29 June 2021 KANNADA Murli Today | Brahma Kumaris

Read and Listen today’s Gyan Murli in Kannada

28 June 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಆತ್ಮಿಕ ಮಾರ್ಗದರ್ಶಕರಾಗಿದ್ದೀರಿ, ಗೃಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡುತ್ತಾ ನೀವು ಕಮಲ ಪುಷ್ಫ ಸಮಾನರಾಗಿ, ನೆನಪಿನ ಯಾತ್ರೆ ಮಾಡಬೇಕು ಹಾಗೂ ಮಾಡಿಸಬೇಕಾಗಿದೆ”

ಪ್ರಶ್ನೆ:: -

ತಂದೆಯು ಮಕ್ಕಳಿಗೆ ಯಾವ ಶೃಂಗಾರ ಮಾಡುತ್ತಾರೆ? ಯಾವ ಶೃಂಗಾರವನ್ನು ನಿರಾಕರಿಸುತ್ತಾರೆ?

ಉತ್ತರ:-

ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇ, ನಾನು ನಿಮ್ಮ ಆತ್ಮಿಕ ಶೃಂಗಾರ ಮಾಡಲು ಬಂದಿದ್ದೇನೆ, ನೀವು ಎಂದೂ ದೈಹಿಕ ಶೃಂಗಾರ ಮಾಡಬಾರದು. ನೀವೀಗ ಭಿಕಾರಿಗಳಾಗಿದ್ದೀರಿ, ನಿಮಗೆ ಫ್ಯಾಷನ್ನಿನ ಆಸಕ್ತಿಯಿರಬಾರದು. ಪ್ರಪಂಚವು ಬಹಳ ಕೆಟ್ಟದ್ದಾಗಿದೆ. ಆದ್ದರಿಂದ ಸ್ವಲ್ಪವೂ ಶರೀರದ ಫ್ಯಾಷನ್ ಮಾಡಬೇಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಇಂದು ಬಂದಿತು……..

ಓಂ ಶಾಂತಿ. ಬೇಹದ್ದಿನ ತಂದೆಯು ಕುಳಿತು ಬೇಹದ್ದಿನ ಮಕ್ಕಳಿಗೆ ತಿಳಿಸುತ್ತಾರೆ. ಬೇಹದ್ ಎಂದರೆ ಯಾವುದೇ ಹದ್ ಅರ್ಥಾತ್ ಪರಿಮಿತಿಯಿಲ್ಲ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಇಷ್ಟು ಅಸಂಖ್ಯಾತ ಮಕ್ಕಳಿಗೆ ಒಬ್ಬರೇ ತಂದೆಯಿದ್ದಾರೆ, ಅವರಿಗೆ ರಚಯಿತನೆಂದು ಹೇಳಲಾಗುತ್ತದೆ. ಲೌಕಿಕ ತಂದೆಯರಂತೂ ಅನೇಕರಿದ್ದಾರೆ, ಇವರು ಬೇಹದ್ದಿನ ಆತ್ಮಗಳ ತಂದೆಯಾಗಿದ್ದಾರೆ. ಅವರು ಹದ್ದಿನ, ದೈಹಿಕ ತಂದೆಯಾಗಿದ್ದಾರೆ. ಇವರು ಬೇಹದ್ದಿನ ಆತ್ಮಗಳಿಗೆ ಒಬ್ಬರೇ ತಂದೆಯಾಗಿದ್ದಾರೆ ಯಾರನ್ನು ಭಕ್ತಿಮಾರ್ಗದಲ್ಲಿ ಎಲ್ಲಾ ಆತ್ಮರು ನೆನಪು ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಭಕ್ತಿಮಾರ್ಗವೂ ಇದೆ ಜೊತೆ ಜೊತೆಗೆ ರಾವಣ ರಾಜ್ಯವೂ ಇದೆ. ನಮ್ಮನ್ನು ರಾವಣ ರಾಜ್ಯದಿಂದ ರಾಮ ರಾಜ್ಯಕ್ಕೆ ಕರೆದುಕೊಂಡು ಹೋಗಿ ಎಂದು ಮನುಷ್ಯರು ಕರೆಯುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ – ನೋಡಿ, ಯಾವ ದೇವಿ-ದೇವತೆಗಳು ಮಾಲೀಕರಾಗಿದ್ದರೋ ಅವರು ಈಗ ಇಲ್ಲ. ಅವರು ಯಾರಾಗಿದ್ದರು ಎಂಬುದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ. ನಾವೇ ಸತ್ಯಯುಗೀ ಸೂರ್ಯವಂಶಿ ಮನೆತನದ ಮಾಲೀಕರಾಗಿದ್ದೇವು. ರಾಜ-ರಾಣಿಯರಂತೂ ಇರುತ್ತಾರಲ್ಲವೆ. ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ – ನಾವು ಮಕ್ಕಳಿಗೆ ರಾಜ್ಯಭಾಗ್ಯದ ಆಸ್ತಿಯನ್ನು ಕೊಡಲು, ವಿಶ್ವದ ಮಾಲೀಕರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ, ಈಗ ಎಲ್ಲರೂ ಭಕ್ತಿಮಾರ್ಗದಲ್ಲಿದ್ದಾರೆ. ಜ್ಞಾನ ಮಾರ್ಗವನ್ನು ಕೇವಲ ಒಬ್ಬ ತಂದೆಯೇ ನಿಮಗೆ ಕಲಿಸುತ್ತಾರೆ. ಆ ಬೇಹದ್ದಿನ ತಂದೆಯನ್ನು ಭಕ್ತಿಮಾರ್ಗದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ಈಗ ನಿಮಗೆ 21 ಜನ್ಮಗಳಿಗಾಗಿ ಜ್ಞಾನದ ರಾಜಧಾನಿಯು ಸಿಗುತ್ತದೆ. ನಂತರ ಅರ್ಧ ಕಲ್ಪದವರೆಗೆ ನೀವು ಕರೆಯುವುದೇ ಇಲ್ಲ. ಅಯ್ಯೊ ರಾಮ, ಅಯ್ಯೊ ಪ್ರಭು, ಎಂದು ಹೇಳುವ ಅವಶ್ಯಕತೆಯೇ ಇರುವುದಿಲ್ಲ. ದುಃಖಿಯಾದಾಗಲೇ ಅಯ್ಯೋ ರಾಮ ಎನ್ನುತ್ತಾರೆ, ನಿಮಗೆ ಅಲ್ಲಿ ದುಃಖವೇ ಇರುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಈ ಆಟವು ಮಾಡಲ್ಪಟ್ಟಿದೆ, ಅರ್ಧ ಕಲ್ಪ ಜ್ಞಾನದ ದಿನ, ಇನ್ನರ್ಧ ಕಲ್ಪ ಭಕ್ತಿಯ ರಾತ್ರಿಯಿರುವುದು. ನೀವು ಮಕ್ಕಳ ಬುದ್ಧಿಯಲ್ಲಿ ಏಣಿಯ ಜ್ಞಾನವು ಖಂಡಿತ ಇರಬೇಕಾಗಿದೆ. ತಂದೆಯು ತಿಳಿಸುತ್ತಾರೆ, ಇದು 84 ಜನ್ಮಗಳ ಚಕ್ರವಾಗಿದೆ. ಈ ಚಕ್ರವನ್ನು ಅರಿತುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಆದ್ದರಿಂದ ತಂದೆಯು ಚಿತ್ರಗಳನ್ನೂ ಮಾಡಿಸುತ್ತಿದ್ದಾರೆ, ಇದರಿಂದಲೇ ಸಿದ್ಧವಾಗುತ್ತದೆ – ನಾವು ಈ ಚಕ್ರವನ್ನು ಅರಿತುಕೊಂಡರೆ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಪಡೆದುಕೊಳ್ಳುತ್ತೇವೆ.

ನೀವೀಗ ಬಹಳಷ್ಟು ಮಂದಿ ಇದ್ದೀರಿ. ದೊಡ್ಡ ಆತ್ಮಿಕ ಶಕ್ತಿ ಸೇನೆಯಾಗಿದೆ. ನೀವೆಲ್ಲರೂ ಮಾರ್ಗದರ್ಶಕರಾಗಿದ್ದೀರಿ. ತಂದೆಯೂ ಸಹ ಮಾರ್ಗದರ್ಶಕನಾಗಿದ್ದಾರೆ. ಅವರಿಗೆ ಪಂಡ ಎಂದೂ ಹೇಳಲಾಗುತ್ತದೆ. ಈ ಮಾರ್ಗದರ್ಶಕ ಶಬ್ಧವು ಶುಭವಾಗಿದೆ. ಯಾತ್ರೆಗೆ ಕರೆದುಕೊಂಡು ಹೋಗಲು ಮಾರ್ಗದರ್ಶಕರಿರುತ್ತಾರೆ, ಯಾತ್ರಿಕರು ಹೋದಾಗ ಇವರಿಗೆ ಎಲ್ಲವನ್ನೂ ತೋರಿಸಿ ಎಂದು ಮಾರ್ಗದರ್ಶಕರಿಗೆ ಹೇಳುತ್ತಾರೆ. ತೀರ್ಥ ಯಾತ್ರೆಗಳಲ್ಲಿಯೂ ಮಾರ್ಗದರ್ಶಕರು ಸಿಗುತ್ತಾರೆ. ತಂದೆಯು ಹೇಳುತ್ತಾರೆ – ಜನ್ಮ-ಜನ್ಮಾಂತರದಿಂದ ತೀರ್ಥ ಯಾತ್ರೆಗಳನ್ನು ಮಾಡುತ್ತಾ ಬಂದಿದ್ದೀರಿ, ಅಮರ ನಾಥಕ್ಕೂ ಹೋಗುತ್ತಾರೆ, ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ, ಪರಿಕ್ರಮಣ ಮಾಡುತ್ತಾರೆ. ಅಲ್ಲಿ ಹೋಗುವ ಸಮಯದಲ್ಲಿ ಅದೇ ನೆನಪಿರುತ್ತದೆ. ಉದ್ಯೋಗ-ವ್ಯವಹಾರ ಎಲ್ಲದರಿಂದ ಬುದ್ಧಿಯೋಗವು ದೂರವಿರುತ್ತದೆ. ಇಲ್ಲಿ ನಿಮಗೆ ತಿಳಿಸಲಾಗುತ್ತದೆ, ತಮ್ಮ ಗೃಹಸ್ಥದಲ್ಲಿದ್ದರೂ ಸಹ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ಇರಿ ಮತ್ತು ಗುಪ್ತ ಯಾತ್ರೆಯಲ್ಲಿರಿ. ಇದು ಒಳ್ಳೆಯದಾಗಿದೆ! ಎಷ್ಟು ದೊಡ್ಡ ವ್ಯಾಪಾರ ಮಾಡಬೇಕೋ ಅಷ್ಟನ್ನೂ ಮಾಡಿರಿ, ಯಾರನ್ನೂ ನಿರಾಕರಿಸುವುದಿಲ್ಲ. ಭಲೆ ತಮ್ಮ ರಾಜ್ಯವನ್ನು ಸಂಭಾಲನೆ ಮಾಡಿ. ರಾಜ ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತು, ನಿಮಗೆ ಯಾವುದೇ ಹೊರಗಿನ ಯಾತ್ರೆ ಇತ್ಯಾದಿಗಳಲ್ಲಿ ಸುತ್ತುವ ಅವಶ್ಯಕತೆಯಿಲ್ಲ. ತಮ್ಮ ಗೃಹಸ್ಥವನ್ನೂ ಪೂರ್ಣ ರೀತಿಯಿಂದ ಸಂಭಾಲನೆ ಮಾಡಿರಿ, ಯಾರು ಬುದ್ಧಿವಂತ, ಒಳ್ಳೆಯ ಮಕ್ಕಳಿದ್ದಾರೆಯೋ ಅವರು ನಾವು ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಿರಬೇಕೆಂದು ತಿಳಿಯುತ್ತಾರೆ. ಗೃಹಸ್ಥ ವ್ಯವಹಾರದಲ್ಲಿ ಬೇಸರ ಪಡಬಾರದು. ಕುಮಾರ-ಕುಮಾರಿಯರಂತೂ ಸನ್ಯಾಸಿಗಳಿದ್ದಂತೆ, ಅವರಲ್ಲಿ ವಿಕಾರವಿರುವುದಿಲ್ಲ. ಪಂಚ ವಿಕಾರಗಳಿಂದ ದೂರವಿರುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ನಮ್ಮ ಶೃಂಗಾರವೇ ಭಿನ್ನವಾಗಿದೆ, ಅವರದೇ ಭಿನ್ನವಾಗಿದೆ. ಅವರದು ತಮೋಪ್ರಧಾನ ಶೃಂಗಾರವಾಗಿದೆ, ನಿಮ್ಮದು ಸತೋಪ್ರಧಾನ ಶೃಂಗಾರವಾಗಿದೆ. ಇದರಿಂದ ನೀವು ಸತೋಪ್ರಧಾನ, ಸೂರ್ಯವಂಶಿ ರಾಜಧಾನಿಯಲ್ಲಿ ಹೋಗಬೇಕಾಗಿದೆ. ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ತಮೋಪ್ರಧಾನ ದೈಹಿಕ ಶೃಂಗಾರವನ್ನು ಸ್ವಲ್ಪವೂ ಮಾಡಬೇಡಿ. ಪ್ರಪಂಚವು ಬಹಳ ಕೆಟ್ಟು ಹೋಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಫ್ಯಾಷನೇಬಲ್ ಆಗಬೇಡಿ. ಫ್ಯಾಷನ್ ಆಕರ್ಷಣೆ ಮಾಡುತ್ತದೆ. ಈ ಸಮಯದಲ್ಲಿ ಸೌಂದರ್ಯವು ಒಳ್ಳೆಯದಲ್ಲ, ಕಪ್ಪಾಗಿದ್ದರೆ ಇನ್ನೂ ಒಳ್ಳೆಯದು. ಯಾವುದೇ ಪೆಟ್ಟು ಬೀಳುವುದಿಲ್ಲ. ಸುಂದರರಾಗಿರುವ ಹಿಂದೆ ಸುತ್ತುತ್ತಿರುತ್ತಾರೆ, ಕೃಷ್ಣನನ್ನೂ ಸಹ ಕಪ್ಪಾಗಿ ತೋರಿಸುತ್ತಾರೆ. ನೀವು ಶಿವ ತಂದೆಯಿಂದ ಸುಂದರರಾಗಬೇಕಾಗಿದೆ, ಅವರಂತೂ ಫೌಡರ್ ಇತ್ಯಾದಿಗಳಿಂದ ಸುಂದರವಾಗಿ ಕಾಣುತ್ತಾರೆ, ಎಷ್ಟೊಂದು ಫ್ಯಾಷನ್ ಇದೆ, ಮಾತೇ ಕೇಳಬೇಡಿ. ಸಾಹುಕಾರರಿಗಂತೂ ಸತ್ಯ ನಾಶವಾಗುತ್ತದೆ, ಬಡವರು ಚೆನ್ನಾಗಿರುತ್ತಾರೆ. ಹಳ್ಳಿಗಳಿಗೆ ಹೋಗಿ ಬಡವರ ಕಲ್ಯಾಣ ಮಾಡಬೇಕಾಗಿದೆ. ಆದರೆ ಸಂದೇಶವನ್ನು ಕೊಡುವವರು ದೊಡ್ಡ ವ್ಯಕ್ತಿಯಾಗಿರಬೇಕು. ನೀವೆಲ್ಲರೂ ಬಡವರಲ್ಲವೆ. ಯಾರಾದರೂ ಸಾಹುಕಾರರಿದ್ದೀರಾ? ನೀವು ನೋಡಿ, ಎಷ್ಟು ಸಾಧಾರಣವಾಗಿ ಕುಳಿತಿದ್ದೀರಿ, ಬಾಂಬೆಯಲ್ಲಿ ಫ್ಯಾಷನ್ ನೋಡಿ ಎಷ್ಟೊಂದಿದೆ!! ತಂದೆಯ ಬಳಿ ಮಿಲನ ಮಾಡಲು ಬರುತ್ತಾರೆ, ಆಗ ಹೇಳುತ್ತೇನೆ – ನೀವು ಈ ಶಾರೀರಕ ಶೃಂಗಾರ ಮಾಡಿಕೊಂಡಿದ್ದೀರಿ, ಬನ್ನಿರಿ ನಿಮಗೆ ಜ್ಞಾನದ ಶೃಂಗಾರ ಮಾಡಿಸುತ್ತೇವೆ ಯಾವುದರಿಂದ ನೀವು ಸ್ವರ್ಗದಲ್ಲಿ 21 ಜನ್ಮಗಳಿಗಾಗಿ ದೇವತೆಯಾಗಿ ಬಿಡುತ್ತೀರಿ. ಸದಾ ಸುಖಿಯಾಗಿರುತ್ತೀರಿ. ಎಂದೂ ಅಳುವುದೂ ಇಲ್ಲ, ದುಃಖವೂ ಆಗುವುದಿಲ್ಲ. ನೀವೀಗ ಈ ದೈಹಿಕ ಶೃಂಗಾರವನ್ನು ಬಿಟ್ಟು ಬಿಡಿ. ನಿಮಗೆ ನಾವು ಜ್ಞಾನ ರತ್ನಗಳಿಂದ ಬಹಳ ಫಸ್ಟ್ಕ್ಲಾಸ್ ಶೃಂಗಾರ ಮಾಡಿಸುತ್ತೇವೆ, ಅದರ ಮಾತೇ ಕೇಳಬೇಡಿ. ಒಂದುವೇಳೆ ನನ್ನ ಮತದಂತೆ ನಡೆಯುವುದಾದರೆ ನಿಮ್ಮನ್ನು ಪಟ್ಟದ ರಾಣಿಯರನ್ನಾಗಿ ಮಾಡುತ್ತೇನೆ, ಇದು ಒಳ್ಳೆಯದಲ್ಲವೆ. ನೀವೆಲ್ಲಾ ಭಾರತವಾಸಿಗಳನ್ನು ಈ ತಮೋಪ್ರಧಾನ, ಆಸುರೀ ಪ್ರಪಂಚ, ನರಕದಿಂದ ಓದಿಸಿ ಸ್ವರ್ಗದ ಮಹಾರಾಣಿಯರನ್ನಾಗಿ ಮಾಡುತ್ತೇನೆ.

ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಇಂದು ನಾವು ಶ್ವೇತ ವಸ್ತ್ರಗಳಲ್ಲಿದ್ದೇವೆ, ಇನ್ನೊಂದು ಜನ್ಮದಲ್ಲಿ ಸ್ವರ್ಗದಲ್ಲಿ ಚಿನ್ನದ ಚಮಚದಿಂದ ಹಾಲು ಕುಡಿಯುತ್ತೀರಿ, ಇದಂತೂ ಬಹಳ ಛೀ ಛೀ ಪ್ರಪಂಚವಾಗಿದೆ. ಸ್ವರ್ಗವಂತೂ ಸ್ವರ್ಗವೇ ಆಗಿದೆ, ಅದರ ಮಾತೇ ಕೇಳಬೇಡಿ. ಇಲ್ಲಿ ನೀವು ಭಿಕಾರಿಗಳಾಗಿದ್ದೀರಿ, ಭಾರತವು ಭಿಕಾರಿಯಾಗಿದೆ. ಭಿಕಾರಿಯಿಂದ ರಾಜಕುಮಾರನೆಂಬ ಗಾಯನವಿದೆ. ಮತ್ತೆ ಈ ಭಾರತದಲ್ಲಿಯೇ ಜನ್ಮ ಪಡೆಯುತ್ತೀರಿ. ತಂದೆಯು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದರು, ರಾತ್ರಿ-ಹಗಲಿನ ಅಂತರವಿದೆ. ಮಹಾನ್ ಬಡವರು ಯಾರಿಗೆ ತಿನ್ನುವುದಕ್ಕೂ ಏನೂ ಇರುವುದಿಲ್ಲವೋ ಅವರಿಗೇ ದಾನ ಮಾಡಲಾಗುತ್ತದೆ. ಭಾರತ ದೇಶವೇ ಮಹಾನ್ ಬಡ ದೇಶವಾಗಿದೆ, ಈ ಸಮಯದಲ್ಲಿ ಎಲ್ಲರೂ ತಮೋ ಪ್ರಧಾನರಾಗಿದ್ದಾರೆಂದು ಪಾಪ! ಅವರಿಗೆ ತಿಳಿಯುವುದೇ ಇಲ್ಲ. ದಿನ-ಪ್ರತಿದಿನ ಏಣಿಯನ್ನು ಕೆಳಗಿಳಿಯುತ್ತಲೇ ಹೋಗುತ್ತೀರಿ. ಈಗ ಯಾರೂ ಏಣಿಯನ್ನು ಏರಲು ಸಾಧ್ಯ. 16 ಕಲೆಗಳಿಂದ 14 ಕಲೆ ನಂತರ 12 ಕಲೆ…. ಕೆಳಗಡೆ ಇಳಿಯುತ್ತಲೇ ಬರುತ್ತಾರೆ. ಈ ಲಕ್ಷ್ಮೀ-ನಾರಾಯಣರೂ ಸಹ 16 ಕಲಾ ಸಂಪೂರ್ಣರಾಗಿದ್ದರು, ನಂತರ 14 ಕಲೆಗಳಲ್ಲಿ ಇಳಿಯುತ್ತಾರಲ್ಲವೆ. ಇದನ್ನೂ ಸಹ ಚೆನ್ನಾಗಿ ನೆನಪಿಟ್ಟುಕೊಳ್ಳಬೇಕಾಗಿದೆ. ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಸಂಪೂರ್ಣ ಪತಿತರಾಗಿದ್ದೀರಿ. ಈಗ ಸ್ವರ್ಗದ ಮಾಲೀಕರನ್ನಾಗಿ ಯಾರು ಮಾಡುವರು? ಈ ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಇದನ್ನೂ ಸಹ ಎಲ್ಲರೂ ಹೇಳುತ್ತಾರೆ ಆದರೆ ಈಗ ಯಾವ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಶಾಸ್ತ್ರಗಳಲ್ಲಿ ಸತ್ಯಯುಗದ ಆಯಸ್ಸನ್ನು ಲಕ್ಷಾಂತರ-ಕೋಟ್ಯಾಂತರ ವರ್ಷಗಳೆಂದು ಬರೆದು ಬಿಟ್ಟರು. ಕೇಳಿರಿ, ಸತ್ಯಯುಗವು ಯಾವಾಗ ಬರುವುದು? ಇನ್ನೂ 40 ಸಾವಿರ ವರ್ಷಗಳಿದೆ ಎಂದು ಹೇಳುತ್ತಾರೆ. ನೀವು ಸಿದ್ಧ ಮಾಡಿ ತಿಳಿಸುತ್ತೀರಿ – ಕಲ್ಪದ ಆಯಸ್ಸು 5000 ವರ್ಷಗಳಾಗಿದೆ. ಅವರು ಕೇವಲ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಘೋರ ಅಂಧಕಾರವಿದೆಯಲ್ಲವೆ ಅಂದಮೇಲೆ ಮನುಷ್ಯರು ಬಂದಿರುವರೆಂದು ಹೇಗೆ ನಂಬುವರು? ಕಲಿಯುಗದ ಅಂತ್ಯವಾದಾಗ ಭಗವಂತನು ಬರುವರೆಂದು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳು ಎಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ. ವಿನಾಶವು ಸನ್ಮುಖದಲ್ಲಿ ನಿಂತಿದೆ. ಮಕ್ಕಳಿಗೆ ತಿಳಿಸಲಾಗುತ್ತದೆ – ವಿನಾಶಕ್ಕೆ ಮೊದಲೇ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ ಆದರೆ ಮನುಷ್ಯರು ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ, ಅಂತಹವರು ಪಾಪ, ಅಯ್ಯೊ ಅಯ್ಯೊ ಎನ್ನುತ್ತಾ ಸಾಯುತ್ತಾರೆ. ನಿಮ್ಮದು ಜಯ ಜಯಕಾರವಾಗುತ್ತದೆ. ವಿನಾಶದಲ್ಲಿ ಇರುವುದೇ ಅಯ್ಯೊ ಅಯ್ಯೊ ಎಂಬ ಶಬ್ಧ. ವಿಪರೀತ ಬುದ್ಧಿಯವರೇ ಅಯ್ಯೊ ಅಯ್ಯೊ ಎನ್ನುತ್ತಾರೆ. ಈಗ ನೀವು ಸತ್ಯ ತಂದೆಯ ಸತ್ಯ ಸಂತಾನರಾಗಿದ್ದೀರಿ. ನರಕದ ವಿನಾಶವಾಗದ ಹೊರತು ಸ್ವರ್ಗವು ಹೇಗಾಗುವುದು? ನೀವು ಹೇಳುತ್ತೀರಿ, ಇದಂತೂ ಮಹಾಭಾರತ ಯುದ್ಧವಾಗಿದೆ, ಇದರಿಂದಲೇ ಸ್ವರ್ಗದ ದ್ವಾರವು ತೆರೆಯುವುದು. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿದೆ – ನಮಗೆ ಈಗ ದೈವೀ ಸ್ವರಾಜ್ಯದ ಬೆಣ್ಣೆಯು ಸಿಗುತ್ತದೆ. ಅವರಂತೂ ಪರಸ್ಪರ ಹೊಡೆದಾಡುತ್ತಾ ಇರುತ್ತಾರೆ, ಅವರು ಮನುಷ್ಯರು ನೀವೂ ಮನುಷ್ಯರೇ ಆದರೆ ಅವರು ಆಸುರೀ ಸಂಪ್ರದಾಯ, ನೀವು ದೈವೀ ಸಂಪ್ರದಾಯದವರಾಗಿದ್ದೀರಿ. ತಂದೆಯು ಮಕ್ಕಳಿಗೆ ಸಮ್ಮುಖದಲ್ಲಿ ತಿಳಿಸುತ್ತಾರೆ – ನೀವು ಮಕ್ಕಳಲ್ಲಿ ಖುಷಿಯಿರುತ್ತದೆ, ನೀವು ಅನೇಕ ಬಾರಿ ಇಂತಹ ರಾಜಧಾನಿಯನ್ನು ಪಡೆದುಕೊಂಡಿದ್ದಿರಿ ಹೇಗೆ ಈಗಲೂ ಸಹ ಪಡೆದುಕೊಳ್ಳುತ್ತಿದ್ದೀರಿ. ಅವರು ಪರಸ್ಪರ ಎರಡು ಬೆಕ್ಕುಗಳಂತೆ ಕಾದಾಡುತ್ತಾರೆ ಇಡೀ ವಿಶ್ವದ ರಾಜ್ಯಭಾಗ್ಯದ ಬೆಣ್ಣೆಯು ನಿಮಗೆ ಸಿಗುತ್ತದೆ. ಇಲ್ಲಿ ನೀವು ವಿಶ್ವದ ಮಾಲೀಕರಾಗುವುದಕ್ಕಾಗಿಯೇ ಬರುತ್ತೀರಿ. ನೀವು ತಿಳಿದುಕೊಳ್ಳುತ್ತೀರಿ – ನಾವು ತಂದೆಯ ಜೊತೆ ಬುದ್ಧಿಯೋಗವನ್ನಿಟ್ಟು ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತೇವೆ. ಅವರು ಪರಸ್ಪರ ಹೊಡೆದಾಡುತ್ತಾರೆ. ನಾವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೇವೆ, ಇದಂತೂ ಸಾಮಾನ್ಯ ಮಾತಾಗಿದೆ. ಆ ಬಾಹುಬಲ ಇರುವವರು ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಯೋಗಬಲದಿಂದ ವಿಶ್ವದ ಮಾಲೀಕರಾದಿರಿ, ನಿಮ್ಮದು ಅಹಿಂಸಾ ಪರಮೋ ದೇವತಾ ಧರ್ಮವಾಗಿದೆ. ಅಲ್ಲಿ ಎರಡೂ ಹಿಂಸೆಗಳಿರುವುದಿಲ್ಲ – ಕಾಮ ಕಟಾರಿಯ ಹಿಂಸೆಯು ಎಲ್ಲದಕ್ಕಿಂತ ಕೆಟ್ಟದಾಗಿದೆ. ಇದು ನಿಮಗೆ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ರಾವಣ ರಾಜ್ಯವು ಯಾವಾಗ ಆಗುತ್ತದೆ ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಈಗ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರೆ ಅಂದಮೇಲೆ ಎಂದಾದರೂ ಪಾವನರಾಗಿದ್ದಿರಲ್ಲವೆ. ದುಃಖದಿಂದ ಮುಕ್ತಗೊಳಿಸಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ, ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು ಭಾರತವಾಸಿ ಮಕ್ಕಳೇ ಕರೆಯುತ್ತಾರೆ. ಕೃಷ್ಣನಿಗೆ ಹರಿ ಎಂದೂ ಹೇಳುತ್ತಾರೆ. ಬಾಬಾ, ನಮ್ಮನ್ನು ಹರಿಯ ದ್ವಾರಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ, ಹರಿಯ ದ್ವಾರವು ಕೃಷ್ಣ ಪುರಿಯಾಗಿದೆ, ಇದು ಕಂಸ ಪುರಿಯಾಗಿದೆ. ಇದು ನಮಗೆ ಇಷ್ಟವಿಲ್ಲ, ಮಾಯಾ ಮಚ್ಛಂದರ್ನ ಆಟವನ್ನು ತೋರಿಸುತ್ತಾರೆ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ, ರಾವಣ ರಾಜ್ಯವು ದ್ವಾಪರದಿಂದ ಆರಂಭವಾಗುತ್ತದೆ. ಯಾವ ದೇವತೆಗಳು ಪಾವನರಿದ್ದರೋ ಅವರು ಪತಿತರಾಗತೊಡಗುತ್ತಾರೆ. ಅದರ ಸಾಕ್ಷಿಗಳು ಜಗನ್ನಾಥ ಪುರಿಯಲ್ಲಿದೆ. ಪ್ರಪಂಚದಲ್ಲಿ ಎಷ್ಟು ಕೊಳಕುತನವಿದೆ! ನಾವಂತೂ ಈಗ ಅವೆಲ್ಲಾ ಮಾತುಗಳಿಂದ ಹೊರ ಬಂದು ಪರಿಸ್ಥಾನಕ್ಕೆ ಹೋಗುತ್ತೇವೆ. ಇದರಲ್ಲಿ ಬಹಳ ಧೈರ್ಯ, ಮಹಾವೀರತನ ಬೇಕು. ತಂದೆಯ ಮಕ್ಕಳಾದ ನಂತರವೂ ಪತಿತರಾಗಬಾರದು. ಸ್ತ್ರೀ-ಪುರುಷರು ಒಟ್ಟಿಗೆ ಇದ್ದು ಪರಸ್ಪರ ಬೆಂಕಿಹತ್ತಿಕೊಳ್ಳದೇ ಇರಲು ಸಾಧ್ಯವೇ ಇಲ್ಲವೆಂದು ತಿಳಿದುಕೊಳ್ಳುತ್ತಾರೆ. ಆದ್ದರಿಂದಲೇ ಇಲ್ಲಿ ಇವರು ಸ್ತ್ರೀ-ಪುರುಷರನ್ನು ಸಹೋದರ-ಸಹೋದರಿಯನ್ನಾಗಿ ಮಾಡಿಸುತ್ತಾರೆಂದು ಬಹಳಷ್ಟು ಹೊಡೆದಾಡುತ್ತಾರೆ. ಈ ರೀತಿಯಂತೂ ಎಲ್ಲಿಯೂ ಬರೆದಿಲ್ಲ, ಇಲ್ಲಿ ಯಾವ ಜಾದುವಿದೆಯೋ ಗೊತ್ತಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಅರೆ! ನೀವು ಬ್ರಹ್ಮಾಕುಮಾರಿಯರ ಬಳಿ ಹೋಗುತ್ತೀರಿ ಮತ್ತು ಅವರು ನಿಮ್ಮನ್ನು ಬಂಧಿಸುತ್ತಾರೆ. ಹೀಗೆ ಅಲ್ಲಿ ಸುಳ್ಳು ಹೇಳುತ್ತಿರುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾರ ಪಾತ್ರವಿರುವುದೋ ಅವರು ಬಂದೇ ಬರುತ್ತಾರೆ. ಇದರಲ್ಲಿ ಹೆದರುವ ಮಾತಿಲ್ಲ. ಶಿವ ತಂದೆಯಂತೂ ಜ್ಞಾನ ಸಾಗರ, ಪತಿತ-ಪಾವನ, ಸರ್ವರ ಸದ್ಗತಿದಾತನಾಗಿದ್ದಾರೆ. ಬ್ರಹ್ಮಾರವರ ಮೂಲಕ ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಈ ಶಬ್ಧವು ಇಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯಬೇಕು, ಅದನ್ನು ಯಾರು ಬೇಕಾದರೂ ಓದುವಂತಿರಲಿ. ಪವಿತ್ರತೆಗಾಗಿ ಎಷ್ಟೊಂದು ವಿಘ್ನಗಳನ್ನು ಹಾಕುತ್ತಾರೆ.

ತಂದೆಯು ಹೇಳುತ್ತಾರೆ – ಮಕ್ಕಳೇ, ಯಾವುದೇ ದೇಹಧಾರಿಯಲ್ಲಿ ಮೋಹದ ಸೆಳೆತವಿರಬಾರದು. ಒಂದುವೇಳೆ ಎಲ್ಲಿಯಾದರೂ ಮೋಹದ ಸೆಳೆತವಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಇಲ್ಲಂತೂ ತಾಯಿ ಸತ್ತಾಗಲೂ ಸಹ ಹಲ್ವ ತಿನ್ನಬೇಕು…. ತಂದೆಯು ಸಮ್ಮುಖದಲ್ಲಿ ಕೂರಿಸಿಕೊಂಡು ಕೇಳುತ್ತಾರೆ – ನಾಳೆ ನಿಮ್ಮವರು ಯಾರಾದರೂ ಸಾವನ್ನಪ್ಪಿದರೆ ಅಳುವುದಿಲ್ಲವೆ? ಕಣ್ಣೀರು ಬಂದರೆ ಅನುತ್ತೀರ್ಣರಾದರು. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡರು ಅದರಲ್ಲಿ ಅಳುವ ಮಾತೇನಿದೆ! ಅನ್ಯರು ಯಾರಾದರೂ ಕೇಳಿಸಿಕೊಂಡರೆ ಹೇಳುವರು, ಬಾಯಿಂದ ಒಳ್ಳೆಯದಾದರೂ ಹೇಳಿರಿ. ಅರೆ! ಒಳ್ಳೆಯದನ್ನೇ ಹೇಳುತ್ತೇವೆ – ಸತ್ಯಯುಗದಲ್ಲಿ ಅಳುವುದೇ ಇಲ್ಲ. ಈ ನಿಮ್ಮ ಜೀವನವು ಅದಕ್ಕಿಂತಲೂ ಶ್ರೇಷ್ಠವಾಗಿದೆ. ನೀವು ಎಲ್ಲರನ್ನೂ ಅಳುವುದರಿಂದ ಪಾರು ಮಾಡುವವರು ಅಂದಮೇಲೆ ನೀವು ಹೇಗೆ ಅಳುವಿರಿ? ನಮಗೆ ಪತಿಯರ ಪತಿ ಸಿಕ್ಕಿದರು, ಅವರು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ ಅಂದಮೇಲೆ ನರಕದಲ್ಲಿ ಬೀಳಿಸುವವರಿಗಾಗಿ ನಾವೇಕೆ ಅಳಬೇಕು? ತಂದೆಯು ಎಷ್ಟು ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿ. ಈ ಸಮಯದಲ್ಲಿ ಭಾರತಕ್ಕೆ ಎಷ್ಟೊಂದು ಅಕಲ್ಯಾಣವಾಗಿದೆ, ತಂದೆಯು ಬಂದು ಕಲ್ಯಾಣ ಮಾಡುತ್ತಾರೆ. ಭಾರತಕ್ಕೆ ಮಗಧ ದೇಶವೆಂದು ಹೇಳುತ್ತಾರೆ. ಸಿಂಧ್ನಲ್ಲಿ ಇರುವವರಷ್ಟು ಫ್ಯಾಷನೇಬಲ್ ಯಾರೂ ಇರುವುದಿಲ್ಲ. ವಿದೇಶದಿಂದ ಫ್ಯಾಷನ್ ಕಲಿತುಕೊಂಡು ಬರುತ್ತಾರೆ. ಕೂದಲಿಗಾಗಿ ಈಗಿನ ಕನ್ಯೆಯರು ಎಷ್ಟೊಂದು ಖರ್ಚು ಮಾಡುತ್ತಾರೆ! ಅವರಿಗೆ ನರಕದ ದೇವತೆಗಳೆಂದು ಕರೆಯಲಾಗುತ್ತದೆ. ತಂದೆಯು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಆ ಮನುಷ್ಯರಂತೂ ನಮಗಾಗಿ ಇಲ್ಲಿಯೇ ಸ್ವರ್ಗವಿದೆ, ಈ ಸುಖವನ್ನು ಅನುಭವಿಸೋಣ ಎಂದು ಹೇಳುತ್ತಾರೆ. ನಾಳೆ ಏನಾಗುವುದೋ ಯಾರಿಗೆ ಗೊತ್ತು! ಇಂತಹ ವಿಚಾರದವರು ಅನೇಕರು ಬರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸತ್ಯ-ಸತ್ಯವಾದ ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಶರೀರ ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರ ಮಾಡುತ್ತಾ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಕಾರ್ಯ ವ್ಯವಹಾರದಲ್ಲಿ ಬೇಸರ ಪಡಬಾರದು.

2. ಜ್ಞಾನ ಶೃಂಗಾರ ಮಾಡಿಕೊಂಡು ಸ್ವಯಂನ್ನು ಸ್ವರ್ಗದ ದೇವತೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಈ ತಮೋಪ್ರಧಾನ ಪ್ರಪಂಚದಲ್ಲಿ ಈ ದೈಹಿಕ ಶೃಂಗಾರ ಮಾಡಬಾರದು. ಕಲಿಯುಗೀ ಫ್ಯಾಷನ್ ಬಿಟ್ಟು ಬಿಡಬೇಕಾಗಿದೆ.

ವರದಾನ:-

ಸಹಜಯೋಗಿ ಜೀವನದ ಅನುಭವ ಮಾಡುವುದಕ್ಕಾಗಿ ಜ್ಞಾನ ಸಹಿತವಾಗಿ ಭಿನ್ನವಾಗಿರಿ, ಕೇವಲ ಹೊರಗಿನಿಂದ ಭಿನ್ನರಾಗುವುದಲ್ಲ ಆದರೆ ಮನಸ್ಸಿನ ಸೆಳೆತವೂ ಇರಬಾರದು. ಯಾರೆಷ್ಟು ಭಿನ್ನವಾಗುವರೋ ಅಷ್ಟು ಅವಶ್ಯವಾಗಿ ಪ್ರಿಯರಾಗಿ ಬಿಡುತ್ತಾರೆ. ಭಿನ್ನವಾದ(ವಿಶೇಷ) ಸ್ಥಿತಿಯು ಪ್ರಿಯವೆನಿಸುತ್ತದೆ. ಯಾರು ಹೊರಗಿನ ಸೆಳೆತದಿಂದ ಭಿನ್ನವಾಗುವುದಿಲ್ಲವೋ ಅವರು ಪ್ರಿಯರಾಗುವ ಬದಲು ಬೇಸರವಾಗುತ್ತಾರೆ. ಆದ್ದರಿಂದ ಸಹಜಯೋಗಿ ಅರ್ಥಾತ್ ಭಿನ್ನ ಹಾಗೂ ಪ್ರಿಯರಾಗುವ ಯೋಗ್ಯತೆಯವರು, ಸರ್ವ ಸೆಳೆತಗಳಿಂದ ಮುಕ್ತರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top