02 September 2021 KANNADA Murli Today | Brahma Kumaris

Read and Listen today’s Gyan Murli in Kannada

September 1, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

``ಮಧುರ ಮಕ್ಕಳೇ - ನೀವು ಭವಿಷ್ಯ ಹೊಸ ಪ್ರಪಂಚಕ್ಕಾಗಿ ತಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೀರಿ, ಈ ನಿಮ್ಮ ರಾಜಯೋಗವು ಹೊಸ ಪ್ರಪಂಚಕ್ಕಾಗಿಯೇ ಇದೆ''

ಪ್ರಶ್ನೆ:: -

ಅದೃಷ್ಟವಂತ ಮಕ್ಕಳ ಮುಖ್ಯ ಲಕ್ಷಣಗಳೇನು?

ಉತ್ತರ:-

1. ಅದೃಷ್ಟವಂತ ಮಕ್ಕಳು ಖಾಯಿದೆಯ ಅನುಸಾರ ಶ್ರೀಮತದಂತೆ ನಡೆಯುತ್ತಾರೆ. ಯಾವುದೇ ಕಾಯಿದೆಗೆ ವಿರುದ್ಧವಾದ ಕಾರ್ಯ ಮಾಡಿ ತಂದೆಯನ್ನು ಹಾಗೂ ತನ್ನನ್ನು ಮೋಸಗೊಳಿಸಿಕೊಳ್ಳುವುದಿಲ್ಲ. 2. ಅವರಿಗೆ ವಿದ್ಯೆಯ ಪೂರ್ಣ ಉಮ್ಮಂಗವಿರುವುದು. ತಿಳಿಸುವ ಉಮ್ಮಂಗವೂ ಇರುವುದು. 3. ಪಾಸ್-ವಿತ್-ಆನರ್ ಆಗಿ ಸ್ಕಾಲರ್ಶಿಪ್ ತೆಗೆದುಕೊಳ್ಳುವ ಪುರುಷಾರ್ಥ ಮಾಡುವರು. 4. ಎಂದೂ ಯಾರಿಗೂ ದುಃಖ ಕೊಡುವುದಿಲ್ಲ. ಎಂದೂ ಯವುದೇ ಉಲ್ಟಾ ಕರ್ಮ ಮಾಡುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ….

ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ಗೀತೆಯನ್ನು ಕೇಳಿದಿರಿ. ಹೊಸಬರೂ ಕೇಳಿದಿರಿ, ಹಳಬರೂ ಕೇಳಿದಿರಿ, ಕುಮಾರಿಯರೂ ಕೇಳಿದಿರಿ, ಇದು ಪಾಠಶಾಲೆಯಾಗಿದೆ. ಪಾಠಶಾಲೆಯಲ್ಲಿ ಒಂದಲ್ಲ ಒಂದು ಅದೃಷ್ಟವನ್ನು ರೂಪಿಸಿಕೊಳ್ಳಲು ಹೋಗುತ್ತಾರೆ, ಅಲ್ಲಿ ಅನೇಕ ಪ್ರಕಾರದ ಅದೃಷ್ಟವಿರುತ್ತದೆ. ಕೆಲವರು ಸರ್ಜನ್ ಆಗುವ, ಕೆಲವರು ವಕೀಲರಾಗುವ ಅದೃಷ್ಟವನ್ನು ರೂಪಿಸಿಕೊಳ್ಳುತ್ತಾರೆ, ಅದೃಷ್ಟಕ್ಕೆ ಗುರಿ-ಧ್ಯೇಯವೆಂದೂ ಹೇಳಲಾಗುತ್ತದೆ. ಅದೃಷ್ಟವನ್ನು ರೂಪಿಸಿಕೊಳ್ಳದಿದ್ದರೆ ಪಾಠಶಾಲೆಯಲ್ಲಿ ಇನ್ನೇನು ಓದುತ್ತಾರೆ! ಈಗ ಮಕ್ಕಳು ಇಲ್ಲಿ ತಿಳಿದುಕೊಂಡಿದ್ದೀರಿ, ನಾವೂ ಸಹ ಹೊಸ ಪ್ರಪಂಚಕ್ಕಾಗಿ ನಮ್ಮ ರಾಜ್ಯಭಾಗ್ಯವನ್ನು ಪಡೆಯಲು ಅದೃಷ್ಟವನ್ನು ರೂಪಿಸಿಕೊಂಡು ಬಂದಿದ್ದೇವೆ, ಇದು ಹೊಸ ಪ್ರಪಂಚಕ್ಕಾಗಿಯೇ ರಾಜಯೋಗವಾಗಿದೆ. ಅವರು ಹಳೆಯ ಪ್ರಪಂಚಕ್ಕಾಗಿ ಬ್ಯಾರಿಸ್ಟರ್, ಇಂಜಿನಿಯರ್, ಸರ್ಜನ್ ಇತ್ಯಾದಿಯಾಗುತ್ತಾರೆ. ಅವರು ಆಗುತ್ತಾ-ಆಗುತ್ತಾ ಇನ್ನೂ ಹಳೆಯ ಪ್ರಪಂಚದ ಸಮಯವು ಬಹಳ ಸ್ವಲ್ಪವೇ ಉಳಿದಿದೆ. ಅದು ಸಮಾಪ್ತಿಯಾಗಿ ಬಿಡುವುದು. ಅವರದು ಮೃತ್ಯುಲೋಕಕ್ಕಾಗಿ ಮತ್ತು ಈ ಜನ್ಮಕ್ಕಾಗಿ ಅದೃಷ್ಟವಾಗಿದೆ. ನಿಮ್ಮ ವಿದ್ಯೆಯು ಹೊಸ ಪ್ರಪಂಚಕ್ಕೋಸ್ಕರವೇ ಇದೆ. ನೀವು ಹೊಸ ಪ್ರಪಂಚಕ್ಕಾಗಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ಹೊಸ ಪ್ರಪಂಚದಲ್ಲಿ ನಿಮಗೆ ರಾಜ್ಯಭಾಗ್ಯ ಸಿಗುವುದು. ಯಾರು ಓದಿಸುತ್ತಾರೆ? ಬೇಹದ್ದಿನ ತಂದೆ. ಅವರಿಂದಲೇ ಆಸ್ತಿ ಪಡೆಯಬೇಕಾಗಿದೆ. ಹೇಗೆ ವೈದ್ಯರಿಗೆ ವೈದ್ಯಕೀಯ ವೃತ್ತಿಯ ತಮ್ಮ ವಿದ್ಯೆಯ ಆಸ್ತಿಯು ಸಿಗುತ್ತದೆ. ಅವರು ವೃದ್ಧರಾದ ಮೇಲೆ ಗುರುಗಳ ಬಳಿ ಹೋಗುತ್ತಾರೆ, ಏನನ್ನು ಬಯಸುತ್ತಾರೆ? ನಮಗೆ ಶಾಂತಿಧಾಮಕ್ಕೆ ಹೋಗುವ ಶಿಕ್ಷಣ ಕೊಡಿ, ಸದ್ಗತಿ ಕೊಡಿ ಎಂದು ಕೇಳುತ್ತಾರೆ. ಇಲ್ಲಿಂದ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ತಂದೆಯಿಂದಲೂ ಈ ಜನ್ಮಕ್ಕಾಗಿ ಆಸ್ತಿಯು ಸಿಗುತ್ತದೆ ಬಾಕಿ ಗುರುಗಳಿಂದ ಏನೂ ಸಿಗುವುದಿಲ್ಲ. ಶಿಕ್ಷಕರಿಂದ ಒಂದಲ್ಲ ಒಂದು ಆಸ್ತಿಯನ್ನು ಪಡೆಯುತ್ತಾರೆ ಏಕೆಂದರೆ ಜೀವನೋಪಾಯ ಬೇಕಲ್ಲವೆ. ತಂದೆಯ ಆಸ್ತಿಯಿದ್ದರೂ ಸಹ ನಾವು ನಮ್ಮ ಸಂಪಾದನೆ ಮಾಡಬೇಕೆಂದು ಓದುತ್ತಾರೆ. ಗುರುಗಳಿಂದ ಸಂಪಾದನೆ ಏನೂ ಇಲ್ಲ. ಹಾ! ಯಾರಾದರೂ ಗೀತೆ, ಇತ್ಯಾದಿಗಳನ್ನು ಚೆನ್ನಾಗಿ ಓದಿ ಅದರ ಮೇಲೆ ಭಾಷಣ ಮಾಡುತ್ತಾರೆ. ಇದೆಲ್ಲವೂ ಅಲ್ಪಕಾಲದ ಸುಖಕ್ಕಾಗಿ. ಈಗಂತೂ ಇದು ಮೃತ್ಯುಲೋಕದ ಅಂತ್ಯವಾಗಿದೆ. ನಾವು ಹೊಸ ಪ್ರಪಂಚದ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೇವೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಲೌಕಿಕ ತಂದೆಯ ಹಾಗೂ ತನ್ನ ಸಂಪತ್ತೆಲ್ಲವೂ ಭಸ್ಮವಾಗುವುದು. ಖಾಲಿ ಕೈಯಲ್ಲಿಯೇ ಹೋಗುವರು. ಈಗಂತೂ ಹೊಸ ಪ್ರಪಂಚಕ್ಕಾಗಿ ಸಂಪಾದನೆ ಬೇಕಾಗಿದೆ, ಹಳೆಯ ಪ್ರಪಂಚದ ಮನುಷ್ಯರಂತೂ ಅದನ್ನು ಮಾಡಲು ಸಾಧ್ಯವಿಲ್ಲ. ಹೊಸ ಪ್ರಪಂಚದ ಸಂಪಾದನೆ ಮಾಡಿಸುವವರು ಶಿವ ತಂದೆಯಾಗಿದ್ದಾರೆ, ಇಲ್ಲಿ ನೀವು ಹೊಸ ಪ್ರಪಂಚಕ್ಕಾಗಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ಆ ತಂದೆಯೇ ನಿಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ ಮತ್ತು ಭವಿಷ್ಯಕ್ಕಾಗಿ ಸಂಪಾದನೆಯನ್ನು ಕಲಿಸಲು ಅವರು ಸಂಗಮದಲ್ಲಿಯೇ ಬರುತ್ತಾರೆ, ಇನ್ನು ಈ ಹಳೆಯ ಪ್ರಪಂಚದಲ್ಲಿ ಕೆಲವೇ ದಿನಗಳಿಗೆ ಇದನ್ನೂ ಪ್ರಪಂಚದ ಮನುಷ್ಯರು ತಿಳಿದುಕೊಂಡಿಲ್ಲ. ಹೊಸ ಪ್ರಪಂಚಕ್ಕಾಗಿ ಇವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ ಎಂದು ನೀವು ತಿಳಿದುಕೊಂಡಿದ್ದೀರಿ. ತಂದೆಯು ಶಾಂತಿಧಾಮ, ಸುಖಧಾಮದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿಯೇ ಬರುತ್ತಾರೆ. ಯಾರು ಅದೃಷ್ಟವನ್ನು ರೂಪಿಸಿಕೊಳ್ಳುವುದಿಲ್ಲವೋ ಅವರು ಏನನ್ನೂ ತಿಳಿದುಕೊಂಡಿಲ್ಲ ಎಂದರ್ಥ. ಒಂದೇ ಮನೆಯಲ್ಲಿ ಸ್ತ್ರೀಯು ಓದುತ್ತಾಳೆ, ಪುರುಷನು ಓದುವುದಿಲ್ಲ. ಮಕ್ಕಳು ಓದಿದರೆ ತಂದೆ-ತಾಯಿ ಓದುವುದಿಲ್ಲ, ಇದು ನಡೆಯುತ್ತಾ ಇರುತ್ತದೆ. ಆರಂಭದಲ್ಲಿ ಇಡೀ ಪರಿವಾರವೇ ಬಂದರು ಆದರೆ ಮಾಯೆಯ ಬಿರುಗಾಳಿಗಳು ಬಂದು ಮತ್ತೆ ತಂದೆಯನ್ನು ಬಿಟ್ಟು ಹೋದರು. ಆಶ್ಚರ್ಯವೆನಿಸುವಂತೆ ಕೇಳುತ್ತಾ, ಅನ್ಯರಿಗೂ ಹೇಳುತ್ತಾರೆ ವಿದ್ಯೆಯನ್ನು ಓದಿಸುತ್ತಾ ಮತ್ತೆ ಬಿಟ್ಟು ಹೋದರು. ಅರೆ ಡ್ರಾಮಾದ ಲೀಲೆಯೇ! ಇದು ಡ್ರಾಮಾದ ಮಾತೇ ಆಯಿತಲ್ಲವೆ. ತಂದೆಯು ಹೇಳುತ್ತಾರೆ – ಓಹೋ ಡ್ರಾಮಾ! ಓಹೋ ಮಾಯೆ! ಯಾರಿಗೆ ವಿಚ್ಛೇದನ ಕೊಟ್ಟು ಬಿಟ್ಟರು. ಸ್ತ್ರೀ-ಪುರುಷರು ಒಬ್ಬರು ಇನ್ನೊಬ್ಬರಿಗೆ ವಿಚ್ಛೇದನ ಕೊಡುತ್ತಾರೆ, ಮಕ್ಕಳು ತಂದೆಗೆ ವಿಚ್ಛೇದನ ಕೊಡುತ್ತಾರೆ. ಇಲ್ಲಂತೂ ಅದು ಇಲ್ಲ, ಇಲ್ಲಿ ವಿಚ್ಛೇದನ ಕೊಡಲು ಸಾಧ್ಯವಿಲ್ಲ. ತಂದೆಯು ಬಂದಿರುವುದೇ ಮಕ್ಕಳಿಗೆ ಸತ್ಯ ಸಂಪಾದನೆ ಮಾಡಿಸುವುದಕ್ಕಾಗಿ ಅಂದಮೇಲೆ ತಂದೆಯೇ ಮಕ್ಕಳನ್ನು ಬೀಳಿಸುವರೇ! ತಂದೆಯು ಪತಿತ-ಪಾವನ, ದಯಾಹೃದಯಿ ಆಗಿದ್ದಾರೆ. ತಂದೆಯು ಬಂದು ದುಃಖದಿಂದ ಮುಕ್ತಗೊಳಿಸುತ್ತಾರೆ ಮತ್ತು ಮಾರ್ಗದರ್ಶಕನಾಗಿ ಜೊತೆ ಕರೆದುಕೊಂಡು ಹೋಗುವವರಾಗಿದ್ದಾರೆ. ನಾನು ನಿಮ್ಮನ್ನು ಜೊತೆಗೆ ಕರೆದುಕೊಂಡು ಹೋಗುವೆನು ಎಂದು ಯಾವುದೇ ಲೌಕಿಕ ಗುರುಗಳು ಹೇಳುವುದಿಲ್ಲ. ಶಾಸ್ತ್ರಗಳಲ್ಲಿ ಭಗವಾನುವಾಚ ಇದೆ – ನಾನು ನಿಮ್ಮೆಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ, ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ ಹೋಗಬೇಕಾಗಿದೆ. ನೀವು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ, ನಾವೀಗ ಮನೆಗೆ ಹೋಗಬೇಕಾಗಿದೆ, ಈ ಶರೀರವನ್ನು ಬಿಡಬೇಕಾಗಿದೆ. ತಾನು ಸತ್ತರೆ ತನ್ನ ಪಾಲಿಗೆ ಇಡೀ ಜಗತ್ತೇ ಸತ್ತಂತೆ. ತನ್ನನ್ನು ಕೇವಲ ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದು ಹಳೆಯ ಛೀ ಛೀ ವಸ್ತ್ರವಾಗಿದೆ, ಈ ಪ್ರಪಂಚವೂ ಹಳೆಯದಾಗಿದೆ. ಹೇಗೆ ಹಳೆಯ ಮನೆಯಲ್ಲಿ ಕುಳಿತಿರುತ್ತಾರೆ. ಹೊಸ ಮನೆಯು ಸನ್ಮುಖದಲ್ಲಿ ತಯಾರಾಗುತ್ತಾ ಇರುತ್ತದೆಯೆಂದರೆ ತಂದೆಯೂ ಸಹ ನಮಗಾಗಿ ತಯಾರಾಗುತ್ತಿದೆ ಎಂದು ತಿಳಿದುಕೊಳ್ಳುವರು ಮತ್ತು ಮಕ್ಕಳೂ ಸಹ ನಮಗಾಗಿ ತಯಾರಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಇದರಲ್ಲಿ ಇದನ್ನು ಮಾಡಿಸಿ, ಇದನ್ನು ಮಾಡಿ ಎಂದು ಬುದ್ಧಿಯೂ ಹೊಸ ಮನೆಯ ಕಡೆ ಹೋಗುವುದು. ಈಗ ಹಳೆಯದನ್ನು ಬಿಟ್ಟು ಬಿಡುತ್ತೇವೆ ಎಂದು ಬುದ್ಧಿಯು ಅದರಲ್ಲಿಯೇ ತೊಡಗಿರುವುದು, ಮಮತ್ವವೆಲ್ಲವೂ ಹಳೆಯದರಿಂದ ಕಳೆದು ಹೊಸದರೊಂದಿಗೆ ಜೋಡಣೆಯಾಗುತ್ತದೆ. ಇದು ಬೇಹದ್ದಿನ ಪ್ರಪಂಚದ ಮಾತಾಗಿದೆ, ಹಳೆಯ ಪ್ರಪಂಚದೊಂದಿಗೆ ಮಮತ್ವ ಕಳೆಯಬೇಕು ಮತ್ತು