01 August 2021 KANNADA Murli Today | Brahma Kumaris

Read and Listen today’s Gyan Murli in Kannada

July 31, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ವರದಾತನಿಂದ ಪ್ರಾಪ್ತಿಯಾಗಿರುವ ವರದಾನಗಳನ್ನು ವೃದ್ಧಿಯಲ್ಲಿ ತರುವ ವಿಧಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪ್ದಾದಾ ತನ್ನ ಆತ್ಮೀಯ ಚಾತ್ರಕ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗು ತಂದೆಯೊಂದಿಗೆ ಕೇಳುವ, ಮಿಲನ ಮಾಡುವ ಮತ್ತು ಜೊತೆ ಜೊತೆಗೆ ತಂದೆಯ ಸಮಾನರಾಗಲು ಚಾತ್ರಕರಾಗಿದ್ದಾರೆ. ಕೇಳುವುದರಿಂದ ಜನ್ಮ-ಜನ್ಮಾಂತರದ ಬಾಯಾರಿಕೆಯು ನೀಗುತ್ತದೆ. ಜ್ಞಾನಾಮೃತವು ಬಾಯಾರಿದ ಆತ್ಮಗಳನ್ನು ತೃಪ್ತ ಆತ್ಮನನ್ನಾಗಿ ಮಾಡಿ ಬಿಡುತ್ತದೆ. ಕೇಳುತ್ತಾ-ಕೇಳುತ್ತಾ ಆತ್ಮಗಳೂ ಸಹ ತಂದೆಯ ಸಮಾನ ಜ್ಞಾನ ಸ್ವರೂಪರಾಗಿ ಬಿಡುತ್ತೀರಿ ಅಥವಾ ಈ ರೀತಿಯೂ ಹೇಳಬಹುದು – ಜ್ಞಾನ ಮುರುಳಿಯನ್ನು ಕೇಳುತ್ತಾ-ಕೇಳುತ್ತಾ ಸ್ವಯಂ ‘ಮುರುಳೀಧರ ಮಕ್ಕಳು’ ಆಗಿ ಬಿಡುತ್ತೀರಿ. ಆತ್ಮಿಕ ಮಿಲನವನ್ನು ಆಚರಿಸುತ್ತಾ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿ ಬಿಡುತ್ತೀರಿ. ಮಿಲನ ಮಾಡುತ್ತಾ ಲವಲೀನ, ಮಗ್ನ ಸ್ಥಿತಿಯವರಾಗಿ ಬಿಡುತ್ತೀರಿ. ಮಿಲನ ಮಾಡುತ್ತಾ ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ – ಈ ಅನುಭೂತಿಯಲ್ಲಿ ಸಮಾವೇಶವಾಗಿರುತ್ತೀರಿ. ಮಿಲನವನ್ನು ಆಚರಿಸುತ್ತಾ ನಿರ್ವಿಘ್ನ, ಸದಾ ತಂದೆಯ ಸಂಗದ ರಂಗಿನಲ್ಲಿ ಕೆಂಪಗಾಗಿ ಬಿಡುತ್ತೀರಿ. ಯಾವಾಗ ಈ ರೀತಿ ಸಮಾವೇಶ ಆಗಿರುತ್ತೀರಿ ಅಥವಾ ಸ್ನೇಹದಲ್ಲಿ ಲವಲೀನ ಆಗಿಬಿಡುತ್ತೀರೆಂದರೆ ಯಾವ ಆಸೆಯಿರುತ್ತದೆ? ‘ತಂದೆಯ ಸಮಾನ’ರಾಗುವ ಆಸೆ. ತಂದೆಯ ಪ್ರತೀ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುವವರು ಅರ್ಥಾತ್ ತಂದೆಯ ಸಮಾನರಾಗುವವರು. ಹೇಗೆ ತಂದೆಯದು ಸದಾ ಸರ್ವಶಕ್ತಿವಂತ ಸ್ವರೂಪವಾಗಿದೆ ಹಾಗೆಯೇ ಮಕ್ಕಳೂ ಸಹ ಸದಾ ಮಾ|| ಸರ್ವಶಕ್ತಿವಂತ ಸ್ವರೂಪ ಆಗಿ ಬಿಡುತ್ತೀರಿ. ತಂದೆಯದು ಯಾವ ಸದಾ ಶಕ್ತಿಶಾಲಿ, ಸದಾ ಲೈಟ್ನ ಸ್ವರೂಪವಿದೆಯೋ ಅದೇ ರೀತಿ ಸಮಾನರಾಗಿ ಬಿಡುತ್ತೀರಿ.

ಸಮಾನರಾಗುವ ವಿಶೇಷ ಮಾತುಗಳನ್ನು ತಿಳಿದುಕೊಂಡಿದ್ದೀರಲ್ಲವೆ. ಯಾವ-ಯಾವ ಮಾತುಗಳಲ್ಲಿ ತಂದೆಯ ಸಮಾನರಾಗಬೇಕು? ಆಗಿಯೂ ಇದ್ದೀರಿ ಮತ್ತು ಆಗುತ್ತಲೂ ಇದ್ದೀರಿ. ಹೇಗೆ ತಂದೆಯ ಹೆಸರೋ ಮಕ್ಕಳಿಗೂ ಅದೇ ಹೆಸರಿದೆ. ವಿಶ್ವ ಕಲ್ಯಾಣಕಾರಿಗಳು – ಇದೇ ತಮ್ಮೆಲ್ಲರ ಹೆಸರಾಗಿದೆಯಲ್ಲವೆ. ಯಾವುದು ತಂದೆಯ ರೂಪವೋ ಅದೇ ಮಕ್ಕಳ ರೂಪ, ತಂದೆಯ ಗುಣವೇ ಮಕ್ಕಳ ಗುಣ. ತಂದೆಯ ಪ್ರತಿ ಗುಣವನ್ನು ಧಾರಣೆ ಮಾಡುವವರೇ ತಂದೆಯ ಸಮಾನರಾಗುತ್ತಾರೆ. ಯಾವುದು ತಂದೆಯ ಕಾರ್ಯವೋ ಅದು ಮಕ್ಕಳ ಕಾರ್ಯ. ಎಲ್ಲಾ ಮಾತುಗಳಲ್ಲಿ ತಂದೆಯ ಸಮಾನರಾಗಬೇಕು. ಲಕ್ಷ್ಯವಂತೂ ಎಲ್ಲರದೂ ಇದೇ ಆಗಿದೆಯಲ್ಲವೆ. ಸನ್ಮುಖದಲ್ಲಿ ಇರುವವರಲ್ಲ ಆದರೆ ಸಮಾನರಾಗುವವರಿದ್ದೀರಿ. ಅಂತಹವರಿಗೆ ಫಾಲೋ ಫಾದರ್ ಮಾಡುವವರೆಂದು ಹೇಳಲಾಗುತ್ತದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ – ಎಲ್ಲಾ ಮಾತುಗಳಲ್ಲಿ ಎಲ್ಲಿಯವರೆಗೆ ತಂದೆಯ ಸಮಾನರಾಗಿದ್ದೀರಿ? ತಂದೆಯ ಸಮಾನರಾಗುವ ವರದಾನವನ್ನು ಆದಿಯಿಂದಲೂ ಮಕ್ಕಳಿಗೆ ಕೊಟ್ಟಿದ್ದಾರೆ. ಆದಿಯ ವರದಾನವಾಗಿದೆ – “ಸರ್ವ ಶಕ್ತಿಗಳಿಂದ ಸಂಪನ್ನ ಭವ”. ಲೌಕಿಕ ಜೀವನದಲ್ಲಿ ತಂದೆ ಅಥವಾ ಗುರುಗಳು ವರದಾನ ಕೊಡುತ್ತಾರೆ. ‘ಧನವಾನ್ ಭವ’, ‘ಪುತ್ರವಾನ್ ಭವ’, ‘ಧೀರ್ಘಾಯಷ್ಯವಾನ್ಭವ’ ಅಥವಾ ‘ಸುಖೀ ಭವ’ದ ವರದಾನವನ್ನು ಕೊಡುತ್ತಾರೆ. ಅಂದಾಗ ಬಾಪ್ದಾದಾರವರು ಯಾವ ವರದಾನ ಕೊಟ್ಟರು? ‘ಸದಾ ಜ್ಞಾನ ಧನ, ಶಕ್ತಿಗಳ ಧನದಿಂದ ಸಂಪನ್ನಭವ’. ಇದೇ ಬ್ರಾಹ್ಮಣ ಜೀವನದ ಖಜಾನೆಯಾಗಿದೆ.

