16 September 2021 KANNADA Murli Today | Brahma Kumaris

Read and Listen today’s Gyan Murli in Kannada

September 15, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಬೇಹದ್ದಿನ ತಂದೆಯು ಈ ಬೇಹದ್ದಿನ ಸಭೆಯಲ್ಲಿ ಬಡ ಮಕ್ಕಳನ್ನು ತನ್ನ ಮಡಿಲಿಗೆ ತೆಗೆದುಕೊಳ್ಳಲು ಬಂದಿದ್ದಾರೆ, ಅವರಿಗೆ ದೇವತೆಗಳ ಸಭೆಯಲ್ಲಿ ಬರುವ ಅವಶ್ಯಕತೆಯಿಲ್ಲ”

ಪ್ರಶ್ನೆ:: -

ಮಕ್ಕಳು ಯಾವ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು?

ಉತ್ತರ:-

ಯಾವ ದಿನದಂದು ಮರುಜೀವಾ ಜನ್ಮವಾಯಿತು, ತಂದೆಯಲ್ಲಿ ನಿಶ್ಚಯವಾಯಿತು….. ಆ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಬೇಕು, ಅದೇ ನಿಮಗಾಗಿ ಜನ್ಮಾಷ್ಟಮಿಯಾಗಿದೆ. ಒಂದುವೇಳೆ ತಮ್ಮ ಮರುಜೀವಾ ಜನ್ಮದಿನವನ್ನು ಆಚರಿಸುತ್ತೀರೆಂದರೆ ಬುದ್ಧಿಯಲ್ಲಿ ನೆನಪಿರುವುದು – ನಾವು ಹಳೆಯ ಪ್ರಪಂಚದಿಂದ ದೂರ ಸರಿದೆವು. ನಾವು ತಂದೆಯ ಮಕ್ಕಳಾದೆವು ಅರ್ಥಾತ್ ಆಸ್ತಿಗೆ ಅಧಿಕಾರಿಗಳಾಗಿ ಬಿಟ್ಟೆವು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸಭೆಯಲ್ಲಿ ಜ್ಯೋತಿ ಬೆಳಗಿತು…….

ಓಂ ಶಾಂತಿ. ಗೀತೆ, ಕವಿತೆ, ಭಜನೆ, ವೇದ-ಶಾಸ್ತ್ರ, ಉಪನಿಷತ್ತು ದೇವತೆಗಳ ಮಹಿಮೆ ಇತ್ಯಾದಿಗಳನ್ನು ನೀವು ಭಾರತವಾಸಿ ಮಕ್ಕಳು ಬಹಳಷ್ಟು ಕೇಳುತ್ತಾ ಬಂದಿರಿ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ – ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು. ಭೂತಕಾಲವನ್ನೂ ಮಕ್ಕಳೂ ತಿಳಿದುಕೊಂಡಿದ್ದೀರಿ, ವರ್ತಮಾನ ಪ್ರಪಂಚವು ಏನಾಗಿದೆ ಎಂಬುದನ್ನೂ ನೋಡಿದ್ದೀರಿ. ಅದನ್ನು ಪ್ರತ್ಯಕ್ಷದಲ್ಲಿ ಅನುಭವ ಮಾಡಿದ್ದೀರಿ ಬಾಕಿ ಏನಾಗುವುದಿದೆಯೋ ಅದನ್ನೂ ಇನ್ನೂ ಪ್ರತ್ಯಕ್ಷದಲ್ಲಿ ಅನುಭವ ಮಾಡಿಲ್ಲ. ಕಳೆದು ಹೋಗಿರುವುದನ್ನು ಅನುಭವ ಮಾಡಿದ್ದೀರಿ. ತಂದೆಯೇ ತಿಳಿಸಿದ್ದಾರೆ, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಅನೇಕ ಮನುಷ್ಯರಿದ್ದಾರೆ ಆದರೆ ಅವರು ಏನನ್ನೂ ತಿಳಿದುಕೊಂಡಿಲ್ಲ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲ. ಈಗ ಕಲಿಯುಗದ ಅಂತ್ಯವಾಗಿದೆ, ಇದೂ ಸಹ ಮನುಷ್ಯರಿಗೆ ಗೊತ್ತಿಲ್ಲ. ಹಾ! ಮುಂದೆ ಹೋಂದತೆ ಅಂತ್ಯವನ್ನು ತಿಳಿದುಕೊಳ್ಳುತ್ತಾರೆ, ಮೂಲವನ್ನು ಅರಿತುಕೊಳ್ಳುತ್ತಾರೆ, ಇಡೀ ಜ್ಞಾನವನ್ನು ಅರಿತುಕೊಳ್ಳುವುದಿಲ್ಲ, ಓದುವಂತಹ ವಿದ್ಯಾರ್ಥಿಗಳೇ ಅರಿತುಕೊಳ್ಳುವರು. ಇದು ಮನುಷ್ಯರಿಂದ ರಾಜಾಧಿರಾಜರಾಗುವುದಾಗಿದೆ. ಅದರಲ್ಲಿಯೂ ಆಸುರೀ ರಾಜರಲ್ಲ, ದೈವೀ ರಾಜರು. ದೈವೀ ರಾಜರನ್ನು ಆಸುರೀ ರಾಜರೂ ಸಹ ಪೂಜಿಸುತ್ತಾರೆ, ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ವಿದ್ವಾಂಸ, ಆಚಾರ್ಯ ಮೊದಲಾದವರು ಏನನ್ನೂ ತಿಳಿದುಕೊಂಡಿಲ್ಲ. ಯಾವ ಭಗವಂತನನ್ನು ಪರಂಜ್ಯೋತಿಯೆಂದು ಕರೆಯುವರೋ ಅವರನ್ನೇ ತಿಳಿದುಕೊಂಡಿಲ್ಲ. ಹಾಡುಗಳನ್ನು ಹಾಡುವವರೂ ಸಹ ತಿಳಿದುಕೊಳ್ಳುವುದಿಲ್ಲ. ಕೇವಲ ಮಹಿಮೆಯನ್ನು ಹಾಡುತ್ತಾರೆ, ಭಗವಂತನೂ ಸಹ ಯಾವುದೇ ಸಮಯದಲ್ಲಿ ಈ ಪ್ರಪಂಚದ ಸಭೆಯಲ್ಲಿ ಬಂದಿದ್ದರು. ಸಭೆ ಅರ್ಥಾತ್ ಎಲ್ಲಿ ಅನೇಕರು ಸೇರುವರು. ಸಭೆಯಲ್ಲಿ ತಿನ್ನುವುದು, ಕುಡಿಯುವುದು, ಮಧ್ಯಪಾನ ಇತ್ಯಾದಿಗಳು ಸಿಗುತ್ತದೆ. ಈಗ ಈ ಸಭೆಯಲ್ಲಿ ನಿಮಗೆ ತಂದೆಯಿಂದ ಅವಿನಾಶಿ ಜ್ಞಾನ ರತ್ನಗಳ ಖಜಾನೆ ಸಿಗುತ್ತಿದೆ ಅಥವಾ ತಂದೆಯಿಂದ ನಮಗೆ ವೈಕುಂಠದ ರಾಜ್ಯಭಾಗ್ಯ ಸಿಗುತ್ತದೆ. ಇಡೀ ಸಭೆಯಲ್ಲಿ ಮಕ್ಕಳೇ ತಂದೆಯನ್ನು ಅರಿತುಕೊಳ್ಳುತ್ತಾರೆ – ತಂದೆಯೇ ನಮಗೆ ಉಡುಗೊರೆಯನ್ನು ಕೊಡಲು ಬಂದಿದ್ದಾರೆ. ತಂದೆಯು ಸಭೆಯಲ್ಲಿ ಏನನ್ನು ಕೊಡುತ್ತಾರೆ ಮತ್ತು ಮನುಷ್ಯರ ಸಭೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಏನನ್ನು ಕೊಡುತ್ತಾರೆ? ಇದರಲ್ಲಿ ರಾತ್ರಿ-ಹಗಲಿನ ಅಂತರವಿದೆ. ತಂದೆಯು ಹೇಗೆ ಹಲ್ವ ತಿನ್ನಿಸುತ್ತಾರೆ ಮತ್ತು ಮನುಷ್ಯರು ಬಹಳ ಅಗ್ಗವಾದ ವಸ್ತು ಕಡಲೆಯನ್ನು ತಿನ್ನಿಸುತ್ತಾರೆ. ಹಲ್ವ ಮತ್ತು ಕಡಲೆ ಎರಡರಲ್ಲಿ ಎಷ್ಟೊಂದು ವ್ಯತ್ಯಾಸವಿದೆ. ಒಬ್ಬರು ಇನ್ನೊಬ್ಬರಿಗೆ ಕಡಲೆ ತಿನ್ನಿಸುತ್ತಾ ಇರುತ್ತಾರೆ. ಯಾರಾದರೂ ಸಂಪಾದಿಸುವುದಿಲ್ಲವೆಂದರೆ ಇವರು ಕುಳಿತು ಕಡಲೆ ತಿನ್ನುತ್ತಿದ್ದಾರೆಂದು ಹೇಳಲಾಗುತ್ತದೆ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಬೇಹದ್ದಿನ ತಂದೆಯು ನಮಗೆ ಸ್ವರ್ಗದ ರಾಜ್ಯಭಾಗ್ಯದ ವರದಾನವನ್ನು ಕೊಡುತ್ತಿದ್ದಾರೆ. ಶಿವ ತಂದೆಯು ಈ ಸಭೆಯಲ್ಲಿ ಬರುತ್ತಾರಲ್ಲವೆ. ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಬಂದು ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ತಂದೆಯಾಗಿದ್ದಾರೆ ಅಂದಮೇಲೆ ತಂದೆಯು ಅವಶ್ಯವಾಗಿ ಏನನ್ನಾದರೂ ತಿನ್ನಿಸುತ್ತಾರೆ, ಕೊಡುತ್ತಾರೆ. ಮಾತಾಪಿತಾ ಜೀವನದ ಪಾಲನೆಯಂತೂ ಮಾಡುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ, ಮಾತಾಪಿತಾ ಬಂದು ಜೀವನದ ಸಂಭಾಲನೆ ಮಾಡುತ್ತಾರೆ, ದತ್ತು ಮಾಡಿಕೊಳ್ಳುತ್ತಾರೆ. ಮಕ್ಕಳು ಸ್ವಯಂ ಹೇಳುತ್ತಾರೆ – ಬಾಬಾ, ನಾವು ನಿಮ್ಮ 10 ದಿನದ ಮಗುವಾಗಿದ್ದೇನೆ ಅರ್ಥಾತ್ 10 ದಿನಗಳಿಂದ ನಿಮ್ಮವನಾಗಿದ್ದೇನೆ ಅಂದಾಗ ತಿಳಿದುಕೊಳ್ಳಬೇಕು – ನಾವು ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಲು ಹಕ್ಕುದಾರರಾಗಿ ಬಿಟ್ಟಿದ್ದೇವೆ, ಮಡಿಲನ್ನು ತೆಗೆದುಕೊಂಡಿದ್ದೇವೆ, ಜೀವಿಸಿದ್ದಂತೆಯೇ ಯಾರದೇ ಮಡಿಲು ತೆಗೆದುಕೊಂಡರೆ ಅಂಧಶ್ರದ್ಧೆಯಿಂದಂತೂ ತೆಗೆದುಕೊಳ್ಳುವುದಿಲ್ಲ. ತಂದೆ-ತಾಯಿಯು ಮಕ್ಕಳನ್ನು ದತ್ತಿನಲ್ಲಿ ಕೊಡುತ್ತಾರೆ. ನಮ್ಮ ಮಗುವು ಅವರ ಬಳಿ ಹೆಚ್ಚು ಸುಖಿಯಾಗಿರುವರು, ಇನ್ನೂ ಪ್ರೀತಿಯಿಂದ ಸಂಭಾಲನೆ ಮಾಡುತ್ತಾರೆಂದು ತಿಳಿದುಕೊಳ್ಳುತ್ತಾರೆ. ನೀವೂ ಸಹ ಲೌಕಿಕ ತಂದೆಯ ಮಕ್ಕಳು ಇಲ್ಲಿ ಬೇಹದ್ದಿನ ತಂದೆಯ ಮಡಿಲು ತೆಗೆದುಕೊಳ್ಳುತ್ತೀರಿ. ಬೇಹದ್ದಿನ ತಂದೆಯು ಎಷ್ಟು ರುಚಿಯಿಂದ ದತ್ತು ಮಾಡಿಕೊಳ್ಳುತ್ತಾರೆ! ಬಾಬಾ, ನಾನು ನಿಮ್ಮವನಾಗಿ ಬಿಟ್ಟೆನು ಎಂದು ಮಕ್ಕಳು ಬರೆಯುತ್ತಾರೆ. ಕೇವಲ ದೂರದಿಂದಲೇ ಹೇಳುವುದಿಲ್ಲ, ಪ್ರತ್ಯಕ್ಷದಲ್ಲಿ ದತ್ತು ಮಾಡಿಕೊಳ್ಳಲಾಗುತ್ತದೆ ಆದ್ದರಿಂದಲೇ ಆಚರಣೆ ಮಾಡುತ್ತಾರಲ್ಲವೆ. ಹೇಗೆ ಜನ್ಮ ದಿನವನ್ನು ಆಚರಿಸುತ್ತಾರೆ, ಅಂದಾಗ ಇಲ್ಲಿಯೂ ಯಾರು ಮಕ್ಕಳಾಗುವರೋ ಅವರು ಹೇಳುತ್ತಾರೆ – ನಾವು ನಿಮ್ಮವರಾಗಿದ್ದೇವೆ ಅಂದಮೇಲೆ 6-7 ದಿನಗಳ ನಂತರ ನಾಮಕರಣವನ್ನೂ ಆಚರಣೆ ಮಾಡಬೇಕಲ್ಲವೆ ಆದರೆ ಯಾರೂ ಆಚರಿಸುವುದಿಲ್ಲ. ತಮ್ಮ ಜನ್ಮಾಷ್ಟಮಿಯಂತೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಆದರೆ ಆಚರಿಸುವುದೇ ಇಲ್ಲ. ನಾವು ಜಯಂತಿಯನ್ನು ಆಚರಿಸಬೇಕೆಂಬ ಜ್ಞಾನವೂ ಇಲ್ಲ, 12 ದಿನಗಳಾದ ಮೇಲೆ ಆಚರಿಸುತ್ತಾರೆ. ಅರೆ! ಮೊದಲು ಆಚರಿಸಲಿಲ್ಲ, 12 ತಿಂಗಳಿನ ನಂತರ ಏಕೆ ಆಚರಿಸುತ್ತೀರಿ? ಜ್ಞಾನವೂ ಇಲ್ಲ, ನಿಶ್ಚಯವೂ ಇರುವುದಿಲ್ಲ. ಒಂದು ಬಾರಿ ಜನ್ಮದಿನವನ್ನು ಆಚರಿಸಿದರೆ ಅವರು ಪಕ್ಕಾ ಆಗಿ ಬಿಟ್ಟರು ನಂತರ ಒಂದುವೇಳೆ ಜನ್ಮದಿನವನ್ನು ಆಚರಿಸದಮೇಲೂ ಅವರು ಬಿಟ್ಟು ಹೋದರೆ ಸತ್ತು ಹೋದರೆಂದು ತಿಳಿಯಲಾಗುವುದು. ತಮ್ಮ ಲೌಕಿಕ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ, ಯಾರಾದರೂ ಬಡವರಾಗಿದ್ದರೆ ಕಡಲೆ-ಬೆಲ್ಲವನ್ನು ಹಂಚುತ್ತಾರೆ. ಇನ್ನೇನೂ ಇಲ್ಲ. ಮಕ್ಕಳಿಗೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ ಆದ್ದರಿಂದ ಖುಷಿಯಿರುವುದಿಲ್ಲ. ಜನ್ಮದಿನವನ್ನು ಆಚರಿಸಿದರೆ ನೆನಪೂ ಸಹ ಪಕ್ಕಾ ಇರುವುದು ಆದರೆ ಆ ಬುದ್ಧಿಯಿಲ್ಲ. ಆದರೂ ಇಂದು ತಂದೆಯು ತಿಳಿಸುತ್ತಾರೆ – ಯಾರು-ಯಾರು ಹೊಸದಾಗಿ ಮಕ್ಕಳಾದರೋ ಅವರಿಗೆ ನಿಶ್ಚಯವೂ ಇದ್ದಿದ್ದೇ ಆದರೆ ತಮ್ಮ ಅಲೌಕಿಕ ಜನ್ಮ ದಿನವನ್ನು ಆಚರಿಸಿರಿ. ಇಂತಹ ದಿನದಂದು ನಮಗೆ ನಿಶ್ಚಯವಾಯಿತು, ಆಗಿನಿಂದ ಜನ್ಮಾಷ್ಟಮಿಯು ಆರಂಭವಾಗುತ್ತದೆ ಅಂದಾಗ ಮಕ್ಕಳು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು. ನಾನು ಇಂತಹವರ ಮಗನಾಗಿದ್ದೇನೆ ಎಂಬುದನ್ನು ಲೌಕಿಕದಲ್ಲಿ ಯಾವ ಮಕ್ಕಳಾದರೂ ಮರೆಯುತ್ತಾರೆಯೇ! ಇಲ್ಲಿ ನೋಡಿದರೆ ಬಾಬಾ, ನಮಗೆ ನಿಮ್ಮ ನೆನಪೇ ಬರುವುದಿಲ್ಲ ಎಂದು ಹೇಳುತ್ತಾರೆ. ಈ ರೀತಿಯಾಗಿ ಜ್ಞಾನವಿಲ್ಲದವರೂ ಸಹ ಎಂದೂ ಹೇಳುವುದಿಲ್ಲ. ನೆನಪು ಬಾರದೇ ಇರುವ ಪ್ರಶ್ನೆಯೇ ಬರುವುದಿಲ್ಲ. ನೀವು ತಂದೆಯನ್ನು ನೆನಪು ಮಾಡುತ್ತೀರಿ, ತಂದೆಯಂತೂ ಎಲ್ಲರನ್ನೂ ನೆನಪು ಮಾಡಿಯೇ ಮಾಡುತ್ತಾರೆ. ನನ್ನ ಮಕ್ಕಳೆಲ್ಲರೂ ಕಾಮ ಚಿತೆಯನ್ನು ಏರಿ ಭಸ್ಮವಾಗಿ ಬಿಟ್ಟಿದ್ದಾರೆ. ಈ ರೀತಿ ಮತ್ತ್ಯಾವುದೇ ಗುರು ಅಥವಾ ಮಹಾತ್ಮರು ಹೇಳುವುದಿಲ್ಲ. ಇದು ಭಗವಾನುವಾಚವೇ ಆಗಿದೆ – ಎಲ್ಲರೂ ನನ್ನ ಮಕ್ಕಳಾಗಿದ್ದಾರೆ, ಭಗವಂತನಿಗೆ ಎಲ್ಲರೂ ಮಕ್ಕಳಲ್ಲವೆ. ಎಲ್ಲಾ ಆತ್ಮರೂ ಪರಮಾತ್ಮ ತಂದೆಯ ಮಕ್ಕಳಾಗಿದ್ದಾರೆ. ತಂದೆಯೂ ಸಹ ಶರೀರದಲ್ಲಿ ಬಂದಾಗಲೇ ಹೇಳುತ್ತಾರೆ – ಈ ಆತ್ಮರೆಲ್ಲರೂ ನನ್ನ ಮಕ್ಕಳಾಗಿದ್ದಾರೆ. ಕಾಮ ಚಿತೆಯನ್ನು ಏರಿ ಭಸ್ಮೀಭೂತ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಭಾರತವಾಸಿಗಳು ಎಷ್ಟೊಂದು ತಮೋಪ್ರಧಾನವಾಗಿ ಬಿಟ್ಟಿದ್ದಾರೆ. ಕಾಮ ಚಿತೆಯ ಮೇಲೆ ಕುಳಿತು ಎಲ್ಲರೂ ಕಪ್ಪಾಗಿ ಬಿಟ್ಟಿದ್ದಾರೆ. ಯಾರು ನಂಬರ್ವನ್ ಪಾವನನಾಗಿದ್ದರೋ ಅವರೇ ಈಗ ಪೂಜಾರಿ, ಪತಿತನಾಗಿ ಬಿಟ್ಟಿದ್ದಾರೆ. ಸುಂದರನಿಂದ ಶ್ಯಾಮನಾಗಿದ್ದಾರೆ, ಈ ಕಾಮ ಚಿತೆಯನ್ನು ಏರುವುದು ಎಂದರೆ ಸರ್ಪದ ಮೇಲೆ ಏರುವುದಾಗಿದೆ. ವೈಕುಂಠದಲ್ಲಿ ಯಾರಿಗಾದರೂ ಕಚ್ಚಲು ಅಲ್ಲಿ ಸರ್ಪಗಳೇ ಇರುವುದಿಲ್ಲ, ಈ ರೀತಿಯ ಮಾತುಗಳೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ – ಐದು ವಿಕಾರಗಳ ಪ್ರವೇಶತೆಯ ಕಾರಣ ನೀವು ಕಾಡಿನ ಮುಳ್ಳುಗಳಾಗಿ ಬಿಟ್ಟಿದ್ದೀರಿ. ಬಾಬಾ, ನಾವು ಇದು ಮುಳ್ಳುಗಳ ಕಾಡಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಕಚ್ಚಿ ಎಲ್ಲರೂ ಭಸ್ಮೀಭೂತರಾಗಿ ಬಿಟ್ಟಿದ್ದಾರೆ. ಭಗವಾನುವಾಚ – ಜ್ಞಾನ ಸಾಗರನಾದ ನನ್ನ ಮಕ್ಕಳು ಯಾರನ್ನು ನಾನು ಕಲ್ಪದ ಮೊದಲೂ ಸಹ ಬಂದು ಸ್ವಚ್ಛವನ್ನಾಗಿ ಮಾಡಿದ್ದೆನೋ ಅವರು ಈಗ ಪತಿತ, ಕಪ್ಪಾಗಿ ಬಿಟ್ಟಿದ್ದಾರೆ. ಮಕ್ಕಳಿಗೆ ತಿಳಿದಿದೆ – ನಾವು ಹೇಗೆ ಪಾವನರಿಂದ ಪತಿತರಾಗಿದ್ದೇವೆ! ಇಡೀ 84 ಜನ್ಮಗಳ ಚರಿತ್ರೆ-ಭೂಗೋಳವು ಸ್ಪಷ್ಟವಾಗಿ ಬುದ್ಧಿಯಲ್ಲಿದೆ, ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ – ಯಾರಾದರೂ 5-6 ವರ್ಷಗಳಿಂದ ಹಿಡಿದು ನಂಬರ್ವಾರ್ ಬುದ್ಧಿಯನುಸಾರ ತಮ್ಮ ಜೀವನ ಚರಿತ್ರೆಯನ್ನು ತಿಳಿದುಕೊಂಡಿರುತ್ತಾರೆ, ಪ್ರತಿಯೊಬ್ಬರಿಗೂ ತಮ್ಮ ಹಿಂದಿನ ಚರಿತ್ರೆಯು ತಿಳಿದಿರುತ್ತದೆ, ನಾವು ಏನು ಮಾಡಿದೆವು? ಏನು ಕೆಟ್ಟ ಕರ್ಮ ಮಾಡಿದೆವು ಎಂದು. ನಾವು ಏನೇನೋ ಮಾಡಿದೆವು ಎಂದು ಚಿಕ್ಕ-ಪುಟ್ಟ ಮಾತುಗಳಂತೂ ತಿಳಿಸಬಹುದಾಗಿದೆ. ಹಿಂದಿನ ಜನ್ಮಗಳ ಮಾತನ್ನು ತಿಳಿಸಲು ಸಾಧ್ಯವಿಲ್ಲ. ಜನ್ಮ-ಜನ್ಮಾಂತರಗಳ ಚರಿತ್ರೆಯನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಬಾಕಿ ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ತಂದೆಯು ಕುಳಿತು ತಿಳಿಸುತ್ತಾರೆ. ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರಿಗೇ ಸ್ಮೃತಿಯಲ್ಲಿ ಬರುತ್ತದೆ. ಮನೆಯಲ್ಲಿ ಹೋಗುವುದಕ್ಕಾಗಿ ನಾನು ನಿಮಗೆ ಮತ ಕೊಡುತ್ತೇನೆ, ಈ ಜ್ಞಾನವು ಎಲ್ಲಾ ಧರ್ಮದವರಿಗಾಗಿ ಇದೆ. ಒಂದುವೇಳೆ ಮುಕ್ತಿಧಾಮ ಮನೆಗೆ ಹೋಗಲು ಬಯಸುತ್ತೀರೆಂದರೆ ತಂದೆಯೇ ಕರೆದುಕೊಂಡು ಹೋಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ತಮ್ಮ ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ತಂದೆಯನ್ನು ನೆನಪು ಮಾಡಿ ಅಲ್ಲಿಗೆ ತಲುಪಲು ಮತ್ತ್ಯಾರಿಗೂ ಈ ಯುಕ್ತಿಯಿಲ್ಲ, ಎಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮೋಕ್ಷದ ವಿಚಾರವನ್ನು ಎಂದೂ ಮಾಡಬಾರದು, ಇದು ಸಾಧ್ಯವೇ ಇಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ಎಲ್ಲರಿಗೆ ಒಬ್ಬ ತಂದೆಯೇ ಮುಕ್ತಿದಾತ ಮಾರ್ಗದರ್ಶಕನಾಗಿದ್ದಾರೆ, ಅವರೇ ಬಂದು ಯುಕ್ತಿಯನ್ನು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಪುರುಷಾರ್ಥ ಮಾಡದಿದ್ದರೆ ಇವರು ಇಲ್ಲಿಯವರಲ್ಲ ಎಂದು ತಿಳಿಯಲಾಗುತ್ತದೆ. ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದ ಅನುಸಾರ ತಿಳಿದುಕೊಂಡಿದ್ದೀರಿ. ಪ್ರತಿಯೊಬ್ಬರೂ ತಿಳಿಸುವ ಶೈಲಿಯು ತಮ್ಮ-ತಮ್ಮದೇ ಆಗಿರುತ್ತದೆ. ನೀವೂ ಸಹ ಹೇಳಬಲ್ಲಿರಿ – ಈ ಸಮಯದಲ್ಲಿ ಪತಿತ ಪ್ರಪಂಚವಾಗಿದೆ, ಎಷ್ಟೊಂದು ಹೊಡೆದಾಟಗಳಿವೆ, ಸತ್ಯಯುಗದಲ್ಲಿ ಇದೇನೂ ಇರುವುದಿಲ್ಲ, ಈಗ ಕಲಿಯುಗವಾಗಿದೆ. ಇದನ್ನು ಎಲ್ಲಾ ಮನುಷ್ಯರು ಒಪ್ಪುತ್ತಾರೆ. ಸತ್ಯಯುಗ-ತ್ರೇತಾಯುಗ…. ಗೋಲ್ಡನ್ ಏಜ್, ಸಿಲ್ವರ್ ಏಜ್….. ಅನ್ಯ ಭಾಷೆಗಳಲ್ಲಿಯೂ ಅವರವರ ಭಾಷೆಗೆ ತಕ್ಕಂತೆ ಹೆಸರುಗಳಿರುತ್ತವೆ. ಆಂಗ್ಲ ಭಾಷೆಯನ್ನಂತೂ ಅವರು ತಿಳಿದುಕೊಂಡಿರುತ್ತಾರೆ. ಇಂಗ್ಲೀಶ್ ಮತ್ತು ಹಿಂದಿ ಭಾಷೆಯ ಶಬ್ಧಕೋಶವೂ ಇರುತ್ತದೆ. ಆಂಗ್ಲರು ಬಹಳ ಸಮಯ ರಾಜ್ಯ ಮಾಡಿ ಹೋದರು. ಅವರ ಆಂಗ್ಲ ಭಾಷೆಯು ಕೆಲಸಕ್ಕೆ ಬರುತ್ತಿದೆ.

ಮನುಷ್ಯರು ಈ ಸಮಯದಲ್ಲಿ ಇದನ್ನಂತೂ ಒಪ್ಪುತ್ತಾರೆ, ನಮ್ಮಲ್ಲಿ ಯಾವುದೇ ಗುಣವಿಲ್ಲ, ಬಾಬಾ ಬಂದು ದಯೆ ತೋರಿಸು. ಪುನಃ ನಮ್ಮನ್ನು ಪವಿತ್ರರನ್ನಾಗಿ ಮಾಡಿ ನಾವು ಪತಿತರಾಗಿದ್ದೇವೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಪತಿತ ಆತ್ಮರು ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರೂ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಈಗ ತಂದೆಯು ಈ ಪತಿತ ಸಭೆಯಲ್ಲಿ ಬರುತ್ತಾರೆ. ಎಷ್ಟು ದೊಡ್ಡ ಸಭೆಯಾಗಿದೆ, ನಾನು ದೇವತೆಗಳ ಸಭೆಯಲ್ಲಿ ಎಂದೂ ಬರುವುದಿಲ್ಲ. ಎಲ್ಲಿ ಬಹಳ ಸಂಪತ್ತು, 36 ಪ್ರಕಾರದ ಭೋಜನ ಸಿಗುವುದೋ ಅಲ್ಲಿ ನಾನು ಬರುವುದಿಲ್ಲ. ಎಲ್ಲಿ ಮಕ್ಕಳಿಗೆ ರೊಟ್ಟಿಯೂ ಸಿಗುವುದಿಲ್ಲವೋ ಅವರ ಬಳಿ ಬಂದು ಮಡಿಲಿಗೆ ತೆಗೆದುಕೊಂಡು ಮಕ್ಕಳನ್ನಾಗಿ ಮಾಡಿ ಆಸ್ತಿಯನ್ನು ಕೊಡುತ್ತೇನೆ, ಸಾಹುಕಾರರನ್ನು ದತ್ತು ತೆಗೆದುಕೊಳ್ಳುವುದಿಲ್ಲ. ಅವರಂತೂ ತಮ್ಮದೇ ನಶೆಯಲ್ಲಿ ಮುಳುಗಿರುತ್ತಾರೆ. ನಮಗಾಗಿ ಇಲ್ಲಿಯೇ ಸ್ವರ್ಗವಿದೆ ಎಂದು ಹೇಳುತ್ತಾರೆ ಮತ್ತೆ ಯಾರಾದರೂ ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಇದು ಅರ್ಥವಾಯಿತಲ್ಲವೆ. ಇದನ್ನು ನೀವೇಕೆ ತಿಳಿಸುವುದಿಲ್ಲ? ಇದುವರೆಗೂ ಪತ್ರಿಕೆಗಳಲ್ಲಿಯೂ ಯಾರು ಯುಕ್ತಿಯುಕ್ತವಾಗಿ ಹಾಕಿಸಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ – ನಮಗೆ ಡ್ರಾಮಾ, ಪುರುಷಾರ್ಥ ಮಾಡಿಸುತ್ತದೆ, ನಾವು ಏನು