ಹೊಸ ಪ್ರಪಂಚದೊಂದಿಗೆ ಜೋಡಿಸಬೇಕಾಗಿದೆ ಏಕೆಂದರೆ ತಿಳಿದುಕೊಂಡಿದ್ದೀರಿ – ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಹೊಸ ಪ್ರಪಂಚವು ಸ್ವರ್ಗವಾಗಿದೆ. ಅದರಲ್ಲಿ ನಾವು ರಾಜ್ಯ ಪದವಿಯನ್ನು ಪಡೆಯುತ್ತೇವೆ, ಎಷ್ಟು ಯೋಗದಲ್ಲಿರುತ್ತೀರಿ, ಜ್ಞಾನದ ಧಾರಣೆ ಮಾಡುತ್ತೀರೋ, ಅನ್ಯರಿಗೆ ತಿಳಿಸುತ್ತೀರೋ ಅಷ್ಟು ಖುಷಿಯ ನಶೆಯೇರುವುದು. ಬಹಳ ದೊಡ್ಡ ಪರೀಕ್ಷೆಯಾಗಿದೆ. ನಾವು 21 ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತಿದ್ದೇವೆ. ಸಾಹುಕಾರರಾಗುವುದಂತೂ ಒಳ್ಳೆಯದಲ್ಲವೆ. ಧೀರ್ಘಾಯಸ್ಸು ಸಿಕ್ಕಿದರೆ ಒಳ್ಳೆಯದಲ್ಲವೆ. ಸೃಷ್ಟಿಚಕ್ರವನ್ನು ಎಷ್ಟು ನೆನಪು ಮಾಡುತ್ತೀರೋ, ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತೀರೋ ಅಷ್ಟು ಲಾಭವಿದೆ. ರಾಜರಾಗಬೇಕೆಂದರೆ ಪ್ರಜೆಗಳನ್ನೂ ಮಾಡಿಕೊಳ್ಳಬೇಕಾಗಿದೆ. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಅವರೆಲ್ಲರೂ ಪ್ರಜೆಗಳಾಗುತ್ತಾ ಹೋಗುವರು ಏಕೆಂದರೆ ಈ ಅವಿನಾಶಿ ಜ್ಞಾನದ ವಿನಾಶವಾಗುವುದಿಲ್ಲ. ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕು ಎಂಬುದು ಬುದ್ಧಿಯಲ್ಲಿ ಬರುತ್ತದೆ. ರಾಮರಾಜ್ಯದ ಸ್ಥಾಪನೆಯಾಗುತ್ತಿದೆ, ರಾವಣ ರಾಜ್ಯದ ವಿನಾಶವಾಗಿ ಬಿಡುವುದು. ಸತ್ಯಯುಗದಲ್ಲಿ ದೇವತೆಗಳೇ ಇರುತ್ತಾರೆ.

ತಂದೆಯು ತಿಳಿಸಿದ್ದರು, ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಬರೆಯಿರಿ – ಹಿಂದಿನ ಜನ್ಮದಲ್ಲಿ ಇವರು ತಮೋಪ್ರಧಾನ ಪ್ರಪಂಚದಲ್ಲಿ ಇದ್ದರು, ನಂತರ ಈ ಪುರುಷಾರ್ಥದಿಂದ ತಮೋಪ್ರಧಾನ ಪ್ರಪಂಚದಿಂದ ಸತೋಪ್ರಧಾನ ವಿಶ್ವದ ಮಾಲೀಕರಾಗುತ್ತಾರೆ. ರಾಜಾ-ಪ್ರಜೆ ಎಲ್ಲರೂ ಮಾಲೀಕರಾಗುತ್ತಾರಲ್ಲವೆ. ನಮ್ಮ ಭಾರತವು ಎಲ್ಲದಕ್ಕಿಂತ ಶ್ರೇಷ್ಠವೆಂದು ಪ್ರಜೆಗಳೂ ಹೇಳುತ್ತಾರೆ. ಅವಶ್ಯವಾಗಿ ಭಾರತವೇ ಎಲ್ಲದಕ್ಕಿಂತ ಶ್ರೇಷ್ಠವಾಗಿತ್ತು, ಈಗ ಇಲ್ಲ. ಈಗಂತೂ ಸಂಪೂರ್ಣ ಬಡ ದೇಶವಾಗಿದೆ. ಪ್ರಾಚೀನ ಭಾರತವು ಎಲ್ಲದಕ್ಕಿಂತ ಸಾಹುಕಾರನಾಗಿತ್ತು, ನಾವು ಭಾರತವಾಸಿಗಳು ಎಲ್ಲರಿಗಿಂತ ಶ್ರೇಷ್ಠ ದೇವತಾ ಕುಲದವರು ಆಗಿದ್ದೆವು, ಮತ್ತ್ಯಾರಿಗೂ ದೇವಿ-ದೇವತೆಗಳೆಂದು ಹೇಳುವುದಿಲ್ಲ. ಈಗ ನೀವು ಮಕ್ಕಳು ಓದುತ್ತೀರಿ ಮತ್ತೆ ಅನ್ಯರಿಗೂ ತಿಳಿಸಬೇಕಲ್ಲವೆ. ತಂದೆಯು ಆದೇಶ ನೀಡಿದ್ದಾರೆ, ಹೇಗೆ ಪ್ರದರ್ಶನಿ ಮೊದಲಾದುವುಗಳಲ್ಲಿ ಕಾಗದವನ್ನು ಕೊಟ್ಟು ಇದನ್ನು ಬರೆದು ಕೊಡಿ ಎಂದು ಹೇಳಿರಿ, ನಿಮ್ಮ ಬಳಿ ಚಿತ್ರಗಳೂ ಇವೆ. ನೀವು ಸಿದ್ಧಮಾಡಿ ತಿಳಿಸಬಹುದು – ಅವರು ಈ ಪದವಿಯನ್ನು ಹೇಗೆ ಪಡೆದರು? ಈಗ ಪುನಃ ಶಿವ ತಂದೆಯಿಂದ ಈ ಪದವಿಯನ್ನು ಪಡೆಯುತ್ತಿದ್ದಾರೆ, ಅವರ ಚಿತ್ರವೂ ಇದೆ, ಶಿವನು ಪರಮಪಿತ ಪರಮಾತ್ಮನಾಗಿದ್ದಾರೆ, ಬ್ರಹ್ಮಾ-ವಿಷ್ಣು-ಶಂಕರನ ಚಿತ್ರವೂ ಇದೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ, ವಿಷ್ಣು ಪುರಿಯು ಸನ್ಮುಖದಲ್ಲಿ ನಿಂತಿದೆ. ವಿಷ್ಣುವಿನ ಮೂಲಕ ಹೊಸ ಪ್ರಪಂಚದ ಪಾಲನೆಯಾಗುವುದು. ವಿಷ್ಣು ರಾಧೆ-ಕೃಷ್ಣರ ಸಂಯುಕ್ತ ರೂಪವಾಗಿದ್ದಾರೆ. ಅಂದಮೇಲೆ ಗೀತೆಯ ಭಗವಂತ ಯಾರಾದರು? ಮೊದಲು ಇದನ್ನು ಬರೆಯಿರಿ – ಗೀತೆಯ ಭಗವಂತ ನಿರಾಕಾರ ಶಿವನಾಗಿದ್ದಾರೆ, ಕೃಷ್ಣನಲ್ಲ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ ಹೇಗಾಗುತ್ತಾರೆ, ಒಂದೇ ಚಿತ್ರದಲ್ಲಿ ತಿಳಿಸುವುದರಲ್ಲಿ ಎಷ್ಟೊಂದು ಸಮಯ ಹಿಡಿಸುತ್ತದೆ. ಮಾತು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕಲ್ಲವೆ. ಮೊಟ್ಟ ಮೊದಲು ಇದನ್ನು ತಿಳಿಸಿ ಮತ್ತೆ ಬರೆಸಬೇಕು. ತಂದೆಯು ತಿಳಿಸುತ್ತಾರೆ – ಬ್ರಹ್ಮಾರವರ ಮೂಲಕ ನಿಮಗೆ ಯೋಗಬಲದಿಂದ 21 ಜನ್ಮಗಳ ಅಧಿಕಾರ ಸಿಗುತ್ತದೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಆಸ್ತಿಯನ್ನು ಕೊಡುತ್ತಿದ್ದಾರೆ, ಮೊಟ್ಟ ಮೊದಲು ಇವರ ಆತ್ಮವು ಕೇಳಿಸಿಕೊಳ್ಳುತ್ತದೆ. ಆತ್ಮವೇ ಧಾರಣೆ ಮಾಡುತ್ತದೆ, ಮೂಲಮಾತೇ ಇದಾಗಿದೆ. ಶಿವನ ಚಿತ್ರವನ್ನು ತೋರಿಸುತ್ತಾರೆ, ಇವರು ಪರಮಪಿತ ಪರಮಾತ್ಮ ಶಿವನಾಗಿದ್ದಾರೆ ಅಂದಮೇಲೆ ಪ್ರಜಾಪಿತ ಬ್ರಹ್ಮನೂ ಅವಶ್ಯವಾಗಿ ಬೇಕಾಗಿದೆ. ಇಲ್ಲಿ ಪ್ರಜಾಪಿತ ಬ್ರಹ್ಮನ ಬ್ರಹ್ಮಾಕುಮಾರ-ಕುಮಾರಿಯರು ಅನೇಕರಿದ್ದೀರಿ, ಎಲ್ಲಿಯವರೆಗೆ ಬ್ರಹ್ಮನ ಮಕ್ಕಳಾಗುವುದಿಲ್ಲವೋ, ಬ್ರಾಹ್ಮಣರಾಗುವುದಿಲ್ಲವೋ ಅಲ್ಲಿಯವರೆಗೆ ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ಪಡೆಯುವರು! ಇಷ್ಟೊಂದು ಮಂದಿಯು ಕುಖವಂಶಾವಳಿಯಾಗಲು ಸಾಧ್ಯವಿಲ್ಲ. ಮುಖ ವಂಶಾವಳಿ ಎಂದು ಗಾಯನವಿದೆ. ನಾವು ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಎಂದು ಹೇಳುತ್ತೀರಿ, ಅವರು ಗುರುಗಳ ಶಿಷ್ಯರು ಅಥವಾ ಅನುಯಾಯಿಗಳಾಗಿರುತ್ತಾರೆ, ಇಲ್ಲಿ ನೀವು ಒಬ್ಬರನ್ನೇ ತಂದೆ, ಶಿಕ್ಷಕ, ಸದ್ಗುರುವೆಂದು ಹೇಳುತ್ತೀರಿ. ಮತ್ತೆ ಅವರಿಗೆ ನಿರಾಕಾರ ಶಿವ ತಂದೆಯು ಜ್ಞಾನ ಸಾಗರ, ಜ್ಞಾನಪೂರ್ಣರಾಗಿದ್ದಾರೆ ಎಂದೂ ಹೇಳುತ್ತೀರಿ. ಅವರೇ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಅವರು ಶಿಕ್ಷಕನೂ ಆಗಿದ್ದಾರೆ. ನಿರಾಕಾರನು ಬಂದು ಸಾಕಾರ ಶರೀರದ ಮೂಲಕ ತಿಳಿಸುತ್ತಾರೆ – ಆತ್ಮವೇ ಮಾತನಾಡುತ್ತದೆಯಲ್ಲವೆ. ನನ್ನ ಶರೀರಕ್ಕೆ ತೊಂದರೆ ಕೊಡಬೇಡಿ ಎಂದು