03 July 2021 KANNADA Murli Today | Brahma Kumaris
Read and Listen today’s Gyan Murli in Kannada
2 July 2021
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಈಗ ನೀವು ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ, ದುಃಖದ ದಿನಗಳು ಸಮಾಪ್ತಿಯಾಗುತ್ತಾ ಇದೆ ಆದ್ದರಿಂದ ಹಳೆಯ ಕಳೆದು ಹೋದ ಮಾತುಗಳನ್ನು ಮರೆತು ಬಿಡಿ”
ಪ್ರಶ್ನೆ:: -
ಕರ್ಮಯೋಗಿ ಮಕ್ಕಳು ನಿರಂತರ ಯಾವ ಅಭ್ಯಾಸವನ್ನು ಮಾಡಬೇಕು?
ಉತ್ತರ:-
ಶರೀರ ನಿರ್ವಹಣಾರ್ಥವಾಗಿ ಈಗೀಗ ಶರೀರದಲ್ಲಿ ಬಂದೆವು ಮತ್ತು ಈಗೀಗ ದೇಹೀ-ಅಭಿಮಾನಿ, ದೇಹದ ಸ್ಮೃತಿಯ ಹೊರತು ಯಾವ ಕರ್ಮವನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕರ್ಮ ಮಾಡಿದೆವು ದೇಹಾಭಿಮಾನಿಯಾಗುವುದು ನಂತರ ದೇಹೀ-ಅಭಿಮಾನಿಯಾಗುವುದು. ಇಂತಹ ಅಭ್ಯಾಸವನ್ನು ನೀವು ಮಕ್ಕಳನ್ನು ಬಿಟ್ಟರೆ ಪ್ರಪಂಚದಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಎದ್ದೇಳಿ ಪ್ರಿಯತಮಯರೇ ಎದ್ದೇಳಿ………
ಓಂ ಶಾಂತಿ. ಆತ್ಮೀಯ ತಂದೆಯು ಮಧುರ ಆತ್ಮಗಳೇ ಅಥವಾ ಮಕ್ಕಳೇ ಗೀತೆಯನ್ನು ಕೇಳಿದಿರಾ ಎಂದು ಕೇಳುತ್ತಾರೆ, ಇದಕ್ಕೆ ಜ್ಞಾನದ ಗೀತೆಯೆಂದು ಹೇಳಲಾಗುತ್ತದೆ. ಈ ಗೀತೆಯಂತೂ ಬಹಳ ಚೆನ್ನಾಗಿದೆ. ನೀವಾತ್ಮರು ಈಗ ಜಾಗೃತರಾಗಿದ್ದೀರಿ. ಡ್ರಾಮಾದ ಪ್ರತಿಯೊಂದು ರಹಸ್ಯವನ್ನು ತಿಳಿದಿದ್ದೀರಿ. ಭಕ್ತಿಮಾರ್ಗದ ಕೌತುಕತೆಯನ್ನೂ ನೀವು ನೋಡಿದ್ದೀರಿ. ಏನೆಲ್ಲಾ ಕಳೆದು ಹೋಗಿದೆಯೋ ಅದು ನಿಮ್ಮ ಬುದ್ಧಿಯಲ್ಲಿದೆ. ನೀವು ನಿಮ್ಮ 84 ಜನ್ಮಗಳ ಇತಿಹಾಸವನ್ನು ತಿಳಿದಿದ್ದೀರಿ, ತಂದೆಯು ನಿಮ್ಮ 84 ಜನ್ಮಗಳ ಕಥೆಯನ್ನು ತಿಳಿಸಿದ್ದಾರೆ. ಇದು ಹೊಸ ಪ್ರಪಂಚಕ್ಕಾಗಿ ಹೊಸ ಮಾತಾಗಿದೆ. ತಂದೆಯ ಮೂಲಕ ಹೊಸ ಮಾತನ್ನು ಕೇಳುತ್ತೀರಿ. ತಂದೆಯು ಮಕ್ಕಳಿಗೆ ಧೈರ್ಯ ಕೊಡುತ್ತಾರೆ – ಮಕ್ಕಳೇ, ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ ಅಂದಮೇಲೆ ಹಳೆಯ ಮಾತುಗಳನ್ನು ಮರೆಯುತ್ತಾ ಹೋಗಿ. ಈ ವೇದಶಾಸ್ತ್ರ, ಭಕ್ತಿಮಾರ್ಗದ ಯಾವುದೆಲ್ಲಾ ಸಾಮಗ್ರಿಗಳಿವೆಯೋ ಇವೆಲ್ಲವೂ ಸಮಾಪ್ತಿಯಾಗಲಿದೆ. ಅಲ್ಲಿ ಭಕ್ತಿಮಾರ್ಗದ ಯಾವುದೇ ಗುರುತುಗಳೂ ಇರುವುದಿಲ್ಲ, ಭಕ್ತಿಯ ಫಲ ಸಿಕ್ಕಿರುವುದು. ತಂದೆಯು ಬಂದು ಭಕ್ತರಿಗೆ ಫಲ ಕೊಡುತ್ತಾರೆ, ಯಾರೆಷ್ಟು ಭಕ್ತಿ ಮಾಡಿರುವರೋ ಅವರಿಗೆ ಹೆಚ್ಚು ಫಲ ಸಿಗುತ್ತದೆ, ತಂದೆಯು ಬಂದು ಹೇಗೆ ಫಲವನ್ನು ಕೊಡುತ್ತಾರೆಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಜ್ಞಾನದ ಪುರುಷಾರ್ಥವನ್ನೂ ಸಹ ಅವರೇ ಹೆಚ್ಚು ಮಾಡುತ್ತಾರೆ. ನಾವಾತ್ಮರೇ ಭಕ್ತಿಯನ್ನು ಹೆಚ್ಚು ಮಾಡಿದ್ದೆವು ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅವಶ್ಯವಾಗಿ ಅವರೇ ಜ್ಞಾನದಲ್ಲಿಯೂ ತೀಕ್ಷ್ಣವಾಗಿ ಹೋಗುತ್ತಾರೆ ಅಂದಮೇಲೆ ಈ ಲಕ್ಷ್ಮೀ-ನಾರಾಯಣರಂತೆ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈಗ ಜ್ಞಾನ ಮತ್ತು ಯೋಗಕ್ಕಾಗಿ ನಿಮ್ಮ ಪುರುಷಾರ್ಥವಾಗಿದೆ. ದೇಹೀ-ಅಭಿಮಾನಿಯಾಗಿ ನಂತರ ದೇಹಧಾರಿಯಾಗಬೇಕಾಗಿದೆ. ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡುತ್ತಿರಬೇಕು ಏಕೆಂದರೆ ದೇಹವಿಲ್ಲದೆ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಇದಂತೂ ಸರಿಯಾಗಿದೆ, ತಂದೆಯನ್ನು ನೆನಪು ಮಾಡಬೇಕು ಆದರೆ ತನ್ನನ್ನು ತಾನು ಆತ್ಮನೆಂದು ತಿಳಿಯಬೇಕು, ದೇಹವನ್ನು ಮರೆಯುವುದರಿಂದ ಕರ್ಮವನ್ನು ಮಾಡಲು ಆಗುವುದಿಲ್ಲ, ಕರ್ಮವನ್ನಂತೂ ಮಾಡಲೇಬೇಕು. ತಂದೆಯ ನೆನಪಿನಲ್ಲಿಯೇ ಬಹಳ ಮಜಾ ಬರುತ್ತದೆ. ಕುಳಿತುಕೊಳ್ಳುತ್ತಾ-ಎದ್ದೇಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ ಆದರೆ ಹೊಟ್ಟೆಗೆ ಭೋಜನವಂತೂ ಬೇಕಲ್ಲವೆ. ದೇಹೀ-ಅಭಿಮಾನಿಯಾಗಿರಬೇಕು, ಈ ಸಮಯದಲ್ಲಿ ದೇಹೀ-ಅಭಿಮಾನಿಗಳು ನೀವು ಮಕ್ಕಳನ್ನು ಬಿಟ್ಟರೆ ಮತ್ತ್ಯಾರೂ ಇಲ್ಲ. ಭಲೆ ತನ್ನನ್ನು ಆತ್ಮನೆಂದು ತಿಳಿದುಕೊಂಡಿದ್ದಾರೆ ಆದರೆ ತಂದೆಯ ಪರಿಚಯವಿಲ್ಲ. ಭಲೆ ಆತ್ಮ ಅವಿನಾಶಿ, ಈ ಶರೀರವು ವಿನಾಶಿಯಾಗಿದೆ ಎಂದು ತಿಳಿದಿದ್ದಾರೆ ಆದರೆ ಈ ತಿಳುವಳಿಕೆಯಿಂದ ವಿಕರ್ಮ ವಿನಾಶವಾಗುವುದಿಲ್ಲ. ಪುಣ್ಯಾತ್ಮ, ಪತಿತ ಆತ್ಮನೆಂದೂ ಹೇಳುತ್ತಾರೆ, ನಾನಾತ್ಮ ಇದು ನನ್ನ ಶರೀರವಾಗಿದೆ ಎಂದು ಹೇಳುತ್ತಾರೆ, ಇದಂತೂ ಸಾಮಾನ್ಯ ಮಾತಾಗಿದೆ. ಮೂಲ ಮಾತಾಗಿದೆ – ನನ್ನನ್ನು ನೆನಪು ಮಾಡಿ. ಶರೀರ ನಿರ್ವಹಣೆಗಾಗಿ ದೇಹಾಭಿಮಾನದಲ್ಲಿ ಬರಲೇಬೇಕಾಗಿದೆ, ದೇಹಕ್ಕೆ ತಿನ್ನಿಸಬೇಕಾಗುವುದು, ದೇಹವಿಲ್ಲದಿದ್ದರೆ ಏನು ಮಾಡಲೂ ಸಾಧ್ಯವಿಲ್ಲ. ಪ್ರತಿಯೊಂದು ಜನ್ಮದಲ್ಲಿಯೂ ಶರೀರ ನಿರ್ವಹಣೆಗಾಗಿ ಮಾಡುತ್ತಲೇ ಬಂದಿದ್ದೀರಿ, ಕರ್ಮ ಮಾಡುತ್ತಾ ನೀವು ಪ್ರಿಯತಮನನ್ನು ನೆನಪು ಮಾಡಬೇಕು. ಆ ಪ್ರಿಯತಮನು ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಪ್ರಿಯತಮ ಅಥವಾ ತಂದೆಯಿಂದ ಆಸ್ತಿಯು ನಿಮಗೆ ಸಿಗುತ್ತದೆ, ಅವರ ನೆನಪಿನಿಂದ ವಿಕರ್ಮ ವಿನಾಶವಾಗುವುದು ಎಂದು ಯಾರಿಗೂ ತಿಳಿದಿಲ್ಲ. ನೀವು ಮಕ್ಕಳು ಹೊಸ ಮಾತುಗಳನ್ನು ಕೇಳುತ್ತಿದ್ದೀರಿ. ಮನೆಗೆ ಹೋಗಲು ಮಾರ್ಗ ಸಿಕ್ಕಿದೆ, ನಾವು ಮನೆಗೆ ಹೋಗಿ ನಂತರ ರಾಜಧಾನಿಯಲ್ಲಿ ಬರುತ್ತೇವೆ, ತಂದೆಯು ಹೊಸ ಮನೆಯನ್ನು ಕಟ್ಟುತ್ತಾರೆ ಅಂದಮೇಲೆ ಆ ಮನೆಯಲ್ಲಿ ಹೋಗಿ ಕುಳಿತುಕೊಳ್ಳೋಣವೆಂದು ಮನಸ್ಸು ಆಗುತ್ತದೆಯಲ್ಲವೆ. ಈಗ ನಮಗೆ ಯಾರಿಗೂ ಗೊತ್ತಿಲ್ಲದ ಮಾರ್ಗವು ಸಿಕ್ಕಿದೆ. ಎಷ್ಟೇ ಯಜ್ಞ, ತಪ ಮುಂತಾದುವುಗಳನ್ನು ಮಾಡಿದರೂ ಸಹ, ತಲೆ ಕೆಡಿಸಿಕೊಂಡರೂ ಸದ್ಗತಿಯಂತೂ ಪಡೆಯಲು ಸಾಧ್ಯವಿಲ್ಲ. ಈ ಪ್ರಪಂಚದಿಂದ ಆ ಪ್ರಪಂಚಕ್ಕೆ ಹೋಗಲು ಸಾಧ್ಯವಿಲ್ಲ, ಇದನ್ನೂ ನೀವು ತಿಳಿಸಬೇಕಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ ಆದ್ದರಿಂದ ಮನುಷ್ಯರ ಬುದ್ಧಿಯು ಕೆಲಸ ಮಾಡುವುದಿಲ್ಲ. ಇದು ನೆನ್ನೆಯ ಮಾತಾಗಿದೆ ಎಂಬುದು ಚೆನ್ನಾಗಿ ತಿಳಿದಿದ್ದೀರಿ. ಭಾರತ ಸ್ವರ್ಗವಾಗಿತ್ತು, ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಭಾರತದಂತಹ ಸುಖವನ್ನು ಯಾರೂ ಪಡೆಯಲು ಸಾಧ್ಯವಿಲ್ಲ, ಸ್ವರ್ಗದಲ್ಲಂತೂ ಮತ್ತ್ಯಾವುದೇ ಧರ್ಮದವರು ಬರಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮಷ್ಟು ಸುಖವನ್ನು ಮತ್ತ್ಯಾರೂ ಪಡೆಯಲು ಸಾಧ್ಯವಿಲ್ಲ. ಎಷ್ಟೇ ಹಣವನ್ನು ಖರ್ಚು ಮಾಡಿದರೂ ಸ್ವರ್ಗದ ಸುಖ ಇಲ್ಲಿ ಸಿಗಲು ಸಾಧ್ಯವಿಲ್ಲ ಏಕೆಂದರೆ ಕೆಲವರಿಗೆ ಹಣವಿದ್ದರೆ ಆರೋಗ್ಯವಿರುವುದಿಲ್ಲ, ಆರೋಗ್ಯವಿದ್ದರೆ ಹಣವಿರುವುದಿಲ್ಲ…. ಇದಂತೂ ದುಃಖದ ಪ್ರಪಂಚವಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ ಆತ್ಮಗಳೇ ಎದ್ದೇಳಿ, ಜ್ಞಾನದ ಮೂರನೇ ನೇತ್ರವು ನಿಮಗೆ ಸಿಕ್ಕಿದೆ, ಎಷ್ಟೊಂದು ಜಾಗೃತವಾಗಿದೆ. ನೀವು ಇಡೀ ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿದಿದ್ದೀರಿ, ತಂದೆಯು ಎಲ್ಲವನ್ನೂ ಬಲ್ಲಂತಹವರು ಎಂದು ಹೇಳಲಾಗುತ್ತದೆ ಅಂದರೆ ಎಲ್ಲರ ಮನಸ್ಸನ್ನು ತಿಳಿದವರೆಂದು ಅಲ್ಲ. ಇವರು ಯಾರು? ಎಷ್ಟು ತಿಳಿಸುತ್ತಾರೆ, ಎಲ್ಲಿಯವರೆಗೆ ಪವಿತ್ರರಾಗಿದ್ದಾರೆ, ಇವರು ತಂದೆಯನ್ನು ಎಷ್ಟು ನೆನಪು ಮಾಡುತ್ತಾರೆ – ಇವೆಲ್ಲಾ ವಿಚಾರಗಳನ್ನು ನಾನೇಕೆ ತಿಳಿಸಲಿ, ನಾನಂತೂ ನಿಮ್ಮೆಲ್ಲರಿಗೂ ಮಾರ್ಗವನ್ನು ತೋರಿಸುತ್ತೇನೆ ಮತ್ತು ಪರಮಪಿತ ಪರಮಾತ್ಮನನ್ನು ನೆನಪು ಮಾಡಿ ಎಂದು ಹೇಳುತ್ತೇನೆ. ಈ ಸೃಷ್ಟಿ ಚಕ್ರವನ್ನೂ ಸಹ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ, ಅವಶ್ಯವಾಗಿ ದೇಹೀ-ಅಭಿಮಾನಿಗಳಾಗಬೇಕು. ದೇಹಾಭಿಮಾನದ ಕಾರಣ ನಿಮ್ಮ ದುರ್ಗತಿಯಾಗಿದೆ, ಈಗ ನೀವು ತಂದೆಯನ್ನು ನೆನಪು ಮಾಡಬೇಕಾಗಿದೆ. ಗೃಹಸ್ಥದಲ್ಲಿ ಇರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ, ಸ್ವದರ್ಶನ ಚಕ್ರಧಾರಿಗಳೂ ನೀವೇ ಆಗಿದ್ದೀರಿ. ದೇವತೆಗಳ ಕೈಯಲ್ಲಿ ಶಂಖು ಇತ್ಯಾದಿಗಳೇನೂ ಇರುವುದಿಲ್ಲ, ಜ್ಞಾನದ ಶಂಖ ಇತ್ಯಾದಿಗಳೆಲ್ಲವೂ ನೀವು ಬ್ರಾಹ್ಮಣರದ್ದಾಗಿದೆ. ಸಿಖ್ಖರು ಶಂಖ ಊದಿದಾಗ ದೊಡ್ಡ ಧ್ವನಿ ಬರುತ್ತದೆ, ನೀವೂ ಸಹ ಜ್ಞಾನವನ್ನು ದೊಡ್ಡ ಸಭೆಯಲ್ಲಿಯೂ ಹೇಳುತ್ತೀರೆಂದರೆ ಲೌಡ್ ಸ್ಪೀಕರ್ನ್ನು ಹಾಕುತ್ತಾರಲ್ಲವೆ. ಇಲ್ಲಿ ಲೌಡ್ ಸ್ಪೀಕರ್ನ್ನು ಹಾಕುವ ಅವಶ್ಯಕತೆಯಿಲ್ಲ, ಟೀಚರ್ ಓದಿಸುತ್ತಾರೆಂದರೆ ಲೌಡ್ ಸ್ಪೀಕರ್ನ್ನು ಹಾಕುತ್ತಾರೆಯೇ! ಇಲ್ಲಂತೂ ಕೇವಲ ಶಿವ ತಂದೆಯನ್ನು ನೆನಪು ಮಾಡಬೇಕು ಅದರಿಂದಲೇ ವಿಕರ್ಮ ವಿನಾಶವಾಗುವುದು, ನಾನು ಸರ್ವಶಕ್ತಿವಂತನಾಗಿದ್ದೇನಲ್ಲವೆ. ನೀವು ಲೌಡ್ ಸ್ಪೀಕರ್ನ್ನು ಹಾಕಿದರೆ ಅದರ ಧ್ವನಿಯು ದೂರ ದೂರದವರೆಗೆ ಕೇಳಿ ಬರುತ್ತದೆ. ಅದೂ ಸಹ ಮುಂದೆ ಕೆಲಸಕ್ಕೆ ಬರುವುದು. ಎದುರಿನಲ್ಲಿ ಸಾವು ನಿಂತಿದೆ ಎಂದು ನೀವು ಎಲ್ಲರಿಗೂ ತಿಳಿಸಬೇಕು. ಈಗ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಮಹಾಭಾರತದ ಯುದ್ಧವು ಸನ್ಮುಖದಲ್ಲಿ ನಿಂತಿದೆ, ಗೀತೆಯಲ್ಲಿಯೂ ಸಹ ಮಹಾಭಾರತ ಯುದ್ಧವಾಯಿತು, ವಿನಾಶವಾಯಿತು ಎಂದು ಬರೆದಿದ್ದಾರೆ, ಒಳ್ಳೆಯದು – ನಂತರ ಏನಾಯಿತು? ಪಾಂಡವರೂ ಸಹ ಕರಗಿ ಹೋದರು. ಮೊದಲು ವಿನಾಶವಾಯಿತೆಂದರೆ ಭಾರತಖಂಡವು ಖಾಲಿಯಾಗಿ ಬಿಡುವುದು, ಭಾರತವು ಅವಿನಾಶಿ ಖಂಡವಾಗಿರುವುದರಿಂದ ವಿನಾಶವೂ ಆಗುವುದಿಲ್ಲ, ಖಾಲಿಯೂ ಆಗುವುದಿಲ್ಲ, ಪ್ರಳಯವಾಗುವುದೂ ಇಲ್ಲ ಎಂದು ನೀವು ತಿಳಿದಿದ್ದೀರಿ. ತಂದೆಯು ಅವಿನಾಶಿಯಾಗಿದ್ದಾರೆ ಅಂದಮೇಲೆ ಅವರ ಜನ್ಮ ಸ್ಥಳವೂ ಅವಿನಾಶಿಯಾಗಿದೆ. ತಂದೆಯು ಸರ್ವರ ಸದ್ಗತಿದಾತ, ಸುಖ-ಶಾಂತಿದಾತನಾಗಿದ್ದಾರೆ ಎಂದು ಮಕ್ಕಳು ಖುಷಿ ಪಡಬೇಕಾಗಿದೆ, ಯಾರೇ ಬಂದರೂ ಸಹ ಶಾಂತಿ ಬೇಕೆಂದು ಬಯಸುತ್ತಾರೆ. ಆತ್ಮವು ಶಾಂತಿ ಬೇಕೆಂದು ಇಷ್ಟೊಂದು ಏಕೆ ನೆನಪು ಮಾಡುತ್ತದೆ? ಶಾಂತಿಧಾಮವು ಆತ್ಮಗಳ ಮನೆಯಾಗಿದೆಯಲ್ಲವೆ. ಯಾರಿಗೆ ಮನೆಯ ನೆನಪಿರುವುದಿಲ್ಲ! ವಿದೇಶದಲ್ಲಿ ಯಾರಾದರೂ ಶರೀರ ಬಿಡುತ್ತಾರೆಂದರೆ ಆ ಶರೀರವನ್ನು ತನ್ನ ಜನ್ಮ ಭೂಮಿಗೆ ತೆಗೆದುಕೊಂಡು ಬರುತ್ತಾರೆ. ಒಂದುವೇಳೆ ಸರ್ವರ ಸದ್ಗತಿದಾತ, ದುಃಖದಿಂದ ಮುಕ್ತಿ ಕೊಡುವವನ ಜನ್ಮ ಸ್ಥಳವು ಈ ಭಾರತವಾಗಿದೆಯೆಂದು ಗೊತ್ತಾದರೆ ಅದರ ಮಾನ್ಯತೆ ಹೆಚ್ಚಾಗುತ್ತದೆ. ಒಬ್ಬ ಶಿವ ತಂದೆಯ ಮೇಲೆಯೇ ಎಕ್ಕದ ಹೂವನ್ನು ಹಾಕುತ್ತಾರೆ ಆದರೆ ಈಗ ಎಲ್ಲರ ಮೇಲೂ ಹೂವನ್ನು ಹಾಕುತ್ತಾರೆ. ಎಲ್ಲರಿಗೂ ಸುಖ-ಶಾಂತಿ ಕೊಡುವಂತಹವರ ಹೆಸರು ಮತ್ತು ಗುರುತನ್ನು ಪ್ರಾಯಃಲೋಪ ಮಾಡಿ ಬಿಟ್ಟಿದ್ದಾರೆ. ಯಾರು ತಂದೆಯನ್ನು ತಿಳಿದುಕೊಂಡಿದ್ದಾರೆಯೋ ಅವರೇ ಆಸ್ತಿಯನ್ನು ಪಡೆಯುವ ಪುರುಷಾರ್ಥವನ್ನೂ ಮಾಡುತ್ತಾರೆ. ನನ್ನ ಹೆಸರೇ ದುಃಖಹರ್ತ-ಸುಖಕರ್ತ ಆಗಿದೆ, ದುಃಖದಿಂದ ಮುಕ್ತ ಮಾಡಿ ಏನು ಮಾಡುತ್ತಾರೆ? ನಾವು ಶಾಂತಿಧಾಮದಲ್ಲಿ ಶಾಂತವಾಗಿರುತ್ತೇವೆ, ಸುಖಧಾಮದಲ್ಲಿ ಸುಖವಾಗಿರುತ್ತೇವೆಂದು ತಿಳಿದಿದ್ದೀರಿ. ಶಾಂತಿಧಾಮದ ಸ್ಥಳವೇ ಬೇರೆಯಾಗಿದೆ, ಸುಖಧಾಮದ ಸ್ಥಳವೇ ಬೇರೆಯಾಗಿದೆ, ಇದಂತೂ ದುಃಖಧಾಮವಾಗಿದೆ. ಈ ಸಮಯದಲ್ಲಿ ಎಲ್ಲರಿಗೂ ದುಃಖವೇ ದುಃಖವಿದೆ. ನಾವು ಇಂತಹ ಸುಖದಲ್ಲಿ ಹೋಗುತ್ತೇವೆ ಅಲ್ಲಿ 21 ಜನ್ಮಗಳವರೆಗೂ ಯಾವುದೇ ಪ್ರಕಾರದ ದುಃಖವಿರುವುದಿಲ್ಲ. ಸುಖಧಾಮ ಎನ್ನುವ ಹೆಸರೇ ಎಷ್ಟು ಮಧುರವಾಗಿದೆ! ನಾನು ನಿಮಗೆ ಯಾವುದೇ ರೀತಿಯ ಕಷ್ಟ ಕೊಡುವುದಿಲ್ಲ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ತನ್ನನ್ನು ತಾನು ಆತ್ಮನೆಂದು ತಿಳಿದುಕೊಳ್ಳಿ, ಈಗ ಈ ಜ್ಞಾನವನ್ನು ನಿಮಗೆ ತಂದೆಯು ತಿಳಿಸುತ್ತಿದ್ದಾರೆ, ಸತ್ಯಯುಗದಲ್ಲಿ ನಾನಾತ್ಮ ಈ ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆಂಬ ಜ್ಞಾನವಿರುತ್ತದೆ, ಇದನ್ನೇ ಆತ್ಮಾಭಿಮಾನಿ ಎಂದು ಹೇಳಲಾಗುತ್ತದೆ. ಇದು ಆತ್ಮಿಕ ಜ್ಞಾನವಾಗಿದೆ, ಇದನ್ನು ಯಾರೂ ಕೊಡಲು ಸಾಧ್ಯವಿಲ್ಲ. 5000 ವರ್ಷಗಳಿಗೆ ಒಂದು ಬಾರಿ ಆತ್ಮೀಯ ತಂದೆಯು ಬಂದು ಅತ್ಮಗಳಿಗೆ ಜ್ಞಾನ ಕೊಡುತ್ತಾರೆ. ಮನುಷ್ಯರು ಅವಶ್ಯವಾಗಿ ಘೋರ ಅಂಧಕಾರದಲ್ಲಿದ್ದಾರೆ, ನಿಮಗೆ ಈಗ ಬೆಳಕು ಸಿಕ್ಕಿದೆ. ನೀವು ಅಜ್ಞಾನದ ನಿದ್ರೆಯಿಂದ ಜಾಗೃತರಾಗಿದ್ದೀರಿ, ಎಲ್ಲಾ ಪ್ರಿಯತಮಯರ ಪ್ರಿಯತಮನು ಒಬ್ಬ ತಂದೆಯಾಗಿದ್ದಾರೆ. ನಾನು ತಂದೆಯೂ ಆಗಿದ್ದೇನೆ, ಪ್ರಿಯತಮನೂ ಆಗಿದ್ದೇನೆ, ಗುರುಗಳಿಗೆ ಗುರುವೂ ಆಗಿದ್ದೇನೆ, ಸುಪ್ರೀಂ ಟೀಚರ್ ಸಹ ಆಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಸರ್ವಗುರುಗಳ ಸದ್ಗತಿದಾತ ಒಬ್ಬ ಸದ್ಗುರುವಾಗಿದ್ದಾರೆ, ಮಕ್ಕಳೇ, ನಾನು ಎಲ್ಲರ ಸದ್ಗತಿ ಮಾಡುತ್ತೇನೆ ನಂತರ ಸದ್ಗತಿಯಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ.
