15 September 2021 KANNADA Murli Today | Brahma Kumaris

Read and Listen today’s Gyan Murli in Kannada

September 14, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ನೀವೀಗ ಅಮರಲೋಕದ ಯಾತ್ರೆಯಲ್ಲಿದ್ದೀರಿ, ನಿಮ್ಮದು ಇದು ಬುದ್ಧಿಯ ಆತ್ಮಿಕ ಯಾತ್ರೆ ಆಗಿದೆ, ಇದನ್ನು ನೀವು ಸತ್ಯ-ಸತ್ಯ ಬ್ರಾಹ್ಮಣರೇ ಮಾಡುತ್ತೀರಿ''

ಪ್ರಶ್ನೆ:: -

ತಮ್ಮೊಂದಿಗೆ ತಾವು ಮತ್ತು ಪರಸ್ಪರ ವಾರ್ತಾಲಾಪ ಮಾಡುವುದೇ ಶುಭ ಸಮ್ಮೇಳನ ಆಗಿದೆ?

ಉತ್ತರ:-

ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ – ನಾನಾತ್ಮ, ಈಗ ಈ ಹಳೆಯ ಛೀ ಛೀ ಶರೀರವನ್ನು ಬಿಟ್ಟು ಮರಳಿ ಮನೆಗೆ ಹೋಗುತ್ತೇನೆ. ಈ ಶರೀರವು ಯಾವುದೇ ಪ್ರಯೋಜನಕ್ಕಿಲ್ಲ. ಈಗಂತೂ ತಂದೆಯ ಜೊತೆ ಹೋಗುತ್ತೇವೆ. ಪರಸ್ಪರ ಸೇರಿದಾಗಲೂ ಇದೇ ವಾರ್ತಾಲಾಪ ಮಾಡಿ – ಸೇವೆಯನ್ನು ಹೇಗೆ ವೃದ್ಧಿ ಪಡಿಸುವುದು? ಯಾವ ಪ್ರಕಾರದಿಂದ ಎಲ್ಲರ ಕಲ್ಯಾಣವಾಗುವುದು, ಎಲ್ಲರಿಗೆ ಮಾರ್ಗವನ್ನು ಹೇಗೆ ತಿಳಿಸುವುದು….. ಇದೇ ಶುಭ ಸಮ್ಮೇಳನವಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಹೃದಯದ ಆಸರೆ ತುಂಡಾಗದಿರಲಿ…….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಿಳಿದುಕೊಳ್ಳುತ್ತೀರಿ – ಕೇವಲ ನೀವಷ್ಟೇ ಅಲ್ಲ, ಎಲ್ಲಾ ಸೇವಾಕೇಂದ್ರಗಳ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣ ಸರ್ವೋತ್ತಮ ಕುಲಭೂಷಣರು ತಿಳಿದುಕೊಂಡಿದ್ದೀರಿ, ಯಾರು ಯಾವ ಕುಲದವರಾಗಿರುವರೋ ಅವರು ತಮ್ಮ ಕುಲದ ಬಗ್ಗೆ ಅರಿತುಕೊಂಡಿರುತ್ತಾರೆ. ಉತ್ತಮ ಕುಲದವರು ಆಗಿರಲಿ, ಕನಿಷ್ಟ ಕುಲದವರೇ ಆಗಿರಲಿ, ಪ್ರತಿಯೊಬ್ಬರೂ ತಮ್ಮ ಕುಲವನ್ನು ತಿಳಿದುಕೊಂಡಿರುತ್ತಾರೆ ಮತ್ತು ಇವರ ಕುಲವು ಒಳ್ಳೆಯದಾಗಿದೆ ಎಂಬುದನ್ನೂ ತಿಳಿದುಕೊಂಡಿರುತ್ತಾರೆ. ಕುಲವೆಂದಾದರೂ ಹೇಳಿ, ಜಾತಿಯೆಂದಾದರೂ ಹೇಳಿ, ಪ್ರಪಂಚದಲ್ಲಿ ಬ್ರಾಹ್ಮಣರದೇ ಸರ್ವೋತ್ತಮ ಕುಲವೆಂದು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು ಬ್ರಾಹ್ಮಣರದೇ ಮೊಟ್ಟ ಮೊದಲ ಕುಲವೆಂದು ಹೇಳಲಾಗುತ್ತದೆ. ಬ್ರಾಹ್ಮಣ ಕುಲ ಅರ್ಥಾತ್ ಈಶ್ವರೀಯ ಕುಲ. ಮೊದಲು ನಿರಾಕಾರಿ ಕುಲದವರಾಗಿರುತ್ತೀರಿ ನಂತರ ಸಾಕಾರ ಸೃಷ್ಟಿಯಲ್ಲಿ ಬರುತ್ತೀರಿ. ಸೂಕ್ಷ್ಮವತನದಲ್ಲಂತೂ ಕುಲವಿರುವುದಿಲ್ಲ. ಸಾಕಾರದಲ್ಲಿ ಸರ್ವ ಶ್ರೇಷ್ಠವಾದುದು ನೀವು ಬ್ರಾಹ್ಮಣರದಾಗಿದೆ. ನೀವು ಬ್ರಾಹ್ಮಣರು ಪರಸ್ಪರ ಸಹೋದರ-ಸಹೋದರಿಯರಾಗಿದ್ದೀರಿ. ಸಹೋದರ-ಸಹೋದರಿಯರಾಗಿರುವ ಕಾರಣ ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ನೀವು ಅನುಭವದಿಂದ ಹೇಳುತ್ತೀರಿ – ಪವಿತ್ರರಾಗಿರಲು ಇದು ಬಹಳ ಒಳ್ಳೆಯ ಯುಕ್ತಿಯಾಗಿದೆ. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಎಲ್ಲರೂ ಶಿವವಂಶಿಯರಾಗಿದ್ದಾರೆ ಮತ್ತೆ ಸಾಕಾರದಲ್ಲಿ ಬಂದಾಗ ಪ್ರಜಾಪಿತನ ಹೆಸರಿರುವ ಕಾರಣ ಸಹೋದರ-ಸಹೋದರಿಯರಾಗುತ್ತಾರೆ. ಪ್ರಜಾಪಿತ ಬ್ರಹ್ಮಾರವರು ಅವಶ್ಯವಾಗಿ ರಚಯಿತನಾಗಿದ್ದಾರೆ, ದತ್ತು ಮಾಡಿಕೊಳ್ಳುತ್ತಾರೆ. ನೀವು ಕುಖ ವಂಶಾವಳಿಯಲ್ಲ, ಮುಖ ವಂಶಾವಳಿ ಆಗಿದ್ದೀರಿ. ಮನುಷ್ಯರು ಮುಖ ವಂಶಾವಳಿ ಮತ್ತು ಕುಖ ವಂಶಾವಳಿಯ ಅರ್ಥವನ್ನೂ ತಿಳಿದುಕೊಂಡಿಲ್ಲ ಮುಖ ವಂಶಾವಳಿ ಎಂದರೆ ದತ್ತು ಮಕ್ಕಳು, ಕುಖ ವಂಶಾವಳಿ ಎಂದರೆ ಜನ್ಮ ಪಡೆಯುವವರು. ನಿಮ್ಮದು ಅಲೌಕಿಕ ಜನ್ಮವಾಗಿದೆ. ತಂದೆಗೆ ಲೌಕಿಕ, ಅಲೌಕಿಕ, ಪಾರಲೌಕಿಕ ಎಂದು ಹೇಳಲಾಗುತ್ತದೆ. ಪ್ರಜಾಪಿತ ಬ್ರಹ್ಮನಿಗೆ ಅಲೌಕಿಕ ತಂದೆಯೆಂದು ಹೇಳಲಾಗುತ್ತದೆ. ಲೌಕಿಕ ತಂದೆಯಂತೂ ಎಲ್ಲರಿಗೂ ಇದ್ದಾರೆ, ಅದು ಸಾಮಾನ್ಯ ಮಾತಾಗಿದೆ. ಪಾರಲೌಕಿಕ ತಂದೆಯೂ ಎಲ್ಲರಿಗೂ ಇದ್ದಾರೆ. ಭಕ್ತಿಮಾರ್ಗದಲ್ಲಿ ಹೇ ಭಗವಂತ, ಹೇ ಪರಮಪಿತ ಎಂದು ಎಲ್ಲರೂ ಹೇಳುತ್ತಿರುತ್ತಾರೆ ಆದರೆ ಈ ತಂದೆಯನ್ನು (ಪ್ರಜಾಪಿತ ಬ್ರಹ್ಮಾ) ಎಂದೂ ಯಾರೂ ಕರೆಯುವುದಿಲ್ಲ. ಇವರು ಬ್ರಾಹ್ಮಣ ಮಕ್ಕಳ ತಂದೆಯಾಗಿದ್ದಾರೆ. ಅವರಿಬ್ಬರನ್ನೂ ಎಲ್ಲರೂ ತಿಳಿದುಕೊಂಡಿರುತ್ತಾರೆ ಆದರೆ ಈ ಬ್ರಹ್ಮಾರವರ ಮಾತಿನಲ್ಲಿ ತಬ್ಬಿಬ್ಬಾಗುತ್ತಾರೆ ಏಕೆಂದರೆ ಬ್ರಹ್ಮನಿರುವುದು ಸೂಕ್ಷ್ಮವತನದಲ್ಲಿ ಎಂದು. ಇಲ್ಲಂತೂ ತೋರಿಸುವುದಿಲ್ಲ, ಚಿತ್ರಗಳಲ್ಲಿಯೂ ಸಹ ಬ್ರಹ್ಮನಿಗೆ ದಾಡಿ, ಮೀಸೆಗಳನ್ನು ತೋರಿಸುತ್ತಾರೆ ಏಕೆಂದರೆ ಪ್ರಜಾಪಿತ ಬ್ರಹ್ಮನು ಇದೇ ಸೃಷ್ಟಿಯಲ್ಲಿದ್ದಾರೆ. ಸೂಕ್ಷ್ಮವತನದಲ್ಲಿ ಪ್ರಜೆಗಳನ್ನು ರಚಿಸುವುದಿಲ್ಲ. ಇಲ್ಲಿಯೇ ಪ್ರಜೆಗಳನ್ನು ರಚಿಸಿ ನಂತರ ಸೂಕ್ಷ್ಮವತನವಾಸಿ ಆಗುತ್ತಾರೆ, ಇದೂ ಸಹ ಯಾರ ಬುದ್ಧಿಯಲ್ಲಿಯೂ ಇಲ್ಲ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ, ಈ ಆತ್ಮಿಕ ಯಾತ್ರೆಯ ಗಾಯನವಿದೆ. ಆತ್ಮಿಕ ಯಾತ್ರೆ ಎಂದರೆ ಎಲ್ಲಿಂದ ಮತ್ತೆ ಹಿಂತಿರುಗಿ ಬರುವುದಿಲ್ಲ. ಅನ್ಯ ಯಾತ್ರೆಗಳನ್ನಂತೂ ಎಲ್ಲರೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಇರುತ್ತಾರೆ. ಯಾತ್ರೆಗೆ ಮರಳಿ ಬರುತ್ತಾರೆ. ಅದು ಸ್ಥೂಲ ಯಾತ್ರೆ ಆಗಿದೆ, ನಿಮ್ಮದು ಇದು ಆತ್ಮಿಕ ಯಾತ್ರೆಯಾಗಿದೆ. ಈ ಆತ್ಮಿಕ ಯಾತ್ರೆ ಮಾಡುವುದರಿಂದ ನೀವು ಮೃತ್ಯುಲೋಕಕ್ಕೆ ಹಿಂತಿರುಗುವುದಿಲ್ಲ. ತಂದೆಯು ನಿಮಗೆ ಅಮರಲೋಕದ ಯಾತ್ರೆಯನ್ನು ಕಲಿಸುತ್ತಾರೆ. ಮನುಷ್ಯರು ಕಾಶ್ಮೀರದ ಕಡೆ ಅಮರನಾಥದ ಯಾತ್ರೆ ಮಾಡಲು ಹೋಗುತ್ತಾರೆ ಆದರೆ ಅಮರ ಲೋಕವಲ್ಲ. ಅಮರ ಲೋಕವು ಒಂದು ಆತ್ಮಗಳ ಲೋಕವಾಗಿದೆ, ಇನ್ನೊಂದು ಮನುಷ್ಯರ ಅಮರ ಲೋಕವಾಗಿದೆ. ಯಾವುದಕ್ಕೆ ಸ್ವರ್ಗ ಅಥವಾ ಅಮರಲೋಕವೆಂದು