14 July 2021 KANNADA Murli Today | Brahma Kumaris

Read and Listen today’s Gyan Murli in Kannada

July 13, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಇಡೀ ಪ್ರಪಂಚಕ್ಕೆ ಶಾಂತಿಯನ್ನು ಕೊಡುವುದು ಒಬ್ಬ ತಂದೆಯದೇ ಕರ್ತವ್ಯವಾಗಿದೆ, ಆದ್ದರಿಂದ ಹೇ ಶಾಂತಿದೇವ ಎಂದು ಹೇಳುತ್ತಾರೆ ಅಂದಮೇಲೆ ತಂದೆಗೆ ಬಹುಮಾನವೂ ಸಿಗಬೇಕಾಗಿದೆ”

ಪ್ರಶ್ನೆ:: -

ಯಾವ ಮಕ್ಕಳು ತಂದೆಯನ್ನು ಸಂಪೂರ್ಣ ಫಾಲೋ ಮಾಡುತ್ತಾರೆ?

ಉತ್ತರ:-

ಯಾರು ತಂದೆಯ ಸಮಾನ ಪಾವನರಾಗುತ್ತಾರೆಯೋ ಅವರೇ ಸಂಪೂರ್ಣ ಫಾಲೋ ಮಾಡುತ್ತಾರೆ. 2. ಯಾರು ಪಕ್ಕಾ ಪ್ರಿಯತಮೆ ಆಗುವರೋ ಅವರೇ ಪ್ರಿಯತಮನಾದ ನನ್ನನ್ನು ಫಾಲೋ ಮಾಡಲು ಸಾಧ್ಯ. ಇಂತಹ ಪ್ರಿಯತಮೆಯರನ್ನೇ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಆದ್ದರಿಂದಲೇ ಶಾಸ್ತ್ರಗಳಲ್ಲಿ ತೋರಿಸುತ್ತಾರೆ – ಗೋವಿನ ಬಾಲವನ್ನು ಹಿಡಿದುಕೊಂಡರೆ ಪಾರಾಗಿ ಬಿಡುತ್ತೇವೆ ಎಂದು. ಈಗ ಇಲ್ಲಿ ಗೋವಿನ ಅಥವಾ ಬಾಲವನ್ನು ಹಿಡಿದುಕೊಳ್ಳುವ ಯಾವುದೇ ಮಾತಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವು ಪ್ರೀತಿಯ ಸಾಗರನಾಗಿದ್ದೀರಿ………..

ಓಂ ಶಾಂತಿ. ಬಾಪ್ದಾದಾ ಇಬ್ಬರೂ ಇದ್ದಾರಲ್ಲವೆ. ಈಗ ಇದಂತೂ ಮಕ್ಕಳಿಗೆ ತಿಳಿದಿದೆ – ಆತ್ಮಗಳ ತಂದೆಯು ಶಿವ ತಂದೆಯಾಗಿದ್ದಾರೆ. ನಾನು ಪತಿತ-ಪಾವನನಾಗಿದ್ದೇನೆ, ನಿರಾಕಾರನಾಗಿದ್ದೇನೆ, ನೀವೂ ಸಹ ನಿರಾಕಾರಿಯಾಗಿದ್ದೀರಿ, ಶಾಂತ ಸ್ವರೂಪರಾಗಿದ್ದೀರಿ ಎಂಬುದನ್ನೂ ತಿಳಿದುಕೊಂಡಿದ್ದೀರಿ. ನಿರಾಕಾರ ತಂದೆಯೂ ಸಹ ಶಾಂತ ಸ್ವರೂಪನಾಗಿದ್ದಾರೆ, ಆತ್ಮವೂ ಶಾಂತ ಸ್ವರೂಪವಾಗಿದೆ. ಆತ್ಮದ ಸ್ವಧರ್ಮವೇ ಶಾಂತಿಯಾಗಿದೆ, ನಿಮ್ಮ ನಿವಾಸ ಸ್ಥಾನವು ಶಾಂತಿಧಾಮವಾಗಿದೆ. ಯಜ್ಞ ಇತ್ಯಾದಿಗಳನ್ನು ರಚಿಸುವಾಗ ಶಾಂತಿದೇವ ಎಂದು ಹೇಳುತ್ತಾರೆ ಏಕೆಂದರೆ ಶಾಂತಿಯ ಸಾಗರನಂತೂ ಆ ಪರಮಾತ್ಮನಾಗಿದ್ದಾರೆ. ಇಡೀ ಪ್ರಪಂಚಕ್ಕೆ ಶಾಂತಿಯನ್ನು ಕೊಡುವವರು ಆ ತಂದೆಯಾಗಿದ್ದಾರೆ, ಅನೇಕರಿಗೆ ಆ ಶಾಂತಿಯ ಹಿಂದೆ ಬಹುಮಾನ ಸಿಗುತ್ತದೆ. ಯಾರಿಗಾದರೂ ಬಹುಮಾನ ಸಿಕ್ಕಿದಾಗ ಇವರು ಶಾಂತಿ ಸ್ಥಾಪನೆ ಮಾಡಲು ನಿಮಿತ್ತರಾಗಿದ್ದಾರೆ ಎಂದು ಹೇಳುತ್ತಾರೆ. ಇದರಲ್ಲಿ ದೊಡ್ಡ-ದೊಡ್ಡವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಈಗಂತೂ ಇಡೀ ಪ್ರಪಂಚದಲ್ಲಿ ಶಾಂತಿ ಬೇಕಾಗಿದೆ, ಇಲ್ಲದಿದ್ದರೆ ಅಶಾಂತಿಯಲ್ಲಿ ಇರುವವರು ಅನ್ಯರನ್ನೂ ಅಶಾಂತಗೊಳಿಸುತ್ತಾರೆ. ಇದು ರಾವಣ ರಾಜ್ಯವಾಗಿದೆ, ರಾವಣನು ಶತ್ರುವಲ್ಲವೆ. ರಾಮನಿಗೆ ಶತ್ರುವೆಂದು ಹೇಳುವುದಿಲ್ಲ. ರಾಮನ ಪ್ರತಿಮೆಯನ್ನೆಂದೂ ಸುಡುವುದಿಲ್ಲ. ತ್ರೇತಾಯುಗದ ರಾಮನ ಪ್ರತಿಮೆಯಾಗಲಿ, ಪರಮಪಿತ ಪರಮಾತ್ಮನದಾಗಲಿ ಸುಡುವುದಿಲ್ಲ. ರಾಮ ರಾಜ್ಯವನ್ನು ಎಲ್ಲರೂ ಬಯಸುತ್ತಾರೆ. ಆದರೆ ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಹೊಸ ಪ್ರಪಂಚವಾಗಲಿ, ಹೊಸ ದೆಹಲಿಯಲ್ಲಿ ರಾಮ ರಾಜ್ಯವಿರಲಿ ಎಂದು ಹೇಳುತ್ತಾರೆ. ನವದೆಹಲಿಯೆಂದು ಹೇಳುತ್ತಾರೆ. ಬಹಳ ಹೆಸರುಗಳನ್ನು ಇಡುತ್ತಾರೆ. ದೆಹಲಿಯು ಎಲ್ಲರ ರಾಜಧಾನಿ ಆಗಿರುತ್ತದೆ. ದೆಹಲಿಯೇ ಪರಿಸ್ಥಾನವಾಗಿತ್ತು, ರಾಧೆ-ಕೃಷ್ಣರನ್ನೂ ಸಹ ಅಲ್ಲಿಯೇ ತೋರಿಸುತ್ತಾರೆ. ಇವರಿಬ್ಬರೂ ಮುಖ್ಯ ರಾಜಕುಮಾರ-ಕುಮಾರಿಯರಾಗಿದ್ದಾರೆ. ಕೇವಲ ಇಬ್ಬರೇ ಅಲ್ಲ, ಅವಶ್ಯವಾಗಿ ಅನ್ಯರೂ ಇರುತ್ತಾರೆ. 8 ರಾಜ್ಯಭಾರಗಳೆಂದು ಗಾಯನವಿದೆ, ಬುದ್ಧಿಗೆ ಕೆಲಸ ಕೊಡಬೇಕಾಗಿದೆ. ಸತ್ಯಯುಗದಲ್ಲಿ ಅವಶ್ಯವಾಗಿ ಅನ್ಯ ರಾಜ್ಯಗಳೂ ಇರುವುದು. ಇಲ್ಲಿಯೂ ನೋಡಿ, ಎಷ್ಟು ರಾಜ್ಯಗಳಿದೆ! ವೃದ್ಧಿಯಾಗುತ್ತಾ ಆಗುತ್ತಾ ಬಹಳಷ್ಟು ಆಗಿ ಬಿಡುತ್ತದೆ, ಇಂತಿಂತಹ ಪ್ರಾಂತ್ಯದ ಮಹಾರಾಜ ಎಂದು ಹೇಳುತ್ತಾರೆ. ಚಿಕ್ಕ-ಚಿಕ್ಕ ಪ್ರಾಂತ್ಯಗಳು ಬಹಳಷ್ಟು ಇವೆಯಲ್ಲವೆ. ಸತ್ಯಯುಗದಲ್ಲಿ ಇಷ್ಟೊಂದು ಇರಲಿಲ್ಲ. ಲಕ್ಷ್ಮೀ-ನಾರಾಯಣರ ಹೆಸರೇ ಪ್ರಸಿದ್ಧವಾಗಿದೆ. 2500 ವರ್ಷಗಳು ಅವರ ರಾಜ್ಯವು ನಡೆದಿದೆ. ಲಕ್ಷಾಂತರ ವರ್ಷಗಳಾಯಿತೆಂದು ಮನುಷ್ಯರು ಹೇಳುತ್ತಾರೆ, ಇದು ವಿಚಾರ ಮಾಡುವ ಮಾತುಗಳಾಗಿವೆ. ಆತ್ಮರಿಗಾಗಿ ಇದು ಭೋಜನವಾಗಿದೆ. ತಂದೆಯು ನಿಮ್ಮ ಬುದ್ಧಿಗೆ, ಆತ್ಮಕ್ಕೆ ಈ ಆತ್ಮಿಕ ಭೋಜನವನ್ನು ಕೊಡುತ್ತಾರೆ, ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ. ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೆಂದು ಋಷಿ-ಮುನಿ ಮೊದಲಾದವರೆಲ್ಲರೂ ಹೇಳುತ್ತಿದ್ದರು. ಈಗ ನೀವು ಮಕ್ಕಳು ಆ ರೀತಿ ಹೇಳುವುದಿಲ್ಲ. ನೀವಂತೂ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ನೀವು ತಮ್ಮ 84 ಜನ್ಮಗಳ ಚಕ್ರವನ್ನೂ ಅರಿತುಕೊಂಡಿದ್ದೀರಿ. ಆದಿಯಲ್ಲಿ ನೀವು ದೇವಿ-ದೇವತೆಗಳಾಗಿದ್ದಿರಿ ನಂತರ ಮಧ್ಯದಲ್ಲಿ ರಾವಣನ ಪ್ರವೇಶತೆಯಾಗುವ ಕಾರಣ ವಿಕಾರಿಗಳಾಗಿ ಬಿಟ್ಟಿದ್ದೀರಿ. ಈಗ ಅಂತ್ಯವಾಗಿದೆ. ನೀವು ತಿಳಿದುಕೊಂಡಿದ್ದೀರಿ – ಈಗ ಹಳೆಯ ಪ್ರಪಂಚದ ವಿನಾಶವಾಗಿ ನಂತರ ಆದಿಯಾಗುವುದು. ಆದಿಯಲ್ಲಿ ರಾಮ ರಾಜ್ಯವಿರುವುದು, ಮಧ್ಯದಿಂದ ರಾವಣ ರಾಜ್ಯವು ಆರಂಭವಾಗುತ್ತದೆ. ಈಗ ರಾವಣ ರಾಜ್ಯವು ಮುಕ್ತಾಯವಾಗಿ ಪುನಃ ರಾಮ ರಾಜ್ಯವು ಆರಂಭವಾಗುವುದು, ನರನಿಂದ ನಾರಾಯಣರಾಗಬೇಕಲ್ಲವೆ. ಇದು ಸತ್ಯ ನಾರಾಯಣನ ಕಥೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ – ಸರ್ವಶಾಸ್ತ್ರಮಯಿ ಶಿರೋಮಣಿ ಶ್ರೀಮತ್ಭಗವದ್ಗೀತೆ ಆಗಿದೆ. ಶ್ರೇಷ್ಠರಾಗುವುದಕ್ಕಾಗಿ ಶ್ರೀಮತ ಸಿಗುತ್ತದೆ. ಶ್ರೀ ಎಂದು ಶ್ರೇಷ್ಠರಿಗೇ ಹೇಳುತ್ತಾರೆ. ಒಂದು ಗೀತಾ ಶಾಸ್ತ್ರವನ್ನೇ ದೇವಿ-ದೇವತಾ ಧರ್ಮದ ಶಾಸ್ತ್ರವೆಂದು ಹೇಳಲಾಗುತ್ತದೆ. ಇದರಿಂದ ಸಂಗಮದಲ್ಲಿ ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಪಾವನರನ್ನಾಗಿ ಮಾಡಲು ಸತ್ಯಯುಗದಲ್ಲಿ ಯಾರೂ ಪತಿತರೇ ಇರುವುದಿಲ್ಲ. ಈಗ ನಿಮಗೆ ತಂದೆಯು ತಿಳಿಸುತ್ತಾರೆ – ಗೀತೆಗೆ ಪತಿತ-ಪಾವನಿ ಎಂದು ಹೇಳಲು ಸಾಧ್ಯವಿಲ್ಲ. ಗೀತೆಯ ಮೂಲಕ ಪಾವನರಾಗುವುದಿಲ್ಲ. ಗೀತೆಯ ಭಗವಂತನಿಗೆ ಪತಿತ-ಪಾವನನೆಂದು ಹೇಳುತ್ತಾರೆ, ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಗೀತೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಗೀತೆಯ ಸಮಯದಲ್ಲಿಯೇ ಮಹಾಭಾರಿ ಮಹಾಭಾರತ ಯುದ್ಧವೂ ಆಗಿತ್ತು, ಇದರಿಂದ ಅನೇಕ ಧರ್ಮಗಳ ವಿನಾಶ ಮತ್ತು ಒಂದು ಧರ್ಮದ ಸ್ಥಾಪನೆಯಾಯಿತು. ಗೀತೆಗೆ ದೇವಿ-ದೇವತಾ ಧರ್ಮದ ಶಾಸ್ತ್ರವೆಂದು ಹೇಳುತ್ತಾರೆ, ಬ್ರಾಹ್ಮಣರ ಶಾಸ್ತ್ರವೆಂದು ಹೇಳುವುದಿಲ್ಲ, ಬ್ರಾಹ್ಮಣರ ಹೆಸರು ಗೀತೆಯಲ್ಲಿ ಇಲ್ಲವೇ ಇಲ್ಲ. ಪರಮಪಿತ ಪರಮಾತ್ಮನೇ ಬಂದು ಬ್ರಹ್ಮಾರವರ ಮೂಲಕ ಇವೆಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ನೀವು ತಿಳಿದುಕೊಳ್ಳುತ್ತೀರಿ – ಸತ್ಯಯುಗದಲ್ಲಿ ಬ್ರಾಹ್ಮಣರಿರುವುದಿಲ್ಲ, ಅಲ್ಲಿ ಲಕ್ಷ್ಮೀ-ನಾರಾಯಣರು ದೇವತೆಗಳಿರುತ್ತಾರೆ. ಬ್ರಹ್ಮನ ನಂತರ ವಿಷ್ಣು. ಚಿತ್ರಗಳಲ್ಲಿಯೂ ಸಹ ಬ್ರಹ್ಮನ ಮೂಲಕ ವಿಷ್ಣುಪುರಿಯ ಸ್ಥಾಪನೆಯೆಂದು ತೋರಿಸಿದ್ದಾರೆ. ಬ್ರಹ್ಮಾ ಮತ್ತು ವಿಷ್ಣು ಒಟ್ಟಿಗೆ ಇರುವುದಿಲ್ಲ, ಬ್ರಹ್ಮನ ಮೂಲಕ ದೇವತಾ ಧರ್ಮದ ಸ್ಥಾಪನೆಯಾಗುವುದು. ಇವು ವಿವರವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನೀವು ಮಕ್ಕಳು ಶಿವ ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಹಕ್ಕುದಾರರಲ್ಲವೆ. ನಾಲ್ಕು ಮುಖ್ಯ ಧರ್ಮ ಶಾಸ್ತ್ರಗಳಿವೆ, ಶ್ರೀಮತ್ಭಗವದ್ಗೀತೆಯು ನಂಬರ್ವನ್ ಶಾಸ್ತ್ರವಾಗಿದೆ, ಇದರಿಂದ ನಂಬರ್ವನ್ ಧರ್ಮವು ಸ್ಥಾಪನೆ ಆಗುತ್ತದೆ. ನಂತರ ಇಸ್ಲಾಮಿ, ಬೌದ್ಧರು ಬರುತ್ತಾರೆ. ಒಂದು ಗೀತೆಯಲ್ಲಿಯೇ ಶ್ರೀಮದ್ಭಗವದ್ಗೀತೆ ಎಂದು ಬರೆಯಲ್ಪಟ್ಟಿದೆ ಮತ್ತ್ಯಾವುದೇ ಶಾಸ್ತ್ರದಲ್ಲಿ ಶ್ರೀಮತವಿಲ್ಲ. ಇಸ್ಲಾಮಿಗಳ ಶ್ರೀಮತ, ಬೌದ್ಧರ ಶ್ರೀಮತವೆಂದು ಗಾಯನ ಆಗುವುದಿಲ್ಲ. ಶ್ರೀಮತ್ಭಗವದ್ಗೀತೆಯು ಒಂದೇ ಆಗಿದೆ. ಅದರಿಂದ ಯಾವ ಧರ್ಮದ ಸ್ಥಾಪನೆ ಮಾಡಿದರು? ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಯಿತು ಮತ್ತು ಅಂತ್ಯದಲ್ಲಿಯೇ ಸ್ಥಾಪನೆಯಾಗುತ್ತದೆ, ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ತಂದೆಯು ನಮಗೆ ಶಿಕ್ಷಕನ ರೂಪದಲ್ಲಿ ಓದಿಸುತ್ತಾರೆ – ಇದು ಬುದ್ಧಿಯಲ್ಲಿ ಇರಬೇಕಾಗಿದೆ, ಇವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ತಂದೆಯು ವಿದ್ಯೆಯಿಂದ ಸರ್ವರ ಸದ್ಗತಿ ಮಾಡುತ್ತಾರೆ ಆದ್ದರಿಂದ ಸದ್ಗುರುವೂ ಆದರು. ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ, ಆದರೆ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಕೃಷ್ಣನಂತೂ ಜ್ಞಾನ ಸಾಗರನಲ್ಲ, ಕೃಷ್ಣನನ್ನೂ ಸಹ ಜ್ಞಾನ ಸಾಗರ ತಂದೆಯೇ ಈ ರೀತಿ ಮಾಡಿದ್ದಾರೆ ಅಂದಮೇಲೆ ತಂದೆಯು ಶಿಕ್ಷಕನೂ ಆಗಿದ್ದಾರೆ. ಇಲ್ಲಿ ನೀವು ಹೊಸ ಮಾತುಗಳನ್ನು ಕೇಳುತ್ತೀರಿ, ಶಾಸ್ತ್ರ ಇತ್ಯಾದಿಗಳನ್ನು ಬಹಳ ಕೇಳುತ್ತಾ, ಓದುತ್ತಾ ಬಂದಿದ್ದೀರಿ. ನೀವೀಗ ತಂದೆಯ ಮೂಲಕ ಡೈರೆಕ್ಟ್ ಕೇಳುತ್ತೀರಿ. ಮೊದಲು ಶರೀರಧಾರಿ ಮನುಷ್ಯರ ಮೂಲಕ ಕೇಳುತ್ತಿದ್ದಿರಿ, ನೀವೀಗ ತಿಳಿದುಕೊಂಡಿದ್ದೀರಿ – ನಾವಾತ್ಮರು ಮೂಲತಃ ಅಶರೀರಿಯಾಗಿದ್ದೆವು. ನಂತರ ಈ ಶರೀರ ಧಾರಣೆ ಮಾಡಿದ್ದೇವೆ. ತಂದೆಯೂ ಅಶರೀರಿಯಾಗಿದ್ದಾರೆ, ಶಿವ ಲಿಂಗವನ್ನು ಮಾಡುತ್ತಾರಲ್ಲವೆ. ಆತ್ಮವು ಶರೀರದ ಮೂಲಕ ಅವರನ್ನು ಪೂಜಿಸುತ್ತದೆ. ಹೇ ಪರಮಪಿತ ಪರಮಾತ್ಮ ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಲಿಂಗದ ಪೂಜೆ ಮಾಡುತ್ತಾರೆ ಆದರೆ ಇವರು ಪತಿತ-ಪಾವನ ತಂದೆಯಾಗಿದ್ದಾರೆ, ಇವರನ್ನೇ ನಾವು ಕರೆಯುತ್ತೇವೆ ಎಂಬುದನ್ನು ತಿಳಿದುಕೊಂಡಿಲ್ಲ. ಶಿವ ಭಗವಂತನಾಗಿದ್ದಾರೆ, ಈಶ್ವರನಾಗಿದ್ದಾರೆ, ಕೇವಲ ಇದೇ ರೀತಿ ನೆನಪು ಮಾಡುತ್ತಾರೆ, ಅವರಿಗೆ ತಂದೆಯೆಂದು ಹೇಳಿದಾಗಲೇ ಆ ತಂದೆಯಿಂದ ಆಸ್ತಿಯು ಸಿಗಬೇಕು ಎಂಬುದು ಬುದ್ಧಿಯಲ್ಲಿ ಬರುವುದು. ನಮಗೆ ಆಸ್ತಿಯು ಸಿಕ್ಕಿದೆ ಆದ್ದರಿಂದಲೇ ನಾವು ಪೂಜಿಸುತ್ತೇವೆ, ಭಾರತವಾಸಿಗಳಿಗೆ ಅವಶ್ಯವಾಗಿ ಆಸ್ತಿಯು ಸಿಕ್ಕಿದೆ ಆದರೆ ಯಾವಾಗ ಸಿಕ್ಕಿತು ಎಂಬುದನ್ನು ಮರೆತು ಹೋಗಿದ್ದಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಾವು ತಂದೆಯ ಬಳಿ ಬಂದಿದ್ದೇವೆ, ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದು ತಿಳಿಸುತ್ತಾರೆಂದು ಮಕ್ಕಳು ಹೇಳುತ್ತಾರೆ. ತ್ರಿಮೂರ್ತಿಯ ಹೆಸರು ಪ್ರಸಿದ್ಧವಾಗಿದೆ. ತ್ರಿಮೂರ್ತಿ ಮಾರ್ಗ ಎಂಬ ಹೆಸರನ್ನೂ ಇಟ್ಟಿದ್ದಾರೆ. ತಂದೆಯ ಮಹಿಮೆಯೂ ಬಹಳಷ್ಟಿದೆ. ಗೀತೆಯಲ್ಲಿಯೂ ಕೇಳಿದಿರಿ – ಅವರು ಪ್ರೀತಿಯ ಸಾಗರನಾಗಿದ್ದಾರೆ….. ಸರ್ವರ ಸದ್ಗತಿದಾತನಾಗಿದ್ದಾರೆ. ಸರ್ವರಿಗೆ ಸುಖ-ಶಾಂತಿಯನ್ನು ಕೊಡುವವರು, ಸರ್ವರ ದುಃಖಹರ್ತ-ಸುಖಕರ್ತನಾಗಿದ್ದಾರೆ. ಬಹಳ ಪ್ರಿಯರಲ್ಲವೆ. ಅವರಂತಹ ಪ್ರಿಯವಾದವರು ಮತ್ತ್ಯಾರೂ ಇಲ್ಲ. ಯಾವ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡಿದರೋ ಅವರು ಅವಶ್ಯವಾಗಿ ಪ್ರಿಯರಾಗಿರುವರಲ್ಲವೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ, ತಂದೆಯು ತಿಳಿಸುತ್ತಾರೆ – ಮಕ್ಕಳೇ, ನನ್ನಿಂದ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆಯಲ್ಲವೆ. ನೀವಾತ್ಮರು ಸಹೋದರ-ಸಹೋದರರಾಗಿದ್ದೀರಿ, ಈಗ ತಂದೆಯ ಮೂಲಕ ಕೇಳುತ್ತಿದ್ದೀರಿ – ಬಾಬಾ, ಬಂದು ನಮ್ಮನ್ನು ಪಾವನ ಮಾಡಿ ಎಂದು ಎಲ್ಲಾ ಆತ್ಮರು ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆಂದು ಈಗ ಆತ್ಮವು ಹೇಳುತ್ತದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ 5000 ವರ್ಷಗಳ ಮೊದಲು ನಿಮ್ಮನ್ನು ಪಾವನರನ್ನಾಗಿ ಮಾಡಲು ಬಂದಿದ್ದೆನು, ಈಗ ತಂದೆಯಾದ ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಥವಾ ಪತಿತ-ಪಾವನ ಸೀತಾರಾಂ ಎಂದು ಕೂಗುತ್ತಿರುತ್ತಾರೆ ಅಂದಮೇಲೆ ಸ್ವಯಂ ಪತಿತರಾದರಲ್ಲವೆ. ಇದು ನರಕವಾಗಿದೆ, ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ. ಗರುಡ ಪುರಾಣದಲ್ಲಿ ಭಯಂಕರ ಮಾತುಗಳನ್ನು ಬರೆದು ಬಿಟ್ಟಿದ್ದಾರೆ – ಇದನ್ನು ಮಾಡಿದರೆ ಈ ರೀತಿಯಾಗುವಿರಿ. ಇದಾಗುವುದು…. ಎಂದು. ಗೋವಿನ ಬಾಲವನ್ನು ಹಿಡಿದುಕೊಂಡರೆ ಸ್ವರ್ಗದಲ್ಲಿ ಹೊರಟು ಹೋಗುವರೆಂದು ತಿಳಿದುಕೊಳ್ಳುತ್ತಾರೆ. ಹೀಗೆ ಕೆಲವೊಂದು ಮಾತುಗಳು ಬರೆಯಲ್ಪಟ್ಟಿದೆ. ವಾಸ್ತವದಲ್ಲಿ ಪ್ರಾಣಿಗಳ ಮಾತಿಲ್ಲ. ನೀವು ಮಾತೆಯರು ಗೋವುಗಳಾಗಿದ್ದೀರಲ್ಲವೆ. ಎಲ್ಲಿಯವರೆಗೆ ನಿಮ್ಮ ಬಾಲ ಅಥವಾ ನಿಮ್ಮ ಬೆನ್ನು ಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಯಾರಿಗೂ ಮಾರ್ಗವೂ ಸಿಗಲು ಸಾಧ್ಯವಿಲ್ಲ. ಬಾಲವಂತೂ ಇಲ್ಲ, ನಿಮ್ಮ ಬಾಲ ಹಿಡಿದುಕೊಂಡು ಪಾರಾಗುತ್ತೇವೆ ಎಂದು ಹೇಳುತ್ತಾರೆ. ಈಗ ಇಲ್ಲಿ ಬಾಲವನ್ನಂತೂ ಹಿಡಿಯಬೇಕಾಗಿಲ್ಲ ಆದರೆ ಫಾಲೋ ಮಾಡಬೇಕಾಗಿದೆ. ಸನ್ಯಾಸಿಗಳ ಅನುಯಾಯಿಗಳಂತೂ ಅನೇಕರಿದ್ದಾರೆ ಆದರೆ ಫಾಲೋ ಮಾಡುವುದು ಅಂದರೆ ಪವಿತ್ರರಾಗುವುದು. ನೀವು ಸತ್ಯ-ಸತ್ಯವಾದ ಅನುಯಾಯಿಗಳಾಗಿದ್ದೀರಿ. ಶಿವ ತಂದೆಯು ತಿಳಿಸುತ್ತಾರೆ – ನಾನು ನಿಮ್ಮೆಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದೇನೆ, ನೀವು ನನ್ನನ್ನು ನೆನಪು ಮಾಡಿರಿ, ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಪಾವನರಾಗದೇ ಫಾಲೋ ಮಾಡಲು ಸಾಧ್ಯವಿಲ್ಲ. ಶಿವ ತಂದೆಯನ್ನು ಪೂರ್ಣ ಫಾಲೋ ಮಾಡಬೇಕಾಗಿದೆ. ಫಾಲೋ ಮಾಡುವುದಕ್ಕಾಗಿಯೇ ನೀವಿಲ್ಲಿ ಕುಳಿತಿದ್ದೀರಿ. ಭಕ್ತಿಮಾರ್ಗದಲ್ಲಿಯೂ ನೀವು ನನ್ನನ್ನು ನೆನಪು ಮಾಡುತ್ತಾ ಬಂದಿದ್ದೀರಿ. ನಿಮಗೆ ತಿಳಿದಿದೆ – ಪರಮಾತ್ಮ ಪ್ರಿಯತಮನಾಗಿದ್ದಾರೆ, ಆತ್ಮರು ಪ್ರಿಯತಮೆಯರಾಗಿದ್ದೀರಿ. ಆತ್ಮರು ಅವರನ್ನು ನೆನಪು ಮಾಡುತ್ತಾರೆ ಮತ್ತು ಅವರು ಕರೆದುಕೊಂಡು ಹೋಗಲು ಬಂದಿದ್ದಾರೆ. ನನ್ನನು ಫಾಲೋ ಮಾಡಿದರೆ ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೇನೆ. ಹೇಗೆ ಫಾಲೋ ಮಾಡುವುದು ಎಂಬುದನ್ನೂ ಸಹ ತಿಳಿಸುತ್ತಾರೆ. ನಾನು ಪಾವನನಾಗಿದ್ದೇನೆ, ನೀವು ಪತಿತರಾಗಿದ್ದೀರಿ ಆದ್ದರಿಂದ ಅವಶ್ಯವಾಗಿ ಪಾವನರಾಗಬೇಕಾಗಿದೆ. ಫಾಲೋ ಮಾಡಬೇಕಾಗಿದೆ. ವಿಕಾರಿಗಳಂತೂ ಫಾಲೋ ಮಾಡಲು ಸಾಧ್ಯವಿಲ್ಲ. ಫಾಲೋ ಮಾಡುವುದಕ್ಕಾಗಿ ನನ್ನ ಸಮಾನ ಪವಿತ್ರರಾಗಿ. ನಾನು ಪತಿತರನ್ನು ನನ್ನ ಜೊತೆ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆಯೇ! ಇಷ್ಟೇಲ್ಲಾ ಮನುಷ್ಯರು ಭಕ್ತಿ, ತಪ, ದಾನ, ಪುಣ್ಯ ಇತ್ಯಾದಿಗಳನ್ನು ಮುಕ್ತಿಗಾಗಿ ಮಾಡುತ್ತಾರೆ ಏಕೆಂದರೆ ಇಲ್ಲಿ ದುಃಖವಿದೆ ಆದ್ದರಿಂದ ನಮ್ಮ ಮನೆಗೆ ಹಿಂತಿರುಗಿ ಹೋಗಬೇಕೆಂದು ಬಯಸುತ್ತಾರೆ. ಇದಕ್ಕಾಗಿ ತಂದೆಯು ಹೇಳುತ್ತಾರೆ – ಮಕ್ಕಳೇ ಅವಶ್ಯವಾಗಿ ಪವಿತ್ರ ಆಗಬೇಕಾಗುವುದು. ನಾನು ಪಾವನನಾಗಿದ್ದೇನೆ, ಆದ್ದರಿಂದ ನಿಮ್ಮನ್ನೂ ಪಾವನರನ್ನಾಗಿ ಮಾಡುತ್ತೇನೆ. ಬ್ರಹ್ಮಾ ತನುವಿನಲ್ಲಿ ಬರುತ್ತೇನೆ, ರಚಯಿತನಾಗಿದ್ದೇನೆ. ನಾನು ಈ ಬ್ರಹ್ಮಾರವರ ತನುವಿನಲ್ಲಿ ಬರುತ್ತೇನೆ, ಬ್ರಹ್ಮಾ ಮೂಲಕ ತಂದೆಯು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂದು ತೋರಿಸುತ್ತಾರೆ. ನೀವು ಬಿ.