ಪುರುಷಾರ್ಥ ಮಾಡುತ್ತೇವೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ, ಪುರುಷಾರ್ಥವನ್ನು ಮಾಡಲೇಬೇಕಾಗಿದೆ. ಡ್ರಾಮಾ ಎಂದು ಹೇಳಿ ಕುಳಿತುಕೊಳ್ಳಬಾರದು. ಪ್ರತೀ ಮಾತಿನಲ್ಲಿ ಅವಶ್ಯವಾಗಿ ಪುರುಷಾರ್ಥ ಮಾಡಲೇಬೇಕಾಗಿದೆ. ಕರ್ಮಯೋಗಿ, ರಾಜಯೋಗಿಗಳಲ್ಲವೆ. ಅವರು ಕರ್ಮ ಸನ್ಯಾಸಿ, ಹಠಯೋಗಿ ಕರ್ಮ ಸನ್ಯಾಸಿಗಳಾಗಿದ್ದಾರೆ. ನೀವಂತೂ ಎಲ್ಲವನ್ನೂ ಮಾಡುತ್ತೀರಿ, ಮನೆಯಲ್ಲಿರುತ್ತಾ ಮರಿ ಮಕ್ಕಳನ್ನೂ ಸಂಭಾಲನೆ ಮಾಡುತ್ತೀರಿ. ಸನ್ಯಾಸಿಗಳಂತೂ ಬಿಟ್ಟು ಹೊರಟು ಹೋಗುತ್ತಾರೆ. ಅವರಿಗೆ ಇಷ್ಟವಾಗುವುದಿಲ್ಲ ಆದರೆ ಆ ಪವಿತ್ರತೆಯು ಭಾರತದಲ್ಲಿ ಬೇಕಲ್ಲವೆ. ಆದರೂ ಒಳ್ಳೆಯವರಾಗಿದ್ದಾರೆ. ಈಗಂತೂ ಯಾವ ಮನುಷ್ಯರೂ ಪವಿತ್ರರೂ ಆಗಿರುವುದಿಲ್ಲ. ಅವರು ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕೂ ಸಾಧ್ಯವಿಲ್ಲ. ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ – ಶಾಂತಿಧಾಮವು ನಮ್ಮ ಮನೆಯಾಗಿದೆ ಆದರೆ ಹೇಗೆ ಹೋಗುವುದು? ಬಹಳ ಪಾಪಗಳನ್ನು ಮಾಡಿದ್ದಾರೆ. ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ, ಈ ರೀತಿ ಹೇಳಿದರೆ ಯಾರ ಮರ್ಯಾದೆಯನ್ನು ಕಳೆಯುತ್ತಾರೆ? ಶಿವ ತಂದೆಯ ಮರ್ಯಾದೆಯನ್ನು. ನಾಯಿ, ಬೆಕ್ಕು, ಕಣ-ಕಣದಲ್ಲಿ ಪರಮಾತ್ಮನಿದ್ದಾನೆಂದು ಹೇಳುತ್ತಾರೆ, ಈಗ ಯಾರಿಗೆ ದೂರು ಕೊಡುವುದು! ತಂದೆಯು ತಿಳಿಸುತ್ತಾರೆ – ನಾನೇ ಸಮರ್ಥನಾಗಿದ್ದೇನೆ, ನನ್ನ ಜೊತೆ ಧರ್ಮರಾಜನೂ ಇದ್ದಾರೆ. ಇದು ಎಲ್ಲರಿಗಾಗಿ ಅಂತಿಮ ಸಮಯವಾಗಿದೆ. ಎಲ್ಲರೂ ಶಿಕ್ಷೆಗಳನ್ನು ಅನುಭವಿಸಿ ಹಿಂತಿರುಗಿ ಮನೆಗೆ ಹೋಗುತ್ತಾರೆ. ಡ್ರಾಮಾದ ನೊಂದಾವಣೆಯೇ ಈ ರೀತಿಯಿದೆ, ಶಿಕ್ಷೆಗಳನ್ನು ಅನುಭವಿಸಲೇಬೇಕಾಗಿದೆ, ಇದು ಸಾಕ್ಷಾತ್ಕಾರವಾಗುತ್ತದೆ. ಗರ್ಭ ಜೈಲಿನಲ್ಲಿಯೂ ಸಾಕ್ಷಾತ್ಕಾರವಾಗುತ್ತದೆ, ನೀವು ಇಂತಿಂತಹ ಕರ್ಮಗಳನ್ನು ಮಾಡಿದ್ದೀರಿ ಅದಕ್ಕಾಗಿ ಈ ಶಿಕ್ಷೆಗಳು ಸಿಗುತ್ತದೆ ಎಂದು. ಆಗ ಈ ಜೈಲಿನಿಂದ ಹೊರ ತೆಗೆಯಿರಿ, ನಾವು ಮತ್ತೆಂದೂ ಪಾಪ ಮಾಡುವುದಿಲ್ಲವೆಂದು ಹೇಳುತ್ತಾರೆ. ತಂದೆಯು ಇಲ್ಲಿ ಸನ್ಮುಖದಲ್ಲಿ ಬಂದು ಇವೆಲ್ಲಾ ಮಾತುಗಳನ್ನು ನಿಮಗೆ ತಿಳಿಸುತ್ತಾರೆ. ಆತ್ಮಗಳು ಗರ್ಭದಲ್ಲಿ ಶಿಕ್ಷೆಗಳನ್ನು ಅನುಭವಿಸುತ್ತಾರೆ, ಗರ್ಭವೂ ಸಹ ಜೈಲಾಗಿದೆ, ದುಃಖದ ಅನುಭವವಾಗುತ್ತದೆ. ಸತ್ಯಯುಗದಲ್ಲಿ ಇವೆರಡು ಜೈಲುಗಳೂ ಇರುವುದಿಲ್ಲ, ಶಿಕ್ಷೆಯೂ ಇರುವುದಿಲ್ಲ.

