05 July 2021 KANNADA Murli Today | Brahma Kumaris

Read and Listen today’s Gyan Murli in Kannada

July 4, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯ ಸಮಾನ ನೀವು ಸತ್ಯ-ಸತ್ಯವಾದ ಸಂದೇಶ ವಾಹಕರು ಆಗಬೇಕಾಗಿದೆ, ಎಲ್ಲರಿಗೂ ಮನೆಗೆ ಹೋಗುವ ಸಂದೇಶ ಕೊಡಬೇಕಾಗಿದೆ”

ಪ್ರಶ್ನೆ:: -

ಇತ್ತೀಚಿನ ದಿನಗಳಲ್ಲಿ ಮನುಷ್ಯರ ಬುದ್ಧಿಯು ಇಡೀ ದಿನದಲ್ಲಿ ಯಾವುದರಲ್ಲಿ ಮುಳುಗಿರುತ್ತದೆ?

ಉತ್ತರ:-

ಫ್ಯಾಷನ್ ಮಾಡುವುದರಲ್ಲಿಯೇ ಇಡೀ ದಿನ ಮುಳುಗಿರುತ್ತದೆ. ಮನುಷ್ಯರು ಅನ್ಯರನ್ನು ಆಕರ್ಷಣೆ ಮಾಡಲು ಅನೇಕ ಪ್ರಕಾರದ ಫ್ಯಾಷನ್ ಮಾಡುತ್ತಾರೆ. ಈ ಫ್ಯಾಷನ್ಗಳನ್ನು ಚಿತ್ರಗಳಿಂದ ಕಲಿಯುತ್ತಾರೆ, ಪಾರ್ವತಿಯೂ ಸಹ ಇಂತಹ ಫ್ಯಾಷನ್ ಮಾಡುತ್ತಿದ್ದಳು, ಕೇಶ ಶೃಂಗಾರ ಮಾಡುತ್ತಿದ್ದಳು ಎಂದು ತಿಳಿಯುತ್ತಾರೆ. ಈ ಪತಿತ ಪ್ರಪಂಚದಲ್ಲಿ ನೀವು ಮಕ್ಕಳು ಫ್ಯಾಷನ್ ಮಾಡಬಾರದೆಂದು ತಂದೆಯು ತಿಳಿಸುತ್ತಾರೆ. ನಿಮ್ಮನ್ನಂತೂ ಇಂತಹ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತೇನೆ ಎಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ, ಫ್ಯಾಷನ್ ಮಾಡುವ ಅವಶ್ಯಕತೇ ಇಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವೇ ತಂದೆ, ನೀವೇ ತಾಯಿಯಾಗಿದ್ದೀರಿ……….

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಯಾವಾಗ ಮಹಿಮೆಯನ್ನು ಹಾಡುತ್ತೀರೋ ಆಗ ಬುದ್ಧಿಯು ಮೇಲೆ ಹೋಗುತ್ತದೆ. ಆತ್ಮವೇ ತಂದೆಗೆ ಹೇಳುತ್ತದೆ, ನೀನೇ ಅಂಬಿಗ, ಪತಿತ-ಪಾವನ ಅಥವಾ ಸತ್ಯ-ಸತ್ಯವಾದ ಸಂದೇಶ ವಾಹಕರಾಗಿದ್ದೀರಿ. ತಂದೆಯೇ ಬಂದು ಆತ್ಮಗಳಿಗೆ ಸಂದೇಶವನ್ನು ಕೊಡುತ್ತಾರೆ ಮತ್ತು ಸಂದೇಶವಾಹಕ ಅಥವಾ ಪೈಗಂಬರ್ ಎಂದು ಯಾರಿಗೆ ಹೇಳುತ್ತೇವೆ ಅವರು ಚಿಕ್ಕವರು ಅಥವಾ ದೊಡ್ಡವರು ಇರುತ್ತಾರೆ. ವಾಸ್ತವದಲ್ಲಿ ಅವರು ಯಾರೂ ಸಂದೇಶವನ್ನು ಕೊಡುವುದಿಲ್ಲ. ಇದಂತೂ ಅಸತ್ಯ ಮಹಿಮೆಯಾಗಿದೆ. ಒಬ್ಬನ ಹೊರತು ಈ ಮನುಷ್ಯ ಸೃಷ್ಟಿಯಲ್ಲಿ ಯಾರದೂ ಮಹಿಮೆಯಿಲ್ಲವೆಂದು ಮಕ್ಕಳು ತಿಳಿದಿದ್ದೀರಿ. ಎಲ್ಲರಿಗಿಂತ ಹೆಚ್ಚಿನ ಮಹಿಮೆ ಈ ಲಕ್ಷ್ಮೀ-ನಾರಾಯಣರದ್ದಾಗಿದೆ ಏಕೆಂದರೆ ಇವರು ಹೊಸ ಪ್ರಪಂಚದ ಮಾಲೀಕರಾಗಿದ್ದರು, ಅದನ್ನೂ ಸಹ ಭಾರತವಾಸಿಗಳೇ ತಿಳಿದಿದ್ದಾರೆ. ಪ್ರಪಂಚದವರು ಈ ಭಾರತವನ್ನು ಕೇವಲ ಪ್ರಾಚೀನ ದೇಶವೆಂದು ತಿಳಿದಿದ್ದಾರೆ. ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಕೃಷ್ಣನನ್ನೂ ಸಹ ಗಾಡ್ ಎಂದು ಹೇಳಿ ಬಿಡುತ್ತಾರೆ. ಭಾರತವಾಸಿಗಳು ಇವರನ್ನು ಭಗವಾನ್-ಭಗವತಿ ಎಂದು ಹೇಳುತ್ತಾರೆ ಆದರೆ ಈ ಭಗವಾನ್-ಭಗವತಿಯರು ಸತ್ಯಯುಗದಲ್ಲಿ ರಾಜ್ಯ ಮಾಡುತ್ತಿದ್ದರೆಂದು ಯಾರಿಗೂ ಗೊತ್ತಿಲ್ಲ. ಭಗವಂತನೇ ಈ ದೇವಿ-ದೇವತೆಗಳ ರಾಜ್ಯವನ್ನು ಸ್ಥಾಪನೆ ಮಾಡಿದರು. ವಿವೇಕವೂ ಹೇಳುತ್ತದೆ – ನಾವು ಭಗವಂತನ ಮಕ್ಕಳೆಂದ ಮೇಲೆ ನಾವೂ ಸಹ ಭಗವಾನ್-ಭಗವತಿಯಾಗಬೇಕಲ್ಲವೆ. ನಾವೆಲ್ಲರೂ ಒಬ್ಬನ ಮಕ್ಕಳಲ್ಲವೆ! ಆದರೆ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ಇದೆಲ್ಲಾ ಮಾತುಗಳನ್ನು ತಂದೆಯು ಕುಳಿತು ತಿಳಿಸುತ್ತಾರೆ. ಮೊದಲು ನಾವು ಹೊಸ ಪ್ರಪಂಚದಲ್ಲಿದ್ದೆವೆಂದು ಭಾರತವಾಸಿಗಳು ಹೇಳುತ್ತಾರೆ. ಹೊಸ ಪ್ರಪಂಚವನ್ನು ಎಲ್ಲರೂ ಬಯಸುತ್ತಾರೆ. ಬಾಪೂಜಿಯೂ ಸಹ ಹೊಸ ಪ್ರಪಂಚ, ಹೊಸ ರಾಮ ರಾಜ್ಯವನ್ನು ಬಯಸುತ್ತಿದ್ದರು ಆದರೆ ರಾಮ ರಾಜ್ಯದ ಅರ್ಥವನ್ನು ಖಂಡಿತ ತಿಳಿದಿರಲಿಲ್ಲ. ಈಗಿನ ಕಾಲದ ಮನುಷ್ಯರಿಗೆ ತಮ್ಮದೇ ಆದ ಅಹಂಕಾರವು ಎಷ್ಟೊಂದಿದೆ! ಕಲಿಯುಗದಲ್ಲಿ ಎಲ್ಲರೂ ಕಲ್ಲು ಬುದ್ಧಿಯವರು, ಸತ್ಯಯುಗದಲ್ಲಿ ಎಲ್ಲರೂ ಪಾರಸ ಬುದ್ಧಿಯವರಾಗಿರುತ್ತಾರೆ ಆದರೆ ಇದು ಯಾರಿಗೂ ತಿಳಿದಿಲ್ಲ. ಭಾರತವೇ ಸತ್ಯಯುಗದಲ್ಲಿ ಪಾರಸ ಬುದ್ಧಿಯಾಗಿತ್ತು, ಈಗ ಕಲಿಯುಗದಲ್ಲಿ ಕಲ್ಲು ಬುದ್ಧಿಯಾಗಿದೆ. ಮನುಷ್ಯರಂತೂ ಇದನ್ನು ಸ್ವರ್ಗವೆಂದು ತಿಳಿದಿದ್ದಾರೆ. ಸ್ವರ್ಗದಲ್ಲಿ ವಿಮಾನಗಳಿತ್ತು, ದೊಡ್ಡ-ದೊಡ್ಡ ಅರಮನೆಗಳಿತ್ತು, ಅವಲ್ಲವೂ ಈಗ ಇದೆ. ವಿಜ್ಞಾನವು ಎಷ್ಟೊಂದು ವೃದ್ಧಿ ಹೊಂದಿದೆ, ಎಷ್ಟೊಂದು ಸುಖವಿದೆ, ಎಷ್ಟೊಂದು ಫ್ಯಾಷನ್ ಇದೆ. ಬುದ್ಧಿಯು ಇಡೀ ದಿನ ಫ್ಯಾಷನ್ನಿನ ಹಿಂದೆಯೇ ಇರುತ್ತದೆ. ಆರ್ಟಿಫಿಷಿಯಲ್ ಸೌಂದರ್ಯಕ್ಕಾಗಿ ಕೇಶ ಶೃಂಗಾರವನ್ನು ಮಾಡಿಕೊಳ್ಳುತ್ತಾರೆ, ಎಷ್ಟೊಂದು ಖರ್ಚು ಮಾಡುತ್ತಾರೆ! ಇವೆಲ್ಲಾ ಫ್ಯಾಷನ್ ಈ ಚಿತ್ರಗಳಿಂದಲೇ ಬಂದಿದೆ, ಪಾರ್ವತಿಯಂತೆ ನಾವು ಕೇಶ ಶೃಂಗಾರ ಮಾಡಿಕೊಂಡಿದ್ದೇವೆಂದು ತಿಳಿಯುತ್ತಾರೆ. ಇದೆಲ್ಲವನ್ನೂ ಆಕರ್ಷಣೆ ಮಾಡುವುದಕ್ಕಾಗಿಯೇ ಮಾಡಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಪಾರಸಿ ಸ್ತ್ರೀಯರು ಮುಖಕ್ಕೆ ಕಪ್ಪು ಮುಸುಕನ್ನು ಹಾಕಿಕೊಳ್ಳುತ್ತಿದ್ದರು ಏಕೆಂದರೆ ಯಾರಾದರೂ ನೋಡಿ ಆಕರ್ಷಣೆಯಾಗಬಾರದು. ಇದಕ್ಕೆ ವೈಶ್ಯಾಲಯ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ನೀನೇ ತಾಯಿ-ತಂದೆ ಎಂದು ಹಾಡು ಹೇಳುತ್ತಾರೆ ಆದರೆ ತಂದೆ-ತಾಯಿಯೆಂದು ಯಾರಿಗೆ ಹೇಳುತ್ತಾರೆ? ತಂದೆ-ತಾಯಿ ಯಾರಾಗಿದ್ದಾರೆ? ಎಂಬುದನ್ನೂ ತಿಳಿದಿಲ್ಲ. ತಂದೆ-ತಾಯಿಯು ಅವಶ್ಯವಾಗಿ ಆಸ್ತಿಯನ್ನು ಕೊಟ್ಟಿರಬೇಕಲ್ಲವೆ. ತಂದೆಯಂತೂ ನೀವು ಮಕ್ಕಳಿಗೆ ಸುಖದ ಆಸ್ತಿಯನ್ನು ಕೊಟ್ಟಿದ್ದರು, ಮಕ್ಕಳು ಹೇಳುತ್ತಾರೆ – ಬಾಬಾ, ನಾವಂತೂ ನಿಮ್ಮನ್ನು ಬಿಟ್ಟರೆ ಬೇರೆ ಯಾರಿಂದಲೂ ಕೇಳುವುದಿಲ್ಲ. ಶಿವ ತಂದೆಯ ಮಹಿಮೆಯ ಗಾಯನವಿದೆ ಎಂದು ನೀವು ತಿಳಿದಿದ್ದೀರಿ. ನಾವೇ ಪಾವನರಾಗಿದ್ದೆವು ಈಗ ಪತಿತರಾಗಿದ್ದೇವೆಂದು ಸ್ವಯಂ ಬ್ರಹ್ಮರವರ ಆತ್ಮವು ಹೇಳುತ್ತದೆ. ನಾವು ಬ್ರಹ್ಮಕುಮಾರ-ಕುಮಾರಿಯರು ಸೋ ದೇವಿ-ದೇವತೆಗಳಾಗಿದ್ದವರು ನಂತರ 84 ಜನ್ಮಗಳ ನಂತರ ಅಂತ್ಯದಲ್ಲಿ ಪತಿತರಾಗಿದ್ದೇವೆಂದು ಬ್ರಹ್ಮನ ಮಕ್ಕಳೂ ಸಹ ಹೇಳುತ್ತಾರೆ. ಯಾರು ನಂಬರ್ವನ್ ಪಾವನರಾಗಿದ್ದರೋ ಅವರೇ ಪತಿತರಾಗಿದ್ದಾರೆ. ತಂದೆಯು ಹೇಗೋ ಹಾಗೆಯೇ ಮಕ್ಕಳು ಆಗಿದ್ದಾರೆ. ಶಿವ ತಂದೆಯು ಹೇಳುತ್ತಾರೆ – ನಾನೂ ಸಹ ಇವರ ಅನೇಕ ಜನ್ಮಗಳ ಅಂತ್ಯದಲ್ಲಿ ಬರುತ್ತೇನೆ. ಯಾರು ಮೊದಲ ನಂಬರಿನ ಪೂಜ್ಯ ಲಕ್ಷ್ಮೀ-ನಾರಾಯಣರ ವಂಶದಲ್ಲಿದ್ದರು, ಇದು ಸಂಗಮಯುಗವಾಗಿದೆ. ನೀವು ಕಲಿಯುಗದಲ್ಲಿದ್ದಿರಿ, ಈಗ ಸಂಗಮಯುಗದವರಾಗಿದ್ದೀರಿ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ. ಡ್ರಾಮಾನುಸಾರ ಮಕ್ಕಳು ವೃದ್ಧಿಯನ್ನು ಪಡೆಯುತ್ತಾರೆ. ಈಗ ಮಕ್ಕಳಿಗೆ ಜ್ಞಾನ ದೊರಕುತ್ತದೆ, ನಾವು ದೇವತೆಗಳಾಗಿದ್ದೆವು ನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಇಡೀ ಚಕ್ರವನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ. ನಾವು 84 ಜನ್ಮಗಳನ್ನು ಪಡೆದೆವೆಂಬುದು ಬಹಳ ಸಹಜವಾಗಿದೆ, ಕೆಲವರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುವುದೇ ಇಲ್ಲ. ವಿದ್ಯಾರ್ಥಿಗಳೂ ಸಹ ನಂಬರ್ವಾರಂತೂ ಇರುತ್ತಾರೆ. ಬಲಗಡೆಯಿಂದ ಪ್ರಾರಂಭ ಮಾಡಿ ಫಸ್ಟ್ಕ್ಲಾಸ್, ಸೆಕೆಂಡ್ ಕ್ಲಾಸ್, ಥರ್ಡ್ ಕ್ಲಾಸ… ಸ್ವಯಂ ಮಕ್ಕಳು ನಾವು ಥರ್ಡ್ ಕ್ಲಾಸ್ ಬುದ್ಧಿಯವರೆಂದು ಹೇಳಿಕೊಳ್ಳುತ್ತಾರೆ. ನಾವು ಯಾರಿಗೂ ತಿಳಿಸಲು ಸಾಧ್ಯವಿಲ್ಲ. ಮನಸ್ಸಂತೂ ಅನ್ಯರಿಗೆ ಹೇಳಲು ಬಯಸುತ್ತದೆ ಆದರೆ ಹೇಳಲು ಸಾಧ್ಯವಿಲ್ಲ. ಬಾಬಾ ಏನು ಮಾಡುವುದು? ಇದು ತಮ್ಮ ಕರ್ಮಗಳ ಲೆಕ್ಕಾಚಾರವಾಗಿದೆ. ನಾನಂತೂ ನಿಮಗೆ ಕರ್ಮ-ಅಕರ್ಮ-ವಿಕರ್ಮದ ಜ್ಞಾನವನ್ನು ತಿಳಿಸುತ್ತೇನೆ. ಕರ್ಮ ಮಾಡುವುದನ್ನು ನೀವು ಮಕ್ಕಳು ತಿಳಿದಿದ್ದೀರಿ, ಥರ್ಡ್ ಕ್ಲಾಸ್ ಬುದ್ಧಿಯವರು ಈ ಮಾತನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ, ಇದು ರಾವಣ ರಾಜ್ಯವಾಗಿದೆ ಆದರೆ ಇದು ಯಾರಿಗೂ ತಿಳಿದಿಲ್ಲ. ರಾವಣ ರಾಜ್ಯದಲ್ಲಿ ಮನುಷ್ಯರು ವಿಕರ್ಮಗಳನ್ನೇ ಮಾಡುತ್ತಾರೆಂದರೆ ಕೆಳಗಡೆ ಬೀಳುತ್ತಾರೆ. ದುಃಖದ ಪ್ರಪಂಚದಲ್ಲಿಯೇ ಗುರುಗಳನ್ನು ಮಾಡಿಕೊಳ್ಳುತ್ತಾರೆ, ಗುರುಗಳನ್ನು ಮಾಡಿಕೊಂಡರೆ ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತಾರೆ, ಸದ್ಗತಿಯನ್ನು ಕೊಡುತ್ತಾರೆ ಎಂದು ತಿಳಿಯುತ್ತಾರೆ. ಅದು ನಿರ್ವಾಣಧಾಮವಾಗಿದೆ, ವಾಣಿಯಿಂದ ದೂರವಿರುವ ಸ್ಥಾನವಾಗಿದೆ. ಮನುಷ್ಯರು ತಮ್ಮನ್ನು ವಾನಪ್ರಸ್ಥಿಗಳೆಂದು ಹೇಳುತ್ತಾರೆ. ಇದಂತೂ ಹೇಳುವುದಕ್ಕಾಗಿಯೇ ಇದೆ, ವಾನಪ್ರಸ್ಥಿಗಳ ಸಭೆಯೂ ಇರುತ್ತದೆ. ಎಲ್ಲಾ ಆಸ್ತಿಯನ್ನು ಮಕ್ಕಳಿಗೆ ಕೊಟ್ಟು ಗುರುಗಳ ಬಳಿ ಹೋಗಿ ಕುಳಿತು ಬಿಡುತ್ತಾರೆ. ಆಹಾರ-ಪಾನೀಯಗಂತೂ ಮಕ್ಕಳೇ ಅವಶ್ಯವಾಗಿ ಕೊಡುತ್ತಾರಲ್ಲವೆ ಆದರೆ ವಾನಪ್ರಸ್ಥದ ಅರ್ಥವನ್ನು ಯಾರೂ ತಿಳಿದಿಲ್ಲ. ನಾವು ನಿರ್ವಾಣಧಾಮಕ್ಕೆ ಹೋಗಬೇಕೆಂದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಆ ಮನೆಯನ್ನು ಯಾರೂ ತಿಳಿದುಕೊಂಡಿಲ್ಲ. ಜ್ಯೋತಿ ಜ್ಯೋತಿಯಲ್ಲಿ ಸಮಾವೇಶವಾಗುತ್ತದೆ ಎಂದು ತಿಳಿಯುತ್ತಾರೆ. ನಿರ್ವಾಣ ಧಾಮವು ವಾಸ ಮಾಡುವ ಸ್ಥಾನವಾಗಿದೆ. ಹಿಂದೆ 60 ವರ್ಷಗಳ ನಂತರ ಒಂದು ಕಾಯಿದೆಯ ರೀತಿ ವಾನಪ್ರಸ್ಥವನ್ನು ಸ್ವೀಕರಿಸುತ್ತಿದ್ದರು, ಈಗಲೂ ಇದೇರೀತಿ ಮಾಡುತ್ತಾರೆ. ಯಾರೂ ವಾಣಿಯಿಂದ ದೂರ ಹೋಗಲು ಸಾಧ್ಯವಿಲ್ಲವೆಂದು ಈಗ ನೀವು ತಿಳಿಸಬಹುದು. ಪತಿತ-ಪಾವನ ಬಾ, ಬಂದು ನಮ್ಮನ್ನು ಪಾವನ ಮಾಡಿ ಮನೆಗೆ ಕರೆದುಕೊಂಡು ಹೋಗಿ ಎಂದು ನೀವು ಕರೆಯುತ್ತೀರಿ. ಮುಕ್ತಿಧಾಮವು ಆತ್ಮಗಳ ಮನೆಯಾಗಿದೆ. ಸತ್ಯಯುಗದಲ್ಲಿ ಯಾರು ಇರುತ್ತಾರೆ, ಹೇಗೆ ವೃದ್ಧಿಯಾಗುತ್ತದೆ, ಎಂಬುದೂ ಸಹ ನಿಮಗೆ ತಿಳಿಸಲಾಗಿದೆ. ಜನಸಂಖ್ಯೆಯೂ ಸಹ ತಿಳಿದಿಲ್ಲ, ರಾಮ ರಾಜ್ಯದಲ್ಲಿ ಎಷ್ಟು ಜನಸಂಖ್ಯೆಯಿರುತ್ತದೆ, ಮಕ್ಕಳು ಹೇಗೆ ಜನ್ಮ ಪಡೆಯುತ್ತಾರೆ, ಸ್ವಲ್ಪವೂ ತಿಳಿದಿಲ್ಲ. ಯಾವುದೇ ವಿದ್ವಾನ್, ಆಚಾರ್ಯ, ಪಂಡಿತರು ಯಾರೂ ಈ ಡ್ರಾಮಾದ ಚಕ್ರವನ್ನು ತಿಳಿಸಲು ಸಾಧ್ಯವಿಲ್ಲ. 84 ಲಕ್ಷ ಜನ್ಮಗಳ ಚಕ್ರವು ಹೇಗಾಗಲು ಸಾಧ್ಯ! ಎಷ್ಟೊಂದು ಮಾತುಗಳು ತಪ್ಪಾಗಿವೆ. ಅವಶ್ಯವಾಗಿ ಸೂತ್ರವು ಗಂಟಾಗಿ ಬಿಟ್ಟಿದೆ. ತಂದೆಯು ತಿಳಿಸುವ ಕರ್ಮ-ಅಕರ್ಮ-ವಿಕರ್ಮದ ಪೂರ್ಣ ರಹಸ್ಯವನ್ನು ನೀವೇ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ನಿಮ್ಮ ಕರ್ಮವು ಅಕರ್ಮವಾಗುತ್ತದೆ, ಅಲ್ಲಿ ಯಾವುದೇ ಕೆಟ್ಟ ಕರ್ಮಗಳಾಗುವುದಿಲ್ಲ. ಆದ್ದರಿಂದ ಅಕರ್ಮವಾಗುತ್ತದೆ, ಇಲ್ಲಿ ಮನುಷ್ಯರು ಯಾವುದೇ ಕರ್ಮವನ್ನು ಮಾಡುತ್ತಾರೆಂದರೆ ವಿಕರ್ಮವೇ ಆಗುವುದು. ಇಲ್ಲಿ ಇಡೀ ಪ್ರಪಂಚವು ವಾನಪ್ರಸ್ಥ ಸ್ಥಿತಿಯಲ್ಲಿದೆ, ಈಗ ನಾವು ಎಲ್ಲರೂ ಹಿರಿಯರು-ಕಿರಿಯರು ಎಲ್ಲರಿಗೂ ವಾನಪ್ರಸ್ಥ ಸ್ಥಿತಿಯಾಗಿದೆ. ಎಲ್ಲರೂ ವಾಣಿಯಿಂದ ದೂರ ಹೋಗುವಂತಹವರೇ ಆಗಿದ್ದಾರೆ. ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡು ಎಂದು ಕರೆಯುತ್ತಾರೆ ಆದರೆ ಎಲ್ಲಿಯವರೆಗೆ ಪಾವನ ಪ್ರಪಂಚವು ಆಗುವುದಿಲ್ಲವೋ ಅಲ್ಲಿಯವರೆಗೆ ಈ ಪತಿತ ಪ್ರಪಂಚದಲ್ಲಿ ಪಾವನರು ಇರಲು ಸಾಧ್ಯವಿಲ್ಲ. ಇಲ್ಲಿ ಪತಿತ ಪ್ರಪಂಚವು ಯಾವುದು ಇದೆಯೋ ಅದು ಸಮಾಪ್ತಿಯಾಗಲಿದೆ, ನಾವು ಪುನಃ ಹೊಸ ಪ್ರಪಂಚಕ್ಕೆ ಹೋಗುತ್ತೇವೆ ಎಂದು ತಿಳಿದಿದ್ದೀರಿ. ಹೇಗೆ ಹೋಗುತ್ತೇವೆ ಎಂಬುದು ಪೂರ್ಣ ಜ್ಞಾನವಿದೆ. ಈ ಹೊಸ ಜ್ಞಾನವು ಅಮರಲೋಕ, ಹೊಸ ಪ್ರಪಂಚ ಅಥವಾ ಪಾವನ ಪ್ರಪಂಚಕ್ಕಾಗಿ ಇದೆ. ನೀವು ಈಗ ಸಂಗಮದಲ್ಲಿ ಕುಳಿತಿದ್ದೀರಿ. ಇದನ್ನೂ ತಿಳಿದಿದ್ದೀರಿ – ಬೇರೆಯವರು ಯಾರೇ ಮನುಷ್ಯರಿದ್ದಾರೆ, ಅವರು ಬ್ರಾಹ್ಮಣರಲ್ಲ ಆದರೆ ಅವರೆಲ್ಲರೂ ಕಲಿಯುಗದಲ್ಲಿದ್ದಾರೆ, ನಾವೆಲ್ಲರೂ ಸಂಗಮಯುಗದಲ್ಲಿದ್ದೇವೆ. ಸತ್ಯಯುಗದ ಕಡೆಗೆ ಹೋಗುತ್ತಿದ್ದೇವೆ ಅವಶ್ಯವಾಗಿ ಇದು ಸಂಗಮಯುಗವಾಗಿದೆ. ಅದಂತೂ ಸ್ವರ್ಗವೇ ಆಗಿದೆ. ಅದನ್ನು ಸಂಗಮವೆಂದು ಹೇಳಲು ಸಾಧ್ಯವಿಲ್ಲ. ಸಂಗಮಯುಗವು ಇದಾಗಿದೆ, ಈ ಸಂಗಮಯುಗವು ಎಲ್ಲದಕ್ಕಿಂತ ಚಿಕ್ಕದಾಗಿದೆ, ಇದನ್ನು ಅಧಿಕ ಯುಗವೆಂದು ಹೇಳುತ್ತಾರೆ ಯಾವುದರಲ್ಲಿ ಮನುಷ್ಯರು ಪಾಪಾತ್ಮರಿಂದ ಧರ್ಮಾತ್ಮರಾಗುತ್ತಾರೆ, ಆದ್ದರಿಂದ ಇದನ್ನು ಧರ್ಮಾವು ಯುಗವೆಂದು ಕರೆಯುತ್ತಾರೆ. ಕಲಿಯುಗದಲ್ಲಿ ಎಲ್ಲಾ ಮನುಷ್ಯರು ಅಧರ್ಮಿಗಳಾಗಿದ್ದಾರೆ, ಅಲ್ಲಂತೂ ಎಲ್ಲರೂ ಧರ್ಮಾತ್ಮರೇ ಇರುತ್ತಾರೆ, ಭಕ್ತಿಮಾರ್ಗದ ಪ್ರಭಾವವು ಎಷ್ಟೊಂದು ಇದೆ. ಕಲ್ಲಿನ ಮೂರ್ತಿಗಳನ್ನು ಮಾಡಿ ನೋಡಿ ಖುಷಿಪಡುತ್ತಾರೆ, ಇದು ಕಲ್ಲಿನ ಪೂಜೆಯಾಗಿದೆ. ಶಿವನ ಮಂದಿರಕ್ಕೆ ಬಹಳ ದೂರ-ದೂರದಿಂದ ಹೋಗಿ ಪೂಜೆ ಮಾಡುತ್ತಾರೆ. ಶಿವನ ಚಿತ್ರವನ್ನೂ ಸಹ ಮನೆಯಲ್ಲಿಯೇ ಇಡಬಹುದು ಅಂದಾಗ ಎಷ್ಟೊಂದು ದೂರ ಏಕೆ ಅಲೆಯಬೇಕು? ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ನಿಮ್ಮ ಕಣ್ಣು ಈಗ ತೆರೆದಿದೆ. ಬುದ್ಧಿಯ ದ್ವಾರ ತೆರೆದಿದೆ. ತಂದೆಯು ಜ್ಞಾನವನ್ನು ತಿಳಿಸಿದ್ದಾರೆ, ಪರಮಪಿತ ಪರಮಾತ್ಮನು ಈ ಸೃಷ್ಟಿಯ ಬೀಜ ರೂಪ, ಜ್ಞಾನ ಸಾಗರ, ನಾಲೆಡ್ಜ್ಫುಲ್ ಆಗಿದ್ದಾರೆ. ಆತ್ಮವೂ ಸಹ ಅದೇ ಜ್ಞಾನವನ್ನು ಧಾರಣೆ ಮಾಡುತ್ತದೆ. ಆತ್ಮವೂ ಸಹ ಪ್ರೆಸಿಡೆಂಟ್ ಇತ್ಯಾದಿಯಾಗುತ್ತದೆ, ಮನುಷ್ಯನು ದೇಹಾಭಿಮಾನಿಯಾಗುವ ಕಾರಣ ದೇಹದ ಮಹಿಮೆಯನ್ನೇ ಮಾಡುತ್ತಾ ಇರುತ್ತಾನೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆ ಎಂಬುದು ನೀವೀಗ ತಿಳಿದಿದ್ದೀರಿ. ನೀವು ಆತ್ಮರು 84 ಜನ್ಮಗಳ ಚಕ್ರವನ್ನು ಸುತ್ತಾಡಿ ಅವಶ್ಯವಾಗಿ ದುರ್ಗತಿಯನ್ನು ಪಡೆದಿದ್ದೀರಿ. ಈಗ ನಾವಾತ್ಮರು ತಂದೆಯನ್ನು ತಿಳಿದುಕೊಂಡಿದ್ದೇವೆ, ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಆತ್ಮವು ಶರೀರ ಧಾರಣೆ ಮಾಡಲೇಬೇಕಾಗಿದೆ. ಶರೀರದ ಹೊರತು ಆತ್ಮಗಳು ಕೇಳುವುದು, ಮಾತನಾಡುವುದು ಹೇಗೆ ಸಾಧ್ಯ? ನಾನು ನಿರಾಕಾರನಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ನಾನು ಶರೀರದ ಆಧಾರವನ್ನು ತೆಗೆದುಕೊಳ್ಳುತ್ತೇನೆ, ಶಿವ ತಂದೆಯು ಈ ಬ್ರಹ್ಮಾರವರ ಶರೀರದ ಮೂಲಕ ನಮಗೆ ತಿಳಿಸುತ್ತಾರೆಂದು ನೀವು ತಿಳಿದಿದ್ದೀರಿ. ಈ ಮಾತುಗಳನ್ನು ಬ್ರಹ್ಮಾಕುಮಾರ-ಕುಮಾರಿಯರಾದ ನೀವೇ ತಿಳಿದಿದ್ದೀರಿ. ನಿಮಗೆ ಈಗ ಜ್ಞಾನವು ಸಿಗುತ್ತಿದೆ, ಬ್ರಹ್ಮನ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ, ಆ ತಂದೆಯೇ ರಾಜಯೋಗವನ್ನು ಕಲಿಸುತ್ತಿದ್ದಾರೆ ಇದರಲ್ಲಿ ತಬ್ಬಿಬ್ಬಾಗುವ ಮಾತೇನೂ ಇಲ್ಲ. ಶಿವ ತಂದೆಯು ನಮಗೆ ತಿಳಿಸುತ್ತಿದ್ದಾರೆ ಮತ್ತೆ ಅನ್ಯರಿಗೆ ನಾವು ತಿಳಿಸುತ್ತಿದ್ದೇವೆ. ನಮಗೆ ತಿಳಿಸುವವರು ಒಬ್ಬರೇ ಶಿವ ತಂದೆಯಾಗಿದ್ದಾರೆ. ನಾವೀಗ ಪತಿತರಿಂದ ಪಾವನರಾಗುತ್ತಿದ್ದೇವೆಂದು ನೀವೀಗ ಹೇಳುತ್ತೀರಿ, ಇದು ಪತಿತ ಪ್ರಪಂಚವಾಗಿದೆ, ರಾವಣ ರಾಜ್ಯವಲ್ಲವೆ ಎಂದು ತಂದೆಯು ತಿಳಿಸುತ್ತಾರೆ. ರಾವಣನು ಪಾಪಾತ್ಮರನ್ನಾಗಿ ಮಾಡುತ್ತಾನೆ, ಇದು