ತಂದೆಯು ತಿಳಿಸುತ್ತಾರೆ – ಪ್ರತಿಯೊಬ್ಬ ಆತ್ಮನೂ ಸಹ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆತ್ಮವೇ ಸತೋಪ್ರಧಾನ, ಸತೋ, ರಜೋ, ತಮೋ ಆಗುತ್ತದೆ. ಕೆಲಕೆಲವರಿಗೆ ಬಹಳ ಚಿಕ್ಕ ಪಾತ್ರವಿರುತ್ತದೆ, ಬಂದರು ನಂತರ ಹೊರಟು ಹೋದರು. ಸೊಳ್ಳೆಗಳ ರೀತಿ ಜನ್ಮ ಪಡೆದರು ಮತ್ತೆ ಮರಣ ಹೊಂದಿದರು, ಅಂತಹವರು ತಂದೆಯಿಂದ ಆಸ್ತಿಯನ್ನು ಪಡೆಯುವುದಿಲ್ಲ. ತಂದೆಯಿಂದ ಪವಿತ್ರತೆ, ಸುಖ-ಶಾಂತಿಯ ಆಸ್ತಿಯು ಸಿಗುತ್ತದೆ ಎಂದು ನೀವಾತ್ಮಗಳಿಗೆ ತಂದೆಯು ತಿಳಿಸುತ್ತಾರೆ. ತಂದೆಯಂತೂ ನಿರಾಕಾರನಾಗಿದ್ದಾರೆ, ಅವರೂ ಸಹ ಈ ಮುಖ (ಬ್ರಹ್ಮಾ) ದಿಂದಲೇ ಬಂದು ತಿಳಿಸುತ್ತಾರೆ. ಶಿವ ತಂದೆಯ ಮಂದಿರವನ್ನು ಬಹಳ ಎತ್ತರದಲ್ಲಿ ಕಟ್ಟುತ್ತಾರೆ, ಎಷ್ಟೊಂದು ದೂರದವರೆಗೆ ತೀರ್ಥ ಯಾತ್ರೆ, ಬಹಳ ಮೇಳಗಳಿಗೆ ಹೋಗುತ್ತಾರೆ, ಮೇಲೆ ಯಾವುದೇ ಜ್ಞಾನಾಮೃತವನ್ನು ಇಟ್ಟಿರುತ್ತಾರೆಯೇ! ಎಷ್ಟೊಂದು ಖರ್ಚು ಮಾಡುತ್ತಾರೆ, ಸರ್ಕಾರವೂ ಸಹ ಅದಕ್ಕಾಗಿ ಎಷ್ಟೊಂದು ಅನುಕೂಲಗಳನ್ನು ಮಾಡಬೇಕಾಗುತ್ತದೆ, ಎಷ್ಟೊಂದು ಪರಿಶ್ರಮವಾಗುತ್ತದೆ. ಇಲ್ಲಿ ತೀರ್ಥ ಸ್ಥಾನಗಳಿಗೆ ಚಿಕ್ಕ ಮಕ್ಕಳನ್ನು ಹೇಗೆ ಕರೆದುಕೊಂಡು ಹೋಗುತ್ತಾರೆ? ಯಾರಾದರೂ ಸಂಭಾಲನೆ ಮಾಡಲು ಕೊಟ್ಟು ಹೋಗುತ್ತಾರೆ, ಜೊತೆಯಲ್ಲಿಯೇ ಕರೆದುಕೊಂಡು ಹೋಗುವುದಿಲ್ಲ. 2-3 ತಿಂಗಳುಗಳು ಯಾತ್ರೆಯನ್ನು ಮಾಡುತ್ತಾರೆ, ಇಲ್ಲಿ ನೀವು ಬರುತ್ತೀರೆಂದರೆ ನೀವು ಕುಳಿತು ಕೇವಲ ಕೇಳಬೇಕು ಮತ್ತು ಓದಬೇಕು. ಇಲ್ಲಿ ಚಿಕ್ಕ ಮಕ್ಕಳು ಕೇಳುವುದಿಲ್ಲ, ನೀವು ಇಲ್ಲಿಗೆ ಜ್ಞಾನ-ಯೋಗವನ್ನು ಕಲಿಯುವುದಕ್ಕಾಗಿಯೇ ಬರುತ್ತೀರಿ. ಜ್ಞಾನವನ್ನು ತಿಳಿಸುವಾಗ ಯಾವುದೇ ಶಬ್ಧ ಇತ್ಯಾದಿಗಳು ಆಗಬಾರದು ಇಲ್ಲದಿದ್ದರೆ ಗಮನವಿರುವುದಿಲ್ಲ, ಶಾಂತಿಯಲ್ಲಿ ಕುಳಿತು ಗಮನ ಕೊಟ್ಟು ಕೇಳಬೇಕು, ಯೋಗವಂತೂ ಬಹಳ ಸಹಜವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಏನೇ ಕೆಲಸ ಮಾಡುತ್ತಿದ್ದರೂ ಸಹ ಬುದ್ಧಿಮಾತ್ರ ಅಲ್ಲಿಯೇ ಇರಬೇಕು. ತಂದೆಯ ನೆನಪಿನಿಂದ ಆಗುವ ಸಂಪಾದನೆಯು ಬಹಳ ಜಬರ್ದಸ್ತ್ ಆಗಿರುವುದು. ನಾವು