ಯಾವಾಗ ಬ್ರಾಹ್ಮಣ ಜನ್ಮವಾಯಿತೋ ಆಗಿನಿಂದಲೇ ಸಂಗಮಯುಗದ ಸ್ಥಾಪನೆಯ ಕಾರ್ಯದಲ್ಲಿ ಅಂತ್ಯದವರೆಗೆ ಜೀವಿಸುವುದು ಅರ್ಥಾತ್ ‘ಧೀರ್ಘಾಯಷ್ಯವಾನ್ ಭವ’ ಮಧ್ಯದಲ್ಲಿ ಒಂದುವೇಳೆ ಬ್ರಾಹ್ಮಣ ಜೀವನದಿಂದ ಹೊರಬಂದು ಹಳೆಯ ಸಂಸ್ಕಾರವು ಅಥವಾ ಹಳೆಯ ಸಂಸಾರದಲ್ಲಿ ಹೊರಟು ಹೋಗುತ್ತಾರೆಂದರೆ ಅವರಿಗೆ ಜನ್ಮವನ್ನಂತೂ ಪಡೆದುಕೊಂಡರು ಆದರೆ ಕಡಿಮೆ ಆಯಸ್ಸು ಇರುವವರೆಂದು ಹೇಳಲಾಗುತ್ತದೆ ಏಕೆಂದರೆ ಬ್ರಾಹ್ಮಣ ಜೀವನದಿಂದ ಸತ್ತು ಹೋದರು. ಕೆಲಕೆಲವರು ಹೀಗೂ ಇರುತ್ತಾರೆ ಕೋಮದಲ್ಲಿ ಹೊರಟು ಹೋಗುತ್ತಾರೆ. ಇಂತಹವರು ಇದ್ದರೂ ಸಹ ಇಲ್ಲದಿದ್ದಂತೆ ಮತ್ತು ಕೆಲಕೆಲವೊಮ್ಮೆ ಜಾಗೃತರೂ ಆಗುತ್ತಾರೆ ಆದರೆ ಅವರು ಬದುಕಿರುವುದೂ ಸಹ ಸತ್ತ ಸಮಾನವೇ ಆಗಿರುತ್ತದೆ ಅಂದಾಗ ‘ಧೀರ್ಘಾಯಷ್ಯವಾನ್ ಭವ’ ಅರ್ಥಾತ್ ಸದಾ ಆದಿಯಿಂದ ಅಂತ್ಯದವರೆಗೆ ಬ್ರಾಹ್ಮಣ ಜೀವನ ಅಥವಾ ಶ್ರೇಷ್ಠ ದಿವ್ಯ ಜೀವನದ ಸರ್ವ ಪ್ರಾಪ್ತಿಗಳಲ್ಲಿ ಜೀವಿಸುವುದು. ಧೀರ್ಘಾಯಸ್ಸಿನ ಜೊತೆ ಜೊತೆಗೆ ‘ನಿರೋಗಿಭವ’ದ ವರದಾನವು ಅವಶ್ಯಕತೆಯಿದೆ. ಒಂದುವೇಳೆ ಆಯಸ್ಸು ಧೀರ್ಘವಾಗಿದೆ ಆದರೆ ಮಾಯೆಯ ವ್ಯಾಧಿ ಪದೇ ಪದೇ ಬಲಹೀನರನ್ನಾಗಿ ಮಾಡಿ ಬಿಡುತ್ತದೆಯೆಂದರೆ ಅವರು ಜೀವಿಸುವುದೂ ಸಹ ಜೀವಿಸುವ ರೀತಿ ಅಲ್ಲ. ಅಂದಾಗ ‘ಧೀರ್ಘಾಯಷ್ಯವಾನ್ ಭವ’ದ ಜೊತೆಗೆ ಸದಾ ಆರೋಗ್ಯವಂತರಾಗಿರುವುದು ಅರ್ಥಾತ್ ನಿರ್ವಿಘ್ನರಾಗಿ ಇರಬೇಕಾಗಿದೆ. ಪದೇ-ಪದೇ ಗೊಂದಲದಲ್ಲಿ ಅಥವಾ ಹೃದಯ ವಿಧೀರ್ಣತೆಯ ಸ್ಥಿತಿಯ ಹಾಸಿಗೆಗೆ ಬಲಿಯಾಗಬಾರದು. ಯಾರಾದರೂ ರೋಗಿಯಾದರೆ ಹಾಸಿಗೆ ಹಿಡಿಯುತ್ತಾರಲ್ಲವೆ. ಚಿಕ್ಕ-ಚಿಕ್ಕ ಗೊಂದಲಗಳನ್ನು ನಡೆಯುತ್ತ-ತಿರುಗಾಡುತ್ತಾ ಸಮಾಪ್ತಿ ಮಾಡಿ ಬಿಡುತ್ತೀರಿ ಆದರೆ ಯಾವಾಗ ಯಾವುದೇ ದೊಡ್ಡ ಸಮಸ್ಯೆ ಬಂದು ಬಿಡುತ್ತದೆಯೆಂದರೆ ಗೊಂದಲದಲ್ಲಿ ಬರುತ್ತೀರಿ, ಹೃದಯ ವಿಧೀರ್ಣರಾಗಿ ಬಿಡುತ್ತೀರಿ ಎಂದರೆ ಮನಸ್ಸಿನ ಗತಿಯೇನಾಗುತ್ತದೆ? ಹೇಗೆ ಶರೀರವು ಹಾಸಿಗೆ ಹಿಡಿಯುತ್ತದೆಯೆಂದರೆ ಎದ್ದೇಳಲು, ನಡೆದಾಡಲು ಹಾಗೂ ಆಹಾರ-ಪಾನೀಯಗಳನ್ನು ಸೇವಿಸಲು ಮನಸ್ಸಾಗುವುದಿಲ್ಲ. ಹಾಗೆಯೇ ಇಲ್ಲಿಯೂ ಸಹ ಯೋಗದಲ್ಲಿ ಕುಳಿತುಕೊಂಡರೂ ಸಹ ಅದು ಮನಸ್ಸಿಗೆ ಹಿಡಿಸುವುದಿಲ್ಲ. ಜ್ಞಾನವನ್ನು ಕೇಳುತ್ತೀರಿ ಆದರೆ ಅದನ್ನು ರುಚಿಯಿಂದ ಕೇಳುವುದಿಲ್ಲ. ಸೇವೆಯನ್ನೂ ಉಲ್ಲಾಸದಿಂದ ಮಾಡುವುದಿಲ್ಲ, ತೋರ್ಪಡಿಕೆಯಿಂದ ಅಥವಾ ಭಯದಿಂದ, ಲೋಕ ಮರ್ಯಾದೆಯಿಂದ ಮಾಡುತ್ತೀರಿ, ಇದಕ್ಕೆ ಸದಾ ಆರೋಗ್ಯವಂತ ಜೀವನವೆಂದು ಹೇಳುವುದಿಲ್ಲ ಅಂದಾಗ ‘ಧೀರ್ಘಾಯಷ್ಯವಾನ್ ಭವ’ ಅರ್ಥಾತ್ ‘ನಿರೋಗಿಭವ’ – ಇದಕ್ಕೆ ಹೇಳಲಾಗುತ್ತದೆ.

