21 August 2021 KANNADA Murli Today | Brahma Kumaris

Read and Listen today’s Gyan Murli in Kannada

August 20, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ತಮ್ಮ ಯೋಗ ಬಲದಿಂದ ಈ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸದನ್ನಾಗಿ ಮಾಡುತ್ತೀರಿ, ನೀವು ಆತ್ಮಿಕ ಸೇವೆಗಾಗಿ ಪ್ರಕಟವಾಗಿದ್ದೀರಿ”

ಪ್ರಶ್ನೆ:: -

ಪ್ರಾಮಾಣಿಕ ಸತ್ಯ ಪುರುಷಾರ್ಥಿ ಮಕ್ಕಳ ಚಿಹ್ನೆಗಳೇನು?

ಉತ್ತರ:-

1. ಪ್ರಾಮಾಣಿಕ ಮಕ್ಕಳು ಎಂದೂ ಸಹ ತಮ್ಮ ತಪ್ಪನ್ನು ಮುಚ್ಚಿಡುವುದಿಲ್ಲ, ಕೂಡಲೇ ತಂದೆಗೆ ತಿಳಿಸುತ್ತಾರೆ. ಅವರು ಬಹಳ-ಬಹಳ ನಿರಹಂಕಾರಿಯಾಗಿರುತ್ತಾರೆ. ಅವರ ಬುದ್ಧಿಯಲ್ಲಿ ಸದಾ ಇದೇ ವಿಚಾರವಿರುತ್ತದೆ – ನಾವು ಎಂತಹ ಕರ್ಮ ಮಾಡುವೆವೋ ನಮ್ಮನ್ನು ನೋಡಿ ಅನ್ಯರೂ ಮಾಡುವರು….. 2. ಅವರು ಯಾರದೇ ಡಿಸ್ಸರ್ವಿಸ್ನ ಗಾಯನ ಮಾಡುವುದಿಲ್ಲ. ತಮ್ಮ ಸರ್ವೀಸಿನಲ್ಲಿ ತೊಡಗಿರುತ್ತಾರೆ. ಅವರು ಯಾರದೇ ಅವಗುಣವನ್ನು ನೋಡಿ ತಮ್ಮ ತಲೆ ಕೆಡಿಸಿಕೊಳ್ಳುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಧೈರ್ಯ ತಾಳು ಮಾನವನೇ…..

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಧೈರ್ಯ ತರಿಸುತ್ತಾರೆ. ಹೇಗೆ ಲೌಕಿಕ ತಂದೆಯೂ ಸಹ ಧೈರ್ಯ ಕೊಡುತ್ತಾರಲ್ಲವೆ. ಯಾರಾದರೂ ರೋಗಿಯಾದರೆ ಅವರಿಗೆ ಸಮಾಧಾನ ನೀಡುತ್ತಾರೆ – ನಿಮ್ಮ ರೋಗದ ದುಃಖದ ದಿನಗಳು ಬದಲಾಗಿ ಸುಖದ ದಿನಗಳು ಬರುತ್ತವೆ ಎಂದು. ಅಲ್ಲಿ ಹದ್ದಿನ ತಂದೆಯು ಹದ್ದಿನ ಧೈರ್ಯವನ್ನು ತರಿಸುತ್ತಾರೆ, ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ, ಮಕ್ಕಳಿಗೆ ಬೇಹದ್ದಿನ ಧೈರ್ಯವನ್ನು ತರಿಸುತ್ತಿದ್ದಾರೆ – ಮಕ್ಕಳೇ, ಈಗ ನಿಮ್ಮ ಸುಖದ ದಿನಗಳು ಬರುತ್ತಿವೆ. ಇನ್ನು ಕೆಲವೇ ದಿನಗಳಿವೆ, ನೀವೀಗ ತಂದೆಯ ನೆನಪಿನಲ್ಲಿದ್ದು ಅನ್ಯರಿಗೂ ಕಲಿಸಿಕೊಡಿ. ನೀವು ಶಿವಶಕ್ತಿಯರಾಗಿದ್ದೀರಲ್ಲವೆ. ಶಿವ ತಂದೆಯ ಶಕ್ತಿಸೈನ್ಯವು ಪುನಃ ಪ್ರಕಟವಾಗಿದೆ. ಇವರೂ (ಪಾಂಡವರು) ಇದ್ದಾರೆ. ಇವರೆಲ್ಲರೂ ಶಿವನಿಂದ ಶಕ್ತಿಯನ್ನು ತೆಗೆದುಕೊಳ್ಳುತ್ತಾರೆ, ನೀವೂ ಶಕ್ತಿಯನ್ನು ತೆಗೆದುಕೊಳ್ಳುತ್ತೀರಿ, ತಂದೆಯು ತಿಳಿಸಿದ್ದಾರೆ – ಇದರಲ್ಲಿ ಕೃಪೆ ಅಥವಾ ಆಶೀರ್ವಾದದ ಮಾತಿಲ್ಲ. ನೆನಪಿನಲ್ಲಿದ್ದು ಶಕ್ತಿಯನ್ನು ತೆಗೆದುಕೊಳ್ಳುತ್ತಾ ಹೋಗಿರಿ, ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತಾ ಹೋಗುತ್ತವೆ ಮತ್ತು ನೀವು ಶಕ್ತಿವಂತರಾಗುತ್ತಾ ಹೋಗುತ್ತೀರಿ. ಶಿವನ ಶಕ್ತಿ ಸೇನೆಯು ಇಷ್ಟು ಸರ್ವಶಕ್ತಿವಂತನಾಗಿತ್ತು, ಯಾವುದು ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸದನ್ನಾಗಿ ಮಾಡಿ ಬಿಟ್ಟಿತು. ನಿಮಗೆ ತಿಳಿದಿದೆ – ಯೋಗಬಲದಿಂದ ಈ ಹಳೆಯ ಪ್ರಪಂಚವನ್ನೇ ಪರಿವರ್ತಿಸುತ್ತೀರಿ. ಮನುಷ್ಯರು ಬೆರಳು ಮೇಲೆ ಮಾಡಿ ತೋರಿಸಿ ಹೇಳುತ್ತಾರೆ – ಅಲ್ಲಾಹ್ನನ್ನು, ಗಾಡ್ನ್ನು ನೆನಪು ಮಾಡಿರಿ ಎಂದು. ಈಗ ಮಕ್ಕಳಿಗೆ ಅರ್ಥವಾಗಿದೆ – ತಂದೆಯ ನೆನಪಿನಿಂದ ಈ ಕಲ್ಲುಗಳ ಪರ್ವತವು ಅರ್ಥಾತ್ ಪ್ರಪಂಚವು ಪರಿವರ್ತನೆ ಆಗಿ ಬಿಡುವುದು. ನಾವೀಗ ಪರಿಸ್ತಾನವನ್ನು ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ಪ್ರದರ್ಶನಿಯಲ್ಲಿ ಹೆಚ್ಚು ಸರ್ವೀಸ್ ಮಾಡಿರಿ, ಪರಿಶ್ರಮ ಪಡಿ. ಸಮಯ ಸಿಕ್ಕಿದಾಗಲೆಲ್ಲಾ ಕುಳಿತು ಕಲಿಯಿರಿ. ಬಹಳ ಸಹಜವಾಗಿದೆ, ಮಕ್ಕಳಿಗೆ ಪ್ರತಿಯೊಂದು ಪ್ರಕಾರದ ಶಿಕ್ಷಣವು ಸಿಗುತ್ತಾ ಇರುತ್ತದೆ. ಪ್ರತಿಯೊಬ್ಬರ ಕರ್ಮಗಳ ಲೆಕ್ಕಾಚಾರವಿದೆ. ಕನ್ಯೆಯರ ಕರ್ಮವು ಒಳ್ಳೆಯದಾಗಿದೆ, ಯಾರಿಗೆ ವಿವಾಹವಾಗಿದೆಯೋ ಅವರು ಹೇಳುತ್ತಾರೆ – ಈ ಸಮಯದಲ್ಲಿ ಒಂದುವೇಳೆ ನಾವು ಕನ್ಯೆಯಾಗಿದ್ದರೆ ಇವೆಲ್ಲಾ ಬಂಧನಗಳಿಂದ ಮುಕ್ತರಾಗಿ ಸ್ವತಂತ್ರ ಪಕ್ಷಿಯಾಗಿರುತ್ತಿದ್ದೆವು. ಕನ್ಯೆಯರು ಸ್ವತಂತ್ರ ಪಕ್ಷಿಗಳಾಗಿದ್ದಾರೆ ಆದರೆ ಕೆಟ್ಟ ಸಂಗದಲ್ಲಿ ಬಂದಾಗ ನಷ್ಟವುಂಟಾಗುತ್ತದೆ. ಸ್ತ್ರೀಯರಿಗೆ ಪುರುಷ ಮತ್ತು ಮಕ್ಕಳು ಮೊದಲಾದವರ ಎಷ್ಟೊಂದು ಬಂಧನವಿರುತ್ತದೆ, ಇದರಲ್ಲಿ ರೀತಿ-ನೀತಿಗಳು ಮೊದಲಾದ ಎಷ್ಟೊಂದು ಬಂಧನಗಳಿರುತ್ತದೆ, ಕನ್ಯೆಯರಿಗೆ ಯಾವುದೇ ಬಂಧನವಿಲ್ಲ. ಬಾಂಬೆಯಲ್ಲಿಯೂ ಕನ್ಯೆಯರು ತಯಾರಾಗುತ್ತಿದ್ದಾರೆ. ನಮ್ಮ ಪ್ರಾಂತ್ಯವನ್ನು ನಾವೇ ಸಂಭಾಲನೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಎಲ್ಲರೂ ತಮ್ಮ ಪ್ರಾಂತ್ಯಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಾರೆ. ನಮ್ಮ ಗುಜರಾತ್, ನಮ್ಮ ಯು.ಪಿ.,… ಎಂದು ಹೇಳುತ್ತಾರೆ. ನೀವು ಈಗ ತಮ್ಮ ಸ್ವರಾಜ್ಯವನ್ನು ಪಡೆಯುತ್ತೀರಿ. ಇದರಲ್ಲಿ ನಾನು ಇಂತಹವನಾಗಿದ್ದೇನೆ, ಇಂತಹ ಪ್ರಾಂತ್ಯದವನಾಗಿದ್ದೇನೆ, ಇದೂ ಸಹ ಇರಬಾರದು. ನಿಮಗೆ ಯಾರೊಂದಿಗೂ ಈರ್ಷ್ಯೆ ಇರಬಾರದು. ಯಾರದೇ ಅವಗುಣವನ್ನು ನೋಡಿ ತಲೆ ಕೆಡಿಸಿಕೊಳ್ಳಬಾರದು. ತಮ್ಮನ್ನು ನೋಡಿಕೊಳ್ಳಿ – ಎಷ್ಟು ಆತ್ಮರಿಗೆ ಅರ್ಥಾತ್ ಸಹೋದರ-ಸಹೋದರಿಯರಿಗೆ ಸುಖದ ಮಾರ್ಗವನ್ನು ತಿಳಿಸಿದ್ದೇವೆ! ಒಂದುವೇಳೆ ಮಾರ್ಗವನ್ನು ತಿಳಿಸಿಲಿಲ್ಲವೆಂದರೆ ಅವರೇನೂ ಪ್ರಯೋಜನಕ್ಕಿಲ್ಲ. ತಂದೆಯ ಹೃದಯವನ್ನೇರಲು ಸಾಧ್ಯವಿಲ್ಲ. ಬಾಪ್ದಾದಾರವರ ಹೃದಯವನ್ನೇರದಿದ್ದರೂ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೂ ಸಾಧ್ಯವಿಲ್ಲ. ತಂದೆಗೆ ಗೊತ್ತಿದೆ, ಕೆಲ ಕೆಲವು ಮಕ್ಕಳಿಗೆ ಸೇವೆಯ ಬಹಳ ಉಮ್ಮಂಗವಿದೆ, ಸ್ವಲ್ಪವೂ ದೇಹಾಭಿಮಾನವಿಲ್ಲ. ಕೆಲವರಂತೂ ಬಹಳ ಅಹಂಕಾರದಲ್ಲಿರುತ್ತಾರೆ. ತನ್ನ ಮೇಲೆ ಕೃಪೆಯಲ್ಲ, ತಂದೆಯ ಮೇಲೆ ಕೃಪೆ ತೋರುತ್ತಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಎಂದೂ ಯಾರದೇ ಅವಗುಣವನ್ನು ನೋಡಬಾರದು, ಇಂತಹವರು ಹೀಗಿದ್ದಾರೆ, ಹೀಗೆ ಮಾಡುತ್ತಾರೆ, ಇದೇನೂ ಮಾಡಬಾರದು. ಇಂತಹ ಬುದ್ಧಿವಂತರೂ ಇದ್ದಾರೆ ಒಬ್ಬರು ಇನ್ನೊಬ್ಬರ ಡಿಸ್ಸರ್ವೀಸ್ನ ಗಾಯನ ಮಾಡುತ್ತಾರೆ, ಇಂತಹವರು ಹೀಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ ಎಂದು. ಅರೆ! ನೀವು ತಮ್ಮ ಸರ್ವೀಸ್ ಮಾಡಿ, ಸರ್ವೀಸಿನಲ್ಲಿ ತೊಡಗುವುದು ಬ್ರಾಹ್ಮಣ ಮಕ್ಕಳ ಕರ್ತವ್ಯವಾಗಿದೆ. ತಂದೆಯು ಕುಳಿತಿದ್ದಾರೆ, ತಂದೆಯ ಬಳಿ ಎಲ್ಲಾ ಸಮಾಚಾರವು ಬರುತ್ತದೆ. ಪ್ರತಿಯೊಬ್ಬರ ಸ್ಥಿತಿಯನ್ನು ತಂದೆಯು ತಿಳಿದುಕೊಂಡಿದ್ದಾರೆ. ಸರ್ವೀಸನ್ನು ನೋಡಿ ಮಹಿಮೆ ಮಾಡುತ್ತಾರೆ, ಮಕ್ಕಳಲ್ಲಿ ಸರ್ವೀಸಿನ ಹುರುಪು ಬರಬೇಕಾಗಿದೆ. ಈ ಆತ್ಮಿಕ ಸೇವೆಯಿಂದ ಪ್ರತಿಯೊಬ್ಬರೂ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ, ಆ ಉದ್ಯೋಗ-ವ್ಯಾಪಾರವನ್ನಂತೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿರಿ. ಈ ವ್ಯಾಪಾರವನ್ನು ಕೆಲವರೇ ವಿರಳ ವ್ಯಾಪಾರಿಗಳು ಮಾಡುವರು. ತಂದೆಯು ಸರ್ವೀಸಿನ ಬಹಳ ಸಹಜ ವಿಧಾನವನ್ನು ತಿಳಿಸುತ್ತಾರೆ, ಎಂದಿಗೂ ಇನ್ನೊಬ್ಬರ ನಿಂದನೆ ಮಾಡಬೇಡಿ. ಅನೇಕರು ಈ ರೀತಿ ಮಾಡುತ್ತಾರೆ. ಒಳ್ಳೊಳ್ಳೆಯ ಮಹಾರಥಿಗಳನ್ನೂ ಸಹ ಮಾಯೆಯು ಮೂಗನ್ನು ಹಿಡಿದುಕೊಳ್ಳುತ್ತದೆ, ತಂದೆಯನ್ನು ನೆನಪು ಮಾಡದಿದ್ದರೆ ಮಾಯೆಯು ಹಿಡಿದುಕೊಳ್ಳುವುದು. ತಂದೆಯೂ ಹೇಳುತ್ತಾರಲ್ಲವೆ, ನಾನು ಸಾಧಾರಣ ತನುವಿನಲ್ಲಿ ಬಂದಿರುವುದನ್ನು ನೋಡಿ ನನ್ನನ್ನು ಗುರುತಿಸುವುದಿಲ್ಲ. ಆದ್ದರಿಂದ ತಂದೆಗೂ ಸಹ ಹೀಗ್ಹೀಗೆ ಮಾಡಬೇಕೆಂದು ಸಲಹೆ ಕೊಡುತ್ತಾರೆ. ಸ್ಥಿತಿಯು ಈ ರೀತಿಯಿರುತ್ತದೆ, ಅಂತಹವರಿಗೆ ತಂದೆಯು ಸ್ವಲ್ಪ ಏನಾದರೂ ಹೇಳಿದರೂ ಸಹ ವಿರೋಧಿಗಳಾಗಿ ಬಿಡುತ್ತಾರೆ. ತಂದೆಗೂ ತಮ್ಮ ಮತವನ್ನು ಕಳುಹಿಸುತ್ತಾರೆ. ಗಾದೆಯಿದೆಯಲ್ಲವೆ – ಇಲಿಗೆ ಹರಿಶಿನ ಕೊಂಬು ಸಿಕ್ಕಿದ ಕೂಡಲೇ ನಾನೇ ಅಂಗಡಿ ಮಾಲೀಕನೆಂದು ತಿಳಿದುಕೊಂಡಿತು…. ನಾವು ಡಿಸ್ಸರ್ವೀಸ್ ಮಾಡುತ್ತೇವೆಂದೂ ತಿಳಿದುಕೊಳ್ಳುವುದಿಲ್ಲ, ತಪ್ಪುಗಳಂತೂ ಅನೇಕರಿಂದ ಆಗುತ್ತಿರುತ್ತವೆ. ಸ್ಥಿತಿಯು ಕೆಲವೊಮ್ಮೆ ಉತ್ತಮ, ಕೆಲವೊಮ್ಮೆ ಕನಿಷ್ಟ, ಹೀಗೆ ನಡೆಯುತ್ತಾ ಬಂದಿದೆ. ಪ್ರತಿಯೊಬ್ಬರೂ ತಮ್ಮ ಮನೋಸ್ಥಿತಿಯನ್ನು ನೋಡಿಕೊಳ್ಳಿ, ಪ್ರಾಮಾಣಿಕ ಮಕ್ಕಳು ತಮ್ಮ ಸ್ಥಿತಿಯನ್ನು ಕೂಡಲೇ ತಿಳಿಸಿ ಬಿಡುತ್ತಾರೆ, ಕೆಲವರಂತೂ ತಮ್ಮ ತಪ್ಪುಗಳನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಇಲ್ಲಂತೂ ಬಹಳ ನಿರಹಂಕಾರಿತನವಿರಬೇಕು. ಸರ್ವೀಸನ್ನು ವೃದ್ಧಿ ಪಡಿಸುವುದರಲ್ಲಿ ತೊಡಗಬೇಕು. ಯಾವಾಗಲೂ ಈ ಸಂಕಲ್ಪವಿರಲಿ – ಎಂತಹ ಕರ್ಮವನ್ನು ನಾನು ಮಾಡುವೆನೋ ನನ್ನನ್ನು ನೋಡಿ ಅನ್ಯರು ಮಾಡುವರು. ನಾನು ಯಾರದೇ ನಿಂದನೆ ಮಾಡುತ್ತೇನೆಂದರೆ ಅನ್ಯರೂ ಮಾಡತೊಡಗುವರು. ಅನೇಕರಿಗೆ ಈ ಗಮನವಿರುವುದಿಲ್ಲ. ತಂದೆಯು ತಿಳಿಸುತ್ತಾರೆ – ನೀವು ತಮ್ಮ ಸರ್ವೀಸಿನಲ್ಲಿ ತೊಡಗಿರಿ ಇಲ್ಲದಿದ್ದರೆ ಬಹಳ ಪಶ್ಚಾತ್ತಾಪ ಪಡುವಿರಿ. ಅನೇಕರು ಶತ್ರುಗಳೂ ಆಗುತ್ತಾರೆ.

ನೀವೀಗ ಶೂದ್ರರಿಂದ ಬದಲಾಗಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿ ಬಿಟ್ಟಿರಿ. ಯಾರಲ್ಲಿ 5 ವಿಕಾರಗಳಿದೆಯೋ ಅವರು ಆಸುರೀ ಸಂಪ್ರದಾಯದವರಾಗಿದ್ದಾರೆ. ನೀವು ದೈವೀ ಸಂಪ್ರದಾಯದವರಾಗಿದ್ದೀರಿ, ದೇವತೆಗಳಾಗುವುದಕ್ಕಾಗಿ ನೀವು ವಿಕಾರಗಳ ಮೇಲೆ ವಿಜಯ ಗಳಿಸುತ್ತಿದ್ದೀರಿ. ದೇವತೆಗಳಂತೂ ಇಲ್ಲಿ ಇಲ್ಲ, ದೇವತೆಗಳು ಸತ್ಯಯುಗದಲ್ಲಿರುತ್ತಾರೆ. ನೀವೀಗ ದೈವೀ ಸಂಪ್ರದಾಯದವರಾಗುತ್ತಿದ್ದೀರಿ.

ನೀವು ಮಕ್ಕಳಿಗೆ ಈಗ ತಿಳಿಸುವುದಕ್ಕಾಗಿ ಅವಕಾಶ ಸಿಗುತ್ತದೆ ಅಂದಮೇಲೆ ಪ್ರದರ್ಶನಿಯಲ್ಲಿ ತಿಳಿಸುತ್ತಾ ಇರಿ. ಪ್ರದರ್ಶನಿ, ಮೇಳಗಳಲ್ಲಿ ಪ್ರತಿಯೊಬ್ಬರ ನಾಡಿಯ ಬಗ್ಗೆ ಅರ್ಥವಾಗುತ್ತದೆ. ಪೋಜೆಕ್ಟರ್ನಲ್ಲಿ ಯಾರಿಗೂ ತಿಳಿಸುವುದಕ್ಕೆ ಆಗುವುದಿಲ್ಲ, ಸನ್ಮುಖದಲ್ಲಿ ತಿಳಿಸುವುದರಿಂದಲೇ ಮನುಷ್ಯರಿಗೆ ಅರ್ಥವಾಗುವುದು ಆದ್ದರಿಂದ ಪ್ರದರ್ಶನಿ, ಮೇಳವು ಒಳ್ಳೆಯ ಸಾಧನವಾಗಿದೆ. ಅದರಲ್ಲಿ ಬರೆಯಲೂಬಹುದು. ಪ್ರದರ್ಶನಿ, ಮೇಳ ಮಾಡುವ ಉಮಂಗವಿರಬೇಕು, ನಿಯಮಿತವಾಗಿ ಓದುವುದರಿಂದಲೇ ನಶೆಯಿರುವುದು. ಒಂದುವೇಳೆ ಬಂಧನದಲ್ಲಿರುವವರಾದರೆ ಮನೆಯಲ್ಲಿದ್ದು ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ವಿಕರ್ಮಗಳು ವಿನಾಶವಾಗುವವು. ಮನೆಯಲ್ಲಿ ಕುಳಿತುಕೊಂಡು ನೆನಪು ಮಾಡುವುದೂ ಸಹ ಒಳ್ಳೆಯದಾಗಿದೆ. ಆದರೆ ನೆನಪು ಮಾಡುವುದು ಎಂದರೆ ಮಕ್ಕಳಿಗೆ ಬಹಳ ಕಷ್ಟದ ಮಾತಾಗಿ ಬಿಟ್ಟಿದೆ. ಯಾವ ತಂದೆಯಿಂದ 21 ಜನ್ಮಗಳ ಆಸ್ತಿ ಸಿಗುತ್ತದೆಯೋ ಅವರನ್ನೇ ನೆನಪು ಮಾಡುವುದಿಲ್ಲ. ಒಳ್ಳೊಳ್ಳೆಯ ಭಾಷಣ ಮಾಡುವಂತಹ ಮಕ್ಕಳೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ. ಅಮೃತವೇಳೆ ಏಳುವುದಿಲ್ಲ, ಎದ್ದರೂ ಕುಳಿತ ಕೂಡಲೇ ತೂಕಡಿಸುತ್ತಾರೆ. ನೆನಪು ಮಾಡುವುದಕ್ಕಾಗಿ ಮುಂಜಾನೆಯ ಸಮಯವು ಬಹಳ ಒಳ್ಳೆಯದಾಗಿದೆ. ಭಕ್ತಿಮಾರ್ಗದಲ್ಲಿ ಮುಂಜಾನೆ ಎದ್ದು ತೊಡಗುತ್ತಾರೆ. ಅವರದು ಇಳಿಯುವ ಕಲೆಯಾಗಿದೆ, ಇಲ್ಲಂತೂ ಏರುವ ಮಾತಾಗಿದೆ. ಮಾಯೆಯು ಎಷ್ಟೊಂದು ವಿಘ್ನಗಳನ್ನು ಹಾಕುತ್ತದೆ. ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡದಿದ್ದರೆ ಧಾರಣೆ ಹೇಗಾಗುವುದು, ಹೇಗೆ ವಿಕರ್ಮ ವಿನಾಶವಾಗುವುದು! ಕೇವಲ ಮುರುಳಿಯನ್ನು ತಿಳಿಸುವುದಂತೂ ಚಿಕ್ಕ ಮಕ್ಕಳೂ ಸಹ ಕಲಿತು ತಿಳಿಸಬಲ್ಲರು. ಈ ವಿದ್ಯೆಯು ದೊಡ್ಡವರಿಗಾಗಿ ಇದೆ, ಇದು ಎಷ್ಟು ದೊಡ್ಡ ವಿಶ್ವ ವಿದ್ಯಾಲಯವಾಗಿದೆ, ನಮಗೆ ಓದಿಸುವವರು ಯಾರು! ಎಂಬುದು ಮಕ್ಕಳಿಗೆ ನಶೆಯಿರುವುದಿಲ್ಲ. ಮಾಯೆಯು ಯಾರಿಗಾದರೂ ಮೋಸ ಮಾಡುತ್ತದೆಯೆಂದರೆ ಅಂತಹವರನ್ನು ನಾವು ನೋಡದೇ ನಮ್ಮ ಸರ್ವೀಸಿನಲ್ಲಿ ತೊಡಗಿರಬೇಕಾಗಿದೆ. ತಂದೆಯ ಬಳಿ ಎಲ್ಲಾ ಸಮಾಚಾರಗಳೂ ಬರುತ್ತಿರುತ್ತವೆ, ಕೆಲವರು ದೇಹಾಭಿಮಾನದಲ್ಲಿ ಬಂದು ಇವರು ಹೀಗೆ ಮಾಡುತ್ತಾರೆ, ಹಾಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಅನ್ಯರ ನಿಂದನೆ ಮಾಡುತ್ತಾ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಸರ್ವೀಸಿನಲ್ಲಿರುವುದು ನಿಮ್ಮ ಕರ್ತವ್ಯವಾಗಿದೆ. ಯಾವುದೇ ಮಾತಿದ್ದರೆ ತಂದೆಗೆ ತಿಳಿಸಿ ಬಿಟ್ಟು ಬಿಡಬೇಕಾಗಿದೆ, ಪರಚಿಂತನೆ ಮಾಡಬಾರದು. ಮಕ್ಕಳು ದಿನ-ರಾತ್ರಿ ಸರ್ವೀಸಿನಲ್ಲಿ ತೊಡಗಬೇಕು. ನಿಮ್ಮ ಕರ್ತವ್ಯವೇ ಇದಾಗಿದೆ, ಪ್ರತಿನಿತ್ಯವೂ ಪ್ರದರ್ಶನಿಯಲ್ಲಿ ತಿಳಿಸಿರಿ. ಇವರು ಶಿವ ತಂದೆ, ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಕಲ್ಪದ ಮೊದಲೂ ಸಹ ಪ್ರಜಾಪಿತ ಬ್ರಹ್ಮಾರವರ ಗಾಯನವಿದೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ತಂದೆಯು ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ ಅಂದರೆ ಇದರ ಅರ್ಥವು ಮನುಷ್ಯರು ಇರಲೇ ಇಲ್ಲವೆಂದಲ್ಲ. ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ ಎಂದರೆ ಅರ್ಥ ಮುಳ್ಳುಗಳಂತೆ ಇರುವವರನ್ನು ಹೂಗಳನ್ನಾಗಿ ಮಾಡುತ್ತಾರೆ. ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆಂದರೆ ಮೇಲೇನೂ ರಚಿಸುವುದಿಲ್ಲ. ಬ್ರಹ್ಮಾರವರು ಇಲ್ಲಿಯೇ ಇರಬೇಕಲ್ಲವೆ. ಇದನ್ನು ಎಷ್ಟು ಸ್ಪಷ್ಟವಾಗಿ ತಿಳಿಸಲಾಗುತ್ತದೆ!

