02 August 2021 KANNADA Murli Today | Brahma Kumaris

Read and Listen today’s Gyan Murli in Kannada

August 1, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ಹೇಗೆ ಅಪಕಾರಿಗಳ ಮೇಲೂ ಉಪಕಾರ ಮಾಡುವರೋ ಹಾಗೆಯೇ ನೀವೂ ಸಹ ತಂದೆಯನ್ನು ಅನುಕರಣೆ ಮಾಡಿರಿ, ಸುಖದಾಯಿ ಆಗಿರಿ, ಈ ದೇಹವನ್ನು ಮರೆಯುತ್ತಾ ಹೋಗಿರಿ”

ಪ್ರಶ್ನೆ:: -

ದೇಹೀ- ಅಭಿಮಾನಿ ಆಗಿರುವಂತಹ ಮಕ್ಕಳ ಮುಖ್ಯ ಲಕ್ಷಣಗಳು ಏನಾಗಿರುತ್ತವೆ?

ಉತ್ತರ:-

ಅವರು ಪರಸ್ಪರದಲ್ಲಿ ಬಹಳ-ಬಹಳ ಆತ್ಮಿಕ ಪ್ರೀತಿಯಿರುವುದು. 2. ಅವರೆಂದಿಗೂ ಸಹ ಒಬ್ಬರಿನ್ನೊಬ್ಬರ ಕೊರತೆಗಳ ವರ್ಣನೆಯನ್ನು ಮಾಡುವುದಿಲ್ಲ. 3. ಅವರು ಬಹಳ-ಬಹಳ ಸುಖ ಕೊಡುವವರು ಆಗಿರುತ್ತಾರೆ. 4. ಅವರಲ್ಲಿ ಎಂದಿಗೂ ಸಹ ಖುಷಿಯು ಮಾಯವಾಗುವುದಿಲ್ಲ. ಸದಾ ಅಪಾರ ಖುಷಿಯಲ್ಲಿರುವರು. 5. ಎಂದಿಗೂ ಸಹ ಮತಭೇದದಲ್ಲಿ ಬರುವುದಿಲ್ಲ. 6. ನಾವು ಆತ್ಮ ಸಹೋದರ-ಸಹೋದರರು ಆಗಿದ್ದೇವೆ – ಈ ಸ್ಮೃತಿಯಿಂದ ಗುಣಗ್ರಾಹಿ ಆಗಿರುತ್ತಾರೆ, ಅವರಿಗೆ ಎಲ್ಲರಲ್ಲಿ ಗುಣಗಳೇ ಕಾಣಿಸುತ್ತವೆ. ಅವರು ಸ್ವಯಂ ಸಹ ಗುಣವಂತರು ಆಗಿರುವರು ಹಾಗೂ ಅನ್ಯರನ್ನೂ ಗುಣವಂತರನ್ನಾಗಿ ಮಾಡುವರು. 7. ಅವರಿಗೆ ಒಬ್ಬ ತಂದೆಯ ಹೊರತು ಮತ್ತ್ಯಾರೂ ನೆನಪಿಗೆ ಬರುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಸರ್ವ ಶ್ರೇಷ್ಠ ಬೇಹದ್ದಿನ ತಂದೆಯ ಸನ್ಮುಖದಲ್ಲಿ ನೀವೆಲ್ಲಾ ಮಕ್ಕಳು ಕುಳಿತುಕೊಂಡಿದ್ದೀರಿ. ನೀವೆಷ್ಟು ಭಾಗ್ಯಶಾಲಿ ಆಗಿರುವಿರಿ, ಯಾರಿಗೆ ಅಂತಹ ತಂದೆಯು ಸಿಕ್ಕಿದ್ದಾರೆ. ನೀವು ಜ್ಞಾನ ಸಾಗರ ತಂದೆಯ ಬಳಿ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಲು, ಸಂಪಾದನೆ ಮಾಡಿಕೊಳ್ಳುವುದಕ್ಕಾಗಿ ಬಂದಿದ್ದೀರಿ. ತಂದೆಯು ನೀವು ಮಧುರಾತಿ ಮಧುರ ಮಕ್ಕಳನ್ನು ಎಷ್ಟೊಂದು ಶ್ರೇಷ್ಠ ಮಟ್ಟಕ್ಕೆ ಕರೆದುಕೊಂಡು ಹೋಗುವರು. ತಂದೆಯಂತು ಕೇವಲ ನೀವು ಮಕ್ಕಳನ್ನಷ್ಟೇ ನೋಡುವರು, ಅವರಂತು ಯಾರನ್ನೂ ನೆನಪು ಮಾಡುವುದಿಲ್ಲ. ಇವರ ಆತ್ಮವಂತು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಹೇಳುವರು – ನಾವಿಬ್ಬರೂ ನೀವು ಮಕ್ಕಳನ್ನೇ ನೋಡುವೆವು. ನಾನಾತ್ಮನನ್ನಂತು ಸಾಕ್ಷಿಯಾಗಿ ನೋಡಬಾರದು ಆದರೆ ತಂದೆಯ ಸಂಗದಲ್ಲಿ ನಾನೂ ಸಹ ಇದೇ ರೀತಿ ನೋಡುತ್ತೇನೆ. ತಂದೆಯ ಜೊತೆಯಲ್ಲಂತು ಇರುತ್ತೇನಲ್ಲವೆ. ಅವರ ಮಗುವಾಗಿದ್ದೇನೆ ಅಂದಾಗ ಜೊತೆಯಲ್ಲಿದ್ದು ನೋಡುತ್ತೇನೆ. ನಾನು ವಿಶ್ವದ ಮಾಲೀಕನಾಗಿ ಪರಿಕ್ರಮಿಸುತ್ತೇನೆ. ಹೇಗೆಂದರೆ ಇದನ್ನು ನಾನೇ ಮಾಡುತ್ತೇನೆ, ನಾನು ದೃಷ್ಟಿ ಕೊಡುತ್ತೇನೆ. ಇದರಲ್ಲಿ ದೇಹ ಸಹಿತ ಎಲ್ಲವನ್ನೂ ಮರೆಯಬೇಕಾಗುವುದು, ಉಳಿದಂತೆ ತಂದೆ ಮತ್ತು ಮಗುವು ಹೇಗೆ ಒಂದಾಗಿ ಬಿಡುತ್ತಾರೆ. ಅದಕ್ಕಾಗಿ ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಬಹಳ ಚೆನ್ನಾಗಿ ಪುರುಷಾರ್ಥ ಮಾಡಿರಿ. ಹೇಗೆ ತಂದೆಯು ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆಯೋ ಹಾಗೆಯೇ ನೀವು ಫಾಲೋ ಫಾದರ್ (ತಂದೆಯನ್ನು ಅನುಕರಣೆ ಮಾಡುವುದು) ಮಾಡಿರಿ, ಸುಖದಾಯಿ ಆಗಿರಿ. ಪರಸ್ಪರದಲ್ಲಿ ಎಂದಿಗೂ ಸಹ ಜಗಳ-ಹೊಡೆದಾಟ ಮಾಡಬಾರದು. ತಮ್ಮನ್ನು ಆತ್ಮನೆಂದು ತಿಳಿದುಕೊಂಡು ಈ ದೇಹವನ್ನು ಮರೆಯುತ್ತಾ ಹೋಗಿ. ಒಬ್ಬ ತಂದೆಯ ಹೊರತು ಮತ್ತ್ಯಾರೂ ನೆನಪಿಗೇ ಬರಬಾರದು.ಇದೂ ಸಹ ಹೇಗೆಂದರೆ ಬದುಕಿದ್ದಂತೆಯೇ ಸಾಯುವ ಸ್ಥಿತಿಯಾಗಿದೆ. ಈ ಪ್ರಪಂಚದಿಂದ ಸತ್ತು ಹೋದಂತೆ, ಇದಕ್ಕಾಗಿ ಹೇಳುವರು – ತಾವು ಸತ್ತರೆ ಇಡೀ ಜಗತ್ತೇ ಸತ್ತಂತೆ.ಇಲ್ಲಿ ನೀವು ಬದುಕಿದ್ದಂತೆಯೇ ಸಾಯಬೇಕಾಗಿದೆ, ಶರೀರದ ಪರಿವೆಯಿಂದ ಹಾರುತ್ತಿರಿ. ಏಕಾಂತದಲ್ಲಿ ಕುಳಿತುಕೊಂಡು ಅಭ್ಯಾಸವನ್ನು ಮಾಡುತ್ತಿರಿ. ಬೆಳಗ್ಗೆ ಏಕಾಂತದಲ್ಲಿ ಕುಳಿತುಕೊಂಡು ತಮ್ಮೊಂದಿಗೆ ಮಾತನಾಡಿಕೊಳ್ಳಿರಿ. ಬಹಳ ಒಲವಿನಿಂದ ತಂದೆಯನ್ನು ನೆನಪು ಮಾಡಿರಿ. ಬಾಬಾ ಈಗೀಗ ನಾವು ತಮ್ಮ ಮಡಿಲಿಗೆ ಬಂದು ಬಿಟ್ಟೆವು ಅಷ್ಟೆ, ಒಬ್ಬರ ನೆನಪಿನಲ್ಲಿಯೇ ಶರೀರದ ಅಂತ್ಯವಾಗಲಿ ಅಷ್ಟೇ…… ಇದಕ್ಕೇ ಏಕಾಂತ ಎಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈ ಶರೀರವೆಂಬ ಪೊರೆ(ಚರ್ಮ)ಯು ಬಿಟ್ಟು ಹೋಗುವುದು.

ನೀವು ತಿಳಿದುಕೊಂಡಿದ್ದೀರಿ – ಇದು ಹಳೆಯ ಪ್ರಪಂಚ, ಹಳೆಯ ದೇಹವು ನಶಿಸಿ ಹೋಗುವುದು. ಬಾಕಿ ಪುರುಷಾರ್ಥಕ್ಕಾಗಿ ಸ್ವಲ್ಪವೇ ಸಂಗಮದ ಸಮಯವಿದೆ. ಮಕ್ಕಳು ಕೇಳುವರು – ಬಾಬಾ ಈ ವಿದ್ಯಾಭ್ಯಾಸವು ಎಲ್ಲಿಯವರೆಗೆ ನಡೆಯುವುದು? ಬಾಬಾರವರು ಹೇಳುವರು – ಎಲ್ಲಿಯವರೆಗೆ ದೈವೀ ರಾಜಧಾನಿ ಸ್ಥಾಪನೆಯಾಗುವುದು, ಅಲ್ಲಿಯವರೆಗೆ ತಿಳಿಸುತ್ತಾ ಇರುತೇವೆ ನಂತರ ಹೊಸ ಪ್ರಪಂಚದಲ್ಲಿ ವರ್ಗಾವಣೆ ಆಗುವಿರಿ. ಇದು ಹಳೆಯ ಶರೀರವಾಗಿದೆ, ಅಲ್ಪಸ್ವಲ್ಪ ಕರ್ಮಭೋಗವೂ ನಡೆಯುತ್ತಿರುತ್ತದೆ, ಇದರಲ್ಲಿ ಬಾಬಾರವರು ಸಹಯೋಗ ಕೊಡಲಿ ಎಂಬ ಭರವಸೆಯನ್ನು ಇಟ್ಟುಕೊಳ್ಳಬಾರದು. ದಿವಾಳಿಯಾದರು, ರೋಗಿಯಾದರು ಎಂದರೆ ತಂದೆಯು ಹೇಳುವರು – ಇದು ನಿಮ್ಮ ಲೆಕ್ಕಾಚಾರವಾಗಿದೆ. ಇದಿದ್ದರೂ ಸಹ ಯೋಗದಿಂದ ಆಯಸ್ಸು ಹೆಚ್ಚಾಗುವುದು. ತಮಗಾಗಿ ಪರಿಶ್ರಮ ಪಡಬೇಕು, ಕೃಪೆಯನ್ನು ಬೇಡಬಾರದು. ತಂದೆಯನ್ನು ಎಷ್ಟು ನೆನಪು ಮಾಡುವಿರಿ, ಇದರಲ್ಲಿಯೇ ಕಲ್ಯಾಣವಿದೆ. ಎಷ್ಟು ಸಾಧ್ಯವೋ ಯೋಗಬಲದಿಂದ ಕೆಲಸ ತೆಗೆದುಕೊಳ್ಳಿರಿ. ಭಕ್ತಿಮಾರ್ಗದಲ್ಲಿ ಮಹಿಮೆ ಮಾಡುವರು – ನನ್ನನ್ನು ರೆಪ್ಪೆಗಳಲ್ಲಿ ಗುಪ್ತವಾಗಿಡಿ….. ಪ್ರಿಯವಾದ ವಸ್ತುವನ್ನು ಕಣ್ಮಣಿ, ಪ್ರಾಣ ಪ್ರಿಯ ಎಂದು ಹೇಳುವರು. ಈ ತಂದೆಯಂತು ಬಹಳ ಪ್ರಿಯವಾಗಿದ್ದಾರೆ ಆದರೆ ಗುಪ್ತವಾಗಿದ್ದಾರೆ. ಅವರಿಗಾಗಿ ಇಂತಹ ಪ್ರೀತಿಯಿರಬೇಕು, ಅದನ್ನು ಕೇಳಲೇಬೇಡಿ. ಮಕ್ಕಳಿಗಂತು ತಂದೆಯು ತನ್ನ ರೆಪ್ಪೆಗಳಲ್ಲಿ ಗುಪ್ತವಾಗಿಯೇ ಇಡುತ್ತಾರೆ. ರೆಪ್ಪೆಗಳೆಂದರೆ ಈ ಕಣ್ಣುಗಳದಲ್ಲ, ಇದಂತು ಬುದ್ಧಿಯ ಮಾತಾಗಿದೆ. ಅತಿ ಪ್ರಿಯವಾದ ನಿರಾಕಾರ ತಂದೆಯು ನಮಗೆ ಓದಿಸುತ್ತಿದ್ದಾರೆ. ಅವರು ಜ್ಞಾನದ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ. ಅಂತಹ ಅತಿ ಪ್ರಿಯ ತಂದೆಯ ಜೊತೆಗೆ ಎಷ್ಟೊಂದು ಪ್ರೀತಿಯಿರಬೇಕು!! ಅವರು ಮಕ್ಕಳಿಗಾಗಿ ಎಷ್ಟೊಂದು ನಿಷ್ಕಾಮ ಸೇವೆಯನ್ನು ಮಾಡುತ್ತಾರೆ.ನೀವು ಮಕ್ಕಳನ್ನು ವಜ್ರ ಸಮಾನ ಮಾಡುತ್ತಾರೆ. ಎಷ್ಟೊಂದು ಮಧುರ ತಂದೆಯಾಗಿದ್ದಾರೆ, ಎಷ್ಟೊಂದು ನಿರಹಂಕಾರಿಯಾಗಿ ನೀವು ಮಕ್ಕಳ ಸೇವೆಯನ್ನು ಮಾಡುತ್ತಾರೆ! ಅಂದಮೇಲೆ ನೀವು ಮಕ್ಕಳೂ ಸಹ ಅಷ್ಟೇ ಪ್ರೀತಿಯಿಂದ ಸೇವೆಯನ್ನು ಮಾಡಬೇಕಾಗಿದೆ, ಶ್ರೀಮತದಂತೆ ನಡೆಯಬೇಕಾಗಿದೆ. ಎಲ್ಲಿಯಾದರೂ ತಮ್ಮ ಮತವು (ಮನಮತ) ಕಾಣಿಸಿತೆಂದರೆ ಅದೃಷ್ಟಕ್ಕೆ ಗೆರೆಯುಂಟಾಗುವುದು (ಅದೃಷ್ಟವು ಕ್ಯಾನ್ಸಲ್ ಆಗುವುದು).

ಪರಸ್ಪರದಲ್ಲಿ ನೀವು ಮಕ್ಕಳು ಬಹಳ-ಬಹಳ ಆತ್ಮಿಕ ಪ್ರೀತಿಯಿಂದ ಇರಬೇಕು ಆದರೆ ದೇಹ ಅಭಿಮಾನದಲ್ಲಿ ಬರುವ ಕಾರಣದಿಂದ ಒಬ್ಬರಿನ್ನೊಬ್ಬರಲ್ಲಿ ಆ ಪ್ರೀತಿಯಿರುವುದಿಲ್ಲ. ಒಬ್ಬರಿನ್ನೊಬ್ಬರ ಕೊರತೆಗಳನ್ನೇ ತೆಗೆಯುತ್ತಾ ಇರುತ್ತಾರೆ, ಇಂತಹವರು ಹೀಗಿ, ಅವರು ಹೀಗೆ ಮಾಡುವರು…. ಯಾವಾಗ ನೀವು ದೇಹೀ-ಅಭಿಮಾನಿ ಆಗಿದ್ದಿರಿ, ಆಗ ಯಾರಲ್ಲಿಯೂ ಕೊರತೆಗಳನ್ನೇ ತೆಗೆಯುತ್ತಿರಲಿಲ್ಲ. ಪರಸ್ಪರದಲ್ಲಿ ಬಹಳ ಪ್ರೀತಿಯಿತ್ತು, ಈಗ ಪುನಃ ಅದೇ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಮುಂಚೆ ನೀವು ಎಷ್ಟೊಂದು ಮಧುರರಾಗಿ ಇದ್ದಿರಿ, ಮತ್ತೆ ಇದೇ ರೀತಿ ಮಧುರ ಸದಾ ಸುಖ ಕೊಡುವವರಾಗಿರಿ. ದೇಹ ಅಭಿಮಾನದಲ್ಲಿ ಬರುವುದರಿಂದ ದುಃಖ ಕೊಡುವವರಾದಿರಿ ಆದ್ದರಿಂದ ನಿಮ್ಮಲ್ಲಿ ಆತ್ಮಿಕ ಖುಷಿಯು ಮಾಯವಾಗಿ ಬಿಟ್ಟಿತು. ಜೀವನವೂ ಸಹ ಚಿಕ್ಕದಾಗಿ ಹೋಯಿತು. ಈಗ ಮತ್ತೆ ತಂದೆಯು ಬಂದಿದ್ದಾರೆ – ನಿಮ್ಮನ್ನು ಸತೋಪ್ರಧಾನರನ್ನಾಗಿ ಮಾಡಿ ಸದಾ ಸುಖದಾಯಿ ಮಾಡುವುದಕ್ಕಾಗಿ. ನೀವೆಷ್ಟು ತಂದೆಯನ್ನು ನೆನಪು ಮಾಡುತ್ತಾ ಇರುವಿರಿ, ಅಷ್ಟು ಕೊರತೆಗಳೆಲ್ಲವೂ ಹೊರಟು ಹೋಗುವುದು. ಮತಭೇದವು ಬಿಟ್ಟು ಹೋಗುವುದು. ನಾವು ಆತ್ಮ ಸಹೋದರ-ಸಹೋದರ ಆಗಿದ್ದೇವೆ ಎಂಬುದು ಪರಿಪಕ್ವವಾಗಿ ನೆನಪಿರಲಿ. ಆತ್ಮ ಸಹೋದರ-ಸಹೋದರನನ್ನು ನೋಡುವುದರಿಂದ ಸದಾ ಗುಣಗಳೇ ಕಾಣಿಸುತ್ತದೆ. ಎಲ್ಲರನ್ನು ಗುಣವಂತರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿರಿ. ಅವಗುಣಗಳನ್ನು ಬಿಟ್ಟು ಗುಣಗಳನ್ನೇ ಧಾರಣೆ ಮಾಡಿಕೊಳ್ಳಿರಿ. ಎಂದಿಗೂ ಯಾರದೇ ಗ್ಲಾನಿಯನ್ನು ಮಆಡಬಾರದು. ಕೆಲಕೆಲವರಲಿ ಇಂತಹ ಕೊರತೆಗಳಿವೆ, ಅದನ್ನು ಅವರನ್ನವರೂ ಸಹ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರು ಸ್ವಯಂನ್ನು ಬಹಳ ಒಳ್ಳೆಯವರೆಂದು ತಿಳಿಯುವರು ಆದರೆ ಕೊರತೆಗಳಿರುವ ಕಾರಣದಿಂದ ಕೆಲವೊಂದು ಕಡೆ ಉಲ್ಟಾ ಮಾತುಗಳು ಹೊರ ಬರುತ್ತವೆ. ಸತೋಪ್ರಧಾನ ಸ್ಥಿತಿಯಲ್ಲಿ ಇಂತಹ ಮಾತುಗಳಾಗುವುದಿಲ್ಲ. ತಮ್ಮನ್ನು ತಾವು ನೋಡಿಕೊಳ್ಳಿರಿ – ನಾನೆಷ್ಟು ಮಧುರನಾಗಿರುವೆನು? ನಮ್ಮ ತಂದೆಯ ಜೊತೆ ಎಷ್ಟು ಪ್ರೀತಿಯಿದೆ? ತಂದೆಯೊಂದಿಗೆ ಈ ರೀತಿ ಪ್ರೀತಿಯಿರಲಿ, ಒಂದೇ ಸಾರಿ ಬುದ್ಧಿಯ ಜೋಡಣೆಯಾಗಲಿ. ಬಾಬಾ, ತಾವು ನಮ್ಮನ್ನೆಷ್ಟು ಶ್ರೇಷ್ಠ ಬುದ್ಧಿವಂತರನ್ನಾಗಿ ಮಾಡುವಿರಿ, ಸ್ವರ್ಗದ ಮಾಲೀಕರನ್ನಾಗಿ ಮಾಡುವಿರಿ. ಈ ರೀತಿ ಒಳಗಿಂದೊಳಗೆ ತಂದೆಯ ಮಹಿಮೆಯನ್ನು ಮಾಡುತ್ತಾ ರೋಮಾಂಚನವಾಗಬೇಕು.ಆತ್ಮಿಕ ಖುಷಿಯಲ್ಲಿ ಇರಬೇಕಾಗಿದೆ. ಮಹಿಮೆಯನ್ನೂ ಮಾಡುತ್ತಾರೆ – ಖುಷಿಯಂತಹ ಔಷಧಿಯಿಲ್ಲ ಎಂದು. ತಂದೆಯು ಸಿಕ್ಕಿರುವ ಖುಷಿಯೆಷ್ಟಿರಬೇಕು! ಸಂಗಮದಲ್ಲಿಯೇ ನೀವು ಮಕ್ಕಳಿಗೆ 21 ಜನ್ಮಗಳಿಗಾಗಿಸ್ ಅದಾ ಖುಷಿಯಲ್ಲಿರುವ ಔಷಧಿಯು ಸಿಕ್ಕಿ ಬಿಡುವುದು. ನಂತರ ಯಾರಿಗೂ ಯಾವುದೇ ಚಿಂತೆಯೇ ಇರುವುದಿಲ್ಲ. ಈಗಂತು ಎಷ್ಟೊಂದು ಚಿಂತೆಗಳಿವೆ ಆದ್ದರಿಂದ ಅದರ ಪ್ರಭಾವವು ಶರೀರದ ಮೇಲೆ ಬರುವುದು. ನಿಮಗಂತು ಯಾವುದೇ ಮಾತಿನ ಚಿಂತೆಯಿಲ್ಲ, ಈ ಖುಷಿಯ ಔಷಧಿಯನ್ನು ನೀವು ಒಬ್ಬರಿನ್ನೊಬ್ಬರಿಗೆ ತಿನ್ನಿಸುತ್ತಾ ಇರಬೇಕು. ಒಬ್ಬರಿನ್ನೊಬ್ಬರಿಗೆ ಈ ಶ್ರೇಷ್ಠವಾದ ಸತ್ಕಾರ ಮಾಡಬೇಕಾಗಿದೆ. ಇಂತಹ ಸತ್ಕಾರ ಮನುಷ್ಯರು ಮನುಷ್ಯರಿಗೆ ಮಾಡಲು ಸಾಧ್ಯವಿಲ್ಲ. ನೀವು ತಂದೆಯ ಶ್ರೀಮತದಂತೆ ಈ ಸತ್ಕಾರವನ್ನು ಮಾಡುತ್ತೀರಿ. ಯಾರಿಗೇ ಆಗಲಿ ತಂದೆಯ ಪರಿಚಯವನ್ನು ಕೊಡುವುದೇ ಖುಷಿಯ ಸಮಾಚಾರವೂ ಸಹ ಆಗಿದೆ. ಇದು ಜ್ಞಾನ ಮತ್ತು ಯೋಗದ ಅತ್ಯುತ್ತಮ ಅದ್ಭುತವಾದ ಔಷಧಿಯಾಗಿದೆ. ಈ ಔಷಧಿಯನ್ನು ಒಬ್ಬರೇ ಆತ್ಮಿಕ ಸರ್ಜನ್ನ ಮೂಲಕ ಸಿಗುವುದು. ಮನ್ಮನಾಭವ-ಮಧ್ಯಾಜೀಭವ – ಕೇವಲ ಇವೆರಡು ವರ್ಶನ್ಸ್ ಔಷಧಿಯಾಗಿದೆ. ಅತಿ ಪ್ರಿಯವಾದ ತಂದೆಯಿಂದ ನೀವು ಸದಾ ನಿರೋಗಿ, ಸದಾ ಸಂಪತ್ತಿವಂತರು ಆಗಿ ಬಿಡುತ್ತೀರಿ. ಹಾಗಾದರೆ ನೀವು ಮಕ್ಕಳು ಈ ಮಾತುಗಳನ್ನು ಸ್ಮರಣೆ ಮಾಡುತ್ತಾ ಹರ್ಷಿತವಾಗಿರಬೇಕು. ಈಶ್ವರೀಯ ವಿದ್ಯಾರ್ಥಿ ಜೀವನವು ಅತ್ಯುತ್ತಮ ಜೀವನವಾಗಿದೆ – ಈ ಮಹಿಮೆಯೂ ಸಹ ಈ ಸಮಯದ್ದಾಗಿದೆ.ಎಷ್ಟು ಸಾಧ್ಯವೋ ಒಬ್ಬರಿನ್ನೊಬ್ಬರಿಗೆ ಈ ಆತ್ಮಿಕ ಔಷಧಿಯನ್ನು ತಲುಪಿಸಿರಿ, ಒಬ್ಬರಿನ್ನೊಬ್ಬರ ಉನ್ನತಿ ಮಾಡಿರಿ, ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ. ಬಹಳ ತಾಳ್ಮೆಯಿಂದ, ಗಂಭೀರತೆಯಿಂದ, ಬುದ್ಧಿವಂತಿಕೆಯಿಂದ ತಂದೆಯನ್ನು ನೆನಪು ಮಾಡಿರಿ, ತಮ್ಮ ಜೀವನವನ್ನು ವಜ್ರಸಮಾನ ಮಾಡಿಕೊಳ್ಳಿರಿ.

ಮಧುರ ಮಕ್ಕಳೇ, ತಂದೆಯವರಿಂದ ಯಾವ ಶ್ರೀಮತವು ಸಿಗುವುದೋ ಅದರಲ್ಲಿ ತಪ್ಪು ಮಾಡಬಾರದು. ಎಲ್ಲರಿಗೂ ತಂದೆಯ ಸಂದೇಶವನ್ನು ತಲುಪಿಸಬೇಕಾಗಿದೆ. ತಂದೆಯ ಸಂದೇಶವಂತು ಎಲ್ಲರಿಗೂ ಸಿಗಲೇಬೇಕಲ್ಲವೆ. ಬಹಳ ಸಹಜವಾದ ಸಂದೇಶವಾಗಿದೆ – ಕೇವಲ ಇಷ್ಟು ಹೇಳಿರಿ, ತಮ್ಮನ್ನು ಆತ್ಮನೆಂದು ತಿಳಿದುಕೊಂಡು ತಂದೆಯನ್ನು ನೆನಪು ಮಾಡಿರಿ ಹಾಗೂ ಕರ್ಮೇಂದ್ರಿಯಗಳಿಂದ ಮನಸಾ-ವಾಚಾ-ಕರ್ಮದಿಂದ ಯಾವುದೇ ಕೆಟ್ಟ ಕರ್ಮವನ್ನು ಮಾಡಬೇಡಿ. ಒಂದು ದಿನ ನಿಮ್ಮ ಈ ಶಾಂತಿಯ ಬಲದ ಧ್ವನಿ ಮೊಳಗುವುದು. ದಿನ ಕಳೆದಂತೆ ನಿಮ್ಮ ಉನ್ನತಿಯಾಗುತ್ತಾ ಹೋಗುವುದು. ನಿಮ್ಮ ಹೆಸರು ಪ್ರಸಿದ್ಧವಾಗುವುದು. ಎಲ್ಲರೂ ತಿಳಿಯುವರು – ಇದು ಒಳ್ಳೆಯ ಸಂಸ್ಥೆಯಾಗಿದೆ, ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ, ಬಹಳ ಸಹಜ ರೀತಿಯಾಗಿ ಮಾರ್ಗವನ್ನು ತಿಳಿಸುತ್ತಾರೆ. ಬ್ರಾಹ್ಮಣರ ಈ ವೃಕ್ಷವು ಬಹಳ ವೃದ್ಧಿಯಾಗುತ್ತಾ ಹೋಗುವುದು, ಪ್ರಜೆಗಳಾಗುತ್ತಾ ಇರುವರು. ಸೇವಾಕೇಂದ್ರವು ಬಹಳ ವೃದ್ಧಿಯನ್ನು ಹೊಂದುವುದು. ನಿಮ್ಮ ಪ್ರದರ್ಶನಿಯೂ ಸಹ ಹಳ್ಳಿ-ಹಳ್ಳಿಯಲ್ಲಿರುತ್ತದೆ. ನೀವು ಮಕ್ಕಳು ಬಹಳ ಶ್ರೇಷ್ಠವಾದ ಸೇವೆಯನ್ನು ಮಾಡಬೇಕಾಗಿದೆ. ನಿಮ್ಮ ಹೊಸ-ಹೊಸ ಸೇವಾಕೇಂದ್ರಗಳು ತೆರೆಯುತ್ತಾ ಹೋಗುವುದು, ಅದರಲ್ಲಿ ಅನೇಕ ಮನುಷ್ಯರು ಬಂದು ತನ್ನ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳುತ್ತಾ ಇರುತ್ತಾರೆ.ನೀವು ಬಹಳ ಪ್ರೀತಿಯಿಂದ ಒಬ್ಬೊಬ್ಬರ ಸಂಭಾಲ್ನೆ ಮಾಡಬೇಕಾಗುವುದು. ಪಾಪ! ಎಲ್ಲಿ ಯಾರೂ ಸಹ ಜಾರಿ ಹೋಗಬಾರದು. ಎಷ್ಟು ಹೆಚ್ಚು ಸೇವಾಕೇಂದ್ರಗಳು ಆಗುತ್ತಿರುತ್ತವೆಯೋ ಅಷ್ಟು ಹೆಚ್ಚು ಮಂದಿ ಬಂದು ಜೀವದಾನವನ್ನು ಪಡೆಯುವರು. ಯಾವಾಗ ತಾವು ಮಕ್ಕಳ ಪ್ರಭಾವ ಬೀರುವುದೋ ಆಗ ಅನೇಕರು ಕರೆಯುವರು – ಇಲ್ಲಿಗೆ ಬಂದು ನಮಗೆ ಮನುಷ್ಯನಿಂದ ದೇವತೆಯನ್ನಾಗಿ ಮಾಡುವ ರಾಜಯೋಗವನ್ನು ಕಲಿಸಿರಿ ಎಂದು. ಅದೇ ಭಗವಂತನು ಬಂದು ಅಬುವಿನಲ್ಲಿ ಆಗಮಿಸಿದ್ದಾರೆ ಎನ್ನುವುದು ಮುಂದೆ ನಡೆದಂತೆ ಬಹಳಷ್ಟು ಹರಡುವುದು.