ಹೇಳುತ್ತಾರೆ. ಆತ್ಮಗಳ ಲೋಕವು ನಿರ್ವಾಣಧಾಮವಾಗಿದೆ ಬಾಕಿ ಅಮರಲೋಕವು ಸತ್ಯಯುಗವಾಗಿದೆ ಮತ್ತು ಮೃತ್ಯುಲೋಕವು ಕಲಿಯುಗವಾಗಿದೆ ಮತ್ತು ನಿರ್ವಾಣಧಾಮವು ಶಾಂತಿಧಾಮವಾಗಿದೆ ಎಲ್ಲಿ ಆತ್ಮರಿರುತ್ತಾರೆ. ತಂದೆಯು ಹೇಳುತ್ತಾರೆ – ನೀವು ಅಮರಪುರಿಯ ಯಾತ್ರೆಯಲ್ಲಿದ್ದೀರಿ, ಅವು ಕಾಲ್ನಡಿಗೆಯಲ್ಲಿ ಹೋಗುವ ಶಾರೀರಿಕ ಯಾತ್ರೆಗಳಾಗಿವೆ, ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ಅದನ್ನು ಕಲಿಸುವವರು ಒಬ್ಬರೇ ಆತ್ಮಿಕ ತಂದೆಯಾಗಿದ್ದಾರೆ ಮತ್ತು ಒಂದೇ ಬಾರಿ ಬಂದು ಕಲಿಸಿಕೊಡುತ್ತಾರೆ. ಅದಂತೂ ಜನ್ಮ ಜನ್ಮಾಂತರದ ಮಾತಾಗಿದೆ, ಇದು ಮೃತ್ಯುಲೋಕದ ಅಂತಿಮ ಯಾತ್ರೆಯಾಗಿದೆ. ಇದನ್ನು ನೀವು ಬ್ರಾಹ್ಮಣ ಕುಲಭೂಷಣರೇ ತಿಳಿದುಕೊಂಡಿದ್ದೀರಿ. ಆತ್ಮಿಕ ಯಾತ್ರೆ ಅರ್ಥಾತ್ ನೆನಪಿನಲ್ಲಿದ್ದೀರಿ. ಅಂತ್ಯ ಮತಿ ಸೋ ಗತಿಯೆಂದು ಗಾಯನವಿದೆ. ನಿಮಗೆ ತಂದೆಯ ಮನೆಯೇ ನೆನಪು ಬರುತ್ತದೆ ಏಕೆಂದರೆ ತಿಳಿದುಕೊಂಡಿದ್ದೀರಿ, ಈಗ ನಾಟಕವು ಮುಕ್ತಾಯವಾಗುತ್ತದೆ, ಇದು ಹಳೆಯ ವಸ್ತ್ರ, ಹಳೆಯ ಶರೀರವಾಗಿದೆ. ಆತ್ಮದಲ್ಲಿ ತುಕ್ಕು ಬೀಳುವುದರಿಂದ ಶರೀರದಲ್ಲಿಯೂ ತುಕ್ಕು ಬೀಳುತ್ತದೆ. ಯಾವಾಗ ಆತ್ಮವು ಪವಿತ್ರವಾಗುವುದೋ ಆಗ ನಮಗೆ ಪವಿತ್ರ ಶರೀರವೇ ಸಿಗುತ್ತದೆ. ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಹೊರಗಿನವರು ಏನನ್ನೂ ತಿಳಿದುಕೊಂಡಿಲ್ಲ. ನೀವು ನೋಡುತ್ತೀರಿ – ಕೆಲಕೆಲವರು ತಿಳಿದುಕೊಳ್ಳಲೂಬಹುದು ಆದರೆ ಅವರ ಬುದ್ಧಿಯಲ್ಲಿ ಈ ಜ್ಞಾನವಿರುವುದಿಲ್ಲ, ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಅನ್ಯರಿಗೆ ತಿಳಿಸುವರು. ಮನುಷ್ಯರು ತೀರ್ಥ ಯಾತ್ರೆಗಳನ್ನು ಮಾಡುವಾಗ ಪವಿತ್ರರಾಗಿರುತ್ತಾರೆ ಮತ್ತೆ ಮನೆಗೆ ಬಂದು ಅಪವಿತ್ರರಾಗುತ್ತಾರೆ. ಒಂದೆರಡು ತಿಂಗಳು ಪವಿತ್ರವಾಗಿರುತ್ತಾರೆ, ಯಾತ್ರೆ ಮಾಡುವುದಕ್ಕೂ ಒಂದು ಸೀಜನ್ ಇರುತ್ತದೆ. ಸದಾ ಯಾತ್ರೆ ಮಾಡಲು ಸಾಧ್ಯವಿಲ್ಲ. ಚಳಿ ಹಾಗೂ ಮಳೆಗಾಲದ ಸಮಯದಲ್ಲಿ ಯಾರೂ ಹೋಗುವುದಿಲ್ಲ. ನಿಮ್ಮ ಯಾತ್ರೆಯಲ್ಲಿ ಯಾವುದೇ ಬಿಸಿಲು-ಚಳಿಯ ಮಾತಿಲ್ಲ. ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ, ನಾವು ತಂದೆಯ ಮನೆಗೆ ಹೋಗುತ್ತಿದ್ದೇವೆ. ಎಷ್ಟು ನಾವು ನೆನಪು ಮಾಡುತ್ತೇವೆಯೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ತಂದೆಯ ಮನೆಗೆ ಹೋಗಿ ಮತ್ತೆ ನಾವು ಹೊಸ ಪ್ರಪಂಚದಲ್ಲಿ ಬರುತ್ತೇವೆ. ಇದನ್ನು ತಂದೆಯೇ ತಿಳಿಸುತ್ತಾರೆ. ಇಲ್ಲಿಯೂ ನಂಬರ್ವಾರ್ ಮಕ್ಕಳಿದ್ದಾರೆ. ವಾಸ್ತವದಲ್ಲಿ ಯಾತ್ರೆಯನ್ನು ಮರೆಯಬಾರದು ಆದರೆ ಮಾಯೆಯು ಮರೆಸಿ ಬಿಡುತ್ತದೆ. ಆದ್ದರಿಂದ ಬಾಬಾ, ನಿಮ್ಮ ನೆನಪು ಮರೆತು ಹೋಗುತ್ತದೆ ಎಂದು ಬರೆಯುತ್ತಾರೆ. ಅರೆ! ನೆನಪಿನ ಯಾತ್ರೆಯಿಂದ ನೀವು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ, ಇಂತಹ ಔಷಧಿಯನ್ನೇ ನೀವು ಮರೆತು ಹೋಗುತ್ತೀರಾ? ಕೆಲವೊಮ್ಮೆ ಮಕ್ಕಳು ಇದನ್ನೂ ಹೇಳುತ್ತಾರೆ – ತಂದೆಯನ್ನು ನೆನಪು ಮಾಡುವುದು ಬಹಳ ಸಹಜವಾಗಿದೆ ಎಂದು. ತಮ್ಮ ಜೊತೆ ಮಾತನಾಡಿಕೊಳ್ಳಬೇಕು – ನಾನಾತ್ಮನು ಮೊದಲು ಸತೋಪ್ರಧಾನನಾಗಿದ್ದೇನೆ, ಈಗ ತಮೋಪ್ರಧಾನನಾಗಿದ್ದೇನೆ. ಈಗ ಶಿವ ತಂದೆಯು ನಮಗೆ ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ ಬಾಕಿ ಅಭ್ಯಾಸ ಮಾಡಬೇಕಾಗಿದೆ. ಕಣ್ಣು ಮುಚ್ಚಿ ವಿಚಾರ ಮಾಡಲು ಆಗುವುದಿಲ್ಲ (ತಂದೆಯು ಅದನ್ನು ನಟನೆ ಮಾಡಿ ತೋರಿಸಿದರು). ತನ್ನೊಂದಿಗೆ ತಾನು ಮಾತನಾಡಿಕೊಳ್ಳಿ – ನಾವು ಸತೋಪ್ರಧಾನರಾಗಿದ್ದೆವು, ನಾವೇ ರಾಜ್ಯ ಮಾಡುತ್ತಿದ್ದೆವು, ಅದು ಸತ್ಯಯುಗವಾಗಿತ್ತು ನಂತರ ತ್ರೇತಾಯುಗ, ದ್ವಾಪರಯುಗ, ಕಲಿಯುಗದಲ್ಲಿ ಬಂದು ಬಿಟ್ಟೆವು. ಈಗ ಕಲಿಯುಗದ ಅಂತ್ಯವಾಗಿದೆ ಆದ್ದರಿಂದ ತಂದೆಯು ಬಂದಿದ್ದಾರೆ. ತಂದೆಯು ನಾವಾತ್ಮರಿಗೆ ತಿಳಿಸುತ್ತಾರೆ – ಮಕ್ಕಳೇ, ನನ್ನನ್ನು ನೆನಪು ಮಾಡಿರಿ ಮತ್ತು ತಮ್ಮ ಮನೆಯನ್ನೂ ನೆನಪು ಮಾಡಿರಿ. ಅಲ್ಲಿಂದಲೇ ನೀವು ಬಂದಿದ್ದೀರಿ, ಈ ಸ್ಮೃತಿಯಿದ್ದಾಗ ಅಂತಿಮ ಸ್ಮೃತಿಯಂತೆ ಅಂತಹದ್ದೇ ಗತಿಯಾಗುವುದು. ನೀವು ಅಲ್ಲಿಯೇ ಹೋಗಬೇಕಾಗಿದೆ, ಈ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ. ಮುಂಜಾನೆ ಎದ್ದು ತಮ್ಮೊಂದಿಗೆ ಮಾತನಾಡಿಕೊಳ್ಳಿ. ತಂದೆಯು ಮಾಡಿ ತೋರಿಸುತ್ತಾರೆ – ನಾನೂ ಸಹ ಮುಂಜಾನೆ ಎದ್ದು ವಿಚಾರ ಸಾಗರ ಮಂಥನ ಮಾಡುತ್ತೇನೆ. ಸತ್ಯ ಸಂಪಾದನೆ ಮಾಡಿಕೊಳ್ಳಬೇಕಲ್ಲವೆ. ಮುಂಜಾನೆಯ ಸ್ವಾಮಿ…….. ಆ ಸ್ವಾಮಿಯನ್ನು ನೆನಪು ಮಾಡುವುದರಿಂದ ನಿಮ್ಮ ದೋಣಿಯು ಪಾರಾಗುವುದು. ತಂದೆಯು ಏನು ಮಾಡುವರು, ಹೇಗೆ ಮಾಡುವರೋ ಅದನ್ನು ಮಕ್ಕಳಿಗೂ ತಿಳಿಸುತ್ತಾರೆ. ಇದರಲ್ಲಿ ಮತ್ತ್ಯಾವುದೇ ಮಾತಿಲ್ಲ. ಇದು ಸಂಪಾದನೆಯ ಬಹಳ ಒಳ್ಳೆಯ ಯುಕ್ತಿಯಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ತಂದೆಯ ಆಸ್ತಿಯು ಅವಶ್ಯವಾಗಿ ಪ್ರಾಪ್ತಿಯಾಗುವುದು. ಮಕ್ಕಳಿಗೆ ತಿಳಿದಿದೆ – ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ತಂದೆಯು ಬೀಜರೂಪ, ಜ್ಞಾನ ಸಾಗರ ಆಗಿದ್ದಾರೆ ಅಂದಮೇಲೆ ನಾವೂ ಸಹ ವೃಕ್ಷವನ್ನು ಪೂರ್ಣವಾಗಿ ಅರಿತುಕೊಂಡಿದ್ದೇವೆ. ಇದೂ ಸಹ ವಿಸ್ತಾರವಾದ ಜ್ಞಾನವಾಗಿದೆ. ಈ ವೃಕ್ಷವು ಆದಿಯಲ್ಲಿ ಹೇಗೆ ವೃದ್ಧಿಯನ್ನು ಹೊಂದುತ್ತದೆ ನಂತರ ಹೇಗೆ ಅದರ ಆಯಸ್ಸು ಮುಗಿಯುತ್ತದೆ ಮತ್ತು ವೃಕ್ಷವು ಬಿರುಗಾಳಿಗಳು ಬಂದರೆ ಸಾಕು ಕೆಳಗೆ ಬೀಳುತ್ತದೆ ಆದರೆ ಈ ಮನುಷ್ಯ ಸೃಷ್ಟಿ ವೃಕ್ಷದ ಮೊದಲ ಬುನಾದಿಯೇ ಸುಟ್ಟು ಹೋಗುತ್ತದೆ. ಈ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗುತ್ತದೆ, ಇದು