ತಂದೆಯು ತಿಳಿಸುತ್ತಾರೆ – ನಾನು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಪ್ರವೇಶ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತೇನೆ, ಆದ್ದರಿಂದ ಮಕ್ಕಳು ಸರ್ವೀಸಿನಲ್ಲಿ ಹಗಲು-ರಾತ್ರಿ ಪರಿಶ್ರಮ ಪಡಬೇಕಾಗಿದೆ. ಉದ್ಯೋಗ ವ್ಯವಹಾರಗಳಿಂದ ಸ್ವಲ್ಪ ಸಮಯವನ್ನು ತೆಗೆದು ಇದರಲ್ಲಿ ತೊಡಗಬೇಕಾಗಿದೆ. ಬಿಡುವು ಸಿಗುವುದಿಲ್ಲವೆಂದಲ್ಲ. ಒಂದುವೇಳೆ ಖಾಯಿಲೆ ಬಂದರೆ ಆಗ ಬಿಡುವಿಲ್ಲವೆಂದು ಹೇಳುವಿರಾ? ಆದ್ದರಿಂದ ಪುರುಷಾರ್ಥ ಮಾಡಬೇಕಾಗಿದೆ, ಪ್ರೇರಣೆಯಿಂದ ಏನೂ ಆಗುವುದಿಲ್ಲ, ಭಗವಂತನಿಂದಲೇ ಪ್ರೇರಣೆಯ ಮೂಲಕ ಏನೂ ಆಗಲು ಸಾಧ್ಯವಿಲ್ಲ ಅಂದಮೇಲೆ ಅನ್ಯರಿಂದ ಹೇಗಾಗುವುದು! ಭಗವಂತನು ಏನು ತಾನೆ ಮಾಡಲು ಸಾಧ್ಯವಿಲ್ಲ, ಸತ್ತಿರುವವರನ್ನು ಬದುಕಿಸಬಲ್ಲರು ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಅರೆ! ಭಗವಂತನಿಗೆ ನೀವು ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಹೇಳುತ್ತೀರಿ. ಮತ್ತ್ಯಾವುದೇ ಮಾತನ್ನು ಹೇಳುವುದಿಲ್ಲ. ಬಂದು ಸತ್ತವರನ್ನು ಬದುಕಿಸಿ ಎಂದು ಹೇಳುತ್ತೀರೇನು! ಅವರು ಪತಿತ-ಪಾವನನಾಗಿದ್ದಾರೆ, ಭಾರತವು ಪಾವನವಾಗಿತ್ತಲ್ಲವೆ. ತಂದೆಯು ತಿಳಿಸುತ್ತಾರೆ – ನಾನು ಕಲ್ಪ-ಕಲ್ಪವೂ ಬಂದು ಪಾವನರನ್ನಾಗಿ ಮಾಡುತ್ತೇನೆ, ಮತ್ತೆ ಮಾಯೆಯು ಬಂದು ಪತಿತರನ್ನಾಗಿ ಮಾಡುತ್ತದೆ, ಈಗ ಪುನಃ ಪಾವನರನ್ನಾಗಿ ಮಾಡಲು ನಾನು ಬಂದಿದ್ದೇನೆ. ಎಷ್ಟು ಸಹಜ ಮಾತನ್ನು ತಿಳಿಸುತ್ತಾರೆ. ನಾಟಿ ವೈದ್ಯರು ದೊಡ್ಡ ಖಾಯಿಲೆಯನ್ನೂ ಸಹ ಗಿಡ ಮೂಲಿಕೆಗಳಿಂದ ಸರಿಪಡಿಸುತ್ತಾರೆ ಆಗ ಅವರಿಗೆ ಮಹಿಮೆಯು ಆಗುತ್ತದೆ, ಯಾರಿಗಾದರೂ ಮಗುವಾಯಿತು ಅಥವಾ ಹಣ ಸಿಕ್ಕಿತೆಂದರೆ ಗುರುವಿನ ಕೃಪೆಯಾಯಿತೆಂದು ಹೇಳುತ್ತಾರೆ. ಒಳ್ಳೆಯದು, ಮಗುವು ಸತ್ತು ಹೋದರೆ ಇದು ಈಶ್ವರನ ಲೀಲೆಯೆಂದು ಹೇಳುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಸನ್ಯಾಸಿಗಳು ಪವಿತ್ರರಾಗುತ್ತಾರೆಂದರೆ ಅವರಿಗೆ ಬಹಳ ಮಾನ್ಯತೆಯಿರುತ್ತದೆ ಆದರೆ ಅವರು ಹಠಯೋಗಿಗಳಾಗಿದ್ದಾರೆ, ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ, ಅವರು ಸನ್ಯಾಸಿಗಳು, ನಾವು ಗೃಹಸ್ಥಿಗಳಾಗಿದ್ದೇವೆ ಅಂದಮೇಲೆ ನಾನು ನಮ್ಮನ್ನು ಅನುಯಾಯಿಗಳೆಂದು ಕರೆಸಿಕೊಳ್ಳಲು ಹೇಗೆ ಸಾಧ್ಯ! ತಂದೆಯು ತಿಳಿಸುತ್ತಾರೆ – ಮಕ್ಕಳು ಸಂಪೂರ್ಣ ಫಾಲೋ ಮಾಡಬೇಕಾಗಿದೆ – ಮನ್ಮನಾಭವ, ನನ್ನನ್ನು ನೆನಪು ಮಾಡಿದರೆ ನೀವು ಪವಿತ್ರರಾಗುವಿರಿ ಮತ್ತು ನನ್ನ ಜೊತೆ ಬರುವಿರಿ, ನಾನಂತೂ ಸದಾ ಪಾವನನಾಗಿದ್ದೇನೆ. ಮನುಷ್ಯರು ಪತಿತರನ್ನಾಗಿ ಮಾಡುತ್ತಾರೆ, ತಂದೆಯು ಬಂದು ಪಾವನರನ್ನಾಗಿ ಮಾಡುತ್ತಾರೆ. ಅವರು ಪವಿತ್ರತೆ, ಸುಖ-ಶಾಂತಿಯ ಸಾಗರನಾಗಿದ್ದಾರೆ, ನಿಮ್ಮನ್ನು ಅದೇರೀತಿ ಮಾಡುತ್ತಿದ್ದಾರೆ. ನೀವು ಯೋಗಬಲದಿಂದ ಆತ್ಮವನ್ನು ಪವಿತ್ರವನ್ನಾಗಿ ಮಾಡಿಕೊಳ್ಳುತ್ತೀರಿ. ನಮಗೆ ಸುಂದರ ಶರೀರ ಸಿಗುವುದೆಂದು ನಿಮಗೆ ತಿಳಿದಿದೆ, ಮನುಷ್ಯರನ್ನು ಪ್ರತ್ಯಕ್ಷದಲ್ಲಿ ದೇವತೆಗಳನ್ನಾಗಿ ಮಾಡಬೇಕಾಗಿದೆ. ಕೇವಲ ದೇವತೆಗಳ ಉಡುಪುಗಳನ್ನು ಧರಿಸಿದರೆ ಸಾಕು ಎಂದಲ್ಲ. ತಮ್ಮಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ, ದೇಹಾಭಿಮಾನ ಬರಬಾರದು. ಬಾಬಾ, ನಾವಂತೂ ತಮ್ಮಿಂದ ಆಸ್ತಿಯನ್ನು ಪಡೆದೇ ತೀರುತ್ತೇವೆ. ನಾವು ಭಾರತವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡಿಯೇ ತೀರುತ್ತೇವೆ. ನಿಶ್ಚಯ ಬುದ್ಧಿಯವರೇ ಹೇಳುತ್ತಾರಲ್ಲವೆ. ಕೆಲವರಂತೂ ಇಷ್ಟು ಸ್ವಲ್ಪ ಸಮಯದಲ್ಲಿ ಹೇಗಾಗುವುದೋ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಎಂದೂ ಈ ಸಂಶಯವನ್ನು ತರಬಾರದು. ಸಂಶಯದಲ್ಲಿ ಬಂದರೆ ಮತ್ತೆ ಸರ್ವೀಸಿನಲ್ಲಿ ಹಿಂದುಳಿಯುತ್ತೀರಿ, ಸಮಯವು ಬಹಳ ಕಡಿಮೆಯಿದೆ. ಎಷ್ಟು ಸಾಧ್ಯವೋ ತೀವ್ರ ಪುರುಷಾರ್ಥ ಮಾಡಬೇಕಾಗಿದೆ. ಸ್ವಲ್ಪ ಯುದ್ಧ ಮೊದಲಾದವುಗಳ ಸೂಚನೆಗಳು ಕಾಣಿಸಿಕೊಂಡರೆ ನಂತರ ನೋಡಿ, ಎಷ್ಟು ಪರಿಶ್ರಮ ಪಡುತ್ತಾರೆ. ನಾವು ಪೂರ್ಣ ನೆನಪಿನಲ್ಲಿ ಇರಲಿಲ್ಲವೆಂದರೆ ಆ ಸಮಯದಲ್ಲಂತೂ ನಾವು ಮಾಡಿ ಬಿಡಲು ಸಾಧ್ಯವಿಲ್ಲ ಎಂಬುದು ಅರ್ಥವಾಗುತ್ತದೆಯಲ್ಲವೆ. ಆ ಸಮಯದಲ್ಲಂತೂ ಬಹಳ ಆಪತ್ತುಗಳಿರುತ್ತವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ – ಎಷ್ಟು ಸಾಧ್ಯವೋ ಈಗಲೇ ತೀವ್ರ ಪುರುಷಾರ್ಥ ಮಾಡಿರಿ. ಇದು ಆತ್ಮಗಳ ಸ್ಪರ್ಧೆಯಾಗಿದೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಗುರಿಯನ್ನು ತಲುಪಿ ಅರ್ಥಾತ್ ತಂದೆಯ ಮನೆಗೆ ಹೋಗಿ ಮತ್ತೆ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ, ಇದು ಬಹಳ ಒಳ್ಳೆಯ ಸ್ಪರ್ಧೆಯಾಗಿದೆ. ತಂದೆಯು ತಿಳಿಸುತ್ತಾರೆ – ನನ್ನನ್ನು ಮುಟ್ಟಿ ಅರ್ಥಾತ್ ಮೂಲ ಮನೆಗೆ ಹೋಗಿ ಪುನಃ ಬರಬೇಕಾಗಿದೆ. ಮೊಟ್ಟ ಮೊದಲು ಯಾರು ಯೋಗ ಯುಕ್ತರಾಗಿರುವರೋ ಅವರೇ ಬರುತ್ತಾರೆ. ನಾವು ಮುಕ್ತಿಧಾಮಕ್ಕೆ ಹೋಗಬೇಕೆಂದು ಬಯಸುತ್ತಾರೆ. ಆದ್ದರಿಂದ ತಂದೆಯು ತಿಳಿಸುವುದೇನೆಂದರೆ – ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನೀವು ಮುಕ್ತಿಧಾಮಕ್ಕೆ ಬರುವಿರಿ. ಮುಕ್ತಿಧಾಮವಂತೂ ಎಲ್ಲರಿಗೂ ಇಷ್ಟವಿದೆ, ಪುನಃ ಪಾತ್ರವನ್ನು ಅಭಿನಯಿಸಲು ಇಲ್ಲಿಗೇ ಬರುತ್ತೀರಿ. ಮೋಕ್ಷವು ಯಾರಿಗೂ ಸಿಗುವುದಿಲ್ಲ. ಈಶ್ವರೀಯ ಇತಿಹಾಸ-ಭೂಗೋಳದಲ್ಲಿ ಮೋಕ್ಷವೆಂಬ ಪದವಿಲ್ಲ. ನಿಮಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ. ಉಳಿದೆಲ್ಲರೂ ಮುಕ್ತರಾಗಿ ಬಿಡುತ್ತಾರೆ. ರಾವಣ ರಾಜ್ಯದಿಂದ ಮುಕ್ತರಾಗಲೇಬೇಕಾಗಿದೆ. ಯಾರು ಪುರುಷಾರ್ಥ ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ಮಕ್ಕಳು ಬಹಳ ಮಧುರರಾಗಬೇಕಾಗಿದೆ, ಸ್ವಭಾವವು ಬಹಳ ಮಧುರವಾಗಿರಲಿ, ಕ್ರೋಧಿಗಳಾಗಬಾರದು. ದುರ್ವಾಸ ಮುನಿಯ ಹೆಸರಿದೆಯಲ್ಲವೆ. ಈ ರಾಜಋಷಿಗಳಲ್ಲಿಯೂ ಕೆಲಕೆಲವರು ಈ ರೀತಿಯಿದ್ದಾರೆ ಆದ್ದರಿಂದ ಸದಾ ತಮ್ಮ ಹೃದಯದ ಮೇಲೆ ಕೈಯಿಟ್ಟು ಕೇಳಿಕೊಳ್ಳಿ – ನಾನು ಏನು ಮಾಡುತ್ತೇನೆ! ಇದರಿಂದ ನನಗೆ ಏನು ಪದವಿ ಸಿಗುವುದು! ಒಂದುವೇಳೆ ಸರ್ವೀಸ್ ಮಾಡಲಿಲ್ಲ, ತನ್ನ ಸಮಾನರನ್ನಾಗಿ ಮಾಡಿಕೊಳ್ಳದಿದ್ದರೆ ಏನು ಪದವಿ ಸಿಗುವುದು, ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡಬಾರದು. ನೀವು ಮಕ್ಕಳಿಗೂ ಸಂಪೂರ್ಣ ರಾಜ್ಯವನ್ನು ಕೊಡುವುದಕ್ಕಾಗಿ ನಾನು ಬಂದಿದ್ದೇನೆ ಅಂದಮೇಲೆ ಸಾಹಸವನ್ನಿಟ್ಟು ಮಾಡಿ ತೋರಿಸಬೇಕಾಗಿದೆ. ಕೇವಲ ಕೇಳುವುದರಿಂದ ಏನೂ ಸಾಧ್ಯವಿಲ್ಲ. ತಂದೆಯ ಸೇವೆಯಲ್ಲಿ ತಮ್ಮ ಮೂಳೆ-ಮೂಳೆಗಳನ್ನು ಉಪಯೋಗಿಸಬೇಕಾಗಿದೆ. ಮಾಡಿಯೂ ಮಾಡುತ್ತಾರೆ ಆದರೆ ಕೆಲವೊಮ್ಮೆ ದೇಹಾಭಿಮಾನವು ಬರುವುದರಿಂದ ನಶೆಯು ಬಂದು ಬಿಡುತ್ತದೆ ಮತ್ತು ಕೆಳಗೆ ಬೀಳುತ್ತಾರೆ. ಮಾಯೆಯೂ ಸಹ ಕಡಿಮೆ ಶಕ್ತಿಶಾಲಿಯಲ್ಲ, ತಂದೆಯ ಶ್ರೀಮತದಂತೆ ನಡೆಯದಿದ್ದರೆ ಮಾಯೆಯು ಯುದ್ಧ ಮಾಡುತ್ತದೆ ಆಗ ತಂದೆಗೆ ವಿಚ್ಛೇದನ ಕೊಟ್ಟು ಬಿಡುತ್ತಾರೆ. ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ತಮ್ಮ ಮೇಲೆ ದಯೆ ಬರಬೇಕು. ತಂದೆಯು ಬಹಳ ಸಹಜವಾದ ಸೂಚನೆ ನೀಡುತ್ತಾರೆ. ಮಾಯೆಯ ಬಿರುಗಾಳಿಗಳಂತೂ ಬಹಳ ಬರುತ್ತವೆ ಆದರೆ ಮಹಾವೀರರಾಗಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸರ್ವೀಸಿನ ಉಮಂಗವನ್ನು ಇಟ್ಟುಕೊಂಡು ತಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಯಾರದೇ ಡಿಸ್ಸರ್ವೀಸ್ನ ಗಾಯನ ಮಾಡಬಾರದು. ಪರಚಿಂತನೆಯಲ್ಲಿ ತಮ್ಮ ಸಮಯವನ್ನು ಕಳೆಯಬಾರದು.

2. ಪ್ರಾಮಾಣಿಕ ಹಾಗೂ ನಿರಹಂಕಾರಿಯಾಗಿ ಸೇವೆಯನ್ನು ವೃದ್ಧಿ ಪಡಿಸಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಎದ್ದು ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ನುಡಿಯುವುದು ಮತ್ತು ನಡೆಯುವುದು ಸಮಾನವನ್ನಾಗಿ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಸದಾ ಸಫಲರಾಗಲು ತಂದೆ ಹಾಗೂ ಪರಿವಾರದೊಂದಿಗೆ ಸರಿಯಾದ ಸಂಬಂಧವಿರಬೇಕು. ಪ್ರತಿಯೊಬ್ಬರೂ ಮೂರು ಸರ್ಟಿಫಿಕೇಟುಗಳನ್ನು ತೆಗೆದುಕೊಳ್ಳಬೇಕಾಗಿದೆ – ತಂದೆ, ತಾವು ಮತ್ತು ಪರಿವಾರದಿಂದ. ಪರಿವಾರವನ್ನು ಸಂತುಷ್ಟ ಮಾಡುವುದಕ್ಕಾಗಿ ಚಿಕ್ಕದಾದ ಮಾತೊಂದನ್ನು ನೆನಪಿಟ್ಟುಕೊಳ್ಳಿರಿ – ಗೌರವ ಕೊಡುವ ರೆಕಾರ್ಡ್ ನಿರಂತರವಾಗಿ ನಡೆಯುತ್ತಿರಲಿ, ಇದರಲ್ಲಿ ನಿಷ್ಕಾಮಿಯಾಗಿರಿ. ತಂದೆಯನ್ನು ಸಂತುಷ್ಟ ಪಡಿಸುವುದಕ್ಕಾಗಿ ಸತ್ಯವಾಗಿರಿ. ಮತ್ತು ಸ್ವಯಂನೊಂದಿಗೆ ಸಂತುಷ್ಟವಾಗಿರಲು ಸದಾ ಶ್ರೀಮತದ ಗೆರೆಯೊಳಗೆ ಇರಬೇಕು. ಈ ಮೂರು ಸರ್ಟಿಫಿಕೇಟುಗಳು ಶ್ರೇಷ್ಠ ಪದವಿಯ ಅಧಿಕಾರಿಯನ್ನಾಗಿ ಮಾಡಿ ಬಿಡುತ್ತವೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top