10 July 2021 KANNADA Murli Today | Brahma Kumaris

Read and Listen today’s Gyan Murli in Kannada

July 9, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಮ್ಮ ಸ್ವಧರ್ಮದಲ್ಲಿ ಸ್ಥಿತರಾಗಿ, ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಪ್ರೀತಿಯಿಂದ ಓಂ ಶಾಂತಿ ಹೇಳಿರಿ - ಇದೂ ಸಹ ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡುವುದಾಗಿದೆ”

ಪ್ರಶ್ನೆ:: -

ಭಕ್ತಿಯಲ್ಲಿಯೂ ಭಗವಂತನಿಗೆ ಭೋಗವನ್ನು ಇಡುತ್ತಾರೆ, ಇಲ್ಲಿ ನೀವು ಮಕ್ಕಳೂ ಇಡುತ್ತೀರಿ – ಈ ಪದ್ಧತಿ ಏಕೆ ಇದೆ?

ಉತ್ತರ:-

ಏಕೆಂದರೆ ಇದೂ ಸಹ ಅವರ ಪ್ರತಿ ಗೌರವ ಇಡುವುದಾಗಿದೆ. ಭಲೆ ನಿಮಗೆ ತಿಳಿದಿದೆ – ಶಿವ ತಂದೆಯು ನಿರಾಕಾರನಾಗಿದ್ದಾರೆ, ಅಭೋಕ್ತನಾಗಿದ್ದಾರೆ, ಅವರು ಏನನ್ನೂ ತಿನ್ನುವುದಿಲ್ಲ ಆದರೆ ವಾಸನೆ (ಭಾವನೆ) ಯಂತೂ ತಲುಪುತ್ತದೆ. ಸರ್ವರ ಸದ್ಗತಿದಾತ, ಪತಿತ-ಪಾವನ ತಂದೆಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಅವರಿಗೆ ಭೋಗವನ್ನೂ ಇಡಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ……….

ಓಂ ಶಾಂತಿ. ಮಕ್ಕಳ ಮನಸ್ಸಿನಲ್ಲಿಯೂ ಬಂದಿತು ಓಂ ಶಾಂತಿ. ಹೇಗೆ ಯಾರಿಗಾದರೂ ನಮಸ್ತೆ ಎಂದು ಹೇಳಿದಾಗ ಅವರೂ ಸಹ ನಮಸ್ತೆ ಎಂದು ಹೇಳುತ್ತಾರೆ. ಇಲ್ಲಿ ಓಂ ಶಾಂತಿ ಎಂದು ತಂದೆಯು ಹೇಳಿದರು ಆಗ ಎಲ್ಲಾ ಮಕ್ಕಳು ಜೊತೆಗೆ ಇವರ ಸಹಿತ (ಬ್ರಹ್ಮನ ಆತ್ಮ) ಎಲ್ಲರ ಹೃದಯದಿಂದ ಬರುವುದು ಓಂ ಶಾಂತಿ ಅರ್ಥಾತ್ ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ. ತಂದೆಗೆ ಪ್ರತ್ಯುತ್ತರ ನೀಡಬೇಕಲ್ಲವೆ. ಓಂ ಶಾಂತಿ ಎಂದು ಹೇಳುವುದು ರಿಟರ್ನ್ ಕೊಡುವುದಾಗಿದೆ. ಮತ್ತ್ಯಾರೂ ಅರ್ಥ ಸಹಿತವಾಗಿ ಈ ರೀತಿ ಹೇಳಲು ಸಾಧ್ಯವಿಲ್ಲ. ತಂದೆ ಜ್ಞಾನ ಸೂರ್ಯನೂ ಸಹ ಓಂ ಶಾಂತಿ ಎಂದು ಹೇಳುತ್ತಾರೆ, ಜ್ಞಾನ ಚಂದ್ರನೂ ಓಂ ಶಾಂತಿ ಎಂದು ಹೇಳುತ್ತಾರೆ, ಜ್ಞಾನ ನಕ್ಷತ್ರಗಳೂ ಸಹ ಓಂ ಶಾಂತಿ ಎಂದು ಹೇಳುತ್ತೀರಿ. ನಕ್ಷತ್ರಗಳಲ್ಲಿ ಎಲ್ಲರೂ ಬಂದು ಬಿಟ್ಟರು. ಈಗ ನೀವು ಮಕ್ಕಳಿಗೆ ತಮ್ಮ ಸ್ವ ಧರ್ಮದ ಬಗ್ಗೆ ಅರಿವಾಗಿದೆ – ನಾವಾತ್ಮರು ಶಾಂತ ಸ್ವರೂಪರು ಮತ್ತು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಇಲ್ಲಿ ನಿಮಗೆ ನಿಶ್ಚಯವಾಗಿದೆ – ನೀವು ಬಹಳ ಚೆನ್ನಾಗಿ ಆತ್ಮವನ್ನು ಅರಿತುಕೊಂಡಿದ್ದೀರಿ. ಮಹಾನ್ ಆತ್ಮ, ಪಾಪಾತ್ಮ ಎಂದು ಹೇಳಲಾಗುತ್ತದೆ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ ಆದರೆ ಯಾರಿಗೂ ಆತ್ಮದ ಯಥಾರ್ಥ ಪರಿಚಯವಿಲ್ಲ. ನಾವಾತ್ಮರು ಬಹಳ ಸೂಕ್ಷ್ಮವಾಗಿದ್ದೇವೆ, 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತೇವೆ. ಇದು ನಿಮಗೂ ತಿಳಿದಿರಲಿಲ್ಲ, ಮತ್ತ್ಯಾರಿಗೂ ತಿಳಿದಿಲ್ಲ. ಈಗ ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ, ತಂದೆಯನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತೀರಿ. ಮಕ್ಕಳು ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿಯೇ ತಮ್ಮವರನ್ನಾಗಿ ಮಾಡಿಕೊಳ್ಳುತ್ತೀರಿ.

ನೀವು ಮಕ್ಕಳಿಗೆ ತಿಳಿದಿದೆ – ನಾವಾತ್ಮರ ಬೇಹದ್ದಿನ ತಂದೆಯು ಈ ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ಬ್ರಹ್ಮನ ತನುವಿನಲ್ಲಿ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಕಲ್ಪದ ಮೊದಲೂ ಸಹ ಆದಿ ಸನಾತನ ದೇವಿ-ದೇವತಾ ಧರ್ಮ ಅರ್ಥಾತ್ ಸೂರ್ಯವಂಶಿ ರಾಜಧಾನಿಯು ಸ್ಥಾಪನೆಯಾಗಿದೆ. ಈ ಸ್ಥಾಪನಾ ಕಾರ್ಯವನ್ನು ಕಲ್ಪ-ಕಲ್ಪವೂ ತಂದೆಯೇ ಮಾಡುತ್ತಾರೆ, ಅವರಿಗೆ ಭಗವಂತನೆಂದು ಹೇಳಲಾಗುತ್ತದೆ. ಭಗವಂತ ತಂದೆಯಿಂದ ಎಲ್ಲರೂ ಬೇಡುತ್ತಾರೆ – ನಮ್ಮ ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು. ಯಾವಾಗ ಸುಖವು ಪ್ರಾಪ್ತಿಯಾಗುತ್ತದೆಯೋ ಆಗ ಬೇಡುವ ಅವಶ್ಯಕತೆ ಇರುವುದಿಲ್ಲ. ಇಲ್ಲಿಯೇ ಬೇಡುತ್ತಾರೆ ಏಕೆಂದರೆ ಇಲ್ಲಿ ದುಃಖವಿದೆ. ಅಲ್ಲಿ ಏನನ್ನೂ ಬೇಡುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ತಂದೆಯು ಎಲ್ಲವನ್ನೂ ಕೊಟ್ಟು ಹೋಗುತ್ತಾರೆ. ಆದ್ದರಿಂದ ಸತ್ಯಯುಗದಲ್ಲಿ ಯಾರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ – ಮಕ್ಕಳನ್ನು ನಾನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತೇನೆ, ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ – ಈ ತಂದೆಯಿಂದ ನಾವು ಪುನಃ ಸುಖಧಾಮದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖ ಪಡೆಯುತ್ತೇವೆ. ಭಕ್ತಿಮಾರ್ಗವು ಹೇಗೆ ನಡೆಯುತ್ತದೆ, ಮನುಷ್ಯ ಸೃಷ್ಟಿರೂಪಿ ವೃಕ್ಷದ ಉತ್ಪತ್ತಿ, ಪಾಲನೆ ಮತ್ತು ವಿನಾಶವು ಹೇಗಾಗುತ್ತದೆ ಮತ್ತು ಡ್ರಾಮಾದ ಆದಿ-ಮಧ್ಯ-ಅಂತ್ಯವೇನೆಂಬುದನ್ನು ನಿಮಗೆ ತಿಳಿಸಲಾಗುತ್ತದೆ. ಇದು ಸಾಕಾರಿ ಪ್ರಪಂಚ, ಅದು ನಿರಾಕಾರಿ ಪ್ರಪಂಚವಾಗಿದೆ. ಮಕ್ಕಳಿಗೆ ತಿಳಿದಿದೆ – ನಾವು ಅರ್ಧ ಕಲ್ಪ ಭಕ್ತಿ ಮಾಡಿದೆವು, ಈಗ ಕಲಿಯುಗದ ಅಂತ್ಯವಾಗಿದೆ, ಸಂಗಮದಲ್ಲಿಯೇ ಆಸ್ತಿಯು ಸಿಗುತ್ತದೆ. ಇದನ್ನು ಮಕ್ಕಳು ಚೆನ್ನಾಗಿ ತಿಳಿದುಕೊಳ್ಳಬೇಕು, ನಾವೀಗ ಸಂಗಮದಲ್ಲಿದ್ದೇವೆ ಎಂಬುದನ್ನು ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ, ಮತ್ತ್ಯಾರಿಗೂ ನೀವು ಪರಿಚಯ ಕೊಡುವವರೆಗೆ ಅರ್ಥವಾಗುವುದಿಲ್ಲ. ಅವಶ್ಯವಾಗಿ ಸಂಗಮಯುಗವು ಬರುತ್ತದೆ, ಆಗಲೇ ಹಳೆಯ ಪ್ರಪಂಚವು ಬದಲಾಗಿ ಹೊಸದಾಗುತ್ತದೆ. ಇದು ಹಳೆಯ ಪ್ರಪಂಚವಾಗಿದೆ, ಇದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, ಮೊಟ್ಟ ಮೊದಲು ಇಡೀ ಪ್ರಪಂಚದಲ್ಲಿ ಒಂದೇ ಧರ್ಮವಿರುತ್ತದೆ. ಹೊಸ ಪ್ರಪಂಚದಲ್ಲಿ ಕೇವಲ ಭಾರತ ಖಂಡವೇ ಇರುತ್ತದೆ, ಕಡಿಮೆ ಜನಸಂಖ್ಯೆ ಇರುತ್ತದೆ. ಹೊಸ ಪ್ರಪಂಚಕ್ಕೇ ಸ್ವರ್ಗವೆಂದು ಹೇಳಲಾಗುತ್ತದೆ, ಇದರಿಂದಲೇ ಹೊಸ ಪ್ರಪಂಚದಲ್ಲಿ ಹೊಸ ಭಾರತವಿತ್ತು, ಈಗ ಹಳೆಯ ಪ್ರಪಂಚದಲ್ಲಿ ಹಳೆಯ ಭಾರತವಾಗುವುದು ಎಂಬುದು ಸಿದ್ಧವಾಗುತ್ತದೆ. ಹೊಸ ಪ್ರಪಂಚ, ಹೊಸ ಭಾರತವಾಗಲಿ, ಹೊಸ ದೆಹಲಿಯಾಗಲಿ ಎಂದು ಗಾಂಧೀಜಿಯೂ ಸಹ ಹೇಳುತ್ತಿದ್ದರು. ಈಗ ಹೊಸ ಭಾರತವಾಗಲೀ, ಹೊಸ ದೆಹಲಿಯಾಗಲೀ ಇಲ್ಲ. ನವಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗ ಅದೇ ಭಾರತದಲ್ಲಿ ರಾವಣ ರಾಜ್ಯವಿದೆ. ಇದನ್ನೂ ಬರೆಯಬೇಕು – ಹೊಸ ಪ್ರಪಂಚ, ಹೊಸ ದೆಹಲಿಯು ಇಂತಹ ಸಮಯದಿಂದ ಈ ಸಮಯದವರೆಗೆ ಇವರ ರಾಜ್ಯವಿತ್ತು ಎಂದು. ಯಾರು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರಿದ್ದಾರೆಯೋ ಅವರೇ ಇದನ್ನು ತಿಳಿಸಬಲ್ಲರು. ಬ್ರಹ್ಮಾರವರ ಮೂಲಕ ಹೊಸ ಪ್ರಪಂಚ ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ. ಆ ಸ್ವರ್ಗದ ಆಸ್ತಿಯನ್ನು ಪಡೆಯುವುದಕ್ಕಾಗಿ ನೀವು ಬರುತ್ತೀರಿ. ತಂದೆಯು ನಿಮಗೆ ಯುಕ್ತಿಯನ್ನು ತಿಳಿಸುತ್ತಾರೆ ಅಥವಾ ಪುರುಷಾರ್ಥ ಮಾಡಿಸುತ್ತಾರೆ. ಸನ್ಮುಖದಲ್ಲಿಯೂ ಮಿಲನ ಮಾಡಲು ಬರುತ್ತೀರಿ ಅಥವಾ ಅಲ್ಲಿಯೂ ಕುಳಿತು ಓದುತ್ತೀರಿ. ಸನ್ಮುಖದಲ್ಲಿ ಮಿಲನ ಮಾಡಬೇಕೆಂದು ಮನಸ್ಸಾಗುತ್ತದೆ. ಆ ಮನುಷ್ಯರು ಮನುಷ್ಯರೊಂದಿಗೆ ಮಿಲನ ಮಾಡುತ್ತಾರೆ, ನಾವು ಶಿವ ತಂದೆಯೊಂದಿಗೆ ಮಿಲನ ಮಾಡಲು ಹೋಗುತ್ತೇವೆಂದು ನೀವು ಹೇಳುತ್ತೀರಿ ಆಗ ಅವರಂತೂ ನಿರಾಕಾರನಲ್ಲವೆ ಎಂದು ಹೇಳುತ್ತಾರೆ. ನಾವಾತ್ಮರೂ ನಿರಾಕಾರಿಯಾಗಿದ್ದೇವೆ, ನಾವೂ ಸಹ ಇಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತೇವಲ್ಲವೆ. ಯಾರಿಗೆ ಹೆಸರಿದೆಯೋ ಅವರು ಅವಶ್ಯವಾಗಿ ಪಾತ್ರಧಾರಿಯೂ ಆಗಿರುತ್ತಾರೆ ಅಂದಮೇಲೆ ಭಗವಂತನಿಗೂ ಹೆಸರಿದೆಯಲ್ಲವೆ. ನಿರಾಕಾರ ಶಿವನಿಗೇ ಭಗವಂತನೆಂದು ಹೇಳಲಾಗುತ್ತದೆ, ಮತ್ತ್ಯಾರಿಗೂ ಭಗವಂತನೆಂದು ಹೇಳುವುದಿಲ್ಲ. ಭಗವಂತನೆಂದು ನಿರಾಕಾರನಿಗೇ ಗಾಯನವಿದೆ. ಅವರ ಪೂಜೆಯು ನಡೆಯುತ್ತದೆ, ಆತ್ಮರಿಗೂ ಪೂಜೆಯಾಗುತ್ತದೆ. ರುದ್ರ ಯಜ್ಞವನ್ನು ರಚಿಸುತ್ತಾರಲ್ಲವೆ. ಅದರಲ್ಲಿ ಮಣ್ಣಿನ ಸಾಲಿಗ್ರಾಮಗಳನ್ನು ಮಾಡುತ್ತಾರೆ, ಕಲ್ಲಿನಿಂದ ಅಥವಾ ಮಣ್ಣಿನಿಂದ ಮಾಡಿಸುತ್ತಾರೆ. ಮಣ್ಣಿನಿಂದ ಮಾಡಿರುವುದನ್ನು ಕೆಡಿಸಲು ಮತ್ತೆ ತಯಾರಿಸಲು ಸಹಜವಾಗುತ್ತದೆ. ಪ್ರಪಂಚವಂತೂ ಈ ಮಾತುಗಳನ್ನು ಅರಿತುಕೊಂಡಿಲ್ಲ. ರುದ್ರ ಯಜ್ಞದಲ್ಲಿ ಎಷ್ಟೊಂದು ಆತ್ಮರ ಪೂಜೆಯಾಗುತ್ತದೆ, ಎಷ್ಟು ಆತ್ಮರ ಪೂಜೆ ಮಾಡಬಹುದು! ಮಕ್ಕಳಂತೂ ಅನೇಕರಿದ್ದಾರೆ, ಭಕ್ತರೆಲ್ಲರೂ ಭಗವಂತನ ಮಕ್ಕಳಾಗಿದ್ದಾರೆ. ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಶಿವ ತಂದೆಯು ಭಾರತದಲ್ಲಿಯೇ ಬರುತ್ತಾರೆ, ನೀವು ಕೆಲವರೇ ಅವರ ಸಹಯೋಗಿಗಳು, ಈಶ್ವರೀಯ ಸೇವಾಧಾರಿಗಳಾಗುತ್ತೀರಿ. ಅವರ ನೆನಪಾರ್ಥವಾಗಿಯೇ ಭಕ್ತರು ಸಾಲಿಗ್ರಾಮಗಳನ್ನು ಮಾಡಿ ಪೂಜಿಸುತ್ತಾರೆ. ಯಜ್ಞವನ್ನು ರಚಿಸಿದಾಗ ಅದರಲ್ಲಿ ಚಿಕ್ಕ ಯಜ್ಞವೂ ಇರುತ್ತದೆ, ದೊಡ್ಡದೂ ಇರುತ್ತದೆ. ದೊಡ್ಡ ಸಾಹುಕಾರರು ದೊಡ್ಡ ಯಜ್ಞವನ್ನು ರಚಿಸುತ್ತಾರೆ, ಲಕ್ಷ ಗಟ್ಟಲೆ ಸಾಲಿಗ್ರಾಮಗಳನ್ನು ಮಾಡುತ್ತಾರೆ. ಚಿಕ್ಕ ಯಜ್ಞವಾಗಿದ್ದರೆ 5-10 ಸಾವಿರ ಮಾಡಿಸುತ್ತಾರೆ, ಎಷ್ಟೇಷ್ಟು ಸಾಹುಕಾರರೋ ಅದರಂತೆಯೇ ಯಜ್ಞ ಮತ್ತು ಅಷ್ಟು ಸಾಲಿಗ್ರಾಮಗಳನ್ನು ಮಾಡಿಸುತ್ತಾರೆ. ಒಬ್ಬ ಶಿವ, ಉಳಿದೆಲ್ಲಾ ಸಾಲಿಗ್ರಾಮಗಳನ್ನು ಮಾಡಿಸುತ್ತಾರೆ ಮತ್ತೆ ಅಷ್ಟೊಂದು ಬ್ರಾಹ್ಮಣರೂ ಬೇಕು. ಅನೇಕರು ಯಜ್ಞವನ್ನು ನೋಡಿರುತ್ತೀರಿ, ನಿಮಗೆ ತಿಳಿದಿದೆ – ತಂದೆಯು ನಾವು ಮಕ್ಕಳ ಸೇವೆ ಮಾಡುತ್ತಾರೆ. ನಾವು ಮತ್ತೆ ಅನ್ಯರ ಸೇವೆ ಮಾಡುತ್ತೇವೆ ಆದ್ದರಿಂದ ಪೂಜೆಯಾಗುತ್ತದೆ. ನೀವೀಗ ಪೂಜ್ಯರಾಗುತ್ತೀರಿ, ಆತ್ಮವು ಹೇಳುತ್ತದೆ – ಬಾಬಾ, ತಾವಂತೂ ಸದಾ ಪೂಜ್ಯನಾಗಿದ್ದೀರಿ, ನಮ್ಮನ್ನು ಪೂಜ್ಯರನ್ನಾಗಿ ಮಾಡುತ್ತಿದ್ದೀರಿ. ನೀವು ಪೂಜ್ಯಾತ್ಮರು ಶರೀರವನ್ನು ತೆಗೆದುಕೊಂಡಾಗ ಪೂಜ್ಯ ದೇವಿ-ದೇವತೆಗಳೆಂದು ಹೇಳುತ್ತಾರೆ. ಆತ್ಮವೇ ಪೂಜ್ಯ ಅಥವಾ ಪೂಜಾರಿಯಾಗುತ್ತದೆ. ತಂದೆಯು ಒಂದೇ ಬಾರಿ ಬರುತ್ತಾರೆ, ಮತ್ತೆಂದೂ ಸಹ ತಂದೆಯು ಆತ್ಮರಿಗೆ ಓದಿಸಲು ಸಾಧ್ಯವಿಲ್ಲ. ಆತ್ಮವೇ ಕೇಳಿಸಿಕೊಳ್ಳುತ್ತದೆ, ಹೇಗೆ ಆತ್ಮವು ಶರೀರದ ಮೂಲಕ ಕೇಳಿಸಿಕೊಳ್ಳುತ್ತದೆಯೋ ಹಾಗೆಯೇ ಪರಮಪಿತ ಪರಮಾತ್ಮನೂ ಸಹ ಶರೀರದ ಆಧಾರವನ್ನು ತೆಗೆದುಕೊಂಡು ಇವರ ಮೂಲಕ ಕೇಳುತ್ತಾರೆ. ಇವರ ಮೂಲಕ ನಿಮಗೆ ರಾಜಯೋಗವನ್ನು ಕಲಿಸುತ್ತಾರೆ, ಅವರಿಗೆ ತಮ್ಮದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರಿಗೂ ಸಹ ತಮ್ಮ ಸೂಕ್ಷ್ಮ ಶರೀರವಿದೆ, ಇಲ್ಲಂತೂ ಎಲ್ಲರಿಗೂ ತಮ್ಮ-ತಮ್ಮದೇ ಆದ ಶರೀರವಿದೆ. ಇದು ಸಾಕಾರಿ ಪ್ರಪಂಚವಾಗಿದೆ. ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರು ಜ್ಞಾನ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರನೂ ಆಗಿದ್ದಾರೆ. ಅವರು ಬಂದು ಎಲ್ಲರನ್ನೂ ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಇದರಲ್ಲಿ ಯಾವುದೇ ಪ್ರೇರಣೆಯ ಮಾತಿಲ್ಲ. ಒಂದುವೇಳೆ ನಾನು ಪ್ರೇರಣೆಯಿಂದ ಪಾವನರನ್ನಾಗಿ ಮಾಡುವಂತಿದ್ದರೆ ಇಲ್ಲಿ ಬಂದು ರಥವನ್ನು ತೆಗೆದುಕೊಳ್ಳುವ ಅವಶ್ಯಕತೆಯಾದರೂ ಏನಿದೆ! ಶಿವನ ಮಂದಿರದಲ್ಲಿ ಮುಂದೆ ನಂದಿಯನ್ನು ಇಡುತ್ತಾರೆ. ಮನುಷ್ಯರ ಬುದ್ಧಿಯು ಕಲ್ಲುಬುದ್ಧಿ ಆಗಿರುವ ಕಾರಣ ಏನನ್ನೂ ತಿಳಿದುಕೊಳ್ಳುವುದಿಲ್ಲ. ಬಸವನನ್ನು ಶಿವನ ಮುಂದೆ ಏಕೆ ಇಟ್ಟಿದ್ದಾರೆ? ಗೋಶಾಲೆ ಎಂಬ ಹೆಸರನ್ನು ಕೇಳಿರುವುದರಿಂದ ಅಲ್ಲಿ ನಂದಿಯನ್ನು ತೋರಿಸಿಬಿಟ್ಟಿದ್ದಾರೆ ಆದರೆ ನಂದಿಯ ಮೇಲೆ ಯಾರು ಸವಾರಿ ಮಾಡಿದದರು! ಕೃಷ್ಣನ ಆತ್ಮವಂತೂ ಸತ್ಯಯುಗದಲ್ಲಿರುತ್ತದೆ. ಪ್ರಾಣಿಗಳ ಮೇಲೆ ಕುಳಿತುಕೊಳ್ಳಲು ಕೃಷ್ಣನಿಗೇನಾಗಿದೆ! ಮನುಷ್ಯರು ಏನನ್ನೂ ತಿಳಿದುಕೊಳ್ಳುವುದಿಲ್ಲ, ದ್ರೌಪದಿಯೂ ಸಹ ಕೇವಲ ಒಬ್ಬರೇ ಇರಲಿಲ್ಲ, ಅನೇಕ ದ್ರೌಪದಿಯರಿದ್ದಾರೆ, ತಂದೆಯನ್ನು ಕರೆಯುತ್ತಾರೆ. ಇದನ್ನು ಅವರು ಒಂದು ನಾಟಕವನ್ನಾಗಿ ಮಾಡಿದ್ದಾರೆ- ಅದರಲ್ಲಿ ಶ್ರೀಕೃಷ್ಣನು ಸೀರೆಗಳನ್ನು ಕೊಡುತ್ತಾ ಹೋಗುತ್ತಾನೆ, ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನೀವು 21 ಜನ್ಮಗಳವರೆಗೆ ಪತಿತರಾಗುವುದಿಲ್ಲ. ಎಲ್ಲಿಯ ಮಾತನ್ನು ಎಲ್ಲಿಗೆ ತೆಗೆದುಕೊಂಡು ಹೋಗಿದ್ದಾರೆ! ಭಕ್ತಿಮಾರ್ಗದ ಕಥೆಗಳು ಬಹಳಷ್ಟಿದೆ. ಈ ಕಥೆಗಳೆಲ್ಲವೂ ಅನಾದಿಯಾಗಿದೆ ಎಂದು ಹೇಳುತ್ತಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಕೇಳುತ್ತಾ ಬಂದಿದ್ದೇವೆಂದು ಹೇಳುತ್ತಾರೆ. ಅನಾದಿಯೂ ಯಾವಾಗಿನಿಂದ ಆರಂಭವಾಯಿತು ಎಂಬುದೇನೂ ತಿಳಿದಿಲ್ಲ. ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗುತ್ತದೆ ಎಂಬುದೂ ತಿಳಿದಿಲ್ಲ, ಅದರ ವರ್ಣನೆಯೂ ಇಲ್ಲ, ನೀವು ಎಷ್ಟೊಂದು ಸೇವೆ ಮಾಡುತ್ತೀರಿ! ಆ ಸೂರ್ಯ, ಚಂದ್ರ, ನಕ್ಷತ್ರಗಳಂತೂ ಇದ್ದೇ ಇದೆ. ಸತ್ಯಯುಗದಲ್ಲಿಯೂ ಇರುತ್ತವೆ, ಈಗಲೂ ಇವೆ. ಅವು ಅದಲು-ಬದಲಾಗುವುದಿಲ್ಲ. ನೀವೀಗ ಭಾರತವನ್ನೇ ಪುನಃ ಅಂಧಕಾರದಿಂದ ತೆಗೆದು ಪ್ರಕಾಶತೆಯಲ್ಲಿ ತರುವುದಕ್ಕೆ ನಿಮಿತ್ತರಾಗಿದ್ದೀರಿ. ಭಕ್ತಿಮಾರ್ಗಕ್ಕೆ ಅಂಧಕಾರವೆಂದು ಹೇಳಲಾಗುತ್ತದೆ, ನಿಮ್ಮ ಮಹಿಮೆಯಿದೆ. ನೀವು ಧರಣಿಯ ನಕ್ಷತ್ರಗಳಾಗಿದ್ದೀರಿ, ನಕ್ಷತ್ರಗಳಿದ್ದಾರೆ ಅಂದಮೇಲೆ ಸೂರ್ಯ-ಚಂದ್ರರೂ ಇರಬೇಕು.

