14 September 2021 KANNADA Murli Today | Brahma Kumaris

Read and Listen today’s Gyan Murli in Kannada

September 13, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ತಮ್ಮ ಸತ್ಯ-ಸತ್ಯವಾದ ಚಾರ್ಟ್ ಇಟ್ಟುಕೊಳ್ಳಿ ಆಗ ಸ್ಥಿತಿಯು ಚೆನ್ನಾಗಿರುವುದು, ಚಾರ್ಟ್ ಇಡುವುದರಿಂದ ಉನ್ನತಿಯಾಗುತ್ತಾ ಇರುವುದು''

ಪ್ರಶ್ನೆ:: -

ಯಾವ ಸ್ಮೃತಿಯು ಹಳೆಯ ಪ್ರಪಂಚದಿಂದ ಸಹಜವಾಗಿ ದೂರ ಸರಿಸುತ್ತದೆ?

ಉತ್ತರ:-

ಈ ಸ್ಮೃತಿಯಿರಲಿ – ನಾವು ಕಲ್ಪ-ಕಲ್ಪವೂ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆದುಕೊಳ್ಳುತ್ತೇವೆ, ಈಗ ಪುನಃ ಆಸ್ತಿಯನ್ನು ಪಡೆಯುದಕ್ಕಾಗಿ ನಾವು ಶಿವ ತಂದೆಯ ಮಡಿಲನ್ನು ಪಡೆದಿದ್ದೇವೆ. ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ನಾವು ಸತ್ಯ-ಸತ್ಯ ಬ್ರಾಹ್ಮಣರಾಗಿದ್ದೇವೆ, ಶಿವ ತಂದೆಯು ನಮಗೆ ಗೀತೆಯನ್ನು ತಿಳಿಸುತ್ತಿದ್ದಾರೆ – ಈ ಸ್ಮೃತಿಯು ಹಳೆಯ ಪ್ರಪಂಚದಿಂದ ಸಹಜವಾಗಿ ದೂರ ಸರಿಸುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ನೀವು ಮಕ್ಕಳು ಇಲ್ಲಿ ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ ಅಂದಾಗ ನೀವು ತಿಳಿದುಕೊಂಡಿದ್ದೀರಿ – ಅವರು ನಮ್ಮನ್ನು ಪುನಃ ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳ ಬುದ್ಧಿಯಲ್ಲಿ ಎಷ್ಟೊಂದು ಆಂತರಿಕ ಖುಷಿಯಿರಬೇಕು. ಇಲ್ಲಿ ಕುಳಿತೇ ಮಕ್ಕಳಿಗೆ ಖಜಾನೆಯು ಸಿಗುತ್ತಿದೆಯಲ್ಲವೆ. ಅನೇಕ ಪ್ರಕಾರದ ಕಾಲೇಜುಗಳಲ್ಲಿ, ಯುನಿವರ್ಸಿಟಿಯಲ್ಲಿ ಯಾರದೇ ಬುದ್ಧಿಯಲ್ಲಿ ಈ ಮಾತುಗಳಿರುವುದಿಲ್ಲ, ನೀವೇ ತಿಳಿದುಕೊಂಡಿದ್ದೀರಿ – ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ಈ ಖುಷಿಯಿರಬೇಕಲ್ಲವೆ. ಈ ಸಮಯದಲ್ಲಿ ಮತ್ತೆಲ್ಲಾ ಚಿಂತನೆಗಳನ್ನು ಬಿಟ್ಟು ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ಬುದ್ಧಿಯಲ್ಲಿ ನಶೆಯಿರಲಿ, ನಾವೀಗ ಸುಖಧಾಮದ ಮಾಲೀಕರಾಗುತ್ತಿದ್ದೇವೆ. ನಾವು ಕಲ್ಪ-ಕಲ್ಪವೂ ಸುಖ ಮತ್ತು ಶಾಂತಿಯ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ, ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಕಲ್ಪದ ಮೊದಲೂ ಸಹ ಮನುಷ್ಯರು ಅಜ್ಞಾನ ಅಂಧಕಾರದಲ್ಲಿ, ಕುಂಭಕರ್ಣನ ನಿದ್ರೆಯಲ್ಲಿ ಮಲಗಿ ಸಮಾಪ್ತಿಯಾಗಿದ್ದರು, ಪುನಃ ಇದೇರೀತಿ ಆಗುವುದು. ಮಕ್ಕಳು ತಿಳಿದುಕೊಳ್ಳುತ್ತೀರಿ, ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ ಹಾಗೂ ನಾವು ಶಿವ ತಂದೆಯ ಧರ್ಮದ ಮಡಿಲನ್ನು ಪಡೆದಿದ್ದೇವೆ. ಅವರೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ನಾವೀಗ ಬ್ರಾಹ್ಮಣರಾಗಿದ್ದೇವೆ, ನಾವು ಸತ್ಯ-ಸತ್ಯವಾದ ಗೀತಾಪಾಠವನ್ನು ಕೇಳುತ್ತಿದ್ದೇವೆ. ನಾವು ತಂದೆಯಿಂದ ಪುನಃ ರಾಜಯೋಗ ಮತ್ತು ಜ್ಞಾನ ಬಲದಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಇಂತಿಂತಹ ವಿಚಾರಗಳು ಆಂತರ್ಯದಲ್ಲಿ ಬರಬೇಕಲ್ಲವೆ. ತಂದೆಯೂ ಸಹ ಖುಷಿಯ ಮಾತುಗಳನ್ನು ತಿಳಿಸುತ್ತಾರಲ್ಲವೆ. ತಂದೆಗೆ ಗೊತ್ತಿದೆ, ಮಕ್ಕಳು ಕಾಮ ಚಿತೆಯ ಮೇಲೆ ಕುಳಿತು ಭಸ್ಮೀಭೂತರಾಗಿ ಬಿಟ್ಟಿದ್ದಾರೆ. ಆದ್ದರಿಂದ ಅಮರಲೋಕದಿಂದ ಮೃತ್ಯುಲೋಕದಲ್ಲಿ ಬರುತ್ತೇನೆ. ಮತ್ತೆ ನೀವು ಹೇಳುತ್ತೀರಿ, ನಾವು ಮೃತ್ಯುಲೋಕದಿಂದ ಅಮರಲೋಕಕ್ಕೆ ಹೋಗುತ್ತೇವೆ. ತಂದೆಯು ತಿಳಿಸುತ್ತಾರೆ – ನಾನು ಮೃತ್ಯುಲೋಕದಲ್ಲಿ ಬರುತ್ತೇನೆ ಎಲ್ಲಿ ಎಲ್ಲರ ಮೃತ್ಯುವಾಗಿ ಬಿಟ್ಟಿದೆ ಅವರನ್ನು ಪುನಃ ಅಮರಲೋಕದಲ್ಲಿ ಕರೆದುಕೊಂಡು ಹೋಗುತ್ತೇನೆ. ಶಾಸ್ತ್ರಗಳಲ್ಲಿ ಏನೇನನ್ನೋ ಬರೆದು ಬಿಟ್ಟಿದ್ದಾರೆ. ಅವರು ಸರ್ವಶಕ್ತಿವಂತನಾಗಿದ್ದಾರೆ. ಏನು ಬೇಕಾದರೂ ಮಾಡಬಲ್ಲರು ಎಂದು ಹೇಳುತ್ತಾರೆ ಆದರೆ ಮಕ್ಕಳು ತಿಳಿದುಕೊಂಡಿದ್ದೀರಿ – ಅವರನ್ನು ಕರೆಯುವುದೇ ಹೇ ಪತಿತ-ಪಾವನ ಬನ್ನಿ, ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ. ದುಃಖವನ್ನು ಹರಿಸಿ, ಸುಖವನ್ನು ನೀಡಿ ಎಂದು. ಇದರಲ್ಲಿ ಜಾದುವಿನ ಯಾವುದೇ ಮಾತಿಲ್ಲ. ತಂದೆಯು ಬರುವುದೇ ಮುಳ್ಳುಗಳಿಂದ ಹೂಗಳನ್ನಾಗಿ ಮಾಡಲು.

ನೀವೀಗ ತಿಳಿದುಕೊಂಡಿದ್ದೀರಿ – ನಾವೇ ಸುಖಧಾಮದ ದೇವತೆಗಳಾಗಿದ್ದೆವು, ಸತೋಪ್ರಧಾನರಾಗಿದ್ದೆವು, ಪ್ರತಿಯೊಬ್ಬರೂ ಸತೋಪ್ರಧಾನತೆಯಿಂದ ತಮೋಪ್ರಧಾನತೆಯಲ್ಲಿ ಬರಲೇಬೇಕಾಗಿದೆ. ನೀವು ಮಕ್ಕಳು ಇಲ್ಲಿ ಕುಳಿತುಕೊಂಡಾಗ ಇನ್ನೂ ಆನಂದವಾಗಬೇಕು, ನೆನಪಿರಬೇಕು, ಇಡೀ ಪ್ರಪಂಚವು ತಂದೆಯನ್ನು ನೆನಪು ಮಾಡುತ್ತದೆ – ಹೇ ಮುಕ್ತಿದಾತ, ಮಾರ್ಗದರ್ಶಕ, ಪತಿತ-ಪಾವನ ಬನ್ನಿ ಎಂದು. ರಾವಣ ರಾಜ್ಯದಲ್ಲಿದ್ದಾಗ ಕರೆಯುತ್ತಾರೆ. ಸತ್ಯಯುಗದಲ್ಲಿ ಕರೆಯುವುದಿಲ್ಲ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಇದನ್ನು ಯಾರು ತಿಳಿಸಿದರು? ತಂದೆಗೂ ಮಹಿಮೆ ಮಾಡುತ್ತಾರೆ. ಶಿಕ್ಷಕ, ಸದ್ಗುರುವಿಗೂ ಮಹಿಮೆ ಮಾಡುತ್ತಾರೆ, ಮೂವರೂ ಒಬ್ಬರೇ ಆಗಿದ್ದಾರೆ. ಇದು ನಿಮ್ಮ ಬುದ್ಧಿಯಲ್ಲಿದೆ. ಇವರು ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಪತಿತರನ್ನು ಪಾವನ ಮಾಡುವುದೇ ತಂದೆಯ ಕರ್ತವ್ಯವಾಗಿದೆ. ಪತಿತರು ಅವಶ್ಯವಾಗಿ ದುಃಖಿಯಾಗುತ್ತಾರೆ. ಸತೋಪ್ರಧಾನರು ಸುಖಿ, ತಮೋಪ್ರಧಾನರು ದುಃಖಿಯಾಗುತ್ತಾರೆ. ಈ ದೇವತೆಗಳಿಗೆ ಎಷ್ಟೊಂದು ಸತೋಗುಣಿ ಸ್ವಭಾವವಿದೆ, ಇಲ್ಲಿನ ಮನುಷ್ಯರದು ಕಲಿಯುಗೀ ತಮೋಗುಣಿ ಸ್ವಭಾವವಾಗಿದೆ. ಬಾಕಿ ಮನುಷ್ಯರು ನಂಬರ್ವಾರ್ ಒಳ್ಳೆಯ ಹಾಗೂ ಕೆಟ್ಟವರಿರುತ್ತಾರೆ. ಸತ್ಯಯುಗದಲ್ಲಿ ಎಂದೂ ಸಹ ಇವರು ಕೆಟ್ಟವರು, ಇವರು ಇಂತಹವರಾಗಿದ್ದಾರೆ ಎಂಬ ಮಾತನ್ನು ಹೇಳುವುದಿಲ್ಲ. ಅಲ್ಲಿ ಕೆಟ್ಟ ಲಕ್ಷಣಗಳು ಯಾವುದೂ ಇರುವುದಿಲ್ಲ, ಅದು ದೈವೀ ಸಂಪ್ರದಾಯವಾಗಿದೆ. ಹಾ! ಸಾಹುಕಾರರು ಮತ್ತು ಬಡವರಿರುತ್ತಾರೆ. ಬಾಕಿ ಒಳ್ಳೆಯ ಹಾಗೂ ಕೆಟ್ಟ ಗುಣಗಳ ಹೋಲಿಕೆಯು ಅಲ್ಲಿರುವುದಿಲ್ಲ, ಎಲ್ಲರೂ ಸುಖಿಯಾಗಿರುತ್ತಾರೆ ದುಃಖದ ಹೆಸರು ಇರುವುದಿಲ್ಲ. ಹೆಸರೇ ಆಗಿದೆ – ಸುಖಧಾಮ ಅಂದಮೇಲೆ ಮಕ್ಕಳು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕು, ತಮ್ಮ ಚಿತ್ರ ಹಾಗೂ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಇಟ್ಟುಕೊಳ್ಳಬಹುದು. ಇವರಿಗೆ ಕಲಿಸುವವರು ಯಾರೋ ಇರಬೇಕು ಎಂದು ಹೇಳುತ್ತಾರೆ. ಇದು ಭಗವಾನುವಾಚ ಅಲ್ಲವೆ. ಭಗವಂತನಿಗೆ ತನ್ನ ಶರೀರವಿಲ್ಲ, ಅವರು ಬಂದು ಶರೀರವನ್ನು ಲೋನ್ ಆಗಿ ತೆಗೆದುಕೊಳ್ಳುತ್ತಾರೆ. ಭಗೀರಥನೆಂಬ ಗಾಯನವಿದೆ ಅಂದಮೇಲೆ ಅವಶ್ಯವಾಗಿ ರಥದಲ್ಲಿ ವಿರಾಜಮಾನನಾಗುತ್ತಾರೆ. ಅವರು ಎತ್ತಿನ ಮೇಲೆ ಬರುವರೇ? ಶಿವ ಮತ್ತು ಶಂಕರನನ್ನು ಸೇರಿಸಿ ಬಿಟ್ಟಿದ್ದಾರೆ. ಆದ್ದರಿಂದ ಬಸವನನ್ನು ತೋರಿಸಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ – ನಾವು ತಂದೆಯ ಮಕ್ಕಳಾಗಿದ್ದೇವೆಂದು ನಿಮಗೆ ಎಷ್ಟೊಂದು ಖುಷಿಯಿರಬೇಕು! ಮಕ್ಕಳೇ, ನೀವು ನನ್ನವರಾಗಿದ್ದೀರಿ ಎಂದು ತಂದೆಯೂ ಹೇಳುತ್ತಾರೆ, ತಂದೆಗೆ ಪದವಿಯನ್ನು ಪಡೆಯುವ ಖುಷಿಯಿಲ್ಲ, ಶಿಕ್ಷಕರು ಶಿಕ್ಷಕರೇ ಆಗಿದ್ದಾರೆ ಅವರು ಓದಿಸಬೇಕಾಗಿದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ನಾನು ಸುಖದ ಸಾಗರನಾಗಿದ್ದೇನೆ, ಈಗ ನಾನು ದತ್ತು ಮಾಡಿಕೊಂಡಿರುವ ಕಾರಣ ನಿಮಗೆ ಅತೀಂದ್ರಿಯ ಸುಖದ ಭಾಸವಾಗುತ್ತದೆ. ಭಿನ್ನ-ಭಿನ್ನ ಪ್ರಕಾರದ ದತ್ತು ಪದ್ಧತಿಯಿರುತ್ತದೆ. ಪುರುಷನು ಕನ್ಯೆಯನ್ನು ದತ್ತು ಮಾಡಿಕೊಳ್ಳುತ್ತಾರೆ ಆಗ ಇವರು ನನ್ನ ಪತಿಯೆಂದು ಕನ್ಯೆಯು ತಿಳಿದುಕೊಳ್ಳುತ್ತಾಳೆ. ನೀವೀಗ ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಪ್ರಪಂಚದಲ್ಲಿ ಈ ಮಾತುಗಳನ್ನು ತಿಳಿದುಕೊಂಡಿಲ್ಲ, ಅವರದು ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸುವ ದತ್ತು ಆಗಿದೆ. ಉದಾಹರಣೆಗೆ: ರಾಜನು ಯಾರದೇ ಮಗುವನ್ನು ಮಡಿಲಿಗೆ ತೆಗೆದುಕೊಳ್ಳುತ್ತಾರೆ, ಸುಖಕ್ಕಾಗಿ ದತ್ತು ಮಾಡಿಕೊಳ್ಳುತ್ತಾರೆ ಆದರೆ ಅದು ಅಲ್ಪಕಾಲದ ಸುಖವಾಗಿದೆ. ಸನ್ಯಾಸಿಗಳೂ ಸಹ ದತ್ತು ಮಾಡಿಕೊಳ್ಳುತ್ತಾರಲ್ಲವೆ. ಇವರು ನಮ್ಮ ಗುರುವೆಂದು ಶಿಷ್ಯರು ಹೇಳುತ್ತಾರೆ, ಇವರು ನಮ್ಮ ಅನುಯಾಯಿಗಳೆಂದು ಗುರುಗಳು ಹೇಳುತ್ತಾರೆ. ಎಷ್ಟೊಂದು ದತ್ತು ಪದ್ಧತಿಗಳಿವೆ! ತಂದೆಯು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಅವರಿಗೆ ಸುಖವನ್ನಂತೂ ಕೊಡುತ್ತಾರೆ ನಂತರ ವಿವಾಹ ಮಾಡಿಸುವುದರಿಂದ ಹೇಗೆ ದುಃಖದ ಆಸ್ತಿಯನ್ನು ಕೊಟ್ಟಂತಾಗುತ್ತದೆ. ಗುರುವಿನ ದತ್ತು ಪದ್ಧತಿ ಎಷ್ಟೊಂದು ಚೆನ್ನಾಗಿದೆ ಮತ್ತು ನಿಮ್ಮದು ಈಶ್ವರನು ಆತ್ಮಗಳನ್ನು ತನ್ನವರನ್ನಾಗಿ ಮಾಡಿಕೊಳ್ಳುವ ಪದ್ಧತಿಯಾಗಿದೆ. ಈಗ ನೀವು ಮಕ್ಕಳು ಎಲ್ಲರ ದತ್ತನ್ನು ನೋಡಿ ಬಿಟ್ಟಿದ್ದೀರಿ. ಸನ್ಯಾಸಿಗಳಿಗೆ ಅನುಯಾಯಿಗಳಾಗಿದ್ದರೂ ಸಹ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ದತ್ತು ಮಾಡಿಕೊಂಡು ಪಾವನರನ್ನಾಗಿ ಮಾಡಿ ಎಂದು ಹಾಡುತ್ತಿರುತ್ತಾರೆ. ಎಲ್ಲರೂ ಸಹೋದರರಾಗಿದ್ದಾರೆ ಆದರೆ ತಂದೆಯು ಬಂದು ತನ್ನವರನ್ನಾಗಿ ಮಾಡಿಕೊಳ್ಳುವರಲ್ಲವೆ. ಬಾಬಾ, ನಾವು ದುಃಖಿಯಾಗಿ ಬಿಟ್ಟಿದ್ದೇವೆ ಎಂದು ಹೇಳುತ್ತಾರೆ. ರಾವಣ ರಾಜ್ಯದ ಅರ್ಥವನ್ನೂ ತಿಳಿದುಕೊಳ್ಳುವುದಿಲ್ಲ. ಪ್ರತಿಮೆಯನ್ನು ಮಾಡಿ ಸುಡುತ್ತಾ ಇರುತ್ತಾರೆ. ಹೇಗೆ ಯಾರಾದರೂ ದುಃಖ ಕೊಡುತ್ತಾರೆಂದರೆ ಇವರ ಮೇಲೆ ಮೊಕದ್ದಮೆ ಹೂಡಬೇಕು ಎಂದು ತಿಳಿಯುತ್ತಾರೆ ಆದರೆ ಯಾವಾಗಿನಿಂದ ಶತ್ರುವಾಗಿದ್ದಾನೆ? ಕೊನೆಗೂ ಈ ಶತ್ರು ಸಾಯುವನೇ ಅಥವಾ ಇಲ್ಲವೆ? ಈ ಶತ್ರುವಿನ ಬಗ್ಗೆ ನಿಮಗೇ ತಿಳಿದಿದೆ, ರಾವಣನ ಮೇಲೆ ಜಯ ಗಳಿಸುವುದಕ್ಕಾಗಿಯೇ ನಿಮ್ಮನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ಇದನ್ನೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ವಿನಾಶವಾಗುವುದು ಅದಕ್ಕಾಗಿ ಅಣು ಬಾಂಬುಗಳು ತಯಾರಾಗಿವೆ. ಈ ಜ್ಞಾನ ಯಜ್ಞದಿಂದಲೇ ವಿನಾಶ ಜ್ವಾಲೆಯು ಹೊರಡುವುದು. ನೀವೀಗ ರಾವಣನ ಮೇಲೆ ಜಯ ಗಳಿಸಿ ನಂತರ ಹೊಸ ಸೃಷ್ಟಿಯಲ್ಲಿ ರಾಜ್ಯಭಾರ ಮಾಡುತ್ತೀರಿ. ಈಗ ಉಳಿದೆಲ್ಲವೂ ಗೊಂಬೆಗಳ ಆಟವಾಗಿದೆ. ರಾವಣನ ಗೊಂಬೆಯಂತೂ ಎಷ್ಟೊಂದು ಖರ್ಚು ಮಾಡಿಸುತ್ತದೆ. ಮನುಷ್ಯರು ಬಹಳ ಹಣವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಎಷ್ಟೊಂದು ರಾತ್ರಿ-ಹಗಲಿನ ಅಂತರವಿದೆ. ಅವರು ಅಲೆದಾಡುತ್ತಾ-ದುಃಖಿಯಾಗುತ್ತಾರೆ, ಮೋಸ ಹೋಗುತ್ತಿರುತ್ತಾರೆ ಮತ್ತು ನಾವೀಗ ಶ್ರೀಮತದಂತೆ ಶ್ರೇಷ್ಠಾಚಾರಿಗಳು ಸತ್ಯಯುಗೀ ಸ್ವರಾಜ್ಯವನ್ನು ಪಡೆಯುತ್ತಿದ್ದೇವೆ. ಶ್ರೇಷ್ಠಾತಿ ಶ್ರೇಷ್ಠ ಸತ್ಯಯುಗವನ್ನು ಸ್ಥಾಪನೆ ಮಾಡುವ ಶಿವ ತಂದೆಯು ನಮ್ಮನ್ನು ಶ್ರೇಷ್ಠ ದೇವತೆ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಶ್ರೀ ಶ್ರೀ ಶಿವ ತಂದೆಯೇ ನಮ್ಮನ್ನು ಶ್ರೀಗಳನ್ನಾಗಿ ಮಾಡುತ್ತಾರೆ. ಒಬ್ಬರಿಗೆ ಶ್ರೀ ಶ್ರೀ ಎಂದು ಹೇಳಲಾಗುತ್ತದೆ. ದೇವತೆಗಳಿಗೂ ಸಹ ಕೇವಲ ಶ್ರೀ ಎಂದು ಹೇಳಲಾಗುತ್ತದೆ ಏಕೆಂದರೆ ಅವರು ಪುನರ್ಜನ್ಮದಲ್ಲಿ ಬರುತ್ತಾರಲ್ಲವೆ. ವಾಸ್ತವದಲ್ಲಿ ವಿಕಾರಿ ರಾಜರಿಗೂ ಸಹ ಶ್ರೀ ಎಂದು ಹೇಳುವಂತಿಲ್ಲ.

