29 August 2021 KANNADA Murli Today | Brahma Kumaris

Read and Listen today’s Gyan Murli in Kannada

August 28, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಮೂರು ಪ್ರಕಾರದ ಸ್ನೇಹ ಹಾಗೂ ಹೃದಯದ ಸ್ನೇಹೀ ಮಕ್ಕಳ ವಿಶೇಷತೆಗಳು

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪ್ದಾದಾ ತನ್ನ ಸ್ನೇಹೀ, ಸಹಯೋಗಿ ಮತ್ತು ಶಕ್ತಿಶಾಲಿ – ಈ ಮೂರು ವಿಶೇಷತೆಗಳಿಂದ ಸಂಪನ್ನ ಮಕ್ಕಳನ್ನು ನೋಡುತ್ತಿದ್ದಾರೆ. ಈ ಮೂರು ವಿಶೇಷತೆಗಳು ಯಾರಲ್ಲಿ ಸಮಾನವಾಗಿದೆಯೋ ಅವರೇ ವಿಶೇಷ ಆತ್ಮಗಳಲ್ಲಿ `ನಂಬರ್ವನ್ ಆತ್ಮ’ ಆಗಿದ್ದಾರೆ. ಸ್ನೇಹಿಯೂ ಆಗಿರಬೇಕು ಮತ್ತು ಸದಾ ಪ್ರತೀ ಕಾರ್ಯದಲ್ಲಿ ಸಹಯೋಗಿಗಳೂ ಆಗಿರಬೇಕು, ಜೊತೆ ಜೊತೆಗೆ ಶಕ್ತಿಶಾಲಿಗಳೂ ಆಗಿರಬೇಕು. ಎಲ್ಲರೂ ಸ್ನೇಹಿಗಳಾಗಿದ್ದಾರೆ ಆದರೆ ಸ್ನೇಹದಲ್ಲಿ ಒಂದು ಹೃದಯದ ಸ್ನೇಹವಾಗಿದೆ, ಇನ್ನೊಂದು ಸಮಯದ ಪ್ರಮಾಣ ತೋರ್ಪಡಿಕೆಯ ಸ್ನೇಹವಾಗಿದೆ ಮತ್ತು ಮೂರನೆಯದು ಆಪತ್ಕಾಲದಲ್ಲಿ ಸ್ನೇಹ ಮಾಡುವುದಾಗಿದೆ. ಯಾರು ಹೃದಯದ ಸ್ನೇಹಿಯಾಗಿದ್ದಾರೆಯೋ ಅವರ ವಿಶೇಷತೆಯೇನೆಂದರೆ ಅವರು ಸರ್ವ ಸಂಬಂಧ ಮತ್ತು ಸರ್ವ ಪ್ರಾಪ್ತಿಗಳನ್ನು ಸದಾ ಸಹಜ ಮತ್ತು ಸ್ವತಹ ಅನುಭವ ಮಾಡುತ್ತಾರೆ. ಒಂದು ಸಂಬಂಧದ ಅನುಭೂತಿಯಲ್ಲಿಯೂ ಕೊರತೆಯಿರುವುದಿಲ್ಲ, ಎಂತಹ ಸಮಯವೋ ಅದರಂತೆ ಆ ಸಂಬಂಧದ ಸ್ನೇಹದ ಭಿನ್ನ-ಭಿನ್ನ ಅನುಭವ ಮಾಡುವವರು, ಸಮಯವನ್ನು ಅರಿತುಕೊಂಡಿರುವವರು ಮತ್ತು ಸಮಯ ಪ್ರಮಾಣ ಸಂಬಂಧವನ್ನೂ ಅರಿತುಕೊಂಡಿರುವವರಾಗಿರುತ್ತಾರೆ.

ಒಂದುವೇಳೆ ತಂದೆಯು ಯಾವಾಗ ಶಿಕ್ಷಕನ ರೂಪದಲ್ಲಿ ಶ್ರೇಷ್ಠ ವಿದ್ಯೆಯನ್ನು ಓದಿಸುತ್ತಿದ್ದಾರೆಯೋ ಅಂತಹ ಸಮಯದಲ್ಲಿ `ಶಿಕ್ಷಕ’ ನ ಸಂಬಂಧದ ಅನುಭವ ಮಾಡದೇ `ಸಖ’ ನ ರೂಪದ ಅನುಭೂತಿಯಲ್ಲಿ ಮಿಲನವನ್ನು ಆಚರಿಸುವ ಹಾಗೂ ವಾರ್ತಾಲಾಪ ಮಾಡುವುದರಲ್ಲಿ ತೊಡಗಿ ಬಿಟ್ಟರೆ ವಿದ್ಯೆಯ ಕಡೆ ಗಮನವಿರುವುದಿಲ್ಲ. ವಿದ್ಯಾಭ್ಯಾಸದ ಸಮಯದಲ್ಲಿ ಒಂದುವೇಳೆ ಯಾರಾದರೂ ನಾನು ಶಬ್ಧದಿಂದ ದೂರದ ಸ್ಥಿತಿಯಲ್ಲಿ ಬಹಳ ಶಕ್ತಿಶಾಲಿ ಸ್ಥಿತಿಯ ಅನುಭವ ಮಾಡುತ್ತಿದ್ದೇನೆಂದು ಹೇಳುವುದಾದರೆ ವಿದ್ಯಾಭ್ಯಾಸದ ಸಮಯದಲ್ಲಿ ಇದು ಸರಿಯೇ? ಏಕೆಂದರೆ ಯಾವಾಗ ತಂದೆಯು ಶಿಕ್ಷಕನ ರೂಪದಲ್ಲಿ ವಿದ್ಯೆಯ ಮೂಲಕ ಶ್ರೇಷ್ಠ ಪದವಿಯ ಪ್ರಾಪ್ತಿಯನ್ನು ಮಾಡಿಸಲು ಬರುವರೋ ಆ ಸಮಯದಲ್ಲಿ ಶಿಕ್ಷಕನ ಮುಂದೆ ಈಶ್ವರೀಯ ವಿದ್ಯಾರ್ಥಿ ಜೀವನವೇ ಯಥಾರ್ಥವಾಗಿದೆ. ಇದಕ್ಕೆ ಸಮಯದ ಅರಿವಿನ ಪ್ರಮಾಣ ಸಂಬಂಧದ ಅರಿವು ಮತ್ತು ಸಂಬಂಧದ ಪ್ರಮಾಣ ಸ್ನೇಹದ ಪ್ರಾಪ್ತಿಯ ಅನುಭೂತಿ ಎಂದು ಹೇಳಲಾಗುತ್ತದೆ. ಬುದ್ಧಿಗೆ ಇದೇ ವ್ಯಾಯಾಮ ಮಾಡಿಸಿ. ಯಾವಾಗ ಹೇಗೆ ಬೇಕೋ, ಯಾವ ಸಮಯದಲ್ಲಿ ಬೇಕೋ ಅದೇ ಸ್ವರೂಪ ಮತ್ತು ಸ್ಥಿತಿಯಲ್ಲಿ ಬುದ್ಧಿಯು ಸ್ಥಿತವಾಗಿಬಿಡಲಿ.

ಹೇಗೆ ಯಾರಾದರೂ ಶರೀರದಿಂದ ಭಾರಿಯಾಗಿದ್ದರೆ, ಹೆಚ್ಚು ತೂಕವಿದ್ದರೆ ತಮ್ಮ ಶರೀರವನ್ನು ಸಹಜವಾಗಿ ಹೇಗೆ ಬೇಕೋ ಹಾಗೆ ಬಾಗಿಸಲು ಸಾಧ್ಯವಾಗುವುದಿಲ್ಲ ಹಾಗೆಯೇ ಒಂದುವೇಳೆ ಮಂಧ ಬುದ್ಧಿಯಾಗಿದ್ದರೆ ಅರ್ಥಾತ್ ಯಾವುದಾದರೊಂದು ಪ್ರಕಾರದ ವ್ಯರ್ಥದ ಹೊರೆ ಅಥವಾ ವ್ಯರ್ಥದ ಕೆಸರು ಬುದ್ಧಿಯಲ್ಲಿ ಕುಳಿತಿದ್ದರೆ, ಯಾವುದಾದರೂ ಅಶುದ್ಧಿಯಿದ್ದರೆ ಅಂತಹ ಬುದ್ಧಿಯವರು ಯಾವ ಸಮಯದಲ್ಲಿ ಬೇಕೋ, ಹೇಗೆ ಬೇಕೋ ಹಾಗೆ ಬುದ್ಧಿಯನ್ನು ಬಾಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬಹಳ ಸ್ವಚ್ಛ, ಆಳ ಅರ್ಥಾತ್ ಅತಿ ಸೂಕ್ಷ್ಮ ಬುದ್ಧಿ, ದಿವ್ಯ ಬುದ್ಧಿ, ಬೇಹದ್ದಿನ ಬುದ್ಧಿ, ವಿಶಾಲ ಬುದ್ಧಿಯು ಬೇಕು. ಇಂತಹ ಬುದ್ಧಿಯವರೇ ಸರ್ವ ಸಂಬಂಧದ ಅನುಭವವನ್ನು ಯಾವ ಸಮಯ, ಎಂತಹ ಸಂಬಂಧವೋ ಅದರಂತೆ ಸ್ವಯಂನ ಸ್ವರೂಪದ ಅನುಭವ ಮಾಡುತ್ತಾರೆ. ಅಂದಾಗ ಸ್ನೇಹಿಗಳಂತೂ ಎಲ್ಲರೂ ಆಗಿದ್ದೀರಿ ಆದರೆ ಸರ್ವ ಸಂಬಂಧದ ಸ್ನೇಹವನ್ನು ಸಮಯ ಪ್ರಮಾಣ ಅನುಭವ ಮಾಡುವವರು ಸದಾ ಇದೇ ಅನುಭವದಲ್ಲಿ ಇಷ್ಟು ಬ್ಯುಜಿಯಾಗಿರುತ್ತಾರೆ, ಪ್ರತೀ ಸಂಬಂಧದ ಭಿನ್ನ-ಭಿನ್ನ ಪ್ರಾಪ್ತಿಗಳಲ್ಲಿ ಇಷ್ಟೊಂದು ಲವಲೀನರಾಗಿರುತ್ತಾರೆ, ಮಗ್ನರಾಗಿರುತ್ತಾರೆ ಅವರನ್ನು ಯಾವುದೇ ಪ್ರಕಾರದ ವಿಘ್ನವು ತನ್ನಕಡೆ ಬಾಗಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಸ್ವತಹವಾಗಿ ಸಹಜಯೋಗಿ ಸ್ಥಿತಿಯ ಅನುಭವ ಮಾಡುತ್ತಾರೆ. ಇಂತಹವರಿಗೆ ನಂಬರ್ವನ್ ಯಥಾರ್ಥ ಸ್ನೇಹಿ ಆತ್ಮನೆಂದು ಹೇಳಲಾಗುವುದು. ಸ್ನೇಹದ ಕಾರಣ ಇಂತಹ ಆತ್ಮನಿಗೆ ಸಮಯದಲ್ಲಿ ತಂದೆಯ ಮೂಲಕ ಪ್ರತೀ ಕಾರ್ಯದಲ್ಲಿ ಸಹಯೋಗವು ಸ್ವತಹವಾಗಿಯೇ ಪ್ರಾಪ್ತಿಯಾಗುತ್ತಿರುತ್ತದೆ. ಈ ಕಾರಣದಿಂದ `ಸ್ನೇಹ’ವು ಅಖಂಡ, ಅಟಲ, ಅಚಲ, ಅವಿನಾಶಿ ಅನುಭವವಾಗುತ್ತದೆ. ತಿಳಿಯಿತೆ? ಇದು ನಂಬರ್ವನ್ ಸ್ನೇಹಿಯ ವಿಶೇಷತೆಯಾಗಿದೆ. ಎರಡನೆಯವರು ಮತ್ತು ಮೂರನೆಯವರನ್ನು ವರ್ಣನೆ ಮಾಡುವ ಅವಶ್ಯಕತೆಯೇ ಇಲ್ಲ ಏಕೆಂದರೆ ಎಲ್ಲರೂ ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಅಂದಾಗ ಬಾಪ್ದಾದಾ ಈ ರೀತಿಯ ಸ್ನೇಹಿ ಮಕ್ಕಳನ್ನು ನೋಡುತ್ತಿದ್ದರು. ಆದಿಯಿಂದ ಇಲ್ಲಿಯವರೆಗೆ ಸ್ನೇಹವು ಏಕರಸವಾಗಿದೆಯೇ ಅಥವಾ ಸಮಯ ಪ್ರಮಾಣ ಇಲ್ಲವೇ ಬ್ರಾಹ್ಮಣ ಆತ್ಮರ ಸಂಪರ್ಕದ ಪ್ರಮಾಣ ಬದಲಾಗುತ್ತಿರುತ್ತದೆಯೇ! ಇದರಲ್ಲಿಯೂ ಅಂತರವಾಗಿ ಬಿಡುತ್ತದೆಯಲ್ಲವೆ.