ಸದಾಕಾಲಕ್ಕಾಗಿ ಆರೋಗ್ಯವಂತರಾಗುತ್ತೇವೆಂದು ತಿಳಿದಿದ್ದೀರಿ. ಈ ರೀತಿ ತಮ್ಮೊಂದಿಗೆ ಮಾತನಾಡಿಕೊಳ್ಳಬೇಕಾಗಿದೆ. ತಂದೆಯ ನೆನಪಿನಲ್ಲಿದ್ದು ತಮ್ಮ ಕೈಯಿಂದಲೇ ಭೋಜನವನ್ನು ತಯಾರಿಸಬೇಕಾಗಿದೆ, ಕೈಯಿಂದ ಕೆಲಸ ಮಾಡಬೇಕು ಆದರೆ ತಂದೆಯನ್ನು ನೆನಪು ಮಾಡುತ್ತಿರಬೇಕಾಗಿದೆ. ನೆನಪಿನಲ್ಲಿ ಇರುವುದರಿಂದ ನಿಮ್ಮ ಕಲ್ಯಾಣವೂ ಆಗುವುದು ಮತ್ತು ಭೋಜನವೂ ಬಹಳ ಚೆನ್ನಾಗಿರುವುದು. ನಿಮಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ, ನೀವಿಲ್ಲಿಗೆ ಲಕ್ಷ್ಮೀ-ನಾರಾಯಣರು ಆಗುವುದಕ್ಕಾಗಿಯೇ ಬರುತ್ತೀರಿ. ನಾವೆಲ್ಲರೂ ಸೂರ್ಯವಂಶಿಯರು ಆಗುತ್ತೇವೆಂದು ಹೇಳುತ್ತಾರೆ.
ಮಮ್ಮಾ-ಬಾಬಾ ಈ ಸಮಯದಲ್ಲಿ ಬ್ರಹ್ಮಾ-ಸರಸ್ವತಿಯಾಗುತ್ತಾರೆ, ಭವಿಷ್ಯದಲ್ಲಿ ಲಕ್ಷ್ಮೀ-ನಾರಾಯಣರಾಗುತ್ತಾರೆಂದು ನೀವು ತಿಳಿದಿದ್ದೀರಿ. ಭವಿಷ್ಯದಲ್ಲಿ ಏನಾಗುತ್ತೇವೆ ಎಂಬುದು ಬೇರೆ ಯಾರಿಗೂ ಗೊತ್ತಿಲ್ಲ. ನೆಹರು ಶರೀರ ಬಿಟ್ಟರು ಅಂದಮೇಲೆ ನಂತರ ಏನಾದರು ಎಂಬುದು ಯಾರಿಗೆ ಗೊತ್ತಿದೆ! ಒಳ್ಳೆಯದು. ಸ್ವಲ್ಪ ದಾನ ಮಾಡಿದ್ದಾರೆಂದರೆ ಇಲ್ಲಿ ಒಳ್ಳೆಯ ಕುಲದಲ್ಲಿ ಹುಟ್ಟಿರಬಹುದು. ಈಗ ನಿಮಗೆ ಸಂಪೂರ್ಣವಾಗಿದೆ ತಿಳಿದಿದೆ. ಇವರ ಹೆಸರು ಆದಿ ದೇವ ಬ್ರಹ್ಮಾ, ಆದಿ ದೇವಿ ಸರಸ್ವತಿಯಾಗಿದೆ, ಇವರೇ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ, ಇವರ ಜೊತೆ ಮಕ್ಕಳೂ ಇದ್ದಾರೆ. ಇವರೂ ಸಹ ಹೇಳುತ್ತಾರೆ – ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಇದು ಪಕ್ಕಾ ಆಗಿದೆ. ಸೂಕ್ಷ್ಮವತನದಲ್ಲಿಯೂ ಸಹ ನೀವು ನೋಡುತ್ತೀರಿ – ದೇವಿಯರ ಮಂದಿರದಲ್ಲಿಯೂ ಬಹಳ ಮೇಳಗಳಾಗುತ್ತವೆ. ಈಗ ಜಗದಂಬಾರವರಂತೂ ಒಬ್ಬರೇ ಆಗಿದ್ದಾರೆಂದರೆ ಅವರ ಮುಖ ಲಕ್ಷಣಗಳು ಒಬ್ಬರದೇ ಇರಬೇಕಲ್ಲವೆ. ಮಮ್ಮಾರವರನ್ನೂ ಸಹ ನೀವು ನೋಡುತ್ತೀರಿ, ನೀವು ಮಕ್ಕಳ ಮುಖ ಲಕ್ಷಣಗಳೂ ಇವೆ ನಂತರ ಹೆಸರನ್ನು ಅಧರ್ ಕುಮಾರಿಯೆಂದು ಇಟ್ಟಿದ್ದಾರೆ. ನಾವೇ ಮತ್ತೆ ಈ ರೀತಿಯಾಗುತ್ತೇವೆಂದು ತಿಳಿದಿದ್ದೀರಿ. ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯಾಗಿದ್ದೇವೆ, ಯುಗಲ್ ಸಹ ನಾವು ಬ್ರಹ್ಮಾಕುಮಾರ-ಕುಮಾರಿಯರು ಒಬ್ಬ ತಂದೆಯ ಮಕ್ಕಳಾಗಿದ್ದೇವೆಂದು ಹೇಳುತ್ತೀರಿ, ಇದೆಲ್ಲವೂ ನಿಮ್ಮ ನೆನಪಾರ್ಥವಾಗಿದೆ. ಅವಶ್ಯವಾಗಿ ನೀವು ಅರ್ಥ ಸಹಿತವಾಗಿ ಜ್ಞಾನವನ್ನು ತಿಳಿಸುತ್ತೀರಿ, ಇದು ದಿಲ್ವಾಡಾ ಮಂದಿರವಾಗಿದೆ ಆದರೆ ಇದೆಲ್ಲವನ್ನೂ ನೀವೇ ತಿಳಿಸಲು ಸಾಧ್ಯ. ನಾವು ರಾಜಯೋಗದಿಂದ ಶ್ರೀಮತದ ಆಧಾರದ ಮೇಲೆ ಸ್ವರ್ಗವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ಎಂದು ನೀವು ತಿಳೀದಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಜ್ಞಾನ ಮತ್ತು ಯೋಗದ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ಕೇಳುವ ಸಮಯದಲ್ಲಿ ಬಹಳ ಶಾಂತ, ಏಕಾಗ್ರ ಚಿತ್ತರಾಗಿ ಕುಳಿತುಕೊಳ್ಳಬೇಕಾಗಿದೆ. ಕರ್ಮಯೋಗಿಯೂ ಆಗಬೇಕಾಗಿದೆ.
2. ತಂದೆಯು ಮನೆಯ ಮಾರ್ಗವನ್ನು ತೋರಿಸಿದ್ದಾರೆ, ಇದನ್ನು ಎಲ್ಲರಿಗೂ ತಿಳಿಸಬೇಕಾಗಿದೆ, ಸ್ವದರ್ಶನ ಚಕ್ರಧಾರಿಯಾಗಿ ಜೊತೆ ಜೊತೆಗೆ ಜ್ಞಾನದ ಶಂಖವನ್ನು ಊದಬೇಕಾಗಿದೆ.
ವರದಾನ:-
“ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ” ಈ ಪಾಠವನ್ನು ನಿರಂತರವೂ ನೆನಪಿರಲಿ, ಇದರಿಂದ ಸ್ಥಿತಿಯು ಏಕರಸವಾಗಿ ಆಗಿ ಬಿಡುವುದು ಏಕೆಂದರೆ ಜ್ಞಾನವಂತು ಸಂಪೂರ್ಣ ಸಿಕ್ಕಿದೆ, ಅಪಾರ ಜ್ಞಾನ ರತ್ನಗಳಿವೆ. ಆದರೆ ಜ್ಞಾನ ರತ್ನಗಳಿದ್ದರೂ ಬಿಂದುವಿನ ರೂಪದಲ್ಲಿರಬೇಕು – ಯಾರು ಯಾವುದೇ ಸಮಯದಲ್ಲಿ ಕೆಳಗೆ ಎಳೆಯುತ್ತಿದ್ದರೂ ಬಿಂದುವಿನ ರೂಪದಲ್ಲಿರುವುದು ಆ ಸಮಯದ ಚಮತ್ಕಾರವಾಗಿದೆ. ಕೆಲವೊಮ್ಮೆ ಮಾತುಗಳು ಕೆಳಗೆ ಎಳೆಯುತ್ತವೆ, ಕೆಲವೊಮ್ಮೆ ಯಾವುದಾದರೂ ವ್ಯಕ್ತಿ, ಕೆಲವೊಮ್ಮೆ ಯಾವುದಾದರೂ ವಸ್ತು, ಕೆಲವೊಮ್ಮೆ ವಾಯುಮಂಡಲವೇ….. ಇದಂತು ಅವಶ್ಯವಾಗಿ ಆಗುವುದು ಆದರೆ ಸೆಕೆಂಡಿನಲ್ಲಿ ಈ ವಿಸ್ತಾರವೇ ಸಮಾಪ್ತಿಯಾಗಿ ಏಕರಸ ಸ್ಥಿತಿಯಿರಬೇಕು. ಹೀಗಿದ್ದಾಗ ಶ್ರೇಷ್ಠ ಆತ್ಮ ಭವದ ವರದಾನಿ ಎಂದು ಹೇಳಲಾಗುತ್ತದೆ.
ಸ್ಲೋಗನ್:-
➤ Email me Murli: Receive Daily Murli on your email. Subscribe!