ಇದು ನಿಮ್ಮ ಆತ್ಮಿಕ ತೀರ್ಥ ಸ್ಥಾನವಾಗಿದೆ. ನೀವು ಇಂತಹ ಯಾತ್ರೆ ಮಾಡುತ್ತೀರಿ, ಅಲ್ಲಿಂದ ಮತ್ತೆ ಇದೇ ಮೃತ್ಯುಲೋಕದಲ್ಲಿ ಬರುವುದಿಲ್ಲ. ಈಗ ಇದು ಮೃತ್ಯುಲೋಕವಾಗಿದೆ ಮತ್ತೆ ಇಲ್ಲಿಯೇ ಅಮರಲೋಕವಾಗುವುದು. ದ್ವಾಪರದಿಂದ ಮೃತ್ಯುಲೋಕವು ಆರಂಭವಾಗುತ್ತದೆ, ನೀವೀಗ ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೀರಿ. ನೀವು ತಿಳಿದುಕೊಂಡಿದ್ದೀರಿ, ನಾವಾತ್ಮರ ಯಾತ್ರೆಯು ಭಿನ್ನವಾಗಿದೆ. ನೀವಿಲ್ಲಿ ಕುಳಿತಲ್ಲಿಯೇ ಯಾತ್ರೆ ಮಾಡುವ ಪುರುಷಾರ್ಥ ಮಾಡುತ್ತೀರಿ. ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಅವರು ಯಾತ್ರೆಗೆ ಹೋಗುತ್ತಾರೆ, ಅದರಲ್ಲಿ ವಿಕರ್ಮ ವಿನಾಶ ಆಗುತ್ತದೆಯೇ! ಮನುಷ್ಯರಲ್ಲಿ ಮಧ್ಯಪಾನದ ಎಷ್ಟೊಂದು ಹವ್ಯಾಸವಿದೆಯೆಂದರೆ ಮುಚ್ಚಿಟ್ಟುಕೊಂಡು ತೆಗೆದುಕೊಂಡು ಹೋಗುತ್ತಾರೆ. ಇತ್ತೀಚೆಗಂತೂ ಯಾತ್ರಾ ಸ್ಥಳಗಳಲ್ಲಿಯೂ ಬಹಳ ಕೊಳಕು ಮನುಷ್ಯರಿರುತ್ತಾರೆ. ಎಲ್ಲರೂ ಪತಿತರಲ್ಲವೆ. ಹೇಗೆ ಬ್ರಾಹ್ಮಣರು ಪತಿತರೋ ಅದೇ ರೀತಿ ಯಾತ್ರಿಕರೂ ಪತಿತರಾಗಿದ್ದಾರೆ. ಮಾರ್ಗದರ್ಶಕರು ಯಾತ್ರೆ ಮಾಡಿಸುತ್ತಾರೆ ಆದರೆ ಪಾವನರಾಗಿದ್ದಾರೆಯೇ! ನೀವಂತೂ ಪವಿತ್ರರಾಗಿರುತ್ತೀರಿ, ನೀವು ಸತ್ಯ ಬ್ರಾಹ್ಮಣರಾಗಿದ್ದೀರಿ. ನಿಮ್ಮ ಆತ್ಮವು ಪವಿತ್ರವಾಗಿರುತ್ತದೆ, ನೆನಪಿನ ಯಾತ್ರೆಯಿಂದಲೇ ನೀವು ಪವಿತ್ರರಾಗುತ್ತೀರಿ. ಈಗ ಸತೋಪ್ರಧಾನರಾಗಬೇಕಾಗಿದೆ. ತಂದೆಯು ಪದೇ-ಪದೇ “ಮಧುರ ಮಕ್ಕಳೇ” ಎಂದು ಬರೆಯುತ್ತಾರೆ, ಇದನ್ನು ಶಿವ ತಂದೆಯು ಆತ್ಮರಿಗೆ ಬರೆಯುವರು. ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ, ಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೀರಿ. ಇದೊಂದೇ ಮುಖ್ಯವಾದ ಆಜ್ಞೆಯಾಗಿದೆ. ಎಷ್ಟು ಸಹಜವೂ ಆಗಿದೆ, ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ನೆನಪು ಮಾಡದಿದ್ದರೆ ವಿಕರ್ಮ ವಿನಾಶವಾಗುವುದಿಲ್ಲ ಮತ್ತೆ ಶಿಕ್ಷೆಯನ್ನು ಅನುಭವಿಸುತ್ತೀರಿ. ತಂದೆಯು ಹೇಳುತ್ತಾರೆ, ನೀವು ಎಲ್ಲಿ ಹೋದರೂ ಸಹ ಸಂಪಾದನೆ ಮಾಡಬಲ್ಲಿರಿ. ತಿನ್ನಿರಿ, ಕುಡಿಯಿರಿ, ಏನಾದರೂ ಮಾಡಿ ಕೇವಲ ತಂದೆಯನ್ನು ನೆನಪು ಮಾಡಿರಿ. ನಿಮ್ಮದು