ಕೆ. ಆಗಿದ್ದೀರಿ. ಶಿವ ತಂದೆಯನ್ನು ಫಾಲೋ ಮಾಡಬೇಕೆಂದು ನಿಮಗೆ ತಿಳಿದಿದೆ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದ್ದೇ ಆದರೆ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ಎಂದು ಹೇಳುತ್ತಾರೆ, ಹೀಗೆ ಹೇಳಿದಾಗ ದೃಷ್ಟಿಯು ಮೇಲೆ ಹೋಗುತ್ತದೆ, ಇಲ್ಲವೆ ನೀರಿನ ಕಡೆ ಹೋಗುತ್ತದೆ. ಗಂಗೆಯಂತೂ ಪತಿತ-ಪಾವನಿಯಲ್ಲ, ಇವು ಸಾಗರದಿಂದ ಹೊರಟಿರುವ ನದಿಗಳಾಗಿವೆ. ಈಗ ಹಿಡಿಯುವುದಾದರೆ ನಿಮ್ಮ ಬಾಲವನ್ನು ಹಿಡಿದುಕೊಳ್ಳಬೇಕು.

ತಂದೆಯು ಹೇಳುತ್ತಾರೆ – ನೀವು ಪಾವನರಾಗಬೇಕು, ನನ್ನನ್ನು ಫಾಲೋ ಮಾಡಬೇಕಾಗಿದೆ ಆಗಲೇ ನನ್ನ ಜೊತೆಯಲ್ಲಿ ಬರುವಿರಿ. ನೀವು ನನ್ನ ಜೊತೆಯಲ್ಲಿಯೇ ಇದ್ದಿರಿ, ಈಗ 84 ಜನ್ಮಗಳ ಚಕ್ರವನ್ನು ಸುತ್ತಿ ಪತಿತರಾಗಿದ್ದೀರಿ. ಪುನಃ ನನ್ನನ್ನು ನೆನಪು ಮಾಡಿದರೆ ಪಾವನರಾಗುತ್ತೀರಿ. ಸನ್ಯಾಸಿಗಳೂ ಸಹ ಗೃಹಸ್ಥಿಗಳಿಗೆ ಹೇಳುತ್ತಾರೆ – ಫಾಲೋ ಮಾಡಬೇಕೆಂದರೆ ಗೃಹಸ್ಥವನ್ನು ಬಿಟ್ಟು ಬಿಡಿ ಎಂದು. ಇಲ್ಲಿ ತಂದೆಯು ತಿಳಿಸುತ್ತಾರೆ – ನಾನು ಪರಮಧಾಮ ನಿವಾಸಿಯಾಗಿದ್ದೇನೆ, ನೀವೂ ಸಹ ನಡೆಯಿರಿ ಅಥವಾ ಇಲ್ಲಿಯೇ ವಿಷಯ ಸಾಗರದಲ್ಲಿ ಇರುವುದು ಇಷ್ಟವಾಗುತ್ತದೆಯೇ? ಹೇ ಪತಿತ-ಪಾವನ ಬನ್ನಿ ಎಂದು ನೀವು ಕರೆಯುತ್ತಾ ಬಂದಿದ್ದೀರಿ, ಈಗ ತಂದೆಯು ಬಂದಿದ್ದಾರೆ, ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಕಲ್ಪ-ಕಲ್ಪವೂ ಬಂದು ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೇನೆ ನಂತರ ಸತ್ಯಯುಗದಲ್ಲಿ ನೀವು ಬಹಳ ಸುಖಿಯಾಗಿರುತ್ತೀರಿ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರಲ್ಲವೆ. ಇವರಿಗೆ ಇಷ್ಟೊಂದು ಸುಖ ಕೊಡುವವರು ಯಾರು? ಸ್ವರ್ಗದ ರಚಯಿತ ತಂದೆ. ತಂದೆಯು ನೆನಪು ತರಿಸುತ್ತಾರೆ – ನೀವು ನನ್ನ ಜಯಂತಿಯನ್ನು ಆಚರಿಸುತ್ತೀರಿ, ಪರಮಪಿತ ಪರಮಾತ್ಮನ ಜಯಂತಿಯನ್ನು ಎಲ್ಲಾ ಭಾರತವಾಸಿಗಳು ಆಚರಿಸುತ್ತಾರೆ. ನನ್ನದು ಇದು ಜನ್ಮಭೂಮಿಯಾಗಿದೆ. ಕ್ರಿಶ್ಚಿಯನ್ನರು ಆಚರಿಸುವರೇ? ಅವರು ಕ್ರಿಸ್ತನನ್ನೇ ಒಪ್ಪುತ್ತಾರೆ. ಶಿವ ಜಯಂತಿಯನ್ನು ಭಾರತವಾಸಿಗಳೇ ಆಚರಿಸುತ್ತಾರೆ, ಇದು ಸರ್ವರ ಪತಿತ-ಪಾವನ ತಂದೆಯ ಜನ್ಮಭೂಮಿಯಾಗಿದೆ. ತಂದೆಯು ಎಲ್ಲರಿಗೆ ಸುಖ ಕೊಡುವವರಾಗಿದ್ದಾರೆ. ಸರ್ವರನ್ನು ಮುಕ್ತಗೊಳಿಸುವವರಾಗಿದ್ದಾರೆ ಅಂದಮೇಲೆ ಭಾರತವು ಎಷ್ಟು ಶ್ರೇಷ್ಠವಾಗಿದೆ!

