1 July 2021 KANNADA Murli Today | Brahma Kumaris

Read and Listen today’s Gyan Murli in Kannada

30 June 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಭಿಕ್ಷುಕರಿಂದ ರಾಜಕುಮಾರರಾಗಲು ಪವಿತ್ರತೆಯೇ ಆಧಾರವಾಗಿದೆ, ಪವಿತ್ರರಾಗುವುದರಿಂದಲೇ ಪವಿತ್ರ ಪ್ರಪಂಚದ ರಾಜ್ಯ ಪದವಿಯು ಸಿಗುವುದು”

ಪ್ರಶ್ನೆ:: -

ಈ ಪಾಠಶಾಲೆಯಲ್ಲಿ ಯಾವ ಪಾಠವು ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತದೆ?

ಉತ್ತರ:-

ನಾವು ಈ ಪಾಠಶಾಲೆಯಲ್ಲಿ ನಾನು ದೇಹವಲ್ಲ, ಆತ್ಮನಾಗಿದ್ದೇನೆ ಎಂಬುದು ಪ್ರತೀ ದಿನ ಓದುತ್ತೇವೆ. ಆತ್ಮಾಭಿಮಾನಿಯಾಗುವುದರಿಂದಲೇ ನೀವು ಮನುಷ್ಯರಿಂದ ದೇವತೆ, ನರನಿಂದ ನಾರಾಯಣರಾಗುತ್ತೀರಿ. ಈ ಸಮಯದಲ್ಲಿ ಎಲ್ಲಾ ಮನುಷ್ಯ ಮಾತ್ರರು ಪೂಜಾರಿಗಳು ಅರ್ಥಾತ್ ಪತಿತ ದೇಹಾಭಿಮಾನಿಗಳಾಗಿದ್ದಾರೆ. ಆದ್ದರಿಂದಲೇ ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಆಕಾಶ ಸಿಂಹಾಸನವನ್ನು ಬಿಟ್ಟು ಬಾ……..

ಓಂ ಶಾಂತಿ. ಓಂ ಶಾಂತಿಯನ್ನು ಯಾರು ಹೇಳಿದರು? ಯಾವ ಮಕ್ಕಳಿಗೆ ಹೇಳಿದರು ಎಂದು ಮಕ್ಕಳು ತಿಳಿದಿದ್ದೀರಿ. ಯಾರ ಆತ್ಮವು ಓಂ ಶಾಂತಿ ಎಂದು ಹೇಳಿತು? ಪರಮಪಿತ ಪರಮಾತ್ಮ ಎಂದು ಮಕ್ಕಳು ತಿಳಿದಿದ್ದಾರೆ. ಯಾವ ಮನುಷ್ಯಾತ್ಮರೂ ಈ ಮಾತುಗಳನ್ನು ಹೇಳಲಿಲ್ಲ, ಪರಮಪಿತ ಪರಮಾತ್ಮ ಶಿವನ ಆತ್ಮನೇ ಹೇಳಿದರೆಂದು ತಿಳಿದಿದ್ದೀರಿ. ಅವರು ಎಲ್ಲರ ತಂದೆ ಶ್ರೇ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ, ಈಗ ಗೀತೆಯಲ್ಲಿ ಕೇಳಿದಿರಲ್ಲವೆ. ಭಾರತದ ಮೇಲೆ ಮಾಯೆಯ ನೆರಳು ಬಿದ್ದಿದೆ. ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ, ಆದ್ದರಿಂದಲೇ ಪತಿತ-ಪಾವನ ಪುನಃ ಬಾ ಎಂದು ಕರೆಯುತ್ತಾರೆ. ಆತ್ಮವೇ ತನ್ನ ತಂದೆಯನ್ನು ಕರೆಯುತ್ತದೆ, ಯಾರನ್ನು ಭಗವಂತನೆಂದು ಹೇಳುತ್ತಾರೆ. ಅವರನ್ನೇ ಪತಿತ-ಪಾವನ ಎಂದೂ ಹೇಳಲಾಗುತ್ತದೆ, ಒಬ್ಬರದೇ ಮಹಿಮೆಯೂ ಆಗುವುದು. ಅವರೇ ಎಲ್ಲಾ ಆತ್ಮಗಳ ಬೇಹದ್ದಿನ ತಂದೆಯಾಗಿದ್ದಾರೆ. ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದ ಹೇ ಪರಮಪಿತ ಪರಮಾತ್ಮ ಎಂದು ಕರೆಯುತ್ತಾರೆ. ಅವರು ಜ್ಞಾನ ಸಾಗರ, ಪತಿತ-ಪಾವನನೂ ಆಗಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಏಕೆಂದರೆ ಜ್ಞಾನ ಸಾಗರನೂ ಆಗಿದ್ದಾರೆ, ಸರ್ವಶಕ್ತಿವಂತನೂ ಆಗಿದ್ದಾರೆ. ಎಲ್ಲಾ ವೇದಶಾಸ್ತ್ರ, ಗ್ರಂಥಗಳನ್ನು ತಿಳಿದಿದ್ದಾರೆ, ಅವರನ್ನು ನಾಲೆಡ್ಜ್ ಫುಲ್ ಎಂದೂ ಕರೆಯುತ್ತಾರೆ ಅಂದಮೇಲೆ ಈ ಸಮಯದಲ್ಲಿ ಎಲ್ಲರೂ ಪಾರಲೌಕಿಕ ತಂದೆಯನ್ನು ಕರೆಯುತ್ತಾರೆ ಏಕೆಂದರೆ ಎಲ್ಲರೂ ದುಃಖಿಗಳಾಗಿದ್ದಾರೆ, ಗಾಡ್ಫಾದರ್ ಎನ್ನುತ್ತಾರೆ ಆದರೆ ಹೆಸರಂತೂ ಬೇಕಲ್ಲವೆ. ಅವರ ಹೆಸರಂತೂ ಶಿವ ಬಾಬಾ ಎಂದು ಗಾಯನ ಮಾಡಲ್ಪಟ್ಟಿದೆ. ಅವರೇ ಶ್ರೇಷ್ಠಾತಿ ಶ್ರೇಷ್ಠ ಜ್ಞಾನ ಸಾಗರ, ಸುಖದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಈ ಮನುಷ್ಯಾತ್ಮನು ತಮ್ಮ ತಂದೆಯ ಮಹಿಮೆಯನ್ನೇ ಮಾಡುತ್ತಾರೆ, ಶ್ರೇಷ್ಠಾತಿ ಶ್ರೇಷ್ಠನಾದ ಪರಮಪಿತ ಪರಮಾತ್ಮ ಅವರು ಪರಮ ಆಗಿದ್ದಾರೆ, ಪತಿತ ಮನುಷ್ಯರು ಅವರನ್ನೇ ನೆನಪು ಮಾಡುತ್ತಾರೆ. ಸತ್ಯಯುಗವು ಯಾವಾಗ ಪಾವನವಾಗಿತ್ತೋ ಆಗ ದೇವಿ-ದೇವತೆಗಳ ರಾಜ್ಯವಿತ್ತು ಆಗ ಯಾರೂ ಪತಿತರಿರಲಿಲ್ಲ. ಇದಂತೂ ತಮೋಪ್ರಧಾನ ಪ್ರಪಂಚ ಅರ್ಥಾತ್ ಈ ಪ್ರಪಂಚದಲ್ಲಿ ಎಲ್ಲರೂ ಪಾಪಾತ್ಮರೇ ಆಗಿದ್ದಾರೆ, ಇದೇ ಭಾರತವು ಪಾವನವಾಗಿತ್ತು, ಇದೇ ಭಾರತ ಈಗ ಪತಿತವಾಗಿದೆ. ಈ ಕಲಿಯುಗದಲ್ಲಿ ಎಲ್ಲರೂ ಪತಿತರೇ ಆಗಿದ್ದಾರೆ. ಜ್ಞಾನ ಸಾಗರ, ಪತಿತ-ಪಾವನ, ಪರಮಪಿತ ಪರಮಾತ್ಮ ಪರಮಧಾಮದಿಂದ ಬಂದು ನಮಗೆ ಬ್ರಹ್ಮನ ಮೂಲಕ ಓದಿಸುತ್ತಾರೆ. ಅವಶ್ಯವಾಗಿ ಅವರಿಗೆ ಒಂದು ಶರೀರ ಬೇಕಲ್ಲವೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ಜ್ಞಾನ ಸಾಗರನಾದ ಇವರಿಗೆ ಎಲ್ಲಾ ಅಧಿಕಾರವೂ ಇದೆ ಮತ್ತು ಇವರು ಎಲ್ಲವನ್ನೂ ತಿಳಿದಿದ್ದಾರೆ. ಭಾರತದಲ್ಲಿ ವಿಷ್ಣುವಿನ ನಾಭಿಯಿಂದ ಬ್ರಹ್ಮನನ್ನು ಮತ್ತು ಬ್ರಹ್ಮನ ಕೈಯಲ್ಲಿ ಶಾಸ್ತ್ರಗಳನ್ನು ಕೊಟ್ಟಿದ್ದಾರೆ. ಈ ಚಿತ್ರವನ್ನು ತೋರಿಸುತ್ತಾರೆ. ವಿಷ್ಣು ಯಾವ ಶಾಸ್ತ್ರದ ಸಾರವನ್ನೂ ತಿಳಿಸುವುದಿಲ್ಲ. ಪರಮಪಿತ ಪರಮಾತ್ಮನು ಜ್ಞಾನ ಸಾಗರನೇ ಬ್ರಹ್ಮಾರವರ ಮೂಲಕ ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರನ್ನೂ ಸಹ ಇವರೇ ರಚಿಸುತ್ತಾರೆ. ಬ್ರಹ್ಮಾ ಅಥವಾ ವಿಷ್ಣುವನ್ನು ಜ್ಞಾನ ಸಾಗರನೆಂದು ಕರೆಯಲು ಸಾಧ್ಯವಿಲ್ಲ. ಶಂಕರನ ಮಾತನ್ನು ಬಿಟ್ಟು ಬಿಡಿ. ಈಗ ಜ್ಞಾನ ಸಾಗರ ಯಾರಾಗಿದ್ದಾರೆ? ನಿರಾಕಾರ ಶ್ರೇಷ್ಠಾತಿ ಶ್ರೇಷ್ಠ ಪರಮಾತ್ಮನೇ ಪತಿತ-ಪಾವನನಾಗಿದ್ದಾರೆ. ಈ ಮಹಿಮೆಯು ಆ ಪರಮಪಿತ ಪರಮಾತ್ಮನದೇ ಆಗಿದೆ. ಇಲ್ಲಿಯೂ ಸಹ ಆತ್ಮನದೇ ಮಹಿಮೆಯಾಗುತ್ತದೆ, ಆತ್ಮನೇ ಶರೀರದ ಮೂಲಕ ನಾನು ಪ್ರೆಸಿಡೆಂಟ್ ಆಗಿದ್ದೇನೆ, ನಾನು ಬ್ಯಾರಿಸ್ಟರ್ ಆಗಿದ್ದೇನೆ, ನಾನು ಇಂತಹ ಮಿನಿಸ್ಟರ್ ಆಗಿದ್ದೇನೆ…. ಎಂದು ಆತ್ಮವೇ ಶರೀರದ ಮೂಲಕ ಹೇಳುತ್ತದೆ, ಪದವಿಯನ್ನು ಪಡೆಯುತ್ತದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವು ಶರೀರದ ಮೂಲಕ ಹೇಳುತ್ತದೆ. ಮಕ್ಕಳೇ, ಆತ್ಮಾಭಿಮಾನಿಗಳಾಗಿ ಎಂದು ಈ ಸಮಯದಲ್ಲಿ ಬಂದು ತಂದೆಯು ತಿಳಿಸುತ್ತಾರೆ. ಈ ಪಾಠವನ್ನೇ ಹೇಳಿಕೊಡುವುದಕ್ಕಾಗಿಯೇ ನಾನು ನಿಮ್ಮ ತಂದೆಯು ಬಂದಿದ್ದೇನೆ. ಮನುಷ್ಯರಿಂದ ದೇವತೆ, ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುವಂತಹ ಪಾಠಶಾಲೆಯು ಇದಾಗಿದೆ. ಹೇ ಪರಮಪಿತ ಪರಮಾತ್ಮ, ನಿರಾಕಾರಿ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ರೂಪ ಬದಲಾಯಿಸಿಕೊಂಡು ಸಾಕಾರಿ ಪ್ರಪಂಚಕ್ಕೆ ಬನ್ನಿ ಎಂದು ಕರೆಯುತ್ತಾರೆ. ನೀವು ನಿರಾಕಾರಿ ಆತ್ಮಗಳು ಶರೀರದಲ್ಲಿ ಬರುತ್ತೀರೆಂದ ಮೇಲೆ ಗರ್ಭದಲ್ಲಿ ಬರುತ್ತೀರಿ ಮತ್ತು ಪುನರ್ಜನ್ಮವನ್ನೂ ಪಡೆಯುತ್ತೀರಿ. ನೀವು 84 ಜನ್ಮಗಳನ್ನು ಗರ್ಭದಿಂದಲೇ ಪಡೆದಿದ್ದೀರೆಂದು ತಿಳಿಸುತ್ತಾರೆ. ಒಂದು ಶರೀರ ಬಿಟ್ಟು ನಂತರ ಗರ್ಭದಲ್ಲಿ ಹೋಗುತ್ತೀರಿ, ಹೀಗೆ 84 ಜನ್ಮಗಳನ್ನು ಪಡೆಯುತ್ತೀರಿ. ನಾನಂತೂ ಗರ್ಭದಲ್ಲಿ ಬರುವುದಿಲ್ಲ, ವಾಸ್ತವದಲ್ಲಿ ಭಾರತವಾಸಿಗಳು ದೇವಿ-ದೇವತಾ ಧರ್ಮದವರಾಗಿದ್ದರು ನಂತರ ಏಣಿಯನ್ನು ಇಳಿಯುತ್ತಾ ಕ್ಷತ್ರಿಯ ವರ್ಣ, ನಂತರ ವೈಶ್ಯ ವರ್ಣ, ಶೂದ್ರ ವರ್ಣದಲ್ಲಿ ಕಲೆಗಳು ಕಡಿಮೆಯಾಗುತ್ತಾ ಹೋಯಿತು. ಭಾರತವು 16 ಕಲಾ ಸಂಪೂರ್ಣವಾಗಿತ್ತು ನಂತರ 14 ಕಲೆಗಳಾಯಿತು. ಭಾರತವಾಸಿಗಳು ತಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲ, 84 ಜನ್ಮಗಳನ್ನು ಭಾರತವಾಸಿಗಳೇ ಪಡೆಯುತ್ತಾರೆ, ಮತ್ತ್ಯಾರೂ 84 ಜನ್ಮಗಳನ್ನು ಪಡೆಯುವುದಿಲ್ಲ. ನೀವು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ, ಇದು ಜ್ಞಾನದ ಮಾತುಗಳಾಗಿವೆ. ನೀವು ಸ್ವದರ್ಶನ ಚಕ್ರಧಾರಿಗಳಾಗುವುದರಿಂದ ಸ್ವರ್ಗದ ಚಕ್ರವರ್ತಿ ಮಹಾರಾಜರಾಗುತ್ತೀರಿ. ನೀವು ಇಲ್ಲಿ ಪತಿತರಿಂದ ಪಾವನರಾಗಲು ಬಂದಿದ್ದೇವೆಂದು ತಿಳಿದುಕೊಂಡಿದ್ದೀರಿ. ಇದು ಪತಿತ ಪ್ರಪಂಚವಾಗಿದೆ, ಪತಿತ-ಪಾವನ ಎಲ್ಲರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಎಲ್ಲರೂ ಅವರನ್ನೇ ಕರೆಯುತ್ತಾರೆ. ತಂದೆಯೊಬ್ಬರನ್ನೇ ನೆನಪು ಮಾಡುತ್ತಾರೆ ಆದರೆ ಕೃಷ್ಣನನ್ನಲ್ಲ. ಕೃಷ್ಣನು ಗೀತೆಯನ್ನು ನುಡಿಸಿಲ್ಲ. ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ, ಭಾರತದ ಗೀತೆಯು ಯಾವ ಧರ್ಮ ಶಾಸ್ತ್ರದ್ದಾಗಿದೆ? ಆದಿ ಸನಾತನ ದೇವಿ-ದೇವತಾ ಧರ್ಮದ್ದಾಗಿದೆ. ಗೀತೆಯನ್ನು ಯಾರು ನುಡಿಸಿದರು? ರಾಜಯೋಗವನ್ನು ಯಾರು ಕಲಿಸಿಕೊಟ್ಟರು? ಪರಮಪಿತ ಪರಮಾತ್ಮ, ಪತಿತ-ಪಾವನ ತಂದೆಯು ಕಲಿಸಿದರು. ನೀವಾತ್ಮರು ನಿರಾಕಾರರಾಗಿದ್ದಿರಿ, ನೀವೇ ಸಾಕಾರ ಶರೀರವನ್ನು ಧಾರಣೆ ಮಾಡಿದ್ದೀರಿ, ಸಾಕಾರಿ ಮನುಷ್ಯನನ್ನೆಂದೂ ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಭಲೆ ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರಿರುತ್ತಾರೆ, ಅವರನ್ನೂ ಸಹ ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಇದಂತೂ ಅವರಿಗೆ ಬಿರುದುಗಳನ್ನು ಕೊಡಲಾಗುತ್ತದೆ. ಕಾಯಿದೆಯ ಅನುಸಾರ ಭಗವಂತ ಮತ್ತು ರಚಯಿತನು ಒಬ್ಬನೇ ಆಗಿದ್ದಾರೆ, ಉಳಿದೆಲ್ಲರೂ ದೇವತೆಗಳಾಗಿದ್ದಾರೆ. 5000 ವರ್ಷಗಳ ಮಾತಾಗಿದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರನ್ನು ಮಹಾರಾಜ-ಮಹಾರಾಣಿ ಎಂದು ಕರೆಯುತ್ತಿದ್ದರು, ಭಗವಂತನು ಮಹಾರಾಜನಾಗುವುದಿಲ್ಲ. ಅವರು ಭಾರತವಾಸಿಗಳನ್ನು ಇಂತಹ ದೇವಿ-ದೇವತೆಗಳನ್ನಾಗಿ ಮಾಡುವ ತಂದೆಯಾಗಿದ್ದಾರೆ. ಈಗಂತೂ ದೇವಿ-ದೇವತಾ ಧರ್ಮವೇ ಇಲ್ಲ. ಇವರಿಗೆ ರಾವಣ ಸಂಪ್ರದಾಯದವರು ಎಂದು ಹೇಳಲಾಗುತ್ತದೆ ಏಕೆಂದರೆ ರಾವಣ ರಾಜ್ಯವಾಗಿದೆ. ರಾವಣನನ್ನು ಪ್ರತೀ ವರ್ಷ ಸುಡುತ್ತಲೇ ಬರುತ್ತಾರೆ ಏಕೆಂದರೆ ಹಳೆಯ ಶತ್ರುವಾಗಿದ್ದಾನೆ ಆದರೆ ಭಾರತವಾಸಿಗಳು ಇದನ್ನು ತಿಳಿದುಕೊಂಡೇ ಇಲ್ಲ. ಶಾಸ್ತ್ರಗಳಲ್ಲಿಯೂ ಸಹ ರಾವಣನು ಯಾರು ಎಂದು ವರ್ಣನೆಯಿಲ್ಲ, ರಾವಣನಿಗೆ 10 ತಲೆಗಳನ್ನು ತೋರಿಸುತ್ತಾರೆ. ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಈ ಮನುಷ್ಯರಂತೂ ಅವಶ್ಯವಾಗಿ ಕಲ್ಲು ಬುದ್ಧಿಯವರಾಗಿದ್ದಾರೆ, ಈ ಲಕ್ಷ್ಮೀ-ನಾರಾಯಣರನ್ನು ಪಾರಸ ಬುದ್ಧಿಯವರೆಂದು ಕರೆಯುತ್ತಾರೆ. ಪಾರಸನಾಥ-ಪಾರಸನಾಥಿನಿಯರ ರಾಜ್ಯವಿತ್ತು, ರಾಜ-ರಾಣಿಯರು ಹೇಗಿದ್ದರೋ ಅದೇ ರೀತಿ ಪ್ರಜೆಗಳೂ ಇದ್ದರು. ಭಾರತದಂತಹ ಸುಖಧಾಮ ಮತ್ತ್ಯಾವುದೇ ಖಂಡವಿರುವುದಿಲ್ಲ. ಭಾರತವು ಸ್ವರ್ಗವಾಗಿದ್ದಾಗ ಯಾವುದೇ ರೀತಿಯ ಖಾಯಿಲೆಗಳು, ದುಃಖ ಅಥವಾ ರೋಗವಿರಲಿಲ್ಲ, ಸಂಪೂರ್ಣ ಸುಖಿಯಾಗಿದ್ದರು. ಈಶ್ವರನ ಮಹಿಮೆ ಅಪರಮಪಾರವಾಗಿದೆ ಎಂದು ಹೇಳುತ್ತಾರೆ. ಭಾರತದ ಮಹಿಮೆಯೂ ಸಹ ಅಪರಮಪಾರವಾಗಿದೆ. ಪವಿತ್ರತೆಯ ಮೇಲೆ ಎಲ್ಲವೂ ಆಧಾರಿತವಾಗಿದೆ, ಎಲ್ಲರೂ ಪತಿತರಾಗಿದ್ದಾರೆ, ಶಾಂತಿಯಿಲ್ಲ, ಸುಖವಿಲ್ಲ ಎಂದು ಕರೆಯುತ್ತಾರೆ. ನಾವೇ ಭಾರತವಾಸಿಗಳು ಸೂರ್ಯವಂಶಿ, ದೇವಿ-ದೇವತೆಗಳಾಗಿದ್ದೆವು ನಂತರ ನಿಧಾನ-ನಿಧಾನವಾಗಿ ಪತಿತರಾಗಿದ್ದೇವೆಂದು ನೀವೀಗ ತಿಳಿದಿದ್ದೀರಿ, ಇದನ್ನು ಮೃತ್ಯು ಲೋಕವೆಂದು ಕರೆಯಲಾಗುತ್ತದೆ. ಇದಕ್ಕೆ ಬೆಂಕಿಬೀಳಲಿದೆ. ಇದು ಶಿವ ಜ್ಞಾನ ಯಜ್ಞವಾಗಿದೆ, ರುದ್ರ ಜ್ಞಾನ ಯಜ್ಞವೆಂದೂ ಸಹ ಕರೆಯಲಾಗುತ್ತದೆ. ಮನುಷ್ಯರಂತೂ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಶಿವನ ಮೂರ್ತಿಯನ್ನು ನೋಡಿದ ಕೂಡಲೇ ಅನೇಕ ಭಿನ್ನ-ಭಿನ್ನವಾದ ಹೆಸರುಗಳನ್ನು ಇಡುತ್ತಾರೆ, ಒಬ್ಬನನ್ನೇ ಅನೇಕ ಹೆಸರುಗಳಲ್ಲಿ ಮಂದಿರಗಳನ್ನು ಕಟ್ಟಿಸುತ್ತಾರೆ. ಜ್ಞಾನ, ಭಕ್ತಿ, ವೈರಾಗ್ಯ ಎಂದು ತಂದೆಯು ತಿಳಿಸುತ್ತಾರೆ. ಈಗ ಭಕ್ತಿ ಪೂರ್ಣವಾಗಿದೆ, ನಿಮಗೆ ಭಕ್ತಿಯಿಂದ ವೈರಾಗ್ಯ ಬರುತ್ತದೆ ಅರ್ಥಾತ್ ಈ ಹಳೆಯ ಪ್ರಪಂಚದಿಂದ ವೈರಾಗ್ಯ ಬರುತ್ತದೆ. ಈ ಹಳೆಯ ಪ್ರಪಂಚವು ಈಗ ವಿನಾಶವಾಗಲಿದೆ.

ಬಾಬಾ, ನಾವು ಪತಿತರಿಂದ ಪಾವನರು ಹೇಗಾಗುವುದು ಎಂದು ಮಕ್ಕಳು ಕೇಳುತ್ತಾರೆ. ಹೊಸಬರು ಬರುತ್ತಾರೆಂದರೆ ಅವರನ್ನು ಒಳಗೆ ಬರಲು ಅನುಮತಿ ಕೊಡುವುದಿಲ್ಲ, ಕಾಲೇಜಿನಲ್ಲಿ ಯಾರಾದರೂ ಹೊಸಬರು ಹೋಗಿ ಕುಳಿತುಕೊಂಡರೆ ಅವರಿಗೆ ಏನೂ ಅರ್ಥವಾಗುವುದಿಲ್ಲವೋ ಹಾಗೆಯೇ ಇಲ್ಲಿಯೂ ಮನುಷ್ಯರಿಂದ ದೇವತೆಗಳಾಗುವುದು ಹೇಗೆಂಬುದು ಅರ್ಥವಾಗುವುದಿಲ್ಲ. ಮನುಷ್ಯರು ಯಾರು ಪತಿತರಾಗಿದ್ದಾರೆಯೋ ಅವರೇ ಪಾವನರಾಗುತ್ತಾರೆ. ಈ ಸಮಯದಲ್ಲಿ ಭಾರತವು ಭಿಕ್ಷುಕನಾಗಿದೆ, ಸತ್ಯಯುಗದಲ್ಲಿ ಭಾರತವೇ ರಾಜಕುಮಾರನಾಗಿತ್ತು. ಶ್ರೀಕೃಷ್ಣನು ಸತ್ಯಯುಗದ ಮೊದಲನೇ ನಂಬರಿನ ರಾಜಕುಮಾರನಾಗಿದ್ದನು, ಅವನಲ್ಲಿ ಎಲ್ಲಾ ಗುಣಗಳಿದ್ದವು, ಲಕ್ಷ್ಮೀ-ನಾರಾಯಣರ ರಾಜ್ಯವೆಂದು ಹೇಳುತ್ತಾರೆ. ಕೃಷ್ಣನು ರಾಜಕುಮಾರನಾಗಿದ್ದನು, ರಾಧೆ ರಾಜಕುಮಾರಿಯಾಗಿದ್ದಳು. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ…..ಇದು ರಾಜಕುಮಾರನಾದ ಕೃಷ್ಣನ ಮಹಿಮೆಯಾಗಿದೆ. ಅವನು ಯಾವುದೇ ಗೀತೆಯನ್ನು ನುಡಿಸಿಲ್ಲ. ಅವನಂತೂ ಸತ್ಯಯುಗದ ರಾಜಕುಮಾರನಾಗಿದ್ದನು, ಅವನು ಪತಿತ ಮನುಷ್ಯರನ್ನು ಪಾವನ ಮಾಡಲು ಗೀತೆಯನ್ನು ನುಡಿಸಿರುವುದು ಸಾಧ್ಯವೇ ಇಲ್ಲ. ಇದೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಶಾಸ್ತ್ರಗಳ ಮಹಿಮೆಯು ಎಷ್ಟೊಂದಿದೆ! ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಾಗಲಿ, ಚಿತ್ರಗಳಾಗಲಿ, ಭಕ್ತಿಮಾರ್ಗದ್ದು ಏನೂ ಇರುವುದಿಲ್ಲ. ಅಲ್ಲಂತೂ ಜ್ಞಾನದ ಪ್ರಾಲಬ್ಧವು 21 ಜನ್ಮಗಳಿಗೆ ಸಿಗುತ್ತದೆ. ಪುನಃ ಸತ್ಯಯುಗದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ. ಭಾರತವಾಸಿಗಳು ಸತ್ಯಯುಗದಲ್ಲಿ 5000 ವರ್ಷಗಳಹಿಂದೆ ವಿಶ್ವದ ಮಾಲೀಕರಾಗಿದ್ದರು ಮತ್ತು ಯಾವುದೇ ರೀತಿಯ ವಿಭಜನೆಗಳಿರಲಿಲ್ಲ, ಇದು 5000 ವರ್ಷಗಳ ಮಾತಾಗಿದೆ. ಈಗ ಕಲಿಯುಗದ ಅಂತ್ಯವಲ್ಲವೆ. ವಿನಾಶವಂತೂ ಎದುರಿನಲ್ಲಿದೆ. ಭಗವಂತನೇ ಈ ಜ್ಞಾನ ಯಜ್ಞವನ್ನು ರಚಿಸಿದ್ದಾರೆ, ಪತಿತ ಕಲಿಯುಗವನ್ನು ಪಾವನ ಸತ್ಯಯುಗವನ್ನಾಗಿ ಮಾಡಬೇಕೆಂದರೆ ಅವಶ್ಯವಾಗಿ ಪತಿತ ಪ್ರಪಂಚ ವಿನಾಶವಾಗಲೇಬೇಕು. ಬ್ರಹ್ಮನ ಮುಖಾಂತರ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು ಎಂದು ಗಾಯನವಿದೆ, ಅದು ಈಗ ಶಿವ ತಂದೆಯು ಬ್ರಹ್ಮನ ಮೂಲಕ ಮಾಡುತ್ತಿದ್ದಾರೆ. ನೀವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ. ಅವರಂತೂ ಪ್ರಜಾಪಿತ ಆಗಿದ್ದಾರೆ. ಎಲ್ಲರೂ ಬ್ರಹ್ಮನ ಮಕ್ಕಳಾಗಿದ್ದಾರೆ, ಅವಶ್ಯವಾಗಿ ಬ್ರಹ್ಮನ ಮೂಲಕ ಸ್ವರ್ಗದ ಸ್ಥಾಪನೆ ಆಗಿತ್ತು, ಇಂದಿಗೆ 5000 ವರ್ಷಗಳ ಹಿಂದಿನಂತೆ ಸಂಗಮದಲ್ಲಿ ಬಂದು ನಿಮಗೆ ರಾಜಯೋಗವನ್ನು ಕಲಿಸಿಕೊಟ್ಟಿದ್ದರು. ಕೃಷ್ಣನಲ್ಲ, ನಾನು ಬಂದಿದ್ದೆನು. ಕೃಷ್ಣನು ಪತಿತ ಪ್ರಪಂಚದಲ್ಲಿ ಬರಲು ಸಾಧ್ಯವಿಲ್ಲ, ತಂದೆಯೇ ಬರುತ್ತಾರೆ, ಅವರೇ ಎಲ್ಲರ ಸದ್ಗತಿದಾತನಾಗಿದ್ದಾರೆ. ಮನುಷ್ಯನು ಮನುಷ್ಯನಿಗೆ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ನೆನಪನನ್ನಂತೂ ಒಬ್ಬನನ್ನೇ ಮಾಡುತ್ತಾರೆ, ಪರಮಪಿತ ಪರಮಾತ್ಮನು ಎಲ್ಲಿರುತ್ತಾರೆ? ಪರಮಧಾಮದಲ್ಲಿ ಇರುತ್ತಾರೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅದು ಬ್ರಹ್ಮ ಮಹಾತತ್ವವಾಗಿದೆ. ಅಲ್ಲಿ ಆತ್ಮಗಳು ಮಹಾತ್ಮರಂತೆ ಪವಿತ್ರರಾಗಿರುತ್ತಾರೆ. ಇಲ್ಲಿಯೂ ಸಹ ಮಹಾನ್ ಆತ್ಮ, ಪತಿತ ಆತ್ಮನೆಂದು ಹೇಳುತ್ತಾರಲ್ಲವೆ. ವಾಸ್ತವದಲ್ಲಿ ಮಹಾನ್ ಆತ್ಮರಂತೂ ಒಬ್ಬರೂ ಇಲ್ಲ. ಆತ್ಮವೇ ಜ್ಞಾನ-ಯೋಗದಿಂದ ಪಾವನ ಸತೋಪ್ರಧಾನವಾಗಬೇಕಾಗಿದೆ, ನೀರಿನಿಂದಲ್ಲ. ಆತ್ಮವೇ ಪತಿತವಾಗಿದೆ, ಆತ್ಮದಲ್ಲಿಯೇ ತುಕ್ಕು