ಇಂದು ಸ್ನೇಹದ ಬಗ್ಗೆ ತಿಳಿಸಿದೆವು ನಂತರ ಸಹಯೋಗ ಮತ್ತು ಶಕ್ತಿಶಾಲಿ ಮೂರೂ ವಿಶೇಷತೆಗಳುಳ್ಳ ಆತ್ಮನ ಮಹತ್ವಿಕೆಯನ್ನು ತಿಳಿಸುತ್ತೇವೆ. ಮೂರೂ ಅವಶ್ಯಕವಾಗಿದೆ. ತಾವೆಲ್ಲರೂ ಇಂತಹ ಸ್ನೇಹಿಗಳಾಗಿದ್ದೀರಲ್ಲವೆ? ಅಭ್ಯಾಸವಿದೆಯಲ್ಲವೆ. ಬುದ್ಧಿಯನ್ನು ಯಾವಾಗ ಎಲ್ಲಿ ಸ್ಥಿತ ಮಾಡಬೇಕೋ ಅಲ್ಲಿ ಮಾಡುತ್ತೀರಲ್ಲವೆ? ನಿಯಂತ್ರಣ ಶಕ್ತಿಯಿದೆ ಅಲ್ಲವೆ. ಯಾವಾಗ ಮೊದಲು ನಿಯಂತ್ರಣಾ ಶಕ್ತಿಯಿರುವುದೋ ಆಗ ಆಡಳಿತ ಶಕ್ತಿಯು ಬಂದು ಬಿಡುತ್ತದೆ ಮತ್ತು ಯಾರು ಸ್ವಯಂನ್ನೇ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಿಲ್ಲವೋ ಅವರು ರಾಜ್ಯವನ್ನು ಹೇಗೆ ನಿಯಂತ್ರಣ ಮಾಡುವರು? ಆದ್ದರಿಂದ ಸ್ವಯಂನ್ನು ಹತೋಟಿಯಲ್ಲಿ ನಡೆಸುವ ಅಭ್ಯಾಸವು ಈಗಿನಿಂದಲೂ ಬೇಕು, ಆಗಲೇ ರಾಜ್ಯಾಧಿಕಾರಿಗಳಾಗುವಿರಿ. ತಿಳಿಯಿತೆ?

ಇಂದಂತೂ ಮಿಲನ ಮಾಡುವವವರ ಕೋಟಾ ಪೂರ್ಣ ಮಾಡಬೇಕಾಗಿದೆ. ನೋಡಿ, ಸಂಗಮಯುಗದಲ್ಲಿ ಎಷ್ಟಾದರೂ ಸಂಖ್ಯೆಯ ಬಂಧನದಲ್ಲಿ ಬಂಧಿಸಲಿ ಆದರೆ ಬಂಧಿತರಾಗುತ್ತೀರಾ? ಲೆಕ್ಕಕ್ಕಿಂತಲೂ ಹೆಚ್ಚು ಬಂದು ಬಿಡುತ್ತಾರೆ ಆದ್ದರಿಂದ ಸಮಯ, ಸಂಖ್ಯೆ ಮತ್ತು ಯಾವ ಶರೀರದ ಆಧಾರವನ್ನು ತೆಗೆದುಕೊಳ್ಳುತ್ತೇವೆಯೋ ಅದನ್ನು ನೋಡಿ ಅದೇ ವಿಧಿಯಿಂದ ನಡೆಯಬೇಕಾಗುತ್ತದೆ. ವತನದಲ್ಲಿ ಇದೆಲ್ಲವನ್ನೂ ನೋಡುವುದಿಲ್ಲ ಏಕೆಂದರೆ ಸೂಕ್ಷ್ಮ ಶರೀರದ ಗತಿಯು ಸ್ಥೂಲ ಶರೀರಕ್ಕಿಂತ ಬಹಳ ತೀವ್ರವಾಗಿದೆ. ಒಂದು ಕಡೆ ಸಾಕಾರ ಶರೀರಧಾರಿ ಇನ್ನೊಂದು ಕಡೆ ಫರಿಶ್ತಾ ಸ್ವರೂಪ, ಇಬ್ಬರ ಚಲನೆಯಲ್ಲಿ ಎಷ್ಟೊಂದು ಅಂತರವಿರುವುದು! ಫರಿಶ್ತೆಗಳು ಎಷ್ಟು ಸಮಯದಲ್ಲಿ ತಲುಪುವರು ಮತ್ತು ಸಾಕಾರ ಶರೀರಧಾರಿಗಳು ಎಷ್ಟು ಸಮಯದಲ್ಲಿ ತಲುಪುವರು? ಬಹಳ ಅಂತರವಿದೆ. ಬ್ರಹ್ಮಾ ತಂದೆಯೂ ಸಹ ಸೂಕ್ಷ್ಮ ಶರೀರಧಾರಿಯಾಗಿ ನಾಲ್ಕಾರು ಕಡೆ ಎಷ್ಟು ತೀವ್ರ ಗತಿಯಿಂದ ಸೇವೆ ಮಾಡುತ್ತಿದ್ದಾರೆ! ಆ ಬ್ರಹ್ಮಾರವರೇ ಸಾಕಾರ ಶರೀರಧಾರಿ ಆಗಿದ್ದರು ಮತ್ತು ಈಗ ಸೂಕ್ಷ್ಮ ಶರೀರಧಾರಿಯಾಗಿ ಎಷ್ಟೊಂದು ತೀವ್ರಗತಿಯಿಂದ ಮುಂದುವರೆಯುತ್ತಾ ಮತ್ತು ಮುಂದುವರೆಸುತ್ತಿದ್ದಾರೆ, ಇದನ್ನು ಅನುಭವ ಮಾಡುತ್ತಿದ್ದೀರಲ್ಲವೆ!

ಸೂಕ್ಷ್ಮ ಶರೀರದ ಗತಿಯು ಈ ಪ್ರಪಂಚದ ಎಲ್ಲಾ ತೀವ್ರ ಗತಿಯ ಸಾಧನಗಳಿಗಿಂತಲೂ ತೀಕ್ಷ್ಣವಾಗಿದೆ. ಒಂದೇ ಸೆಕೆಂಡಿನಲ್ಲಿ ಅದೇ ಸಮಯದಲ್ಲಿ ಅನೇಕರಿಗೆ ಅನುಭವ ಮಾಡಿಸಬಹುದು. ಅದನ್ನು ಎಲ್ಲರೂ ಹೇಳುತ್ತಾರೆ – ನಾವು ಈ ಸಮಯದಲ್ಲಿ ತಂದೆಯನ್ನು ನೋಡಿದೆವು ಅಥವಾ ತಂದೆಯೊಂದಿಗೆ ಮಿಲನ ಮಾಡಿದೆವು, ಪ್ರತಿಯೊಬ್ಬರೂ ತಿಳಿದುಕೊಳ್ಳುವರು – ನಾನು ವಾರ್ತಾಲಾಪ ಮಾಡಿದೆನು, ನಾನು ಮಿಲನ ಮಾಡಿದೆನು, ನನಗೆ ಸಹಯೋಗ ಸಿಕ್ಕಿತು ಎಂದು. ಏಕೆಂದರೆ ತೀವ್ರ ಗತಿಯ ಕಾರಣ ಒಂದೇ ಸಮಯದಲ್ಲಿ ಪ್ರತಿಯೊಬ್ಬರಿಗೆ ನಾನು ಅನುಭವ ಮಾಡಿದೆನು ಎಂಬಂತೆ ಅನುಭವವಾಗುತ್ತದೆ. ಅಂದಾಗ ಫರಿಶ್ತಾ ಜೀವನವು ಬಂಧನಮುಕ್ತ ಜೀವನವಾಗಿದೆ. ಭಲೆ ಸೇವೆಯ ಬಂಧನವಿದೆ ಆದರೆ ಇಷ್ಟು ತೀವ್ರ ಗತಿಯಾಗಿದೆ ಯಾವುದನ್ನು ಎಷ್ಟಾದರೂ ಮಾಡಿ ಅಷ್ಟು ಮಾಡುತ್ತಿದ್ದರೂ ಸಹ ಸದಾ ಹಗುರರಾಗಿರುತ್ತೀರಿ. ಎಷ್ಟು ಪ್ರಿಯವೋ ಅಷ್ಟೇ ಭಿನ್ನ. ಎಲ್ಲರಿಂದ ಮಾಡಿಸುತ್ತಾರೆ ಆದರೆ ಮಾಡಿಸುತ್ತಿದ್ದರೂ ಸಹ ಅಶರೀರಿ ಫರಿಶ್ತಾ ಆಗಿರುವ ಕಾರಣ ಸದಾ ಸ್ವತಂತ್ರತೆಯ ಸ್ಥಿತಿಯ ಅನುಭವವಾಗುತ್ತದೆ ಏಕೆಂದರೆ ಶರೀರ ಮತ್ತು ಕರ್ಮಕ್ಕೆ ಅಧೀನರಾಗಿಲ್ಲ. ತಮ್ಮೆಲ್ಲರಿಗೂ ಸಹ ಅನುಭವವಿದೆ – ಯಾವಾಗ ಫರಿಶ್ತಾ ಸ್ಥಿತಿಯಿಂದ ಯಾವುದೇ ಕಾರ್ಯ ಮಾಡುತ್ತೀರೆಂದರೆ ಬಂಧನಮುಕ್ತ ಅರ್ಥಾತ್ ಹಗುರತೆಯ ಅನುಭವ ಮಾಡುತ್ತೀರಲ್ಲವೆ ಮತ್ತು ಯಾರು ಫರಿಶ್ತಾ ಆಗಿ ಬಿಟ್ಟಿದ್ದಾರೆಯೋ ಅವರಿಗೆ ಲೋಕವೂ ಅದೇ, ಶರೀರವೂ ಅದೇ ಅಂದಮೇಲೆ ಯಾವ ಅನುಭವವಾಗುವುದು ಎಂಬುದನ್ನು ಅರಿತುಕೊಂಡಿದ್ದೀರಲ್ಲವೆ. ಒಳ್ಳೆಯದು.

ನಾಲ್ಕಾರು ಕಡೆಯ ಸರ್ವ ಹೃದಯದ ಸ್ನೇಹಿ ಮಕ್ಕಳಿಗೆ, ಸದಾ ದಿವ್ಯ-ವಿಶಾಲ ಬೇಹದ್ದಿನ ಬುದ್ಧಿವಂತ ಮಕ್ಕಳಿಗೆ, ಸದಾ ಬ್ರಹ್ಮಾ ತಂದೆಯ ಸಮಾನ ಫರಿಶ್ತಾ ಸ್ಥಿತಿಯ ಅನುಭವ ಮಾಡಿ ತೀವ್ರ ಗತಿಯಿಂದ ಸೇವೆಯಲ್ಲಿ, ಸ್ವ-ಉನ್ನತಿಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವವರು, ಸದಾ ಸಹಯೋಗಿಗಳಾಗಿ ತಂದೆಯ ಸಹಯೋಗದ ಅಧಿಕಾರವನ್ನು ಅನುಭವ ಮಾಡುವವರು – ಇಂತಹ ವಿಶೇಷ ಆತ್ಮರಿಗೆ, ಸಮಾನರಾಗುವಂತಹ ಮಹಾನ್ ಆತ್ಮರಿಗೆ, ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ವರದಾನದ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು:

1. ಸದಾ ನಿಶ್ಚಿಂತ ಚಕ್ರವರ್ತಿ ಆಗಿದ್ದೀರಲ್ಲವೆ. ಯಾವಾಗ ಜವಾಬ್ದಾರಿಯನ್ನು ತಂದೆಗೆ ಕೊಟ್ಟಿದ್ದೀರೆಂದಾಗ, ಯಾವ ಮಾತಿನಲ್ಲಿ ಚಿಂತೆಯಿದೆ? ಯಾವಾಗ ತಮ್ಮ ಮೇಲೆ ಜವಾಬ್ದಾರಿಯನ್ನು ಇಟ್ಟುಕೊಳ್ಳುತ್ತೀರಿ, ಆಗ ಚಿಂತೆಯಾಗುತ್ತದೆ – ಏನಾಗುತ್ತದೆಯೋ, ಹೇಗಾಗುತ್ತದೆಯೋ…. ಯಾವಾಗ ಅದನ್ನು ತಂದೆಗೆ ಅರ್ಪಣೆ ಮಾಡಿ ಬಿಟ್ಟಿರಿ ಅಂದಮೇಲೆ ಆ ಚಿಂತೆ ಯಾರಿಗಾಗಬೇಕು, ತಂದೆಯವರಿಗೇ ಅಥವಾ ತಮಗಾಗಬೇಕಾ? ತಂದೆಯವರಂತು ಸಾಗರನಾಗಿದ್ದಾರೆ, ಅವರಲ್ಲಿ ಚಿಂತೆಯಂತು ಇರುವುದೇ ಇಲ್ಲ. ಅಂದಮೇಲೆ ತಂದೆಯೂ ನಿಶ್ಚಿಂತ ಮತ್ತು ಮಕ್ಕಳೂ ನಿಶ್ಚಿಂತವಾಗಿ ಬಿಟ್ಟರು. ಹಾಗಾದರೆ ಯಾವುದೇ ಕರ್ಮವನ್ನು ಮಾಡಿರಿ, ಆದರೆ ಮಾಡುವುದಕ್ಕೆ ಮೊದಲು ಯೋಚಿಸಿರಿ – ನಾನು ನಿಮಿತ್ತನಾಗಿದ್ದೇನೆಯೇ! ನಿಮಿತ್ತನು ಸೇವೆಯನ್ನು ಬಹಳ ಪ್ರೀತಿಯಿಂದ ಮಾಡುವನು ಆದರೆ ಹೊರೆಯಿರುವುದಿಲ್ಲ. ನಿಮಿತ್ತನ ಅರ್ಥವೇ ಆಗಿದೆ – ಬಾಬಾ ಎಲ್ಲವೂ ನಿನ್ನದು. ಎಂತಹ ಸ್ಮೃತಿ ಇರುತ್ತದೆಯೋ ಅಂತಹ ಸ್ಥಿತಿಯುಂಟಾಗುತ್ತದೆ. ನಿನ್ನದು ಎಂದರೆ ತಂದೆಯ ಸ್ಮೃತಿ ಇರುತ್ತದೆ, ಇಲ್ಲಿ ಯಾವುದೇ ಹೆಸರಿನ ಮಹಾನ್ ಆತ್ಮನೂ ಇಲ್ಲ, ತಂದೆಯಿದ್ದಾರೆ! ಅಂದಮೇಲೆ ಯಾವಾಗ ನಿನ್ನದೆಂದು ಹೇಳಿದೆವೋ ಆಗ ಕಾರ್ಯವೂ ಒಳ್ಳೆಯದಿರುತ್ತದೆ ಮತ್ತು ಸ್ಥಿತಿಯೂ ಸದಾ ನಿಶ್ಚಿಂತ. ಯಾವಾಗ ತಂದೆಯು ಚಿಂತೆಯನ್ನು ಕೊಟ್ಟು ಬಿಡಿ ಎಂದು ಅವಕಾಶ ಮಾಡಿಕೊಡುತ್ತಿದ್ದರೂ, ಅವಕಾಶವನ್ನು ಸ್ವೀಕರಿಸುವುದಿಲ್ಲವೆಂದರೆ ಏನು ಹೇಳುವುದು? ಹೊರೆಯನ್ನು ಬಿಟ್ಟು ಬಿಡಿ ಎನ್ನುವುದು ತಂದೆಯ ಆಫರ್ ಆಗಿದೆ, ಅಂದಮೇಲೆ ಸದಾ ನಿಶ್ಚಿಂತವಾಗಿ ಇರಬೇಕು ಹಾಗೂ ಅನ್ಯರನ್ನೂ ನಿಶ್ಚಿಂತರನ್ನಾಗಿ ಮಾಡುವ, ಅನುಭವದಿಂದ ವಿಧಿಯನ್ನು ತಿಳಿಸಬೇಕಾಗಿದೆ. ಇದರಿಂದ ಬಹಳ ಆಶೀರ್ವಾದಗಳೂ ಸಿಗುತ್ತವೆ! ಯಾರಂದಿಲಾದರೂ ಹೊರೆ ಅಥವಾ ಚಿಂತೆಯನ್ನು ತೆಗೆದುಕೊಳ್ಳುತ್ತೀರೆಂದರೆ ಹೃದಯದಿಂದ ಆಶೀರ್ವಾದಗಳನ್ನು ಕೊಡುತ್ತಾರೆ. ಅದರಿಂದ ಸ್ವಯಂ ಸಹ ನಿಶ್ಚಿಂತ ಚಕ್ರವರ್ತಿ ಮತ್ತು ಅನ್ಯರಿಂದಲೂ ಶುಭ ಭಾವನೆಯ ಆಶೀರ್ವಾದಗಳು ಸಿಗುತ್ತವೆ. ಹಾಗಾದರೆ ಅವಿನಾಶಿ ಧನದ ಚಕ್ರವರ್ತಿ ಆಗಿದ್ದೀರಿ! ಚಕ್ರವರ್ತಿಗೆ ಯಾವ ಚಿಂತೆ ಇರುತ್ತದೆ! ವಿನಾಶಿ ಚಕ್ರವರ್ತಿಗಳಿಗಂತು ಚಿಂತೆ ಇರುತ್ತದೆ ಆದರೆ ಇದು ಅವಿನಾಶಿಯಾದುದು. ಒಳ್ಳೆಯದು!

2. ಅವಿನಾಶಿ ಸುಖ ಹಾಗೂ ಅಲ್ಪಕಾಲದ ಸುಖ – ಎರಡರ ಅನುಭವಿ ಆಗಿದ್ದೀರಲ್ಲವೇ? ಅಲ್ಪಕಾಲದ ಸುಖವು ಸ್ಥೂಲ ಸಾಧನಗಳ ಸುಖವಾಗಿದೆ ಮತ್ತು ಅವಿನಾಶಿ ಸುಖವೆಂದರೆ ಈಶ್ವರೀಯ ಸುಖವಾಗಿದೆ. ಹಾಗಾದರೆ ಅತಿ ಶ್ರೇಷ್ಠ ಸುಖವು ಯಾವುದಾಗಿದೆ! ಯಾವಾಗ ಈಶ್ವರೀಯ ಸುಖವು ಸಿಗುತ್ತದೆಯೋ ಆಗ ವಿನಾಶಿ ಸುಖವು ಸ್ವತಹವಾಗಿಯೇ ಹಿಂದೆ-ಹಿಂದೆ ಬರುತ್ತದೆ. ಹೇಗೆ ಯಾರಾದರೂ ಬಿಸಿಲಿನಲ್ಲಿ ನಡೆಯುತ್ತಾ ಇದ್ದಾರೆಂದರೆ, ಅವರಹಿಂದೆ ಸ್ವತಹವಾಗಿಯೇ ನೆರಳು ಬರುತ್ತದೆ, ಒಂದುವೇಳೆ ಯಾರೇ ಆ ನೆರಳಿನ ಹಿಂದೆ ಹೋಗುತ್ತಾರೆಂದರೆ ಏನೂ ಸಿಗುವುದಿಲ್ಲ. ಅದೇ ರೀತಿ ಯಾರು ಈಶ್ವರೀಯ ಸುಖದ ಕಡೆ ಹೋಗುತ್ತಾರೆಯೋ ಅವರಹಿಂದೆ ಅಲ್ಪಕಾಲದ ಸುಖವು ಸ್ವತಹವಾಗಿಯೇ ನೆರಳಿನ ಸಮಾನ ಬರುತ್ತಿರುತ್ತದೆ, ಅದಕ್ಕಾಗಿ ಪರಿಶ್ರಮ ಪಡಬೇಕಾಗಿರುವುದಿಲ್ಲ. ಹೇಗೆ ಹೇಳಲಾಗುತ್ತದೆ ಅಲ್ಲವೆ – ಎಲ್ಲಿ ಪರಮಾರ್ಥವಾಗುತ್ತದೆಯೋ ಅಲ್ಲಿ ವ್ಯವಹಾರವೂ ಸ್ವತಹವಾಗಿಯೇ ಸಿದ್ಧವಾಗಿ ಬಿಡುತ್ತದೆ. ಹಾಗೆಯೇ ಈಶ್ವರೀಯ ಸುಖವು ಪರಮಾರ್ಥವಾಗಿದೆ ಮತ್ತು ವಿನಾಶಿ ಸುಖವು ವ್ಯವಹಾರವಾಗಿದೆ. ಪರಮಾರ್ಥದ ಮುಂದೆ ವ್ಯವಹಾರವು ತಾನಾಗಿಯೇ ಬರುತ್ತದೆ ಅಂದಮೇಲೆ ಸದಾ ಇದೇ ಅನುಭವದಲ್ಲಿರಿ, ಯಾವುದರಿಂದ ಎರಡು ಸಿಗುತ್ತದೆ. ಇಲ್ಲದಿದ್ದರೆ ಒಂದು ಸಿಗುತ್ತದೆ, ಮತ್ತೆ ಅದೂ ವಿನಾಶಿಯೇ ಆಗಿರುತ್ತದೆ. ಕೆಲವೊಮ್ಮೆ ಸಿಗುತ್ತದೆ ಕೆಲವೊಮ್ಮೆ ಸಿಗುವುದಿಲ್ಲ ಏಕೆಂದರೆ ಆ ವಸ್ತುವೇ ವಿನಾಶಿಯಾಗಿದೆ, ಅದರಿಂದ ಸಿಗುವುದಾದರೂ ಏನು? ಯಾವಾಗ ಈಶ್ವರೀಯ ಸುಖವು ಸಿಗುತ್ತದೆಯೋ ಆಗ ಸದಾ ಸುಖಿಯಾಗಿ ಬಿಡುತ್ತೀರಿ, ದುಃಖದ ಹೆಸರು-ಚಿಹ್ನೆಯೂ ಇರುವುದಿಲ್ಲ. ಈಶ್ವರೀಯ ಸುಖವೆಂದರೆ ಎಲ್ಲವೂ ಸಿಕ್ಕಿದಂತೆ, ಅದರಲ್ಲಿ ಯಾವುದೇ ಅಪ್ರಾಪ್ತಿಯೇ ಇರುವುದಿಲ್ಲ. ಅವಿನಾಶಿ ಸುಖಗಳಲ್ಲಿ ಇರುವವರು ವಿನಾಶಿ ವಸ್ತುಗಳಿಂದ ನಿರ್ಲಿಪ್ತವಾಗಿದ್ದು ಉಪಯೋಗಿಸುತ್ತಾರೆ, ಅದರಲ್ಲಿಯೇ ಸಿಲುಕುವುದಿಲ್ಲ. ಒಳ್ಳೆಯದು!