`ಪುತ್ರವಾನ್ ಭವ’ ಹಾಗೂ `ಸಂತಾನ ಭವ’ ತಮಗೆ ಸಂತಾನವಿದೆಯೇ? ಇಬ್ಬರು – ನಾಲ್ಕು ಮಂದಿ ಮಕ್ಕಳಿಗಷ್ಟೇ ಜನ್ಮ ಕೊಟ್ಟಿಲ್ಲವೆ, `ಸಂತಾನ ಭವ’ದ ವರದಾನವಿದೆಯಲ್ಲವೆ. 2-4 ಮಂದಿ ಮಕ್ಕಳ ವರದಾನವು ಸಿಗುವುದಿಲ್ಲ ಆದರೆ ಯಾವಾಗ ತಂದೆಯ ಸಮಾನ ಮಾ|| ರಚಯಿತನ ಸ್ಥಿತಿಯಲ್ಲಿ ಸ್ಥಿತರಾಗುವಿರೋ ಆಗ ಇದೆಲ್ಲವೂ ತಮ್ಮ ರಚನೆಯಾಗುತ್ತದೆ. ಬೇಹದ್ದಿನ ಮಾ|| ರಚಯಿತರಾಗುವುದು, ಈ ಬೇಹದ್ದಿನ `ಪುತ್ರವಾನ್ಭವ’, `ಸಂತಾನ ಭವ’ ಆಗಿ ಬಿಡುತ್ತದೆ. ನಾವು ಎರಡು-ನಾಲ್ಕು ಜನ ಜಿಜ್ಞಾಸುಗಳನ್ನು ತಯಾರು ಮಾಡಿದೆವು, ಇವರು ನನ್ನವರಾಗಿದ್ದಾರೆ, ಈ ಹದ್ದಿನದಲ್ಲ. ಮಾ|| ರಚಯಿತನ ಸ್ಥಿತಿಯು ಬೇಹದ್ದಿನ ಸ್ಥಿತಿಯಾಗಿದೆ. ಯಾವುದೇ ಆತ್ಮನನ್ನು ಹಾಗೂ ಪ್ರಕೃತಿಯ ತತ್ವಗಳನ್ನೂ ಸಹ ತನ್ನ ರಚನೆಯೆಂದು ತಿಳಿದು ವಿಶ್ವ ಕಲ್ಯಾಣಕಾರಿ ಸ್ಥಿತಿಯಿಂದ ಪ್ರತಿಯೊಬ್ಬರ ಪ್ರತಿ ಕಲ್ಯಾಣದ ಶುಭ ಭಾವನೆ, ಶುಭ ಕಾಮನೆಯಿರುತ್ತದೆ. ರಚಯಿತನಿಗೆ ರಚನೆಯ ಪ್ರತಿ ಇದೇ ಭಾವನೆಗಳಿರುತ್ತವೆ. ಯಾವಾಗ ತಾವು ಬೇಹದ್ದಿನ ಮಾ|| ರಚಯಿತರಾಗಿ ಬಿಡುತ್ತೀರೋ ಆಗ ಯಾವುದೇ ಹದ್ದಿನ ಆಕರ್ಷಣೆ ಆಕರ್ಷಿತ ಮಾಡಲು ಸಾಧ್ಯವಿಲ್ಲ. ಸದಾ ತನ್ನನ್ನು ಎಲ್ಲಿ ನಿಂತಿರುವಂತೆ ನೋಡುತ್ತೀರಿ? ಹೇಗೆ ವೃಕ್ಷದ ರಚಯಿತ `ಬೀಜ’ವು ಯಾವಾಗ ವೃಕ್ಷದ ಅಂತಿಮ ಸ್ಥಿತಿ ಬರುತ್ತದೆಯೋ ಆಗ ಆ ಬೀಜವು ಮೇಲೆ ಬಂದು ಬಿಡುತ್ತದೆಯಲ್ಲವೆ. ಹಾಗೆಯೇ ಬೇಹದ್ದಿನ ಮಾ|| ರಚಯಿತರು ಸದಾ ತಮ್ಮನ್ನು ಈ ಕಲ್ಪ ವೃಕ್ಷದ ಮೇಲೆ ನಿಂತಿರುವ ಅನುಭವ ಮಾಡುತ್ತಾರೆ, ತಂದೆಯ ಜೊತೆ ಜೊತೆಗೆ ವೃಕ್ಷದ ಮೇಲೆ ಮಾ|| ಬೀಜರೂಪರಾಗಿ ಶಕ್ತಿಗಳ, ಗುಣಗಳ ಶುಭ ಭಾವನೆ-ಶುಭ ಕಾಮನೆಯ, ಸ್ನೇಹದ, ಸಹಯೋಗದ ಕಿರಣಗಳನ್ನು ಹರಡುತ್ತಾರೆ. ಹೇಗೆ ಸೂರ್ಯನು ಮೇಲಿರುವ ಕಾರಣ ಇಡೀ ವಿಶ್ವದಲ್ಲಿ ಕಿರಣಗಳು ಹರಡುತ್ತವೆಯಲ್ಲವೆ. ಹಾಗೆಯೇ ಮಾ|| ರಚಯಿತ ಅಥವಾ ಮಾ|| ಬೀಜರೂಪನಾಗಿ ಇಡೀ ವೃಕ್ಷಕ್ಕೆ ಕಿರಣಗಳು ಹಾಗೂ ನೀರನ್ನು ಕೊಡಬಲ್ಲಿರಿ ಅಂದಾಗ ಎಷ್ಟು ಸಂತಾನವಾಯಿತು? ಇಡೀ ವಿಶ್ವವು ತಮ್ಮ ರಚನೆಯಾಯಿತಲ್ಲವೆ ಅಂದಾಗ `ಮಾ|| ರಚಯಿತ ಭವ’. ಇದಕ್ಕೆ `ಪುತ್ರವಾನ್ಭವ’ ಎಂದು ಹೇಳುತ್ತಾರೆ ಅಂದಾಗ ಎಷ್ಟೊಂದು ವರದಾನಗಳಿವೆ! ಇದಕ್ಕೆ ತಂದೆಯ ಸಮಾನರಾಗುವುದು ಎಂದು ಹೇಳಲಾಗುತ್ತದೆ. ಜನ್ಮ ಪಡೆದ ಕೂಡಲೇ ಇವೆಲ್ಲಾ ವರದಾನಗಳನ್ನು ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಿಗೆ ತಂದೆಯು ಕೊಟ್ಟು ಬಿಟ್ಟಿದ್ದಾರೆ. ವರದಾನಗಳು ಸಿಕ್ಕಿವೆಯಲ್ಲವೆ ಅಥವಾ ಇನ್ನೂ ಸಿಗಬೇಕಾಗಿದೆಯೇ?