ಬಿದ್ದಿದೆ. ಆತ್ಮವೇ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸಮಾನವಾಗುತ್ತದೆ. ಈಗ ಆತ್ಮರು ಪತಿತರಾಗಿದ್ದಾರೆ ಆದರೆ ಅವರನ್ನು ಪಾವನ ಮಾಡುವವರು ಯಾರು? ಪರಮಪಿತ ಪರಮಾತ್ಮನ ಹೊರತು ಮತ್ತ್ಯಾರೂ ಪಾವನ ಮಾಡಲು ಸಾಧ್ಯವಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮೆಲ್ಲರ ಪಾಪವು ಭಸ್ಮವಾಗುವುದು ಎಂದು ತಂದೆಯು ತಿಳಿಸುತ್ತಾರೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತೀರಿ, ಇದರಲ್ಲಿಯೇ ಪರಿಶ್ರಮವಿದೆ. ಜ್ಞಾನವಂತೂ ಬುದ್ಧಿಯಲ್ಲಿದೆ, ಈ ಚಕ್ರವು ಹೇಗೆ ಸುತ್ತುತ್ತದೆ, 84 ಜನ್ಮಗಳನ್ನು ಹೇಗೆ ಪಡೆಯುತ್ತೇವೆ? ಸತ್ಯಯುಗದಲ್ಲಿ ಎಷ್ಟು ಸಮಯ ರಾಜ್ಯ ನಡೆಯುತ್ತದೆ? ನಂತರ ರಾವಣ ಹೇಗೆ ಬರುತ್ತಾನೆ? ರಾವಣನು ಯಾರಾಗಿದ್ದಾನೆ? ರಾವಣನನ್ನು ಯಾವಾಗಿನಿಂದ ಸುಡುತ್ತಾ ಬಂದಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಪ್ರತೀ ವರ್ಷ ಸುಡುತ್ತಲೇ ಇರುತ್ತಾರೆ. ಸತ್ಯಯುಗದಲ್ಲಂತೂ ಸುಡುವುದಿಲ್ಲ, ಈಗಂತೂ ರಾವಣ ರಾಜ್ಯವಾಗಿದೆ, ರಾಮ ರಾಜ್ಯವಂತೂ ಯಾರೂ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಇದಂತೂ ತಂದೆಯದೇ ಕೆಲಸವಾಗಿದೆ. ಪತಿತ ಮನುಷ್ಯರಂತೂ ಇದನ್ನು ಮಾಡಲು ಸಾಧ್ಯವೇ ಇಲ್ಲ, ಅವರೆಲ್ಲರೂ ವಿನಾಶವಾಗಿ ಬಿಡುತ್ತಾರೆ. ಪತಿತ ಪ್ರಪಂಚವೇ ವಿನಾಶವಾಗಬೇಕಾಗಿದೆ. ಸತ್ಯಯುಗದಲ್ಲಿ ಒಬ್ಬರೂ ಸಹ ಪತಿತ-ಪಾವನ ಬನ್ನಿ ಎಂದು ಕರೆಯುವುದಿಲ್ಲ, ಅದಂತೂ ಪಾವನ ಪ್ರಪಂಚವಲ್ಲವೆ. ಈ ಲಕ್ಷ್ಮೀ-ನಾರಾಯಣರನ್ನು ಸ್ವರ್ಗದ ಮಾಲೀಕರನ್ನಾಗಿ ಯಾರು ಮಾಡಿದರೆಂದು ನೀವೀಗ ತಿಳಿದಿದ್ದೀರಿ. ನಂತರ ಇವರೇ 84 ಜನ್ಮಗಳನ್ನು ಪಡೆದಿದ್ದಾರೆ, ಆದಿ ಸನಾತನ ದೇವಿ-ದೇವತಾ ಧರ್ಮದವರೇ 84 ಜನ್ಮವನ್ನು ಪಡೆದಿದ್ದಾರೆ, ಅವರೇ ಈ ಸಮಯದಲ್ಲಿ ಶೂದ್ರ ವಂಶಿಗಳಾಗಿದ್ದಾರೆ. ಈಗ ಮತ್ತೆ ಬ್ರಾಹ್ಮಣ ವಂಶಿಗಳಾಗುತ್ತಾರೆ, ಈಗ ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಇದು ಶ್ರೇಷ್ಠಾತಿ ಶ್ರೇಷ್ಠ ಶಿಖೆಯಾಗಿದೆ. ಬ್ರಹ್ಮನ ಮುಖವಂಶಾವಳಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ, ನೀವು ಶಿವ ತಂದೆಯ ಮಕ್ಕಳೂ ಆಗಿದ್ದೀರಿ, ಮೊಮ್ಮಕ್ಕಳೂ ಆಗಿದ್ದೀರಿ. ಶಿವವಂಶಿಯರು ನಂತರ ಬ್ರಹ್ಮಾಕುಮಾರ-ಕುಮಾರಿಯರೂ ಆಗಿದ್ದೀರಿ. ಆಸ್ತಿಯಂತೂ ತಾತನಿಂದ ಬರುತ್ತದೆ. ನನ್ನನ್ನು ನಿರಂತರವಾಗಿ ನೆನಪು ಮಾಡಿ, ಪಾವನರಾದಿರೆಂದರೆ ಆಗ ನನ್ನ ಬಳಿ ಮುಕ್ತಿಧಾಮಕ್ಕೆ ಬಂದು ಬಿಡುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಈ ಮಾತುಗಳನ್ನು ಯಾರು ಕಲ್ಪದ ಹಿಂದೆ ತಿಳಿದಿದ್ದರೋ ಅವರೇ ತಿಳಿದುಕೊಳ್ಳುತ್ತಾರೆ. ಸಾವಿರಾರು ಮಂದಿಯಿದ್ದಾರೆ. ಕೆಲವರು ಕೇಳುತ್ತಾರೆ – ಎಷ್ಟು ಬಿ.