ಆಗಲೇಬೇಕಾಗಿದೆ. ಯಾವಾಗ ಇದು ಸಮಾಪ್ತಿಯಾಗುವುದೋ ಆಗ ಒಂದು ಧರ್ಮದ ಪುನಃ ಸ್ಥಾಪನೆ ಮತ್ತು ಅನೇಕ ಧರ್ಮಗಳ ವಿನಾಶವೆಂದು ಹೇಳಲಾಗುವುದು. ಕಲ್ಪ-ಕಲ್ಪವೂ ಈ ಧರ್ಮವು ಪ್ರಾಯಲೋಪವಾಗುತ್ತದೆ. ಆತ್ಮದಲ್ಲಿ ತುಕ್ಕು ಬೀಳುವುದರಿಂದ ಆಭರಣಗಳೂ ನಕಲಿಯಾಗುತ್ತವೆ. ಮಕ್ಕಳು ತಿಳಿದುಕೊಳ್ಳುತ್ತೀರಿ – ನಾವಾತ್ಮರಲ್ಲಿ ತುಕ್ಕು ಹಿಡಿದಿದೆ, ನಾವೀಗ ಸ್ವಚ್ಛವಾಗುತ್ತೇವೆ ಆಗ ಅನ್ಯರಿಗೂ ಮಾರ್ಗ ತಿಳಿಸುತ್ತೇವೆ. ಪ್ರಪಂಚವು ತಮೋಪ್ರಧಾನ, ಸ್ವರ್ಗವಾಗಿತ್ತು ಅಂದಾಗ ಮಕ್ಕಳು ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ಮಾತನಾಡಿಕೊಳ್ಳಬೇಕು ಅರ್ಥಾತ್ ವಾರ್ತಾಲಾಪ ಮಾಡಿಕೊಳ್ಳಬೇಕು, ವಿಚಾರ ಸಾಗರ ಮಂಥನ ಮಾಡಬೇಕು. ನಂತರ ಇದು 84 ಜನ್ಮಗಳ ಚಕ್ರವಾಗಿದೆ. ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಯಾರು ತೆಗೆದುಕೊಳ್ಳುತ್ತಾರೆ, ಯಾರು ಮೊಟ್ಟ ಮೊದಲು ಬರುವರೋ ಅವರೇ ತೆಗೆದುಕೊಳ್ಳುತ್ತಾರೆ ಎಂದು ಅನ್ಯರಿಗೆ ತಿಳಿಸಬಹುದಾಗಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಬಂದು 84 ಜನ್ಮಗಳ ಚಕ್ರವನ್ನು ತಿಳಿಸುತ್ತಾರೆ. ತಂದೆಯು ಎಲ್ಲಿ ಬಂದಿದ್ದಾರೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಸ್ವಯಂ ತಂದೆಯೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ, ತಿಳಿಸುತ್ತಾರೆ – ಮಕ್ಕಳೇ, ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವವು. ಈ ರೀತಿಯಾಗಿ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಭಲೆ ಗೀತೆಯನ್ನು ಓದಿ ತಿಳಿಸುತ್ತಾರೆ, ಅನೇಕರು ಅಲ್ಲಿಗೆ ಹೋಗುತ್ತಿರುತ್ತಾರೆ ಆದರೆ ಭಗವಂತನು ಎಂದಾದರೂ ಬಂದಿರಬೇಕು, ಜ್ಞಾನವನ್ನು ತಿಳಿಸಿರಬೇಕಲ್ಲವೆ. ಅವರು ಬಂದಾಗಲೇ ಜ್ಞಾನವನ್ನು ತಿಳಿಸುವರಲ್ಲವೆ! ಮನುಷ್ಯರು ಗೀತಾ ಪುಸ್ತಕವನ್ನು ತೆಗೆದುಕೊಂಡು ಓದಿ ತಿಳಿಸುತ್ತಾರೆ, ಇಲ್ಲಂತೂ ಭಗವಂತನು ಜ್ಞಾನ ಸಾಗರನಾಗಿದ್ದಾರೆ, ಇವರಿಗೆ ಯಾವುದನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಅವಶ್ಯಕತೆಯೂ ಇಲ್ಲ, ಇವರು ಯಾರಿಂದಲೂ ಕಲಿಯುವುದಿಲ್ಲ. ಕಲ್ಪದ ಮೊದಲೂ ಸಹ ಬಂದು ನೀವು ಮಕ್ಕಳಿಗೆ ಸಂಗಮದಲ್ಲಿ ಕಲಿಸಿದ್ದರು, ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ, ಇದು ನೆನಪಿನ ಯಾತ್ರೆಯಾಗಿದೆ. ನಿಮ್ಮ ಬುದ್ಧಿಯೇ ತಿಳಿದುಕೊಂಡಿದೆ – ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರ ವಿನಃ ಮತ್ತ್ಯಾವ ಮನುಷ್ಯರಲ್ಲಿಯೂ ಈ ಜ್ಞಾನವಿರುವುದಿಲ್ಲ. ಎಲ್ಲರಲ್ಲಿ ಸರ್ವವ್ಯಾಪಿಯ ಜ್ಞಾನವೇ ತುಂಬಿದೆ. ಪರಮಾತ್ಮನು ಬಿಂದುವಾಗಿದ್ದಾರೆ, ಜ್ಞಾನ ಸಾಗರ, ಪತಿತ-ಪಾವನ ಆಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಕೇವಲ ಹಾಗೆಯೇ ಹಾಡುತ್ತಿರುತ್ತಾರೆ, ಗುರುಗಳನ್ನು ಏನನ್ನು ಕಲಿಸುವರೋ ಅದನ್ನೇ ಸತ್ಯ-ಸತ್ಯವೆಂದು ಹೇಳಿ ಮಾಡುತ್ತಿರುತ್ತಾರೆ. ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಇದು ಸತ್ಯವೇ ಅಥವಾ ಅಲ್ಲವೆ? ಎಂಬುದನ್ನೂ ಸಹ ವಿಚಾರ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ – ನೀವು ಮಕ್ಕಳು ನಡೆಯುತ್ತಾ-ತಿರುಗಾಡುತ್ತಾ ನೆನಪಿನ ಯಾತ್ರೆಯಲ್ಲಿ ಖಂಡಿತ ಇರಬೇಕಾಗಿದೆ, ಇಲ್ಲದಿದ್ದರೆ ವಿಕರ್ಮಗಳು ವಿನಾಶವಾಗುವುದಿಲ್ಲ. ಯಾವುದೇ ಕರ್ಮ ಮಾಡುತ್ತಾ ಇರಿ ಆದರೆ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ಶ್ರೀನಾಥ ದ್ವಾರದಲ್ಲಿ ಭೋಜನವನ್ನು ತಯಾರಿಸುವಾಗ ಬುದ್ಧಿಯಲ್ಲಿ ಶ್ರೀನಾಥನ ಧ್ಯಾನವೇ ಇರುತ್ತದೆಯಲ್ಲವೆ. ಅವರು ಕುಳಿತಿರುವುದೇ ಮಂದಿರದಲ್ಲಿ. ತಿಳಿದಿರುತ್ತದೆ, ನಾವು ಶ್ರೀನಾಥನಿಗಾಗಿ ತಯಾರಿಸುತ್ತಿದ್ದೇವೆ. ಭೋಜನಗಳು ತಯಾರಿಸಿ, ನೈವೇದ್ಯವನ್ನಿಟ್ಟರು ಎಂದರೆ ಮನೆ, ಮಕ್ಕಳು ಎಲ್ಲವೂ ನೆನಪು ಬರುತ್ತಿರುತ್ತದೆ. ಅಲ್ಲಿ ಭೋಜನವನ್ನು ತಯಾರಿಸುತ್ತಾರೆ. ಬಾಯಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಮಾತನಾಡುವುದಿಲ್ಲ. ಮನಸ್ಸಿನಿಂದ ಯಾವುದೇ ವಿಕರ್ಮವಾಗುವುದಿಲ್ಲ, ಅವರು ಶ್ರೀನಾಥನ ಮಂದಿರದಲ್ಲಿ ಕುಳಿತಿರುತ್ತಾರೆ. ಇಲ್ಲಿ ನೀವು ಶಿವತಂದೆಯ ಬಳಿ ಕುಳಿತಿದ್ದೀರಿ, ಇಲ್ಲಿಯೂ ತಂದೆಯು ಯುಕ್ತಿಯನ್ನು ತಿಳಿಸುತ್ತಾ ಇರುತ್ತಾರೆ – ಮಕ್ಕಳೇ, ಯಾವುದೇ ವ್ಯರ್ಥ ಮಾತುಗಳನ್ನು ಮಾತನಾಡಬಾರದು, ಸದಾ ತಂದೆಯೊಂದಿಗೆ ಮಧುರಾತಿ ಮಧುರ ಮಾತುಗಳನ್ನು ಮಾತನಾಡಬೇಕಾಗಿದೆ. ತಂದೆಯು ಹೇಗೋ ಹಾಗೆಯೇ ಮಕ್ಕಳು. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯ ಸ್ಮೃತಿಯಿರುತ್ತದೆ ಆದ್ದರಿಂದ ಬಂದು ನೀವು ಮಕ್ಕಳಿಗೆ ತಿಳಿಸುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ – ನಮ್ಮ ತಂದೆಯು ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ, ಚೈತನ್ಯನಾಗಿದ್ದಾರೆ, ಎಷ್ಟು ಸಹಜ ಮಾತಾಗಿದೆ. ಆದರೂ ಸಹ ತಿಳಿದುಕೊಳ್ಳುವುದಿಲ್ಲ ಏಕೆಂದರೆ ಕಲ್ಲು ಬುದ್ಧಿಯವರಲ್ಲವೆ. ಆ ಬೀಜಕ್ಕೆ ನಾವು ಚೈತನ್ಯವೆಂದು ಹೇಳುವುದಿಲ್ಲ, ಈ ಬೀಜವು ಜ್ಞಾನಪೂರ್ಣನಾಗಿದ್ದಾರೆ, ಚೈತನ್ಯನಾಗಿದ್ದಾರೆ, ಇವರು ಒಬ್ಬರೇ ಇದ್ದಾರೆ, ಆ ಬೀಜಗಳಲ್ಲಿ ಅನೇಕ ಪ್ರಕಾರದ್ದಿರುತ್ತದೆ. ಭಗವಂತನಿಗೆ ಮನುಷ್ಯ್ ಸೃಷ್ಟಿಯ ಬೀಜರೂಪನೆಂದು ಹೇಳಲಾಗುತ್ತದೆ ಅಂದಮೇಲೆ ಅವರು ತಂದೆಯಾದರಲ್ಲವೆ. ಆತ್ಮಗಳ ತಂದೆಯು ಪರಮಾತ್ಮನಾಗಿದ್ದಾರೆ ಅಂದಮೇಲೆ ಎಲ್ಲರೂ ಸಹೋದರರಾದರು. ಎಲ್ಲಿ ನೀವಾತ್ಮರು ನಿವಾಸ ಮಾಡುತ್ತೀರೋ ಅಲ್ಲಿಯೇ ತಂದೆಯೂ ಇರುತ್ತಾರೆ. ನಿರ್ವಾಣಧಾಮದಲ್ಲಿ ತಂದೆ ಮತ್ತು ನೀವು ಮಕ್ಕಳಿರುತ್ತೀರಿ, ಈ ಸಮಯದಲ್ಲಿ ನೀವು ಪ್ರಜಾಪಿತ ಬ್ರಹ್ಮರವರ ಸಂತಾನರು ಸಹೋದರ-ಸಹೋದರಿಯಾಗಿದ್ದೀರಿ ಆದ್ದರಿಂದ ಶಿವವಂಶಿ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ಇದನ್ನೂ ಸಹ ನೀವು ಬರೆಯಬೇಕಾಗಿದೆ – ನೀವು ಬ್ರಹ್ಮಾಕುಮಾರ-ಕುಮಾರಿಯರು ಸಹೋದರ-ಸಹೋದರಿಯಾಗಿದ್ದೀರಿ, ತಂದೆಯು ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆಂದರೆ ಸಹೋದರ-ಸಹೋದರಿಯಾದರಲ್ಲವೆ. ತಂದೆಯು ಕಲ್ಪ-ಕಲ್ಪವೂ ಇದೇರೀತಿ ರಚಿಸುತ್ತಾರೆ, ದತ್ತು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಮನುಷ್ಯರಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳಲಾಗುತ್ತದೆ. ಭಲೆ ಬಾಬಾ ಎಂದು ಹೇಳುತ್ತಾರೆ ಆದರೆ ಅವರೆಲ್ಲರೂ ಹದ್ದಿನ ಬಾಬಾ ಆಗಿದ್ದಾರೆ. ಇವರಿಗೆ ಪ್ರಜಾಪಿತನೆಂದು ಹೇಳುತ್ತಾರೆ ಏಕೆಂದರೆ ಅನೇಕ ಪ್ರಜೆಗಳಿದ್ದಾರೆ ಅರ್ಥಾತ್ ಮಕ್ಕಳಿದ್ದಾರೆ ಅಂದಾಗ ಬೇಹದ್ದಿನ ತಂದೆಯು ಮಕ್ಕಳಿಗೆ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ – ಈ ಪ್ರಪಂಚವು ಬಹಳ ಕೆಟ್ಟು ಹೋಗಿದೆ, ಈಗ ನಿಮ್ಮನ್ನು ವಾಹ್-ವಾಹ್ನ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತೇನೆ. ನಿಮ್ಮಲ್ಲಿಯೂ ಬಹಳ ಮಕ್ಕಳು ಮರೆತು ಹೋಗುತ್ತಾರೆ. ಒಂದುವೇಳೆ ನೆನಪಿರುವುದೇ ಆದರೆ ತಂದೆಯ ನೆನಪೂ ಇರುವುದು ಮತ್ತು ಗುರುವಿನ ನೆನಪೂ ಇರುವುದು – ಈಗ ಹಿಂತಿರುಗಿ ಹೋಗಬೇಕಾಗಿದೆ. ಹಳೆಯ ಶರೀರವನ್ನು ಬಿಟ್ಟು ಹೋಗುತ್ತೇವೆ ಏಕೆಂದರೆ ಯಾವುದೇ ಶರೀರವು ಪ್ರಯೋಜನಕ್ಕಿಲ್ಲ. ಆತ್ಮವು ಈಗ ಪವಿತ್ರವಾಗುತ್ತಾ ಹೋಗುತ್ತದೆ ಆದ್ದರಿಂದ ಶರೀರವೂ ಪವಿತ್ರವಾಗಬೇಕಾಗಿದೆ. ಪರಸ್ಪರ ಕುಳಿತು ಇದೇ ಮಾತುಗಳನ್ನಾಡಬೇಕು, ಇದಕ್ಕೆ ಶುಭ ಸಮ್ಮೇಳನವೆಂದು ಹೇಳಲಾಗುತ್ತದೆ ಯಾವುದರಲ್ಲಿ ಒಳ್ಳೊಳ್ಳೆಯ ಮಾತುಗಳಿರುತ್ತವೆ! ಸೇವೆಯನ್ನು ಹೇಗೆ ವೃದ್ಧಿ ಮಾಡುವುದು, ಹೇಗೆ ಕಲ್ಯಾಣ ಮಾಡುವುದು! ಅವರದಂತೂ ಛೀ ಛೀ ಸಮ್ಮೇಳನಗಳಾಗಿವೆ, ಸುಳ್ಳು ಹೇಳುತ್ತಿರುತ್ತಾರೆ. ಇಲ್ಲಿ ಅಸತ್ಯದ ಮಾತಿಲ್ಲ, ಇದಕ್ಕೆ ಸತ್ಯ-ಸತ್ಯವಾದ ಸಮ್ಮೇಳನವೆಂದು ಹೇಳಲಾಗುತ್ತದೆ. ನಿಮಗೆ ಈ ಕಥೆಯನ್ನೂ ತಿಳಿಸಲಾಗಿದೆ – ಇದು ಕಲಿಯುಗವಾಗಿದೆ, ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಭಾರತವು ಸ್ವರ್ಗವಾಗಿತ್ತು, ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಈಗ ಅಂತ್ಯದಲ್ಲಿದ್ದೀರಿ, ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಇದರಲ್ಲಿ ಯಾವುದೇ ಗಂಗಾ ಸ್ನಾನ ಇತ್ಯಾದಿಗಳನ್ನು ಮಾಡುವಂತಿಲ್ಲ. ಭಗವಾನುವಾಚ ಏನೆಂದರೆ ನಾನು ಎಲ್ಲರ ತಂದೆಯಾಗಿದ್ದೇನೆ, ಕೃಷ್ಣನು ಎಲ್ಲರ ತಂದೆಯಾಗಲು ಸಾಧ್ಯವಿಲ್ಲ. ಒಬ್ಬರು ಅಥವಾ ಇಬ್ಬರು ಮಕ್ಕಳ ತಂದೆಯು ಶ್ರೀ ನಾರಾಯಣನಾಗಿದ್ದಾನೆ, ಶ್ರೀ ಕೃಷ್ಣನಲ್ಲ. ಶ್ರೀ ಕೃಷ್ಣನು ಕುಮಾರನಾಗಿದ್ದಾನೆ. ಈ ಪ್ರಜಾಪಿತ ಬ್ರಹ್ಮನಿಗೆ ಅನೇಕ ಮಕ್ಕಳಿದ್ದಾರೆ, ಕೃಷ್ಣ ಭಗವಾನುವಾಚವೆಲ್ಲಿ ಶಿವ ಭಗವಾನುವಾಚವೆಲ್ಲಿ, ಎಷ್ಟು ದೊಡ್ಡ ತಪ್ಪನ್ನು ಮಾಡಿದ್ದಾರೆ! ಎಲ್ಲಿ ಪ್ರದರ್ಶನಿಯನ್ನು ಇಟ್ಟರೂ ಸಹ ಮುಖ್ಯ ಮಾತು ಇದೇ ಆಗಿದೆ – ಗೀತೆಯ ಭಗವಂತನು ಶಿವನೋ ಅಥವಾ ಕೃಷ್ಣನೋ? ಮೊಟ್ಟ ಮೊದಲು ಇದನ್ನು ತಿಳಿಸಬೇಕು. ಶಿವನಿಗೇ ಭಗವಂತನೆಂದು ಹೇಳಲಾಗುತ್ತದೆ, ಇದನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ. ಇದರ ಬಗ್ಗೆ ಅಭಿಪ್ರಾಯದ ಪುಸ್ತಕವಿರಬೇಕು. ಗೀತೆಯ ಭಗವಂತನ ಚಿತ್ರವು ಇದ್ದೇ ಇರಬೇಕು, ಕೆಳಗಡೆ ಬರೆದಿರಲಿ – ಪರಿಶೀಲನೆ ಮಾಡಿ ಮತ್ತು ಬಂದು ತಿಳಿದುಕೊಳ್ಳಿ ಎಂದು. ನಂತರ ಬರೆಸಿಕೊಂಡು ಅವರಿಂದ ಸಹಿ ಮಾಡಿಸಿಕೊಳ್ಳಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪರಸ್ಪರ ಶುಭ ಸಮ್ಮೇಳನ ಮಾಡಿ ಸೇವೆಯ ವೃದ್ಧಿಯ ಯುಕ್ತಿಗಳನ್ನು ರಚಿಸಬೇಕಾಗಿದೆ. ತನ್ನ ಮತ್ತು ಸರ್ವರ ಕಲ್ಯಾಣದ ಯುಕ್ತಿಯನ್ನು ರಚಿಸಬೇಕಾಗಿದೆ. ಎಂದೂ ಯಾವುದೇ ವ್ಯರ್ಥ ಮಾತುಗಳನ್ನು ಆಡಬಾರದು.

2. ಬೆಳಗ್ಗೆ-ಬೆಳಗ್ಗೆ ಎದ್ದು ತನ್ನೊಂದಿಗೆ ತಾನು ಮಾತನಾಡಿಕೊಳ್ಳಬೇಕು, ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಭೋಜನವನ್ನು ತಯಾರಿಸುವಾಗ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ಮನಸ್ಸು ಸಹ ಹೊರಗೆ ಅಲೆಯಬಾರದು. ಇದರ ಕಡೆ ಗಮನವನ್ನು ಇಡಬೇಕಾಗಿದೆ.

ವರದಾನ:-

ವಿನಾಶದ ಸಮಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಅಥವಾ ಸರ್ವ ಪರಿಸ್ಥಿತಿಗಳನ್ನು ಎದುರಿಸುವುದಕ್ಕಾಗಿ ಆಕಾರಿ ಪ್ರಕಾಶ ರೂಪವುಳ್ಳವರಾಗಿರಿ. ಯಾವಾಗ ನಡೆಯುತ್ತಾ-ಸುತ್ತಾಡುತ್ತಾ ಲೈಟ್ಹೌಸ್ ಆಗಿ ಬಿಡುತ್ತೀರಿ, ಆಗ ತಮ್ಮ ಈ ರೂಪ (ಶರೀರ)ವು ಕಾಣಿಸುವುದಿಲ್ಲ. ಹೇಗೆ ಪಾತ್ರವನ್ನು ಅಭಿನಯಿಸುವ ಸಮಯದಲ್ಲಿ ವಸ್ತ್ರವನ್ನು ಧರಿಸುತ್ತೀರಿ, ಕಾರ್ಯವು ಸಮಾಪ್ತಿ ಆಯಿತೆಂದರೆ ವಸ್ತ್ರವನ್ನು ತೆಗೆದು ಬಿಡುತ್ತೀರಿ. ಒಂದು ಸೆಕೆಂಡಿನಲ್ಲಿ ಧರಿಸುವುದು ಮತ್ತು ಒಂದು ಸೆಕೆಂಡಿನಲ್ಲಿ ಭಿನ್ನವಾಗಿ ಬಿಡುವುದು – ಯಾವಾಗ ಈ ಅಭ್ಯಾಸವಾಗುತ್ತದೆಯೋ ಆಗ ನೋಡುವವರಿಗೆ ಈ ಅನುಭವವಾಗುತ್ತದೆ – ಇವರು ಪ್ರಕಾಶ ವಸ್ತ್ರಧಾರಿಗಳು ಆಗಿದ್ದಾರೆ, ಪ್ರಕಾಶತೆಯೇ ಇವರ ಶೃಂಗಾರವಾಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top