06 July 2021 KANNADA Murli Today | Brahma Kumaris

Read and Listen today’s Gyan Murli in Kannada

July 5, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ಮಹಾಭಾರತ ಯುದ್ಧದಲ್ಲಿ ಹಳೆಯ ವೃಕ್ಷವು ಸಮಾಪ್ತಿಯಾಗುವುದು ಆದ್ದರಿಂದ ಯುದ್ಧಕ್ಕೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಿ”

ಪ್ರಶ್ನೆ:: -

ತಂದೆಗೆ ಮಾತೆಯರ ಸಂಘಟನೆ ಬೇಕು ಆದರೆ ಆ ಸಂಘಟನೆಯ ವಿಶೇಷತೆ ಏನಿರಬೇಕು?

ಉತ್ತರ:-

ಇಂತಹ ಸಂಘಟನೆಯಿರಲಿ ಆತ್ಮಾಭಿಮಾನಿಯಾಗಿರುವ ಸಂಪೂರ್ಣ ಪುರುಷಾರ್ಥ ಮಾಡಬೇಕು. ಅವರಿಗೆ ಪಕ್ಕಾ ನಶೆಯಿರಲಿ – ನಾವು ಪಾವನರಾಗಿ ಪಾವನ ಪ್ರಪಂಚವನ್ನು ತಯಾರು ಮಾಡಬೇಕು, ಪತಿತರಾಗಬಾರದು. ಇಂತಹ ನಷ್ಟಮೋಹಿಗಳ ಸಂಘಟನೆಯಿದ್ದಾಗ ಚಮತ್ಕಾರ ಮಾಡಿ ತೋರಿಸಬಹುದು. ಯಾರಲ್ಲಿಯೂ ಸೆಳೆತವಿರಬಾರದು, ಮೋಹದ ಸೆಳೆತವು ಬಹಳ ನಷ್ಟವನ್ನುಂಟು ಮಾಡುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಧುರಾತಿ ಮಧುರ ಮಕ್ಕಳಿಗೆ ಇದು ತಿಳಿದಿದೆ – ಮಧುರ ತಂದೆಯು ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ಇಲ್ಲಿ ಬಂದಿದ್ದಾರೆ. ಇದು ಮಕ್ಕಳ ಬುದ್ಧಿಯಲ್ಲಿದೆ. ಪ್ರತಿಯೊಬ್ಬರಿಗೆ ಇದನ್ನು ತಿಳಿಸಬೇಕಾಗಿದೆ – ನಾವಾತ್ಮರು ಈ ನೆನಪಿನ ಯಾತ್ರೆಯಿಂದಲೇ ಪವಿತ್ರರಾಗುತ್ತೇವೆ. ಎಷ್ಟು ಸಹಜ ಉಪಾಯವಾಗಿದೆ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಮಕ್ಕಳಿಗೆ ತಿಳಿದಿದೆ – ತಂದೆಯು ಒಂದು ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತಾರೆ. ಈಗ ಎಲ್ಲರೂ ಜೀವನ ಬಂಧನದಲ್ಲಿದ್ದಾರೆ, ರಾವಣ ರಾಜ್ಯದ ಬಂಧನದಲ್ಲಿದ್ದಾರೆ. ಈ ಮಾತು ತಂದೆಗೇ ಗೊತ್ತು ಮತ್ತು ಮಕ್ಕಳಿಗೆ ಗೊತ್ತು ಇನ್ನ್ಯಾರಿಗೂ ಗೊತ್ತಿಲ್ಲ. ನೀವು ಮಕ್ಕಳಿಗೆ ಈ ನಿಶ್ಚಯವಿದೆ – ಬೇಹದ್ದಿನ ತಂದೆಯನ್ನು ನಾವು ನೆನಪು ಮಾಡುತ್ತೇವೆ ಅಂದಮೇಲೆ ಆತ್ಮಕ್ಕೆ ಆಂತರ್ಯದಲ್ಲಿ ಬಹಳ ಖುಷಿಯಾಗಿರಬೇಕು. ಯಾವ ತಂದೆಯನ್ನು ಅರ್ಧ ಕಲ್ಪದಿಂದ ನೆನಪು ಮಾಡುತ್ತಿದ್ದಿರೋ ಆ ತಂದೆಯು ಸಿಕ್ಕಿದರು, ದುಃಖದಲ್ಲಿ ತಂದೆಯನ್ನು ಸ್ಮರಣೆ ಮಾಡುತ್ತಿರುತ್ತಾರೆ, ನೀವೂ ಸಹ ಸ್ಮರಣೆ ಮಾಡುತ್ತಿದ್ದಿರಿ. ಈಗ ನೀವು ದುಃಖಿಗಳಾಗಿ ಸ್ಮರಣೆ ಮಾಡುವುದಿಲ್ಲ. ಯಾರನ್ನು ಇಡೀ ಪ್ರಪಂಚವು ಸ್ಮರಿಸುತ್ತದೆಯೋ ಆ ತಂದೆಯು ಬಂದಿದ್ದಾರೆ, ಇದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಪದೇ-ಪದೇ ತಿಳಿಸಿದ್ದಾರೆ – ಇಲ್ಲಿ ನೀವು ಕುಳಿತುಕೊಳ್ಳುತ್ತೀರೆಂದರೆ ಈ ರೀತಿ ತಿಳಿದುಕೊಳ್ಳಿ – ನಾವಾತ್ಮರಾಗಿದ್ದೇವೆ, ತಂದೆಯು ಪರಮಧಾಮದಿಂದ ಬಂದಿದ್ದಾರೆ, ಕಲ್ಪ-ಕಲ್ಪವೂ ತಮ್ಮ ವಾಯಿದೆಯ ಅನುಸಾರ ಬರುತ್ತಾರೆ. ತಂದೆಯದು ಇದು ಪ್ರತಿಜ್ಞೆಯಾಗಿದೆ – ಯಾವಾಗ ನೀವು ಕರೆಯುತ್ತೀರೋ ಮತ್ತು ಅರ್ಧಕಲ್ಪ ಪೂರ್ಣವಾಗುವುದೋ ಆಗ ನಾನು ಬರಬೇಕಾಗುತ್ತದೆ, ಕಲಿಯುಗದ ನಂತರ ಸತ್ಯಯುಗವಾಗಬೇಕಾಗಿದೆ ಅಂದಮೇಲೆ ನಾನು ಬರಬೇಕಾಗುತ್ತದೆ. ಇದು ಸಂಗಮಯುಗವಾಗಿದೆ. ತಂದೆಯು ಬಂದಿದ್ದಾರೆಂಬುದು ಕೇವಲ ನೀವು ಮಕ್ಕಳಿಗೇ ತಿಳಿದಿದೆ – ನೀವು ಮಕ್ಕಳೂ ಸಹ ಸರ್ವೀಸ್ ಮಾಡುತ್ತೀರಿ, ದಿನ-ಪ್ರತಿದಿನ ಪರಿಚಯ ಕೊಡುತ್ತಾ ಹೋಗುತ್ತೀರಿ. ಎಲ್ಲರಿಗೆ ತಂದೆಯ ಪರಿಚಯ ಸಿಗುತ್ತಾ ಹೋಗುತ್ತದೆ. ಇಲ್ಲಿ ನೀವು ಕುಳಿತಿದ್ದೀರಿ, ನಿಮಗೆ ತಿಳಿದಿದೆ – ಬೇಹದ್ದಿನ ತಂದೆಯಾದ ಶಿವ ತಂದೆಯು ನಮಗೆ ಪುನಃ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನೀವು ಬಾಬಾ, ಬಾಬಾ ಎಂದು ಹೇಳುತ್ತೀರಲ್ಲವೆ. ನಾವು ಶಿವ ತಂದೆಯ ಬಳಿ ಬಂದಿದ್ದೇವೆ, ಶಿವ ತಂದೆಯೂ ಹೇಳುತ್ತಾರೆ – ನಾನು ಕಲ್ಪದ ಹಿಂದಿನ ತರಹ ಸಾಧಾರಣ ತನುವಿನಲ್ಲಿ ಬಂದಿದ್ದೇನೆ, ಇದನ್ನು ಮರೆಯಬಾರದು. ಯಾವ ತಂದೆಯಿಂದ ಪತಿತರಿಂದ ಪಾವನರಾಗುತ್ತೀರೋ ಅಂತಹ ತಂದೆಯ ನೆನಪನ್ನೇ ಮಾಯೆಯು ಮರೆಸಿ ಬಿಡುತ್ತದೆ. ನಿಮಗೆ ತಿಳಿದಿದೆ – ಸರ್ವರ ಸದ್ಗತಿದಾತನು ಒಬ್ಬರೇ ಸದ್ಗುರುವಾಗಿದ್ದಾರೆ, ಸಿಖ್ಖರೂ ಸಹ ಸತ್ ಶ್ರೀ ಅಕಾಲ್ ಎಂದು ಹಾಡುತ್ತಾರೆ. ಪತಿತ-ಪಾವನನಿಗೇ ಸದ್ಗುರುವೆಂದು ಹೇಳಲಾಗುತ್ತದೆ. ಹೇ ಪತಿತ-ಪಾವನ ಎಂದು ಕರೆಯುತ್ತಾರೆ, ಆತ್ಮವೇ ಕರೆಯುತ್ತದೆ. ನಾವು ಸನ್ಮುಖದಲ್ಲಿ ತಂದೆಯೊಂದಿಗೆ ಮಿಲನ ಮಾಡಲು ಬಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ದೊಡ್ಡ-ದೊಡ್ಡ ವ್ಯಕ್ತಿಗಳು ಒಬ್ಬರು ಇನ್ನೊಬ್ಬರನ್ನು ಮಿಲನ ಮಾಡಲು ಹೋಗುತ್ತಾರೆಂದರೆ ಅವರಿಗೆ ಎಷ್ಟು ಮಹಿಮೆಯಾಗುತ್ತದೆ! ಬಹಳ ವಿಜೃಂಭಣೆಯಿಂದ ಖುಷಿಯ ವಾದ್ಯಗಳನ್ನು ಮೊಳಗಿಸುತ್ತಾರೆ ಆದರೆ ಇಲ್ಲಿ ಗುಪ್ತ ವೇಷದಲ್ಲಿ ಯಾರು ಬಂದಿದ್ದಾರೆಂಬುದನ್ನು ಕೇವಲ ನೀವೇ ತಿಳಿದಿದ್ದೀರಿ. ಅವರಿಗೆ ದೂರ ದೇಶದ ಯಾತ್ರಿಕನೆಂದು ಕರೆಯಲಾಗುತ್ತದೆ.

