03 September 2021 KANNADA Murli Today | Brahma Kumaris

Read and Listen today’s Gyan Murli in Kannada

September 2, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ಪರಸ್ಪರ ಒಬ್ಬರು ಇನ್ನೊಬ್ಬರಿಗೆ ತಂದೆಯ ನೆನಪಿನಲ್ಲಿರುವ ಸೂಚನೆ ನೀಡುತ್ತಾ, ಸಾವಧಾನ ನೀಡುತ್ತಾ ಉನ್ನತಿಯನ್ನು ಪಡೆಯುತ್ತಾ ಇರಿ''

ಪ್ರಶ್ನೆ:: -

ತಂದೆಯ ಸಮಾನ ಜ್ಞಾನಪೂರ್ಣರಾಗುವಂತಹ ಮಕ್ಕಳ ಜೀವನದ ಮುಖ್ಯ ಧಾರಣೆಯನ್ನು ತಿಳಿಸಿ.

ಉತ್ತರ:-

ಅವರು ಸದಾ ಮುಗುಳ್ನಗುತ್ತಾ ಇರುತ್ತಾರೆ, ಎಂದೂ ಯಾವುದೇ ಮಾತಿನಲ್ಲಿ ಅಳು ಬರುವುದಿಲ್ಲ. ಏನೇ ಆದರೂ ಸಹ ನತಿಂಗ್ನ್ಯೂ ಎಂದು ತಿಳಿಯುತ್ತಾರೆ. ಹೀಗೆ ಯಾರು ಈಗ ಜ್ಞಾನಪೂರ್ಣ ಅರ್ಥಾತ್ ಅಳುವುದರಿಂದ ಮುಕ್ತ ಆಗುವರೋ ಅವರು ಎಂದೂ ಯಾವುದೇ ಮಾತಿನಲ್ಲಿ ಅಶಾಂತರಾಗುವುದಿಲ್ಲ, ಅವರಿಗೇ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆ, ಯಾರು ಅಳುವರೋ ಅವರು ಕಳೆದುಕೊಳ್ಳುವರು. ಅಳುವವರು ತಮ್ಮ ಪದವಿಯನ್ನು ಕಳೆದುಕೊಳ್ಳುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು…

ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ತಾವೇ ಹಾಡಿರುವ ಗೀತೆಯನ್ನು ಕೇಳಿದಿರಿ. ಮಕ್ಕಳಿಗೆ ತಿಳಿದಿದೆ, ನಾವು ಬೇಹದ್ದಿನ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ ಆದ್ದರಿಂದ ಮಕ್ಕಳು ಹೇಳುತ್ತೀರಿ – ಬಾಬಾ, ತಮ್ಮಿಂದ ವಿಶ್ವದ ಯಾವ ರಾಜ್ಯಭಾಗ್ಯವನ್ನು ಪಡೆದಿದ್ದೆವೋ ಅದನ್ನು ಪುನಃ ಪಡೆಯುತ್ತಿದ್ದೇವೆ. ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ. ಈ ಸಂಗಮಯುಗದಲ್ಲಿಯೇ ನೀವು ಈ ರೀತಿ ಹಾಡುತ್ತೀರಿ. ಮನೆಯಲ್ಲಿ ಕುಳಿತು ಅಥವಾ ನೌಕರಿ ಮಾಡುತ್ತಿದ್ದರೂ ಸಹ ನೀವು ತಿಳಿದುಕೊಂಡಿದ್ದೀರಿ – ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪುನಃ ತೆಗೆದುಕೊಳ್ಳುತ್ತಿದ್ದೇವೆ. ಸೇವಾಕೇಂದ್ರಗಳಲ್ಲಿಯೂ ಸಾವಧಾನ ಸಿಗುತ್ತದೆ – ತಂದೆಯನ್ನು ನೆನಪು ಮಾಡಿ ಮತ್ತು ನಾವು ವಿಶ್ವದ ಮಾಲೀಕರಾಗುತ್ತಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಯಾವುದೇ ಹೊಸ ಮಾತಿಲ್ಲ, ನಾವು ಕಲ್ಪ-ಕಲ್ಪವೂ ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ ಯಾರಾದರೂ ಹೊಸಬರು ಕೇಳಿಸಿಕೊಂಡರೆ ಇವರು ಬ್ರಹ್ಮಾರವರನ್ನೇ ಶಿವ ತಂದೆಯೆಂದು ಹೇಳುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಶಿವನಂತೂ ನಿರಾಕಾರ, ಆತ್ಮರ ತಂದೆಯಾಗಿದ್ದಾರೆ. ಆತ್ಮವು ನಿರಾಕಾರಿಯಾಗಿದೆ ಅಂದಮೇಲೆ ಪರಮಾತ್ಮ ತಂದೆಯೂ ನಿರಾಕಾರಿಯಾಗಿದ್ದಾರೆ. ಎಲ್ಲಿಯವರೆಗೆ ಸಾಕಾರಿ ರೂಪವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಆತ್ಮಕ್ಕೆ ನಿರಾಕಾರಿ ಎಂದೇ ಹೇಳಲಾಗುತ್ತದೆ ಅಂದಾಗ ನಾವು ಬೇಹದ್ದಿನ ತಂದೆಯಿಂದ ಈ ಜ್ಞಾನವನ್ನು ಕೇಳುತ್ತಿದ್ದೇವೆ ಎಂಬುದನ್ನು ಮಕ್ಕಳು ಅರಿತುಕೊಂಡಿದ್ದೀರಿ. ಆತ್ಮಿಕ ಶಿಕ್ಷಕರು ಒಬ್ಬರು ಇನ್ನೊಬ್ಬರಿಗೆ ಸಾವಧಾನ ನೀಡುವುದಕ್ಕಾಗಿ ಓದಿಸುತ್ತಿದ್ದಾರೆ. ಮೊದಲು ಈ ಆತ್ಮಿಕ ಸಾವಧಾನ ಸಿಗುತ್ತದೆ, ಎಲ್ಲರೂ ಬೇಹದ್ದಿನ ತಂದೆಯ ನೆನಪಿನಲ್ಲಿಯೇ ಇರುತ್ತೀರಿ ಮತ್ತು ಸೂಚನೆ ನೀಡುತ್ತೀರಿ – ತಂದೆಯ ನೆನಪಿನಲ್ಲಿರಿ, ಮತ್ತೆಲ್ಲಿಯೂ ಬುದ್ಧಿಯು ಹೋಗಬಾರದು ಆದ್ದರಿಂದ ಆತ್ಮಾಭಿಮಾನಿ ಭವ ಮತ್ತು ತಂದೆಯನ್ನು ನೆನಪು ಮಾಡಿರಿ ಎಂದು ಹೇಳಲಾಗುತ್ತದೆ. ಅವರು ಪತಿತ-ಪಾವನ ತಂದೆಯಾಗಿದ್ದಾರೆ, ಈಗ ಅವರು ಸನ್ಮುಖದಲ್ಲಿ ಕುಳಿತು ಹೇಳುತ್ತಾರೆ – ಮಕ್ಕಳೇ ನನ್ನನ್ನು ನೆನಪು ಮಾಡಿರಿ, ಎಷ್ಟು ಸಹಜ ಯುಕ್ತಿಯಾಗಿದೆ! ಮನ್ಮನಾಭವ ಶಬ್ಧವೂ ಇದೆ ಆದರೆ ಇದನ್ನು ತಿಳಿದುಕೊಳ್ಳಬೇಕಲ್ಲವೆ. ನೆನಪಿನ ಯಾತ್ರೆಯನ್ನು ಕಲಿಸುವವರು ಒಬ್ಬರೇ ತಂದೆಯಾಗಿದ್ದಾರೆ, ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ – ನಾವು ಆತ್ಮಿಕ ಯಾತ್ರೆಯಲ್ಲಿದ್ದೇವೆ, ಅದು ದೈಹಿಕ ಯಾತ್ರೆಯಾಗಿರುತ್ತದೆ. ನಾವೀಗ ದೈಹಿಕ ಯಾತ್ರಿಕರಲ್ಲ, ನಾವು ಆತ್ಮೀಯ ಯಾತ್ರಿಕರಾಗಿದ್ದೇವೆ. ಈ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ, ನೀವು ವಿಕರ್ಮಾಜೀತ ಆಗಿ ಬಿಡುತ್ತೀರಿ. ನೀವು ವಿಕರ್ಮಾಜೀತರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಒಂದು ವಿಕರ್ಮಾಜೀತ ಸಂವತ್ಸರವಾಗಿದೆ, ಇನ್ನೊಂದು ವಿಕ್ರಮ ಸಂವತ್ಸರವಾಗಿದೆ ನಂತರ ವಿಕರ್ಮಗಳು ಆರಂಭವಾಗುತ್ತವೆ, ರಾವಣ ರಾಜ್ಯವು ಆರಂಭವಾಯಿತು ಎಂದರೆ ವಿಕಾರಗಳು ಆರಂಭವಾಯಿತು. ನೀವೀಗ ವಿಕರ್ಮಾಜೀತರಾಗುವ ಪುರುಷಾರ್ಥ ಮಾಡುತ್ತಿದ್ದೀರಿ, ಅಲ್ಲಿ ಯಾವುದೇ ವಿಕರ್ಮವಾಗುವುದಿಲ್ಲ, ಅಲ್ಲಿ ರಾವಣನೇ ಇರುವುದಿಲ್ಲ. ಪ್ರಪಂಚದಲ್ಲಿ ಇದನ್ನು ಯಾರೂ ತಿಳಿದುಕೊಂಡಿಲ್ಲ. ನೀವು ತಂದೆಯ ಮೂಲಕ ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ತಂದೆಗೆ ಜ್ಞಾನಪೂರ್ಣ ಎಂದು ಹೇಳಲಾಗುತ್ತದೆ ಅಂದಮೇಲೆ ಮಕ್ಕಳಿಗೇ ಜ್ಞಾನವನ್ನು ಕೊಡುತ್ತಾರಲ್ಲವೆ. ಪರಮಪಿತನಿಗೆ ಹೆಸರೂ ಇರಬೇಕು, ಅವರು ನಾಮ-ರೂಪದಿಂದ ಭಿನ್ನವಾಗಿಲ್ಲ, ಅವರಿಗೆ ಪೂಜೆಯನ್ನೂ ಮಾಡುತ್ತಾರೆ. ಅವರ ಹೆಸರಾಗಿದೆ – ಶಿವ, ಅವರೇ ಪತಿತ-ಪಾವನ, ಜ್ಞಾನ ಸಾಗರನಾಗಿದ್ದಾರೆ. ಆ ಪರಮಪಿತ ಪರಮಾತ್ಮ ತಂದೆಯನ್ನೇ ಆತ್ಮವು ನೆನಪು ಮಾಡುತ್ತದೆ. ಆತ್ಮವು ತಂದೆಯ ಮಹಿಮೆ ಮಾಡುತ್ತದೆ, ಅವರು ಸುಖ-ಶಾಂತಿಯ ಸಾಗರನಾಗಿದ್ದಾರೆ. ತಂದೆಯಂತೂ ಅವಶ್ಯವಾಗಿ ಮಕ್ಕಳಿಗೆ ಆಸ್ತಿಯನ್ನೇ ಕೊಡುತ್ತಾರೆ. ಯಾರು ಇದ್ದು ಹೋಗುವರೋ ಅವರ ಸ್ಮಾರಕವನ್ನೂ ಮಾಡಿಸುತ್ತಾರೆ. ಒಬ್ಬ ಶಿವ ತಂದೆಯೇ ಆಗಿದ್ದಾರೆ ಯಾರಿಗೆ ಗಾಯನವೂ ಆಗುತ್ತದೆ ಮತ್ತು ಪೂಜೆಯೂ ಆಗುತ್ತದೆ. ಅವಶ್ಯವಾಗಿ ಅವರು ಶರೀರದ ಮೂಲಕ ಕರ್ತವ್ಯ ಮಾಡುತ್ತಾರೆ ಆದ್ದರಿಂದಲೇ ಅವರ ಗಾಯನವಿದೆ, ಅವರು ಸದಾ ಪಾವನನಾಗಿದ್ದಾರೆ. ತಂದೆಯೆಂದೂ ಪೂಜಾರಿಯಾಗುವುದಿಲ್ಲ, ಅವರು ಸದಾ ಪೂಜ್ಯನಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ನಾನು ಎಂದೂ ಪೂಜಾರಿಯಾಗುವುದಿಲ್ಲ, ನಾನು ಪೂಜಿಸಲ್ಪಡುತ್ತೇನೆ, ಪೂಜಾರಿಗಳು ನನ್ನ ಪೂಜೆ ಮಾಡುತ್ತಾರೆ. ಸತ್ಯಯುಗದಲ್ಲಿ ನನ್ನ ಪೂಜೆ ಮಾಡುವುದಿಲ್ಲ, ಭಕ್ತಿಮಾರ್ಗದಲ್ಲಿ ನಾನು ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತೀರಿ. ಮೊಟ್ಟ ಮೊದಲು ಶಿವನದೇ ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವ್ಯಭಿಚಾರಿ ಭಕ್ತಿಯಾಗಿ ಬಿಡುತ್ತದೆ. ಬ್ರಹ್ಮಾ-ಸರಸ್ವತಿಯನ್ನೂ ಸಹ ಶಿವ ತಂದೆಯೇ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಭಕ್ತಿಯದು ಎಷ್ಟೊಂದು ವಿಸ್ತಾರವಿದೆ! ಬೀಜದ ಯಾವುದೇ ವಿಸ್ತಾರವಿಲ್ಲ.

ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಸಾಕು. ಹೇಗೆ ವೃಕ್ಷದ ವಿಸ್ತಾರವಿರುತ್ತದೆಯೋ ಹಾಗೆಯೇ ಭಕ್ತಿಯದೂ ವಿಸ್ತಾರವಿರುತ್ತದೆ. ಜ್ಞಾನವು ಬೀಜವಾಗಿದೆ, ಯಾವಾಗ ನಿಮಗೆ ಜ್ಞಾನ ಸಿಗುತ್ತದೆಯೋ ಆಗ ಸದ್ಗತಿಯನ್ನು ಪಡೆಯುತ್ತೀರಿ. ನೀವು ತಲೆ ಕೆಡಿಸಿಕೊಳ್ಳಬೇಕಾಗುವುದಿಲ್ಲ. ಜ್ಞಾನ ಮತ್ತು ಭಕ್ತಿಯಿದೆಯಲ್ಲವೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯ ವೃಕ್ಷವಿರುವುದಿಲ್ಲ. ಅರ್ಧ ಕಲ್ಪದ ನಂತರ ಈ ಭಕ್ತಿಯ ವೃಕ್ಷವು ನಡೆಯುತ್ತದೆ, ಎಲ್ಲಾ ಧರ್ಮದವರಿಗೆ ತಮ್ಮ-ತಮ್ಮದೇ ಆದ ರೀತಿ-ಪದ್ಧತಿಗಳಿರುತ್ತವೆ, ಭಕ್ತಿಯಂತೂ ಎಷ್ಟು ದೊಡ್ಡದಾಗಿದೆ, ಜ್ಞಾನವು ಎಲ್ಲರಿಗೂ ಒಂದೇ ಆಗಿದೆ, ಕೇವಲ ಮನ್ಮಾನ ಭವ. ತಂದೆಯನ್ನು ನೆನಪು ಮಾಡಿರಿ ಆಗ ಆಸ್ತಿಯು ಅವಶ್ಯವಾಗಿ ನೆನಪಿಗೆ ಬರುವುದು. ಆಸ್ತಿಯದು ವಿಸ್ತಾರ ಆಗಿ ಬಿಡುತ್ತದೆಯಲ್ಲವೆ. ಅದು ಹದ್ದಿನ ಆಸ್ತಿಯಾಗಿರುತ್ತದೆ, ಇಲ್ಲಿ ನಿಮಗೆ ಬೇಹದ್ದಿನ ಆಸ್ತಿಯ ನೆನಪು ಬರುತ್ತದೆ. ಬೇಹದ್ದಿನ ತಂದೆಯು ಬಂದು ಭಾರತವಾಸಿಗಳಿಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಇಲ್ಲಿಯೇ ಅವರ ಜನ್ಮವಾಗುವುದೆಂದು ಗಾಯನವಿದೆ. ಈ ನಾಟಕದಲ್ಲಿ ಇದು ಅನಾದಿಯಾಗಿದೆ. ಹೇಗೆ ಭಗವಂತನು ಸರ್ವ ಶ್ರೇಷ್ಠ ಆಗಿದ್ದಾರೆಯೋ ಹಾಗೆಯೇ ಭಾರತ ಖಂಡವು ಸರ್ವಶ್ರೇಷ್ಠವಾಗಿದೆ. ಎಲ್ಲಿ ತಂದೆಯು ಬಂದು ಇಡೀ ಪ್ರಪಂಚದ ಸದ್ಗತಿ ಮಾಡುತ್ತಾರೆ ಅಂದಮೇಲೆ ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಯಿತಲ್ಲವೆ. ಹೇ ಪರಮಪಿತನೇ ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಭಾರತದ ಮೇಲೆ ಎಲ್ಲರಿಗೆ ಪ್ರೀತಿಯಿದೆ. ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ, ನೀವೀಗ ಪರಿಶ್ರಮ ಪಡುತ್ತಿದ್ದೀರಿ. ನೀವು ಗೋಪಿ ವಲ್ಲಭನ ಗೋಪ-ಗೋಪಿಕೆಯರಾಗಿದ್ದೀರಿ. ಸತ್ಯಯುಗದಲ್ಲಿ ಗೋಪ-ಗೋಪಿಕೆಯರ ಮಾತಿಲ್ಲ. ಅಲ್ಲಿ ಕಾಯಿದೆಯನುಸಾರ ರಾಜ್ಯವು ನಡೆಯುತ್ತದೆ. ಚರಿತ್ರೆಯು ಕೃಷ್ಣನದಲ್ಲ, ಒಬ್ಬ ತಂದೆಯದಾಗಿದೆ, ಅವರ ಚರಿತ್ರೆಯು ಎಷ್ಟು ದೊಡ್ಡದಾಗಿದೆ! ಇಡೀ ಪತಿತ ಸೃಷ್ಟಿಯನ್ನು ಪಾವನವನ್ನಾಗಿ ಮಾಡುತ್ತಾರೆ, ಇದು ಎಷ್ಟು ಚಾತುರ್ಯವಾಗಿದೆ. ಈ ಸಮಯದಲ್ಲಿ ಎಲ್ಲರೂ ಅಜಾಮೀಳರಂತಹ ಪಾಪಿಗಳಾಗಿದ್ದಾರೆ. ಈ ಸಾಧುಗಳು ಮೊದಲಾದವರು ಶ್ರೇಷ್ಠಾಚಾರಿಗಳಾಗಿದ್ದಾರೆ ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ ಆದರೆ ತಂದೆಯು ಹೇಳುವುದೇನೆಂದರೆ ಇವರ ಉದ್ಧಾರವನ್ನೂ ಸಹ ನಾನೇ ಮಾಡಬೇಕಾಗಿದೆ. ಹೇಗೆ ನೀವು ಪಾತ್ರಧಾರಿಗಳಾಗಿದ್ದೀರಿ, ತಂದೆಯೂ ಸಹ ಪಾತ್ರಧಾರಿಯಲ್ಲವೆ. ನೀವು 84 ಜನ್ಮಗಳನ್ನು ತೆಗೆದುಕೊಂಡು ಪಾತ್ರವನ್ನು ಅಭಿನಯಿಸುತ್ತೀರಿ, ತಂದೆಯೂ ಸಹ ರಚಯಿತ, ನಿರ್ದೇಶಕ ಮುಖ್ಯ ಪಾತ್ರಧಾರಿ ಆಗಿದ್ದಾರೆ. ಮಾಡಿ-ಮಾಡಿಸುವವರಾಗಿದ್ದಾರಲ್ಲವೆ. ಏನು ಮಾಡುತ್ತಾರೆ? ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ, ನೀವು ನಮ್ಮನ್ನು ಪಾವನ ಮಾಡಲು ಬನ್ನಿ ಎಂದು ಕರೆಯುತ್ತೀರಿ, ನಾನೂ ಸಹ ಈ ಪಾತ್ರದಲ್ಲಿ ಬಂಧಿತನಾಗಿದ್ದೇನೆ. ಇದು ಏಕೆ ಆಯಿತು, ಯಾವಾಗ ಆಯಿತು ಎಂದು ಯಾರೂ ಕೇಳುವಂತಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಇದಕ್ಕೆ ಆದಿ-ಮಧ್ಯ-ಅಂತ್ಯವಿಲ್ಲ, ಪ್ರಳಯವಾಗುವುದಿಲ್ಲ. ಆತ್ಮ ಅವಿನಾಶಿಯಾಗಿದೆ, ಎಂದೂ ವಿನಾಶ ಹೊಂದಲು ಸಾಧ್ಯವಿಲ್ಲ. ಇದಕ್ಕೆ ಅವಿನಾಶಿ ಪಾತ್ರವು ಸಿಕ್ಕಿದೆ. ಇದು ಬೇಹದ್ದಿನ ನಾಟಕವಲ್ಲವೆ. ತಂದೆಯು ಸಾರ ರೂಪದಲ್ಲಿ ತಿಳಿಸುತ್ತಾರೆ – ಈ ಡ್ರಾಮಾದ ಪಾತ್ರವು ಹೇಗೆ ನಡೆಯುತ್ತದೆ ಎಂದು. ಬಾಕಿ ಭಗವಂತನು ಸತ್ತಿರುವವರನ್ನು ಬದುಕಿಸಬಲ್ಲರು ಎಂದಲ್ಲ. ಈ ಅಂಧಶ್ರದ್ದೆಯ, ರಿದ್ಧಿ-ಸಿದ್ಧಿಯ ಮಾತುಗಳು ಇಲ್ಲಿಲ್ಲ. ನನ್ನನ್ನು ಕರೆಯುವುದೇ ಪತಿತರನ್ನು ಪಾವನ ಮಾಡಲು, ಬಂದು ನಮ್ಮನ್ನು ಪತಿತರಿಂದ ಪಾವನ ಮಾಡಿರಿ ಎಂದು ಹೇಳುತ್ತೀರಿ ಆದ್ದರಿಂದ ಅವಶ್ಯವಾಗಿ ಬರುತ್ತೇನೆ. ಗೀತೆಯು ಸರ್ವ ಶಾಸ್ತ್ರಮಯಿ ಶಿರೋಮಣಿಯಾಗಿದೆ. ಭಗವಂತನೇ ಗೀತೆಯನ್ನು ತಿಳಿಸಿದ್ದಾರೆ. ಸಹಜ ರಾಜ ಯೋಗವನ್ನು ಯಾವಾಗ ಕಲಿಸಿದರು? ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ತಂದೆಯು ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆ, ಬಂದು ಪಾವನ ಪ್ರಪಂಚ, ಹೊಸ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಸತ್ಯಯುಗದಲ್ಲಂತೂ ಸ್ಥಾಪನೆ ಮಾಡುವುದಿಲ್ಲ, ಅದು ಪಾವನ ಪ್ರಪಂಚವೇ ಆಗಿರುತ್ತದೆ. ಕಲ್ಪದ ಸಂಗಮಯುಗದಲ್ಲಿಯೇ ಕುಂಭ ಮೇಳವಾಗುತ್ತದೆ. ಆ ಕುಂಭ ಮೇಳವು 12 ವರ್ಷಗಳ ನಂತರ ನಡೆಯುತ್ತದೆ, ಈ ಅತಿ ದೊಡ್ಡ ಕುಂಭ ಮೇಳವು 5000 ವರ್ಷಗಳ ನಂತರ ನಡೆಯುತ್ತದೆ. ಇದು ಆತ್ಮರು ಮತ್ತು ಪರಮಾತ್ಮನ ಮೇಳವಾಗಿದೆ ಯಾವಾಗ ಪರಮಪಿತ ಪರಮಾತ್ಮನು ಬಂದು ಎಲ್ಲಾ ಆತ್ಮರನ್ನು ಪಾವನರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಕಲ್ಪದ ಆಯಸ್ಸನ್ನು ಹೆಚ್ಚು ಮಾಡಿರುವ ಕಾರಣದಿಂದಲೇ ಮನುಷ್ಯರು ಗೊಂದಲಕ್ಕೊಳಗಾಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ನೀವು ಯಾವ ಮಾಸ ಪತ್ರಿಕೆಯನ್ನು