30 July 2021 KANNADA Murli Today | Brahma Kumaris
Read and Listen today’s Gyan Murli in Kannada
29 July 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಈ ಹಳೆಯ ಪ್ರಪಂಚದಲ್ಲಿ ಮನುಷ್ಯರು ಯಾವ ಪ್ರಕಾರದ ಆಸೆಗಳನ್ನು ಇಟ್ಟುಕೊಳ್ಳುವರೋ ಅದನ್ನು ನೀವು ಇಟ್ಟುಕೊಳ್ಳಬಾರದು, ಏಕೆಂದರೆ ಈ ಪ್ರಪಂಚವು ವಿನಾಶವಾಗಲಿದೆ”
ಪ್ರಶ್ನೆ:: -
ಸಂಗಮಯುಗದಲ್ಲಿ ಯಾವ ಆಸೆಯನ್ನು ಇಟ್ಟುಕೊಳ್ಳುವುದರಿಂದ ಎಲ್ಲಾ ಆಸೆಗಳು ಸದಾಕಾಲಕ್ಕಾಗಿ ಈಡೇರುತ್ತವೆ?
ಉತ್ತರ:-
ನಾವು ಪಾವನರಾಗಿ ತಂದೆಯನ್ನು ನೆನಪು ಮಾಡಿ ಅವರಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕೆಂಬ ಒಂದೇ ಆಸೆಯಿರಲಿ. ಈ ಆಸೆಯಿಂದ ಸದಾಕಾಲಕ್ಕಾಗಿ ಮತ್ತೆಲ್ಲಾ ಆಸೆಗಳು ಪೂರ್ಣವಾಗುತ್ತವೆ. ಆಯುಷ್ಯವಾನ್ಭವ, ಪುತ್ರವಾನ್ಭವ, ಧನವಾನ್ಭವ…. ಎಲ್ಲಾ ವರದಾನಗಳು ಪ್ರಾಪ್ತಿಯಾಗುತ್ತವೆ. ಸತ್ಯಯುಗದಲ್ಲಿ ಎಲ್ಲಾ ಕಾಮನೆಗಳು ಈಡೇರುತ್ತವೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ನೀವೇ ಮಾತಾ ಪಿತ ಆಗಿದ್ದೀರಿ…….
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಅರ್ಥಾತ್ ಆತ್ಮಗಳ ಪ್ರತಿ ಪರಮಪಿತ ಪರಮಾತ್ಮನು ಇದನ್ನು ತಿಳಿಸುತ್ತಿದ್ದಾರೆ. ಬೇಹದ್ದಿನ ತಂದೆಯು ನಮಗೆ ವರದಾನ ನೀಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಪುತ್ರವಾನ್ಭವ, ಆಯುಷ್ಯವಾನ್ಭವ, ಧನವಾನ್ಭವ ಎಂದು ಆಶೀರ್ವಾದ ಮಾಡುತ್ತಾರೆ, ಇಲ್ಲಿ ನಿಮಗೆ ತಂದೆಯು ಆಯುಷ್ಯವಾನ್ಭವ ಎಂದು ವರದಾನ ಕೊಡುತ್ತಾರೆ. ನಿಮ್ಮದು ಧೀರ್ಘಾಯಸ್ಸು ಆಗಿ ಬಿಡುವುದು. ಅಲ್ಲಿ ಪುತ್ರರೂ ಇರುವರು ಮತ್ತು ಅವರು ಸುಖ ಕೊಡುವಂತಹವರಾಗಿರುವರು. ಇಲ್ಲಿ ಯಾರೆಲ್ಲಾ ಮಕ್ಕಳಿದ್ದಾರೆಯೋ ಎಲ್ಲರೂ ದುಃಖ ಕೊಡುವವರಾಗಿದ್ದಾರೆ, ಸತ್ಯಯುಗದಲ್ಲಿರುವವರು ಸುಖ ಕೊಡುವ ಮಕ್ಕಳಾಗಿರುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಬೇಹದ್ದಿನ ತಂದೆಯು ಬೇಹದ್ದಿನ ಸುಖದ ಆಸ್ತಿಯನ್ನು ಕೊಡುತ್ತಿದ್ದಾರೆ, ಅವಶ್ಯವಾಗಿ ನಾವು ಆಯುಷ್ಯವಂತರು, ಧನವಂತರೂ ಆಗುತ್ತೇವೆ. ಈಗ ಮನಸ್ಸಿನಲ್ಲಿ ಯಾವುದೇ ಕಾಮನೆಯನ್ನು ಇಟ್ಟುಕೊಳ್ಳಬಾರದು. ನಿಮ್ಮ ಎಲ್ಲಾ ಕಾಮನೆಗಳು ಸತ್ಯಯುಗದಲ್ಲಿ ಪೂರ್ಣವಾಗುವವು. ಈ ನರಕದಲ್ಲಿ ಯಾವುದೇ ಕಾಮನೆಯನ್ನು ಇಟ್ಟುಕೊಳ್ಳಬಾರದು. ಹಣದ ಕಾಮನೆಯನ್ನೂ ಇಟ್ಟುಕೊಳ್ಳಬೇಡಿ, ಬಹಳ ಹಣವಿರಲಿ, ದೊಡ್ಡ ನೌಕರಿ ಸಿಗಲಿ ಎಂಬ ಹೆಚ್ಚಿನ ಇಚ್ಛೆಯನ್ನೂ ಇಟ್ಟುಕೊಳ್ಳಬೇಡಿ. ಹೊಟ್ಟೆಗೆ ಒಂದು ಪಾವು ಹಿಟ್ಟು ಸಾಕು ಆದ್ದರಿಂದ ಹೆಚ್ಚಿನ ಲೋಭದಲ್ಲಿರಬಾರದು. ಹೆಚ್ಚು ಹಣವಿದ್ದರೂ ಸಹ ಅದು ಸಮಾಪ್ತಿಯಾಗುವುದು. ಮಕ್ಕಳಿಗೆ ತಿಳಿದಿದೆ – ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ತಂದೆಯು ಹೇಳುತ್ತಾರೆ – ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು ಅಂದಮೇಲೆ ಯಾವ ದಾನವನ್ನು ಕೊಡಬೇಕು? ಈ ಪಂಚವಿಕಾರಗಳ ದಾನ. ಈ ದಾನವನ್ನು ಕೊಡುವುದರಿಂದ ಗ್ರಹಚಾರವು ಬಿಟ್ಟುಹೋಗುವುದು ಮತ್ತು ನೀವು 16 ಕಲಾ ಸಂಪೂರ್ಣರಾಗಿಬಿಡುತ್ತೀರಿ. ನಿಮಗೆ ತಿಳಿದಿದೆ – ನಾವು ಇಲ್ಲಿಯೇ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಬೇಕಾಗಿದೆ. 5 ವಿಕಾರಗಳ ದಾನ ಕೊಡಬೇಕಾಗುತ್ತದೆ. ಮಕ್ಕಳಿಗೆ ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುವ ಆಸೆಯನ್ನು ಬಿಟ್ಟರೆ ಮತ್ತ್ಯಾವುದೇ ಆಸೆಯನ್ನು ಇಟ್ಟುಕೊಳ್ಳಬೇಡಿ, ಇನ್ನು ಸ್ವಲ್ಪವೇ ಸಮಯವಿದೆ, ಬಹಳ ಕಳೆಯಿತು, ಸ್ವಲ್ಪವೇ ಉಳಿಯಿತೆಂದು ಗಾಯನವಿದೆ, ಇನ್ನು ಸ್ವಲ್ಪವೇ ಸಮಯದಲ್ಲಿ ವಿನಾಶವಾಗುವುದು ಆದ್ದರಿಂದ ಈ ಹಳೆಯ ಪ್ರಪಂಚದ ಯಾವುದೇ ಆಸೆಯನ್ನು ಇಟ್ಟುಕೊಳ್ಳಬೇಡಿ, ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ. ನೆನಪಿನಿಂದಲೇ ನೀವು ಮಕ್ಕಳು ಸತೋಪ್ರಧಾನರಾಗಬೇಕಾಗಿದೆ. ಈ ಪ್ರಪಂಚದಲ್ಲಿ ಮನುಷ್ಯರು ಯಾವ ಆಸೆಯನ್ನು ಇಟ್ಟುಕೊಳ್ಳುವರೋ ಅದ್ಯಾವುದನ್ನೂ ನೀವು ಇಟ್ಟುಕೊಳ್ಳಬೇಡಿ. ಒಬ್ಬ ಶಿವ ತಂದೆಯಿಂದ ನಾವು ನಮ್ಮ ಸ್ವರ್ಗದ ಆಸ್ತಿಯನ್ನು ಪಡೆಯಬೇಕೆಂದು ಕೇವಲ ಒಂದೇ ಆಸೆಯನ್ನಿಟ್ಟುಕೊಳ್ಳಿ. ಎಂದೂ ಯಾರಿಗೂ ದುಃಖ ಕೊಡಬಾರದು. ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸುವುದೂ ಕೂಡ ಎಲ್ಲದಕ್ಕಿಂತ ದೊಡ್ಡ ದುಃಖವಾಗಿದೆ. ಆದ್ದರಿಂದ ಸನ್ಯಾಸಿಗಳು ಸ್ತ್ರೀಯರಿಂದ ದೂರವಾಗಿ ಬಿಡುತ್ತಾರೆ. ಇವರು ಬಿಟ್ಟು ಬಿಟ್ಟಿದ್ದಾರೆಂದು ಹೇಳುತ್ತಾರೆ, ಈ ಸಮಯದಲ್ಲಿ ರಾವಣರಾಜ್ಯದಲ್ಲಿ ಎಲ್ಲರೂ ಪತಿತರು, ಪಾಪಾತ್ಮರಾಗಿದ್ದಾರೆ.
