್ಪನ್ನವಾಗುತ್ತವೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸಭೆಯಲ್ಲಿ ಜ್ಯೋತಿ ಬೆಳಗಿತು…..

ಓಂ ಶಾಂತಿ. ಈ ಗೀತೆಯ ಅರ್ಥವು ಎಷ್ಟು ವಿಚಿತ್ರವಾಗಿದೆ! ಏತಕ್ಕಾಗಿ ಪ್ರೀತಿಯುಂಟಾಗಿದೆ? (ಸಾಯುವುದಕ್ಕಾಗಿ) ಯಾರೊಂದಿಗೆ ಉಂಟಾಗಿದೆ? ಭಗವಂತನೊಂದಿಗೆ. ಏಕೆಂದರೆ ಈ ಪ್ರಪಂಚದಿಂದ ಸತ್ತು ಅವರ ಬಳಿ ಹೋಗಬೇಕಾಗಿದೆ. ಈ ರೀತಿ ಎಂದಾದರೂ ಯಾರ ಜೊತೆಯಾದರೂ ಪ್ರೀತಿಯುಂಟಾಗಿದೆಯೇ? ಯಾವುದರಿಂದ ನಾವು ಮರಣ ಹೊಂದುತ್ತೇವೆ ಎಂಬುದು ವಿಚಾರದಲ್ಲಿ ಬರುತ್ತದೆ! ಯಾರಿಗಾದರೂ ನಾವು ಮರಣ ಹೊಂದುತ್ತೇವೆ ಎಂದು ತಿಳಿದರೆ ಮತ್ತೆ ಪ್ರೀತಿಯನ್ನು ಇಡುವರೆ? ಗೀತೆಯ ಅರ್ಥವು ಎಷ್ಟು ಅದ್ಭುತವಾಗಿದೆ! ಪತಂಗವು ಜ್ಯೋತಿಯೊಂದಿಗೆ ಪ್ರೀತಿಯನ್ನಿಟ್ಟು ಅದನ್ನು ಸುತ್ತಿ-ಸುತ್ತಿ ಸುಟ್ಟು ಹೋಗುತ್ತದೆ. ನೀವೂ ಸಹ ತಂದೆಯ ಬಳಿ ಬರುತ್ತಾ-ಬರುತ್ತಾ ಈ ಶರೀರವನ್ನು ಬಿಡಬೇಕಾಗಿದೆ ಅರ್ಥಾತ್ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಶರೀರ ಬಿಡಬೇಕಾಗಿದೆ. ಇದಂತೂ ಹೇಗೆ ಬಹಳ ದೊಡ್ಡ ಶತ್ರುವಾಗಿದೆ, ಇದರ ಜೊತೆ ನಾವು ಪ್ರೀತಿಯನ್ನು ಇಟ್ಟೆವು ಮತ್ತು ಸತ್ತು ಹೋದೆವು ಆದ್ದರಿಂದ ಮನುಷ್ಯರು ಹೆದರುತ್ತಾರೆ, ದಾನ-ಪುಣ್ಯ, ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ – ಭಗವಂತನ ಬಳಿ ಹೋಗುವುದಕ್ಕಾಗಿ. ಶರೀರ ಬಿಡುವಾಗಲೂ ಭಗವಂತನನ್ನು ನೆನಪು ಮಾಡಿ ಎಂದು ಮನುಷ್ಯರು ಹೇಳುತ್ತಾರೆ. ಭಗವಂತನು ಎಷ್ಟು ಪ್ರಸಿದ್ಧವಾಗಿದ್ದಾರೆ, ಅವರು ಬರುತ್ತಾರೆಂದರೆ ಇಡೀ ಪ್ರಪಂಚವನ್ನು ಸಮಾಪ್ತಿ ಮಾಡಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ಹಳೆಯ ಪ್ರಪಂಚದಿಂದ ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿಯೇ ಈ ವಿಶ್ವ ವಿದ್ಯಾಲಯಕ್ಕೆ ಬರುತ್ತೇವೆ. ಹಳೆಯ ಪ್ರಪಂಚಕ್ಕೆ ಪತಿತ ಪ್ರಪಂಚ, ನರಕವೆಂದು ಹೇಳಲಾಗುತ್ತದೆ. ತಂದೆಯು ಹೊಸ ಪ್ರಪಂಚದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತಾರೆ – ಕೇವಲ ನನ್ನನ್ನು ನೆನಪು ಮಾಡಿರಿ, ನಾನು ಸ್ವರ್ಗದ ರಚಯಿತನಾಗಿದ್ದೇನೆ. ಆ ತಂದೆಯಿಂದ ನಿಮಗೆ ಹಣ, ಅಧಿಕಾರ, ಸಂಪತ್ತು ಎಲ್ಲವೂ ಸಿಗುವುದು. ವಾಸ್ತವದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯು ಸಿಗುವಂತಿಲ್ಲ. ಅವರನ್ನು ಇನ್ನೊಂದು ಮನೆಗೆ ಕಳುಹಿಸಿ ಬಿಡುತ್ತಾರೆ ಅಂದರೆ ಅವರು ವಾರಸುಧಾರರು ಆಗುವುದಿಲ್ಲ ಆದರೆ ಈ ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲರೂ ಇವರ ಬಳಿಯೇ ಬರಬೇಕಾಗಿದೆ, ಶರೀರವನ್ನು ಬಿಡಬೇಕಾಗಿದೆ. ಅವಶ್ಯವಾಗಿ ಯಾವುದೋ ಸಮಯದಲ್ಲಿ ಬರುತ್ತಾರೆ, ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗುತ್ತಾರೆ ಏಕೆಂದರೆ ಹೊಸ ಪ್ರಪಂಚದಲ್ಲಿ ಬಹಳ ಕೆಲವರೇ ಮನುಷ್ಯರು ಇರುತ್ತಾರೆ. ಹಳೆಯ ಪ್ರಪಂಚದಲ್ಲಿ ಅನೇಕರಿದ್ದಾರೆ, ಹೊಸ ಪ್ರಪಂಚದಲ್ಲಿ ಮನುಷ್ಯರೂ ಕಡಿಮೆ ಮತ್ತು ಬಹಳ ಸುಖ ಇರುತ್ತದೆ. ಹಳೆಯ ಪ್ರಪಂಚದಲ್ಲಿ ಹೆಚ್ಚು ಜನಸಂಖ್ಯೆಯಿರುವ ಕಾರಣ ಹೆಚ್ಚು ದುಃಖವೂ ಇದೆ ಆದ್ದರಿಂದಲೇ ಕರೆಯುತ್ತಾ ಇರುತ್ತಾರೆ. ಬಾಪೂಜಿ ಯಾರನ್ನು ಭಾರತದ ಪಿತಾಮಹ ಎಂದು ತಿಳಿಯುತ್ತಿದ್ದರೋ ಅವರೂ ಸಹ ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಿದ್ದರೋ ಅವರೂ ಸಹ ತಂದೆಯನ್ನು ತಿಳಿದುಕೊಂಡಿರಲಿಲ್ಲ. ಪತಿತ-ಪಾವನ ಪರಮಪಿತ ಪರಮಾತ್ಮನಾಗಿದ್ದಾರೆಂದು ತಿಳಿದುಕೊಳ್ಳುತ್ತಾರೆ, ಅವರೇ ವಿಶ್ವದ ಮುಕ್ತಿದಾತನಾಗಿದ್ದಾರೆ. ರಾಮ-ಸೀತೆಯನ್ನು ಇಡೀ ಪ್ರಪಂಚದವರು ಒಪ್ಪುವುದಿಲ್ಲ ಅಲ್ಲವೆ! ಇದು ತಪ್ಪಾಗಿದೆ. ಇಡೀ ಪ್ರಪಂಚವು ಪರಮಪಿತ ಪರಮಾತ್ಮನನ್ನೇ ಮುಕ್ತಿದಾತ, ಮಾರ್ಗದರ್ಶಕನೆಂದು ಒಪ್ಪುತ್ತದೆ. ತಂದೆಯೇ ದುಃಖದಿಂದ ಬಿಡಿಸುತ್ತಾರೆ ಅಂದಮೇಲೆ ದುಃಖವನ್ನು ಕೊಡುವವರು ಯಾರು? ತಂದೆಯಂತೂ ದುಃಖವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಅವರು ಪತಿತ-ಪಾವನನಾಗಿದ್ದಾರೆ. ಪಾವನ ಪ್ರಪಂಚ, ಸುಖಧಾಮದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ, ನೀವು ಆ ಆತ್ಮಿಕ ತಂದೆಯ ಆತ್ಮಿಕ ಮಕ್ಕಳಾಗಿದ್ದೀರಿ. ಎಂತಹ ತಂದೆಯೋ ಅಂತಹ ಮಕ್ಕಳು. ಲೌಕಿಕ ತಂದೆಗೆ ಲೌಕಿಕ ಮಕ್ಕಳಿರುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಳ್ಳಬೇಕಾಗಿದೆ – ನಾವು ಆತ್ಮರಾಗಿದ್ದೇವೆ, ಪರಮಪಿತ ಪರಮಾತ್ಮನು ನಮಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನಾವು ವಿದ್ಯಾರ್ಥಿಗಳಾಗಿದ್ದೇವೆ, ಇದನ್ನು ಮರೆಯಬಾರದು. ಮಕ್ಕಳ ಬುದ್ಧಿಯಲ್ಲಿರುತ್ತದೆ, ಶಿವ ತಂದೆಯು ಮಧುಬನದಲ್ಲಿ ಮುರುಳಿಯನ್ನು ನುಡಿಸುತ್ತಾರೆ, ಆ ಕಟ್ಟಿಗೆಯ ಮುರುಳಿಯಂತೂ ಇಲ್ಲಿ ಇಲ್ಲ. ಕೃಷ್ಣನು ನೃತ್ಯ ಮಾಡುವುದು, ಮುರುಳಿಯನ್ನು ಊದುವುದು ಭಕ್ತಿಮಾರ್ಗದ್ದಾಗಿದೆ. ನೀವು ಕೃಷ್ಣನ ಮುರುಳಿ ಎಂದು ಹೇಳುವುದಿಲ್ಲ, ಶಿವ ತಂದೆಯು ಮುರುಳಿಯನ್ನು ನುಡಿಸುತ್ತಾರೆ. ನಿಮ್ಮ ಬಳಿ ಒಳ್ಳೊಳ್ಳೆಯ ಗೀತೆಗಳನ್ನು ಹಾಡುವವರು ಬರುತ್ತಾರೆ, ಬಹುತೇಕವಾಗಿ ಪುರುಷರೇ ಹಾಡುತ್ತಾರೆ. ನೀವು ಯಾವುದೇ ಭಕ್ತಿಮಾರ್ಗದ ಹಾಡನ್ನು ಹಾಡುವುದಲ್ಲ, ನೀವು ಒಬ್ಬ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ಶಿವನಿಗೆ ಬಿಂದುವೆಂದು ಹೇಳುತ್ತಾರೆ. ವ್ಯಾಪಾರಿಗಳು ಬಿಂದುವನ್ನು (0) ಬರೆಯುವಾಗ ಶಿವ ಎಂದು ಹೇಳುತ್ತಾರೆ. ಒಂದು ಬಿಂದು (0) ವನ್ನಿಟ್ಟರೆ 10 ಆಗುವುದು ಮತ್ತೆ ಇನ್ನೊಂದು ಬಿಂದುವನ್ನಿಟ್ಟರೆ 100…… ನೀವೂ ಸಹ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಶಿವ ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಅರ್ಧ ಕಲ್ಪಕ್ಕಾಗಿ ಬಹಳ ಸಾಹುಕಾರರು ಆಗುತ್ತೀರಿ. ಅಲ್ಲಿ ಬಡವರಿರುವುದೇ ಇಲ್ಲ, ಎಲ್ಲರೂ ಸುಖಿಯಾಗಿರುತ್ತಾರೆ. ದುಃಖದ ಹೆಸರು ಇರುವುದಿಲ್ಲ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ನೀವು ಬಹಳ ಧನವಂತರಾಗುತ್ತೀರಿ, ಇದಕ್ಕೆ ಸತ್ಯ ತಂದೆಯ ಮೂಲಕ ಸತ್ಯ ಸಂಪಾದನೆಯೆಂದು ಹೇಳಲಾಗುತ್ತದೆ. ಇದೇ ಜೊತೆ ಬರುತ್ತದೆ. ಮನುಷ್ಯರೆಲ್ಲರೂ ಖಾಲಿ ಕೈಯಲ್ಲಿ ಹೋಗುತ್ತಾರೆ, ನೀವು ತುಂಬಿದ ಕೈಯಲ್ಲಿ ಹೋಗುತ್ತಾರೆ. ತಂದೆಯನ್ನು ನೆನಪು ಮಾಡಬೇಕು ಮತ್ತು ಪವಿತ್ರರಾಗಬೇಕಾಗಿದೆ. ತಂದೆಯು ತಿಳಿಸಿದ್ದಾರೆ – ಪವಿತ್ರತೆಯಿದ್ದರೆ ಸುಖ-ಶಾಂತಿ ಸಿಗುವುದು, ಮೊದಲು ನೀವಾತ್ಮರು ಪವಿತ್ರರಾಗಿದ್ದಿರಿ ನಂತರ ಅಪವಿತ್ರರಾಗುತ್ತೀರಿ. ಸನ್ಯಾಸಿಗಳಿಗೂ ಸಹ ಅರ್ಧ ಪವಿತ್ರರೆಂದು ಹೇಳುತ್ತಾರೆ. ನಿಮ್ಮದು ಪೂರ್ಣ ಸನ್ಯಾಸವಾಗಿದೆ. ನೀವು ತಿಳಿದುಕೊಂಡಿದ್ದೀರಿ – ಅವರು ಸುಖವನ್ನು ಪಡೆಯುತ್ತಾರೆ ಎಂದು. ಸ್ವಲ್ಪ ಸುಖವಿರುತ್ತದೆ ಮತ್ತೆ ದುಃಖವೇ ದುಃಖ ಸಿಗುತ್ತದೆ. ಅದೆಲ್ಲವೂ ಭಕ್ತಿಮಾರ್ಗವಾಗಿದೆ. ಭಕ್ತಿಮಾರ್ಗದಲ್ಲಿ ಹನುಮಂತನ ಪೂಜೆ ಮಾಡಿದರೆ ಹನುಮಂತನ ಸಾಕ್ಷಾತ್ಕಾರ ಆಗಿ ಬಿಡುತ್ತದೆ. ಚಂಡಿಕಾ ದೇವಿಯದು ಎಷ್ಟೊಂದು ಮೇಳವಾಗುತ್ತದೆ! ಅವರದು ಚಿತ್ರವೂ ಇರುತ್ತದೆ. ಅವರ ಧ್ಯಾನ ಮಾಡಿದರೆ ಅವರಂತೂ ಸನ್ಮುಖದಲ್ಲಿ ಬಂದೇ ಬರುತ್ತಾರೆ ಆದರೆ ಅದರಿಂದ ಏನು ಸಿಗುವುದು? ಅನೇಕ ಪ್ರಕಾರದ ಮೇಳಗಳಾಗುತ್ತವೆ ಏಕೆಂದರೆ ಸಂಪಾದನೆಯಂತೂ ಆಗುತ್ತದೆಯಲ್ಲವೆ. ಇದೆಲ್ಲವೂ ಅವರ ವ್ಯಾಪಾರವಾಗಿದೆ, ನರನಿಂದ ನಾರಾಯಣನನ್ನಾಗಿ ಮಾಡುವ ವ್ಯಾಪಾರವನ್ನು ಬಿಟ್ಟರೆ ಮತ್ತೆಲ್ಲಾ ವ್ಯಾಪಾರಗಳಲ್ಲಿ ನಷ್ಟವೇ ಇದೆ ಎಂದು ಹೇಳಲಾಗುತ್ತದೆ. ಈ ವ್ಯಾಪಾರವನ್ನು ಕೆಲವರೇ ವಿರಳ ಮಾಡುತ್ತಾರೆ. ತಂದೆಯ ಮಕ್ಕಳಾಗಿ ಎಲ್ಲವನ್ನೂ ದೇಹ ಸಹಿತವಾಗಿ ತಂದೆಗೆ ಕೊಟ್ಟು ಬಿಡಬೇಕು ಏಕೆಂದರೆ ನೀವು ತಿಳಿದುಕೊಂಡಿದ್ದೀರಿ – ನಮಗೆ ಹೊಸ ಶರೀರ ಬೇಕು. ತಂದೆಯು ಹೇಳುತ್ತಾರೆ – ಮಕ್ಕಳೇ, ನೀವು ಕೃಷ್ಣ ಪುರಿಯಲ್ಲಿ ಹೋಗಬಲ್ಲಿರಿ ಆದರೆ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾದಾಗ ಮಾತ್ರ. ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಕೃಷ್ಣ ಪುರಿಯಲ್ಲಿ ಯಾರೂ ಕರೆಯುವುದಿಲ್ಲ, ಇಲ್ಲಿ ಎಲ್ಲಾ ಮನುಷ್ಯ ಮಾತ್ರರು ಹೇ ಮುಕ್ತಿದಾತ ಬನ್ನಿ, ಈ ಪಾಪಾತ್ಮರ ಪ್ರಪಂಚದಿಂದ ನಮ್ಮನ್ನು ಮುಕ್ತಗೊಳಿಸಿ ಎಂದು ಕರೆಯುತ್ತಾರೆ. ಆ ತಂದೆಯು ನಮ್ಮನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆಂದು ನೀವೀಗ ತಿಳಿದುಕೊಂಡಿದ್ದೀರಿ, ಅಲ್ಲಿಗೆ ಹೋಗುವುದಂತೂ ಒಳ್ಳೆಯದೇ ಅಲ್ಲವೆ. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ ಆದರೆ ಯಾವುದಕ್ಕೆ ಶಾಂತಿ ಎಂದು ಹೇಳುತ್ತಾರೆ ಅವರಿಗೆ ತಿಳಿದೇ ಇಲ್ಲ. ಯಾವುದೇ ಕರ್ಮ ಅರ್ಥಾತ್ ಕಾರ್ಯ ಮಾಡದೇ ಇರಲು ಸಾಧ್ಯವೇ ಇಲ್ಲ. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿರುತ್ತದೆ. ಈ ಶರೀರವನ್ನು ತೆಗೆದುಕೊಂಡು ಕರ್ಮವನ್ನು ಮಾಡಲೇಬೇಕಾಗಿದೆ. ಸತ್ಯಯುಗದಲ್ಲಿ ಕರ್ಮ ಮಾಡುತ್ತಲೂ ಶಾಂತವಾಗಿರುತ್ತಾರೆ. ಮನುಷ್ಯರಿಗೆ ಅಶಾಂತಿಯಲ್ಲಿ ದುಃಖವಾಗುತ್ತದೆ ಆದ್ದರಿಂದ ಶಾಂತಿಯು ಹೇಗೆ ಸಿಗುವುದು ಎಂದು ಕೇಳುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ಶಾಂತಿಧಾಮವು ನಮ್ಮ ಮನೆಯಾಗಿದೆ. ಸತ್ಯಯುಗದಲ್ಲಿ ಸುಖ-ಶಾಂತಿ ಎಲ್ಲವೂ ಇರುತ್ತದೆ ಅಂದಮೇಲೆ ಈಗ ಅದು ಬೇಕೋ ಅಥವಾ ಕೇವಲ ಶಾಂತಿ ಬೇಕೋ? ಇಲ್ಲಂತೂ ದುಃಖವಿದೆ ಆದ್ದರಿಂದ ಪತಿತ-ಪಾವನ ತಂದೆಯನ್ನೂ ಇಲ್ಲಿಯೇ ಕರೆಯುತ್ತಾರೆ. ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿಯೇ ಭಕ್ತಿ ಮಾಡುತ್ತಾರೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಾಗಿರುತ್ತದೆ ನಂತರ ವ್ಯಭಿಚಾರಿಯಾಗುತ್ತದೆ. ವ್ಯಭಿಚಾರಿ ಭಕ್ತಿಯಲ್ಲಿ ನೋಡಿ ಏನೇನು ಮಾಡುತ್ತಾರೆ? ಏಣಿಯಲ್ಲಿ ಎಷ್ಟು ಚೆನ್ನಾಗಿ ತೋರಿಸಿದ್ದಾರೆ ಆದರೆ ಮೊಟ್ಟ ಮೊದಲು ಸಿದ್ಧ ಮಾಡಬೇಕು – ಭಗವಂತ ಯಾರು? ಶ್ರೀಕೃಷ್ಣನನ್ನು ಈ ರೀತಿ ಮಾಡಿದವರು ಯಾರು? ಹಿಂದಿನ ಜನ್ಮದಲ್ಲಿ ಇವರು ಏನಾಗಿದ್ದರು? ತಿಳಿಸುವುದಕ್ಕಾಗಿಯೂ ಬಹಳ ಯುಕ್ತಿ ಬೇಕು. ಯಾರು ಚೆನ್ನಾಗಿ ಸರ್ವೀಸ್ ಮಾಡುವರೋ ಅವರ ಹೃದಯವೂ ಸಾಕ್ಷಿ ನೀಡುತ್ತದೆ, ಯುನಿವರ್ಸಿಟಿಯಲ್ಲಿ ಯಾರು ಚೆನ್ನಾಗಿ ಓದುವರೋ ಅವರು ಅವಶ್ಯವಾಗಿ ಮುಂದೆ ಹೋಗುತ್ತಾರೆ. ನಂಬರ್ವಾರ್ ಇದ್ದೇ ಇರುತ್ತಾರೆ. ಕೆಲವರು ಮಂಧ ಬುದ್ಧಿಯವರೂ ಇರುತ್ತಾರೆ. ನನ್ನ ಬುದ್ಧಿಯ ಬೀಗವನ್ನು ತೆರೆಯಿರಿ ಎಂದು ಆತ್ಮವು ಶಿವ ತಂದೆಗೆ ಹೇಳುತ್ತದೆ. ತಂದೆಯು ಹೇಳುತ್ತಾರೆ – ಬುದ್ಧಿಯ ಬೀಗವನ್ನು ತೆರೆಯುವುದಕ್ಕಾಗಿಯೇ ಬಂದಿದ್ದೇನೆ ಆದರೆ ನಿಮ್ಮ ಕರ್ಮವೇ ಆ ರೀತಿಯಿದೆ, ಎಷ್ಟು ತೆಗೆದರೂ ಬೀಗವು ತೆರೆಯುವುದೇ ಇಲ್ಲ ಅಂದಮೇಲೆ ತಂದೆಯೇನು ಮಾಡುವರು! ಬಹಳ ಪಾಪಗಳನ್ನು ಮಾಡಿದ್ದಾರೆ ಅಂದಮೇಲೆ ಅಂತಹವರಿಗೆ ತಂದೆಯೇನು ಮಾಡುವರು! ನಾವು ಕಡಿಮೆ ಓದುತ್ತೇವೆಂದು ಶಿಕ್ಷಕರಿಗೆ ಹೇಳಿದರೆ ಶಿಕ್ಷಕರು ಏನು ಮಾಡುವರು? ಶಿಕ್ಷಕರು ಯಾವುದೇ ಕೃಪೆ ತೋರುವುದಿಲ್ಲ. ಭಲೆ ಅಧಿಕ ಸಮಯವನ್ನು ಕೊಡುತ್ತಾರೆ. ಅದನ್ನು ನಿಮಗೆ ನಿರಾಕರಿಸುವುದಿಲ್ಲ. ಪ್ರದರ್ಶನಿಯು ಖಾಲಿಯಾಗಿರುತ್ತದೆ, ಅಲ್ಲಿ ಕುಳಿತು ಅಭ್ಯಾಸ ಮಾಡಿರಿ. ಭಕ್ತಿಮಾರ್ಗದಲ್ಲಂತೂ ಕೆಲವರು ಮಾಲೆಯನ್ನು ಜಪಿಸಿ ಎಂದು ಹೇಳುತ್ತಾರೆ, ಇನ್ನೂ ಕೆಲವರು ಈ ಮಂತ್ರವನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಇಲ್ಲಂತೂ ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ. ತಂದೆಯನ್ನೇ ನೆನಪು ಮಾಡಬೇಕಾಗಿದೆ, ಅವರಿಂದ ಆಸ್ತಿ ಸಿಗುತ್ತದೆ. ಸತ್ಯಯುಗದಲ್ಲಿ ಪಾರಲೌಕಿಕ ತಂದೆಯ ಆಸ್ತಿಯು ಪ್ರಾಪ್ತಿಯಾದ ಮೇಲೆ ಅವರನ್ನು ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ. 21 ಜನ್ಮಗಳಿಗಾಗಿ ಆಸ್ತಿ ಸಿಗುತ್ತದೆ ಅಂದಮೇಲೆ ತಂದೆಯಿಂದ ಚೆನ್ನಾಗಿ ಆಸ್ತಿಯನ್ನು ತೆಗೆದುಕೊಳ್ಳಬೇಕಲ್ಲವೆ. ಇದರಲ್ಲಿಯೂ ತಂದೆಯು ಹೇಳುತ್ತಾರೆ – ವಿಕಾರದಲ್ಲಿ ಎಂದೂ ಹೋಗಬಾರದು, ವಿಕಾರದ ಸ್ವಲ್ಪ ರುಚಿ ಸಿಕ್ಕಿದರೂ ಅದು ವೃದ್ಧಿಯಾಗಿ ಬಿಡುವುದು. ಹೇಗೆ ಸಿಗರೇಟ್ ಸೇದುವ ರುಚಿಯು ಒಂದು ಬಾರಿ ಹತ್ತಿದರೆ ಸಾಕು ಸಂಗದ ರಂಗು ಬಹಳ ಬೇಗನೆ ನಾಟುತ್ತದೆ ಮತ್ತೆ ಆ ಹವ್ಯಾಸವನ್ನು ಬಿಡುವುದೇ ಕಷ್ಟವಾಗುತ್ತದೆ. ಎಷ್ಟೊಂದು ನೆಪ ಹೇಳುತ್ತಾರೆ ಆದ್ದರಿಂದ ಯಾವುದೇ ಹವ್ಯಾಸ ಮಾಡಿಕೊಳ್ಳಬಾರದು, ಕೆಟ್ಟ ಚಟಗಳನ್ನು ಬಿಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಜೀವಿಸಿದ್ದಂತೆಯೇ ದೇಹಭಾನವನ್ನು ಕಳೆಯಿರಿ, ನನ್ನನ್ನು ನೆನಪು ಮಾಡಿರಿ. ದೇವತೆಗಳಿಗೆ ಸದಾ ಪವಿತ್ರ ಆಹಾರವನ್ನೇ ನೈವೇದ್ಯವನ್ನು ಇಡಲಾಗುತ್ತದೆ ಅಂದಮೇಲೆ ನೀವೂ ಸಹ ಪವಿತ್ರ ಭೋಜನವನ್ನು ಸೇವಿಸಿರಿ.

ಈಗ ನೀವು ಮಕ್ಕಳು ಹೂವಿನಂತೆ ಹರ್ಷಿತವಾಗಿರಬೇಕು. ಕನ್ಯೆಗೆ ಪತಿ ಸಿಕ್ಕಿದಾಗ ಮುಖವು ಅರಳುತ್ತದೆಯಲ್ಲವೆ. ಒಳ್ಳೆಯ ಆಭರಣಗಳು, ವಸ್ತ್ರಗಳು ಇತ್ಯಾದಿಯನ್ನು ಧರಿಸುತ್ತಾಳೆಂದರೆ ಮಿಂಚುತ್ತಾಳೆ. ಈಗ ನೀವಂತೂ ಜ್ಞಾನ ರತ್ನಗಳನ್ನು ಧರಿಸುತ್ತೀರಿ, ಸ್ವರ್ಗದಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ. ಕೃಷ್ಣನ ಹೆಸರೇ ಆಗಿದೆ, ಸುಂದರ. ರಾಜಾ-ರಾಣಿ, ರಾಜಕುಮಾರ-ರಾಜಕುಮಾರಿ ಎಲ್ಲರೂ ಸುಂದರರಾಗಿರುತ್ತಾರೆ. ಅಲ್ಲಿ ಪ್ರಕೃತಿಯೂ ಸತೋಪ್ರಧಾನವಾಗಿ ಬಿಡುತ್ತದೆ. ಲಕ್ಷ್ಮೀ-ನಾರಾಯಣರಂತಹ ಸ್ವಾಭಾವಿಕ ಸೌಂದರ್ಯವಂತರನ್ನಾಗಿ ಇಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ. ಅವರನ್ನು ಯಾರಾದರೂ ಈ ಕಣ್ಣುಗಳಿಂದ ನೋಡಲು ಸಾಧ್ಯವೇ? ಹಾ! ಸಾಕ್ಷಾತ್ಕಾರವಾಗುತ್ತದೆ ಆದರೆ ಸಾಕ್ಷಾತ್ಕಾರದಿಂದ ಅದೇ ತರಹದ ಚಿತ್ರವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ಹಾ! ಯಾವುದೇ ಕಲಾಕಾರನಿಗೆ ಸಾಕ್ಷಾತ್ಕಾರವಾಗಿ ಮತ್ತೆ ಅದೇ ಸಮಯದಲ್ಲಿ ಕುಳಿತು ಚಿತ್ರವನ್ನು ಬಿಡಿಸಬಹುದು ಆದರೂ ಕಷ್ಟವಾಗುತ್ತದೆ ಅಂದಾಗ ನೀವು ಮಕ್ಕಳಿಗೆ ಬಹಳ ನಶೆಯಿರಬೇಕು – ಈಗ ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ, ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗುತ್ತದೆ. ಈ ನಮ್ಮ 84 ಜನ್ಮಗಳು ಪೂರ್ಣವಾಯಿತು, ಇಂತಹ ವಿಚಾರಗಳು ಬುದ್ಧಿಯಲ್ಲಿದ್ದಾಗ ಖುಷಿಯಿರುವುದು. ವಿಕಾರದ ಸಂಕಲ್ಪವೂ ಬರಬಾರದು. ತಂದೆಯು ತಿಳಿಸುತ್ತಾರೆ – ಕಾಮ ಮಹಾಶತ್ರುವಾಗಿದೆ ಆದ್ದರಿಂದ ದ್ರೌಪದಿಯೂ ಕರೆದಳಲ್ಲವೆ.