ಈಗ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ತುಕ್ಕು ಕಳೆಯುವುದು. ಈ ನಿಮ್ಮ ಮಾತುಗಳನ್ನು ಅನೇಕರು ಒಪ್ಪುತ್ತಾರೆ. ಭಗವಂತನ ಹೆಸರಂತೂ ಇದೆ, ಕೇವಲ ಕೃಷ್ಣನ ಹೆಸರನ್ನು ಹಾಕಿ ತಪ್ಪು ಮಾಡಿದ್ದಾರೆ, ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ಏನೆಲ್ಲವನ್ನೂ ಕೇಳುತ್ತೀರಿ. ಕೇಳಿ ಪತ್ರಿಕೆಗಳಲ್ಲಿ ಹಾಕಿಸಿರಿ, ಶಿವ ತಂದೆಯು ಈ ಸಮಯದಲ್ಲಿ ಎಲ್ಲರಿಗೂ ಹೇಳುತ್ತಾರೆ – 84 ಜನ್ಮಗಳನ್ನು ಭೋಗಿಸಿ ತಮೋಪ್ರಧಾನವಾಗಿದ್ದೀರಿ. ಈಗ ಪುನಃ ನಾನು ಸಲಹೆ ಕೊಡುತ್ತೇನೆ – ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಮತ್ತೆ ನೀವು ಮುಕ್ತಿ-ಜೀವನ್ಮುಕ್ತಿಧಾಮದಲ್ಲಿ ಹೋಗುತ್ತೀರಿ. ತಂದೆಯದು ಇದು ಆಜ್ಞೆಯಾಗಿದೆ- ನನ್ನನ್ನು ನೆನಪು ಮಾಡಿದರೆ ತುಕ್ಕು ಕಳೆಯುವುದು. ಒಳ್ಳೆಯದು – ಮಕ್ಕಳೇ, ಎಷ್ಟು ತಿಳಿಸಲಿ, ಎಷ್ಟು ತಿಳಿಸಲಿ! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪ್ರತೀ ಮಾತಿಗಾಗಿ ಅವಶ್ಯವಾಗಿ ಪುರುಷಾರ್ಥ ಮಾಡಬೇಕಾಗಿದೆ. ಡ್ರಾಮಾ ಎಂದು ಹೇಳಿ ಕುಳಿತು ಬಿಡಬಾರದು. ಕರ್ಮಯೋಗಿ, ರಾಜಯೋಗಿಗಳಾಗಬೇಕು. ಕರ್ಮ ಸನ್ಯಾಸಿ, ಹಠಯೋಗಿಗಳಲ್ಲ.

2. ಶಿಕ್ಷೆಯನ್ನು ಅನುಭವಿಸದೇ ತಂದೆಯ ಜೊತೆ ಮನೆಗೆ ಹೋಗುವುದಕ್ಕಾಗಿ ನೆನಪಿನಲ್ಲಿದ್ದು ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ. ಪತಿತರಿಂದ ಪಾವನರಾಗಬೇಕಾಗಿದೆ.

ವರದಾನ:-

ಈಗ ಸಮಯದನುಸಾರ, ಸಮೀಪತೆಯನುಸಾರ ಶಕ್ತಿರೂಪದ ಪ್ರಭಾವವನ್ನು ಅನ್ಯರ ಮೇಲೆ ಯಾವಾಗ ಪ್ರಭಾವ ಬೀರುತ್ತೀರಿ, ಆಗ ಅಂತಿಮ ಪ್ರತ್ಯಕ್ಷತೆಯನ್ನು ಸಮೀಪಕ್ಕೆ ತರಬಹುದು. ಹೇಗೆ ಸ್ನೇಹ ಹಾಗೂ ಸಹಯೋಗವನ್ನು ಪ್ರತ್ಯಕ್ಷಗೊಳಿಸಿದಿರಿ ಹಾಗೆಯೇ ಇಂತಹ ಸೇವೆಯ ದರ್ಪಣದಲ್ಲಿ ಶಕ್ತಿರೂಪದ ಅನುಭವ ಮಾಡಿಸಿರಿ. ಯಾವಾಗ ತಮ್ಮ ಶ್ರೇಷ್ಠತೆಯ ಮೂಲಕ ಶಕ್ತಿರೂಪದ ನವೀನತೆಯ ಧ್ವಜಾರೋಹಣ ಮಾಡಿದಾಗಲೇ ಪ್ರತ್ಯಕ್ಷತೆಯಾಗುವುದು. ತಮ್ಮ ಶಕ್ತಿ ಸ್ವರೂಪದಿಂದ ಸರ್ವಶಕ್ತಿವಂತ ತಂದೆಯ ಸಾಕ್ಷಾತ್ಕಾರ ಮಾಡಿಸಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top