ಈಗ ಸಮಯವು ಬಹಳ ಕಡಿಮೆಯಿದೆ, ಒಂದುವೇಳೆ ನೀವು ತಂದೆಯ ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠರಾಗುವುದಿಲ್ಲ. ಮಕ್ಕಳೇ ಶ್ರೇಷ್ಠಾತಿ ಶ್ರೇಷ್ಠರಾಗಬೇಕಾಗಿದೆ ಆದ್ದರಿಂದ ಪಂಚ ವಿಕಾರಗಳ ದಾನ ಕೊಡಬೇಕಾಗಿದೆ ಆಗಲೇ ಈ ಗ್ರಹಣವು ಬಿಟ್ಟು ಹೋಗುವುದು. ಎಲ್ಲರ ಮೇಲೆ ಗ್ರಹಚಾರವಿದೆ, ಸಂಪೂರ್ಣ ಕಪ್ಪಾಗಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ – ಒಂದುವೇಳೆ ನನ್ನಿಂದ ಆಸ್ತಿಯನ್ನು ಪಡೆಯಬೇಕೆಂದರೆ ಪಾವನರಾಗಿ. ದ್ವಾಪರದಿಂದ ಹಿಡಿದು ಪತಿತರಾಗುತ್ತಾ ಆಗುತ್ತಾ ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ ಆದ್ದರಿಂದಲೇ ಪತಿತ ಪಾವನ ಬಾ, ಬಂದು ನಮ್ಮನ್ನು ಪಾವನ ಮಾಡು ಎಂದು ಹಾಡುತ್ತೀರಿ ಅಂದಮೇಲೆ ತಂದೆಯು ಆದೇಶ ನೀಡುತ್ತಾರೆ – ಮಕ್ಕಳೇ, ಈಗ ಪತಿತರಾಗಬೇಡಿ, ಕಾಮ ಮಹಾ ಶತ್ರುವಿನ ಮೇಲೆ ವಿಜಯ ಪಡೆಯಿರಿ, ಇದರಿಂದಲೇ ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆದಿರಿ. ತಂದೆಯು ತಿಳಿಸುತ್ತಾರೆ – ಸ್ವರ್ಗದಲ್ಲಿ ಪವಿತ್ರವಾಗಿದ್ದಿರಿ. ಈಗ ರಾವಣನ ಮತದಂತೆ ನೀವು ಪತಿತರಾಗಿದ್ದೀರಿ ಆದ್ದರಿಂದಲೇ ದೇವತೆಗಳ ಮುಂದೆ ಹೋಗಿ ನೀವು ಸರ್ವಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ ನಾವೆಲ್ಲರೂ ವಿಕಾರಿಗಳಾಗಿದ್ದೇವೆ ಎಂದು ಮಹಿಮೆಯನ್ನು ಮಾಡುತ್ತೀರಿ. ನಿರ್ವಿಕಾರಿಗಳಾಗುವುದರಿಂದ ಸುಖವೇ ಸುಖ ಸಿಗುತ್ತದೆ. ಈಗ ನೀವು ಮಕ್ಕಳನ್ನು ನಿರ್ವಿಕಾರಿಗಳನ್ನಾಗಿ ಮಾಡಲು ನಾನು ಬಂದಿದ್ದೇನೆ. ಈಗ ನೀವು ಎಲ್ಲಾ ಇಚ್ಛೆಗಳನ್ನು ಬಿಡಬೇಕಾಗಿದೆ. ಭಲೆ ನಿಮ್ಮ ವ್ಯವಹಾರಗಳನ್ನೂ ಮಾಡಿಕೊಳ್ಳಿ, ಒಬ್ಬರಿಗೊಬ್ಬರು ಜ್ಞಾನಾಮೃತವನ್ನು ಕುಡಿಸಬೇಕು. ಅಮೃತವನ್ನು ಬಿಟ್ಟು ವಿಷವನ್ನು ಏಕೆ ಕುಡಿಯುವಿರಿ! ಎಂದು ಗಾಯನವೂ ಇದೆ. ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು. ನಾವು ನೆನಪಿನ ಯಾತ್ರೆಯಿಂದಲೇ ಸಂಪೂರ್ಣ ಸತೋಪ್ರಧಾನರಾಗುತ್ತೇವೆ, 63 ಜನ್ಮಗಳು ಪಾಪ ಮಾಡಿದ್ದೇವೆ, ಇದು ನೆನಪಿನಿಂದಲೇ ಸಮಾಪ್ತಿಯಾಗಬೇಕಾಗಿದೆ. ಈಗ ನಿರ್ವಿಕಾರಿಗಳಾಗಬೇಕಾಗಿದೆ. ಭಲೆ ಎಷ್ಟೊಂದು ಮಾಯೆಯ ಬಿರುಗಾಳಿಗಳು ಬರುತ್ತವೆ ಆದರೆ ಪತಿತರಾಗಬಾರದು. ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ನೀವೇ ಸತೋಪ್ರಧಾನ ಪೂಜ್ಯ ದೇವತೆಗಳಾಗಿದ್ದಿರಿ, ನಂತರ ನೀವೇ ಪೂಜ್ಯರಿಂದ ಪೂಜಾರಿಗಳಾಗುತ್ತೀರಿ. ನಾವು ನಿರೋಗಿಗಳಾಗಿದ್ದೆವು ನಂತರ ರೋಗಿಗಳಾದೆವು ಈಗ ಮತ್ತೆ ನಿರೋಗಿಗಳಾಗುತ್ತಿದ್ದೇವೆ. ನಾವು ನಿರೋಗಿಗಳಾಗಿದ್ದಾಗ ಧೀರ್ಘಾಯಸ್ಸು ಇತ್ತು, ಈಗಂತೂ ನೋಡಿ ಮನುಷ್ಯರು ಕುಳಿತು-ಕುಳಿತಲ್ಲಿಯೇ ಶರೀರ ಬಿಡುತ್ತಾರೆ ಆದ್ದರಿಂದ ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು, ಇವೆಲ್ಲವೂ ಕೊಳಕು ಆಸೆಗಳಾಗಿವೆ. ಮುಳ್ಳುಗಳಿಂದ ಹೂವಾಗುವುದು ಒಂದೇ ಫಸ್ಟ್ಕ್ಲಾಸ್ ಆಸೆಯಾಗಿದೆ – ನನ್ನನ್ನು ನೆನಪು ಮಾಡಿದರೆ ಪುಣ್ಯಾತ್ಮರು ಆಗಿ ಬಿಡುತ್ತೀರಿ ಎಂದು ತಂದೆಯು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರ ಮೇಲೆ ರಾಹುವಿನ ಗ್ರಹಣ ಹಿಡಿದಿದೆ. ಇಡೀ ಭಾರತದ ಮೇಲೆ ರಾಹುವಿನ ಗ್ರಹಣವಿದೆ ನಂತರ ಬೃಹಸ್ಪತಿಯ ದೆಶೆ ಬೇಕಾಗುವುದು. ಈಗ ನಮ್ಮ ಮೇಲೆ ಬೃಹಸ್ಪತಿಯ ದೆಶೆ ಕುಳಿತಿದೆ ಎಂದು ನೀವು ತಿಳಿದಿದ್ದೀರಿ. ಭಾರತವು ಸ್ವರ್ಗವಾಗಿತ್ತಲ್ಲವೆ. ಸತ್ಯಯುಗದಲ್ಲಿ ನಿಮ್ಮಮೇಲೆ ಬೃಹಸ್ಪತಿಯ ದೆಶೆಯಿರುತ್ತದೆ. ಈ ಸಮಯದಲ್ಲಿ ರಾಹುವಿನ ದೆಶೆಯಿದೆ, ಈಗ ಪುನಃ ಬೇಹದ್ದಿನ ಬೃಹಸ್ಪತಿ ದೆಶೆ ಸಿಗುತ್ತದೆ. ಬೃಹಸ್ಪತಿ ದೆಶೆಯಲ್ಲಿ 21 ಜನ್ಮಗಳಿರುತ್ತವೆ, ತ್ರೇತಾಯುಗದಲ್ಲಿ ಶುಕ್ರದೆಶೆಯಿರುತ್ತದೆ. ಯಾರೆಷ್ಟು ನೆನಪು ಮಾಡುತ್ತಾರೆಯೋ ಅಷ್ಟು ಬೃಹಸ್ಪತಿಯ ದೆಶೆಯಿರುತ್ತದೆ. ಈಗ ಎಲ್ಲರೂ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತಲೇ ಇರಿ ಆಗ ವಿಕರ್ಮ ವಿನಾಶವಾಗುತ್ತದೆ ಮತ್ತು ನೀವು ಹಾರಲು ಯೋಗ್ಯರಾಗುತ್ತೀರಿ. ಮಾಯೆಯು ನಿಮ್ಮ ರೆಕ್ಕೆಗಳನ್ನು ಕತ್ತರಿಸಿಬಿಟ್ಟಿದೆ. ಈಗ ನಿಮಗೆ ಈಶ್ವರೀಯ ಮತ ಸಿಕ್ಕಿದೆ ಯಾವುದರಿಂದ ಸದಾ ಸುಖಿಗಳಾಗುತ್ತೀರಿ. ಈಶ್ವರೀಯ ಜ್ಞಾನದಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ, ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೀರಿ. ಈಶ್ವರೀಯ ಮತವು ಸಿಗುತ್ತದೆ, ಒಬ್ಬ ತಂದೆಯನ್ನು ನೆನಪು ಮಾಡಿದರೆ ಅಂತ್ಯಮತಿ ಸೋ ಗತಿಯಾಗುವುದು. ನೆನಪಿನಿಂದಲೇ ವಿಕರ್ಮ ವಿನಾಶವಾಗುತ್ತದೆ, ಪವಿತ್ರರಾಗುತ್ತೀರಿ. ಪವಿತ್ರ ಆತ್ಮರೇ ಸ್ವರ್ಗಕ್ಕೆ ಯೋಗ್ಯರಾಗುತ್ತಾರೆ. ಅಲ್ಲಿ ನಿಮ್ಮ ಶರೀರ ನಿರೋಗಿಯಾಗಿರುತ್ತದೆ, ಧೀರ್ಘಾಯಸ್ಸೂ ಇರುತ್ತದೆ, ಧನವೂ ಸಮೃದ್ಧಿಯಾಗಿರುತ್ತದೆ. ಅಲ್ಲಿ ಎಂದೂ ಪುತ್ರರನ್ನು ದತ್ತು ಮಾಡಿಕೊಳ್ಳುವುದಿಲ್ಲ. ಆಯುಷ್ಯವಾನ್ಭವ, ಸಂಪತ್ತಿವಾನ್ಭವ ಎಂದು ಹೇಳುತ್ತಾರೆ, ಒಂದು ಗಂಡು ಮಗುವಿರುತ್ತದೆ. ಈ ಸಮಯದಲ್ಲಿ ತಂದೆಯು ಎಲ್ಲರನ್ನೂ ಧರ್ಮದ ಮಕ್ಕಳನ್ನಾಗಿ ಮಾಡುತ್ತಾರೆ. ಅಂದಮೇಲೆ ಸತ್ಯಯುಗದಲ್ಲಿ ಯಾವುದೇ ಧರ್ಮದ ಮಕ್ಕಳಿರುವುದಿಲ್ಲ. ಒಂದು ಹೆಣ್ಣು ಮಗು, ಒಂದು ಗಂಡು ಮಗು ಯೋಗಬಲದಿಂದ ಜನ್ಮ ಪಡೆಯುತ್ತಾರೆ. ಅಲ್ಲಿ ಮಕ್ಕಳು ಹೇಗೆ ಜನ್ಮ ಪಡೆಯುತ್ತಾರೆಂದು ಕೇಳುತ್ತಾರೆ, ಅಲ್ಲಿ ಯೋಗಬಲದಿಂದ ಜನ್ಮವಾಗುತ್ತದೆ. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಸತ್ಯಯುಗದಲ್ಲಿ ಎಲ್ಲರೂ ಯೋಗಿಗಳಿರುತ್ತಾರೆ, ಕೃಷ್ಣನನ್ನು ಯೋಗೇಶ್ವರನೆಂದು ಕರೆಯಲಾಗುತ್ತದೆ. ಕೃಷ್ಣನು ಯೋಗದಲ್ಲಿ ಕುಳಿತಿರುತ್ತಾನೆಂದಲ್ಲ, ಕೃಷ್ಣನು ಸಂಪೂರ್ಣ ಪವಿತ್ರ ಯೋಗಿಯಾಗಿದ್ದಾನೆ. ಈಶ್ವರನು ಎಲ್ಲರನ್ನೂ ಯೋಗೇಶ್ವರನನ್ನಾಗಿ ಮಾಡಿದ್ದರು ಆದ್ದರಿಂದಲೇ ಭವಿಷ್ಯದಲ್ಲಿ ಯೋಗಿಗಳಾಗಿರುತ್ತಾರೆ. ತಂದೆಯು ಯೋಗಿಗಳನ್ನಾಗಿ ಮಾಡಿದ್ದರು, ಯೋಗಿಗಳಿಗೆ ಧೀರ್ಘಾಯಸ್ಸು ಇರುತ್ತದೆ. ಭೋಗಿಗಳ ಆಯಸ್ಸು ಬಹಳ ಕಡಿಮೆಯಿರುತ್ತದೆ. ಈಶ್ವರನು ಮಕ್ಕಳನ್ನು ಪವಿತ್ರರನ್ನಾಗಿ ಮಾಡಿ ಯೋಗವನ್ನು ಕಲಿಸಿಕೊಟ್ಟು ದೇವತೆಗಳನ್ನಾಗಿ ಮಾಡಿದರು, ಇವರಿಗೆ ಯೋಗಿಗಳೆಂದು ಹೇಳಲಾಗುತ್ತದೆ. ಯೋಗಿ ಅಥವಾ ಋಷಿಗಳು ಪವಿತ್ರರಾಗಿರುತ್ತಾರೆ. ನೀವು ರಾಜಋಷಿಗಳಾಗಿದ್ದೀರಿ ಎಂದು ತಿಳಿಸಲಾಗಿದೆ. ರಾಜ್ಯಭಾಗ್ಯವನ್ನು ಪಡೆಯಲು ರಾಜಯೋಗವನ್ನು ಕಲಿಯುತ್ತಿದ್ದೀರಿ, ಈ ಸಮಯದಲ್ಲಿ ಮಕ್ಕಳಾಗಲಿ ಎಂಬ ಯಾವುದೇ ಉಲ್ಟಾ ಆಸೆಯನ್ನು ಇಟ್ಟುಕೊಳ್ಳಬಾರದು ಮತ್ತೆ ವಿಕಾರದಲ್ಲಿ ಹೋಗಬೇಕಾಗುತ್ತದೆ, ಕಾಮ ಕಟಾರಿಯನ್ನು ನಡೆಸಬೇಕಾಗುತ್ತದೆ, ದೇಹಾಭಿಮಾನಿಗಳು ಕಾಮ ಕಟಾರಿಯನ್ನು ನಡೆಸುತ್ತಾರೆ. ದೇಹಿ-ಅಭಿಮಾನಿಗಳು ಕಾಮ ಕಟಾರಿ ನಡೆಸುವುದಿಲ್ಲ, ಪವಿತ್ರರಾಗಬೇಕಾಗಿದೆ. ಈಗ ಕಾಮ ಕಟಾರಿಯನ್ನು ನಡೆಸಬಾರದು ಎಂದು ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ಪವಿತ್ರರಾಗುತ್ತೀರೆಂದರೆ ನಿಮ್ಮೆಲ್ಲರ ದುಃಖವು ದೂರವಾಗಿ ಬಿಡುವುದು, ಸ್ವರ್ಗದ ಮಾಲೀಕರಾಗುತ್ತೀರಿ. ತಂದೆಯು ಎಷ್ಟೊಂದು ಸುಖ ಕೊಡುತ್ತಾರೆ ಅಂದಮೇಲೆ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ.