3. ಸದಾ ತಮ್ಮನ್ನು ಕಲ್ಪ-ಕಲ್ಪದ ವಿಜಯಿ ಆತ್ಮರೆಂದು ಅನುಭವ ಮಾಡುತ್ತೀರಾ? ಅನೇಕಬಾರಿ ವಿಜಯಿಯಾಗುವ ಪಾತ್ರವನ್ನು ಅಭಿನಯಿಸಲಾಗಿದೆ ಮತ್ತು ಈಗಲೂ ಅಭಿನಯಿಸುತ್ತಾ ಇದ್ದೀರಿ. ವಿಜಯಿ ಆತ್ಮರು ಸದಾ ಅನ್ಯರನ್ನೂ ವಿಜಯಿಯನ್ನಾಗಿ ಮಾಡುತ್ತಾರೆ. ಯಾರು ಅನೇಕ ಬಾರಿ ಮಾಡಿರುತ್ತಾರೆಯೋ ಅವರು ಸದಾಕಾಲ ಸಹಜವಾಗಿ ಇರುತ್ತಾರೆ, ಪರಿಶ್ರಮ ಪಡುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಅನೇಕ ಬಾರಿಯ ವಿಜಯಿ ಆತ್ಮನೆಂಬ ಸ್ಮೃತಿಯಿಂದ ಪಾರು ಮಾಡುವುದು ಆಟವೆನಿಸುತ್ತದೆ. ಖುಷಿಯ ಅನುಭವವಾಗುತ್ತದೆಯೇ? ವಿಜಯಿ ಆತ್ಮರಿಗೆ ವಿಜಯದ ಅಧಿಕಾರದ ಅನುಭವವಾಗುವುದು. ಅಧಿಕಾರವು ಪರಿಶ್ರಮದಿಂದ ಸಿಗುವುದಿಲ್ಲ, ಸ್ವತಹವಾಗಿಯೇ ಸಿಗುತ್ತದೆ ಅಂದಾಗ ಸದಾ ವಿಜಯದ ಖುಷಿಯಿಂದ, ಅಧಿಕಾರದಿಂದ ಮುಂದುವರೆಯುತ್ತಾ, ಅನ್ಯರನ್ನೂ ಮುಂದುವರೆಸುತ್ತಾ ಸಾಗಿರಿ. ಲೌಕಿಕ ಪರಿವಾರದಲ್ಲಿದ್ದರೂ ಅಲೌಕಿಕದಲ್ಲಿ ಪರಿವರ್ತನೆ ಮಾಡಿರಿ ಏಕೆಂದರೆ ಅಲೌಕಿಕ ಸಂಬಂಧವು ಸುಖ ಕೊಡುವಂತದ್ದಾಗಿದೆ. ಲೌಕಿಕ ಸಂಬಂಧದಿಂದ ಅಲ್ಪಕಾಲದ ಸುಖ ಸಿಗುತ್ತದೆ, ಸದಾಕಾಲವೂ ಇರುವುದಿಲ್ಲ ಅಂದಾಗ ಸದಾ ಸುಖಿಯಾಗಿ ಬಿಡಿ. ದುಃಖಿಗಳ ಪ್ರಪಂಚದಿಂದ ಸುಖದ ಪ್ರಪಂಚದಲ್ಲಿ ಬಂದು ಬಿಟ್ಟೆವು – ಈ ಅನುಭವ ಮಾಡುತ್ತೀರಾ? ಮುಂಚೆ ರಾವಣನ ಮಕ್ಕಳಾಗಿದ್ದೆವು ಆದ್ದರಿಂದ ದುಃಖ ಕೊಡುವವರಾಗಿದ್ದೆವು, ಈಗ ಸುಖದಾತನ ಮಕ್ಕಳು ಸುಖ ಸ್ವರೂಪರು ಆಗಿ ಬಿಟ್ಟೆವು. ಮೊದಲ ನಂಬರ್ ಈ ಅಲೌಕಿಕ ಬ್ರಾಹ್ಮಣ ಪರಿವಾರವಾಗಿದೆ, ದೇವತೆಗಳೂ ಸಹ ಸೆಕೆಂಡ್ ನಂಬರಿನವರಾದರು. ಅಂದಮೇಲೆ ಈ ಅಲೌಕಿಕ ಜೀವನವು ಪ್ರಿಯವೆನಿಸುತ್ತದೆ ಅಲ್ಲವೆ.

4. ತಮ್ಮನ್ನು ಬೇಹದ್ದಿನ ನಿಮಿತ್ತ ಸೇವಾಧಾರಿ ಎಂದು ತಿಳಿಯುವಿರಾ? ಬೇಹದ್ದಿನ ಸೇವಾಧಾರಿ ಅರ್ಥಾತ್ ಯಾವುದರಲ್ಲಿಯೂ ನನ್ನತನದ ಅಥವಾ ನಾನು ಎಂಬ ಅಲ್ಪಕಾಲದ ಅಹಂಕಾರದಲ್ಲಿ ಬರುವವರಲ್ಲ. ಬೇಹದ್ದಿನಲ್ಲಿ ನಾನು ಎನ್ನುವುದೂ ಇರುವುದಿಲ್ಲ, ನನ್ನದೆನ್ನುವುದೂ ಇರುವುದಿಲ್ಲ. ಎಲ್ಲವೂ ತಂದೆಯದಾಗಿದೆ, ನಾನೂ ಸಹ ತಂದೆಯ ಮಗು, ಅಂದಮೇಲೆ ಈ ಸೇವೆಯೂ ತಂದೆಯದಾಗಿದೆ – ಇದಕ್ಕೆ ಬೇಹದ್ದಿನ ಸೇವೆ ಎಂದು ಹೇಳಲಾಗುವುದು. ಇಂತಹ ಬೇಹದ್ದಿನ ಸೇವಾಧಾರಿ ಆಗಿದ್ದೀರಾ ಅಥವಾ ಅಲ್ಪಕಾಲದರಲ್ಲಿ ಬರುವಿರಾ? ಬೇಹದ್ದಿನ ಸೇವಾಧಾರಿಯು ಬೇಹದ್ದಿನ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ. ಸದಾ ಬೇಹದ್ದಿನ ತಂದೆ, ಬೇಹದ್ದಿನ ಸೇವೆ ಮತ್ತು ಬೇಹದ್ದಿನ ರಾಜ್ಯಭಾಗ್ಯ – ಇದೇ ಸ್ಮೃತಿಯನ್ನು ಇಟ್ಟುಕೊಳ್ಳುತ್ತೀರೆಂದರೆ ಬೇಹದ್ದಿನ ಖುಷಿಯು ಇರುತ್ತದೆ. ಅಲ್ಪಕಾಲದರಲ್ಲಿ ಖುಷಿಯು ಮಾಯವಾಗಿ ಬಿಡುತ್ತದೆ, ಬೇಹದ್ದಿನಲ್ಲಿ ಸದಾ ಖುಷಿಯಿರುತ್ತದೆ. ಒಳ್ಳೆಯದು!