ಈಗ ನಿಮ್ಮ ಬುದ್ಧಿಯು ಎಷ್ಟೊಂದು ವಿಶಾಲ ಬುದ್ಧಿಯಾಗಬೇಕು. ನಿಮಗೆ ತಿಳಿದಿದೆ – ನಾವು ಈ ವಿದ್ಯೆಯಿಂದ ಡಬಲ್ ಕಿರೀಟಧಾರಿಗಳಾಗುತ್ತೇವೆ, ನಾವೇ ಡಬಲ್ ಕಿರೀಟಧಾರಿಗಳಾಗಿದ್ದೆವು, ಈಗಂತೂ ಸಿಂಗಲ್ ಕಿರೀಟವೂ ಇಲ್ಲ. ಪತಿತರಲ್ಲವೆ. ಇಲ್ಲಿ ಯಾರಿಗೂ ಪ್ರಕಾಶತೆಯ ಕಿರೀಟವನ್ನು ತೋರಿಸುವಂತಿಲ್ಲ. ಈ ಚಿತ್ರಗಳಲ್ಲಿ ಎಲ್ಲಿ ನೀವು ತಪಸ್ಸಿನಲ್ಲಿ ಕುಳಿತಿದ್ದೀರೋ ಅಲ್ಲಿಯೂ ಸಹ ವಾಸ್ತವದಲ್ಲಿ ಪ್ರಕಾಶತೆಯ ಕಿರೀಟವನ್ನು ತೋರಿಸಬಾರದು, ನೀವು ಭವಿಷ್ಯದಲ್ಲಿ ಡಬಲ್ ಕಿರೀಟಧಾರಿಗಳಾಗಬೇಕಾಗಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ತಂದೆಯಿಂದ ಡಬಲ್ ಕಿರೀಟಧಾರಿ ಮಹಾರಾಜ-ಮಹಾರಾಣಿ ಆಗುವುದಕ್ಕಾಗಿ ಬಂದಿದ್ದೇವೆ, ಈ ಖುಷಿಯಿರಬೇಕು. ಶಿವ ತಂದೆಯನ್ನು ನೆನಪು ಮಾಡಬೇಕು ಆಗ ಪತಿತರಿಂದ ಪಾವನರಾಗಿ ಸ್ವರ್ಗದ ಮಾಲೀಕರಾಗುತ್ತೀರಿ, ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ, ಇಲ್ಲಿ ನೀವು ವಿದ್ಯಾರ್ಥಿಗಳು ಕುಳಿತಿದ್ದೀರಿ. ಹೊರಗಡೆ ಮಿತ್ರ ಸಂಬಂಧಿ ಮೊದಲಾದವರ ಬಳಿ ಹೋದಾಗ ವಿದ್ಯಾರ್ಥಿ ಜೀವನವು ಹೊರಟು ಹೋಗುತ್ತದೆ. ಮತ್ತೆ ಮಿತ್ರ ಸಂಬಂಧಿಗಳು ನೆನಪಿಗೆ ಬಂದು ಬಿಡುತ್ತಾರೆ. ಮಾಯೆಯ ಪ್ರಭಾವವಿದೆಯಲ್ಲವೆ. ಹಾಸ್ಟೆಲ್ನಲ್ಲಿ ಇರುವುದರಿಂದ ಚೆನ್ನಾಗಿ ಓದುತ್ತಾರೆ, ಹೊರಗಡೆ ಬಂದು ಹೋದರೆ ಸಂಗದೋಷದಲ್ಲಿ ಕೆಟ್ಟು ಹೋಗುತ್ತಾರೆ. ಇಲ್ಲಿಂದ ಹೊರಗಡೆ ಹೋಗುತ್ತಾರೆಂದರೆ ಈ ವಿದ್ಯಾರ್ಥಿ ಜೀವನದ ನಶೆಯೇ ಮಾಯವಾಗಿ ಬಿಡುತ್ತದೆ. ಓದಿಸುವಂತಹ ಬ್ರಾಹ್ಮಣಿಯರಿಗೂ ಸಹ ಇಲ್ಲಿ ಎಷ್ಟು ನಶೆಯಿರುವುದೋ ಅಷ್ಟು ಅಲ್ಲಿ ಹೊರಗಡೆ ಇದ್ದಾಗ ಇರುವುದಿಲ್ಲ. ಮಧುಬನವು ಮುಖ್ಯಕೇಂದ್ರವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರ ಸನ್ಮುಖದಲ್ಲಿರುತ್ತಾರೆ, ಇಲ್ಲಿ ಯಾವುದೇ ಉದ್ಯೋಗದ ಜಂಜಾಟವಿರುವುದಿಲ್ಲ. ಅಲ್ಲಿನ ವಾತಾವರಣ ಮತ್ತು ಇಲ್ಲಿನ ವಾತಾವರಣದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಕೆಲವರಂತೂ ಇಡೀ ದಿನ ಶಿವ ತಂದೆಯನ್ನು ನೆನಪೇ ಮಾಡುವುದಿಲ್ಲ. ಶಿವ ತಂದೆಗೆ ಸಹಯೋಗಿಗಳೂ ಆಗುವುದಿಲ್ಲ. ಶಿವ ತಂದೆಯ ಮಕ್ಕಳಾಗಿದ್ದೀರೆಂದರೆ ಸರ್ವೀಸ್ ಮಾಡಿರಿ. ಒಂದುವೇಳೆ ಸರ್ವೀಸ್ ಮಾಡದಿದ್ದರೆ ಅವರು ಕುಪುತ್ರರೆಂದರ್ಥ. ತಂದೆಯಂತೂ ತಿಳಿದುಕೊಳ್ಳುತ್ತಾರಲ್ಲವೆ, ಇವರ ಕರ್ತವ್ಯವಾಗಿದೆ – ನನ್ನನ್ನು ನೆನಪು ಮಾಡಿರಿ ಎಂದು ಹೇಳುವುದು. ಅದನ್ನು ಫಾಲೋ ಮಾಡಿದರೆ ಬಹಳ-ಬಹಳ ಕಲ್ಯಾಣವಿದೆ, ವಿಕಾರಿ ಸಂಬಂಧಗಳಂತೂ ಭ್ರಷ್ಠಾರಿಯಾಗಿದೆ, ಅದನ್ನು ಬಿಡುತ್ತಾ ಹೋಗಿ ಅವರ ಸಂಗವನ್ನು ಇಟ್ಟುಕೊಳ್ಳಬೇಡಿ. ತಂದೆಯಂತೂ ತಿಳಿಸುತ್ತಾರೆ ಆದರೆ ಅದೃಷ್ಟದಲ್ಲಿಯೂ ಇರಬೇಕಲ್ಲವೆ. ಚಾರ್ಟ್ ಇಡಬೇಕೆಂದು ತಂದೆಯು ಹೇಳಿದರು, ಇದರಿಂದಲೂ ಬಹಳ ಕಲ್ಯಾಣವಾಗುವುದು. ಕೆಲವರು ಒಂದು ಗಂಟೆಯ ಸಮಯವೂ ಸಹ ನೆನಪಿನಲ್ಲಿರಲು ಕಷ್ಟ. 8 ಗಂಟೆಗಳಂತೂ ಅಂತ್ಯದಲ್ಲಿಯೇ ತಲುಪುವಿರಿ, ಕರ್ಮಯೋಗಿಗಳಾಗಿದ್ದೀರಲ್ಲವೆ. ಕೆಲಕೆಲವರಿಗೆ ಕೆಲವೊಮ್ಮೆ ಉಮ್ಮಂಗವು ಬಂದಾಗ ಚಾರ್ಟ್ ಇಡುತ್ತಾರೆ, ಇದು ಒಳ್ಳೆಯದಾಗಿದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಲಾಭವಿದೆ. ಅಂತ್ಯಕಾಲದಲ್ಲಿ ಯಾರು ನಾರಾಯಣನನ್ನು ಸ್ಮರಿಸಿದರೋ…… ಅವರು ಬಾರಿ ಬಾರಿ ನಾರಾಯಣನ ಯೋನಿಯಲ್ಲಿ ಬರುವರು ಎಂದು ಗಾಯನವಿದೆ. ಈ ಬಾರಿ-ಬಾರಿ ಎಂಬುದರ ಅರ್ಥವೇನಾಗಿದೆ? ಯಾರು ಚೆನ್ನಾಗಿ ನೆನಪು ಮಾಡುವುದಿಲ್ಲವೋ ಅವರಿಗೆ ಜನ್ಮ-ಜನ್ಮಾಂತರದ ಯಾವ ಹೊರೆಯಿದೆಯೋ ಅದನ್ನು ಪದೇ ಪದೇ (ಬಾರಿ ಬಾರಿ) ಜನ್ಮ ಕೊಟ್ಟು ಸಾಕ್ಷಾತ್ಕಾರ ಮಾಡಿಸಿ ನಂತರ ಶಿಕ್ಷೆಯನ್ನು ಕೊಡಲಾಗುತ್ತದೆ. ಹೇಗೆ ಕಾಶಿಯಲ್ಲಿ ಬಲಿಯಾಗುವಾಗ ಪಾಪಗಳ ಸಾಕ್ಷಾತ್ಕಾರಗಳಾಗುತ್ತದೆ, ನಾವು ಪಾಪಗಳ ಶಿಕ್ಷೆಯನ್ನು ಅನುಭವಿಸುತ್ತೇವೆ, ಬಹಳ ಶಿಕ್ಷೆಯನ್ನು ಅನುಭವಿಸುವವರಾಗಿದ್ದೇವೆ ಎಂದು ಅನುಭವವಾಗುತ್ತದೆ. ತಂದೆಯ ಸೇವೆಯಲ್ಲಿ ಯಾರು ವಿಘ್ನಗಳನ್ನು ಹಾಕುವರೋ ಅವರು ಶಿಕ್ಷೆಗಳಿಗೆ ಗುರಿಯಾಗುವರು. ತಂದೆಯ ಸೇವೆಯಲ್ಲಿ ತೊಂದರೆ ಮಾಡುತ್ತಾರೆ. ತಂದೆಗೆ ಬಲಭುಜ ಧರ್ಮರಾಜನಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ತಮ್ಮ ಜೊತೆ ಪ್ರತಿಜ್ಞೆ ಮಾಡಿರಿ ಏಕೆಂದರೆ ತಂದೆಯ ನೆನಪಿನಿಂದಲೇ ಪಾವನರಾಗುತ್ತೀರಿ, ಇಲ್ಲವಾದರೆ ಇಲ್ಲ. ತಂದೆಯು ಪ್ರತಿಜ್ಞೆ ಮಾಡಿಸುತ್ತಾರೆ, ಮಾಡಿ ಮಾಡದೇ ಇರಿ ಅದು ನಿಮ್ಮಿಷ್ಟ. ಯಾರು ಮಾಡುವರೋ ಅವರು ಪಡೆಯುವರು. ಅನೇಕರಿದ್ದಾರೆ, ಪ್ರತಿಜ್ಞೆ ಮಾಡಿಯೂ ಮತ್ತೆ ಕೆಟ್ಟ ಕರ್ಮಗಳನ್ನು ಮಾಡುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ ನನ್ನವರು ಒಬ್ಬ ತಂದೆಯ ವಿನಃ ಯಾರೂ ಇಲ್ಲವೆಂದು ಹಾಡುತ್ತಿರುತ್ತಾರೆ ಆದರೆ ಆ ಮಾತು ಈಗ ಬುದ್ಧಿಯಲ್ಲಿ ಬರುತ್ತದೆ – ಆತ್ಮವು ಏಕೆ ಈ ರೀತಿ ಹಾಡುತ್ತಾ ಬಂದಿದೆ! ನನ್ನವರು ಗಿರಿಧರ ಗೋಪಾಲನ ಹೊರತು ಯಾರೂ ಇಲ್ಲ….. ಎಂದು ಇಡೀ ದಿನ ಹಾಡುತ್ತಿರುತ್ತಾರೆ. ತಂದೆಯು ಸಂಗಮದಲ್ಲಿ ಬಂದಾಗಲೇ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಕೃಷ್ಣ ಪುರಿಯಲ್ಲಿ ಹೋಗುವುದಕ್ಕಾಗಿಯೇ ನೀವು ಓದುತ್ತೀರಲ್ಲವೆ. ರಾಜಕುಮಾರ-ಕುಮಾರಿಯರ ಕಾಲೇಜುಗಳಿರುತ್ತವೆ ಎಲ್ಲಿ ರಾಜಕುಮಾರ-ಕುಮಾರಿಯರು ಓದುತ್ತಾರೆ. ಅದಂತೂ ಹದ್ದಿನ ಮಾತಾಗಿದೆ. ಕೆಲವೊಮ್ಮೆ ರೋಗಿಯಾಗುತ್ತಾರೆ, ಕೆಲವೊಮ್ಮೆ ಶರೀರವನ್ನೂ ಬಿಡುತ್ತಾರೆ ಆದರೆ ಇದಂತೂ ರಾಜಕುಮಾರ-ಕುಮಾರಿಯರಾಗುವ ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ರಾಜಯೋಗವಲ್ಲವೆ. ನೀವು ನರನಿಂದ ನಾರಾಯಣ ಆಗುತ್ತೀರಿ, ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡು ಸತ್ಯಯುಗದ ರಾಜಕುಮಾರ-ಕುಮಾರಿಯರಾಗುತ್ತೀರಿ. ತಂದೆಯು ಎಷ್ಟೊಂದು ಮಜಾ ಬರುವಂತಹ ಮಾತುಗಳನ್ನು ತಿಳಿಸುತ್ತಾರೆ. ಇವು ನೆನಪಿರಬೇಕಲ್ಲವೆ. ಕೆಲವರಂತೂ ಇಲ್ಲಿಂದ ಹೊರಗಡೆ ಹೋಗುತ್ತಿದ್ದಂತೆಯೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ತಂದೆಯನ್ನು ನೆನಪೂ ಸಹ ನಂಬರ್ವಾರ್ ಮಾಡುತ್ತಾರೆ. ಯಾರು ಹೆಚ್ಚು ನೆನಪು ಮಾಡುವರೋ ಅವರು ಅನ್ಯರಿಗೂ ನೆನಪು ತರಿಸುತ್ತಾ ಇರುತ್ತಾರೆ. ಹೇಗೆ ಅನೇಕರ ಕಲ್ಯಾಣ ಮಾಡಬೇಕೆಂಬುದೇ ಬುದ್ಧಿಯಲ್ಲಿ ಇರಬೇಕಾಗಿದೆ. ಹೊರಗಿನವರು ಪ್ರಜೆಗಳಲ್ಲಿ ದಾಸ-ದಾಸಿಯರು, ಇಲ್ಲಿನವರು ರಾಜರಲ್ಲಿ ದಾಸ-ದಾಸಿಯರಾಗುವರು. ಮುಂದೆಹೋದಂತೆ ಎಲ್ಲವೂ ಸಾಕ್ಷಾತ್ಕಾರವಾಗುತ್ತಾ ಹೋಗುವುದು, ನಿಮಗೂ ಅನುಭವವಾಗುತ್ತದೆ, ನಾವು ಪೂರ್ಣ ಪುರುಷಾರ್ಥ ಮಾಡಲಿಲ್ಲ ಎಂದು. ಬಹಳ ಚಮತ್ಕಾರವನ್ನು ನೋಡುವಿರಿ, ಯಾರು ಚೆನ್ನಾಗಿ ಓದುವರೋ ಅವರೇ ನವಾಬರಾಗುವರು. ತಂದೆಯು ಎಷ್ಟೊಂದು ಹೇಳುತ್ತಿರುತ್ತಾರೆ – ಸೇವಾಕೇಂದ್ರಗಳಿಗೆ ಪ್ರದರ್ಶನಿ ಚಿತ್ರಗಳನ್ನು ಕೊಡುತ್ತೇನೆ. ಇದರಿಂದ ಮಕ್ಕಳಿಗೆ ಕಲಿಸಿ ಬುದ್ಧಿವಂತರನ್ನಾಗಿ ಮಾಡಲಿ ಎಂದು. ಆಗಲೇ ತಂದೆಯು ತಿಳಿದುಕೊಳ್ಳುತ್ತಾರೆ – ಬ್ರಹ್ಮಾಕುಮಾರ-ಕುಮಾರಿಯರು ಸರ್ವೀಸ್ ಮಾಡುವುದನ್ನು ತಿಳಿದುಕೊಂಡಿದ್ದಾರೆ. ಸರ್ವೀಸ್ ಮಾಡಿದರೆ ಶ್ರೇಷ್ಠ ಪದವಿಯನ್ನು ಪಡೆಯುವಿರಿ ಆದ್ದರಿಂದ ತಂದೆಯು ಪ್ರದರ್ಶನಿಯನ್ನು ಇಡುವುದಕ್ಕಾಗಿ ಒತ್ತುಕೊಟ್ಟು ಹೇಳುತ್ತಿದ್ದೇವೆ. ಚಿತ್ರಗಳನ್ನು ಮಾಡಿಸುವುದಂತೂ ಸಾಮಾನ್ಯ ಮಾತಾಗಿದೆ. ಧೈರ್ಯವನ್ನು ಇಟ್ಟು ಪ್ರದರ್ಶನಿ ಚಿತ್ರಗಳನ್ನು ಮಾಡಿಸುವುದರಲ್ಲಿ ಸಹಯೋಗ ನೀಡಬೇಕು ಇದರಿಂದ ಮಕ್ಕಳಿಗೆ ತಿಳಿಸುವುದರಲ್ಲಿ ಸಹಜವಾಗುವುದು. ತಂದೆಯು ತಿಳಿದುಕೊಳ್ಳುತ್ತಾರೆ – ಟೀಚರ್ಸ್, ಮ್ಯಾನೇಜರ್ಗಳು ತಣ್ಣಗಾಗಿದ್ದಾರೆ. ಕೆಲಕೆಲವು ಬ್ರಾಹ್ಮಣಿಯರು ಮ್ಯಾನೇಜರ್ ಆಗುತ್ತಾರೆಂದರೆ ದೇಹಾಭಿಮಾನವು ಬಂದು ಬಿಡುತ್ತದೆ, ಎಲ್ಲವನ್ನೂ ಅರಿತವನೆಂದು ತಿಳಿದುಕೊಳ್ಳುತ್ತಾರೆ. ನಾವು ಬಹಳ ಚೆನ್ನಾಗಿ ನಡೆಯುತ್ತೇವೆ ಎಂದು ತಿಳಿದುಕೊಳ್ಳುತ್ತಾರೆ, ಅನ್ಯರೊಂದಿಗೆ ಕೇಳಿದರೆ ಹತ್ತು ಮಾತುಗಳನ್ನು ತಿಳಿಸುತ್ತಾರೆ. ಮಾಯೆಯು ಬಹಳ ಸುಳಿಯಲ್ಲಿ ಹಾಕುತ್ತದೆ. ಮಕ್ಕಳಂತೂ ಸರ್ವೀಸ್ ಮತ್ತು ಸರ್ವೀಸಿನಲ್ಲಿರಬೇಕು. ತಂದೆಯು ದಯಾಹೃದಯಿ, ದುಃಖಹರ್ತ -ಸುಖಕರ್ತನಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ಆಗಬೇಕಾಗಿದೆ. ಕೇವಲ ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ತಂದೆಯು ತಿಳಿಸುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿದರೆ ನರಕವಾಸಿಗಳಿಂದ ಸ್ವರ್ಗವಾಸಿಗಳಾಗಿರಿ, ಎಷ್ಟು ಸಹಜವಾಗಿದೆ. ನನ್ನನ್ನು ನೆನಪು ಮಾಡುವುದರಿಂದ ಪತಿತರಿಂದ ಪಾವನರಾಗಿ ನೀವು ಶಾಂತಿಧಾಮ-ಸುಖಧಾಮದಲ್ಲಿ ಬರುತ್ತೀರೆಂದು ತಂದೆಯು ತಿಳಿಸುತ್ತಾರೆ. ಅವರಿಗೆ ನಿಶ್ಚಯವಿದ್ದರೆ ಅವರಿಂದ ಬರೆಸಿಕೊಳ್ಳಬೇಕು – ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ ಅಂದಮೇಲೆ ಇಂತಹ ತಂದೆಗೆ ನಾವು ಮಕ್ಕಳಾಗಬೇಕು, ಅವರ ಮಡಿಲನ್ನು ಪಡೆಯಬೇಕೆಂದು ತಿಳಿದುಕೊಳ್ಳುತ್ತೇವೆ ಎಂಬುದನ್ನೂ ಬರೆಯುತ್ತಾರೆ. ನೀವು ತಂದೆಯ ಆಶ್ರಯವನ್ನು ಪಡೆದಿದ್ದೀರಿ ಅರ್ಥಾತ್ ತಂದೆಯ ಮಡಿಲಿಗೆ ಬಂದಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನ ದಯಾಹೃದಯಿ, ದುಃಖಹರ್ತ-ಸುಖಕರ್ತರಾಗಬೇಕಾಗಿದೆ.

2. ಸಂಗ ದೋಷದಿಂದ ತಮ್ಮನ್ನು ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯನ್ನೇ ಅನುಸರಿಸಬೇಕಾಗಿದೆ. ಅನೇಕರ ಕಲ್ಯಾಣದ ಸೇವೆ ಮಾಡಬೇಕಾಗಿದೆ. ಎಂದೂ ಅಹಂಕಾರದಲ್ಲಿ ಬಂದು ಎಲ್ಲಾ ಅರಿತವನೆಂದು ತಿಳಿದುಕೊಳ್ಳಬಾರದು.

ವರದಾನ:-

ಯಾವ ಮಕ್ಕಳು ಸದಾ ಹಗುರವಾಗಿರುತ್ತಾರೆಯೋ ಅವರ ಸಂಕಲ್ಪ ಅಥವಾ ಸಮಯವೆಂದಿಗೂ ವ್ಯರ್ಥವಾಗುವುದಿಲ್ಲ. ಯಾವುದು ಆಗುವುದಿದೆಯೋ ಅಂತಹ ಸಂಕಲ್ಪವೇ ಉತ್ಪನ್ನವಾಗುತ್ತದೆ. ಹೇಗೆ ಮಾತನಾಡುವುದರಿಂದ ಮಾತನ್ನು ಸಿದ್ಧ ಮಾಡುತ್ತಾರೆಯೋ ಹಾಗೆಯೇ ಸಂಕಲ್ಪದಿಂದ ಸರ್ವ ವ್ಯವಹಾರಗಳು ನಡೆಯುತ್ತವೆ. ಯಾವಾಗ ಇಂತಹ ವಿಧಿಯನ್ನು ಉಪಯೋಗ ಮಾಡುತ್ತೀರಿ, ಆಗ ಈ ಸಾಕಾರ ವತನವು ಸೂಕ್ಷ್ಮವಾಗಿ ಬಿಡಲಿ. ಇದಕ್ಕಾಗಿ ಶಾಂತಿಯ ಶಕ್ತಿಯನ್ನು ಸಂಗ್ರಹಣೆ ಮಾಡಿರಿ ಹಾಗೂ ಪ್ರಕಾಶತೆಯ ಕಿರೀಟವುಳ್ಳವರಾಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top