ಮಾಡಿಸುತ್ತೀರೋ ಅದನ್ನೂ ಸಹ ಯಥಾರ್ಥವಾಗಿ ತಿಳಿದುಕೊಳ್ಳುತ್ತೀರಿ ಮತ್ತ್ಯಾರಿಗೂ ಅರ್ಥವಾಗುವುದಿಲ್ಲ. ತಂದೆಯು ಹೇಳಿದ್ದರು, ಮಕ್ಕಳೇ ಈ ರೀತಿ ಬರೆಯಿರಿ, ಏನೆಲ್ಲವೂ ಆಯಿತೋ ಅದು 5000 ವರ್ಷಗಳ ಹಿಂದಿನ ತರಹ ಆಯಿತು, ನತಿಂಗ್ನ್ಯೂ. ಯಾವುದು 5000 ವರ್ಷಗಳ ಮೊದಲು ಆಗಿತ್ತೋ ಅದೇ ಪುನರಾವರ್ತನೆ ಆಗುತ್ತದೆ. ಯಾರಿಗೆಲ್ಲಾ ತಿಳಿದುಕೊಳ್ಳುವ ಇಚ್ಛೆಯಿದೆಯೋ ಬಂದು ತಿಳಿದುಕೊಳ್ಳಲಿ, ಇಂತಹ ಯುಕ್ತಿಗಳನ್ನು ರಚಿಸಬೇಕು – ನಾವು ಪತ್ರಿಕೆಗಳಲ್ಲಿ ಹೇಗೆ ಹಾಕಿಸಬೇಕು ಎಂದು. ಇದನ್ನೂ ಸಹ ನೀವು ಬರೆಯಬಹುದು – ಈ ಮಹಾಭಾರತ ಯುದ್ಧವು ಹೇಗೆ ಪಾವನ ಪ್ರಪಂಚದ ದ್ವಾರವನ್ನು ತೆರೆಯುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ, ಕಲ್ಪದ ಹಿಂದಿನ ತರಹ. ಈಗ ಮಹಾಭಾರತ ಯುದ್ಧದಿಂದ ಸತ್ಯಯುಗವು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ಬಂದು ತಿಳಿದುಕೊಳ್ಳಿ, ದೇವಿ-ದೇವತೆಗಳ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಪರಮಾತ್ಮನಿಂದ ಜನ್ಮ ಸಿದ್ಧ ಅಧಿಕಾರವನ್ನು ತೆಗೆದುಕೊಳ್ಳುವುದಾದರೆ ಬಂದು ತೆಗೆದುಕೊಳ್ಳಿ. ಹೀಗೆ ವಿಚಾರ ಸಾಗರ ಮಂಥನ ಮಾಡಬೇಕು. ಅವರು ಕಥೆಗಳು ಇತ್ಯಾದಿಗಳನ್ನು ರಚಿಸುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಆ ಪಾತ್ರವನ್ನು ಅಭಿನಯಿಸುತ್ತಾರೆ. ವ್ಯಾಸನೂ ಸಹ ಡ್ರಾಮಾ ಪ್ಲಾನನುಸಾರ ಶಾಸ್ತ್ರಗಳನ್ನು ರಚಿಸಿದ್ದಾರೆ. ಅವರಿಗೆ ಪಾತ್ರವೇ ಆ ರೀತಿ ಸಿಕ್ಕಿದೆ. ನೀವೀಗ ಈ ಡ್ರಾಮಾವನ್ನು ತಿಳಿದುಕೊಂಡಿದ್ದೀರಿ ಮತ್ತೆ ಇದೇ ಡ್ರಾಮಾ ಪುನರಾವರ್ತನೆ ಆಗುವುದು. ನೀವೀಗ ಬಂದಿದ್ದೀರಿ, ಪುನಃ ಜ್ಞಾನವನ್ನು ಕೇಳುತ್ತೀರಿ. ನಿಮಗೆ ತಿಳಿದಿದೆ, ಪುನಃ ಈ ಲಕ್ಷ್ಮೀ-ನಾರಾಯಣರ ರಾಜ್ಯವು ಬರುವುದು ಮತ್ತೆಲ್ಲಾ ಧರ್ಮಗಳು ಸಮಾಪ್ತಿಯಾಗುವವು. ನೀವೀಗ ಜ್ಞಾನ ಪೂರ್ಣರಾಗುತ್ತಿದ್ದೀರಿ, ತಂದೆಯು ನಿಮ್ಮನ್ನು ತಮ್ಮ ಸಮಾನ ಜ್ಞಾನ ಪೂರ್ಣರನ್ನಾಗಿ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಅರ್ಧಕಲ್ಪ ನೀವು ಬಹಳ ಶಾಂತ ಪೂರ್ಣರಾಗುತ್ತೀರಿ. ಯಾವುದೇ ಪ್ರಕಾರದ ಅಶಾಂತಿ ಇರುವುದಿಲ್ಲ. ಅಲ್ಲಿ ಮಕ್ಕಳು ಎಂದೂ ಅಳುವುದಿಲ್ಲ ಸದಾ ಮುಗುಳ್ನಗುತ್ತಿರುತ್ತಾರೆ. ಇಲ್ಲಿಯೂ ಸಹ ನೀವು ಅಳುವಂತಿಲ್ಲ, ಅಮ್ಮ ಸತ್ತರೂ ಹಲ್ವ ತಿನ್ನಿ ಎಂಬ ಗಾಯನವಿದೆ. ಯಾರು ಅಳುವರೋ ಅವರು ಕಳೆದುಕೊಳ್ಳುವರು. ಪದವಿಯೂ ಭ್ರಷ್ಟವಾಗುವುದು, ನಿಮಗೆ ಪತಿಯರ ಪತಿ ಸಿಕ್ಕಿದ್ದಾರೆ, ಅವರು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಅವರು ಎಂದೂ ಸಾಯುವುದಿಲ್ಲ ಅಂದಮೇಲೆ ಅಳುವ ಅವಶ್ಯಕತೆಯೇನಿದೆ, ಯಾರು ಅಳುವುದರಿಂದ ಮುಕ್ತರಾಗುವರೋ ಅವರೇ ರಾಜ್ಯ ಭಾಗ್ಯವನ್ನು ಪಡೆಯುವರು, ಉಳಿದವರು ಪ್ರಜೆಗಳಲ್ಲಿ ಬರುತ್ತಾರೆ. ಈ ಸ್ಥಿತಿಯಲ್ಲಿ ನಾವು ಯಾವ ಪದವಿಯನ್ನು ಪಡೆಯುತ್ತೇವೆ ಎಂದು ತಂದೆಯನ್ನು ಕೇಳಿದರೆ ತಂದೆಯು ಕೂಡಲೇ ತಿಳಿಸಬಲ್ಲರು. ಮಕ್ಕಳಿಗೆ ಅಂತಿಮದಲ್ಲಿ ಎಲ್ಲವೂ ಸಾಕ್ಷಾತ್ಕಾರ ಆಗುವುದು. ಹೇಗೆ ಶಾಲೆಯಲ್ಲಿ ಎಲ್ಲರಿಗೆ ಅರ್ಥವಾಗಿ ಬಿಡುತ್ತದೆಯಲ್ಲವೆ. ಯಾರು ರುದ್ರ ಮಾಲೆಯಲ್ಲಿ ಬರುತ್ತಾರೆ ಎಂಬುದು ಅಂತಿಮದಲ್ಲಿ ನಿಮಗೆ ಅರ್ಥವಾಗುವುದು. ಕೊನೆಯ ದಿನಗಳಲ್ಲಿ ಬಹಳ ಪುರುಷಾರ್ಥ ಮಾಡುತ್ತಾರೆ, ನಾವು ಇಂತಹ ಸಬ್ಜೆಕ್ಟನಲ್ಲಿ ನಾಪಾಸಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ. ಹಾಗೆಯೇ ನಿಮಗೂ ಸಹ ಎಲ್ಲವೂ ಅರ್ಥವಾಗುತ್ತಾ ಹೋಗುವುದು. ನಮಗೆ ಮಕ್ಕಳಲ್ಲಿ ಬಹಳ ಮೋಹವಿದೆಯೆಂದು ಅನೇಕರು ಹೇಳುತ್ತಾರೆ, ಅದನ್ನು ತೆಗೆಯಲೇಬೇಕಾಗುವುದು. ಮೋಹವು ಒಬ್ಬ ತಂದೆಯಲ್ಲಿರಲಿ, ಬಾಕಿ ಟ್ರಸ್ಟಿಯಾಗಿ ಸಂಭಾಲನೆ ಮಾಡಬೇಕಾಗಿದೆ. ಇದೆಲ್ಲವನ್ನೂ ತಂದೆಯೇ ಕೊಟ್ಟಿದ್ದಾರೆಂದು ಹೇಳುತ್ತೀರಲ್ಲವೆ. ಅಂದಮೇಲೆ ಟ್ರಸ್ಟಿಯಾಗಿ ನಡೆಯಿರಿ, ಮಮತ್ವವನ್ನು ತೆಗೆಯಿರಿ. ಸ್ವಯಂ ತಂದೆಯೇ ಬಂದು ಹೇಳುತ್ತಾರೆ, ಇದೆಲ್ಲದರಿಂದ ಮಮತ್ವವನ್ನು ಕಳೆಯಿರಿ, ಇದೆಲ್ಲವೂ ತಂದೆಯದೇ ಆಗಿದೆ ಎಂದು ತಿಳಿದುಕೊಳ್ಳಿ, ಅವರ ಮತದನುಸಾರವೇ ನಡೆಯಿರಿ. ಸ್ವಯಂ ಅವರ ಕಾರ್ಯದಲ್ಲಿಯೇ ತೊಡಗಿರಿ, ಅವಿನಾಶಿ ಜ್ಞಾನ ರತ್ನಗಳ ದಾನ ಮಾಡುತ್ತಾ ಇರಿ. ಇಲ್ಲಿ ಕನ್ಯೆಯರಿಗೆ ತಂದೆಯ ಬಳಿ ಎಲ್ಲರಿಗಿಂತ ಹೆಚ್ಚು ಗೌರವವಿದೆ, ಕನ್ಯೆಯು ಕರ್ಮ ಬಂಧನದಿಂದ ಮುಕ್ತವಾಗಿರುತ್ತಾಳೆ, ಗಂಡು ಮಕ್ಕಳಿಗೆ ಲೌಕಿಕ ತಂದೆಯ ನಶೆಯಿರುತ್ತದೆ. ಕನ್ಯೆಗೆ ಲೌಕಿಕ ತಂದೆಯ ಆಸ್ತಿಯು ಸಿಗುವುದಿಲ್ಲ, ಈ ತಂದೆಯ ಬಳಿಯಂತೂ ಸ್ತ್ರೀ-ಪುರುಷರ ಭೇದವಿಲ್ಲ. ತಂದೆಯು ಆತ್ಮರಿಗೆ ತಿಳಿಸುತ್ತಾರೆ – ನೀವು ತಿಳಿದುಕೊಂಡಿದ್ದೀರಿ, ನಾವೆಲ್ಲರೂ ಸಹೋದರರಾಗಿದ್ದೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆತ್ಮವು ಓದುತ್ತದೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತದೆ. ಎಷ್ಟು ಹೆಚ್ಚು ಆಸ್ತಿಯನ್ನು ತೆಗೆದುಕೊಳ್ಳುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವರು. ತಂದೆಯು ಬಂದು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರ ಪೂಜೆಯನ್ನೂ ಮಾಡುತ್ತಾರೆ, ಸೋಮನಾಥ ಮಂದಿರವನ್ನು ಕಟ್ಟಿಸಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ಶಿವ ತಂದೆಯು ಬಂದು ಏನು ಮಾಡಿದರು! ಅವರ ನೆನಪಾರ್ಥ ಮಂದಿರವನ್ನು ಏಕೆ ಕಟ್ಟಿಸಿದ್ದಾರೆ? ಇದನ್ನು ನೀವೇ ತಿಳಿದುಕೊಂಡಿದ್ದೀರಿ, ಕಲ್ಪ-ಕಲ್ಪವೂ ಇದೇರೀತಿ ಆಗುವುದು. ಡ್ರಾಮಾದಲ್ಲಿ ನಿಗಧಿಯಾಗಿದೆ ಆದ್ದರಿಂದ ಪುನರಾವರ್ತನೆಯಾಗುತ್ತಿದೆ. ತಂದೆಯು ಬರಲೇಬೇಕು, ಹಳೆಯ ಪ್ರಪಂಚದ ವಿನಾಶವಾಗಬೇಕಾಗಿದೆ. ಯಾವುದೇ ದುಃಖದ ಮಾತಿಲ್ಲ. ಇದು ಸುಖ-ದುಃಖದ ಆಟವಾಗಿದೆ, ನಿರಪರಾಧಿಗಳ ಮೃತ್ಯುವಾಗುವುದು. ಇಲ್ಲವಾದರೆ ಯಾರು-ಯಾರ ಕೊಲೆ ಮಾಡುವರೋ ಅವರಿಗೆ ನೇಣಿನ ಶಿಕ್ಷೆ ಸಿಗಬೇಕು ಆದರೆ ಈಗ ಯಾರನ್ನು ಹಿಡಿದುಕೊಳ್ಳುವುದು ಆದ್ದರಿಂದ ಎಲ್ಲವೂ ಸಹಜವಾಗಲು ಈ ಪ್ರಾಕೃತಿಕ ವಿಕೋಪಗಳಾಗಲೇಬೇಕಾಗಿದೆ, ವಿನಾಶವಂತೂ ಆಗಲೇಬೇಕಾಗಿದೆ. ಅಮರ ಲೋಕ, ಮೃತ್ಯುಲೋಕದ ಅರ್ಥವನ್ನೂ ಯಾರೂ ತಿಳಿದುಕೊಂಡಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ಇಂದು ನಾವು ಮೃತ್ಯುಲೋಕದಲ್ಲಿದ್ದೇವೆ, ನಾಳೆ ಅಮರ ಲೋಕದಲ್ಲಿರುತ್ತೇವೆ ಆದ್ದರಿಂದ ನಾವು ಓದುತ್ತೇವೆ. ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರೆ, ನೀವು ಜ್ಞಾನಾಮೃತವನ್ನು ಕುಡಿಸುತ್ತೀರಿ. ಹಾ ಹಾ ಎಂದು ಹೇಳಿ ಮತ್ತೆ ನಿದ್ರೆಯಲ್ಲಿ ಮಲಗಿ ಬಿಡುತ್ತಾರೆ. ಬೇಹದ್ದಿನ ತಂದೆಯು ಆಸ್ತಿಯನ್ನು ಕೊಡುತ್ತಾರೆಂಬುದನ್ನೂ ಕೇಳಿಸಿಕೊಳ್ಳುತ್ತಾರೆ, ಇದು ಅದೇ ಮಹಾಭಾರತ ಯುದ್ಧವಾಗಿದೆ ಯಾವುದರಿಂದ ಸ್ವರ್ಗದ ಬಾಗಿಲು ತೆರೆಯುತ್ತದೆ. ಇದು ಬಹಳ ಒಳ್ಳೆಯ ಜ್ಞಾನವಾಗಿದೆ, ಈ ಜ್ಞಾನವನ್ನು ಯಾರೂ ಕೊಡಲು ಸಾಧ್ಯವಿಲ್ಲ. ಇದನ್ನು ನಾವು ನಂಬುತ್ತೇವೆಂದು ಬರೆಯುತ್ತಾರೆ ಆದರೆ ತಾವು ಮಾತ್ರ ಜ್ಞಾನವನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಹಾಗೆಯೇ ಮಲಗಿ ಬಿಡುತ್ತಾರೆ. ಇಂತಹ ಕುಂಭ ಕರ್ಣರೆಂದು ಹೇಳಲಾಗುತ್ತದೆ. ನೀವು ಇದನ್ನು ಬರೆದುಕೊಡುತ್ತೀರಿ ಆದರೆ ಇಲ್ಲಿ ಕೇಳಿ ಹೋಗಿ ಮತ್ತೆ ಮನೆಯಲ್ಲಿ ಮಲಗಿ ಬಿಡುವುದಲ್ಲ ಎಂದು ನೀವು ಹೇಳಬಹುದು. ಕುಂಭಕರ್ಣನ ಚಿತ್ರದ ಮುಂದೆ ಕರೆದುಕೊಂಡು ಹೋಗಿ ಇವರಂತೆ ನೀವು ಮಲಗಿ ಬಿಡಬೇಡಿ, ಇದನ್ನು ತಿಳಿದುಕೊಳ್ಳಿರಿ ಎಂದು ಹೇಳಿರಿ. ಇದನ್ನು ತಿಳಿಸುವುದಕ್ಕೂ ಬಹಳ ಯುಕ್ತಿ ಬೇಕಲ್ಲವೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ತಮ್ಮ ಅಂಗಡಿಗಳಲ್ಲಿಯೂ ಮುಖ್ಯ-ಮುಖ್ಯವಾದ ಚಿತ್ರಗಳನ್ನು ಇಟ್ಟುಕೊಳ್ಳಿ, ಯಾರಾದರೂ ಬಂದರೆ ಈ ಚಿತ್ರಗಳ ಬಗ್ಗೆ ತಿಳಿಸಿ, ಅವರಿಗೂ ಸಂಪಾದನೆ ಮಾಡಿಸಿ, ಇದೂ ಸಹ ಸತ್ಯ ಸಂಪಾದನೆಯಾಗಿದೆ. ಇದರಿಂದ ನೀವು ಅನೇಕರ ಕಲ್ಯಾಣ ಮಾಡಬಲ್ಲಿರಿ, ಇದರಲ್ಲಿ ಯಾವುದೇ ಸಂಕೋಚದ ಮಾತಿಲ್ಲ. ನೀವು ಬಿ.