ಬೀಳ್ಕೊಡುಗೆಯ ಸಮಯದಲ್ಲಿ…

ಈಗಂತು ಸೇವೆಯ ಬಹಳ ಒಳ್ಳೆಯ ಯೋಜನೆಗಳನ್ನು ಮಾಡಲಾಗಿದೆ. ವಾಸ್ತವದಲ್ಲಿ ಸೇವೆಯೂ ಸಹ ಉನ್ನತಿಯ ಸಾಧನವಾಗಿದೆ. ಒಂದುವೇಳೆ ಸೇವೆಯನ್ನು ಸೇವೆಯ ರೀತಿಯಿಂದ ಮಾಡುತ್ತೀರೆಂದರೆ, ಸೇವೆಯು ವೃದ್ಧಿಯಾಗುವ ಲಿಫ್ಟ್ ಕೊಡುತ್ತದೆ. ಅದಕ್ಕಾಗಿ ಕೇವಲ ಸ್ವಚ್ಛ ಬುದ್ಧಿಯವರಾಗಿದ್ದು ಯೋಜನೆಗಳನ್ನು ತಯಾರು ಮಾಡಿರಿ, ಅದರಲ್ಲಿ ಸ್ವಲ್ಪವೂ ಇಲ್ಲಿ-ಅಲ್ಲಿ ಮಿಕ್ಸ್ ಆಗಬಾರದು. ಹೇಗೆ ಯಾವುದಾದರೂ ಬಹಳ ಒಳ್ಳೆಯ ವಸ್ತುವನ್ನು ತಯಾರು ಮಾಡಿಡಿ ಮತ್ತು ಇಲ್ಲಿ-ಅಲ್ಲಿನ ಗಾಳಿಯಿಂದ ಧೂಳು ಬೀಳುತ್ತದೆಯೆಂದರೆ ಏನಾಗುವುದು? ಅದಕ್ಕಾಗಿ ಸಂಭಾಲನೆ ಮಾಡಿಡುತ್ತೀರಿ ಅಲ್ಲವೆ. ಅದೇರೀತಿ ಸೇವೆಯ ಯೋಜನೆಗಳನ್ನು ಬಹಳ ಚೆನ್ನಾಗಿ ಮಾಡುತ್ತೀರಿ, ಸೇವೆಯಲ್ಲಿ ಪರಿಶ್ರಮವು ಪರಿಶ್ರಮವೆನಿಸುವುದಿಲ್ಲ, ಖುಷಿಯಾಗುತ್ತದೆ ಏಕೆಂದರೆ ಲಗನ್ನಿನಿಂದ ಮಾಡಲಾಗುತ್ತದೆ. ಸೇವೆಯಲ್ಲಿ ಒಲವು-ಉತ್ಸಾಹವನ್ನೂ ಇಡಲಾಗುತ್ತದೆ. ಬಾಪ್ದಾದಾರವರೂ ಸಹ ಸೇವೆಯ ಒಲವನ್ನು ನೋಡುತ್ತಾ ಖುಷಿಯಾಗುತ್ತಾರೆ. ಕೇವಲ ಇದರಲ್ಲಿ ಮಿಕ್ಸ್ ಆಗಬಾರದು, ಇದರಿಂದ ಎಷ್ಟು ಸಮಯದಲ್ಲಿ ಸೇವೆಯಾಯಿತು ಅದಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾಗಲು ಸಾಧ್ಯವಿದೆ. ಸ್ವಚ್ಛ ಬುದ್ಧಿ (ಪ್ಲೇನ್ ಬುದ್ಧಿ)ಯು ತೀವ್ರ ಗತಿಯ ಸೇವೆಯನ್ನು ಪ್ರತ್ಯಕ್ಷ ಮಾಡಿ ತೋರಿಸುತ್ತದೆ. ಈಗಂತು ಯೋಚನೆ ಮಾಡಬೇಕಾಗುತ್ತದೆ – ಇದನ್ನು ಮಾಡುವುದೇ, ಇಲ್ಲಿಯೇ ಮಾಡುವುದೇ, ಇದಂತು ಆಗುವುದಿಲ್ಲ, ಅದಂತು ಆಗುವುದಿಲ್ಲ ಎಂದು ಯೋಚಿಸುತ್ತೀರಲ್ಲವೆ? ಆದರೆ ಎಲ್ಲರೂ ಒಂದು ನಿರ್ಣಯದವರು ಆಗಿ ಬಿಡಬೇಕು – ಯಾರು ಮಾಡಿದರು ಅದು ಒಳ್ಳೆಯದು, ಏನು ಮಾಡಲಾಯಿತು ಅದು ಒಳ್ಳೆಯದಾಗಿದೆ – ಈ ಪಾಠವು ಪರಿಪಕ್ವವಾಗಿ ಬಿಟ್ಟರೆ ತೀವ್ರ ಗತಿಯ ಸೇವೆಯು ಪ್ರಾರಂಭವಾಗಿ ಬಿಡುತ್ತದೆ. ಹಾಗೆ ನೋಡಿದರೆ ಮುಂಚೆಗಿಂತಲೂ ಸೇವೆಯ ಗತಿಯು ತೀವ್ರಗೊಳ್ಳುತ್ತಿದೆ, ವೃದ್ಧಿಯೂ ಆಗುತ್ತಿದೆ, ಸಫಲತೆಯೂ ಸಿಗುತ್ತಿದೆ. ಆದರೆ ಈಗಿನ ಲೆಕ್ಕದಿಂದ, ವರ್ತಮಾನದಲ್ಲಿ ವಿಶ್ವದ ಆತ್ಮರುಗಳಿಗೆ ಸಂದೇಶವನ್ನು ಕೊಡುವ ಲೆಕ್ಕದಿಂದಂತು ಒಂದು ಮೂಲೆಯವರೆಗಷ್ಟೇ ತಲುಪಲಾಗಿದೆ. ಐದುವರೆ ಕೋಟಿ ಆತ್ಮರೆಲ್ಲಿ ಮತ್ತು ಒಂದು-ಎರಡು ಕೋಟಿಯವರೆಗೆ ಸಂದೇಶ ತಲುಪಿಸಲಾಗಿದೆ ಎಂದರೆ ಇನ್ನೂ ಎಲ್ಲಿಯವರೆಗೆ ತಲುಪಲಾಗಿದೆ? ಭಲೆ ಇವರು ರಾಜಧಾನಿಯ ಸಮೀಪ ಬರುವವರು ತಲುಪಿದ್ದಾರೆ ಆದರೆ ಬೇಕಾಗಿರುವುದಂತು ಎಲ್ಲರೂ. ಆಸ್ತಿಯಂತು ಮುಕ್ತಿಯದಾಗಿರಲಿ ಆಥವ ಜೀವನ್ಮುಕ್ತಿ ಆಗಿರಲಿ, ಎಲ್ಲರಿಗೂ ಕೊಡಬೇಕಾಗಿದೆ. ಆದರೆ ಕೊಡುವುದಂತು ಎಲ್ಲರಿಗೂ ಕೊಡಬೇಕು, ಬಾಬಾರವರ ಒಂದು ಮಗುವೂ ವಂಚಿತನಾಗಿ ಉಳಿದುಕೊಳ್ಳಬಾರದು. ಹೇಗಾದರೂ ಮಾಡಿ ತಂದೆಯ ಆಸ್ತಿಯ ಅಧಿಕಾರಿಯನ್ನಂತು ಮಾಡಲೇಬೇಕಾಗಿದೆ, ಭಲೆ ಅವರು ಯಾವುದಾದರೂ ವಿಧಿಯಿಂದ ಸಂದೇಶವನ್ನು ಕೇಳಲಿ, ಇದಕ್ಕಾಗಿ ಬೇಕಾಗಿದೆ `ತೀವ್ರ ಗತಿ’, ಈ ಸಮಯವೂ ಬರುತ್ತಿದೆ. ಆಗುತ್ತಾ ಹೋಗುವುದು.