ಯಾವಾಗ ಯಾವುದೇ ವರದಾನವು ಯಾರಿಗಾದರೂ ಸಿಗುತ್ತದೆಯೆಂದರೆ ವರದಾನದ ಜೊತೆಗೆ ವರದಾನವನ್ನು ಕಾರ್ಯದಲ್ಲಿ ತೊಡಗಿಸುವ ವಿಧಿಯನ್ನೂ ತಿಳಿಸಲಾಗುತ್ತದೆ. ಒಂದುವೇಳೆ ಆ ವಿಧಿಯನ್ನು ತನ್ನದನ್ನಾಗಿ ಮಾಡಿಕೊಳ್ಳದಿದ್ದರೆ ವರದಾನದ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಅಂದಾಗ ವರದಾನವಂತೂ ಎಲ್ಲರಿಗೂ ಸಿಕ್ಕಿದೆ ಆದರೆ ಪ್ರತಿಯೊಂದು ವರದಾನವನ್ನು ವಿಧಿಯಿಂದ ಉಪಯೋಗಿಸಿ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಲ್ಲಿರಿ. ವೃದ್ಧಿಯನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳಬಹುದು, ಅದರ ವಿಧಿಯು ಎಲ್ಲದಕ್ಕಿಂತ ಸಹಜ ಮತ್ತು ಎಲ್ಲದಕ್ಕಿಂತ ಶ್ರೇಷ್ಠ ಇದೇ ಆಗಿದೆ – ಎಂತಹ ಸಮಯವೋ ಅದರ ಪ್ರಮಾಣವು ವರದಾನವು ಸ್ಮೃತಿಯಲ್ಲಿ ಬರಲಿ ಮತ್ತು ಸ್ಮೃತಿಯಲ್ಲಿ ಬಂದಾಗ ಸಮರ್ಥರಾಗಿ ಬಿಡುತ್ತೀರಿ ಮತ್ತು ಸಿದ್ಧಿ ಸ್ವರೂಪರಾಗಿ ಬಿಡುತ್ತೀರಿ. ಎಷ್ಟು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುತ್ತೀರೋ ಅಷ್ಟು ವರದಾನವು ವೃದ್ಧಿಯನ್ನು ಪ್ರಾಪ್ತಿ ಹೊಂದುತ್ತಾ ಇರುವುದು ಅರ್ಥಾತ್ ಸದಾ ವರದಾನದ ಫಲವನ್ನು ಅನುಭವ ಮಾಡುತ್ತಾ ಇರುತ್ತೀರಿ. ಇಷ್ಟು ಶ್ರೇಷ್ಠ ಶಕ್ತಿಶಾಲಿ ವರದಾನಗಳು ಸಿಕ್ಕಿವೆ, ಅದನ್ನು ಕೇವಲ ತನ್ನ ಪ್ರತಿ ಕಾರ್ಯದಲ್ಲಿ ತೊಡಗಿಸಿ ಫಲವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಆದರೆ ಅನ್ಯ ಆತ್ಮರಿಗೂ ಸಹ ವರದಾತ ತಂದೆಯಿಂದ ವರದಾನವನ್ನು ಪ್ರಾಪ್ತಿ ಮಾಡಿಸಲು ಯೋಗ್ಯರನ್ನಾಗಿ ಮಾಡಬಲ್ಲಿರಿ. ಈ ಸಂಗಮಯುಗದ ವರದಾನವು 21 ಜನ್ಮಗಳವರೆಗೆ ಭಿನ್ನ ರೂಪದಿಂದ ಜೊತೆಯಲ್ಲಿರುತ್ತದೆ. ಈ ಸಂಗಮದ ರೂಪವು ಬೇರೆಯಾಗಿದೆ ಮತ್ತು 21 ಜನ್ಮಗಳು ಇದೇ ವರದಾನವು ಜೀವನದ ಲೆಕ್ಕದಿಂದ ನಡೆಯುತ್ತದೆ. ಆದರೆ ವರದಾತ ಮತ್ತು ವರದಾನವು ಪ್ರಾಪ್ತಿಯಾಗುವ ಸಮಯವು ಇದೇ ಆಗಿದೆ ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ಸರ್ವ ವರದಾನಗಳನ್ನು ಕಾರ್ಯದಲ್ಲಿ ತೊಡಗಿಸುತ್ತಾ ಸಹಜವಾಗಿ ಮುಂದುವರೆಯುತ್ತಿದ್ದೀರಾ?

