28 August 2021 KANNADA Murli Today | Brahma Kumaris

Read and Listen today’s Gyan Murli in Kannada

August 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಹೇಳಿಕೆ-ಕೇಳಿಕೆ ಮಾತುಗಳ ಮೇಲೆ ವಿಶ್ವಾಸವನ್ನು ಇಡಬೇಡಿ, ಒಂದುವೇಳೆ ಯಾರಾದರೂ ಉಲ್ಟಾ-ಸುಲ್ಟಾ ಮಾತುಗಳನ್ನು ತಿಳಿಸಿದರೆ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ತೆಗೆದು ಹಾಕಿರಿ”

ಪ್ರಶ್ನೆ:: -

ಯಾವ ಮಕ್ಕಳು ಜ್ಞಾನದ ಖುಷಿಯಲ್ಲಿರುವರೋ ಅವರ ಚಿಹ್ನೆಗಳೇನಿರುವುದು?

ಉತ್ತರ:-

ಅವರು ಹಳೆಯ ಕರ್ಮ ಭೋಗದ ಲೆಕ್ಕಾಚಾರವನ್ನು ಆ ಖುಷಿಯಲ್ಲಿ ಮರೆಯುತ್ತಾ ಹೋಗುತ್ತಾರೆ. ಜ್ಞಾನದ ಖುಷಿಯಲ್ಲಿ ದುಃಖ, ನೋವು, ಚಿಂತೆಯ ಪ್ರಪಂಚವೇ ಮರೆತು ಹೋಗುತ್ತದೆ. ಬುದ್ಧಿಯಲ್ಲಿರುತ್ತದೆ – ಈಗಂತೂ ನಾವು ಖುಷಿಯ ಪ್ರಪಂಚಕ್ಕೆ ಹೋಗುತ್ತಿದ್ದೇವೆ, ರಾವಣನು ಶಾಪಗ್ರಸ್ಥರನ್ನಾಗಿ ಮಾಡಿ ದುಃಖಿಯನ್ನಾಗಿ ಮಾಡಿದನು. ಈಗ ತಂದೆಯು ಆ ದುಃಖದ ಚಿಂತೆಯ ಪ್ರಪಂಚದಿಂದ ಬಿಡಿಸಿ ಖುಷಿಯ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಪಡೆದ ನಾನು ಜಗತ್ತನ್ನೇ ಪಡೆದೆನು…….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಅವಶ್ಯವಾಗಿ ಮಕ್ಕಳಿಗೆ ರೋಮಾಂಚನವಾಗಬೇಕು ಏಕೆಂದರೆ ಖುಷಿಯಂತಹ ಔಷಧಿಯಿಲ್ಲವೆಂದು ಗಾಯನವಿದೆ. ಈಗ ನೀವೆಲ್ಲಾ ಆತ್ಮಿಕ ಮಕ್ಕಳಿಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ ಮತ್ತು ಮಕ್ಕಳಿಗೆ ತಿಳಿದಿದೆ – ಯಾವಾಗ ಅನ್ಯರೆಲ್ಲರೂ ಬಂದು ಮಕ್ಕಳಾಗುವರೋ ಅವರಿಗೂ ರೋಮಾಂಚನವಾಗುವುದು. ನೀವು ತಿಳಿದುಕೊಂಡಿದ್ದೀರಿ, ನಮ್ಮ ರಾಜ್ಯವಿತ್ತು ನಂತರ ರಾಜ್ಯವನ್ನು ಕಳೆದುಕೊಂಡೆವು. ಈಗ ಪುನಃ ರಾಜ್ಯವನ್ನು ಪಡೆಯುತ್ತೇವೆ. ಭಾರತವಾಸಿಗಳಿಗಾಗಿ ಇದು ಖುಷಿಯ ಸಮಾಚಾರವಾಗಿದೆಯಲ್ಲವೆ ಆದರೆ ಚೆನ್ನಾಗಿ ಕೇಳಿಸಿಕೊಂಡು ತಿಳಿದುಕೊಂಡಾಗ ಮಾತ್ರ. ನಿಜವಾಗಿಯೂ ಇದು ಖುಷಿಯ ಮಾತಲ್ಲವೆ. ಕಲ್ಪ-ಕಲ್ಪವೂ ತಂದೆಯು ಬರುತ್ತಾರೆ, ತಂದೆಯ ಜನ್ಮವು ಇಲ್ಲಿಯೇ ಗಾಯನವಿದೆ, ಹಬ್ಬಗಳೆಲ್ಲವೂ ಈ ಸಮಯದ್ದಾಗಿದೆ. ತಂದೆಯು ಬಂದು ನಿಮಗೆ ಬಹಳ ಸಹಜ ಮಾರ್ಗವನ್ನು ತಿಳಿಸಿದ್ದಾರೆ. ಮನುಷ್ಯರಿಗಂತೂ ಅನೇಕ ಪ್ರಕಾರದ ಚಿಂತೆಯಿದೆ, ಇಲ್ಲಿ ಈ ಜ್ಞಾನದ ಖುಷಿಯಲ್ಲಿ ಆ ಚಿಂತೆ, ದುಃಖ ಇತ್ಯಾದಿಗಳೆಲ್ಲವೂ ವಿಸ್ಮೃತಿಯಾಗುತ್ತದೆ. ಹೇಗೆ ಯಾವುದೇ ಖಾಯಿಲೆಯು ವಾಸಿಯಾಗುವ ಸಮಯದಲ್ಲಿ ಎಲ್ಲರಿಗೆ ಖುಷಿಯಾಗುತ್ತದೆ. ಖಾಯಿಲೆ ಮೊದಲಾದ ದುಃಖದ ಮಾತುಗಳು ಮರೆತು ಹೋಗುತ್ತವೆ. ಮಾವನ ಮನೆ, ತಂದೆಯ ಮನೆ, ಮಿತ್ರ ಸಂಬಂಧಿ ಮೊದಲಾದವರೆಲ್ಲರೂ ಖುಷಿಯಲ್ಲಿ ಬಂದು ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವೆಲ್ಲರೂ ವಿಶ್ವದ ಮಾಲೀಕರಾಗಿದ್ದೆವು, ನಂತರ ರಾವಣನು ಶಾಪ ಕೊಟ್ಟಿದ್ದಾನೆ. ಇದು ಚಿಂತೆ, ದುಃಖದ ಪ್ರಪಂಚವಾಗಿದೆ ಮತ್ತೆ ನಾಳೆ ಖುಷಿಯ ಪ್ರಪಂಚವಾಗುವುದು. ಖುಷಿಯ ಪ್ರಪಂಚವು ನೆನಪಿನಲ್ಲಿದ್ದರೆ ಚಿಂತೆ, ದುಃಖ ಇತ್ಯಾದಿಗಳೆಲ್ಲವನ್ನೂ ಮರೆತು ಹೋಗಬೇಕು. ಇದು ತಮೋಪ್ರಧಾನ ಪ್ರಪಂಚವಾಗಿದೆ, ಭಿನ್ನ-ಭಿನ್ನ ಪ್ರಕಾರದ ಕರ್ಮ ಭೋಗವಿದೆ. ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ, ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ. ಈ ವಿಘ್ನಗಳು, ಕರ್ಮಭೋಗದ ದಿನಗಳು ಇನ್ನು ಸ್ವಲ್ಪವೇ ಸಮಯವಿರುವುದು. ತಂದೆಯು ಧೈರ್ಯ ಕೊಡುತ್ತಾರೆ, ಇನ್ನು ಕೆಲವೇ ದಿನಗಳಿವೆ, ಕಲ್ಪದ ಮೊದಲೂ ಆಗಿತ್ತು. ಕರ್ಮಭೋಗದ ಲೆಕ್ಕಾಚಾರವು ಮುಗಿಯಬೇಕಾಗಿದೆ, ಖುಷಿಯಲ್ಲಿ ಎಲ್ಲವನ್ನೂ ಮರೆಯುತ್ತಾ ಹೋಗಿರಿ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ. ಯಾವುದೇ ಉಲ್ಟಾ- ಸುಲ್ಟಾ ಕೆಲಸ ಮಾಡಬೇಡಿರಿ. ಇಲ್ಲವಾದರೆ ಇನ್ನೂ ಶಿಕ್ಷೆಯಾಗುತ್ತದೆ, ಪದವಿಯು ಭ್ರಷ್ಟವಾಗುತ್ತದೆ. ಒಬ್ಬ ತಂದೆಯನ್ನು ನೆನಪು ಮಾಡುವುದು ಮಕ್ಕಳ ಕರ್ತವ್ಯವಾಗಿದೆ, ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನಿಮ್ಮ ಕರ್ಮಗಳು ವಿನಾಶವಾಗುತ್ತವೆ. ಲೆಕ್ಕಾಚಾರವು ಸಮಾಪ್ತಿಯಾಗುತ್ತದೆ. ಇನ್ನೂ ಸ್ವಲ್ಪವೇ ಸಮಯವಿದೆ, ಲೆಕ್ಕಾಚಾರಗಳನ್ನು ಮುಗಿಸುತ್ತಾ ಹೋಗಿರಿ ಏಕೆಂದರೆ ನೀವು ಅಂಧರಿಗೆ ಊರುಗೋಲಾಗಿದ್ದೀರಿ. ನೀವೂ ನೆನಪು ಮಾಡಿರಿ, ಅನ್ಯರಿಗೂ ಮಾರ್ಗ ತಿಳಿಸಿರಿ. ವಿಘ್ನಗಳು ಬಹಳ ಬರುತ್ತವೆ, ಎಷ್ಟು ಸಾಧ್ಯವೋ ಎಲ್ಲರಿಗೆ ಇದನ್ನು ತಿಳಿಸುತ್ತಾ ಇರಿ – ತಂದೆಯನ್ನು ನೆನಪು ಮಾಡಿ. ಈ ಶಬ್ಧವು ಪ್ರಸಿದ್ಧವಾಗಿದೆ, ಮನ್ಮನಾಭವ ಅರ್ಥಾತ್ ಹೇ ಆತ್ಮರೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ನಿಮ್ಮ ಹಿಂದಿನ ವಿಕರ್ಮಗಳು ಭಸ್ಮವಾಗುತ್ತವೆ. ಇದರಲ್ಲಿ ತಬ್ಬಿಬ್ಬಾಗುವ ಮಾತೇ ಇಲ್ಲ. ಕೇವಲ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುವಿರಿ. ನೀವು ತಿಳಿದುಕೊಂಡಿದ್ದೀರಿ – 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ, ಚಕ್ರವನ್ನು ಸುತ್ತುತ್ತಾ ಬಂದಿದ್ದೇವೆ, ಸುತ್ತುತ್ತಲೇ ಇರುತ್ತೇವೆ. ಇದು