ತಂದೆಯು ತಿಳಿಸುತ್ತಾರೆ – ನೀವು ನನ್ನೊಬ್ಬನಿಂದಲೇ ಕೇಳಿರಿ, ಮತ್ತು ಇದೇ ಶ್ರೀಮತವನ್ನು ಅನ್ಯರಿಗೆ ತಿಳಿಸಿರಿ. ತಂದೆಯು ಮಕ್ಕಳನ್ನು ಪ್ರತ್ಯಕ್ಷ ಮಾಡುವರು. ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುವರು. ತಂದೆ ಯಾರು? ಶಿವ ತಂದೆ. ಶಿವ ಮತ್ತು ಸಾಲಿಗ್ರಾಮಗಳ ಗಾಯನವಿದೆ. ಶಿವ ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಅನುಸರಿಸಿರಿ. ಫಾಲೋ ಫಾದರ್. ಈ ಗಾಯನವು ಅವರದೇ ಆಗಿದೆ. ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ನನ್ನನ್ನು ಫಾಲೋ ಮಾಡಿ, ಪವಿತ್ರರಾಗಿರಿ. ಫಾಲೋ ಮಾಡುವುದರಿಂದಲೇ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಲೌಕಿಕ ತಂದೆಯನ್ನು ಫಾಲೋ ಮಾಡುವುದರಿಂದ 63 ಜನ್ಮಗಳಿಂದ ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಈಗ ಪಾರಲೌಕಿಕ ತಂದೆಯನ್ನು ಫಾಲೋ ಮಾಡಿ ಮೇಲೇರಬೇಕಾಗಿದೆ, ತಂದೆಯ ಜೊತೆ ಹೋಗಬೇಕಾಗಿದೆ. ಒಂದೊಂದು ರತ್ನವೂ ಲಕ್ಷಾಂತರ ರೂಪಾಯಿಗಳು ಬೆಲೆ ಬಾಳುವಂತದ್ದಾಗಿದೆ. ತಂದೆಯು ನಿತ್ಯವೂ ತಿಳಿಸುತ್ತಾ ಇರುತ್ತಾರೆ – ಮಧುರಾತಿ ಮಧುರ ಮಕ್ಕಳೇ, ಮೊಟ್ಟ ಮೊದಲು ಎಲ್ಲರಿಗೆ ಇಬ್ಬರು ತಂದೆಯರ ಪರಿಚಯ ಕೊಡಬೇಕಾಗಿದೆ. ಲೌಕಿಕ ತಂದೆಯು ಪತಿತರಾಗುವ ಆಸ್ತಿಯನ್ನು ಕೊಡುತ್ತಾರೆ, ಪಾರಲೌಕಿಕ ತಂದೆಯು ಪಾವನರಾಗುವ ಆಸ್ತಿಯನ್ನು ಕೊಡುತ್ತಾರೆ. ಎಷ್ಟೊಂದು ಅಂತರವಿದೆ! ಈಗ ಪಾರಲೌಕಿಕ ತಂದೆಯು ಹೇಳುತ್ತಾರೆ – ಮಕ್ಕಳೇ, ಪಾವನರಾಗಿರಿ. ವಿಕಾರದಲ್ಲಿ ಹೋಗುವವರಿಗೆ ಪತಿತರೆಂದು ಹೇಳಲಾಗುತ್ತದೆ.