ಈ ವರದಾನದ ವಿಶೇಷತೆ ಏನೆಂದರೆ – ವರದಾನಿಗಳು ಎಂದೂ ಪರಿಶ್ರಮ ಪಡಬೇಕಾಗುವುದಿಲ್ಲ. ಯಾವಾಗ ಭಕ್ತಾತ್ಮರೂ ಸಹ ಪರಿಶ್ರಮ ಪಟ್ಟು ಸುಸ್ತಾದಾಗ ತಂದೆಯಿಂದ ವರದಾನವನ್ನೇ ಬೇಡುತ್ತಾರೆ. ತಮ್ಮ ಬಳಿಯೂ ಸಹ ಮನುಷ್ಯರು ಬಂದಾಗ ಯೋಗವನ್ನು ಮಾಡುವ ಪರಿಶ್ರಮ ಪಡಲು ಇಚ್ಛಿಸುವುದಿಲ್ಲವೆಂದರೆ ಯಾವ ಭಾಷೆಯನ್ನು ಮಾತನಾಡುತ್ತಾರೆ? ಕೇವಲ ನಮಗೆ ವರದಾನ ಕೊಟ್ಟು ಬಿಡಿ, ತಲೆಯ ಮೇಲೆ ಕೈಯನ್ನು ಇಟ್ಟು ಬಿಡಿ ಎಂದು ಹೇಳುತ್ತಾರೆ. ತಾವು ಬ್ರಾಹ್ಮಣ ಮಕ್ಕಳ ಮೇಲೆ ವರದಾತ ತಂದೆಯ ಹಸ್ತವು ಸದಾ ಇದೆ. ಶ್ರೇಷ್ಠ ಮತವೇ ಅವರ ಹಸ್ತವಾಗಿದೆ. ಸ್ಥೂಲವಾಗಿ 24 ಗಂಟೆಗಳ ಕಾಲ ಹಸ್ತವನ್ನಂತೂ ಇಡುವುದಿಲ್ಲ ಅಲ್ಲವೆ. ಈ ತಂದೆಯ ಶ್ರೇಷ್ಠ ಮತದ ವರದಾನರೂಪಿ ಹಸ್ತವು ಸದಾ ಮಕ್ಕಳ ಮೇಲೆ ಇದೆ. ಅಮೃತವೇಳೆಯಿಂದ ಹಿಡಿದು ರಾತ್ರಿ ಮಲಗುವವರೆಗೆ ಪ್ರತೀ ಶ್ವಾಸಕ್ಕಾಗಿ, ಪ್ರತೀ ಸಂಕಲ್ಪ, ಪ್ರತೀ ಕರ್ಮಕ್ಕಾಗಿ ಶ್ರೇಷ್ಠ ಮತದ ಹಸ್ತವು ಇದ್ದೇ ಇದೆ. ಇದೇ ವರದಾನವನ್ನು ವಿಧಿಪೂರ್ವಕವಾಗಿ ನಡೆಸುತ್ತಾ ಹೋಗಿ ಆಗ ಎಂದೂ ಪರಿಶ್ರಮ ಪಡಬೇಕಾಗುವುದಿಲ್ಲ.

ಹೇಗೆ ದೇವತೆಗಳಿಗಾಗಿ ಇಚ್ಛಾ ಮಾತ್ರಂ ಅವಿದ್ಯಾ ಎಂದು ಗಾಯನವಿದೆ. ಇದು ಫರಿಶ್ತಾ ಜೀವನದ ವಿಶೇಷತೆಯಾಗಿದೆ. ದೇವತಾ ಜೀವನದಲ್ಲಂತೂ ಇಚ್ಛೆಯ ಮಾತೇ ಇರುವುದಿಲ್ಲ. ಬ್ರಾಹ್ಮಣ ಜೀವನದಿಂದ ಫರಿಶ್ತಾ ಜೀವನ ಆಗಿ ಬಿಡುತ್ತದೆ ಅರ್ಥಾತ್ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಹೊಂದುತ್ತೀರಿ. ಯಾವುದೇ ಶುದ್ಧ ಕರ್ಮ ಅಥವಾ ವ್ಯರ್ಥ ಕರ್ಮ ಹಾಗೂ ವಿಕರ್ಮವಿಲ್ಲದೆ ಹಿಂದಿನ ಕರ್ಮವು ಯಾವುದೇ ಕರ್ಮದ ಬಂಧನದಲ್ಲಿ ಬಂಧಿಸಿಡುವುದಕ್ಕೆ ಕರ್ಮಾತೀತ ಸ್ಥಿತಿಯೆಂದು ಹೇಳುವುದಿಲ್ಲ. ಒಂದು ಕರ್ಮದ ಸಂಬಂಧವಾಗಿದೆ, ಇನ್ನೊಂದು ಬಂಧನವಾಗಿದೆ. ಅಂದಾಗ ಹೇಗೆ ಹದ್ದಿನ ಇಚ್ಛೆಯಿಂದ ಅವಿದ್ಯಾ ಎಂದು ಈಗ ಗಾಯನವಿದೆ. ಹಾಗೆಯೇ ಫರಿಶ್ತಾ ಜೀವನ ಹಾಗೂ ಬ್ರಾಹ್ಮಣ ಜೀವನ ಅರ್ಥಾತ್ `ಪರಿಶ್ರಮ’ ಶಬ್ಧದ ಅವಿದ್ಯೆ, ಹೊರೆಯಿಂದ ಅವಿದ್ಯೆ, ಅದು ಹೇಗಿರುತ್ತದೆ ಎಂಬುದು ಗೊತ್ತೇ ಇರುವುದಿಲ್ಲ. ಈ ರೀತಿಯಿರಬೇಕು ಅಂದಾಗ ವರದಾನಿ ಆತ್ಮ ಅರ್ಥಾತ್ ಪರಿಶ್ರಮ ಜೀವನದಿಂದ ಅವಿದ್ಯೆಯ ಅನುಭವ ಮಾಡುವವರು. ಇಂತಹವರಿಗೆ ವರದಾನಿ ಆತ್ಮನೆಂದು ಹೇಳಲಾಗುತ್ತದೆ ಆದ್ದರಿಂದ ತಂದೆಯ ಸಮಾನರಾಗುವುದು ಎಂದರೆ ಸದಾ ವರದಾತನಿಂದ ಪ್ರಾಪ್ತಿಯಾಗಿರುವ ವರದಾನಗಳಿಂದ ಬೆಳೆಯುವುದು, ಸದಾ ನಿಶ್ಚಿಂತ, ನಿಶ್ಚಿತ ವಿಜಯದ ಅನುಭವ ಮಾಡುವುದು.