ನಾವಾತ್ಮರು ಪರಮಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿ ಯಾತ್ರಿಕರಾಗಿ ಪಾತ್ರವನ್ನು ಅಭಿನಯಿಸಲು ಬಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಯಾವ ಒಂದೊಂದು ಶಬ್ಧವನ್ನು ತಂದೆಯು ತಿಳಿಸುತ್ತಾರೆಯೋ ಅದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ನೀವೀಗ ತಂದೆಯಿಂದ ಕೇಳಿಸಿಕೊಳ್ಳುತ್ತಿದ್ದೀರಿ ಅಂದಮೇಲೆ ಅದನ್ನು ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ – ನೀವೆಲ್ಲರೂ ಈ ಕರ್ಮ ಕ್ಷೇತ್ರದಲ್ಲಿ ಯಾತ್ರಿಕರಾಗಿದ್ದೀರಿ, ನಿಮಗೆ ತಿಳಿದಿದೆ – ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಈ ಸಾಕಾರ ಪ್ರಪಂಚದಲ್ಲಿ ಶಬ್ಧದಲ್ಲಿ ಬರುತ್ತೇವೆ, ನಾವು ಶಾಂತಿಧಾಮದ ಯಾತ್ರಿಕರಾಗಿದ್ದೇವೆ, ಇಲ್ಲಿ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತೇವೆ. ಕೊನೆಗೂ ಇದು ಅಂತಿಮ ಸಮಯವಾಗಿದೆ ಆದ್ದರಿಂದ ಹಳೆಯ ಸೃಷ್ಟಿಯನ್ನು ಹೊಸದನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ, ಈ ಚಿತ್ರವು ಸ್ಪಷ್ಟವಾಗಿದೆ. ಕೃಷ್ಣನ ಮೂಲಕ, ವಿಷ್ಣುವಿನ ಮೂಲಕ ಸ್ಥಾಪನೆ ಮಾಡುವುದಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ಸ್ವರ್ಗವನ್ನು ರಚಿಸುವುದಕ್ಕಾಗಿಯೇ ಬರುತ್ತಾರೆ. ತಂದೆಯು ಸಾಧಾರಣ ತನುವಿನಲ್ಲಿ ಬಂದಿದ್ದಾರೆ, ಇದು ಪತಿತ ಪ್ರಪಂಚವಾಗಿದೆ, ಯಾರೊಬ್ಬರೂ ಪಾವನರಿಲ್ಲ. ಮೊದಲ ನಂಬರಿನ ಲಕ್ಷ್ಮೀ-ನಾರಾಯಣರೂ ಸಹ ಪತಿತರಾಗುತ್ತಾರೆ. ಯಾರು ಪಾವನರಾಗಿದ್ದರೋ ಅವರು ಇಡೀ ವಂಶಾವಳಿ ಸಹಿತವಾಗಿ ಎಲ್ಲರೂ ಸಹ ಪತಿತರಾಗಿದ್ದಾರೆ. ನಾವು ಯಾರು ದೇವಿ-ದೇವತಾ ಧರ್ಮದವರಾಗಿದ್ದೆವೋ ಅವರು ಈಗ ಶೂದ್ರ ಧರ್ಮದವರಾಗಿ ಬಿಟ್ಟಿದ್ದೇವೆ. ಭಲೆ ಅಮೇರಿಕಾ ಮುಂತಾದ ದೇಶಗಳಲ್ಲಿ ದೊಡ್ಡ-ದೊಡ್ಡ ಸಾಹುಕಾರರಿದ್ದಾರೆ ಆದರೆ ಸತ್ಯಯುಗದ ಮುಂದೆ ಅಮೇರಿಕಾ ಏನೇನೂ ಇಲ್ಲ. ಇವೆಲ್ಲವೂ ಕೊನೆಯಲ್ಲಿಯೇ ಆಗಿವೆ, ಇದು ಅಲ್ಪಕಾಲದ ಆಡಂಭರವಾಗಿದೆ. ವಿನಾಶವಂತೂ ಆಗಲೇಬೇಕಾಗಿದೆ, ನೀವು ಮಕ್ಕಳಿಗೆ ಬಹಳ ನಶೆಯಿರಬೇಕು – ಯಾವ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ನಾವು ಮಕ್ಕಳು ನೆನಪು ಮಾಡದೇ ಇರುವುದು ಎಷ್ಟು ಆಶ್ಚರ್ಯಜನಕ ಮಾತಾಗಿದೆ! ಮಾಯೆಯು ನೆನಪು ಮಾಡಲು ಬಿಡುವುದಿಲ್ಲ, ಬಾಬಾ ಮಾಯೆಯು ನಮ್ಮನ್ನು ನೆನಪು ಮಾಡಲು ಬಿಡುವುದಿಲ್ಲವೆಂದು ನೀವು ಹೇಳುತ್ತೀರಿ. ಅರೆ! ಯಾವ ತಂದೆಯು 21 ಜನ್ಮಗಳಿಗಾಗಿ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೇ ನೀವು ನೆನಪು ಮಾಡಲು ಸಾಧ್ಯವಿಲ್ಲವೇ? ಪ್ರಜೆಗಳೂ ಸಹ ಸ್ವರ್ಗದ ಮಾಲೀಕರಾಗುತ್ತಾರಲ್ಲವೆ, ಎಲ್ಲರೂ ಸುಖಿಯಾಗಿರುತ್ತಾರೆ. ಈಗಂತೂ ಎಲ್ಲರೂ ದುಃಖಿಗಳಾಗಿದ್ದಾರೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಮೊದಲಾದವರಿಗಂತೂ ಹಗಲು-ರಾತ್ರಿ ಚಿಂತೆಯಿರುತ್ತದೆ, ಯುದ್ಧ ಇತ್ಯಾದಿಗಳಲ್ಲಿ ಎಷ್ಟೊಂದು ಮಂದಿ ಸಾಯುತ್ತಿರುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಮಹಾಭಾರತ ಯುದ್ಧವು ಪ್ರಸಿದ್ಧವಾಗಿದೆ ಆದರೆ ಅದರಲ್ಲಿ ಏನಾಗಿತ್ತು ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆಯು ನಿಮಗೆ ಬುದ್ಧಿಯಲ್ಲಿ ಕೂರಿಸಿದ್ದಾರೆ. ಮಹಾಭಾರತ ಯುದ್ಧದಲ್ಲಿ ಎಷ್ಟೊಂದು ಮಂದಿ ಮರಣ ಹೊಂದಿದರು! ಎಷ್ಟು ದೊಡ್ಡ ಮನುಷ್ಯ ಸೃಷ್ಟಿಯಾಗಿದೆ! ಆತ್ಮಗಳದೂ ವೃಕ್ಷವಿದೆ. ವೃಕ್ಷವು ಮೊದಲು ಹೊಸದಾಗಿರುತ್ತದೆ ಮತ್ತು ಬಹಳ ಚಿಕ್ಕದಾಗಿರುತ್ತದೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ನಿಮಗೆ ತಿಳಿದಿದೆ – ಮೊದಲು ದೇವತಾ ಧರ್ಮವಿದ್ದಾಗ ಎಷ್ಟು ಚಿಕ್ಕ ವೃಕ್ಷವಾಗಿತ್ತು, ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಈಗ ಎಷ್ಟೊಂದು ವಿಭಿನ್ನ ಧರ್ಮಗಳಿವೆ! ಈ ಮಹಾಭಾರತ ಯುದ್ಧದ ಮೂಲಕ ಇವೆಲ್ಲದರ ವಿನಾಶವಾಗುವುದು ಆದರೆ ಈ ಜ್ಞಾನವು ಯಾರಲ್ಲಿಯೂ ಇಲ್ಲ. ಇದು ಅದೇ ಮಹಾಭಾರತ ಯುದ್ಧವಾಗಿದೆ ಎಂದು ಭಲೆ ಹೇಳುತ್ತಾರೆ ಆದರೆ ಇದರಿಂದ ಏನಾಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ನೀವೀಗ ಬೆಳಕಿನಲ್ಲಿದ್ದೀರಿ, ನಿಮಗೆ ತಿಳಿದಿದೆ – ಈಗ ವಿನಾಶವಾಗುವುದು ಆದ್ದರಿಂದ ಮಹಾಭಾರತ ಯುದ್ಧಕ್ಕೆ ಮೊದಲೇ ನಮ್ಮ ಆಸ್ತಿಯನ್ನು ತೆಗೆದುಕೊಳ್ಳಬೇಕು. ಮಾತು ಬಹಳ ಸಹಜವಾಗಿದೆ, ಪವಿತ್ರರಾಗಿ ಮತ್ತು ತಂದೆಯನ್ನು ನೆನಪು ಮಾಡಿ. ಅನೇಕ ಕನ್ಯೆಯರ ಮೇಲೆ ಅತ್ಯಾಚಾರಗಳಾಗುತ್ತವೆ. ಒಬ್ಬರು ಇನ್ನೊಬ್ಬರನ್ನು ರಕ್ಷಣೆ ಮಾಡಲು ನೀವು ಮಾತೆಯರ ಸಂಘಟನೆ ಇರಬೇಕು ಆದರೆ ಅವಶ್ಯವಾಗಿ ಆತ್ಮಾಭಿಮಾನಿ ಆಗಬೇಕಾಗಿದೆ. ನಾವು ಖಂಡಿತ ಪಾವನರಾಗಬೇಕೆಂಬ ಪಕ್ಕಾ ನಶೆಯಿರಬೇಕು, ಈ ನಶೆಯಲ್ಲಿ ಇರುವವರೇ ತಿಳಿಸಬಲ್ಲರು. ನಾವು ತಂದೆಯನ್ನು ನೆನಪು ಮಾಡಬೇಕು, ಪವಿತ್ರರಾಗಬೇಕಾಗಿದೆ. ನಾವು ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ ಎಂಬ ನಶೆಯಂತೂ ಇರಬೇಕು. ನಾವು ರಚಯಿತ ತಂದೆ ಮತ್ತು ರಚನೆಯ ಚಕ್ರವನ್ನು ಅರಿತುಕೊಂಡಿದ್ದೇವೆ, ನಾವೀಗ ತಂದೆಯಿಂದ ಹೊಸ ಪ್ರಪಂಚ ಸತ್ಯಯುಗದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ತಿಳಿಸುತ್ತಾ ಇರಿ. ತಂದೆಯು ಹೇಳುತ್ತಾರೆ – ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ನಷ್ಟವಾಗುತ್ತವೆ, ಪಾವನರಂತೂ ಅವಶ್ಯವಾಗಿ ಆಗಬೇಕಾಗಿದೆ. ಪಾವನರು ಎಂದರೆ ಪವಿತ್ರರು. ಕಾಮ ಮಹಾಶತ್ರುವಾಗಿದೆ, ನಾವು 84 ಜನ್ಮಗಳ ಚಕ್ರವನ್ನು ಪೂರ್ಣಗೊಳಿಸಿದೆವು, ಈಗ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನೀವಿಲ್ಲಿ ರಿಫ್ರೆಶ್ ಆಗುವುದಕ್ಕಾಗಿ ಬರುತ್ತೀರಿ. ತಂದೆಯಾದ ನನ್ನನ್ನು ನೆನಪು ಮಾಡಿರಿ, ನನ್ನಿಂದ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾರಲ್ಲಿಯೂ ಮೋಹದ ಸೆಳೆತವಿರಬಾರದು, ನಷ್ಟಮೋಹಿಗಳಾಗಬೇಕಾಗಿದೆ. ಈ ಶರೀರದಲ್ಲಿಯೂ ವ್ಯಾಮೋಹವಿರಬಾರದು, ಇದಂತೂ ಹಳೆಯ ಚರ್ಮವಾಗಿದೆ, ಆದರೆ ಈ ಶರೀರದ ಮೂಲಕವೇ ವಿದ್ಯೆಯನ್ನು ಓದಬೇಕಾಗಿದೆ ಆದ್ದರಿಂದ ಇದನ್ನೂ ಸಂಭಾಲನೆ ಮಾಡಬೇಕಾಗಿದೆ. ಖಾಯಿಲೆಯಾದಾಗ ಇದಕ್ಕೆ ತೇಪೆಯನ್ನು ಹಾಕಬೇಕಾಗುತ್ತದೆ ಏಕೆಂದರೆ ನಿಮಗೆ ತಿಳಿದಿದೆ – ಇದು ಬಹಳ ಹಳೆಯ ಶರೀರವಾಗಿದೆ, ಇದಕ್ಕೆ ಏನಾದರೊಂದು ಆಗುತ್ತಲೇ ಇರುತ್ತದೆ. ಆತ್ಮಕ್ಕೇ ದುಃಖವಾಗುತ್ತದೆ, ನಿಮಗೆ ತಿಳಿದಿದೆ – ಈಗಂತೂ ಈ ಶರೀರವನ್ನು ಬಿಡಬೇಕಾಗಿದೆ, ಯೋಗಬಲದಿಂದ ಇದನ್ನು ತಣಿಸಬೇಕಾಗಿದೆ. ತಂದೆಯನ್ನು ನೆನಪು ಮಾಡುತ್ತಾ ಇರಬೇಕಾಗಿದೆ, ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಸಾಕು. ಮತ್ತ್ಯಾವುದೆ ಲೌಕಿಕ ಸಂಬಂಧಗಳೂ ಸಹ ನೆನಪಿಗೆ ಬರಬಾರದು, ನಾನು ದೇಹವಲ್ಲ, ಆತ್ಮನಾಗಿದ್ದೇನೆ. ತಂದೆಯು ತಿಳಿಸುತ್ತಾರೆ – ನಾನು ನೀವಾತ್ಮರಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ, ಆತ್ಮವು ಪವಿತ್ರವಾದರೆ ನಂತರ ಅದಕ್ಕೆ ಒಳ್ಳೆಯ ಶರೀರವೇ ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ – ಈಗ ನಾವಾತ್ಮರು ಪಾವನರಾಗಬೇಕಾಗಿದೆ. ನಾವು ಪಾವನರಿದ್ದಾಗ ಈ ಲಕ್ಷ್ಮೀ-ನಾರಾಯಣರಂತೆ ಇದ್ದೆವು, ಲಕ್ಷ್ಮೀ-ನಾರಾಯಣರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ, ಇಡೀ ಸೂರ್ಯವಂಶಿ ರಾಜಧಾನಿಯೇ 84 ಜನ್ಮ ತೆಗೆದುಕೊಂಡಿದ್ದಾರೆ. ಚಂದ್ರವಂಶಿಯರಿಗೆ 84 ಜನ್ಮಗಳೆಂದು ಹೇಳುವುದಿಲ್ಲ, ಯಾರು ಸೂರ್ಯವಂಶಿಯರಲ್ಲಿ ಮೊಟ್ಟ ಮೊದಲು ದಾಸ-ದಾಸಿಯರಾಗುವರೋ ಅವರು ತ್ರೇತಾದಲ್ಲಿ ಬಂದನಂತರ ಸ್ವಲ್ಪ ಪದವಿಯನ್ನು ಪಡೆಯುತ್ತಾರೆ, ಅವರದು 84 ಜನ್ಮಗಳೆಂದು ಹೇಳಬಹುದು. ರಾಜ-ರಾಣಿ, ಪ್ರಜೆ ಯಾರೆಲ್ಲಾ ದಾಸ-ದಾಸಿ ಮೊದಲಾದವರು ಸೂರ್ಯವಂಶದಲ್ಲಿ ಬರುವರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳಬೇಕು. ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ವಿಚಾರ ಸಾಗರ ಮಂಥನ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ. ನಡೆಯುತ್ತಾ-ತಿರುಗಾಡುತ್ತಾ ಈ ರೀತಿ ತಿಳಿದುಕೊಳ್ಳಿ – ನಾವು ತಂದೆಯ ಮಕ್ಕಳಾಗಿದ್ದೇವೆ. ಯಾರಾದರೂ ಸಿಗಲಿ ಅವರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಈ ಚಿತ್ರಗಳಲ್ಲಿ ಸಂಪೂರ್ಣ ಜ್ಞಾನವಿದೆ, ಎಲ್ಲವನ್ನೂ ತಿಳಿಸಬೇಕಾಗಿದೆ. ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಲ್ಲವೆ. ನಾವು ಬಿ.ಕೆ.ಗಳನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ತಮ್ಮ-ತಮ್ಮ ಕಾರ್ಡನ್ನೂ ಸಹ ತೋರಿಸಿ. ಎಲ್ಲಿಯಾದರೂ ಕಛೇರಿ ಇತ್ಯಾದಿಗಳಲ್ಲಿ ಕಾರ್ಡನ್ನು ತೋರಿಸಿದರೂ ಸಹ ಈ ಬಿ.ಕೆ.ಗಳು ಯಾರೆಂಬುದು ಅವರಿಗೆ ಅರ್ಥವಾಗುವುದಿಲ್ಲ, ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ. ಸರ್ಕಾರಕ್ಕೂ ಸಹ ಇದನ್ನು ತಿಳಿಸಬೇಕಾಗಿದೆ – ನಮ್ಮದು ಇದು ಪರಿವಾರವಾಗಿದೆ, ದಾದಾ ಮತ್ತು ತಂದೆಯಿದ್ದಾರೆ. ದಾದಾರವರ ಮೂಲಕ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಇದನ್ನು ನೆನಪಿಟ್ಟುಕೊಂಡು ಖುಷಿಯಲ್ಲಿರಬೇಕು. ಆಸ್ತಿಯೆಲ್ಲವೂ ತಾತನದಾಗಿದೆ. ತಾತನ ಆಸ್ತಿಯ ಮೇಲೆ ಮೊಮ್ಮಕ್ಕಳಿಗೆ ಅಧಿಕಾರವಿರುತ್ತದೆ. ಪೂರ್ಣ ಭಾಗವನ್ನು ಹಂಚಿಕೊಳ್ಳುತ್ತಾರೆ.

ನೀವೂ ಸಹ ತಿಳಿದುಕೊಂಡಿದ್ದೀರಿ – ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಇದನ್ನು ನೆನಪಿಟ್ಟುಕೊಳ್ಳಬೇಕು. ಓದಬೇಕು ಮತ್ತು ಓದಿಸಲೂಬೇಕಾಗಿದೆ. ಮಕ್ಕಳ ಪಾಲನೆ ಮಾಡುವುದು ತಂದೆಯ ಕರ್ತವ್ಯವಾಗಿದೆ. ಎಲ್ಲಿಯವರೆಗೆ ಕುಮಾರ-ಕುಮಾರಿಯರು ಪ್ರೌಢಾವಸ್ಥೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ತಂದೆಯು ಅವರ ಸಂಭಾಲನೆ ಮಾಡಬೇಕಾಗಿದೆ. ಓದುವುದು ಮಕ್ಕಳ ಕೆಲಸವಾಗಿದೆ. ತಮ್ಮ ಕಾಲಿನ ಮೇಲೆ ನಿಂತುಕೊಳ್ಳುವುದಕ್ಕಾಗಿ ಓದುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ತಂದೆಯು 