29 July 2021 KANNADA Murli Today | Brahma Kumaris

Read and Listen today’s Gyan Murli in Kannada

July 28, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಭಾರತ ಭೂಮಿಯು ನಿರಾಕಾರ ತಂದೆಯ ಜನ್ಮಭೂಮಿಯಾಗಿದೆ, ಇಲ್ಲಿಯೇ ತಂದೆಯು ನಿಮಗೆ ರಾಜಯೋಗವನ್ನು ಕಲಿಸಿ ರಾಜ್ಯಭಾಗ್ಯವನ್ನು ಕೊಡಲು, ನಿಮ್ಮ ಸೇವೆ ಮಾಡಲು ಬರುತ್ತಾರೆ”

ಪ್ರಶ್ನೆ:: -

ಶಿವ ತಂದೆಯು ತನ್ನ ಪ್ರತಿಯೊಬ್ಬ ಮಗುವಿನಿಂದ ಯಾವ ಪ್ರತಿಜ್ಞೆ ಮಾಡಿಸುತ್ತಾರೆ?

ಉತ್ತರ:-

ಮಧುರ ಮಕ್ಕಳೇ ಪ್ರತಿಜ್ಞೆ ಮಾಡಿರಿ – ಬಾಬಾ, ನಾವು ಯಾವುದೇ ವಿಕರ್ಮ ಮಾಡುವುದಿಲ್ಲ, ಪಂಚ ವಿಕಾರಗಳ ದಾನ ಮಾಡುತ್ತೇವೆ. ಒಳಗೆ ಭಯವಿರಲಿ – ಒಂದುವೇಳೆ ನಾವು ದಾನ ಕೊಟ್ಟ ನಂತರ ಮತ್ತೆ ಹಿಂತೆಗೆದುಕೊಳ್ಳುತ್ತೇವೆ ಎಂದರೆ ಬಹಳ ಪಾಪವಾಗಿ ಬಿಡುವುದು. ಇದಕ್ಕೆ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಹರಿಶ್ಚಂದ್ರನ ಕಥೆಯೂ ಸಹ ಇದರ ಮೇಲೆ ಮಾಡಲ್ಪಟ್ಟಿದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಕ್ಕಳದು ಇದು ಈಶ್ವರೀಯ ವಿದ್ಯಾರ್ಥಿ ಜೀವನವಾಗಿದೆ. ಮಕ್ಕಳಿಗೆ ತಿಳಿದಿದೆ – ನಾವು ಅವರ ಬಳಿ ಬಂದಿದ್ದೇವೆ, ಅವರೇ ಕಲ್ಪ-ಕಲ್ಪವೂ ಭಾರತವಾಸಿ ಮಕ್ಕಳಿಗೆ ಬಂದು ರಾಜ್ಯಭಾಗ್ಯವನ್ನು ಕೊಡುತ್ತಾರೆ. ಭಾರತದಲ್ಲಿಯೇ ಬರುತ್ತಾರಲ್ಲವೆ. ಇದು ಭಾರತ ಭೂಮಿಯಾಗಿದೆ, ತಮ್ಮ ಭೂಮಿಯ ಮೇಲೆ ಬಹಳ ಪ್ರೀತಿ, ಗೌರವವಿರುತ್ತದೆ, ಹೇಗೆ ಯಾರಾದರೂ ವಿದೇಶದ ದೊಡ್ಡ ವ್ಯಕ್ತಿಯು ಇಲ್ಲಿ ಶರೀರ ಬಿಟ್ಟರೆ ಅವರನ್ನು ವಿದೇಶಕ್ಕೆ ತೆಗೆದುಕೊಂಡು ಹೋಗುತ್ತಾರೆ ಅಥವಾ ಇಲ್ಲಿಯ ವ್ಯಕ್ತಿ ಯಾರಾದರೂ ವಿದೇಶದಲ್ಲಿ ಮರಣ ಹೊಂದಿದರೆ ಅವರನ್ನು ಇಲ್ಲಿಗೆ ತೆಗೆದುಕೊಂಡು ಬರುತ್ತಾರೆ. ತಮ್ಮ ಭೂಮಿಗೆ ಮಾನ್ಯತೆ ಕೊಡುತ್ತಾರೆ. ಭಾರತಕ್ಕೆ ಭಗವಂತನ ಜನ್ಮ ಭೂಮಿಯೆಂದು ಹೇಳಲಾಗುತ್ತದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ – ಯಾರಿಗೆ ಭಗವಂತ ಅಥವಾ ಅಲ್ಲಾಹ್ ಪರಮಾತ್ಮ ಎಂದು ಹೇಳುತ್ತಾರೆಯೋ ಅವರ ಸನ್ಮುಖದಲ್ಲಿ ನೀವೀಗ ಕುಳಿತಿದ್ದೀರಿ. ಹೆಸರು ಅವಶ್ಯವಾಗಿ ಬೇಕಲ್ಲವೆ. ಅಲ್ಲಾಹ್ ಎಂದು ಹೇಳುತ್ತಾರೆ ಎಂದರೆ ಲಿಂಗಕ್ಕೆ ಪೂಜೆ ಮಾಡುತ್ತಾರೆ. ಈಶ್ವರ ಅಥವಾ ಖುದಾ ಎಂದು ಹೇಳುತ್ತಾರೆ ಅಂದಮೇಲೆ ಗುರುತೂ ಇರಬೇಕಲ್ಲವೆ. ಎಲ್ಲಾ ಕಡೆಯೂ ಲಿಂಗಕ್ಕೆ ಪೂಜೆ ಮಾಡುತ್ತಾರೆ, ಚಿತ್ರಗಳಲ್ಲಿಯೂ ಇತ್ತೀಚೆಗೆ ದೇವತೆಗಳ ಮುಂದೆ ಪರಮಪಿತ ಪರಮಾತ್ಮನ ಚಿತ್ರ ಲಿಂಗವನ್ನು ತೋರಿಸುತ್ತಾರೆ. ಅವರು ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಆದ್ದರಿಂದ ನಿರಾಕಾರನೆಂದು ಹೇಳಲಾಗುತ್ತದೆ ಸಾಕಾರನಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ಶಿಕ್ಷಣವನ್ನು ತೆಗೆದುಕೊಳ್ಳಲು ಅವರಮುಂದೆ ಕಲ್ಪ-ಕಲ್ಪವೂ ಹಾಜರಾಗುತ್ತೇವೆ. ಭಗವಾನುವಾಚ ಇದೆ ಅಂದಮೇಲೆ ಅವಶ್ಯವಾಗಿ ರಾಜಯೋಗವನ್ನು ಕಲಿಸುತ್ತಾರೆ. ವಿದ್ಯಾರ್ಥಿಗಳಿಗೆ ರಾಜಯೋಗವನ್ನು ಕಲಿಸಿದ್ದರು ಮತ್ತು ಅವರು ರಾಜ-ರಾಣಿಯಾಗಿದ್ದರು, ಇಲ್ಲಿ ಯುದ್ಧದ ಮಾತಿಲ್ಲ. ಈ ಲಕ್ಷ್ಮೀ-ನಾರಾಯಣರು ಯುದ್ಧ ಮಾಡಿ ರಾಜ್ಯಭಾಗ್ಯವನ್ನು ಪಡೆಯಲಿಲ್ಲ. ಇವರು ಸತ್ಯಯುಗದಲ್ಲಿ ಹೇಗೆ ರಾಜ್ಯವನ್ನು ಪಡೆದರು ಎಂಬುದು ಪ್ರಪಂಚದವರಿಗೆ ಗೊತ್ತಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಾವು ತಂದೆಯಿಂದ ರಾಜ್ಯವನ್ನು ತೆಗೆದುಕೊಂಡಿದ್ದೇವೆ, ನಾವು ಅವರ ಸನ್ಮುಖದಲ್ಲಿ ಕುಳಿತಿದ್ದೇವೆ. ಅವರೇ ತಂದೆಯಾಗಿದ್ದಾರೆ, ಕೃಷ್ಣನಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದಾನೆ, ರಚನೆಯಾಗಿದ್ದಾನೆ. ಈಗ ಕೃಷ್ಣನೂ ಸಹ ತನ್ನ ಪದವಿಯನ್ನು ಪಡೆಯುತ್ತಿದ್ದಾನೆ ಯಾವುದರಿಂದ ಭವಿಷ್ಯದಲ್ಲಿ ಕೃಷ್ಣನೆಂದು ಕರೆಸಿಕೊಳ್ಳುತ್ತಾನೆ. ಇದೆಲ್ಲವೂ ವಿದ್ಯೆಯ ಮಾತಾಗಿದೆ.

ನೀವು ತಿಳಿದುಕೊಂಡಿದ್ದೀರಿ – ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ಹೇಗೆ ಮನುಷ್ಯರು ಮನುಷ್ಯರನ್ನು ಬ್ಯಾರಿಸ್ಟರ್, ಇಂಜಿನಿಯರ್ನ್ನಾಗಿ ಮಾಡುತ್ತಾರೆ, ಅವರೂ ಮನುಷ್ಯರೇ ಅಲ್ಲವೆ. ನೀವು ತಿಳಿದುಕೊಳ್ಳುತ್ತೀರಿ – ನಾವು ಮನುಷ್ಯರೇ ಆಗಿದ್ದೇವೆ ಆದರೆ ಪತಿತರಾಗಿದ್ದೇವೆ. ಈಗ ತಂದೆಯು ಪಾವನರನ್ನಾಗಿಯೂ ಮಾಡುತ್ತಾರೆ ಮತ್ತು ನಮಗೆ ಆಸ್ತಿಯನ್ನೂ ಕೊಡುತ್ತಾರೆ. ಪಾವನ ಪ್ರಪಂಚವಂತೂ ಹೊಸ ಪ್ರಪಂಚವೇ ಆಗಿರುವುದು. ಹೊಸ ಪ್ರಪಂಚದಲ್ಲಿ ರಾಜಧಾನಿಯಿರುತ್ತದೆ. ನೀವೀಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ಪ್ರೀತಿಯಿಂದ ತಿಳಿಸುತ್ತಾರೆ ಹಾಗೆಯೇ ಇವರು ಪಾರಲೌಕಿಕ ವಿಚಿತ್ರ ತಂದೆಯಾಗಿದ್ದಾರೆ. ಇವರಿಗಾಗಿಯೇ ತ್ವಮೇವ ಮಾತಾಶ್ಚ ಪಿತಾ….. ಎಂದು ನೀವು ಹಾಡುತ್ತಾ ಬಂದಿದ್ದೀರಿ. ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ, ಇವರು ತಮ್ಮ ಪಾತ್ರವನ್ನಭಿನಯಿಸುತ್ತಾರೆ, ಅದನ್ನು ಭಕ್ತಿಮಾರ್ಗದಲ್ಲಿ ನಾವು ಗಾಯನ ಮಾಡುತ್ತೇವೆ. ನಾವು ಶಿವ ತಂದೆಯ ಬಳಿ ಬಂದಿದ್ದೇವೆ ಎಂದು ನೀವು ಹೇಳುತ್ತೀರಿ. ಶಿವಬಾಬಾ ಛಿ/o ಬ್ರಹ್ಮಾ ಎಂದು ಪತ್ರವನ್ನೂ ಬರೆಯುತ್ತೀರಿ. ಯಾರಿಗಾದರೂ ನೀವು ಈ ಪತ್ರವನ್ನು ತೋರಿಸಿದರೆ ಆಶ್ಚರ್ಯಚಕಿತರಾಗುವರು. ಶಿವಬಾಬಾ ಛಿ/o ಬ್ರಹ್ಮಾ ಎಂಬುದನ್ನು ಎಂದೂ ಕೇಳಿರುವುದಿಲ್ಲ. ಶಿವ ತಂದೆಯು ಬ್ರಹ್ಮಾರವರಲ್ಲಿ ಬಂದು ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ, ಸನ್ಮುಖದಲ್ಲಿ ನಿಂತಿದ್ದಾರೆ. ಶಿವ ತಂದೆಯು ಮೇಲಿರುತ್ತಾರೆ, ಅವರು ಬ್ರಹ್ಮನ ಮೂಲಕ ಸ್ಥಾಪನೆ ಮಾಡಿದ್ದರು, ಈಗ ಪುನಃ ಮಾಡುತ್ತಾರೆ. ಇದು ಪ್ರವೃತ್ತಿ ಮಾರ್ಗವಾಗಿದೆ. ರಾಜ ವಿದ್ಯೆಯಲ್ಲಿಯೂ ಬ್ಯಾರಿಸ್ಟರ್ ಓದಿಸುತ್ತಾರೆಂದರೆ ಸ್ತ್ರೀ-ಪುರುಷರಿಬ್ಬರೂ ಓದುತ್ತಾರೆ. ಸ್ತ್ರೀಯರು ಜಡ್ಜ್, ಬ್ಯಾರಿಸ್ಟರ್, ಡಾಕ್ಟರ್ ಇತ್ಯಾದಿ ಆಗುತ್ತಾರೆ, ಇದೂ ಸಹ ಪ್ರವೃತ್ತಿ ಮಾರ್ಗವಾಗಿದೆ, ಸನ್ಯಾಸಿಗಳದು ನಿವೃತ್ತಿ ಮಾರ್ಗವಾಗಿದೆ. ಅದು ಬೇರೆಯಾಗಿದೆ. ಇದನ್ನೂ ತಂದೆಯು ತಿಳಿಸಿದ್ದಾರೆ – ಒಂದುವೇಳೆ ಶಂಕರಾಚಾರ್ಯರು ಬರಲಿಲ್ಲವೆಂದರೆ ಪವಿತ್ರತೆಯ ಅಂಶವೂ ಇರುತ್ತಿರಲಿಲ್ಲ, ಭಾರತವು ಸಂಪೂರ್ಣ ಕಾಮಾಗ್ನಿಯಲ್ಲಿ ಸುಟ್ಟು ಹೋಗುತ್ತಿತ್ತು, ಭಾರತವನ್ನು ತಣಿಸುವುದಕ್ಕಾಗಿ ಇದು ನಿಗಧಿಯಾಗಿದೆ. ಭಾರತವು ಬಹಳ ಪವಿತ್ರವಾಗಿತ್ತು ನಂತರ ಅಪವಿತ್ರವಾಗಿದೆ. ಈಗ ಭಾರತವು ಎಷ್ಟೊಂದು ಕಂಗಾಲ ವಾಗಿದೆ. ಚಿನ್ನದ ಲಂಕೆಯು ಸಮುದ್ರದ ಕೆಳಗಡೆ ಹೊರಟು ಹೋಯಿತೆಂದು ಹೇಳುತ್ತಾರೆ, ಲಂಕೆಯಂತೂ ಚಿನ್ನದ್ದಾಗಿರಲು ಸಾಧ್ಯವಿಲ್ಲ, ಕೇವಲ ಇವೆಲ್ಲಾ ಕಥೆಗಳನ್ನು ಬರೆದಿದ್ದಾರೆ. ಇದರಿಂದ ಲಾಭವೇನೂ ಇಲ್ಲ.

ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಅವಶ್ಯವಾಗಿ ಸಹಜ ನೆನಪಿನ ಬಲದಿಂದ ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ತಂದೆಯು ಪ್ರತಿಜ್ಞೆ ಮಾಡುತ್ತಾರೆ. ಒಂದುವೇಳೆ ನಿರಂತರ ನೆನಪು ಮಾಡುವ ಪುರುಷಾರ್ಥ ಮಾಡಿದ್ದೇ ಆದರೆ ವಿಕರ್ಮಗಳು ವಿನಾಶವಾಗುತ್ತವೆ. ಭಕ್ತಿಮಾರ್ಗದಲ್ಲಿಯೂ ನೆನಪು ಮಾಡುವ ಪುರುಷಾರ್ಥ ಮಾಡಿದ್ದೀರಲ್ಲವೆ. ಏಕೆ ನೆನಪು ಮಾಡುತ್ತಾರೆ? ನಮಗೆ ಸಾಕ್ಷಾತ್ಕಾರವಾಗಲಿ ಎಂದು. ಕೃಷ್ಣಪುರಿಯಲ್ಲಿ ನಮಗೆ ರಾಜ್ಯಭಾಗ್ಯ ಸಿಗಲಿ ಅಥವಾ ನಾವು ನರನಿಂದ ನಾರಾಯಣನಾಗಬೇಕೆಂದು ನೆನಪು ಮಾಡುವುದಿಲ್ಲ. ನಿಮಗೂ ಸಹ ನಾವು ಮನುಷ್ಯರಿಂದ ದೇವತೆಯಾಗಬೇಕೆಂಬ ಆಸೆಯೂ ಇರಲಿಲ್ಲ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಹಾಡುತ್ತಾರೆ, ನೀವು ನೋಡುವಿರಿ – ಅವಶ್ಯವಾಗಿ ಕಲಿಯುಗದ ನಂತರ ಸತ್ಯಯುಗ ಬರುವುದು, ಕಲಿಯುಗದಲ್ಲಿ ಎಷ್ಟೊಂದು ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಒಂದೇ ಧರ್ಮವಿರುವುದು. ಈಗ ನಿಮಗೆ ಆತ್ಮ-ಪರಮಾತ್ಮನ ಜ್ಞಾನವು ಸಿಕ್ಕಿದೆ. ಆತ್ಮದ ಜ್ಞಾನವಿರುವ ಮನುಷ್ಯರು ಪ್ರಪಂಚದಲ್ಲಿ ಯಾರೊಬ್ಬರೂ ಇಲ್ಲ. ಆತ್ಮದಲ್ಲಿ 84 ಜನ್ಮಗಳ ಪಾತ್ರವು ಹೇಗೆ ನಿಗಧಿಯಾಗಿದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈ ಅಕ್ಷರವನ್ನು ಎಂದೂ ಯಾರಿಂದಲೂ ಕೇಳಿರುವುದಿಲ್ಲ. ತಂದೆಯು ಜ್ಞಾನ ಸಾಗರ, ದಯಾ ಸಾಗರ, ನಿರಾಕಾರನಾಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ – ನಾವಾತ್ಮರು ಈಗ ಪಾಪಾತ್ಮರಿಂದ ಪುಣ್ಯಾತ್ಮರಾಗುತ್ತಿದ್ದೇವೆ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯಾತ್ಮರಿರುತ್ತಾರೆ, ಇಲ್ಲಿ ಪಾಪಾತ್ಮರಿದ್ದಾರೆ. ಬಹಳ ದಾನ-ಪುಣ್ಯ ಮಾಡುವವರಿಗೆ ಪುಣ್ಯಾತ್ಮರೆಂದು ಕರೆಯಲಾಗುವುದಿಲ್ಲ, ಪುಣ್ಯಾತ್ಮರಿರುವುದೇ ಸತ್ಯಯುಗದಲ್ಲಿ. ಇಲ್ಲಿ ಯಾವ ಮನುಷ್ಯರು ದಾನ-ಪುಣ್ಯ ಮಾಡುತ್ತಾರೆಯೋ ಅವರನ್ನು ಪುಣ್ಯಾತ್ಮರೆಂದು ಕರೆಯುತ್ತಾರೆ. ಅಲ್ಲಿ ನಿಮಗೆ ದಾನ-ಪುಣ್ಯ ಇತ್ಯಾದಿಗಳನ್ನು ಮಾಡುವ ಅವಶ್ಯಕತೆ ಇರುವುದಿಲ್ಲ, ಅಲ್ಲಿ ಯಾರೂ ಬಡವರಿರುವುದಿಲ್ಲ. ನೀವು ಅಲ್ಲಿ ಸದಾಕಾಲಕ್ಕಾಗಿ ಪುಣ್ಯಾತ್ಮರಾಗಿಯೇ ಇರುತ್ತೀರಿ. ನೀವು ತನು-ಮನ-ಧನ ಎಲ್ಲವನ್ನೂ ಬೇಹದ್ದಿನ ತಂದೆಯ ಅರ್ಥವಾಗಿ ಕೊಡುತ್ತೀರಿ. ಇದಕ್ಕೆ ಬಲಿಹಾರಿ ಆಗುವುದು ಎಂದು ಹೇಳಲಾಗುತ್ತದೆ. ತಂದೆಯು ಕೇಳುತ್ತಾರೆ, ಮೊದಲು ನಾನು ಬಲಿಹಾರಿ ಆಗುತ್ತೇನೆಯೋ ಅಥವಾ ನೀವೋ? ತಂದೆಯು ತಿಳಿಸುತ್ತಾರೆ – ಮೊದಲು ನೀವು ಬಲಿಹಾರಿ ಆಗುತ್ತೀರಿ ಆದ್ದರಿಂದಲೇ 21 ಜನ್ಮಗಳಿಗಾಗಿ ಬಲಿಹಾರಿಯು ಸಿಗುವುದು. ಈ ಮಾತುಗಳನ್ನು ನೀವೀಗ ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಸನ್ಮುಖದಲ್ಲಿ ಕೇಳುತ್ತೀರಿ. ಮನೆಯಲ್ಲಿದ್ದರೂ ಸಹ ಅಲ್ಲಿಗೆ ಮುರುಳಿ ಬರುತ್ತದೆ, ದೂರದಿಂದ ಕೇಳುತ್ತೀರಿ. ಈಗಂತೂ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ಹೇಳುತ್ತಾರೆ – ಮಕ್ಕಳೇ, ನಾನು ನಿಮ್ಮ ತಂದೆಯೂ ಆಗಿದ್ದೇನೆ, ಇಲ್ಲಿ ಯಾವುದೇ ಅಂಧಶ್ರದ್ಧೆಯ ಮಾತಿಲ್ಲ, ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ತಂದೆಯ ಮಕ್ಕಳಾದರೆ ಅವರು ಶಿಕ್ಷಣ ಕೊಡುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಎಲ್ಲದರ ಜ್ಞಾನವಿದೆ, 84 ಜನ್ಮಗಳ ಚಕ್ರವನ್ನೂ ನಿಮಗೆ ತಿಳಿಸಲಾಗಿದೆ. ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲವೋ ಅವರು ತಿಳಿದುಕೊಳ್ಳುವುದೂ ಇಲ್ಲ. ನಾವು 84 ಜನ್ಮಗಳ ಚಕ್ರವನ್ನು ಸುತ್ತಿ ಈಗ ಹಿಂತಿರುಗಿ ಹೋಗುತ್ತೇವೆಂದು ನೀವು ತಿಳಿದುಕೊಳ್ಳುತ್ತೀರಿ. ತಂದೆಯು ಹೇಳುತ್ತಾರೆ – ನೀವಾತ್ಮರು ಅಶರೀರಿಯಾಗಿ ಬಂದಿದ್ದಿರಿ ಮತ್ತೆ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ. ನೀವು ಪವಿತ್ರ ಆತ್ಮರಾಗಿ ಹೋಗುತ್ತೀರಿ. ಪವಿತ್ರರಾಗಲು ನೀವು ಪುರುಷಾರ್ಥ ಮಾಡುತ್ತಿದ್ದಿರಿ. ಯೋಗಬಲ ಅರ್ಥಾತ್ ನೆನಪಿನ ಬಲದಿಂದ ನೀವು ಪವಿತ್ರರಾಗಿ ಬಿಡುತ್ತೀರಿ. ಯೋಗ ಎಂಬುದು ಶಾಸ್ತ್ರಗಳ ಅಕ್ಷರವಾಗಿದೆ, ಸರಿಯಾದ ಶಬ್ಧವು ‘ನೆನಪು’ ಎಂದಾಗಿದೆ. ಸ್ತ್ರೀಗೆ ಪತಿಯ ನೆನಪು ಅಥವಾ ಪುರುಷನಿಗೆ ಪತ್ನಿಯ ನೆನಪಿರುತ್ತದೆಯಲ್ಲವೆ. ಯೋಗದ ಅರ್ಥವೇ ಆಗಿದೆ – ನೆನಪು. ತಂದೆಯೂ ಹೇಳುತ್ತಾರೆ – ನನ್ನೊಬ್ಬನನ್ನೇ ನೆನಪು ಮಾಡಿ. ಮತ್ತೆಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು ತಂದೆಯಾದ ನನ್ನೊಬ್ಬನ ಜೊತೆ ಬುದ್ಧಿಯೋಗವನ್ನಿಡಿ. ನೆನಪು ಮಾಡಿರಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಅವಶ್ಯವಾಗಿ ಭಾರತಕ್ಕೆ ಕಲ್ಪ-ಕಲ್ಪವೂ ಆಸ್ತಿಯು ಸಿಗುತ್ತದೆ. ಶಿವ ಜಯಂತಿಯು ಪ್ರಸಿದ್ಧವಾಗಿದೆ, ಹೇಗೆ ಬುದ್ಧ, ಕ್ರೈಸ್ಟ್ ಮೊದಲಾದವರ ಜಯಂತಿಯಿದೆಯೋ ಹಾಗೆಯೇ ನಿರಾಕಾರ ಶಿವನ ಜಯಂತಿಯೂ ಇದೆ. ಇದು ಸರ್ವಶ್ರೇಷ್ಠವಾಗಿದೆ. ಕೃಷ್ಣ ಜಯಂತಿಯೂ ಪ್ರಸಿದ್ಧವಾಗಿದೆ ಆದರೆ ಕೃಷ್ಣನು ಬಂದು ಏನು ಮಾಡುತ್ತಾನೆಂದು ಯಾರಿಗೂ ತಿಳಿದಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದನು, ಅವಶ್ಯವಾಗಿ ಕೃಷ್ಣನಿಗೆ ಮತ್ತ್ಯಾರೋ ಇಂತಹ ಕರ್ಮವನ್ನು ಕಲಿಸಿರಬೇಕು, ಇದರಿಂದಲೇ ಸತ್ಯಯುಗದ ರಾಜಕುಮಾರನಾಗಿದ್ದಾನೆ. ಚಿಕ್ಕ ಮಗುವಂತೂ ಪವಿತ್ರವಾಗಿರುತ್ತದೆ, ಅಲ್ಲಿ ವಿಕಾರದ ಮಾತಿರುವುದಿಲ್ಲ. ಮಗು ನಿರ್ಮಲವಾಗಿರುತ್ತದೆ, ಭಗವಂತನು ಒಬ್ಬರೇ ನಿರಾಕಾರನಾಗಿದ್ದಾರೆ. ಗಾಡ್ ಈಜ್ ಒನ್, ಉಳಿದೆಲ್ಲವೂ ಅವರ ರಚನೆಯಾಗಿದೆ. ರಚನೆಯಿಂದ ಎಂದೂ ರಚನೆಗೆ ಆಸ್ತಿಯು ಸಿಗುವುದಿಲ್ಲ, ತಂದೆಯಿಂದಲೇ ಸಿಗುವುದು. ಸಹೋದರರಿಂದ ಸಹೋದರರಿಗೆ ಆಸ್ತಿಯು ಸಿಗುವುದಿಲ್ಲ. ನೀವೆಲ್ಲರೂ ಸಹೋದರ-ಸಹೋದರರಾಗಿದ್ದೀರಿ, ಸಹೋದರತ್ವವೆಂದು ಹೇಳುತ್ತಾರಲ್ಲವೆ. ತಂದೆಯು ಒಬ್ಬರೇ ಆಗಿದ್ದಾರೆ. ಆಸ್ತಿಯು ತಂದೆಯಿಂದ ಸಿಗುವುದು. ಎಲ್ಲಾ ಸಹೋದರರ ಸದ್ಗತಿದಾತನು ಒಬ್ಬ ತಂದೆಯಾಗಿದ್ದಾರೆ. ಎಲ್ಲಾ ಆತ್ಮರಿಗೆ ತಂದೆಯಿಂದ ಆಸ್ತಿಯು ಸಿಗುತ್ತದೆ. ತಂದೆಯು ಹೇಳುತ್ತಾರೆ – ನಾನು ಬಂದು ಆತ್ಮರಿಗೆ ಓದಿಸುತ್ತೇನೆ, ಆತ್ಮರಿಗೇ ಸದ್ಗತಿ ಕೊಡುತ್ತೇನೆ. ತಂದೆಯೇ ಕುಳಿತು ರಾಜಯೋಗವನ್ನು ಕಲಿಸುತ್ತಾರೆ, ಈ ವಿದ್ಯೆಯ ಪದವಿಯನ್ನು ನೀವು ಇಲ್ಲಿ ಪಡೆಯುವುದಿಲ್ಲ. ಮನುಷ್ಯರು ಈ ಜನ್ಮದಲ್ಲಿಯೇ ವಕೀಲ ಮೊದಲಾದವರಾಗುತ್ತಾರೆ ಮತ್ತೆ ಇನ್ನೊಂದು ಜನ್ಮ ಪಡೆದ ಮೇಲೆ ಮತ್ತೆ ಓದುತ್ತಾರೆ.