ಆತ್ಮವೇ ಹೇಳುತ್ತದೆ, ಆತ್ಮವೇ ದುಃಖಿಯಾಗುತ್ತದೆ. ಈ ಸಮಯದಲ್ಲಿ ಪತಿತ ಆತ್ಮರಾಗಿದ್ದಾರೆ, ಪತಿತರನ್ನು ಪಾವನ ಮಾಡುವವರು ಪರಮಪಿತ ಪರಮಾತ್ಮನಾಗಿದ್ದಾರೆ. ಹೇ ಪತಿತ-ಪಾವನ, ಹೇ ಪರಮಪಿತ ಎಂದು ಆತ್ಮವು ಕರೆಯುತ್ತದೆ. ಈಗ ತಂದೆಯಂತು ಒಬ್ಬರು ಕುಳಿತಿದ್ದಾರೆ, ಆದರೂ ಸಹ ಯಾರನ್ನು ನೆನಪು ಮಾಡುತ್ತಾರೆ? ಆತ್ಮವು ಪರಮಾತ್ಮನನ್ನು ಇವರು ನಮ್ಮ ತಂದೆ ಎಂದು ಹೇಳುತ್ತದೆ. ಲೌಕಿಕ ತಂದೆಯು ಶರೀರಕ್ಕೆ ತಂದೆಯಾಗಿದ್ದಾರೆ, ಈಗ ಆತ್ಮರ ತಂದೆಯು ಯಾರು ನಿರಾಕಾರನಾಗಿದ್ದಾರೆಯೋ ಅವರು ದೊಡ್ಡವರೊ ಅಥವಾ ಶರೀರದ ರಚಯಿತ ಸಾಕಾರ ತಂದೆಯಾಗಿದ್ದಾರೆ, ಅಂದಮೇಲೆ ಅವರು ದೊಡ್ಡವರೋ? ಸಾಕಾರ ತಂದೆಯೂ ಸಹ ನಿರಾಕಾರನನ್ನೇ ನೆನಪು ಮಾಡುತ್ತಾರೆ, ಈಗ ಎಲ್ಲರಿಗೆ ತಿಳುವಳಿಕೆ ನೀಡಬೇಕಾಗಿದೆ, ಈಗ ವಿನಾಶವು ಸನ್ಮುಖದಲ್ಲಿ ನಿಂತಿದೆ. ಪಾರಲೌಕಿಕ ತಂದೆಯು ಅಂತ್ಯದಲ್ಲಿಯೇ ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗಲು ಬರುತ್ತಾರೆ, ಉಳಿದಂತೆ ಏನೆಲ್ಲವೂ ಇದೆಯೋ ಅದೆಲ್ಲವೂ ವಿನಾಶವಾಗುವುದು. ಇದಕ್ಕೆ ಮೃತ್ಯು ಲೋಕವೆಂದೇ ಹೇಳಲಾಗುವುದು. ಯಾರಾದರೂ ಮರಣ ಹೊಂದಿದರೆ ಇಂತಹವರು ಪರಲೋಕಕ್ಕೆ ಹೋದರು, ಶಾಂತಿಧಾಮಕ್ಕೆ ಹೋದರೆಂದು ಹೇಳುತ್ತಾರೆ. ಪರಲೋಕವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆಯೇ ಅಥವಾ ಶಾಂತಿಧಾಮಕ್ಕೆ ಹೇಳಲಾಗುತ್ತದೆಯೇ ಎಂಬುದು ಮನುಷ್ಯರಿಗೆ ಗೊತ್ತಿಲ್ಲ. ಸತ್ಯಯುಗವು ಇಲ್ಲಿಯೇ ಸ್ಥಾಪನೆಯಾಗುತ್ತದೆ, ಪರಲೋಕವೆಂದು ಶಾಂತಿಧಾಮಕ್ಕೆ ಹೇಳುವರು. ತಿಳಿಸುವುದಕ್ಕೆ ಬಹಳ ಯುಕ್ತಿ ಬೇಕು, ಮಂದಿರಗಳಲ್ಲಿ ಹೋಗಿ ತಿಳಿಸಬೇಕು, ಇದು ಶಿವ ತಂದೆಯ ನೆನಪಾರ್ಥವಾಗಿದೆ ಯಾವ ಶಿವ ತಂದೆಯು ನಮಗೆ ಓದಿಸುತ್ತಿದ್ದಾರೆ. ವಾಸ್ತವದಲ್ಲಿ ಶಿವನು ಬಿಂದುವಾಗಿದ್ದಾರೆ ಆದರೆ ಬಿಂದುವಿಗೆ ಹೇಗೆ ಪೂಜೆ ಮಾಡುವುದು? ಫಲ-ಪುಷ್ಫಗಳನ್ನು ಅರ್ಪಿಸುವುದು ಹೇಗೆ! ಆದ್ದರಿಂದ ದೊಡ್ಡರೂಪವನ್ನು ಮಾಡಿದ್ದಾರೆ ಆದರೆ ಇಷ್ಟು ದೊಡ್ಡ ರೂಪವನ್ನು ಹೊಂದಿರುವುದಿಲ್ಲ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಗಾಯನವಿದೆ. ಒಂದುವೇಳೆ ಆತ್ಮವು ದೊಡ್ಡ ವಸ್ತುವಾಗಿದ್ದರೆ ವಿಜ್ಞಾನದವರು ಕೂಡಲೇ ಅದನ್ನು ಸೆರೆ ಹಿಡಿಯುತ್ತಿದ್ದರು. ತಂದೆಯು ತಿಳಿಸುತ್ತಾರೆ- ಅವರಿಗೂ ಪರಮಪಿತ ಪರಮಾತ್ಮನ ಪೂರ್ಣ ಪರಿಚಯ ಸಿಕ್ಕಿಲ್ಲ. ಅದೃಷ್ಟವು ಬೆಳಗುವವರೆಗೆ ಸಿಗುವುದಿಲ್ಲ. ಈಗಿನ್ನೂ ಅದೃಷ್ಟವೇ ಬೆಳಗಿಲ್ಲ, ಎಲ್ಲಿಯವರೆಗೆ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಾನಾತ್ಮನು ಬಿಂದು ಸ್ವರೂಪನಾಗಿದ್ದೇನೆ, ಶಿವ ತಂದೆಯೂ ಬಿಂದುವಾಗಿದ್ದಾರೆ, ನಾವು ಬಿಂದುವನ್ನು ನೆನಪು ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಇದನ್ನು ತಿಳಿದು ನೆನಪು ಮಾಡಿದಾಗಲೇ ವಿಕರ್ಮಗಳು ವಿನಾಶವಾಗುವವು ಬಾಕಿ ಇದು ಕಾಣಿಸಿತು, ಅದು ಕಾಣಿಸಿತು ಎಂಬುದೆಲ್ಲವೂ ಮಾಯೆಯ ವಿಘ್ನವಾಗಿದೆ. ಈಗಂತೂ ಖುಷಿಯಿದೆ – ನಮಗೆ ಪರಮಾತ್ಮ ಸಿಕ್ಕಿದ್ದಾರೆ ಎಂದು. ಆದರೆ ಜ್ಞಾನವೂ ಬೇಕಲ್ಲವೆ. ಯಾರಿಗಾದರೂ ಕೃಷ್ಣನ ಸಾಕ್ಷಾತ್ಕಾರವಾದರೆ ಖುಷಿಯಾಗಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ – ಕೃಷ್ಣನ ಸಾಕ್ಷಾತ್ಕಾರ ಮಾಡಿ ಬಹಳ ಖುಷಿಯಲ್ಲಿ ನರ್ತನ ಮಾಡುತ್ತಾರೆ ಆದರೆ ಅದರಿಂದೇನೂ ಸದ್ಗತಿಯಾಗುವುದಿಲ್ಲ, ಬಹಳ ಸಹಜವಾಗಿ ಸಾಕ್ಷಾತ್ಕಾರವಾಗಿ ಬಿಡುತ್ತದೆ ಆದರೆ ಒಂದುವೇಳೆ ಚೆನ್ನಾಗಿ ಓದಲಿಲ್ಲವೆಂದರೆ ಪ್ರಜೆಗಳಲ್ಲಿ ಬರಬೇಕಾಗುವುದು. ಸ್ವಲ್ಪ ಜ್ಞಾನವನ್ನು ಕೇಳಿದರೂ ಸಹ ಕೃಷ್ಣ ಪುರಿಯಲ್ಲಿ ಹೋಗಿ ಸಾಧಾರಣ ಪ್ರಜೆಯಾಗುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಶಿವ ತಂದೆಯು ನಮಗೆ ಈ ಜ್ಞಾನವನ್ನು ತಿಳಿಸುತ್ತಿದ್ದಾರೆ, ಅವರು ಜ್ಞಾನಪೂರ್ಣನಾಗಿದ್ದಾರೆ.

ತಂದೆಯ ಆಜ್ಞೆಯಾಗಿದೆ – ಅವಶ್ಯವಾಗಿ ಪವಿತ್ರರಾಗಬೇಕಾಗಿದೆ ಆದರೆ ಕೆಲವರು ಪವಿತ್ರರಾಗಿರುವುದಿಲ್ಲ, ಕೆಲಕೆಲವೊಮ್ಮೆ ಪತಿತರೂ ಇಲ್ಲಿ ಬಂದು ಬಿಡುತ್ತಾರೆ. ಅವರು ತಮ್ಮದೇ ನಷ್ಟ ಮಾಡಿಕೊಳ್ಳುತ್ತಾರೆ, ತಮಗೆ ಮೋಸ ಮಾಡಿಕೊಳ್ಳುತ್ತಾರೆ. ತಂದೆಗೆ ಮೋಸ ಮಾಡುವ ಮಾತಿಲ್ಲ. ತಂದೆಗೆ ಮೋಸ ಮಾಡಿ ಯಾವುದೇ ಹಣವನ್ನು ತೆಗೆದುಕೊಳ್ಳಬೇಕಾಗಿದೆಯೇ! ಶಿವ ತಂದೆಯ ಶ್ರೀಮತದಂತೆ ಕಾಯಿದೆಯನುಸಾರ ನಡೆಯದಿದ್ದರೆ ಅವರ ಗತಿಯೇನಾಗುವುದು! ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು ಮತ್ತೆ ಪದವಿಯೂ ಭ್ರಷ್ಟವಾಗಿ ಬಿಡುವುದು. ಯಾವುದೆ ಕಾಯಿದೆಗೆ ವಿರುದ್ಧವಾದ ಕೆಲಸವನ್ನು ಮಾಡಬಾರದು, ನಿಮ್ಮ ಚಲನೆಯು ಸರಿಯಿಲ್ಲವೆಂದು ತಂದೆಯಂತೂ ತಿಳಿಸುತ್ತಾರಲ್ಲವೆ. ತಂದೆಯು ಸಂಪಾದನೆ ಮಾಡಿಕೊಳ್ಳುವ ಮಾರ್ಗವನ್ನು ತಿಳಿಸುತ್ತಾರೆ ಅದರ ಮೇಲೆ ಯಾರಾದರೂ ಮಾಡಲಿ, ಮಾಡದಿರಲಿ ಅವರ ಅದೃಷ್ಟದ ಮೇಲಿದೆ. ಶಿಕ್ಷೆಗಳನ್ನು ಅನುಭವಿಸಿ ಹಿಂತಿರುಗಿ ಶಾಂತಿಧಾಮಕ್ಕೆ ಹೋಗಲೇಬೇಕಾಗಿದೆ. ಪದವಿಯನ್ನು ಕಳೆದುಕೊಂಡರೆ ಏನೂ ಸಿಗುವುದಿಲ್ಲ, ಬರುವುದಂತೂ ಅನೇಕರು ಬರುತ್ತಾರೆ ಆದರೆ ಇಲ್ಲಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಮಾತಾಗಿದೆ. ತಂದೆಯಿಂದ ನಾವು ಸ್ವರ್ಗದ ಸೂರ್ಯವಂಶಿ ರಾಜ್ಯಭಾಗ್ಯವನ್ನು ಪಡೆಯುತ್ತೇವೆ ಎಂದು ಮಕ್ಕಳು ಹೇಳುತ್ತಾರೆ. ಇದು