ತಂದೆಗೆ ತಿಳಿದಿದೆ – ಡ್ರಾಮಾನುಸಾರ ನನ್ನ ಮಕ್ಕಳು ಯಾವಾಗ ಬಹಳ ದುಃಖಿಯಾಗಿ ಬಿಡುವರೋ ಆಗ ಪುನಃ ಆಸ್ತಿಯನ್ನು ಕೊಡಲು ನಾನು ಬರುತ್ತೇನೆ. ತಂದೆಯು ಜ್ಞಾನ ಸಾಗರ, ಸುಖದ ಸಾಗರನಾಗಿದ್ದಾರೆ, ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಿದ್ದಾರೆ. ನನ್ನನ್ನು ಫಾಲೋ ಮಾಡಿರಿ ಎಂದು ಹೇಳುತ್ತಾರೆ. ಇದಂತೂ ನೀವು ತಿಳಿದುಕೊಂಡಿದ್ದೀರಿ – ನಾವಾತ್ಮರು ವಿಕಾರಿಯಾಗಿದ್ದೇವೆ ಆದ್ದರಿಂದ ಶರೀರವೂ ವಿಕಾರಿಯಾಗಿದೆ. ಸತ್ಯಯುಗದಲ್ಲಿ ಆತ್ಮವು ಪವಿತ್ರವಾಗಿರುತ್ತದೆ, ಆದ್ದರಿಂದ ಶರೀರವೂ ಪವಿತ್ರವಾದುದು ಸಿಗುತ್ತದೆ. ಈಗ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಪಾವನರಾಗಿರಿ, ನೆನಪಿನಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗುವಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಲು “ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ” – ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ, ಬಹಳ ಪ್ರೀತಿಯಿಂದ ಇರಬೇಕಾಗಿದೆ. ಹೇಗೆ ತಂದೆಯು ಪ್ರಿಯಾತಿ ಪ್ರಿಯರಾಗಿದ್ದಾರೆ ಹಾಗೆಯೇ ಪ್ರಿಯರಾಗಬೇಕಾಗಿದೆ.

2. ತಂದೆಯ ಸಮಾನ ಪಾವನರಾಗಿ ತಂದೆಯನ್ನು ಪೂರ್ಣ ಫಾಲೋ ಮಾಡಬೇಕಾಗಿದೆ. ತಂದೆಯ ಜೊತೆ ಹಿಂತಿರುಗಿ ಶಾಂತಿಧಾಮ ಮನೆಗೆ ಹೋಗುವುದಕ್ಕಾಗಿ ಖಂಡಿತ ಪಾವನರಾಗಬೇಕಾಗಿದೆ.

ವರದಾನ:-

ತಮ್ಮ ಮುಂದೆ ಎಂತಹ ಮಾತುಗಳೇ ಬರಲಿ, ಅದನ್ನು ಕೇವಲ ತಂದೆಯ ಮೇಲೆ ಬಿಟ್ಟು ಬಿಡಿ. ಮನಃಪೂರ್ವಕವಾಗಿ ಹೇಳಿರಿ – “ಬಾಬಾ”. ಇದರಿಂದ ಮಾತುಗಳೆಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ಬಾಬಾ ಎಂಬ ಈ ಶಬ್ಧವನ್ನು ಹೃದಯದಿಂದ ಹೇಳುವುದೇ ಜಾದೂ ಆಗಿದೆ. ಮಾಯೆಯು ಮೊಟ್ಟ ಮೊದಲು ತಂದೆಯನ್ನೇ ಮರೆಸುತ್ತದೆ, ಆದ್ದರಿಂದ ಕೇವಲ ಈ ಮಾತಿನಲ್ಲಿಯೇ ಗಮನ ಕೊಡುತ್ತೀರೆಂದರೆ, ತಮ್ಮನ್ನು ಕಮಲ ಪುಷ್ಪ ಸಮಾನ ಅನುಭವ ಮಾಡುವಿರಿ. ನೆನಪಿನ ಆಧಾರದಿಂದ ಸದಾ ಮಾಯೆಯ ಸಮಸ್ಯೆಗಳ ಕೆಸರಿನಿಂದ ದೂರವಿರುತ್ತೀರಿ. ಯಾವಾಗ ಯಾವುದೇ ಮಾತಿನಲ್ಲಿ ಏರುಪೇರಿನಲ್ಲಿ ಬರುವುದಿಲ್ಲ, ಸದಾ ಒಂದೇ ಸ್ಥಿತಿ, ಹರ್ಷಿತಮುಖಿಯಾಗಿ ಇರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top