ನೀವು ಮಕ್ಕಳು ನೋಡುತ್ತಿದ್ದೀರಿ – ಈ ಸಮಯ ಹಳೆಯ ಪ್ರಪಂಚದಲ್ಲಿ ಅನೇಕ ಕೋಲಾಹಲಗಳಿವೆ. ಈಗ ಇವೆಲ್ಲಾ ಕೋಲಾಹಲಗಳು ಸಮಾಪ್ತಿಯಾಗುವುದು, ಇದಕ್ಕಾಗಿ ನೀವು ಯಾವುದೇ ಚಿಂತೆಯನ್ನು ಮಾಡಬಾರದು. ನೀವು ಎಲ್ಲರಿಗೂ ತಿಳಿಸಿ – ಇದರ ಚಿಂತೆ ಮಾಡಬೇಡಿ, ಈಗ ಈ ಹಳೆಯ ಪ್ರಪಂಚವು ಹೋಯಿತೆಂದರೆ ಹೋಯಿತು, ಇದರಲ್ಲಿ ಮೋಹವನ್ನಿಡಬೇಡಿ, ಒಂದುವೇಳೆ ಮೋಹವಿದ್ದರೆ ಹೃದಯವು ಶುದ್ಧವಾಗುವುದಿಲ್ಲ. ಮತ್ತೆ ಅಪಾರ ಖುಷಿಯೂ ಇರುವುದಿಲ್ಲ. ಮಕ್ಕಳಿಗೆ ಅಪಾರ ಜ್ಞಾನ ಧನದ ಖಜಾನೆಯು ಸಿಗುತ್ತಿರುತ್ತದೆ ಅಂದಮೇಲೆ ಅಪಾರ ಖುಷಿಯೂ ಇರಬೇಕು. ಹೃದಯವು ಎಷ್ಟು ಶುದ್ಧವಾಗುವುದೋ ಅಷ್ಟು ಅನ್ಯರನ್ನೂ ಶುದ್ಧಗೊಳಿಸುವರು. ಯೋಗದ ಸ್ಥಿತಿಯಿಂದಲೇ ಹೃದಯವು ಶುದ್ಧವಾಗುತ್ತದೆ. ನೀವು ಮಕ್ಕಳಲ್ಲಿ ಯೋಗಿಯಾಗುವ, ಅನ್ಯರನ್ನೂ ಯೋಗಿ ಮಾಡುವ ಆಸಕ್ತಿಯಿರಬೇಕು. ದೇಹದಲ್ಲೇನಾದರೂ ಮೋಹವಿದೆ, ದೇಹಾಭಿಮಾನವು ಇರುತ್ತದೆಯೆಂದರೆ ತಿಳಿದುಕೊಳ್ಳಿರಿ – ನಮ್ಮ ಸ್ಥಿತಿಯು ಬಹಳ ಕಚ್ಚಾ (ಅಪೂರ್ಣ) ಇದೆ. ದೇಹಿ ಅಭಿಮಾನಿ ಮಕ್ಕಳೇ ಸತ್ಯ ವಜ್ರವಾಗುವರು ಆದ್ದರಿಂದ ಎಷ್ಟು ಸಾಧ್ಯವೋ ದೇಹಿ ಅಭಿಮಾನಿಯಾಗುವ ಅಭ್ಯಾಸ ಮಾಡಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನ ನಿರಹಂಕಾರಿ ಆಗಿದ್ದು ಬಹಳ ಪ್ರೀತಿಯಿಂದ ಸರ್ವರ ಸೇವೆಯನ್ನು ಮಾಡಬೇಕಾಗಿದೆ. ಶ್ರೀಮತದನುಸಾರ ನಡೆಯಬೇಕಾಗಿದೆ. ತಮ್ಮ ಮತದಂತೆ ನಡೆದು ಅದೃಷ್ಠಕ್ಕೆ ಗೆರೆಯನ್ನುಂಟು ಮಾಡಿಕೊಳ್ಳಬಾರದು.