ಬೇರೆ ಯಾರಿಗೂ ತಿಳಿದಿಲ್ಲ. ಭಲೆ ರಾವಣನ ಗೊಂಬೆಯನ್ನು ಮಾಡಿ ಸುಡುತ್ತಾರೆ ಆದರೆ ಸ್ವಲ್ಪವೂ ತಿಳಿದಿಲ್ಲ. ಸೀತೆಯನ್ನು ರಾವಣನು ಅಪಹರಿಸಿದನು, ಇದು ಮಾಡಿದನು, ಅದು ಮಾಡಿದನು… ಎಂದು ಎಷ್ಟೊಂದು ಕಥೆಗಳನ್ನು ಬರೆದಿದ್ದಾರೆ. ಕುಳಿತು ಕೇಳಿ ಅಳುತ್ತಾರೆ, ಎಲ್ಲವೂ ದಂತ ಕಥೆಗಳಾಗಿವೆ. ತಂದೆಯು ನಮ್ಮನ್ನು ವಿಕರ್ಮಾಜೀತರನ್ನಾಗಿ ಮಾಡಲು ತಿಳಿಸುತ್ತಾರೆ. ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಬುದ್ಧಿಯನ್ನು ಎಲ್ಲಿಯೂ ಇಡಬಾರದು, ಶಿವ ತಂದೆಯು ನಮಗೆ ತನ್ನ ಪರಿಚಯವನ್ನು ಕೊಟ್ಟಿದ್ದಾರೆ, ಪತಿತ-ಪಾವನ ತಂದೆಯು ಬಂದು ತನ್ನ ಪರಿಚಯ ಕೊಡುತ್ತಾರೆ. ಈಗ ನೀವು ಎಷ್ಟು ಒಳ್ಳೆಯ ಮಧುರ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ತಿಳಿದಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿದು ಶ್ರೇಷ್ಠ ಕರ್ಮವನ್ನು ಮಾಡಬೇಕು, ಜ್ಞಾನ ದಾನ ಮಾಡಿ ಧರ್ಮಾತ್ಮರಾಗಬೇಕು.

2. ಇದು ವಾನಪ್ರಸ್ಥ ಸ್ಥಿತಿಯಾಗಿದೆ. ಈ ಅಂತಿಮ ಗಳಿಗೆಯಲ್ಲಿ ಪಾವನರಾಗಿ, ಪಾವನ ಪ್ರಪಂಚಕ್ಕೆ ಹೋಗಬೇಕಾಗಿದೆ. ಪಾವನರಾಗುವ ಸಂದೇಶವನ್ನು ಎಲ್ಲರಿಗೂ ಕೊಡಬೇಕು.

ವರದಾನ:-

ಯಾವ ಮಕ್ಕಳು ಮಾಸ್ಟರ್ ಜ್ಞಾನಪೂರ್ಣರಾಗಿದ್ದಾರೆ, ಅವರೆಂದಿಗೂ ಗಾಬರಿಯಾಗುವ ನೃತ್ಯವನ್ನು ಮಾಡಲು ಸಾಧ್ಯವಿಲ್ಲ. ಸೆಕೆಂಡಿನಲ್ಲಿ ಏಣಿಯನ್ನಿಳಿಯುವುದು, ಸೆಕೆಂಡಿನಲ್ಲಿ ಹತ್ತುವ ಸಂಸ್ಕಾರವನ್ನೀಗ ಪರಿವರ್ತನೆ ಮಾಡಿಕೊಳ್ಳುತ್ತೀರೆಂದರೆ ತೀವ್ರ ಗತಿಯಲ್ಲಿ ಹೋಗುವಿರಿ. ಇದಕ್ಕಾಗಿ ಕೇವಲ ಸಿಕ್ಕಿರುವ ಅಧಿಕಾರ, ಜ್ಞಾನ, ಪರಿವಾರದ ಸಹಯೋಗವನ್ನು ಉಪಯೋಗ ಮಾಡಿರಿ, ತಂದೆಯ ಕೈಯಲ್ಲಿ(ಶ್ರೀ ಮತ) ಕೈ ಕೊಟ್ಟು ನಡೆಯುತ್ತೀರೆಂದರೆ, ಖುಷಿಯ ನೃತ್ಯವನ್ನು ಮಾಡುತ್ತಾ ಇರುತ್ತೀರಿ. ಗಾಬರಿಯಾಗುವ ನೃತ್ಯವಾಗಲು ಸಾಧ್ಯವಿಲ್ಲ ಆದರೆ ಯಾವಾಗ ಮಾಯೆಯ ಕೈಯನ್ನು(ಮನ ಮತ, ಪರ ಮತ) ಹಿಡಿಯುವಿರೆಂದರೆ ಅದೇ (ಗಾಬರಿಯಾಗುವ) ನೃತ್ಯವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top