ಸಂಪಾದನೆಯಾಗಿದೆ, ಮಕ್ಕಳಿಗಾಗಿ ಇನ್ನೂ ಸಹಜವಾಗಿದೆ. ಇದರಲ್ಲಿ ಯಾವುದೇ ಗಮನ ಇತ್ಯಾದಿಗಳ ಮಾತಿಲ್ಲ. ಶ್ರೀನಾಥ ಮಂದಿರದಲ್ಲಿ ಶ್ರೀನಾಥನ ನೆನಪಿನಲ್ಲಿ ಕುಳಿತುಕೊಳ್ಳುತ್ತಾರೆ, ಭೋಗವನ್ನು ಇಡುತ್ತಾರೆ, ಅದು ಕಲ್ಲಿನ ಮೂರ್ತಿಯೇ ಅಲ್ಲವೆ. ಭೋಗವನ್ನು ಯಾರಿಗೆ ಇಡಬೇಕು? ಅಧಿಕಾರಿಯಂತೂ ಶಿವ ತಂದೆಯೊಬ್ಬರೇ ಆಗಿದ್ದಾರೆ, ಅವರೇ ಸರ್ವರ ಸದ್ಗತಿದಾತ, ಪತಿತ-ಪಾವನನಾಗಿದ್ದಾರೆ. ತಂದೆಯು ಹೇಳುತ್ತಾರೆ – ನಾನಂತೂ ಸ್ವೀಕಾರ ಮಾಡುವುದಿಲ್ಲ. ನೀವು ನನ್ನ ಮೇಲೆ ನೀರು ಹಾಲನ್ನು ಎರೆಯುತ್ತೀರಿ, ಈ ಭೋಗವನ್ನು ಇಡುತ್ತೀರಿ – ಏಕೆ? ನಾನಂತೂ ನಿರಾಕಾರ, ಅಭೋಕ್ತನಾಗಿದ್ದೇನೆ, ನನಗೇನು ಪೂಜೆ ಮಾಡುತ್ತೀರಿ! ನನ್ನ ಮುಂದೆ ಭೋಗವನ್ನು ಇಡುತ್ತಾರೆ ಆದರೆ ಭಕ್ತರು ಭೋಗವನ್ನಿಟ್ಟರು ಮತ್ತೆ ಅವರೇ ಹಂಚಿತಿಂದರು. ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಗೆ ಭೋಗವನ್ನಂತೂ ಅವಶ್ಯವಾಗಿ ಇಡಬೇಕು. ಮತ್ತೆ ನೀವೇ ಹಂಚಿ ತಿನ್ನುತ್ತೀರಿ ಆದರೆ ಇದು ಗೌರವ ಕೊಡುವುದಾಗಿದೆ. ನಾವು ಶಿವ ತಂದೆಗೆ ಭೋಗವನ್ನು ಇಡುತ್ತೇವೆ ಏಕೆಂದರೆ ಇದು ಶಿವ ತಂದೆಯ ಭಂಡಾರವಾಗಿದೆಯಲ್ಲವೆ. ಯಾರ ಭಂಡಾರವಾಗಿದೆಯೋ ಅವರಿಗೆ ಭೋಗವನ್ನು ಅವಶ್ಯವಾಗಿ ಇಡಬೇಕಾಗಿದೆ. ಭಲೆ ನೀವು ಭೋಗವನ್ನಿಡುತ್ತೀರಿ, ನೀವು ಮಕ್ಕಳೇ ತಿನ್ನುತ್ತೀರಿ. ಈ ಬ್ರಹ್ಮಾರವರು ತಿನ್ನಬಹುದು, ನಾನು ತಿನ್ನುವುದಿಲ್ಲ ಬಾಕಿ ಪರಿಮಳವಂತೂ ಬರುತ್ತದೆಯಲ್ಲವೆ. ಬಹಳ ಚೆನ್ನಾಗಿ ಭೋಗವನ್ನು ತಯಾರಿಸಿದ್ದಾರೆ, ಹೇಳುವುದಕ್ಕಾಗಿ ಕರ್ಮೇಂದ್ರಿಯಗಳಂತೂ ಇವೆಯಲ್ಲವೆ. ಈ ಬ್ರಹ್ಮಾರವರು ತಿನ್ನಬಹುದು, ಈ ಶರೀರವು ಇವರದಾಗಿದೆ, ನಾನು ಕೇವಲ ಇವರಲ್ಲಿ ಪ್ರವೇಶ ಮಾಡುತ್ತೇನೆ. ನೀವು ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡಲು ಕೇವಲ ಇವರ ಬಾಯಿಯನ್ನು ಉಪಯೋಗಿಸುತ್ತೇನೆ, ಗೋಮುಖವೆಂದು ಹೇಳುತ್ತಾರಲ್ಲವೆ. ಇವರು ಗೋವು ಆಗಿದ್ದಾರೆ. ನಿಮಗೆ ತಿಳಿದಿದೆ, ಇವರ ಮೂಲಕವೇ ನಿಮ್ಮನ್ನು ದತ್ತು ಮಾಡಿಕೊಳ್ಳಲಾಗುತ್ತದೆ, ಇವರು ಮಾತಾಪಿತಾ ಇಬ್ಬರೂ ಆಗಿದ್ದಾರೆ ಆದರೆ ಮಾತೆಯರನ್ನು ಸಂಭಾಲನೆ ಮಾಡುವುದು ಯಾರು! ಆದ್ದರಿಂದ ಡ್ರಾಮಾನುಸಾರ ಸರಸ್ವತಿಯನ್ನು