23 August 2021 KANNADA Murli Today | Brahma Kumaris

Read and Listen today’s Gyan Murli in Kannada

August 22, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡಿಕೊಳ್ಳಿ - ನಾವು ಬಹಳ-ಬಹಳ ಮಧುರರಾಗಬೇಕಾಗಿದೆ, ಎಲ್ಲರನ್ನೂ ಸುಖದ ಪ್ರೀತಿಯ ದೃಷ್ಟಿಯಿಂದ ನೋಡಬೇಕಾಗಿದೆ, ಯಾರ ನಾಮ-ರೂಪದಲ್ಲಿಯೂ ಸಿಲುಕಬಾರದು”

ಪ್ರಶ್ನೆ:: -

ಯೋಗದ ಸಿದ್ಧಿಯು ಏನಾಗಿದೆ? ಪಕ್ಕಾ ಯೋಗಿಗಳ ಲಕ್ಷಣಗಳನ್ನು ತಿಳಿಸಿರಿ.

ಉತ್ತರ:-

ಎಲ್ಲಾ ಕರ್ಮೇಂದ್ರಿಯಗಳು ಸಂಪೂರ್ಣ ಶಾಂತ, ಶೀತಲವಾಗಿ ಬಿಡಲಿ ಇದು ಯೋಗದ ಸಿದ್ಧಿಯಾಗಿದೆ. ಪಕ್ಕಾ ಯೋಗಿ ಮಕ್ಕಳಲ್ಲಿ ಕರ್ಮೇಂದ್ರಿಯಗಳ ಸ್ವಲ್ಪವೂ ಚಂಚಲತೆಯಿರುವುದಿಲ್ಲ. ಯಾವುದೇ ದೇಹಧಾರಿಯಲ್ಲಿ ತಮ್ಮ ಕಣ್ಣುಗಳು ಮುಳುಗುವುದಿಲ್ಲ. ಮಧುರ ಮಕ್ಕಳೇ, ನೀವೀಗ ಯುವಕರಲ್ಲ, ನಿಮ್ಮದು ವಾನಪ್ರಸ್ಥ ಸ್ಥಿತಿಯಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ……

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಇದರ ಅರ್ಥವನ್ನು ಹೃದಯದಲ್ಲಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ ಮತ್ತು ಖುಷಿಯಲ್ಲಿ ಬರಬೇಕಾಗಿದೆ ಏಕೆಂದರೆ ಇವು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿವೆ. ಈ ಹೊಸ ಮಾತುಗಳನ್ನು ಈಗ ಕೇಳಬೇಕಾಗಿದೆ. ಮಕ್ಕಳು ಈಗ ತಿಳಿದುಕೊಂಡಿದ್ದೀರಿ, ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರು ಯಾವುದೇ ಮನುಷ್ಯರಾಗಿರಲು ಸಾಧ್ಯವಿಲ್ಲ, ನೀವು ಈ ಮಾತುಗಳನ್ನು ಕೇಳಿದಾಗ ತಿಳಿದುಕೊಳ್ಳುತ್ತೀರಿ, ಇವು 5000 ವರ್ಷಗಳ ಹಿಂದಿನ ಹಳೆಯ ಮಾತುಗಳಾಗಿವೆ, ಅವನ್ನು ಪುನಃ ಹೊಸದಾಗಿ ತಿಳಿಸಲಾಗುತ್ತದೆ ಅಂದಾಗ ಹಳೆಯದರಿಂದ ಹೊಸದು, ಹೊಸದರಿಂದ ಹಳೆಯದಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, 5000 ವರ್ಷಗಳ ಹಿಂದಿನ ಅದೇ ಮಾತುಗಳನ್ನು ತಂದೆಯು ಹೊಸದಾಗಿ ತಿಳಿಸುತ್ತಾರೆ. ಅವೇ ಮಾತುಗಳಾಗಿವೆ, ಏತಕ್ಕಾಗಿ ತಿಳಿಸುತ್ತಾರೆ? ಹೊಸ ಪ್ರಪಂಚದ ಆಸ್ತಿಯನ್ನು ಪಡೆಯಲು. ಇದರಲ್ಲಿ ಜ್ಞಾನ ನೃತ್ಯವನ್ನು ಮಾಡಲಾಗುತ್ತದೆ. ಭಟ್ಟಿಯಲ್ಲಿಯೂ ಬಹಳ ನೃತ್ಯ ಮಾಡುತ್ತಾರೆ. ನಾಲ್ಕೂ ಕಡೆ ಸುತ್ತುತ್ತಾ ನರ್ತನ ಮಾಡುತ್ತಾರೆ. ಜ್ಞಾನದ ನರ್ತನವಂತೂ ಬಹಳ ಸಹಜವಾಗಿದೆ. ಆ ನರ್ತನದಲ್ಲಿ ಕರ್ಮೇಂದ್ರಿಯಗಳಿಂದ ಮಾಡಲಾಗುತ್ತದೆ, ಪರಿಶ್ರಮ ಪಡಬೇಕಾಗುತ್ತದೆ. ಇದಂತೂ ಕೇವಲ ಒಳಗೆ ಜ್ಞಾನ ನರ್ತನವು ನಡೆಯುತ್ತದೆ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬ ಜ್ಞಾನವಿದೆ, ಇದರಲ್ಲಿ ಏನೂ ಕಷ್ಟವಿಲ್ಲ. ಹಾ! ನೆನಪಿನಲ್ಲಿ ಪರಿಶ್ರಮವಾಗುತ್ತದೆ, ಕೆಲವು ಮಕ್ಕಳು ಅನುತ್ತೀರ್ಣರಾಗಿ ಬಿಡುತ್ತಾರೆ. ಒಂದಲ್ಲ ಒಂದು ಕಡೆ ಕೆಳಗೆ ಬೀಳುತ್ತಾರೆ. ಎಲ್ಲದಕ್ಕಿಂದ ಮುಖ್ಯ ಮಾತೇನೆಂದರೆ ನಾಮ-ರೂಪದಲ್ಲಿ ಸಿಲುಕಬಾರದು. ಸ್ತ್ರೀ-ಪುರುಷರ ಕಾಮಕ್ಕೆ ವಶರಾಗಿ ನಾಮ-ರೂಪದಲ್ಲಿ ಸಿಲುಕುತ್ತಾರಲ್ಲವೆ. ಕ್ರೋಧವು ನಾಮ-ರೂಪದಲ್ಲಿ ಸಿಲುಕಿಸುವುದಿಲ್ಲ, ಮೊಟ್ಟ ಮೊದಲನೆಯದು ಇದಾಗಿದೆ. ಇದರ ಬಹಳ ಸಂಭಾಲನೆ ಮಾಡಬೇಕಾಗಿದೆ, ಯಾರದೇ ನಾಮ-ರೂಪದಲ್ಲಿ ಸಿಲುಕಬಾರದು, ತನ್ನನ್ನು ಆತ್ಮನೆಂದು ತಿಳಿಯಬೇಕಾಗಿದೆ. ನಾವಾತ್ಮರು ಅಶರೀರಿಯಾಗಿ ಬಂದಿದ್ದೆವು ಈಗ ಅಶರೀರಿಯಾಗಿ ಹೋಗಬೇಕಾಗಿದೆ. ಈ ಶರೀರದ ಪರಿವೆಯನ್ನು ಕಳೆಯಬೇಕಾಗಿದೆ. ಈ ನಾಮ-ರೂಪದಲ್ಲಿ ಸಿಲುಕುವುದು ಬಹಳ ಕೆಟ್ಟ ಖಾಯಿಲೆಯಾಗಿದೆ. ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಾರೆ. ಕೆಲಕೆಲವರು ಈ ಮಾತನ್ನು ತಿಳಿದುಕೊಳ್ಳುವುದಿಲ್ಲ, ನಾಮ-ರೂಪದಲ್ಲಿ ಸಿಲುಕಬೇಡಿ ಎಂದು ತಂದೆಯು ಸುಮ್ಮನೆ ಹೇಳುತ್ತಾರೆ ಎಂದು ತಿಳಿದುಕೊಳ್ಳಬೇಡಿ ಆದರೆ ಇದು ಗುಪ್ತ ಖಾಯಿಲೆಯಾಗಿದೆ. ಆದ್ದರಿಂದ ಪ್ರಿಯತಮ-ಪ್ರಿಯತಮೆಯರನ್ನು ಅಥವಾ ತಂದೆಯು ಮಕ್ಕಳನ್ನು ಜಾಗೃತಗೊಳಿಸುತ್ತಾರೆ. ಮಕ್ಕಳೇ, ಜಾಗೃತರಾಗಿರಿ ಈಗ ಪುನಃ ಕಲಿಯುಗದ ನಂತರ ಸತ್ಯಯುಗವು ಬರಲಿದೆ. ತಂದೆಯು ಜ್ಯೋತಿಯನ್ನು ಜಾಗೃತ ಮಾಡಲು ಬರುತ್ತಾರೆ, ಮನುಷ್ಯರು ಸತ್ತಾಗ ಅವರ ಜ್ಯೋತಿಯನ್ನು ಬೆಳಗಿಸುತ್ತಾರೆ. ಆ ದೀಪವು ನಂದಿ ಹೋಗದಿರಲಿ, ಆತ್ಮಕ್ಕೆ ಅಂಧಕಾರವಾಗದಿರಲಿ ಎಂದು ಬಹಳ ಸಂಭಾಲನೆ ಮಾಡುತ್ತಾರೆ. ವಾಸ್ತವದಲ್ಲಿ ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಆತ್ಮವಂತೂ ಸೆಕೆಂಡಿನಲ್ಲಿ ಹೊರಟು ಹೋಗುತ್ತದೆ, ಕೆಲವರು ಜ್ಯೋತಿಯನ್ನೂ ಭಗವಂತನೆಂದು ತಿಳಿದುಕೊಳ್ಳುತ್ತಾರೆ. ಬ್ರಹ್ಮ್ತತ್ವವನ್ನು ದೊಡ್ಡ ಜ್ಯೋತಿಯೆಂದು ತಿಳಿಯುತ್ತಾರೆ. ಬ್ರಹ್ಮ ಸಮಾಜಿಗಳ ಮಂದಿರವಿರುತ್ತದೆ, ಅಲ್ಲಿ ಹಗಲು-ರಾತ್ರಿ ಜ್ಯೋತಿಯು ಬೆಳಗುತ್ತದೆ. ಎಷ್ಟೊಂದು ಖರ್ಚಾಗುತ್ತದೆ! ಎಣ್ಣೆಯು ವ್ಯರ್ಥವಾಗಿ ಹೋಗುತ್ತದೆ. ಇಲ್ಲಿ ಅದೇನೂ ಹಾಕುವಂತಿಲ್ಲ, ನೆನಪಿನ ಎಣ್ಣೆಯು ಕೆಲಸ ಮಾಡುತ್ತದೆ. ನೆನಪು ಎಂಬುದೇ ಎಣ್ಣೆಯಾಗಿದೆ, ಅಂದಾಗ ಮಧುರಾತಿ ಮಧುರ ಮಕ್ಕಳು ಇದನ್ನು ತಿಳಿದುಕೊಳ್ಳುತ್ತೀರಿ. ಹೊಸ ಮಾತಾಗಿರುವ ಕಾರಣ ಜಗಳವಾಗುತ್ತದೆ. ತಂದೆಯು ಹೇಳುತ್ತಾರೆ-ನಾನು ಮಧುರ ಮಕ್ಕಳ ಬಳಿ ಬರುತ್ತೇನೆ. ಭಾರತದಲ್ಲಿಯೇ ಬರುತ್ತೇನೆ. ತನ್ನ ಜನ್ಮದೇಶವು ಎಲ್ಲರಿಗೆ ಪ್ರಿಯವೆನಿಸುತ್ತದೆಯಲ್ಲವೆ. ತಂದೆಗಂತೂ ಎಲ್ಲರೂ ಪ್ರಿಯರೆನಿಸುತ್ತಾರೆ ಆದರೂ ನಾನು ಭಾರತ ದೇಶದಲ್ಲಿಯೇ ಬರುತ್ತೇನೆ. ಗೀತೆಯಲ್ಲಿ ಒಂದುವೇಳೆ ಕೃಷ್ಣನ ಹೆಸರು ಇಲ್ಲದೇ ಹೋಗಿದ್ದರೆ ಎಲ್ಲಾ ಮನುಷ್ಯ ಮಾತ್ರರೂ ಶಿವ ತಂದೆಯನ್ನು ಒಪ್ಪುತ್ತಿದ್ದರು, ಶಿವನ ಮಂದಿರಕ್ಕೆ ಎಷ್ಟೊಂದು ಮಂದಿ ಹೋಗುತ್ತಾರೆ! ಬಹಳ ದೊಡ್ಡ ಮಂದಿರವು ಸೋಮನಾಥ ಮಂದಿರವಾಗಿತ್ತು, ಈಗಂತೂ ಅನೇಕಾನೇಕ ಮಂದಿರಗಳಾಗಿವೆ. ಎಷ್ಟು ಬೇಹದ್ದಿನ ತಂದೆಯನ್ನು ಒಪ್ಪುವರೋ ಅಷ್ಟು ಕೃಷ್ಣನನ್ನು ಒಪ್ಪುವುದಿಲ್ಲ ಅಂದಾಗ ಈ ಸಮಯದಲ್ಲಿ ಇವರಂತಹ ಪ್ರಿಯವಾದ ವಸ್ತು ಮತ್ತ್ಯಾರೂ ಇಲ್ಲ. ಇದರಲ್ಲಿ ಸಾಕಾರದ ಮಹಿಮೆಯು ಏನೂ ಇಲ್ಲ. ಇದು ನಿರಾಕಾರನ ಮಹಿಮೆಯಾಗಿದೆ, ಯಾರು ಅಭೋಕ್ತನಾಗಿದ್ದಾರೆ. ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವರಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಲ್ಲವೆ.

ಇಂದು ನಾಳೆ ಎನ್ನುತ್ತಾ-ಎನ್ನುತ್ತಾ ಕಾಲವು ಕಬಳಿಸಿ ಬಿಡುವುದು. ಸಮಯವು ಇನ್ನು ಸ್ವಲ್ಪವೇ ಇದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ. ಅಭಿಪ್ರಾಯವನ್ನು ಬರೆಯುವಾಗ ಇದನ್ನೂ ಸಹ ತಿಳಿಸಬೇಕಾಗಿದೆ – ಯಾವಾಗ ಅವರು ಬೇಹದ್ದಿನ ತಂದೆಯಾಗಿದ್ದಾರೆ ಎಂಬುದನ್ನು ನಿಶ್ಚಯ ಮಾಡುತ್ತೀರಿ ಅಂದಮೇಲೆ ಆ ತಂದೆಯಿಂದ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡಿರಿ, ಇಲ್ಲದಿದ್ದರೆ ಹೊರಗೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ತಂದೆಯಂತೂ ಕಲ್ಯಾಣಕಾರಿಯಾಗಿದ್ದಾರೆ. ತಿಳಿಸುತ್ತಾರೆ – ಮಕ್ಕಳೇ, ಈ ಯೋಗದಿಂದಲೇ ನಿಮ್ಮ ಎಲ್ಲಾ ದುಃಖಗಳು 21 ಜನ್ಮಗಳಿಗಾಗಿ ದೂರವಾಗಲಿವೆ, ಕನ್ಯೆಯರು ಮನೆಯಲ್ಲಿಯೂ ಸಹ ತಿಳಿಸುತ್ತಾ ಇರಿ – ಈಗ ಎಲ್ಲಾ ದುಃಖಗಳನ್ನು ದೂರ ಮಾಡುವಂತಹ ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಅವಶ್ಯವಾಗಿ ಪವಿತ್ರರಾಗಿರಬೇಕಾಗಿದೆ. ಮೂಲಮಾತು ಪವಿತ್ರತೆಯದಾಗಿದೆ. ಎಷ್ಟೇಷ್ಟು ನೆನಪಿನಲ್ಲಿರುತ್ತೀರೊ ಅಷ್ಟು ಇಂದ್ರಿಯಗಳು ಶಾಂತವಾಗಿ ಬಿಡುವುದು. ಎಲ್ಲಿಯವರೆಗೂ ಯೋಗದ ಸಿದ್ಧಿಯು ಪೂರ್ಣವಾಗುವುದಿಲ್ಲವೋ ಅಲ್ಲಿಯವರೆಗೆ ಇಂದ್ರಿಯಗಳು ಶಾಂತವಾಗುವುದಿಲ್ಲ, ಪ್ರತಿಯೊಬ್ಬರೂ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ಕಾಮ ವಿಕಾರವು ನನಗೆ ಮೋಸ ಮಾಡುತ್ತಿಲ್ಲವೆ? ಒಂದುವೇಳೆ ನಾನು ಪಕ್ಕಾ ಯೋಗಿಯಾಗಿದ್ದೇನೆ ಎಂಬುದಾದರೆ ಯಾವುದೇ ಚಂಚಲತೆಯಿರಬಾರದು. ಇದು ವಾನಪ್ರಸ್ಥ ಸ್ಥಿತಿಯಾಗಿದೆ. ತಂದೆಯನ್ನೇ ನೆನಪು ಮಾಡುತ್ತಾ ಇರಬೇಕಾಗಿದೆ. ತಂದೆಯು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ – ಯಾವಾಗ ನೀವು ಒಳ್ಳೆಯ ಯೋಗಿಗಳಾಗುವಿರೋ ಆಗ ಎಲ್ಲಿಯೂ ನಿಮ್ಮ ಕಣ್ಣುಗಳು ಮುಳುಗುವುದಿಲ್ಲ ಮತ್ತು ನಿಮ್ಮ ಇಂದ್ರಿಯಗಳು ಶಾಂತವಾಗುವುವು. ಮುಖ್ಯವಾದವು ಈ ಕಣ್ಣುಗಳಾಗಿವೆ, ಎಲ್ಲರಿಗೆ ಮೋಸ ಮಾಡುತ್ತವೆ. ಯೋಗದಲ್ಲಿ ಬಹಳ ಒಳ್ಳೆಯ ಸ್ಥಿತಿಯು ಆಗುತ್ತದೆಯೆಂದರೆ ಆಗ ನಾವು ಹೇಗೆ ಯವ್ವನದಲ್ಲಿಯೂ ವಾನಪ್ರಸ್ಥ ಸ್ಥಿತಿಗೆ ಬಂದು ಬಿಟ್ಟಿದ್ದೇವೆ ಎಂಬ ಅನುಭವವಾಗುವುದು. ತಂದೆಯು ತಿಳಿಸುತ್ತಾರೆ – ಕಾಮ ಮಹಾಶತ್ರುವಾಗಿದೆ ಆದ್ದರಿಂದ ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಶಾಂತವಾಗುವುವು ಮತ್ತು ಸ್ವಭಾವವು ಬಹಳ ಮಧುರವಾಗುವುದು ಮತ್ತು ಅನುಭವವಾಗುವುದು, ನಾನು ಮೊದಲು ಎಷ್ಟು ಕಹಿಯಾಗಿದ್ದೆನು? ಈಗ ಎಷ್ಟೊಂದು ಮಧುರವಾಗಿ ಬಿಟ್ಟೆನು! ತಂದೆಯು ಪ್ರೇಮ ಸಾಗರನಾಗಿದ್ದಾರಲ್ಲವೆ ಅಂದಮೇಲೆ ಮಕ್ಕಳೂ ಆಗಬೇಕಾಗಿದೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ – ಎಲ್ಲರ ಜೊತೆ ಪ್ರೀತಿಯ ದೃಷ್ಟಿಯಿರಲಿ, ಒಂದುವೇಳೆ ಯಾರಿಗಾದರೂ ದುಃಖ ಕೊಡುತ್ತೀರೆಂದರೆ ದುಃಖಿಯಾಗಿ ಸಾಯುವಿರಿ ಆದ್ದರಿಂದ ಬಹಳ ಮಧುರರಾಗಬೇಕಾಗಿದೆ.

ತಂದೆಯು ತಿಳಿಸುತ್ತಾರೆ – ನಾನು ರೂಪ ಭಸಂತನಾಗಿದ್ದೇನೆ ಅಲ್ಲವೆ. ತಂದೆಯಿಂದ ಎಷ್ಟು ಅಮೂಲ್ಯ ಜ್ಞಾನ ರತ್ನಗಳು ಸಿಗುತ್ತವೆ, ಇದರಿಂದ ನೀವು ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ. ಅವರು ಶಂಕರನ ಮುಂದೆ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. ಜೋಳಿಗೆಯನ್ನು ತುಂಬಿಸುವವರು ಶಂಕರನಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಈಗ ನೀವು ತಿಳಿದುಕೊಳ್ಳುತ್ತೀರಿ, ಜ್ಞಾನ ಸಾಗರ ತಂದೆಯು ಜ್ಞಾನ ರತ್ನಗಳಿಂದ ನಾವು ಮಕ್ಕಳ ಜೋಳಿಗೆಯನ್ನು ತುಂಬಿಸುತ್ತಾರೆ. ನೀವೂ ಸಹ ರೂಪ ಭಸಂತರಾಗಿದ್ದೀರಿ, ಪ್ರತಿಯೊಬ್ಬರ ಆತ್ಮವು ರೂಪ ಭಸಂತನಾಗಿದೆ. ತಮ್ಮನ್ನು ನೋಡಿಕೊಳ್ಳುತ್ತಾ ಇರಿ – ನಾವು ಎಷ್ಟು ಜ್ಞಾನ ರತ್ನಗಳನ್ನು ಧಾರಣೆ ಮಾಡಿಕೊಂಡು ಜ್ಞಾನ ನರ್ತನ ಮಾಡುತ್ತೇವೆ ಅಥವಾ ರತ್ನಗಳ ದಾನ ಮಾಡುತ್ತೇವೆ! ಎಲ್ಲದಕ್ಕಿಂತ ಒಳ್ಳೆಯ ರತ್ನವಾಗಿದೆ – ಮನ್ಮನಾಭವ. ತಂದೆಯನ್ನು ನೆನಪು ಮಾಡುವುದರಿಂದ ತಂದೆಯ ಆಸ್ತಿಯನ್ನು ಪಡೆಯುತ್ತೀರಿ. ಹೇಗೆ ತಂದೆಯಲ್ಲಿ ಜ್ಞಾನವು ತುಂಬಲ್ಪಟ್ಟಿದೆಯೋ ಹಾಗೆಯೇ ಮಕ್ಕಳನ್ನೂ ಸಹ ತಂದೆಯು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಗುರುಗಳೂ ಸಹ ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ, ಇವರ ರೂಪವು ಬಿಂದುವಾಗಿದೆ. ನೀವೂ ಸಹ ಬಿಂದುರೂಪರಾಗಿದ್ದೀರಿ, ನಿಮ್ಮನ್ನೇ ತಂದೆಯು ತಮ್ಮಸಮಾನ ಜ್ಞಾನ ಸಾಗರರನ್ನಾಗಿ ಮಾಡುತ್ತಾರೆ. ಎಷ್ಟು ಧಾರಣೆ ಮಾಡುವಿರಿ, ಮಾಡಿಸುವಿರಿ…. ಅವರು ತಿಳಿದುಕೊಳ್ಳಿ, ನಮ್ಮದು ಶ್ರೇಷ್ಠ ಪದವಿಯಾಗಿದೆ ಎಂದು. ಅನೇಕರಿಗೆ ಕಲ್ಯಾಣಕಾರಿಗಳಾಗುತ್ತೀರಲ್ಲವೆ. ಅನೇಕರ ಆಶೀರ್ವಾದವು ಸಿಗುವುದು. ತಂದೆಯು ಪ್ರತಿನಿತ್ಯ ಸೇವೆ ಮಾಡುತ್ತಾರಲ್ಲವೆ. ಹೇಗೆ ಈ ಗುಲ್ಜಾರ್ ಮಗುವು ಎಷ್ಟು ಮಧುರವಾಗಿ ತಿಳಿಸುತ್ತಾರೆ. ಎಲ್ಲರಿಗೆ ಇಷ್ಟವಾಗುತ್ತದೆ. ಇಂತಹ ಬ್ರಾಹ್ಮಣಿ ನಮಗೆ ಸಿಗಲಿ ಎಂದು ಎಲ್ಲರಿಗೂ ಇಷ್ಟವಾಗುತ್ತದೆ. ಈಗ ಒಬ್ಬ ಬ್ರಾಹ್ಮಣಿಯು ಎಲ್ಲಾ ಕಡೆ ಹೋಗಲು ಸಾಧ್ಯವಿಲ್ಲ ಆದರೂ ತಂದೆಯು ತಿಳಿಸುತ್ತಾರೆ – ನಾನು ಚೆನ್ನಾಗಿ ತಿಳಿಸುತ್ತೇನೆಂದು ಯಾರು ತಿಳಿದುಕೊಳ್ಳುವರೋ ಅವರು ಆಲ್ರೌಂಡ್ ಸರ್ವೀಸ್ ಮಾಡಬೇಕು, ತಮಗೇ ಉಮ್ಮಂಗವಿರಬೇಕಾಗಿದೆ. ನಾನು ಸೇವಾಕೇಂದ್ರಗಳನ್ನು ಸುತ್ತಿ ಬರುತ್ತೇನೆ…. ನಾನು ಅನೇಕರ ಕಲ್ಯಾಣ ಮಾಡಬಲ್ಲೆನು, ನನ್ನ ಒಳ್ಳೆಯ ಸುಗಂಧವು ಹರಡುತ್ತದೆಯೆಂದು ಯಾರು-ಯಾರು ತಿಳಿದುಕೊಳ್ಳುವರೋ ಅವರಿಗೆ ಉಮ್ಮಂಗವಿರಬೇಕು- 10-15 ದಿನಗಳ ಕಾಲ ಹೋಗಿ ಸೇವಾಕೇಂದ್ರಗಳನ್ನು ಸುತ್ತಿ ಸರ್ವೀಸ್ ಮಾಡಿ ಬರಬೇಕು. ಒಬ್ಬರನ್ನು ನೋಡಿ ಅನ್ಯರು ಕರೆಯುತ್ತಾರೆ, ಯಾರು ಮಾಡುವರೋ ಅವರು ಪಡೆಯುವರು. ಈ ಸೇವೆಯು ಬಹಳ ಕಲ್ಯಾಣಕಾರಿಯಾಗಿದೆ, ನೀವು ಮನುಷ್ಯರಿಗೆ ಜೀವ ದಾನ ನೀಡುತ್ತೀರಿ, ಇದು ಬಹಳ ಅತ್ಯುತ್ತಮ ಕಾರ್ಯವಾಗಿದೆ. ಉದ್ಯೋಗ -ವ್ಯವಹಾರಗಳಲ್ಲಿರುವವರೂ ಸಹ ಯುಕ್ತಿಯಿಂದ ಸಮಯವನ್ನು ತೆಗೆದು ಸರ್ವೀಸ್ ಮಾಡಬೇಕಾಗಿದೆ. ಸೇವಾಧಾರಿಗಳನ್ನು ತಂದೆಯು ಪ್ರೀತಿಯೂ ಮಾಡುತ್ತಾರೆ, ಪಾಲನೆಯನ್ನೂ ಕೊಡುತ್ತಾರೆ. ಯಾರಿಗೆ ಸರ್ವೀಸಿನ ಉಮ್ಮಂಗವಿರುವುದೋ ಅವರು ಸರ್ವೀಸ್ ಇಲ್ಲದೇ ಇರಲು ಸಾಧ್ಯವಿಲ್ಲ. ತಂದೆಯು ಸಹಯೋಗವನ್ನೂ ಕೊಡುತ್ತಾರಲ್ಲವೆ. ಮಕ್ಕಳು ಬಹಳ ದಯಾಹೃದಯಿಗಳಾಗಬೇಕಾಗಿದೆ. ಪಾಪ! ಮನುಷ್ಯರದು ಬಹಳ ದುಃಖಿ ಜೀವನವಾಗಿದೆ, ನೀವು ಜೀವದಾನ ನೀಡುತ್ತೀರಿ. ಅನ್ಯರಿಗೆ ಅವಿನಾಶಿ ಜ್ಞಾನ ರತ್ನಗಳ ದಾನ ಮಾಡುವುದು – ಇಂತಹ ಸರ್ವೋತ್ತಮ ಜ್ಞಾನ ದಾನವು ಮತ್ತ್ಯಾವುದೂ ಇಲ್ಲ. ಬಹಳ ದಯಾಹೃದಯಿಗಳಾಗಬೇಕಾಗಿದೆ. ಬ್ರಾಹ್ಮಣಿಯರು ನಿರ್ಬಲರಾಗುವ ಕಾರಣ ಸೇವೆಯು ಡೀಲಾ ಆಗಿ ಬಿಡುತ್ತದೆ ಆದ್ದರಿಂದ ಒಳ್ಳೆಯ ಶಿಕ್ಷಕಿಯು ಬೇಕು ಎಂದು ಹೇಳುತ್ತಾರೆ. ಯಾವಾಗ ವಿಚಾರ ಬರುವುದೋ ಆಗ ಹೊರಟು ಹೋಗಬೇಕು. ಬಾಬಾ, ಯಾವ ಸೇವಾಕೇಂದ್ರದಲ್ಲಿ ಸೇವೆಯು ಕಡಿಮೆಯಾಗಿದೆ ನಾವು ಹೋಗಿ ಸರ್ವೀಸ್ ಮಾಡಿ ಬರುತ್ತೇವೆ ಎಂದು ಹೇಳುವಂತಿರಬೇಕು. ಪ್ರದರ್ಶನಿ ಚಿತ್ರಗಳಲ್ಲಿ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ನಾವು ಹೇಗೆ ಸರ್ವೀಸನ್ನು ವೃದ್ಧಿ ಪಡಿಸಬೇಕೆಂಬ ವಿಚಾರ ನಡೆಯಬೇಕು, ತಂದೆಯೂ ಸಹ ಎಲ್ಲರ ಜೀವನವನ್ನು ವಜ್ರ ಸಮಾನ ಮಾಡುತ್ತಾರೆ. ನೀವು ಮಕ್ಕಳೂ ಸಹ ಸರ್ವೀಸ್ ಮಾಡಬೇಕಾಗಿದೆ. ವಂದೇ ಮಾತರಂ ಎಂದು ಗಾಯನವಿದೆ ಆದರೆ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಪತಿತ ಮನುಷ್ಯರ ಅಥವಾ ಪೃಥ್ವಿ ಇತ್ಯಾದಿಗಳಿಗೆ ಎಂದೂ ವಂದನೆ ಮಾಡಲಾಗುವುದಿಲ್ಲ. ಇವಂತೂ ಪಂಚ ತತ್ವಗಳಾಗಿವೆ, ಅದಕ್ಕೇನು ವಂದನೆ ಮಾಡುವಿರಿ? ಪಂಚತತ್ವಗಳಿಂದಾದ ಶರೀರವಾಗಿದೆ ಅಂದಮೇಲೆ ಶರೀರದ ಪೂಜೆ ಮಾಡುವುದೂ ಸಹ ಭೂತ ಪೂಜೆಯಾಯಿತು. ಶಿವ ತಂದೆಗಂತೂ ಶರೀರವಿಲ್ಲ, ಅವರ ಪೂಜೆಯು ಎಲ್ಲದಕ್ಕಿಂತ ಉತ್ತಮವಾಗಿದೆ. ಉಳಿದೆಲ್ಲರದೂ ಮಧ್ಯಮವಾಗಿದೆ, ಇತ್ತೀಚೆಗೆ ಮನುಷ್ಯರಿಗೂ ಪೂಜಿಸುತ್ತಿರುತ್ತಾರೆ. ಅವರು ಪತಿತರಾಗಿದ್ದಾರೆ, ಮಹಾನ್ ಆತ್ಮರು ದೇವತೆಗಳಾಗಿರುತ್ತಾರೆ. ಸನ್ಯಾಸಿಗಳಿಗಿಂತಲೂ ಅವರು ಹೆಚ್ಚು ಪವಿತ್ರರಾಗಿರುತ್ತಾರೆ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ದೇವತೆಗಳಾಗುತ್ತಿದ್ದೇವೆ, ತಂದೆಯು ನಮಗೆ ಈ ಅವಿನಾಶಿ ಜ್ಞಾನ ರತ್ನಗಳ ದಾನ ಮಾಡುವುದನ್ನು ಕಲಿಸುತ್ತಾರೆ. ಇಂತಹ ಶ್ರೇಷ್ಠ ಜ್ಞಾನವು ಮತ್ತ್ಯಾವುದೂ ಇರುವುದಿಲ್ಲ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಶಿವ ಮತ್ತು ಲಕ್ಷ್ಮೀ-ನಾರಾಯಣರ ಚಿತ್ರಗಳಂತೂ ಇರುತ್ತವೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಾಕಿಕೊಳ್ಳಿ ಆಗ ನೆನಪಿರುವುದು – ಶಿವ ತಂದೆಯೇ ನಮ್ಮನ್ನು ಈ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ. ಈ ಸಮಯದಲ್ಲಿ ನೀವು ಆಗುತ್ತಿದ್ದೀರಿ, ಸ್ವರ್ಗದ ರಚಯಿತನು ಶಿವ ತಂದೆಯಾಗಿದ್ದಾರೆ, ಸತ್ಯಯುಗದಲ್ಲಂತೂ ಆಸ್ತಿಯನ್ನು ಕೊಡುವುದಿಲ್ಲ. ಈ ಅಂತಿಮ ಜನ್ಮದಲ್ಲಿ ಶಿವ ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನೀವು ಈ ರೀತಿಯಾಗುವಿರಿ ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಕೇವಲ ಸರ್ವೀಸ್-ಸರ್ವೀಸ್….. ತಂದೆಯನ್ನು ನೆನಪು ಮಾಡುತ್ತೀರೆಂದರೂ ಸಹ ಬಹಳ ದೊಡ್ಡ ಸರ್ವೀಸ್ ಮಾಡುತ್ತೀರೆಂದರ್ಥ. ತತ್ವ ಇತ್ಯಾದಿಗಳೆಲ್ಲವೂ ಕಾರಣವಾಗಿ ಬಿಡುತ್ತವೆ, ಯೋಗದ ಮಹಿಮೆಯು ಬಹಳ ದೊಡ್ಡದಾಗಿದೆ. ಪ್ರಪಂಚದಲ್ಲಿ ಯೋಗಾಶ್ರಮಗಳು ಅನೇಕ ಇವೆ ಆದರೆ ಅವೆಲ್ಲವೂ ದೈಹಿಕ ಹಠಯೋಗಗಳಾಗಿವೆ, ನಿಮ್ಮದು ಇದು ರಾಜಯೋಗವಾಗಿದೆ, ಇದರಿಂದ ನಿಮ್ಮ ದೋಣಿಯು ಪಾರಾಗುತ್ತದೆ. ಆ ಅನೇಕ ಪ್ರಕಾರದ ಹಠಯೋಗಗಳಿಂದ ಏಣಿಯನ್ನು ಇಳಿಯುತ್ತಾ ಬಂದಿದ್ದೀರಿ, ಮೂಲ ಮಾತು ನೆನಪಿನದಾಗಿದೆ. ನೋಡಿಕೊಳ್ಳಿ, ನನ್ನ ಮನಸ್ಸು ಎಲ್ಲಿಯೂ ವಿಕಾರದ ಕಡೆ ಹೋಗುತ್ತಿಲ್ಲವೇ? ವಿಕಾರಿಗಳಿಗೇ ಪತಿತರೆಂದು ಹೇಳಲಾಗುತ್ತದೆ ಅರ್ಥಾತ್ ಕವಡೆಯ ಸಮಾನರು. ವಿಕಾರದಲ್ಲಿ ಬೀಳುವುದರಿಂದ ತಮ್ಮದೇ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ, ಯಾರು ಮಾಡುವರೋ ಅವರು ಅದನ್ನು ಪಡೆಯುವರು. ತಂದೆಯು ನೋಡಲಿ, ನೋಡದಿರಲಿ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ – ನಾವು ತಂದೆಯ ಸರ್ವೀಸ್ ಮಾಡುತ್ತೇವೆಯೇ! ನಮ್ಮಲ್ಲಿ ಯಾವುದೇ ಅವಗುಣವಿಲ್ಲವೆ! ಒಂದುವೇಳೆ ಇದ್ದರೆ ಅದನ್ನು ತೆಗೆದುಹಾಕಬೇಕು. ತಮ್ಮಿಂದ ಅವಗುಣಗಳನ್ನು ತೆಗೆಯುವುದಕ್ಕಾಗಿ ತಂದೆಯು ಬಹಳ ತಿಳಿಸುತ್ತಿರುತ್ತಾರೆ, ನಿರ್ಗುಣ ಎಂಬುದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಯಾರಲ್ಲಿ ಯಾವುದೇ ಗುಣವಿಲ್ಲವೋ ಅಂತಹ ನಿರ್ಗುಣ ಬಾಲಕರ ಮಂಡಲಿಯು ಏನು ಮಾಡಲು ಸಾಧ್ಯ! ಅರ್ಥವಿಲ್ಲದೆ ಏನು ಬಂದರೆ ಅದನ್ನು ಹೇಳಿ ಬಿಡುತ್ತಾರೆ, ಅನೇಕ ಮತಗಳಿವೆಯಲ್ಲವೆ. ನಿಮಗೆ ಒಂದು ಮತ ಸಿಗುತ್ತದೆ, ಅದರಿಂದ ನಿಮಗೆ ಅಪಾರ ಖುಷಿಯಿರಬೇಕು. ತಂದೆಯು ಕೇವಲ ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ ಮತ್ತು ಕಮಲ ಪುಷ್ಫ ಸಮಾನರಾಗಿರಿ. ಮನಸಾ-ವಾಚಾ-ಕರ್ಮಣಾ ಪವಿತ್ರರಾಗಿರಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಬ್ರಾಹ್ಮಣರು ಶ್ರೀಮತದನುಸಾರ ನಮ್ಮದೇ ತನು-ಮನ-ಧನದಿಂದ ನಮ್ಮ ಮತ್ತು ಇಡೀ ವಿಶ್ವದ ಸೇವೆ ಮಾಡುತ್ತಿದ್ದೇವೆ. ತಂದೆಯು ಭಾರತದಲ್ಲಿಯೇ ಬರುತ್ತಾರಲ್ಲವೆ. ನೀವು ಪಾಂಡವರು ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡುತ್ತಿದ್ದೀರಿ. ನೀವು ತಮ್ಮ ಕರ್ತವ್ಯ ಮಾಡುತ್ತೀರಿ, ಕೊನೆಗೂ ಪಾಂಡವರದೇ ವಿಜಯವಾಗುವುದು, ಇದರಲ್ಲಿ ಯುದ್ಧದ ಮಾತಿಲ್ಲ. ನೀವು ಡಬಲ್ ಅಹಿಂಸಕರಾಗಿದ್ದೀರಿ, ವಿಕಾರದಲ್ಲಿಯೂ ಹೋಗುವುದಿಲ್ಲ, ಹಿಂಸೆಯನ್ನೂ ಮಾಡುವುದಿಲ್ಲ. ಹಿಂಸೆಯಿಂದ ಯಾರೂ ವಿಶ್ವದ ಮೇಲೆ ರಾಜ್ಯ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ – ಆ ಕ್ರಿಶ್ಚಿಯನ್ನರಿಬ್ಬರೂ ಒಂದುವೇಳೆ ಪರಸ್ಪರ ಸೇರಿ ಒಂದಾದರೆ ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡಬಲ್ಲರು ಆದರೆ ಡ್ರಾಮಾದಲ್ಲಿ ಈ ನಿಯಮವಿಲ್ಲ. ಕ್ರಿಶ್ಚಿಯನ್ನರೇ ಕೃಷ್ಣ ಪುರಿಯನ್ನು ಆವರಿಸಿದ್ದಾರೆ. ಮೂಲತಃ ಭಾರತವು ಕೃಷ್ಣ ಪುರಿಯಾಗಿತ್ತಲ್ಲವೆ. ಯುದ್ಧ ಮಾಡಿ ರಾಜ್ಯವನ್ನು ತೆಗೆದುಕೊಂಡರು, ಬಹಳ ಹಣವನ್ನು ತೆಗೆದುಕೊಂಡು ಹೋದರು. ಈಗ ಪುನಃ ಹಣವು ಹಿಂತಿರುಗಿ ಬರುತ್ತಿದೆ ಮತ್ತು ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ತಂದೆಯು ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾರೆ! ಅವರೇ ನಿಮ್ಮ ರಾಜ್ಯವನ್ನು ಕಸಿದುಕೊಂಡಿದ್ದಾರೆ. ಮತ್ತೆ ಅವರು ಪರಸ್ಪರ ಹೊಡೆದಾಡುತ್ತಾರೆ ಮತ್ತು ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಎಷ್ಟು ದೊಡ್ಡ ರಾಜ್ಯ ಪದವಿಯಾಗಿದೆ, ಕೇವಲ ಇದರಲ್ಲಿಯೇ ಪರಿಶ್ರಮವಿದೆ – ನೆನಪು ಮಾಡುತ್ತಾ ಇರಿ ಮತ್ತು ತಮ್ಮ ಆಸ್ತಿಯನ್ನು ತೆಗೆದುಕೊಳ್ಳಿ. ಇದರಲ್ಲಿ ಸೋತು ಹೋಗಬಾರದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಅನ್ಯ ಎಲ್ಲಾ ಮಾತುಗಳನ್ನು ಬಿಟ್ಟು ಜ್ಞಾನ ದಾನ ಮಾಡಬೇಕಾಗಿದೆ. ರೂಪ ಭಸಂತರಾಗಬೇಕಾಗಿದೆ. ತಮ್ಮ ಅವಗುಣಗಳನ್ನು ತೆಗೆಯುವ ಪುರುಷಾರ್ಥ ಮಾಡಬೇಕಾಗಿದೆ. ಅನ್ಯರನ್ನು ನೋಡಬಾರದು.

2. ತಮ್ಮ ಸ್ವಭಾವವನ್ನು ಬಹಳ ಮಧುರ ಮಾಡಿಕೊಳ್ಳಬೇಕಾಗಿದೆ, ಎಲ್ಲರ ಮೇಲೆ ಪ್ರೀತಿಯ ದೃಷ್ಟಿಯಿರಲಿ, ಯಾರಿಗೂ ದುಃಖ ಕೊಡಬಾರದು, ಕರ್ಮೇಂದ್ರಿಯಾಜೀತರಾಗಬೇಕಾಗಿದೆ.

ವರದಾನ:-

ತಮ್ಮ ಸ್ಮೃತಿಯನ್ನು ಸಮರ್ಥ ಮಾಡಿಕೊಳ್ಳಬೇಕು ಅಥವಾ ಸ್ವತಹವಾಗಿ ಸ್ಮೃತಿ ಸ್ವರೂಪರು ಆಗಬೇಕೆಂದರೆ, ಅಮೃತವೇಳೆಯ ಸಮಯದ ಮಹತ್ವವನ್ನು ತಿಳಿದುಕೊಳ್ಳಿರಿ. ಹೇಗೆ ಶ್ರೀಮತವಿದೆಯೋ ಅದರನುಸಾರವಾಗಿಯೇ ಸಮಯವನ್ನು ಗುರುತಿಸುತ್ತಾ, ಸಮಯ ಪ್ರಮಾಣ ನಡೆಯುತ್ತೀರೆಂದರೆ ಸಹಜವಾಗಿ ಸರ್ವ ಪ್ರಾಪ್ತಿ ಮಾಡಿಕೊಳ್ಳಬಹುದು ಹಾಗೂ ಪರಿಶ್ರಮದಿಂದ ಮುಕ್ತರಾಗಿ ಬಿಡುತ್ತೀರಿ. ಪ್ರತಿಯೊಂದು ಕರ್ಮವನ್ನು ಅಮೃತವೇಳೆಯ ಮಹತ್ವವನ್ನು ತಿಳಿದುಕೊಂಡು ನಡೆಯುವುದರಿಂದ ಮಹತ್ವ ಪ್ರಮಾಣವಾಗಿರುತ್ತದೆ. ಆ ಸಮಯದಲ್ಲಿ ವಿಶೇಷವಾದ ಶಾಂತಿಯಿರುತ್ತದೆ ಆದ್ದರಿಂದ ಸಹಜವಾಗಿ ಸ್ಮೃತಿಯನ್ನು ಸಮರ್ಥವನ್ನಾಗಿ ಮಾಡಿಕೊಳ್ಳಬಹುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top