ಕೆಲವು ಮಕ್ಕಳು ಪುರುಷಾರ್ಥವನ್ನಂತೂ ಬಹಳ ಚೆನ್ನಾಗಿ ಮಾಡುತ್ತಾರೆ ಆದರೆ ಪುರುಷಾರ್ಥದ ಹೊರೆಯ ಅನುಭವವಾಗುವುದು – ಇದು ಯಥಾರ್ಥ ಪುರುಷಾರ್ಥವಲ್ಲ. ಗಮನವನ್ನು ಇಡುವುದು ಬ್ರಾಹ್ಮಣ ಜೀವನದ ವಿಧಿಯಾಗಿದೆ ಆದರೆ ಆ ಗಮನವು ಆತಂಕದಲ್ಲಿ ಬದಲಾಗಿ ಬಿಡುತ್ತದೆ. ಸ್ವಾಭಾವಿಕವಾದ ಗಮನವಿರುವುದಿಲ್ಲ. ಇದಕ್ಕೂ ಸಹ ಯಥಾರ್ಥ ಗಮನವೆಂದು ಹೇಳಲಾಗುವುದಿಲ್ಲ. ಹೇಗೆ ಜೀವನದಲ್ಲಿ ಈ ವಸ್ತು ಒಳ್ಳೆಯದು, ಇದನ್ನು ಮಾತನಾಡಬೇಕು, ಇದನ್ನು ಮಾತನಾಡಬಾರದು ಎಂದು ಸ್ಥೂಲ ಜ್ಞಾನ ಇರುತ್ತದೆಯೆಂದರೆ ಆ ಜ್ಞಾನದ ಆಧಾರದ ಮೇಲೆ ಯಾರು ಜ್ಞಾನಪೂರ್ಣರಾಗುವರೋ ಅವರ ಚಿಹ್ನೆಯಾಗಿದೆ – ಅವರಿಗೆ ಇದನ್ನು ತಿನ್ನಬೇಕು, ಇದನ್ನು ತಿನ್ನಬಾರದು, ಇದನ್ನು ಮಾಡಬೇಕು, ಇದನ್ನು ಮಾಡಬಾರದೆಂದು ಸ್ವಾಭಾವಿಕ ಗಮನವಿರುತ್ತದೆ. ಅವರಿಗೆ ಪ್ರತೀ ಹೆಜ್ಜೆಯಲ್ಲಿ ಇದನ್ನು ಮಾಡುವುದೇ ಅಥವಾ ಬೇಡವೇ, ತಿನ್ನುವುದೇ ಅಥವಾ ಬೇಡವೆ – ಈ ರೀತಿ ನಡೆಯುವುದೇ ಅಥವಾ ಬೇಡವೆ ಎಂಬ ಆತಂಕವಿರುವುದಿಲ್ಲ. ಸ್ವಾಭಾವಿಕ ಜ್ಞಾನದ ಶಕ್ತಿಯಿಂದ ಗಮನವಿರುತ್ತದೆ. ಅದೇ ರೀತಿ ಯಥಾರ್ಥ ಪುರುಷಾರ್ಥಿಯ ಪ್ರತೀ ಹೆಜ್ಜೆ, ಪ್ರತೀ ಕರ್ಮದಲ್ಲಿ ಸ್ವಾಭಾವಿಕ ಗಮನವಿರುತ್ತದೆ ಏಕೆಂದರೆ ಜ್ಞಾನದ ಲೈಟ್ಮೈಟ್ ಸ್ವತಹ ಯಥಾರ್ಥ ರೂಪದಿಂದ, ಯಥಾರ್ಥ ರೀತಿಯಿಂದ ನಡೆಸುತ್ತದೆ ಅಂದಾಗ ಪುರುಷಾರ್ಥವನ್ನು ಭಲೆ ಮಾಡಿ, ಭಲೆ ಗಮನವನ್ನಿಡಿ ಆದರೆ ಅದನ್ನು `ಆತಂಕ’ದ ರೂಪದಲ್ಲಿ ಅಲ್ಲ. ಯಾವಾಗ ಆತಂಕದಲ್ಲಿ ಬಂದು ಬಿಡುತ್ತೀರೋ ಆಗ ಬಹಳ ಕೆಲಸ ಮಾಡಲು ಇಚ್ಛಿಸುತ್ತೀರಿ. ಹಾಗೂ ನಂಬರ್ವನ್ ಆಗಲು ಬಯಸುತ್ತೀರಿ ಆದರೆ `ಆತಂಕ’ವು ಎಷ್ಟು ಬಯಸುತ್ತೀರೋ ಅಷ್ಟು ಮಾಡಲು ಬಿಡುವುದಿಲ್ಲ. ಏನಾಗ ಬಯಸುತ್ತೀರೋ ಅದು ಆಗಲು ಬಿಡುವುದಿಲ್ಲ ಮತ್ತು ಆತಂಕವು ಇನ್ನೂ ಆತಂಕವನ್ನು ಹುಟ್ಟಿಸುತ್ತದೆ ಏಕೆಂದರೆ ಏನನ್ನು ಬಯಸುತ್ತೀರೋ ಅದೇ ಆಗಲಿಲ್ಲವೆಂದರೆ ಆತಂಕವು ಇನ್ನೂ ಹೆಚ್ಚಾಗುತ್ತದೆ.

ಅಂದಾಗ ಪುರುಷಾರ್ಥವನ್ನು ಎಲ್ಲರೂ ಮಾಡುತ್ತೀರಿ ಆದರೆ ಕೆಲವರು ಪುರುಷಾರ್ಥವನ್ನು ಹೆಚ್ಚು ಭಾರಿ ಮಾಡಿಕೊಳ್ಳುತ್ತಾರೆ. ಕೆಲವರು ಏನಾಗಬೇಕಾಗಿದೆಯೋ ಅದು ಆಗಿ ಬಿಡುವುದು, ನೋಡೋಣ, ಯಾರು ನೋಡುತ್ತಾರೆ. ಯಾರು ಕೇಳುತ್ತಾರೆ…. ಎಂದು ಬಹಳ ಆಲಸಿಗಳಾಗಿ ಬಿಡುತ್ತಾರೆ ಅಂದಾಗ ಭಾರಿಯಾಗುವುದೂ ಒಳ್ಳೆಯದಲ್ಲ, ಆಲಸಿಗಳಾಗುವುದೂ ಒಳ್ಳೆಯದಲ್ಲ ಆಗ ಬ್ಯಾಲೆನ್ಸ್ನಿಂದ ತಂದೆಯ ಬ್ಲೆಸ್ಸಿಂಗ್, ವರದಾನಗಳ ಅನುಭವ ಮಾಡಿ. ಸದಾ ತಂದೆಯ ಹಸ್ತವು ನನ್ನ ಮೇಲಿದೆ – ಈ ಅನುಭವವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿ. ಹೇಗೆ ಭಕ್ತಾತ್ಮರು ಸ್ಥೂಲ ಚಿತ್ರಗಳನ್ನು ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾರೆ, ತಲೆಯ ಮೇಲೆ ವರದಾನದ ಹಸ್ತವಿರುವ ಚಿತ್ರವನ್ನು ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾರೆ, ತಾವೂ ಸಹ ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಈ ಅನುಭವದ ಚಿತ್ರವನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ. ತಿಳಿಯಿತೆ – ಬಹಳ ಪುರುಷಾರ್ಥ ಮಾಡಿದಿರಿ, ಈಗ ವರದಾನಗಳಿಂದ ಬೆಳೆಯುತ್ತಾ, ಹಾರುತ್ತಾ ನಡೆಯಿರಿ. ತಂದೆಯ ಜ್ಞಾನ ದಾತ, ವಿದಾತನ ಅನುಭವ ಮಾಡಿದಿರಿ. ಈಗ ವರದಾತನ ಅನುಭವ ಮಾಡಿ. ಒಳ್ಳೆಯದು.

ಸದಾ ಪ್ರತೀ ಹೆಜ್ಜೆಯಲ್ಲಿ ತಂದೆಯನ್ನು ಫಾಲೋ ಮಾಡುವವರು, ಸದಾ ತಮ್ಮನ್ನು ವರದಾತ ತಂದೆಯ ವರದಾನೀ ಶ್ರೇಷ್ಠ ಆತ್ಮನೆಂದು ಅನುಭವ ಮಾಡುವವರು, ಸದಾ ಪ್ರತೀ ಹೆಜ್ಜೆಯನ್ನು ಸಹಜವಾಗಿ ಪಾರು ಮಾಡುವವರು, ಸದಾ ಸರ್ವ ವರದಾನಗಳನ್ನು ಸಮಯದಲ್ಲಿ, ಕಾರ್ಯದಲ್ಲಿ ತೊಡಗಿಸುವವರು ಇಂತಹ ತಂದೆಯ ಸಮಾನರಾಗುವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ವರದಾತನ ರೂಪದಲ್ಲಿ ನೆನಪು, ಪ್ರೀತಿ ಹಾಗೂ ನಮಸ್ತೆ.

ಮುಖ್ಯ ಮಹಾರಥಿ ಸಹೋದರರೊಂದಿಗೆ ವಾರ್ತಾಲಾಪ –

ಜನ್ಮವಾದಾಗಿನಿಂದ ಎಷ್ಟೊಂದು ವರದಾನಗಳು ಸಿಕ್ಕಿವೆ! ಪ್ರತಿಯೊಬ್ಬರಿಗೂ ತಮ್ಮ-ತಮ್ಮ ವರದಾನಗಳು ಸಿಕ್ಕಿರುತ್ತವೆ ಮತ್ತು ಜನ್ಮವೇ ವರದಾನಗಳಿಂದ ಆಗಿದೆ. ಇಲ್ಲದಿದ್ದರೆ ಇಂದು ಇಷ್ಟೊಂದು ಮುಂದುವರೆಯಲು ಸಾಧ್ಯವಿಲ್ಲ. ವರದಾನದಿಂದ ಜನ್ಮವಾಗಿದೆ ಆದ್ದರಿಂದ ವೃದ್ಧಿಯಾಗುತ್ತಾ ಇದ್ದೀರಿ. ಪಾಂಡವರ ಮಹಿಮೆಯೇನೂ ಕಡಿಮೆಯಿಲ್ಲ, ಪ್ರತಿಯೊಬ್ಬರ ವಿಶೇಷತೆಯನ್ನು ವರ್ಣನೆ ಮಾಡುತ್ತೇವೆಂದರೆ ಎಷ್ಟೊಂದಿದೆ! ಈ ಭಾಗವತವೇನಿದೆ, ಅದರಷ್ಟು ಆಗಿ ಬಿಡುತ್ತದೆ. ತಂದೆಯ ದೃಷ್ಟಿಯಲ್ಲಿ ಪ್ರತಿಯೊಬ್ಬರ ವಿಶೇಷತೆಗಳಿವೆ ಮತ್ತು ಅದನ್ನು ನೋಡುತ್ತಿದ್ದರೂ ನೋಡುವುದಿಲ್ಲ, ಮತ್ತು ತಿಳಿದಿದ್ದರೂ ತಿಳಿಯದಂತೆ ಇರುತ್ತಾರೆ. ಅಂದರೆ ವಿಶೇಷತೆಗಳು ತಮ್ಮನ್ನು ಸದಾ ಮುಂದುವರೆಸುತ್ತಾ ಇದೆ ಮತ್ತು ಮುಂದುವರೆಸುತ್ತಾ ಇರುತ್ತದೆ. ಯಾರು ಜನ್ಮದಿಂದಲೇ ವರದಾನಿ ಆತ್ಮರಿದ್ದಾರೆ ಅವರೆಂದಿಗೂ ಸಹ ಹಿಂದೆ ಸರಿಯುವುದಿಲ್ಲ. ಸದಾ ಹಾರುವಂತಹ ವರದಾನಿ ಆತ್ಮರಾಗಿದ್ದೀರಿ. ವರದಾತ ತಂದೆಯ ವರದಾನಗಳು ಮುಂದುವರೆಸುತ್ತಾ ಇದೆ. ಪಾಂಡವರು ಗುಪ್ತವಾಗಿ ಇರುತ್ತಾರೆ ಆದರೆ ಬಾಪ್ದಾದಾರವರ ಹೃದಯದಲ್ಲಿ ಸದಾ ಪ್ರತ್ಯಕ್ಷವಾಗಿದ್ದಾರೆ. ಒಳ್ಳೊಳ್ಳೆಯ ಯೋಜನೆಗಳನ್ನಂತು ಪಾಂಡವರೇ ಮಾಡುತ್ತಾರೆ. ಶಕ್ತಿಯರು ಬೇಟೆಯಾಡುತ್ತಾರೆ ಆದರೆ ಚಮತ್ಕಾರವಂತು ಯೋಜನೆಗಳನ್ನು ಮಾಡುವವರದ್ದಾಗಿದೆ. ಒಂದುವೇಳೆ ಬೇಟೆಯನ್ನು ತರುವವರು ತರದೇ ಇದ್ದರೆ ಬೇಟೆಯನ್ನೇನು ಮಾಡುತ್ತಾರೆ? ಆದ್ದರಿಂದ ಪಾಂಡವರಿಗೆ ವಿಶೇಷವಾಗಿ ತಮ್ಮ ವರದಾನವಿದೆ. `ನೆನಪು’ ಮತ್ತು `ಸೇವೆ’ಯ ಬಲವೂ ವಿಶೇಷವಾಗಿ ಸಿಗುತ್ತದೆ – ಏಕೆ? ಅದರ ಕಾರಣವೂ ಇದೆ ಏಕೆಂದರೆ ಅವಶ್ಯಕತೆಯ ಸಮಯದಲ್ಲಿ ಯಾರೆಷ್ಟು ಕಾರ್ಯದಲ್ಲಿ ಬಂದಿದ್ದಾರೆಯೋ, ಅವರಿಗೆ ವಿಶೇಷ ವರದಾನವು ಸಿಕ್ಕಿದೆ. ಹೇಗೆ ಆದಿಯಲ್ಲಿ ಸ್ಥಾಪನೆಯಾಯಿತು, ಆಗ ತಾವು ಪಾಂಡವರು ಗುಪ್ತವಾಗಿದ್ದಿರಿ ಪ್ರತ್ಯಕ್ಷವಾಗಿ ಇರಲಿಲ್ಲ. ಶಕ್ತಿಯರು ಉದಾಹರಣೆಯಾದರು ಮತ್ತು ಅವರುಗಳ ಉದಾಹರಣೆಯನ್ನು ನೋಡಿ ಇನ್ನೂ ಮುಂದುವರೆದರು. ಅಂದಾಗ ಇವರು ಅವಶ್ಯಕತೆಯ ಸಮಯದಲ್ಲಿ ಉದಾಹರಣೆಯಾದರು ಆದ್ದರಿಂದ ಯಾರೆಷ್ಟು ಅವಶ್ಯಕತೆಯ ಸಮಯದಲ್ಲಿ ಸಹಯೋಗಿ ಆಗುವರು, ಅದು ಭಲೆ ಜೀವನದಿಂದ ಆಗಿರಬಹುದು ಅಥವಾ ಸೇವೆಯಿಂದ…. ಅವರಿಗೆ ಡ್ರಾಮಾನುಸಾರ ವಿಶೇಷ ಬಲವು ಸಿಗುತದೆ. ತನ್ನ ಪುರುಷಾರ್ಥವಂತು ಇದ್ದೇ ಇರುತ್ತದೆ ಆದರೆ ಇನ್ನೂ ಹೆಚ್ಚು ಬಲ ಸಿಗುತ್ತದೆ. ಒಳ್ಳೆಯದು.