ನಿಮಿತ್ತ ಮಾಡಲಾಯಿತು. ತಾಯಿ ಗುರುವಿನ ಮಹಿಮೆಯೂ ಬೇಕಲ್ಲವೆ. ಗುರುವಂತೂ ಮೊದಲ ನಂಬರಿನಲ್ಲಿ ಇವರು ಪ್ರಸಿದ್ಧವಾಗಿದ್ದಾರೆ. ಗುರು ಬ್ರಹ್ಮಾ ಸರಿಯಾಗಿದೆ, ಎಂತಹ ತಂದೆಯೋ ಅಂತಹ ಮಕ್ಕಳು. ನೀವು ಬ್ರಾಹ್ಮಣರೂ ಸಹ ಸತ್ಯ ಗುರುಗಳಾಗುತ್ತೀರಿ, ಎಲ್ಲರಿಗೆ ಸ್ವರ್ಗದ ಸತ್ಯಮಾರ್ಗವನ್ನು ತಿಳಿಸುತ್ತೀರಿ. ಆತ್ಮವೇ ಬಾಯಿಂದ ಮಾರ್ಗವನ್ನು ತಿಳಿಸುತ್ತದೆ – ಮನ್ಮಾನಭವ, ಮಧ್ಯಾಜೀಭವ. ತಂದೆ-ತಾಯಿ, ಮಕ್ಕಳು ಎಲ್ಲರೂ ಅದೇ ಮಾರ್ಗವನ್ನು ತಿಳಿಸುತ್ತೀರಿ. ನೀವಿಲ್ಲಿ ಸನ್ಮುಖದಲ್ಲಿ ಕುಳಿತಿದ್ದೀರಿ. ಆದ್ದರಿಂದ ನೆನಪಿರುತ್ತದೆ ಮತ್ತೆ ಮನೆಗೆ ಹೋಗುತ್ತೀರೆಂದರೆ ಅನೇಕ ಮಕ್ಕಳು ಮರೆತು ಹೋಗುತ್ತೀರಿ. ತಂದೆಯ ಬಳಿ ಬಂದಿದ್ದೇವೆಂದು ಇಲ್ಲಿ ಆನಂದವಾಗುತ್ತದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ಸ್ವದರ್ಶನ ಚಕ್ರಧಾರಿಗಳಾಗಿ ಈ ಯುಕ್ತಿಯನ್ನು ತಿಳಿಸಿ – ಮುಕ್ತಿಧಾಮ, ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಹಾಗೂ ತಂದೆಗೆ ಯಥಾರ್ಥ ಗೌರವ ಕೊಡಬೇಕಾಗಿದೆ. ಭಲೆ ತಂದೆಯು ಅಭೋಕ್ತನಾಗಿದ್ದಾರೆ ಆದರೆ ಯಾರ ಭಂಡಾರದಿಂದ ಪಾಲನೆಯಾಗುತ್ತಿದೆಯೋ ಅವರಿಗೆ ಅವಶ್ಯವಾಗಿ ಮೊದಲು ಸ್ವೀಕಾರ ಮಾಡಿಸಬೇಕಾಗಿದೆ.

2. ಪೂಜ್ಯನೀಯರಾಗಲು ಈಶ್ವರನ ಸೇವಾಧಾರಿಗಳಾಗಬೇಕಾಗಿದೆ. ತಂದೆಯ ಜೊತೆ ಸೇವೆಯಲ್ಲಿ ಸಹಯೋಗಿಗಳಾಗಬೇಕು. ಯಾವಾಗ ಆತ್ಮ ಮತ್ತು ಶರೀರ ಎರಡೂ ಪಾವನವಾಗುವುದೋ ಆಗ ಪೂಜೆಯಾಗುವುದು.

ವರದಾನ:-

ಈ ಸಮಯದಲ್ಲಿ ತಾವು ಸಂಗಮಯುಗದ ಶ್ರೇಷ್ಠಾತ್ಮರುಗಳ ಪ್ರತೀ ಶ್ರೇಷ್ಠ ಕರ್ಮವೂ, ಇಡೀ ಕಲ್ಪಕ್ಕಾಗಿ ವಿಧಾನವಾಗುತ್ತಿದೆ. ಅಂದಮೇಲೆ ಪ್ರತೀ ಕರ್ಮದಲ್ಲಿ ತಮ್ಮನ್ನು ವಿಧಾನದ ರಚೈತನೆಂದು ತಿಳಿದುಕೊಂಡು ಮಾಡಿರಿ, ಇದರಿಂದ ಸ್ವತಹವಾಗಿಯೇ ಹುಡುಗಾಟಿಕೆಯು ಸಮಾಪ್ತಿಯಾಗುತ್ತದೆ. ಸಂಗಮಯುಗದಲ್ಲಿ ನಾವು ವಿಧಾನದ ರಚೈತ, ಜವಾಬ್ದಾರ ಆತ್ಮರಾಗಿದ್ದೇವೆ ಎಂಬ ಈ ನಿಶ್ಚಯದಿಂದ ಪ್ರತಿಯೊಂದು ಕರ್ಮವನ್ನು ಮಾಡುತ್ತೀರೆಂದರೆ, ಅವಶ್ಯವಾಗಿ ಯಥಾರ್ಥ ವಿಧಿಯಿಂದ ಮಾಡಿರುವಂತಹ ಕರ್ಮದ ಸಂಪೂರ್ಣ ಸಿದ್ಧಿಯು ಪ್ರಾಪ್ತಿಯಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top