ಕೆ. ಗಳಿದ್ದಾರೆ? ಅಂದಾಜಿನಲ್ಲಿ ಸಾವಿರಾರು ಮಂದಿಯಿದ್ದಾರೆಂದು ಹೇಳಿ. ಈ ದೈವೀ ವೃಕ್ಷದ ವೃದ್ಧಿ ಆಗುತ್ತಲೇ ಹೋಗುತ್ತದೆ. ಮತ್ತೆ ಈ ಸಸಿಯನ್ನು ನಾಟಿ ಮಾಡಲಾಗುತ್ತಿದೆ ಏಕೆಂದರೆ ಆದಿ ಸನಾತನ ದೇವಿ-ದೇವತಾಧರ್ಮವು ಈಗಿಲ್ಲ. ಎಲ್ಲರೂ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ, ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆ. ಮತ್ತೆಲ್ಲರೂ ಅಲ್ಲಿಂದ ಬಂದು ಆಸ್ತಿಯನ್ನು ಪಡೆಯುತ್ತಾರೆ. ನೀವೂ ಸಹ ಬೇಹದ್ದಿನ ತಂದೆಯಿಂದ ಸುಖದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ ಅರ್ಥಾತ್ ಮನುಷ್ಯರಿಂದ ದೇವತೆಗಳಾಗಲು ಬಂದಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪತಿತರಿಂದ ಪಾವನರಾಗುವುದಕ್ಕೆ ಜ್ಞಾನ-ಯೋಗದಲ್ಲಿ ಶಕ್ತಿಶಾಲಿಯಾಗಬೇಕಾಗಿದೆ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದನ್ನು ನೆನಪಿನ ಪರಿಶ್ರಮದಿಂದ ತೆಗೆಯಬೇಕಾಗಿದೆ.

2. ನಾವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರು ಶಿಖೆಯಾಗಿದ್ದೇವೆ – ಇದೇ ನಶೆಯಲ್ಲಿರಬೇಕಾಗಿದೆ. ಬ್ರಾಹ್ಮಣನೇ ಆಸ್ತಿಗೆ ಹಕ್ಕುದಾರರಾಗಿದ್ದಾರೆ ಏಕೆಂದರೆ ಶಿವ ತಂದೆಯ ಮೊಮ್ಮಕ್ಕಳಾಗಿದ್ದಾರೆ.

ವರದಾನ:-

ಆತ್ಮದ ಅನಾದಿ ಹಾಗೂ ಆದಿಯ ಎರಡೂ ಕಾಲದ ಸತ್ಯ ಸ್ವರೂಪವು ಪವಿತ್ರತೆಯಾಗಿದೆ. ಅಪವಿತ್ರತೆಯು ಅಸ್ವಾಭಾವಿಕ, ಶೂದ್ರರ ಕೊಡುಗೆ ಆಗಿದೆ. ಶೂದ್ರರ ವಸ್ತುವನ್ನು ಬ್ರಾಹ್ಮಣ ಉಪಯೋಗ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕೇವಲ ಇದೇ ಸಂಕಲ್ಪ ಮಾಡಿರಿ – ನಾನು ಅನಾದಿ-ಆದಿ ಕಾಲದ ಸತ್ಯ ರೂಪದಲ್ಲಿ ಪವಿತ್ರ ಆತ್ಮನಾಗಿದ್ದೆನು. ಯಾರನ್ನೇ ನೋಡುವಿರೆಂದರೆ, ಅವರ ಸತ್ಯ ರೂಪವನ್ನು ನೋಡಿರಿ, ಸತ್ಯತೆಯನ್ನು ಅನುಭೂತಿಯನ್ನು ಮಾಡುತ್ತೀರೆಂದರೆ, ಸಂಪೂರ್ಣ ಪವಿತ್ರ ಆತ್ಮರಾಗಿ ಮೊದಲ ದರ್ಜೆ ಅಥವಾ ಏರ್ಕಂಡೀಷನ್ ಟಿಕೆಟ್ನ ಅಧಿಕಾರಿ ಆಗಿ ಬಿಡುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top