27 June 2021 KANNADA Murli Today | Brahma Kumaris

Read and Listen today’s Gyan Murli in Kannada

June 26, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸಂಗಮಯುಗದಲ್ಲಿ ನಂಬರ್ವನ್ ಪೂಜ್ಯರಾಗುವ ಅಲೌಕಿಕ ವಿಧಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಅನಾದಿ ತಂದೆ ಮತ್ತು ಆದಿ ತಂದೆಯು ಅನಾದಿ ಸಾಲಿಗ್ರಾಮ ಮಕ್ಕಳನ್ನು ಮತ್ತು ಆದಿ ಬ್ರಾಹ್ಮಣ ಮಕ್ಕಳನ್ನು ಡಬಲ್ ರೂಪದಿಂದ ನೋಡುತ್ತಿದ್ದಾರೆ. ಸಾಲಿಗ್ರಾಮ ರೂಪದಲ್ಲಿಯೂ ಪರಮ ಪೂಜ್ಯರಾಗಿದ್ದೀರಿ ಮತ್ತು ಬ್ರಾಹ್ಮಣ ಸೋ ದೇವತಾ ಸ್ವರೂಪದಲ್ಲಿಯೂ ಗಾಯನ ಹಾಗೂ ಪೂಜೆಗೆ ಯೋಗ್ಯರಾಗಿದ್ದೀರಿ. ಆದಿ ಮತ್ತು ಅನಾದಿ ಇಬ್ಬರೂ ತಂದೆಯರು ನೀವು ಪೂಜ್ಯಾತ್ಮಗಳನ್ನು ಎರಡೂ ರೂಪದಿಂದ ನೋಡಿ ಹರ್ಷಿತರಾಗುತ್ತಿದ್ದೇವೆ. ಅನಾದಿ ತಂದೆಯು ಆದಿ ಪಿತನ ಸಹಿತ ಅರ್ಥಾತ್ ಬ್ರಹ್ಮಾ ತಂದೆ ಮತ್ತು ಬ್ರಾಹ್ಮಣ ಮಕ್ಕಳನ್ನು ತನಗಿಂತಲೂ ಹೆಚ್ಚಾಗಿ ಡಬಲ್ ರೂಪದಲ್ಲಿ ಪೂಜ್ಯರನ್ನಾಗಿ ಮಾಡಿದ್ದಾರೆ. ಅನಾದಿ ತಂದೆಯ ಪೂಜೆಯು ಕೇವಲ ಒಂದು ನಿರಾಕಾರನ ರೂಪದಲ್ಲಿ ಆಗುತ್ತದೆ ಆದರೆ ಬ್ರಹ್ಮಾ ಮತ್ತು ಬ್ರಾಹ್ಮಣ ಮಕ್ಕಳ ಪೂಜೆಯು ನಿರಾಕಾರಿ-ಸಾಕಾರಿ ಎರಡೂ ರೂಪಗಳಲ್ಲಿ ನಡೆಯುತ್ತದೆ ಅಂದಾಗ ತಂದೆಯು ಮಕ್ಕಳನ್ನು ತನಗಿಂತಲೂ ಹೆಚ್ಚು ಡಬಲ್ ರೂಪದಿಂದ ಮಹಾನರೆಂದು ತಿಳಿಯುತ್ತಾರೆ.

ಇಂದು ಬಾಪ್ದಾದಾ ಮಕ್ಕಳ ವಿಶೇಷತೆಗಳನ್ನು ನೋಡುತ್ತಿದ್ದೆವು, ಪ್ರತಿಯೊಬ್ಬ ಮಗುವಿನ ವಿಶೇಷತೆಯು ತನ್ನತನ್ನದೇ ಆಗಿದೆ. ಕೆಲವರು ತಂದೆಯ ಹಾಗೂ ಸರ್ವ ಬ್ರಾಹ್ಮಣ ಆತ್ಮಗಳ ವಿಶೇಷತೆಗಳನ್ನು ಅರಿತು ಸ್ವಯಂನಲ್ಲಿ ಸರ್ವ ವಿಶೇಷತೆಗಳನ್ನು ಧಾರಣೆ ಮಾಡಿಕೊಂಡು ಶ್ರೇಷ್ಠ ಅರ್ಥಾತ್ ವಿಶೇಷ ಆತ್ಮಗಳಾಗಿ ಬಿಟ್ಟಿದ್ದಾರೆ. ಇನ್ನೂ ಕೆಲವರು ಕೇವಲ ವಿಶೇಷತೆಗಳನ್ನು ಅರಿತು ಮತ್ತು ನೋಡಿ ಖುಷಿಯಾಗುತ್ತಾರೆ ಆದರೆ ತಮ್ಮಲ್ಲಿ ಸರ್ವ ವಿಶೇಷತೆಗಳನ್ನು ಧಾರಣೆ ಮಾಡಿಕೊಳ್ಳುವ ಸಾಹಸವಿಲ್ಲ. ಮತ್ತೆ ಕೆಲವರು ಪ್ರತೀ ಆತ್ಮನಲ್ಲಿ ಅಥವಾ ಬ್ರಾಹ್ಮಣ ಪರಿವಾರದಲ್ಲಿ ವಿಶೇಷತೆಗಳಿದ್ದರೂ ಸಹ ಅವನ್ನು ವಿಶೇಷತೆಯ ಮಹತ್ವಿಕೆಯಿಂದ ನೋಡುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಸಾಧಾರಣ ರೂಪದಿಂದ ನೋಡುತ್ತಾರೆ. ವಿಶೇಷತೆಯನ್ನು ನೋಡುವ ಹಾಗೂ ಅರಿತುಕೊಳ್ಳುವ ಅಭ್ಯಾಸವಿಲ್ಲ ಮತ್ತು ಗುಣ ಗ್ರಾಹಕ ಬುದ್ಧಿ ಅರ್ಥಾತ್ ಗುಣ ಗ್ರಹಣ ಮಾಡುವ ಬುದ್ಧಿಯಿಲ್ಲದಿರುವ ಕಾರಣ ವಿಶೇಷತೆ ಅರ್ಥಾತ್ ಗುಣವನ್ನು ಅರಿತುಕೊಳ್ಳುವುದಿಲ್ಲ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಲ್ಲಿ ಯಾವುದಾದರೊಂದು ವಿಶೇಷತೆಯು ಅವಶ್ಯವಾಗಿ ಅಡಕವಾಗಿದೆ. ಭಲೆ ಅವರು 16000 ದ ಕೊನೆಯ ಮಣಿಯೇ ಆಗಿರಬಹುದು ಆದರೆ ಅವರಲ್ಲಿಯೂ ಒಂದಲ್ಲ ಒಂದು ವಿಶೇಷತೆಯಿದೆ ಆದ್ದರಿಂದಲೇ ತಂದೆಯ ದೃಷ್ಟಿಯು ಆ ಆತ್ಮನ ಮೇಲೆ ಬೀಳುತ್ತದೆ. ಭಗವಂತನ ದೃಷ್ಟಿಯು ಬಿದ್ದಿತ್ತು ಅಥವಾ ಭಗವಂತನೇ ತನ್ನವರನ್ನಾಗಿ ಮಾಡಿಕೊಂಡರೆಂದರೆ ಅವಶ್ಯವಾಗಿ ವಿಶೇಷತೆಯು ಸಮಾವೇಶವಾಗಿದೆಯಲ್ಲವೆ. ಆದ್ದರಿಂದಲೇ ಆ ಆತ್ಮನು ಬ್ರಾಹ್ಮಣರ ಪಟ್ಟಿಯಲ್ಲಿ ಬಂದು ಬಿಟ್ಟಿದ್ದಾರೆ ಆದರೆ ಸದಾ ಪ್ರತಿಯೊಬ್ಬರ ವಿಶೇಷತೆಯನ್ನು ನೋಡುವ ಮತ್ತು ಅರಿತುಕೊಳ್ಳುವುದರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ. ಬಾಪ್ದಾದಾರವರಿಗೆ ಗೊತ್ತಿದೆ – ಎಂತಹದ್ದೇ ಆತ್ಮನು ಭಲೆ ಜ್ಞಾನದ ಧಾರಣೆ ಹಾಗೂ ಸೇವೆ ಮತ್ತು ನೆನಪಿನಲ್ಲಿ ನಿರ್ಬಲರಾಗಿರಬಹುದು ಆದರೆ ತಂದೆಯನ್ನು ಅರಿತುಕೊಳ್ಳುವ, ತಂದೆಯ ಮಕ್ಕಳಾಗುವ ವಿಶಾಲ ಬುದ್ಧಿ, ತಂದೆಯನ್ನು ನೋಡುವ ದಿವ್ಯ ದೃಷ್ಟಿ – ಈ ವಿಶೇಷತೆಯಂತೂ ಇದೆಯಲ್ಲವೆ. ಯಾವ ತಂದೆಯನ್ನು ಈಗಿನ ಪ್ರಸಿದ್ಧ ವಿದ್ವಾಂಸರೂ ಸಹ ಅರಿತುಕೊಳ್ಳಲು ಆಗಲಿಲ್ಲ, ಗುರುತಿಸಲು ಆಗಲಿಲ್ಲ ಆದರೆ ಈ ಆತ್ಮಗಳು ಅರಿತುಕೊಂಡರಲ್ಲವೆ! ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರು – ಈ ಪಟ್ಟಿಯಲ್ಲಿ ಬಂದು ಬಿಟ್ಟರಲ್ಲವೆ ಆದ್ದರಿಂದ ಕೋಟಿ ಆತ್ಮಗಳಿಗಿಂತ ವಿಶೇಷ ಆತ್ಮನಂತೂ ಆಗಿ ಬಿಟ್ಟರಲ್ಲವೆ. ಏಕೆ ವಿಶೇಷ ಆತ್ಮನಾದರು? ಏಕೆಂದರೆ ಸರ್ವ ಶ್ರೇಷ್ಠ ತಂದೆಯ ಮಕ್ಕಳಾಗಿ ಬಿಟ್ಟರು.

ಎಲ್ಲಾ ಆತ್ಮಗಳನ್ನು ಬ್ರಾಹ್ಮಣ ಆತ್ಮಗಳು ವಿಶೇಷವಾಗಿದ್ದೀರಿ. ಕೇವಲ ಕೆಲವರು ತಮ್ಮ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸುತ್ತಾರೆ ಆದ್ದರಿಂದ ಆ ವಿಶೇಷತೆಯು ವೃದ್ಧಿಯಾಗುತ್ತಿರುತ್ತದೆ ಮತ್ತು ಅನ್ಯರಿಗೂ ಅದು ಕಾಣಿಸುತ್ತದೆ. ಇನ್ನೂ ಕೆಲವರಲ್ಲಿ ವಿಶೇಷತಾ ರೂಪಿ ಬೀಜವಂತೂ ಇದೆ ಆದರೆ ಬೀಜವನ್ನು ಕಾರ್ಯದಲ್ಲಿ ತರುವುದು ಎಂದರೆ ಬೀಜವನ್ನು ಧರಣಿಯಲ್ಲಿ ಬಿತ್ತುವುದಾಗಿದೆ. ಎಲ್ಲಿಯವರೆಗೆ ಬೀಜವನ್ನು ಧರಣಿಯಲ್ಲಿ ಬಿತ್ತುವುದಿಲ್ಲವೋ ಅಲ್ಲಿಯವರೆಗೆ ಅದು ಸಸಿಯಾಗುವುದಿಲ್ಲ ಮತ್ತು ವೃಕ್ಷವಾಗುವುದಿಲ್ಲ. ಇನ್ನೂ ಕೆಲವರು ವಿಶೇಷತೆಯ ಬೀಜವನ್ನು ವಿಸ್ತಾರದಲ್ಲಿಯೂ ತರುತ್ತಾರೆ ಅರ್ಥಾತ್ ವೃಕ್ಷದ ರೂಪದಲ್ಲಿ ವೃದ್ಧಿಯನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತಾರೆ, ಫಲವನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಆದರೆ ಯಾವಾಗ ಫಲ ಬರುತ್ತದೆಯೋ ಆಗ ಫಲದ ಹಿಂದೆ ಪಕ್ಷಿಗಳೂ ಸಹ ತಿನ್ನುವುದಕ್ಕಾಗಿ ಬರುತ್ತವೆ ಅಂದಾಗ ಯಾವಾಗ ಫಲ ಬಿಡುವವರೆಗೆ ತಲುಪುತ್ತದೆಯೋ ಆಗ ಮಾಯೆಯು ಈ ರೂಪದಲ್ಲಿ ಬರುತ್ತದೆ – ನಾನು ವಿಶೇಷ ಆತ್ಮನಾಗಿದ್ದೇನೆ, ಇದು ನನ್ನ ವಿಶೇಷತೆಯಾಗಿದೆ ಎಂದು. ತಂದೆಯ ಮೂಲಕ ಪ್ರಾಪ್ತಿಯಾಗಿರುವ ವಿಶೇಷತೆಯಾಗಿದೆ. ವಿಶೇಷತೆಯನ್ನು ತುಂಬುವವರು ತಂದೆಯಾಗಿದ್ದಾರೆಂದು ತಿಳಿದುಕೊಳ್ಳುವುದಿಲ್ಲ. ಯಾವಾಗ ಬ್ರಾಹ್ಮಣರಾದಿರೋ ಆಗ ವಿಶೇಷತೆ ಬಂದಿತು ಅಂದಮೇಲೆ ವಿಶೇಷತೆಯು ಬ್ರಾಹ್ಮಣ ಜೀವನದ ಕೊಡುಗೆಯಾಗಿದೆ, ತಂದೆಯ ಕೊಡುಗೆಯಾಗಿದೆ ಆದ್ದರಿಂದ ಫಲದ ನಂತರ ಅರ್ಥಾತ್ ಸೇವೆಯಲ್ಲಿ ಸಫಲತೆ ಪಡೆದ ನಂತರ ಈ ಗಮನವನ್ನಿಡುವುದೂ ಸಹ ಅತ್ಯವಶ್ಯಕವಾಗಿದೆ ಇಲ್ಲವೆಂದರೆ ಮಾಯಾರೂಪಿ ಪಕ್ಷಿಗಳು ಫಲವನ್ನು ಬೀಳಿಸಿ ಬಿಡುತ್ತವೆ ಅಥವಾ ಕಚ್ಚಿ ಬಿಡುತ್ತವೆ. ಹೇಗೆ ಖಂಡನೆಯಾಗಿರುವ ಮೂರ್ತಿಗೆ ಪೂಜೆಯು ನಡೆಯುವುದಿಲ್ಲ. ಇದು ಮೂರ್ತಿಯಾಗಿದೆ ಎಂದು ಹೇಳುತ್ತಾರೆಯೇ ಹೊರತು ಅದಕ್ಕೆ ಪೂಜೆ ಮಾಡುವುದಿಲ್ಲ. ಹಾಗೆಯೇ ಬ್ರಾಹ್ಮಣ ಆತ್ಮಗಳು ಸೇವೆಯ ಫಲ ಅರ್ಥಾತ್ ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಆದರೆ ‘ನಾನು’ ಎಂಬ ಪಕ್ಷಿಯು ಫಲವನ್ನು ಖಂಡನೆ ಮಾಡಿ ಬಿಟ್ಟಿತು ಆದ್ದರಿಂದ ಕೇವಲ ಇವರು ಚೆನ್ನಾಗಿ ಸೇವೆ ಮಾಡುತ್ತಾರೆ, ಮಹಾರಥಿಯಾಗಿದ್ದಾರೆ, ಸೇವಾಧಾರಿಯಾಗಿದ್ದಾರೆ ಎಂದು ಅನ್ಯರು ಒಪ್ಪುತ್ತಾರೆ ಆದರೆ ಅವರು ಸಂಗಮಯುಗದಲ್ಲಿಯೂ ಸರ್ವ ಬ್ರಾಹ್ಮಣ ಪರಿವಾರದವರ ಹೃದಯದಲ್ಲಿ ಸ್ನೇಹಕ್ಕೆ ಪಾತ್ರರು ಅಥವಾ ಪೂಜ್ಯರಾಗಲು ಸಾಧ್ಯವಿಲ್ಲ.

ಸಂಗಮಯುಗದಲ್ಲಿ ಹೃದಯದ ಸ್ನೇಹ, ಹೃದಯದ ಗೌರವವೇ ಪೂಜ್ಯರಾಗುವುದಾಗಿದೆ. ಫಲವನ್ನು ನಾನು ಎಂಬುದರಲ್ಲಿ ತರುವವರು ಪೂಜ್ಯರಾಗಲು ಸಾಧ್ಯವಿಲ್ಲ. ಒಂದಾಗಿದೆ – ಹೃದಯದಿಂದ ಅನ್ಯರನ್ನು ಶ್ರೇಷ್ಠರೆಂದು ಒಪ್ಪುವುದು. ಅಂದಾಗ ಶ್ರೇಷ್ಠರಿಗೆ ಪೂಜ್ಯರೆಂದು ಹೇಳಲಾಗುತ್ತದೆ. ಹೇಗೆ ಇಂದಿನ ಪ್ರಪಂಚದಲ್ಲಿಯೂ ಸಹ ತಂದೆಯು ದೊಡ್ಡವರಾಗಿರುವ ಕಾರಣ ಮಕ್ಕಳು “ಪೂಜ್ಯ ಪಿತಾಜೀ” ಎಂದು ಕರೆಯುತ್ತಾರೆ ಅಥವಾ ಬರೆಯುತ್ತಾರೆ. ಹಾಗೆಯೇ ಹೃದಯದಿಂದ ಶ್ರೇಷ್ಠರೆಂದು (ದೊಡ್ಡವರು) ಒಪ್ಪುವುದು ಅರ್ಥಾತ್ ಹೃದಯದಿಂದ ಗೌರವ ಕೊಡುವುದು. ಎರಡನೆಯದಾಗಿದೆ – ಹೊರಗಿನ ಮರ್ಯಾದೆಯ ಪ್ರಮಾಣ ಗೌರವ ಕೊಡಲೇಬೇಕಾಗುತ್ತದೆ ಅಂದಾಗ “ಹೃದಯದಿಂದ ಕೊಡುವುದು” ಮತ್ತು “ಏನು ಮಾಡುವುದು ಕೊಡಲೇಬೇಕಾಗುತ್ತದೆ” ಎಂಬುದರಲ್ಲಿ ಎಷ್ಟೊಂದು ಅಂತರವಿದೆ! ಪೂಜ್ಯರಾಗುವುದು ಅರ್ಥಾತ್ ಸರ್ವರೂ ಹೃದಯದಿಂದ ಅವರನ್ನು ಒಪ್ಪುವುದಾಗಿದೆ. ಮೆಜಾರಿಟಿ ಇರಬೇಕು, ಮೊದಲೂ ಸಹ ತಿಳಿಸಿದ್ದೆವು – 5% ನಷ್ಟು ಜನರಂತೂ ಉಳಿದುಕೊಳ್ಳುತ್ತಾರೆ ಆದರೆ ಇನ್ನು 95% ಜನರು ಹೃದಯದಿಂದ ಒಪ್ಪುವುದೇ ಸಂಗಮಯುಗದಲ್ಲಿ ಪೂಜ್ಯರಾಗುವುದಾಗಿದೆ. ಪೂಜ್ಯರಾಗುವ ಸಂಸ್ಕಾರವನ್ನೂ ಸಹ ಈಗಿನಿಂದಲೇ ತುಂಬಿಸಿಕೊಳ್ಳಬೇಕಾಗಿದೆ ಆದರೆ ಭಕ್ತಿಮಾರ್ಗದ ಪೂಜ್ಯರಾಗುವುದರಲ್ಲಿ ಮತ್ತು ಈಗಿನ ಪೂಜ್ಯರಾಗುವುದರಲ್ಲಿ ಅಂತರವಿದೆ. ಈಗ ತಮ್ಮ ಶರೀರಗಳಿಗೆ ಪೂಜೆ ನಡೆಯಲು ಸಾಧ್ಯವಿಲ್ಲ ಏಕೆಂದರೆ ಇದು ಅಂತಿಮ ಹಳೆಯ ಶರೀರವಾಗಿದೆ, ತಮೋಗುಣಿ ತತ್ವಗಳಿಂದಾದ ಶರೀರವಾಗಿದೆ ಅಂದಾಗ ಈಗ ಹೂಮಾಲೆಯು ಕೊರಳಿಗೆ ಬೀಳುವುದಿಲ್ಲ. ಭಕ್ತಿಮಾರ್ಗದಲ್ಲಂತೂ ದೇವತೆಗಳಿಗೆ ಹೂಗಳನ್ನು ಹಾಕುತ್ತಾರಲ್ಲವೆ. ಪೂಜ್ಯರ ಸಂಕೇತವಾಗಿದೆ – ಧೂಪ ಹಚ್ಚುವುದು, ಹಾರವನ್ನು ಹಾಕುವುದು, ಆರತಿ ಬೆಳಗುವುದು, ಕೀರ್ತನೆ ಮಾಡುವುದು, ತಿಲಕವನ್ನಿಡುವುದು. ಸಂಗಮಯುಗದಲ್ಲಿ ಈ ಸ್ಥೂಲ ವಿಧಿಗಳಿಲ್ಲ, ಆದರೆ ಸಂಗಮಯುಗದಲ್ಲಿ ಸದಾ ಹೃದಯದಿಂದ ಆ ಪೂಜ್ಯ ಆತ್ಮಗಳಪ್ರತಿ ಸತ್ಯ ಸ್ನೇಹದ ಆರತಿಯನ್ನು ಬೆಳಗುತ್ತಿರುತ್ತಾರೆ. ಆತ್ಮಗಳ ಮೂಲಕ ಸದಾ ಯಾವುದಾದರೊಂದು ಪ್ರಾಪ್ತಿಯ ಕೀರ್ತನೆ ಮಾಡುತ್ತಿರುತ್ತಾರೆ. ಸದಾ ಆ ಆತ್ಮಗಳ ಪ್ರತಿ ಶುಭ ಭಾವನೆಯ ಧೂಪ ಅಥವಾ ದೀಪವನ್ನು ಬೆಳಗಿಸುತ್ತಿರುತ್ತಾರೆ. ಸದಾ ಇಂತಹ ಆತ್ಮಗಳನ್ನು ನೋಡಿ ಸ್ವಯಂ ಕೂಡ ಹೇಗೆ ಆ ಆತ್ಮಗಳು ತಂದೆಯ ಮೇಲೆ ಬಲಿಹಾರಿಯಾಗಿದ್ದಾರೆಯೋ ಹಾಗೆಯೇ ಅನ್ಯ ಆತ್ಮಗಳಲ್ಲಿಯೂ ತಂದೆಗೆ ಬಲಿಹಾರಿಯಾಗುವ ಉಲ್ಲಾಸ ಬರುತ್ತದೆ ಆದ್ದರಿಂದ ತಂದೆಗೆ ಬಲಿಹಾರಿಯಾಗುವ ಹಾರವು ಸದಾ ಆ ಆತ್ಮಗಳಿಗೆ ಸ್ವತಹವಾಗಿ ಪ್ರಾಪ್ತಿಯಾಗುತ್ತದೆ. ಇಂತಹ ಆತ್ಮಗಳು ಸದಾ ಸ್ಮೃತಿಸ್ವರೂಪದ ತಿಲಕಧಾರಿಗಳಾಗಿರುತ್ತಾರೆ. ಈ ಅಲೌಕಿಕ ವಿಧಿಯಿಂದ ಈ ಸಮಯದ ಪೂಜ್ಯಾತ್ಮರಾಗುತ್ತೀರಿ.

ಭಕ್ತಿಮಾರ್ಗದ ಪೂಜ್ಯರಾಗುವುದಕ್ಕಿಂತ ಶ್ರೇಷ್ಠ ಪೂಜೆಯು ಈಗಿನದಾಗಿದೆ. ಹೇಗೆ ಭಕ್ತಿಮಾರ್ಗದ ಪೂಜ್ಯ ಆತ್ಮಗಳ ಎರಡು ಕ್ಷಣಗಳ ಸಂಪರ್ಕದಿಂದ ಅರ್ಥಾತ್ ಕೇವಲ ಮೂರ್ತಿಯ ಮುಂದೆ ಹೋಗುತ್ತಿದ್ದಂತೆಯೇ ಎರಡು ಕ್ಷಣಗಳಿಗಾಗಿ ಶಾಂತಿ, ಶಕ್ತಿ, ಖುಷಿಯ ಅನುಭವವಾಗುತ್ತದೆ ಹಾಗೆಯೇ ಸಂಗಮಯುಗೀ ಪೂಜ್ಯಾತ್ಮರ ಮೂಲಕ ಈಗಲೂ ಎರಡು ಘಳಿಗೆ, ಒಂದು ಘಳಿಗೆಯೂ ಸಹ ದೃಷ್ಟಿ ಸಿಕ್ಕಿದರೂ ಸಾಕು, ಖುಷಿ-ಶಾಂತಿ ಹಾಗೂ ಉಲ್ಲಾಸ-ಉತ್ಸಾಹದ ಶಕ್ತಿಯ ಅನುಭವವಾಗುತ್ತದೆ. ಇಂತಹ ಪೂಜ್ಯಾತ್ಮರು ಅರ್ಥಾತ್ ನಂಬರ್ವನ್ ವಿಶೇಷ ಆತ್ಮರಾಗಿದ್ದಾರೆ. ಸೆಕೆಂಡ್ ಅಥವಾ ಥರ್ಡ್ನವರ ಬಗ್ಗೆ ತಿಳಿಸಿದ್ದೇವೆ. ಅದರ ವಿಸ್ತಾರವನ್ನೇನು ಹೇಳುವುದು? ಎಲ್ಲರೂ ವಿಶೇಷ ಆತ್ಮಗಳ ಪಟ್ಟಿಯಲ್ಲಿದ್ದಾರೆ ಆದರೆ ಮೊದಲನೇ, ಎರಡನೇ ಮೂರನೆಯವರು – ಹೀಗೆ ನಂಬರ್ವಾರ್ ಇದ್ದಾರೆ. ಎಲ್ಲರ ಲಕ್ಷ್ಯವೂ ನಂಬರ್ವನ್ ಆಗಿರುತ್ತದೆ ಅಂದಾಗ ಇಂತಹ ಪೂಜ್ಯರಾಗಿ. ಹೇಗೆ ಬ್ರಹ್ಮಾ ತಂದೆಯ ಗುಣಗಳ ಗೀತೆಯನ್ನು ಹಾಡುತ್ತೀರಲ್ಲವೆ. ಇದೆಲ್ಲಾ ವಿಶೇಷತೆಗಳು ಪೂಜ್ಯರಾಗುವ ಹಾಗೂ ನಂಬರ್ವನ್ ವಿಶೇಷ ಆತ್ಮನಾಗುವ ಮಾತುಗಳನ್ನು ಬ್ರಹ್ಮಾ ತಂದೆಯದು ನೋಡಿದಿರಿ, ಕೇಳಿದಿರಲ್ಲವೆ! ಅಂದಾಗ ಹೇಗೆ ಬ್ರಹ್ಮಾ ಸಾಕಾರ ಆತ್ಮ ನಂಬರ್ವನ್ ಸಂಗಮಯುಗೀ ಪೂಜ್ಯರಿಂದ ಭವಿಷ್ಯದಲ್ಲಿ ನಂಬರ್ವನ್ ಪೂಜ್ಯನಾಗುತ್ತಾರೆ. ಲಕ್ಷ್ಮೀ-ನಾರಾಯಣರು ನಂಬರ್ವನ್ ಪೂಜ್ಯರಾಗಿದ್ದಾರಲ್ಲವೆ. ಅದೇರೀತಿ ತಾವೆಲ್ಲರೂ ಸಹ ಈ ರೀತಿ ಆಗಬಹುದಲ್ಲವೆ.

ಹೇಗೆ ತಂದೆಯ ಜೊತೆ ಜೊತೆಗೆ ಬ್ರಹ್ಮಾ ತಂದೆಯ ಚಮತ್ಕಾರವನ್ನೂ ಗಾಯನ ಮಾಡುತ್ತಾರೆ ಹಾಗೆಯೇ ತಾವೆಲ್ಲರೂ ಸಹ ಸದಾ ಇಂತಹ ಸಂಕಲ್ಪ, ಮಾತು ಮತ್ತು ಕರ್ಮ ಮಾಡಿ ಯಾವುದು ಸದಾ ಚಮತ್ಕಾರದಿಂದ ಕೂಡಿರಲಿ. ಯಾವಾಗ ಕಮಾಲ್ ಆಗುವುದೊ ಆಗ ದಮಾಲ್ ಆಗುವುದಿಲ್ಲ. ಕಮಾಲ್ ಮಾಡುವುದಿಲ್ಲವೆಂದರೆ ದಮಾಲ್ ಮಾಡುತ್ತೀರಿ – ಭಲೆ ಸಂಕಲ್ಪಗಳ ದಮಾಲ್ ಆದರೂ ಮಾಡಿ, ವಾಣಿಯಿಂದಲಾದರೂ ಮಾಡಿ. ಸಂಕಲ್ಪಗಳಲ್ಲಿಯೂ ವ್ಯರ್ಥ ಬಿರುಗಾಳಿಯು ನಡೆಯುತ್ತದೆಯೆಂದರೆ ಇದು ದಮಾಲ್ ಅಲ್ಲವೆ. ಆದ್ದರಿಂದ ಈಗ ಧಮಾಲ್ ಮಾಡುವುದಲ್ಲ, ಕಮಾಲ್ ಮಾಡಬೇಕಾಗಿದೆ ಏಕೆಂದರೆ ಆದಿಪಿತ ಬ್ರಹ್ಮಾನ ಬ್ರಾಹ್ಮಣ ಮಕ್ಕಳು ಸದಾ ಪೂಜ್ಯರೆಂದು ಗಾಯನ ಮಾಡಲಾಗುತ್ತದೆ. ಈಗ ಅಂತಿಮ ಜನ್ಮದಲ್ಲಿಯೂ ನೋಡಿ, ಎಲ್ಲರಿಗಿಂತ ಶ್ರೇಷ್ಠ ವರ್ಣವೆಂದು ಯಾವುದಕ್ಕೆ ಗಾಯನವಿದೆ? ಬ್ರಾಹ್ಮಣ ವರ್ಣವೆಂದು ಹೇಳುತ್ತಾರಲ್ಲವೆ. ಶ್ರೇಷ್ಠ ಹೆಸರು ಮತ್ತು ಶ್ರೇಷ್ಠ ಕಾರ್ಯಕ್ಕಾಗಿ ಬ್ರಾಹ್ಮಣರನ್ನೇ ಕರೆಸುತ್ತಾರೆ. ಯಾರದೇ ಕಲ್ಯಾಣ ಮಾಡುವುದಕ್ಕಾಗಿಯೂ ಬ್ರಾಹ್ಮಣರನ್ನೇ ಕರೆಸುತ್ತಾರೆ ಅಂದಾಗ ಅಂತಿಮ ಜನ್ಮದವರೆಗೂ ಸಹ ಬ್ರಾಹ್ಮಣ ಆತ್ಮಗಳ ಶ್ರೇಷ್ಠ ಹೆಸರು, ಶ್ರೇಷ್ಠ ವರ್ಣವು ಪ್ರಸಿದ್ಧವಾಗುತ್ತದೆ. ಪರಂಪರೆಯಿಂದ ನಡೆದುಬರುತ್ತಿದೆ. ಕೇವಲ ಆ ಹೆಸರಿನಿಂದಲೂ ಕೆಲಸ ನಡೆಸುತ್ತಿದ್ದಾರೆ. ಕಾರ್ಯವು ತಮ್ಮದಾಗಿದೆ ಆದರೆ ಕೇವಲ ಆ ಹೆಸರನ್ನು ಇಟ್ಟುಕೊಂಡಿರುವವರ ಕೆಲಸವು ನಡೆಯುತ್ತಿದೆ. ಇದರಿಂದ ನೋಡಿ – ಸತ್ಯ ಬ್ರಾಹ್ಮಣ ಆತ್ಮಗಳಿಗೆ ಎಷ್ಟೊಂದು ಮಹಿಮೆಯಿದೆ ಮತ್ತು ಎಷ್ಟೊಂದು ಮಹಾನರಾಗಿದ್ದೀರಿ! “ಬ್ರಾಹ್ಮಣ” ಎಂಬ ಹೆಸರೂ ಸಹ ಅವಿನಾಶಿಯಾಗಿ ಬಿಟ್ಟಿದೆ, ಅವಿನಾಶಿ ಪ್ರಾಪ್ತಿಯುಳ್ಳ ಜೀವನವಾಗಿ ಬಿಟ್ಟಿದೆ. ಬ್ರಾಹ್ಮಣ ಜೀವನದ ವಿಶೇಷತೆಯೇನೆಂದರೆ ಪರಿಶ್ರಮ ಕಡಿಮೆ, ಹೆಚ್ಚು ಪ್ರಾಪ್ತಿ ಏಕೆಂದರೆ ಪ್ರೀತಿಯ ಮುಂದೆ ಪರಿಶ್ರಮವೆನಿಸುವುದಿಲ್ಲ. ಈ ಅಂತಿಮ ಜನ್ಮದಲ್ಲಿಯೂ ನಾಮಧಾರಿ ಬ್ರಾಹ್ಮಣರು ಪರಿಶ್ರಮ ಪಡುವುದಿಲ್ಲ, ಆರಾಮವಾಗಿ ತಿನ್ನುತ್ತಿರುತ್ತಾರೆ. ಒಂದುವೇಳೆ “ಹೆಸರಿಗೆ” ಕೆಲಸ ಮಾಡಿದರೂ ಸಹ ಅವರು ಹಸಿವಿನಿಂದಿರಲು ಸಾಧ್ಯವಿಲ್ಲ ಅಂದಾಗ ಈ ಸಮಯದ ಬ್ರಾಹ್ಮಣ ಜೀವನದ ವಿಶೇಷತೆಗಳ ನಿದರ್ಶನಗಳನ್ನು ಇಲ್ಲಿಯವರೆಗೂ ಇಷ್ಟು ವಿಶೇಷ ಆತ್ಮಗಳಾಗಿದ್ದೀರಿ! ತಿಳಿಯಿತೆ.