ಹಳೆಯ ಪ್ರಪಂಚ, ಹಳೆಯ ವಸ್ತ್ರವಾಗಿದೆ, ಇದನ್ನು ಮರೆಯಬೇಕಾಗಿದೆ. ಇದು ಆತ್ಮನ ಬೇಹದ್ದಿನ ಸನ್ಯಾಸವಾಗಿದೆ. ಅವರದು ಹದ್ದಿನ ಸನ್ಯಾಸವಾಗಿದೆ. ಮನೆ – ಮಠವನ್ನು ಬಿಟ್ಟು ಹೋಗುತ್ತಾರೆ. ಅವರದೂ ಸಹ ಡ್ರಾಮಾದಲ್ಲಿ ಪಾತ್ರವಿದೆ, ಮುಂದಿನ ಕಲ್ಪದಲ್ಲಿಯೂ ಇದೇ ರೀತಿಯಾಗುವುದು. ಕ್ಷಣ-ಕ್ಷಣವು ಯಾವುದು ಕಳೆದು ಹೋಯಿತೋ ಅದು ಡ್ರಾಮಾ. ಪುನಃ ಅದೇ ಡ್ರಾಮಾ ಪುನರಾವರ್ತನೆಯಾಗುವುದು. ಶಾಸ್ತ್ರಗಳೆಲ್ಲವೂ ಭಕ್ತಿ ಮಾರ್ಗದ ಪುಸ್ತಕಗಳಾಗಿವೆ. ಭಕ್ತಿಯ ನಂತರ ಜ್ಞಾನವಿರುತ್ತದೆ, ಈ ಏಣಿಯ ಚಿತ್ರದ ಬಗ್ಗೆ ಅನ್ಯರಿಗೆ ಬಹಳ ಸಹಜವಾಗಿ ತಿಳಿಸಬಹುದಾಗಿದೆ. ಮುಖ್ಯವಾಗಿ ಇರುವ ಚಿತ್ರಗಳನ್ನು ತಮ್ಮ ಮನೆಯಲ್ಲಿಯೂ ಇಟ್ಟುಕೊಳ್ಳಿರಿ. ತ್ರಿಮೂರ್ತಿ ಚಿತ್ರವು ಬಹಳ ಸ್ಪಷ್ಟವಾಗಿದೆ, ಮೇಲೆ ಶಿವನೂ ಇದ್ದಾರೆ, ಬ್ರಹ್ಮಾ-ವಿಷ್ಣು-ಶಂಕರರೂ ಇದ್ದಾರೆ. ಸೂಕ್ಷ್ಮವತನವಾಸಿಗಳು ಮತ್ತೆ ಅವರಿಗೂ ಮೇಲೆ ಸರ್ವ ಶ್ರೇಷ್ಠ ಭಗವಂತನಿದ್ದಾರೆ. ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ, ಎಲ್ಲಿ ತಂದೆಯಿರುವರೋ ಅದು ನಾವಾತ್ಮರ ನಿವಾಸ ಸ್ಥಾನವಾಗಿದೆ, ಅದಕ್ಕೆ ನಿರ್ವಾಣ ಧಾಮವೆಂದಾದರೂ ಹೇಳಿ, ಶಾಂತಿಧಾಮವೆಂದಾದರೂ ಹೇಳಿ ಒಂದೇ ಮಾತಾಗಿದೆ. ಶಾಂತಿಧಾಮದ ಹೆಸರು ಸರಿಯಾಗಿದೆ. ನಿರ್ವಾಣಧಾಮ ಅರ್ಥಾತ್ ವಾಣಿಯಿಂದ ದೂರವಿರುವ ಧಾಮ ಅದು ಶಾಂತಿಧಾಮವಾಯಿತು. ಅದು ಶಾಂತಿಧಾಮ ನಂತರ ಸುಖ ಮತ್ತು ಶಾಂತಿ, ಸಂಪತ್ತೀ ಧಾಮವಿರುವುದು. ನಂತರ ದುಃಖ ಮತ್ತು ಅಶಾಂತಿ ಧಾಮವಾಗುತ್ತದೆ. ಸುಖಧಾಮದಲ್ಲಂತೂ ಕುಬೇರನ ಅಪರ ಖಜಾನೆಯಿರುತ್ತದೆ. ಇಂದು ಹೇಗಿದೆ, ನಾಳೆ ಏನಾಗುವುದು! ಇಂದು ಕಲಿಯುಗದ ಅಂತ್ಯ, ನಾಳೆ ಸತ್ಯಯುಗದ ಆದಿಯಾಗುವುದು. ರಾತ್ರಿ-ಹಗಲಿನ ಅಂತರವಿದೆಯಲ್ಲವೆ. ಬ್ರಹ್ಮಾ ಮತ್ತು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರ ದಿನ ಮತ್ತು ರಾತ್ರಿಯೆಂದು ಹೇಳುತ್ತಾರೆ. ದಿನದಲ್ಲಿ ದೇವತೆಗಳು ರಾತ್ರಿಯಲ್ಲಿ ಶೂದ್ರರಿರುತ್ತಾರೆ. ನೀವು ಬ್ರಾಹ್ಮಣರು ಮಧ್ಯದಲ್ಲಿದ್ದೀರಿ. ಈ ಸಂಗಮಯುಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಮನುಷ್ಯರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ ಅಂದಮೇಲೆ ಪ್ರಕಾಶತೆಯಲ್ಲಿ ತರುವುದು ನಿಮ್ಮ ಕರ್ತವ್ಯವಾಗಿದೆ. ಈಗ ಮುಂದೆ ಅದೇ ಮಹಾಭಾರತ ಯುದ್ಧವಿದೆ. ಗಾಯನವಿದೆ – ವಿನಾಶ ಕಾಲದಲ್ಲಿ ವಿಪರೀತ ಬುದ್ಧಿ ವಿನಃಶ್ಯಂತಿ, ಪ್ರೀತಿ ಬುದ್ಧಿ ವಿಜಯಂತಿ. ಮಕ್ಕಳು ತಿಳಿದುಕೊಂಡಿದ್ದೀರಿ, ತಂದೆಯು ನಮಗೆ ಪುನಃ ಅದೇ ರಾಜ್ಯಭಾಗ್ಯವನ್ನು ಕೊಡುತ್ತಾರೆ, ಅದನ್ನು ಮತ್ತ್ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ದ್ವಾಪರದಿಂದ ರಾವಣನ ಪ್ರವೇಶತೆಯಾಗುತ್ತದೆ, ರಾವಣನು ನಮ್ಮ ರಾಜ್ಯವನ್ನು ಕಸಿದುಕೊಂಡಿದ್ದಾನೆ, ಅವನನ್ನು ಶತ್ರುವೆಂದೇ ತಿಳಿಯಿರಿ ಏಕೆಂದರೆ ಶತ್ರುವಿನ ಪ್ರತಿಮೆಯನ್ನೇ ಮಾಡಿ ಸುಡುತ್ತಾರೆ. ರಾವಣನು ಬಹಳ ಹಳೆಯ ಶತ್ರುವಾಗಿದ್ದಾನೆ, ರಾವಣ ರಾಜ್ಯವೆಂದು ಹೇಳಿದ್ದಾರೆ. ಆದರೆ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಅಂದಾಗ ಘೋರ ಅಂಧಕಾರವೆಂದು ಹೇಳಬಹುದಲ್ಲವೆ. ಬೇಹದ್ದಿನ ತಂದೆಯು ಜ್ಞಾನ ಸಾಗರನಾಗಿದ್ದಾರೆ. ಅವರಿಗೆ ಜ್ಞಾನ ದಾತ, ದಿವ್ಯ ಚಕ್ಷು ವಿದಾತನೆಂದು ಹೇಳುತ್ತಾರೆ. ಈಗ ನೀವಾತ್ಮರಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ, ಮೊದಲು ಏನೂ ತಿಳಿದುಕೊಂಡಿರಲಿಲ್ಲ. ಈಗ ಎಲ್ಲವನ್ನೂ ತಿಳಿದಿದ್ದೀರಿ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಜ್ಞಾನವನ್ನು ತಿಳಿಸುತ್ತಾರಲ್ಲವೆ. ಜ್ಞಾನವನ್ನು ತಿಳಿಸದೇ ಹೇಗೆ ಸಿದ್ಧವಾಗುವುದು? ನೀವು ನೋಡುತ್ತೀರಿ, ತಂದೆಯು ಜ್ಞಾನವನ್ನು ತಿಳಿಸುತ್ತಾರೆ ಯಾವ ಜ್ಞಾನದಿಂದ ಅರ್ಧಕಲ್ಪ ಸದ್ಗತಿಯಾಗುತ್ತದೆ. ಭಕ್ತಿಯು ಅರ್ಧಕಲ್ಪ ನಡೆಯಬೇಕಾಗಿದೆ. ಜ್ಞಾನದಿಂದ ಸದ್ಗತಿಯು ಸಂಗಮಯುಗದಲ್ಲಿಯೇ ಆಗುತ್ತದೆ. ಮಕ್ಕಳ ಯಾವುದೇ ಮಾತು ಎಂದೂ ಗುಪ್ತವಾಗಿರುವುದಿಲ್ಲ. ತಂದೆಯು ತಿಳಿಸುತ್ತಾರೆ – ಯಾವುದೇ ಕೆಟ್ಟ ಕೆಲಸವಾದರೆ ತಿಳಿಸಿ ಬಿಡಿ. ತಂದೆಗೆ ಗೊತ್ತಿದೆ, ಕೆಲವರಿಂದ ಕೆಟ್ಟ ಕರ್ಮಗಳಾಗುತ್ತಿರುತ್ತವೆ, ರಾವಣ ರಾಜ್ಯವಲ್ಲವೆ. ಮಾಯೆಯು ಪೆಟ್ಟು ಕೊಡುತ್ತದೆ ಆದರೆ ಬಹಳ ಮುಚ್ಚಿಡುತ್ತಾರೆ. ತಂದೆಯು ತಿಳಿಸುತ್ತಾರೆ – ಯಾವುದೇ ತಪ್ಪಾದರೆ ಕೊಡಲೇ ತಿಳಿಸುವುದರಿಂದ ಮುಂದಿನದಕ್ಕಾಗಿ ಯುಕ್ತಿಯು ಸಿಗುವುದು. ಇಲ್ಲದಿದ್ದರೆ ವೃದ್ಧಿಯಾಗುತ್ತಾ ಹೋಗುತ್ತದೆ. ಕಾಮ ಮಹಾಶತ್ರುವಾಗಿದೆ. ಬಾಬಾ, ಮಾಯೆಯ ಬಹಳ ಹೋರಾಟಗಳು ಆಗುತ್ತವೆ ಎಂದು ತಂದೆಗೆ ಪತ್ರವನ್ನು ಬರೆಯುತ್ತಾರೆ. ಮಾಯೆಯಿಂದ ಸುರಕ್ಷಿತವಾಗಿರಲು ಅಂತಹ ಸದಾ ಯೋಗವು ಯಾರದೂ ಇಲ್ಲ. ಬಹಳ ದೇಹಾಭಿಮಾನವು ಬರುತ್ತದೆ, ಅನೇಕರು ಮಾಯೆಯ ಪೆಟ್ಟು ತಿನ್ನುತ್ತಾರೆ. ತಂದೆಯ ಬಳಿ ಎಲ್ಲಾ ಕಡೆಯಿಂದ ಸಮಾಚಾರ ಬರುತ್ತಿರುತ್ತದೆ, ಪತ್ರಿಕೆಗಳಲ್ಲಿಯೂ ಎಷ್ಟೊಂದು ಉಲ್ಟಾ-ಸುಲ್ಟಾ ಹಾಕಿ ಬಿಡುತ್ತಾರೆ. ಇತ್ತೀಚೆಗೆ ಮನುಷ್ಯರು ಮಾತುಗಳನ್ನು ಎಷ್ಟು ಬೇಕಾದರೂ ಮಾಡಬಲ್ಲರು. ತಮೋಪ್ರಧಾನವಲ್ಲವೆ. ವ್ಯಾಸ ಮಹರ್ಷಿಗೆ ಯಾವಾಗ ರಜೋ ಬುದ್ಧಿಯಿತ್ತು ಆಗ ಯಾವ-ಯಾವ ಮಾತುಗಳನ್ನು ಕುಳಿತು ಬರೆದಿದ್ದಾರೆ. ತಂದೆಯು ಮಕ್ಕಳಿಗೆ ತಿಳಿಸುವುದೇನೆಂದರೆ ಹೇಳಿಕೆ-ಕೇಳಿಕೆ ಮಾತುಗಳಲ್ಲಿ ಎಂದೂ ವಿಶ್ವಾಸವನ್ನಿಡಬೇಡಿ. ಮುನಿಸಿಕೊಳ್ಳಬೇಡಿ. ಇಂತಹವರು ಹೀಗೆ ಹೇಳಿದರು, ಹೀಗೆ ಮಾಡಿದರು…. ಎಂದು ತಲೆಯೇ ತಿರುಗಿ ಬಿಡುತ್ತದೆ. ತಮೋಪ್ರಧಾನ ಪ್ರಪಂಚವಾಗಿದೆ, ಮಾಯೆಯು ಬೀಳಿಸುವ ಪ್ರಯತ್ನ ಪಡುತ್ತದೆಯೆಂದು ತಿಳಿದುಕೊಳ್ಳುವುದೇ ಇಲ್ಲ. ಯಾರಾದರೂ ಸುಳ್ಳು ಮಾತುಗಳನ್ನು ತಿಳಿಸಿದರೆ ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ತೆಗೆದುಬಿಡಿ. ಅನ್ಯರಿಗೂ ಇದೇ ಸಂದೇಶವನ್ನು ಕೊಡುತ್ತಾ ಇರಿ. ತಂದೆಯು ತಿಳಿಸುತ್ತಾರೆ – ನಾನು ಸಂದೇಶವನ್ನು ತೆಗೆದುಕೊಂಡು ಬರುತ್ತೇನೆ, ಈಗ ಹೇ ಆತ್ಮರೇ, ಶ್ರೀಮತದಂತೆ ನಡೆಯಿರಿ, ನನ್ನ ಸಂದೇಶ ನೀಡಿ, ಕೇವಲ ನನ್ನೊಬ್ಬನನ್ನೇ ನೆನಪು ಮಾಡಿರಿ. ಯಾರು ನೆನಪು ಮಾಡುವರೋ ಅವರು ತಮ್ಮದೇ ಕಲ್ಯಾಣ ಮಾಡಿಕೊಳ್ಳುವರು. ಆತ್ಮವೇ ನೆನಪು ಮಾಡಬೇಕಾಗಿದೆ, ಆತ್ಮವೇ ಮರೆಯುತ್ತದೆ. ಈಗ ತಂದೆಯ ಶ್ರೀಮತ ಸಿಗುತ್ತದೆ, ಇದರಲ್ಲಿ ಆಶೀರ್ವಾದ ಅಥವಾ ದಯೆ ಇತ್ಯಾದಿಗಳೇನನ್ನೂ ಕೇಳುವಂತಿಲ್ಲ. ಕೇವಲ ತಂದೆಯನ್ನು ನೆನಪು ಮಾಡಬೇಕು ಮತ್ತು ಅನ್ಯ ಮಾತುಗಳನ್ನು ಕೇಳುವ ಅವಶ್ಯಕತೆಯೇ ಇರುವುದಿಲ್ಲ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನಂತೂ ಕೇಳಿದಿರಿ, ಇದರಲ್ಲಿ ಯಾವುದೇ ಕಿರಿಕಿರಿ ಮಾತಿಲ್ಲ. ಘೋರ ಅಂಧಕಾರದಲ್ಲಿಯೇ ತಂದೆಯು ಬರುತ್ತಾರೆ ಆದ್ದರಿಂದ ಶಿವರಾತ್ರಿಯನ್ನು ಆಚರಿಸುತ್ತಾರೆ. ಕೃಷ್ಣನ ಜನ್ಮವನ್ನೂ ಸಹ ರಾತ್ರಿಯಲ್ಲಿಯೇ ಆಚರಿಸುತ್ತಾರೆ. ಮಂದಿರಗಳಲ್ಲಿ ರಾತ್ರಿಯ ಸಮಯ ಪಾಯಸ, ಪೂರಿ ಇತ್ಯಾದಿಗಳು ತಯಾರಾಗುತ್ತದೆ ಅಂದಮೇಲೆ ಶಿವನಿಗಾಗಿ ಏನು ಮಾಡಿಸುತ್ತೀರಿ, ಅವರಂತೂ ನಿರಾಕಾರನಾಗಿದ್ದಾರೆ. ಯಾರಿಗೂ ಅರ್ಥವಾಗುವುದಿಲ್ಲ, ತಂದೆಯು ಯಾವ ಘಳಿಗೆ ಬರುತ್ತಾರೆ ಮತ್ತು ಹೇಗೆ ಹೊರಟು ಹೋಗುತ್ತಾರೆ! ಸದಾ ಸವಾರಿ ಮಾಡುವುದಿಲ್ಲ. ಬರುತ್ತಾರೆ ಮತ್ತೆ ಹೊರಟು ಹೋಗುತ್ತಾರೆ. ಈಗ ನೀವು ಮಕ್ಕಳು ಕುಳಿತುಕೊಂಡಿದ್ದೀರಿ, ನಾವು ಶಿವನ ಮೊಮ್ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯು ಸಿಗುತ್ತದೆ. ಬ್ರಹ್ಮಾರವರಿಗೂ ಸಹ ಅವರಿಂದಲೇ ಆಸ್ತಿಯು ಸಿಗುತ್ತದೆ, ಇವರೂ ಮನುಷ್ಯನಲ್ಲವೆ. ಸದ್ಗತಿಯಲ್ಲಿ ಮೊದಲನಂಬರಿನವರು ಈ ಶ್ರೀಕೃಷ್ಣನಾಗಿದ್ದಾನೆ. ಕೃಷ್ಣನು ಎಲ್ಲರಿಗೆ ಪ್ರಿಯವಾಗಿದ್ದಾನೆ, ಸತೋಪ್ರಧಾನ ಬಾಲ್ಯಾವಸ್ಥೆಯಲ್ಲವೆ. ಸ್ವಲ್ಪ ದೊಡ್ಡವರಾದ ಮೇಲೆ ಅವರಿಗೆ ಸತೋ ಎಂದು ಹೇಳಲಾಗುತ್ತದೆ ಮತ್ತೆ ರಜೋ, ತಮೋ…. ಶ್ರೀ ಕೃಷ್ಣ-ರಾಧೆಯೇ ಮತ್ತೆ ಲಕ್ಷ್ಮೀ-ನಾರಾಯಣರಾಗುತ್ತಾರೆ. ಯಾರಿಗೆ ತಂದೆಯು ಜ್ಞಾನ ಕೊಟ್ಟಿದ್ದಾರೆಯೋ ಅವರಿಗೇ ಕೊಡುತ್ತಾರೆ. ಭಾರತದಲ್ಲಿಯೇ ದೇವಿ-ದೇವತೆಗಳು ಬಂದು ಹೋಗಿದ್ದಾರೆ ಆದ್ದರಿಂದ ಮಂದಿರಗಳು ಭಾರತದಲ್ಲಿಯೇ ಬಹಳಷ್ಟಿವೆ. ಕ್ರಿಶ್ಚಿಯನ್ನರ ಚರ್ಚ್ನಲ್ಲಿ ಕ್ರೈಸ್ಟ್ನ್ನು ನೋಡುತ್ತೀರಿ ಆದರೆ ದೇವತೆಗಳ ಮಂದಿರಗಳು ನೋಡಿ, ಎಷ್ಟಿವೆ! ತಂದೆಯು ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಅಥವಾ ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಬಂದಿದ್ದಾರೆ. ನಾವು ತಂದೆಯನ್ನು ನೆನಪು ಮಾಡಿ ಪಾವನರಾಗುತ್ತಿದ್ದೇವೆ. ತಂದೆಯ ಜೊತೆ ನಾವೂ ಸಹ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ. ಹೇಗೆ ನಾವು ತಂದೆಯ ಜೊತೆ ಬಂದಿದ್ದೇವೆ, ಭಕ್ತಿಮಾರ್ಗದಲ್ಲಿ ದೇವತೆಗಳ ಮಂದಿರ ಮೂರ್ತಿಗಳಿಗಾಗಿ ಎಷ್ಟೊಂದು ಖರ್ಚು ಮಾಡಿಸುತ್ತಾರೆ! ಉತ್ಪತ್ತಿ ಮಾಡಿ, ಪಾಲನೆ ಮಾಡಿ ಮತ್ತೆ ಅವರೇ ವಿನಾಶ ಮಾಡಿ ಬಿಡುತ್ತಾರೆ. 9 ದಿನಗಳಲ್ಲಿಯೇ ಮುಳುಗಿಸಿ ಬಿಡುತ್ತಾರೆ. ಆ ಮೂರ್ತಿಗಳಲ್ಲಿ ಬಹಳ ಪ್ರೀತಿಯಿರುತ್ತದೆ, ಕಲ್ಕತ್ತಾದಲ್ಲಿ ನವರಾತ್ರಿಯನ್ನು ಬಹಳ ಚೆನ್ನಾಗಿ ಆಚರಿಸುತ್ತಾರೆ. ಇವೆಲ್ಲಾ ಮಾತುಗಳನ್ನು ನೋಡಿ ಈಗ ಆಶ್ಚರ್ಯವೆನಿಸುತ್ತದೆ. ಮೊದಲಂತೂ ನಾವೂ ಸಹ ಪಾತ್ರಧಾರಿಯಾಗಿದ್ದೆವು, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ಎಷ್ಟು ಅಂಧಶ್ರದ್ಧೆಯಿದೆ! ರಾಮಾಯಣದೊಂದಿಗೆ ಎಷ್ಟು ಪ್ರೀತಿಯಿರುತ್ತದೆ, ಆ ಮಾತುಗಳನ್ನು ಕೇಳುತ್ತಾ ಕಣ್ಣೀರು ಹಾಕುತ್ತಾರೆ. ಇದೆಲ್ಲವೂ ಭಕ್ತಿಮಾರ್ಗವಾಗಿದೆ, ಇದರಿಂದ ಲಾಭವೇನೂ ಇಲ್ಲ. ತಂದೆಯು ಈಗ ನಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ! ಆದ್ದರಿಂದ ಇದೆಲ್ಲವನ್ನೂ ಕೇಳಿ ಇಲ್ಲಿಯದನ್ನು ಇಲ್ಲಿಯೇ ಮರೆತು ಬಿಡಬೇಡಿ. ಎಲ್ಲಾ ಮಾತುಗಳನ್ನು ನೆನಪಿಟ್ಟುಕೊಳ್ಳಿರಿ. ರಿಫ್ರೆಶ್ ಆಗಿ ಹೋಗಿರಿ, ತಮ್ಮನ್ನು ಆತ್ಮನೆಂದು ತಿಳಿದು ದೇಹ ಸಹಿತ ಏನೆಲ್ಲವನ್ನೂ ನೋಡುತ್ತೀರೋ ಎಲ್ಲವನ್ನೂ ಮರೆಯಿರಿ. ಇದೆಲ್ಲವೂ ಸ್ಮಶಾನವಾಗಿದೆ. ದೆಹಲಿಯಲ್ಲಿ ಬಿರ್ಲಾ ಮಂದಿರದಲ್ಲಿ ಬರೆಯಲ್ಪಟ್ಟಿದೆ – ಭಾರತವು ಪರಿಸ್ಥಾನವಾಗಿತ್ತು, ಅದನ್ನು ಧರ್ಮರಾಜನು ಸ್ಥಾಪನೆ ಮಾಡಿದ್ದರು. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಈ ಪ್ರಪಂಚವು ಸ್ಮಶಾನವಾಗಲಿದೆ.