21 ಜನ್ಮಗಳಿಗಾಗಿ ನಮಗೆ ಓದಿಸುತ್ತಿದ್ದಾರೆ ನಂತರ ನಾವು ನಮ್ಮ ಕಾಲಿನ ಮೇಲೆ ನಿಂತುಕೊಳ್ಳುತ್ತೇವೆ. ಎಷ್ಟು ಓದುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ನೀವು ಸ್ವಯಂ ಹೇಳುತ್ತೀರಿ – ನಾವಿಲ್ಲಿ ಶ್ರೀ ಲಕ್ಷ್ಮೀ ಹಾಗೂ ಶ್ರೀ ನಾರಾಯಣರಾಗಲು ಬರುತ್ತೇವೆ, ಇದು ಸತ್ಯ ನಾರಾಯಣನ ಕಥೆಯಲ್ಲವೆ. ಈ ಲಕ್ಷ್ಮೀ-ನಾರಾಯಣರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಯಾರಿಗೂ ತಿಳಿದಿಲ್ಲ. ರಾಧೆಯ ಭಕ್ತರಾಗಿದ್ದರೆ ರಾಧೆಯು ಎಲ್ಲೆಲ್ಲಿಯೂ ಇದ್ದಾರೆ ಎಂದು ಹೇಳುತ್ತಾರೆ, ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ, ಕೃಷ್ಣನೇ ಕೃಷ್ಣನಿದ್ದಾನೆ, ಶಿವನೇ ಶಿವನಿದ್ದಾರೆ ಎಂದು ಹೇಳಿ ಗಡಿಬಿಡಿ ಮಾಡಿಬಿಟ್ಟಿದ್ದಾರೆ. ಈಶ್ವರ, ರಾಧೆ, ಕೃಷ್ಣ ಎಲ್ಲರೂ ಸರ್ವವ್ಯಾಪಿಯಾಗಿದ್ದಾರೆ, ಎಲ್ಲವೂ ಈಶ್ವರನ ರೂಪವಾಗಿದೆ. ಭಗವಂತನೇ ಈ ರೂಪಗಳನ್ನು ಧಾರಣೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಎಲ್ಲಿ ನೋಡಿದರಲ್ಲಿ ನೀನೇ ನೀನು…. ಹೀಗೆ ಹೇಳುತ್ತಾ ಎಷ್ಟು ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ಇದು ವಿಕಾರಿ ಪತಿತ ಪ್ರಪಂಚವಾಗಿದೆ. ಸತ್ಯಯುಗವು ನಿರ್ವಿಕಾರಿ ಪಾವನ ಪ್ರಪಂಚವಾಗಿರುತ್ತದೆ. ನಿರ್ವಿಕಾರಿ ಪ್ರಪಂಚದ ಅರ್ಥವೇ ಆಗಿದೆ- ಸ್ವರ್ಗ. ಅಲ್ಲಿಯೂ ಮಕ್ಕಳಿದ್ದರಲ್ಲವೆ. ಅವರು ಹೇಗೆ ಜನಿಸುತ್ತಾರೆ ಎಂದು ಕೇಳುತ್ತಾರೆ. ಕೇವಲ ಇದೇ ಪ್ರಶ್ನೆಯನ್ನು ಕೇಳುತ್ತಾರೆ. ಮಕ್ಕಳಾಗದಿದ್ದರೆ ಸೃಷ್ಟಿಯು ಹೇಗೆ ವೃದ್ಧಿಯಾಗುವುದು ಎಂದು ಕೇಳುತ್ತಾರೆ. ಪ್ರತಿವರ್ಷದ ಜನಗಣತಿಯನ್ನು ತೆಗೆಯುತ್ತಾರೆ – ಜನಸಂಖ್ಯೆಯು ಎಷ್ಟು ಹೆಚ್ಚಾಯಿತು ಎಂದು ಆದರೆ ಇಷ್ಟು ಮಂದಿ ಸತ್ತರೆಂದು ತಿಳಿಸುವುದಿಲ್ಲ ಅಂದಾಗ ನೀವು ಮಕ್ಕಳು ಮೊದಲು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ಮೊದಲು ನಾನಾತ್ಮನಾಗಿದ್ದೇನೆ ಎಂಬ ನಿಶ್ಚಯ ಮಾಡಿಕೊಳ್ಳಿ ಜೊತೆಗೆ ತಂದೆಯನ್ನು ನೆನಪು ಮಾಡಬೇಕಾಗಿದೆ. ಅಂತ್ಯಕಾಲದಲ್ಲಿ ಯಾರು ನಾರಾಯಣನನ್ನು ಸ್ಮರಿಸಿದರೋ ಅವರಿಗೆ ಅಂತಹ ಜನ್ಮವೇ ಸಿಕ್ಕಿತು…. ನಾರಾಯಣನನ್ನು ಸ್ಮರಿಸಬೇಕೆಂದು ಈ ಶಬ್ಧವನ್ನು ತಪ್ಪಾಗಿ ಬರೆದಿದ್ದಾರೆ. ಅಂತ್ಯಕಾಲದಲ್ಲಿ ಯಾರು ಶಿವನನ್ನು ಸ್ಮರಿಸಿದರೋ…. ಅದೇ ಚಿಂತೆಯಲ್ಲಿ ಯಾರು ಸತ್ತರೋ ಅವರು ಸ್ವರ್ಗದ ನಾರಾಯಣನಾದರು. ಅಂತ್ಯಕಾಲದಲ್ಲಿ ನಾರಾಯಣನ ಸ್ಮರಣೆಯೆಂದು ಏಕೆ ಹೇಳುತ್ತಾರೆ? ಕೃಷ್ಣನೇ ಜ್ಞಾನವನ್ನು ಕೊಟ್ಟಿದ್ದರೆಂದು ತಿಳಿಯುತ್ತಾರೆ, ಕೃಷ್ಣನನ್ನೇ ನೆನಪು ಮಾಡುತ್ತಾರೆ, ನಾರಾಯಣನ ಬಗ್ಗೆ ಯಾರಿಗೂ ತಿಳಿದಿಲ್ಲ. ಕೃಷ್ಣ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ರಾಧೆಯ ಜಯಂತಿಯೆಲ್ಲಿ? ಕೃಷ್ಣನ ಜನ್ಮವನ್ನು ಆಚರಿಸುತ್ತಾರೆ, ನಾರಾಯಣನದೆಲ್ಲಿ? ವಿಶ್ವದ ಮಹಾರಾಜ-ಮಹಾರಾಣಿ ಲಕ್ಷ್ಮೀ-ನಾರಾಯಣರ ಬಗ್ಗೆ ಯಾರಿಗೂ ತಿಳಿದಿಲ್ಲ. ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಇರಬೇಕಲ್ಲವೆ. ಅವರು ಎಲ್ಲಿ ಹೋದರು? ಬ್ರಾಹ್ಮಣ ದೇವಿ-ದೇವತಾಯ ನಮಃ ಎಂದು ಹೇಳುತ್ತಾರೆ, ಬ್ರಹ್ಮನ ಮುಖವಂಶಾವಳಿ ಇತ್ತಲ್ಲವೆ? ಮಕ್ಕಳು ತಿಳಿದುಕೊಂಡಿದ್ದೀರಿ – ಬ್ರಹ್ಮನ ಮೂಲಕ ಶಿವ ತಂದೆಯು ಬ್ರಾಹ್ಮಣ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಬ್ರಾಹ್ಮಣ ಧರ್ಮವನ್ನು ಬ್ರಹ್ಮನು ರಚಿಸಲಿಲ್ಲ, ಶಿವ ತಂದೆಯು ರಚಿಸಿದ್ದಾರೆ. ಇವರಂತೂ ಈಗ ಬ್ರಹ್ಮನಾಗಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಹಳೆಯ ಶರೀರದಲ್ಲಿರುತ್ತಾ ವಿದ್ಯೆಯನ್ನು ಓದಿ 21 ಜನ್ಮಗಳಿಗಾಗಿ ಸಂಪಾದನೆ ಮಾಡಿಕೊಳ್ಳಬೇಕಾಗಿದೆ, ಆದ್ದರಿಂದ ಇದರ ಸಂಭಾಲನೆ ಮಾಡಬೇಕಾಗಿದೆ ಆದರೆ ಇದರಲ್ಲಿ ವ್ಯಾಮೋಹವಿರಬಾರದು.

2. ಇಂತಹ ಅಭ್ಯಾಸ ಮಾಡಿರಿ – ಅಂತ್ಯಕಾಲದಲ್ಲಿ ಒಬ್ಬ ಶಿವ ತಂದೆಯ ನೆನಪೇ ಇರಲಿ, ಅನ್ಯ ಯಾವುದೇ ಚಿಂತನೆಯಲ್ಲಿ ಹೋಗಬಾರದು, ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಹೇಗೆ ಶಿವ ಶಕ್ತಿ ಕಂಬೈಂಡ್ ಆಗಿದೆ, ಹಾಗೆಯೇ ಪಾಂಡವ ಪತಿ ಮತ್ತು ಪಾಂಡವ ಕಂಬೈಂಡ್ ಆಗಿದ್ದಾರೆ. ಯಾರು ಹೀಗೆ ಕಂಬೈಂಡ್ ರೂಪದಲ್ಲಿ ಇರುತ್ತಾರೆಯೋ ಅವರ ಮುಂದೆ ಬಾಪ್ದಾದಾರವರು ಸಾಕಾರದಲ್ಲಿ ಸರ್ವ ಸಂಬಂಧಗಳಿಂದ ಸನ್ಮುಖದಲ್ಲಿ ಇರುತ್ತಾರೆ. ಈಗ ದಿನ ಕಳೆದಂತೆ ಇನ್ನಷ್ಟು ಅನುಭವ ಮಾಡುವಿರಿ – ಬಾಪ್ದಾದಾರವರು ನನ್ನ ಮುಂದೆಯೇ ಬಂದರು, ಕೈಯನ್ನಿಡಿದರು, ಬುದ್ಧಿಯಿಂದಲ್ಲ ಕಣ್ಣುಗಳಿಂದ ನೋಡಿದೆವು ಎಂಬ ಅನುಭವವಾಗುವುದು. ಆದರೆ ಇದಕ್ಕಾಗಿ ಕೇವಲ “ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ” ಎಂಬ ಪಾಠವು ಪರಿಪಕ್ವವಾಗಿರಲಿ, ಆನಂತರ ಹೇಗೆ ನೆರಳು ಸುತ್ತಾಡುತ್ತಾ ಇರುತ್ತದೆಯೋ ಹಾಗೆಯೇ ಬಾಪ್ದಾದಾರವರ ಕಣ್ಣುಗಳಿಂದ ದೂರವಾಗಲು ಸಾಧ್ಯವಿಲ್ಲ, ಸದಾ ಸನ್ಮುಖದ ಅನುಭೂತಿ ಆಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top