ನಿಮ್ಮದು ಪತಿತರಿಂದ ಪಾವನರನ್ನಾಗಿ ಮಾಡುವ, ಮಾರ್ಗ ತಿಳಿಸುವ ಸಂಸ್ಥೆಯಾಗಿದೆ. ಪಾರಲೌಕಿಕ ತಂದೆಯು ಈಗ ತಿಳಿಸುತ್ತಾರೆ – ಪಾವನರಾಗಿ, ಈಗ ವಿನಾಶವು ಸನ್ಮುಖದಲ್ಲಿ ನಿಂತಿದೆ ಅಂದಮೇಲೆ ಈಗ ಏನು ಮಾಡಬೇಕು? ಅವಶ್ಯವಾಗಿ ಪಾರಲೌಕಿಕ ತಂದೆಯ ಮತದಂತೆ ನಡೆಯಬೇಕಲ್ಲವೆ. ಪ್ರದರ್ಶನಿಯಲ್ಲಿ ಈ ಪ್ರತಿಜ್ಞೆಯನ್ನೂ ಬರೆಸಿಕೊಳ್ಳಬೇಕು – ಪಾರಲೌಕಿಕ ತಂದೆಯನ್ನು ಫಾಲೋ ಮಾಡುತ್ತೀರಾ? ಪತಿತರಾಗುವುದನ್ನು ಬಿಡುತ್ತೀರಾ? ಹಾಗಾದರೆ ಬರೆಯಿರಿ. ತಂದೆಯೇ ಗ್ಯಾರಂಟಿ ತೆಗೆದುಕೊಳ್ಳುತ್ತಾರೆ, ನೀವೂ ಸಹ ಗ್ಯಾರಂಟಿಯನ್ನು ತೆಗೆದುಕೊಳ್ಳಬಹುದು. ನೀವು ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ ಅಂದಮೇಲೆ ಪತಿತರಾಗುವುದಾದರೂ ಏಕೆ? ಎಲ್ಲವೂ ಪವಿತ್ರತೆಯ ಮೇಲಿದೆ. ನೀವು ಮಕ್ಕಳಿಗೆ ದಿನ-ಪ್ರತಿದಿನ ಖುಷಿಯಿರಬೇಕು – ನಮಗೆ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಯಾವುದೇ ಕೆಟ್ಟ ಹವ್ಯಾಸಗಳನ್ನು ಮಾಡಿಕೊಳ್ಳಬಾರದು. ಜೀವಿಸಿದ್ದಂತೆಯೇ ದೇಹಭಾನವನ್ನು ಕಳೆಯಬೇಕಾಗಿದೆ. ಹೂವಿನಂತೆ ಹರ್ಷಿತರಾಗಿರಬೇಕಾಗಿದೆ.

2. ಪಾರಲೌಕಿಕ ತಂದೆಯನ್ನು ಫಾಲೋ ಮಾಡಿ ಪಾವನರಾಗಬೇಕು. ಅವರ ಶ್ರೀಮತದಂತೆ ನಡೆಯುವ ಪ್ರತಿಜ್ಞೆ ಮಾಡಬೇಕು ಮತ್ತು ಮಾಡಿಸಬೇಕಾಗಿದೆ.

ವರದಾನ:-

ಯಾರು ಸದಾ ತನ್ನ ಶ್ರೇಷ್ಠ ವೃತ್ತಿಯಲ್ಲಿ ಸ್ಥಿತರಾಗಿರುತ್ತಾರೆಯೋ ಅವರೆಂದಿಗೂ ವಾಯುಮಂಡಲ, ಪ್ರಕಂಪನಗಳಲ್ಲಿ ಏರುಪೇರಾಗಲು ಸಾಧ್ಯವಿಲ್ಲ. ವೃತ್ತಿಯಿಂದಲೇ ವಾಯುಮಂಡಲವಾಗುತ್ತದೆ, ಒಂದುವೇಳೆ ತಮ್ಮ ವೃತ್ತಿಯು ಶ್ರೇಷ್ಠವಾಗಿದ್ದರೆ ವಾಯುಮಂಡಲವು ಶುದ್ಧವಾಗಿ ಬಿಡುತ್ತದೆ. ಕೆಲವರು ವರ್ಣನೆ ಮಾಡುತ್ತಾರೆ – ಏನು ಮಾಡಲಿ ವಾಯುಮಂಡಲವೇ ಹಾಗಿತ್ತು, ವಾಯುಮಂಡಲದ ಕಾರಣದಿಂದ ವೃತ್ತಿ ಚಂಚಲವಾಯಿತು. ಹಾಗಾದರೆ ಅಂತಹ ಸಮಯದಲ್ಲಿ ಶಕ್ತಿಶಾಲಿ ಆತ್ಮನಿಗೆ ಬದಲು ಬಲಹೀನ ಆತ್ಮನಾಗಿ ಬಿಡುತ್ತೀರಿ. ಆದರೆ ವ್ರತ(ಪ್ರತಿಜ್ಞೆ)ದ ಸ್ಮೃತಿಯಿಂದ ವೃತ್ತಿಯನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಶಕ್ತಿಶಾಲಿ ಆಗಿ ಬಿಡುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top