ಯಾವ ಸೇವೆ ಮಾಡುವುದರಿಂದ ಸರ್ವ ಆತ್ಮರುಗಳು ಖುಷಿಯಾಗುತ್ತಾರೆಯೋ ಅದರಿಂದಲೂ ಬಹಳ ಬಲ ಸಿಗುತ್ತದೆ. ಯಾರು ಅನುಭವಿ ಆತ್ಮರಿದ್ದಾರೆಯೋ ಅವರುಗಳ ಸೇವೆಯ ಅವಶ್ಯಕತೆಯಿದೆ. ಏಕೆಂದರೆ ಯಾರು ಸಾಕಾರದಲ್ಲಿ ಪಾಲನೆ ಪಡೆದಿದ್ದಾರೆಯೋ ಅವರುಗಳನ್ನು ನೋಡಿ, ಸದಾ ತಂದೆಯದೇ ನೆನಪು ಬರುತ್ತದೆ. ತಾವುಗಳು (ದಾದಿಯರು) ಯಾವಾಗ ಎಲ್ಲಿಯೇ ಹೋಗುತ್ತೀರೆಂದರೆ ವಿಶೇಷವಾಗಿ ಏನು ಕೇಳುವರು? ಚರಿತ್ರೆಯನ್ನು ತಿಳಿಸಿರಿ, ತಂದೆಯ ಯಾವುದಾದರೂ ಮಾತನ್ನು ತಿಳಿಸಿರಿ. ಅಂದಮೇಲೆ ವಿಶೇಷತೆ ಆಯಿತಲ್ಲವೆ. ಆದ್ದರಿಂದ ಸೇವೆಯ ವಿಶೇಷತೆಯ ವರದಾನವು ಸಿಕ್ಕಿರುತ್ತದೆ. ಭಲೆ ವೇದಿಕೆಯಲ್ಲಿ ನಿಂತು ಭಾಷಣವನ್ನೇನು ಮಾಡದೇ ಇರಬಹುದು ಆದರೆ ಇದು ಅವೆಲ್ಲವುಗಳಿಗಿಂತಲೂ ದೊಡ್ಡ ಭಾಷಣವಾಗಿದೆ. ಚರಿತ್ರೆಯನ್ನು ಕೇಳಿ ಚಾರಿತ್ರ್ಯವಂತರಾಗುವ ಪ್ರೇರಣೆಯನ್ನು ಕೊಡುವುದು – ಇದು ಅತಿ ಶ್ರೇಷ್ಠವಾದ ಸೇವೆಯಾಗಿದೆ. ಅಂದಮೇಲೆ ಸೇವೆಯಲ್ಲಿ ಅವಶ್ಯವಾಗಿ ಹೋಗಬೇಕು ಮತ್ತು ಅವಶ್ಯವಾಗಿ ಸೇವೆಯ ನಿಮಿತ್ತರು ಆಗಬೇಕಾಗಿದೆ. ಒಳ್ಳೆಯದು!

ವರದಾನ:-

ನಷ್ಟಮೋಹರು ಆಗುವುದಕ್ಕಾಗಿ ಕೇವಲ ತಮ್ಮ ಸ್ಮೃತಿ ಸ್ವರೂಪವನ್ನು ಪರಿವರ್ತನೆ ಮಾಡಿಕೊಳ್ಳಿರಿ. ಯಾವಾಗ ನಾವು ಗೃಹಸ್ಥಿ ಆಗಿದ್ದೇವೆ, ನಮ್ಮ ಮನೆ, ನಮ್ಮ ಸಂಬಂಧ ಎನ್ನುವ ಸ್ಮೃತಿಯಿರುತ್ತದೆಯೋ ಆಗಲೇ ಮೋಹವುಂಟಾಗುವುದು. ಈಗ ಈ ಅಲ್ಪಕಾಲದ ಜವಾಬ್ದಾರಿಗಳನ್ನು ಬೇಹದ್ದಿನ ಜವಾಬ್ದಾರಿಗಳಲ್ಲಿ ಪರಿವರ್ತನೆ ಮಾಡಿ ಬಿಡಿ. ಬೇಹದ್ದಿನ ಜವಾಬ್ದಾರಿಗಳನ್ನು ನಿಭಾಯಿಸುತ್ತೀರೆಂದರೆ, ಅಲ್ಪಕಾಲದ ಜವಾಬ್ದಾರಿಯು ಸ್ವತಹವಾಗಿಯೇ ಪೂರ್ಣವಾಗಿ ಬಿಡುತ್ತದೆ. ಆದರೆ ಒಂದುವೇಳೆ ಬೇಹದ್ದಿನ ಜವಾಬ್ದಾರಿಯನ್ನು ಮರೆತು, ಕೇವಲ ಅಲ್ಪಕಾಲದ ಜವಾಬ್ದಾರಿಯನ್ನೇ ನಿಭಾಯಿಸುತ್ತೀರೆಂದರೆ, ಅದು ಮತ್ತಷ್ಟು ಹಾಳು ಮಾಡುತ್ತೀರಿ ಏಕೆಂದರೆ ಆ ಜವಾಬ್ದಾರಿಯಲ್ಲಿ ಮೋಹವು ಮರ್ಜ್ ಆಗಿಬಿಡುತ್ತದೆ. ಆದ್ದರಿಂದ ತಮ್ಮ ಸ್ಮೃತಿ ಸ್ವರೂಪವನ್ನು ಪರಿವರ್ತನೆ ಮಾಡಿ ನಷ್ಟಮೋಹವುಳ್ಳವರು ಆಗಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top