ನೀವು ತಿಳಿದುಕೊಂಡಿದ್ದೀರಿ – ಈ ವಿದ್ಯೆಯಿಂದ ನಾವು 21 ಜನ್ಮಗಳಿಗಾಗಿ ಪ್ರಾಲಬ್ಧವನ್ನು ಪಡೆಯುತ್ತೇವೆ, ಸತ್ಯಯುಗದಲ್ಲಿ ವೈದ್ಯರು ಮೊದಲಾದವರು ಇರುವುದಿಲ್ಲ. ಅಲ್ಲಿ ರೋಗವೇ ಇರುವುದಿಲ್ಲ. ನೀವು ಗರ್ಭ ಮಹಲಿನಲ್ಲಿರುತ್ತೀರಿ, ಇಲ್ಲಿ ಗರ್ಭ ಜೈಲಿನಲ್ಲಿರುತ್ತೀರಿ. ಬಹಳ ಶಿಕ್ಷೆಗಳು ಸಿಗುತ್ತವೆ ಆದ್ದರಿಂದಲೇ ಈ ಜೈಲಿನಿಂದ ಹೊರ ತೆಗೆಯಿರಿ, ನಾವು ಇನ್ನೆಂದೂ ತಪ್ಪು ಮಾಡುವುದಿಲ್ಲ ಎಂದು ಕರೆಯುತ್ತೀರಿ. ಧರ್ಮ ರಾಜನೊಂದಿಗೆ ಪ್ರತಿಜ್ಞೆ ಮಾಡುತ್ತೀರಿ. ಇಲ್ಲಿ ನೀವು ಶಿವ ತಂದೆಯೊಂದಿಗೆ ಪ್ರತಿಜ್ಞೆ ಮಾಡಬೇಕಾಗಿದೆ, ಬಾಬಾ ಇನ್ನೆಂದೂ ನಾವು ವಿಕರ್ಮ ಮಾಡುವುದಿಲ್ಲ. ನಾವು ಪಂಚ ವಿಕಾರಗಳನ್ನು ನಿಮಗೆ ಕೊಟ್ಟು ಬಿಡುತ್ತೇವೆ. ಇದೂ ಸಹ ತಂದೆಗೆ ತಿಳಿದಿದೆ – ವಿಕಾರಗಳು ಕೂಡಲೇ ಬಿಟ್ಟು ಹೋಗುವುದಿಲ್ಲ. ಆದ್ದರಿಂದ ಒಳಗೆ ಭಯವಿರಲಿ, ನಾವು ವಿಕಾರಗಳ ದಾನ ಕೊಟ್ಟು ಮತ್ತೆ ಹಿಂತೆಗೆದುಕೊಂಡರೆ ಬಹಳ ಪಾಪವಾಗುವುದು. ಹೇಗೆ ರಾಜಾ ಹರಿಶ್ಚಂದ್ರನ ಉದಾಹರಣೆಯಿದೆ. ತಂದೆಗೆ ಗೊತ್ತಿದೆ, ಐದು ವಿಕಾರಗಳು ಕೂಡಲೇ ಬಿಟ್ಟು ಹೋಗುವುದಿಲ್ಲ. ಇದರಲ್ಲಿ ಸಮಯ ಹಿಡಿಸುತ್ತದೆ. ನಿಮ್ಮದು ಕರ್ಮಾತೀತ ಸ್ಥಿತಿಯಾದಾಗ ಯುದ್ಧವಾಗುತ್ತದೆ. ಈ ಪಂಚ ವಿಕಾರಗಳು ದೊಡ್ಡ ಶತ್ರುಗಳಾಗಿವೆ, ಅದರಲ್ಲಿಯೂ ಮುಖ್ಯವಾದುದು ಒಂದು ದೇಹಾಭಿಮಾನವಾಗಿದೆ, ಅದರ ದಾನ ಮಾಡುವುದು ಎಷ್ಟು ಪರಿಶ್ರಮವಾಗಿದೆ. ತಂದೆಯು ಪದೇ-ಪದೇ ತಿಳಿಸುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ ಎಂದು. ಆದರೆ ಇದು ಆಗುವುದಿಲ್ಲ. ದೇಹಾಭಿಮಾನಿಗಳಾಗುವುದರಿಂದ ಕಾಮದ ಪೆಟ್ಟು ಬೀಳುತ್ತದೆ. ದೇಹಾಭಿಮಾನವು ಎಲ್ಲದಕ್ಕಿಂತ ತೀಕ್ಷ್ಣವಾಗಿದೆ. ದೇಹೀ-ಅಭಿಮಾನಿಯಾಗುವುದು ಪರಿಶ್ರಮವಿದೆ. ಮುಖ್ಯವಾಗಿ ದೇಹಾಭಿಮಾನವು ಬರುವುದರಿಂದಲೇ ಪಾಪಗಳಾಗಿದೆ. ಇದಕ್ಕಾಗಿ ಐದು ವಿಕಾರಗಳನ್ನು ದಾನವಾಗಿ ಕೊಡಬೇಕಾಗುತ್ತದೆ. ಇದರಲ್ಲಿಯೇ ಸಮಯ ಹಿಡಿಸುತ್ತದೆ. ಪ್ರಿಯತಮನಿಲ್ಲದೆ ಪ್ರಿಯತಮೆಯರು ಹೋಗಲು ಸಾಧ್ಯವಿಲ್ಲ. ಮೊದಲು ಪ್ರಿಯತಮನು ಹೋಗಬೇಕು ನಂತರ ಪ್ರಿಯತಮೆಯರು. ಪ್ರಿಯತಮನು ಬಂದು ಎಲ್ಲಾ ಆತ್ಮರನ್ನು ಕರೆದುಕೊಂಡು ಹೋಗಬೇಕಾಗಿದೆ, ಕರ್ಮಾತೀತ ಸ್ಥಿತಿಯಾಗುವವರೆಗೂ ಪುರುಷಾರ್ಥ ಮಾಡಬೇಕಾಗಿದೆ. ದೇಹಾಭಿಮಾನ ಬರುವುದರಿಂದಲೇ ತಪ್ಪುಗಳಾಗುತ್ತವೆ. ಬಾಬಾ, ದೇಹಾಭಿಮಾನ ಬರುವುದರಿಂದಲೇ ವಿಕಾರದಲ್ಲಿ ಬಿದ್ದೆವು ಎಂದು ಹೇಳುತ್ತಾರೆ. ಬಹಳ ಬಿರುಗಾಳಿಗಳು ಬರುತ್ತವೆ, ವಿಕಾರದ ಸಂಕಲ್ಪಗಳು ಬರುತ್ತವೆ ಆದರೆ ಕರ್ಮೇಂದ್ರಿಯಗಳಿಂದ ಎಂದೂ ಯಾವುದೇ ಪಾಪ ಮಾಡಬಾರದು ಮಾಯೆಯನ್ನು ಗೆಲ್ಲುವುದಕ್ಕಾಗಿ ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ಹೇಳುತ್ತಾರೆ – ಒಂದುವೇಳೆ ವಿವಾಹವಾಗಿದ್ದರೆ ಪವಿತ್ರವಾಗಿದ್ದು ತೋರಿಸಿರಿ ಆಗ ಸನ್ಯಾಸಿಗಳೂ ನೋಡುತ್ತಾರೆ. ನಿಮಗೆ ಎಷ್ಟು ದೊಡ್ಡ ಸಂಪಾದನೆಯಿದೆ! ಪವಿತ್ರರಾಗಿದ್ದು ತೋರಿಸಿದರೆ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ನಿಮ್ಮ ಮೇಲೆ ಎಲ್ಲರೂ ಬಲಿಹಾರಿಯಾಗುವರು. ತಂದೆಯೂ ಮಹಿಮೆ ಮಾಡುತ್ತಾರೆ. ಭಲೆ ಪವಿತ್ರರಾಗಿರಿ ಆದರೆ ಜೊತೆಗೆ ಯೋಗವೂ ಇರಬೇಕು, ಯೋಗದಲ್ಲಿಯೇ ಪದೇ-ಪದೇ ವಿಘ್ನಗಳು ಬರುತ್ತವೆ. ದೇಹಭಿಮಾನವು ಬಂದು ಬಿಡುತ್ತದೆ. ಪವಿತ್ರರಾಗಿರುವುದೇನೋ ಸರಿ, ಪವಿತ್ರತೆಯಿಂದಲೇ ಪವಿತ್ರ ಪ್ರಪಂಚದಲ್ಲಿ ಆಸ್ತಿಯನ್ನು ಪಡೆಯುತ್ತೀರಿ ಆದರೆ ಮತ್ತೆ ಮಾಯೆಯು ಬಹಳ ಜೋರಾಗಿ ಯುದ್ಧ ಮಾಡುತ್ತದೆ. ಇದೆಲ್ಲವೂ ಆಗುತ್ತದೆ, ಶೌರ್ಯವನ್ನು ತೋರಿಸುತ್ತಾರೆ ಆದರೆ ಜೊತೆ ಜೊತೆಗೆ ನಿರಂತರ ನೆನಪೂ ಇರಲಿ ಆಗಲೇ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು ತಿಳಿಸುತ್ತಾರೆ. ಯಾರು ಶಕ್ತಿಶಾಲಿಯಾಗುವರೋ ಅವರನ್ನು ಮಾಯೆಯು ಬಹಳ ಸತಾಯಿಸುತ್ತದೆ, ನೆನಪಿನಲ್ಲಿರುವುದು ಬಹಳ ಕಷ್ಟವಾಗುತ್ತದೆ. ಯಾರು ಇರುವರೋ ಅವರೊಂದಿಗೆ ಅನುಭವ ಕೇಳಬೇಕು – ಏನು ತಿಳಿದುಕೊಳ್ಳುತ್ತೀರಿ? ಹೇಗಿರುತ್ತೀರಿ ಎಂದು. ನೆನಪಿನಲ್ಲಿರುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಈ ಮಾತು ಸಂಪೂರ್ಣ ಭಿನ್ನ ಮತ್ತು ಹೊಸದಾಗಿದೆ. ಇಲ್ಲಿ ಕುಳಿತಿದ್ದರೂ ಸಹ ನಶೆಯೇರಿದೆ, ಇದನ್ನೂ ತಿಳಿದುಕೊಂಡಿದ್ದೀರಿ – ಭಗವಂತನು ಒಬ್ಬರೇ ನಿರಾಕಾರನಾಗಿದ್ದಾರೆ, ಕೃಷ್ಣನಲ್ಲ. ವಾಸ್ತವದಲ್ಲಿ ಕೃಷ್ಣನ ಬಗ್ಗೆ ಶಾಸ್ತ್ರಗಳಲ್ಲಿ ಅನೇಕ ಮಾತುಗಳನ್ನು ಬರೆದಿದ್ದಾರೆ – ಹಗ್ಗದಿಂದ ಕಟ್ಟಿ ಹಾಕಿದರು, ಬೆಣ್ಣೆ ಕದ್ದನು….. ಆದರೆ ಆ ಮಾತುಗಳೇನೂ ಇಲ್ಲ. ವಾಸ್ತವದಲ್ಲಿ ಇದೂ ಸಹ ಕೃಷ್ಣನ ನಿಂದನೆ ಮಾಡಿದಂತಾಯಿತು, ಕೃಷ್ಣನಲ್ಲಿ ಯಾವುದೇ ಅವಗುಣವಿರಲಿಲ್ಲ, ಚಂಚಲತೆ ಮಾಡುವುದೂ ಸಹ ಒಂದು ಅವಗುಣ ಆಯಿತಲ್ಲವೆ. ಕೃಷ್ಣನು ಮರ್ಯದಾ ಪುರುಷೋತ್ತಮನಾಗಿದ್ದಾನೆ. ಸರ್ವಗುಣ ಸಂಪನ್ನ…. ಮಹಿಮೆ ಮಾಡುತ್ತಾರೆ. ಗುರು ಬ್ರಹ್ಮಾ, ಗುರು ವಿಷ್ಣು ಎಂದು ಗಾಯನವೂ ಆಗುತ್ತದೆ ಆಗ ಹೇಳಿರಿ, ನಮಗೆ ಗುರುವಂತೂ ಇಲ್ಲ, ನಾವು ಇವರನ್ನು (ಬ್ರಹ್ಮಾ) ಗುರುವೆಂದಾಗಲಿ, ಈಶ್ವರನೆಂದಾಗಲಿ ಒಪ್ಪುವುದಿಲ್ಲ. ಪತಿತ-ಪಾವನನು ಒಬ್ಬ ನಿರಾಕಾರನೇ ಆಗಿದ್ದಾರಲ್ಲವೆ. ಯಾವುದೇ ಸಾಕಾರಿ ಗುರುಗಳು ಪತಿತ-ಪಾವನನಾಗಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೀವು ಪರಮಪಿತ ಪರಮಾತ್ಮನ ಇಡೀ ಜೀವನ ಚರಿತ್ರೆಯನ್ನು ತಿಳಿದುಕೊಂಡಿದ್ದೀರಿ. 5000 ವರ್ಷಗಳಲ್ಲಿ ಶಿವ ತಂದೆಯ ಪಾತ್ರವೇನು ಎಂಬುದನ್ನು ನೀವು ತಂದೆಯ ಮೂಲಕ ಅರಿತಿದ್ದೀರಿ. ತಂದೆಯು ಜ್ಞಾನ ಪೂರ್ಣನಲ್ಲವೆ. ಸುಖ, ಶಾಂತಿ, ಆನಂದದ ಸಾಗರ….. ಇದು ತಂದೆಯ ಮಹಿಮೆಯಾಗಿದೆ. ತಂದೆಯ ಬಳಿ ಖಜಾನೆಯಿದೆ ಅಂದಮೇಲೆ ಅವಶ್ಯವಾಗಿ ಮಕ್ಕಳಿಗೂ ಕೊಡುವರಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಈ ಕರ್ಮೇಂದ್ರಿಯಗಳಿಂದ ಯಾವುದೇ ತಪ್ಪು ಮಾಡಬಾರದು. ಪವಿತ್ರರಾಗಿರುವವರ ಜೊತೆ ಜೊತೆಗೆ ನೆನಪಿನಲ್ಲಿಯೂ ಶಕ್ತಿಶಾಲಿಗಳಾಗಬೇಕಾಗಿದೆ.

2. ಸದಾ ಪುಣ್ಯಾತ್ಮರಾಗಲು ತನು-ಮನ-ಧನದಿಂದ ತಂದೆಗೆ ಬಲಿಹಾರಿಯಾಗಬೇಕಾಗಿದೆ. ಒಂದು ಬಾರಿ ಬಲಿಹಾರಿಯಾದರೆ 21 ಜನ್ಮಗಳಿಗಾಗಿ ಪುಣ್ಯಾತ್ಮರಾಗಿ ಬಿಡುತ್ತೀರಿ.

ವರದಾನ:-

ಹೇಗೆ ಸರ್ಕಸ್ನಲ್ಲಿ ಹುರುಪನ್ನು ತೋರಿಸುವಂತಹ ಕಲೆಗಾರರ ಪ್ರತೀ ಕರ್ಮವೂ ಕಲೆಯಾಗಿ ಬಿಡುತ್ತದೆ. ಆ ಕಲೆಗಾರರ ಯಾವುದೇ ಅಂಗವನ್ನು ಹೇಗೆ ಬೇಕು, ಎಲ್ಲಿ ಬೇಕು, ಎಷ್ಟು ಸಮಯದವರೆಗೆ ಬೇಕೋ ಅಲ್ಲಿಯವರೆಗೆ ಮೋಲ್ಡ್ ಮಾಡಲು ಸಾಧ್ಯವಾಗುವುದು – ಇದೇ ಕಲೆಯಾಗಿದೆ. ತಾವು ಮಕ್ಕಳು ಬುದ್ಧಿಯನ್ನು ಯಾವಾಗ ಬೇಕು, ಎಷ್ಟು ಸಮಯದವರೆಗೆ ಎಲ್ಲಿ ಸ್ಥಿತಗೊಳಿಸಬೇಕು, ಅಲ್ಲಿ ಸ್ಥಿತಗೊಳಿಸುವುದೇ ಅತಿ ಶ್ರೇಷ್ಠವಾದ ಕಲೆಯಾಗಿದೆ. ಈ ಒಂದು ಕಲೆಯಿಂದ (ವಿಶೇಷತೆ/ಹುರುಪು) 16 ಕಲಾ ಸಂಪನ್ನರಾಗಿ ಬಿಡುವಿರಿ. ಇದಕ್ಕಾಗಿ ಈ ರೀತಿಯಾಗಿ ಉಪರಾಂ ಮತ್ತು ಎವರೆಡಿಯಾಗಿರಿ, ಅದು ಆದೇಶದನುಸಾರ ಒಂದು ಸೆಕೆಂಡಿನಲ್ಲಿಯೇ ಅಶರೀರಿ ಆಗಿ ಬಿಡಬೇಕು. ಯುದ್ಧದಲ್ಲಿಯೇ ಸಮಯ ಹೋಗಬಾರದು ಅಥವಾ ಕಳೆದು ಹೋಗಬಾರದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top