ತಂದೆಯಂತೂ ಬಡವರ ಬಂಧುವಾಗಿದ್ದಾರೆ. ಸುಧಾಮನು ಎರಡು ಹಿಡಿ ಅವಲಕ್ಕಿಯನ್ನು ಕೊಟ್ಟು ಮಹಲನ್ನೇ ಪಡೆದನೆಂದು ಗಾಯನವಿದೆ. ತಂದೆಯು 21 ಜನ್ಮಗಳಿಗೆ ಆಸ್ತಿಯನ್ನು ಕೊಡುತ್ತಾರೆ, ಈಗ ಹಿಂತಿರುಗಿ ಹೋಗಬೇಕಾಗಿದೆ ಎಂದು ನೀವು ತಿಳಿದಿದ್ದೀರಿ. ಶಿವ ತಂದೆಯು ಮಾಡುತ್ತಿರುವ ಸ್ಥಾಪನಾ ಕಾರ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಬೇಕಾಗಿದೆ. ಮನೆಯಲ್ಲಿ ಯುನಿವರ್ಸಿಟಿ ಅಥವಾ ಆಸ್ಪತ್ರೆಯನ್ನು ತೆರೆಯಬೇಕು. ಸಹೋದರರೇ ಮತ್ತು ಸಹೋದರಿಯರೇ 21 ಜನ್ಮಗಳಿಗೆ ಸದಾ ಆರೋಗ್ಯ ಹಾಗೂ ಸಂಪತ್ತನ್ನು ಪಡೆಯಬೇಕೆಂದರೆ ಇಲ್ಲಿ ಬಂದು ತಿಳಿದುಕೊಳ್ಳಿ ಎಂದು ಬೋರ್ಡಿನ ಮೇಲೆ ಬರೆಯಬೇಕಾಗಿದೆ. ನಾವು ಒಂದು ಸೆಕೆಂಡಿನಲ್ಲಿ ಸದಾ ಆರೋಗ್ಯ, ಸಂಪತ್ತಿವಂತರು ಹೇಗೆ ಆಗುವುದು ಎಂಬ ಮಾರ್ಗವನ್ನು ತೋರಿಸುತ್ತೇವೆ. ನೀವು ಸರ್ಜನ್ ಆಗಿದ್ದೀರಲ್ಲವೆ. ಸರ್ಜನ್ಗಳಂತೂ ಅವಶ್ಯವಾಗಿ ಬೋರ್ಡ್ ಹಾಕುತ್ತಾರೆ ಇಲ್ಲದಿದ್ದರೆ ಮನುಷ್ಯರಿಗೆ ಹೇಗೆ ತಿಳಿಯುತ್ತದೆ! ನೀವೂ ಸಹ ಮನೆ ಮುಂದೆ ಬೋರ್ಡನ್ನು ಹಾಕಬೇಕಾಗಿದೆ. ಯಾರೇ ಬರುತ್ತಾರೆಂದರೆ ಇಬ್ಬರು ತಂದೆಯರ ರಹಸ್ಯವನ್ನು ತಿಳಿಸಬೇಕಾಗಿದೆ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯನ್ನು ಪಡೆಯುತ್ತಲೇ ಬಂದಿದ್ದೀರಿ. ನನ್ನನ್ನು ನೆನಪು ಮಾಡುತ್ತೀರೆಂದರೆ ಬೇಹದ್ದಿನ ಆಸ್ತಿಯು ಸಿಗುತ್ತದೆ ಎಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಪ್ರಾಜೆಕ್ಟರ್, ಪ್ರದರ್ಶನಿಗಳಲ್ಲಿ ಮೊದಲು ಇದನ್ನು ತಿಳಿಸಬೇಕಾಗಿದೆ. ಈ ಪುರುಷಾರ್ಥದಿಂದ ಈ ರೀತಿಯಾಗುತ್ತೀರಿ. ಈಗ ಸಂಗಮಯುಗವಿದೆ, ಕಲಿಯುಗದಿಂದ ಸತ್ಯಯುಗವಾಗಬೇಕಾಗಿದೆ. ನೀವು ಭಾರತವಾಸಿಗಳು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನರಾಗಿದ್ದೀರಿ. ನನ್ನನ್ನು ನೆನಪು ಮಾಡುತ್ತೀರೆಂದರೆ ಸ್ವರ್ಗದ ಮಾಲೀಕರಾಗುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಮಾತುಗಳಂತು ಎರಡು ಇವೆ – ಅಲ್ಫ್ನನ್ನು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯವು ನಿಮ್ಮದಾಗುತ್ತದೆ. ಈ ನೆನಪಿನಿಂದಲೇ ಖುಷಿಯಾಗಿರುತ್ತೀರಿ, ಈ ಕೊಳಕು ಪ್ರಪಂಚದಲ್ಲಿ ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು. ಇಲ್ಲಿ ನೀವು ಬದುಕಿದ್ದಂತೆಯೇ ಸಾಯುವ ರೀತಿಯಿರಲು ಪುರುಷಾರ್ಥ ಮಾಡುತ್ತೀರಿ, ಅವರಂತೂ ಸತ್ತ ಮೇಲೆ ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ನಾವು ಸ್ವರ್ಗವಾಸಿಗಳಾಗಲು ತಂದೆಯನ್ನು ನೆನಪು ಮಾಡುತ್ತೇವೆಂದು ನೀವು ಎಲ್ಲರಿಗೂ ಹೇಳುತ್ತೀರಿ. ಅವರಿಂದ ಬೇಹದ್ದಿನ ಸುಖ ಸಿಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ಎಂದೂ ಸಹ ನೀವು ಅಳುವುದಿಲ್ಲ, ದುಃಖಿಸುವುದೂ ಇಲ್ಲ. ಮಾಯೆಯ ಬಿರುಗಾಳಿಗಳು ಬರುತ್ತವೆ, ಅದರ ವಿಚಾರ ಮಾಡಬಾರದು. ಮಾಯೆಯ ಬಿರುಗಾಳಿಗಳಂತೂ ಬಂದೇ ಬರುತ್ತವೆ, ಇದು ಯುದ್ಧವಾಗಿದೆ. ಸಂಕಲ್ಪ, ವಿಕಲ್ಪಗಳು ಬರುತ್ತವೆ ಅಂದಮೇಲೆ ಸಮಯವು ವ್ಯರ್ಥವಾಗಿ ಹೋಗುತ್ತದೆ. ಬಿರುಗಾಳಿ ಬಂದರೆ ಸದಾ ಇರಲು ಸಾಧ್ಯವೇ! ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಿ ಆಸ್ತಿಯನ್ನು ಪಡೆಯಬೇಕಾಗಿದೆ. ಇದೇ ಧ್ವನಿಯು ಆಂತರ್ಯದಲ್ಲಿ ಮೊಳಗುತ್ತಿರಬೇಕಾಗಿದೆ. ತಂದೆಯಂತೂ ಯಾವುದೇ ಕಷ್ಟವನ್ನು ಕೊಡುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕು, ಬೇರೆಲ್ಲವನ್ನೂ ಮರೆತು ಬಿಡಿ. ಇವರೆಲ್ಲರೂ ಸತ್ತು ಹೋಗಿದ್ದಾರೆ. ಒಬ್ಬರಿಗೊಬ್ಬರು ಇದೇ ಮಾತನಾಡಬೇಕು. ಬಾಬಾ, ಈಗ ನಿಮ್ಮನ್ನೇ ನೆನಪು ಮಾಡುತ್ತೇನೆ, ನಿಮ್ಮಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತೇನೆ. ನಾವು ಮೂರು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಅವಶ್ಯವಾಗಿ ಎದ್ದು ನೆನಪು ಮಾಡುತ್ತೇವೆಂದು ಸಮಯವನ್ನು ಇಟ್ಟುಕೊಳ್ಳಬೇಕು. ಚಕ್ರವನ್ನೂ ನೆನಪು ಮಾಡಬೇಕು. ತಂದೆಯು ನಮಗೆ ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸಿದ್ದಾರೆ. ನಾವು ಈ ಮನುಷ್ಯ ಸೃಷ್ಟಿಯ ವೃಕ್ಷವನ್ನು ತಿಳಿದುಕೊಂಡಿದ್ದೇವೆ. ನಾವು 21 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಈಗ ನಾವು ಹೋಗಿ ಸ್ವರ್ಗದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತೇವೆ. ನಾವೆಲ್ಲಾ ಆತ್ಮಗಳಾಗಿದ್ದೇವೆ, ಆತ್ಮಕ್ಕೇ ರಾಜ್ಯಭಾಗ್ಯವು ಸಿಗುವುದು. ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿಗೆ ಅಧಿಕಾರಗಳಾಗುತ್ತೇವೆ. ಇದು ರಾಜಯೋಗವಾಗಿದೆ. ತಂದೆಯನ್ನು ನೆನಪು ಮಾಡುತ್ತೇವೆ. ಬೇಹದ್ದಿನ ತಂದೆಯ ಮೂಲಕ ಅನೇಕ ಬಾರಿ ವಿಶ್ವದ ಮಾಲೀಕರಾಗಿದ್ದೆವು, ಈಗ ನರಕವಾಸಿಗಳಾಗಿದ್ದೇವೆ, ಒಬ್ಬ ತಂದೆಯ ನೆನಪಿನಿಂದ ಈಗ ಪುನಃ ಸ್ವರ್ಗವಾಸಿಗಳಾಗುತ್ತೇವೆ, ಪಾಪ ಭಸ್ಮವಾಗುವುದು ಆದ್ದರಿಂದ ಈ ಯೋಗಕ್ಕೆ ಅಗ್ನಿಯೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರು ರಾಜಋಷಿಗಳಾಗಿದ್ದೀರಿ, ಋಷಿಗಳು ಸದಾ ಪವಿತ್ರರಾಗಿರುತ್ತಾರೆ. ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ರಾಜ್ಯಭಾಗ್ಯದ ಆಸ್ತಿಯನ್ನು ಪಡೆಯುತ್ತೀರಿ. ಈಗ ವಿಕಾರಗಳ ಮೇಲೆ ಇಚ್ಛೆಯನ್ನಿಡಲು ಸಾಧ್ಯವೇ! ಇದು ಕೊಳಕು ಇಚ್ಛೆಯಾಗಿದೆ. ಈಗ ಪಾರಲೌಕಿಕ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಆರೋಗ್ಯ ಚೆನ್ನಾಗಿಲ್ಲವೆಂದರೂ ಸಹ ತಂದೆಯನ್ನು ನೆನಪು ಮಾಡಬಹುದು ಏಕೆಂದರೆ ಮಕ್ಕಳೆಂದರೆ ತಂದೆಗೆ ಬಹಳ ಪ್ರೀತಿಯಿದೆ. ತಂದೆಯು ಅನೇಕ ಮಂದಿ ಮಕ್ಕಳಿಗೆ ಪತ್ರವನ್ನು ಬರೆಯಬೇಕಾಗುತ್ತದೆ, ಶಿವ ತಂದೆಯು ಬರೆಸುತ್ತಾರೆ. ನೀವೂ ಸಹ ಶಿವಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತೀರಿ. ನಾವೆಲ್ಲರೂ ಶಿವ ತಂದೆಯ ಮಕ್ಕಳು ಸಹೋದರರಾಗಿದ್ದೇವೆ, ಆತ್ಮೀಯ ತಂದೆಯು ಬಂದು ನಮ್ಮನ್ನು ಪಾವನ ಮಾಡುತ್ತಾರೆ ಆದ್ದರಿಂದ ಪತಿತ ಪಾವನ ಎಂದು ಕರೆಯಲಾಗುತ್ತದೆ, ಎಲ್ಲಾ ಆತ್ಮರನ್ನು ಪಾವನ ಮಾಡುತ್ತಾರೆ, ಯಾರನ್ನೂ ಬಿಡುವುದಿಲ್ಲ. ಪ್ರಕೃತಿಯೂ ಪಾವನವಾಗುತ್ತದೆ. ಸತ್ಯಯುಗದಲ್ಲಿ ಪ್ರಕೃತಿಯು ಪಾವನವಾಗಿರುತ್ತದೆ ಎಂದು ನೀವು ತಿಳಿದಿದ್ದೀರಿ, ಈಗ ಶರೀರವು ಪತಿತವಾಗಿದೆ ಆದ್ದರಿಂದ ಗಂಗೆಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ ಆದರೆ ಆತ್ಮವು ಪಾವನವಾಗುವುದಿಲ್ಲ. ಅದಂತೂ ಯೋಗಾಗ್ನಿಯಿಂದಲೇ ಪವಿತ್ರವಾಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಈ ಕಲಿಯುಗ ಪ್ರಪಂಚದಲ್ಲಿ ಯಾವುದೇ ಉಲ್ಟಾ ಆಸೆಯನ್ನು ಇಟ್ಟುಕೊಳ್ಳಬಾರದು, ಸಂಪೂರ್ಣ ಸತೋಪ್ರಧಾನರಾಗಲು ಈಶ್ವರೀಯ ಮತದಂತೆ ನಡೆಯಬೇಕಾಗಿದೆ.
2. ಪಾವನರಾಗಿ ಹಿಂತಿರುಗಿ ಹೋಗಬೇಕೆಂಬ ಆಸೆಯನ್ನೇ ಇಟ್ಟುಕೊಳ್ಳಬೇಕಾಗಿದೆ. ಅಂತ್ಯಮತಿ ಸೋ ಗತಿ. ಮಾಯೆಯ ಬಿರುಗಾಳಿಗಳೊಂದಿಗೆ ಸಮಯವನ್ನು ವ್ಯರ್ಥ ಮಾಡಬಾರದು.
ವರದಾನ:-
ಹೇಗೆ ಶರೀರ ಮತ್ತು ಆತ್ಮದ ಪಾತ್ರವು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಬೇರ್ಪಡಲು ಆಗುವುದಿಲ್ಲ. ಅದೇರೀತಿ ತಂದೆಯ ನೆನಪು ಬುದ್ಧಿಯಿಂದ ಬೇರ್ಪಡಬಾರದು, ಸದಾ ತಂದೆಯ ಜೊತೆಯಿರಿ ಮತ್ತ್ಯಾವುದೇ ಸ್ಮೃತಿಯು ತನ್ನಕಡೆಗೆ ಸೆಳೆಯಬಾರದು – ಇಂತಹವರಿಗೇ ಸಹಜ ಮತ್ತು ಸ್ವತಹ ಯೋಗಿಗಳೆಂದು ಹೇಳಲಾಗುವುದು. ಇಂತಹ ಯೋಗಿಯು ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪ, ಪ್ರತೀ ವಚನ, ಪ್ರತೀ ಕರ್ಮದಲ್ಲಿಯೂ ಸಹಯೋಗಿ ಆಗಿರುತ್ತಾನೆ. ಸಹಯೋಗಿ ಎಂದರೆ ಯಾರ ಒಂದು ಸಂಕಲ್ಪವೂ ಸಹ ಸಹಯೋಗವಿರದೇ ಇರುವುದಿಲ್ಲ. ಇಂತಹ ಯೋಗಿ ಮತ್ತು ಸಹಯೋಗಿಗಳು ಶಕ್ತಿಶಾಲಿ ಆಗಿ ಬಿಡುತ್ತಾರೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!