ವರ್ತಮಾನ ಸಮಯದ ಪೂಜ್ಯರೇ ಭವಿಷ್ಯದ ಪೂಜ್ಯರು – ಇವರಿಗೇ ವಿಶೇಷ ನಂಬರ್ವನ್ ಆತ್ಮಗಳೆಂದು ಹೇಳುತ್ತಾರೆ ಅಂದಾಗ ಪರಿಶೀಲನೆ ಮಾಡಿಕೊಳ್ಳಿ. ಬ್ರಹ್ಮಾ ತಂದೆಯ ಚರಿತ್ರೆಯನ್ನು ತಿಳಿಸುತ್ತಿದ್ದೇವೆ ಅಲ್ಲವೆ. ಈಗ ಇನ್ನೂ ಉಳಿದುಕೊಂಡಿದೆ. ಈ ಬ್ರಹ್ಮಾ ತಂದೆಯ ವಿಶೇಷತೆಯನ್ನು ಸದಾ ಸನ್ಮುಖದಲ್ಲಿಟ್ಟುಕೊಳ್ಳಿ, ಅನ್ಯ ಯಾವುದೇ ಮಾತುಗಳಲ್ಲಿ ಹೋಗಬೇಡಿ. ವಿಶೇಷತೆಗಳನ್ನು ನೋಡಿ ಮತ್ತು ವರ್ಣನೆ ಮಾಡಿ. ಪ್ರತಿಯೊಬ್ಬರಿಗೆ ವಿಶೇಷತೆಯ ಮಹತ್ವಿಕೆಯನ್ನು ತಿಳಿಸಿ. ವಿಶೇಷ ಆತ್ಮಗಳನ್ನಾಗಿ ಮಾಡಿ. ಅನ್ಯರನ್ನು ವಿಶೇಷ ಆತ್ಮಗಳನ್ನಾಗಿ ಮಾಡುವುದೆಂದರೆ ಸ್ವಯಂ ವಿಶೇಷ ಆತ್ಮನಾಗುವುದು. ತಿಳಿಯಿತೆ? ಒಳ್ಳೆಯದು.

ನಾಲ್ಕಾರು ಕಡೆಯ ಸರ್ವ ನಂಬರ್ವನ್ ವಿಶೇಷ ಆತ್ಮಗಳಿಗೆ, ಸರ್ವ ಬ್ರಾಹ್ಮಣ ಜೀವನದ ವಿಶೇಷ ಆತ್ಮಗಳಿಗೆ, ಸದಾ ಬ್ರಹ್ಮಾ ತಂದೆಯನ್ನು ಸನ್ಮುಖದಲ್ಲಿಟ್ಟುಕೊಂಡು ಸಮಾನರಾಗುವ ಆತ್ಮಗಳಿಗೆ, ಅನಾದಿ ತಂದೆ – ಆದಿ ತಂದೆಯ ಎರಡೂ ರೂಪಗಳಿಂದ ಸರ್ವ ಸಾಲಿಗ್ರಾಮ ಹಾಗೂ ಸಾಕಾರೀ ಬ್ರಾಹ್ಮಣ ಆತ್ಮಗಳಿಗೆ ಸ್ನೇಹ ಸಂಪನ್ನ ನೆನಪು, ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ವಾರ್ತಾಲಾಪ:

1. ಸದಾ ತಂದೆಯ ಕೈ ಹಾಗೂ ಜೊತೆಯಿದೆ – ಇಂತಹ ಭಾಗ್ಯಶಾಲಿಯೆಂದು ತಿಳಿಯುವಿರಾ? ಎಲ್ಲಿ ತಂದೆಯ ಕೈ (ಶ್ರೀಮತ) ಹಾಗೂ ಜೊತೆಯಿದೆಯೋ ಅಲ್ಲಿ ಸದಾಕಾಲವೂ ಮೋಜಿನ ಜೀವನವಿರುತ್ತದೆ. ಗೊಂದಲಕ್ಕೆ ಒಳಗಾಗುವವರಲ್ಲ, ಮೋಜಿನಲ್ಲಿರುವರು. ಯಾವುದೇ ಪರಿಸ್ಥಿತಿಗಳು ತನ್ನಕಡೆಗೆ ಆಕರ್ಷಿಸುವುದಿಲ್ಲ, ಸದಾ ತಂದೆಯ ಕಡೆಗೆ ಆಕರ್ಷಿತರಾಗುವರು. ಅತ್ಯುನ್ನತ ಹಾಗೂ ಅತ್ಯಂತ ಶ್ರೇಷ್ಠವಾದ ತಂದೆಯಿದ್ದಾರೆ ಅಂದಮೇಲೆ ತಂದೆಯ ಹೊರತು ಮತ್ತ್ಯಾವುದೇ ವಸ್ತು ಅಥವಾ ವ್ಯಕ್ತಿಯು ಆಕರ್ಷಿಸುವುದಕ್ಕೆ ಸಾಧ್ಯವೇ ಇಲ್ಲ. ಯಾರು ತಂದೆಯ ಕೈ ಹಾಗೂ ಜೊತೆಯಲ್ಲಿ ಬೆಳೆಯುತ್ತಾ ಇರುತ್ತಾರೆಯೋ ಅವರ ಮನಸ್ಸು ಮತ್ತೆಲ್ಲಿಗೂ ಹೋಗಲು ಸಾಧ್ಯವಿಲ್ಲ. ಎಲ್ಲರೂ ಈ ರೀತಿ ಇದ್ದೀರಾ ಅಥವಾ ಮಾಯೆಯ ಪಾಲನೆಯಲ್ಲಿ ಹೊರಟು ಹೋಗುತ್ತೀರಾ? ಆ ಮಾರ್ಗವು ಸ್ಥಗಿತವಾಗಿದೆ ಅಲ್ಲವೆ. ಅಂದಮೇಲೆ ಸದಾ ತಂದೆಯ ಜೊತೆ ಮೋಜಿನಲ್ಲಿರಿ. ತಂದೆಯು ಸಿಕ್ಕಿದರು ಎಲ್ಲವೂ ಸಿಕ್ಕಿ ಬಿಟ್ಟಿತು, ಅದರಲ್ಲಿ ಯಾವುದೇ ಅಪ್ರಾಪ್ತಿಯಿಲ್ಲ. ಯಾರೆಷ್ಟಾದರೂ ಕೈ, ಜೊತೆಯನ್ನು ಬಿಡಿಸಲಿ ಆದರೆ ನಾವು ಬಿಡುವವರಲ್ಲ. ಮತ್ತೆ ಬಿಟ್ಟು ಹೋಗುವುದಾದರೂ ಎಲ್ಲಿಗೆ? ಮತ್ತ್ಯಾವುದೂ ಇದಕ್ಕಿಂತ ಶ್ರೇಷ್ಠವಾದ ಭಾಗ್ಯವಿರಲು ಸಾಧ್ಯವಿಲ್ಲ! ಕುಮಾರಿಯರಂತು ಸದಾ ಭಾಗ್ಯಶಾಲಿಗಳೇ ಆಗಿದ್ದಾರೆ, ಅವರಿಗೆ ಡಬಲ್ ಭಾಗ್ಯವಿದೆ. ಒಂದು – ಕುಮಾರಿ ಜೀವನದ ಭಾಗ್ಯ, ಇನ್ನೊಂದು – ತಂದೆಯ ಮಗುವಾಗುವ ಭಾಗ್ಯ. ಕುಮಾರಿ ಜೀವನದಲ್ಲಿ ಪೂಜಿಸುತ್ತಾರೆ, ಯಾವಾಗ ಆ ಜೀವನವು ಸಮಾಪ್ತಿಯಾಗುವುದೋ ಆಗ ಎಲ್ಲರ ಮುಂದೆ ಬಾಗಬೇಕಾಗುತ್ತದೆ. ಗೃಹಸ್ಥಿ ಜೀವನವಂತು ಕುರಿ ಸಮಾನ ಜೀವನವಾಗಿದೆ, ಕುಮಾರಿ ಜೀವನವು ಪೂಜ್ಯನೀಯ ಜೀವನವಾಗಿದೆ. ಒಂದುವೇಳೆ ಯಾರೇ ಒಂದು ಬಾರಿ ಬೀಳುತ್ತಾರೆಂದರೂ ಮೂಳೆಯು ಮುರಿಯುತ್ತದೆಯಲ್ಲವೆ. ಆನಂತರ ಅದಕ್ಕೆಷ್ಟಾದರೂ ಪ್ಲಾಸ್ಟರ್ ಮಾಡಿರಿ, ಸರಿ ಪಡಿಸಲೂಬಹುದು ಆದರೆ ಮೂಳೆಯು ಬಲಹೀನ ಆಗಿ ಬಿಡುತ್ತದೆ. ಆದ್ದರಿಂದ ಬುದ್ಧಿವಂತರಾಗಿರಿ. ಪರೀಕ್ಷೆ ಮಾಡಿದ ನಂತರ ಬುದ್ಧಿವಂತರಾಗುವುದಲ್ಲ. ಒಳ್ಳೆಯದು!

2. ಸದಾ ತಮ್ಮನ್ನು ಕಲ್ಪ-ಕಲ್ಪದ ವಿಜಯಿ ಆತ್ಮರೆಂದು ಅನುಭವ ಮಾಡುತ್ತೀರಾ? ಅನೇಕ ಬಾರಿ ವಿಜಯಿಯಾಗುವ ಪಾತ್ರವನ್ನು ಅಭಿನಯಿಸಲಾಗಿದೆ ಮತ್ತು ಈಗಲೂ ಅಭಿನಯಿಸುತ್ತಾ ಇದ್ದೀರಿ. ವಿಜಯಿ ಆತ್ಮರು ಸದಾ ಅನ್ಯರನ್ನೂ ವಿಜಯಿಯನ್ನಾಗಿ ಮಾಡುತ್ತಾರೆ. ಯಾರು ಅನೇಕ ಬಾರಿ ಮಾಡಿರುತ್ತಾರೆಯೋ ಅವರು ಸದಾಕಾಲ ಸಹಜವಾಗಿ ಇರುತ್ತಾರೆ, ಪರಿಶ್ರಮ ಪಡುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಅನೇಕ ಬಾರಿಯ ವಿಜಯಿ ಆತ್ಮನೆಂಬ ಸ್ಮೃತಿಯಿಂದ ಪಾರು ಮಾಡುವುದು ಆಟವೆನಿಸುತ್ತದೆ. ಖುಷಿಯ ಅನುಭವವಾಗುತ್ತದೆಯೇ? ವಿಜಯಿ ಆತ್ಮರಿಗೆ ವಿಜಯದ ಅಧಿಕಾರದ ಅನುಭವವಾಗುವುದು. ಅಧಿಕಾರವು ಪರಿಶ್ರಮದಿಂದ ಸಿಗುವುದಿಲ್ಲ, ಸ್ವತಹವಾಗಿಯೇ ಸಿಗುತ್ತದೆ ಅಂದಾಗ ಸದಾ ವಿಜಯದ ಖುಷಿಯಿಂದ, ಅಧಿಕಾರದಿಂದ ಮುಂದುವರೆಯುತ್ತಾ, ಅನ್ಯರನ್ನೂ ಮುಂದುವರೆಸುತ್ತಾ ಸಾಗಿರಿ. ಲೌಕಿಕ ಪರಿವಾರದಲ್ಲಿದ್ದರೂ ಅಲೌಕಿಕದಲ್ಲಿ ಪರಿವರ್ತನೆ ಮಾಡಿರಿ ಏಕೆಂದರೆ ಅಲೌಕಿಕ ಸಂಬಂಧವು ಸುಖ ಕೊಡುವಂತದ್ದಾಗಿದೆ. ಲೌಕಿಕ ಸಂಬಂಧದಿಂದ ಅಲ್ಪಕಾಲದ ಸುಖ ಸಿಗುತ್ತದೆ, ಸದಾಕಾಲವೂ ಇರುವುದಿಲ್ಲ ಅಂದಾಗ ಸದಾ ಸುಖಿಯಾಗಿ ಬಿಡಿ. ದುಃಖಿಗಳ ಪ್ರಪಂಚದಿಂದ ಸುಖದ ಪ್ರಪಂಚದಲ್ಲಿ ಬಂದು ಬಿಟ್ಟೆವು – ಈ ಅನುಭವ ಮಾಡುತ್ತೀರಾ? ಮುಂಚೆ ರಾವಣನ ಮಕ್ಕಳಾಗಿದ್ದೆವು ಆದ್ದರಿಂದ ದುಃಖ ಕೊಡುವವರಾಗಿದ್ದೆವು, ಈಗ ಸುಖದಾತನ ಮಕ್ಕಳು ಸುಖ ಸ್ವರೂಪರು ಆಗಿ ಬಿಟ್ಟೆವು. ಮೊದಲ ನಂಬರ್ ಈ ಅಲೌಕಿಕ ಬ್ರಾಹ್ಮಣ ಪರಿವಾರವಾಗಿದೆ, ದೇವತೆಗಳೂ ಸಹ ಸೆಕೆಂಡ್ ನಂಬರಿನವರಾದರು. ಅಂದಮೇಲೆ ಈ ಅಲೌಕಿಕ ಜೀವನವು ಪ್ರಿಯವೆನಿಸುತ್ತದೆ ಅಲ್ಲವೆ.