ತಂದೆಯು ತಿಳಿಸುತ್ತಾರೆ – ಎಲ್ಲರೂ ಕಾಮ ಚಿತೆಯನ್ನೇರಿ ಸುಟ್ಟು ಹೋಗಿದ್ದಾರೆ. ಕ್ರೋಧವು ಚಿತೆಯೆಂದು ಹೇಳಲಾಗುವುದಿಲ್ಲ, ಕಾಮ ಚಿತೆಯೆಂದು ಹೇಳಲಾಗುತ್ತದೆ. ಅದರಲ್ಲಿಯೂ ಹಗುರ ನಶೆ, ಅರ್ಧ ನಶೆಯೂ ಇರುತ್ತದೆ. ಮಕ್ಕಳಿಗೇ ತಂದೆಯು ಕುಳಿತು ತಿಳಿಸುತ್ತಾರೆ – ಮನೆಯಲ್ಲಿ ಒಂದುವೇಳೆ ಯಾರಾದರೂ ಕುಪುತ್ರರಾಗಿದ್ದರೆ ತಂದೆಯ ಗೌರವವನ್ನು ಕಳೆಯುತ್ತೀರಿ ಎಂದು ಹೇಳುತ್ತಾರಲ್ಲವೆ. ತಂದೆಯ ಗೌರವವು ಕಳೆಯುತ್ತದೆಯಲ್ಲವೆ. ಬೇಹದ್ದಿನ ತಂದೆಯೂ ಸಹ ಹೇಳುತ್ತಾರೆ – ನೀವು ಮುಖ ಕಪ್ಪು ಮಾಡಿಕೊಂಡರೆ ಬ್ರಾಹ್ಮಣ ಕುಲಭೂಷಣ ಯಾರು ದೇವತೆಯಾಗುವರೋ ಅವರ ಹೆಸರನ್ನು ಕೆಡಿಸುತ್ತೀರಿ. ನೀವು ಮಕ್ಕಳಿಗೆ ತಿಳಿದಿದೆ – ನಾವು ಪವಿತ್ರತೆಯ ಬಲದಿಂದಲೇ ಭಾರತವನ್ನು ಪುನಃ ಶ್ರೇಷ್ಠಾಚಾರಿ ದೇವತೆಯನ್ನಾಗಿ ಮಾಡುತ್ತೇವೆ. ನಿಮಗಾಗಿ ಇದು ಸಾಮಾನ್ಯ ಮಾತಾಗಿದೆ. ನೋಡುತ್ತೀರಿ, ಮಹಾಭಾರತ ಯುದ್ಧವು ನಿಂತಿದೆ, ಇದರಿಂದಲೇ ಸ್ವರ್ಗದ ಬಾಗಿಲು ತೆರೆಯುವುದು. ಶಾಸ್ತ್ರಗಳಲ್ಲಿ ಮಹಾಭಾರತ ಯುದ್ಧವನ್ನಂತೂ ತೋರಿಸಿದ್ದಾರೆ, ಅದರ ನಂತರ ಏನಾಯಿತು ಎಂಬುದನ್ನು ತೋರಿಸಿಲ್ಲ. ಪ್ರಳಯವಾಯಿತೆಂದು ಹೇಳುತ್ತಾರೆ, ಒಂದು ಕಡೆ ಕೃಷ್ಣನನ್ನು ತಾಯಿಯ ಗರ್ಭದಿಂದ ಜನ್ಮ ಪಡೆದನೆಂದು ತೋರಿಸುತ್ತಾರೆ, ಇನ್ನೊಂದು ಕಡೆ ಆಲದ ಎಲೆಯ ಮೇಲೆ ತೇಲಿ ಬಂದನೆಂದು ಹೇಳುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಅಲ್ಲಂತೂ ಗರ್ಭ ಮಹಲಿನಲ್ಲಿ ಬಹಳ ವಿಶ್ರಾಂತಿಯಿಂದ ಇರುತ್ತಾರೆ ಬಾಕಿ ಸಾಗರದಲ್ಲಿ ಎಲೆಯ ಮೇಲೆ ಬರಲು ಸಾಧ್ಯವಿಲ್ಲ. ಇದು ಅಸಂಭವವಾಗಿದೆ. ಇದೆಲ್ಲವೂ ನಾಟಕದಲ್ಲಿ ಮಾಡಲ್ಪಟ್ಟಿದೆ, ಅದನ್ನು ನೀವು ತಿಳಿದುಕೊಂಡಿದ್ದೀರಿ. ಕಲ್ಪ-ಕಲ್ಪವೂ ಈ ರೀತಿ ಆಗಿಯೇ ಆಗುತ್ತದೆ. ಈಗ ಮಕ್ಕಳು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ ಮತ್ತು ಅನ್ಯರ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಮೂಲ ಮಾತು ಇದಾಗಿದೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಅವರಿಗೇ ಸ್ವರ್ಗದ ರಚಯಿತ ತಂದೆಯೆಂದು ಹೇಳಲಾಗುತ್ತದೆ ಅಂದಮೇಲೆ ನಾವು ಮಕ್ಕಳು