2. ಸಂಗಮದಲ್ಲಿ ತಂದೆಯ ಮೂಲಕ ಏನೆಲ್ಲಾ ಖುಷಿಯ ಔಷಧಿಯು ಸಿಕ್ಕಿದೆಯೋ, ಆ ಔಷಧಿಯನ್ನೇ ಸೇವಿಸುತ್ತಾ ಹಾಗೂ ಅನ್ಯರಿಗೂ ಸೇವನೆ ಮಾಡಿಸುತ್ತಾ ಇರಬೇಕು. ತಮ್ಮ ಸಮಯವನ್ನು ವ್ಯರ್ಥಗೊಳಿಸಬಾರದು. ಬಹಳ ತಾಳ್ಮೆ, ಗಂಭೀರತೆಯಿಂದ, ಬುದ್ಧಿವಂತಿಕೆಯಿಂದ ತಂದೆಯನ್ನು ನೆನಪು ಮಾಡುತ್ತಾ, ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಸೇವಾಧಾರಿಯು ಸೇವೆಯಲ್ಲಿ ಸಫಲತೆಯ ಅನುಭೂತಿಯನ್ನು ಆಗಲೇ ಮಾಡಬಹುದು, ಯಾವಾಗ “ನಾನು” ಎಂಬುದರ ತ್ಯಾಗವಾಗಿರುತ್ತದೆ. ನಾನು ಸೇವೆ ಮಾಡುತ್ತಿದ್ದೇನೆ, ನಾನು ಸೇವೆಯನ್ನು ಮಾಡಿದೆನು – ಈ ಸೇವಾ ಭಾವದ ತ್ಯಾಗವಿರಲಿ. ನಾನು ಎಂಬುದಿರಬಾರದು ಆದರೆ ನಾನು ಮಾಡುವವನು, ಮಾಡಿಸುವವರು ತಂದೆಯಾಗಿದ್ದಾರೆ. “ನಾನು” ಎಂಬುದು ತಂದೆಯ ಪ್ರೀತಿಯಲ್ಲಿ ಲೀನವಾಗಿ ಬಿಡಲಿ – ಇದಕ್ಕೆ ಸೇವೆಯಲ್ಲಿ ಸದಾ ಮಗ್ನವಾಗಿರುವ ತ್ಯಾಗಮೂರ್ತಿ-ಸತ್ಯ ಸೇವಾಧಾರಿ ಎಂದು ಹೇಳಲಾಗುವುದು. ಮಾಡಿಸುವವರು ಮಾಡಿಸುತ್ತಿದ್ದಾರೆ, ನಾವು ನಿಮಿತ್ತ ಆಗಿದ್ದೇವೆ. ಸೇವೆಯಲ್ಲಿ “ನಾನು” ಎಂಬುದು ಸೇರ್ಪಡೆ ಆಗುವುದು ಅರ್ಥಾತ್ ಮೋಹ್ತಾಜ್ ಆಗುವುದು. ಸತ್ಯ ಸೇವಾಧಾರಿಯಲ್ಲಿ ಈ ಸಂಸ್ಕಾರವಿರಲು ಸಾಧ್ಯವಿಲ್ಲ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲಯ ಮಹಾವಾಕ್ಯ – “ಜೀವನದ ಆಶೆಯು ಪೂರ್ಣವಾಗುವ ಸೌಭಾಗ್ಯಶಾಲಿ ಸಮಯ”

ಬಹಳ ಸಮಯದಿಂದ ನಾವೆಲ್ಲಾ ಆತ್ಮರಲ್ಲಿ ಈ ಆಶೆಯಿತ್ತು – ಜೀವನದಲ್ಲಿ ಸದಾ ಸುಖ-ಶಾಂತಿ ಸಿಗಲಿ ಎಂದು. ಈಗ ಬಹಳ ಜನ್ಮಗಳ ಆಶೆಯು ಯಾವಾಗಲಾದರೂ ಪೂರ್ಣವಾಗಬೇಕು. ಈಗ ಇದು ನಮ್ಮ ಅಂತಿಮ ಜನ್ಮವಾಗಿದೆ, ಆ ಅಂತಿಮ ಜನ್ಮದಲ್ಲಿಯೂ ಅಂತ್ಯದ ಸಮಯವಾಗಿದೆ. ನಾನಂತು ಈಗ ಚಿಕ್ಕವನು ಎಂದು ಯಾರೂ ಸಹ ತಿಳಿದುಕೊಳ್ಳಬಾರದು, ಕಿರಿಯರು-ಹಿರಿಯರೆಲ್ಲರಿಗೂ ಸುಖವಂತು ಬೇಕಲ್ಲವೆ. ಆದರೆ ದುಃಖವು ಯಾವ ವಸ್ತುವಿನಿಂದ ಸಿಗುವುದು ಎಂಬುದರ ತಿಳುವಳಿಕೆಯು ಮೊದಲಿರಬೇಕು. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ – ಈ ಐದು ವಿಕಾರಗಳಲ್ಲಿ ಸಿಲುಕುವುದರಿಂದ ಕರ್ಮ ಬಂಧನಗಳೇನೂ ತಯಾರಾಗುತ್ತದೆ, ಅದನ್ನು ಪರಮಾತ್ಮನ ನೆನಪಿನ ಅಗ್ನಿಯಿಂದ ಭಸ್ಮ ಮಾಡಬೇಕಾಗಿದೆ. ಇದಾಯಿತು ಕರ್ಮ ಬಂಧನದಿಂದ ಮುಕ್ತರಾಗುವ ಸಹಜ ಉಪಾಯ. ಈ ಸರ್ವಶಕ್ತಿವಂತ ತಂದೆಯನ್ನು ನಡೆಯುತ್ತಾ-ಸುತ್ತಾಡುತ್ತಾ ಶ್ವಾಸ-ಶ್ವಾಸದಲ್ಲಿಯೂ ನೆನಪು ಮಾಡಿರಿ. ಈಗ ಈ ಉಪಾಯವನ್ನು ತಿಳಿಸುವ ಉಪಾಯವನ್ನೂ ಸ್ವಯಂ ಪರಮಾತ್ಮನೇ ಬಂದು ಮಾಡುತ್ತಾರೆ. ಆದರೆ ಇದರಲ್ಲಿ ಪುರುಷಾರ್ಥವನ್ನಂತು ಪ್ರತಿಯೊಬ್ಬ ಆತ್ಮನೂ ಮಾಡಬೇಕಾಗಿದೆ. ಪರಮಾತ್ಮನಂತು ತಂದೆ, ಶಿಕ್ಷಕ, ಗುರುವಿನ ರೂಪದಲ್ಲಿ ಬಂದು ನಮಗೆ ಆಸ್ತಿಯನ್ನು ಕೊಡುವರು. ಅಂದಮೇಲೆ ಮೊದಲು ಆ ತಂದೆಯ ಮಕ್ಕಳಾಗಿ ಬಿಡಬೇಕು. ನಂತರ ಶಿಕ್ಷಕನಿಂದ ವಿದ್ಯಾಭ್ಯಾಸ ಮಾಡಬೇಕು, ಆ ವಿದ್ಯೆಯಿಂದ ಭವಿಷ್ಯ ಜನ್ಮ-ಜನ್ಮಾಂತರದ ಸುಖದ ಪ್ರಾಲಬ್ಧವಾಗುವುದು ಅರ್ಥಾತ್ ಜೀವನ್ಮುಕ್ತಿಯ ಪದವಿಯಲ್ಲಿ ಪುರುಷಾರ್ಥದನುಸಾರ ಪದವಿಯು ಸಿಗುವುದು. ಮತ್ತು ಗುರುವಿನ ರೂಪದಲ್ಲಿ ಪವಿತ್ರರನ್ನಾಗಿ ಮಾಡುತ್ತಾ ಮುಕ್ತಿ ಕೊಡುವರು. ಅಂದಮೇಲೆ ಈ ರಹಸ್ಯವನ್ನು ತಿಳಿದುಕೊಂಡು ಪುರುಷಾರ್ಥವನ್ನೂ ಹೀಗೆ ಮಾಡಬೇಕಾಗಿದೆ. ಇದೇ ಸಮಯದಲ್ಲಿ ಹಳೆಯ ಖಾತೆಯನ್ನು ಸಮಾಪ್ತಿಗೊಳಿಸಿ ಹೊಸ ಜೀವನವನ್ನು ರೂಪಿಸಿಕೊಳ್ಳಬೇಕು. ಇದೇ ಸಮಯದಲ್ಲಿ ಎಷ್ಟು ಪುರುಷಾರ್ಥ ಮಾಡಿ, ತಮ್ಮ ಆತ್ಮನನ್ನು ಪವಿತ್ರ ಮಾಡಿಕೊಳ್ಳುವಿರಿ ಅಷ್ಟು ಶುದ್ಧ ರಿಕಾರ್ಡ್ ತುಂಬುವುದು ನಂತರ ಇಡೀ ಕಲ್ಪದಲ್ಲಿ ಅದು ನಡೆಯುವುದು. ಅಂದಮೇಲೆ ಇಡೀ ಕಲ್ಪದ ಆಧಾರವು ವರ್ತಮಾನ ಸಮಯದ ಸಂಪಾದನೆಯ ಮೇಲೆ ಆಧಾರಿತವಾಗಿದೆ. ನೋಡಿ, ಈ ಸಮಯದಲ್ಲಿಯೇ ನಿಮಗೆ ಆದಿ-ಮಧ್ಯ-ಅಂತ್ಯದ ಜ್ಞಾನವು ಸಿಗುವುದು, ನಾವೇ ದೇವತೆಯಾಗಬೇಕು ಮತ್ತು ತಮ್ಮ ಏರುವ ಕಲೆಯಾಗಿದೆ. ನಂತರ ಅಲ್ಲಿ ಹೋಗಿ ಪ್ರಾಲಬ್ಧವನ್ನು ಭೋಗಿಸುವಿರಿ. ಅಲ್ಲಿ ದೇವತೆಗಳಿಗಂತು ನಾವು ಕೆಳಗಿಳಿಯುತ್ತೇವೆ ಎನ್ನುವುದು ಗೊತ್ತಿರುವುದಿಲ್ಲ. ಸುಖ ಭೋಗಿಸಿ ನಂತರ ಕೆಳಗಿಳಿಯುತ್ತೇವೆ ಎಂದೇನಾದರೂ ಒಂದುವೇಳೆ ಗೊತ್ತಿದ್ದರೆ, ಕೆಳಗಿಳಿಯುವ ಚಿಂತೆಯಲ್ಲಿ ಸುಖವನ್ನೂ ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ. ಅಂದಾಗ ಈ ಈಶ್ವರೀಯ ಕಾಯಿದೆಯನ್ನು ರಚಿಸಲಾಗಿದೆ – ಮನುಷ್ಯನು ಸದಾ ಏರುವ ಪುರುಷಾರ್ಥವನ್ನು ಮಾಡುವನು ಅರ್ಥಾತ್ ಸುಖಕ್ಕಾಗಿ ಸಂಪಾದಿಸುತ್ತಾನೆ. ಆದರೆ ಡ್ರಾಮಾದಲ್ಲಿ ಅರ್ಧ-ಅರ್ಧ ಪಾತ್ರವು ಮಾಡಲ್ಪಟ್ಟಿದೆ, ಈ ರಹಸ್ಯವನ್ನು ನಾವು ತಿಳಿದುಕೊಂಡಿದ್ದೇವೆ ಆದರೆ ಯಾವ ಸಮಯದಲ್ಲಿ ಸುಖದ ಸಮಯವಾಗಿರುತ್ತದೆಯೋ ಆಗ ಪುರುಷಾರ್ಥ ಮಾಡಿ ಸುಖವನ್ನು ತೆಗೆದುಕೊಳ್ಳಬೇಕು – ಇದು ಪುರುಷಾರ್ಥದ ವಿಶೇಷತೆಯಾಗಿದೆ. ಪಾತ್ರಧಾರಿಯು ಕಾರ್ಯವು ಪಾತ್ರವನ್ನು ಅಭಿನಯಿಸುವ ಸಮಯವಾಗಿದೆ, ಅವರುಗಳ ನೆನಪಾರ್ಥ ಚಿತ್ರವನ್ನು ಮಹಿಮೆ ಮತ್ತು ಪೂಜಿಸಲಾಗುತ್ತದೆ. ನಿರ್ವಿಕಾರಿ ಪ್ರವೃತ್ತಿಯಲ್ಲಿದ್ದು ಕಮಲ ಪುಷ್ಪ ಸಮಾನ ಸ್ಥಿತಿಯನ್ನಾಗಿ ಮಾಡಿಸುವುದೇ ದೇವತೆಗಳ ವಿಶೇಷತೆಯಾಗಿದೆ. ಈ ವಿಶೇಷತೆಯನ್ನು ಮರೆಯುವುದರಿಂದಲೇ ಭಾರತದ ಇಂತಹ ದುರ್ದೆಶೆಯಾಗಿದೆ. ಈಗ ಮತ್ತೆ ಇಂತಹ ಜೀವನವನ್ನು ರೂಪಿಸುವುದಕ್ಕಾಗಿ ಸ್ವಯಂ ಪರಮಾತ್ಮನು ಬಂದಿದ್ದಾರೆ, ಈಗ ಅವರ ಕೈಯನ್ನಿಡಿಯುವುದರಿಂದ ಜೀವನದ ದೋಣಿಯು ಪಾರಾಗುವುದು. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top