ಕೆ. ಆಗಿದ್ದೀರಾ ಎಂದು ಯಾರಾದರೂ ಕೇಳಿದರೆ ನೀವು ಹೇಳಿರಿ, ಅರೆ! ಪ್ರಜಾಪಿತ ಬ್ರಹ್ಮನ ಕುಮಾರ-ಕುಮಾರಿಯರು ನೀವೂ ಆಗಿದ್ದೀರಲ್ಲವೆ. ತಂದೆಯು ಹೊಸ ಸೃಷ್ಟಿಯನ್ನು ರಚಿಸುತ್ತಿದ್ದಾರೆ, ಹಳೆಯ ಸೃಷ್ಟಿಗೆ ಬೆಂಕಿ ಬೀಳುತ್ತಿದೆ, ನೀವೂ ಸಹ ಎಲ್ಲಿಯವರೆಗೆ ಬಿ.ಕೆ. ಆಗುವುದಿಲ್ಲವೋ ಅಲ್ಲಿಯವರೆಗೆ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ಹಾಗೆಯೇ ಅಂಗಡಿಗಳಲ್ಲಿಯೂ ಸರ್ವೀಸ್ ಮಾಡಿರಿ ಆಗ ಎಷ್ಟು ಬೇಹದ್ದಿನ ಸೇವೆಯಾಗಿ ಬಿಡುವುದು. ಪರಸ್ಪರ ಸಲಹೆ ತೆಗೆದುಕೊಳ್ಳಿ, ಅಂಗಡಿಯು ಚಿಕ್ಕದಾಗಿದ್ದರೂ ಸಹ ಗೋಡೆಗೆ ಚಿತ್ರವನ್ನು ಹಾಕಬಹುದು, ದಾನವು ಮನೆಯಿಂದಲೇ ಆರಂಭವಾಗುವುದು. ಮೊಟ್ಟ ಮೊದಲು ಅವರ ಕಲ್ಯಾಣ ಮಾಡಬೇಕು. ತಂದೆಯು ತಿಳಿಸುತ್ತಾರೆ – ಈಗ ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ, ಶಿವ ತಂದೆಯನ್ನು ನೆನಪು ಮಾಡಿರಿ ಅವರಿಂದ ಆಸ್ತಿಯು ಸಿಗುತ್ತದೆ. ಮನುಷ್ಯರಂತೂ ಗೊಂದಲದಲ್ಲಿದ್ದಾರೆ, ಅವರಿಗೆ ತಿಳಿಸಬೇಕಾಗಿದೆ – ದೈವೀ ಸಾಮ್ರಾಜ್ಯದ ಆಸ್ತಿಯನ್ನು ಪಡೆಯಬೇಕೆಂದರೆ ನರನಿಂದ ನಾರಾಯಣನಾಗುವ ಇಚ್ಛೆಯಿದ್ದರೆ ಬಂದು ತಿಳಿದುಕೊಳ್ಳಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಒಬ್ಬ ತಂದೆಯಲ್ಲಿಯೇ ಶುದ್ಧ, ಸತ್ಯವಾದ ಮೋಹವನ್ನು ಇಟ್ಟುಕೊಳ್ಳಬೇಕು. ಅವರನ್ನೇ ನೆನಪು ಮಾಡಬೇಕಾಗಿದೆ. ದೇಹಧಾರಿಗಳೊಂದಿಗಿನ ಮಮತ್ವವನ್ನು ತೆಗೆಯಬೇಕು. ಟ್ರಸ್ಟಿಗಳಾಗಿ ಸಂಭಾಲನೆ ಮಾಡಬೇಕಾಗಿದೆ.

2. ವಿಕರ್ಮಾಜೀತರಾಗಬೇಕಾಗಿದೆ ಆದ್ದರಿಂದ ಕರ್ಮೇಂದ್ರಿಯಗಳಿಂದ ಯಾವುದೇ ವಿಕರ್ಮವಾಗದಿರಲಿ, ಇದರ ಬಹಳ-ಬಹಳ ಗಮನವನ್ನು ಇಡಬೇಕಾಗಿದೆ.

ವರದಾನ:-

ಈ ಡ್ರಾಮಾದಲ್ಲಿ ಏನೆಲ್ಲವೂ ಆಗುತ್ತದೆಯೋ ಅದರಲ್ಲಿ ಕಲ್ಯಾಣವೇ ಅಡಗಿದೆ. ಏಕೆ, ಏನು ಎಂಬ ಪ್ರಶ್ನೆಯು ಬುದ್ಧಿವಂತರಲ್ಲಿ ಉತ್ಪನ್ನವಾಗಲು ಸಾಧ್ಯವಿಲ್ಲ. ನಷ್ಟದಲ್ಲಿಯೂ ಕಲ್ಯಾಣವೇ ಅಡಗಿದೆ, ತಂದೆಯ ಜೊತೆ (ಸಂಗ) ಹಾಗೂ ಕೈ (ಶ್ರೀಮತ) ಇದೆಯೋ ಅಲ್ಲಿ ಅಕಲ್ಯಾಣವಾಗಲು ಸಾಧ್ಯವಿಲ್ಲ. ಈ ರೀತಿ ಗೌರವಯುತವಾದ ಸ್ಥಾನದಲ್ಲಿ ಇರುತ್ತೀರೆಂದರೆ ಎಂದಿಗೂ ಸಹ ಬೇಸರವಾಗಲು ಸಾಧ್ಯವಿಲ್ಲ. ಸಾಕ್ಷಿತನದ ಸ್ಥಾನವು ಬೇಸರ ಶಬ್ಧವನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಆದ್ದರಿಂದ ತ್ರಿಕಾಲದರ್ಶಿಯಾಗಿ ಪ್ರತಿಜ್ಞೆ ಮಾಡಿರಿ – ಬೇಸರವಾಗುವುದಿಲ್ಲ, ಅನ್ಯರನ್ನೂ ಬೇಸರ ಪಡಿಸುವುದಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top