ಸ್ವರ್ಗದ ಮಾಲೀಕರಾಗಬೇಕಲ್ಲವೆ. ಶಿವ ಜಯಂತಿಯನ್ನೂ ಸಹ ಭಾರತದಲ್ಲಿಯೇ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಭಾರತಕ್ಕೆ ತಂದೆಯು ಏನನ್ನು ಕೊಟ್ಟಿರಬೇಕು. ಈಗ ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆ. ತಂದೆಯೇ ಸದ್ಗತಿದಾತನಾಗಿದ್ದಾರೆ. ಜ್ಞಾನ ಸಾಗರ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ಈಗ ತಂದೆಯು ನಿಮಗೆ ಜ್ಞಾನವನ್ನು ತಿಳಿಸುತ್ತಿದ್ದಾರೆ. 5000 ವರ್ಷಗಳ ನಂತರ ಪುನಃ ಇಲ್ಲಿಯೇ ಬರುತ್ತೀರಿ. ಮಕ್ಕಳಿಗೆ ನಿಶ್ಚಯವಿದೆ – ಯಾರ್ಯಾರು ಈ ಬ್ರಾಹ್ಮಣ ಕುಲದವರಾಗಿರುವರೋ ಅವರು ಬರ ತೊಡಗುವರು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶ್ರೀಮತದಂತೆ ತನ್ನ ಮತ್ತು ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಯಾರಾದರೂ ಅಸತ್ಯ ಮಾತುಗಳನ್ನು ತಿಳಿಸಿದರೆ ಕೇಳಿಯೂ ಕೇಳದಂತಿರಬೇಕು. ಅದರಮೇಲೆ ಮುನಿಸಿಕೊಳ್ಳಬಾರದು.

2. ಎಂದೂ ಕೂಡ ದೇವತೆಯಾಗುವಂತಹ ಬ್ರಾಹ್ಮಣ ಕುಲಭೂಷಣರ ಹೆಸರು ಕೆಡಬಾರದು – ಇದರ ಮೇಲೆ ಗಮನ ಕೊಡಬೇಕಾಗಿದೆ. ಎಂದೂ ಯಾವುದೇ ಉಲ್ಟಾ ಕರ್ಮ ಮಾಡಬಾರದು. ಹಿಂದಿನ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಯಾವಾಗ ಆತ್ಮನ ಸಂಪೂರ್ಣ ಅಥವಾ ಸಂಪನ್ನ ಸ್ಥಿತಿಯಾಗುತ್ತದೆಯೋ ಆಗ ಹೊಗಳಿಕೆ-ತೆಗಳಿಕೆ, ಜಯ-ಪರಾಜಯ, ಸುಖ-ದುಃಖ, ಎಲ್ಲದರಲ್ಲಿಯೂ ಸಮಾನತೆ ಇರುತ್ತದೆ. ದುಃಖದಲ್ಲಿಯೂ ಚಹರೆ ಅಥವಾ ಮಸ್ತಕದಲ್ಲಿ ದುಃಖದ ಪ್ರಕಂಪನಗಳ ಬದಲು ಸುಖ ಅಥವಾ ಹರ್ಷವಾಗಿರುವ ಪ್ರಕಂಪನಗಳು ಕಾಣಿಸಲಿ, ತೆಗಳಿಕೆ ಕೇಳಿಸಿಕೊಳ್ಳುತ್ತಿದ್ದರೂ ಇದು ನಿಂದನೆ ಅಲ್ಲ, ಸಂಪೂರ್ಣ ಸ್ಥಿತಿಯನ್ನು ಪರಿಪಕ್ವ ಮಾಡುವುದಕ್ಕಾಗಿ ಮಹಿಮಾ ಯೋಗ ಶಬ್ಧವಾಗಿದೆ ಎಂಬ ಅನುಭವವಾಗಲಿ, ಇಂತಹ ಸಮಾನತೆ ಇದ್ದಾಗಲೇ ತಂದೆಯ ಸಮಾನ ಎಂದು ಹೇಳಲಾಗುವುದು. ವೃತ್ತಿಯಲ್ಲಿ ಸ್ವಲ್ಪವೂ – ಇವರು ಶತ್ರುವಾಗಿದ್ದಾರೆ, ನಿಂದನೆ ಮಾಡುವವರು ಆಗಿದ್ದಾರೆ ಮತ್ತು ಇವರು ಮಹಿಮೆ ಮಾಡುವವರೆಂದು ಬರಬಾರದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top