ರಾಜಯೋಗವಲ್ಲವೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರಲ್ಲವೆ. ತೇರ್ಗಡೆಯಾಗುವವರಿಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಯಾರು ವಿದ್ಯಾರ್ಥಿ ವೇತನ ಪಡೆದಿದ್ದಾರೆಯೋ ಅವರದೇ ಈ ಮಾಲೆಯು ಮಾಡಲ್ಪಟ್ಟಿದೆ. ಯಾರು ಎಷ್ಟೆಷ್ಟು ತೇರ್ಗಡೆಯಾಗುವರೋ ಅದರಂತೆ ವಿದ್ಯಾರ್ಥಿ ವೇತನ ಸಿಗುವುದು. ವೃದ್ಧಿಯಾಗುತ್ತಾ-ಆಗುತ್ತಾ ಸಾವಿರಾರು ಮಂದಿ ಆಗಿಬಿಡುತ್ತಾರೆ. ರಾಜ್ಯ ಪದವಿಯೇ ವಿದ್ಯಾರ್ಥಿ ವೇತನವಾಗಿದೆ. ಯಾರು ಚೆನ್ನಾಗಿ ಓದುವರೋ ಅವರು ಗುಪ್ತವಾಗಿರಲು ಸಾಧ್ಯವಿಲ್ಲ. ಅನೇಕರು ಹೊಸ-ಹೊಸ ಮಕ್ಕಳು ಹಳಬರಿಗಿಂತಲೂ ಮುಂದೆ ಹೋಗುತ್ತಾರೆ, ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳುತ್ತಾರೆ. ತಮ್ಮ ಸತ್ಯ ಸಂಪಾದನೆ ಮಾಡಿಕೊಂಡು 21 ಜನ್ಮಗಳಿಗಾಗಿ ಆಸ್ತಿಯನ್ನು ಪಡೆಯುತ್ತಾರೆ. ಎಷ್ಟೊಂದು ಖುಷಿಯಾಗುತ್ತದೆ ಏಕೆಂದರೆ ತಿಳಿದುಕೊಂಡಿದ್ದಾರೆ – ಈ ಆಸ್ತಿಯನ್ನು ಈಗ ಪಡೆಯದಿದ್ದರೆ ಮತ್ತೆಂದೂ ಪಡೆಯಲು ಸಾಧ್ಯವಿಲ್ಲ. ವಿದ್ಯೆಯ ಉಮ್ಮಂಗ ಇರುತ್ತದೆಯಲ್ಲವೆ. ಕೆಲವರಿಗಂತೂ ತಿಳಿಸಿಕೊಡುವ ಉಮ್ಮಂಗವೇ ಇರುವುದಿಲ್ಲ. ಡ್ರಾಮಾನುಸಾರ ಅದೃಷ್ಟದಲ್ಲಿ ಇಲ್ಲವೆಂದರೆ ಭಗವಂತನೂ ಏನು ಮಾಡುವರು! ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1) ಯಾವುದೇ ಕಾರ್ಯವನ್ನು ಶ್ರೀಮತಕ್ಕೆ ವಿರುದ್ಧವಾಗಿ ಮಾಡಬಾರದು. ವಿದ್ಯೆಯನ್ನು ಚೆನ್ನಾಗಿ ಓದಿ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳಬೇಕಾಗಿದೆ, ಯಾರಿಗೂ ದುಃಖ ಕೊಡಬಾರದು.

2) ಈ ಹಳೆಯ ಪ್ರಪಂಚದಿಂದ ಮಮತ್ವವನ್ನು ಕಳೆಯಬೇಕಾಗಿದೆ, ಬುದ್ಧಿಯೋಗವನ್ನು ಹೊಸ ಪ್ರಪಂಚದೊಂದಿಗೆ ಇಡಬೇಕಾಗಿದೆ. ಖುಷಿಯಲ್ಲಿ ಇರುವುದಕ್ಕಾಗಿ ಜ್ಞಾನವನ್ನು ಧಾರಣೆ ಮಾಡಿಕೊಂಡು ಅನ್ಯರಿಗೆ ಮಾಡಿಸಬೇಕಾಗಿದೆ.

ವರದಾನ:-

ಎಲ್ಲಿ (ಜ್ಞಾನ) ಬೆಳಕಿರುತ್ತದೆಯೋ ಅಲ್ಲಿ ಯಾವುದೇ ಪಾಪ ಕರ್ಮಗಳಾಗುವುದಿಲ್ಲ. ಅಂದಾಗ ಸದಾ ಲೈಟ್ಹೌಸ್ನ ಸ್ಥಿತಿಯಲ್ಲಿ ಇರುವುದರಿಂದ, ಮಾಯೆಯು ಯಾವುದೇ ಪಾಪ ಕರ್ಮಗಳನ್ನು ಮಾಡಿಸಲು ಸಾಧ್ಯವಿಲ್ಲ. ಸದಾ ಪುಣ್ಯ ಆತ್ಮರಾಗಿ ಬಿಡುವಿರಿ. ಪುಣ್ಯ ಆತ್ಮನು ಸಂಕಲ್ಪದಲ್ಲಿಯೂ ಯಾವುದೇ ಪಾಪ ಕರ್ಮಗಳನ್ನು ಮಾಡಲು ಸಾಧ್ಯವಿಲ್ಲ. ಎಲ್ಲಿ ಪಾಪವಾಗುವುದೋ ಅಲ್ಲಿ ತಂದೆಯ ನೆನಪಿರುವುದಿಲ್ಲ. ಹಾಗಾದರೆ ಧೃಡ ಸಂಕಲ್ಪವನ್ನು ಮಾಡಿರಿ – ನಾನು ಪುಣ್ಯ ಆತ್ಮನಾಗಿದ್ದೇನೆ, ಪಾಪವು ನನ್ನ ಮುಂದೆ ಬರುವುದಕ್ಕೂ ಸಾಧ್ಯವಿಲ್ಲ. ಸ್ವಪ್ನ ಅಥವಾ ಸಂಕಲ್ಪದಲ್ಲಿಯೂ ಪಾಪವು ಬರಲು ಬಿಡಬಾರದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top