3. ಸದಾ ತಮ್ಮನ್ನು ಪದಮಾಪದಮ ಭಾಗ್ಯಶಾಲಿ ಎಂದು ಅನುಭವ ಮಾಡುವಿರಾ? ಇಡೀ ಕಲ್ಪದಲ್ಲಿ ಇಂತಹ ಶ್ರೇಷ್ಠ ಭಾಗ್ಯವು ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಏಕೆಂದರೆ ಭವಿಷ್ಯ ಸ್ವರ್ಗದಲ್ಲಿಯೂ ಈ ಸಮಯದ ಪುರುಷಾರ್ಥದ ಪ್ರಾಲಬ್ಧದ ರೂಪದಲ್ಲಿ ರಾಜ್ಯಭಾಗ್ಯದ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಭವಿಷ್ಯವೂ ಸಹ ವರ್ತಮಾನದ ಭಾಗ್ಯದ ಲೆಕ್ಕದಿಂದಲೇ ಸಿಗುತ್ತದೆ. ಮಹತ್ವವೆಲ್ಲವೂ ಈ ಸಮಯದ ಭಾಗ್ಯದ್ದಾಗಿದೆ. ಈ ಸಮಯದಲ್ಲಿಯೇ ಬೀಜವನ್ನು ಬಿತ್ತುತ್ತೀರಿ ಮತ್ತು ಅದರ ಫಲವು ಅನೇಕ ಜನ್ಮಗಳವರೆಗೆ ಪ್ರಾಪ್ತಿಯಾಗುವುದು. ಅಂದಮೇಲೆ ಮಹತ್ವವಂತು ಬೀಜದ್ದಾಯಿತಲ್ಲವೆ. ಈ ಸಮಯದಲ್ಲಿ ಭಾಗ್ಯವನ್ನು ರೂಪಿಸಿಕೊಳ್ಳುವುದು ಅಥವಾ ಭಾಗ್ಯದ ಪ್ರಾಪ್ತಿ ಆಗುವುದು – ಇದು ಬೀಜವನ್ನು ಬಿತ್ತುವುದಾಯಿತು. ಹಾಗಾದರೆ ಈ ಗಮನವನ್ನಿಡುತ್ತಾ ಸದಾ ಪುರುಷಾರ್ಥದಲ್ಲಿ ತೀವ್ರ ಗತಿಯಿಂದ ಮುಂದುವರೆಯುತ್ತಾ ಸಾಗಿರಿ ಹಾಗೂ ಸದಾ ಈ ಸಮಯದ ಪದಮಾಪದಮ ಭಾಗ್ಯದ ಸ್ಮೃತಿಯು ಇಮರ್ಜ್ ರೂಪದಲ್ಲಿರಲಿ, ಕರ್ಮವನ್ನು ಮಾಡುತ್ತಿರುವಾಗಲೂ ನೆನಪಿರಲಿ, ಕರ್ಮದಲ್ಲಿರುವಾಗ ತಮ್ಮ ಈ ಶ್ರೇಷ್ಠ ಭಾಗ್ಯವನ್ನು ಮರೆಯಬಾರದು, ಸ್ಮೃತಿ ಸ್ವರೂಪರು ಆಗಿರಬೇಕು. ಇಂತಹವರಿಗೆ ಹೇಳಲಾಗುತ್ತದೆ – ಪದಮಾ ಪದಮ ಭಾಗ್ಯಶಾಲಿಗಳು. ಸದಾ ಇದೇ ಸ್ಮೃತಿಯ ವರದಾನವನ್ನು ಜೊತೆಯಲ್ಲಿ ಇಟ್ಟುಕೊಳ್ಳಿರಿ, ಇದರಿಂದ ಸಹಜವಾಗಿಯೇ ಮುಂದುವರೆಯುತ್ತಾ ಇರುತ್ತೀರಿ, ಪರಿಶ್ರಮದಿಂದ ಮುಕ್ತರಾಗುವಿರಿ. ಒಳ್ಳೆಯದು!

ಪ್ರಶ್ನೆ: ಲೌಕಿಕ ಸಂಬಂಧದಲ್ಲಿ ಬುದ್ಧಿಯು ಯಥಾರ್ಥವಾಗಿ ನಿರ್ಣಯ ಕೊಡುತ್ತಿರಲಿ – ಅದಕ್ಕೆ ವಿಧಿಯೇನಾಗಿದೆ?

ಉತ್ತರ: ಎಂದೂ ಸಹ ಲೌಕಿಕ ಮಾತುಗಳನ್ನು ಆಲೋಚಿಸಿ ನಿರ್ಣಯ ಮಾಡುವುದಲ್ಲ, ಅಲೌಕಿಕ ಶಕ್ತಿಶಾಲಿ ಸ್ಥಿತಿಯಲ್ಲಿದ್ದು ನಿರ್ಣಯ ಮಾಡಿ. ಯಾವುದೇ ಹಿಂದಿನ ಮಾತುಗಳನ್ನು ಸ್ಮೃತಿಯಲ್ಲಿ ಇಟ್ಟುಕೊಂಡಾಗ ಬುದ್ಧಿಯು ಅತ್ತಕಡೆ ಹೊರಟು ಹೋಗುತ್ತದೆ ಮತ್ತೆ ಹಿಂದಿನ ಸಂಸ್ಕಾರವೂ ಪ್ರಕಟವಾಗುತ್ತದೆ ಆದ್ದರಿಂದ ಕಷ್ಟವಾಗುತ್ತದೆ. ಅಂದಾಗ ಲೌಕಿಕ ವೃತ್ತಿಯನ್ನು ಸಂಪೂರ್ಣವಾಗಿ ಮರೆತು ಆತ್ಮನೆಂದು ತಿಳಿದು ನಂತರ ನಿರ್ಣಯ ಮಾಡಿ ಆಗ ಯಥಾರ್ಥ ನಿರ್ಣಯ ಸಿಗುವುದು. ಇದಕ್ಕೆ ವಿಕರ್ಮಾಜೀತನ ಸಿಂಹಾಸನವೆಂದು ಹೇಳುತ್ತಾರೆ. ಅಲೌಕಿಕ ಆತ್ಮಿಕ ಸ್ಥಿತಿಯೇ ವಿಕರ್ಮಾಜೀತನ ಸಿಂಹಾಸನವಾಗಿದೆ. ಈ ಸಿಂಹಾಸನದಲ್ಲಿ ಕುಳಿತು ನಿರ್ಣಯ ಮಾಡಿ ಆಗ ಅದು ಯಥಾರ್ಥವಾಗಿರುವುದು. ಒಳ್ಳೆಯದು.

ವರದಾನ:-

ಸರ್ವ ಶಕ್ತಿಗಳಿಂದ ಸಂಪನ್ನರಾಗಿದ್ದು ಅಧೀನತೆಯಿಂದ ದೂರವಾಗುವುದಕ್ಕಾಗಿ – ಸದಾ ಎರಡು ಶಬ್ಧಗಳು ನೆನಪಿರಲಿ – ಒಂದು ಸಾಕ್ಷಿ, ಇನ್ನೊಂದು ಸಂಗಾತಿ. ಇದರಿಂದ ಬಂಧನ ಮುಕ್ತ ಸ್ಥಿತಿಯು ಬಹಳ ಬೇಗನೆ ಆಗಿ ಬಿಡುತ್ತದೆ. ಸರ್ವಶಕ್ತಿವಂತ ತಂದೆಯು ಜೊತೆಯಿದ್ದಾರೆ ಅಂದಮೇಲೆ ಸರ್ವಶಕ್ತಿಗಳು ಸ್ವತಹವಾಗಿಯೇ ಪ್ರಾಪ್ತಿಯಾಗುತ್ತದೆ ಮತ್ತು ಸಾಕ್ಷಿಯಾಗಿ ನಡೆಯುವುದರಿಂದ ಯಾವುದೇ ಬಂಧನಗಳಲ್ಲಿ ಸಿಲುಕಿಕೊಳ್ಳುವುದಿಲ್ಲ. ನಿಮಿತ್ತವಾಗಿ ಈ ಶರೀರದಲ್ಲಿರುತ್ತಾ ಕರ್ತವ್ಯವನ್ನು ಮಾಡಿದಿರಿ ಮತ್ತು ಸಾಕ್ಷಿಯಾದಿರಿ – ಈ ವಿಶೇಷ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top