ಈಗ ನಿಧಾನ-ನಿಧಾನವಾಗಿ ಎಲ್ಲಾ ಧರ್ಮದವರು ತಮ್ಮ ವಾಕ್ಯಗಳಲ್ಲಿ ಮೋಲ್ಡ್ ಆಗುತ್ತಿದ್ದಾರೆ. ಮುಂಚೆ ಕಠಿಣವಾಗಿ ಇರುತ್ತಿದ್ದರು, ಈಗ ಸ್ಪಂದಿಸುತ್ತಿದ್ದಾರೆ. ಅವರು ಭಲೆ ಕ್ರಿಶ್ಚಿಯನ್ ಆಗಿರಬಹುದು, ಮುಸ್ಲಿಂ ಆಗಿರಬಹುದು ಆದರೆ ಆಂತರ್ಯದಿಂದ ಭಾರತದ ಚರಿತ್ರೆಗೆ ಗೌರವ ಕೊಡುತ್ತಾರೆ ಏಕೆಂದರೆ ಭಾರತದ ಚರಿತ್ರೆಯಲ್ಲಿ ಸರ್ವ ಪ್ರಕಾರದ ರಮಣೀಕತೆ ಇದೆ. ಈ ರೀತಿ ಮತ್ತ್ಯಾವುದೇ ಧರ್ಮಗಳಲ್ಲಿಲ್ಲ. ಕಥೆಗಳ ರೀತಿಯಿಂದ, ಡ್ರಾಮಾದ ರೀತಿಯಲ್ಲಿ ಭಾರತದ ಚರಿತ್ರೆಯನ್ನೇನು ಪ್ರಸಿದ್ಧ ಮಾಡುವರು, ಹಾಗೆ ಮತ್ತ್ಯಾವುದೇ ಧರ್ಮಗಳಲ್ಲಿಯೂ ಎಲ್ಲಿಯೂ ಇಲ್ಲ. ಆದ್ದರಿಂದ ಒಳಗಿಂದೊಳಗೆ ಯಾರು ಕಠಿಣವಾಗಿದ್ದರು, ಅವರೀಗ ಆಂತರ್ಯದಲ್ಲಿ ಭಾರತದ ಚರಿತ್ರೆಯನ್ನು ತಿಳಿಯುತ್ತಾರೆ, ಅದರಲ್ಲಿಯೂ ಆದಿ ಸನಾತನ ಚರಿತ್ರೆಯೇನೂ ಕಡಿಮೆಯಲ್ಲ. ಆ ದಿನವೂ ಬಂದು ಬಿಡುತ್ತದೆ, ಆಗ ಎಲ್ಲರೂ ಹೇಳುವರು – ಒಂದುವೇಳೆ ಚರಿತ್ರೆಯಿದೆಯೆಂದರೆ ಆದಿ ಸನಾತನ ಧರ್ಮದ ಚರಿತ್ರೆಯಾಗಿದೆ. ಹಿಂದೂ ಶಬ್ಧದಿಂದಲೂ ಬೇಸರವಾಗುತ್ತಾರೆ ಆದರೆ ಆದಿ ಸನಾತನ ಧರ್ಮಕ್ಕೆ ಗೌರವ ಕೊಡುತ್ತಾರೆ. ಗಾಡ್ ಒಬ್ಬರೇ ಆಗಿದ್ದಾರೆಂದರೆ ಧರ್ಮವೂ ಒಂದೇ ಆಗಿರುತ್ತದೆ, ನಮ್ಮೆಲ್ಲರ ಧರ್ಮವೂ ಒಂದೇ ಆಗಿದೆ – ಹೀಗೆ ನಿಧಾನ-ನಿಧನವಾಗಿ ಆತ್ಮನ ಧರ್ಮದ ಕಡೆಗೆ ಆಕರ್ಷಿತವಾಗುತ್ತಾರೆ. ಒಳ್ಳೆಯದು!

ವರದಾನ:-

ಆತ್ಮದ ಮೇಲೆ ವ್ಯರ್ಥದ್ದೇ ಹೊರೆಯಿದೆ. ವ್ಯರ್ಥ ಸಂಕಲ್ಪ, ವ್ಯರ್ಥ ನುಡಿ, ವ್ಯರ್ಥ ಕರ್ಮ… ಇದರಿಂದ ಆತ್ಮವು ಹೊರೆಯಾಗಿ ಬಿಡುತ್ತದೆ. ಈಗ ಈ ಹೊರೆಯನ್ನು ಸಮಾಪ್ತಿ ಮಾಡಿರಿ. ಸಮಾಪ್ತಿ ಮಾಡುವುದಕ್ಕಾಗಿ ಸದಾ ಸೇವೆಯಲ್ಲಿ ವ್ಯಸ್ತರಾಗಿರಿ, ಮನನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿರಿ. ಮನನ ಶಕ್ತಿಯಿಂದ ಆತ್ಮವು ಶಕ್ತಿಶಾಲಿ ಆಗಿ ಬಿಡುವುದು. ಹೇಗೆ ಭೋಜನವನ್ನು ಜೀರ್ಣ ಮಾಡಿಕೊಳ್ಳುವುದರಿಂದ ರಕ್ತವಾಗುವುದು, ನಂತರ ಆ ಶಕ್ತಿಯು ಕೆಲಸ ಮಾಡುತ್ತದೆಯೋ ಹಾಗೆಯೇ ಮನನ ಮಾಡುವುದರಿಂದ ಆತ್ಮದಲ್ಲಿ ಶಕ್ತಿಯು ಹೆಚ್ಚಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top